ಒಂದರ್ಥಕ್ಕೆ

೧. ಅಗದೞ್ತೆಯೆಂದು, ಖನನಂ

೨. ಅಗೞ್ದನೆಂದು, ನೀರ್ನೆಲೆದಪ್ಪಿದಂ

೩. ಅದವೞಲೆಂದು, ಮಱುಕಂ

೪.  ಅವಗೞೆಯಮೆಂದು ಉರವಣೆ ಕಾರ್ತನಂ

೫. ಅಸಕೞಿದಮೆಂದು, ಕೈಮೀರಿದಂ

೬. ಅೞ್ಕಮೆಯೆಂದು, ಅಱವೆ

೭. ಅೞ್ಕೆರ್ತನೆಂದು ಪ್ರೀತಿವಟ್ಟಂ

೮. ಅೞ್ತೆಯೆಂದು, ರೋಧನಂ

೯. ಅೞಯೆಂದು, ಪ್ರೀತಿ (ಆದನರ್ತಿಯೆಂದು ಪೇೞ್ವುದಬದ್ದಂ)

೧೦. ಅೞಾೞೆಗಮೆಂದು, ಒಂದು ಸಾಮಾನ್ಯ ಮಾಲಾಬಂಧಂ

೧೧. ಆೞ್ದನೆಂದು, ಮುೞುಗಿದಂ

೧೨. ಈಸೂೞೆಂದು, ವರ್ತಮಾನ ವರುಷಂ

೧೩.  ಈೞ್ದನೆಂದು, ಸೆಳೆದಂ

೧೪. ಉಂಬಳಿಯೆಂದು, ಕೊಡುಗೆ

೧೫. ಉೞಿಕು, ಉೞಿವು, ಕೞಿವು ಎಂಬಿವು ಭಾವವಾಚಿಗಳ್

೧೬. ಉೞುಗನೆಂದು, ಶಕುನದ ಹಕ್ಕಿ

೧೭. ಉೞೆಗಿದನೆಂದು, ಒಲ್ದಂ

೧೮. ಉೞುಗೆಂದು, ಬೇಟಂ

೧೯. ಉೞ್ಕೆಯೆಂದಂ, ಉೞ್ವಸ್ವಭಾವಂ

೨೦. ಎೞವಿದನೆಂದು, ನೀವಿದಂ

೨೧. ಏೞಂದು, ಸಂಖ್ಯಾವಾಚಿ

೨೨. ಒೞ್ಕಿಂದು, ನದೀಪ್ರವಾಹಂ

೨೩. ಕಚ್ಚೞೆಯೆಂದು, ಬಿರುದಿನ ಬಳೆ

೨೪. ಕೞಕೞೆಸಿದನರ್ಕಂ

೨೫. ಕೞಕುೞೆಮೆಂದು, ಸ್ಥಾನ ವ್ಯಾಕುಲತೆ

೨೬. ಕೞಲೆಯೆಂದು, ಮುಳ್ವೆರಸಿದ ಕಜುಱು ಗೊಂಬು

೨೭. ಕೞಲೆಯೆಂದು, ಬಿದಿರಿನ ಕುಡಿ

೨೮. ಕೞ್ಕನೆಯೆಂದು, ಆಕಸ್ಮಿಕಂ

೨೯. ಕೞ್ತಲೆಯೆಂದು, ಮರ್ವು

೩೦. ಕೞ್ತೆಯೆಂದು, ಗರ್ದಭಂ

೩೧. ಕಿಮುೞ್ಚೆದನೆಂದು, ಚಿಕ್ಕಣಮಾಗಿ ಮಾಡಿದಂ

೩೨. ಕಿಮುೞ್ದುೞೆದನೆಂದು, ಸಣ್ಣಮಾಗಿ ತುಱೆದಂ

೩೩. ಕಿೞ್ಗಿದನೆಂದು, ಗುಜ್ಜಂ

೩೪. ಕಿೞ್ತನೆಂದು, ನಿರ್ಮೂಲಿಸಿದಂ

೩೫. ಕುೞಮೆಂದು, ನೇಗಿಲಾಱಿವ ಕರ್ಬುನಂ

೩೬. ಕುೞಯೆಂದು ಅಗುೞಡ್ತ

೩೭. ಕೂೞನೆಂದು, ಎಗ್ಗಂ

೩೮. ಕೆೞವನೆಂದು, ಮುದುಕಂ

೩೯. ಕೇೞಿಯೆಂದು, ಪಂಕ್ತಿಯೊಳ್ ಱೞಂ (ಕ್ರೀಡೆಯೊಳ್ ಕ್ಷಳಂ)

೪೦. ಕೊೞಲೆಂದು, ವೇಣುವಾದ್ಯದೊಳ್ ಱೞಂ(ಕೊಳಲೆಂಬಕ್ರಿಯೆಯೊಳ್ ಕುಳಂ)

೪೧. ಕೊಂಕುೞಿಂದು, ಕಕ್ಷಮೂಲಂ

೪೨. ಖೞೆಲೆನೆ (ಖಱೆಲನೆ) ಛೞೆಲೆನೆ, ಘೞೆಲೆನೆ, ಫೞಲೆನೆ, ಫೞುಮೆನೆ, ಘುೞುಮ್ಮನೆ, ಧೞಮ್ಮೆನೆ ಇವು ಮೊದಲಾದವು ಮಹಾಪ್ರಾಣಾನು ಕರಣಂಗಳ್ ನಿತ್ಯ ಱೞಂಗಳ್

೪೩. ಗೞಗೞನೆಯೆಂದು, ಬೇಗಂ

೪೪. ಗೞವನೆಂದು, ಸೊರಹಂ

೪೫. ಗೞಮೆಂದು, ಆನೆಕುದುರೆಗಳ ಪಕ್ಕರಕ್ಕೆ

೪೬. ಗೞು ಗೞು ಗೞಗೞಯೆನುತಂ ಪರಿವ ಪರಿವೊನಲ್ ಸೋಗಯಿಸುಗಂ – ಇವು ಮೊದಲಾದ ಅಲ್ಪಪ್ರಾಣಾನುಕರಣಂಗಳ್ ಱೞನುಂ ಕುಳನುಂ ಅಪ್ಪುವು

೪೭. ಗೆೞಸೆಂದು, ಗೆಡ್ಡೆ.

೪೮. ಗೋೞೆಟ್ಟಂ, ಗೞಗೞನೆ

೪೯. ಚಕ್ಕೞೆಯೆಂದು, ಒತ್ತಿ ಚಪ್ಪಟೆ ಯಾದಡಕೆ

೫೦. ಚಾೞಿಂದು, ರಾಹು

೫೧. ಜುಗುೞ್ದನೆಂದು, ಜೞಿದಂ

೫೨. ಜಾಱೆಗೆಯೆಂದು, ಉಡುಗೆ

೫೩. ಜೀರ್ಕೊೞವಿಯೆಂದು, ಜಲಯಂತ್ರಂ

೫೪. ತಲ್ಲೞಮೆಂದು, ಭಯಂ

೫೫. ತೞತೞಗುದಿ, ತೆಱ್ತೞಗುದಿ ಎಂಬಿವು ಕಾಸುವ ರಸದ್ರವ್ಯಾನುಕರಣಂಗಳ್

೫೬. ತೞತೞನೆ ನೇಸರ್ಮೂಡಿದುದು

೫೭. ತೞಲೆಂದು ಮುತ್ತಕಾಯ್

೫೮. ತೞೆಯೆಂದು, ಸ್ಥೂಲದಾರುವಿನೊಳ್ ಱೞಂ (ಸತ್ರಾರ್ಥದೊಳ್ ಕುಳಂ) ತಳಿಯ ಕೂಱದಿರೊಳ್ ಪಣ್ತಾರವೆ

೫೯. ತೞೆಯೆಂದು, ಆತಪತ್ರದೊಳ್ ಱೞಂ ತಳೆಯೆಂಬ ಕ್ರಿಯೆಯೊಳಂ ಪಶುವಿನ ತಲೆಯೊಳಂ ಕುಳಂ

೬೦. ತಱ್ಗೆದನೆಂದು, ಕುಸಿದಂ

೬೧. ತಿಪ್ಪುೞಿಂದು, ಪಕ್ಕಿಯ ಗರಿ

೬೨. ತಪ್ಪುೞಿಂದು, ಪಕ್ಕಿಯ ರೋಮಂ

೬೩. ತುೞಿಕಲೆಂದು, ಸೊಪ್ಪಾದುದು

೬೪. ತೆಗೞ್ದುನೆಂದು, ಪೞುದಂ

೬೫. ತೇೞಿಂದು, ವೃಶ್ಚಿಕಂ

೬೬. ತೊೞಲ್ಪುದಾಗಿ, ತೊೞವಿಕಲ್, ಬೀಸುಕಲ್ಲು

೬೭. ತೊೞ್ತುೞಿಯೆಂದು ಸೊಪ್ಪಾದುದು

೬೮. ದಂಡುೞೆಗನೆಂದು, ದಂಡದೊಳ್, ಪಡೆದವಂ

೬೯. ದೞದುೞಂಮೆಂದು, ಬಲ್ಸೂಱಿ (ಧಾಳಿ)

೭೦. ದೞ್ದೞಯೆಂದು, ಸಂಕಲೆ

೭೧. ನೆಗಱಿಂದು, ನಕ್ರಂ

೭೨. ನೆೞುಲ್ಲೆನೆ, ನೆಱ್ಕನೆಯ ಮುಱೆದುದು ಇವುಂ ಅನುಕರಣಂಗಳ್

೭೩. ಪೞಗಮೆಂದು, ಒಣಗಿದೆಲೆ

೭೪. ಪೞದೆಂದು ಜೀರ್ಣಂ

೭೫. ಪೞಪೞನೆ, ಪಳ್ಪೞನೆಯೆಂದು ವಿಕಲಾರ್ಥಂ

೭೬. ಪೞಪೆಂದು, ನರೆಗಿಕ್ಕುವ ಕರ್ಪು

೭೭. ಪೞಯಿಗೆಯೆಂದು, ಕೇತನಂ

೭೮. ಪೞುವೆಂದು, ಅಡವಿ

೭೯. ಪೞ್ಕಿ ತುೞ್ಕೈಸಿದಂ, ತಡಕೈಯಂ, ಮಾಡಿದನೆಂಬರ್ಥಂ

೮೦. ಪೞ್ಳಯೆಂದು, ಕಾರ್ಪಾಸಂ

೮೧. ಪಾೞಯೆಂದು, ಕ್ರಮಂ

೮೨. ಪಾೞಿಂದು, ಶೂನ್ಯ ಸ್ಥಾನಂ

೮೩. ಪುಚ್ಚೞಿಯೆಂದು, ಕೇಡು

೮೪. ಪುೞುವೆಂದು, ಕೀಟಂ

೮೫. ಪುೞ್ಗೆಯೆಂದು ಉರ್ದು ತೊವರಿ ಹೆಸಱು ಮೊದಲಾದುವನಿಕ್ಕಿ ಅಟ್ಟಕೂೞ್

೮೬. ಪೆೞಕೆಂದು, ಜಗಳಂ

೮೭. ಪೞವೞಂದು, ಕಾಲಿಲ್ಲದವಂ

೮೮. ಪೆೞ್ದನೆಂದು, ನಿರೂಪಿಸಿದಂ

೮೯. ಪೊರ್ಕುೞೆಂದು, ನಾಭಿ

೯೦. ಪೊಗೞ್ತಿಯೆಂದು, ಕೀರ್ತನಂ

೯೧. ಪೊಂಪುೞೆಯೆಂದು, ಪೆರ್ಚುಗೆ

೯೨. ಪೊೞಕೆಂದು, ಸಾಮಾನ್ಯ ಕೃತಿ

೯೩. ಪೊೞವೆಂದು, ಪುರಂ

೯೪. ಪೊೞ್ತಡೆಯೆಂದು ಉದಯಕಾಲಂ

೯೫. ಪೊೞಲೆಂದು, ಮರದ ಪೊಟ್ಟೆ

೯೬. ಪೋೞೆಂದು ಸೀಳ್ದ ಭಾಗಂ

೯೭. ಬೞೆಯನೆಂದು, ವಿಧೇಯಂ

೯೮. ಬೞುಯಂ ಬೞೆಕಂ, ಬೞೆಕ್ಕಂ, ಬೞೆಕ್ಕೆ, ಬಳೆಕ್ಕಂ, ಎಂಬಿವು ಪಾಶ್ಚಾದರ್ಥಂಗಳ್.

೯೯. ಬೞೆಲ್ದನಿಂದು ಜಗುಳ್ದಂ

೧೦೦. ಬೞೆವಳಿಯೆಂದು, ಕೊಟ್ಟ ವಸ್ತುವಿನ ಬೞೆಯೊಳ್ ಕುಡುವುದು.

೧೦೧. ಬಾಸುೞಿಂದು ಪೊಯ್ದ ಬಳಿ

೧೦೨. ಬಾೞುಕಮೆಂದು, ಸೀಳ್ದೊಣಗಿ ಬಾಳ್ದ ಶಾಕಂ

೧೦೩. ಬಾೞೆಂದು, ಜೀವನಾರ್ಥದೊಳ್ ಱಱಂ (ನಾವೆದವಾಳ್ ಕೂರ್ವಾಳ್ ಹರಗು ವಾಳ್, ಬಾಳ್ ಎಂಬಲ್ಲಿ ಕುಳಂ)

೧೦೪. ಬಾೞ್ತೆಯೆಂದು ಪ್ರಯೋಜನಂ

೧೦೫. ಬಿೞಲೆಂದು, ಮರದ ಜೆಡೆ

೧೦೬. ಬಿೞ್ಕಿಯೆಂದು, ಒಂದು ಮರಂ

೧೦೭. ಬೆಂಬೞೆಯೆಂದು ಪಿಂದೆ ಬರ್ಪುದು

೧೦೮. ಬೆೞಲೆಂದು ಒಂದು ಮರಂ

೧೦೯. ಬೋೞತರಮೆಂದು, ಮುಂಡಿ

೧೧೦. ಬೋೞೆಂದು, ಚಾಪಂ

೧೧೧. ಬೋೞೆಯೆಂದು, ಒಂದಂಬಿನ ಭೇದಂ

೧೧೨. ಮೞಿಯೆಂದು, ರೂಪೞೆದ ಸಾವು

೧೧೩. ಮೞಲ್ದುದು, ಮೞಮೞಸಿತ್ತೆಂಬ ಎರಡುಂ ಕಣ್ಕದಡಿದ ಭಾವಂ

೧೧೪. ಮೞೆಯೆಂದು, ವೃಷ್ಟಿ

೧೧೫. ಮೞ್ತೆಯೆಂದು, ಒಂದು ಮರಂ

೧೧೬. ಮುೞ್ತುಗಮೆಂದು, ಒಂದು ಮರಂ

೧೧೭. ಮೊೞಕಾಲೆಂದು, ಒಳ್ದೊಡೆಯ ಸಂದು

೧೧೮. ಮೊೞನೆಂದು, ಆರತ್ನಿ

೧೧೯. ಮೊೞಗೆಂದು, ವಾದ್ಯಂ

೧೨೦. ಸುೞಿಯೆಂದು ಜಲಾವರ್ತಂ

೧೨೧. ಸೂೞಾಯ್ತನಂದು, ಸೂೞ್ಗರೆವಂ

೧೨೨. ಸೂೞಿಂದು, ಬಾರಿ

೧೨೩. ಹೞ್ಗಿಯೆಂದು, ದೊವೆಯೊಳ್ ತೞಲಂ ಪೂೞ್ದಕ್ರಿಯೆ

೧೨೪. ಹಾೞ್ಮನೆ ಹಾೞನೆಂದು, ತಾಡುಗುಣಿ ನಾಯ್

೧೨೫. ಹಿೞಿದುದೆಂದು, ರಸವಂ ಹಿಂಡುವಲ್ಲಿ ಱೞಂ, (ಬಿರಿದುದೆಂಬಲ್ಲಿ ಕುಳಂ)

ಎರಡರ್ಥಕ್ಕೆ

೧೨೬. ಅಗ್ಗೞಿಕಯೆಂದು, ಲಾಳಮಿಡಿಗೆಯುಂ ಅವುಜದ ಮುಟ್ಟುಮಕ್ಕುಂ

೧೨೭. ಅೞಿಪನೆಂದು, ಅಱಿಪುವನುಂ ಅೞಿ ಪಿದನುಮಕ್ಕುಂ

೧೨೮. ಅೞಿಯೆಂದು, ಬಳ್ಳದೞಿಯೊಳಂ, ವಿಧಿಕ್ರಿಯೆಯೊಳಂ ಱಂ (ತುಂಬಿಯ ಪೇೞ್ವಲ್ಲಿ ಕ್ಷಳಂ)

೧೨೯. ಅೞ್ದನೆಂದು, ನೀರೊಳ್ ಮುೞುಂಗಿದನುಂ ಕೆಟ್ಟನುಮಕ್ಕುಂ

೧೩೦. ಅೞ್ದಿನೆಂದು, ಸತ್ತನುಂ ಸೊಪ್ಪಾ ದನುಮಕ್ಕುಂ

೧೩೧. ಅೞಿಯೆಂದು, ವಂಚನೆಯು ಏಕ ಗ್ರಾಹಿತ್ವಮುಮಕ್ಕುಂ (ಸಂಸ್ಕೃತದೊಳ್ ಸುಖಿಯುಂ ಸಾಲು ಬರ್ಪೆಡೆ ಅದು ಕ್ಷಳಂ)

೧೩೨. ಇಕ್ಕುೞಿಂದು, ವ್ಯಾಧಿ ವಿಕಾರಮುಂ ಸಂದಂಶಮುಮಕ್ಕುಂ

೧೩೩. ಇೞೆದನೆಂದು, ಮೈಗುಂದಿದನುಂ ಕೆಳ ಗಣ್ಗೆವಂದನೆಮಕ್ಕುಂ

೧೩೪. ಎೞಲ್ದನೆಂದು ಜೋಲ್ದನುಂ ಬೞಲ್ದನುಮಕ್ಕುಂ

೧೩೫. ಎೞಿಯೆಂದು, ನೂಲೆೞಯೊಳಂ ಬರ ಸೆಳೆವುದೂಳಂ ಱೞಂ (ಭೂಮ್ಯರ್ಥದೊಳ್ ಕುಳಂ)

೧೩೬. ಎೞ್ದನೆಂದು, ನೆಗೆದನುಂ ನಿದ್ರೆ ತಿಳಿ ದನುಮಕ್ಕುಂ

೧೩೭. ಎೞ್ಬಿಸಿದನೆಂದು, ನಿದ್ರೆ ತಿಳಿಯಿಸಿ ದನುಂ ಎತ್ತಿ ಕಳೆದನುಮಕ್ಕುಂ

೧೩೮. ಕೞಲೆಂದು, ಮಜ್ಜಿಗೆಯುಂ ಅಂದು ಗೆಯುಮಕ್ಕುಂ

೧೩೯. ಕೞಲ್ದನೆಂದು, ಬಡವಾದನುಂ, ಮನುಮಕ್ಕನುಮಕ್ಕುಂ

೧೪೦. ಕೊತ್ತೞಿಯೆಂದು, ಕಾಗೆಯ ಮೊತ್ತಮುಂ ಬೆಸದವರ ನೆರವಿಯು   ಮಕ್ಕುಂ

೧೪೧. ಗೞುಯಿಸಿದನೆಂದು, ದೊರೆ ಕೊಳಿಸಿದನುಂ ದೊರೆಕೊಂಡನುಮಕ್ಕುಂ

೧೪೨. ಗೞಿಯೆಂದು, ಕಡೆಗೋಲುಂ ಕೊಲ್ಲ ಟಗರಾಡುವುದುಮಕ್ಕುಂ

೧೪೩. ತುೞದನೆಂದು, ಬಡವಾದನುಂ ಅಗಲ್ವನುಮಕ್ಕುಂ

೧೪೪. ತುೞಿದನೆಂದು, ಕಾಲೊಳ್ ಮರ್ದಿಸಿದನುಂ ಘಾಸಿಮಾಡಿದನು ಮಕ್ಕಂ

೧೪೫. ತುೞಿಲೆಂದು, ಪೊಡವಡಿಕೆಯುಂ ವೀರ ಮುಮಕ್ಕುಂ

೧೪೬. ತುೞಲ್‌ಸಂದನೆಂದು, ವೀರನುಂ ಪಂಚಮನಕ್ಕುಂ

೧೪೭. ತೊೞಲ್ದನೆಂದು, ಭ್ರಮೆಗೊಂಡನುಂ ಗರವಟ್ಟಿಗೆ ವಂದನುಮಕ್ಕಂ

೧೪೮. ತೊೞ್ತಿಂದು, ದಾಸನುಂ ದಾಸಿಯು ಮಕ್ಕುಂ

೧೪೯. ದೞಮೆಂದು, ಚತುರಂಗಬಲಮುಂ ಸಾಮಾನ್ಯಬಲಮುಮಕ್ಕುಂ

೧೫೦. ನಾೞಮೆಂದು ತುಂಬಿನೊಳಂ, ಕಳ್ಳನೊಳಂ ಱೞಂ, ನಾೞವಾಸಗೆಯೆಂದು ಕಳವಾಸಗೆ, ನಾಳಂ ಸಂಸ್ಕೃತದೊಳ್   ಕ್ಷಳಂ

೧೫೧. ನೆಗೞ್ತೆಯೆಂದು, ಪ್ರಸಿದ್ದಿಗಿಯುಂ ಚರಿತ್ರಮುಮಕ್ಕುಂ

೧೫೨. ನೆೞಲೆಂದು, ಆತಪತ್ರಾದಿಛಾಯೆಯುಂ ಜಳದರ್ಪಣಪ್ರತಿಬಿಂಬಮುಮಕ್ಕುಂ

೧೫೩. ಪೞಹಮೆಂದು, ಬೇಂಟೆಯ ತೆರೆಯುಂ ವಾದ್ಯ ವಿಶೇಷಮುಮಕ್ಕುಂ

೧೫೪. ಪೞ್ಕಿಯೆಂದು, ಶಯನಮುಂ ಶಯನ ಸ್ಥಾನಮುಮಕ್ಕುಂ

೧೫೫. ಪೂೞಿಯೆಂದು, ಬಟ್ಟೆಯುಂ ತೆಱೆಯುಮಕ್ಕುಂ

೧೫೬. ಬೞ್ದನೆಂದು, ಜೀವಿಸಿದನುಂ ಒಕ್ಕಲಾದನುಮಕ್ಕುಂ

೧೫೭. ಬೞ್ದಿಂಕಿದನೆಂದು, ಜೀವಿಸಿದನುಂ, ಬಿಡಲ್ಪಟ್ಟನುಮಕ್ಕುಂ;  ಪುಲಿಯ ಬಾಯಿಂ ಬೞ್ದುಂಕಿದಂ ಎಂಬಂತೆ

೧೫೮. ಬೀೞಿಂದು, ಮಾಡದ ಕೈಯುಂ ಪತನ ಕ್ರಿಯೆಯುಮಕ್ಕುಂ

೧೫೯. ಮಲ್ಲೞಿಯೆಂದು, ಶರೀರವ್ಯಾಕು ಲತೆಯುಂ ಸುತ್ತಿಬರ್ಪುದುಮಕ್ಕುಂ

೧೬೦. ಮುೞಿದನೆಂದು, ಬಿದ್ದನುಂ ಪೊಡವಟ್ಟನುಮಕ್ಕುಂ

೧೬೧. ಮೂೞಿಯೆಂದು, ಕಿವಿಯಿಲ್ಲದವಳುಂ ಕರಗದ ಜೂಳಿಯುಮಕ್ಕುಂ

೧೬೨. ಸುೞಿದನೆಂದು, ಸಂಚಲಿಸಿದನುಂ ಬಟ್ಟನೆವಂದನುಮಕ್ಕುಂ

ಮೂಱರ್ಥಕ್ಕೆ

೧೬೩. ಅೞಿದನೆಂದು, ಸತ್ತನುಂ ಕೆಟ್ಟನು ಕೆಡಿಸಿದನುಮಕ್ಕುಂ

೧೬೪. ಎೞ್ಚತ್ತನೆಂದು, ನಿದ್ರೆತಿಳಿದನುಂ ಕುತ್ತ ನೋಸರಿಸಿದನುಂ ಮಱವೆಪಿಂಗಿದನು ಮಕ್ಕುಂ

೧೬೫. ಎೞ್ತಿಂದು, ಗೂಳಿಯುಂ, ಅನಡನುಂ ಹೊರಪಿನ ನೆಯ್ಗೆಯ ಊಕೆಯ ನುಲಿಯುಮಕ್ಕುಂ

೧೬೬. ಎೞ್ದನೆಂದು, ನೆಗೆದನುಂ ನಿದ್ರೆ ತಿಳಿದನುಂ ದೊರೆಕೊಂಡನುಮಕ್ಕುಂ

೧೬೭. ಕೞಲೆಂದು ಪಿಂತೆ ಪೇೞ್ದುದಲ್ಲದ

೧೬೮. ಕೞಿದನೆಂದು, ಸತ್ತನುಂ ದೂರಂ ಬೋದನುಂ ಕೈ ಮೀೞಿದನುಮಕ್ಕುಂ

೧೬೯. ಕೊೞೆತುದೆಂದು, ಜೀರ್ಣಿಸಿದುದುಂ ಆಳವಳಿಸಿ ಮಲಮೇಱಿದುದುಂ ಮನ ವಿಕ್ಕಿದುದು ಮುಕ್ಕುಂ

೧೭೦. ತಾೞಿಂದು, ಒಂದು ಮರನುಂ ಆಗುೞಿಯುಂ ಸೂರಣದದಂಟು ಮಕ್ಕುಂ

೧೭೧. ನೆೞಲೆಂದು, ಪಿಂತೆಪೇೞ್ದುದಲ್ಲದೆ (ನಂ. ೧೫೨) ಒಂದು ಮರಮನುಕ್ಕುಂ

೧೭೨. ಪೊೞ್ತೆಂದು, ಸಾಮಾನ್ಯಕಾಲಮುಂ ಪ್ರಸವಕಾಲಮುಂ ನೇಸಱುಮುಕ್ಕುಂ

೧೭೩. ಬಿೞ್ದುದೆಂದು, ಪೞಸಿದುದುಂ ಸತ್ತುದುಂ ಕೈ ಜೋಲ್ದುದುಮಕ್ಕುಂ

೧೭೪. ಬೋೞದೆಂದು, ಮಿೞ್ತುವುಂ ಮುಂಡಮುಂ, ಮುಂಡಮೆಂದೊಂ ದೌಷಧಿಯುಮಕ್ಕುಂ

೧೭೫. ಮೊೞಗೆಂದು, ಮುಗಿಲದನಿಯುಂ ಒಂದು ಮರದ ಪೆಸಱುಂ ವಾದನ ವಿಧಿಯುಮಕ್ಕುಂ

೧೭೬. ಸುೞಿಯೆಂದು, ಕೆಲಸಗಳ್ಳನುಂ ಸಸಿಯ ಸುೞಿಯುಂ, ಸುೞಿವಭಾವ ಮುಮಕ್ಕುಂ (ಸುಳಿಯೊಂದೀಶ್ವರನ ಪೆಸರೊಳ್ ಕ್ಷಳಂ)