೨೫
ಒಳವು ಮಹಾಪ್ರಾಣಂಗಳ್
ವಿಳಸತ್ ಕರ್ಣಾಟಕ ಭಾಷೆಯೊಳ್; ಕೆಲವು
ನಿಜೋಜ್ವಳಂ ಆಗಿ
ವರ್ಗದ ಅಂತ್ಯಂಗಳಂ;
ಅಱಿ ಅನುನಾಸಿಕ ಆಖ್ಯೆಯಂ
ತಳೆದು ಇರ್ಕುಂ

ಕನ್ನಡದಲ್ಲಿ ಕೆಲವು ಮಹಾಪ್ರಾಣಗಳು ಸಹಜವಾಗಿ ಬಳಕೆಯಾಗಿವೆ. ಅದಕ್ಕೆ ಅವನು ಕೊಟ್ಟಿರುವ ಉದಾಹರಣೆಗಳು ಸಂಸ್ಕೃತ ಮತ್ತು ಪ್ರಾಕೃತದಿಂದ ಕನ್ನಡಕ್ಕೆ ಅಪಭ್ರಂಶವಾಗಿ ಎರವಲು ಬಂದಿರುವ ಪದಗಳೇ ಆಗಿವೆ. ಎರವಲು ಪದಗಳು ಎಲ್ಲಿಂದಾದರೂ ಬರಲಿ ಕನ್ನಡದ ಜಯಮಾನಕ್ಕೆ ಒಗ್ಗಿಬಂದ ಮೇಲೆ ಅವು ಕನ್ನಡ ಪದಗಳೇ ಎಂಬುದು ಕೇಶಿರಾಜನ ದೃಢ ವಿಶ್ವಾಸ. ಆಧುನಿಕ ಭಾಷಾಶಾಸ್ತ್ರಜ್ಞರ ಅಭಿಪ್ರಾಯವೂ ಇದೇ ಆಗಿದೆ. ವರ್ಗದ ಐದನೆಯ ಅಕ್ಷರಗಳು ಅನುನಾಸಿಕಗಳಾಗಿವೆ.

ಸಹಜ ಮಹಾಪ್ರಾಣಗಳು :
ಖೊಪ್ಪರಂ, ಖಾಣಂ, ಛಪ್ಪಿಸಿದಂ, ಠಾಣಂ, ಥಟ್ಟು, ಝಳ, ಝಳಕಂ, ಢಾಳಂ, ಭಂಗಾರಂ, ಭಂಡಾರಂ

ಅನುನಾಸಿಕಗಳು :
ಙ, ಞ, ಣ್, ನ್, ಮ್

೨೬
ಅನುನಾಸಿಕಮುಂ ಮಲು
ಅನನುನಾಸಿಕಮುಂ, ದಲ್ ಎಂಬರ್
ಸಂಸ್ಕೃತ ಶಬ್ದ
ನಿಯುಕ್ತ, ಕಾರದ ನೆಲೆಗೆ ನಿಂದು
ಸರಿಯಾಗಿ ಸಲ್ವುದಂ
ಕ್ಷಳಂ ಎಂಬರ್

ಕೇಶಿರಾಜ ಈ ಸೂತ್ರದಲ್ಲಿ ಯ, ವ, ಲ ವರ್ಣಗಳ ಬಗ್ಗೆ ಹಾಗೂ ಕ್ಷಳದ ಬಗ್ಗೆ ವಿವೇಚಿಸಿದ್ದಾನೆ. ಯ, ವ, ಲ ವರ್ಣಗಳು ಕನ್ನಡದಲ್ಲಿ ಅನುನಾಸಿಕವೂ (ಉಚ್ಚಾರಣೆಯಲ್ಲಿ ನಾಸಿಕದ ಸಹಾಯ ಪಡೆಯುವುದು) ನಿರನುನಾಸಿಕವೂ (ಉಚ್ಚಾರಣೆಯಲ್ಲಿ ನಾಸಿಕದ ಸಹಾಯ ಪಡೆದಿರದು) ಆಗಿರುತ್ತವೆ. ಸಂಸ್ಕೃತ ಶಬ್ದಗಳಲ್ಲಿ ಕಂಡುಬರುವ ಲ ಕಾರದ ಸ್ಥಾನದಲ್ಲಿ ಬರುವ ಳ ಕಾರವನ್ನು ಕ್ಷಳವೆಂದು ಕರೆಯುವದು. ಅದನ್ನು ಹೀಗೂ ಹೇಳಬಹುದು. ಸಾಮಾನ್ಯ ಭಾಷಾ ಸಂದರ್ಭದಲ್ಲಿ ಸಂಸ್ಕೃತದ ಲ ಕಾರ ಎಲ್ಲೆಲ್ಲಿದೆಯೋ ಅಲ್ಲೆಲ್ಲ ಅದಕ್ಕೆ ಸಂವಾದಿಯಾಗಿ ‘ಕ್ಷಳ’ ಬರುತ್ತದೆ.

ಅನುನಾಸಿಕಕ್ಕೆ : ಮೇಯಿಸಿದಂ, ನೋಯಿಸಿದಂ, ಮಾಯಂ, ಸೇವೆ, ಸಾವೆ, ಜವಂ
ನಿರಮನಾಸಿಕಕ್ಕೆ : ಬಯಕೆ, ದಯಕಾಱಂ, ದಾಯಿಗಂ, ವಾಯಂ, ಬಯಲ್, ಕವಳಂ
ಕ್ಷಳಕ್ಕೆ : ಜಲಂ – ಜಳಂ,  ಫಲಂ – ಫಳಂ, ತಿಲಂ – ತಿಳಂ, ಬಲಂ – ಬಳಂ,

೨೭
ಸಮಸಂದು ಇರ್ದಂ
xಮುಂ, ೦೦ಮುಂ, ಒಂದಿದ
ಬಿಂದುವುಂ, ವಿಸರ್ಗಮುಂ
ಎಂದು ಅಕ್ಕುಂ
ಇವು ಎಯ್ದೆ ಯೋಗವಾಹಂ;
ಕ್ರಮದಿಂ ಪಯುಗಳಂ
ಇವಱೊಳ್ ಅನುಬಂಧಂಗಳ್

ಈ ಸೂತ್ರದಲ್ಲಿ ಯೋಗವಾಹಗಳ ಸ್ವರೂಪದ ಬಗ್ಗೆ ಹೇಳಿದ್ದಾನ್ಕೆ, x, ೦೦, ೦, ಃ ಈ ನಾಲ್ಕು ವರ್ಣಗಳನ್ನು ಯೋಗವಾಹಗಳೆಂದು ಕರೆದಿದ್ದಾನೆ. ಜಿಹ್ವಾಮೂಲೀಯ ಮತ್ತು ಉಪಧ್ಮಾನೀಯಗಳು ಕನ್ನಡದಲ್ಲಿ ಬಳಕೆಯಲ್ಲಿಲ್ಲ. ಸಂಸ್ಕೃತದಲ್ಲಿಯೂ ಅವುಗಳ ಪ್ರಯೋಗ ವಿರಳ. ಕೇಶಿರಾಜನು ಸಂಸ್ಕೃತ ವ್ಯಾಕರಣಗಳನ್ನು ಅನುಸರಿಸಿ ತನ್ನ ವ್ಯಾಕರಣವನ್ನು ರಚಿಸಿರುವುದರಿಂದ ಇಲ್ಲಿ ಅವುಗಳನ್ನು ಹೇಳಿದ್ದಾನೆ. ಜಿಹ್ವಾಮೂಲೀಯ ಎಂದರೆ ನಾಲಿಗೆಯ ಅಡಿಯಲ್ಲಿ ಹುಟ್ಟುವ ಧ್ವನಿ. ಃಕ ಉಪಧ್ಮಾನೀಯವೆಂದರೆ ಕಡಿಮೆಯ ಜೋರಿನಿಂದ ಊದುವುದರಿಂದ ಉಂಟಾಗುವ ಧ್ವನಿ ಎಂಬರ್ಥ (ಃಪ) ಇದು ಎರಡು ತುಟಿಗಳ ನಡುವೆ ಉಸಿರನ್ನು ಒತ್ತಾಯವಾಗಿ ಬಿಡುವುದರಿಂದ ಉಂಟಾಗುವ ಧ್ವನಿ.

೨೮
ಅತಿಪೀಡನದಿಂ ರೇಫಾಶ್ರಿತಂ
ಆದ ಱಕಾರಮುಂ;
ಸಮಂತು ಕಾರಾಶ್ರಿತಂ
ಆದ ಱೞನುಂ;
ಅಂಗೀಕೃತ ಪದ ಲತ್ವಕೆ
ಸಮನೆಮಸಲ್ಲದ ಕುಳನುಂ

ಕೇಶಿರಾಜ ಈ ಸೂತ್ರದಲ್ಲಿ ಱ-ೞ-ಳ ಗಳ ಉತ್ಪತ್ತಿ ಕುರಿತು ಹೇಳಿದ್ದಾನೆ. ರೇಫೆಯು ಹುಟ್ಟುವ ಸ್ಥಾನವನ್ನು (ಮೂರ್ಧನ್ಯ) ಒತ್ತಿ ಉಚ್ಚರಿಸುವುದರಿಂದ ‘ಱ’ ಕಾರವೂ ‘ಶಕಟರೇಫ’, ‘ಡ’ ಕಾರ ಹುಟ್ಟುವ ಸ್ಥಾನವನ್ನು (ಮೂರ್ಧನ್ಯ) ಒತ್ತಿ ಉಚ್ಚರಿಸುವುದರಿಂದ ‘ೞ’ ಕಾರವೂ ‘ಲ’ ಕಾರ ಹುಟ್ಟುವ ಸ್ಥಾನವನ್ನು (ದಂತ್ಯ) ಒತ್ತಿ ಉಚ್ಚರಿಸುವುದರಿಂದ ‘ಳ’ ಕಾರ (ಕುಳ)ವೂ ಹುಟ್ಟುತ್ತದೆ.

ಪ್ರಯೋಗ : ಮೊರೆ – ಮೊಱೆ, ಕಡಲ್ – ಕೞಲ್, ಕಲೆ – ಕಳೆ

೨೯
ಇವು ವರ್ಣಾ ವೃತ್ತಿಗೆ
ಸಲ್ವುವು;
ಸಂದುಂ ಪ್ರಾಸದ ಎಡೆಗೆ
ಸಲ್ಲವು; ಯಮಕ ವ್ಯವಹೃತಿಗೆ
ಆಗವು; ದೇಶೀಯಂ
ಎನಿಪುವು ಹ್ರಸ್ವಂ ಎನಿಸಿದ
ಸಹಿತಂ

ಈ ಸೂತ್ರದಲ್ಲಿ ರ-ಡ-ಲ ಮತ್ತು ಱ-ೞ-ಳ ಗಳಿಗಿರುವ ಸಾಮ್ಯದ ಮಿತಿಯನ್ನು ಸೂಚಿಸಿದ್ದಾನೆ. ರ-ಡ-ಲಗಳೊಡನೆ ಱ-ೞ-ಳಗಳನ್ನು ವರ್ಣಾವೃತ್ತಿಗೆ (ಅನುಪ್ರಾಸಕ್ಕೆ) ಬೆರಸಬಹುದೇ ಹೊರತು, ಅಕ್ಷರ ಸಾಮ್ಯವನ್ನು ಬಯಸುವ ಪ್ರಾಸ (ಆದಿಪ್ರಾಸ), ಯಮಕಗಳಿಗೆ ಸಲ್ಲುವುದಿಲ್ಲ. ಹ್ರಸ್ವಗಳಾದ ಎ, ಒ ಗಳೊಂದಿಗೆ (ಈ ಮೂರು) ದೇಶೀಯಗಳೆನಿಸಿಕೊಳ್ಳುತ್ತವೆ.

ಪ್ರಯೋಗ

ರೇಫೆ ಱಕಾರಗಳ ಅನುಪ್ರಾಸಕ್ಕೆ :
ಸುರಗಿಱೆದೊಱಗಿದ ಬಿರುದರ ಕರುಳಂ
ಕೊಱೆ ಕೊಱೆದು ಮರುಳಿರುಳ್ ತಿಂಬೆಡೆಯೊಳ್

ಡ ಕಾರ ಱೞಕಾರಗಳ
ಅನುಪ್ರಾಸಕ್ಕೆ :
ಕೞಲೆ ನುಡಿದೞಲೆ ಬಗ್ಗಿಸಿ ಘೞೆಲನೆ ನಡೆಯೆಂದು
ಜಡಿದು ಸಾರಥಿಯಂ
ಲ ಕಾರ ಳ (ಕುಳ) ಕಾರಗಳ
…… ದೆಸೆಗಳ ನಳುರ್ದುಂಸುಡಲ್ಕೆಳರ್ದು
ಅನುಪ್ರಾಸಕ್ಕೆ
ಮಿಳಿರ್ದುಂ ತಳರ್ದತ್ತಾಗಳ್.
ರೇಫೆ ಱ ಕಾರಗಳ (ಆದಿ)
ಧುರದೊಳ್ ಪಱಿಮಱಯಾಡುವ

ಪ್ರಾಸ ದೋಷಕ್ಕೆ :
ತೆಱದಿಂದುಱದಿಱೆದನೆಂಬ ನಿಯಮಂ ದೂಷ್ಯಂ
ಡ ಕಾರ ೞ ಕಾರಗಳ (ಆದಿ)
ಕೋಡದಿಱೆದಿಂದ್ರರಾದರ್

ಪ್ರಾಸದೋಷಕ್ಕೆ :
ನಾೞಿಗೆಯೊಳ್ ವೀರರೆಂಬ ನಿಯಮಂ ದೂಷ್ಯಂ
ಲ ಕಾರ ಳ (ಕುಳ) ಕಾರಗಳ
ನೆಲದೊಳ್ ಪಗೆ ಪುಗೆ ಫಣಿಯವೊ

(ಆದಿ) ಪ್ರಾಸದೋಷಕ್ಕೆ :
ಲೊಳ ಪೊಕ್ಕಳಱೆಸಿದನೆಂಬ ನಿಯಮಂ ದೂಷ್ಯಂ

ಯಮಕ ದೋಷಕ್ಕೆ :
ಕರೆಯಂ ನೆರವಂ ವಂಶಂ
ಕಱೆಯಂ ಪೊತ್ತಪ್ಪುದೆಂದು ಸಂಗರಮುಖದೊಳ್

೩೦
ದಾಡಿಮಂ, ಕೂಷ್ಮಾಡಂ,
ಗೌಡಂ, ಗುಡಂ ಅಡಸಿ
ಪೊಡೆವ ಝಗಡೆ ವಿಡಂಗಂ
ಕೂಡೆ ಕುಳಂ ಏಡಕಮುಂ;
ಅಱಿರೂಢಿಯ ಕುಳವೆಂದು
ಱೞದ ಅಪಭ್ರಂಶತೆಯೊಳ್

ಅಚ್ಚಕನ್ನಡದಲ್ಲಿ ಸಹಜವಾಗಿ ಕುಳವೇ ಬಳಕೆಯಲ್ಲಿದೆ ದಾಡಿಮ, ಕೂಷ್ಮಾಡ, ಗೌಡ, ಝಗಡೆ, ವಿಡಂಗಂ, ಏಡಕಂ ಮುಂತಾದ ಸಂಸ್ಕೃತ ಶಬ್ದಗಳು. ತದ್ಭವದಲ್ಲಿ ೞೞ ವಾಗಿ ರೂಢಿಯಲ್ಲಿ (ಕುಳ)ವಾಗಿವೆ.

ದಾಡಿಮ > ದಾೞೆಂಬ > ದಾಳಿಂಬ
ಕೂಷ್ಮಾಂಡ > ಕುಂಬೞ > ಕುಂಬಳ ಎಂಬಂತೆ

೩೧
ಕೃತಿಮಾರ್ಗದೊಳ್ ಉಂಟು
ಕಾರ, ಕಾರ, ಕಾರ
ರೇಪೆ ಎಡೆಗಂ
ಬಹುಳ ಸ್ಥಿತಿಯಿಂ ಕ್ಷಳಕಂ
ಅಪಭ್ರಂಶತೆಯೊಳ್
ಸುಕವೀಂದ್ರರಿಂದೆ
ೞೞದ ಆದೇಶಂ

ಸಂಸ್ಕೃತ ಶಬ್ದಗಳಲ್ಲಿ ಕೆಲವು ಕನ್ನಡಕ್ಕೆ ಬರುವಾಗ ಅವುಗಳಲ್ಲಿಯ ‘ಟ’ ಕಾರ, ‘ಡ’ ಕಾರ, ರೇಫೆಗಳು ಱೞ ಕಾರವಾಗಿ ಮಾರ್ಪಾಡುವಾಗುವುದುಂಟು. ಮತ್ತೆ ಕೆಲವು ಸಂಸ್ಕೃತ ಶಬ್ದಗಳು ಕನ್ನಡಕ್ಕೆ ಬರುವಾಗ ಅವುಗಳಲ್ಲಿಯ ‘ಕ್ಷಳ’ವೂ ಕೆಲವೊಮ್ಮೆ ಱೞವಾಗಿ ಪರಿವರ್ತನೆಯಾಗುವುದುಂಟು.

ಟ ಕಾರಕ್ಕೆ : ಘಟಿಕೆ – ಗೞೆಗೆ, ಘುಟಿಕೆ – ಗುೞೆಗೆ
ಠ ಕಾರಕ್ಕೆ : ಪೀಠಿಕೆ – ಪೀೞೆಗೆ, ಮಠಿಕೆ – ಮೞೆಗೆ
ತ ಕಾರಕ್ಕೆ : ಪ್ರತಿಹಸ್ತಂ – ಪಱೆಹತ್ತಂ, ಪ್ರತಿಪಾದುಕಂ – ಪೞೆವಾಮಗೆ
ರೇಫೆಗೆ : ಕೂರಂ – ಕೂೞ್, ಝಲ್ಲರಿ – ಝ್‌ಲ್ಲೞೆ
ಕ್ಷಳಕ್ಕೆ : (ತಾಲಂ) ತಾಳಂ – ತಾೞ್, ಪುಳಿನಂ – ಪುೞಿಲ್, ಕಳಮಂ – ಕೞವೆ

೩೨
ಸ್ಫಟಿಕಂ ಪೇಟಿಕೆ ವೀಟಿಕೆ
ಘುಟಿಕೆ ವರಾಟಂ ಪೊದಳ್ದ
ರಘಟೆ ಕುಳಂ ತಾಂ
ಸ್ಫುಟ ಸಹಿತಂ; ಸ್ಫೋಟಕ
ಲಂಪಟ ಶಬ್ದಯುಗಂ
ಱೞಕ್ಕೆ ನೆಱಿ ಸಂದೇಹಂ

ಸ್ಫಟಿಕ, ಪೇಟಿಕೆ, ವೀಟಕೆ, ಘುಟಿಕೆ, ವರಾಟಂ, ರಘಟೆ, ಸ್ಫುಟಂ ಇಂತಹ ಶಬ್ದಗಳು ಅಪಭ್ರಂಶತೆಯನ್ನು (ತದ್ಭವದ ಸಂದರ್ಭದಲ್ಲಿ) ಹೊಂದುವಾಗ ಆ ಶಬ್ದಗಳಲ್ಲಿರುವ ಟ ಕಾರವು ನಿಸ್ಸಂದೇಹವಾಗಿ ಕುಳವಾಗುತ್ತದೆ. ಅದರಂತೆ ಸ್ಫೋಟಕ, ಲಂಪಟ ಎಂಬವುಗಳು ಹೋಳಿಗೆ, ಲಂಪಳ ಎಂದಾಗುವುದರ ಬಗ್ಗೆ ಸಂದೇಹವಿದೆ. (ಸ್ಫೋಟಕ > ಪೋೞಗೆ > ಹೋಳಿಗೆ, ಲಂಪಟ > ಲಂಬೞ > ಲಂಬಳ)

ಸ್ಫಟಿಕಂ – ಪಳಿಕು ಘಟಿಕೆ – ಗುಳಿಗೆ
ಪೇಟಿಕೆ – ಪೇಳಿಗೆ ವರಾಟಂ – ವರಾಳಂ
ವೀಟಿಕೆ – ವೀಳಿಗೆ ರಘಟೆ – ರಗಳೆ
ಸ್ಫುಟಂ – ಪುಳಂ

೩೩
ಏಕ, ದ್ವಿ, ತ್ರಿ, ಚತುಃ
ಪಂಚ ಅಕಲಿತ ಅರ್ಥಂಗಳ್
ಆಗಿ ಱೞಂ ಒಳವು
ನಿಸರ್ಗ ಆಕೃತಿಯಿಂದ
ಆವಂ ಆದಿ ಮಹಾಕವಿ
ಕೃತಿದೃಷ್ಟಮಂ
ನಿರಾಕುಲಂ (ಕುಳಂ) ಉಸಿರ್ವೆಂ

ಒಂದರ್ಥ, ಎರಡರ್ಥ, ಮೂರರ್ಥ, ನಾಲ್ಕರ್ಥ ಮತ್ತು ಐದರ್ಥವನ್ನು ಕೊಡುವ ಱೞ ದಿಂದ ಕೂಡಿದ ಶಬ್ದಗಳು ಸಹಜವಾಗಿವೆ. ಆ ಶಬ್ದಗಳು ಪ್ರಾಚೀನ ಮಹಾಕವಿಗಳ ಕಾವ್ಯ ಗಳಲ್ಲಿ ದೊರೆಯುತ್ತವೆ. ಅವು ಇಂತಿವೆ (ಇದು ಕೇಶಿರಾಜನ ಪುಟ್ಟ ಱೞ-ಕುಳ ನಿಘಂಟು ಆಗಿದೆ).