೧೭೩
ಕಱುತಾಯ ಬೞಿಯ
ಉೞಿಯದ ತೆಱದಿಂದಂ
ನಾಮಪದಂ
ಅರ್ಥಾನುಗುಂ ಆಗಿ
ಎಱಗೆ ಸಮಾಸಂ
ನೆಗೞ್ಗುಂ;
ನೆಱೆ ಪೋಕುಂ
ಮಧ್ಯ ಗತ ವಿಭಕ್ತಿಗಳ್
ಅವಱೊಳ್

ಈ ಸೂತ್ರದಲ್ಲಿ ಸಮಾಸದ ಸಾಮಾನ್ಯ ಲಕ್ಷಣಗಳನ್ನು ಹೇಳಲಾಗಿದೆ. ನಾಮಪದವು ಅರ್ಥಾನುಗತವಾಗುವದೇ ಸಮಾಸ. ಅದನ್ನು ‘ಕರುತಾಯಿಯ ಜತೆಗಿರುವಂತೆ’ ಎಂಬ ಹೋಲಿಕೆಯೊಂದಿಗೆ ಹೇಳಲಾಗಿದೆ. ಅರ್ಥ ಎಂಬುದು ಕ್ರಿಯೆಯನ್ನು ಅವಲಂಬಿಸಿರುತ್ತದೆ. ಸಮಾಸ ಕ್ರಿಯೆಯಲ್ಲಿ ಮಧ್ಯದಲ್ಲಿರುವ (ಪೂರ್ವಪದ) ವಿಭಕ್ತಿ ಲೋಪವಾಗುತ್ತದೆ. ಅದರಂತೆ ಅಲ್ಲಿ ವಿಶೇಷ್ಯ‑ವಿಶೇಷಣ ಸಂಬಂಧವೂ ಗಮನಿಸಬೇಕಾದ ವಿಷಯ.

ಪ್ರಯೋಗ :
ತೊಱೆಯ + ಮಾವು = ತೊಱೆಮಾವು
ಎಡೆಯ + ನುಡಿ = ಎಡೆನುಡಿ
ನೀರಂ + ಕುಡಿದಂ = ನೀರ್ಗುಡಿದಂ

೧೭೪
ಇರ್ದುದಂ ಅೞಿಯದೆ
ನಯದಿಂ
ಪೊರ್ದುವುದು ಆಗಮಂ ಎಯ್ದೆ
ಪೋಪವು ಲೋಪಂ ಬೊರ್ದಿ
ವಿಭಕ್ತಿಯ ಬೞಿವಿಡಿದು ಇರ್ದುದಂ;
ಅೞೆದು ಇರ್ಪುದು
ಅರಿಯವೋಲ್ ಆದೇಶಂ

ಸಂಧಿ ಕ್ರಿಯೆಯಲ್ಲಿ ನಡೆಯುವ ಲೋಪ, ಆಗಮ ಹಾಗೂ ಆದೇಶ ಕ್ರಿಯೆಗಳಿಗೂ ಸಮಾಸದಲ್ಲಿ ನಡೆಯುವ ಈ ಕ್ರಿಯೆಗಳಿಗೂ ವ್ಯತ್ಯಾಸವಿದೆ. ಇದ್ದುದನ್ನು ಕೆಡಿಸದೆ ನಯವಾಗಿ ಸೇರಿಕೊಳ್ಳುವುವು ಆಗಮ. ಆಗಮವಾಗಿ ಬಂದು ವಿಭಕ್ತಿ ಪ್ರತ್ಯಯದೊಂದಿಗೆ ಲುಪ್ತವಾದರೆ ಅವು ಆಗಮಲೋಪ. ವೈರಿಯಂತೆ ಇದ್ದುದನ್ನು ಕೆಡಿಸಿ ಬರುವುದು ಆದೇಶ.

ಪ್ರಯೋಗ :
ಆಗಮಕ್ಕೆ :
(ತೆಂಕ + ಅಣ್ + ಅ) >ತೆಂಕಣ
(ಮಾಡು + ಇನ್ + ಅ )+ ಬಲ್ಲಹಂ = ಮಾತಿನಬಲ್ಲಹಂ

ಆಗಮ ಲೋಪಕ್ಕೆ :
ತೆಂಕಣ + ವಂಕ = ತೆಂಕವಂಕ
ತೆಂಕವಂಕದೊಳಸಂಖ್ಯಬಲಂ ನಿಶ್ಯಂಕೆಯಿಂ…

ಆದೇಶಕ್ಕೆ :
ಕೆಳಗು > ಕಿೞ್ + ಕೊಂಬು = ಕಿೞ್ಕೂಂಬು
ಒಂದು > ಒರ್ + ಮೊದಲ್ = ಒರ್ಮೊದಲ್

೧೭೫
ಪರಪದದೊಳ್ ಅರ್ಥವರ್ತನಂ
ಇರೆ ತತ್ವುರುಷಂ,
ಸಮಂತು ಏಕಾಶ್ರಯಂ ಆಗಿರೆ
ಕರ್ಮಧಾರೆಯಂ,
ನೆಲಸಿರೆ, ಮೊದಲೊಳ್
ಸಂಖ್ಯೆ ಅದೆ ವಲಂ ದ್ವಿಗು ಅಕ್ಕುಂ

ಸಮಾಸಗಳಲ್ಲಿಯ ಪೂರ್ವೋತ್ತರ ಪದಗಳ ಕ್ರಿಯಾರ್ಥ ಸಂಬಂಧವನ್ನು ಅನುಲಕ್ಷಿಸಿ ಸಂಸ್ಕೃತದಲ್ಲಿರುವ ಷಟ್ಸಮಾಸಗಳ ಲಕ್ಷಣಗಳನ್ನು ಹೇಳಿದ್ದಾನೆ, ಈ ಸೂತ್ರದಲ್ಲಿ ತತ್ಪುರುಷ, ಕರ್ಮಧಾರೆ ಮತ್ತು ದ್ವಿಗು ಸಮಾಸಗಳ ಬಗ್ಗೆ ಹೇಳಿರುವನು. ೧. ಸಮಾಸವಾಗುವಾಗ ಅರ್ಥವು ಉತ್ತರ ಪದದಲ್ಲಿದ್ದರೆ ಅದು ತತ್ಪುರುಷ. ಪುರ್ವಪದವು ತೃತೀಯಾ, ಚತುರ್ಥಿ, ಪಂಚಮೀ, ಷಷ್ಟೀ, ಸಪ್ತಮೀ ವಿಭಕ್ತಿ ಹೊಂದಿರುವುದರಿಂದ ಆಯಾ ವಿಭಕ್ತಿಯ ಹೆಸರಿನಲ್ಲಿ ಆ ಸಮಾಸದ ಹೆಸರು ಇರುತ್ತದೆ. ಕೇಶಿರಾಜನು ಬಹುತೇಕ ಉದಾಹರಣೆಗಳನ್ನು ಷಷ್ಟೀ ತತ್ಪುರುಷದಿಂದಲೇ ಎತ್ತಿಕೊಟ್ಟಿದ್ದಾನೆ. ೨.ಸಮಾಸ ಕ್ರಿಯೆಯಲ್ಲಿ ಪೂರ್ವೋತ್ತರ ಪದಗಳು ಒಂದೇ ವಿಭಕ್ತಿಯಲ್ಲಿ ಇರುವುದುಂಟು. ಅದನ್ನೇ ಕೇಶಿರಾಜ ಏಕಾಶ್ರಯ ಎನ್ನುತ್ತಾನೆ. ಇನ್ನೊಂದು ಅಂಶ ಪೂವೋತ್ತರ ಪದಗಳು ವಿಶೇಷಣ – ವಿಶೇಷ್ಯ ಸಂಬಂಧದಿಂದ ಕೂಡಿಕೊಂಡಿದ್ದು ಸಮಾಸ ಪದವು ಬೆಸುಗೆಯ ರೂಪದಲ್ಲಿರುತ್ತವೆ. ಅದು ಕರ್ಮಧಾರೆಯ ಸಮಾಸ. ೩.ಪೂರ್ವ ಪದವು ಸಂಖ್ಯಾವಾಚಿಯಾಗಿದ್ದರೆ ಅದು ದ್ವಿಗು ಸಮಾಸ. ಕೇಶಿರಾಜನು ಈ ಸಮಾಸದಲ್ಲಿ ಕೇವಲ ಪೂರ್ವಪದವಷ್ಟೇ ಸಂಖ್ಯಾವಾಚಿ ಯಾಗಿರದೆ ಪೂರ್ವೋತ್ತರ ಪದಗಳೆರಡೂ ಸಂಖ್ಯೆಯಾಗಿರಬಹುದೆಂದು ಹೇಳಿದಂತಿದೆ. ಈ ಮೂರು ಸಮಾಸಗಳಲ್ಲಿಯೂ ಉತ್ತರ ಪದವು ಮುಖ್ಯವಾಗಿದೆ.

ತತ್ಪುರುಷಕ್ಕೆ :
ಮಲ್ಲಿಗೆಯ + ನನೆ = ಮಲ್ಲಿಗೆನನೆ
ಮಾಣಿಕದ + ಕೆಂಪು = ಮಾಣಿಕಗೆಂಪು

ಕರ್ಮಧಾರೆಯಕ್ಕೆ :
ತೆಳ್ಳಿತ್ತು > ತೆಳ್ + ಕದಂಪು = ತೆಳ್ಗದಂಪು
ಮೆಲ್ಲಿತ್ತು > ಮೆಲ್ + ನುಡಿ = ಮೆಲ್ನುಡಿ
ಕಿಱಿದು > ಕಿಱು + ಕೂಸು = ಕಿಱುಗೂಸು
ಕಿಱುಗೂಸಾಗಿಯಪಾಯಮಂ ಮಱದನೇ….

ದ್ವಿಗುವಿಗೆ :
ಎರಡು > ಇರ್ + ಬಾಳ್ = ಇರ್ಬಾಳ
(ಇರ್ಬಾಳ್) ಮೂವಾಳಿಕ್ಕಿ, (ದುರ್ಬರೆ)ಯೊಳ್
ಎರಡು > ಇರ್ + ಪೆಂಡಿರ್ = ಇರ್ಪೆಡಿರ್
ಮೂರು > ಮೂ + ಬಾಳ್ = ಮಾಬಾಳ್
ಎರಡು >ಇರ್ + ಐದು = ಈರೈದು

೧೭೬
ಪದ ಎರಡುಂ ಪಲವು
ಮೇಣ್ ಪರಪದಾರ್ಥಮಂ
ಬಯಸುತಿರೆ ಬಹುವ್ರೀಹಿ,
ಪದಾರ್ಥದ ಗಡಣಂ
ದ್ವಂದ್ವಂ ಎನಿಪ್ಪುದು,
ಅವ್ಯಯೀ ಭಾವಂ,
ಆದಿ ಪದ ಮುಖ್ಯತೆಯಿಂ

೧. ಎರಡು ಅಥವಾ ಅನೇಕ ಪದಗಳು ಸೇರಿ, ಬೇರೊಂದು ಅರ್ಥವನ್ನು ಬಯಸುತ್ತಿ ದ್ದರೆ ಅದು ಬಹುವ್ರೀಹಿ, ಅದಕ್ಕೆ ಎರಡು ಪದ ಅಮುಖ್ಯ ಸಮಾಸವೆಂದು ಕರೆಯುವರು. ೨. ಎರಡು ಅಥವಾ ಹಲವು ಪದಗಳ ಸಮೂಹ ದ್ವಂದ್ವ. ಇಲ್ಲಿ ಸೇರಬೇಕಾದ ಪದಗಳು ನಾಮಪದಗಳಾಗಿದ್ದು ಅವು ಒಂದೇ ವಿಭಕ್ತಿಗಳಲ್ಲಿರುತ್ತವೆ. ಇಲ್ಲಿ ಪದಗಳನ್ನು ವಿಗ್ರಹಿಸುವಾಗ ಊ/ಊಂ, ಸಮುಚವಾಚಕಗಳು ಬರುತ್ತವೆ. ೩. ಪೂರ್ವಪದ ಪ್ರಧಾನವಾಗಿದ್ದು ಅದರಲ್ಲಿಯೇ ಅರ್ಥ ಹುದುಗಿದ್ದರೆ ಅದು ಅವ್ಯಯೀ ಭಾವ. ಪೂರ್ವಪದದ ಅರ್ಥವು ಉತ್ತರದ ಅಂಶ ಭಾಗದಿಂದ ಕೂಡಿಕೊಂಡು ಅಭಿನ್ನವಾಗಿರುವುದರಿಂದ ಇದಕ್ಕೆ ‘ಅಂಶೀ ಸಮಾಸ’ವೆಂದೂ ಹೆಸರು.

ಬಹುವ್ರೀಹಿಗೆ :
ಕಡು + ಚಾಗಿ = ಕಡುಚಾಗಿ (ಚಾಗದಲ್ಲಿ ಕಡುತರಂ ಆವಂ)

ಛಲ + ವಾದಿ =
ಚಲವಾದಿ (ಛಲವು ಆವನಿಗೋ, ಆವಂ)

ದ್ವಂದ್ವಕ್ಕೆ :
ಆಟಂ + ಪಾಟಂ + ಕೂಟಂ = ಆಟಪಾಟಕೂಟಂಗಳ್
ಮರವೂ + ಗಿಡವೂ + ಬಳ್ಳಿಯೂ + ಪುಲ್ + ಪೊದರ್ =
ಮರಗಿಡಬಳ್ಳಿ ಪುಲ್ಪೊದರ‍್ವೆಕ್ಕಿ ಮಂಗಗಳ್

ಅವ್ಯಯೀಭಾವಕ್ಕೆ :
ಕೈ + ಅಡಿ = ಅಂಗೈ
ಕಾಲ + ಮೇಲ್ = ಮೇಂಗಾಲ್
ಕೆಳಗು > ಕಿೞ್ + ಪೊಡೆ = ಕಿಡೆ

೧೭೭
ಅಡಿ, ಮೇಗುಗಳ್
ಅಂತ್ಯಾಕ್ಷರದ ಎಡೆಗೆ ಅಕ್ಕುಂ
ಬಿಂದು,
ಮುಂದು ಪಿಂದುಗಳ ಅಂತ್ಯಕ್ಕೆ
ಒಡರಿಸುಗುಂ ಲೋಪಂ, ನೋೞ್ಪೊಡೆ
ಅವ್ಯಯೀಭಾವದೊಳ್
ಕೆಳಗು ಕಿೞ್ ಎನಿಕ್ಕುಂ

ಅಡಿ, ಮೇಗುಗಳು ಪೂರ್ವ ಪದಗಳಾಗಿದ್ದು ಅವ್ಯಯೀಭಾವ ಸಮಾಸವಾಗುವಲ್ಲಿ ಅವುಗಳ ಅಂತ್ಯಾಕ್ಷರಕ್ಕೆ ಬಿಂದು ಬರುತ್ತದೆ. ಮುಂದು, ಪಿಂದುಗಳ ಅಂತ್ಯಾಕ್ಷರಕ್ಕೆ ಲೋಪವುಂಟಾಗುತ್ತದೆ. ಕೆಳಗು ಎಂಬುದು ಪೂರ್ವಪದವಾಗಿರುವಾಗ ‘ಕಿೞ್’ ಎಂಬುದು ಆದೇಶವಾಗುತ್ತದೆ.

ಅಡಿ, ಮೇಗುಗಳ ಅಂತ್ಯಾಕ್ಷರಕ್ಕೆ ಬಿಂದು :

ಕಯ್ಯ + ಅಡಿ > ಅಡಿ + ಕಯ್ > ಅಂ + ಕಯ್ > ಅಂಗೈ
ಕಾಲಿನ + ಅಡಿ > ಅಡಿ + ಕಾಲ > ಅಂ + ಕಾಲ > ಅಂಗಾಲ
ಕಾಲನ ಮೇಗು > ಮೇಗು + ಕಾಲ್ > ಮೇಂ + ಕಾಲ > ಮೇಂಗಾಲ್
ಉದ್ದಮಾಗಿ ಬಿಗಿದ ಮೇಂಗಾಲ್….

ಮುಂದು, ಪಿಂದುಗಳ ಅಂತ್ಯಾಕ್ಷರ ಲೋಪ :
ಕಯ್ಯ ಮುಂದು > ಮುಂದು + ಕಯ್ >ಮುಂ + ಕಯ್ > ಮುಂಗೈ
ಕಾಲಿನ ಪಿಂದು > ಪಿಂದು +ಕಾಲ್ >ಪಿಂ + ಕಾಲ > ಪಿಂಗಾಲ್

ಕೆಳಗು ಎಂಬುದಕ್ಕೆ ‘ಕಿೞ್’ ಆದೇಶ :
(ಕೆಱಯಕೆಳಗು) >
ಕೆಳಗು +ಕೆಱ >ಕಿೞ್ + ಕೆಱ > ಕಿೞಱ

೧೭೮
ವಿದಿತಂ ಕ್ರಿಯಾಸಮಾಸಂ
ಮೊದಲೊಳ್ ಕಾರಕಮಂ
ಅಗ್ರದೊಳ್ ಕ್ರಿಯೆಯಂ
ಸನ್ನಿದಂ ಆಗೆ;
ಬಿಂದು ಸಕ್ಕದ ಅದಂತದೊಳ್,
ಕನ್ನಡಕ್ಕೆ ಮೇಣ್ ಉತ್ವದೊಳಂ

ಪೂರ್ವಪದದಲ್ಲಿ ಕಾರಕವೂ ಉತ್ತರಪದದಲ್ಲಿ ಕ್ರಿಯೆಯೂ ಇದ್ದರೆ ಅದು ಕ್ರಿಯಾ ಸಮಾಸ. (ಹೆಚ್ಚಾಗಿ) ಕ್ರಿಯಾಸಮಾಸವು ದ್ವಿತೀಯಾ ವಿಭಕ್ತಿ ಪರವಾದ ಕಾರಕವನ್ನು ಪೂರ್ವದಲ್ಲಿ ಪಡೆದಿರುವುದು ಕಂಡು ಬರುತ್ತದೆ. ಕ್ರಿಯಾಸಮಾಸವು ಸಂಸ್ಕೃತದಲ್ಲಿ ವ್ಯವಹರಿಸುವಾಗ ಬಿಂದು ನಿತ್ಯ. ಕನ್ನಡದಲ್ಲಿ ‘ಅ’ ಕಾರಾಂತ, ‘ಉ’ ಕಾರಾಂತ ಪದಗಳು ಪೂರ್ವಪದವಾಗಿರುವಾಗ ಬಿಂದು ವಿಕಲ್ಪವಾಗಿ ಬರುತ್ತದೆ. ಅರ್ಥಕ್ಕೆ ಬಾಧೆ ಬರುತ್ತಿದ್ದರೆ ಬಿಂದು ಲೋಪ ಮಾಡಬಾರದು. ಕ್ರಿಯಾಸಮಾಸದಲ್ಲಿ ಅರಿಸಮಾಸ ದೋಷವಿಲ್ಲ.

ಕ್ರಿಯಾಸಮಾಸಕ್ಕೆ :
ಬಳೆಯತೊಟ್ಟಂ > ಬಳೆದೊಟ್ಟಂ
ಬಳೆ + ತೊಟ್ಟಂ = ಬಳೆದೊಟ್ಟಂ
: ತೆಱಯಿಂದತೆತ್ತಂ > ತೆಱ + ತೆತ್ತಂ
= ತೆಱದೆತ್ತಂ

ಸಂಸ್ಕೃತ ನಿತ್ಯ ಬಿಂದುವಿಗೆ :
ರಂಗಂಪೊಕ್ಕಂ – ರಂಗಂಬೊಕ್ಕಂ
ಗುಣಂಗೊಂಡಂ – ಪ್ರಿಯಂ ಮಡಿದಂ

ಕನ್ನಡದಲ್ಲಿ ಬಿಂದು ವಿಕಲ್ಪಕ್ಕೆ :
ಮೊಗಂ ನೋಡಿದಂ ‑ ಮೊಗನೋಡಿದಂ
ಮನಂಸಂದಂ ‑ಮನಸಂದಂ

‘ಉ’ ಕಾರಾಂತದಲ್ಲಿ ಬಿಂದು ವಿಕಲ್ಪಕ್ಕೆ :
ಮಾತುಂ ಗುಟ್ಟಿದಂ ‑ ಮಾತುಗುಟ್ಟಿದಂ
ಪುದುಂಗೊಳಿಸಿದಂ ‑ ಪುದುಗೊಳಿಸಿದಂ

ಕೆಲವೆಡೆ ಬಿಂದು ಅಗತ್ಯ :
ಪಯಣಂನೋಡಂ, ಕೆಲಸಂಬೊಕ್ಕಂ

ಅರಿಸಮಾಸ ನಿರ್ದೋಷಕ್ಕೆ :
ಚಕ್ರಂ + ಕೊಳ್ = ಚಕ್ರಂಗೊಳ್
ಬಳಪಂ + ಕೊಳ್ = ಬಳಪಂಗೊಳ್

೧೭೯
ಜನಿಯಿಸುಗುಂ ಸಂಖ್ಯೆ,
ಸರ್ವನಾಮ, ಗುಣವಚನ
ಕೃತ್ ಪ್ರಪೂರ್ವಂ ಗಮಕಂ;
ತನಗೆ ಅತ್ವಂ ಪೆಱಗೆ ಇತ್ವಂ,
ತನಗೆ ಅರಿದಪಂ ಇಲ್ಲ
ಕರ್ಮಧಾರೆಯ ಅದುವುಂ

ಗಮಕ ಸಮಾಸದಲ್ಲಿ ಪೂರ್ವ ಪದವು ಸಂಖ್ಯೆ, ಸರ್ವನಾಮ, ಗುಣವಚನ ಹಾಗೂ ಕೃದಂತವಾಗಿರಬೇಕು. ಉತ್ತರ ಪದವು ಕಾರಕವಾಗಿರಬೇಕು. ಸಮಾಸವಾಗುವಾಗ ಗುಣವಚನದ ಅಂತ್ಯಾಕ್ಷರ ಲೋಪವಾಗಿ ಉಳಿಯುವ ‘ಇ’ ಕಾರದ ಮುಂದೆ ‘ಅ’ ಕಾರ ವು ಬರುತ್ತದೆ. ಇಲ್ಲಿ ಅರಿಸಮಾಸ ದೊಷವಿಲ್ಲ. ಗಮಕ ಸಮಾಸ ಕರ್ಮಧಾರೆಯದ ಒಂದು ಪ್ರಭೇದವೂ ಆಗಿದೆ.

ಸಂಖ್ಯೆಗೆ :
ಮೂವತ್ತು + ಆಱು = ಮಾವತ್ತಾಱು
ಮೂವತ್ತಾಱುಂ ಗುಣಂಗಳ್ ತಮಗಮರ್ದಿರೆ
ನೂಱು + ಪತ್ತು = ನೂಱುಪತ್ತು

ಸರ್ವನಾಮಕ್ಕೆ :
(ಆವುದು >) ಆವಂ + ನಾಯಕಂ = ಆವನಾಯಕಂ
ಆವ ರಾವುತರಾವವಾಜಿಗಳಾವು
ವಾನೆಗಳಾವನಾ
ಳಾವನಾಯಕರೋ…. ನಿಮ್ಮೀ
ವ್ಯೂಹ ಸಂದೋಹದೊಳ್ ||
(ಆವುದು >) ಆವಂ + ಕಾಂತೆ = ಆವಕಾಂತೆಂ

ಗುಣವಚನಕ್ಕೆ :
ಅಸಿದು > ಅಸಿ + ಅ > ಅಸಿಯ + ನಡು = ಅಸಿಯನಡು
ಅಸಿಯನಡುಪಸಿಯ ಬಣ್ಣಂ
ಮಿಸುಪರದಂ
ಪಸಿದು > ಪಸಿ + ಅ > ಪಸಿಯ + ಬಣ್ಣಂ = ಪಸಿಬಣ್ಣಂ

ಕೃದಂತಕ್ಕೆ :
ಪಾಡುವುದು ತುಂಬಿ > ಪಾಡುವ + ತುಂಬಿ = ಪಾಡುವತುಂಬಿ
ಪಾಡುವತುಂಬಿಗ ಕೋಡುವಪುೞಿಲ್…

ಅರಿಸಮಾಸ ನಿರ್ದೋಷಕ್ಕೆ :
ಪೂಸಿದುದು ಭಸ್ಮಂ > ಪೂಸಿದ + ಭಸ್ಮಂ = ಪೂಸಿದಭಸ್ಮಂ.
ಬೀಸುವಚಾಮರ, ಪಿಂಗೆ ಪೂಸಿದ ಭಸ್ಮಪರಾಗಂ
ಪೊಣ್ಮುವ ಘರ್ಮ ಜಲಂಗಳಾ ಪಾಂಗು….

ಕರ್ಮಧಾರೆ ಮತ್ತು ಗಮಕ ಸಮಾಸದಲ್ಲಿ ಪೂರ್ವಪದ ಗುಣವಚನ ವಾಗಿರುವುದರಿಂದ ಇದನ್ನು ಕೇಶಿರಾಜ ಕರ್ಮಧಾರೆಯದ ಪ್ರಭೇದವೆಂದು ಕರೆದಿದ್ದಾನೆ. ಅವುಗಳ ವಿಗ್ರಹರೂಪದಲ್ಲಿ ಭಿನ್ನತೆ ಸ್ಪಷ್ಟವಾಗಿ ಗೋಚರಿಸುತ್ತದೆ.

ಪಿರಿದು + ಮರಂ = ಪೆರ್ಮರಂ. (ಕರ್ಮಧಾರೆ)

ಪಿರಿಯ + ಮರಂ = ಪಿರಿಯಮರಂ (ಗಮಕ)

೧೮೦
ಅದು, ಇದು, ಉದು, ಗೆ
, , ,
ಒದವುಗುಂ
ಆದೇಶಮಾಗಿ ಗಮಕದೊಳ್,
ಎಂಬುದು ಪೂರ್ವ
ಪರಾಮರ್ಶೆಗಂ ಒದವುಗುಂ
ರೂಢಿಗಂ ಕವೀಶ್ವರ ಮತದಿಂ

ಗಮಕ ಸಮಾಸದಲ್ಲಿ ಅದು, ಇದು, ಉದು ಎಂಬ ಸರ್ವನಾಮಗಳಿಗೆ ಆ, ಈ, ಊ ಆದೇಶಗಳಾಗುತ್ತವೆ. ಕವೀಶ್ವರ ಮತದಂತೆ ಆ ಎಬುದು ಪೂರ್ವಸ್ಮರಣೆಗೂ, ಪ್ರಸಿದ್ದಿಗೂ ಬರುತ್ತದೆ.

ಆ, ಈ, ಊ ಆದೇಶಕ್ಕೆ :
ಅದು + ಮನೆ = ಆಮನೆ
ಇದು + ಮನೆ = ಈಮನೆ
ಉದು + ಮನೆ = ಊಮನೆ

ಸ್ಮರಣಕ್ಕೆ :
ನೆನೆದವಾ ಹಿರಣ್ಯಕನದೊಂದು ಬಿೞ್ದಂದಮಂ

ಪ್ರಸಿದ್ದಿಗೆ :
ಗಜಹಯ ರೂಢಿಯೊಳಾ ಭಗದತ್ತಾನಿನಾ
ನಳನಿಂ ಮಿಗಿಲಾದಂ

೧೮೧
, , , , ಕಾರಂ,
ಇದಿರಿರೆ ಮೊದಲ ಪದಂ
ತಾಂ ಕೃದಂತಂ ಆಗಿರೆ
ದೊರೆ ಕೊಳ್ವುದು
ಅನುಸ್ವಾರಂ, ದಂತದೊಳ್
ದಂತದೊಳ್
ಕರ್ಮಧಾರೆಯಂ
ಬರೆ, ಬಹುಳಂ

ಕರ್ಮಧಾರೆಯದಲ್ಲಿ ಪೂರ್ವಪದ ‘ಉ’ ಕಾರಾಂತ, ‘ಇ’ ಕಾರಾಂತ ಕೃದಂತವಾಗಿದ್ದು, ಉತ್ತರ ಪದಾದಿಯಲ್ಲಿ ಗ, ದ, ಬ, ಜ ಕಾರಗಳಿದ್ದರೆ ವಿಕಲ್ಪವಾಗಿ ನಡುವೆ ಬಿಂದು ಬರುತ್ತದೆ.

ಉ ಕಾರಾಂತಕ್ಕೆ :
ಇಡುಕು + ಕಬ್ಬಂ = ಇಡುಕುಂಗಬ್ಬಂ
ಇಡುಕುಂಗಬ್ಬಂ ಮುಕ್ತಕ
ಮೊಡಂಬಡಂ ಪಡೆಯೆ…
ಪುಟ್ಟುಂ + ಕುರುಡುಂ = ಪುಟ್ಟುಗುರುಡಂ
ಆಡು + ತೊಲೆ = ಆಡುಂದೊಲೆ
…ಎತ್ತುವೇತದಾ |
ಡುಂದೊಲೆಯಂತೆ ಕಣ್ಣೆಸೆದುದೇ ಱಿದಿಭಂ ಕದನತ್ರಿಣೇತ್ರನಾ
ಪಾಱು + ಬಳೆ = ಪಾಱುಂಬಳೆ
ಪಾಱುಂಬಳೆ ನಾರಾಚಂ
ತೂಱುವ ಸರಲ್…
ಏಱು + ಜವ್ವನಂ = ಏಱುಂಜವ್ವನಂ
ಏಱುಂಜವ್ವನದೊಳ್‌ಸೊ
ಕ್ಕೇಱದ ನೀಱಯರ

ಇ ಕಾರಾಂತಕ್ಕೆ :
ಸಿಡಿ + ತಲೆ > ಸಿಡಿ + ಉ + ತಲೆ = ಸಿಡಿಯಂದಲೆ
ಇೞೆ + ಪೊೞ್ತು > ಇೞೆ + ಉ + ಪೊೞ್ತು = ಇೞಯುಂಬೊೞ್ತು

ವಿಕಲ್ಪಕ್ಕೆ :
ಬೆಟ್ಟುಂಬೊೞ
(ಕೃದಂತ ಇಲ್ಲದಿದ್ದರೂ ಇಲ್ಲಿ ಬಿಂದು ಆಗಮಿಸಿದೆ)