೨೨೭
ಕ್ರಿಯೆಯ ಅರ್ಥದ ಮೂಲಂ,
ಪ್ರತ್ಯಯ ರಹಿತಂ
ಧಾತು, ಅದಂ
ಅಭಾವ ಕ್ರಿಯೆಯೊಳ್
ನಿಯತಂ ನಿಶ್ಚಯಿಪುದು,
ಬುಧಚಯಂ ಆಧಾತುವಿಗೆ
ವಿಭಕ್ತಿ ಆಱುಆಗಿ ಇರ್ಕ್ಕಂ

ಕೇಶಿರಾಜ ಈ ಸೂತ್ರದಲ್ಲಿ ಧಾತುವಿನ ಲಕ್ಷಣವನ್ನು ಹೇಳಿದ್ದಾನೆ. ಕ್ರಿಯಾಪದದ ಮೂಲಾರ್ಥವನ್ನು ಒಳಗೊಂಡಿರುವುದು, ಪ್ರತ್ಯಯ ರಹಿತವಾದುದು ಧಾತು. ಧಾತುವನ್ನು ನಿಷೇಧ ಕ್ರಿಯಾಪದದ ಮೂಲಕ ಅಂದರೆ ನಿಷೇಧ ಕ್ರಿಯಾಪದಕ್ಕೆ ಸೇರಿದ ಪ್ರತ್ಯಯವನ್ನು ಕಳೆಯುವ (ತೆಗೆಯುವ) ಮೂಲಕ ಅರಿಯಬಹುದು. ಧಾತುಗಳಿಗೆ ಸೇರುವ ಆಖ್ಯಾತ ವಿಭಕ್ತಿ ಪ್ರತ್ಯಯಗಳು ಆರು. (ಧಾತುಗಳ ಮುಂದೆ ಸೇರಿ ಕ್ರಿಯಾಪದಗಳನ್ನು ರೂಪಿಸುವ ಪ್ರತ್ಯಯಗಳಿಗೆ ಆಖ್ಯಾತ ಪ್ರತ್ಯಯಗಳೆಂದು ಹೆಸರು).

ಮಾಡಿದಂ ಎಂಬ ಕ್ರಿಯೆಯ ನಿಷೇಧರೂಪ ಮಾಡಂ. ಇದರ ಅಮ್ ಎಂಬ ಪ್ರಥಮ ಪುರುಷ ಏಕವಚನ ಪ್ರತ್ಯಯವನ್ನು ಕಳೆದರೆ ಉಳಿಯುವ ರೂಪ ‘ಮಾಡು’ ಇದು ಧಾತು.

೨೨೮
ಅಮ್, ಅರ್, ಅಯ್,
ಇರ್, ಎನ್, ಎವು, ಗಳ್
ಅಕ್ಕುಂ ಕ್ರಮದೆ ಏಕ ಅನೇಕ
ವಚನದೊಳ್
ಪ್ರತ್ಯೇಕಂ ಸಮನಿಸೆ ಯುಗಲತೆ
ಆಖ್ಯಾತ ಮಾರ್ಗದೊಳ್,
ನೆಲಸಿ ನಿಂದ ಪುರುಷತ್ರಯಕಂ

ಅಮ್, ಅರ್, ಅಯ್, ಇರ್, ಎನ್, ಎವು ‑ ಎಂಬ ಆರು ಆಖ್ಯಾತ ಪ್ರತ್ಯಗಳು ಕ್ರಮವಾಗಿ ಪುರುಷತ್ರಯಗಳಲ್ಲಿ ಏಕ, ಬಹುವಚನಗಳಲ್ಲಿ ಸೇರುತ್ತವೆ. ಅಂದರೆ ಪ್ರಥಮಪುರುಷ ಏಕವಚನದಲ್ಲಿ ಅಮ್, ಬಹುವಚನದಲ್ಲಿ ಅರ್, ಮಧ್ಯಮಪುರುಷ ಏಕವಚನದಲ್ಲಿ ಅಯ್, ಬಹುವಚನದಲ್ಲಿ ಇರ್, ಉತ್ತಮ ಪುರುಷ ಏಕವಚನದಲ್ಲಿ ಎನ್, ಬಹುವಚನದಲ್ಲಿ ಎವು ಹೀಗೆ ಸೇರುತ್ತವೆ.

ಪ್ರಥಮ ಪುರುಷ ಏಕವಚನ ದ ಅಮ್‌ಗೆ :
ಒಗೆದಂ
ಒಗೆ + ದ + ಅಮ್ = ಒಗೆದಂ
…ಒಗೆದಂ ಶ್ರೀಗಂಗಚಕ್ರಾಯುಧಂ
ಇದೇ ರೀತಿ ಎಸೆದಂ, ಬೆಸೆದಂ ಒಸೆದಂ, ಬಗೆದಂ, ನಡೆದಂ

ಪ್ರಥಮ ಪುರುಷ ಬಹುವಚನ ಅರ್‌ಗೆ :
ಕಟ್ಟಿದರ್
ಕಟ್ಟು + ದ + ಅರ್ = ಕಟ್ಟಿದರ್
…ಕವಿಗಳ್ ಕೃತಿಬಂಧದೊಳಲ್ತೆ
ಕಟ್ಟಿದರ್ ಮೆಟ್ಟಿದರಿಕ್ಕಿಮೆಟ್ಟದರಿ
ದೇನಳವಗ್ಗಳ ವೋಕವೀಂದ್ರರಾ ||
ಇದೇ ರೀತಿ ಆಡಿದರ್, ಪಾಡಿದರ್, ಮುಟ್ಟಿದರ್, ಮೆಟ್ಟಿದರ್

ಮಧ್ಯಮಪುರುಷ ಏಕವಚನದ ಅಯ್‌ಗೆ :
ತೆಗೆ + ದ + ಅಯ್ = ತೆಗೆದಯ್
ತೆಗೆದಯ್ ಮೋಕ್ಷದ ಬಟ್ಟೆಯಂ…
ಇದೇ ರೀತಿ ನೋಡಿದಯ್, ಪೊರ್ದಿದಯ್

ಮಧ್ಯಮಪುರುಷ ಬಹುವಚನ ಇರ್‌ಗೆ :
ಏಳಿಪಿರ್
ಏಳಿಸು + ಇರ್ = ಏಳಿಪಿರ್
ವಿಹಂಗಮಿದೆಂದೇಕಬ್ಬೆ ನೀ ಮೇಳಿಪಿರ್
ಇದೇ ರೀತಿ ಪೋರ್ದುವಿರ್, ತಿರ್ದುವಿರ್

ಉತ್ತಮ ಪುರುಷ ಏಕವಚನದ ಎನ್‌ಗೆ :
ಒಡರ್ಚಿದೆಂ
ಒಡರ್ಚು + ದ + ಎನ್
ಜನೋದಯಂಗಿದಂ ಪೇೞಲೊಡರ್ಚಿದಂ

ಉತ್ತಮ ಪುರುಷ ಬಹುವಚನದ ಎವುಗೆ :
ಆಂಪೆವು
ಆನ್ + ವ ( ವ > ಪ) + ಎವು (ಆಖ್ಯಾತ ಪ್ರತ್ಯಯ) = ಆಂಪೆವು
…ಕೃಪನುಂಸಂಗ್ರಾಮದೊಳಾಂಪೆವರಾತಿಯಂ
ಇದೇ ರೀತಿ ಕಂಡೆವು, ಕೇಳ್ದೆವು, ಉಸಿರ್ದೆವು

೨೨೯
ಬೆಳೆ,ಯೆಂಬ ಧಾತು
ಸಸ್ಯಾವಳಿಯೊಳ್
ಬಳೆ, ಯೆಂಬ ಧಾತು ಮಿಕ್ಕೆಡೆಯೊಳ್
ಸಂಗಳಿಕುಂ ತಿಳಿಯಲ್ಬರ್ಪುದು
ಬೆಳೆ, ಬಳವಿಗಳ್
ಎಂಬ ಭಾವವಚನ ದ್ವಯದೊಳ್

ಸಸ್ಯಾದಿಗಳ ಅಭಿವೃದ್ದಿಯನ್ನು ಹೇಳುವ ಧಾತುವು ‘ಬೆಳೆ’ ಎನಿಸುತ್ತದೆ. ಉಳಿದ ವಸ್ತುವಿನ ಅಭಿವೃದ್ದಿಯನ್ನು ಹೇಳುವ ಧಾತುವು ‘ಬಳೆ’ ಎನಿಸುತ್ತದೆ. ‘ಬೆಳೆ’ ಎಂಬ ಧಾತುವಿನ ಭಾವ ವಾಚಕವು ‘ಬೆಳೆ’, ‘ಬೆಳಸು’ ಎನಿಸುತ್ತದೆ. ‘ಬಳೆ’ ಎಂಬ ಧಾತುವಿನ ಭಾವವಾಚಕವು ‘ಬಳವಿ’ ಎನಿಸುತ್ತದೆ.

ಬೆಳೆ ಧಾತುವಿಗೆ :
ಬೆಳೆ + ವ + ಉವು = ಬೆಳೆವುವು
ನೆಲ್ಲುಂ ಕೌಂಗುಂ ಮಾವುಂ |
ಮಲ್ಲಿಗೆಯುಂ ಬೆಳೆವುವಲ್ಲಿ ಕರ್ವಿನ ರಸದಿಂ ||

ಬಳೆ ಧಾತುವಿಗೆ :
ಬಳೆ + ದ + ಅಂ = ಬಳೆದಂ
…….ಮೃದುಮುಗ್ಧಾ
ಳಾಪಂ ಬಳೆದಂ ಸರಸ್ವತೀ ಮಣಿಹಾರಂ ||

ಬೆಳೆ ಎಂಬ ಭಾವವಚನಕ್ಕೆ :
ಬೆಳೆ + ಗಳ್ = ಬೆಳೆಗಳ್
ಬೆಳೆಗಳ್ ಕಳನಂ ಪೊಕ್ಕುವು
ಬೆಳಸುಂ ಕುಂದದು ಪೊದೞ್ದ ಪಾೞನೊಳೆಂದುಂ||

ಬಳವಿ ಎಂಬ ಭಾವವಚನಕ್ಕೆ :
ತನುಜವ ಬಳವಿಯನೆ ನೋಡಿ ಜನಕಂ ನಲಿದಂ

೨೩೦
ವಿನುತ ಗುಣವಚನದೊಳ್,
ಸರ್ವನಾಮದೊಳ್,
ಸಂಖ್ಯೆಯೊಳ್,
ಪ್ರವರ್ತಿಪುವು ಆಖ್ಯಾತ
ನಿಯುಕ್ತ ವಿಭಕ್ತಿಗಳ್
ಅವು ಘನತರ
ಸಂಸ್ಕೃತ ಗುಣ ಉಕ್ತಿಯೊಳಂ
ಅಮರ್ದು ಇರ್ಕುಂ

ಸಾಮಾನ್ಯವಾಗಿ ಧಾತುಗಳ ಮುಂದೆ ಸೇರಬೇಕಾದ ಆಖ್ಯಾತ ವಿಭಕ್ತಿ ಪ್ರತ್ಯಯಗಳು ಕೆಲವು ವೇಳೆ ಗುಣವಚನ, ಸರ್ವನಾಮ, ಸಂಖ್ಯಾವಾಚಕಗಳ ಮುಂದೆ ಹಾಗೂ ಸಂಸ್ಕೃತ ಗುಣವಚನಗಳ ಮುಂದೆ ಸೇರಿ ಕ್ರಿಯಾಪದಗಳನ್ನು ರೂಪಿಸುತ್ತವೆ.

ಗುಣವಚನಕ್ಕೆ :
ಒಳ್ಳಿದಂ, ಒಳ್ಳಿದರ್, ಒಳಿದಯ್, ಒಳ್ಳಿದಿರ್(ಒಳ್ಳಿದರಿರ್)
ಒಳ್ಳಿದೆಂ, ಒಳ್ಳದೆವು (ಒಳ್ಳಿದರೆವು)

ಸರ್ವನಾಮಕ್ಕೆ :
ಪೆಱಂ, ಪೆಱರ್, ಪೆಱಯ್, ಪೆಱರ್ (ಪೆಱರಿರ್)
ಪೆಱಿನ್ (ಪಱನೆನ್) ,ಪೆಱಿವು (ಪೆಱರೆವು)

ಸಂಖ್ಯೆಗೆ :
ಒರ್ವಂ, ಒರ್ವರ್,ಒರ್ವಯ್,ಒರ್ವಿರ್ (ಒರ್ವರಿರ್)
ಒರ್ವೆನ್ (ಒರ್ವನೆನ್), ಒರ್ವೆವು (ಒರ್ವರೆವು)

ಸಂಸ್ಕೃತ ಗುಣವಚನಕ್ಕೆ :
ಉದ್ಧತಂ, ಉದ್ಧತರ್, ಉದ್ಧತನಯ್
ಉದ್ಧತರಿರ್, ಉದ್ಧತನೆಂ, ಉದ್ದತರೆವು

೩೩೧
ಆದೇಶಮಾಗಿ ಮುಂ ಗಳ್ಗೆ
ಆದಅರು ಅದು ನಿಲ್ಕುಂ
ಇರ್ ಗಂ ಎವುಗಂ,
ಪೂರ್ವಕ್ಕೆ ಆದಿಗೆ ನತ್ವಂ,
ಎನ್ ಪರಮಾದೊಡೆ
ಕೆಲರಿಂದೆ ಬಿಂದು ಎವುವಿನ ವತ್ವಂ

ಪುಲ್ಲಿಂಗ, ಸ್ತ್ರೀಲಿಂಗಗಳ ಬಹುವಚನದಲ್ಲಿ ‘ಗಳ್’ ಗೆ ಆದೇಶವಾಗಿ ಬರುವ ‘ಅರ್’ ಪ್ರತ್ಯಯವು ಮಧ್ಯಮ ಪುರುಷ ಬಹುವಚನದ ಆಖ್ಯಾತ ಪ್ರತ್ಯಯ ‘ಇರ್’ ಮತ್ತು ಉತ್ತಮಪುರುಷ ಬಹುವಚನದ ಅಖ್ಯಾತ ಪ್ರತ್ಯಯ ‘ಎವು’ ಇವುಗಳ ಆದಿಯಲ್ಲಿ ಸೇರಿಕೊಳ್ಳುತ್ತದೆ. ಇದಕ್ಕೆ ವಿಕಲ್ಪವೂ ಉಂಟು. ಉತ್ತಮ ಪುರುಷ ಏಕವಚನ ಆಖ್ಯಾತ ಪ್ರತ್ಯಯ ‘ಎನ್’ ದ ಆದಿಯಲ್ಲಿ ವಿಕಲ್ಪವಾಗಿ ‘ನ’ ಕಾರಾದೇಶವಾಗುತ್ತದೆ. ಉತ್ತಮ ಪುರುಷ ಬಹುವಚನ ಆಖ್ಯಾತ ಪ್ರತ್ಯಯ ‘ಎವು’ವಿನ ಅಂತ್ಯಕ್ಕೆ (ವತ್ವಕ್ಕೆ) ಕೆಲವರಿಂದ ಬಿಂದು ಬಳಕೆಯಾಗುತ್ತದೆ.

ಇರ್ ಪ್ರತ್ಯಯದ ಆದಿಯ ಅರ್‌ಗೆ :
‘ಕೂರಿದ + ಅರ್ + ಇರ್ = ಕೂರಿದರಿರ್
ಕೂರಿದರಿರ್ ಕಾಳೆಗದೊಳ್

ಎವು ಪ್ರತ್ಯಯದ ಆದಿಯ ಅರ್‌ಗೆ :
ಪಿರಿ + ಅರ್ + ಎವು = ಪಿರಿಯರೆವು
ಪಿರಿಯರೆವೆಂದು ಧಿಕ್ಕರಿಸಿ ಬಯ್ವುದು ತಕ್ಕುದೆ.

ಎನ್ ಪ್ರತ್ಯಯದ ಆದಿಯ ನ ಕಾರಕ್ಕೆ :
ಅತಿಚತುರ + ನ್ + ಎನ್ = ಅತಿಚತುರನೆಂ
ಅತಿಚತುರನೆಂ ಕಲಾಪಂ
ಡಿತನೆಂ ಕೃತಿಲಕ್ಷಣಾವಧಾನನೆಂ…

ಎವು ಪ್ರತ್ಯಯದ ವತ್ವ ಬಿಂದುವಿಗೆ :
ತಿರ್ದುವೆವು > ತಿರ್ದುವೆಂ
ಅವರಾ (ರರೆ) ಮೆಮ್ಮಾಳ್ದ
ನೆಡಱನಾಮ ತಿರ್ದುವೆಂ

೩೨೨
, ದಪ, , ಕಾರಂಗಳ್
ತಪ್ಪದೆ ಕಾಲತ್ರಯ ವಿಭಕ್ತಿ
ಮೂಲದೊಳ್ ಅಕ್ಕುಂ
, ದಪ, ಆದಿಗೆ ಆಗಮಂ,
ಅಪ್ಪುದು ವತ್ವಕ್ಕೆ ಇಲ್ಲ ಅದುಂ,
ತ್ರಿವಚನ ಅನುಗತಂ

‘ದ’, ‘ದಪ’, ‘ವ’ಕಾರ ಪ್ರತ್ಯಯಗಳು ಕ್ರಮವಾಗಿ ಭೂತಕಾಲ, ವರ್ತಮಾನಕಾಲ, ಭವಿಷ್ಯತ್ಕಾಲಗಳಲ್ಲಿ, ಪುರುಷತ್ರಯಗಳಲ್ಲಿ ಆಖ್ಯಾತ ಪ್ರತ್ಯಯಗಳ ಮೊದಲು ಧಾತುಗಳ ಮುಂದೆ ಸೇರಿಕೊಳ್ಳುತ್ತವೆ. ಉ ಕಾರಾಂತ ಧಾತುಗಳ ಮುಂದೆ ಭೂತ, ವರ್ತಮಾನಕಾಲ ಸೂಚಕ ‘ದ’, ‘ದಪ’ ಪ್ರತ್ಯಗಳು ಸೇರುವಾಗ ಧಾತುವಿನ ಅಂತ್ಯ ‘ಇ’ ಕಾರಾಗಮವಾಗುತ್ತದೆ. ಆದರೆ ಉಕಾರಾಂತ ಧಾತುಗಳ ಮುಂದೆ ಭವಿಷ್ಯತ್ಕಾಲವಾಚಕ ‘ವ’ ಪ್ರತ್ಯಯ ಸೇರುವಾಗ ಧಾತುವಿನ ಅಂತ್ಯಕ್ಕೆ ‘ಇ’ ಕಾರಾಗಮವಿಲ್ಲ.

ದ ಕಾರಕ್ಕೆ :
ಗೆಲ್ + ದ + ಅಂ = ಗೆಲ್ದಂ
…ಒರ್ವನೆ ಗೆಲ್ದಂ ನಿನಾತಕವಚಾಸುರರಂ

ದಪ ಕಾರಕ್ಕೆ :
ಎೞ್ತರ್ + ದಪ + ಅಂ = ಎೞ್ತಂದಪಂ
…ವಸಂತರಾಜನೆ
ೞ್ತಂದಪಂನಿಂದು ನಾಳೆ ಬದುರ್ಕಿಲ್ಲ
ವಿಯೋಗಿಗೆ ಪಂಕಜನ ನೇ

ವ ಕಾರಕ್ಕೆ :
ಪಡೆ + ವ + ಅಂ = ಪಡೆವಂ
ಬಹುತಾಪಕ್ಕೆ ಬಿಗುರ್ತು ವಿಷ್ಣು ಪಡೆವಂ
ಮತ್ಸ್ಯಾವತಾರಕ್ಕೆ

ದಕಾರದಾದಿಯ ಇಕಾರಾಗಮಕ್ಕೆ :
ತಾಗು + ಇ +ದ + ಅಂ = ತಾಗಿದಂ
ಒರ್ವನೆ ಮತ್ಸ್ಯನಂ ತಳರೆ ತಾಗಿದನಾಜಿಯೊಳ್…

ದಪ ಕಾರದಾದಿಯ
ಇ ಕಾರಾಗಮಕ್ಕೆ :
ಅಂಜಿಸು + ಇ + ದಪ + ಅಂ = ಅಂಜಿಸಿದಪಂ
…ಅಂಜಿಸಿದಪಂ ಮೂಲೋಕಮಂ
ತಾರಕಂ

ವ ಕಾರದಾದಿಯ ಇಕಾರಾಗಮ
ರಾಹಿತ್ಯಕ್ಕೆ :
ಮಾಡು + ವ + ಅಂ = ಮಾಡುವಂ
ಮರುತ್ತರಂಗಿಣಿಯನಂದಾ ಲಿಂಗನಂ ಮಾಡುವಂ

೨೩೩
ಪರಿಭಾವಿಸೆ, ಕಾಲತ್ರಯ
ಪರಿಣಾಮಿಗಳ್ ಎನಿಸಿ
ನೆಗೞ್ದ ಮೂಱುಂ ಕ್ರಿಯೆಯೊಳ್;
ನಿರುತಂ ಪ್ರತಿಷೇಧಕ್ರಿಯೆ
ಬರೆ, ಭೂತ ಅರ್ಥದೊಳ್
ಸಲ್ವುದು ಎಂಬರ್ ಪಿರಿಯರ್

ಭೂತ,ವರ್ತಮಾನ, ಭವಿಷ್ಯತ್ಕಾಲದ ಕ್ರಿಯಾಪದಗಳು ಪರಸ್ಪರ ಭಿನ್ನವಾಗಿದ್ದರೂ ಈ ಮೂರು ಕ್ರಿಯಾಪದಗಳ ಪ್ರತಿಷೇಧರೂಪಗಳನ್ನು ರೂಪಿಸಲು ಅವು (ವರ್ತಮಾನಕಾಲ, ಭವಿಷ್ಯತ್ಕಾಲದ ಕ್ರಿಯಾಪದಗಳು) ಭೂತಕಾಲದ ನಿಷೇಧ ಕ್ರಿಯಾಪದದ ರೂಪವನ್ನೇ ಹೋಲುತ್ತವೆಂದು ವಿದ್ವಾಂಸರು ಹೇಳುತ್ತಾರೆ.

ಮಾಡಿದಂ (ಭೂತಕಾಲ ಕ್ರಿಯಾಪದ) ‑ ಮಾಡಂ (ನಿಷೇಧ ರೂಪ)
ಮಾಡಿದಪಂ (ವರ್ತಮಾನಕಾಲ ಕ್ರಿಯಾಪದ) ‑ ಮಾಡಂ (ನಿಷೇಧ ರೂಪ)
ಮಾಡುವಂ (ಭವಿಷ್ಯತ್ಕಾಲ ಕ್ರಿಯಾಪದ) ‑ ಮಾಡಂ (ನಿಷೇಧ ರೂಪ)

೨೩೪
ಪುರುಷತ್ರಯಂ ಅವು
ಸ್ವಾರ್ಥ ಉಚ್ಚರಿತಂಗಳ್,
ಯುಗ ಪದುಕ್ತಿಗೆ ಉತ್ತಮಪುರುಷಂ
ಪರಂ ಅದಂ
ಉೞಿದಿರೆ, ಮಧ್ಯಮ ಪುರುಷಂ
ಕ್ರಮಗಣನಂ ಇರೆಯುಂ
ಒಲ್ದಂತೆ ಇರೆಯುಂ

ಪ್ರಥಮ, ಮಧ್ಯಮ ಮತ್ತು ಉತ್ತಮ ಪುರುಷಗಳು ತಮತಮಗೆ ಸ್ವತಂತ್ರವಾಗಿರುತ್ತವೆ. ಪುರುಷತ್ರಯಗಳು ಕ್ರಮವಾಗಿದ್ದರೂ ಅಥವಾ ವ್ಯತ್ಯಯವಾಗಿದ್ದರೂ ಉತ್ತಮ ಪುರುಷಕ್ಕೆ ಮುಖ್ಯತ್ವವಿರುತ್ತದೆ. ಪ್ರಥಮ ಮತ್ತು ಮಧ್ಯಮ ಪುರುಷಗಳು ಕ್ರಮವಾಗಿ ಅಥವಾ ವ್ಯತ್ಯಯವಾಗಿದ್ದರೂ ಮಧ್ಯಮ ಪುರುಷಕ್ಕೇ ಮುಖ್ಯತ್ವವಿರುತ್ತದೆ. ಒಂದಾಗಿ ನುಡಿಯುವಲ್ಲಿ ಪ್ರಥಮ ಪುರುಷಕ್ಕೆ ಯಾವಾಗಲೂ ಮುಖ್ಯತ್ವವಿರುವುದಿಲ್ಲ.

ಸ್ವತಂತ್ರಾರ್ಥಕ್ಕೆ :
ಆತನಿರ್ದಂ ‑ ಅವರಿರ್ದರ್
ನೀನ್ ಕಂಡಯ್ ‑ ನೀಂ ಕಂಡಿರ್
ಆನ್ ಕೇಳ್ದೆಂ ‑ ಆಂ ಕೇಳ್ದೆವು

ಉತ್ತಮ ಪುರುಷ ಮುಖ್ಯತ್ವಕ್ಕೆ ‑(ಕ್ರಮ) :
ಆತನುಂ ನೀನುಮಾನುಂ ಪೊಱಗಾಗಿರ್ದೆವವನಿಪತಿಗೆ ಪಿಸುಣರಿಂ
(ಕ್ರಮ ವ್ಯತ್ಯಯ) ನೀನು ಮಾತನು ಮಾನುಂ ಮಣಿಕೂಟನಗಕ್ಕೆ ಪೋಪೆವು
ಆತನುಮಾನುಂ ನೀನುಂ ಕಜ್ಜದ ತೆಱನಱದು ಪೆೞವು
ಆನುಂ ನೀನು ಮಾತನುಂ ಬೆಸಕೆಯ್ವೆವು

ಮಧ್ಯಮ ಪುರುಷ ಮುಖ್ಯತ್ವಕ್ಕೆ :
(ಕ್ರಮ) :
ಆತನುಂ ನೀನುಂ ಕೂಡಿದಿರಪ್ಪೊಡಾಹವಕ್ಕೆ ಕಿಚ್ಚುಂ
ಗಾಳಿಯಂ ಕೂಡಿದಂತೆ

(ಕ್ರಮ ವ್ಯತ್ಯಯ) :
ನಾಳಿನ ದಿನದೊಳ್ ನೀನು ಮಾತನುಂ ಕೂಡಿದಪಿರ್