೨೬೪
ವೇದ ಸಮನಾಗಿ ಭೀಮನಿಂ
ಆದುದು
ಸಂಸ್ಕೃತದ ಧಾತುವಂ;
ತೆಱದಿಂದಂ
ಯಾದವ ಕಟಕಾಚಾರ್ಯ
ನಿಂ ಆದುದು
ಕರ್ಣಾಟಕ ಧಾತು
ಕವಿಕೇಶವನಿಂ

೨೬೫
ದೊರೆವಡೆದ ಮಹಾಪ್ರಾಣಾಕ್ಷರ
ಅಂತದಿಂ; , , , , ಅಂತ
, ಅಂತ ಕ್ಷಾಂತಲುದ್ಧರಣದಿ
ಉದ್ಭವಿಸವು
ಬಲ್ಲವರ ಮತದಿಂ,
ಧಾತು ತಿಳಿವು ಇವ
ಕ್ರಮದಿಂ
ಕ್ರಿಯಾರ್ಥೋಧಾತುಃ

ಸಂಸ್ಕೃತ ಧಾತು ಕೋಶವು ವೇದಸಮನಾಗಿ ವೈಯಾಕರಣಿ ಭೀಮನಿಂದ ರಚಿಸಲ್ಪಟ್ಟಿತು. ಅದೇ ರೀತಿ ಕನ್ನಡ ಧಾತು ಕೋಶವು ಯಾದವ ಕಟಕಾಚಾರ್ಯನಾದ ಕವಿ ಕೇಶವನಿಂದ ರಚಿತವಾಯಿತು. ಮಹಾಪ್ರಾಣಾಕ್ಷರ, ಙ, ಞ, ಶ, ಷ, ಹ, ಕ್ಷ ‑ ಇವುಗಳು ಅಂತ್ಯವಾಗುಳ್ಳ ಧಾತುಗಳು ವಿದ್ವಾಂಸರ ಅಭಿಪ್ರಾಯದಂತೆ ಜನಿಸುವುದಿಲ್ಲ. ಕ್ರಿಯೆಯ ಅರ್ಥವನ್ನು ಹೇಳುವುದು ಧಾತುವೆನಿಸುತ್ತದೆ.

. ಸ್ವರ ಧಾತುಗೆ
೧. ಈ – ಪ್ರದಾನೇ (ಕೊಡು, ದಾನ ಮಾಡು)
೨. ಓ – ಸ್ನೇಹೇ (ಪ್ರೀತಿಸು; ಸ್ನೇಹ ಮಾಡು)

. ಕಾಂತಕ್ಕೆ
೩. ಅಡಕು – ಸ್ಥಾನಾಂತರ ಪ್ರಣೇತೇ (ಪಲ್ಲಟವಾಗು)
೪. ಅಳ್ಕು – ಭಯೇ, ಅಶಕ್ತೌಚ (ಭಯಪಡು)
೫. ಅೞ್ಕು – ಜೀರ್ಣೇ (ಜೀರ್ಣಿಸು)
೬. ಇಕ್ಕು – ತ್ಯಾಗ ಪತನ ಯೋಃ (ತೊರೆ, ಬಿಟ್ಟು ಹೋಗು)
೭. ಇಡುಕು, ಇಡುಂಕು – ಗಾಢ ವಿಮೋಚನೆ (ತುರುಕು)
೮. ಇಱುಕು, ಇಱುಂಕು – ನಿಗ್ರಹ ಗ್ರಹಣೇ (ಅದುಮಿ ಭದ್ರವಾಗಿ ಹಿಡಿ)
೯. ಉರ್ಕು – ಔದ್ಧತ್ಯೇ, ಲೋಹಭೇದೇಚ (ಮೇಲಕ್ಕೆ ಹಬ್ಬು, ಒಂದು ವಿಧದ ಲೋಹ)
೧೦. ಉಲುಕು – ಶರೀರ ಸ್ಫುರಣೇ (ಅಲುಗು, ನಡುಗು)
೧೧. ಉಳ್ಕು – ದೀಪ್ತೌ ದ್ರವ್ಯೇಚ (ಪ್ರಕಾಶವಾಗು)
೧೨.  ಎಕ್ಕು – ವಿಭಜನೇ ಪ್ರಪಾಹಿಕಾ ಯಾಂಚ (ಬಿಡಿಸು, ಬೇರೆ ಮಾಡು)
೧೩. ಒಕ್ಕು – ಖಲಕರಣೇ ಶಕುನೇಚ (ಬೆಳೆದ ಬೆಳೆಯಿಂದ ಕಸಕಡ್ಡಿಗಳನ್ನು ಬೇರ್ಪಡಿಸಿ ಒಕ್ಕಣಿ ಮಾಡು)
೧೪. ಒೞ್ಕು – ಪ್ರವಾಹೇ (ಹರಿ, ಪ್ರವೇಶಿಸು)
೧೫. ಔಂಕು – ದೃಢಪೀಡನೇ
೧೬. ಕರ್ದುಕು, ಕರ್ದುಂಕು – ಲಘುಚಂಚು ಘಾತನೇ (ಕೊಕ್ಕಿನಿಂದ ಕುಕ್ಕು, ಚುಚ್ಚು)
೧೭. ಕಲಂಕು – ಆಲೋಡನೇ (ಅಲ್ಲೋಲ, ಕಲ್ಲೋಲ ಮಾಡು)
೧೮. ಕಾ – ರಕ್ಷಣೇ (ರಕ್ಷಿಸು)
೧೯. ಕೀ – ರಕ್ತಪಕ್ವೇ (ಕೀವು ತುಂಬು)
೨೦. ಕುಕ್ಕು – ವಸ್ತ ಸ್ವಲ್ಪ ಘಾತನೇ, ಪಕ್ಷಿಭೇದೇಚ (ಬಟ್ಟೆಯನ್ನು ಮೆತ್ತಗೆ ಕುಸುಕು, ಪಕ್ಷಿಯ ಒಂದು ಪ್ರಭೇದ)
೨೧. ಕುಟುಕು -ಗಾಢಪೂರಣೇ( ಒತ್ತಿತುಂಬು)
೨೨. ಕುಡುಕು – ಚಂಚು ಘಾತನೇ ಧಾನ್ಯಾದಿ ದ್ರವ್ಯೇಚ
೨೩. ಕುಡುಕು – ಈಷತ್ಪ್ರದಾನೇ
೨೪. ಕುಣುಕು – ಮುಸಲ ಕ್ರಿಯಾಯಾಂ, ಕೀಲೇಚ (ಕುಟ್ಟು, ಪುಡಿಮಾಡು)
೨೫. ಕುಱುಕು, ಕುಱುಂಕು – ಖಾದನೇ (ಕುಕ್ಕಿ ತಿನ್ನು)
೨೬. ಕುಲುಕು – ಗಾಢಪೂರಣೇ (ಒತ್ತಿತುಂಬು)
೨೭. ಕುಸುಕು, ಕುಸುಂಕು – ಘಾತನೇ (ಕುಟ್ಟು, ಗುದ್ದು)
೨೮. ಕೂಂಕು – ಉತ್ಸರ್ಪಣೇ ಉತ್ಸರ್ಪಣವೆಂದು ಗಮನಂ
೨೯. ಕೆಕ್ಕು – ಗೋಶಿಕ್ಷಾಧ್ವನೌ (ಹಸುಗಳನ್ನು ಕಾಯುವಾಗ ಕೆಕೆ ಹಾಕುವುದು, ಕೂಗು)
೩೦. ಕೆಣಕು – ಕದರ್ಥನೇ( ಕೇರಳಿಸು, ರೇಗಿಸು)
೩೧. ಕೇ – ಶಯನೇ, ವಿಧುವನೇ ಚ (ಮಲಗು, ಸಂಭೋಗಮಾಡು)
೩೨. ಕೊಣಕು – ಮೃಗಲಂಘನೇ (ನೆಗೆ, ಕುಪ್ಪಳಿಸು)
೩೩. ಕೊಂಕು – ಕೌಟಿಲ್ಯೇ
೩೪. ಕೋ – ಸೂತ್ರ ಪ್ರವೇಶೇ (ಪೋಣಿಸು)
೩೫. ಚಲುಕು, ಚೆಲುಂಕು – ಕರವಿಮೋಚನೇ (ಎರಚು, ಚೆಲ್ಲು)
೩೬. ಚಲುಕು, ಚಲುಂಕು – ಜಲೋತ್ಸರ್ಜನೇ
೩೭. ಜರ್ಕು – ನಖಘಾತನೇ (ಉಗುರಿನಿಂದ ಗೀರು, ಗಾಯ ಮಾಡು)
೩೮. ಜೆರ್ಕು – ನಖಕ್ಷತೇ
೩೯. ತಳ್ಕು – ಅನುಲೇಪನೇ ‘ತದ್ಭಾವೇಚ’
೪೦. ತಿಣುಕು – ಅಪನವಾಯೌ (ಹೂಸುಬಿಡು)
೪೧. ತುಡುಕು, ತುಡುಂಕು – ಸತ್ವರ ಗ್ರಹಣೇ
೪೨. ತುಱುಕು  – ಗಾಢ ಪ್ರವೇಶೇ (ಒತ್ತಿ ತುಂಬು, ಸೇರಿಸು)
೪೩. ತುಳುಕು, ತುಳುಂಕು – ಸೇಚನೇ (ಎರಚು, ಸಿಂಪಡಿಸು)
೪೪. ತೆಕ್ಕು – ತಿರ್ಯಕ್ಕಂಡೂ ತಿಲೇಹನೇ (ಪ್ರಾಣಿಗಳಂತೆ ಮೈನೆಕ್ಕಿತೊಳ್ಳು)
೪೫. ತೇಂಕು – ಪ್ಲವನೇ
೪೬. ತೊಡಕು, ತೊಡಂಕು – ವಿಪರ್ಯಾಸೇ (ತೊಡರಿಕೊಳ್ಳು)
೪೭. ನಕ್ಕು – ಲೇಹನೇ (ನಾಲಿಗೆಯಿಂದ ಉಜ್ಜು)
೪೮. ನಱುಕು – ವೃದ್ದಿ ಹೀನೇ
೪೯. ನಿಳ್ಕು – ಉಪರಿಸ್ಪರ್ಶನೇ (ನಿಲುಕಿಸಿಕೊಳ್ಳು)
೫೦. ನೂಂಕು – ಪ್ರೇರಣೇ (ದಬ್ಬು, ತಳ್ಳು)
೫೧. ನೆಕ್ಕು – ಅಂತರ್ಲೀನೇ
೫೨. ಪಳಂಕು – ಗಾಢ ಸ್ಪರ್ಶನೆ (ಒತ್ತಿತುಂಬು)
೫೩. ಪಳಂಕು (ಪೞುಕು) – ಪ್ರೇರಣೇ (ನೂಕು)
೫೪. ಪಿಕ್ಕು – ವಿವರಣೇ (ಬಿಡಿಸು)
೫೫. ಪಿಸುಕು, ಪಿಸುಂಕು – ಅವಜ್ಞಾತಿಶಯೇ (ತಿರಸ್ಕರಿಸು)
೫೬. ಪುಡುಕು, ಪುಡುಂಕು – ಕರಾನ್ವೇಷಣೇ (ಕೈಯಿಂದ ತಡಕಾಡು)
೫೭. ಪೊಳಕು, ಪೊಳಂಕು – ಚರ್ವಣ ಕ್ರಿಯಾಯಂ (ಅಗಿದು ತಿನ್ನು)
೫೮. ಬರ್ದುಕು, ಬರ್ದುಂಕು – ಜೀವನಾರ್ಥೇ (ಜೀವನಡೆಸುವಂತೆ ಮಾಡು)
೫೯. ಬಳ್ಕು, ಬಳುಂಕು – ನಮನೇ
೬೦. ಬಂಕು – ಕೌಟಿಲ್ಯೇ (ಬಾಗು, ಡೊಂಕಾಗು)
೬೧. ಬಿಕ್ಕು – ಉಚ್ಚಾಸೇ, ಮಾಂಸ ಭೇದೇಚ
೬೨. ಬೆದಕು, ಬೆದಂಕು – ಅನೇಷಣೇ (ಹುಡುಕು)
೬೩. ಮಿಡುಕು, ಮಿಡುಂಕು – ಚೈತನ್ಯೇ (ಚೇತರಿಸಿಕೊಳ್ಳು)
೬೪. ಮಿನುಕು – ಅಂತರ್ಗತ ಸ್ವನೇ ಕಾಂತೌಚ (ಪ್ರಕಾಶಿಸು)
೬೫. ಮಿಸುಕು – ಸ್ಪಂದನೇ (ಅದುರು)
೬೬. ಮುಕ್ಕು – ಖಾದನ ವಿಶೇಷೇ (ಗಬಗಬನೆ ತಿನ್ನು)
೬೭. ಮುಡುಕು (ಮುದುಕು) – ಶರೀರೊ ಪಗೂಹನೇ (ಆಲಿಂಗನ ಮಾಡು)
೬೮. ಮುಱುಕು – ಮುಖವಿಕಾರೇ (ಮುಖ ವಿಕಾರ ಮಾಡು)
೬೯. ಮುಲುಕು – ಪ್ರಸವನ ಕ್ರಿಯಾಯಾಂ (ಹೆರಿಗೆಯ ಸಮಯದಲ್ಲಿ ಬೇನೆಯನ್ನು ತಾಳಲಾರದೆ ತಿಣುಕುವುದು)
೭೦. ಮುೞುಕು, ಮುೞುಂಕು – ಜಲನಿಮಜ್ಜನೇ (ನೀರಿನಲ್ಲಿ ಅಡಗು)
೭೧. ಮುಸುಕು – ಆವರಣೇ (ಒಟ್ಟಾಗು)
೭೨. ಮೊರಕು (ಮೊರ್ಕು)- ದರ್ಪಘೂರ್ಣವೇ
೭೩. ಸಾಕು – ರಕ್ಷಣೇ (ಕಾಪಾಡು, ಬೆಳಸು)
೭೪. ಸಿರ್ಕು, ಸಿಲ್ಕು – ಪ್ರತಿಬಂಧೇ (ಬಂಧನಕ್ಕೊಳಗಾಗು)
೭೫. ಸುರ್ಕು – ಸಂಕೋಚೇ (ಸಂಕುಚಿತವಾಗು)
೭೬. ಸೆರ್ಕು – ವಸ್ತ್ರಾಂತರ ಪ್ರವೇಶೇ (ಒಳಸೇರಿಸು, ತುರುಕು)
೭೭. ಸೊರ್ಕು – ಉನ್ಮಾದೇ (ಅಮಲೇರು)
೭೮. ಸೋಂಕು – ಸ್ಪರ್ಶನೇ (ತಾಗು)
೭೯. ಹಲುಕು – ವೃಕ್ಷಾರೋಹಣೇ, ಶರಿರಾಂಗಭೇದೇಚ (ಮರವನ್ನು ಹತ್ತು ಶರೀರದ ಒಂದು ಭಾಗ)

. ಗಾಂತಕ್ಕೆ
೮೦. ಆಗಿ – ಸಂತ್ರಾಸಹರ್ಷ ಚರ್ವಣೇಷು (ಕುಗ್ಗು, ಹಿಂದೆಗೆ)
೮೧. ಅಡಂಗು – ಗೋಪನೇ (ಮರೆಯಾಗು)
೮೨. ಅಲುಗು – ಸಂಚಲನೇ (ಅಲ್ಲಾಡು)
೮೩. ಅೞ್ಗು – ಲಯೇ, ಕ್ಷೀಣತ್ವೇ (ಲಯವಾಗು, ಕ್ಷೀಣವಾಗು)
೮೪. ಆಗು – ಪ್ರಾದುರ್ಭಾವೇ (ಹುಟ್ಟು, ಸಂಭವಿಸು, ಉಂಟಾಗು)
೮೫. ಉಗಿ – ಆಕರ್ಷಣೇ, ನಖಕ್ಷತೇ ಚ (ಸೆಳೆ, ಉಗುರಿನಿಂದ ಘಾಯಮಾಡು)
೮೬. ಉಗು – ವಿಸರ್ಜನೆ (ಸ್ರವಿಸು, ಎರಸು)
೮೭. ಉಗ್ಗು – ವಚನ ನಿರೋಧೇ (ತೊದಲು, ಬಿಕ್ಕು)
೮೮. ಉಡುಗು – ಸಂಕೋಚನೇ (ಸಂಕೋಚ ಹೊಂದು)
೮೯. ಉಱುಗು – ವಕ್ರಭಾವೇ (ಬಾಗು)
೯೦. ಉೞ್ಗು – ಸ್ನೇಹೇ (ಒಲಿ, ಪ್ರೀತಿಸು)
೯೧. ಎಡೆಯುಡುಗು – ವಿಚ್ಛೇದೇ (ಮಧ್ಯದಲ್ಲೇ ಕತ್ತರಿಸಿ ಬೀಳು)
೯೨. ಎಱುಗು – ಪ್ರಣತೇ (ಮಣಿ, ನಮಿಸು)
೯೩. ಎಸಗು – ಉದ್ಯೋಗೇ (ವೃತ್ತಿ ಮಾಡು)
೯೪. ಒಗೆ – ಜನನೋತ್ಪತನ ವಸ್ತ್ರ ಪ್ರಕ್ಷಾಲನಯೋಃ (ಹುಟ್ಟು ಸಂಭವಿಸು)
೯೫. ಒಣಗು – ಶೋಷಣೇ (ಆರಿಹೋಗು, ಶುಷ್ಕವಾಗು)
೯೬. ಒಱಗು – ಸುಪ್ತೌ (ನಿದ್ರೆಹೋಗು)
೯೭. ಒೞ್ಗು – ಸಮ್ಮೇಳನೇ (ಒಟ್ಟುಗೂಡು, ಗುಂಪಾಗಿರು)
೯೮. ಕಡಂಗು – ಔತ್ಸುಕ್ಕೇ (ಉತ್ಸಾಹಿಸು, ಹುರಿದುಂಬಿಸು)
೯೯. ಕರಗು – ವಿಲೀನೇ (ನೀರಾಗು, ದ್ರವರೂಪವಾಗು)
೧೦೦. ಕಱಂಗು – ಕಾರ್ಷ್ಣೇ (ಸುಡು)
೧೦೧. ಕೞ್ಗು – ಕಾರ್ಷ್ಣ್ಯೆ (ಕರ್ರಗಾಗು)
೧೦೨. ಕುನುಂಗು – ಸಂಕೋಚನೇ (ಸಂಕೋಚವಾಗು)
೧೦೩. ಕುೞ್ಗು – ಆಂಕುಂಚನೇ (ಚಿಕ್ಕದಾಗು, ಕುಗ್ಗು)
೧೦೪. ಕೂಗು – ಉಚ್ಚೈರ್ಧ್ವನೌ (ಧ್ವನಿಮಾಡು, ಅರಚು)
೧೦೫. ಕೇಗು – ಮಯೂರಸ್ವನೇ (ಸಂಭ್ರಮದಿಂದ ಕೂಗು)
೧೦೬. ಕೊರಗು – ರಸವಿಹೀನೇ (ನಿಶ್ಯಕ್ತಿಯಾಗು, ಒಣಗು)
೧೦೭. ಚಿಗಿ – ಅಂಗುಲಿ ವಿಸರ್ಜನೇ (ಬೆರಳುಗಳಿಂದ ಚಿಮ್ಮಿಸು)
೧೦೮. ಚೆಲಂಗು – ಕರಮುಕ್ತೌ (ಚಲ್ಲು)
೧೦೯. ಜಿನುಗು, ಜಿನುಂಗು – ಅಸಹ್ಯಾ ವ್ಯಕ್ತಧ್ವನೌ, ವರ್ಷಭೇದೇಚ, (ಅವ್ಯಕ್ತವಾಗಿ ಧ್ವನಿಮಾಡು, ಸೊನೆ ಮಳೆಯಂತೆ ಸುರಿ)
೧೧೦. ತಗೆ – ಸ್ತಂಭನೇ (ನಿರೋಧಿಸು ಅಥವಾ ತಡೆ)
೧೧೧. ತೞ್ಗು – ಕ್ಷೀಣತ್ವೇ (ಕ್ಷೀಣಿಸು)
೧೧೨. ತಾಗು – ಸಂಘಟ್ಟನೇ (ಮುನ್ನಡೆಯದಂತೆ ತಡೆಯಲು ಮೇಲೆ ಬೀಳು)
೧೧೩. ತಾಂಗು – ಧಾರಣ ಸಂಘಟ್ಟನಯೋಃ (ಧರಿಸು, ಮೇಲೆ ಬೀಳು)
೧೧೪. ತುಱುಗು – ಸಂಛನ್ನೇ (ಮುಚ್ಚು, ಕವಿ)
೧೧೫. ತೂಗು – ತುಲನೇ (ತೂಕಮಾಡು)
೧೧೬. ತೆಗೆ – ಆಕರ್ಷಣೇ (ಸೆಳೆದುಕೋ)
೧೧೭. ತೇಗು – ಉದಾನವಾಯೌ, ವೃಕ್ಷ ಭೇದೇಚ (ಉದರದಿಂದ ಬಾಯಿ ಮೂಲಕ ವಾಯುಬಿಡು, ತೇಗು ಎಂಬದೊಂದು ವೃಕ್ಷಿ)
೧೧೮. ತೊಡಗು – ಪ್ರಾರಂಭೇ (ಪ್ರಾರಂಭಿಸು)
೧೧೯. ತೊಲಗು – ವಿವಿಕ್ತೇ (ಸ್ಥಳವನ್ನು ಬಿಡು, ಅಗಲು)
೧೨೦. ತೊಳಗು – ಕಾಂತೌ (ಕಾಂತಿಬೀರು)
೧೨೧. ನಗು – ಹಸನೇ (ಹಾಸ್ಯಮಾಡು)
೧೨೨. ನಡುಗು – ಕಂಪನೇ (ಕಂಪಿಸು)
೧೨೩. ನೀಗು – ತ್ಯಜನೇ (ತ್ಯಜಿಸು)
೧೨೪. ನುೞ್ಗು – ಸಂಚೂರ್ಣೇ (ಪುಡಿಮಾಡು)
೧೨೫. ನುಂಗು – ಗಿಲನೇ (ಕಬಳಿಸು)
೧೨೬. ನೆಗೆ – ಉತ್ಪ್ಲವನೇ (ಹಾರು, ಜಿಗಿ)
೧೨೭. ನೆರ್ಗು – ಅಂತರ್ಲೀನೇ (ಕರಗು)
೧೨೮. ಪಿಂಗು – ಅಪಸರಣೇ (ಹಿಂದಿರುಗು)
೧೨೯. ಪಿಡುಗು – ಸಂಭಿನ್ನೇ (ಸೀಳು)
೧೩೦. ಪುಗು – ಪ್ರವೇಶೇ (ಪ್ರವೇಶಿಸು)
೧೩೧. ಪುೞ್ಗು – ದಹನ ಕ್ರಿಯಾಯಾಂ (ಉರಿಸು)
೧೩೨. ಪೊಂಗು – ಸ್ಫುಟನೇ (ಹೊರಹೊಮ್ಮು)
೧೩೩. ಪೋಗು – ಗಮನೇ (ಗಮಿಸು)
೧೩೪. ಬಗಿ – ವಿಶ್ಲೇಷೇ, ಬಂಧನೇಚ (ಬಂಧಿಸು, ಅಗಲಿಸು)
೧೩೫. ಬಗೆ – ಪರಿಭಾವೇ, ಚಿತ್ತೇಚ (ಯೋಚಿಸು)
೧೩೬. ಬಾಗು – ನಮ್ರತ್ವೇ (ವಿನಯದಿಂದ ಬಗ್ಗು)
೧೩೭. ಬಿಗಿ – ಬಂಧನೇ ಹಯಾದಿ ಪರಿಕರೇ ಚ (ಬಂಧಿಸು, ಕುದುರೆಗೆ ಜೀನಿನ್ನಂತೆ ಕಟ್ಟು)
೧೩೮. ಬೀಗು – ಹರ್ಷಭಾವೇ ಸ್ಥೌಲ್ಯೇಚ (ಹರ್ಷಿಸು, ಉಬ್ಬು)
೧೩೯. ಬೆಳಗು – ಕಾಂತೌ (ಕಾಂತಿಬೀರು)
೧೪೦. ಮಡಗು – ಗೋಪನೇ (ಬಚ್ಚಿಡು)
೧೪೧. ಮಱುಗು  – ಸಂತಾಪೇ (ತಾಪಗೊಳ್ಳು, ಕೊರಗು)
೧೪೨. ಮಲಗು, ಮಲಂಗು – ಉಪಧಾನಾವಲಂಬೇ, ಉಪಧಾನೇಚ
೧೪೩. ಮಸಗು – ವಿಜೃಂಭಣೇ (ಹೆಚಾಗು, ಹರಡು, ಉತ್ಸಾಹಗೊಳ್ಳು)
೧೪೪. ಮಿಗು – ಅತಿಕ್ರಮಣೇ (ಮೀರು, ಉಳಿ)
೧೪೫. ಮಿಡುಗು – ಸಂಖಿನ್ನೇ (ಪರಿತಪಿಸು)
೧೪೬. ಮಿಱುಗು  – ಚಕಚಕಾಯಮಾನೇ (ಜಗಜಗಿಸು)
೧೪೭. ಮಿಸುಗು  – ಕಾಂತೌ (ಪ್ರಕಾಶಿಸು)
೧೪೮. ಮುಗಿ – ಪುಷ್ಪ ಸಂಕೋಚನೇ (ಹೂವಿನಂತೆ ಮುದುಡಿಕೋ)
೧೪೯. ಮುಗ್ಗು – ಜೀರ್ಣಾವಗಂಧೇ, ಚ (ಹಳೆಯಧಾನ್ಯಗಳಂತೆ ದುರ್ವಾಸನೆ ಬೀರು)
೧೫೦. ಮುೞುಗು – ನಿಮಗ್ನೇ (ನೀರಿನಲ್ಲಿ ಮುಳುಗು)
೧೫೧. ಮುೞ್ಗು – ಪತನೇ (ಬೀಳು)
೧೫೨. ಮೊಗೆ – ಜಲಾಕರ್ಷಣೆ, ಘಟಭೇದೆಚ (ನೆಲವನ್ನು ಅಗಿಯುವುದರ ಮೂಲಕ ನೀರನ್ನು ತೆಗೆ)
೧೫೩. ಮೊೞಗು – ವಾದನ ಕ್ರಿಯಾಯಾಂ ಸ್ತನಿತೇ ಚ (ವಾದ್ಯದಂತೆ ನಾದ ಮಾಡು, ಮೊಡದಂತೆ ಗುಡುಗು, ಮೊೞಗು ಎಂಬೊಂದು ವೃಕ್ಷ)
೧೫೪. ಮೊೞ್ಗು – ನಮನೇ (ಬಾಗು, ನಮಿಸು)
೧೫೫. ಸಿದುಗು – ಹಸ್ತಾನ್ವೇಷಣೇ (ಕೈಯಿಂದ ಹುಡುಕು)
೧೫೬. ಸುಗಿ – ಭಯೇ (ಭಯಪಡು)
೧೫೭. ಹರಗು – ಸಸ್ಯಕ್ರಿಯಾಯಾಂ (ಕೃಷಿಮಾಡು)
೧೫೮. ಹುದುಗು – ಗೋಪನೇ (ಮರೆಯಾಗು)
೧೫೯. ಹೊಗೆ – ಧೂಮನಿರೋಧ ಕ್ರಿಯಾಯಾಂ, ಧೂಮೇಚ (ಧೂಪದ ಹೊಗೆಯನ್ನು ಚದುರಿಹೋಗದಂತೆ ತಡೆದು ನಿಲ್ಲಿಸು)

. ಚಾಂತಕ್ಕೆ
೧೬೦. ಅಲರ್ಚು – ವಿಕಸನೇ (ಅರಳಿಸು)
೧೬೧. ಅಗುೞ್ಚು – ಜಲಾಶಯಮಗ್ನೇ (ಕೆರೆ ಮುಂತಾದವನ್ನು ತೋಡಿಸು)
೧೬೨. ಅಮರ್ಚು – ಸಂಘಟೀಕರಣೇ (ಒಂದರೊಡನೊಂದರಂತೆ ಕೂಡಿಸು)
೧೬೩. ಅಱುಚು – ಉಚ್ಚೈರ್ಧ್ವನೌ (ಕಿರುಚು)
೧೬೪. ಅೞಲ್ಚು – ದುಃಖೋತ್ಪಾದನೇ (ದುಃಖವನ್ನುಂಟುಮಾಡು)
೧೬೫. ಉರ್ಚು – ಆಕರ್ಷಣೇ, ಮಲಭೇದನೇಚ (ಸೆಳೆ, ಮಲವಿಸರ್ಜನೆ ಮಾಡು)
೧೬೬. ಉರ್ದಿಚು – ಅಧಃಪತನೇ (ಕೆಳಗೆ ಬೀಳಿಸು)
೧೬೭. ಉರುಳ್ಚು – ನಿಮ್ನಗಮನಕರಣೇ (ಉರುಳಿಸು)
೧೬೮. ಎಚ್ಚು – ಅಂಜನಕ್ರಿಯಾಯಾಂ (ಸವರು, ಸರಿಪಡಿಸು)
೧೬೯. ಎಲರ್ಚು – ಚೇತನಕರಣೇ (ಗಾಳಿಬೀಸಿ ಗೋಳಿಸು)
೧೭೦. ಎೞಲ್ಚು – ಆಲಂಬನೇ (ನೇತಾಡು, ತೂಗಾಡು)
೧೭೧. ಒಡರ್ಚು – ಉದ್ಯಮೇ (ಉದ್ಯಮಿಸು, ಕೆಲಸಮಾಡು)
೧೭೨. ಕಡೆಗಣ್ಣು – ಅವಜ್ಞಾಯಾಂ (ಕಡೆಗಣಿಸು, ಉಪೇಕ್ಷೆಯಿಂದ ಮೀರಿನಡೆ)
೧೭೩. ಕರ್ಚು – ಖಾದನೇ, ಪ್ರಕ್ಷಾಲವೇ ತಂಡುಲ ಪ್ರಕ್ಷಾಲಜಲೇಚ (ಕುಟ್ಟಿತಿನ್ನು, ತೊಳಿ)
೧೭೪. ಕವಿಚು – ವಿಪರೀತ ಪತನೇ (ಕವಿದುಬೀಳು)
೧೭೫. ಕೞಳ್ಚು – ಪೃಥಕ್ಕರಣೇ (ಬೇರ್ಪಡಿಸು)
೧೭೬. ಕಿಮುೞ್ಚು – ಹಸ್ತಮರ್ದನೇ (ಹಿಸುಕು, ಹಿಂಡು)
೧೭೭. ಕುರುಳ್ಚು – ಶಸ್ತ್ರ ಸಂಚಾಲನೇ (ಶಸ್ತ್ರವನ್ನು ಝಳಪಿಸು)
೧೭೮. ಕೆಚ್ಚು – ತಂತುವಾಯು ಕ್ರಿಯಾಯಾಂ, ತರುಸಾರೇಚ (ಮಗ್ಗದಲ್ಲಿ ಹರಿದ ದಾರನ್ನು ಕೂಡಿಸು, ಮರದ ಸೇಗು)
೧೭೯. ಕೆರಳ್ಚು – ಆಸ್ಪೋಟನೇ (ಉದ್ರೇಕಿಸು)
೧೮೦. ಕೊರಲ್ಚು – ಆಕ್ರೋಶಧ್ವನೌ (ಆಕ್ರೋಶದಿಂದ ಕೂಗಾಡು)
೧೮೧. ಚರ್ಚು – ಶಿಶುಸಂಧಾರಣೇ (ಮಗುವಿನಂತೆ ಎತ್ತಿಕೋ)
೧೮೨. ಚುರ್ಚು – ದಾಹೇ (ಸುಡು, ದಹಿಸು)
೧೮೩. ಜಱುಚು – ಬಹುಭಾಷಣೇ (ಹರಟು)
೧೮೪. ತಗುಳ್ಚು – ಉದ್ಯೋಗೇ ಅಗ್ನಿ ಬಾಧನೇ ಚ
೧೮೫. ತಳರ್ಚು – ಸ್ಥಾನಾಪಗಮನೇ (ಸ್ಥಾನಾಂತರಗೊಳಿಸು, ಓಡಿಸು)
೧೮೬. ತೀರ್ಚು – ನಿಪ್ಪತ್ತೌ
೧೮೭. ತೆರಳ್ಚು – ಚಲನೇ, ಚಯನೇಚ (ತೆರಳುವಂತೆ ಮಾಡು, ಕಳಿಸು)
೧೮೮. ತೊಡಚು – ಬಂಧನೇ (ಬಂಧಿಸು, )
೧೮೯. ನಚ್ಚು – ವಿಶ್ವಾಸೇ (ನಂಬು)
೧೯೦. ನಾಣ್ಚು – ಲಜಯಾಂ (ನಾಚಿಕೆಪಡು)
೧೯೧. ನಿಮಿರ್ಚು – ಪ್ರಸಾರಣೇ (ಪ್ರಸಾರಣವೆಂದು ನಿಗುರಿಸುವುದು, ಉದ್ದ ಮಾಡು)
೧೯೨. ನುಗುಳ್ಚು – ಸೂಕ್ಷ್ಮದ್ವಾರ ಪ್ರವೇಶೇ (ತೂರಿಸು, ಒಳಗೆ ಹಾಕು)
೧೯೩. ನುಣ್ಚು – ಅಪಸರಣೇ (ಜರು)
೧೯೪. ನೆಗೞ್ಚು – ವಿಖ್ಯಾತೌ ಉದ್ಯೋಗೇಚೇ (ಪ್ರಸಿದ್ದಿಗೆ ತ್ತಾ ಉದ್ಯೋಗಕ್ಕೆ ಹಚ್ಚು)
೧೯೫. ಪರ್ಚು – ಅವ್ಯಕ್ತ ಧ್ವನೌ (ಪಿಸು ಗುಟ್ಟು)
೧೯೬. ಪಳಂಚು – ಸಂಘಟ್ಟನೇ (ಒಂದಕ್ಕೊಂದರಂತೆ ಬಲವಾಗಿ ತಾಗು)
೧೯೭. ಪಿಂಚು – ಪಶ್ಚಾದರ್ಥೇ (ಹಿಂದೆ ಬೀಳು)
೧೯೮. ಪುಯಲ್ಚು – ಆಕ್ರೋಶಧನೌ (ಆಕ್ರೋಶದಿಂದ ಮೊರೆಯಿಡುವಂತೆ ಕೂಗಾಡು)
೧೯೯. ಪೆಟ್ಟುವೆರ್ಚು – ದರ್ಪೆ (ಗರ್ವಿಸು)
೨೦೦. ಪೆರ್ಚು – ವಿಸ್ತಾರೇ (ವಿಸ್ತಾರವಾಗು)
೨೦೧. ಪೊಣರ್ಚು – ಸಂಯುಗೇ (ಸೆಣಸು)
೨೦೨. ಪೊರಳ್ಚು – ಲುಠನೇ (ಹೊರಳಿಸು)
೨೦೩. ಬೞಲ್ಚು – ನಿಶ್ಚೇಷ್ಟಾಯಾಂ (ಮಿಸುಗಾಡದಂತೆ ಮಾಡು)
೨೦೪. ಬೞಿಲ್ಚು  – ಅವಸ್ರಂಸನೇ (ಕೆಳಕ್ಕೆ ಬಾರಿಸು, ಕೆಳಕ್ಕೆ ನೂಕು)
೨೦೫. ಬಾರ್ಚು – ಪುಂಜೀಕರಣೇ (ಎಳೆದುಕೊಳ್ಳು, ಸೆಳೆ)
೨೦೬. ಬಿರ್ಚು – ವಿಭಜನೇ (ಬಿಡಿಸು)
೨೦೭. ಬಿದಿರ್ಚು – ಕರ ವಿಮೋಚನೇ (ಉದುರಿಸು)
೨೦೮. ಬೆರ್ಚು – ಸಂತ್ರಾಸೇ, ತೃಣ ಪುರುಷೇಚ (ಬೆಚ್ಚಿಬೀಳು)
೨೦೯. ಬೆಮರ್ಚು – ಸ್ವೇದಕರಣೇ (ಬೆವರುವಂತೆ ಮಾಡು)
೨೧೦. ಮುಗುೞ್ಚು – ಪರಾಙ್ಮಖೀಕರಣೇ (ಹಿಮ್ಮೆಟ್ಟಿಸು)
೨೧೧. ಮಚ್ಚ – ಅತಿಪರಿಚಯೇ (ಸಲಿಗೆತೋರು ಅಥವಾ ಆತ್ಮೀಯವಾಗಿ ವರ್ತಿಸು)
೨೧೨. ಮರಲ್ಚು – ಪರಙುಖೇ (ಹಿಮ್ಮೆಟ್ಟಿಸು)
೨೧೩. ಮಿಂಚು – ದೀಪ್ತೌ, ವಿದ್ಯುತಿಚ (ಪ್ರಕಾಶಿಸು, ಮಿಂಚು)
೨೧೪. ಮಗುಳ್ಚು – ಸಂಕೋಚಕರಣೇ (ಕುಗ್ಗಿಸು)
೨೧೫. ಮುಚ್ಚು – ಆಚ್ಛಾದನೇ (ಹೊದಿಸು)
೨೧೬. ಮುಂಚು – ಅಗ್ರಗಮನೇ (ಮುಂದುವರಿ ಅಥವಾ ಮುಂಚಿತವಾಗಿ ಹೋಗು)
೨೧೭. ಮೆಚ್ಚು – ಅಭ್ಯುಪಗಮೇ (ಒಪ್ಪು, ಅನುಗ್ರಹಿಸು)
೨೧೮. ಮೋಚು – ವೈಧವ್ಯೇ (ವಿಧವೆಯಾಗು)
೨೧೯. ಸಡಿಲ್ಚು – ಶೈಥಿಲ್ಯೇ (ಸಡಿಲಿಸು)
೨೨೦. ಸಾರ್ಚು – ಸಮೀಪಾನಯನೇ (ಚಾಚು ಅಥವಾ ಸಮೀಪಕ್ಕೆ ತಾ)
೨೨೧. ಸುರುಳ್ಚು  – ಸಂಕೋಚನೇ (ಸಂಕೋಚಪಡು)
೨೨೨. ಸೋರ್ಚು – ಗಲನೇ (ಸೋರಿಹೋಗುವಂತೆ ಮಾಡು, ಸೋರಿಸು)
೨೨೩. ಹರಳ್ಚು – ನೇತ್ರನಿರೋಧ ಕರಣೇ (ಕಣ್ಣಿಗೆ ಅಡ್ಡಕಟ್ಟು)
೨೨೪. ಹೊಂಚು – ಸಂಕೇತೋದ್ಯೋಗೇ (ಕೊಂಡಾಡು ಅಥವಾ ವಿವರವಾಗಿ ಹೇಳು)

. ಜಂತಕ್ಕೆ
೨೨೫. ಅಂಜು – ಭಯೇ (ಭಯಪಡು)
೨೨೬. ನಂಜು – ಈಷಲ್ಲೇಹನೇ ವಿಷೇಚ (ಊಟದೊಂದಿಗೆ ರುಚಿಗಾಗಿ ಉಪ್ಪಿನಕಾಯಿ ಮುಂತಾದವನ್ನು ಸ್ವಲ್ಪ ತಿನ್ನು)
೨೨೭. ಪಿಂಜು – ಪೃಥಕ್ಕರಣೇ (ಅರಳೆಯಂತೆ ಹಿಂಜು)
೨೨೮. ಬೆರಂಜು – ಚಯನೇ
೨೨೯. ಮಾಂಜು – ಅಪಲಾಪೇ

. ಟಾಂತಕ್ಕೆ
೨೩೦. ಅಟ್ಟು – ಅನುಧಾವನೇ (ಅಟ್ಟಿಕೊಂಡುಹೋಗು)
೨೩೧. ಅಱಿಯಟ್ಟು – ಅನುಧಾವನೇ (ಅಟ್ಟಿಕೊಂಡು ಹೋಗು)
೨೩೨. ಈಂಟು – ಪಾನೇ (ಕುಡಿ, ಹೀರು)
೨೩೩. ಉರುಟು – ಅತಿಕ್ರಮಣೇ (ಅತಿಕ್ರಮಿಸು)
೨೩೪. ಎಟ್ಟು – ಊರ್ಧ್ವಗತವಸ್ತು ಗ್ರಹಣೇ (ಎತ್ತರದಲ್ಲಿರುವ ಪದಾರ್ಥವು ನಿಲುಕು)
೨೩೫. ಎೞ್ಬಟ್ಟು – ಅನುಧಾವನೇ (ಅಟ್ಟಿಕೊಂಡು ಹೋಗು)
೨೩೬. ಒಟ್ಟು – ಏಕತ್ರಕ್ರಿಯಾಯಾಂ (ಒಂದಾಗುವಂತೆ ಕೂಡಿಸು)
೨೩೭. ಕಟ್ಟು – ಬಂಧನೇ, ಪಕ್ವಧಾನ್ಯರಸೇ ಚ (ಬಂಧಿಸು, ಬೆಂದದಾನ್ಯದ ರಸ)
೨೩೮. ಕಿಟ್ಟು – ಸ್ಪರ್ಶನೇ (ಮುಟ್ಟು ಅಥವಾ ಸ್ಪರ್ಶಿಸು)
೨೩೯. ಕಿಡುಕುಟ್ಟು –  ಸಂಘಟ್ಟನೇ (ಒಂದಾಗುವಂತೆ ಸಂಘಟಿಸು ಹಾಳಾಗುವಂತೆ ರಕ್ಷಿಸು)
೨೪೦. ಕುಟ್ಟು – ತಾಡನೇ (ಚಚ್ಚು ಅಥವಾ ಥಳಿಸು)
೨೪೧. ಕೂಂಟು – ವಿಕೃತಗತೌ (ವಿಕೃತವಾಗಿ ನಡೆ)
೨೪೨. ಕೆರಂಟು – ನಖಖನನೇ (ಉಗುರಿನಿಂದ ಕೆರೆ)
೨೪೩. ಗುಡಿಕಟ್ಟು – ವರ್ಣಕರ ರೇಖಾಯಾಂ (ಕುಂಡಲಾಕಾರದಲ್ಲಿ ಬಣ್ಣದಿಂದ ರೇಖೆಯನ್ನು ಬಿಡಿಸು, ರಂಗೋಲೆ ಬಿಡು)
೨೪೪. ತಟ್ಟು – ತಾಡನೇ, ಕೃಪಣಕಾಚ್ಚಾದನೇ ಚ (ಹೊಡಿ)
೨೪೫. ತಾಟು – ಸಂಘಟ್ಟನೇ (ಹೊಡೆ)
೨೪೬. ತಿಟ್ಟು – ಭರ್ತ್ಸನೇ, ಉನ್ನತ ಭೂಮ ಚ (ಬೆದರಿಸು ಬೈ,)
೨೪೭. ತೆರಟು – ನಿವಸನೋದ್ವಹನೇ (ಬಟ್ಟೆಯನ್ನು ಮುಯ್ ಮಾಡು)
೨೪೮. ತೆಂಟು – ಶೂರ್ಪಕರಣೇ (ಮೊರದಿಂದ ಕೇರು)
೨೪೯. ದಾಂಟು – ಲಂಘನೇ (ಲಂಘಿಸು)
೨೫೦. ದೂಂಟು – ಏಕಪಾದಗತೌ (ಒಂದು ಕಾಲಿಂದ ನಡೆ)
೨೫೧. ನಾಂಟು – ಅಂತರ್ಭೇದೇ (ಚೂರಿ, ಒಳಗೆ ಚುಚ್ಚಿಕೋ)
೨೫೨. ಪುಟ್ಟು – ಉತ್ಪತ್ತೌ, ದಾರುಹಸ್ತೇ ಚ (ಜನಿಸು, ಮರದಸೌಟು)
೨೫೩. ಬಗಟು – ಊರು ವಿಶ್ಲೇಷೇ (ತೊಡೆಗಳನ್ನು ಆಗಲಿಸು)
೨೫೪. ಬೆಟ್ಟು – ಗಾಢ ಪ್ರವೇಶೇ, ಪರ್ವತೇಚ (ಬಲವಾಗಿ ಒಳಗೆ ನೂಕು)
೨೫೫. ಬೆರಂಟು – ಅಂಗುಲಿ ಕ್ರಿಯಾಯಾಂ (ಬೆರಳಿನಿಂದ ಕೆದಕು)
೨೫೬. ಮೀಂಟು – ಉತ್ಪಾಟನೇ, ಉತ್ಕರ್ಷ ದ್ರವ್ಯೇಚ (ಎಬ್ಬು, ಉತ್ತೇಜಕ ದ್ರವ್ಯ)
೨೫೭. ಮುಟ್ಟು – ಸ್ಪರ್ಶವೇ, ಉಪಕರಣೇ ಚ
೨೫೮. ಮುರುಂಟು – ದಹನಕರಣೇ (ಮುರುಟ್ಟುವಂತೆ ಸುಡು)
೨೫೯. ಮೆಟ್ಟು – ಪದವಿನ್ಯಾಸೇ, ಪಾದ ತ್ರಾಣೇಚ (ಹೆಜ್ಜೆಯಿಡು, ಪಾದರಕ್ಷೆ)
೨೬೦. ಸಮಕಟ್ಟು – ವಿಧಾನೇ (ಸಮವಾಗಿ ಜೋಡಿಸು)
೨೬೧. ಸೀಂಟು – ಗುದಸಮ್ಮಾರ್ಜನೇ (ಗುದುವನ್ನು ತೊಳೆ)
೨೬೨. ಸುಟ್ಟು – ಅಂಗುಲಿ ದರ್ಶನೇ (ಬೆರಳುಮಾಡಿ ತೋರಿಸು)
೨೬೩. ಸುರುಂಟು – ಸಂಕೋಚನೇ (ಸಂಕುಚಿತನಾಗು)