೧೯. (iv) ಅರ್ಥ ಭಿನ್ನ ಕೃರ್ತಕ ಪ್ರಯೋಗೇ
೮೦೯. ಅಗುೞಸು – ಖನನೇ (ತೋಡಿಸು, ಅಗೆಯಿಸು)
೮೧೦. ಅೞಿಯಿಸು – ಲಯೇ (ಲಯವಾಗು)
೮೧೧. ಆಡಿಸು – ನರ್ತನವಿಧೌ (ನರ್ತನ ಮಾಡು)
೮೧೨. ಎತ್ತಿಸು – ಉದ್ಧರಣೇ (ಎತ್ತುವಂತೆ ಮಾಡಿಸು)
೮೧೩. ಒಟ್ಟಿಸು – ಪುಂಜೀಕರಣೇ (ಗುಡ್ಡೆಮಾಡಿಸು)
೮೧೪. ಒರೆಯಿಸು – ಕರ್ಷಣೇ (ಉಜ್ಜಿಸು)
೮೧೫. ಓದಿಸು – ಶಾಸ್ತ್ರಶಿಕ್ಷಾಯಾಂ (ಶಾಸ್ತ್ರಾಧ್ಯಯ ಮಾಡಿಸು)
೮೧೬. ಕಟ್ಟಿಸು – ಬಂಧನೇ (ಬಂಧನ ಮಾಡಿಸು)
೮೧೭. ಕಡಿಯಿಸು – ಖಂಡನೇ (ಕಡಿಸು)
೮೧೮. ತೆಗೞಿಸು – ನಿಂದಾಯಾಂ (ಟೀಕಿಸು)
೮೧೯. ತೊಡೆಯಿಸು – ಲೇಪ್ಯಕರಣೇ (ಬಳಿಸು)
೮೨೦. ನೋಡಿಸು – ಲೋಚನಕ್ರಿಯಾಯಾಂ (ತೋರಿಸು)
೮೨೧. ಪದೆಯಿಸು – ಈಪ್ಸಾಯಾಂ (ಆಶೆಪಡಿಸು)
೮೨೨. ಪಾಡಿಸು – ಗಾನೇ (ಹಾಡಿಸು)
೮೨೩. ಪೆರ್ಚಿಸು – ವರ್ಧನೇ (ಹೆಚ್ಚಿಸು)
೮೨೪. ಪೊದೆಯಿಸು – ಆಚ್ಛಾದನೇ (ಹೊದಿಸು)
೮೨೫. ಬರೆಯಿಸು – ಲೇಖನೇ (ಲಿಖಿತ ಮಾಡಿಸು)
೮೨೬. ಬೆರ್ಚಿಸು – ಭಯೇ (ಭಯಪಡಿಸು)
೮೨೭. ಮಾಡಿಸು  – ನಿರ್ಮಾಪಣೇ (ನಿರ್ಮಾಣ ಮಾಡಿಸು)
೮೨೮. ಮುತ್ತಿಸು – ಸಂವೇಷ್ಟನೇ (ಕೋಟೆಯನ್ನು ಸುತ್ತು ಗಟ್ಟಿಸು)
೮೨೯. ಮುಳಿಯಿಸು – ಕೋಪೇ (ಕೋಪಗೊಳಿಸು)

೨೦. ಱಾಂತಕ್ಕೆ
೮೩೦. ಅಱಿ – ಜ್ಞಾನೇ (ತಿಳಿ, ಅಭ್ಯಾಸಮಾಡು)
೮೩೧. ಅಱಿ – ಸ್ವರೂಪಭಾವೇ, ಶಿಲಾಯಾಂ ಚ (ನುಣ್ಣಗೆ ಮಾಡು, ಬತ್ತು, ಅಪ್ಪಳಿಸು)
೮೩೨. ಅಳಱು – ಭಯೇ (ಭಯಪಡು)
೮೩೩. ಅೞ್ಕಱು – ಪ್ರೇಮ್ಣಿ (ಪ್ರೀತಿ ತೋರು)
೮೩೪. ಅಳ್ಕುಱು – ಭಯೇ (ಭಯಪಡು)
೮೩೫. ಅಳ್ಳಿಱಿ – ಸ್ಪಂದನೇ (ಸ್ಪಂದಿಸು)
೮೩೬. ಅಱು – ನಿರ್ದ್ರವೇ, ಸವರ್ಥತ್ವೇ ಸಂಖ್ಯಾಯಾಂಚ
೮೩೭. ಆಸಱು – ಆಲಸ್ಯೇ (ಆಲಸ್ಯಹೊಂದು)
೮೩೮. ಇಱ – ಘಾತನೇ (ಘರ್ಷಣೆಯಾಗು ಅಥವಾ ಹಾಯು)
೮೩೯. ಈಡಿಱಿ – ಶೃಂಗ ಸಂಕರ್ಷಣೇ
೮೪೦. ಉಱಿ – ಸಮಗ್ರತ್ವೇ (ಸಮಗ್ರವಾಗು, ಆಧಾರವಾಗು)
೮೪೧. ಊಱು – ಸತ್ವೇ (ಭದ್ರವಾಗಿ ನಿಲ್ಲಿಸು)
೮೪೨. ಎಡಱು – ವಕ್ರಭಾವೇ, ದಾರಿದ್ರ್ಯೇ
೮೪೩. ಎಡೆಗಿಱಿ  – ಸಂಛನ್ನೇ (ಆಕ್ರಮಿಸು, ಆವರಿಸು)
೮೪೪. ಎಱೆ – ದ್ರವ್ಯದಾನೇ, ಪತಿತ್ವೇ ಚ (ಅಭ್ಯಂಜನಸ್ನಾನ ಮಾಡು)
೮೪೫. ಎೞ್ಚಱು – ಜಗರಣೇ, ನಿದ್ರಾಭಾವೇ (ಜಗರುಕತೆಯಿಂದ ಇರು, ನಿದ್ರೆಯಿಂದ ಏಳು)
೮೪೬. ಏಱು – ಆರೋಹಣೇ, ಸಮಗ್ರತ್ವೇಕ್ಷತೇ ಚ (ಮೇಲೆ ಹೊರಿಸು, ತಪ್ಪು ಹೊರಿಸುವುದು)
೮೪೭. ಒದಱು – ಆಸ್ಫೋಟನೇ (ಘರ್ಷಣೆಮಾಡು, ಕೂಗು)
೮೪೮. ಒಱಿ – ಸ್ರವಣೇ, ಶಸ್ತ್ರಕೋಶೇಚ (ಹೇಳು, ಶಸ್ತ್ರ ಧರಿಸು)
೮೪೯. ಒಳಱು – ರಾವೇ (ಅರಚು)
೮೫೦. ಕಚ್ಚಿಱು – ಯುಗಲಸಂಧಾನೇ (ತೊಳೆ)
೮೫೧. ಕಯ್ಮಱ – ವಿಸ್ಮಯೇ (ಆಶ್ಚರ್ಯವಾಗು)
೮೫೨. ಕಱಿ – ದೋಹನೇ, ಕಲಂಕೇ ಚ (ಸೂಸು, ಸುರಿ, ಎರಚು)
೮೫೩. ಕಾಱು – ವಮನೇ (ತಿನ್ನು)
೮೫೪. ಕಿಱು – ವ್ಯವಧಾನೇ (ಮನವಾಗು)
೮೫೫. ಕಿಳಿಱು – ಹಯಘೋಷೇ (ಕುದುರೆಯಂತೆ ಕೆನೆ, ಹೇಕರಿಸು)
೮೫೬. ಕೀಱು – ಅಗ್ರಹ ಭಯ ಧ್ವನಿ ಪ್ರಮಾರ್ಜುನೇಷು (ಭಯದಿಂದ ಅರಚು)
೮೫೭. ಕೆದಱು – ವಿಕೀರ್ಣೇ (ಹರಡು, ವಿಸ್ತರಿಸು)
೮೫೮. ಕೇಱು – ಶೂರ್ಪಕರಣೇ (ಕಾಳನ್ನು ಹಸನು ಮಾಡು)
೮೫೯. ಕೊಱೆ – ಖಂಡನೇ (ಕೊಯ್ಯ, ತಿರುಗು)
೮೬೦. ಗಜಱು (ಗದಱು) – ಗರ್ಜನೇ (ಗರ್ಜಿಸು, ಹೆದರಿಸು)
೮೬೧. ಗಿಱು – ಪರಿಭಾವನೇ (ಪರಿಭಾವಿಸು)
೮೬೨. ಚೀಱು – ಭಯಧ್ವನೌ (ಭಯದಿಂದ ಅರಚು)
೮೬೩. ಜಱ – ಅವಗ್ರಹೇ ಆಕ್ರಮಣಾ ಲೇಪೇ (ನಿಂದಿಸು, ತಿರಸ್ಕರಿಸು)
೮೬೪. ಜಱು – ಅಪಸರಣೇ (ನುಣುಚಿಕೊಳ್ಳು, ನಡತೆ ತಪ್ಪು)
೮೬೫. ತಱಿ – ಛೇದೇ, ಖದಿರೇ ಚ (ಕತ್ತರಿಸು, ಉಜ್ಜು)
೮೬೬. ತಾಱು – ಶೋಷಣೇ, ಶುಕನೇ ಚ (ಶೋಷಣೆಯಾಗು, ಕೃಶವಾಗು)
೮೬೭. ತಿಱು – ದ್ರವ್ಯ ವಿನಿಮಯೇ (ವಿನಿಮಯ ಮಾಡು)
೮೬೮. ತೀಱ್ (ಱು) – ಕಬಳನೇ (ಕಬಳಿಸು)
೮೬೯. ತೂಱು – ಉದ್ದೂತೌ (ದೂರಹೋಗು, ಗಾಳಿಯಲ್ಲಿ ಧಾನ್ಯ ತೂರು)
೮೭೦. ತೆಗೆನೆಱೆ – ಆಕರ್ಣಾಂತೇ (ಬಾಣವನ್ನು ಕಿವಿಯ ಅಂಚಿನವರೆಗೆ ಎಳೆ)
೮೭೧. ತೆಪ್ಪಱು – ಚೇತನಕರಣೇ (ಕಾಯಿಲೆಯಿಂದ ಚೇತರಿಸಿಕೊಳ್ಳು)
೮೭೨. ತೆಱೆ – ಅನಾವರಣೋದ್ಘಾಟನ ಯೋಃ ಕರೇ ಚ (ಮರೆಯಿಲ್ಲದಂತೆ ಮಾಡು)
೮೭೩. ತೊಱೆ – ವಿಸರ್ಜನೇ ನದ್ಯಾಂಚ (ವಿಸರ್ಜಿಸು, ತಿರಸ್ಕರಿಸು)
೮೭೪. ತೋಱು – ದರ್ಶನೇ (ನೋಡು, ದರ್ಶನಮಾಡು)
೮೭೫. ದೂಱು – ಪೈಶುನ್ಯೇ (ನಿಂದಿಸು, ಪಿಸು ನುಡಿ)
೮೭೬. ನಾಱು – ಗಂಧೇ, ಆರ್ದ್ರೀಕರಣೇ ಚ (ಸುವಾಸನೆ ಬರು)
೮೭೭. ನುಱಿ – ಸಂಚೂರ್ಣೇ (ಪುಡಿ ಮಾಡು)
೮೭೮. ನೆಱೆ – ಸಮಗ್ರತ್ವೇ (ಕೂಡು, ಸಮಗ್ರವಾಗು)
೮೭೯. ಪಱಿ – ವಿಚ್ಛಿತ್ತೌ, ಭೂಷಣೇಚ (ಚಲ್ಲಾಪಿಲ್ಲಿಯಾಗು)
೮೮೦. ಪಾಱು – ಉತ್ಪ್ಲವನೇ ವಹಿತ್ರ ಭೇದೇಚ (ಹಾರು, ಓಡು, ಒಂದು ಬಗೆಯ ದೋಣಿ)
೮೮೧. ಪಾಂಗಱಿ – ಪ್ರಕಾರಗಮನೇ (ಸರಿಯಾದ ಕ್ರಮವನ್ನು ತಿಳಿ)
೮೮೨. ಪೀಱು – ವಿಕೀರ್ಣೇ (ಹರಡು)
೮೮೩. ಪೆಱು – ಉಪಲಬ್ಧೌ, ಪ್ರಸೂತೇ ಚ (ಹೊಂದು, ಹೆರು)
೮೮೪. ಪೆಳಱು – ಭಯೇ (ಭಯಪಡು)
೮೮೫. ಪೇಱು – ಧಾರಣೇ (ಹರಡು, ವ್ಯಾಪಿಸು)
೮೮೬. ಪೊಚ್ಚಱು – ಸ್ಫುರಣೇ (ಗೋಚರಿಸು)
೮೮೭. ಪೊಱಮಾಱು – ಪಲಾಯನೇ (ಪಲಾಯನಮಾಡು)
೮೮೮. ಪೊಱು – ಶಿರೋಧಾರಣೇ (ಧರಿಸು, ಹೊತ್ತುಕೊಳ್ಳು)
೮೮೯. ಬಱೆ – ಅವಗ್ರಹೇ (ಕೃಶವಾಗು)
೮೯೦. ಬಿಱು (ಜಿಱು) – ಭಯೇ; ಪರಿತ್ಯಾಗೇ (ಭಯಪಡು, ಪರಿತ್ಯಜಿಸು)
೮೯೧. ಬೀಱು – ಸ್ವೇಚ್ಛಾಪ್ರದಾನೇ (ಹಂಚು, ಹರಡು)
೮೯೨. ಬೆದಱು – ವ್ಯಸ್ತೇ (ಹೆದರು)
೮೯೩. ಬೆಱೆ – ಅಹಂಕಾರಭಾವೇ (ಗರ್ವಪಡು)
೮೯೪. ಬೆಳ್ಕಱು – ಭಯೇ (ಭಯಪಡು)
೮೯೫. ಬೇಸಱು – ಆಲಸ್ಯೇ (ಉತ್ಸಾಹ ಹೀನವಾಗು)
೮೯೬. ಬೊಬ್ಬಿಱಿ – ಮಹಾರವೇ (ಕೂಗಾಡು)
೮೯೭. ಮಱಿ – ಪೋತಕೇ (ಎಳೆಯದಾಗು)
೮೯೮. ಮಱೆ – ವಿಸ್ಮರಣೇ (ನೆನಪಿನಲ್ಲಿ ಉಳಿಯದಿರು)
೮೯೯. ಮಾಱು – ವಿಕ್ರಯೇ (ವ್ಯವಹಾರ ಮಾಡು)
೯೦೦. ಮೀಱು-ಅತಿಕ್ರಮಣೇ (ಮಿತಿಮೀರು)
೯೦೧. ಮುಱಿ – ಮೋಟನೇ, ಖಂಡೇ ಚ (ತುಂಡುಮಾಡು)
೯೦೨. ಮುಸುಱು – ಸಂಛನ್ನೇ (ಆವರಿಸು, ಆಕ್ರಮಿಸು)
೯೦೩. ಮೆಱ – ವಿಡಂಬೇ (ತೋರ್ಪಡಿಸು, ಪ್ರದರ್ಶಿಸು)
೯೦೪. ಸಮಱು – ಚಾರುಕರಣೇ (ಅಂದಗೊಳಿಸು)
೯೦೫. ಸಾಱು – ಘೋಷಣೇ, ರಸಾಥೇ ಚ (ಘೋಷಿಸು, ಒಂದು ಬಗೆಯ ಅಡುಗೆ)
೯೦೬. ಸೀಱು – ದುಷ್ಕಲಹೇ, ದುಃಖಲಯೇ (ಕೋಪಗೊಳ್ಳು)
೯೦೭. ಸುಱಿ – ಲೇಹನೇ (ಸಪ್ಪಳವಾಗುವಂತೆ ಹೀರು)

೨೧. ೞಾಂತಕ್ಕೆ
೯೦೮. ಅಗೞ್ – ಖನನೇ, ಪರಿಖಾಯಾಂ ಚ (ಅಗೆ, ತೋಡು)
೯೦೯. ಅಗೞ್ (ಅಗುೞ್) – ಖನನೇ, ಖಲ ನಿವರುಜ್ಜನೇ (ಅಗೆ, ತೋಡು ನೆನೆಸು)
೯೧೦. ಅಸಕೞಿ – ಅತಿಕ್ರಮಣೇ (ಮಿತಿಮೀರು)
೯೧೧. ಅೞ್ – ರೋದನೇ (ರೋದನಮಾಡು)
೯೧೨. ಅೞಿ – ವಿನಾಶೇ, ಮಾನಶೇಷರಸೇ ಚಃ ಭ್ರಮರಾರ್ಥೇ ಕ್ಷಳಂ (ನಾಶಪಡಿಸು)
೯೧೩. ಅೞು – ಜಲನಿಮಜ್ಜನೇ, ಸೇವಕೇ ಕುಳಂ (ಈಜಡು, ಮುಳುಗು)
೯೧೪. ಇೞು – ನಿಮ್ಮಾವತರಣೇ (ಕೆಳಕ್ಕೆ ಬಾ)
೯೧೫. ಉೞ್ – ಹಲ ಕ್ರಿಯಾಯಾಂ (ನೇಗಿಲನಿಂದ ಉಳು)
೯೧೬. ಉೞು – ಅವಶಿಷ್ಟೇ ವಿಮೋಚನೇ ಚ ಚೋರ ಪ್ರಸ್ಥೋಪಕರಣ ಗೋಪನೇಷು ಕುಳಂ (ಮಿಗು, ಬಿಡು, ತ್ಯಜಿಸು)
೯೧೭. ಎೞೆ – ಗಾಢಾಕರ್ಷಣೇ, ತಂತು ಮಾತ್ರೇಚಃ ಭೂವಾಚಕೇ ಕ್ಷಳಂ (ಎಳೆದುಕೋ, ನೂಲೆಳೆ)
೯೧೮. ಏೞ್ – ಉತ್ಥಾಪನೇ (ಮೇಲೆ ಏಳು)
೯೧೯. ಕಯ್ಗೞ್ಗಿ  – ಅತಿಕ್ರಮಣೇ (ಅತಿಕ್ರಮಿಸು, ಮೀರು)
೯೨೦. ಕೀೞು – ಉತ್ಪಾಟನೇ (ಕೀಳು)
೯೨೧. ಕೞಿ – ನಿಧನಾತಿದೂರಯೋಃ ಸಾವೀರೇಚ (ಸಾಯಿ, ದೂರವಾಗು)
೯೨೨. ಕುೞು – ಖನನೇ, ನಿಮ್ಮಭೂಮಚ (ಅಗೆತಮಾಡು)
೯೨೩. ಕೊೞೆ – ಜೀರ್ಣೇ, ಕಾಯಮಲೇ ಚ (ಕೊಳೆತು ಹೋಗು, ಮೈ ಕೊಳೆ)
೯೨೪. ಜಗುೞ್ – ಅಪಸರಣೇ (ಜರು)
೯೨೫. ಜೀಱೇೞ್ – ಧನಿವಿಕಾರೇ (ಜೀರೆಂದು ಧ್ವನಿ ಮಾಡು)
೯೨೬. ತುೞಿ – ಪಾದಸಂಘಟ್ಟನೇ (ಕಾಲಿನಿಂದ ಮರ್ಧಿಸು)
೯೨೭. ತೆಗೞ್ – ನಿಂದಾಯಾಂ (ನಿಂದಿಸು)
೯೨೮. ನೆಗೞ್ – ಉದ್ಯೋಗೇ ಖ್ಯಾತೌನಕ್ರೇ ಚ
೯೨೯. ಪೞಿ – ನಿಂದಾಯಾಂ, ವಸ್ತ್ರವಿಶೇಷೇ ಚ (ನಿಂದಿಸು, ಒಂದು ವಿಧವಾದ ಬಟ್ಟೆ)
೯೩೦. ಪಾಱೀೞ್ – ನಿರ್ಧಾವ(ಟ)ನೇ ಅಪಮಾನೇ ಚ (ಅಪಮಾನ ಮಾಡು)
೯೩೧. ಪೂೞ್ – ಆಚ್ಛಾದನೇ (ಹೊದಿಸು)
೯೩೨. ಪೆಡಮಗುೞು (ಪೆಡಂಮಗುೞ್) – ಪರಾಙ್ಮುಖೇ
೯೩೩. ಪೊಗೞ್ – ಸಂಸ್ತವನೇ (ಅತಿಯಾಗಿಸ್ತುತಿಸು)
೯೩೪. ಪೋೞ್ – ವಿದಾರಣೇ, ಖಂಡೇ ಚ ವಿರಚನಾರ್ಥೇ ಚ (ಸೀಳು, ಹೋಳುಮಾಡು)
೯೩೫. ಬೞಿ – ಸಮ್ಮಾರ್ಜನ ಮಾರ್ಗವಂ ಶೇಷು, ಆಹ್ವಾನ ಪುರುಷೇ ಚ (ಸಾರಿಸು, ಹಾದಿ, ವಂಶ)
೯೩೬. ಬಾೞ್ – ಜೀವನೇ : ಖಡ್ಗೇ ಕುಳಂ (ಜೀವಿಸು, ಕತ್ತಿ)
೯೩೭. ಬೀೞ್ – ಪತನೇ, ಖಿಲಕ್ಷೇತ್ರೇ ಚ (ಕೆಳಗೆ ಬೀಳು, ಹಾಳುಬಿದ್ದ ಭೂಮಿ)
೯೩೮. ಮುಗುೞ್ – ನಿರ್ವತನೇ (ಮರಳು, ಹಿಂದಿರುಗು)
೯೩೯. ಸುೞಿ – ಭ್ರಮಣೇ, ಜಲಾವರ್ತೇ ಚ (ಸುತ್ತು, ನೀರಿನಲ್ಲಿ ಸುಳಿ)
೯೪೦. ಹಿೞಿ – ನಿರ್ದ್ರವಕರಣೇ ದಲನಾರ್ಥೇ ಕುಳಂ ಹಿಳ್ಳನೆ ಹಿಳಿದುದಾಗಿ (ವದ್ದೆಯಾದ ಬಟ್ಟೆಯನ್ನು ಹಿಂಡು, ಸೀಳು)

೨೨. ಳಾಂತಕ್ಕೆ
೯೪೧. ಅಸುಂಗೊಳ್ – ಪ್ರಾಣಾಪಹರಣೇ (ಕೊಲ್ಲು, ಪ್ರಾಣ ತೆಗೆ)
೯೪೨. ಅಳೆ – ಪರಿಮಾಣೇ, ತಕ್ರೇಚ (ಅಳತೆ ಮಾಡು, ಮಮ್ನಗೆ)
೯೪೩. ಉರುಳ್ – ನಿಮ್ನಪತನೇ (ಉರುಳು, ಇಳಿಜರಿನಲ್ಲಿ ಗುಡುಗು)
೯೪೪. ಊಳ್ – ದೂರಾದಾಹ್ವಾನೇ (ದೂರದಿಂದ ಕೂಗಿ ಕರೆ)
೯೪೫. ಒಲವರಂಗೊಳ್ – ಸ್ವಪಕ್ಷ ಸ್ವೀಕಾರೇ (ಪಕ್ಷಪಾತತೋರು, ಪ್ರೀತಿಸು)
೯೪೬. ಓಳ್ – ನಿಧುವನೇ (ಮೈಥುನ ಮಾಡು)
೯೪೭. ಕಣ್ಗೊಳ್ – ದರ್ಶನೀಯೇ (ದರ್ಶನ ಮಾಡು)
೯೪೮. ಕಯ್ಕೊಳ್ – ಸ್ವೀಕಾರೇ (ಈಸಿಕೋ, ಸ್ವೀಕರಿಸು)
೯೪೯. ಕಳ್ – ಸ್ತೇಯೇ ಮದ್ಯೇಚ (ಕದಿ, ಹೆಂಡ)
೯೫೦. ಕೇಳ್ – ಆಕರ್ಣನೇ (ಕೇಳು)
೯೫೧. ಕೊಳ್ – ಗ್ರಹಣೇ (ತೆಗೆದುಕೊಳ್ಳು ಹಿಡಿ)
೯೫೨. ಚಳಿ – ವಿಗತಪ್ರಭಾವೇ, ಶೀತೇ ಚ (ಶಕ್ತಿಗುಂದು, ಶೀತ)
೯೫೩. ತಗುಳ್ – ಅನುಧಾವನೇ (ಬೆನ್ನು ಹತ್ತು, ಓಡಿ ಹೋಗು)
೯೫೪. ತಳಿ – ಸೇಚನೇ, ಸತ್ರೇ ಚಃ ಸ್ಥೂಲದಾ ರೌಱೞಂ (ಸಿಂಪಡಿಸು, ಛತ್ರ)
೯೫೫. ತಳೆ – ಧಾರಣೇ; ಆತಪತ್ರ ಭೇದೇಱ ೞಂ (ಧರಿಸು, ಛತ್ರಿ)
೯೫೬. ತಾಳ್ – ಧಾರಣೇ; ವೃಕ್ಷೇಱೞಂ (ಧರಿಸು, ಒಂದು ವಿಧದ ಮರ)
೯೫೭. ತಿಳಿ – ನೈರ್ಮಲ್ಯೇ, ಜ್ಞಾನಪ್ರಸನ್ನ ಭಾವಯೋಃ ಕಾಂಜಿಕೇ ಚ (ತಿಳಿಯಾಗು, ತಿಳಿದುಕೋ)
೯೫೮. ತೊಳ್ – ಅವಸರ್ಪಣೇ (ನೂಕು, ಹೊರಹಾಕು)
೯೫೯. ತೊಳೆ – ಪ್ರಕ್ಷಾಳನೇ, ಫಲತುಳಾಯಾಂಚ (ಪ್ರಕ್ಷಾಳಿಸು, ಹಣ್ಣಿನ ತೊಳೆ)
೯೬೦. ದೊರೆಕೊಳ್ – ಪ್ರಾಪ್ತೌ (ಪ್ರಾಪ್ತವಾಗು)
೯೬೧. ನಳಿ – ನಮನೇ (ಬಾಗು)
೯೬೨. ನೀಳ್ – ಪ್ರಸಾರಣೇ (ನೀಳವಾಗು)
೯೬೩. ನುಗುಳ್ – ಸೂಕ್ಷ್ಮದ್ವಾರ ಪ್ರವೇಶೇ (ಮೆಲ್ಲನೆ ನೂಕು ಅಥವಾ ನುಸಿ)
೯೬೪. ನುಸುಳ್ – ಸೂಕ್ಷ್ಮದ್ವಾರ ಪ್ರವೇಶೇ (ಮೆಲ್ಲನೆ ನೂಕು)
೯೬೫. ನೆಱಕೊಳ್ – ಸರ್ವಸ್ವಹರಣೇ, ಮರ್ಮ ಭೇದೇ ಚ (ಸೂರೆಮಾಡು)
೯೬೬. ನೋಳ್ – ಅಗ್ರಗಮನೇ (ಮುನ್ನುಗ್ಗು, ಎದುರು ನಡೆ)
೯೬೭. ಪೊರಳ್ – ಲುಠನೇ (ಹೊರಳು)
೯೬೮. ಪೊಳೆ – ಲುಠನೇ; ನದ್ಯರ್ಥೇ ಱೞಂ (ಉರುಳು, ಒಂದು ನದಿ)
೯೬೯. ಬಗುಳ್ – ಕುರ್ಕುರ ಧ್ವನೌ (ನಾಯಿಯಂತೆ ಬೊಗಳು)
೯೭೦. ಬೞಿಕೊಳ್ – ಕ್ರಮಸಂಧಾನೇ (ಹತ್ತಿರಬರು)
೯೭೧. ಬಳೆ – ಪ್ರವೃದ್ಧೌ, ಕಾಚಭೂಷಣೇ ಚ (ನೂತನ ಪ್ರಾಣಿಯಂತೆ ವೃದ್ದಿಯಾಗು)
೯೭೨. ಬೆಳೆ – ಸಸ್ಯವೃದ್ಧೌ (ಮರಗಿಡದಂತೆ ವೃದ್ದಿಯಾಗು)
೯೭೩. ಬೆಂಕೊಳ್ – ಅನುಧಾ ನೇ (ಬೆನ್ನಟ್ಟು)
೯೭೪. ಬೇಳ್ – ಹವಿಪ್ರಧಾನೇ ನಿರ್ಬುದ್ಧೌಚ (ಅಗ್ನಿಕುಂಡದಲ್ಲಿ ತುಪ್ಪವನ್ನು ಸುರಿ, ಮೂರ್ಖ)
೯೭೫. ಮನಂಗೊಳ್ – ಚಿತ್ರ ವಿಮೋಹನೇ (ಮನೋಹರವಾಗು)
೯೭೬. ಮಸುಳ್ – ವಿಗತಪ್ರಭಾಯಾಂ (ಮಂಕಾಗು, ಕಾಂತಿ ಹೀನವಾಗು)
೯೭೭. ಮಾರ್ಕೊಳ್ – ಸಮ್ಮುಖೇ (ಮುಖಾ ಮುಖಿಯಾಗು)
೯೭೮. ಮುಗುಳ್ – ನಿಮೀಲನೇ, ಕುಟ್ಮಲೇಚ (ತಾವರೆ ಹೂವಿನಂತೆ ಮುಗಿ, ಮೊಗ)
೯೭೯. ಮುಳ್ – ಕಂಟಕೇ (ಮುಳ್ಳಾಗು)
೯೮೦. ಮುಳಿ – ಕೋಪೇ (ಕೋಪಿಸು)
೯೮೧. ಮೊಳೆ – ಪ್ರರೋಹ ಕ್ರಿಯಾಯಾಂ (ಮೊಳಕೆ ಹೊರಡು, ಮೊಳಕೆ)
೯೮೨. ಸೀಳ್ – ವಿದಾರಣೇ, ಶಕಲೇ ಚ (ಸಿಗಿ, ಚೂರು)
೯೮೩. ಸುರುಳ್ – ಸಂಕೋಚನೇ (ಸುರುಟು, ಸಂಕೋಚವಾಗು)
೯೮೪. ಸೂರುಳ್ – ಶಪಥೇ (ಪ್ರತಿಜ್ಞೆ ಮಾಡು)
೯೮೫. ಸೆಳೆ – ಆಕರ್ಷಣೇ, ಬಾಲಶಿಕ್ಷಾದಂಡೇ ಚ (ಜಗ್ಗು, ಆಕರ್ಷಿಸು)