೧೪ ಮಾಂತಕ್ಕೆ
೪೯೭. ಅಣ್ಣು – ಪೌರುಷೇ (ಪೌರುಷ ತೋರು)
೪೯೮. ಉಣ್ಮು – ಉದ್ಗತೌ (ಸಿಡಿ ಅಥವಾ ಹೊಮ್ಮು)
೪೯೯. ಒಮ್ಮು – ಅನುವರ್ತನೇ (ಒಗ್ಗು)
೫೦೦. ಕಮ್ಮು – ಗಂಧಶ್ವಾಸೇ (ಸುವಾಸನೆ ಬೀರು)
೫೦೧. ಕಯ್‌ಗಣ್ಮು – ಅತಿಕ್ರಮಣೇ (ಮಿತಿ ಮೀರು)
೫೦೨. ಕರೆಗಣ್ಮು – ಕೂಲಾತಿಕ್ರಮಣೇ (ನದಿಯಂತೆ ದಡವನ್ನು ಮೀರಿ ಹರಿ)
೫೦೩. ಕಮ್ಮು – ಮುಸಲಕ್ರಿಯಾಯಾಂ (ಒನಕೆಯಿಂದ ಕುಟ್ಟು)
೫೦೪. ಕೆಮ್ಮು – ಖಾಸೇ (ಶಬ್ದದೊಂದಿಗೆ ಉಸಿರು ಹೊರಗೆ ಬಿಡು)
೫೦೫. ಚಿಮ್ಮು – ಯುಕ್ತಾಂಗುಲಿ ವಿಮೋಚನೇ, ಶಸ್ತ್ರ ಕ್ರಿಯಾಯಾಂಚ (ಎರಡು ಬೆರಳು ಸಹಾಯದಿಂದ ಏನಾದರೊಂದು ಚಿಮ್ಮು)
೫೦೬. ನಮೇ – ಗುರುಯಾಪ್ಯೇ, ದಾರಿದ್ರ್ಯೇಚ (ರೋಗದಿಂದ ಬಡವಾಗು)
೫೦೭. ನೆಮ್ಮು – ಪೃಷ್ಠಸ್ಥಾಪನೇ (ಬೆನ್ನುಕೊಟ್ಟು ಒರಗು)
೫೦೮. ಉಣ್ಮು – ಉದ್ಗಮನೇ (ಸಿಡಿ, ಹೊಮ್ಮು)
೫೦೯. ಮೀ – ಸ್ನಪನೇ (ಸ್ನಾನಮಾಡು)
೫೧೦. ಮೇ – ತಿರ್ಯಕ್ ಖಾದನೇ (ದನದಂತೆ ತಿನ್ನು)
೫೧೧. ಸಮೆ – ನಿರ್ವಹಣೇ, ನಿಶ್ಯೇಷೇ ಚ (ನಿರ್ವಹಿಸು)
೫೧೨. ಹಮ್ಮು – ರಜ್ಜು ಕ್ರಿಯಾಯಾಂ ಗರ್ವೇಚ (ಹಗ್ಗವನ್ನು ಹೊಸಿ, ಅಹಂಕಾರ)

೧೫. ಯಾಂತಕ್ಕೆ
೫೧೩. ಅಪ್ಪುಕೆಯ್ – ಅಂಗೀಕರಣೇ (ಅಂಗೀಕರಿಸು)
೫೧೪. ಅಯ್ – ವಿರಲವಸ್ತ್ವಾಕರ್ಷಣೆ ಆಯುಷ್ಯೇ ಚ (ಅಲ್ಲಿ ಇಲ್ಲಿ ಬಿದ್ದಿರುವುದನ್ನು ಎತ್ತಿಕೋ)
೫೧೫. ಆರಯ್ – ಅನ್ವೇಷಣೇ (ಹುಡುಕು)
೫೧೬. ಇಂಬುಕೆಯ್ – ಸ್ಥಾನಸಂಗ್ರಹೇ (ಜಗ ಮಾಡಿಕೋ)
೫೧೭. ಉಯ್ – ನೀಯಮಾನೇ (ಕರೆದೊಯ್ಯ)
೫೧೮. ಎಂಬುಕೆಯ್ – ಅನುಮತೇ (ಅನುಮತಿಸು)
೫೧೯. ಒಳಕೆಯ್ – ಅಂತಃಕ್ರಿಯಾಯಾಂ (ಒಳಪಡಿಸಿಕೋ)
೫೨೦. ಕಡುಕೆಯ್ – ತೀವ್ರತ್ವೇ (ತ್ವರೆಮಾಡು)
೫೨೧. ಕಯ್ಗಾಯ್ – ಸಂರಕ್ಷಣೇ (ಕಾಪಾಡು)
೫೨೨. ಕಯ್ಗೆಯ್ – ಭೂಷಣೋದ್ವಹನೇ (ಒಡವೆ ಹಾಕಿಕೋ)
೫೨೩. ಕಯ್ಪೊಯ್ – ಪ್ರತಿಜ್ಞಾಯಾಂ ಹಸ್ತತಾಡನೇ ಚ (ಭಾಷೆ ಕೊಡು)
೫೨೪. ಕಾಯ್ – ಫಲೋತ್ಪತ್ತೌ (ಕಾಯಿ ಬಿಡು)
೫೨೫. ಕೋಯ್ – ಲವನೇ (ಕಟಾವು ಮಾಡು)
೫೨೬. ಗೆಯ್ (ಕೆಯ್) – ಶಿಲ್ಪೇ (ಕಸುಬು ಮಾಡು)
೫೨೭. ತಳ್ವೊಯ್ – ಪ್ರತಿಹತೇ (ತಗುಲಿಕೋ ಅಥವಾ ಡಿಕ್ಕಿ ಹೊಡೆ)
೫೨೮. ತುೞುಲ್ಗೆಯೊ – ನಮಸ್ಕಾರೇ ವೀರೇ ಚ (ನಮಸ್ಕರಿಸು)
೫೨೯. ತೊಯ್ – ಸಾರ್ದ್ರತ್ವೇ (ಒದ್ದೆಯಾಗು)
೫೩೦. ನೆಯ್ – ವಸ್ತ್ರಕ್ರಿಯಾಯಾಂ, ಘ್ರತೇ ಚ (ವಸ್ತ್ರವನ್ನು ನೇಯು, ತುಪ್ಪ)
೫೩೧. ಪಾಯ್ – ಲಂಘನೇ (ದಾಟು)
೫೩೨. ಪೊಯ್ – ತಾಡನೇ (ಬಡಿ)
೫೩೩. ಬಯ್ – ವಾಕ್ಪಾರುಷ್ಯೇ, ನಿಕ್ಷೇಪೇ ಚ (ಕಠಿಣವಾಗಿ ಮಾತಾಡು)
೫೩೪. ಮನಂಬೊಯ್-ಸಮಗ್ರಚೇ ಷ್ಟಾಯಾಂ (ಬಹು ಚಟುವಟಿಕೆಯಾಗಿಸು)
೫೩೫. ಸುಯ್ – ಉಚ್ಛ್ವಾಸೇ (ಉಸಿರು ಬಿಡು)

೧೬. ರಾಂತಕ್ಕೆ
೫೩೬. ಅಡರ್ – ಆರೋಹಣೇ (ಏರು)
೫೩೭. ಅದಿರ್ – ಕಂಪನೇ (ಕಂಪಿಸು)
೫೩೮. ಅಮರ್ – ಗಾತ್ರಶ್ಲೇಷೇ (ತಬ್ಬಿಹಿಡಿ)
೫೩೯. ಅರಿ – ಕೃಂತನೇ (ಕತ್ತರಿಸು, ತುಂಡು ಮಾಡು)
೫೪೦. ಅರೆ – ಪೇಷಣೇ, ಅರ್ಥೇ ಚ (ನುರಿ, ಅರ್ಧಭಾಗ)
೫೪೧. ಅಲರ್ – ವಿಕಸನೇ, ಪುಷ್ಪೇ ಚ (ಹೂವಿನಂತೆ ಅರಳು, ಹೂವಿನ ಒಂದು ಪ್ರಭೇದ)
೫೪೨. ಅಸುರ್ – ಅಸಹ್ಯಭಾವೇ (ಅಸಹ್ಯ ಪಡು)
೫೪೩. ಅಳುರ್ – ಆವರಣೇ (ಆವರಿಸು)
೫೪೪. ಅರ್ – ಉಚ್ಚೈರ್ಧ್ವನೌ, ಹಲಾನ್ವಿತ ವೃಷಭಯುಗ್ಮ ದಾರುಭೇದೇಚ (ಕಿರುಚು, ಎರಡು ಎತ್ತುಗಳು ಹೂಡಿದ ನೇಗಿಲು)
೫೪೫. ಇರು – ಸ್ಥಾಯೀಭಾವೇ (ಇರು)
೫೪೬. ಇರಿ – ದೋಹನೇ (ಜಿನುಗು, ಸುರಿ)
೫೪೭. ಉದಿರ್ – ಪತನೇ (ಕೆಳಗೆ ಬೀಳು)
೫೪೮. ಉರಿ – ದಹನೇ, ತರುವಿಶೇಷೇಚ (ಜ್ವಲಿಸು, ವೃಕ್ಷ ವಿಶೇಷ)
೫೪೯. ಉಸಿರ್ – ಭಾಷಣೇ (ಮಾತಾಡು)
೫೫೦. ಎಯ್ತರ್ – ಸಮೀಪಾಗಮನೇ (ಹತ್ತಿರ ಹೋಗು)
೫೫೧. ಎರೆ – ಯಚ್ಞಾಯಾಂ, ಭೂಮಿಶೇಷತಿರ್ಯ ಗ್ಗಾಸಯೋಃ (ತಿವಿ, ಸುರಿ, ಯಾಚಿಸು)
೫೫೨. ಏೞ್ತರ್ – ಸಮೀಪಗಮನೇ (ಹತ್ತಿರಹೋಗು)
೫೫೩. ಒರೆ – ಕರ್ಷಣೇ, ವರ್ಣೀ ಚ (ಉಜ್ಜು, ತಿಕ್ಕು)
೫೫೪. ಒಸರ್ – ಸ್ರವಣೇ (ಸೊರು)
೫೫೫. ಕನರ್ – ಆಪಕ್ವರಸೇ (ಜಿಡ್ಡುಸುರಿ ಅಥವಾ ಕೆಸರಾಗು)
೫೫೬. ಕರಿ – ದಾಹೇ, ಗಜೇಚ (ಎಣ್ಣೇಯಲ್ಲಿ ಬೇಯಿಸುವುದು)
೫೫೭. ಕರೆ – ಆಹ್ವಾನೇ, ವಸ್ತ್ರದಶಾಪನ ಗೋಕುಲೇಷು (ಆಹ್ವಾನಿಸು, ವಸ್ತ್ರದ ಅಂಚು)
೫೫೮. ಕಸರ್ – ಗಲಕಂಡೂತೌ (ಗಂಟಲು ನವೆಯಾಗು)
೫೫೯. ಕಾರ್ – ಖಾದನೇ, ಜಲದಾಗಮೇ ಚ (ತಿನ್ನು, ಮಳೆಗಾಲ)
೫೬೦. ಕಿರಿ – ವಪನೇ, ತಂತು ಗ್ರಂಥೌಚ (ಕ್ಷೌರಮಾಡು, ದಾರದಲ್ಲಿ ಬಿದ್ದಗಂಟು)
೫೬೧. ಕಿಸುರ್ – ಅಸಹ್ಯಭಾವೇ (ಅಸಹ್ಯಪಡು)
೫೬೨. ಕಿಳಿರ್ – ಹಯಧ್ವನೌ (ಕುದುರೆಯಂತೆ ಕೆನೆ)
೫೬೩. ಕುಳಿರ್ – ಋಜುಭೇದೇ, ಹೈಮೇ ಚ (ಶೀತಿಲವಾಗು, ಚಳಿಯಾಗು)
೫೬೪. ಕೂರ್ – ಸ್ನೇಹೇ (ಪ್ರೀತಿಸು, ಸ್ನೇಹಿಸು)
೫೬೫. ಕೆರೆ – ನಖಕ್ರಿಯಾಯಾಂ (ಉಗುರಾಡಿಸು)
೫೬೬. ಕೆಳರ್ – ವಿಜೃಂಭಣೇ (ಆಟೋಪಮಾಡು, ಜಂಬಮಾಡು)
೫೬೭. ಕೊನರ್ – ಪಲ್ಲವೋತ್ಪತ್ತೌ (ಫಲಬಿಡು)
೫೬೮. ಕೊರೆ – ನಿದ್ರಾಂಗಧ್ವನೌ (ಗೊರಕೆಹೊಡಿ)
೫೬೯. ಗೋರ್ – ಜಲಕರಣೇ (ಬಲೆ ಬೀಸು)
೫೭೦. ಚಿಗುರ್ – ಪಲ್ಲವೋತ್ಪತ್ತೌ (ಫಲಬಿಡು)
೫೭೧. ಜರಿ – ತೀರಪತನೇ (ನದಿಯ ದಡದಂತೆ ಕುಸಿ)
೫೭೨. ತಗರ್ – ಗತಿಬಂಧನೇ, ಅಜಭೇದೇಚ (ತಡೆ, ನಿಲ್ಲಿಸು)
೫೭೩. ತರ್ – ಆನಯನೇ (ತಾ)
೫೭೪. ತಳರ್ – ಚಲನೇ (ಚಲಿಸು, ನಡೆ)
೫೭೫. ತಳಿರ್ – ಪಲ್ಲವೋತ್ಪತ್ತೌ (ಚಿಗುರುಬಿಡು)
೫೭೬. ತಿಮಿರ್ – ತ್ವಙ್ಮಲ ವಿಸರ್ಜನೇ (ಮೈ ಕೊಳೆಯನ್ನು ಉಜ್ಜಿ ಕಳೆ)
೫೭೭. ತೊಡರ್ – ಬಂಧನೇ ಬಿರುದ ಶಂಖಲಾಯಾಂಚ (ಕಟ್ಟುಬೀಳು, ಬಿರುದಿನ ಸರಪಳಿ)
೫೭೮. ತೊರೆ – ಸ್ತನ್ಯೇ (ಮೊಲೆಯ ಹಾಲಿನಂತೆ ಒಸರು)
೫೭೯. ನಿಮಿರ್ – ಪ್ರಸಾರಣೇ (ಉದ್ದವಾಗು)
೫೮೦. ನೆರೆ – ಸಂಯೋಗೇ, ಪಾರ್ಶ್ಚೇಚ |(ಸೇರು, ಪಕ್ಕ)
೫೮೧. ನೇರ್ – ಕೃಂತನೇ (ಕತ್ತರಿಸು)
೫೮೨. ಪರೆ – ಪ್ರಸರಣೇ, ಕಾಲ್ಯೇಚ (ಪ್ರಸರಿಸು, ಹೊತ್ತಾರೆ)
೫೮೩. ಪಸುರ್ – ಹರಿತಭಾವೇ (ಹಸುರಾಗು)
೫೮೪. ಪಾರ್ – ಸಮಯಾನ್ವೇಷಣೇ (ನಿರೀಕ್ಷಿಸು, ಕಾಯಿ)
೫೮೫. ಪೊಡರ್ – ಸ್ಫುರಣೇ (ಅದಿರು ಅಥವಾ ಅಲುಗು)
೫೮೬. ಪೊರೆ – ಪೋಷಣೇ, ಉಪಸರ್ಗೇ ಚ (ಪೋಷಿಸು, ಊರ ಹೊರ ವಲಯ)
೫೮೭. ಪೋರ್ – ಮಲ್ಲಯುದ್ಧೇ, ಬಿಲೇಚ (ಕುಸ್ತಿಯಾಡು, ಬಿಲ)
೫೮೮. ಬರ್ – ಆಗಮನೇ (ಬಾ)
೫೮೯. ಬರೆ – ವಿಲೇಖನೇ (ಲಿಖಿಸು, ಬರವಣಿಗೆ ಮಾಡು)
೫೯೦. ಬಾರ್ – ಚರ್ಮವಲ್ಲೀಕರಣೇ, ದ್ರವ್ಯದ್ರವ್ಯ ನಿರ್ಮುಕ್ತೌಚ (ಚರ್ಮವನ್ನು ಹುರಿಮಾಡು, ಒಣಗು)
೫೯೧. ಬಿಗುರ್ – ಭಯೇ (ಭಯಪಡು)
೫೯೨. ಬಿದಿರ್ – ವಿಕೀರ್ಣೇ, ವೇಣೌಚ (ಚೆಲ್ಲು, ಬಿದಿರುಮೆಳೆ)
೫೯೩. ಬಿದುರ್ – ಅಶೃಂಖಲಾಯಾಂ
೫೯೪. ಬಿರಿ – ಸ್ಫುಟನೇ (ಒದೆ, ಬಿರುಕುಂಟಾಗ)
೫೯೫. ಬೆಮರ್ – ಸ್ವೇದಭಾವೇ (ಬೆವರಾಡು)
೫೯೬. ಬೆಳರ್ – ಧಾವಲ್ಯೇ (ಬಿಳುಪಾಗು, ಕಾಂತಿಯಾಗು)
೫೯೭. ಮಲರ್ – ಪರಾಙ್ಮುಖೇ, ಪುಷ್ಮೇಚ (ಹಿಮ್ಮೆಟ್ಟು, ಹೂ)
೫೯೮. ಮಿಳಿರ್ – ಸಮೃದ್ಧೌ, ಲುಠನೇ (ಬೆಳೆ, ಅಲುಗಾಡು)
೫೯೯. ಮುರಿ – ವಕ್ರಭಾವೇ (ವಕ್ರವಾಗು, ತುಂಡುಮಾಡು)
೬೦೦. ಮೊರೆ – ಭ್ರಮರಾದಿನಿನದೇ ಕಿನ್ನರಿ ಕ್ರಿಯಾಯಾಂ (ದುಂಬಿಯಂತೆ ಝೆಂಕರಿಸು)
೬೦೧. ಸರಿ – ಪಲಾಯನೇ, ಸಾಮ್ಯೇಚ (ಫಲಾಯನ ಮಾಡು)
೬೦೨. ಸಾರ್‌ತರ್ – ಸಮೀಪಗಮನೇ (ಹತ್ತಿರಹೋಗು)
೬೦೩. ಸಾರ್ – ಸಮೀಪಗಮನೇ (ಹತ್ತಿರಹೋಗು)
೬೦೪. ಸುರಿ – ಗಲನೇ (ಸೋರು ಅಥವಾ ಉದುರು)
೬೦೫. ಸೇರ್ – ಸಾನುಮತೇ (ಹಿತವಾಗು, ಮದವಿಳಿ)
೬೦೬. ಸೋರ್ – ಗಲನೇ, ಗರ್ವ ಹೀನೇಚ (ಸೋರು)
೬೦೭. ಹರಿ (ಪರಿ) – ಧಾವನೇ, ದೀರ್ಘಋಜುಧಾರೌಚ (ಓಡು)
೬೦೮. ಹೀರ್ (ಪೀರ್) – ರಸಸ್ವಾದನೇ ಭೂಷಣೇಚ (ರಸವನ್ನು ಹೀರು, ಆಭರಣ ಧರಿಸು)
೬೦೯. ಹುರಿ – ನಿರ್ದ್ರವಕರಣೇ, ರಜ್ಜು ಭ್ರಮಣ ಕ್ರಿಯಾಯಾಂ (ತೇವಾಂಶ ಆಗುವಂತೆ ಬಿಸಿಮಾಡು)

೧೭. ಲಾಂತಕ್ಕೆ
೬೧೦. ಅಂಡಲೆ – ಆಸನ್ನ ಪೀಡನೇ (ಬೆನ್ನು ಬಿದ್ದು ಪೀಡಿಸು)
೬೧೧. ಅರಲ್ – ವಿಕಾಸೇ, ಪುಷ್ಪೇಚ (ಹೂವಿನಂತೆ ಅರಳು, ಹೂ)
೬೧೨. ಅಲೆ – ಪರಿಭಾವಲೋಲನ ಯೋಃ (ಪೀಡಿಸು, ಅಲ್ಲಾಡು)
೬೧೩. ಅವಲ್ – ಮುಸಲ ಕ್ರಿಯಾಯಾಂ (ಒನಕೆಯಿಂದ ಕುಟ್ಟು)
೬೧೪. ಅೞಲ್ – ದುಃಖೇ (ದುಃಖಿಸು)
೬೧೫. ಉಲಿ – ಸಂಭ್ರಮಣ ಧ್ವನೌ (ಸಂಭ್ರಮದಿಂದ ಧ್ವನಿಮಾಡು)
೬೧೬. ಎೞಲ್ – ಆಲಂಬನೇ (ತೂಗುಬೀಳು)
೬೧೭. ಎಳೆತಳಲ್ – ಪಲ್ಲವಪ್ರಾಪ್ತೌ (ಚಿಗುರುಬಿಡು)
೬೧೮. ಒನಲ್ – ಅಪಹಸನ ಕ್ರೋಧೇ (ಅಪಹಾಸ್ಯ ಮಾಡುತ್ತ ಕೋಪಿಸು)
೬೧೯. ಒಱಲ್ – ಸ್ನೇಹೇ (ಪ್ರೀತಿಸು)
೬೨೦. ಒಲೆ – ಆಂದೋಲನೇ ಆಶ್ಮಂತಕೇ ಚ (ಅತ್ತಿಂದಿತ್ತ ತೂಗಾಡು, ಅಡಿಗೆಯ ಒಲೆ)
೬೨೧. ಕಣ್ಮಲೆ – ಚಿತ್ತಸ್ಫುರಣೇ (ಮನಸ್ಸಿನಲ್ಲಿ ಹೊಳೆ)
೬೨೨. ಕನಲ್ – ಕ್ರೋಧೇ (ಕೋಪಿಸು)
೬೨೩. ಕಲ್ – ಅಭ್ಯಾಸೇ, ಪಾಷಾರ್ಣೇ ಚ   (ಕಲಿತುಕೋ, ಕಲ್ಲು)
೬೨೪. ಕೞಲ್ – ತನುತ್ವೇ, ತಕ್ರಮಂಜೀರಯೋಃ (ಕೃಶವಾಗು, ಮಜ್ಜಿಗೆ, ಕಾಲಂದುಗೆ)
೬೨೫. ಕುಕಿಲ್ – ಕೋಕಿಲ್ ಸ್ಕನೇ, ಪಕ್ಷಿಭೇದೇ ಚ (ಕೋಗಿಲೆಯಂತೆ ಕೂಗು, ಕುಕಿಲ್ ಪಕ್ಷಿ)
೬೨೬. ಕೆಲೆ – ಉತ್ಸಾಹ ಧ್ವನೌ (ಉತ್ಸಾಹದಿಂದ ಧ್ವನಿಮಾಡು)
೬೨೭. ಕೊಲ್ – ಹಿಂಸಾಯಾಂ (ಹಿಂಸಿಸು)
೬೨೮. ಕಿಚಿಕಿಲ್ – ಹೇಷಿತೇ (ಕುದುರೆಯಂತೆ ಕೆನೆ)
೬೨೯. ಜಿಗಿಲ್ – ಸ್ನಿಗ್ಧ ಸಂಶ್ಲೇಷಯೋಃ (ಜರು, ಅಂಟಿಕೋ)
೬೩೦. ಜೋಲ್ – ಆಲಂಬನೇ (ನೇತಾಡು)
೬೩೧. ತಱಿಸಲ್ – ನಿಶ್ಚಯೇ (ನಿಶ್ಚಯಿಸು)
೬೩೨. ತಳಲ್ – ಶಾಖಾಮುಖೇ (ಕವಲೊಡಿ, ಶಾಖೋಪ ಶಾಖೆಯಾಗು)
೬೩೩. ತೊೞಲ್ – ಭ್ರಮಣೇ (ಅಲೆದಾಡು)
೬೩೪. ನರಲ್ – ವೇದನಧ್ವನೌ (ನೋವಿನಿಂದ ಬಳಲು)
೬೩೫. ನಲಿ – ರಾಗೇ (ಅನುರಾಗಿಸು)
೬೩೬. ನಿಲ್ – ಗತಿಮುಕ್ತೌ, ಸ್ಥಾಪನೇ ಚ (ಚಲನೆ ಕೊನೆಯಾಗು, ದೃಢವಾಗು)
೬೩೭. ನುಲಿ – ಚರ್ಮ ಭ್ರಮಣೇ, ಪೀಡನರಜ್ಜು ಭೇದಯೋಃ (ಚರ್ಮಹೆಣೆ, ತಿರಿಚು)
೬೩೮. ನೂಲ್ – ತಂತುಕರಣೇ, ತಂತೌಚ (ನೂಲುತೆಗೆ, ನೂಲಿನ ಎಳೆ)
೬೩೯. ನೆಱಲ್ – ನಿಶ್ಚೇಷ್ಟಾವಲಂಬನ ಯೋಃ (ಸುಸ್ತಾಗಿ ಒರಗು)
೬೪೦. ನೇಲ್ – ಆಲಂಬನೇ (ನೇತು ಬೀಳು)
೬೪೧. ಪಗಿಲ್ – ಸ್ನಿಗ್ಧ ಸಂಶ್ಲೇಷಯೋಃ (ಅಂಟಿಕೊಳ್ಳು)
೬೪೨. ಪಿಳಿಲ್ – ಹಸ್ತೋನ್ಮುಕ್ತೌ (ಕೈಯಿಂದ ಎಸೆ)
೬೪೩. ಪುಯಲ್ – ಆರ್ತಧನೌ (ದುಃಖಿಸು, ಧೈತ್ಯವಾಗಿ ಬೇಡು)
೬೪೪. ಪೇಲ್ – ಮಲವಿಸರ್ಜನೇ (ಮಲವಿಸರ್ಜನೆ ಮಾಡು)
೬೪೫. ಪೊಲ್ – ಸ್ಯೂತೇ (ಹೊಲಿಗೆ ಹಾಕು)
೬೪೬. ಪೋಲ್ – ಸಾದೃಶ್ಯೇ (ಸದೃಶ್ಯವಾಗು, ಹೋಮ)
೬೪೭. ಬಲಿ – ದೃಢೀಕರಣೇ, ರಾಕ್ಷಸೋಪಹಾರ ಯೋಶ್ಚ (ಬಿಗಿ ಮಾಡು, ಒಬ್ಬ ರಾಕ್ಷಸನ ಹೆಸರು)
೬೪೮. ಬೞಲ್ – ಶ್ರಾಂತೌ (ಉಪಯೋಗ ಮಾಡು)
೬೪೯. ಬೞಸಲ್ – ಆನುಗಮನೇ (ಬಳಿಗೆಬಾ)
೬೫೦. ಬಿಲ್ – ವಿಕ್ರಯೇ, ಕೊಂದಂಡೇಚ (ಮಾರು, ಬಿಲ್ಲು)
೬೫೧. ಮಡಲ್ – ವಲ್ಲಿ ವೃದ್ಧೌ (ಬಳ್ಳಿಯಂತೆ ಕುಡಿಯಿಡು)
೬೫೨. ಮರಲ್ – ಪರಾಙ್ಮುಖೇ, ಪುಷ್ಪೇಚ (ಹಿಂತಿರುಗು, ಹೂ)
೬೫೩. ಮಲೆ – ಔದ್ಧತ್ಯೇ, ವನೇ ಚ (ಔದ್ಧತ್ಯದಿಂದ ವರ್ತಿಸು, ಕಾಡು)
೬೫೪. ಸಿಡಿಲ್ – ಸ್ರಂಸನೇ (ಚಲ್ಲಾಪಿಲ್ಲಿಯಾಗಿ ಬೀಳು)
೬೫೫. ಸಲ್ – ಸ್ಥಾನ ಪ್ರವೇಶೇ, ಸಮಾಖ್ಯಾತೌ (ಅರ್ಹ ಸ್ಥಾನದಲ್ಲಿ ಶೋಭಿಸು, ಪ್ರಸಿದ್ಧವಾಗು)
೬೫೬. ಸಾಲ್ – ಋಣೇ, ಸಸ್ಯ ಪಂಕ್ತೌಚ (ಸಾಲ ಮಾಡು, ಪೈರಿನ ಒಂದು ಪ್ರಭೇದ)
೬೫೭. ಸಿಡಿಲ್ – ವಿಕೀರ್ಣೇ, ಮೇಘವಹ್ನೌಚ (ಚೆಲ್ಲಾಪಿಲ್ಲಿಯಾಗಿ ಬೀಳು, ಸಿಡಿಲು)
೬೫೮. ಸುಲಿ – ಆವರಣಾಪನೋದನೇ (ಮುಸುಕಿರುವುದನ್ನು ಕಳೆದು ತೆಗಿ)
೬೫೯. ಸೋಲ್ – ಪರಾಜಯೇ (ಸೋಲು)

೧೮. ವಾಂತಕ್ಕೆ
೬೬೦. ಅಡಿ – ನಿಗೂಹನೇ (ಬಚ್ಚಿಟ್ಟುಕೋ)
೬೬೧. ಅವು – ಮುಸಲಕ್ರಿಯಾಯಾಂ (ಒನಕೆಯಿಂದ ಕುಟ್ಟು)
೬೬೨. ಅೞ್ವು – ದಹನಾತಿಕ್ರಮಣೇ (ಬೆಂಕಿಯಂತೆ ಆವರಿಸು)
೬೬೩. ಎೞವು – ಅಪಮಾರ್ಜನೇ, ಆಪಮಾರ್ಜುನವೆಂದು ತೊಡೆವುದು (ಅಳಿಸಿ ಹಾಕು, ತೊಡೆ)
೬೬೪. ಎಳವು – ವೀಧಿಕರಣೇ (ಅದೃಷ್ಟದಂತಾಗು, ನಿಸ್ಸಾಹಯ ಕೂಗು)
೬೬೫. ಒದವು – ಸಮೃದ್ಧೌ (ಸಮೃದ್ದಿಯಾಗು)
೬೬೬. ಓವು – ಪಾಲನೇ (ರಕ್ಷಿಸು)
೬೬೭. ಕವಿ – ಆಚ್ಛಾದನೇ (ಆಚ್ಛಾದಿಸು ಅಥವಾ ಮರೆಮಾಡು)
೬೬೮. ಗರವು – ಸರ್ವಾಕರ್ಷಣೆ (ಸಂಪೂರ್ಣವಾಗಿ ಸೆಳೆ)
೬೬೯. ತಡವು – ಹಸ್ತಾನ್ವೇಷಣೇ, ಸ್ತಿಮಿತ ಭಾವೇಚ (ಹುಡುಕು, ಸವರು)
೬೭೦. ತವು – ಕ್ಷಯೇ (ನಾಶವಾಗು)
೬೭೧. ತಳ್ವು – ಕಾಲಕ್ಷೇಪೇ (ತಡಮಾಡು)
೬೭೨. ತಿವಿ – ಮುಷ್ಟಿ ಪ್ರಹರಣೇ (ಮುಷ್ಟಿಯಿಂದ ಪ್ರಹರಿಸು)
೬೭೩. ತೀವು – ಪೂರಣೇ (ತುಂಬು)
೬೭೪. ಸವಿ – ಖಾದನ ಪರೀಕ್ಷಾಯಾಂ (ರುಚಿನೋಡು, ಪರೀಕ್ಷಿಸು)
೬೭೫. ಸೀವು – ಭೂಷಣೇ (ಒಡವೆ ತೊಡು)

೧೯. (i) ಸಾಂತಕ್ಕೆ
೬೭೬. ಅಡಸು – ಗಾಢಪ್ರವೇಶೇ (ಬಲವಾಗಿ ತುರುಕು)
೬೭೭. ಅಱಸು – ಅನ್ವೇಷಣೇ (ಹುಡುಕು)
೬೭೮. ಅಲಸು – ಆಲಸ್ಯೇ (ಆಲಸ್ಯಮಾಡು)
೬೭೯. ಅಸು – ಉರ್ಧ್ವವಿಮೋಚನೇ, ವೃಕ್ಷಭೇದೇ ಚ (ಮೇಲ್ಮುಖವಾಗಿ ಎಸೆ ಅಥವಾ ಮೇಲಿಂದ ಚಲಿಸು)
೬೮೦. ಇಸು – ಶರ ವಿಮೋಚನೇ (ಬಾಣ ಬಿಡು)
೬೮೧. ಈಸು – ಜಲೋತ್ತರಣೇ, ಶಕಟಾಂಗೇ ಚ (ನೀರನ್ನು ಈಸಿದಾಟು, ಬಿಡು)
೬೮೨. ಉೞಿಸು  – ಸಹನೇ (ಸಹಿಸು)
೬೮೩. ಎಸೆ – ಶೋಭಾಯಾಂ (ಶೋಭಿಸು)
೬೮೪. ಎಳಸು – ಇಚ್ಛಾಯಾಂ (ಇಚ್ಛಿಸು, ಬಯಸು)
೬೮೫. ಒರಸು – ಘರ್ಷಣೇ (ತಿಕ್ಕಾಡು)
೬೮೬. ಓಸೆ – ಪ್ರಸನ್ನತ್ವೇ (ಪ್ರಸನ್ನವಾಗು)
೬೮೭. ಕಯ್ವೀಸು – ರಣಾರಂಭ ಹಸ್ತಸೂಚನ ಯೋಃ (ಯುದ್ಧಾರಂಭವಾಗಲೆಂದು ಕೈಬೀಸಿ ಸೂಚನೆ ಕೊಡು)
೬೮೮. ಕಲಸು – ಸಮ್ಮಿಶ್ರೇ (ಮಿಶ್ರಮಾಡು)
೬೮೯. ಕಾಸು – ದಾಹೇ ವಿವಧೇಚ (ಬಿಸಿ ಮಾಡು)
೬೯೦. ಕಿಸಿ – ವಿಕಸನೇ (ಅರಳು, ಅಗಲ ಮಾಡು)
೬೯೧. ಕೀಸು – ಕೃಶೀಕರಣೇ, ಕರ್ಣಪತ್ರೇಚ (ಕೆತ್ತಿ ತೆಳ್ಳಗೆ ಮಾಡು, ಕಿವಿಯ ಒಂದು ಒಡವೆ)
೬೯೨. ಕುಸಿ – ಕ್ಷೀಣತ್ವೇ, ಕವಾಟಶಲಾಕಾಯಾಂ ಚ (ಕ್ಷೀಣಿಸು, ಬಾಗಿಲ ಸರಳು)
೬೯೩. ಕೊಸೆ – ನಿಧುವನಕರಣೇ, ವಾಹಾರೋಹಭೇದೇ ಚ (ಮೈಥುನಮಾಡು)
೬೯೪. ಕೋಸು – ಸೂತ್ರ ಪ್ರವೇಶೇ (ದಾರವನ್ನು ಪೋಣಿಸು)
೬೯೫. ತುಱಿಸು – ಕಂಡೂತಿಕರ್ಷಣೇ (ತಿಟೆಯಾಗು, ಕರೆದುಕೋ)
೬೯೬. ನಸಿ – ಜೀರ್ಣೇ (ಜೀರ್ಣಿಸು, ನಶಿಸು, ಅಳಿದು ಹೋಗು)
೬೯೭. ನೆಸೆ – ಉತ್ಪವನೇ (ಶುದ್ದೀಕರಿಸು)
೬೯೮. ಪಸು – ವಿಭಜನೇ ಜೀವಧನೇಚ (ವಿಭಾಗಿಸು, ದನಕರು)
೬೯೯. ಪಾಸು (ಹಾಸು) – ಆಸ್ತರಣ ಕ್ರಿಯಾಯಾಂ (ಹಾಸು)
೭೦೦. ಪೂಸು – ವಿಲೇಪನೇ, ಅಪಾನವಾಯೌ (ಲೇಪಿಸು, ಹೂಸು ಬಿಡು)
೭೦೧. ಪೂಸೆ – ರಜ್ಜು ಕ್ರಿಯಾಯಂ ಮಂಥದಂಡೇಚ (ಹಗ್ಗವನ್ನು ಹೊಸೆ, ಅಬದ್ಧವಾದುದನ್ನು ಹೇಳು)
೭೦೨. ಬಸಿ – ಗಲನೇ, ಶಾತದಡ ಮಧಯೋಃ (ಸೋರು, ಹರಿತವಾದ ಆಯುಧ)
೭೦೩. ಬಳಸು – ಭ್ರಮಣ ಕಂಚುಕಾಂಗಯೋಃ (ಒಂದು ಭಾಗ ಸುತ್ತು, ಯೋಧನು ಮೈಗೆ ಸುತ್ತಿಕೊಳ್ಳುವ ಕವಚ)
೭೦೪. ಬಾಸು – ಪುರಿಷೋತ್ಸರ್ಗೇ (ಮಲವಿಸರ್ಜನೆ ಮಾಡು)
೭೦೫. ಬಿಸು – ಲೋಹಸಂಧಾನೇ (ಲೋಹವನ್ನು ಜೋಡಿಸಿ ಬೇಸುಗೆ ಹಾಕು)
೭೦೬. ಬೀಸು – ಆವರ್ತನೇ (ಅಲುಗಾಡಿಸು, ತಿರುಗಿಸು)
೭೦೭. ಬೆರಸು – ಸಮ್ಮಿಶ್ರೇ (ಮಿಶ್ರಣ ಮಾಡು, ಕೂಡು)
೭೦೮. ಬೆಸೆ – ಗರ್ವೇ, ಕಾರ್ಪಾಸಚಾಪೇಚ (ಗರ್ವಿಸು, ಹತ್ತಿಯ ಬಡಿದು ವಿರಳೀಕರಿಸುವ ಬಿಲ್ಲು)
೭೦೯. ಮಱಸು – ಆಚ್ಛಾದನೇ (ಮುಸುಕು ಹಾಕು, ಮರೆಮಾಡು)
೭೧೦. ಮಸೆ – ಘರ್ಷಣೇ, ಸ್ವಲ್ಪಕ್ಷತೇಚ (ತಿಕ್ಕು)
೭೧೧. ಮಾಸು – ಮಲೀಮಸೇ, ಜರಾಯೌಚ (ಮಲಿನವಾಗು)
೭೧೨. ಮೂಸು – ಆಘ್ರಾಣೇ (ಮೂಸಿ ನೋಡು)
೭೧೩. ಮೊಗಸು – ಉದ್ಯೋಗಾರಂಭೆ (ತೊಡಗು)
೭೧೪. ಸಸಿ – ಸಸ್ಯಾದ್ಯುತ್ಫಾಟನೇ, ಸಸ್ನೇಚ (ಕಳೆಯನ್ನು ಕೀಳು, ಸಸ್ಯ)
೭೧೫. ಸೂಸು – ಪರಿತ್ಯಾಗೇ (ಪರಿತ್ಯಜಿಸು, ಸಿಂಪಡಿಸು)
೭೧೬. ಸೆಣಸು – ಈರ್ಷ್ಯಾಯಾಂ (ಹೊಟ್ಟೆಕಿಚ್ಚು ಪಡು)
೭೧೭. ಹಸಿ – ಕ್ಷುಧಾಯಾಂ (ಹಸಿಯಾಗು, ತೇವಾಂಶವಿರುವ ದ್ರವ್ಯ)
೭೧೮. ಹುಸಿ – ಅನೃತೇ (ಸುಳ್ಳಾಡು)
೭೧೯. ಹೂಸು – ಅಧೋವಾಯೌ (ಹೂಸು ಬಿಡು)
೭೨೦. ಹೇಸು – ಜುಗುಪ್ಪಾಯಾಂ (ಜುಗುಪ್ಸೆ ಪಡು)

೧೯. (ii) ಸಂಸ್ಕೃತ ಕೃದಂತೇ ಸ್ವಯಂ ಕರ್ತರಿ ಇಸು ಭವತಿ
೭೨೧. ಅಭಿನಯಿಸು – ಅನುಕರಣೇ (ನಟಿಸು, ಅನುಕರಿಸು)
೭೨೨. ಉದಾಹರಿಸು – ಕಥನೇ (ಕಥೆ ಹೇಳು, ಕಥಿಸು)

೭೨೩. ಕೀರ್ತಿಸು – ವರ್ಣನೇ (ವರ್ಣನೆ ಮಾಡು)
೭೨೪. ಕೋಪಿಸು – ಅಮರ್ಷೇ (ರೋಷ ತೋರು)
೭೨೫. ಗರ್ಜಿಸು – ಭಯಂಕರ ಧ್ವನೌ (ಭಯಂಕರವಾಗಿ ಧ್ವನಿ ಮಾಡು)
೭೨೬. ಗಮಿಸು – ಗಮಕತ್ವೇ (ನಡೆ)
೭೨೭. ಘೂರ್ಣೀಸು – ವಿಜೃಂಭಣೇ (ಸಡಗರಿಸು)
೭೨೮. ಚರಿಯಿಸು (ಚರಯಿಸು) – ಭ್ರಮಣೇ (ತಿರುಗಾಡು)
೭೨೯. ಚಿತ್ರಿಸು – ಚಿತ್ರವಿಲೇಖನೇ (ಚಿತ್ರಲೇಖಿಸು)
೭೩೦. ಜೀಂಕರಿಸು – ಪ್ರಶಂಸಾಯಾಂ (ಕೊಂಡಾಡು)
೭೩೧. ತರ್ಜಿಸು – ನಿವಾರಣೇ (ನಿವಾರಿಸು)
೭೩೨. ನಿಯಮಿಸು – ಆಜ್ಞಾಪನೇ (ಆಜ್ಞಾಪಿಸು)
೭೩೩. ನೀರಾಜಿಸು – ಆರಾತ್ರಿಕ ಕ್ರಿಯಾಯಾಂ (ಆರತಿ ಎತ್ತು)
೭೩೪. ಪಾಳಿಸು – ಸಂರಕ್ಷಣೇ (ಕಾಪಾಡು)
೭೩೫. ಪುಂಜಿಸು – ರಾಶೌ (ರಾಶಿಮಾಡು)
೭೩೬. ಪೂಜಿಸು – ಅರ್ಚನವಿಧೌ (ಪೂಜೆಮಾಡು)
೭೩೭. ಭದ್ರಿಸು – ಮುಂಡನ ಕ್ರಿಯಾಯಾಂ (ತಲೆಬೋಳಿಸು)
೭೩೮. ಭಂಗಿಸು, ಭಂಜಿಸು – ಅಪಮಾನೇ (ಅವಮಾನಿಸು)
೭೩೯. ಮಾಂಕರಿಸು – ಅವಜ್ಞಾಯಾಂ (ಮೀರು)
೭೪೦. ಮುದ್ರಿಸು – ಅಂಗೀಕರಣೇ (ಗುರುತನ್ನು ಒತ್ತು)
೭೪೧. ಮೇಳಿಸು – ಸಂಯೋಗೇ (ಕೂಡಿಸು)
೭೪೨. ಯೋಜಿಸು – ಅನುಮತೇ (ಅನುಮತಿಸು)
೭೪೩. ರಮಿಸು (ರಮಯಿಸು) – ಕ್ರೀಡಾಯಾಂ (ಸಂತೋಷಿಸು, ಆನಂದಪಡು)
೭೪೪. ರಕ್ಷಿಸು – ಪಾಲನೇ (ಕಾಪಾಡು)
೭೪೫. ರಂಜಿಸು – ಶೋಭಾಯಾಂ, ಕಾಗೇಚ (ಶೋಭಿಸು)
೭೪೬. ವರ್ಣಿಸು – ಸ್ತೋತ್ರೇ (ಸ್ತೋತ್ರ ಮಾಡು)
೭೪೭. ವರ್ತಿಸು – ವರ್ತನೇ (ಆಚರಿಸು)
೭೪೮. ವರಿಯಿಸು (ವರಯಿಸು) – ಸ್ವೀಕಾರೇ (ಸ್ವೀಕರಿಸು)
೭೪೯. ವಂಚಿಸು – ಅಪಲಾಪೇ (ನಿರಾಕರಿಸು, ಮೋಸಮಾಡು)
೭೫೦. ವಾಸಿಸು – ಆಘ್ರಾಣೇ (ಮೂಸು)
೭೫೧. ಶಾಸಿಸು – ಶಿಕ್ಷಾಯಾಂ (ನಿಯಂತ್ರಿಸು)
೭೫೨. ಶಿಕ್ಷಿಸು – ನಿಯಾಮೇ (ನಿಯಂತ್ರಿಸು)
೭೫೩. ಸಂಚಿಸು – ಸಂಗ್ರಹೇ (ಉಪಾಯಮಾಡು)
೭೫೪. ಸ್ಥಾಪಿಸು – ನ್ಯಾಸಕರಣೇ (ಇಡು)
೭೫೫. ಸೂತ್ರಿಸು – ಮಾನಸೂತ್ರ ಸ್ಥಾಪನೇ (ಅಳತೆಯ ದಾರವನ್ನು ಕಟ್ಟು)

೧೯. (iii) ಕರ್ಣಾಟೇ ಸ್ವಯಂ ಕೃರ್ತಕ ಹೇತು ಕೃರ್ತಕಯೋರಪಿ ಇಸುಭವತಿ
೭೫೬. ಅಕ್ಕುಳಿಸು – ನಿಮ್ಮಕುಕ್ಷಾ, ಭಯೇ ಚ (ಹೊಟ್ಟೆಯನ್ನು ಒಳಕ್ಕೆ ಎಳೆದುಕೋ, ಭಯದಿಂದ ಹಿಂಜರಿ)
೭೫೭. ಅಪ್ಪಳಿಸು – ಆಸ್ಫಾಲನೇ (ಬಾರಿಸು ಅಥವಾ ತಾಟಿಸು)
೭೫೮. ಅವಧರಿಸು ಅವಧಾರಿಸು – ಸ್ಮರಣೇ (ನೆನೆಪಿಸು, ಸ್ಮರಣೆ ಮಾಡು)
೭೫೯. ಆಲಿಸು – ಪರಿಭಾವನೇ, ಆಕರ್ಣನೇ ಚ (ಪರ‍್ಯಾಯ ಲೋಚಿಸು ಕಿವಿಯಿಂದ ಕೇಳು)
೭೬೦. ಉಬ್ಬರಿಸು – ಪೂರಣೇ (ಉಂಬು, ತುಂಬು)
೭೬೧. ಉಮ್ಮಳಿಸು – ಚಿಂತಾಯಾಂ (ಚಿಂತಿಸು)
೭೬೨. ಒತ್ತರಿಸು – ಉದ್ವೃತ್ತೌ (ದಭಾಯಿಸು)
೭೬೩. ಓಸರಿಸು – ಆಪಾದನೇ (ಇರಬೇಕಾದ ಸ್ಥಾನದಿಂದ ಸರಿ)
೭೬೪. ಕಡೆಗಣಿಸು – ಅವಜ್ಞಾಯಾಂ (ಅವಜ್ಞೆಮಾಡು)
೭೬೫. ಕದಕದಿಸು – ಸಂಚಲತ್ವೇ (ಅಲಗು, ಅಲ್ಲಾಡು)
೭೬೬. ಕನವರಿಸು – ನಿದ್ರಾವಿಕಾರೇ (ನಿದ್ರೆಯಲ್ಲಿ ವಿಕೃತವಾಗಿ ವರ್ತಿಸು)
೭೬೭. ಕಳವಳಿಸು – ಮನೋವೈಕಲ್ಯೇ (ಹುಚ್ಚನಂತೆ ವರ್ತಿಸು)
೭೬೮. ಕಿನಿಸು – ಕೋಪೇ (ಕೋಪಿಸು)
೭೬೯. ಕುರ್ಗಿಸು – ಸಂಕೋಚೇ (ಕುಗ್ಗಿಸು, ಸಂಕುಚಿತವಾಗು)
೭೭೦. ಕುಪ್ಪಳಿಸು – ರಾಶೌ (ಕುಪ್ಪೆಗುಪ್ಪೆ ಮಾಡು)
೭೭೧. ಕೊಕ್ಕರಿಸು – ಬೀಭತ್ಸನೇ (ಹೇಸಿಗೆಪಡು)
೭೭೨. ಗಬ್ಬರಿಸು – ಖನನೇ (ತೋಡು, ಅಗೆ)
೭೭೩. ಗುಡಿಸು (ಗುಡಿಯಿಸು) – ಪುಂಜೀಕರಣೇ (ಗುಡ್ಡೆಮಾಡು)
೭೭೪. ಗುಡುಗುಡಿಸು (ಗುಡಿಗುಡಿಸು) – ಕೋಪೋದ್ರೇಕೇ (ರೋಷಾನಿಷ್ಟನಾಗು)
೭೭೫. ಗೊಂದಣಿಸು – ಸಮೂಹೇ, ಬಾಹುಲ್ಯೇಚ (ಗುಂಪಾಗು, ಒಂದಕ್ಕೆ ನೂರಾಗಿ ಅಭಿವೃದ್ದಿಯಾಗು)
೭೭೬. ಚಾವಳಿಸು (ಚಾಳಿಸು) – ಚಾಪಲ್ಯೇ (ಚಂಚಲವಾಗು)
೭೭೭. ಚಿಮಿಚಿಮಿಸು – ಶಬ್ದೇ, ಲುಠನೇಚ (ಚಿಮುಚಿಮು ಶಬ್ದಮಾಡು, ಸಿಂಪಡಿಸು)
೭೭೮. ಚೆಕ್ಕರಿಸು (ಬೊಕ್ಕರಿಸು) – ಅಜಧ್ವನೌ (ಮೇಕೆಯಂತೆ ಧ್ವನಿಮಾಡು)
೭೭೯. ಜಕ್ಕುಳಿಸು – ನರ್ಮಕರಣೇ (ನಗಿಸು)
೭೮೦. ಜನಿಸು – ಧಾನೇ (ಧ್ಯಾನ ಮಾಡು)
೭೮೧. ಜಿನಿಗಿಸು (ಜಿನುಗಿಸು) – ನಷ್ಟ ಚೇಷ್ಟಾಯಾಂ (ಮೂರ್ಛೆ ಬೀಳು)
೭೮೨. ಟೆಬ್ಬರಿಸು – ಕುಂಠೀಕರಣೇ (ಕುಂಠಿತಗೊಳಿಸು)
೭೮೩. ತಡವರಿಸು – ಅನ್ವೇಷಣೇ (ಹುಡುಕು)
೭೮೪. ತವಿಸು – ಕ್ಷಯೇ (ನಾಶಪಡಿಸು)
೭೮೫. ತುಟ್ಟಿಸು – ಶಕ್ತಿಕ್ಷಯೇ (ನಿಶ್ಶಕ್ತವಾಗು, ಸುಸ್ತಾಗು)
೭೮೬. ದೊಮ್ಮಳಿಸು – ತಿರ್ಯಕ್ಸಮೂಹ ಸಂಭ್ರಮೇ (ನೂಕುನುಗ್ಗಾಗು)
೭೮೭. ದಂಬಿಸು – ಅನುಮೋದನೇ (ಒಪ್ಪಿಗೆ ನೀಡು)
೭೮೮. ನಿಕ್ಕುಳಿಸು – ವಿಲಾಸಾವನಮ್ರೇ (ವೈಯಾರದಿಂದ ಬಳುಕು)
೭೮೯. ನಿಗುಂಬಿಸು – ಸಂಕೀರ್ಣರಾಶೌ (ಬೆರಸಿರಾಶಿ ಮಾಡು)
೭೯೦. ನಿಟ್ಟಿಸು – ನಿರ್ಭರಾಲೋಕೇ (ಕಣ್ಣಾರೆ ನೋಡು)
೭೯೧. ಪುಚ್ಚೞಿಸು – ಲಯೇ (ಲಯವಾಗು)
೭೯೨. ಬಡಿಸು – ಓದನಕ್ರಿಯಾಯಾಂ (ಊಟಕ್ಕೆ ನೀಡು)
೭೯೩. ಬಿಕ್ಕಳಿಸು – ಉದ್ಗಾರೇ (ಗಂಟಲಿಂದ ಶಬ್ದಮಾಡು)
೭೯೪. ಬಿಚ್ಚಳಿಸು – ವಿಸ್ತಾರೇ (ವಿಸ್ತಾರವಾಗು)
೭೯೫. ಬಿತ್ತರಿಸು – ವಿಸ್ತಾರೇ (ವಿಸ್ತಾರಮಾಡು)
೭೯೬. ಬಿನ್ನವಿಸು – ವಿಜ್ಞಾಪನೇ (ಅರಿಕೆ ಮಾಡು)
೭೯೭. ಬೆಚ್ಚಳಿಸು, ಬೆಪ್ಪಳಿಸು, ಬೆಬ್ಬಳಿಸು – ವಿಮೋಹೇ (ಮೋಹಗೊಳ್ಳು)
೭೯೮. ಬೋಸರಿಸು – ಮಿಥ್ಯಾದರೇ (ಸುಳ್ಳು ಸುಳ್ಳೇ ಪ್ರೀತಿಸು)
೭೯೯. ಮಂದಯಿಸು – ಸಾಂದ್ರತ್ವೇ (ದಟ್ಟವಾಗು)
೮೦೦. ಮಾಲಿಸು – ತಟಾಕ್ಷ ದೀರ್ಘಾ ಲೋಕೇ ಚ (ದಿಟ್ಟಿಸಿನೋಡು)
೮೦೧. ಮುಕ್ಕುಳಿಸು – ಗಂಡೂಷೇ (ಬಾಯಲ್ಲಿ ನೀರನ್ನು ಜಗ್ಗುಲಿಸು)
೮೦೨. ಸಮನಿಸು – ಪ್ರಾಪ್ತೌ (ಸಿದ್ಧವಾಗು, ಅಣಿಯಾಗು)
೮೦೩. ಸಂದಣಿಸು – ಸಮೂಹೇ (ಗುಂಪಾಗು)
೮೦೪. ಸಂಧಿಸು – ಸಂಧಾನೇ (ಪರಸ್ಪರ ಕೂಡು)
೮೦೫. ಸೈರಿಸು – ಸಹನೇ, ಕ್ಷಮತ್ವೇ (ಸಹಿಸು)
೮೦೬. ಸೊಗಯಿಸು – ಶೋಭಾಯಾಂ (ಶೋಭಿಸು)
೮೦೭. ಸೋಲಿಸು – ಅಪಜಯೇ (ಸೋಲುವಂತೆ ಮಾಡು)
೮೦೮. ಹನಿಸು – ರಸದಾನೇ (ದ್ರವ ಪ್ರದಾರ್ಥದಂತೆ ಹನಿಹನಿಯಾಗಿ ಬಿಡು ಅಥವಾ ಕೊಡು)