. ಡಾಂತಕ್ಕೆ
೨೬೪. ಅಡು – ಪಚನೇ (ಬೇಯಿಸು, ಅಡಿಗೆ ಮಾಡು)
೨೬೫. ಅಡೆ – ಅಂಗುಲಿ ಪ್ರಹರಣೇ ಪಂಚಕಾರುಕ ಕರ್ಮದಾರೌ ಚ (ಬೆರಳಿನಿಂದ ಹೊಡೆ)
೨೬೬. ಅಲ್ಲಾಡು – ಸಂಚಲನೇ (ಅಲುಗಾಡು)
೨೬೭. ಅೞ್ಕಜಂಜಡು – ಅಸೂಯಾಯಾಂ (ಮತ್ಸರ ಮಾಡು)
೨೬೮. ಅೞ್ಕಾಡು – ನಿರವಶೇಷೇ (ನಾಶಗೊಳಿಸು)
೨೬೯. ಆಡು – ನರ್ತನೆ, ಆಜೇ ಚ (ನರ್ತಿಸು, ಕುಣಿ)
೨೭೦. ಆಸೆವಡು – ಈಪ್ಸಾಯಾಂ (ಬಯಸು)
೨೭೧. ಇಡಿ – ಚೂರ್ಣೇ, ಸಂಕೀರ್ಣೇಚ (ನಿಬಿಡವಾಗು)
೨೭೨. ಇಡು – ಕರವಿಮೋಚನೇ (ಎಸೆ, ದೂರಬಿಸಾಡು)
೨೭೩. ಈಡಾಡು  – ಪ್ರಮಾದತ್ಯಜನೇ (ಆವೇಶದಿಂದ ಕಿತ್ತುಒಗೆ)
೨೭೪. ಈಸಾಡು – ಜಲೋತ್ತರಣೇ (ನೀರಿನಲ್ಲಿ ಚಲಿಸು, ಈಜು)
೨೭೫. ಉಡಿ – ಮೋಟನೇ, ರೋಗಭೇದೇಚ (ಮುರಿ, ತುಂಡಾಗು, ರೋಗದ ಒಂದು ಪ್ರಭೇದ)
೨೭೬. ಉಡು – ವಸ್ತ್ರಪ್ರವೇಷ್ಣನೇ ಮೃಗ ವಿತೇಷೇ ಚ (ಬಟ್ಟೆ ಧರಿಸು, ತೊಡು)
೨೭೭. ಉಬ್ಬಸಂಬಡು – ಉಚ್ವಾಸ ನಿಗ್ರಹೇ (ಗರ್ವಿಸು)
೨೭೮. ಊಡು – ಭೋಜನಕ್ರಿಯಾಯಾಂ ಆಧಾರೇ ಚ (ಊಟ ಮಾಡು, ತಿನ್ನು)
೨೭೯. ಊಳಿಡು – ಶ್ವಾನಜಂಬುಕಧ್ವನೌ (ನಾಯಿಯಂತೆ ಗಟ್ಟಿಯಾಗಿ ಕೂಗು)
೨೮೦. ಏಸಾಡು – ಶರಗತೌ (ಬಾಣಪ್ರಯೋಗ ಮಾಡು)
೨೮೧. ಒಡ್ಡು – ಪ್ರತೀಕಾರೇ, ವ್ಯೂಹೇಚ (ಪ್ರತಿಭಟಿಸು)
೨೮೨. ಒಡೆ – ಸ್ಪೋಟನೇ, ಭಿನ್ನ ದ್ರವ್ಯೇಚ (ಸೀಳು, ಭಿನ್ನವಾಗು)
೨೮೩. ಒಡಂಬಡು – ಅಭ್ಯುಪಗಮೇ (ಒಡಂಬಡಿಯಾಗು)
೨೮೪. ಓಡು – ಪಲಾಯನೇ, ಭಾಂಡ ಶಕಲೇಚ (ವೇಗವಾಗಿ ಹೋಗು, ಪಲಾಯ ಮಾಡು)
೨೮೫. ಓಲಾಡು – ಜಲಖೇಲನೇ (ನೀರಿನಲ್ಲಿ ಚಲಿಸು)
೨೮೬. ಔಡು (ಅವುಡು) – ದಂತಚರ್ವಣೇ (ಹಲ್ಲಿನಿಂದ ಕಚ್ಚು)
೨೮೭. ಕಟ್ಟುಕಡೆ – ಮನೋನಿರೋಧೇ (ಮನಸ್ಸನ್ನು ನಿಗ್ರಹಿಸು)
೨೮೮. ಕಡಿ – ಖಂಡನೇ, ಶಕಲೇ ಚ (ಸೀಳು, ತುಂಡರಿಸು)
೨೮೯. ಕಡೆ – ಮಥನೇ ಅವಸಾನೇ ಚ (ಹಾಲು, ಮೊಸರು ಮೊದಲಾದವುಗಳನ್ನು ಕಡಗೋಲಿನಿಂದ ಮಥಿಸು)
೨೯೦. ಕಂಡು – ಕಲುಷೇ (ಕಲಸು)
೨೯೧. ಕರುವಿಡು – ಲೇಪ್ಯಕರ್ಮಣಿ (ಲಕ್ಷ್ಯವಿಡು)
೨೯೨. ಕದಡು – ಕಲುಷೇ (ಕಲಸು)
೨೯೩. ಕಾಡು – ಅವಹೇಳನೇ ಅರಣ್ಯೇಚ (ಅವಹೇಳನ ಮಾಡು)
೨೯೪. ಕಾಪಿಡು – ಸಂರಕ್ಷಣೇ (ರಕ್ಷಿಸು)
೨೯೫. ಕಿಡು – ವಿನಾಶೇ (ಕೇಡುಮಾಡು, ನಾಶಮಾಡು)
೨೯೬. ಕುಡಿ – ಪಾನೇ, ವಲ್ಲ್ಯಗ್ರೇಚ (ಸೇವಿಸು)
೨೯೭. ಕುಡು – ಪ್ರದಾನೇ, ವಕ್ರೇಚ (ಅನುಮತಿ ಕೊಡು)
೨೯೮. ಕೂಗಿಡು – ಉಚ್ಚೈರ್ಧ್ವನೌ (ಅರಚು)
೨೯೯. ಕೂಡು – ಸಂಮೇಲನೇ (ಒಂದಾಗು, ಸೇರು)
೩೦೦. ಕೆಡೆ – ಪತನೇ (ಬೀಳು)
೩೦೧. ಕೊಱಚಾಡು – ಮರ್ಮೋದ್ಧಾಟನ ವಚನೇ (ಅಣಕಮಾಡು, ಬೈಯು)
೩೦೨. ಕೊಂಡಾಡು – ಅತ್ಯಾದರೇತಿ (ಹೊಗಳು, ಸ್ತುತಿಸು)
೩೦೩. ಕೋಡು – ಶೈತ್ಯೇ, ಭಯೇ, ಶೃಂಗೇ ಚ (ತಣ್ಣಗಾಗು)
೩೦೪. ಕೈಮಾಡು – ಶಸ್ತ್ರ ಸಂಚಾಲನೇ ವ್ಯವಹಾರಮಲ್ಯೇ, ಸಂಕೇತನೇ ಚ (ಆಯುಧ ಅಲ್ಲಾಡಿಸು, ವ್ಯವಹರಿಸು)
೩೦೫. ಗಿಡಿ – ಕಬಳ ಪ್ರವೇಶೇ (ಒತ್ತಿ ತುಂಬು)
೩೦೬. ಗೋೞಿಡು – ಆಕ್ರೋಶಧನೌ (ಆಕ್ರೋಶದಿಂದ ಕೂಗು, ದುಃಖಿಸು)
೩೦೭. ಚಿವುಡು – ನಖಚ್ಛೇದೇ (ಉಗುರಿನಿಂದ ಕೀಳು)
೩೦೮. ಜಡಿ – ತರ್ಜನೆ, ಅಲ್ಪವೃಷ್ಟೌಚ (ಬೆದರಿಸು)
೩೦೯. ಜೇವೊಡೆ – ಶಿಂಜಿನೀ ಪ್ರಹರಣೇ (ಆಯುಧವನ್ನು ಪ್ರಹರಿಸು)
೩೧೦. ತಡೆಮಾಡು, ತಡಂಮಾಡು – ವಿಪರ್ಯಾಸೇ (ವಿಳಂಬ ಮಾಡು)
೩೧೧. ತಡ – ಕಾಲಕ್ಷೇಪೇ (ಬಿಡುವು)
೩೧೨. ತಲೆಮಡು – ಶಿಲಸ್ಸಂಧಾನೇ (ಕ್ಷೌರ ಮಾಡು)
೩೧೩. ತಿಟ್ಟವಿಡು – ಚಿತ್ರಪ್ರಾರಂಭೇ (ಪುತ್ಥಳಿ ಮಾಡು)
೩೧೪. ತೀಡು – ಗತಿಸ್ಪರ್ಶನೆ (ಸ್ಪರ್ಶಿಸು)
೩೧೫. ತುಡು – ಶರಸಂಧಾನೇ, ಭೂಷಣಧಾರಣೇ ಚ (ಬಾಣ ಪ್ರಯೋಗಿಸು, ಯುದ್ಧಕ್ಕೆ ಸಿದ್ಧನಾಗು)
೩೧೬. ತೊಡೆ – ಸಂಮಾರ್ಜನೇ, ಅಂಕೇಚ (ಲೇಪಿಸು, ಬಳಿ)
೩೧೭. ತೋಡು – ನಿಷ್ಕ್ರಮಣೇ ಯಗ್ಮೇಚ (ಹೊರತೆಗೆ, ಹೊರಕ್ಕೆ ಹೋಗು)
೩೧೮. ದಾೞಿಡು – ದೂರಧಾವನೇ (ಮುತ್ತಿಗೆ ಹಾಕು)
೩೧೯. ನಡು – ಸಂಸ್ಥಾಪನೇ, ಮಧ್ಯೇಚ (ಕಲ್ಲು, ಕಂಬ ಮೊದಲಾದವುಗಳನ್ನು ಹೂಳು)
೩೨೦. ನಡೆ – ಗಮನೇ (ಲಕ್ಷಿಸು, ಮುಂದೆಸಾಗು)
೩೨೧. ನೀಡು – ಪ್ರಸಾರಣೇ (ಚಾಚು, ಒಡ್ಡು)
೩೨೨. ನುಡಿ – ವಚನೇ (ಮಾತನಾಡು)
೩೨೩. ನೇರ್ಪಡು – ಸಂಶ್ಲೇಷೇ (ಸಂಶ್ಲೇಷಿಸು)
೩೨೪. ನೋಡು – ಪ್ರೇಕ್ಷಣೇ (ಕಾಣು)
೩೨೫. ಪಡಲಿಡು – ವಿಕೀರ್ಣಪತನೇ (ಅಸ್ತವ್ಯಸ್ತವಾಗಿ ಚೆದರಿ ಬೀಳು)
೩೨೬. ಪಡು – ಮರಣೇ, ಶಯನೇಣೇ ಚ (ಸಾಯು, ಮಲಗು)
೩೨೭. ಪಡೆ – ಉಪಾರ್ಜನೇ, ಬಲೇಚ (ಸಂಪಾದಿಸು)
೩೨೮. ಪಾಡು – ಗಾನೇ (ಗಾಯನಮಾಡು)
೩೨೯. ಪಿಡಿ – ಗ್ರಹಣೇ, ಕರಿಣ್ಯಾಂಚ   (ಹಿಡಿದುಕೊಳ್ಳು)
೩೩೦. ಪೊಡಮಡು – ನಮಸ್ಕಾರೇ   (ನಮಸ್ಕರಿಸು)
೩೩೧. ಪೊಡೆ – ಪ್ರಹರಣೇ, ಕರೀಷೇ, ಪಂಚಕಾರುಕ ಕರ್ಣದಾ ರೌಕಾ, ಕುಕ್ಷಾಚ (ಹೊಡೆ)
೩೩೨. ಬಡಿ – ತಾಡನೇ, ಸ್ವಲ್ಪದಂಡೇಚ (ಹೊಡೆ, ತಾಗು)
೩೩೩. ಬಾಡು – ಮ್ಲಾನೇ, ಮಾಂಸೇ ಶಾಕೆ ಚ (ಒಣಗು)
೩೩೪. ಬಾಯ್ಮಾಡು – ಪ್ರತಿಜ್ಞಾಯಂ (ಪ್ರತಿಜ್ಞೆ ಕೈಕೊಳ್ಳು)
೩೩೫. ಬಾಯ್ವಿಡು – ದೈನ್ಯೇ (ವಿನಂತಿಸು)
೩೩೬. ಬಿಡು – ವಿಮೋಚನೇ (ತೊರೆ, ತ್ಯಜಿಸು)
೩೩೭. ಬಿಸಾಡು, ಬಿಸುಡು, ಈಡಾಡು – ಪ್ರಮಾದ ತ್ಯಜನೇ (ಎಸೆ, ತ್ಯಜಿಸು)
೩೩೮. ಬೀಸಾಡು – ಕರವಿಮೋಚನೇ (ಬಂಧಮುಕ್ತಗೊಳಿಸು)
೩೩೯. ಬೆಕ್ಕಸಂಬಡ – ವಿಸ್ಮಯೇ (ಆಶ್ಚರ್ಯವಾಗು)
೩೪೦. ಬೇಡು – ಯಾಚ್ಞಾಯಾಂ, ಶಬರ ಸಮೂಹೇಚ
೩೪೧. ಬೇರ್ಪಡು – ವಿವಿಕ್ತೇ, ವಿವರೇ ಚ (ಬಯಸು)
೩೪೨. ಮಡಿ – ಮರಣೇ, ಧೌತವಸ್ತ್ರೇಚ (ಸಾಯು)
೩೪೩. ಮಡು – ದೃಢಸಂಧಾನೇ, ಅಗಾಧ ಜಲೇಚ (ಹೊಂದಿಸು, ಜೋಡಿಸು)
೩೪೪. ಮಾಡು – ಕರಣೇ, ಕುಡ್ಯವಿಶೇಷೇ ಚ (ಕೆಲಸವನ್ನು ನಿರ್ವಹಿಸು, ರಚಿಸು)
೩೪೫. ಮಿಡಿ – ಅಂಗುಲಿ ಪ್ರಹಣೇ ಶಲಾಟು ಫಲೇ ಚ (ಬೆರಳಿನಿಂದ ಚಿಮ್ಮು, ಹೊಡೆ)
೩೪೬. ಮುಡಿ – ಕೇಶಬಂಧನೇ, ನಿರ್ವಹಣೇ ಚ (ಹೂ ಮುಂತಾದವುಗಳನ್ನು ತಲೆಯಲ್ಲಿ ಧರಿಸು)
೩೪೭. ಮುದುಡು – ಸಂಕೋಚನೇ (ಕುಗ್ಗು)
೩೪೮. ಮುಂಬಿಡು – ಪುರೋವಗಮನೇ (ಮುಂದೆ ಸಾಗು)
೩೪೯. ಮೂಗುವಡು – ಮನೇ (ಶಾಂತವಾಗಿರಿಸು)
೩೫೦. ಮೂಡು – ಉತ್ಪತ್ತೌ (ಹುಟ್ಟು, ಉತ್ಪತ್ತಿಯಾಗು)
೩೫೧. ಮೆಯ್ವಿಡು – ನಿಶ್ಯಂಕತಾಯಾಂ (ಕೃಶವಾಗು)
೩೫೨. ಮೊಗಂಬಡೆ – ಅನುನಯನೇ (ವಿಕಾರವಾಗು)
೩೫೩. ರೂಪಿಡು – ಕ್ರೋಧನಿರ್ದೇಶೇ (ಕೋಪವನ್ನು ತೋರಿಸು)
೩೫೪. ಱಡಾಡು – ವಿಕೃತಾಂಗಾಪ ಹಸನೇ (ಹೀಯಾಳಿಸು)
೩೫೫. ಸಿಡಿ – ವಿಕೀರ್ಣೇ ಸೂಕ್ಷ್ಮಾಯಸ ದಾಹಾಂತಗಜ ಕ್ರೋಧವಸ್ತು ನೋ (ಚಿಮ್ಮು, ಹಾರು)
೩೫೬. ಸುಡು – ದಾಹೇ, ಭೂಷಣಾವರಣೇ ಚ  (ಸುಟ್ಟುಹಾಕು, ಬೇಯಿಸು)
೩೫೭. ಸೂಡು – ಪುಷ್ಪಧಾರಣೇ, ತೃಣಾದಿ ಪೂರಣೇ ಚ (ಹೂ ಮುಂತಾದವುಗಳನ್ನು ಮುಡಿ)
೩೫೮. ಸೆಡು – ವಸ್ತ್ರಸ್ಯೂತೇ (ಪೋಣಿಸು)
೩೫೯. ಸೆಡೆ – ಅಸ್ಥೌಲ್ಯೇ, ರಸಧಾನ್ಯಾ ಕರ್ಷಣ ಪಾತ್ರೇ ಚ (ದಪ್ಪಗಾಗು)
೩೬೦. ಹರಡು – ಅಂಗುಲಿಖನನೇ, ಪ್ರಸಾರಣೇ, ಗುಲ್ಚೇಚ (ಬೆರಳಿನಿಂದ ಚಿಮ್ಮು)
೩೬೧. ಹಿಂಡು – ಮುಷ್ಪಿನಿಷ್ಪೀಡನೇ (ಹಿಸುಕು)
೩೬೨. ಹೂಡು – ಯೋಜನೇ (ಆರಂಭಿಸು, ತೊಡಗಿಸು)
೩೬೩. ಹೊರಡು – ಪರಿಲುಠನೇ (ಹೊರಟು, ಉರುಳಾಡು)
೩೬೪. ಹೊಲಗಿಡು – ದಿಗ್ಭ್ರಮಣೇ (ದಿಗ್ಭ್ರಮೆಯಾಗು)
೩೬೫. ಹೋಗಾಡು – ಪ್ರಮಾದತ್ಯಜನೇ (ನೆರೆ, ಕೂಡು)

. ಣಾಂತಕ್ಕೆ
೩೬೬. ಆಣಿ – ಸಂಸ್ಪರ್ಶನೇ (ಸ್ಪರ್ಶಿಸು)
೩೬೭. ಅಣೆ – ಅಂಗುಲಿ ಪ್ರಹರಣೇ, ಜಲ ಪ್ರತಿಬಂಧನೇ ಚ (ಬೆರಳಿನಿಂದ ಚಿಮ್ಮು, ನೀರಿಗೆ ಹಾಕಿದ ಅಡ್ಡಗಟ್ಟೆ)
೩೬೮. ಉಣ್ – ಭೋಜನೇ (ಊಟಮಾಡು)
೩೬೯. ಕಾಣ್ – ದರ್ಶನೇ (ದರ್ಶನಮಾಡು)
೩೭೦. ಕುಣಿ – ನರ್ತನೇ (ನರ್ತಿಸು)
೩೭೧. ಟೊಣೆ – ಶಠಾರ್ಥೇ (ಠಕ್ಕಿಸು)
೩೭೨. ತಣಿ – ತೃಪ್ತೌ (ತೃಪ್ತಿಪಡು)
೩೭೩. ತಿಣಿ – ಸಂಕೀರ್ಣೇ (ಸಾಂದ್ರವಾಗು)
೩೭೪. ನೊಣೆ – ಗಿಲನೇ (ಇಡಿಯಾಗಿ ನುಂಗು)
೩೭೫. ಪಣ್ – ಸಜ್ಜೀಕರಣೇ, ಫಲೇಚ (ಸಜ್ಜುಗೊಳಿಸು, ಹಣ್ಣು)
೩೭೬. ಪೂಣ್ – ಪ್ರತಿಜ್ಞಾಯಾಂ (ಪ್ರತಿಜ್ಞೆಮಾಡು)
೩೭೭. ಪೆಣೆ – ಮಿಶ್ರಬಂಧನೇ, ಸಂಯೋಗೇಚ (ಒಂದರಲ್ಲೊಂದು ಸೇರಿಸಿಕಟ್ಟು)
೩೭೮. ಮಣಿ – ನಮನೇ, ಭಯರತ್ನಯೋ (ಬಾಗು, ಭಯಪಡು)
೩೭೯. ಮಾಣ್ – ನಿವಾರಣೇ (ನಿವಾರಿಸಿ ಬಿಡು)
೩೮೦. ಸೆಣೆ – ಕ್ರೋಧೇ (ರೇಗಾಡು)
೩೮೧. ಸೊಣೆ – ಅಂಗುಲಿ ಪ್ರಹರಣೇ (ಬೆರಳಿನಿಂದ ಮಿಡಿ)

ತಾಂತಕ್ಕೆ
೩೮೨. ಒತ್ತು – ಆಕ್ರಮಣೇ, ನದೀತೀರೇಚ (ಆಕ್ರಮಿಸು, ನದಿಯದಂಡೆ)
೩೮೩. ಕುತ್ತು – ಘಾತನೇ (ತಿವಿ)
೩೮೪. ಕೆತ್ತು – ತನೂಕರಣೇ, ಸ್ಪಂದನೇಚ (ಅಲುಗು, ಅದಿರು)
೩೮೫. ತುತ್ತು – ಕಬಲನೇ (ನುಂಗು)
೩೮೬. ತೇ – ಅಪಸರಣೇ, ಘರ್ಷಣೇಚ (ತೊಲಗು, ಉಜ್ಜು)
೩೮೭. ತೋ – ಆರ್ದ್ರಕರಣೇ (ವದ್ದೆಮಾಡು)
೩೮೮. ಪತ್ತು – ಸಂಶ್ಲೇಷೇ, ಕಲಹ ಸಂಖ್ಯಯೋ (ಅಂಟಿಕೋ, ಜಗಳ)
೩೮೯. ಪೊತ್ತು – ಅಗ್ನಿ ಪಟೂಕರಣೇ, ಅತಿ ಪಕ್ವಾನ್ನೇಚ (ಅಗ್ನಿಯಂತೆ ಜ್ವಲಿಸು, ಅನ್ನದಂತೆ ಸೀದುಹೋಗು)
೩೯೦. ಬತ್ತು – ನಿರ್ದ್ರವೇ (ಒಣಗು)
೩೯೧. ಬಿತ್ತು – ಬೀಜಸ್ಥಾಪನೇ, ಬೀಜೇ ಚ (ಬಿತ್ತನೆಮಾಡು, ಬೀಜ)
೩೯೨. ಮುತ್ತು – ನಿರೋಧಾವರಣೇ, ಮಕ್ತಿಕೇ ಚ (ಮುತ್ತಿಗೆ ಹಾಕು, ಮುತ್ತಿನಮಣಿ)
೩೯೩. ಸುತ್ತು – ವೇಷ್ಟನೇ (ಸುತ್ತವರಿ)

೧೦. ದಾಂತಕ್ಕೆ
೩೯೪. ಅೞ್ದು – ಜಲನಿಮಗ್ನೇ (ನೀರಲ್ಲಿ ಮುಳುಗಿಸು)
೩೯೫. ಉರ್ದು – ಸಂನಿಘೃಷ್ಟೇ, ಮಾಷೇಚ (ಚಪ್ಪಟೆ ಮಾಡು)
೩೯೬. ಊದು – ಶ್ವಾಸ ಪ್ರಸರಣೇ (ಉಸಿರನ್ನು ಹರಡು)
೩೯೭. ಒದೆ – ಪಾದ ಪ್ರಹರಣೇ (ಕಾಲಿನಿಂದ ಪ್ರಹರಿಸು)
೩೯೮. ಒಂದು – ಸಂಮೇಲನೇ, ಸಂಖ್ಯಾಯಾಂ ಚ (ಒಂದುಗೂಡು, ಒಂದು ಎಂಬ ಸಂಖ್ಯಾವಾಚಕ)
೩೯೯. ಓದು – ಪಠನೇ (ಪಠಿಸು, ಅಭ್ಯಾಸ ಮಾಡು)
೪೦೦. ಕಂದು – ಗತಕಾಂತೌ, ಪೇಷಣಾಗ್ರ, ಶಿಲಾಯಾಂ ಚ (ಕಳೆಗುಂದು)
೪೦೧. ಕಾದು – ಯುದ್ದೇ  (ಹೋರಾಡು)
೪೦೨. ಕುದಿ – ಸಂತಾಪೇ (ಮರುಗು, ದುಃಖಪಡು)
೪೦೩. ಕುಂದು – ಕ್ಷಯೇ, ಪಶುರೋಗೇಚ (ಕ್ಷಯಿಸು, ಒಂದು ಬಗೆಯ ಪಶುವ್ಯಾಧಿ)
೪೦೪. ಗುದಿ – ಪಾದಬಂಧೇ (ಕಾಲನ್ನು ಒಂದರ ಮೇಲೊಂದಿಟ್ಟು ಕಟ್ಟು, ಗುದುಮುರಿಗೆ ಹಾಕು)
೪೦೫. ಗುರ್ದು – ಮುಷ್ಟಿ ತಾಡನೇ (ಮುಷ್ಟಿಯಿಂದ ಘಾತಿಸು)
೪೦೬. ತದೆ – ತಾಂಡನೇ (ಹೊಡೆ)
೪೦೭. ತಾಳ್ದು – ಧಾರಣೇ (ಪಡೆ ಅಥವಾ ಹೊಂದು)
೪೦೮. ತಿರ್ದು – ಋಜೂಕರಣೇ (ನೆಟ್ಟಗೆ ಮಾಡು, ಸರಿಪಡಿಸು)
೪೦೯. ತೆಮ್ಮಳ್ದು – ಚಯನೇ (ಒಟ್ಟುಗೂಡಿಸು)
೪೧೦. ನಂದು – ವಿನಾಶೇ, ಗತತೇಜಸಿ ಚ (ದೀಪದಂತೆ ಆರು)
೪೧೧. ನಾಂದು – ದ್ರವಕರಣೇ (ನೆನೆಸು)
೪೧೨. ನೋಳ್ದು – ಅತಿಕ್ರಮಣೇ (ಅತಿಕ್ರಮಣ ಮಾಡು)
೪೧೩. ಪದೆ – ಈಪ್ಸಾಯಾಂ (ಬಯಸು)
೪೧೪. ಪುದಿ (ಹುದಿ) – ಆಚ್ಛಾದನೇ, ದ್ವಾರಪಾರ್ಶ್ಚೇಚ (ಮುಚ್ಚು)
೪೧೫. ಪೊರ್ದು – ಸಮೀಪೇ (ಸಮೀಪಿಸು)
೪೧೬. ಬರ್ದು – ಮರಣೇ (ಸಾಯಿ)
೪೧೭. ಮಾಂದು  – ಪ್ರತಿಷೇಧೇ (ತಡೆ, ನಿರೋಧಿಸು)
೪೧೮. ಮಿದಿ – ಮುಸಲಕ್ರಿಯಾಯಾಂ ಘಾತಮರ್ದನಯೋಃ (ಒಣಕೆಯಿಂದ ಕುಟ್ಟು, ಘಾತಿಸು)
೪೧೯. ಮುದು – ವೃದ್ಧೌ (ಮುದಿಯಾಗು)
೪೨೦. ಮುಂದು – ಪುರಸ್ಸರಣೇ, ಆಗ್ರೇಚ (ಮುಂದೆ ಹೋಗು, ಮುಂಭಾಗ)
೪೨೧. ಮೊದೆ – ಮುಂಜತೃಣೇ (ಹುಲ್ಲಿನಿಂದ ಹೆಣಿಗೆ ಕೆಲಸಮಾಡು)
೪೨೨. ಮೋದು – ತಾಡನೇ (ಹೊಡೆ)
೪೨೩. ಸದೆ – ಈಷಚ್ಚೂರ್ಣೇ (ತದಿ ಮಾಡು)
೪೨೪. ಸುಂದು – ಮೈಥುನೇ, ಶಯನೇ ಚ (ಮೈತುನ ಮಾಡು, ಮಲಗು)
೪೨೫. ಸೇಂದು – ಜಲನಿಷ್ಕ್ರಮಣೇ (ಬಾವಿಯಿಂದ ನೀರನ್ನು ಮೇಲೆತ್ತು)
೪೨೬. ಹದಿ – ಖನನ ವಿವರಣೇ (ಅಗೆ)
೪೨೭. ಹೊದೆ – ಆಚ್ಛಾದನೇ, ಶರಕೋಶೇ ಚ (ಮುಸುಕು, ಬಾಣದ ಕಟ್ಟು)
೪೨೮. ಹೊಂದು – ಮರಣೇ (ಸಾಯಿ)

೧೧.ನಾಂತಕ್ಕೆ
೪೨೯. ಆನ್ – ಧಾರಣೇ (ನಿರ್ವಹಿಸು)
೪೩೦. ಈನ್ – ತಿರ್ಯಕ್ಪ್ರಸವೇ (ಪ್ರಾಣಿಗಳಂತೆ ಮರಿಹಾಕು)
೪೩೧. ಎನ್ – ಭಾಷಣೇ (ಮಾತನಾಡು, ಹೇಳು)
೪೩೨. ಒನೆ – ಶೂರ್ಪಕರಣೇ (ಮೊರದಿಂದ ಕೇರು)
೪೩೩. ಕುನಿ – ಆ ಕುಂಚನೇ, ವಕ್ರಭೂಮಚ   (ಬಗ್ಗು, ಏರು ತೆಗ್ಗಿನ ನೆಲ)
೪೩೪. ಕೂನ್ – ಆನಮ್ನೇ (ಬಾಗು)
೪೩೫. ಕೊನೆ – ಸ್ವೀಕೃತಾರ್ಥವರ್ಧನೇ, ಅಗ್ರೇಚ (ತೃಪ್ತಿಪಡು, ಬೀಗು)
೪೩೬. ತಿನ್ – ಖಾದನೇ (ತಿನ್ನು, ಭಕ್ಷಿಸು)
೪೩೭. ತೊನೆ – ಆಂದೋಲನೇ (ತೂಗಾಡು)
೪೩೮. ನಾನ್ – ಆರ್ದ್ರಭಾವೇ, ಪುಷ್ಪಕುಟ್ಮಲೇ ಚ (ವದ್ದೆಯಾಗು, ಗಿಡಬಳ್ಳಿಯಂತೆ ಮೊಗ್ಗುಬಿಡು)
೪೩೯. ನಾನ್ – ಆರ್ದ್ರಭಾವೇ (ವದ್ದೆಯಾಗು ಅಥವಾ ನೆನೆ)
೪೪೦. ನೆನೆ – ಸ್ಮರಣೇ (ಸ್ಮರಿಸು)
೪೪೧. ನೋ – ವ್ಯಥನೇ (ವ್ಯಥೆಪಡು)
೪೪೨. ನೋನ್ – ವ್ರತಾಚರಣೇ (ವೃತಮಾಡು)
೪೪೩. ಪೇನ್ – ಯೂಕಸಮೃದ್ಧೌ (ತಲೆಯಲ್ಲಿ ಹೇನಾಗು)
೪೪೪. ಬಾನ್ – ಕುಲಾಲಕರಣೇ, ಆಕಾಶ ಗೋಮಯ ಪಿಂಡಪುಂಜ ಯೋಃ (ಮಡಕೆಮಾಡು)
೪೪೫. ಮುನಿ – ಕ್ರೋಧೇ, ತಪಸ್ವಿನಿ ಚ (ಕೋಪಿಸು, ಮುನಿ)
೪೪೬. ಸೀನ್ – ಕ್ಷುತಕರಣೇ (ಸೀನು)
೪೪೭. ಹನಿ – ಬಿಂದುಪತನೇ (ಹನಿಹನಿಯಾಗಿ ಬೀಳು)

೧೨. ಪಾಂತಕ್ಕೆ
೪೪೮. ಅಪ್ಪು – ಆಲಿಂಗನೇ ಉದಕೇಚ (ತಬ್ಬು)
೪೪೯. ಅಳಿಪು – ಲೋಲತ್ವೇ (ಅಳಸಿಹಾಕು, ನಾಶಪಡಿಸು)
೪೫೦. ಇೞಿಪು – ಅಧಃಸ್ಥಾನನಯನೇ (ಕೆಳಗಿಳಿಸು)
೪೫೧. ಉರಿಪು – ಅಗ್ನಿಬಾಧೇ (ಬೆಂಕಿಯಂತೆ ಉರಿಸು)
೪೫೨. ಉೞಪು – ಶೇಷಕರಣೇ (ಮಿಗಿಸು)
೪೫೩. ಒಪ್ಪು-ಸೌಂದರ್ಯೇ, ಅಂಗೀಕಾರೇಚ (ಸುಂದರವಾಗಿ ಕಾಣು)
೪೫೪. ಕಪ್ಪು – ಖನನೇ (ಅಗತಮಾಡು)
೪೫೫. ಕಳಿಪು – ಆನುಗಮನೇ (ಕಳಿಸಿಕೊಡು)
೪೫೬. ಕುಪ್ಪು – ಪುಂಜೀಕರಣೇ, ರೋಗಭೇದೇ ಚ (ಕುಪ್ಪೆಮಾಡು, ಕುಪ್ಪು ಎಂಬುದೊಂದು ರೋಗ)
೪೫೭. ಕೆಡಪು – ಪತನೇ (ನಾಶಪಡಿಸು)
೪೫೮. ಕೊಡಪು – ಕರವಿಕೀರ್ಣೇ (ಕೈಕೊಡುವು)
೪೫೯. ಗೞಪು – ಬಹುಭಾಷಣೇ (ಹರಟು)
೪೬೦. ತಣಿಪು – ತೃಪ್ತೌ (ತೃಪ್ತಿಮಾಡಿಸು)
೪೬೧. ತಪ್ಪು – ಸ್ಖಲನೇ (ತಪ್ಪಿಸಿಕೋ)
೪೬೨. ತಿರಿಪು – ಭ್ರಮಣೇ (ಸುತ್ತು)
೪೬೩. ತಿಳಿಪು – ಕ್ರೋಧೋತ್ಪರ್ಜನೇ (ಕೋಪಗೊಂಡವರನ್ನು ಸಮಾಧಾನಪಡಿಸು)
೪೬೪. ನೆರಪು (ನೆರೆಪು) – ಸಂಗ್ರಹೇ (ಕೂಡಿಡು)
೪೬೫. ಪರಪು (ಪರೆಪು) – ಪ್ರಸಾರೇ (ಹರಡು, ಕೆದರು)
೪೬೬. ಪೂ – ಪುಷ್ಪಸಂಭವೇ, ಪುಷ್ಪೇಚ (ಹೂಬಿಡು, ಹೂ)
೪೬೭. ಪೋಪು – ಅಸನ್ನಗಮನೇ (ಸಮೀಪಕ್ಕೆ ಒಯ್ಯು)
೪೬೮. ಮಡಿಪು – ಮರಣ ಕರಣೇ (ಸಾಯಿಸು)
೪೬೯. ಮುರಿಪು – ಮುಷ್ಪಿಭ್ರಮಣೇ (ಮುಷ್ಟಿಯಿಂದ ಹಿಡಿ)
೪೭೦. ಱಪ್ಪು – ಪ್ರಹರಣೇ (ಪ್ರಹರಿಸು)
೪೭೧. ಸಲಪು – ರಕ್ಷಣೇ (ರಕ್ಷಿಸು)
೪೭೨. ಸೊಪ್ಪು – ನಿವಾರಣೇ (ನಿವಾರಿಸು)

೧೩. ಬಾಂತಕ್ಕೆ
೪೭೩. ಅಂಬು – ಶೋಷಣೇ, ಶರೇಚ (ಒಣಗು, ಬಾಣ)
೪೭೪. ಅಲುಂಬು – ಜಲಕ್ಷಾಳನೇ (ನೀರಲ್ಲಿ ತೊಳೆ)
೪೭೫. ಅಸುಂಬು – ಸಂಚಾಲನೇ (ಅಲ್ಲಾಡಿಸು)
೪೭೬. ಉರ್ಬು – ಉತ್ಸಾಹೋದ್ವರ್ತ ನಯೋಃ (ಉತ್ಸಾಹಿಸು)
೪೭೭. ಉಱುಂಬು – ಯುದ್ಧ ಕ್ರಮಣ ಗಮನೇ (ದಂಡೆತ್ತಿಹೋಗು)
೪೭೮. ಎೞ್ಬು – ಉತ್ಸರ್ಪಣೇ (ಮೇಲೆತ್ತು)
೪೭೯. ಕಱುಂಬು – ಅಸೂಯಾಯಾಂ (ಹೊಟ್ಟೆಕಿಚ್ಚುಪಡು)
೪೮೦. ಕಲುಂಬು – ಕಲುಷೀಕರಣೇ (ಕಿಲುಬುಗಟ್ಟು)
೪೮೧. ಕೊರ್ಬು – ಸಮೃದ್ಧೌ (ಸಮೃದ್ಧವಾಗು)
೪೮೨. ಗೆರ್ಬು – ಮೈಥುನೇ (ಮೈಥುನಮಾಡು)
೪೮೩. ಜರ್ಬು – ಆಕ್ರಮಣ ಧ್ವನೌ (ಅಬ್ಬರಿಸು)
೪೮೪. ತರ್ಬು – ಆಶ್ಲೇಷೇ (ಅಪ್ಪು)
೪೮೫. ತಱುಂಬು – ಗತಿಸ್ತಂಭೇ ಶಿಲೋದ್ವಹನದಾರೌ (ತಡೆದು ನಿಲ್ಲಿಸು)
೪೮೬. ತಿಂಬು – ಪೂರಣೇ (ಪೂರಿಸು)
೪೮೭. ತುಬ್ಬು – ಚೋರ ಸೂಚನೇ, ತಲ್ಲಂಚೇ ಚ (ಕಳ್ಳರನ್ನು ಪತ್ತೆ ಹಚ್ಚು)
೪೮೮. ತುಂಬು – ಪೂರಣೇ, ವೃಂತಜಲ ಪ್ರಣಾಲಯೋಃ (ಹನಿಹನಿಯಾಗಿ ಬೀಳು)
೪೮೯. ನಂಬು – ವಿಶ್ವಾಸೇ (ವಿಶ್ವಾಸವಿಡು)
೪೯೦. ನಾಂಬು – ಆಲಸೇ (ಆಲಸ್ಯಮಾಡು)
೪೯೧. ನಿಗುಂಬು – ಪುಂಜೀಕರಣೇ (ರಾಶಿಮಾಡು)
೪೯೨. ನಿಲುಂಬು – ಪುಂಜೀಕರಣೇ (ರಾಶಿಮಾಡು)

೪೯೩. ಪರ್ಬು – ವಿಸ್ತಾರೇ (ಹಬ್ಬು)
೪೯೪. ಬಾ – ಶೋಫೇ (ಊದಿಕೋ)
೪೯೫. ಬೀ – ಅವಸಾನೇ (ಹಣ್ಣು ಬಿಡುವುದು ನಿಲ್ಲಿಸು)
೪೯೬. ಬೇ – ದಾಹೇ (ಸುಡು)