೨೭೮
ತಳೆಗುಂ ಮೇಗಣ , , ಪಂ,
ತಳದ ಕಾರ ಸ್ವರೂಪಮಂ
ಮೇಗೆ ತಗುಳ್ದ ಎಳಸಿದ
ಕಾರಮುಂ ತಳದೊಳ್;
ಇರ್ದ ಕಾರರೂಪಮಂ
ಧರಿಯಿಸುಗುಂ

ದ್ವಿತ್ವಾಕ್ಷರಗಳಲ್ಲಿ ಮೇಲಿರುವ ಕ, ಸ, ಪ ವರ್ಣಗಳು ಅವುಗಳ ಕೆಳಗಿರುವ ತ ಕಾರದ ರೂಪವನ್ನು ಹೊಂದುತ್ತವೆ. ದ್ವಿತ್ವಾಕ್ಷರಗಳಲ್ಲಿರುವ ‘ಹ’ ಕಾರವು ಅದರ ಕೆಳಗಿರುವ ಮ ಕಾರ, ನ ಕಾರದ ರೂಪವನ್ನು ಹೊಂದುತ್ತದೆ.

ಮೇಲಿನ ಕ ಕಾರ ಕೆಳಗಿನ ತ ಕಾರ ವಾದುದಕ್ಕೆ :
ಶುಕ್ತಿ ‑ ಸುತ್ತಿ, ಯುಕ್ತಿ ‑ ಜುತ್ತಿ

ಮೇಲಿನ ಸ ಕಾರ ಕೆಳಗಿನ ತ ಕಾರ ವಾದುದಕ್ಕೆ :
ಕಸ್ತೂರಿ ‑ ಕತ್ತುರಿ,
ಪುಸ್ತಕಂ ‑ ಹೊತ್ತಿಗೆ,
ಕುಸ್ತುಂಬರು ‑ ಕೊತ್ತುಂಬರಿ

ಮೇಲಿನ ಪ ಕಾರ ಕೆಳಗಿನ ತ ಕಾರ ವಾದುದಕ್ಕೆ :
ಸಪ್ತಮಿ ‑ ಸತ್ತಮಿ,
ಗುಪ್ತ ‑ ಗುತ್ತಂ

ಮೇಲಿನ ಹ ಕಾರ ಕೆಳಗಿನ ಮ ಕಾರವಾದುದಕ್ಕೆ :
ಬ್ರಹ್ಮಂ ‑ ಬೊಮ್ಮಂ

ಮೇಲಿನ ಹ ಕಾರ ಕೆಳಗಿನ ನ ಕಾರವಾದುದಕ್ಕೆ :
ಚಿಹ್ನಂ ‑ ಚಿನ್ನಂ

೨೭೯
ತಳದ ಅಕ್ಷರ ರೂಪಂ,
ಘಳಿಯಿಪುದು ಅಗ್ರದ
ಕಾರ ಅಗ್ರ ಕಾರಂ ತಳದ;
ನಮೆ ದಲ್ ಅಕ್ಕುಂ;
ತಳದ ನಮ ಅಕ್ಷರಮೆ ಅಕ್ಕುಂ
ಅಗ್ರದ ಮುಂ

ದ್ವಿತ್ವಾಕ್ಷರದಲ್ಲಿರುವ ಮೇಲಿನ ಷ ಕಾರವು ಅದರ ಕೆಳಗಿನ ಮ ಕಾರ ಕ ಕಾರಗಳ ರೂಪಗಳನ್ನು ಪಡೆಯುತ್ತವೆ. ದ್ವಿತ್ವಾಕ್ಷರದ ಮೇಲಿನ ತ ಕಾರವು ಕೆಳಗಿರುವ ಪ, ಫ, ನ ಕಾರ ರೂಪಗಳನ್ನು ಪಡೆಯುತ್ತದೆ. ದ್ವಿತ್ವಾಕ್ಷರದ ಮೇಲಿನ ಣ ಕಾರ, ನ ಕಾರಗಳು ತಮ್ಮ ಕೆಳಗಿರುವ ನ ಕಾರ ಮತ್ತು ಮ ಕಾರವನ್ನು ಹೊಂದುತ್ತವೆ.

ಮೇಲಿನ ಷ ಕಾರ ಕೆಳಗಿನ ಮ ಕಾರವಾದುದಕ್ಕೆ : ಊಷ್ಮೆ ‑ ಉಮ್ಮೆ
ಮೇಲಿನ ಷ ಕಾರ ಕೆಳಗಿನ ಕ ಕಾರವಾದುದಕ್ಕೆ : ಶಷ್ಕುಲಿ ‑ ಚಕ್ಕುಲಿ,
ಮಷ್ಕರಿ ‑ ಮಕ್ಕರೆ
”     ತ         ”    ಪ        ” : ಉತ್ಪಟ ‑ ಉಪ್ಪಡಂ
”     ”         ”    ಫ        ” : ಸತ್ಫಲಂ ‑ ಸಪ್ಪಳಂ
”     ”         ”    ನ        ” : ರತ್ನಂ ‑ ರನ್ನಂ
”     ಣ        ”    ನ        ” : ಜೀರ್ಣ್ನಂ ‑ ಜಿನ್ನಂ,
ಕರ್ಣಾಟಂ ‑ ಕನ್ನಡಂ
”     ನ         ”    ಮ       ” : ಉನ್ಮತ್ತಂ ‑ ಉಮ್ಮತಂ

೨೮೦
, , ,
ಕೆಳಗಣ ವತ್ವಂ;
, , , ,
ಅಕ್ಷರದ ಕೆಳಗೆ
ಕೂಡಿದ ಯತ್ವಂ;
ಸಲೆ ಗತ್ವದ
ಕೆಳಮೈಯೊಳ್
ನೆಲಸಿದ ನತ್ವಂ;
ತತ್ ಆಕೃತಿಯಂ ಆಳ್ದು ಇರ್ಕುಂ

ದ್ವಿತ್ವಾಕ್ಷರದಲ್ಲಿರುವ ಕೆಳಗಿನ ವ ಕಾರವು ಮೇಲಿರುವ ಜ ಕಾರ ಲ ಕಾರ ಮತ್ತು ತ ಕಾರಗಳನ್ನು ಪಡೆದಿರುತ್ತವೆ. ದ್ವಿತ್ವಾಕ್ಷರದಲ್ಲಿರುವ ಕೆಳಗಿನ ಯ ಕಾರವು ಮೇಲಿರುವ ನ ಕಾರ, ಲ ಕಾರ, ತ ಕಾರ, ವ ಕಾರ ಮತ್ತು ಪ ಕಾರಗಳನ್ನು ಆದೇಶವಾಗಿ ಪಡೆಯುತ್ತದೆ. ಕೆಳಗಿರುವ ನ ಕಾರವು ಮೇಲಿನ ಗ ಕಾರ ಸ್ವರೂಪವನ್ನೇ ಹೊಂದುತ್ತದೆ.

ಕೆಳಗಿನ ವ ಕಾರ ಮೇಲಿನ ಜ ಕಾರವಾದುದಕ್ಕೆ : ಉಜ್ವಲಂ ‑ ಉಜ್ಜಳಂ,
ಪುಜ್ವಲಂ ‑ ಪುಜ್ಜಳಂ
”      ”        ”    ಲ       ” : ಬಿಲ್ವಪತ್ರಂ ‑ ಬೆಲ್ಲವತ್ತಂ
”      ”        ”    ತ        ” : ಸತ್ವಕಂ ‑ ಸತ್ತುಗಂ
”    ಯ        ”    ನ         ” : ಕನ್ಯಕೆ ‑ ಕನ್ನಿಕೆ
”      ”        ”    ಲ        ” : ಪಲ್ಯಯನಂ ‑ ಹಲ್ಲಣಂ
”      ”        ”    ತ         ” : ಮೃತ್ಯು ‑ ಮಿತ್ತು
”      ”        ”    ವ        ” : ಕಾವ್ಯಂ ‑ ಕಬ್ಬಂ (<ಕವ್ವಂ)
”      ”        ”    ಪ        ” : ಲೇಪ್ಯಂ ‑ ಲೆಪ್ಪಂ
”     ನ        ”     ಗ        ” : ಅಗ್ನಿ ‑ ಅಗ್ಗಿ, ಲಾಗ್ನಿಕಂ ‑ ಲಗ್ಗಿಗಂ

೨೮೧
ವರ್ಣಮಂ
ಆಚರಿಪುದು ತಾಂ
ಬೇಱೆವೇಱಿ ಪದಚಯದೊಳ್;
ಸಂಚರಿಪ ಕಾರಕ್ಕೆ
ಅದಂ ದೊರೆಕೊಳ್ಗುಂ,
ಕೆಲವು ಶಬ್ಧದ ಆದಿಗೆ ದೀರ್ಘಂ

ಶಬ್ಧಗಳಲ್ಲಿ ಬಳಕೆಯಾದ ದ ಕಾರಕ್ಕೆ ವ ಕಾರ, ರೇಫೆ (ರ ಕಾರ) ಜ ಕಾರ, ಯ ಕಾರ, ತ ಕಾರ ಮತ್ತು ಡ ಕಾರಗಳು ಆದೇಶವಾಗುತ್ತವೆ. ಕೆಲವು ಶಬ್ಧಗಳ ಆದಿಗೆ ದೀರ್ಘವುಂಟಾಗುತ್ತದೆ.

ದ ಕಾರಕ್ಕೆ   ವ ಕಾರ : ಪಾದುಕಂ ‑ ಹಾವುಗೆ
”       ರ ಕಾರ : ಕದಂಬಂ ‑ ಕರಂಬಂ
”       ಜ ಕಾರ : ಗದೆ ‑ ಗಜೆ, ದಂತಂ ‑ ಜಂತಂ
”       ಯ ಕಾರ : ಪದಂ ‑ ಪಯಂ, ಮದನಂ ‑ ಮಯಣಂ
”       ತ  ಕಾರ : ದರ್ದು ‑ ತರ್ದು
”       ಡ ಕಾರ : ವಿಚ್ಛಂದಂ ‑ ವಿಚ್ಚಂಡಂ, ಪದಢಕ್ಕೆ ‑ ಪಡಧಕ್ಕೆ
ಶಬ್ಧಗಳ ಆದಿಯ ದೀರ್ಘಕ್ಕೆ : ಅಮರಿ ‑ ಆವರಿ, ಕಹಳೆ ‑ ಕಾಳೆ

೨೮೨
ಪದದ
ಆದಿಯ ಋತ್ವಕ್ಕೆ
ಇತ್ವದ ಎತ್ವದ ಅತ್ವದ,
ವಿಧಾನಂ ಉತ್ವಂ
ಬಹುಳಂ ಪುದಿದು ಇರ್ಕುಂ;
ಅಮೃತ ಶಬ್ದಾಂತದಲ್ಲಿಯುಂ
ಬ್ರಹ್ಮ ಶಬ್ಧದಂತಿರೆ ರೇಫಂ

ಪದದ ಆದಿಯ ಋ ಕಾರಕ್ಕೆ ಇ ಕಾರ, ಎ ಕಾರ, ಅ ಕಾರಗಳು ಮತ್ತು ವಿಕಲ್ಪದಿಂದ ಉ ಕಾರವು ಆದೇಶವಾಗುತ್ತದೆ. ಬ್ರಹ್ಮಶಬ್ಧದ ಕಡೆಗೆ ರೇಫ ಆದೇಶವಾಗುವಂತೆ ಅಮೃತ ಶಬ್ಧದ ಕೊನೆಗೆ ರೇಫೆ ಆದೇಶವಾಗುತ್ತದೆ.

ಋ ಕಾರಕ್ಕೆ  ಇ ಕಾರ : ಋಣಂ ‑ ರಿಣಂ, ಶೃಂಗಾರಂ ‑ ಸಿಂಗಾರಂ
ಋತು ‑ ರಿತು, ಋಜು ‑ ರಿಜು, ವೃದ್ದಿ ‑ ವಿದ್ದಿ
”        ಎ  ” : ಹೃದಯಂ ‑ ಹೆದಯಂ
”        ಅ  ” : ವೃಷಭಂ ‑ ಬಸವಂ, ಶೃಂಖಲಂ ‑ ಸಂಕಲೆ, ಕೃತಕ ‑ ಗತಕಿ
”        ಉ  ” : ಮೃದ್ವೀಕೆ ‑ ಮುದ್ದಿಗೆ

ಬ್ರಹ್ಮ ಶಬ್ಧದ ಹಾಗೆ
ಅಮೃತ ಶಬ್ಧದ ಕೊನೆಯ ರೇಫಕ್ಕೆ : ಬ್ರಹ್ಮಂ ‑ ಬರ್ಮಂ, ಅಮೃತಂ ‑ ಅಮರ್ದು

೨೮೩
ಆದಿಯೊಳ್ ಇರ್ದತ್ವಕ್ಕೆ
ಉತ್ವಾದೇಶಮುಂ;
ಇತ್ವ ವೃತ್ತಿಯಂ
ಹತ್ವಮುಂ ಆಪಾದಿತಂ ಅಕ್ಕುಂ;
ಜ್ಞತ್ವಕ್ಕೆ ಆದಿಯಂ
ಉೞಿದು ನ್ನಂ ಅಕ್ಕುಂ
ಅದು ಬಹುಳತೆಯಿಂ

ಪದದ ಆದಿಯ ಅ ಕಾರಕ್ಕೆ ಉ ಕಾರ, ಇ ಕಾರ, ಹ ಕಾರ ಗಳು ಆದೇಶವಾಗುತ್ತವೆ. ಆದಿಯಲ್ಲಿಲ್ಲದ ಜ್ಞ ಕಾರಕ್ಕೆ ವಿಕಲ್ಪದಿಂದ ನ (ನ್ನ) ಕಾರವು ಆದೇಶವಾಗುತ್ತದೆ.

ಆದಿಯ  ಅ ಕಾರಕ್ಕೆ   ಉ ಕಾರ : ಅಂಗುಷ್ಠಂ ‑ ಉಂಗುಟಂ, ತ್ವರಿತಂ ‑ ತುರಿಹಂ
”         ”       ಇ ಕಾರ : ಅಂಗಾರಂ ‑ ಇಂಗಳಂ
”         ”       ಹ ಕಾರ : ಅಗ್ನಿ ‑ ಹಗ್ಗಿ
ಆದಿಯಲ್ಲದ ಜ್ಞ ಕಾರಕ್ಕೆ ನ್ನ ಕಾರ : ವಿಜ್ಞಾಪನಂ ‑ ಬಿನ್ನಪಂ, ಸಂಜ್ಞೆ ‑ ಸನ್ನೆ
ವಿಕಲ್ಪಕ್ಕೆ : ಅಜ್ಞಾ ‑ ಆಣೆ

೨೮೪
ಪದದ ಆದಿಯ ಉವರ್ಣಕ್ಕೆ,
ಔತ್ವದ, ಅತ್ವದ ಎಡೆಗೆ
ಒತ್ವಮುಂ ಪೊದಳ್ದ ಓತ್ವಮುಂ;
ಅಪ್ಪುದು ಮೈಕಲ್ಪಿಕದಿಂ
ಶಬ್ಧದ ಆದಿ ದೀರ್ಘಕ್ಕೆ ಪಿರಿದುಂ
ಅಕ್ಕುಂ ಹ್ರಸ್ವಂ

ಶಬ್ಧಾದಿಯ ಉ, ಊ, ಔ ಮತ್ತು ಅ ಕಾರಗಳಿಗೆ ವಿಕಲ್ಪದಿಂದ ಒ ಕಾರ ಮತ್ತು ಓ ಕಾರಗಳು ಆದೇಶವಾಗುತ್ತವೆ. ಪದದ ಮೊದಲ ದೀರ್ಘಕ್ಕೆ ಹ್ರಸ್ವ ಆದೇಶವಾಗುತ್ತದೆ.

 

ಅ ಕಾರಕ್ಕೆ ಒ ಕಾರ : ಸ್ವರ್ಣಂ ‑ ಸೊನ್ನೆ
ಅ ಕಾರಕ್ಕೆ ಓ ಕಾರ : ಮಯೂರಂ ‑ ಮೋರಂ
ಉ ಕಾರಕ್ಕೆ ಒ ಕಾರ : ಮುಖಂ ‑ ಮೊಗಂ, ಕುತಂ ‑ ಕೊಂತಂ, ತುವರಿ ‑ ತೊವರಿ
ಉ ಕಾರಕ್ಕೆ ಓ ಕಾರ : ಕುಮಾರಂ ‑ ಕೋವರಂ, ಕುರುಂಟಂ ‑ ಗೋರಟೆ
ಊ ಕಾರಕ್ಕೆ ಓ ಕಾರ : ಕೂಟಂ ‑ ಕೋಡು
ಔ ಕಾರಕ್ಕೆ ಓ ಕಾರ : ಸೌರಾಷ್ಟ್ರಂ ‑ ಸೊರಟಂ, ಕ್ರೌಂಚಂ ‑ ಕೊಂಚೆ
ಔ ಕಾರಕ್ಕೆ ಓ ಕಾರ : ಕೌಪೀನಂ ‑ ಕೋವಣಂ
ಆದಿ ದೀರ್ಘಕ್ಕೆ ಹ್ರಸ್ವ : ಗೂರ್ಜರಂ ‑ ಗುಜ್ಜರಂ, ಕಾರ್ಯಂ ‑ ಕಜ್ಜಂ,
ಕಾಂಚಿ ‑ ಕಂಚಿ, ಆರ್ಯಂ ‑ ಅಜ್ಜಂ

೨೮೫
ಅಕ್ಕುಂ, ಎವರ್ಣಂ ಭಾವಿಸೆ
ತಕ್ಕಂತೆ ಪದದಾದಿಯ ಇತ್ವದ
ಅತ್ವದ ಸಂಸ್ಥಾನಕ್ಕಂ,
ಮತ್ತೆ ಐತ್ವಕ್ಕಂ
ಮಿಕ್ಕ ಆದಿ ಕಾರಂ ಅಸ್ವರದೆ
ಲೋಪಿಸುಗುಂ

ಪದದ ಆದಿಯ ಇ ಕಾರ, ಅ ಕಾರ ಮತ್ತು ಐ ಕಾರಗಳಿಗೆ ಎ, ಏ ಕಾರಗಳು ಆದೇಶವಾಗಿ ಬರುತ್ತವೆ. ಉಳಿದೆಡೆಗಳಲ್ಲಿ ಪದದ ಆದಿಯ ಹ ಕಾರ ವ್ಯಜನ ರೂಪದಿಂದ ಲೋಪವಾಗುತ್ತದೆ.

ಪದಾದಿಯ ಇ ಕಾರಕ್ಕೆ ಎ ಕಾರ : ದಿವಸಂ ‑ ದೆವಸಂ, ಇಳೆ ‑ ಎಳೆ,
ದಿಶಾ ‑ ದೆಸೆ, ಶಿಲಾ ‑ ಸೆಲೆ, ಶಿರಾ ‑ ಸೆರೆ
”          ”     ಏ ಕಾರ : ನಿಯಮಂ ‑ ನೇಮಂ
”     ಅ ಕಾರಕ್ಕೆ   ಎ ಕಾರ : ಜಟಾ ‑ ಜಡೆ, ಶಯ್ಯಾ ‑ ಸಜ್ಜೆ
”           ”     ಏ ಕಾರ : ವ್ಯವಹಾರಂ ‑ ಬೇವಹಾರಂ
”     ಐ ಕಾರಕ್ಕೆ   ಎ ಕಾರ : ವೈದ್ಯಂ ‑ ಬೆಜ್ಜಂ, ತೈಲಿಕಂ ‑ ತೆಲ್ಲಿಗಂ
”     ಐ ಕಾರಕ್ಕೆ   ಏ ಕಾರ : ವೈಶಾಖಂ ‑ ಬೇಸಗೆ, ವೈರಂ ‑ ಬೇರಂ
”     ವ್ಯಂಜನ ಹ ಕಾರ ಲೋಪಕ್ಕೆ : ಹಂಸೆ ‑ ಅಂಚೆ, ಹಿಂಗು ‑ ಇಂಗು

೨೮೬
ಅಕ್ಕುಂ ಸ್ಪರ್ಶ,
ಸ್ಫಟಿಕ, ಸ್ಫಿಕ್ಕೆ, ಸ್ಫೋಟಕ, ದೊಳಂ
ಸ್ತುತಿ ಸ್ತಿಮಿತ ಸ್ತೋಮಕ್ಕೆ,
ಇರ್ದ ಪದಾದಿ ಕಾರಕ್ಕಂ
ಲೋಪಂ ಶ್ಮಶಾನದ ಶತ್ವಕ್ಕಂ

ಸ್ಪರ್ಶ, ಸ್ಫಟಿಕ, ಸ್ಫಿಕ್ಕೆ, ಸ್ಫೋಟಕ, ಸ್ತುತಿ, ಸ್ತಿಮಿತ, ಸ್ತೋಮ ಈ ಶಬ್ಧಗಳ ಆದಿಯ ಸ ಕಾರಕ್ಕೆ ಶ್ಮಶಾನದ ಆದಿಯ ಶ ಕಾರಕ್ಕೆ ಲೋಪ ಬರುತ್ತದೆ.

ಸ್ಪರ್ಶಂ ‑ ಪುರುಸಂ ಸ್ಫೋಟಕಂ ‑ ಹೋಳಿಗೆ
ಸ್ಫಟಿಕಂ ‑ ಪಳಿಕು ಸ್ತುತಿ ‑ ತುತಿ
ಸ್ಥಿಕ್ಕೆ ‑ ಹಿಕ್ಕೆ ಸ್ತಿಮಿತಂ ‑ ತಿಮಿತಂ
ಸ್ತೋಮಂ ‑ ತೋಮಂ ಶ್ಮಶಾನಂ ‑ ಮಸಣಂ

೨೮೭
ಪದ ಮಧ್ಯದ ದೀರ್ಘಕ್ಕೆ
ಅಪ್ಪುದು ಪೀನಂ ಹ್ರಸ್ವಂ,
ಓತ್ವಂ ಆದಂದು ಉತ್ವ
ಪುದಿದ ಉತ್ವಕ್ಕೆ ಇತ್ವಮುಂ;
ಅತ್ವದ ಮೆಯ್ಯು
ಅದು ಅತ್ವದಲ್ಲಿಗೆ
ಇತ್ವ ಆದೇಶಂ

ಪದ ಮಧ್ಯದ ದೀರ್ಘಕ್ಕೆ ಹ್ರಸ್ವ ಆದೇಶವಾಗುತ್ತದೆ. ಪದ ಮಧ್ಯದಲ್ಲಿರುವ ಓ ಕಾರಕ್ಕೆ ಉ ಕಾರ ಆದೇಶವಾಗುತ್ತದೆ.  ಪದ ಮಧ್ಯದಲ್ಲಿ ಉ ಕಾರವಿದ್ದರೆ ಇ ಕಾರ ಮತ್ತು ಅ ಕಾರಾದೇಶವಾಗುತ್ತದೆ. ಅ ಕಾರವಿದ್ದರೆ ಇ ಕಾರ ಆದೇಶವಾಗುತ್ತದೆ.

ಪದ ಮಧ್ಯ ದೀರ್ಘಕ್ಕೆ ಹ್ರಸ್ವ :
ಆಕಾಶಂ ‑ ಆಗಸಂ, ಸನ್ನಾಹಂ ‑ ಸನ್ನಣಂ,
ಶಲಾಕೆ ‑ ಸಲಗೆ, ತಾಂಬೂಲಂ ‑ ತಂಬುಲಂ,
ವಿಲಾಸಂ ‑ ವಿಳಸಂ

ಪದ ಮಧ್ಯದ ಓ ಕಾರಕ್ಕೆ ಉ ಕಾರ :
ಅಶೋಕೆ ‑ ಅಸುಗೆ, ಕಠೋರಂ ‑ ಕಟುರಂ,
ಉದ್ಯೋಗಂ ‑ ಉಜ್ಜುಗಂ

ಪದ ಮಧ್ಯಯ ಉ ಕಾರಕ್ಕೆ ಇ ಕಾರ :
ಆಯುಷ್ಯಂ ‑ ಆಯಿಸಂ

ಪದ ಮಧ್ಯದ ಉ ಕಾರಕ್ಕೆ ಅ ಕಾರ :
ಮಾನುಷ್ಯಂ ‑ ಮಾನಸಂ,
ಕುರುಂಟಂ ‑ ಗೋರಟೆ

ಪದ ಮಧ್ಯದ ಅ ಕಾರಕ್ಕೆ ಇ ಕಾರ :
ಕನ್ಯಕಾ ‑ ಕನ್ನಿಕೆ

೨೮೮
ಪದ ಮಧ್ಯದ ಏತ್ವದೊಳಂ
ಈತ್ವದೊಳಂ
ತಾಂ ಅತ್ವ ಅತ್ವ
ಇರ್ದಂದು ಉತ್ವಂ;
ವಿದಿತ ಆತ್ವಕ್ಕೆ ಅಕ್ಕುಂ ಹ್ರಸ್ವದ
ಎತ್ವವಿಧಿ ಬಹುಳ ವೃತ್ತಿಯಿಂ
ಕೆಲವೆಡೆಯೊಳ್

ಪದ ಮಧ್ಯದಲ್ಲಿರುವ ಏ ಕಾರ ಮತ್ತು ಈ ಕಾರಗಳಿಗೆ ಅ ಕಾರಾದೇಶವಾಗುತ್ತದೆ. ಅ ಕಾರಕ್ಕೆ ಉ ಕಾರಾದೇಶವೂ ಕೆಲವೆಡೆಯಲ್ಲಿ ಅ ಕಾರಕ್ಕೆ ವಿಕಲ್ಪದಿಂದ ಎ ಕಾರವಾಗುತ್ತದೆ.

ಪದ ಮಧ್ಯದ ಏ ಕಾರಕ್ಕೆ ಅ ಕಾರ : ಆಲೇಖಂ ‑ ಆಳಕಂ
ಪದ ಮಧ್ಯದ ಈ ಕಾರಕ್ಕೆ ಅ ಕಾರ : ಮರೀಚಂ ‑ ಮೆಳಸು
ಪದ ಮಧ್ಯದ ಅ ಕಾರಕ್ಕೆ ಉ ಕಾರ : ಸತ್ವಕಂ ‑ ಸತ್ತುಗಂ
ಪದ ಮಧ್ಯದ ಅ ಕಾರಕ್ಕೆ ಎ ಕಾರ : ಅನ್ಯಾಯ ‑ ಅನ್ನೆಯಂ

೨೮೯
ಅವತರಿಸಿರ್ಕುಂ
ಪದಮಧ್ಯವರ್ಣದೊಳ್
ಲೋಪವೃತ್ತಿ ಬಹುಳತೆಯಿಂ;
ತದ್ಭವ ಆದಿಯ ಬತ್ವಂ
ಭೈತ್ವಂ ಐತ್ವವಿಧಿ
ಅತ್ವದ ಆತ್ವದೊಳ್;
ದೊರೆಕೊಳ್ಗುಂ

ಪದದ ಮಧ್ಯದಲ್ಲಿರುವ ವರ್ಣಕ್ಕೆ ವಿಕಲ್ಪದಿಂದ ಲೋಪ ಉಂಟಾಗುತ್ತದೆ. ಪದದ ಆದಿಯ ಬ ಕಾರಕ್ಕೆ ಐ ಕಾರದಿಂದ ಕೂಡಿದ ಬ ಕಾರಾದೇಶವಾಗುತ್ತದೆ (ಭೈ). ಪದದ ಆದಿಯ ಅ ಕಾರ ಆ ಕಾರಗಳಲ್ಲಿ ಐ ಕಾರ ಪ್ರಾಪ್ತವಾಗುತ್ತದೆ.

ಪದ ಮಧ್ಯವರ್ಣ ಲೋಪಕ್ಕೆ :
ನವಮಿ ‑ ನಾಮಿ, ಸಾಹಸಂ ‑ ಸಾಸಂ,
ನಿಯಮಂ ‑ ನೇಮಂ, ವಾಹಳಿ ‑ ವಾಳಿ

ಬ ಕಾರಕ್ಕೆ ಬೈ ಕಾರ :
ಬಹಿತ್ರಂ ‑ ಭೈತ್ರಂ

ಅ ಕಾರಕ್ಕೆ ಐ ಕಾರ :
ಮಹಿಮೆ ‑ ಮೈಮೆ, ಮಹಿಷಿ ‑ ಮೈಸಿ

ಆ ಕಾರಕ್ಕೆ ಐ ಕಾರ :
ವಾಹ್ಯಾಳಿ ‑ ವೈಹಾಳಿ

೨೯೦
ಸಮನಿಸುಗುಂ ಗತ್ವಂ,
ಶಬ್ಧಮಧ್ಯ ಮತ್ವಕ್ಕಂ,
ಅಂತೆ ಳತ್ವಕ್ಕಂ ಕತ್ವಂ,
ಇರ್ದೊಡೆ ವತ್ವಂ;
ಯತ್ವಮಿಶ್ರಧತ್ವಕ್ಕೆ,
ದತ್ವಂ ಅತ್ವಂ ಇತ್ವಂ

ಪದ ಮಧ್ಯದಲ್ಲಿರುವ ಮ ಕಾರ ಮತ್ತು ಳ ಕಾರಗಳಿಗೆ ಗ ಕಾರ ಉಂಟಾಗುತ್ತದೆ. ಕ ಕಾರವಿದ್ದರೆ ವ ಕಾರವೂ, ಯ ಕಾರದಿಂದ ಕೂಡಿದ ಧ ಕಾರಕ್ಕೆ ನ ಕಾರವೂ ಮತ್ತು ಅ ಕಾರಕ್ಕೆ ಇ ಕಾರ ಪ್ರಾಪ್ತವಾಗುತ್ತದೆ.

ಪದ ಮಧ್ಯ ಮ ಕಾರಕ್ಕೆ ಗ ಕಾರ : ಯಮುನೆ ‑ ಜಗುನೆ
ಪದ ಮಧ್ಯ ಳ ಕಾರಕ್ಕೆ ಗ ಕಾರ : ಜಳೂಕೆ ‑ ಜಿಗುಳೆ
ಪದಮಧ್ಯ ಕ ಕಾರಕ್ಕೆ ವ ಕಾರ : ಸೀಕರ ‑ ಸೀವರ
ಯ ಕಾರದಿಂದ ಕೂಡಿದ ಧ ಕಾರಕ್ಕೆ ಇ ಕಾರದಿಂದ ಕೂಡಿದ ದ ಕಾರ : ಅಧ್ಯಕ್ಷಂ ‑ ಅದ್ದಿಕಂ

೨೯೧
ಪದ ಮಧ್ಯ ಕಾರಕ್ಕೆ
ಅಪ್ಪುದು ಒರ್ಮೆ ರೇಫಂ,
ಕಾರಂ ಒರ್ಮೆ ಕಾರಂ
ಪುದಿದು ಇರ್ಕುಂ ಒರ್ಮೆ;
ತಾಂ ಅಂತ್ಯದೊಳ್ ಒಂದಿರೆ
ಡತ್ವ ಒರ್ಮೆ ಒರ್ಮೆ ಹಕಾರಂ

ಪದಮಧ್ಯ ತಕಾರಕ್ಕೆ ಒಮ್ಮೆ ರೇಫೆ, ಒಮ್ಮೆ ಟಕಾರ, ಒಮ್ಮೆ ಗಕಾರ ಗಳುಂಟಾಗುತ್ತವೆ. ಅದು (=ತ ಕಾರ) ಪದಾಂತ್ಯದಲ್ಲಿದ್ದರೆ ಒಮ್ಮೆ ಡಕಾರ, ಒಮ್ಮೆ ಹ ಕಾರಗಳುಂಟಾಗುತ್ತವೆ.

ಪದ ಮಧ್ಯದಲ್ಲಿರುವ ತ ಕಾರಕ್ಕೆ ರೇಫೆ : ಖಾತಿಗೆ ‑ ಖಾರಿಗೆ
”                     ”      ಟ ಕಾರ : ಪತ್ತನಂ ‑ ಪಟ್ಟಣಂ
”                     ”      ಗ ಕಾರ : ಉತ್ಕಟಂ ‑ ಉಗ್ಗಡಂ
ಪದಾಂತ್ಯ                  ”      ಡ ಕಾರ : ಸಂಘಾತಂ ‑ ಸಂಗಡಂ
”                      ”      ಹ ಕಾರ : ತ್ವರಿತಂ ‑ ತುರಿಹಂ

೨೯೨
ತಿಳಿಬಹುಳದೆ ಶಬ್ದಾಂತಂಗಳ
ನತ್ವ ಜ್ಞತ್ವ ಕತ್ವದ ಎಡೆಗೆ
ಕಾರಂ ತಳೆಗುಂ;
ಅದಂತ ಪದಾಂತಂ
ಗಳ್ ಎತ್ವಮುಮಂ
ಇತ್ವವೃತ್ತಿ
ಯುಮಂ ಉತ್ವ ಮುಮಂ

ಪದಾಂತ್ಯದ ನ ಕಾರ, ಜ್ಞ ಕಾರ, ಕ ಕಾರಗಳಿಗೆ ವಿಕಲ್ಪದಿಂದ ಣ ಕಾರಾದೇಶವಾಗುತ್ತದೆ; ಪದಾಂತ್ಯದಲ್ಲಿರುವ ಅ ಕಾರಕ್ಕೆ ಎ ಕಾರ, ಇ ಕಾರ ಉ ಕಾರಗಳನ್ನು ಪಡೆಯುತ್ತದೆ.

ಪದಾಂತ್ಯದ ನ ಕಾರಕ್ಕೆ ಣ ಕಾರ :
ಖನಿ ‑ ಕಣಿ, ಪತ್ತನಂ ‑ ಪಟ್ಟನಂ,
ಮಂಥನಿ ‑ ಮಂತಣಿ,
ಲಂಬನಂ ‑ ಲಂಬಣಂ

ಪದಾಂತ್ಯದ ಜ್ಞ ಕಾರಕ್ಕೆ ಣ ಕಾರ :
ಆಜ್ಞಾ ‑ ಆಣೆ

ಪದಾಂತ್ಯದ ಕ ಕಾರಕ್ಕೆ ಣ ಕಾರ :
ನರ್ತಕಿ ‑ ನಚ್ಚಣಿ

ಪದಾಂತ್ಯದ ಕ ಕಾರಕ್ಕೆ ವಿಕಲ್ಪದ ಗ ಕಾರಂ :
ಶುನಕಂ ‑ ಸೊಣಗಂ

ಪದಾಂತ್ಯದ ಅ ಕಾರಕ್ಕೆ ಎ ಕಾರ :
ಜೀರಕಂ ‑ ಜೀರಗೆ, ಶಾಣಂ ‑ ಶಾಣೆ,
ಚೀರಂ ‑ ಸೀರೆ, ಧೂಮಂ ‑ ದೂವೆ,
ಹಂಸಂ ‑ ಹಂಸೆ, ಕೋಕಿಲ ‑ ಕೋಗಿಲೆ