೨೬೬
ಈಕ್ಷಿಸಿ ಶಿಕ್ಷಾ ಸೂತ್ರದ
ಲಕ್ಷಣಮಂ,
ಲೋಕರೂಢಿ ಕಿಡದವೊಲ್
ಅಱಿವರ್ ಲಕ್ಷಿಪುದು
ನುಡಿಗಳೊಳ್
ಬಹುಲ ಆಕ್ಷೇಪಣಂ
ಇಲ್ಲದಿರೆಯುಂ
ಅಱಿಯದ ಕೆಲವಂ

ವ್ಯಾಕರಣಶಾಸ್ತ್ರದ ಲಕ್ಷಣಗಳನ್ನು ಗಮನಿಸಿ ಲೋಕ ರೂಢಿಯು ಕೆಡದಂತೆ ಎಚ್ಚರ ವಹಿಸಿ ಭಾಷೆಯಲ್ಲಿ ಬಹುಳ ಆಕ್ಷೇಪಣೆಗಳು ಇಲ್ಲದಂತಹ ಕೆಲವು ತದ್ಭವಗಳನ್ನು ಇಲ್ಲಿ ಅವಲೋಕಿಸಬೇಕು.

೨೬೭
ಸಕ್ಕದದ ತದ್ಭಂವಗಳ
ಲಕ್ಕಣಮಂ
ಕನ್ನಡಕ್ಕೆ ಲಕ್ಷಿಸಿ ಪೇೞ್ವೆಂ;
ಸಕ್ಕದದ , ದ್ವಿತ್ವಕ್ಕೆ
ಅಕ್ಕುಂ ಸತ್ವಂ
ಪ್ರಸಿದ್ದಿಯಿಂದ ಎಲ್ಲೆಡೆಯೊಳ್

ಸಂಸ್ಕೃತದಿಂದ ಕನ್ನಡಕ್ಕೆ ಬಂದ ಶಬ್ದಗಳ ಲಕ್ಷಣವನ್ನು ಹೇಳುತ್ತೇನೆ. ಸಂಸ್ಕೃತದ ಶ, ಷ ಕಾರಗಳಿಗೆ ಕನ್ನಡದಲ್ಲಿ ಸ ಕಾರವು ಆದೇಶವಾಗುತ್ತದೆ.

ಶ ಕಾರಕ್ಕೆ ಸಕಾರ :
ಶಶಿ ‑ ಸಸಿ, ಶಂಕೆ ‑ ಸಂಕೆ, ಶಾಂತಿ ‑ ಸಾಂತಿ
ಶರಂ ‑ ಸರಂ, ಶಂಬರಂ ‑ ಸಂಬರಂ
ಕಳಶಂ ‑ ಕಳಶಂ, ಶಾಲೆ ‑ ಸಾಲೆ, ಶಾಪಂ ‑ ಸಾಪಂ
ರಾಶಿ ‑ ರಾಸಿ, ಶುಚಿ ‑ ಸುಚಿ, ಪಶು ‑ ಪಸು

ಷ ಕಾರಕ್ಕೆ ಸ ಕಾರ :
ಹರ್ಷಂ ‑ ಹರುಸಂ, ಭಾಷೆ ‑ ಭಾಸೆ, ವೇಷಂ ‑ ವೇಸಂ
ಮೇಷಂ ‑ ಮೇಸಂ, ವಿಷಂ ‑ ವಿಸಯಂ, ಮಷಿ ‑ ಮಸಿ

೨೬೮
ವಿರಲಂ ಮಾಡಿದ
ದಡ್ಡಕ್ಕರದ ಮೊದಲ್ಗೆ
ಅತ್ವಂ, ಇತ್ವಂ, ಉತ್ವಮುಂ,
ಅಕ್ಕುಂ ದೊರೆಕೊಳ್ಗುಂ;
ಅತ್ವದ ಇತ್ವದ ಪರವರ್ಣಂ
ದೀರ್ಘಂ ಆದ ಪಕ್ಷಂ ಹ್ರಸ್ವಂ

ವಿರಳಗೊಳಿಸಿದ ದ್ವಿತ್ವಾಕ್ಷರದ (ಒತ್ತಕ್ಷರದ) ಮೊದಲಿಗೆ (ಪೂರ್ವ ವ್ಯಂಜನವು)  ಅ ಕಾರ, ಇ ಕಾರ, ಉ ಕಾರ ಗಳುಂಟಾಗುತ್ತವೆ. ಇಂತಹ ಅ ಕಾರ ಇ ಕಾರ ಗಳ ಮುಂದಿನ ದೀರ್ಘವು ಹ್ರಸ್ವವಾಗುತ್ತದೆ.

ಅ ಕಾರಕ್ಕೆ :
ಯತ್ನಂ ‑ ಜತನಂ, ಇಂದ್ರಂ ‑ ಇಂದರಂ

ಇ ಕಾರಕ್ಕೆ :
ಶ್ರೀ ‑ ಸಿರಿ, ಗಿರ್ಗಟಂ ‑ ಗಿರಿಗಟಂ, ವರ್ಷಂ ‑ ಬರಿಸಂ

ಉ ಕಾರಕ್ಕೆ :
ಪದ್ಮಂ ‑ ಪದುಮಂ, ಲಗ್ನಂ ‑ ಲಗುನಂ
ಶಬ್ದಂ ‑ ಸಬುದಂ, ಮಂತ್ರಂ ‑ ಮಂತುರಂ
ರಕ್ತಂ ‑ ರಕುತಂ, ಮುಕ್ತಿ ‑ ಮುಕುತಿ, ಭಕ್ತಿ ‑ ಭಕುತಿ

ಅ ಕಾರದ ಮುಂದಣ ದೀರ್ಘಕ್ಕೆ ಹ್ರಸ್ವ :
ತ್ರಾಸಂ > ತರಸಂ, ತ್ರಾಣಂ > ತರಣಂ
ಇದೇ ರೀತಿ ಪ್ರಾಯಂ > ಹರಯಂ, ಪ್ರಾಣಂ > ಹರಣಂ

ಇ ಕಾರದ ಮುಂದಣ ದೀರ್ಘಕ್ಕೆ ಹ್ರಸ್ವ :
ವ್ಯಾದಿ > ಬಿಯದಿ, ವ್ಯಾಧಂ > ಬಿಯದಂ
ವ್ಯಾಳಂ > ಬಿಯಳಂ, ವ್ಯಾಸಂಗಂ > ಬಿಯಸಂಗಂ

೨೬೯
ವರ್ಗ ಪ್ರಥಮಂಗಳ್,
ತತ್ವರ್ಗ ತೃತೀಯಂಗಳ್,
ಅಪ್ಪುವು
ಉೞಿಯೆ ಪವರ್ಗಂ;
ವರ್ಗ ದ್ವಿತೀಯ ವರ್ಣಂ
ವರ್ಗ ಪ್ರಥಮಂ ಚತುರ್ಥಂ
ಅಱಿಗೆ ತೃತೀಯಂ

‘ಪ’ ವರ್ಗವನ್ನುಳಿದು ಇತರ ವರ್ಗಗಳ ಮೊದಲ ಅಕ್ಷರಗಳಾದ ‘ಕ’ ‘ಚ’ ‘ಟ’ ‘ತ’ ವರ್ಣಗಳಿಗೆ ತಮ್ಮ ತೃತೀಯ ವರ್ಣಗಳಾದ ‘ಗ’ ‘ಜ’ ‘ಡ’ ‘ದ’ ವರ್ಣಗಳೂ ವರ್ಗದ ಎರಡನೆಯ ವರ್ಣಗಳಾದ ‘ಖ’ ‘ಛ’ ‘ಠ’ ‘ಥ’ ‘ಫ’ ಗಳಿಗೆ ಆಯಾ ವರ್ಗದ ಮೊದಲ ವರ್ಗದ ವರ್ಣಗಳಾದ ‘ಕ’ ‘ಚ’ ‘ಟ’ ‘ತ’ ‘ಪ’ ಗಳೂ ವರ್ಗದ ನಾಲ್ಕನೆಯ ವರ್ಣಗಳೂ ಉ ಆಯಾ ವರ್ಣದ ತೃತೀಯ ವರ್ಣಗಳಾಗುತ್ತವೆ.

ಕ ಕಾರಕ್ಕೆ ಗ ಕಾರ :
ಹೋಕಂ ‑ ಹೋರಿಗಂ, ಆಕಾಶಂ ‑ ಆಗಸಂ,
ಪೇಟಿಕಾ ‑ ಪೇಟಿಕೆ, ಮಲ್ಲಿಕೆ ‑ ಮಲ್ಲಿಗೆ,
ಪೂರಿಕೆ ‑ ಪೂರಿಗೆ, ದೀಪಿಕೆ ‑ ದೀವಿಗೆ

ಚ ಕಾರಕ್ಕೆ ಜ ಕಾರ :
ಸೂಚೀ ‑ ಸೂಜಿ, ಕಾಚಂ ‑ ಗಾಜು, ವಾಚರಾ ‑ ಬಾಜನೆ

ಟ ಕಾರಕ್ಕೆ ಡ ಕಾರ :
ಕೋಟಿ ‑ ಕೋಡಿ, ಕಟಕಂ ‑ ಕಡಗಂ, ಮಕುಟಂ ‑ ಮಕುಡಂ,
ಅಟವಿ ‑ ಅಡವಿ, ಮಾಟಂ ‑ ಮಾಡಂ, ಕುಟಿ ‑ ಗುಡಿ

ತ ಕಾರಕ್ಕೆ ದ ಕಾರ :
ಜತಿ ‑ ಜದಿ, ವಸತಿ ‑ ಬಸದಿ,
ಚತುರಂ ‑ ಚದುರಂ, ಭೂತಿ ‑ ಬೂದಿ

ಖ ಕಾರಕ್ಕೆ ಕ ಕಾರ :
ಖದಿರಂ ‑ ಕದಿರಂ, ಖಳಂ ‑ ಕಳಂ,
ಶಂಖಂ ‑ ಸಂಕಂ, ಮುಖಂ ‑ ಮುಕಂ

ಛ ಕಾರಕ್ಕೆ ಚ ಕಾರ :
ಛಂದಂ ‑ ಚಂದಂ, ಛಿನ್ನಂ ‑ ಚಿನ್ನ, ಛವಿ ‑ ಚವಿ

ಠ ಕಾರಕ್ಕೆ ಟ ಕಾರ :
ಕಂಠಿಕಾ ‑ ಕಂಟಿಕೆ, ಶುಂಠಿ ‑ ಸುಂಟಿ, ಮಠಂ ‑ ಮಟಂ
ಕುಂಠಂ ‑ ಕುಂಟಂ, ಶಠೆ ‑ ಸಟೆ, ಕಠೋರಂ ‑ ಕಟುಕಂ

ಥ ಕಾರಕ್ಕೆ ತ ಕಾರ :
ಕಥೆ ‑ ಕತೆ, ಮುಂಥಂ ‑ ಮುಂತಂ
ಮಿಥಿಳೆ ‑ ಮಿತಿಳೆ, ಪಂಥಂ ‑ ಪಂತಂ

ಫ ಕಾರಕ್ಕೆ ಪ ಕಾರ :
ಫಲಂ ‑ ಪಲಂ, ಫಣಿ ‑ ಪಣಿ, ಫಲಕಂ ‑ ಪಲಗೆ,
ಗುಂಫನಂ ‑ ಗುಂಪನಂ, ಫಾಲಂ ‑ ಫಾಳಂ, ಕಫಂ ‑ ಕಪಂ

ಘ ಕಾರಕ್ಕೆ ಗ ಕಾರ :
ಘಂಟೆ ‑ ಗಂಟೆ, ಘಂಟಿಕೆ ‑ ಗಂಟಿಕೆ, ನಿಘಂಟು ‑ ನಿಗಂಟು,
ಘಟಕಂ ‑ ಗಡಿಗೆ, ಸಂಘಂ ‑ ಸಂಗಂ, ಅರ್ಘಂ ‑ ಅಗ್ಗಂ

ಝ ಕಾರಕ್ಕೆ ಜ ಕಾರ :
ಝಗಟೆ ‑ ಜಗಟೆ, ಝಟಿತ ‑ ಜಟಿತ,
ಝಂಕೆ ‑ ಜಂಕೆ, ಝಂಪಂ ‑ ಜಂಪಂ

ಢ ಕಾರಕ್ಕೆ ಡ ಕಾರ :
ಢಕೆ ‑ ಡಕೆ, ರೂಢಿ ‑ ರೂಡಿ, ಗಾಢಂ ‑ ಗಾಡಂ,

ಧ ಕಾರಕ್ಕೆ ದ ಕಾರ :
ಧನಂ ‑ ದನಂ, ಧೂಪಂ ‑ ದೂಪಂ, ನಿಧಿ ‑ ನಿದಿ,
ನಿಧಾನಂ ‑ ನಿದಾನಂ, ಧಾರೆ ‑ ದಾರೆ, ವಿಧಿ ‑ ಬಿದಿ,
ಸಿಂಧುರಂ ‑ ಸಿಂದುರಂ

ಭ ಕಾರಕ್ಕೆ ಬ ಕಾರ :
ಶುಭಂ ‑ ಸುಬಂ, ಭೇರಿ ‑ ಬೇರಿ, ಕುಂಭಂ ‑ ಕುಂಬಂ,
ರಂಭೆ ‑ ರಂಬೆ, ಭಂಡಂ ‑ ಬಂಡಂ.

 

೨೭೦
ಖತ್ವಕ್ಕೆ, ಬಹುಳತೆಯಿಂ
ಗತ್ವಂ, ಛತ್ವಂ, ದ್ವಿರುಕ್ತಿಯಿಂ
ಕೂಡಿರೆ ಮೇಣ್
ಯತ್ವಂ, ಅನ್ವಿತಂ ಇರೆ ಚತ್ವಂ,
ದ್ವಿತ್ವಂ ಛತ್ವಕ್ಕೆ ಸತ್ವ ಉಂಟು,
ಅರೆ ಎಡೆಯೊಳ್

ಖ ಕಾರಕ್ಕೆ ‘ಗ’  ಕಾರಾದೇಶವಾಗುತ್ತದೆ. ಛ ಕಾರವು ಒತ್ತಕ್ಷರವಾಗಿದ್ದರೆ ಮತ್ತು ‘ಛ’ ಕಾರವು ‘ಯ’ ಕಾರದಿಂದ ಕೂಡಿದ್ದರೆ ಒತ್ತಕ್ಷರದಿಂದ ಕೂಡಿದ ಛ ಕಾರ ‘ಚ’  ಕಾರ ವಾಗುತ್ತದೆ. ಕೆಲವೆಡೆ ‘ಚ’   ಕಾರಕ್ಕೆ ‘ಸ’  ಕಾರ ಆದೇಶವಾಗುತ್ತದೆ.

ಖ ಕಾರಕ್ಕೆ ಗ ಕಾರ :
ಮುಖ > ಮೊಗಂ, ವೈಶಾಖಂ > ಬೇಸಗೆ
ದ್ವಿತ್ವದ ಛ ಕಾರಕ್ಕೆ

ದ್ವಿತ್ವದ ಚ ಕಾರ :
ಇಚ್ಛೆ > ಇಚ್ಚೆ, ಮಚ್ಛರಂ > ಮಚ್ಚರಂ
ಯ ಕಾರ ಬೆರೆಸಿದ ಛ ಕಾರಕ್ಕೆ

ದ್ವಿತ್ವ ಚ ಕಾರ :
ಮಛ್ಯಂ ‑ ಮಚ್ಚಂ, ಅಛ್ಛಂ ‑ ಅಚ್ಚಂ
ತುಚ್ಛ್ಯಂ ‑ ತುಚ್ಚಂ

ಛ ಕಾರಕ್ಕೆ ಸ ಕಾರ :
ಛತ್ರಿಕಾ ‑ ಸತ್ತಿಗೆ, ಛುರಿಕಾ ‑ ಸುರಿಗೆ

೨೭೧
ಅರಮೆ ಕಾರಂ, ದಿಂ
ಪರಿಣಮಿಕುಂ ಸತ್ವಮಿಶ್ರಂ
ಅಪ್ಪ ಕಾರಂ ಬರೆಯುಂ
ಕಾರ ಅಕ್ಕುಂ, ಸ್ವರ ಅನ್ವಿತಂ
ತ್ವಂ ಒರ್ಮೆ
ಮುಂ ಅಕ್ಕುಂ

ಕೆಲವು ಶಬ್ದಗಳಲ್ಲಿ ಠ ಕಾರವು ‘ಡ’ ಕಾರವಾಗಿಯೂ ‘ೞ’ ಕಾರವಾಗಿಯೂ ಪರಿಣಮಿಸು ತ್ತದೆ. ಸ ಕಾರಯುಕ್ತ ಥ ಕಾರಕ್ಕೆ ಸ್ವರಾನ್ವಿತ ‘ತ’ ಕಾರ ಉಂಟಾಗುತ್ತದೆ. ಕೆಲವು ಕಡೆ ‘ಥ’ ಕಾರವು ‘ದ’ ಕಾರ, ‘ಟ’ ಕಾರ ಮತ್ತು ‘ಹ’ ಕಾರವಾಗುತ್ತದೆ.

ಠ ಕಾರಕ್ಕೆ ಡ ಕಾರ :
ಕುಠಾರಂ ‑ ಕೊಡಲಿ, ಮಠ ‑ ಮಡಂ

ಠ ಕಾರಕ್ಕೆ ೞ ಕಾರ :
ಮಠಿಕಿ ‑ ಮೞಿಗೆ, ಪೀಠಿಕೆ ‑ ಪೀೞಗೆ

ಸ ಕಾರ ಯುಕ್ತ ಥ ಕಾರಕ್ಕೆ ತ ಕಾರ :
ಅವಸ್ಥೆ ‑ ಅವತೆ, ಸಂಸ್ಥೆ ‑ ಸಂತೆ, ಸ್ಥಾನಂ ‑ ತಾಣಂ

ಥ ಕಾರಕ್ಕೆ ದ ಕಾರ :
ವೀಥಿ ‑ ಬೀದಿ

ಥ ಕಾರಕ್ಕೆ ಟ ಕಾರ :
ಗ್ರಂಥಿ ‑ ಗಂಟು

ಥ ಕಾರಕ್ಕೆ ಹ ಕಾರ :
ಗಾಥೆ ‑ ಗಾಹೆ

೨೭೨
ಅವತರಿಸಿರ್ಕುಂ ಪತ್ವಕ್ಕೆ
ವತ್ವ, ಹತ್ವ, ವ್ಯವಸ್ಥೆ
ಕೆಲವೆಡೆಯೊಳ್;
ಸಮನಿಸುಗುಂ ಬತ್ವಕ್ಕೆ
ಒರ್ಮೆ ವತ್ವವಿಧಿ,
ವತ್ವದೆಡೆಗೆ ಬತ್ವಂ
ಬಹುಳಂ

ಕೆಲವು ಕಡೆಗಳಲ್ಲಿ ‘ಪ’ ಕಾರಕ್ಕೆ ‘ವ’ ಕಾರವೂ ‘ಹ’ ಕಾರವೂ ಬರುತ್ತದೆ. ‘ಬ’ ಕಾರಕ್ಕೆ ‘ವ’ ಕಾರವು ಒಮ್ಮೊಮ್ಮೆ ಉಂಟಾಗುತ್ತದೆ. ಕೆಲವು ಶಬ್ಧಗಳಲ್ಲಿ ‘ವ’ ಕಾರಕ್ಕೆ ‘ಬ’ ಕಾರ ಉಂಟಾಗುತ್ತದೆ.

ಪ ಕಾರಕ್ಕೆ ವ ಕಾರ :
ವಾಪಿ ‑ ಬಾವಿ, ಕಪಿಲೆ ‑ ಕವಿಲೆ
ತ್ರಿಪದಿ ‑ ತ್ರಿವದಿ, ದೀಪಿಕೆ ‑ ದೀವಿಗೆ

ಪ ಕಾರಕ್ಕೆ ಹ ಕಾರ :
ಪಿಪ್ಪಲಿ ‑ ಹಿಪ್ಪಲಿ, ಪಂಜರಂ ‑ ಹಂಜರಂ
ಪಾದುಕಂ ‑ ಹಾವುಗೆ, ಗೋಪುರಂ ‑ ಗೋಹುರಂ

ಬ ಕಾರಕ್ಕೆ ವ ಕಾರ :
ಕಬಲಂ ‑ ಕವಳಂ, ಶಬ್ದಂ ‑ ಸವಂ
ಶಿಬಿಕೆ ‑ ಸಿವಿಗೆ, ವಿಬಂಧಂ ‑ ವಿಮದಂ

ವ ಕಾರಕ್ಕೆ ಬ ಕಾರ :
ವಸಂತಂ ‑ ಬಸಂತಂ, ವಿಧಿ ‑ ಬಿದಿ, ವಂಚನೆ ‑ ಬಂಚನೆ
ವಲ್ಲಿ ‑ ಬಳ್ಳಿ, ವಸತಿ ‑ ಬಸದಿ, ಪಾಪಿ ‑ ಬಾವಿ, ವೇಗಂ ‑ ಬೇಗಂ

೨೭೩
ಘನಮಿಲ್ಲ ಯತ್ವದೊಳ್
ಗತ್ವನತ್ವ ವಿಧಿ, ಪಿರಿದು
ಜತ್ವವಿಧಿ ಮತ್ತಂ
ದತ್ವನಿಯುಕ್ತ ಯತ್ವಮುಂ;
ಜತ್ವನಿಯತಮಂ
ಕೆಲವು ಶಬ್ಧದೊಳ್ ತಾಳ್ದಿರ್ಕುಂ

ಕೆಲವು ಕಡೆ ‘ಯ’ ಕಾರಕ್ಕೆ ಗ ಕಾರ, ವ ಕಾರ ಆದೇಶವಾಗುತ್ತದೆ. ಆ ‘ಯ’  ಕಾರಕ್ಕೆ ಜ ಕಾರವು ಆದೇಶವಾಗುವುದುಂಟು. ಕೆಲವು ಶಬ್ಧಗಳಲ್ಲಿ ದ ಕಾರಕ್ಕೆ ದ್ವಿತ್ವವಾಗಿ ಬಂದ ಯ ಕಾರಕ್ಕೂ ಜ ಕಾರವು ಆದೇಶವಾಗುತ್ತದೆ.

ಯ ಕಾರಕ್ಕೆ ಗ ಕಾರ :
ದ್ವಿತೀಯೆ ‑ ಬಿದಿಗೆ, ತೃತೀಯೆ ‑ ತದಿಗೆ, ಚಯೆ ‑ ಚರಿಗೆ

ಯ ಕಾರಕ್ಕೆ ವ ಕಾರ :
ಯುಗಂ ‑ ನೊಗಂ

ಯ ಕಾರಕ್ಕೆ ಜ ಕಾರ :
ಯೋಗಿ ‑ ಜೋಗಿ, ಯೌವನಂ ‑ ಜವ್ವನಂ
ಯಂತ್ರಂ ‑ ಜಂತ್ರಂ, ಯಾತ್ರೆ ‑ ಜತ್ರೆ

ದ ಕಾರಯುಕ್ತ ಯ ಕಾರಕ್ಕೆ ದ್ವಿತ್ವ ಜ ಕಾರ :
ವಿದ್ಯೆ ‑ ಬಿಜ್ಜೆ, ಉದ್ಯೋಗಂ ‑ ಉಜ್ಜುಗಂ, ವೈದ್ಯಂ ‑ ಬೆಜ್ಜಂ

೨೭೪
ವ್ಯವಹರಿಕುಂ ಲೋಪಂ
ದ್ಯೂತ, ವಿಂಧ್ಯ, ವಂಧ್ಯಾ, ಪ್ರಶಸ್ತ
ಸಂಧ್ಯಾ, ಧ್ಯಾನ, ಪ್ರವಿದಿತ
, ಕಾರಂಗಳ್ಗೆ
ಅವಶಿಷ್ಟ ಕಾರಂ
ಅಂತೆ ಜತ್ವಮಂ ಆಳ್ಗುಂ

ದ್ಯೂತ, ವಿಂಧ್ಯ, ವಂಧ್ಯಾ, ಸಂಧ್ಯಾ, ಧ್ಯಾನ ಈ ಶಬ್ಧಗಳಲ್ಲಿಯ ದ ಧ ಕಾರಗಳಿಗೆ ಲೋಪ ಉಂಟಾಗುತ್ತದೆ. ಉಳಿದ ಯ ಕಾರಕ್ಕೆ ಜ ಕಾರಾದೇಶವಾಗುತ್ತದೆ.

ದ ಕಾರ ಲೋಪಗೊಂಡು ಉಳಿದ ಯ ಕಾರ ಜ ಕಾರವಾದುದಕ್ಕೆ :
ದ್ಯೂತಂ ‑ ಜೂದು

ಧ ಕಾರ ಲೋಪಗೊಂಡು ಉಳಿದ ಯ ಕಾರ ಜ ಕಾರವಾದುದಕ್ಕೆ :
ವಂಧ್ಯಾ‑ ಬಂಜೆ,
ಸಂಧ್ಯಾ ‑ ಸಂಜೆ,
ಧ್ಯಾನಂ ‑ ಜನಂ

೨೭೫
ನೆಗೞ್ಗುಂ, ದ್ವಿತ್ವ ಅಗ್ರದ ರೇಫೆಗೆ
ಲೋಪಂ,
ವರ್ಣಮಿಶ್ರ ರೇಫಕ್ಕಂ
ತಾಂ ನೆಗೞ್ಗುಂ;
ಲೋಪಂ ಬಹುಳದೆ ನೆಗೞ್ಗುಂ
ಅವೃತ ರೇಫಂ
ಅಡಿಯೊಳ್ ಆವರ್ಣದ ವೋಲ್

ದ್ವಿತ್ವವಾಗಿ ಬಂದ ರೇಫೆಗೆ ಲೋಪ ಬರುತ್ತದೆ. ಬಹುಳ ಎಂದಿರುವುದರಿಂದ ಕೆಲವು ಕಡೆ ರೇಫೆಗೆ ಲೋಪ ಬರುವುದಿಲ್ಲ. ವರ್ಣದೊಡನೆ ಸೇರಿರುವ ರೇಫೆಗೂ ಕೆಲವೆಡೆ ಲೋಪ ಬರುತ್ತದೆ. ಬೇರೆ ವರ್ಣದೊಡನೆ ಸೇರಿರುವ ರೇಫೆಯೂ ಅದೇ ವರ್ಣವಾಗಿ ಮಾರ್ಪಾಟವಾಗುತ್ತದೆ.

ದ್ವಿತ್ವಾಗ್ರ ರೇಫ ಲೋಪಕ್ಕೆ :
ಕರ್ತರಿ ‑ ಕತ್ತರಿ, ವರ್ತಿ ‑ ಬತ್ತಿ
ಬರ್ಬ್ಬರ ‑ ಬಬ್ಬುರಂ
ಸರ್ಬಂ ‑ ಸಬ್ಬು, ಪುರ್ಣ್ಗಿ ‑ ಪುಗ್ಗಿ

ವರ್ಣಮಿಶ್ರ ರೇಫ ಲೋಪಕ್ಕೆ :
ತಂತ್ರಿ ‑ ತಂತಿ, ದ್ರೋಣಿ ‑ ದೋಣಿ,
ಪ್ರಣಿತೆ ‑ ಹಣಿತೆ, ಶ್ರೇಣಿ ‑ ಸೇಣಿ,
ಚಂದ್ರಂ ‑ ಚಂದಂ

ವೃತರೇಫೆ ತನ್ನ ಮೇಲಿನ ವರ್ಣವಾದುದಕ್ಕೆ :
ವೇತ್ರಂ ‑ ಬೆತ್ತಂ, ಪುತ್ರಿಕೆ ‑ ಪುತ್ತಿಗೆ,
ಮುದ್ರಿಕೆ ‑ ಮುದ್ದಿಗೆ, ನೇತ್ರಂ ನೆತ್ತಂ,
ನಿದ್ರೆ ನಿದ್ದೆ, ಚಿತ್ರಕಾರಂ ಚಿತ್ತಾರಂ

೨೭೬
ದ್ವಿತ್ವಂ ಬೆರಸಿದ ಕತ್ವಂ,
ಚತ್ವಂ, ಖತ್ವಂ
ಯಥಾ ಪ್ರಯೋಗದಿಂ ಅಕ್ಕುಂ;
ಕ್ಷತ್ವಕ್ಕೆ, ಬಹುಳದಿಂದಂ
ಸತ್ವಂ ಕತ್ವಂ ದ್ವಿರುಕ್ತಿ ಇಲ್ಲ
ಅರೆ ಎಡೆಯೊಳ್

‘ಕ್ಷ’ ಕಾರಕ್ಕೆ ದ್ವಿತ್ವದಿಂದ ಕೂಡಿದ ‘ಕ’ ಕಾರ, ‘ಚ’ ಕಾರ ಮತ್ತು ‘ಖ’ ಕಾರಗಳು ಪ್ರಯೋಗಾನುಸಾರವಾಗಿ ಆದೇಶವಾಗುತ್ತವೆ. ಆ ಕ್ಷಕಾರಕ್ಕೆ ಕೆಲವೆಡೆ ‘ಸ’ ಕಾರವು ಮತ್ತೆ ಕೆಲವೆಡೆ ದ್ವಿತ್ವವಿಲ್ಲದ ಕ ಕಾರವೂ ಬರುವುದುಂಟು.

ಕ್ಷ ಕಾರಕ್ಕೆ ದ್ವಿತ್ವ ಕ ಕಾರ :
ಪಕ್ಷಂ ‑ ಪಕ್ಕಂ, ಅಕ್ಷರಂ ‑ ಅಕ್ಕರಂ
ಲಕ್ಷಂ ‑ ಲಕ್ಕಂ, ಲಕ್ಷಣಂ ‑ ಲಕ್ಕಣಂ,
ರಕ್ಷೆ ‑ ರಕ್ಕೆ

ಕ್ಷ ಕಾರಕ್ಕೆ ದ್ವಿತ್ವ ಚ ಕಾರ :
ಅಕ್ಷಂ ‑ ಅಚ್ಚು, ಅಕ್ಷಿ ‑ ಅಚ್ಚಿ, ಭಿಕ್ಷು ‑ ಬಿಚ್ಚು,
ರಕ್ಷಂ ‑ ಕಚ್ಚಂ

ಕ್ಷ ಲಕಾರಕ್ಕೆ ದ್ವಿತ್ವ ಖ ಕಾರ :
ಪ್ರಕ್ಷಾಳಂ ‑ ಪ್ರಖ್ಖಾಳಂ

ಕ್ಷ ಕಾರಕ್ಕೆ ಸ ಕಾರ :
ಕ್ಷಪಣಂ ‑ ಸವಣಂ, ಕ್ಷೇಮ ‑ ಸೇಮಂ

ಕ್ಷ ಕಾರಕ್ಕೆ ದ್ವಿತ್ವವಲ್ಲದ ಕ ಕಾರ :
ಪರೀಕ್ಷೆ ‑ ಪರಿಕೆ, ಕ್ಷೀರಂ ‑ ಕೀರಂ,
ಕ್ಷಾರಂ ‑ ಕಾರಂ, ಕ್ಷೇಪಣಂ ‑ ಕೇವಣಂ

೨೭೭
ದಪಡೆಗುಂ ಮತ್ವಂ ವತ್ವಮಂ;
ಅಡಸಿದ ಚತ್ವಕ್ಕೆ ಸತ್ವದತ್ವಂ,
, , ತಂ, ಪಡೆಗುಂ ಚತ್ವಮ
ಎತ್ತಂ ಪಡೆಗುಂ
ಬಹುಳದೆ ಕಾರದ ಎಡೆಯಂ
ಣಂ

ಪದದ ಕೊನೆಯಲ್ಲಿರುವ ‘ಮ’ ಕಾರವು ವ ಕಾರವಾಗುತ್ತದೆ. ಚ ಕಾರಕ್ಕೆ ಸ ಕಾರ, ದ ಕಾರಗಳು ಆದೇಶವಾಗುತ್ತವೆ. ಶ, ಷ, ತ ಕಾರಗಳು ಚ ಕಾರವನ್ನು ಹೊಂದುತ್ತವೆ. ಹ ಕಾರಕ್ಕೆ ವಿಕಲ್ಪದಿಂದ ಯ ಕಾರ, ಗ ಕಾರ ಮತ್ತು ಣ ಕಾರಗಳು ಆದೇಶವಾಗುತ್ತವೆ.

ಮ ಕಾರಕ್ಕೆ ವ ಕಾರ :
ಕಾಮಂ ‑ ಕಾವಂ, ಚಾಮುಂಡಿ ‑ ಚಾವುಂಡಿ,
ಭೀಮಂ ‑ ಭೀವಂ, ಶ್ರಮಂ ‑ ಸವಂ,
ಕ್ರಮಂ ‑ ಕವಂ, ಸಂಗಮಂ ‑ ಸಂಗವಂ

ಚ ಕಾರಕ್ಕೆ ಸ ಕಾರ :
ಚೂರ್ಣ ‑ ಸುಣ್ಣಂ, ಕ್ರಕಚ ‑ ಕರಗಸಂ,
ಚರ್ಮಕಾರಂ ‑ ಸಮ್ಮಗಾಱಂ, ಚೇಲಂ ‑ ಸೇಲೆ

ಶ ಕಾರಕ್ಕೆ ಚ ಕಾರ :
ಶಷ್ಟು ‑ ಚಕ್ಚು, ನಿಶ್ಚಲಂ ‑ ನಿಚ್ಚಳಂ,
ವಂಶಂ ‑ ಬಂಚಂ, ನಿಶ್ಚಿಂತಂ ‑ ನಿಶ್ಚಿಂತಂ

ಷ ಕಾರಕ್ಕೆ ಚ ಕಾರ :
ಷಷ್ಠಿ‑ ಚಟ್ಟಿ

ತ ಕಾರಕ್ಕೆ ಚ ಕಾರ :
ನರ್ತಕಿ ‑ ನಚ್ಚಣಿ, ನಿತ್ಯಂ ‑ ನಿಚ್ಚಂ, ವತ್ಸಳೆ ‑ ಬಚ್ಚಳೆ

ಹ ಕಾರಕ್ಕೆ ಯ ಕಾರ :
ಕುಹಕಂ ‑ ಕೊಯಕಂ

ಹ ಕಾರಕ್ಕೆ ಗ ಕಾರ :
ಸಿಂಹಂ ‑ ಸಿಂಗಂ, ಪಡಹು ‑ ಪಡಗು

ಹ ಕಾರಕ್ಕೆ ಣ ಕಾರ :
ಸನ್ನಾಹಂ ‑ ಸನ್ನಣಂ