೩೧೫
ಅನುಕೃತಿ ಪದಂ, ಒದವೆಯುಂ
ಅದು ಅನೆ ಎಂಬೆರಡುಂ
ಪದಾಂತ್ಯದೊಳ್ ಬರೆಯುಂ
ನೆಟ್ಟನೆ ತಾಂ ಅವ್ಯಯಂ ಅಪ್ಪುವು,
ಅನೆಯ ನಕಾರಂ
ವಿಕಲ್ಪದಿಂದೆ ಕಾರಂ

ಲಿಂಗ, ವಚನ, ವಿಭಕ್ತಿಗಳ ವಿಕಾರವಿಲ್ಲದೆ ಒಂದೇ ರೂಪದಲ್ಲಿರುವ ಶಬ್ಧಗಳು ‘ಅವ್ಯಯಪದ’ ಗಳೆನಿಸುತ್ತವೆ. ಈ ಅವ್ಯಯ ಪದಗಳು ನಾಮವಿಭಕ್ತಿ, ಕ್ರಿಯಾವಿಭಕ್ತಿ ಪ್ರತ್ಯಯಗಳನ್ನು ಮತ್ತು ಲಿಂಗ, ವಚನಗಳನ್ನು ಹೊಂದಿರುವುದಿಲ್ಲ. ಅನುಕರಣ ಪದಗಳು, ಅದು, ಅನೆ ಅಂತ್ಯದಲ್ಲಿರುವ ಪದಗಳು ಅವ್ಯಯಗಳೆನಿಸುತ್ತವೆ. ‘ಅನೆ’ ಎಂಬುದರ ‘ನ’ ಕಾರ ವಿಕಲ್ಪದಿಂದ ‘ಗ’ ಕಾರ ವಾಗುತ್ತದೆ.

ಅನುಕರಣ ಪದ :
ಧಿಗಿಲನೆ, ಭುಗಿಲನೆ, ಭೋರನೆ

ಅದುಗೆ :
ನೂಂಕದು, ನೂಳದು, ತೆತ್ತದು, ತೆತ್ತದೆಂದು

ಅನೆಗೆ :
ಕಮ್ಮನೆ, ಇಮ್ಮನೆ, ಮೆಲ್ಲನೆ, ಸಿಯ್ಯನೆ
‘ಅನೆ’ಯ ನ ಕಾರಕ್ಕೆ

ವಿಕಲ್ಪದಿಂದ ‘ಗ’ ಕಾರ :
ನೆಟ್ಟನೆ ‑ ನೆಟ್ಟಗೆ, ಸುಮ್ಮನೆ ‑ ಸುಮ್ಮಗೆ,
ಕಮ್ಮನೆ ‑ ಕಮ್ಮಗೆ, ಬಿಮ್ಮನೆ ‑ ಬಿಮ್ಮಗೆ

೩೧೬
ಸೊಲ್ಲೊಳ್ ಕ್ರಿಯಾತ್ಮಕ
ಅವ್ಯಯಂ ಇಲ್ಲ ಎಂಬುದು,
ಕೀಱಿದು ಎಂಬುದು
ಕೀರ್ಣಾರ್ಥಂ, ಬಲ್ಲರ್ಗೆ
ನಿರ್ನಿಮಿತ್ತಾರ್ಥಂ ಉಲ್ಲಸಿತಂ
ನಿರ್ನೆರ್ ಎಂಬುದುಂ
ನಿರ್ನೆರಮುಂ

ಕನ್ನಡದ ರಚನೆಯಲ್ಲಿ ‘ಇಲ್ಲ’ ಎಂಬುದು ಪ್ರತಿಷೇಧಾರ್ಥವುಳ್ಳ ಕ್ರಿಯಾ ಸ್ವರೂಪದ ಅವ್ಯಯ, ‘ಕೀಱಿದು’ ಎಂಬುದು ದಟ್ಟವಾಗಿ ಎಂಬ ಅರ್ಥವುಳ್ಳದ್ದು. ‘ನಿರ್ನೆರ್’, ‘ನಿರ್ನೆರಂ’ ಎಂಬುವವು ಅಕಾರಣವಾಗಿ ಎಂಬರ್ಥವುಳ್ಳವು ಈ ನಾಲ್ಕು ರೂಪಗಳು ಅವ್ಯಯಗಳು.

೩೧೭
ನೆಗೞ್ಗುಂ ಮನಾರ್ಥಂ,
ಸುಮ್ಮಗೆ, ಸುಮ್ಮನೆ, ಉಸಿಕನೆ, ಎಂದು
ನುಡಿವ ಅವ್ಯಯದೊಳ್
ಪುಗುಗುಂ ಗುಱುಗುಮ್ಮಗೆ,
ಬಿನ್ನಗೆ, ಬಿನ್ನನೆ, ಎನಲೊಡಂ
ಕ್ರಿಯಾಶೂನ್ಯಾರ್ಥಂ

‘ಸುಮ್ಮಗೆ’, ‘ಸುಮ್ಮನೆ’, ‘ಉಸಿಕನೆ’ ಎಂದು ಹೇಳುವ ಅವ್ಯಯಗಳಲ್ಲಿ (ಏನೂ ಮಾತಾಡದ) ಮನದ ಅರ್ಥವುಂಟು. ‘ಗುಱುಗುಮ್ಮಗೆ’, ‘ಬಿನ್ನಗೆ’, ‘ಬಿನ್ನನೆ’ ಎಂಬೆಡೆ ಗಳಲ್ಲಿ (ಏನೂ ಮಾಡದೆ) ಕ್ರಿಯಾಶೂನ್ಯದ ಅರ್ಥವುಂಟು. ಈ ಅವ್ಯಯಗಳು ಕ್ರಿಯೆಯು ನಡೆದ ರೀತಿಯನ್ನು ಹೇಳುವುದರಿಂದ ಅವು ಸಾಮಾನಾವ್ಯಯಗಳ ಕಕ್ಷೆಯಲ್ಲಿ ಬರುತ್ತವೆ.

೩೧೮
ಆನುಂ ಎನಿಪ್ಪ ಅವ್ಯಯಂ,
ಸ್ಥಾನದಿಶೆ
ಕಾಲ ಸಂಖ್ಯೆಗಳೊಳ್,
ಉಸಿರ್ವರ್
ಮತ್ತು ಏನುಂ ಎನಿಪ್ಪ ಅರ್ಥಮಂ
ಇರದೆ ಆನಿಪರ್
ಅಣಂ, ಆಣಂ ಎಂದು ನುಡಿವ
ಅವ್ಯಯದೊಳ್

ಸ್ಥಾನ, ದೆಸೆ, ಕಾಲ ಹಾಗೂ ಸಂಖ್ಯಾವಾಚಕಗಳಲ್ಲಿ ‘ಆನುಂ’ಎಂಬ ಅವ್ಯಯವನ್ನು ಸೇರಿಸಲಾಗುವುದು. ‘ಅಣಂ’ ‘ಆಣಂ’ ಎಂಬ ಅವ್ಯಯಗಳನ್ನು ಏನುಂ (ಏನೇನೂ ಇಲ್ಲ) ಎಂಬ ಅರ್ಥವನ್ನು ಆರೋಪಿಸುತ್ತಾರೆ. ಈ ಮೂರು ಅವ್ಯಯಗಳು ಯಾವುದೊಂದು ಕ್ರಿಯೆಯ ಸ್ಥಳ, ಕಾಲ, ರೀತಿಗಳನ್ನು ತಿಳಿಸುವುದರಿಂದ ಅವು ಸಾಮಾನ್ಯ ಅವ್ಯಯಗಳೆನಿಸುವವು.

ಸ್ಥಾನಕ್ಕೆ : ಎಲ್ಲಿಯಾನುಂ
ದೆಶೆಗೆ : ಎತ್ತಾನುಂ
ಕಾಲಕ್ಕೆ : ಎಂದಾನುಂ
ಸಂಖ್ಯೆಗೆ : ಒಂದಾನುಂ, ಎರಡಾನುಂ, ಪತ್ತಾನುಂ, ನೂಱುನುಂ
ಅಣಕ್ಕೆ : ಕಾರ್ಯಮಣಮಿಲ್ಲ
ಆಣಕ್ಕೆ : ಗುಣಮಾಣಮಿಲ್ಲ

೩೧೯
ನಾಡೆ, ಎಡೆ, ಆವಗಂ,
ನೆಱ, ನೀಡುಂ, ಕರಂ,
ಆದಂ, ಎಯ್ದೆ, ನೂಳದು,
ಪಿರಿದು, ನೀಡು, ಮಿಗೆ,
ಕೆನ್ನಂ, ಎಲ್ಲಂ ರೂಢಿಯ
ಉಳ್ಳುದುಂ ಇವು
ಅವ್ಯಯದೊಳ್ ಅಧಿಕ ಅರ್ಥಂ

ನಾಡೆ, ಎಡೆ, ಆವಗಂ, ನೆಱ, ನೀಡುಂ, ಕರಂ, ಆದಂ, ಎಯ್ದೆ, ನೂಳದು, ಪಿರಿದುಂ, ನೀಡು, ಮಿಗೆ, ಕೆನ್ನಂ ಎಂಬ ಈ  ಪ್ರಸಿದ್ಧ ಅವ್ಯಯಗಳು ಅಧಿಕ (ಅತಿಶಯ) ಎಂಬರ್ಥವನ್ನೊಳಗೊಂಡಿವೆ.

೩೨೦
ಭೋಂಕನೆ, ಚೆಕ್ಕನೆ,
ಭೋರನೆ, ಭೋಂಕಲ್,
ಚಡುಪುಡನೆ, ಗಿಱ್ರತಿಱ್ರನೆಯುಂ,
ಮತ್ತಂ, ಕಡು ಚೆಚ್ಚರ, ಬೆಚ್ಚರಮುಂ,
ಕೂಡಿರೆ ತಮ್ಮೊಳ್
ಒದವುಗುಂ ಶೀಘ್ರ ಅರ್ಥಂ

ಭೋಂಕನೆ, ಚೆಕ್ಕನೆ, ಭೋರನೆ, ಭೋಕಲ್, ಚಡುಪುಡನೆ ಗಿಱ್ರನೆ, ತಿಱ್ರನೆ, ಕಡು, ಚೆಚ್ಚರ, ಬೆಚ್ಚರಂ ಇವು ಶೀಘ್ರತೆಯ ಅರ್ಥದ ಅವ್ಯಯಗಳು.

೩೨೧
ಏಗಂ, ವಲಂ,
ವೆಱಂ, ದಲ್,
ತಾಗುಗುಂ
ಅತಿನಿಶ್ಚಯಾರ್ಥಮಂ,
ತಾಂ ಇತರ ಅರ್ಥಾಗತಂ ಅದು
ಮತ್ತಿನ, ನುಡಿ ಏಗೆಯ್ದಂ
ಬೇಱ ವೇಱಯನೆ
ಪೃಥಗರ್ಥಂ

ಏಗಂ, ವಲಂ, ವೆಱಂ, ದಲ್ ಇವು ಅತ್ಯಂತ ನಿಶ್ಚಯತೆಯ ಅರ್ಥವನ್ನು ಪಡೆದಿವೆ. “ಮತ್ತಿನ” ಎಂಬ ಶಬ್ದ ಇತರ (ಅನ್ಯ) ಎಂಬ ಅರ್ಥವುಳ್ಳದ್ದು “ಬೇಱಿವೇಱ” ಎಂದರೆ ವಿಂಗಡನೆ (ಪ್ರತ್ಯೇಕ) ಎಂಬರ್ಥ.

೩೨೨
ಅನುತಿಟ್ಟನೆ, ತಿಱ್ಱನೆ,
ಬಟ್ಟನೆ, ಎಂಬಿವಱಳ್
ಭ್ರಮಾರ್ಥಂ;
ಒಯ್ಕನೆಯನೆ, ನೆಟ್ಟನೆಯನೆ,
ಬಂದು ನಿಲ್ಕು ನೆಟ್ಟಗೆ, ಯೆನೆ
ಇವಱೊಳ್ ಪರಿಸ್ಪುಟ
ಅರ್ಥ ವಿಧಾನಂ

‘ಅನುತಿಟ್ಟನೆ’, ‘ತಿಱ್ಱನೆ’, ‘ಬಟ್ಟನೆ’ ಎಂಬಿವುಗಳಲ್ಲಿ ಭ್ರಮಾರ್ಥವಿದೆ (ತಿರುಗು, ಸುತ್ತು) ‘ಒಯ್ಯನೆ’, ‘ನೆಟ್ಟನೆ’, ‘ನೆಟ್ಟಗೆ’, ಎಂಬುವುಗಳಲ್ಲಿ ಪರಿಸ್ಫುಟಾರ್ಥ ನೆಲೆಸಿದೆ (ಸ್ಪಷ್ಟವಾಗಿ ವ್ಯಕ್ತವಾಗುವ ಅರ್ಥ).

೩೨೩
ವೇದನೆಯೊಳ್, ಅಹಹ ಎಂಬುದು ;
ಖೇದದೊಳ್ ಅಚ್ಚರಿಯೊಳ್;
ಅಕ್ಕಟಾ ಎಂಬುದು,
ತತ್ ಖೇದ, ವಿಡಂಬನ ಕರುಣ
ನಾದದೊಳ್
ಅಯ್ಯೋ ಎನಿಪ್ಪುದು
ಅವತರಿಸಿರ್ಕುಂ

ವೇದನೆಯಲ್ಲಿ (ನೋವಿನಲ್ಲಿ) ‘ಅಹಹ’ ಅಂಬುದು, ಖೇದದಲ್ಲಿ (ಖಿನ್ನತೆ) ಮತ್ತು ಆಶ್ಚರ್ಯದಲ್ಲಿ ‘ಅಕ್ಕಟಾ’ ಎಂಬುದು ಖೇದ, (ಖಿನ್ನ) ವಿಡಂಬನ, ಹಾಗೂ ಕರುಣೆ (ಮರುಕ) ಮೂರು ಸಂದರ್ಭಗಳಲ್ಲಿ ‘ಅಯ್ಯೋ’ ಎಂಬುದು ಅವತರಿಸುತ್ತದೆ. ದುಃಖ, ಕೋಪ, ಆಶ್ಚರ್ಯ, ವಿಡಂಬನೆ ಇತ್ಯಾದಿ ಮನೋಭಾವಗಳನ್ನು ವ್ಯಕ್ತಪಡಿಸುವಾಗ ಬಳಕೆ ಯಾಗುವ ಈ ಶಬ್ದಗಳು ‘ಭಾವ ಸೂಚಕ ಅವ್ಯಯ’ (ನಿಪಾತಾವ್ಯಯ)ಗಳಾಗಿವೆ.

೩೨೪
ಸವನಿಪುದು ಓಹೋ,
ಹೋ ಎನೆ
ನಿವಾರಣ ಅರ್ಥಂ ಸಹಾರ್ಥಂ
ಒಡನೆ, ನೆ ಹಸನ ವ್ಯವಹೃತಿ
ಗಹಗಹ, ಎನೆ ಪಿರಿದು
ಎಂಬ ಅಭಿಪ್ರಾಯದಲ್ಲಿ
ಸೋಡಂ ಬಾಡಂ

‘ಓಹೋ’, ‘ಹೋ’ ಎನ್ನಲು ನಿವಾರಣಾರ್ಥ (ತಡೆಗಟ್ಟು / ನಿಲ್ಲಿಸು) ಪ್ರಾಪ್ತವಾಗುತ್ತದೆ. ‘ಒಡನೆ’ ಎಂಬುದು ‘ಸಹಿತ-ಸಂಗಡ’ ಎಂಬರ್ಥದ ಸಂದರ್ಭದಲ್ಲಿ ‘ಗಹಗಹ’ ಎಂಬುದು ನಗುವಿನ ಸಂದರ್ಭದಲ್ಲಿ ‘ಸೋಡಂಬಾಡಂ’ ಎಂಬುದು ಪಿರಿದು (ಅತಿಶಯ) ಎಂಬರ್ಥದಲ್ಲಿ ಬಳಕೆಯಾಗುತ್ತದೆ.

೩೨೫
ಪರಿವಿಡಿಯಿಂದ ಅಃ ಆಃ
ಎಂಬೆರಡುಂ, ವಿಸ್ಮಯ ವಿಡಂಬನಂ;
ವ್ಯಸನ ಸುಖಂ
ಸ್ಫುರಿತಾರ್ಥದೊಳ್
ಉಃ, ಎಂಬುದು ಪಿರಿದುಂ
ಅಸಹ್ಯಾರ್ಥದೊಳ್
ಪ್ರಯೋಗಿಸೆ ಪಡೆಗುಂ

‘ಅಃ’, ‘ಆಃ’ ಎಂಬಿವು ಕ್ರಮವಾಗಿ ವಿಸ್ಮಯ, ವಿಡಂಬನ, ವ್ಯಸನ ‑ ಸುಖ ಎಂಬರ್ಥಗಳಲ್ಲಿ ‘ಉಃ’ ಎಂಬುದು ಅಸಹ್ಯಾರ್ಥಗಳಲ್ಲಿ ಬಳಕೆಯಾಗುವುವು.

೩೨೬
ಸ್ಮರಣ ವಿಚಾರ ಆಮಂತ್ರಣ
ಪರಿಗತಂ ಎನಿಸಿರ್ಪುವು
ಎಲೆಲೆ, , ಎಂಬಿವು ಸಂಚರಿಪುದು
ಅನುಮತದೊಳ್;
ಬಲ್ಲವರಿಂ
ಕಾರ ಅದು ಕಾರ
ಅವಧಾರಣದೊಳ್

ಸ್ಮರಿಸುವ ಅಂದರೆ ನೆನೆಸಿಕೊಳ್ಳುವ, ವಿಚಾರಿಸುವ ಕೂಗಿ ಕರೆಯುವ ಅಥವಾ ಸಂಭೋದಿಸುವ ಸಂದರ್ಭಗಳಲ್ಲಿ ‘ಎಲೆಲೆ’, ‘ಏ’ ಎಂಬ ಅವ್ಯಯಗಳೂ ಅವಧಾರಿಸುವ ಅಥವಾ ಒತ್ತಿ ಹೇಳುವ ಸಂದರ್ಭಗಳಲ್ಲಿ ‘ಎ’, ‘ಏ’ ಎಂಬ ಅವ್ಯಯಗಳೂ ಬಳಕೆಯಾಗುವುವು. ಗಮನಿಸಬೇಕಾದ ಸಂಗತಿಯೆಂದರೆ ‘ಏ’ ಎಂಬ ಅವ್ಯಯಕ್ಕೆ ಸ್ಮರಣ ‑ ವಿಚಾರ ‑ ಆಮಂತ್ರಣವೆಂಬ ಮೂರು ಅರ್ಥಗಳಲ್ಲದೆ ಅವಧಾರಣ ಎಂಬ ಅರ್ಥವೂ ಉಂಟು; ‘ಎ’ ಅವ್ಯಯಕ್ಕೆ ಇರುವ ಅರ್ಥ ಅವಧಾರಣೆಯೊಂದೇ.

೩೨೭
ಮತ್ತೆ, ಎಂಬುದು
ಪುನರರ್ಥದೊಳ್
ಎತ್ತಾನುಂ, ಎಲ್ಲಿಯಾನುಂ
ಎಂಬರ್ಥದೊಳ್
ಆಯತ್ತಂಗಳ್
ಅರಮೆ, ಅರೆಗಳ್,
ಸುತ್ತೇಂ ತರಳಾರ್ಥದಲ್ಲಿ
ಬೆಳ್ಪಳಂ, ಅಕ್ಕುಂ

ಪುನಃ (ಆಮೇಲೆ) ಎಂಬರ್ಥದಲ್ಲಿ ‘ಮತ್ತೆ’ ಎಂಬುದು, ‘ಎತ್ತಾನುಂ’ ‘ಎಲ್ಲಿಯಾನುಂ’ ಎಂಬರ್ಥದಲ್ಲಿ ‘ಅರಮೆ’, ‘ಅರೆ’ ಎಂಬಿವು ಬರುತ್ತವೆ. ‘ಬೆಳ್ಪಳಂ’ ಎಂಬುದು ಚಾಂಚಲ್ಯಾರ್ಥ (ಭಯ, ಚಕಿತಾರ್ಥ) ದಲ್ಲಿ ಪ್ರಯೋಗವಾಗುತ್ತದೆ.

೩೨೮
ಸಲೆ, ಯೆಂಬುದು ನಿತ್ಯ
ಅರ್ಥ ಅವಲಂಬಿ
ಹುಂ, ಎನೆಯುಂ
ಅಲ್ತೆ, ಅಲ್ಲದೆ ಎನೆಯುಂ
ಫಲಿಯಿಸುಗುಂ
ಪ್ರಶ್ನೆ ಉಜ್ವಲ ಅನುಮಾನಾರ್ಥ
ಯುಗಳಂ ಅವು ಶಾಬ್ದಕರಿಂ

‘ಸಲೆ’ ಎಂಬುದು ಯಾವಾಗಲೂ (ಸದಾಕಾಲಕ್ಕೂ / ನಿತ್ಯಾರ್ಥ) ಎಂಬರ್ಥದಲ್ಲಿ ‘ಹುಂ’-ಅಲ್ತೆ’ ಅಲ್ಲ(ವೆ) ಎಂಬಿವು ಪ್ರಶ್ನೆ, ಅನುಮಾನ ಅರ್ಥಗಳಲ್ಲಿ ಬಳಕೆಯಾಗುತ್ತವೆ.

೩೨೯
ಅಂ, ಉಂ, ಎಂಬೆರಡುಂ
ಅಮರ್ಗುಂ
ಸಮುಚ್ಚಯ ಅರ್ಥದೊಳ್
, , , , ಎಂಬಿವು
ಶಬ್ದಮಂ ಅಪ್ಪಿ ವಿಶಂಕೆ, ಪ್ರಶ್ನೆ
ಮಂಡಲ ಆಕ್ಷೇಪಕ ಅರ್ಥದೊಳ್
ವರ್ತಿಸುಗುಂ

ಸಮುಚ್ಚಯಾರ್ಥದಲ್ಲಿ ‘ಅಂ’, ‘ಉಂ’ ಎಂಬ ಅವ್ಯಯಗಳು ಬಳಕೆಯಾಗುತ್ತವೆ. ವಿಶಂಕೆ, ಪ್ರಶ್ನೆ, ಮಂಡನೆ ಮತ್ತು ಆಕ್ಷೇಪಕ ಅರ್ಥಗಳಲ್ಲಿ ಎ, ಏ, ಒ, ಓ ಎಂಬ ಅವ್ಯಯಗಳು ವ್ಯವಹರಿಸುವವು.

೩೩೦
ಮೆಱಿಗುಂ ಸುಮ್ಮನೆ,
ಸುಮ್ಮಗೆ,
ಬಱಿದೆ, ಅಲ್ಲವಱು,
ಎಂಬ ಮಾತು ಅಕಾರಣದೊಳ್
ಪೊಚ್ಚಱುಗುಂ ತೃತೀಯೆ
ಬಂದುಂ ಅಂತಱಂ, ಎಂಬ
ಪದಕ್ಕಂ ಕಾರ ಕ್ಕಿತರಂ

‘ಸುಮ್ಮನೆ’, ‘ಸುಮ್ಮಗೆ ’, ‘ಬಱದೆ’, ‘ಅಲ್ಲವಱ’ಎಂಬಿವು ಅಕಾರಣ (ನಿಷ್ಕಾರಣ) ಎಂಬ ಅರ್ಥದಲ್ಲಿ ಪ್ರಯೋಗವಾಗುತ್ತವೆ. ‘ಅಂತಱಂ’ಎಂಬ ಪದಕ್ಕೆ ‘ಎ’ ಕಾರವನ್ನುಳಿದ ತೃತೀಯಾ ಪ್ರತ್ಯಯಗಳು (ಇಂ, ಇಂದಂ, ಇಂದೆ) ಬಂದು ಸೇರುತ್ತವೆ. ಅದರಿಂದ ರೂಪ ಗೊಳ್ಳುವ ‘ಅಂತಱಂ’, ‘ಅಂತಱಂದಂ’, ‘ಅಂತಱಂದೆಂ’ಎಂಬುವು ವಿಭಕ್ತ್ಯಂತ ರೂಪಗಳಾದರೂ ಅವು ಅವ್ಯಯಗಳಾಗುತ್ತವೆ.

೩೩೧
ಬೞಿಕೆ, ಬಳಷಿಕ್ಕಂ,
ಬೞಿಕಂ, ಬೞಿಕ್ಕೆ, ಬೞಯಂ,
ಪ್ರಸಿದ್ಧ ಪಶ್ಚಾತ್ ಅರ್ಥಂ
ಘೞಿಯಿಪುದು;
ವಿಕಲ್ಪ ಅರ್ಥಂ
ಕೞಲದೆ ಮೇಣ್
ಎಂಬ ಶಬ್ದದೊಳ್ ಶಾಬ್ದಿಕರಿಂ

ಶಾಬ್ದಿಕರಿಂದ (ವಿದ್ವಾಂಸರಿಂದ) ‘ಬೞಕೆ’, ‘ಬೞಕ್ಕಂ’, ‘ಬೞಕಂ’, ‘ಬೞಕ್ಕೆ’, ‘ಬೞಯಂ’ ಎಂಬ ಅವ್ಯಯಗಳು ಅನಂತರ / ಬಳಿಕ (ಪಶ್ಚಾತ್) ಎಂಬರ್ಥ ಘಟಿಸುತ್ತವೆ. ‘ಮೇಣ್’ ಎಂಬ ಅವ್ಯಯಕ್ಕೆ ವಿಕಲ್ಪ (ಅಥವಾ) ಎಂಬರ್ಥ ಬರುತ್ತದೆ.

೩೩೨
ಪೌವನೆ, ಆಕಸ್ಮಿಕ
ಭಯ ಭಾವಿತಂ;
ಅಂತು, ಇಂತುಗಳ್
ಪದದ ಪೂರಣದೊಳ್
ಕೋವುವು ಚಿಃ, ಇಸ್ಸೀಗಳ್
ತಾಂ ಒಗೆದು ಜುಗುಪ್ಸ
ಅರ್ಥದೊಳ್ ವರ್ತಿಸುಗುಂ

‘ಪೌ (ಹೌ) ವನೆ’ ಎಂಬುದು ಆಕಸ್ಮಿಕ ಮತ್ತು ಭಯ ಎಂಬರ್ಥದಲ್ಲಿ, ‘ಅಂತು ಇಂತು’ಎಂಬಿವು ಪಾದಪೂರ್ಣತೆ (ಸಂದರ್ಭ ಸೂಚನೆಯ) ಅರ್ಥದಲ್ಲಿ ‘ಚಿಃ’ಮತ್ತು ‘ಇಸ್ಸೀ’ಗಳು ಜುಗುಪ್ಸೆಯ (ತಿರಸ್ಕಾರ)ಅರ್ಥದಲ್ಲಿ ಬಳಕೆಯಾಗುತ್ತವೆ.

೩೩೩
ಉಪಮಾನ ಅರ್ಥದೊಳ್
ಇವು ವರ್ತಿಪುವು
ಅಂತಿರೆ, ಅಂತೆ,
ವೋಲ್, ವೋಲ್ಗಳ್,
ರಂಜಿಪುವು ಗಡ, ಗಳಂ, ಗಡಂ, ಗಳು
ಉಪಚಿತವಾರ್ತೆಯೊಳ್
ಉಚಿತ ಸಂಭಾಷಣೆಯೊಳ್

‘ಅಂತಿರೆ’, ‘ಅಂತೆ’, ‘ಅಂತೆವೋಲ್’ ಮತ್ತು ‘ವೋಲ್’ ಎಂಬ ನಾಲ್ಕು ಅವ್ಯಯಗಳು ಉಪಮಾನಾರ್ಥದಲ್ಲಿ ಬಳಕೆಯಾಗುವವು. ‘ಗಡ’, ‘ಗಳ’, ‘ಗಡಂ’, ಎಂಬ ಮೂರು ಅವ್ಯಯಗಳು ಸಂಭಾಷಣೆಯಲ್ಲಿ ಮತ್ತು ಉಚಿತವಾದೆಡೆ ಗಳಲ್ಲೂ ಬಳಕೆಯಾಗುವುವು.