ಪರಿಚಯ: ಕೆಲವು ಸಸ್ಯಗಳು ಬೇಸಿಗೆಯಲ್ಲಿ ಹೂ ಬಿಡುತ್ತವೆ; ಕೆಲವು ಸಸ್ಯಗಳು ಚಳಿಗಾಲದಲ್ಲಿ ಹೂಬಿಡುತ್ತವೆ; ಇನ್ನೂ ಕೆಲವು ಸಸ್ಯಗಳು ಎಲ್ಲಾ ಕಾಲದಲ್ಲಿ ಹೂಬಿಡುತ್ತವೆ. ಬೇಸಿಗೆಯಲ್ಲಿ ಒಂದು ದಿನದ ಸೂರ್ಯನ ಬೆಳಕಿನ ಅವಧಿ ದೀರ್ಘವಾಗಿರುತ್ತದೆ. ಸುಮಾರು 14 ರಿಂದ 18 ತಾಸು. ಚಳಿಗಾಲದ ದಿನಗಳಲ್ಲಿ ಇದು 8 ರಿಂದ 14 ತಾಸುಗಳು. ಒಂದು ದಿವಸದ ಬೆಳಕಿನ ಅವಧಿ ಎಷ್ಟೇ ದೀರ್ಘವಾಗಿದ್ದರೂ ಸಸ್ಯಗಳು ಹೂಬಿಡಲು ಬೆಳಕಿನ ನಿರ್ದಿಷ್ಟ ಅವಧಿ (Critical length of light) ಮಾತ್ರ ಬೇಕೇ ಬೇಕು? ಇದು ಕಡಿಮೆಯಾಗಲಿ ಅಥವಾ ಹೆಚ್ಚಿರಲಿ ಆಗ ಸಸ್ಯಗಳು ಹೂಬಿಡುವುದಿಲ್ಲ. ಆಯಾ ಕಾಲದಲ್ಲಿ ಹೂಬಿಡುವ ಸಸ್ಯಗಳು ಆಯಾ ದಿವಸಗಳ ಬೆಳಕಿನ ಅವಧಿ (Photo Period)ಯನ್ನು ಅವಲಂಬಿಸಿರುತ್ತವೆ ಮತ್ತು ಪ್ರತಿಕ್ರಿಯಿಸುತ್ತವೆ. ಬೆಳಕಿನ ಅವಧಿಯಂತೆ ಕತ್ತಲೆ ಅವಧಿ (Dark Period) ಕೂಡ ಮಹತ್ವದ್ದಾಗಿದೆ. ಈ ಅವಧಿಯಲ್ಲಿ ಮಹತ್ವದ ರಾಸಾಯನಿಕ ವಸ್ತುಗಳ ಸಿದ್ಧತೆ ಹಾಗೂ ಜೀವರಾಸಾಯನಿಕ ಕ್ರಿಯೆಗಳು ಜರುಗುತ್ತವೆ. ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಸಸ್ಯಗಳು ಹೂಬಿಡುವ ಬಗೆಗೆ ಕಾರಣ ಮುಂತಾದವುಗಳನ್ನು ತಿಳಿದುಕೊಳ್ಳಲು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಿರಿ.

ಪ್ರಶ್ನೆ 1: ಬೇರೆ ಬೇರೆ ಕಾಲದ ದಿವಸಗಳ ಬೆಳಕಿನ ಅವಧಿಗೂ ಮತ್ತು ಸಸ್ಯಗಳು ಹೂಬಿಡುವುದಕ್ಕೂ ಅನ್ಯೋನ್ಯ ಸಂಬಂಧ ಇದೆ. ಇದನ್ನು ನೀವು ಏನೆಂದು ಕರೆಯುತ್ತೀರಿ?

ಪ್ರಶ್ನೆ 2: ಬೀಟರೂಟ, ಜವೆಗೋಧಿ ಸಂಕೇಶ್ವರ, ಮುತ್ತುಲ ಮುಂತಾದ ಸಸ್ಯಗಳು ಬೇಸಿಗೆಯಲ್ಲಿ ಹೂಬಿಡುತ್ತವೆ. ಬೇಸಿಗೆಯಲ್ಲಿ ಬೆಳಕಿನ ಅವಧಿ ದೀರ್ಘವಾಗಿರುತ್ತದೆ ಮತ್ತು ಕತ್ತಲೆಯ ಅವಧಿ ಕಡಿಮೆಯಾಗಿರುತ್ತದೆ.

ಹೆಚ್ಚು ಉದ್ದವಾದ ಬೆಳಕಿನ ಅವಧಿಗೆ ಪ್ರತಿಕ್ರಿಯಿಸಿ ಹೂಬಿಡುವ ಸಸ್ಯಗಳನ್ನು ಏನೆಂದು ಕರೆಯುತ್ತಾರೆ?

ಪ್ರಶ್ನೆ 3: ಉದ್ದು, ಹೆಸರು, ತಂಬಾಕು, ಕಬ್ಬು, ಸೊಯಾ, ಆಲೂಗಡ್ಡೆ, ಅವರೆ, ಭತ್ತ, ಸೇವಂತಿಗೆ ಮುಂತಾದ ಸಸ್ಯಗಳು ಚಳಿಗಾಲದಲ್ಲಿ ಹೂಬಿಡುತ್ತವೆ. ಚಳಿಗಾಲದಲ್ಲಿ ಬೆಳಕಿನ ಅವಧಿ ಕಡಿಮೆಯಾಗಿದ್ದು; ಕತ್ತಲೆಯ ಅವಧಿ ಹೆಚ್ಚಾಗಿರುತ್ತದೆ.

ಕಡಿಮೆ ಬೆಳಕಿನ ಅವಧಿ ದಿವಸಗಳಲ್ಲಿ ಹೂ ಬಿಡುವ ಸಸ್ಯಗಳನ್ನು ಏನೆಂದು ಕರೆಯುತ್ತಾರೆ?

ಪ್ರಶ್ನೆ 4: ಸದಾ ಮಲ್ಲಿಗೆ, ಗುಲಾಬಿ, ದಾಸವಾಳ, ಸೂರ್ಯಕಾಂತಿ, ಟೊಮೆಟೊ, ಬದನೆ ಮುಂತಾದ ಸಸ್ಯಗಳು ಎಲ್ಲಾ ಕಾಲದಲ್ಲಿ ಹೂಬಿಡುತ್ತವೆ. ಇವುಗಳಿಗೆ ಬೆಳಕಿನ ಕನಿಷ್ಠ ಅಥವಾ ಗರಿಷ್ಠ ಅವಧಿಯ ನಿರ್ಬಂಧ ಇರುವುದಿಲ್ಲ. ಕನಿಷ್ಠ ದೈಹಿಕ ಬೆಳವಣಿಗೆಯಾದರೆ ಸಾಕು.

ದಿನದ ಬೆಳಕಿನ ಅಥವಾ ರಾತ್ರಿ ಕತ್ತಲೆ ಅವಧಿ ಬಂಧನಕ್ಕೆ ಒಳಗಾಗದೆ, ಸದಾ ಕಾಲದಲ್ಲಿ ಹೂಬಿಡುವ ಸಸ್ಯಗಳನ್ನು ಏನೆಂದು ಕರೆಯುತ್ತಾರೆ?

ಪ್ರಶ್ನೆ 5: ಒಂದು ದಿನದ ಬೆಳಕಿನ ಅವಧಿ (Photo-period)ಯಲ್ಲಿ ಹೂಬಿಡಲು ಬೇಕಾಗುವ ಪರಿಣಾಮಕಾರಿ ರಾಸಾಯನಿಕ ಕ್ರಿಯೆಗಳು ಉಂಟಾಗುತ್ತವೆ. ಈ ಪರಿಣಾಮಕಾರಿ ಕ್ರಿಯೆಗಳ ಪ್ರೇರಣೆಯನ್ನು ದ್ಯುತಿ ಪ್ರೇರಣೆ (Photo induction) ಚಕ್ರ ಎಂದು ಕರೆಯುತ್ತಾರೆ. ಬೇರೆ ಬೇರೆ ಸಸ್ಯಗಳಿಗೆ ಬೇಕಾಗುವ ಈ ಚಕ್ರಗಳು 1 ರಿಂದ 25. ಕನಿಷ್ಠ ದ್ಯುತಿ ಪ್ರೇರಣೆ ಹಾಗೂ ಗರಿಷ್ಠ ದ್ಯುತಿ ಪ್ರೇರಣೆ ಚಕ್ರಕ್ಕೆ ಪ್ರತಿಕ್ರಿಯಿಸಿ ಹೂಬಿಡುವ ಸಸ್ಯಗಳು ಯಾವುವು?

ಪ್ರಶ್ನೆ 6: ಬೋರ್ತವಿಕ್ ಮತ್ತು ಹೆಂಡ್ರಿಕ್ಸ್ ಎಂಬ ವಿಜ್ಞಾನಿಗಳು ದ್ಯುತಿ ಪ್ರೇರಣೆಯನ್ನು ಸ್ವೀಕರಿಸುವ ವರ್ಣದ್ರವ್ಯ (Pigments) ಗಳನ್ನು ಕಂಡುಹಿಡಿದರು. ಈ ವರ್ಣ ದ್ರವ್ಯಗಳು ಹೂಬಿಡುವಲ್ಲಿ, ಬೀಜ ಮೊಳಕೆಯೊಡೆಯುವಲ್ಲಿ ಮತ್ತು ಅಂಗಾಂಗ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ.

ವಿಜ್ಞಾನಿಗಳು ಈ ವರ್ಣದ್ರವ್ಯವನ್ನು ಏನೆಂದು ಕರೆದರು?

ಪ್ರಶ್ನೆ 7: ಬೆಳಕಿನ ಅವಧಿ ಪ್ರೇರಕ (Photo periodic stimulus) ವನ್ನು ಸಸ್ಯಗಳು ಎಲೆ ಮತ್ತು ಮೊಗ್ಗುಗಳ ಮುಖಾಂತರ ಸ್ವೀಕರಿಸುತ್ತವೆ. ಈ ಪ್ರೇರಕದಿಂದ ಚೋದಿತಗೊಂಡು ಸಸ್ಯಗಳು ಹೂಬಿಡುವ ರಾಸಾಯನಿಕ ವಸ್ತುಗಳನ್ನು ತಯಾರಿಸುತ್ತವೆ. ಮೈಕೆಲ್ ಚೈಲಾಕ್ಯಾನ್, ರಷ್ಯ ದೇಶದ ವಿಜ್ಞಾನಿಯು ಈ ರಾಸಾಯನಿಕ ವಸ್ತುವನ್ನು ಕಂಡುಹಿಡಿದನು. ಒಂದು ಸಸ್ಯದಿಂದ ಇನ್ನೊಂದು ಸಸ್ಯಕ್ಕೆ ವರ್ಗಾಯಿಸುವ ಮೂಲಕ ಹೂಬಿಡುವಂತೆ ಮಾಡಿದನು.

ಮೈಕಲ್ ಚೈಲ್‌ಕ್ಯಾನ್ ಕಂಡುಹಿಡಿದ ರಾಸಾಯನಿಕ ವಸ್ತು ಯಾವುದು? ಮತ್ತು ಅದು ಹೇಗೆ ಕೆಲಸ ನಿರ್ವಹಿಸುತ್ತದೆ?

 

ಉತ್ತರಗಳು

1. ಬೆಳಕಿನ-ಅವಧಿತ್ವ (Photo Periodism) ಎಂದು ಕರೆಯಲಾಗುತ್ತದೆ.

2. ದೀರ್ಘಾವಧಿ ಬೆಳಕಿನ ಸಸ್ಯಗಳು (Long Day Plants) ಅವಾ ಅಲ್ಪಾವಧಿ ಕತ್ತಲೆ ಸಸ್ಯಗಳು (Short light plants) ಎಂದು ಕರೆಯುತ್ತಾರೆ.

3. ಅಲ್ಪಾವಧಿ ಬೆಳಕಿನ ಸಸ್ಯಗಳು (Short Day Plants) ಅವಾ ದೀರ್ಘಾವಧಿ ಕತ್ತಲೆ ಸಸ್ಯಗಳು (Long Night Plants) ಎಂದು ಕರೆಯುತ್ತಾರೆ.

4. ತಟಸ್ಥ ಬೆಳಕಿನಾವಧಿ ಸಸ್ಯಗಳು (Day Neutral Plants)ಎಂದು ಕರೆಯುತ್ತಾರೆ.

5. ಕನಿಷ್ಠ ದ್ಯುತಿ ಪ್ರೇರಣೆ ಚಕ್ರಕ್ಕೆ ಸ್ಪಂದಿಸಿ ಹೂಬಿಡುವ ಸಸ್ಯ ಝಾಂತಿಯಂ (Xanthium). ಗರಿಷ್ಠ ದ್ಯುತಿ ಪ್ರೇರಣೆ ಚಕ್ರಕ್ಕೆ ಸ್ಪಂದಿಸಿ ಹೂಬಿಡುವ ಸಸ್ಯ ಪ್ಲಾಂಟೆಗೊ (Plantago).

6. ಪೈಟೋಕ್ರೋಮ (Phytochrome); ಇದು ಒಂದು ಪ್ರೋ

7. ಪೋಢ್ಲೆರಿಜನ್ (Florigen). ಇದು ಒಂದು ಹೂಬಿಡುವ ಸಸ್ಯ ಹಾರ್ಮೋನು. ದ್ಯುತಿ ಪ್ರೇರಣೆ ಸ್ವೀಕರಿಸುವ ಎಲೆ ಹಾಗೂ ಹೂಬಿಡುವ ಕಾಂಡ ತುದಿ ಭಾಗಗಳ ಮಧ್ಯದ ಸಂಬಂಧವನ್ನು ಇದು ಕಲ್ಪಿಸುತ್ತದೆ.