ಭಾರತಕ್ಕೆ ಸಂಬಂಧಿಸಿದಂತೆ ಆಧುನೀಕರಣ ಪರಿಕಲ್ಪನೆಯು ವಿಶಿಷ್ಟವಾದುದಾಗಿದೆ. ಸಾಮಾನ್ಯ ಅರ್ಥದಲ್ಲಿ ‘ಆಧುನಿಕತೆ’ಯನ್ನು ಹೀಗೆ ಪರಿಭಾವಿಸಬಹುದು. ಹೊಸದರ ಕ್ಷಿಪ್ರ ಬದಲಾವಣೆ. ಇದು ಭೌತಿಕವಾಗಿ ಹಾಗೂ ಬೌದ್ದಿಕ ಎರಡು ಮಾದರಿಯ ಸ್ವರೂಪವನ್ನು ಒಳಗೊಂಡಿರುತ್ತದೆ. ಭೌತಿಕವು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ ಸ್ವರೂಪವನ್ನು ಹೊಂದಿ ದ್ದರೆ, ಬೌದ್ದಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ವರೂಪವನ್ನು ಪಡೆದಿರುತ್ತದೆ.

ಈ ಹಿನ್ನೆಲೆಯಲ್ಲಿ ಆಧುನಿಕತೆಯ ಪ್ರವೇಶವನ್ನು ಭಾರತದ ಸಂದರ್ಭಕ್ಕೆ ಅನ್ವಯಿಸಿ ಹೇಳಬಹುದಾದರೆ, ಈ ಮಾದರಿಗಳು ಎರಡು ಬಾರಿ ನಮ್ಮ ದೇಶವನ್ನು ಪ್ರವೇಶಿಸಿರುವುದನ್ನು ಗಮನಿಸಬಹುದು. ಮೊದಲನೆಯದು ವಸಾಹತು ಸಂದರ್ಭದ ಬ್ರಿಟೀಷರ ಆಳ್ವಿಕೆಯ ಮೂಲಕ. ಬ್ರಿಟಿಷರು ತಮ್ಮ ಆರ್ಥಿಕಾಭಿವೃದ್ದಿಗಾಗಿ ನಮ್ಮನ್ನು ಕೊಳ್ಳೆಹೊಡೆಯಲು ಪ್ರಯೋಗಿಸಿದ ಪ್ರಮುಖಾಸ್ತ್ರಗಳಲ್ಲಿ ಇದು ಒಂದಾಗಿತ್ತು. ನಂತರದಲ್ಲಿ ೧೯೯೨ರಲ್ಲಿ ಅನಿವಾರ್ಯವಾಗಿ ಭಾರತವು ಜಾಗತೀಕರಣವನ್ನು ಒಪ್ಪಿಕೊಳ್ಳಲಾಯಿತು. ಆ ಮೂಲಕ ಸ್ವಾವಲಂಬನೆಗೆ ಎಷ್ಟು ಪ್ರಯತ್ನಿಸಿದರೂ ಜಾಗತೀಕರಣ ಭಾರತವನ್ನು ಆಕ್ರಮಿಸಿಕೊಳ್ಳದೇ ಬಿಡಲಿಲ್ಲ. ಸುಮಾರು ೧೫ನೇ ಶತಮಾನದಿಂದ ಆರಂಭವಾದ ಯುರೋಪಿಯನ್ ದೇಶಗಳ ಪ್ರವೇಶವು ಆಧುನಿಕತೆಯನ್ನು ಹೊತ್ತುಕೊಂಡೇ ಭಾರತವನ್ನು ಪ್ರವೇಶಿಸಿದವು. ನಂತರದಲ್ಲಿ ಈ ಯುರೋಪಿಯನ್ ದೇಶಗಳು ವಸಾಹತು ಪ್ರದೇಶವನ್ನಾಗಿ, ಭಾರತದಲ್ಲಿನ ಕೆಲ ಪ್ರದೇಶ ಗಳನ್ನು ಆಕ್ರಮಿಸಿಕೊಂಡಂತೆಲ್ಲಾ ಆಧುನಿಕತೆಯ ತೀವ್ರತೆಯು ದಟ್ಟವಾಗತೊಡಗಿತು. ನಂತರದಲ್ಲಿ ಬ್ರಿಟೀಷರು ಸಂಪೂರ್ಣ ಭಾರತವನ್ನು ತಮ್ಮ ವಸಾಹತು ಪ್ರದೇಶವನ್ನಾಗಿ ೧೮೫೭ರಲ್ಲಿ ಪರಿವರ್ತಿಸಿಕೊಂಡಾಗ ಬ್ರಿಟೀಷರ ಆಧುನಿಕ ಬೆಳವಣಿಗೆಗೆ ಸರಿಸಮಾನವಾಗಿ ಭಾರತದ ಆರ್ಥಿಕತೆಯು ನಿಲ್ಲದೇ ಆವಸಾನಗೊಳ್ಳಲಾರಂಬಿಸಿತು.

೧೬-೧೭ನೇ ಶತಮಾನದಲ್ಲಿ ಯುರೋಪಿನಲ್ಲಿ ಆರಂಭವಾದ ಕೈಗಾರಿಕಾ ಕ್ರಾಂತಿಯು, ಅದರ ಹಿಂದಿನ ದಿನಗಳಲ್ಲಿ ಆದ ವೈಜ್ಞಾನಿಕ ಸಂಶೋಧನೆಯ ಪ್ರತಿಫಲಿತವಾದ ಆಧುನಿಕತೆಯು ಪ್ರಪಂಚಕ್ಕೆ ಹೊಸದೊಂದು ಆಯಾಮವನ್ನು ತಂದುಕೊಟ್ಟವು. ಹೀಗೆ ಆರಂಭವಾದ ಕೈಗಾರಿಕಾ ಕ್ರಾಂತಿಯು ಯಥೇಚ್ಚವಾಗಿ ವಸ್ತುಗಳನ್ನು ಉತ್ಪಾದಿಸಿತೊಡಗಿದವು. ಈ ಉತ್ಪಾದನಾ ವಸ್ತುಗಳಿಗೆ ಮಾರುಕಟ್ಟೆಯ ಅವಶ್ಯಕತೆಯಿತ್ತು, ಹಾಗಾಗಿ ಮಾರುಕಟ್ಟೆಯಾಗಿಯೂ, ಬ್ರಿಟನ್ನಿನ ಕೈಗಾರಿಕೆಗಳಿಗೆ ಬೇಕಾದ ಕಚ್ಚಾವಸ್ತುಗಳ ಉತ್ಪಾದಕ ದೇಶವಾಗಿ ಪರಿವರ್ತಿತವಾಯಿತು. ಹಾಗಾಗಿ ಇಲ್ಲಿನ ಮೂಲ ಕಸುಬುಗಳು ಅಳಿಸಿಹೋಗಿ ಬ್ರಿಟಿನ್ನಿನ ಕೈಗಾರಿಕಾ ಕಚ್ಚಾವಸ್ತುಗಳಿಗೆ ಮಾತ್ರ ಭಾರತವು ಹೊಂದಿಕೊಳ್ಳಬೇಕಾಯಿತು. ಅಂದರೆ ಆಧುನಿಕತೆಯಿಂದಾಗಿ ಅನಿವಾರ್ಯ ಆರ್ಥಿಕತೆಯನ್ನು ಒಪ್ಪಿಕೊಳ್ಳುವಂತೆ ಮಾಡಲಾಯಿತು. ಉಪಯೋಗಕ್ಕೆ ಬಾರದ ನೀಲಿ ಬೆಳೆಯನ್ನು ಬೆಳೆಯಲು ಬ್ರಿಟೀಷರು ಭಾರತದ ರೈತನ ಮೇಲೆ ಒತ್ತಡ ಹೇರಿದ್ದನ್ನು ಗಮನಿಸ ಬಹುದು. ಅಂತೆಯೇ ಇಲ್ಲಿನ ಜನರ ಕುಲಕಸುಬುಗಳು, ಗುಡಿಕೈಗಾರಿಕೆಗಳು ಪಾಶ್ಚಾತ್ಯರ ಅಗ್ಗದ ಬೆಲೆಯ ಸಿದ್ದ ಉತ್ಪಾದನಾ ವಸ್ತುಗಳ ಬೆಲೆಗೆ ಪ್ರತಿಯಾಗಿ ಸ್ಪರ್ಧಿಸದೇ ತತ್ತರಿಸಿ ಹೋದವು. ಒಟ್ಟಿನಲ್ಲಿ ಕುಲಕಸುಬುಗಳ ಮೂಲಕವೇ ಗುರುತಿಸಿಕೊಂಡಿದ್ದ ಭಾರತದ ಸಮಾಜ, ಅದರಲ್ಲಿಯೂ ತಳಸಮುದಾಯಗಳು ಹೇಳ ಹೆಸರಿಲ್ಲದಂತೆ ಹೋದವು.

ಇನ್ನು ಎರಡನೇ ಹಂತದ ಆಧುನಿಕತೆಯ ರೂಪವಾದ ‘ಜಾಗತೀಕರಣ’ವಂತೂ ಭಾರತ ದೇಶವನ್ನು ಅದರಲ್ಲೂ ತಳಸಮುದಾಯಗಳಲ್ಲಿ ಬಹು ಅಂತರವನ್ನೇ ಸೃಷ್ಟಿ ಮಾಡಿತು. ತಳಸಮುದಾಯಗಳು ಹಾಗೂ ಹೀಗೋ ಪಾರಂಪರಿಕವಾಗಿ ಉಳಿಸಿಕೊಂಡು ಬಂದಿರುವಂತಹ ಬುಟ್ಟಿಹೆಣೆಯುವಿಕೆ, ಕುಂಬಾರಿಕೆ, ನೇಕಾರಿಕೆ ಇತ್ಯಾದಿ ಉತ್ಪಾದನಾ ವಸ್ತುಗಳಿಗೆ ಪರ್ಯಾಯ ಉತ್ಪಾದನಾ ವಸ್ತುಗಳ (ಪ್ಲಾಸ್ಟಿಕ್)ನ್ನು ತಯಾರಿಸಲಾರಂಭಿಸಿತು. ಈ ಸಮುದಾಯಗಳಿಗೆ ಈ ಸಂದರ್ಭದಲ್ಲಿ ದಿಕ್ಕೇ ತೋಚದಂತಹ ಪರಿಸ್ಥಿತಿಯುಂಟಾಗಿರುವುದಂತೂ ಖಂಡಿತ. ಮೇಲ್ವರ್ಗದ ಸಮುದಾಯಗಳು ಜಾಗತೀಕರಣದ ಉತ್ಪಾದಕ ಘಟಕಗಳ ಕೆಲಸಗಳಲ್ಲಿ ತರಬೇತಿಯನ್ನು ಪಡೆದು ತಮ್ಮ ವೃತ್ತಿ ಜೀವನವನ್ನು ಮತ್ತೊಮ್ಮೆ ಗಟ್ಟಿಗೊಳಿಸಿಕೊಂಡರೆ, ತಳಸಮುದಾಯಗಳು ಮಾತ್ರ, ಅಂತಹ ತರಬೇತಿಯಿಲ್ಲದೇ ಮತ್ತು ಆ ಮಟ್ಟಕ್ಕೆ ಬೆಳೆಯಲೂ ಆಗದೇ ಇರುವಂತಹ ಸ್ಥಿತಿ ಉಂಟಾಗಿರುವುದನ್ನು ಕಾಣಬಹುದು.

ಆದರೆ ಆಧುನಿಕತೆಯಿಂದಾಗಿ ಭಾರತದಲ್ಲಿನ ತಳಸಮುದಾಯಗಳಿಗೆ ಪ್ರಯೋಜನವಾಗಿಲ್ಲ ವೆಂತಲ್ಲ. ಬೌದ್ದಿಕವಾದ ಅನೇಕ ಪ್ರಯೋಜನಗಳು ಆಗಿವೆ. ಮೊದಲನೆಯದಾಗಿ ಜಾತಿಪದ್ಧತಿ ಯಂತಹ ಕ್ರೂರ ಅಮಾನುಷ ಪದ್ಧತಿಯ ಪರಿಹಾರ ಕ್ರಮಗಳು. ಎರಡನೆಯದಾಗಿ ಬ್ರಿಟೀಷರ ಆಳ್ವಿಕೆಯಿಂದಾಗಿ ‘ಶಿಕ್ಷಣ’ ಪಡೆಯುವಂತಾದದ್ದು, ಸಾರ್ವಜನಿಕ ಸ್ಥಳಗಳಲ್ಲಿ ಸಮಾನತೆ ಕಾಯ್ದುಕೊಂಡಿರುವುದು ಇತ್ಯಾದಿಗಳು. ಇವು ನಿಜವಾಗಿಯೂ ತಳಸಮುದಾಯಗಳಿಗೆ ಓರ್ವ ಮನುಷ್ಯನನ್ನಾಗಿ ಸಮಾಜದಲ್ಲಿ ಬದುಕಲು ಬಿಟ್ಟಿವೆ. ಆದರೆ ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಮತ್ತೊಮ್ಮೆ ಇದೇ ತಳಸಮುದಾಯಗಳ ಕುರಿತು ಚಿಂತಿಸಿದಾಗ ಅವರ ಪರಿಸ್ಥಿತಿ ಶೋಚನೀಯವಾಗುತ್ತದೆ. ಕಾರಣ ಇಂದಿನ ಜಾಗತೀಕರಣವು ಎಲ್ಲೆಲ್ಲೂ ‘ಅನಿವಾರ್ಯದ ಆಯ್ಕೆ’ಯನ್ನು ಸ್ಪಷ್ಟಮಾಡುತ್ತಿದೆ. ಯಾವುದೇ ವಸ್ತುವನ್ನು ಕೊಂಡು ಕೊಳ್ಳಲು, ಯಾವುದೇ ಉದ್ಯೋಗವನ್ನು ಪಡೆಯಲು ಆಯ್ಕೆಯು ನಮ್ಮದಾಗಿದ್ದರೂ ಅಲ್ಲ ಇರುವ ಕೆಲವೇ ಕೆಲವನ್ನು ಮಾತ್ರ ನಾವು ಆಯ್ಕೆ ಮಾಡಿಕೊಳ್ಳಬೇಕು. ಹೀಗಾಗಿ ತಳಸಮುದಾಯಗಳು ಯಾವುದೇ ಉದ್ಯೋಗ ಪಡೆಯಲು ಅನಿವಾರ್ಯ ಆಯ್ಕೆ ಸಾಲಿನಲ್ಲಿ ನಿಲ್ಲಲೇ ಬೇಕು. ಆದರೆ ಬ್ರಿಟೀಷರ ಪದ್ಧತಿಯ ಶಿಕ್ಷಣವು, ಇಂದಿನ ತಾಂತ್ರಿಕ ಜಗತ್ತಿನಲ್ಲಿ ಅವರಿಗೆ ಉದ್ಯೋಗವನ್ನು ಕೊಡಿಸುವಷ್ಟರ ಮಟ್ಟಿಗೆ ಸಾಧಿಸಲಾಗಲಿಲ್ಲ. ಕಾರಣ ಅವರು ಬೇರೆಯ ತಾಂತ್ರಿಕ ಶಿಕ್ಷಣವನ್ನು ಪಡೆಯಬೇಕಾಗಿದೆ. ಆದರೆ ಅವರಿಗೆ ಆ ಶಿಕ್ಷಣವು ಎಟುಕು ತ್ತಿಲ್ಲ. ಇಲ್ಲಿ ಮತ್ತೊಮ್ಮೆ ತೊಂದರೆಗೊಳಗಾಗಿ ದಾರಿಯನ್ನು ಕಾಣದಂತಹ ಪರಿಸ್ಥಿತಿಯನ್ನು ಈ ಸಮುದಾಯಗಳು ಅನುಭವಿಸುತ್ತಿವೆ.

ಇನ್ನು ಜಾಗತೀಕರಣದ ಪ್ರತಿಫಲಗಳಾದ ಸಿನಿಮಾ, ಟಿ.ವಿ.ಯಂತಹ ಮಾದ್ಯಮಗಳಿಗೆ ಪ್ರಚೋದಿತವಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ತಳಸಮುದಾಯಗಳೆ ಕಾರಣ. ಈಗಾಗಲೇ ಪಾಶ್ಚಾತ್ಯ ಸಂಸ್ಕೃತಿಯನ್ನು ಸಾಮಾನ್ಯವಾಗಿ ಅನುಕರಿಸಿ, ಅದರ ಒಳಿತು ಕೆಡುಗಳನ್ನು ಸಾಧಾರಣವಾಗಿ ಅರ್ಥಮಾಡಿಕೊಂಡಿರುವ ಮೇಲ್ವರ್ಗ ಒಂದು ಅಂತರವನ್ನು ಕಾಯ್ದುಕೊಂಡಿದೆ. ಆದರೆ ತಳಸಮುದಾಯಗಳು ಇಂತಹ ಅತಿಯಾದ Fashion ನಿಂದಾಗಿ ದುಶ್ಚಟ ಮುಂತಾದವುಗಳಿಗೆ ಒಳಗಾಗಿ ಒಂದು ರೀತಿಯಿಂದ ತಮ್ಮನ್ನು ತಾವು ನಿರ್ಧರಿಸಿ ಕೊಳ್ಳಲಾಗದೇ ಹೋಗುತ್ತಿದ್ದಾರೆ. ಒಂದು ರೀತಿಯಿಂದ ತಮ್ಮ ಸಂಸ್ಕೃತಿಯಿಂದ ಅನ್ಯರಾಗುತ್ತಾ ತಮ್ಮ ಸಮಾಜದಿಂದ ಪರಕೀಯರಾಗುತ್ತಾ ಇನ್ನೊಂದು ಕಡೆ ಇನ್ನಿತರೇ ಸಂಸ್ಕೃತಿಯನ್ನು ಸಂಪೂರ್ಣವಾಗಿ ಪಡೆದುಕೊಳ್ಳಲಾಗದೇ ಒಂದು ರೀತಿಯ ದ್ವಂದ್ವಸ್ಥಿತಿಯನ್ನು ಈ ತಳ ಸಮುದಾಯಗಳು ಅನುಭವಿಸುತ್ತಿವೆ.

* * *

ಹಲಗಲಿ ಬೇಡರು

ಭೀಮನು ಇದರಿಗೆ ನಿಂತಾ
ಐ-ನೂರ ಮಂದಿಗೆ ಮಲತಾ

ಬಾಲನು ಮಾಡಿದ ಕಸರತ್ತಾ
ಕುದರಿಯ ಕಡದನೊ ಹತ್ತಾ
ರಾಮನ ಕಡತ ವಿಪರೀತಾ
ಕಾವಲಿ ಹರಿತೊ ರಕ್ತಾ

ಸಾವಿರ ಅಳಿಗೆ ವೊಬ್ಬ ಮಲತಾ
ಕೂಗುತಾನೊ ಕಡಿ-ಕಡಿರ್-ಎಂತಾ                              ||ಯೇರ||

ನಾಲ್ಕು ಮಂದಿ ಹೇಂಗ ಕಡದ ಸತ್ತರೊ ಭಂಟರ್-ಅನಸೆರ ಜನಕ