ಇಂದು ವಿಶ್ವದಲ್ಲೆಡೆ ಜಾಗತೀಕರಣದ ಕುರಿತು ಹಲವಾರು ರೀತಿಯಲ್ಲಿ ಪರ ಮತ್ತು ವಿರೋಧ ಚರ್ಚೆಗಳೇರ್ಪಡುತ್ತಿವೆ. ಇಡೀ ಚರ್ಚೆಯೂ ಇದರ ತೀವ್ರತೆಯಿಂದಲೇ ಮುಂದುವರೆಯುತ್ತಿದೆ. ಅದರ ಅನಿವಾರ್ಯತೆ ಅಪಾಯಗಳೆರಡನ್ನೂ ಇಂದು ನಾವುಗಳು ಅರಿತುಕೊಳ್ಳಬೇಕಾಗಿದೆ. ಇನ್ನೊಂದು ಬಹುಮುಖ್ಯವಾದ ವಿಷಯವೆಂದರೆ ಆಧುನೀಕರಣದ ಪರ್ಯಾಯ ರೂಪವೇ ಜಾಗತೀಕರಣ, ಅದರಲ್ಲಿಯೇ ಬರುವಂತಹ ಔದ್ಯೋಗೀಕರಣ, ಕೈಗಾರಿಕೀಕರಣ ಮತ್ತು ಖಾಸಗೀಕರಣ ಇದರ ವಿಕೃತ ರೂಪುರೇಷೆಗಳೆಂದು ಹೇಳಬಹುದು.

ಈ ಪ್ರಬಂಧದ ಚರ್ಚೆಯಲ್ಲಿ ಪ್ರಮುಖವಾಗಿ ಆಧುನೀಕರಣದ ವಿಲಕ್ಷಣವಾದ ಮುಖ ವಾಡಗಳು ತಳಸಮುದಾಯಗಳ ಮೇಲೆ ಬೀರಿರುವಂತಹ ಪರಿಣಾಮಗಳನ್ನು ಕುರಿತು ಚರ್ಚಿಸಲು ಪ್ರಯತ್ನಿಸಿದ್ದೇನೆ. ಅದರಲ್ಲಿ ತಮ್ಮ ಜೀವನೋಪಾಯಕ್ಕೆ ದೈಹಿಕ ಶ್ರಮವನ್ನೇ ಬಂಡವಾಳ ಮಾಡಿಕೊಂಡು ಬದುಕು ಮುಂದುವರೆಸುತ್ತಿರುವ ಬುಡಕಟ್ಟು, ದಲಿತರು ಮತ್ತು ದಲಿತೇತರನ್ನು ಒಳಗೊಂಡು ವಿಷಯವನ್ನು ಮುಂದುವರೆಸಿದ್ದೇನೆ. ಮೊದಲಿಗೆ ಆಧುನೀಕರಣ ವೆಂದರೆ ಯಾವ ರೀತಿ ಅರ್ಥೈಯಿಸಿಕೊಳ್ಳಬೇಕು ಎನ್ನುವುದನ್ನು ನೋಡೋಣ.

ಆಧುನಿಕರಣದ ಅರ್ಥ (Meaning of modernisation)

ಮಾನವನ ನೂತನ ಜೀವನಕ್ಕೆ ಸಂಬಂಧಪಟ್ಟ ಒಂದು ಮೌಲ್ಯ ಸೂಚಕ ಪದ. ಅದು ಸಮಾಜವೊಂದರಲ್ಲಿ ಉದ್ಭವಿಸುತ್ತಿರುವ ಸಾಮಾಜಿಕ ಪರಿವರ್ತನಾ ಪ್ರಕ್ರಿಯೆಯನ್ನು ಸಂಕೇತಿ ಸುವ ಪರಿಕಲ್ಪನೆಯಾಗಿದೆ. ಇದರ ಪ್ರಕಾರ ಹಳೆಯ ರೂಢಿ ಹಾಗೂ ಪರಂಪರೆಗಳ ಹಿಡಿತ ದಲ್ಲಿದ್ದ ಸಮಾಜವೊಂದು ಅದರಿಂದ ಹೊರಬಂದು ಆಧುನಿಕ ಪರಿಸ್ಥಿತಿಗಳು, ಜೀವನ ಕ್ರಮಗಳು, ನಂಬಿಕೆಗಳನ್ನು ಸ್ವೀಕರಿಸುವ ಹಾಗೂ ಅವುಗಳಿಗೆ ಅನುಗುಣವಾಗಿ ನಡೆದುಕೊಳ್ಳುವ ಪ್ರಯತ್ನವೊಂದನ್ನು ಸೂಚಿಸುವ ಪರಿಕಲ್ಪನೆಯಾಗಿದೆ, ಅದು ಜನರ ಇಡೀ ಜೀವನದಲ್ಲಿ ಆಗಿರುವ ಬದಲಾವಣೆಯನ್ನು ಎತ್ತಿ ತೋರಿಸುವದಾಗಿದೆ.

ಈ ಪ್ರಕ್ರಿಯೆಯು ಇವತ್ತಿನದಲ್ಲ ಅದು ವಾಸ್ಕೋ ಡಿ ಗಾಮ ಜಲಮಾರ್ಗದ ಮೂಲಕ ೧೪೯೮ರಲ್ಲಿ ಕ್ಯಾಲಿಕಟ್‌ಗೆ ಬಂದನೋ, ಅಂದಿನಿಂದ ಪಶ್ಚಿಮದ ವಿಧಿ-ವಿಧಾನಗಳು ನಮ್ಮ ಸಮಾಜ, ಸಮುದಾಯದ ಮೇಲೆ ಪ್ರಭಾವ ಬೀರಲು ಆರಂಭಿಸಿದವು. ಮುಂದೆ ಕೈಗಾರಿಕೀ ಕರಣ, ಉದಾರೀಕರಣ, ಹಾಗೂ ಖಾಸಗೀಕರಣ ಎಂಬ ಫೆಡಂಭೂತಗಳು ಬೃಹದಾಕಾರವಾಗಿ ವಿಸ್ತಾರಗೊಂಡು ಜಾಗತೀಕರಣದ ಸ್ವರೂಪ ಪಡೆದುಕೊಂಡವು. ಇಂಡಿಯಾದ ಗಣತಂತ್ರ ವ್ಯವಸ್ಥೆಯೂ ಈ ನೀತಿಗಳನ್ನು ಒಪ್ಪಿಕೊಂಡು ಡಬ್ಲೂ, ಟಿ,ಒ. ಒಪ್ಪಂದಕ್ಕೆ ಪಿ.ವಿ. ನರಸಿಂಹ ರಾವ್ ನೇತೃತ್ವದ ಕೇಂದ್ರ ಸರಕಾರ ಎಂದು ಸಹಿ ಹಾಕಿತೋ, ಅಂದೇ ಈ ನಾಡಿನ ತಳ ಸ್ತರದ ಸಮುದಾಯದ ಜನರ ಬದುಕಿಗೆ ಇತಿಶ್ರೀ ಹಾಡಿತು.

ಅತಿ ಮುಖ್ಯವಾಗಿ ಆಧುನೀಕರಣವು ಇಂಡಿಯಾದ ತಳಸಮುದಾಯಗಳ ವೃತ್ತಿಗಳನ್ನು ತನ್ನ ಉತ್ಪಾದನೆ ಮತ್ತು ಮಾರುಕಟ್ಟೆಯ ವಿಸ್ತರಣೆಯ ತಂತ್ರದಲ್ಲಿ ನಿಶ್ಯಕ್ತರನ್ನಾಗಿಸುತ್ತಿದೆ. ಅದರ ಜೊತೆಗೆ ಅರಣ್ಯ ಪ್ರದೇಶಗಳಲ್ಲಿ ಇರುವಂತಹ ಬುಡಕಟ್ಟು ಸಮುದಾಯದವರನ್ನು ಆಣೆಕಟ್ಟು, ರಬ್ಬರ್ ಬೆಳೆ, ಹಾಗೂ ತಮ್ಮ ವಿಲಾಸಿ ಜೀವನಕ್ಕೆ ಹೋಟೆಲ ಉದ್ಯಮ, ರೆಸಾರ್ಟ್‌ಗಳು, ಇನ್ನಿತರ ತೆರನಾದ ಸ್ವ ಹಿತಾಸಕ್ತಿಯ ಮುಖವಾಡ ಧರಿಸಿ ಅವರು ನೆಲೆ ನಿಂತಿರುವ ಪ್ರದೇಶಗಳನ್ನು ಭೂಮಿ ಹಕ್ಕು ಪತ್ರ ಹೊಂದಿಲ್ಲವೆಂದು ಸ್ಥಳ ಪಲ್ಲಟ ಗೊಳಿಸುತ್ತಿದ್ದಾರೆ. ಇಂತಹ ಹಲವಾರು ವಿಕೃತ ವೇಷಗಳೊಂದಿಗೆ ಸಮಾಜದ ಅತೀ ಕೆಳಮಟ್ಟ ದಲ್ಲಿರುವಂತಹ ಸಮುದಾಯಗಳ ಪರಿಸ್ಥಿತಿಯೂ ಅತಂತ್ರ ಪಡಿಸುವಂತಹ ಹುನ್ನಾರುಗಳು ಸ್ವಾತಂತ್ರ್ಯ ಬರುವುದಕ್ಕಿಂತ ಮುಂಚೇನೆ ತನ್ನ ಕಾರ್ಯ ಆರಂಭಿಸಿತು. ಇಡೀ ಭಾರತದಲ್ಲಿ ರಚನೆಯಾಗಿರುವ ರ‌್ವೇಲ್ವೇ ಮಾರ್ಗಗಳನ್ನು ಒಮ್ಮೆ ಸೂಕ್ಷ್ಮವಾಗಿ ಆಲೋಚನೆ ಮಾಡಿ ಅದು ಆಯಾ ಪ್ರದೇಶಗಳಲ್ಲಿ ಖನಿಜ ಸಂಪತ್ತು, ಅರಣ್ಯ ಸಂಪತ್ತುಗಳನ್ನು ದೋಚುವ ಮಾರ್ಗಗಳು ಆಗಿವೆ ಹೊರತು, ಈ ದೇಶದ ಪ್ರಜೆಗಳನ್ನು ಉದ್ಧಾರ ಮಾಡಬೇಕೆನ್ನುವ ಹುನ್ನಾರದಿಂದಲ್ಲ. ಈ ತರಹದ ಅನೇಕ ಪಶ್ಚಿಮಾತ್ಯ ಜಾಣತನಕ್ಕೆ ಕೆಳವರ್ಗಗಳು ತತ್ತರಿಸಿ ಹೋಗಿವೆ. ಮುಂದುವರೆದು ಅದಕ್ಕೆ ಪ್ರತ್ಯುತ್ತರವೆನ್ನುವಂತೆ ಪರ್ಯಾಯ ೃತ್ತಿಯನ್ನು ಹುಡುಕಿಕೊಂಡು ಹೋಗುವ ಅಲೆದಾಟ ಇತರೆ ಕುತಂತ್ರಕ್ಕೆ ಬಲಿಯಾಗುವಂತಹ ಸಂದರ್ಭಗಳು ಈ ನಾಡಿನ ತಳಸಮುದಾಯಗಳ ಪಾಲಿಗೆ ಮೃತ್ಯು ಸ್ವರೂಪದ್ದಾಗಿವೆ.

ಎರಡನೆಯದಾಗಿ ತಳಸಮುದಾಯಗಳು ಯಾವುವು. ಅವುಗಳನ್ನು ಯಾವ ಮಾನದಂಡಗಳ ಮೇಲೆ ಅರ್ಥೈಯಿಸಕೊಳ್ಳಬೇಕು ಮತ್ತು ನಿರ್ಧರಿಸುವಂತಹ ಪ್ರಮುಖ ಅಂಶಗಳು ಯಾವವು. ಪ್ರಸ್ತುತದಲ್ಲಿ ರಾಜಕಾರಣದ ಯಜಮಾನ್ಯ ವ್ಯವಸ್ಥೆಯಿಂದ ಎಂತಹ ಸಮುದಾಯಗಳು ಪ್ರತಿನಿಧಿಸುತ್ತಿವೆ. ಇಂತಹ ವ್ಯವಸ್ಥೆಯಿಂದಿರುವ ಕುಂತಂತ್ರ ಯಾರದು. ಈ ವಿಷಯಗಳನ್ನು ತಳಸಮುದಾಯಗಳು ಅರಿತುಕೊಂಡಿವೆಯಾ ಎನ್ನುವಂತಹ ಪ್ರಶ್ನೆಯೂ ನಮ್ಮುಂದೆ ಬಹುದೊಡ್ಡ ಸವಾಲಾಗಿ ನಿಲ್ಲುತ್ತದೆ ಮತ್ತು ಇದೇ ಪ್ರಕ್ರಿಯೆಯು ಮುಂದುವರೆದರೆ ಸಮಾಜ ದಲ್ಲಿ ಅಸಮಾನತೆ ತಲೆದೂರಿ ಬಹುದೊಡ್ಡ ಕ್ರಾಂತಿಗೆ ನಾಂದಿಯಾಗಬಹುದು.

ನಮ್ಮ ಸಮಾಜದಲ್ಲಿ ಬಹುದೀರ್ಘ ಕಾಲವಧಿಯಿಂದಲೂ ಬದುಕುತ್ತಿರುವ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳಾದ ಕುಂಬಾರರು, ಹಾಗೂ ನೇಕಾರರು, ಅಕ್ಕಸಾಲಿಗರು, ಮತ್ತು ಕಂಬಾರರು ಇತರೆಲ್ಲರೂ ಸಹ ಇಂದಿನ ಆಧುನಿಕ ಜಗತ್ತಿನ ಪ್ರಕ್ರಿಯೆಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಇಲ್ಲಿ ಯಾಕೆ ಎನ್ನುವ ಪ್ರಶ್ನೆಯೂ ಬರುತ್ತದೆ. ಕ್ಷಣ-ಕ್ಷಣಕ್ಕೂ ಆಧುನಿಕ ಪ್ರಭಾವದಿಂದ ಸಮಾಜವು ಪರಿವರ್ತನೆಗೊಂಡು ಮುಂದುವರೆ ಯುತ್ತಿದೆ. ಇಂತಹ ಪರಿವರ್ತನೆಯ ಅಲೆಯ ಹಸಿವನ್ನು ತಣ್ಣಗಾಗಿಸಲು ತಳಸಮುದಾಯಗಳ ಕುಲಕಸುಬುಗಳು ಎದುರು ನಿಲ್ಲದೆ ನಿಷ್ಕ್ರಿಯಗೊಳ್ಳುತ್ತಿವೆ.

ಪ್ರಸ್ತುತ ಸಮಯದಲ್ಲಿ ತಳಸಮುದಾಯಗಳು

ಇವತ್ತಿನ ಕೈಗಾರಿಕೀಕರಣ, ನಗರಿಕೀಕರಣ, ಮತ್ತು ಖಾಸಗೀಕರಣದ ಮುಂದುವರೆದ ಜಾಗತೀಕರಣದ ಆರ್ಭಟದಲ್ಲಿ ಕೆಳಸ್ತರದ ಸಮುದಾಯಗಳಾದ ನೇಕಾರರು ತಮ್ಮ ವಂಶ ಪರಂಪರೆ ವೃತ್ತಿಯಾದ ನೇಕಾರಿಕೆಯನ್ನು ಬಿಟ್ಟು, ಇವತ್ತಿನ ಕಾಟನ್ ಮಿಲ್‌ಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಶ್ರಮವಹಿಸುವ ಪರಾವಲಂಬಿ ಜೀವನ ಇವರದಾಗಿದೆ. ಒಂದು ವೇಳೆ ನಗರ ಪ್ರದೇಶಗಳಿಗೆ ಕುಟುಂಬದ ಮಡಿ ಮೈಲಿಗೆ ಕಲ್ಪನೆಯಿಂದ ಹೋಗದೆಯಿದ್ದ ಸಮಯದಲ್ಲಿ ಅನಿವಾರ್ಯವಾಗಿ ಕೃಷಿ ಕೂಲಿ, ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳವಂತಹ ಅವಶ್ಯಕತೆಯೂ ಇಂದು ತೀವ್ರತೆರನಾಗಿದೆ. ಈ ರೀತಿಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಮಾನಸಿಕವಾಗಿ ಸಿದ್ಧರಿಲ್ಲದಿದ್ದರೂ ಸಹ ಜೀವನದ ಮುಂದುವರಿಕೆಗಾಗಿ ಅನಿವಾರ್ಯವಾಗಿದೆ.

ತಮ್ಮ ವಂಶ ಪರಂಪರೆಯಿಂದ ಕ್ರಿಯಾತ್ಮಕವಾಗಿ ಮುಂದುವರೆದುಕೊಂಡು ಬಂದಂತಹ ಕೈಮಗ್ಗಗಳು ಇಂದು ಮೂಲೆಗುಂಪಾಗಿವೆ, ಇವರ ವೃತ್ತಿಯನ್ನು ಮರು ಜೀವಗೊಳಿಸುವ ಪ್ರಯತ್ನವನ್ನು ಪ್ರಜಾತಂತ್ರ ಸರ್ಕಾರವು ತನ್ನ ಪಂಚವಾರ್ಷಿಕ ಯೋಜನೆಗಳ ಅನುಷ್ಠಾನದಲ್ಲಿ ಅಲ್ಪ-ಸ್ವಲ್ಪ ಹಣ ಮೀಸಲಿಡಿಸಿದರೂ ಸಹ ಆ ಹಣವು ಯಾರೋ ಪ್ರಭಾವಿ ಮಂತ್ರಿ ಮಹೋದಯರ ಪಾಲು ಆಗುವಲ್ಲಿ ಸಂಶಯವಿಲ್ಲ. ಇಂತಹ ಅನೇಕ ಕಾರಣಗಳಿಂದ ನೇಕಾರರು ಮತ್ತು ಅವರ ವೃತ್ತಿಯೂ ವಿನಾಶದ ಅಂಚಿಗೆ ತಲುಪುತ್ತಿದೆ. ಸಮುದಾಯದ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಇನ್ನಿತರ ಪರದೆಗಳಿಂದ ಇನ್ನಷ್ಟು ದೂರ ಪಯಣ ಮಾಡುತ್ತಿದ್ದಾರೆ. ಕೆಳಸ್ತರದ ಸಮುದಾಯಗಳನ್ನು ಕುರಿತು ಇಂದಿನ ರಾಜಕಾರಣಗಳು, ತಮ್ಮ ಗೆಲುವಿಗಾಗಿ ಉಪಯೋಗಿಸಿಕೊಂಡು ತಿಂದು ಎಸೆದ ಬಾಳೆ ಹಣ್ಣಿನ ಸಿಪ್ಪೆತರಹ ಮಾಡುವಲ್ಲಿ ಸಫಲತೆ ಹೊಂದಿದ್ದಾರೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.

ಇವರಂತೆ ಕುಂಬಾರರು ಸಹ ಇವತ್ತಿನ ಸಂದರ್ಭದಲ್ಲಿ ಆಧುನಿಕ ಮಾರುಕಟ್ಟೆಯ ವ್ಯವಸ್ಥೆ ವಿರುದ್ಧ ತಮ್ಮ ಪರಂಪರೆ ವೃತ್ತಿಯಾದ ಮಣ್ಣಿನ ಮಡಿಕೆ, ಪಾತ್ರೆಗಳ ತಯಾರಿಕೆ ಕ್ರಮವು ಎದುರುಗೊಳ್ಳುತ್ತಿಲ್ಲ. ಯಾಂತ್ರೀಕರಣದಿಂದ ತಯಾರಿಸಿದಂತಹ ಪ್ಲಾಸ್ಟಿಕ್ ಪಾತ್ರೆ ಗಳು ಮಾರುಕಟ್ಟೆಗೆ ಪ್ರವೇಶ ಮಾಡಿ ಇವರ ಕುಲಕಸುಬನ್ನು ಹಿಂದಿಕ್ಕಿದೆ. ಅಂದರೆ ಕುಂಬಾರರು ಇದೇ ವೃತ್ತಿಯಲ್ಲಿಯೇ ಮುಂದುವರೆಯಬೇಕು ಎನ್ನುವುದು ನನ್ನ ವಾದವಲ್ಲ. ಅದೇ ಆದಿಮ ಪರಿಸ್ಥಿತಿಯಲ್ಲಿ ಜೀವಿಸಬೇಕು ಎಂದು ಹೇಳುವುದಿಲ್ಲ. ಇವರ ಪಾತ್ರೆಗಳ ತಯಾರಿಕೆ ಕ್ರಮವನ್ನು ಹಾಗೂ ಉತ್ಪಾದನಾ ಸಲಕರಣೆಗಳನ್ನು ಸರಕಾರವು ಬದಲಾಯಿಸಬೇಕು. ಯಾವುದೋ ವಿದೇಶಿ ಕಂಪನಿಗಳಿಗೆ ಬೃಹತ್ತಾದ ಭೂಮಿಯನ್ನು ನೀಡಿ, ಅದು ಸಿದ್ಧಪಡಿಸುವ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡುವುದರ ಜೊತೆಗೆ ಮುಕ್ತ ಮಾರಾಟಕ್ಕೆ ಅವಕಾಶ ನೀಡುವುದು ಅಷ್ಟೊಂದು ಸರಿಯಾದ ಕ್ರಮವಲ್ಲ.

ಇಂತಹ ಮುಂದಾಲೋಚನೆಯಿಲ್ಲದ ಕ್ರಮಗಳಿಂದ ಶತಮಾನಗಳಿಂದ ದೇಶಿಯ ಮಣ್ಣಿನಲ್ಲೆ ಹುಟ್ಟಿ, ಅದೇ ಮಣ್ಣನ್ನು ಹದಮಾಡಿ ಜನರ ಬೇಡಿಕೆಗೆ ಅನುಗುಣವಾಗಿ ಪಾತ್ರೆ ಗಳನ್ನು ಸಿದ್ಧಪಡಿಸಿ ಅದರಿಂದ ಬಂದಂತಹ ಪ್ರತಿಫಲದಿಂದ ತಮ್ಮ ಜೀವನವನ್ನು  ಕಟ್ಟಿ ಕೊಂಡು ಬಾಳುತ್ತಿರುವವರ ಬದುಕು ಏನಾಗಬೇಕು ಮತ್ತು ಈಗ ಅವರ ಸ್ಥಿತಿಯು ಯಾವ ರೀತಿಯಾಗಿದೆಂಬುದು ಸ್ವಲ್ಪವಾದರೂ ಸರಕಾರ, ಅಧಿಕಾರಿಗಳು, ರಾಜಕಾರಣಿಗಳು ಯೋಚಿಸ ಬೇಕಾಗಿದೆ. ಈ ತರಹದ ಹಲವಾರು ತಳಸಮುದಾಯಗಳು ಸಂಕಷ್ಟಕ್ಕೆ ಒಳಪಟ್ಟಿವೆ. ಅದರಲ್ಲಿ ಬೇಡ ಬುಡಕಟ್ಟು ಸಮುದಾಯವು ಒಂದು.

ಐತಿಹಾಸಿಕ ಸ್ಥಿತಿ

ನಾಯಕರ ಐತಿಹಾಸಿಕ ಪರಂಪರೆ ಅದ್ಭುತವಾದುದು. ಅವರು ಕೋಟೆಕೊತ್ತಲ, ಕೆರೆ ಕಾಲುವೆ ಕಟ್ಟಿಸಿ ಸ್ವದೇಶ, ಸ್ವಧರ್ಮ ರಕ್ಷಣೆಗಾಗಿ ಹೋರಾಡಿ ರಾಜ್ಯ, ಸಾಮ್ರಾಜ್ಯ ಸ್ಥಾಪಿಸಿ ನಾಡಸೇವೆಗೈದವರು, ಬಲಿದಾನ ಮಾಡಿದವರು, ಸೋತು ಸುಣ್ಣವಾದವರು, ಈ ಪ್ರಜ್ಞೆ ನಾಯಕರಿಗೆ ಇದ್ದರೆ ತಮ್ಮ ಏಳಿಗೆಗೆ ಪಣತೊಡುತ್ತಾರೆ. ನಾಯಕರ ಇಂದಿನ ಹೀನ ಸ್ಥಿತಿಗೆ ಈ ಐತಿಹಾಸಿಕ ಕಾರಣವೂ ಒಂದೆಂದು ಬಗೆದು ಮುಂದುವರಿದ ಸಮಾಜಗಳ ನಾಯಕರು ಹಿತವರ್ಧನೆಗೆ ಕೈಗೂಡಿಸಬೇಕಾಗಿದೆ. ತಮ್ಮ ಇತಿಹಾಸವನ್ನು ಅರಿಯದವರು ಭವಿಷ್ಯವನ್ನು ರೂಪಿಸಲಾರರು ಎಂಡು ಡಾ.ಅಂಬೇಡ್ಕರ್ ಹೇಳಿದ್ದಾರೆ. ಆದರೆ ಇತ್ತೀಚೆಗೆ ನಾಯಕರ ಚರಿತ್ರೆಯನ್ನು ಇತರ ಸ್ವಾರ್ಥಿಗಳು ಕಸಿದುಕೊಳ್ಳುತ್ತಿದ್ದಾರೆ. ಉದಾ. ಹಕ್ಕಬುಕ್ಕ, ಕನಕದಾಸ, ಈಗ ಇತಿಹಾಸ ನಿರ್ಮಿಸಲಾರದ ನಾವು ನಮ್ಮ ಪೂರ್ವಜರ ಇತಿಹಾಸವನ್ನಾದರೂ ಉಳಿಸಿ ಕೊಳ್ಳಬೇಕಲ್ಲ. ಈ ಸವಾಲನ್ನು ಧೀರ ನಾಯಕರು ಸ್ವೀಕರಿಸುವರೆ ನಾಯಕರ ಇತಿಹಾಸ, ರಾಜ್ಯ, ಐತಿಹಾಸಿಕ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳು, ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ವ್ಯಕ್ತಿಗಳ ಚಿಕ್ಕಚಿಕ್ಕ ಪರಿಚಯ ಪುಸ್ತಕಗಳನ್ನು ಯೋಗ್ಯದರದಲ್ಲಿ ಪ್ರಕಟಿಸಿ ಪ್ರಾಸಾರ ಮಾಡಬೇಕು.

ಶೈಕ್ಷಣಿಕ ಸಮಸ್ಯೆ

ಈ ಕಾಲದಲ್ಲಿ ಎಸ್.ಎಸ್.ಎಲ್.ಸಿ. ವರೆಗಾದರೂ ಎಲ್ಲ ಮಕ್ಕಳಿಗೆ ಸಾಮಾನ್ಯ ಶಿಕ್ಷಣ ಬೇಕು. ಆದರೆ ನೌಕರಿ ನಿರೀಕ್ಷಿಸದೆ ಸ್ವಂತ ಉದ್ಯೋಗದ ಗುರಿ ಇರಬೇಕು. ಚಿಕ್ಕ ಚಿಕ್ಕ ಸಮಾಜಗಳು ಸಹ ತಮ್ಮ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮವರಿಗೆ ಹೆಚ್ಚು ಅವಕಾಶ ಕೊಡುತ್ತಾರೆ. ಈ ವಿಷಯದಲ್ಲಿ ವಾಲ್ಮೀಕಿ ಸಮಾಜ ಬಹಳ ಹಿಂದಿದೆ. ವೈಜ್ಞಾನಿಕ, ತಾಂತ್ರಿಕ ಶಿಕ್ಷಣ, ವೃತ್ತಿ ಶಿಕ್ಷಣಗಳಿಗೆ ಹೆಚ್ಚು ಗಮನಕೊಡಬೇಕಾಗಿದೆ. ಇದು ಸ್ಪರ್ಧಾಯುಗ. ಕೇವಲ ಬಿಜಾಪುರ, ಗುಲಬರ್ಗಾ ಜಿಲ್ಲೆಗಳಲ್ಲೇ ಬಂಜಾರ ಸಮಾಜ ನಡೆಸುವ ೬೦ ಶಾಲೆಗಳಿವೆ.

ಆರ್ಥಿಕ ಪರಿಸ್ಥಿತಿ

ವಾಲ್ಮೀಕಿ ಸಮುದಾಯದ ಶೇ. ೭೦ ಜನರಿಗೆ ಅಲ್ಪಸ್ವಲ್ಪ ಆಸ್ತಿ, ಜಮೀನು ಇರುತ್ತದೆ. ಆದರೆ ಕುಟುಂಬ ನಿರ್ವಹಣೆಗೆ, ಹೆಚ್ಚಿನ ಅಭಿವೃದ್ದಿಗೆ ಸಾಕಾಗುವಷ್ಟು ಆಸ್ತಿ ಇದ್ದವರು ಬಹಳ ಕಡಿಮೆ. ಬಯಲು ಸೀಮೆಯಲ್ಲಿ ಭೂವಿಯ ಉತ್ಪನ್ನ ನೆಚ್ಚುವಂತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕೆಲವರು ನೌಕರಿ ಸೇರಿ ಸುಧಾರಿಸುತ್ತಿದ್ದಾರೆ. ಮಿಕ್ಕವರೆಲ್ಲ ಕೂಲಿ, ಕೆಳದರ್ಜೆ ಸೇವೆ ಮಾಡುತ್ತಾರೆ. ಮುಸಲ್ಮಾನರಂತೆ ಕೈಗಾರಿಕೆ, ವ್ಯಾಪಾರ, ತಾಂತ್ರಿಕ ಕೆಲಸಗಳಿಂದ ವಾಲ್ಮೀಕಿಗಳು ಸ್ವಾವಲಂಬಿಗಳಾಗುವುದನ್ನು ಕಲಿಸಬೇಕಾಗಿದೆ. ಆಲಸ್ಯ ದುಂದುವೆಚ್ಚ, ದುಶ್ಚಟ ಗಳಿಂದಲೂ ಇವರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಇವರಲ್ಲಿ ಉಳಿತಾಯ, ಪ್ರವೃತ್ತಿಯೂ ಬಹಳ ಕಡಿಮೆ. ಸರಕಾರದಿಂದ ದೊರೆಯುವ ಆರ್ಥಿಕ ಸವಲತ್ತು, ತರಬೇತಿಗಳ ಮಾಹಿತಿ ಇಲ್ಲದಷ್ಟು ಇವರು ಅಜ್ಞಾನಿಗಳಾಗಿದ್ದಾರೆ. ಇವರಿಗೆ ಕಳೆದ ೨೦೦ ವರ್ಷಗಳಿಂದ ಆನುವಂಶಿಕ ಉದ್ಯೋಗವೆಂಬುದಿಲ್ಲ. ಇದಕ್ಕೆ ಐತಿಹಾಸಿಕ ಕಾರಣವಿದೆ. ಆರ್ಥಿಕ ಜಡತ್ವವನ್ನು ಕಿತ್ತುಹಾಕು ವುದೇ ಒಂದು ದೊಡ್ಡ ಸವಾಲು.

ಸಾಮಾಜಿಕ ಸ್ಥಿತಿ

ಬಡತನ ನಿರಕ್ಷರತೆಯಿಂದಾಗಿ ಬಹುಪಾಲು ಜನರನ್ನು ಕೀಳರಿಮೆ ಕಾಡುತ್ತಿದೆ. ಮೂಢ ನಂಬಿಕೆಗಳೂ ಸಾಕಷ್ಟಿವೆ. ವೈಚಾರಿಕ ಜಾಗೃತಿ ಇಲ್ಲ. ಹುಂಬತನ, ತಿಳಿಗೇಡಿತನಗಳಿಂದ ಇವರು ಒರಟರೆನಿಸಿಕೊಂಡಿದ್ದಾರೆ. ಆದ್ದರಿಂದ ಅಜ್ಞಾನ ಹೋಗಲಾಡಿಸಿ ಪೂರ್ವಜರ ಸಾಧನೆ ಗಳ ಪರಿಚಯ ಮಾಡಿಕೊಟ್ಟರೆ, ಶಿಕ್ಷಣ ನೀಡಿದರೆ ಬಾಳುವಂತರಾಗಿ ಸಮಾಜದಲ್ಲಿ ಗೌರವ ಯುತವಾಗಿ ಬಾಳಬಲ್ಲರು. ಇವರಲ್ಲಿ ಒಕ್ಕಟ್ಟು ಇಲ್ಲದಿರುವದೂ ಒಂದು ಕೊರತೆ United we stand, Divided we fall ಎಂಬುದರ ಮನವರಿಕೆ ಆಗಬೇಕು. ಈ ಮಾತಿಗೆ ಹಲವಾರು ಉದಾಹರಣೆ ಕೊಡಬಹುದು. ಈ ಸಮಾಜದಲ್ಲಿ ಸ್ವಚ್ಛತಾ ಪ್ರಜ್ಞೆಕಡಿಮೆ. ಈ ಮಾತಿಗೆ ಹಲವಾರು ಉದಾಹರಣೆ ಕೊಡಬಹುದು. ಈ ಸಮಾಜದಲ್ಲಿ ಸ್ವಚ್ಛತಾ ಪ್ರಜ್ಞೆ ಕಡಿಮೆ. ವೈಯಕ್ತಿಕ ಹಾಗೂ ಕೌಟುಂಬಿಕ ಮಟ್ಟದಲ್ಲಿ ಮತ್ತು ಓಣಿಕಟ್ಟುಗಳಲ್ಲಿ ಸ್ವಚ್ಛತೆಗೆ ಪ್ರಾಧಾನ್ಯ ನೀಡಿದರೆ, ಸಾಮಾಜಿಕ ಸ್ಥಾನಮಾನವೂ ಹೆಚ್ಚುತ್ತದೆ. ಸ್ವಚ್ಛತೆ ಇಲ್ಲದವರನ್ನು ಸಾಮಾನ್ಯವಾಗಿ ಕೀಳಾಗಿ ಕಾಣಲಾಗುವುದು. ಬಡಲಿಂಗಾಯಿತರು, ಬ್ರಾಹ್ಮಣರು ಕೂಡ ಬೆಳಿಗ್ಗೆ ಸ್ನಾನ ಮಾಡಿ, ನಾಮ ವಿಭೂತಿ ಧರಿಸಿ, ಮಡಿ ಬಟ್ಟೆಧರಿಸಿ, ಹೊರಹೋಗುವ ಪರಂಪರೆ ಹೊಂದಿದ್ದಾರೆ Cleanliness is nest to the godlines ಎನ್ನುವ ಮಾತು ಅರ್ಥಗರ್ಭಿತವಾಗಿದೆ.

ಧಾರ್ಮಿಕ ಸ್ಥಿತಿ

ಇತರ ಹಿಂದುಳಿದ ವರ್ಗದವರಲ್ಲಿಯಂತೆ ನಾಯಕರಲ್ಲೂ ಧರ್ಮ, ದೇವರ ಹೆಸರಿನಲ್ಲಿ ಹಲವಾರು ಅರ್ಥಹೀನ ಆಚರಣೆ, ನಂಬಿಕೆಗಳು ಬೆಳೆದಿವೆ. ಕೆಲವು ಸಲ ಹುಚ್ಚಾಟಗಳೇ ಮೆರೆಯುತ್ತವೆ. ಇದಕ್ಕಾಗಿ ಸಮಯ, ಹಣ, ಶ್ರಮ ಪೋಲಾಗುತ್ತವೆ. ಆದರೆ ಪ್ರಗತಿ, ಸರಳ ಪೂಜಾ ವಿಧಾನ ರೂಢಿಸುವದು ಅವಶ್ಯ. ಸದ್ಭಾವನೆ, ಸೌಹಾರ್ಧತೆ, ತಾಳ್ಮೆ, ಪ್ರೀತಿಗಳನ್ನು ಬೆಳೆಸುವ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪರೋಪಕಾರ, ಮಾನವ ಸೇವೆ ನಿಜವಾದ ಪೂಜೆ ಎಂಬ ಪರಿಕಲ್ಪನೆ ಬೆಳೆಸಬೇಕಾಗುತ್ತದೆ. God helps those who help them selves ಎಂಬುದು ಇಂಗ್ಲಿಷಿನಲ್ಲಿಯ ಮಾತು. ಬುದ್ಧ, ಬಸವಣ್ಣನವರ ತತ್ತ್ವಗಳ ಆಚರಣೆಗೆ ಒತ್ತು ಕೊಡಲು ಕಲಿಸಬೇಕು. ಈ ಸಮಾಜಕ್ಕೆ ಮೊದಲು ಪಾರಂಪರಿಕ ಮಠಾಧೀಶರಿರಲಿಲ್ಲ. ಇತ್ತೀಚೆಗೆ ವಾಲ್ಮೀಕಿ ಗುರುಪೀಠ ಸ್ಥಾಪಿತ ವಾಗಿದ್ದು ಅದನ್ನು ಬೆಳೆಸಬೇಕಾಗಿದೆ. ಶಿವ, ವಿಷ್ಣು ಬೇಧವಿಲ್ಲದೆ ಇರುವುದು, ಮದುವೆ ಮತ್ತು ಅಂತ್ಯ ಸಂಸ್ಕಾರಗಳಲ್ಲಿ ಪುರೋಹಿತ, ಜಂಗಮರನ್ನು ಅವಲಂಬಿಸಿದೆ ಅಂಥಕಾರ್ಯ ಗಳಿಗೆ ಸಮಾಜದ ವ್ಯಕ್ತಿಗಳನ್ನು ತಯಾರಿಸುವ ಸಂಪ್ರದಾಯ ಬೆಳೆಯಬೇಕಾಗಿದೆ. ಅರ್ಹರಾದ ಪುರೋಹಿತ, ಜಂಗಮರೂ ಇತ್ತೀಚೆಗೆ ಅಲಭ್ಯರಾಗುತ್ತಿದ್ದಾರೆ.

* * *

ಹಲಗಲಿ ಬೇಡರು

ದಂಡ ಬಂತ ನೋಡ ತಯಾರ್‌ಆಗಿ
ಜಲದ ಮಾಡಿ ಬಂತ ಹಲಗಲಿಗಿ

ಅರ ತಾಸ ರಾತ್ರ್ಯಾಗ ಹೋಗಿ
ಊರಿಗಿ ಹಾಕಿದಾರ ಮುತ್ತಿಗಿ

ಗುಂಡ ಹೊಡದಾರ ವಿಪರೀತ ಸೂರಿ ಆಗಿ
ಅಂಜಿ ವೋಡಾಕ್ ಹತ್ತಿತ ಮುಂದ್ ಆಗಿ

ಬೆನ್ನ ಹತ್ತಿ ನೋಡಿದಾರ ಇವರ್ ಆಗಿ
ಬಿದ್ದಾವ ಹೆಣಗೋಳು ಸೂರಿ ಆಗಿ    ||ಯೇರ||

ಮುತ್ತಿಗಿ ಹಾಕಿ ಅವರು ಕತ್ತಿಲಿ ಕಡದರ ಅಂಜಲಿಲ್ಲ ಯಾತ್ ಎತಕ