ಆಧುನಿಕ ಜಗತ್ತಿನೆಡೆಗೆ ಪರಸ್ಪರ ಹೊಂದಿಕೊಂಡಿರುವ ಮಾನವನು ಯಾವರೀತಿಯ ಜೀವನಕ್ಕೆ ಮಾರುಹೋಗಿದ್ದಾನೆ ಎನ್ನುವುದನ್ನು ಪ್ರಶ್ನಿಸುತ್ತಿದೆ. ಕೇವಲ ಒಬ್ಬ ಮಾನವನನ್ನೇ ಉದಾಹರಣೆಯಾಗಿ ನೋಡುವುದಾದರೆ ತಳಸಮುದಾಯಗಳ ಬದುಕಿನ ಹಿನ್ನೆಲೆ ಗಮನಿಸಿ ದಾಗ ಆಧುನಿಕ ಜಗತ್ತಿಗೆ ಹೊಂದಿಕೊಂಡಿದ್ದಾರೋ ಅಥವಾ ಜಾಗತೀಕರಣವು ತಳಸಮು ದಾಯಗಳಿಗೆ ಸುಖಕರವಾದ ಜೀವನವನ್ನೊದಗಿಸಿದೆಯೋ ಎನ್ನುವ ಚರ್ಚೆ ಇಂದು ನಮ್ಮ ಕಣ್ಮುಂದೆ ಸೆಳೆಯುತ್ತೇ.

ಮೊದಲೆಲ್ಲಾ ಯಾವುದೇ ಜಾತಿ-ಭೇದಗಳಿಲ್ಲದೆ ಬದುಕುತ್ತಿದ್ದ ಸಮುದಾಯಗಳನ್ನು ಮೇಲ್ಜಾತಿ ರಾಜಕಾರಣವು ಆ ಕೊಡುಕೊಳ್ಳುವಿಕೆ ಸಂಬಂಧವನ್ನು ಎಷ್ಟರ ಮಟ್ಟಿಗೆ ಬೇರೆ ಮಾಡಿಟ್ಟಿದೆ ಎಂದರೆ ಇಂದು ಆ ಸಂಬಂಧಗಳಿಲ್ಲದೆ ಒಬ್ಬರ ಮುಖ ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ. ಅಂದರೆ ಇದು ನಮ್ಮ ನಮ್ಮಲ್ಲಿ ಪ್ರಬಲ ಸಂಘಟನೆ ಇಲ್ಲದೆ ಬೇರೊಬ್ಬರಿಗೆ ಒಂದು ರೀತಿಯ ನಾಗಾಡಿಕೆಯ ಪ್ರಸಂಗವನ್ನು ಎತ್ತಿತೋರಿಸುವಿಕೆಯಾಗಿದೆ.

ಅಂದರೆ ಇಬ್ಬರ ನಡುವೆ ಕಿಚ್ಚು ಹಚ್ಚಿ ಮೂರನೆಯವರು ಲಾಭ ಮಾಡಿಕೊಳ್ಳುವ ಒಂದು ಪ್ರಸಂಗ ಅಥವಾ ನೋಟವೆನ್ನಬಹುದು. ಅಂದರೆ ತಳಸಮುದಾಯಗಳನ್ನು ಮೇಲ್‌ಸ್ಥಾನದ ಎತ್ತರಕ್ಕೆ ಕೊಂಡೊಯ್ದು ಅವರನ್ನು ಬಾಯಿಮುಚ್ಚಿಸುವ ಹುನ್ನಾರು ಇಂದು ಒಂದು ಒಳರಾಜ ಕಾರಣವನ್ನು ಎತ್ತಿತೋರಿಸುವಂತದು. ಇದರಲ್ಲಿ ಒಳ್ಳೆಯದು ಕೆಟ್ಟದ್ದೂ ಅನ್ನುವುದಕ್ಕಿಂತ ನಮಗೆ ಹತ್ತಿರವಾದದ್ದು ದೂರವಾದದ್ದು ಯಾವುದು ಎಂಬುದರ ಬಗ್ಗೆ ತಿಳಿಯಬೇಕಾದು ದಾಗಿದೆ.

ಏಕೀಕೃತ ಸ್ಥಾನವನ್ನು ಕೊಡುವುದರ ಮೂಲಕ ತಳಸಮುದಾಯಗಳನ್ನು ಅತಂತ್ರ ಸ್ಥಿತಿಯಲ್ಲಿಟ್ಟು ಆ ಮುಖಾಂತರ ಅವರ ಜೀವನವನ್ನು ಹಾಳುಮಾಡುವುದಲ್ಲದೆ ಪರಸ್ಪರ ದ್ವೇಷ, ಅಸೂಯೆ, ಕೋಮು ದಳ್ಳುರಿಗಳನ್ನು ಸೃಷ್ಟಿಸಿ ತಳಸಮುದಾಯಗಳು ಮತ್ತು ಹಿಂದುಳಿದವರನ್ನು, ಮಹಿಳೆಯರನ್ನು ಅಧೋಗತಿಗಿಳಿಸಿ ಅವರ ಶ್ರಮವನ್ನು ಹಾಳುಮಾಡುವದಲ್ಲದೆ, ಅವರ ಜಮೀನನ್ನು ಕಸಿದುಕೊಳ್ಳುವಿಕೆಗೆ ಈ ಜಾಗತೀಕರಣ ಗೊತ್ತಿಲ್ಲದೆಯೇ ಈ ಕೆಲಸಕ್ಕೆ ದಾರಿಮಾಡಿಕೊಟ್ಟಿರುತ್ತದೆ. ಈ ನಮ್ಮ ತಳಸಮುದಾಯಗಳ ಜನರು ಹೆಂಡ ಮತ್ತು ದುಡ್ಡಿನ ಆಸೆಗೆ ಬಲಿಯಾಗಿ ತಮಗೆ ಗೊತ್ತಿಲ್ಲದೆಯೇ ತಾವೆ ಬಲಿಯಾಗಿರುತ್ತಾರೆ. ಇದಕ್ಕೆ ಕಾರಣ ಶಿಕ್ಷಣ ಇಲ್ಲದಿರುವಿಕೆ.

ತಮ್ಮ ಮಕ್ಕಳಿಗೆ ಇಂದಿಗೂ ಎಷ್ಟೋ ಸೌಲಭ್ಯಗಳಿರುವ ಶಾಲೆಗಳಿದ್ದರು ಶಿಕ್ಷಣ ಕೊಡಿಸದೆ ಗ್ಯಾರೇಜುಗಳಲ್ಲಿ, ಬಾರುಗಳಲ್ಲಿ, ಗಣಿಕೈಗಾರಿಕೆಯಲ್ಲಿ, ಹೋಟೆಲ್ಲುಗಳಲ್ಲಿ ಇಲ್ಲೆಲ್ಲಾ ನಾವು ಕಾಣುವುದು ಬರೀ ತಳಸಮುದಾಯದ ವರ್ಗದವರ ಮಕ್ಕಳನ್ನೇ ವಿನಃ ಯಾವ ಮೇಲ್ವರ್ಗದ ಮಕ್ಕಳನ್ನು ಕಾಣುವುದಿಲ್ಲ. ನಾವು ಮೊನ್ನೆಯವರೆಗೂ ಕಂಡಂತೆ ಮತ್ತು ಈಗಲೂ ಕಾಣುತ್ತಿರುವ ಪ್ರಸಂಗ ನಾವು ಯಾವುದಾದರೂ ಹೋಟೆಲ್ಲುಗಳಲ್ಲಿ ಹೋದಾಗ ಏ ತಮ್ಮ ನೀನು ಯಾವು ಜಾತಿಯವನು ಎಂದು ಕೇಳಿದಾಗ ಎಸ್.ಸಿ. ಅಥವಾ ಎಸ್.ಟಿ. ಎಂದು ಅಂದರೆ ಜಾತಿಯನ್ನು ಕೂಡ ಹೇಳಿಕೊಳ್ಳಲಾಗದ ಪ್ರಸಂಗವು ಇದೆ. ಅಂದರೆ ಸರ್ಕಾರವೇ ನೀನು ಈ ಕೆಲಸ ನೀನು ಈ ಕೆಲಸ ಎಂದು ಸೂಚಿಸಿರುವಾಗ ನಾವು ಊಹೆ ಮಾಡಲಿಕ್ಕೂ ಸಾಧ್ಯವಾಗದ ಪರಿಸ್ಥಿತಿ ಈ ಆಧುನಿಕತೆಯಲ್ಲಿ ಎತ್ತಿ ಕಾಣುತ್ತದೆ ಎನ್ನಬಹುದು.

ಅಂದರೆ ಇಂದಿಗೂ ತಳಸಮುದಾಯಗಳಲ್ಲಿ ಅಶಿಕ್ಷಿತೆ ರಾರಾಜಿಸುವುದನ್ನು ಈ ಹೋಟೆಲ್ಲುಗಳಲ್ಲಿ ಕೆಲಸ ಮಾಡುವ ಬಾಲಾಕಾರ್ಮಿಕತೆಯಿಂದಲೇ ಕಂಡುಕೊಳ್ಳುವುದಾಗಿದೆ.

ಇನ್ನು ಕುಲಕಸುಬುಗಳನ್ನು ತೆಗೆದುಕೊಂಡಾಗ ಮೊದಲೆಲ್ಲ ಚಾಪೆಯಲ್ಲಿ ಈಚಲು ಚಾಪೆಗಳು ಮೈಗೂ ಹಿತ ಮತ್ತು ರಕ್ತ ಪರಿಚಲನೆಗೆ ಒಂದು ಸಹಾಯಕ ಸಾಧನವು. ಆದರೆ ಇಂದು ಪ್ಲಾಸ್ಟಿಕ್ ಚಾಪೆಗಳು ಬಂದಿರುವುದರಿಂದ ಈಚಲು ಚಾಪೆಯನ್ನು ನಂಬಿಕೊಂಡು ಬದುಕು ಸಾಗಿಸುವ ತಳಸಮುದಾಯಗಳ ಬದಕು ಎಷ್ಟು ಸಮಸ್ಯೆಯನ್ನು ತಂದಿಟ್ಟಿರುವುದರ ಜೊತೆಗೆ ಅವರು ಯಾವುದನ್ನು ಅನುಸರಿಸಿಕೊಂಡು ಬದುಕಬೇಕೋ ಎನ್ನುವುದರ ಕಡೆಗೆ ಆಧುನೀಕರಣ ಗಮನ ಹರಿಸದಿರುವುದು ಒಂದು ಶೋಚನೀಯ ಸಂಗತಿ ಎನ್ನಬಹುದು.

ಇನ್ನು ಕೆಲವರು ಹೊಲಗಳಲ್ಲಿ ಕೂಲಿಯನ್ನೇ ಮಾಡಿ ಬದುಕುತ್ತಿರುವುದು ಹೆಣ್ಣಿಗೆ ಇಂತಿಷ್ಟು, ಗಂಡಿಗೆ ಇಂತಿಷ್ಟು ಎಂದು, ಕೆಲವರು ಕೃಷಿಯನ್ನೇ ಅವಲಂಬಿಸಿಕೊಂಡು ಬದುಕು ತ್ತಿರುವುದು ಅಪ್ಪ ಹಾಕಿದ ಆಲದ ಮರಕ್ಕೆ ನೇತು ಬೀಳುವ ಮಗನ ಉದಾ. ಇಲ್ಲಿ ಕಾಣ ಬಹುದು.

ಅಂದರೆ ಆಡಂಬರದ ಬದುಕಿನತ್ತ ಸಾಗಿರುವ ತಳಸಮುದಾಯಗಳ ಬದುಕು ಅತ್ತ ಒಳ ಇರಲಾರದೇ, ಇತ್ತ ಹೊರಬರಲಾರದೇ ಅತ್ಯಂತ ಹೀನಾಯ ಸ್ಥಿತಿಯತ್ತ ಸಾಗುವಿಕೆ ಯಾಗಿದೆ.

ಇನ್ನು ಈಗೆಲ್ಲಾ ವುಲ್ಲನ್ ಶಾಲ್ ಅಥವಾ ವುಲ್ಲನ್ ರಗ್ಗುಗಳು ಬಂದಿರುವುದರಿಂದ ಕಂಬಳಿಯನ್ನು ಯಾರು ಕೇಳುವುದಿಲ್ಲ. ಕಂಬಳಿ ಬೆಚ್ಚನೆಯ ಹೊದಿಕೆಯಾದರೂ ಕೂಡ ಮೈಗೆ ಚುಚ್ಚುತ್ತದೆಂದು ವುಲ್ಲನ್ ಆದರೆ ಮೆತ್ತಗೆ ಇರುತ್ತದೆಂದು ಹೊದ್ದುಕೊಂಡರೂ ಚುಚ್ಚುವುದಿಲ್ಲವೆಂದು ಈ ಕಡೆಯತ್ತ ಮರಳುವ ಜನ ಮತ್ತು ಪಿಂಜಾರರು ಮಾಡಿದ ತಡೀ (ಹಾಸಿಗೆ)ಗಳನ್ನು ಮೊದಲೆಲ್ಲಾ ಹೇಳಿಸಿ ಮಾಡಿಸಿಕೊಂಡು ಹೋಗುತ್ತಿದ್ದರು. ಆದರೆ ಈಗೆಲ್ಲಾ curlon bedsಗಳು ಸಿಗುತ್ತಿರುವುದಲ್ಲದೆ ವಿವಿಧ ವಿನ್ಯಾಸಗಳಿಂದ ಮಾಡಿರುತ್ತಾರೆಂದು ಜನರೆಲ್ಲಾ ಅದನ್ನೇ ಕೊಂಡುಕೊಳ್ಳುವುದು ಅವರು ಮಾಡೋದು ಹತ್ತಿಯಿಂದಲೇ ಇವರು ಮಾಡದು ಹತ್ತಿಯಿಂದಲೇ ಆದರೂ ಕೂಡ ಜಾಗತೀಕರಣ ಮನುಷ್ಯನನ್ನು ಯಾವ ರೀತಿಗೆ ತಂದಿಟ್ಟಿದೆ ಎನ್ನುವುದು ಮತ್ತು ಈ ಹಾಸಿಗೆ ಮಾಡುವವರಿಗೆ ಕೆಲಸವಿಲ್ಲದೆ ಅವರು ಯಾವ ಹೋರಾಟಕ್ಕೂ ಸಜ್ಜಾಗದೇ ಒಂದು ವೇಳೆ ಸಜ್ಜಾದರೂ ಅದನ್ನು ಪರಿಶೀಲಿಸದಿರುವ ಆಶ್ವಾನೆಯ ಸರ್ಕಾರಗಳು ಇದನ್ನೆಲ್ಲಾ ಕಂಡಾಗ ತಳಸಮುದಾಯಗಳ ಬದುಕು ಮತ್ತು ಹಕ್ಕನ್ನು ಆಧುನಿಕ ಜಗತ್ತು ಹೇಗೆ ಕಬಳಿಸಿಕೊಂಡಿದೆ ಎನ್ನವುದು ಗೊತ್ತಾಗುತ್ತದೆ.

ಆಧುನೀಕತೆಯು ತಳಸಮುದಾಯಗಳ ಸ್ವಾಭಿಮಾನದ ಮನಸ್ಸನ್ನು ಕಿತ್ತುಹಾಕಿ ಉಪಭೋಗ ಸಂಸ್ಕೃತಿಯತ್ತ ಎಡೆಮಾಡಿಕೊಟ್ಟಿದೆ. ಉದಾ ೧೭ನೇಯ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿಯ ಮೂಲಕ ಹುಟ್ಟಿದ ಬಂಡವಾಳಶಾಹಿ ವ್ಯವಸ್ಥೆಯು ಬೃಹತ್ ಕೈಗಾರಿಕೆ ಗಳನ್ನು ಸ್ಥಾಪಿಸಿತೊಡಗಿತು. ಇದರಿಂದ ಗೃಹಕೈಗಾರಿಕೆಗಳು ಕಡಿಮೆಯಾದವು ಎನ್ನಬಹುದು.

ಇನ್ನು ತಳಸಮುದಾಯಗಳ ಕಲೆಗಳತ್ತ ಹೊರಟಾಗಲೂ ಆಧುನಿಕತೆಯು ಕಲೆಗೆ ಸಂಬಂಧ ಪಟ್ಟಂತೆ ಪ್ರತಿಷ್ಟಿತ ಮಾದರಿಗಳನ್ನು ಸೃಷ್ಟಿಸಿದೆ ಎನ್ನಬಹುದು. ಈ ಪ್ರತಿಷ್ಟಿತ ಮಾದರಿಗಳು ಬಹುಮುಖ್ಯವಾಗಿ ವಾಣಿಜ್ಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡಂತವುಗಳಾಗಿ ರುತ್ತವೆ.

ತಳಸಮುದಾಯಗಳ ಕಲೆಗಳ ಮಾದರಿಗಳನ್ನು ನೋಡಿದಾಗ ಎರಡು ಮುಖ್ಯ ಅಂಶಗಳ ಮುಖೇನ ನಮಗೆ ಗೊತ್ತಾಗುತ್ತೆ. ತಳಸಮುದಾಯಗಳ ಕಲೆಗಳಿಗೆ ತನ್ನದೇ ಆದ ಸ್ವಂತಸ್ತಿಕೆ ಇದ್ದು ಇದನ್ನು ಬೆಳೆಸುವಲ್ಲಿ ಇಲ್ಲಿನ ಸಮುದಾಯಗಳು ನಿರಂತರವಾಗಿ ಪಾಲುಗೊಂಡಿ ರುತ್ತವೆ. ಪ್ರತಿಷ್ಟಿತ ಮಾದರಿ ರಾಜ್ಯದ ಹಿನ್ನೆಲೆಯಲ್ಲಿ ಆಧುನಿಕ ತಂತ್ರಜ್ಞಾನದಿಂದ ಹುಟ್ಟಿದ ಜೀವನ ಕ್ರಮವನ್ನು ತರುವಂತದ್ದು ಆಧುನಿಕತೆಯ ಈ ಕೆಂದ್ರೀಕರಣವು ಕಲೆಯನ್ನು ನಾಗರೀಕತೆಯ ಹೆಸರಿನಲ್ಲಿ ಪೊಳ್ಳುಗೊಳಿಸುತ್ತದೆ ಎನ್ನಬಹುದು.

ಹಲವಾರು ಪತ್ರಿಕೆಗಳಲ್ಲಿ ತಳಸಮುದಾಯದವರ ಬದುಕನ್ನು ಗಮನಿಸಿದಾಗ ಇಂದಿಗೂ ಇವರು ಸರ್ಕಾರದ ಸೌಲಭ್ಯದಿಂದ ಎಷ್ಟು ವಂಚಿತರಾಗುತ್ತಿದ್ದಾರೆ ಎನ್ನುವುದು ಊಹೆ ಮಾಡಲಿಕ್ಕೂ ಸಾಧ್ಯವಾಗದ ಪರಿಸ್ಥಿತಿ ಎನ್ನಬಹುದಕ್ಕಿಂತ ಅವರ ಬದುಕು ಒಂದು ಸಮಸ್ಯೆಯ ಸವಾಲಾಗಿ ಪರಿಣಮಿಸಿದೆ ಎನ್ನಬಹುದು. ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವುದೇ ಅಲ್ಲದೆ ತಮ್ಮ ಮೂಲನೆಲೆಯತ್ತಲೇ ಇನ್ನು ಇರುವಿಕೆಯನ್ನು ನಾವು ಕಾಣುವುದಾಗಿದೆ.

ಇನ್ನು ಸ್ತ್ರೀಯರತ್ತ ಗಮನ ಹರಿಸಿದಾಗ ತಳಸಮುದಾಯಗಳ ಸ್ತ್ರೀಯರ ಬದುಕು ಯಾವ ರೀತಿ ಶೋಷಿತವಾಗುತ್ತಿದೆ ಎನ್ನುವುದು ಒಂದು ಪ್ರಶ್ನಾರ್ಥಕ. ಅಂದರೆ ಪುರುಷಶಾಹಿ ಅದರಲ್ಲೂ ಮೇಲ್ವರ್ಗಕ್ಕೆ ಪುರುಷಶಾಹಿ ವರ್ಗವು ಅವಳನ್ನು ಬಳಸಿಕೊಂಡು ಅವಳಿಗೆ ಸಾಮಾಜಿಕವಾಗಿ ಯಾವ ಭದ್ರತೆಯನ್ನು ಒದಗಿಸಿದೆ. ಅವಳಿಗೆ ಹೆಸರೇಳಲು ಅಂಜುವ ಒಂದು ಪಟ್ಟವನ್ನು ಕೊಟ್ಟು ಅವಳನ್ನು ತನ್ನ ಸ್ವಂತಿಕೆಗೆ ಬಳಸಿಕೊಳ್ಳುವುದು ಒಂದು ರೀತಿಯ ಹಿಂಸೆ ಅನ್ನುವುದಲ್ಲದೆ ಆಧುನಿಕ ಮಾಧ್ಯಮಗಳು ಅವಳನ್ನು ಸೌಂದರ್ಯಸ್ಪರ್ದೆ ಎನ್ನುವ ಹೆಸರಿನಲ್ಲಿ ಅವಳ  ಅಂಗಾಂಗಗಳನ್ನು ಬೆಳೆಸುವ ತಾಂತ್ರಿಕತೆಯನ್ನು ಕಂಡು ಹಿಡಿದು ಈ ಆಧುನಿಕತೆಗೆ ಅವಳನ್ನು ಒಗ್ಗಿಸಿಕೊಂಡಿರುವಂತೆ, ಸಮೂಹ ಮಾಧ್ಯಮಗಳು ತಳಸಮುದಾಯದ ಸ್ತ್ರೀಯ ರನ್ನು ಒಪ್ಪಿಸುವ ಪ್ರಯತ್ನವನ್ನು ಮಾಡುತ್ತಿವೆ.

ಇನ್ನು ಆಧುನಿಕ ಜಗತ್ತಿನ ಮೀಸಲಾತಿಯ ಬದುಕು ತಳಸಮುದಾಯಗಳನ್ನು ಬುಡ ಮೇಲು ಮಾಡಿ ಒಣ ಆಡಂಬರದ ಬದುಕಿಗೆ ಈಡು ಮಾಡಿದೆ. ತಳಸಮುದಾಯಗಳಲ್ಲಿ ಇಂದಿಗೂ ಶಿಕ್ಷಣವಿಲ್ಲದೆ, ಅರೆ ಬರೆ ಕೆಲಸದಲ್ಲಿ ತೊಡಗಿಸಿಕೊಂಡು ಒಗ್ಗಟ್ಟಿಲ್ಲದ ಜೀವನ ವನ್ನು ಸರಿಯಾದ ಮಾಹಿತಿ ಇಲ್ಲದೆ ಕುಡಿದು ಹಾಳಾಗಿ ಜಗಳವಾಡಿ ಜೀವನ ಮಾಡುತ್ತಿದ್ದು ದನ್ನು ಇಂದಿಗೂ ಕಾಣುವುದಾಗಿದೆ.

ಜನಪರ ಕಾಳಜಿ ಇಲ್ಲದೆ ಸರ್ಕಾರಗಳು ತೆಗೆದುಕೊಳ್ಳುವ ನೀತಿ ನಿಯಮಗಳು ಆಧುನಿಕ ಜಗತ್ತಿನಲ್ಲಿ ಹೊಂದಿಕೊಳ್ಳುವ ಅನಿವಾರ್ಯತೆಗೆ ಬೇಕಾದ ಮಾರ್ಗಗಳು ತಿಳಿವಳಿಕೆ ಹೇಳುವ ಯಾವೊಂದು ಜವಾಬ್ದಾರಿಗಳನ್ನು ಸ್ವಯಂ ಸಮುದಾಯದ ಮುಂದಾಳುಗಳು ಹಾಗೂ ಸರಕಾರ ಗಳು ಕೈಗೊಳ್ಳದೇ ಇರುವುದು ಇನ್ನು ಈ ಸಮುದಾಯಗಳನ್ನು ದುಃಸ್ಥಿತಿಗೆ ದೂಡುವಂತೆ ಮಾಡಿದೆ ಎನ್ನಬಹುದಾಗಿದೆ.

ಒಟ್ಟಾರೆ ತಳಸಮುದಾಯಗಳ ಜಗತ್ತು ಆಧುನಿಕ ಹೊಡೆತಕ್ಕೆ ಸಿಕ್ಕು ಹೇಳಹೆಸರಿಲ್ಲದೆ ಬದುಕುವ ಪರಿಸ್ಥಿತಿ ಉಂಟಾಗಿದೆ. ಆಧುನಿಕ ಜಗತ್ತು ಅವರನ್ನು ಉತ್ತಮ ಜೀವನಕ್ಕೆ ಕೊಂಡೊಯ್ದು ಅವರನ್ನು ಅಭಿವೃದ್ದಿ ಸಾಗಿಸಬೇಕೇ ಹೊರತು ಅವರ ಜೀವನವನ್ನು ತುಳಿಯು ವಂತಾಗಬಾರದು

ಕೆಲವರು ಹೇಳಬಹುದು ಜಾಗತೀಕರಣಕ್ಕೆ ಹೊಂದಿಕೊಳ್ಳುವುದು, ಬಿಡುವುದು ಅದು ಅವರಿಷ್ಟ ಎಂದು ಹೇಳಲು ಸುಲಭ ಆದರೆ ಆಧುನಿಕ ಜಗತ್ತಿನ ಹಿಂದೆ ಒಳ ನೋಟದ ಬದುಕು ಯಾವ ಅತಂತ್ರ ಸ್ಥಿತಿಯಲ್ಲಿ ತೇಲಾಡುತ್ತಿದೆ ಎಂದು ಇನ್ನೊಂದು ಕಡೆ ಕಂಡು ಬರುವ ಚರ್ಚೆಗೆ ಆಸ್ಪದ ಮಾಡಿಕೊಡುತ್ತದೆ.

ಒಟ್ಟಾರೆ ಜಾಗತೀಕರಣವು ತಳಸಮುದಾಯಗಳನ್ನು ಸಮಸ್ಯೆಯಲ್ಲೇ ಸಿಲುಕಿಕೊಳ್ಳುವಂತೆ ಮಾಡಿ ಅವರನ್ನು ತಮ್ಮ ಹೂಟದ ಭಾಗವಾಗಿಸಿಕೊಂಡಿವೆ.

* * *

ನಾಯಕ ಪಾಳೆಯಗಾರರು ವಿಜಯನಗರವೆಂಬ ಜ್ಯೋತಿಗೆ ತೈಲವಾದವರು. ವಿಜಯನಗರ ದೇಹವಾಗಿದ್ದರೆ, ಅದರ ಪ್ರಾಣದಂತಿದ್ದವರು ನಾಯಕ ಪಾಳೆಯ ಗಾರರು.
ಪ್ರೊ. ಲಕ್ಷ್ಮಣ್ ತೆಲಗಾವಿ