ಯಾವುದೇ ಸಮುದಾಯವು ತನ್ನದೇ ಆದ ಜೀವನ ವಿಧಾನವನ್ನು ಹೊಂದಿರುತ್ತದೆ. ಅವರ ಜೀವನ ವಿಧಾನಕ್ಕನುಗುಣವಾಗಿ ಅವರವರ ಸಂಸ್ಕೃತಿಯು ರೂಪಗೊಳ್ಳುತ್ತದೆ. ಹಾಗೆಯೇ ತಳ ಸಮುದಾಯಗಳು ತಮ್ಮದೇ ಆದ ವಿಶಿಷ್ಟ ಸಂಸ್ಕೃತಿಗಳನ್ನು ಹೊಂದಿವೆ. ಅಂತಹ ಸಂಸ್ಕೃತಿಯನ್ನು ಪರಂಪಾರಗತವಾಗಿ ಉಳಿಸಿಕೊಂಡು ಕಾಲಕ್ಕೆ ತಕ್ಕಂತೆ ಬೆಳಸಿಕೊಂಡು ಬರುತ್ತವೆ.

ತಳಸಮುದಾಯಗಳು ಎಂದಾಕ್ಷಣ ಅವರು ಯಾವುದೋ ಒಂದು ಪ್ರದೇಶದ ಮೂಲ ನಿವಾಸಿಗಳಾಗಿರುತ್ತಾರೆ. ಅವರು ಅನೇಕ ಶತಮಾನಗಳಿಂದ ಬೆಟ್ಟ, ಗುಡ್ಡ, ಮರಳುಗಾಡು, ಹಿಮಪ್ರದೇಶ ಅಥವಾ ದ್ವೀಪಗಳಲ್ಲಿ ವಾಸವಾಗಿರುತ್ತಾ, ಬಹುಕಾಲ ಯಾವುದೇ ಸಂಸ್ಕೃತಿಯ ಪ್ರಭಾವಕ್ಕೆ ಸಿಕ್ಕದೆ, ತಮ್ಮದೇ ಆದ ಸಂಸ್ಕೃತಿಯನ್ನು ಪ್ರತ್ಯೇಕವಾಗಿ ಉಳಿಸಿಕೊಂಡು ಬಂದಿರುವು ದುಂಟು.

ಅವರದೇ ಆದ ಭಾಷೆ, ಆಚಾರ-ವಿಚಾರ-ದೈವ ಮೂಲ ಪುರುಷ, ಸಂಪ್ರದಾಯ, ಉಡುಗೆ ತೊಡುಗೆ, ಭಾಷೆ, ಆಟ, ಹಾಡು, ವಿಧಿ-ನಿಷೇಧಗಳು, ತಮ್ಮದೇ ಆದ ಕಟ್ಟು ಪಾಡುಗಳನ್ನು ಹೊಂದಿ ಸಮಾಜದ ಮುಖ್ಯವಾಹಿನಿಯಿಂದ ಪ್ರತ್ಯೇಕವಾಗಿ ಬದುಕಿ ನಾಗರೀಕರ ಕಣ್ಣಿಗೆ ವಿಚಿತ್ರವೆಂಬಂತೆ ಬದುಕುತ್ತಿರುವ ಸಮುದಾಯಗಳಿವು. ನನ್ನ ಅನುಭವಕ್ಕೆ ಬಂದಂತೆ ನಮ್ಮ ಕರ್ನಾಟಕದಲ್ಲಿ ಸರಿಸುಮಾರು ೫೦ ಬಗೆಯ ಆದಿವಾಸಿ ತಳಸಮುದಾಯಗಳಿರುವುದು ಕಂಡು ಬಂದಿದೆ.

ತಳಸಮುದಾಯವೆಂದರೆ ನನ್ನ ಅನಿಸಿಕೆಯ ಪ್ರಕಾರ ಪಾರಂಪರಿಕ ಜ್ಞಾನವನ್ನು ಹೊಂದಿ ರುವ ಸಮುದಾಯ. ಪ್ರಸ್ತುತ ಅಂತಹ ತಳಸಮುದಾಯಗಳೊಂದಾದ ಹಕ್ಕಿ ಪಿಕ್ಕಿ ಸಮುದಾ ಯದ ಸಂಸ್ಕೃತಿಯ ಮೇಲೆ ಆಧುನಿಕತೆಯ ಪ್ರಭಾವ, ಅದರ ಪರಿಣಾಮ ದುಷ್ಪರಿಣಾಮಗಳ ಬಗ್ಗೆ ಚರ್ಚಿಸಲು ಇಚ್ಚಿಸುತ್ತಿದ್ದೀನಿ.

ಆಧುನಿಕತೆ ಎನ್ನುವುದು ಇದೊಂದು ನಿರಂತರ ಸಾಮಾಜಿಕ ಕ್ರಿಯೆ. ನನ್ನ ಅನಿಸಿಕೆಯ ಪ್ರಕಾರ ಆಧುನಿಕ ಶಿಕ್ಷಣ, ಆಧುನಿಕ ಆರೋಗ್ಯ ಸೇವೆಗಳು, ಆಧುನಿಕ ತಾಂತ್ರಿಕ ಸವಲತ್ತುಗಳು ಹಾಗೂ ಆಧುನಿಕ ಸಂಪರ್ಕ ಮಾಧ್ಯಮಗಳು ಆಗಿವೆ.

ನಾನು ನನ್ನ ಚರ್ಚೆಗೆ ಬಳ್ಳಾರಿಜಿಲ್ಲೆಯ ಹೊಸಪೇಟೆ ತಾಲೂಕಿನ ಕಂಪ್ಲಿ ಪಟ್ಟಣದಲ್ಲಿರುವ ಹಕ್ಕಿ ಪಿಕ್ಕಿ ಸಮುದಾಯದ ಮೇಲೆ ಆಧುನಿಕತೆಯ ಪ್ರಭಾವದ ಬಗ್ಗೆ ಚರ್ಚಿಸಿದ್ದೀನಿ. ಇದೊಂದು ದ್ರಾವಿಡ ಬುಡಕಟ್ಟಿಗೆ ಸೇರಿದ ಅಲೆಮಾರಿ ಸಮುದಾಯ. ಇವರು ಕೂಡ ಮೊದಲೆಲ್ಲ ಅಲೆಮಾರಿಗಳಾಗಿದ್ದವರು. ಈಗ ಒಂದೊಂದು ಊರಿನಲ್ಲಿ ಸ್ಥಿರವಾಗಿ ನೆಲೆ ನಿಂತಿದ್ದಾರೆ. ನನ್ನೂರಿನಲ್ಲಿ ಈ ಸಮುದಾಯದ ೪೫ ಮನೆಗಳಿವೆ. ಅಲೆಮಾರಿಗಳಾದ ಇವರಿಗೆ ಸರ್ಕಾರ ನೆಲೆನಿಲ್ಲಲು ನಿವೇಶನಗಳನ್ನು ಕೊಟ್ಟು ಅವರದೇ ಒಂದು ಕೇರಿಯಾಗುವಂತೆ ಮಾಡಿದೆ. ನನ್ನ ಅನುಭವಕ್ಕೆ ಬಂದಂತೆ ಈ ಸಮುದಾಯದಲ್ಲಿಯೂ ೭ ಬೆಡಗುಗಳಿವೆ. ಇವರಲ್ಲಿ ಪಿಂಪ್ಲಾಜ, ಕುರೋಬಿಯಾ, ಇಕೋಡಿಯಾ, ಸಾವುಂಡ್ಯ, ಹರ್ಕತಿಯಾ, ಮತ್ತು ಕೊಡಿಯಾರ ಎಂಬ ಆರು ಬೆಡಗುಗಳಿವೆ. ಈ ಆರು ಬೆಡಗುಗಳಿಗೆ ಕುಂದ ಎಂಬ ಹೆಸರನ್ನು ಸೇರಿಸಿ ೭ ಬೆಡಗು ಎಂದು ಹೇಳುತ್ತಾರೆ. ಪ್ರತಿಯೊಂದು ಬೆಡಗಿಗೂ ಒಂದೊಂದು ಕುಲದೇವರು ಗಳಿವೆ. ಇವರ ಭಾಷೆ ವಾಗರಿ, ಅವರು ವಾಗರಿಯೇ ಎನ್ನುತ್ತಾರೆ. ಈ ಭಾಷೆ ಹಲವಾರು ಭಾಷೆಗಳ ಪದ ಮತ್ತು ಶೈಲಿಯನ್ನು ಒಳಗೊಂಡು ಬಳಕೆಯಾಗುತ್ತದೆ. ಕನ್ನಡವನ್ನು ಅವರ ಬಹುತೇಕ ಜನರು ಸ್ಪಷ್ಟವಾಗಿ ಮಾತಾನಾಡುತ್ತಾರೆ. ಇವರ ಭಾಷೆ ಮಿಶ್ರ ಭಾಷೆ ಇವರ ಕನ್ನಡ ಉಚ್ಛಾರಣೆಯೂ ಕೂಡ ವಾಗರಿ ಭಾಷೆಯನ್ನು ಅವಲಂಬಿಸಿದೆ. ಇವರದೇ ಆದ ಆಚಾರ-ವಿಚಾರ ಸಂಪ್ರದಾಯಗಳಿವೆ.

ಈ ಸಮುದಾಯದಲ್ಲಿ ಜಾತಿ ಬಹಿಷ್ಕಾರ ಪದ್ಧತಿಯು ಇಂದಿಗೂ ಜೀವಂತವಾಗಿದೆ. ಹಾಗೆಯೇ ಇಲ್ಲಿನ ನ್ಯಾಯ ಪದ್ಧತಿಯ ಕ್ರಮ ತುಂಬಾ ಕಠಿಣವಾಗಿದೆ. ನ್ಯಾಯ ತೀರ್ಮಾನ ಮಾಡುವ ಮುಖಂಡನನ್ನು ‘ಕಟ್ಟಿಮನಿ’ ಎಂದು ಕರೆಯುತ್ತಾರೆ. ಇವರ ಹೆಸರೇ ಸೂಚಿಸಿದಂತೆ ವೃತ್ತಿಯಿಂದ ಇವರು ಬೇಟೆಯಾಡುವರು. ಹಕ್ಕಿಗಳನ್ನು ಹಿಡಿಯುವುದರಿಂದಲೇ ಅವರಿಗೆ ಹಕ್ಕಿ ಪಿಕ್ಕಿ ಎಂಬ ವೃತ್ತಿನಾಮವೇ ಸಮುದಾಯದ ಹೆಸರು ಪಡೆದುಕೊಂಡಿದೆ. ಹಕ್ಕಿಗಳನ್ನು ಹಿಡಿಯುವುದರಲ್ಲಿ ಇವರನ್ನು ಮೀರಿಸುವವರು ಯಾರು ಇಲ್ಲ. ಕಾರಣ ಇವರು ಹಕ್ಕಿಗಳಿಗಿಂತ ಬುದ್ದಿವಂತರು. ಇವರಿಗೆ ಹಕ್ಕಿಗಳನ್ನು ಹೇಗೆ ಬೇಟೆಯಾಡಬೇಕು ಮತ್ತು ಯಾವ ಕಾಲದಲ್ಲಿ ಯಾವ ಯಾವ ಪಕ್ಷಿಗಳು ಹೇಗೆ ಬದುಕುತ್ತವೆ; ಅವುಗಳ ಜೀವನ ಪದ್ಧತಿ ಹೇಗೆ ಎಂಬ ಪಕ್ಷಿಶಾಸ್ತ್ರದ ಅರಿವು ಅವರಿಗಿರುತ್ತದೆ. ಪ್ರಾಣಿಗಳನ್ನು ಕೂಡ ಬೇಟೆಯಾಡುವ ಪದ್ಧತಿಯೂ ಇವರಿಗೆ ಗೊತ್ತು. ಇನ್ನು ಹೆಂಗಸರು ಬಿಕ್ಷೆ ಬೇಡುವುದರ ಜೊತೆಗೆ ಹಲವಾರು ಸಾಮಾನು ಗಳನ್ನು ಮಾರಾಟ ಮಾಡುತ್ತಾರೆ. ಉದಾ. ಸೂಜಿ, ಡಬ್ಬಣ, ಪಿನ್ನ, ಕಸ್ತೂರಿ, ಕರಿಮಣಿ, ಹಾಲುಮಣಿ ಮುಂತಾದ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಾರೆ.

ಇದುವರೆಗೂ ಸಂಕ್ಷಿಪ್ತವಾಗಿ ಈ ಸಮುದಾಯದ ಆಚಾರ-ವಿಚಾರ ಸಂಪ್ರದಾಯ ಪದ್ಧತಿ ಗಳನ್ನು ಅವಲೋಕಿಸಿದೆವು. ಈ ಸಮುದಾಯ ಬಹುವಾಗಿ ಆಧುನೀಕರಣಕ್ಕೆ ಒಳಗಾಗಿದೆ. ಅವರ ಅಲೆಮಾರಿ ಜೀವನವೇ ಅವರ ನಿರಂತರ ಬದಲಾವಣೆಗೆ ಕಾರಣ. ಅವರು ಹಿಂದಿನಂತೆ ಇಂದು ಸುಲಭವಾಗಿ ತಿಂದು (ಬಿಕ್ಷೆ ಬೇಡಿ) ಬದುಕುವಂತಿಲ್ಲ. ಭಿಕ್ಷೆ ಬೇಡಲು ಹೋದರೆ, ನಿಮಗೇನು ಧಾಡಿ ಕಸ ಮುಸುರಿ ಮಾಡಿ ಬದುಕಿ ಎನ್ನುತ್ತಾರೆ ಎಂಬುದು ಆ ಹೆಂಗಸರ ಜೀವನಾನುಭವ. ಒಂದಂತು ಸತ್ಯ ಶತಮಾನಗಳಿಂದ ಮೇಲ್ಜಾತಿಯವರ ತುಳಿಕ್ಕೊಳಗಾಗಿರುವ ಇವರು ಮಾನಸಿಕವಾಗಿ ಹೊರಬರಲು ಆಗಿಲ್ಲ.

ಆಧುನೀಕತೆಗೆ ಒಳಪಡಿಸಿರುವ ತಳಸಮುದಾಯ ಅರ್ಥಾತ್ ಬುಡಕಟ್ಟುಗಳ ಅಭಿವೃದ್ದಿಗೆ  ಸರಕಾರದಿಂದ ಕೋಟ್ಯಾಂತರ ರೂಪಾಯಿಗಳ ವ್ಯಯವಾದರೂ ಅದು ಸರಿಯಾದ ಮಟ್ಟದಲ್ಲಿ ಉಪಯೋಗಕ್ಕೆ ಬಾರದೆ ಸೋರಿಕೆಯಾಗಿದೆ. ಎಲ್ಲಾ ಬುಡಕಟ್ಟಿನ ಜನ ತಮ್ಮ ಮೂಲ ವೃತ್ತಿಗಳಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಆಧುನೀಕತೆಯ ಪ್ರಭಾವದಿಂದ ಅವರ ವೃತ್ತಿಗಳು ನೆಲಕಚ್ಚುತ್ತಿವೆ.

ನಾನೀಗಾಗಲೇ ಹೇಳಿದಂತೆೆ ಹಕ್ಕಿ ಪಿಕ್ಕಿಯವರು ಆಧುನೀಕತೆಗೆ ಹೊಂದಿಕೊಳ್ಳ ತೊಡಗಿ ದ್ದಾರೆ. ಈಗೀಗ ತಮ್ಮ ಅಸ್ತಿತ್ವದ ರಕ್ಷಣೆಯ ಸಂಕ್ರಾಮಣಾವಸ್ಥೆಯ ಸ್ಥಿತಿಯಲ್ಲಿದ್ದಾರೆ. ಇಂತಹ ಆಧುನೀಕರಣ ವ್ಯಕ್ತಿ ಮತ್ತು ಒಟ್ಟು ಪರಿಸರದ ನಡುವಿನ ಸಂಬಂಧ ತುಂಬಾ ಸೀಮಿತವಾಗಿದೆ. ಆಧುನೀಕರಣ ಅಮೂರ್ತ ಸ್ವರೂಪದ ವ್ಯಕ್ತಿಯನ್ನು ರೂಪಿಸಿದೆ. ಅಮೂರ್ತ ಸ್ವರೂಪದ ವ್ಯಕ್ತಿ ಇತರರೊಂದಿಗೆ ಕೇವಲ ಒಪ್ಪಂದ ಆಧಾರಿತ ಸಂಬಂಧ ಇಟ್ಟುಕೊಳ್ಳುತ್ತಾನೆ. ಇದರಿಂದ ಸಮುದಾಯದ ಬದುಕೇ ನಾಶವಾಗುತ್ತಿದೆ.

ಆಧುನೀಕತೆಯ ಸೋಂಕು ಹಕ್ಕಿ ಪಿಕ್ಕಿ ಸಮುದಾಯದ ಮೇಲೆ ಆಗಿದೆ. ಆದರೆ ಅದರ ಪರಿಣಾಮ ಮಾತ್ರ ಅತ್ಯಲ್ಪ. ಏಕೆಂದರೆ ಗುಡ್ಡಗಾಡಿನಲ್ಲಿ ವಾಸವಾಗಿದ್ದ ಈ ಜನರನ್ನು ಸರ್ಕಾರ ನಾಡಿಗೆ ತಂದಿತು. ಅಭಿವೃದ್ದಿ ಹೆಸರಿನಲ್ಲಿ ಅರಣ್ಯ ನಾಶ ಅಂದರೆ ರೈಲ್ವೆ ಹಳಿ ಹಾಕುವುದು ಡಿಫೆನ್ಸ್ ಉದ್ದೇಶಕ್ಕಾಗಿ, ಬೃಹತ್ ಆಣೆಕಟ್ಟುಕಟ್ಟಲು ಅರಣ್ಯ ನಾಶವಾಯಿತು. ಸರ್ಕಾರ ಇದರೊಂದಿಗೆ ಪ್ರಾಣಿ ಪಕ್ಷಿಗಳ ಬೇಟೆಯಾಡುವವರಿಗೆ ಕಾನೂನು ರೀತಿಯ ನಿರ್ಬಂಧ ವೇರಿತು.

ನಗರ ಪ್ರದೇಶಗಳಿಗೆ ಬಂದ ಇವರಿಗೆ ಸಂಕಷ್ಟ ಸ್ಥಿತಿ ಎದುರಾಯಿತು. ಆಧುನೀಕತೆಗೆ ಒಳಗಾಗುವುದೆಂದರೆ ತಮ್ಮ ಸಂಸ್ಕೃತಿಯ ಪರದೆಯಿಂದ ದೂರ ಸರಿದಂತೆಯೇ! ಅಲ್ಲವೆ? ನಾನೀಗಾಗಲೇ ಚರ್ಚಿಸಿದಂತೆ ಹಕ್ಕಿ ಪಿಕ್ಕಿ ಸಮುದಾಯ ನಗರದಲ್ಲೇನು ಬಂದು ನೆಲೆಸಿದೆ. ಅವರಿಗೆ ಸರ್ಕಾರದ ಅಲ್ಪಸ್ವಲ್ಪ ಯೋಜನೆಗಳು ಸಿಗುತ್ತಿವೆ. ಆದರೆ ಸರ್ಕಾರ ಅವರ ಪಾರಂಪರಿಕ ಜ್ಞಾನಕ್ಕೆ ಒತ್ತು ಕೊಟ್ಟಿದೆಯೇ? ಎಂಬ ಪ್ರಶ್ನೆ ಏಳುತ್ತದೆ. ಅಂದರೆ ಹಕ್ಕಿ ಪಿಕ್ಕಿಯವರು ಮೂಲತಃ ಪ್ರಾಣಿಪಕ್ಷಿಗಳನ್ನು ಬೇಟೆಯಾಡುವವರು. ಅವರಿಗೆ ಪ್ರಾಣಿಗಳ ಶಿಕ್ಷಣದ ಅಧ್ಯಯನದ ಬಗ್ಗೆ ಅರಿವಿದ್ದರೂ ಕೂಡ ಅವರನ್ನು ಮೂಲೆಗುಂಪು ಮಾಡಿ ಪಕ್ಷಿ ವೀಕ್ಷಣೆ ಯಂತಹ ಜ್ಞಾನ ಶಾಖೆಗಳನ್ನು ತೆರೆದು So called ಸಲೀಂ ಅಲಿ, ಪೂರ್ಣಚಂದ್ರ ತೇಜಸ್ವಿ ಯವರು ಮಾಡುವ ಕೆಲಸವನ್ನು ಗುರುತಿಸಿ ಪುರಸ್ಕರಿತು ಎಂಬುದು ನನ್ನ ಚರ್ಚೆ ಯಾಕೆ? ಸರ್ಕಾರ ಇವರಲ್ಲಿರುವ ಪಾರಂಪರಿಕ ಜ್ಞಾನವನ್ನು ಗುರುತಿಸಿ ಅದಕ್ಕೆ ತರಬೇತಿಯನ್ನು ಕೊಟ್ಟು ಅವರ ಜ್ಞಾನದ ಉಳಿಕೆಗಾಗಿ ಪ್ರಯತ್ನಿಸಬಾರದು, ಅರಣ್ಯದಲ್ಲಿರುವ ಪ್ರಾಣಿ ಪಕ್ಷಿ ಜೀವಸಂಕುಲವನ್ನು ಸಂರಕ್ಷಿಸಬಾರದು. ಇದನ್ನೆಲ್ಲ ಗಮನಿಸಿದರೆ ಕೆಲವು ಅಂಶಗಳು ಗಮನಕ್ಕೆ ಬರುತ್ತವೆ. ಈ ದೇಶದಲ್ಲಿ ಬುದ್ದಿಶಕ್ತಿಗೆ ಕೊಟ್ಟಷ್ಟು ಪ್ರಾಮುಖ್ಯತೆ, ದೈಹಿಕ ಶಕ್ತಿಗೆ ಪಾರಂಪರಿಕ ಜ್ಞಾನಕ್ಕೆ ಕೊಡುವುದಿಲ್ಲ. ಅವರ ಈ ವೃತ್ತಿಯನ್ನು ಕೀಳಾಗಿ ಕಾಣುವ ಮನೋಭಾವ ಮೊದಲಿ ನಿಂದಲೂ ಬೆಳೆದು ಬಂದಿದೆ. ಅದನ್ನು ಗೌರವಿಸುವ ಭಾವನೆ ಬೆಳೆಸುವುದರ ಜೊತೆಗೆ ಅವರ ಕರಕುಶಲ ಜ್ಞಾನವನ್ನು ಗೌರವಿಸಿ, ಆರ್ಥಿಕ ಬೆಂಬಲ ನೀಡುವ ಮೂಲಕ ಆ  ಸಮುದಾಯಕ್ಕೆ ಆರ್ಥಿಕ ಸ್ವಾಯುತ್ತತೆ ಸಿಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಇವರ ಪಾರಂಪರಿಕ ಜ್ಞಾನವನ್ನು ಸರ್ಕಾರವಾಗಲಿ, ಆಧುನಿಕ ಸಮಾಜವಾಗಲಿ ಗುರುತಿಸಲಿಲ್ಲ ಬಳಸಿ ಕೊಳ್ಳಲಿಲ್ಲ. ಅಂದರೆ ನಾನಿಲ್ಲಿ ಪ್ರಾಣಿಪಕ್ಷಿಗಳನ್ನು ಬೇಟೆಯಾಡಬೇಕೆಂದು ಹೇಳುತ್ತಿಲ್ಲ. ಅವರಲ್ಲಿರುವ ಈ ಜ್ಞಾನವನ್ನು ಪುಷ್ಠೀಕರಿಸುತ್ತಾ ಬೇಟೆಯಾಡುವುದು ತಪ್ಪೆಂಬ ಭಾವನೆಯ ತರಬೇತಿ ನೀಡಿ, ಅವರ ಪಾರಂಪರಿಕ ಜ್ಞಾನವನ್ನು ಆಧುನೀಕತೆಗೆ ಬಳಸಿದರೆ ಹೆಚ್ಚಿನ ಉಪಯೋಗ ಆಧುನೀಕತೆಗೆ ಆಗುತ್ತದೆಂಬುದು ನನ್ನ ಆಶಯ.

ನಾನೀಗಾಗಲೇ ಚರ್ಚಿಸಿದಂತೆ ನನ್ನೂರಿನ ಹಕ್ಕಿ ಪಿಕ್ಕಿಯವರು ಸಣ್ಣಪುಟ್ಟ ವ್ಯಾಪಾರದಲ್ಲಿ ತೊಡಗಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ಪಡೆದಿರುವ ಇವರು ಆಧುನೀಕತೆಯ ಸಂಕೇತ ಗಳೆನ್ನುವ ವಸ್ತುಗಳನ್ನು ಉದಾ. ಟಿ.ವಿ., ಟೇಪ್‌ರೆಕಾರ್ಡ್, ಮೊಬೈಲ್ ಇತ್ಯಾದಿ ತಮ್ಮಲ್ಲಿಟ್ಟು ಕೊಂಡಿದ್ದಾರೆ ಎಂದು ಹೇಳಲು ಸಂತೋಷವೆನಿಸುತ್ತದೆ. ಅವರ ಆಧುನಿಕ ಉಡುಗೆ ತೊಡುಗೆ ಗ್ರಾಮೀಣ ಪ್ರದೇಶದ ಯಾವುದೇ ಜನ ಬಳಸದಷ್ಟು ಮುಂದುವರಿದ ಜೀವನ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಬಹಳಷ್ಟು ಜನ ಇತ್ತೀಚೆಗೆ ತಮ್ಮ ಮಕ್ಕಳನ್ನು ವ್ಯಾಪಾರಕ್ಕೆ ಕರೆದೊಯ್ಯುವ ಬದಲು ಓದಲು ಶಾಲೆಗೆ ಕಳುಹಿಸುತ್ತಿದ್ದಾರೆ. ಇದೊಂದು ಅವರ ಬದುಕಿನ ದೊಡ್ಡ ಬದಲಾವಣೆ. ಎಲ್ಲಿಯೂ ಒಂದು ಕಡೆ ನೆಲೆ ನಿಲ್ಲದ ಅಲೆಮಾರಿಗಳಾಗಿದ್ದ ಇವರು ಒಂದು ಕಡೆ ಸ್ಥಳವೂರಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುವುದು ಎಂದರೆ ಅದೊಂದು ಅದಮ್ಯ ಬದಲಾವಣೆ.

ಒಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳ ಮೂಲಕ ಕಾಡಿನಲ್ಲಿರುವವರನ್ನು ನಾಡಿಗೆ ತಂದು ಬದಲಾವಣೆ ತರಲಿಚ್ಛಿಸುತ್ತದೆ. ಆಧುನಿಕತೆ ತಳಸಮುದಾಯಗಳ ಪಾರಂಪರಿಕ ಜ್ಞಾನವನ್ನು ಮುಂದುವರಿಸದೆ ನಾಶಪಡಿಸುತ್ತಿದೆ. ಪರ್ಯಾಯವಾಗಿ ಪ್ರತ್ಯೇಕವಾದ ಜ್ಞಾನ ಶಾಖೆಯೊಂದನ್ನು ತೆರೆಯುತ್ತದೆ ವಿನಃ ತಳಸಮುದಾಯದ ಜ್ಞಾನವನ್ನು ನಂಬುವುದಿಲ್ಲ ವೆಂಬುದೇ ನನ್ನ ತುಡಿತ.

* * *

ಹಿಂದೂ ಸಂಸ್ಕೃತಿಗೆ ಗಂಡಾಂತರ ಒದಗಿದ ಕಾಲದಲ್ಲಿ ಗಂಡುಗಲಿಗಳಾಗಿ ಹೋರಾಟ ನಡೆಸಿದ ಪ್ರಥಮ ಸ್ವಾತಂತ್ರ್ಯ ವೀರರೆಂದರೆ ವಾಲ್ಮೀಕಿ-ಜನಾಂಗದವರು.
ಹೆಚ್.ವಿ. ವೀರನಾಯಕ

lang{ ���ذ� @� ಚಂಡಿ, ಬುಯಾರ, ಮುತ್ತಾಗಿ ಅರಕೇರಿ, ಉತ್ನಾಳ, ಮುಂತಾದ ಕಡೆ ಜಾತ್ರೆ ಉತ್ಸವಗಳು ನಡೆಯುತ್ತಲಿವೆ ಎಂಬುದು ಸಹ ಗಮನಿಸಬೇಕಾದ ಸಂಗತಿಯಾಗಿದೆ.

 

ವಾಲ್ಮೀಕಿ ಇವರ ಮೂಲಪುರುಷನಾದರೂ ಈ ಜನರನ್ನು ಅತಿ ಹೆಚ್ಚಾಗಿ ನಾಯಕ ಸಮುದಾಯ, ಬೇಡ ಸಮುದಾಯ ಎಂತಲೇ ಕರೆಯಲಾಗುತ್ತದೆ. ಶಾಸನಗಳಲ್ಲಿಯು ಸಹ ಬೇಡನಾಯಕರೆಂದೇ ಕರೆದಿದ್ದನ್ನು ಎಂ.ವಿ ಚಿತ್ರಲಿಂಗಯ್ಯನವರು ಕಂಡುಕೊಂಡಿದ್ದಾರೆ. ನಾಯಕ ಎಂಬ ಉಪನಾಮವು ಕಲ್ಯಾಣ ಚಾಲುಕ್ಯರ ಕಾಲದ ಕ್ರಿ.ಶ. ೧೧-೧೨ನೆಯ ಶತಮಾನದ ಶಿಲಾಶಾಸನಗಳಲ್ಲಿ ಕಂಡುಬರುತ್ತದೆ. ಆಗ ಇದು ಜಾತಿಸೂಚಕ ಪದವಾಗಿರಲಿಲ್ಲ. ಬೇಡರಿಗೆ ‘ನಾಯಕ’ ಎಂಬ ಗೌರವಸೂಚಕ ಪದ ಕಲ್ಯಾಣ ಚಾಲುಕ್ಯರ ಕಾಲದಿಂದ ಬಂದಿರ ಬೇಕು ಎಂಬುದು ಇಲ್ಲಿ ಅರಿಕೆಯಾಗುತ್ತದೆ. ಈ ಬೇಡ ಸಮುದಾಯದ ನಾಯಕರು ೧೦-೨೦ ಕುಟುಂಬಗಳನ್ನು ಒಂದೇ ಸ್ಥಳದಲ್ಲಿ ಸಲುಹಿ ತಮ್ಮ ಬೇಡ ಘಟ್ಟಿಗಳನ್ನು ಕಟ್ಟಿಕೊಳ್ಳು ತ್ತಿದ್ದರು. ಈ ಗುಂಪುಗಳು ಅಲೆಮಾರಿಗಳಾಗಿ ಹೊರಟಾಗ ತಮಗೆ ತೊಂದರೆ ಮಾಡಿದವರನ್ನು ಎದುರಾದವರನ್ನು ಕೊಂದು ಅಲ್ಲಿಯ ದನಕರುಗಳನ್ನು ಅಟ್ಟಿಸಿಕೊಂಡು ತೆರಳುತ್ತಿದ್ದರು. ಹೀಗೆ ಸ್ಥಳಬಿಟ್ಟು ಸ್ಥಳಕ್ಕೆ ತೆರಳುವಾಗ ಕೆಲವು ದೈವ, ದೇವರುಗಳನ್ನು ಅವರು ತಮ್ಮ ಸಂಗಡ ಒಯ್ಯುತ್ತಿದ್ದರು. ಈ ಸಂದರ್ಭದಲ್ಲಿ ಕೆಲವು ಆಚರಣೆಗಳು ನಡೆಯುತ್ತಲಿದ್ದವು ಎಂದು ಹಿರಿಯರು ಹೇಳುತ್ತಾರೆ. ಹೀಗೆ ಸಂಚಾರಿಯಲ್ಲಿರುತ್ತಿದ್ದ ಈ ಸಮುದಾಯ ಬೇರೆ ಸಮುದಾಯಗಳೊಡನೆ ಬೆರೆಯದೆ ಬಹಳಕಾಲ ಸ್ವತಂತ್ರವಾಗಿದ್ದುದು ತಮಗೆ ವಿಶಿಷ್ಟವಾದ ಸಂಸ್ಕೃತಿಯನ್ನು ಹಿಂದೂ ಧರ್ಮದ ಪ್ರಭಾವ ಯಾವ ಪ್ರಮಾಣದಲ್ಲಿ ಆಗಿದೆ ಎಂಬ ಅಂಶ ಜಾತಿ ಹಾಗೂ ಬುಡಕಟ್ಟು ಈ ಎರಡಕ್ಕೂ ಇರುವ ವ್ಯತ್ಯಾಸವನ್ನು ಸೂಚಿಸುವ ಮಾನದಂಡ ವಾಗಿದೆ. ವಾಲ್ಮೀಕಿ ಜನ ಹುಟ್ಟು, ಮದುವೆ, ಮತ್ತು ಸಾವು ಈ ಮೂರು ಸಂದರ್ಭಗಳಲ್ಲಿ ಬ್ರಾಹ್ಮಣ ಪೌರೋಹಿತ್ಯಕ್ಕೆ ಅವಕಾಶ ಕೊಟ್ಟಿಲ್ಲ. ಹೀಗಿದ್ದೂ ಹಿಂದುಗಳೊಡನೆ ಜಾತ್ರೆಯಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ಅವರು ಬಾಗವಹಿಸುತ್ತಾರೆ. ಈ ಕಾರಣದಿಂದಲೆ ಮಾನವ ವಿಜ್ಞಾನಗಳು ಇವರನ್ನು ಬುಡಕಟ್ಟು ಸಮುದಾಯ ಎಂದು ಕರೆದರೆ ಜಾನಪದ ವಿಜ್ಞಾನದಲ್ಲಿ “ಜನಪದವರ್ಗ” ಎಂದು ಪರಿಗಣಿಸಲಾಗುತ್ತಿದೆ. ಈ ಜನಪದವರ್ಗ ಪಶುಪಾಲನೆಯ ಮೇಲೆ ಬಂದಿತಾದರೂ ಇದರ ಜತೆಗೆ ಬೇಟೆ ಮತ್ತು ಯೋಧವೃತ್ತಿಯನ್ನು ಕೈಗೊಂಡು ಬಂದದ್ದು ಐತಿಹಾಸಿಕ ಸಂಗತಿ. ದೃಢಕಾಯರಾದ ಇವರು ಯಾವ ಅಪಾಯಕ್ಕೂ ಅಂಜುತ್ತಿ ರಲಿಲ್ಲ. ಪೂರ್ವಾಪರ ಯೋಚಿಸದೆ ಶತೃಗಳ ಮೇಲೆ ಬೀಳುವವರೂ ಅಗಿರುತ್ತಾರೆ. ಇತರರ ದನಗಳನ್ನು ತರುಬಿಕೊಂಡು ಹೋಗಿ ತಮ್ಮ ವಶದಲ್ಲಿಸಿರಿಕೊಂಡ ಪ್ರಸಂಗಗಳು ಇವರಲ್ಲಿವೆ.

* * *

ಹಲಗಲಿ ಬೇಡರು

೪ನೇ ನುಡಿ

ಹಲಗಲಿ ಅಂಬುವ ಹಳ್ಳಿ ಮುಧೋಳ ರಾಜ್ಯದಾಗ ಇತ್ತು
ಪೂಜೆರಿಹಣಮಾ ಬಾಲ ಜಡಗ ರಾಮ ಮಾಡ್ಯಾರ ಮಸಲತ್ತು

ಕೈನ ಹತಾರ ಕೊಡಬಾರದೊ ನಾವು ನಾಲ್ಕು ಮಂದಿ ಜತ್ತು
ಹತಾರ ಹೋದ್‌ಇಂದ ಬಾರದ ನಮ್ಮ ಜೀವ ಸತ್ತ್‌ಓಗುದು ಗೊತ್ತು

ಸುತ್ತಿನ ಹಳ್ಳಿ ಮತ್ತು ಧೊರಿಗಳಿಗೆ ತಿಳಶೆರ ಹೀಂಗ್‌ಅಂತು
ಮಾಡರಿ ಜಗಳಾ ಕೂಡ್‌ಇರತೇವು ಕುಮುಕಿ ಯಾವತ್ತು

ವೊಳಗಿಂದ್‌ಒಳಗ ವಚನ ಕೊಟ್ಟರೊ ಬ್ಯಾಡರ್ ಎಲ್ಲ ಕಲಿತು
ಕಾರಕೂನನ ಕಪಾಳಕ ಬಡದರ ಶಿಪಾಯಿ ನೆಲಕ ಬಿತ್ತು