ಜಾಗತೀಕರಣ ಎನ್ನುವುದು ಮನುಷ್ಯನ ಸಾಮಾಜಿಕ ಜೀವನದ ವಿಸ್ತೃತ ಚಾರಿತ್ರಿಕ ಪ್ರಕ್ರಿಯೆಯಲ್ಲಿ ಹೆಣೆದುಕೊಂಡಿರುವ ಒಂದು ಸಂಕೀರ್ಣ ಪ್ರಕ್ರಿಯೆ. ಜಾಗತೀಕರಣವೆಂದರೆ ಮನುಷ್ಯ ಸಮಾಜದಲ್ಲಿ ಉತ್ಪಾದಿತವಾಗುವ ಜ್ಞಾನ ಹಾಗೂ ವಿಚಾರಗಳು ಅಡೆತಡೆ ಇಲ್ಲದೆ ಪ್ರಪಂಚದಾದ್ಯಂತ ಪ್ರಸಾರವಾಗಿ ಆಯಾ ದೇಶಗಳ ಜನರು ಅವುಗಳನ್ನು ಪಳಗಿಸಿ, ಅರಗಿಸಿ ಕೊಂಡು ತಮ್ಮ ಬದುಕಿಗೆ ಒಳಿತಾಗುವ ರೀತಿಯಲ್ಲಿ ದುಡಿಸಿಕೊಳ್ಳುವ ಪ್ರಕ್ರಿಯೆ. ಯಾವ ಜ್ಞಾನವನ್ನು ಸ್ವೀಕರಿಸಿ, ಆರೋಗ್ಯಕರವಾಗಿ ಅದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳ ಬೇಕು. ಯಾವುದನ್ನು ತಮಗೆ ಒಗ್ಗುವಂತಹುದಲ್ಲ ಎಂದು ನಿರಾಕರಿಸಬೇಕು ಎಂದು ನಿರ್ಧರಿ ಸುವ ಪ್ರಜ್ಞಾಶಕ್ತಿ ಸಾಮಾನ್ಯ ಜನರಿಗೆ ಇದೆ. ಇಂತಹ ಆಯ್ಕೆಯ ಸ್ವಾತಂತ್ರ್ಯವನ್ನು ಜನರಿಂದ ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇರಕೂಡದು. ಆದರೆ ಇಂತಹ ಪ್ರಕ್ರಿಯೆಯಿಂದ ತಮ್ಮ ಯಜಮಾನಿಕೆಗೆ ಸಂಚಕಾರ ಬರುತ್ತದೆ ಎಂದು ಅಧಿಕಾರಸ್ಥ ಜನ ಜಾಗತೀಕರಣವನ್ನು ಏನಾದರೂ ಮಾಡಿ ತಡೆಯುವ ಪ್ರಯತ್ನ ಮಾಡುತ್ತಾರೆ. ಇದುವರೆಗೂ ರಾಷ್ಟ್ರಗಳ ಗಡಿಗಳ ಒಳಗೆ ನಡೆಯುವ ಆರ್ಥಿಕ ಉತ್ಪಾದನೆ ಹಾಗೂ ವಿತರಣೆಗಳನ್ನು ಆಯಾ ರಾಷ್ಟ್ರಪ್ರಭುತ್ವಗಳು ತಮ್ಮ ಬಿಗಿ ಹಿಡಿತದಲ್ಲಿ ಇಟ್ಟುಕೊಂಡಿದ್ದವು. ರಾಷ್ಟ್ರಪ್ರಭುತ್ವದ ಮೇಲೆ ನಿಯಂತ್ರಣ ಹೊಂದಿರುವ ಅಧಿಕಾರಸ್ಥ ವರ್ಗಗಳು ತಮಗೆ ಮಾತ್ರ ಲಾಭದಾಯಕವಾಗುವ ರೀತಿಯಲ್ಲಿ ಈ ವ್ಯಸ್ಥೆಯನ್ನು ಪೋಷಿಸಿದ್ದರಿಂದ ಒಂದು ಕಡೆ ಬಹುಪಾಲು ಜನ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಅದುಮಿಟ್ಟುಕೊಂಡು ಸದರಿ ಅಧಿಕಾರಶಾಹಿ ವ್ಯವಸ್ಥೆಯ ಕರಣೆಯಲ್ಲಿ ಬದುಕು ಸಾಗಿಸುವಂತಾಯಿತು ಮತ್ತೊಂದು ಕಡೆ ಜನರ ಉತ್ಪಾದನಾ ಚೈತನ್ಯ ಉಪಯೋಗಕ್ಕೆ ಬಾರದೆ ಜಡಗೊಂಡು, ಇಡೀ ಉತ್ಪಾದನಾ ವ್ಯವಸ್ಥೆಯೇ, ಸಂಪನ್ಮೂಲಗಳನ್ನು ಅನಾವಶ್ಯಕ ವಾಗಿ ಪೋಲು ಮಾಡುವ ಹೊಸದಾದ ಸಮರ್ಥ ಉತ್ಪಾದನಾ ತಂತ್ರಗಳನ್ನು ಕಂಡುಕೊಂಡು ಬೆಳೆಸಲಾಗದೆ, ತನ್ನ ರಕ್ತವನ್ನು ತಾನೇ ಹೀರಿಕೊಳ್ಳುವ ಅಪಾಯಕಾರಿ ವ್ಯವಸ್ಥೆಯಾಗಿ ರೂಪಾಂತರ ಹೊಂದತೊಡಗಿತು. ಇಂತಹ ವ್ಯವಸ್ಥೆಯಲ್ಲಿ ಅನಕ್ಷರತೆ, ಒಡತನ, ನಿರುದ್ಯೋಗಗಳು ದೈತ್ಯಾಕಾರದಲ್ಲಿ ಬೆಳೆದು ಬಿಡುತ್ತವೆ. ಭಾರತವು ಇಂತಹ ದರಿದ್ರ ದೇಶಗಳಲ್ಲಿ ಒಂದಾಗಿದ್ದು ಈ ಸ್ಥಿತಿಯಿಂದ ಹೊರಬರಬೇಕೆಂದರೆ ತುರ್ತಾಗಿ ಅಧಿಕಾರಶಾಹಿ ರಾಷ್ಟ್ರ ಪ್ರಭುತ್ವದ ಹಿಡಿತದಿಂದ ಆರ್ಥಿಕ ಉತ್ಪಾದನೆ ಹಾಗೂ ವಿತರಣೆಯನ್ನು ಮುಕ್ತಗೊಳಿಸಿ ದೇಶದ ಜನ ಅನಿರ್ಬಂಧಿತರಾಗಿ ಚೈತನ ಶಾಲಿಯಾದ ಉತ್ಪಾದನಾ ವ್ಯವಸ್ಥೆಯನ್ನು ರೂಪಿಸಿ ಕೊಳ್ಳುವುದಕ್ಕೆ ಪ್ರೇರೇಪಿಸುವ ಕ್ರಮಗಳನ್ನು ಜಾರಿ ಮಾಡಬೇಕು. ನಮ್ಮ ದೇಶಕ್ಕೆ ಸದ್ಯಕ್ಕಂತೂ ಸ್ಪಷ್ಟ ಮಾರ್ಗಗಳಾವುವು ಇರದೇ ಇರುವುದರಿಂದ ಒಂದಿಷ್ಟು ಎಚ್ಚರಿಕೆಯಿಂದ ಇವನ್ನು ಅನುಸರಿಸದೇ ಬೇರೆ ಮಾರ್ಗವೇ ಇಲ್ಲ.

ಜಾಗತೀಕರಣ ಎಂದರೆ ಇದುವರೆಗೆ ಪ್ರಪಂಚದ ಇತರ ದೇಶಗಳ ಜೊತೆ ಯಾವ ರೀತಿಯ ವ್ಯಾಪಾರ ವಹಿವಾಟು ಸಂಬಂಧ ಇಟ್ಟುಕೊಳ್ಳುವ ರಾಷ್ಟ್ರೀಯ ಪ್ರಭುತ್ವಗಳು ಈಗ ಅಂತಹ ಸಂಬಂಧವನ್ನು ಸ್ಥಾಪಿಸಿಕೊಳ್ಳುವುದು ಎಂದೇನೂ ಅಲ್ಲ. ಶ್ರೀಮಂತ ಕೈಗಾರಿಕಾ ರಾಷ್ಟ್ರಗಳು ಮತ್ತು ವರ್ಲ್ಡ್ ಬ್ಯಾಂಕ್, ಐ.ಎನ್.ಐ. ನಂತಹ ಸಂಸ್ಥೆಗಳು ಬೋಧಿಸುತ್ತಿರುವ ಅರ್ಥನೀತಿಗಳನ್ನು ರಾಷ್ಟ್ರೀಯ ಪ್ರಭುತ್ವಗಳು ಅಳವಡಿಸಿಕೊಳ್ಳಬೇಕು ಎನ್ನುವುದಾಗಿದೆ.

ಕೆನಡಾದ ಖ್ಯಾತ ಅರ್ಥಶಾಸ್ತ್ರಜ್ಞ ಜೆರೋಂ ಪೊಲಿರ್‌ನ ವಿವರ The poor Complain, they always do But that is idle Chatter our system brings records to all atleast to all teat matters ಹೇಗೆ ಹೇಳಿದ್ದಾರೆ. ಇಲ್ಲೇ ಇನ್ನೊಂದು ಮಾತು. ಆಧುನೀಕತೆಗೂ ಜಾಗತೀಕರಣಕ್ಕೂ ಇರುವ ವ್ಯತ್ಯಾಸ ಆಧುನೀಕತೆಯ ವಿನ್ಯಾಸ ಮತ್ತು ಹರಿವು ವಿಸ್ತಾರವಾದುದು. ದಮನಕಾರಿ ಇರುವಂಥದ್ದು ಎಲ್ಲಕ್ಕಿಂತ ಹೆಚ್ಚಾಗಿ ವಿಮೋಚನೆಯ ಹೆಸರಿನಲ್ಲೇ ಹೊಸ ಸೂಕ್ಷ್ಮರೀತಿಯ ದಬ್ಬಾಳಿಕೆಯನ್ನು ಅನ್ಯಾಯಗಳನ್ನು ಹುಟ್ಟುಹಾಕಬಲ್ಲ ವಿಪರ್ಯಾಸವನ್ನು ತನ್ನ ಗರ್ಭದಲ್ಲೇ ಹೊತ್ತಿರುವಂಥದ್ದು. ಆದರೆ ಜಾಗತೀಕರಣದ ವಿಷಯದಲ್ಲಿ ವಿಮೋಚನೆಯ ಸಾಧ್ಯತೆ ಕ್ಷೀಣ, ದಬ್ಬಾಳಿಕೆಯ ಅಪಾಯಗಳೇ ಹೆಚ್ಚು.

ಒಟ್ಟಿನಲ್ಲಿ ಜಾಗತೀಕರಣವು ರಾಷ್ಟಪ್ರಭುತ್ವದ ಗೆರೆ ಗಡಿಗಳು ಮಾಯವಾಗುವ ಹಂತವನ್ನು ಸೃಷ್ಟಿಸಿವೆ ಎಂಬುದೇ ಈ ವಾದದ ತಿರುಳು.

ವೈಜ್ಞಾನಿಕ ಯುಗದಲ್ಲಿ ಮನುಷ್ಯನ ಮನೋಭಾವದಲ್ಲೇ ಆದ ಮೂಲಭೂತ ಬದಲಾವಣೆ, ಇದು ಆತನನ್ನು ವರ್ತಮಾನದಲ್ಲಿ ಬದುಕುವ ಮನುಷ್ಯನ ಸಾಮಾನ್ಯ ನೆಲೆ ಯಿಂದ ಕೇವಲ ಭವಿಷ್ಯದ ಭದ್ರತೆಗಾಗಿ ಹಪಹಪಿಸುವ ಕೊಳ್ಳುಬಾಕ ಆರ್ಥಿಕ ಮನುಷ್ಯ ನನ್ನಾಗಿ ಪರಿವರ್ತಿಸಿದ್ದು, ಇದು ಹುಟ್ಟು ಹಾಕಿದ ದುರಾಸೆ. ಈ ಮಾದರಿಯ ಅನಿರ್ಬಂಧಿತ ಅಭಿವೃದ್ದಿಮೀಮಾಂಸೆ ಇವೆಲ್ಲವೂ ಮನುಷ್ಯನನ್ನು ಅತ್ಯಂತ ಕ್ರೌರ್ಯ ತುಂಬಿದ ಜೀವ ವಿರೋಧಿ ನೆಲೆಗಳಿಗೆ ಕೊಂಡೊಯ್ದಿಲ್ಲ. ಹಿಂಸೆಯನ್ನು ಶಾಸ್ವತೀಕರಿಸಿ ನ್ಯಾಯ ಸಮ್ಮತ ಗೊಳಿಸಿಬಿಟ್ಟಿದೆ. ಅಭಿವೃದ್ದಿ ಹೆಸರಿನಲ್ಲಿ ಇಂದು ನಡೆಯುತ್ತಿರುವ ಪೈಪೋಟಿ ಪ್ರೇರಿತ ಅಕ್ರಮಣಕಾರಿ ಹಿಂಸೆ ತನ್ನದೇ ಆದ ಅಭಿವೃದ್ದಿ ವ್ಯಾಖ್ಯೆಯನ್ನು ಸೃಷ್ಟಿಸಿಕೊಂಡಿದ್ದು ಅದನ್ನು ಅನಿವಾರ್ಯವೆಂಬಂತೆ ತರ್ಕಬದ್ಧವಾಗಿಯೂ ವೈಜ್ಞಾನಿಕವಾಗಿಯೂ ಭಾವರಹಿತವಾಗಿಯೂ ಮುಂದಿಡುತ್ತದೆ. ಇದರ ಫಲವೇ ದುರ್ಬಲ ಬಹುಜನರ ನಿರಂತರ ಬಲಿ ಕೋಮುವಾದದ ಬಲಿ ಬಲಿದಾನಗಳ ರೂಪಕ್ಕಿಂತಲೂ ಭೀಕರ ಸ್ವರೂಪವನ್ನು ಇದು ಹಲವೊಮ್ಮೆ ಪಡೆಯು ತ್ತದೆ. ಇಲ್ಲಿ ಬಲಿ ಹಾಕುವವರು ಯಾರು, ಬಲಿಯಾಗುವವರು ಯಾರು ಎಂದೇ ತಿಳಿಯದಷ್ಟು ಸೂಕ್ಷ್ಮವಾಗಿ ದೂರದಲ್ಲೆಲ್ಲೋ ಅಗೋಚರ ಶಕ್ತಿಗಳಿಂದ, ಮಂತ್ರಿ ಮಂಡಲಗಳಲ್ಲೋ, ಬಹುರಾಷ್ಟ್ರೀಯ ಕಂಪನಿಗಳ ‘ಬೋರ್ಡು ರೋಮ್’ಗಳಲ್ಲೋ ಬಲಿಯ ನಿರ್ಧಾರಗಳಾಗುತ್ತಿ ರುತ್ತವೆ.

ಈ ದೇಶದ ಜಾತಿವ್ಯವಸ್ಥೆ, ದಲಿತರ, ಮಹಿಳೆಯರ ಶೋಷಣೆ, ಗಿರಿಜನರ ಒಕ್ಕಲೆಬ್ಬಿ ಸುವಿಕೆ ಮುಂತಾದ ಪ್ರಶ್ನೆಗಳಿಗೆ ಜಾಗತೀಕರಣ ಪರಿಹಾರವಾಗಬಲ್ಲದೆ, ಎಂಬುದನ್ನೊಮ್ಮೆ ಅವಲೋಕಿಸಿದರೆ ಚಿತ್ರಣ ಇನ್ನಷ್ಟು ಮಸುಕುಗೊಳ್ಳುವುದನ್ನು ನಾವು ನೋಡಬಹುದು. ಸಮಾಜದ ಅಂಚಿನಲ್ಲಿ ವಾಸಿಸುತ್ತಿರುವವರ ಬಿಡುಗಡೆಯ ದಾರಿಯಾಗುವ ಬದಲು ಜಾಗತೀ ಕರಣ ಶ್ರೇಣೀಕೃತ ಸಮಾಜ ವ್ಯವವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಸಾಮಾಜಿಕ ಬದುಕಿನ ಸಮಾನತೆಯ ಸತ್ವವನ್ನೇ ಕುಗ್ಗಿಸಿ, ಶಿದಿಲಗೊಳಿಸಿ ಕೊನೆಯ ಪಕ್ಷ ದುರ್ಬಲರು ಗೌರವದಿಂದ ಬದುಕುವ ಅವಕಾಶವನ್ನು ವಂಚಿಸುತ್ತಿದೆ. ಮೀಸಲಾತಿಯ ಸಾಮಾಜಿಕ ನ್ಯಾಯದ ಆಶಯವನ್ನು ಖಾಸಗೀಕರಣ ದಕ್ಷತೆ ಲಾಭಗಳ ಹೆಸರಲ್ಲಿ ಸಂಪೂರ್ಣ ಪರಿಣಾಮ ಶೂನ್ಯ ಮಾಡಲಾಗುತ್ತಿದೆ.

ಇನ್ನು ದಲಿತರ ಕೆಳಪಯಣ ಈ ಜಾಗತೀಕ ಆರ್ಥಿಕ ಸಂದರ್ಭದಲ್ಲಿ ಇನ್ನೂ ಭೀಕರ ವಾದದು. ಅವರು ಈ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಅಂಚಿಗೆ ತಳ್ಳಲಲ್ಪಡುತ್ತಿದ್ದಾರೆ. ಜಾಗತೀಕರಣವು ದಲಿತರ ಉದ್ಯೋಗವಕಾಶ ಹೆಚ್ಚಿಸುತ್ತವೆ ಎಂದು ನಂಬಿಸಲಾಗುತ್ತಿದೆ. ಆದರೆ ತಳಮಟ್ಟದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಈ ಮಾತಿನ ಪೊಳು್ಳತನ ಬಯಲಾಗ ದಿರದು. ಉದಾ. ಒಂದೆಡೆ ಸುಲಭ ಶೌಚಾಲಯ, ರ್ಯಾಗ್ ಪಿಕಿಂಗ್ ಮುಂತಾದ ಹೊಸ ಕ್ಷೇತ್ರಗಳಲ್ಲಿ ಅವಕಾಶ ಹೆಚ್ಚುತ್ತಿವೆ ಎನ್ನಲಾಗುತ್ತಿದೆ. ಹೆಚ್ಚುತ್ತಿರುವ ಸುಲಭ ಶೌಚಾಲಯ ಗಳಲ್ಲಿ ಜಾತಿ ವ್ಯವಸ್ಥೆ ಭದ್ರಗೊಳ್ಳುತ್ತಿರುವುದನ್ನು ನಾವು ಇನ್ನೊಂದೆಡೆ ಗಮನಿಸಬಹುದು. ಸುಲಭ ಶೌಚಾಲಯವನ್ನು ಮೇಲ್ವರ್ಗ ಗುತ್ತಿಗೆ ತೆಗೆದುಕೊಂಡರೆ ಹಿಂದುಳಿದ ವರ್ಗ ಅದರ ಆಡಳಿತ ನಡೆಸುತ್ತಿದೆ. ಅವನ್ನು ಸ್ವಚ್ಚಗೊಳಿಸುವ ತೋಟಿ ಕೆಲಸವನ್ನು ಇಂದು ಅಂತ್ಯಜರೆನಿಸಿಕೊಂಡವರೇ ಮಾಡುತ್ತಿದ್ದಾರೆ.

ಹೀಗೆ ಒಂದು ಕಡೆ ಮನುಷ್ಯ ತನ್ನ ಜಾತಿವ್ಯವಸ್ಥೆಯು ಇಂದು ತುಂಬಾ ಸಡಿಲವಾಗಿದೆ ಎಂದು ಅಂದುಕೊಳ್ಳುವುದರಲ್ಲಿ ಅದು ತನ್ನ ಪ್ರತಿಬಿಂಬಿವನ್ನು ಕರಿನೆರಳನ್ನು  ಬೇರೆ ರೂಪದಲ್ಲಿ ಚಾಚಿಯೇ ಇವೆ. ಉದಾ. ಆಲಮಟ್ಟಿ, ಟಿ.ಬಿ.ಡ್ಯಾಂನ ಕಟ್ಟಡ ಕಾಮಗಾರಿಯಿಂದ ನಾವೆಲ್ಲಾ ಅಂದುಕೊಂಡಿದ್ದು ಇದು ನಮ್ಮ ದೇಶದ ಏಳಿಗೆಯ ಸಂಕೇತವೆಂದು. ಆದರೆ ಅದನ್ನು ಒಮ್ಮೆ ಬಿಚ್ಚಿ ಅದರಲ್ಲಿ ಇಣುಕಿ ನೋಡಿದಾಗ ಕೆಂಡ ಮುಚ್ಚಿದ ಬೂದಿಯಂತೆ ಹಲವಾರು ಸಮಸ್ಯೆಯನ್ನು ಉದ್ಘಾಟಿಸಿದೆ. ಹೇಗೆಂದರೆ ಮೊದಲು ಆ ಪ್ರದೇಶವು ಒಂದು ವ್ಯವಸಾಯದ ಪ್ರದೇಶವಾಗಿದ್ದು ಹಲವರಿಗೆ ಜೀವನದ ಆಧಾರವಾಗಿತ್ತು. ಆದರೆ ಆ ಪ್ರದೇಶದ ಆಕ್ರಮಣ ದಿಂದ  ಡ್ಯಾಂ ಆಯಿತು. ಸರ್ಕಾರವೇನು ವಸತಿ, ಆಹಾರ, ಎಲ್ಲಾ ಸೌಕರ್ಯ ನೀಡುತ್ತೇವೆ ಎಂದು ಹೇಳಿತು. ಆದರೆ ಒಬ್ಬ ಮನುಷ್ಯನ ಸರ್ಕಾರವಲ್ಲ. ಸ್ವತಃ ತಂದೆ ತಾಯಿಯೇ ಎಷ್ಟು ದಿನ ತಾನೇ ನೋಡಿಕೊಳ್ಳುತ್ತಾರೆ?

ಹೀಗೆ ನಮ್ಮ ದೇಶದಲ್ಲಿ ಒಂದು ಕಡೆ ಈ ಜಾಗತೀಕರಣದಿಂದ ಆಗುತ್ತಿರುವ ಲಾಭ ಹಾಗೂ ಎಲ್ಲಾ ಅಂಶಗಳು ನಮಗೆ ಕಂಡುಬರುತ್ತವೆ.

ಇನ್ನೊಂದು ದುರಂತವೆಂದರೆ ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಹೊಂದಿರುವ ಭಾರತಕ್ಕೆ ಅರ್ಧ ಗುಡಿ ಕೈಗಾರಿಕೆಯಿಂದಲೇ ಆದಾಯ ಬರುತ್ತಿತ್ತು. ಆದರೆ ಜಾಗತೀಕರಣ, ಆಧುನೀ ಕರಣದ ಪ್ರಭಾವದಿಂದಾಗಿ ಅದು ಸಹ ತುಂಬಾ ಶೋಚನೀಯ ಸ್ಥಿತಿಯಲ್ಲಿದೆ. ಹಿಂದೆ ಹಲವಾರು ಗುಡಿ ಕೈಗಾರಿಕೆಗಳಾದ ಕುಂಬಾರಿಕೆ, ಬಡಿಗ, ಅಕ್ಕಸಾಲಿಗ, ಚಾಪೆ ಹೆಣೆಯುವುದು, ಬಟ್ಟೆ ನೇಯುವುದು ಇವು ಜಾಗತೀಕರಣದಿಂದಾಗಿ ತಮ್ಮ ನೆಲೆಯ ಹೆಸರನ್ನು ಉಳಿಸಿಕೊಳ್ಳ ಲಾರದೇ ಅಧೋಗತಿಯನ್ನು ಹೊಂದಿ ಪಾತಾಳ ಸೇರಿವೆ. ಹಿಂದೆ ಈ ಗುಡಿ ಕೈಗಾರಿಕೆಯಿಂದ ಹಲವಾರು ಕುಟುಂಬಗಳಿಗೆ ಉದ್ಯೋಗ ಸಿಕ್ಕು, ಜನರು ಬಂದು ಸುಖವಾದ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರು. ಆದರೆ ಈ ಆಧುನೀಕರಣದಿಂದಾಗಿ ಅವೆಲ್ಲ ನಿಂತು ಹೋಗಿ ಮನುಷ್ಯನಿಗೆ ಉದ್ಯೋಗವೇ ಇಲ್ಲದಂತಾಗಿ ತುಂಬಾ ಹೀನಾಯ ಸ್ಥಿತಿಯನ್ನು ಅನುಭವಿಸಿ ಅವನು ಊಟಕ್ಕೂ ಸಹ ಪಡಬೇಕಾದ ಪಾಡು ನಾಯಿ ಪಾಡೇ ಸರಿ. ಅದಕ್ಕಾಗಿ ಜನ ಈಗ ಅದರಲ್ಲೂ ಒಂದು ದೇಶದ ಅಭಿವೃದ್ದಿಯ ಕೇಂದ್ರಬಿಂದುವಾಗಿದ್ದ ಮಾನವ ಸಂಪನ್ಮೂಲ ಅದರಲ್ಲೂ ಯುವಕರು ಆಧುನೀಕರಣದ ಪ್ರಭಾದಿಂದಾಗಿ ಪಾಶ್ಚಾತೀಕರಣದಿಂದಾಗಿ ಹೊಸ ಹೊಸ ಆಸೆ ತೀರಿಸಿಕೊಳ್ಳಲು ಹೋಗಿ ಎಷ್ಟು ಕೆಟ್ಟದಾರಿ ಹಿಡಿದು ಹಣದಾಸೆಗೆ ಕಳ್ಳ, ಸುಳ್ಳ, ಉಗ್ರಗಾಮಿಯಾಗಿ ಹಣದಾಸೆಗೆ ತನ್ನ ಎಲ್ಲವನ್ನು ಮಾರಿಕೊಳ್ಳುವ ಸ್ಥಿತಿಗೆ ಹೋಗಿದ್ದಾನೆ.

ಹೀಗೆ ಜಾಗತೀಕರಣದಿಂದಾಗಿ ಅತಿ ಕೆಳವರ್ಗದಲ್ಲಿರುವ ಜನ ಬೇರೆಯಾವ ಕೆಲಸವನ್ನು ಅವರು ತಿಳಿದಿರುವುದಿಲ್ಲ. ಕೇವಲ ತನ್ನ ಮೂಲವೃತ್ತಿ, ಇಲ್ಲವೇ ಗುಡಿಕೈಗಾರಿಕೆಯ ಮೇಲೆ ತನ್ನ ಜೀವನ ಅವಲಂಬನೆ ಮಾಡಿರುವಾಗ ಅವೆಲ್ಲದರ ನಾಶದಿಂದಾಗಿ ನೈಜವಾಗಿಯೇ ಅವನ ನಾಶವು ಸಾಗುತ್ತಾ ಅವನಿಂದಲೇ ಅಕ್ಷರಸ್ಥನು ಇಲ್ಲದಿರುವುದರಿಂದ ಅವನ ಜೀವನದ ಕೊನೆಯದಿನಗಳು ಅವನ ಹುಟ್ಟಿನಿಂದಲೇ ಪ್ರಾರಂಭವಾಗಿ ಬಿಟ್ಟಿವೆ.

ಒಟ್ಟಾರೆಯಾಗಿ ಈ ಜಾಗತೀಕರಣದಿಂದಾಗಿ ನಮ್ಮ ದೇಶಕ್ಕೆ ಒಂದು ಕಡೆಯಿಂದ ಲಾಭ ವೆಂದರೂ ನಮ್ಮ ದೇಶದ ಪರಿಸ್ಥಿತಿ, ಸಂದರ್ಭ, ಕ್ಷೇತ್ರವನ್ನು ತಿಳಿದು ಅರಿತು ಅದನ್ನು ಅಳವಡಿಸಿಕೊಳ್ಳಬೇಕೆ ವಿನಃ ಆಧುನಿಕರಣ ಅಥವಾ ಜಾಗತೀಕರಣದ ಹೆಸರಿನಲ್ಲಿ ನಮ್ಮ ಸಂಸ್ಕೃತಿ, ನೀತಿ-ನಿಯಮ ಸಂಪ್ರದಾಯ, ಆಚಾರ-ವಿಚಾರ ಎಲ್ಲವನ್ನು ಧೂಳೀಪಟಮಾಡಿ ಗಾಳಿಯಲ್ಲಿ ತೂಗು ಬಿಡುವುದಲ್ಲ. ಏಕೆಂದರೆ ಭಾರತ ದೇಶಕ್ಕೆ ತನ್ನದೇ ಆದ ಒಂದು ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರ ಅಂತಹ ಹಲವಾರು ಅತಿ ಅಮೂಲ್ಯವಾದ ಆಭರಣವನ್ನು ಭಾರತಾಂಬೆ ಧರಿಸಿದ್ದಾಳೆ ಎಂಬುದನ್ನು ಮರೆಯಬಾರದು.

* * *

��� `� ذ� @� ಣೆಯ ಬಗ್ಗೆ ಸ್ಪಷ್ಟ ಇತಿಹಾಸ ಹಾಗೂ ಮಾಹಿತಿ ನೀಡುವಲ್ಲಿ ಕ್ಷೇತ್ರಕಾರ್ಯ ಮಾಡುವವರಿಗೆ ಸ್ಪಷ್ಟತೆ ನೀಡುವಲ್ಲಿ ವಿಪುಲವಾಗುತ್ತಲಿವೆ. ಅದಕ್ಕೆ ಕಾರಣಗಳು ಬಹಳ ಇವೆ. ಜನರ ಅನಕ್ಷರತೆ, ಸಂಚಾರಿ ಜೀವನ, ಇತರ ಸಮುದಾಯದ ಪ್ರಭಾವ, ಬದುಕಿಗೆ ಗಟ್ಟಿಯಾದ ನೆಲೆ ಇಲ್ಲದಿರುವುದು ಇತ್ಯಾದಿ. ಇತ್ತೀಚಿನ ದಿನಗಳಲ್ಲಿ ಈ ಸಮುದಾಯದಲ್ಲಿ ಅಕ್ಷರಸ್ತರು ಬೇಡರ ಕಣ್ಣಪ್ಪನ ಉತ್ಸವ, ಸಿಂಧೂರ ಲಕ್ಷ್ಮಣನ “ಹುಟ್ಟುಹಬ್ಬ”ಗಳನ್ನು ಆಚರಿಸುತ್ತಾ ಈ ಸಮುದಾಯವಿರುವ ಹಳ್ಳಿಗಳಲ್ಲಿ ಸಂಘಟನೆ ಮಾಡಿಕೊಂಡಿದ್ದಾರೆ. ಹೆಚ್ಚು ಜನರಿರುವ ಗ್ರಾಮಗಳಲ್ಲಿ ವಾಲ್ಮೀಕಿ ಭವನ ಎಂದು ತಮ್ಮ ಸಮಾಜ ಬಾಂಧವರನ್ನು ಅಪ್ಪಿಕೊಂಡು ಅವರ ಅಭಿವೃದ್ದಿಗೆ ಶ್ರಮಿಸುತ್ತಾಲಿದ್ದಾರೆ. ಬಾಗಲಕೋಟೆ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಬಿಜಾಪೂರ ಜಿಲ್ಲೆಯ ಸಾತಿಹಾಳ, ಅಡಿರಸಂಗ, ಅರಳಿಚಂಡಿ, ಬುಯಾರ, ಮುತ್ತಾಗಿ ಅರಕೇರಿ, ಉತ್ನಾಳ, ಮುಂತಾದ ಕಡೆ ಜಾತ್ರೆ ಉತ್ಸವಗಳು ನಡೆಯುತ್ತಲಿವೆ ಎಂಬುದು ಸಹ ಗಮನಿಸಬೇಕಾದ ಸಂಗತಿಯಾಗಿದೆ.

 

ವಾಲ್ಮೀಕಿ ಇವರ ಮೂಲಪುರುಷನಾದರೂ ಈ ಜನರನ್ನು ಅತಿ ಹೆಚ್ಚಾಗಿ ನಾಯಕ ಸಮುದಾಯ, ಬೇಡ ಸಮುದಾಯ ಎಂತಲೇ ಕರೆಯಲಾಗುತ್ತದೆ. ಶಾಸನಗಳಲ್ಲಿಯು ಸಹ ಬೇಡನಾಯಕರೆಂದೇ ಕರೆದಿದ್ದನ್ನು ಎಂ.ವಿ ಚಿತ್ರಲಿಂಗಯ್ಯನವರು ಕಂಡುಕೊಂಡಿದ್ದಾರೆ. ನಾಯಕ ಎಂಬ ಉಪನಾಮವು ಕಲ್ಯಾಣ ಚಾಲುಕ್ಯರ ಕಾಲದ ಕ್ರಿ.ಶ. ೧೧-೧೨ನೆಯ ಶತಮಾನದ ಶಿಲಾಶಾಸನಗಳಲ್ಲಿ ಕಂಡುಬರುತ್ತದೆ. ಆಗ ಇದು ಜಾತಿಸೂಚಕ ಪದವಾಗಿರಲಿಲ್ಲ. ಬೇಡರಿಗೆ ‘ನಾಯಕ’ ಎಂಬ ಗೌರವಸೂಚಕ ಪದ ಕಲ್ಯಾಣ ಚಾಲುಕ್ಯರ ಕಾಲದಿಂದ ಬಂದಿರ ಬೇಕು ಎಂಬುದು ಇಲ್ಲಿ ಅರಿಕೆಯಾಗುತ್ತದೆ. ಈ ಬೇಡ ಸಮುದಾಯದ ನಾಯಕರು ೧೦-೨೦ ಕುಟುಂಬಗಳನ್ನು ಒಂದೇ ಸ್ಥಳದಲ್ಲಿ ಸಲುಹಿ ತಮ್ಮ ಬೇಡ ಘಟ್ಟಿಗಳನ್ನು ಕಟ್ಟಿಕೊಳ್ಳು ತ್ತಿದ್ದರು. ಈ ಗುಂಪುಗಳು ಅಲೆಮಾರಿಗಳಾಗಿ ಹೊರಟಾಗ ತಮಗೆ ತೊಂದರೆ ಮಾಡಿದವರನ್ನು ಎದುರಾದವರನ್ನು ಕೊಂದು ಅಲ್ಲಿಯ ದನಕರುಗಳನ್ನು ಅಟ್ಟಿಸಿಕೊಂಡು ತೆರಳುತ್ತಿದ್ದರು. ಹೀಗೆ ಸ್ಥಳಬಿಟ್ಟು ಸ್ಥಳಕ್ಕೆ ತೆರಳುವಾಗ ಕೆಲವು ದೈವ, ದೇವರುಗಳನ್ನು ಅವರು ತಮ್ಮ ಸಂಗಡ ಒಯ್ಯುತ್ತಿದ್ದರು. ಈ ಸಂದರ್ಭದಲ್ಲಿ ಕೆಲವು ಆಚರಣೆಗಳು ನಡೆಯುತ್ತಲಿದ್ದವು ಎಂದು ಹಿರಿಯರು ಹೇಳುತ್ತಾರೆ. ಹೀಗೆ ಸಂಚಾರಿಯಲ್ಲಿರುತ್ತಿದ್ದ ಈ ಸಮುದಾಯ ಬೇರೆ ಸಮುದಾಯಗಳೊಡನೆ ಬೆರೆಯದೆ ಬಹಳಕಾಲ ಸ್ವತಂತ್ರವಾಗಿದ್ದುದು ತಮಗೆ ವಿಶಿಷ್ಟವಾದ ಸಂಸ್ಕೃತಿಯನ್ನು ಹಿಂದೂ ಧರ್ಮದ ಪ್ರಭಾವ ಯಾವ ಪ್ರಮಾಣದಲ್ಲಿ ಆಗಿದೆ ಎಂಬ ಅಂಶ ಜಾತಿ ಹಾಗೂ ಬುಡಕಟ್ಟು ಈ ಎರಡಕ್ಕೂ ಇರುವ ವ್ಯತ್ಯಾಸವನ್ನು ಸೂಚಿಸುವ ಮಾನದಂಡ ವಾಗಿದೆ. ವಾಲ್ಮೀಕಿ ಜನ ಹುಟ್ಟು, ಮದುವೆ, ಮತ್ತು ಸಾವು ಈ ಮೂರು ಸಂದರ್ಭಗಳಲ್ಲಿ ಬ್ರಾಹ್ಮಣ ಪೌರೋಹಿತ್ಯಕ್ಕೆ ಅವಕಾಶ ಕೊಟ್ಟಿಲ್ಲ. ಹೀಗಿದ್ದೂ ಹಿಂದುಗಳೊಡನೆ ಜಾತ್ರೆಯಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ಅವರು ಬಾಗವಹಿಸುತ್ತಾರೆ. ಈ ಕಾರಣದಿಂದಲೆ ಮಾನವ ವಿಜ್ಞಾನಗಳು ಇವರನ್ನು ಬುಡಕಟ್ಟು ಸಮುದಾಯ ಎಂದು ಕರೆದರೆ ಜಾನಪದ ವಿಜ್ಞಾನದಲ್ಲಿ “ಜನಪದವರ್ಗ” ಎಂದು ಪರಿಗಣಿಸಲಾಗುತ್ತಿದೆ. ಈ ಜನಪದವರ್ಗ ಪಶುಪಾಲನೆಯ ಮೇಲೆ ಬಂದಿತಾದರೂ ಇದರ ಜತೆಗೆ ಬೇಟೆ ಮತ್ತು ಯೋಧವೃತ್ತಿಯನ್ನು ಕೈಗೊಂಡು ಬಂದದ್ದು ಐತಿಹಾಸಿಕ ಸಂಗತಿ. ದೃಢಕಾಯರಾದ ಇವರು ಯಾವ ಅಪಾಯಕ್ಕೂ ಅಂಜುತ್ತಿ ರಲಿಲ್ಲ. ಪೂರ್ವಾಪರ ಯೋಚಿಸದೆ ಶತೃಗಳ ಮೇಲೆ ಬೀಳುವವರೂ ಅಗಿರುತ್ತಾರೆ. ಇತರರ ದನಗಳನ್ನು ತರುಬಿಕೊಂಡು ಹೋಗಿ ತಮ್ಮ ವಶದಲ್ಲಿಸಿರಿಕೊಂಡ ಪ್ರಸಂಗಗಳು ಇವರಲ್ಲಿವೆ.

* * *

ಹಲಗಲಿ ಬೇಡರು

೪ನೇ ನುಡಿ

ಹಲಗಲಿ ಅಂಬುವ ಹಳ್ಳಿ ಮುಧೋಳ ರಾಜ್ಯದಾಗ ಇತ್ತು
ಪೂಜೆರಿಹಣಮಾ ಬಾಲ ಜಡಗ ರಾಮ ಮಾಡ್ಯಾರ ಮಸಲತ್ತು

ಕೈನ ಹತಾರ ಕೊಡಬಾರದೊ ನಾವು ನಾಲ್ಕು ಮಂದಿ ಜತ್ತು
ಹತಾರ ಹೋದ್‌ಇಂದ ಬಾರದ ನಮ್ಮ ಜೀವ ಸತ್ತ್‌ಓಗುದು ಗೊತ್ತು

ಸುತ್ತಿನ ಹಳ್ಳಿ ಮತ್ತು ಧೊರಿಗಳಿಗೆ ತಿಳಶೆರ ಹೀಂಗ್‌ಅಂತು
ಮಾಡರಿ ಜಗಳಾ ಕೂಡ್‌ಇರತೇವು ಕುಮುಕಿ ಯಾವತ್ತು

ವೊಳಗಿಂದ್‌ಒಳಗ ವಚನ ಕೊಟ್ಟರೊ ಬ್ಯಾಡರ್ ಎಲ್ಲ ಕಲಿತು
ಕಾರಕೂನನ ಕಪಾಳಕ ಬಡದರ ಶಿಪಾಯಿ ನೆಲಕ ಬಿತ್ತು