ಮನುಷ್ಯ ತಾನು ನೆಲೆಸಿದ ದೇಶವನ್ನು ಅಭಿವ್ಯಕ್ತಿಸುವ ಭಾಷೆಯನ್ನು ತಾಯಿಗೆ ಸಮೀಕರಿಸುತ್ತಾನೆ. ಮಾತೃಭೂಮಿ ಮಾತೃಭಾಷೆ ತಾಯಿನಾಡು ಮುಂತಾದ ಪರಿಭಾಷೆಗಳು ಮಾತೃ ಮೌಲ್ಯಗಳನ್ನು ಗೌರವಿಸುವಂಥವುಗಳಾಗಿವೆ. ಮನೆಯೇ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರುವು ಎಂಬ ಕವಿ ವಾಣಿಯಂತೆ ಮಾತೆಯೇ ಈ ಲೋಕದ ಮೊದಲ ಗುರು. ಮಾತೃದೇವೋಭವ ಎಂಬ ಉಕ್ತಿಯು ಶಿಷ್ಟ ಸಮುದಾಯದ ಮಹಿಳೆಗೆ ಮಾತ್ರವಲ್ಲದೆ, ಜನಪದ ತಾಯಂದಿರಿಗೂ ಅನ್ವಯವಾಗುತ್ತದೆ. ಹೆಣ್ಣಿನ ಜನ್ಮಸಿದ್ಧ ಗುಣವಾದ ಮಾತೃತ್ವದ ಭಾವನೆ ತನ್ನ ಮಕ್ಕಳಿಗಷ್ಟೇ ಅಲ್ಲ ಕುಟುಂಬದ ಎಲ್ಲ ಸದಸ್ಯ ರೊಂದಿಗೂ ಹೊಂದಿಕೆಯಾಗುತ್ತದೆ.

ತಾಯಿ ಮಗುವಿನ ಆಟಪಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆಡಿ ಬಾ ನನ ಕಂದ ಅಂಗಾಲತೊಳದೇನು ತೆಂಗಿನ ಕಾಯಿ ಎಳನೀರ ತಕ್ಕೊಂಡು ಬಂಗಾರ ಮೋರಿ ತೊಳಿದೇನು ಅಂದಂತೆ ತಂದೆ ಅನ್ನಲಾಗುತ್ತದೆಯೇ. ಆಡಿ ಬಾ ನನ ಕಂದ ಕೈಕಾಲ ಮುರಿದೇನು ತೆಂಗಿನ ಮರದ ಎಳೆ ಬರಲು ತಕ್ಕೊಂಡು ಮುಖ ಮಾರಿ ನೋಡದೆ ಬಡಿದೇನು ಎನ್ನುತ್ತಾನೆ. ಇದು ಸಾರ್ವತ್ರಿಕ ಮಾತೃ ಮೌಲ್ಯದ ಅನುಮೋದನೆ.

ಬೇಡ ಮಹಿಳೆ ಮಾತೃಮೂಲದ ಕುಟುಂಬ ವ್ಯವಸ್ಥೆಯನ್ನು ಮಾನವ ಸಂಸ್ಕೃತಿಯ ಕೌಟುಂಬಿಕ ವಿಕಾಸದ ಹಂತದಲ್ಲಿ ಎಲ್ಲ ಮಹಿಳೆಯರು ಪಾಲಿಸಿದಂತೆ ಅನುಸರಿಸಿದಂತೆ ಅನಿವಾರ್ಯವಾಗಿ ಅವಲಂಬಿಸಿದರು. ನಂತರ ಧಾರ್ಮಿಕ ಕಾರಣಗಳಿಗಾಗಿ ಎಲ್ಲ ಬುಡಕಟ್ಟು ಗಳ ಹೆಣ್ಣುಮಕ್ಕಳು ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯನ್ನು ರೂಪಿಸಿಕೊಂಡಂತೆ ಇವರೂ ಸಹ ದೇವದಾಸಿ ಪದ್ಧತಿಯಂಥ ಆಚರಣೆಗಳಿಗೆ ಒಳಗಾದರು. ಬೇಡರು ಸೈನಿಕರಾಗಿ ತೊಡಗಿಸಿ ಕೊಂಡಂಥ ಸಂದರ್ಭಗಳಲ್ಲಿ ವಿವಾಹ ಪದ್ಧತಿಯ ನಿರ್ಬಂಧ ಇವರಿಗೆ ಇದ್ದ ಕಾರಣ ಹೆಣ್ಣುಗಳು ಕೂಡುವ ಸಂತತಿಯಾಗಿ ಬೇಡ ಸೈನಿಕರ ಸಂತಾನ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯ ನೆರಳಿನಲ್ಲಿ ಬೆಳೆಯುವಂಥಾಯಿತು. ಹಾಗೆಯೇ ನಿರಂತರವಾಗಿ ನಡೆಯುತ್ತಿದ್ದ ಯುದ್ಧಗಳಿಂದಾಗಿ ಸೈನಿಕರ ಮರಣಗಳು ಸಂಭವಿಸಿದಂತೆಲ್ಲ ಪಿತೃತ್ವದ ಆಶ್ರಯವಿಲ್ಲದೆ ತಾಯಿಯ ಮಡಿಲಿನಲ್ಲೇ ಮಕ್ಕಳು ಬೆಳೆದು ಉಳಿಯಬೇಕಾಯಿತು. ಹೀಗೆ ಬೇಡ ಮಹಿಳೆ ಕುಟುಂಬ ಪೋಷಣೆಯ ಸಾಮಾಜಿಕ ಜವಾಬ್ದಾರಿ ಹಾಗೂ ಆರ್ಥಿಕ ಜವಾಬ್ದಾರಿಗಳಿಗೆ ಸ್ಪಂದಿಸಬೇಕಾಯಿತು.

ರಾಮಾಯಣದಲ್ಲಿ ಉಲ್ಲೇಖವಾಗುವ ಶಬರಿ ರಾಮಭಕ್ತೆ. ಕೊನೆಯವರೆಗೂ ರಾಮ ದರ್ಶನಕ್ಕಾಗಿ ಬದುಕನ್ನು ಕಳೆದ ಆದರ್ಶಮಯಿ ಅವಿವಾಹಿತೆ. ಇದು ಬುಡಕಟ್ಟು ಮಹಿಳೆ ಶಿಷ್ಟರಂತೆ ಪುರುಷಪ್ರಧಾನ ವಿವಾಹ ಪದ್ಧತಿಗೆ ಸ್ಪಂಧಿಸುವ ನಿರ್ಬಂಧದಿಂದ ಹೊರತಾಗಿದ್ದಳು ಎಂಬುದಕ್ಕೆ ಸಾಕ್ಷಿ. ಮದುವೆ ಬುಡಕಟ್ಟು ಹೆಣ್ಣಿನ ಐಚ್ಛಿಕ ವಿಷಯವಾಗುತ್ತಿತ್ತು ಎಂಬ ತತ್ವ ಬೇಡ ಮಹಿಳೆಯ ಪರಂಪರೆಗೆ ಅನ್ವಯವಾಗುತ್ತದೆ.

ಬೇಡನಾಯಕರು ಪಾಳೆಯಗಾರರಾಗಿ ರಾಜರಾಗಿ ಆಳ್ವಿಕೆ ನಡೆಸಿದ ಕಾಲಘಟ್ಟಗಳಲ್ಲಿ ಅವರಿಗೆ ಸಂಬಂಧಿಸಿದ ಕುಟುಂಬ ಹಾಗೂ ಪರಿವಾರಗಳ ಪರಿವಲಯಗಳಲ್ಲಿ ಶಿಷ್ಟ ಆಚರಣೆ ಗಳು ಧಾರ್ಮಿಕ ಮೌಲ್ಯಗಳು ಶಿಷ್ಟ ದೈವಾಚರಣೆಗಳು ಪ್ರವೇಶಿಸಿದಂತೆಯೇ ಪುರುಷ ಪ್ರಧಾನ ಕುಟುಂಬ ವ್ಯವಸ್ಥೆ ಬೇಡ ಸಂಕುಲದಲ್ಲಿ ದಟ್ಟವಾಯಿತು. ಬಹು ಪತ್ನಿತ್ವ ರಾಜ್ಯವಾಳುವವನ ಸಾಮಾಜಿಕ ಘನತೆ Social prestige ಎಂಬಂತಾಯಿತು. ಇಂಥ ಪ್ರಭಾವಗಳು ಈ ಸಮುದಾಯದಲ್ಲಿ ಹೆಚ್ಚುತ್ತಾ ಹೋದವು. ರಾಜರ ಆಳ್ವಿಕೆ ಮುಗಿದು ಬೇಡರು ಆಸ್ತಿ-ಪಾಸ್ತಿ ಗಳನ್ನು ಕಳೆದುಕೊಂಡು ನಿರ್ಗತಿಕರಾದ ಹಂತಗಳಲ್ಲಿಯೂ ಇವರ ಹೆಣ್ಣು ಮಕ್ಕಳು ಕಟ್ಟು ಪಾಡುಗಳಿಗೆ ಒಗ್ಗಿಹೋಗುವಂಥಾಯಿತು.

ಸಾಮಾಜಿಕ ಪರಿವರ್ತನೆ ಆಧುನೀಕರಣ ಎಂದೆಲ್ಲ ಹೇಳುತ್ತಿರುವ ಈ ಕಾಲದಲ್ಲಿಯೂ ಬೇಡ ಮಹಿಳೆಯರ ಸ್ಥಿತಿ-ಗತಿಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿವೆ. ಹಾಗೂ ಉಪಪಂಗಡಗಳಿಗೆ ಅನುಗುಣವಾಗಿ ಬೇರೆ ಬೇರೆಯಾಗಿ ಹೋಗುತ್ತವೆ. ಸಾಮಾಜಿಕ ಅಥವಾ ಧಾರ್ಮಿಕ ಕಾರಣಗಳಿಂದಾಗಿ ಪುರುಷನ ಅಧೀನತೆ ಅಥವಾ ಆಶ್ರಯದ ನೆರವಿಲ್ಲದೆ ಬದುಕನ್ನು ಕಟ್ಟಿಕೊಂಡ ಬೇಡ ಹೆಣ್ಣುಮಕ್ಕಳ ಬದುಕು ಈಗಲೂ ಸಮಾಜದಲ್ಲಿ ನೆಲೆಯನ್ನು ಪಡೆದು ಕೊಂಡಿದೆ. ಬೇಡ ಸಮುದಾಯಗಳು ಪ್ರಬಲರಾದ ಚರಿತ್ರೆಯ ಕಾಲಘಟ್ಟಗಳಲ್ಲಿ ಯುದ್ಧದಲ್ಲಿ ಮಡಿದ ತಮ್ಮ ತಮ್ಮ ಗಂಡಂದಿರಿಗಾಗಿ ಮಹಾಸತಿಯಾಗಿ ಚಿತೆಯೇರಿದ ಬೇಡ ಸ್ತ್ರೀಯರು ನಮ್ಮ ನೆನಪುಗಳಲ್ಲಿ ಉಳಿದಿದ್ದಾರೆ. ಇವರ ಆಚರಣೆ ಅಥವಾ ಆರಾಧನೆಗಳಲ್ಲಿ ಅವರ ನೆನಪುಗಳನ್ನು ಭದ್ರಗೊಳಿಸಿಕೊಂಡಿದ್ದೇವೆ. ಬೇಡ ಅರಸರ ಕಾಲದಲ್ಲಿ ಪೂಜಿಸುತ್ತಿದ್ದ ಮಾತೃ ದೈವಗಳು ತಮ್ಮ ಸಂಸ್ಕೃತಿಯ ಮೂಲದ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯ ನೆನಪಿನ ಸಂಕೇತಗಳಾಗಿವೆ. ಇಂದು ಶಿಷ್ಟ ದೈವಗಳು ರಾಷ್ಟ್ರೀಯ ಅಂತರ ರಾಷ್ಟ್ರೀಯ ದೈವ ಆರಾಧನೆ ಆಚರಣೆಗಳು ಎಲ್ಲ ಕಡೆ ಪರಿಚಲನಗೊಳ್ಳುತ್ತಿವೆ. ನಮ್ಮೆಲ್ಲ ಬೇಡ ಮಹಿಳೆಯರು ಇದಕ್ಕೂ ಸ್ಪಂದಿಸುತ್ತಾರೆ.

ಒಂದೇ ಕುಟುಂಬದಲ್ಲಿ ತನ್ನ ಅಜ್ಜಿ ಪೂಜಿಸುತ್ತಿದ್ದ ಯಲ್ಲಮ್ಮನೂ ವಾರಕ್ಕೊಮ್ಮೆ ಆರಾಧನೆಗೆ ಒಳಗಾಗುತ್ತಾರೆ. ಸಂದರ್ಭಕ್ಕೆ ಅನುಗುಣವಾಗಿ ಶಿಷ್ಟ ದೈವಗಳೂ ಪೂಜಿಸಲ್ಪಡು ತ್ತವೆ. ಸಸ್ಯಾಹಾರ ಮಾಂಸಾಹಾರಗಳ ಸಮತೋಲವೂ ಕುಟುಂಬ ವ್ಯವಸ್ಥೆಯಲ್ಲಿ ನಿರ್ವಹಣೆ ಯಾಗುತ್ತದೆ.

ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಪರಂಪರೆ ಎಂದು ಸ್ವೀಕರಿಸುತ್ತಿರುವ ಇಂದಿನ ಬೆರಳೆಣಿಕೆಯಷ್ಟು ಕುಟುಂಬದಲ್ಲಿಯೂ ಬಹುವಿಧ ಸಂಸ್ಕೃತಿಯ ಆಯಾಮಗಳು ಕಂಡು ಬರುತ್ತವೆ. ಕೆಲವು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುತ್ತಾರೆ. ಕೆಲವರಿಗೆ ಮದುವೆ ಗಂಡು ಮಕ್ಕಳು ಕಡ್ಡಾಯವಾಗಿ ವಿವಾಹ ಸಂಕೀರ್ಣ ಸನ್ನಿವೇಶಗಳಲ್ಲಿ ವಿವಾಹ ಸಂಬಂಧದ ಆಚೆಗೆ ಸಂತಾನವನ್ನು ಪಡೆದ ಹೆಣ್ಣುಮಕ್ಕಳು ತಮ್ಮ ಕುಟುಂಬ ಬಂಧು ಬಳಗದ   ಚೌಕಟ್ಟಿನಲ್ಲಿ ಮತ್ತು ಸಮಾಜದ ವ್ಯಾಪ್ತಿಯಲ್ಲಿ ಪದೇ ಪದೇ ತಪ್ಪಿತಸ್ಥರಂತೆ ಅವಮಾನಿತರಾಗುತ್ತಿರುವುದು ಗಮನಕ್ಕೆ ಬರುತ್ತದೆ.

ಉದಾ. ದೇವದಾಸಿಯಾದ ಅತ್ತೆಯನ್ನು ಅವಿವಾಹಿತ ಮಗಳನ್ನು ಅದೇ ಕುಟಂಬ ದೊಳಗಿನ ವಿವಾಹಿತ ಹೆಣ್ಣುಗಳು ಕೀಳಾಗಿ ಪರಿಗಣಿಸುತ್ತಾರೆ. ಅತ್ತೆ-ಸೊಸೆ, ಅತ್ತಿಗೆ-ನಾದಿನಿ, ಅಕ್ಕ-ತಂಗಿಯರಲ್ಲಿ ಜಗಳ ಮನಸ್ಥಾಪಗಳು ಬಂದಾಗ, ಮನೆಗೆ ಬಿಡುವ ಪದ್ಧತಿಯನ್ನು ಅನುಸರಿಸುವ ಹೆಣ್ಣುಮಕ್ಕಳು ಅವಮಾನಿತರಾಗುತ್ತಾರೆ.

ಮೊದಲಿಗೆ ಬೇಡರಲ್ಲಿ ಕನ್ಯಾಶುಲ್ಕದ ಪದ್ಧತಿ ಇತ್ತು. ಅಂದರೆ ಮದುವೆಯಾಗುವ ವ್ಯಕ್ತಿ ೬.೫೦ರೂಗಳನ್ನು ಅದಕ್ಕೂ ಮೊದಲು ೧.೫೦ರೂಗಳನ್ನು  ಕನ್ಯಾತೆರವಾಗಿ ನೀಡಬೇಕಾ ಗಿತ್ತು. ಇದನ್ನು ಹೆಣ್ಣಿನ ತಂದೆಗೆ ನೀಡುತ್ತಿದ್ದರು. ಕಾಲಕ್ರಮೇಣ ಹೆಣ್ಣಿನ ತಂದೆಯು ಗಂಡಿಗೆ ಮದುವೆ ಆಗುವ ಹುಡುಗನಿಗೆ ಕಾಲು ತೊಳೆದು ಕನ್ಯಾದಾನ ಮಾಡುವ ಪದ್ಧತಿ ಬಂತು. ಇದರಲ್ಲಿ ವಧು ದಕ್ಷಿಣೆಗೆ ಬದಲಾಗಿ ವರೋಪಚಾರ ಸೃಷ್ಟಿಯಾಯಿತು. ನಂತರ ಅದು ವರದಕ್ಷಿಣೆಗೆ ನಾಂದಿಯಾಯಿತು. ಮ್ಯಾಸ ಬೇಡರಲ್ಲಿ ಮಾತ್ರ ಈಗಲೂ ಕನ್ಯಾತೆರದ ಪದ್ಧತಿ ಇದೆ. ಆದರೆ ಇಲ್ಲಿನ ವಿಶೇಷ ಅಂದರೆ ಹೆಣ್ಣಿನ ತಾಯಿ ಮದುವೆಗೆ ಒಪ್ಪಿಗೆ ಕೊಡಬೇಕು ನಂತರ ಅವರ ಸಹೋದರರು ಅಂದರೆ ವಧುವಿನ ಸೋದರ ಮಾವಂದಿರು ಅನುಮತಿ ನೀಡಬೇಕಾಗುತ್ತದೆ. ಹೀಗೆ ಪ್ರಾದೇಶಿಕ ವ್ಯತ್ಯಾಸಗಳು ಅಥವಾ ಉಪಪಂಗಡಗಳ ಭಿನ್ನತೆಗಳಿಗೆ ಅನುಗುಣವಾಗಿ ಸ್ತ್ರೀ ಸಂವೇದನೆಗಳು ಬದಲಾವಣೆ ಪಡೆದಿವೆ.

ಬೇಟೆಗಾರಿಕೆಯ ಹಂತದಲ್ಲಿ ಬೇಡನಿಗೆ ಸರಿಸಮಾನಳಾಗಿ ಬೇಡತಿಯು ಬೇಟೆಯಾಡು ತ್ತಿದ್ದಳು. ನಂತರ ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ಆಹಾರವಾಗಿ ತಯಾರಿಸುತ್ತಿದ್ದಳು. ಬೇಟೆಗಾರಿಕೆಗೆ ಸಾಮಾಜಿಕ ಮಾನ್ಯತೆ ಮುರಿದು ನಿರ್ಬಂಧವೇರ್ಪಟ್ಟ ನಂತರವೂ ಮಾಂಸಾ ಹಾರದ ಅಡಿಗೆಯನ್ನು ಬೇಡತಿಯರು ಬೇಯಿಸುತ್ತಾರೆ. ಶಿಷ್ಟ ಪ್ರಭಾವಗಳಿಂದಾಗಿ ಕೆಲವು ಬೇಡ ಹೆಣ್ಣುಮಕ್ಕಳು ಸಸ್ಯಹಾರಿಗಳಾಗಿದ್ದರೂ ತನ್ನ ಗಂಡ ಅಥವಾ ಕುಟುಂಬ ವ್ಯವಸ್ಥೆಯ ಪರಂಪರಾಗತ ಆಹಾರವಾದ ಮಾಂಸವನ್ನು ಬೇಯಿಸಲು ಹಿಂಜರಿಯುವುದಿಲ್ಲ.

ಬೇಡ ಸಂಸ್ಕೃತಿ ಕೃಷಿ ಮತ್ತು ಪಶುಪಾಲನೆಯತ್ತ ವಾಲಿದ ನಂತರ ಬೇಡತಿಯರು ತಮ್ಮ ಪುರುಷರಿಗೆ ಸರಿಸಮಾನರಾಗಿ ವೃತ್ತಿ ಪಲ್ಲಟಕ್ಕೆ ತಾವು ಪಲ್ಲಟಗೊಂಡರು. ಆಧುನೀಕರಣ ಮತ್ತು ನಗರ ಸಂಸ್ಕೃತಿಯ ಪ್ರಭಾವದಿಂದ ಕಾಡುಗಳು ನಾಶಗೊಂಡು ಪಶುಪಾಲನೆ ನಶಿಸಿದ ಸಂದರ್ಭಗಳಲ್ಲಿ ಹಾಗೂ ಕೈಗಾರಿಕೆಗಳಿಂದಾಗಿ ಕೃಷಿಭೂಮಿ ಕ್ಷೀಣಿಸಿದ ದಿನಗಳಿಗೆ ಅನುಗುಣ ವಾಗಿ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡರು.

ಅಕ್ಷರ ಪ್ರಪಂಚ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿಯೂ ಅಲ್ಪ ಸಂಖ್ಯೆಗಳಲ್ಲಿ ಬೇಡ ಮಹಿಳೆ ಪ್ರಗತಿ ಹೊಂದುತ್ತಿದ್ದಾಳೆ. ಕೆಲವು ಕಡೆಗಳಲ್ಲಿ ಇಂಥ ಹೆಣ್ಣುಮಕ್ಕಳು ತಮ್ಮ ಸಂಕೀರ್ಣ ಕುಟುಂಬ ವ್ಯವಸ್ಥೆಯ ಗೊಂದಲಗಳಿಂದ ತತ್ತರಿಸುತ್ತಿದ್ದಾರೆ. ಇಂದು ಬಹುಪಾಲು ಬೇಡ ನಾಯಕ ಕುಟುಂಬಗಳು ಪುರುಷ ಪ್ರಾಧಾನ್ಯತೆಯನ್ನು ಒಪ್ಪಿಕೊಂಡಿವೆ. ತಾವು ನಾಯಕ ಮೂಲದವರು ಪಾಳೆಯಗಾರ ವಂಶಸ್ಥರು ರಾಜ ವೈಭವದಿಂದ ಮೆರೆದವರೆಂಬ ಘನತೆಗಳ ಮೆರಗುಗಳನ್ನು ಮೆಲುಕು ಹಾಕುತ್ತಿರುತ್ತಾರೆ. ಆದ್ದರಿಂದ ಇವರ ಮಹಿಳೆಯರು ಸಂಪೂರ್ಣ ಪುರುಷ ಪ್ರಾಬಲ್ಯಕ್ಕೆ ಒಳಗಾಗಿದ್ದಾರೆ. ದುಡಿಯುವ ಗಳಿಸುವ ಸ್ವಾತಂತ್ರ್ಯ ಈ ಹೆಣ್ಣುಮಕ್ಕಳ ಪಾಲಿಗೆ ಲಭಿಸಿದಂತೆ ಅದನ್ನು ವ್ಯಯಿಸುವ ಸಂದರ್ಭಗಳಲ್ಲಿ ಪುರುಷಾಧೀನರಾಗಿರುತ್ತಾರೆ. ಮದುವೆಯ ಸ್ವಾತಂತ್ರ್ಯ ಸಂಪೂರ್ಣ ಪುರುಷನಿಗೆ ಇರುವಂತೆ ಮಹಿಳೆಯ ಪಾಲಿಗೆ ಇರುವು ದಿಲ್ಲ. ಅಂತರ್ ಜಾತಿ ವಿವಾಹದ ಬಗ್ಗೆ ಬಹುಪಾಲು ಬೇಡರ ಹೆಣ್ಣು ಮಕ್ಕಳಿಗೆ ಹೆದರಿಕೆ ಇದೆ. ಮೇಲ್ಜಾತಿಯ ಮದುವೆ ನೆಲೆ ತಪ್ಪಿದರೆ ಮುಂದೆ ಗತಿಯೇನು? ಎಂದು ಯೋಚಿಸುತ್ತಾರೆ. ತಮಗಿಂತ ಕೆಳಜಾತಿಯೊಂದಿಗೆ ಮದುವೆಯಾಗಲು ತಮ್ಮ ಮನೆತನ, ವಂಶ ಅಥವಾ ಕುಟುಂಬದ ಘನತೆಗೆ ಕಳಂಕವಾದೀತೆಂದು ಎಚ್ಚರ ವಹಿಸುತ್ತಾರೆ. ಒಟ್ಟಾರೆ ಬೇಡ ಸಮುದಾಯದ ಅಂತರ್ ಜಾತಿಯ ವಿವಾಹಗಳು ವಿದ್ಯಾವಂತ ಪುರುಷರ ಪಾಲಿಗೆ ದಕ್ಕಿದಷ್ಟು ಮಹಿಳೆಯರಿಗೆ ಲಭಿಸಿಲ್ಲ. ಆದರೆ ಈ ಸಮುದಾಯದ ಪುರುಷರು ಹೀಗೆ ಮದುವೆಯಾಗು ತ್ತಿರುವುದು ಒಟ್ಟಾರೆ ಸಾಮಾಜಿಕ ಪರಿವರ್ತನೆ ಅಥವಾ ಪ್ರಗತಿಗೆ ಮಾರ್ಗವಾದಂತೆಲ್ಲ ಇದೇ ಸಮುದಾಯದ ಹೆಣ್ಣುಮಕ್ಕಳ ಪಾಲಿಗೆ ಕಷ್ಟವಾಗುತ್ತಿದೆ. ಶಿಷ್ಟರ ಆರ್ಥಿಕವ್ಯವಸ್ಥೆ, ಸಾಮಾಜಿಕ ಭದ್ರತೆ, ಮಾನಸಿಕ ನೆಮ್ಮದಿ ಸೌಂದರ್ಯ ಪೂರಕವಾಗಿರುವಂತೆ ಬೇಡ ಹೆಣ್ಣು ಮಕ್ಕಳಿಗೆ ಇರುವುದಿಲ್ಲ. ಇಂಥ ಸಂದರ್ಭಗಳಲ್ಲಿ ಅಜ್ಞಾತವಾದ ಅನಾತ ಪ್ರಜ್ಞೆ ಕಾಡುತ್ತಿ ರುತ್ತದೆ.

ಬೇಡತಿಯರು ಮೃದು ಮನಸ್ಕರಾದರೂ ದೈರ್ಯ ಮತ್ತು ದಿಟ್ಟತನದ ಸ್ವಾಭಾವದವರು ಯಾವ ವರ್ಗದ ಮಹಿಳೆಯೇ ಆಗಲಿ ತನ್ನನ್ನು ಕೆಣಕಿದವರನ್ನು ಶಿಕ್ಷಿಸದೆ ಬಿಡುವುದಿಲ್ಲ. ಉಡುಗೆ ತೊಡುಗೆಗಳ ವಿಷಯದಲ್ಲಿ ಮೂಲ ಸಂಪ್ರದಾಯದ ವೇಷ-ಭೂಷಣಗಳನ್ನು ಅವುಗಳಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಪಾಲಿಸುವುದಿಲ್ಲ. ಆದರೆ ಅತ್ಯಾಧುನಿಕ ವೇಷ ಭೂಷಣಗಳಲ್ಲಿ ತೀರಾ ಸಂಕೋಚ ತರಿಸುವ ತುಂಡು ಉಡುಗೆಗಳನ್ನು ಧರಿಸುವುದಿಲ್ಲ.

ಉದಾ. ರವಿಕೆ ಧರಿಸುವಿಕೆ ಮೊದಲಿಗೆ ನಿಷೇಧ. ತಾಳಿ, ಕಾಲ್ಗೆಜ್ಜೆ, ಕಪ್ಪುವಸ್ತ್ರ ಈಗ Sleevless ಹೀಗೆ ಸಾಮಾಜಿಕ ಹೊಣೆಗಾರಿಕೆಗೆ ಅನುಗುಣವಾಗಿ ಬೇಡ ಮಹಿಳೆಯ ಸಂವೇದನೆಗಳು ಭೂಷಣ ಪ್ರಾಯವಾಗಿವೆ.

* * *

��q ���ذ� p� �ಡಿವ ಹಾಗೂ ಅಂಚಿನ ವರ್ಗ ಗಳಿಗೆ. ಕಾರಣ ಅವುಗಳಿಗಿರುವ ಸಾಮಾಜಿಕ ಹಾಗೂ ಆರ್ಥಿಕ ಅಭದ್ರತೆಗಳು. ಸ್ವ ಮೂಲವನ್ನು ಬಿಡದ ಅನ್ಯ ಮೂಲವನ್ನು ಆಶ್ರಯಿಸದ ಅವುಗಳ ಅನನ್ಯ ಸ್ವಭಾವವು ಅನ್ನ ಹಾಗೂ ನೆಲೆ ಕಸಿದುಕೊಳ್ಳುವ ಪ್ರವೃತ್ತಿಗಳ ವಿರುದ್ಧ ಸೆಟೆದು ನಿಲ್ಲುವಂತೆ ಮಾಡುತ್ತದೆ. ಹಲಗಲಿ ಬೇಡರಂತಹ ಅಡವಿ ಅವಲಂಬಿತ ಸಮುದಾಯಗಳಿಗೆ ವೃತ್ತಿ ಎನ್ನುವುದು ಅಸಮಾನತೆಯ ನೆಲೆಯಾಗದೆ ಅದೊಂದು ಸಾಮುದಾಯಿಕ ಆಚರಣೆಯ ಭಾಗವಾಗಿತ್ತು. ಎಲ್ಲ ದುಡಿವ ಸಂಸ್ಕೃತಿಗಳಲ್ಲಿ ಈ ಗುಣವನ್ನು ಕಾಣುತ್ತೇವೆ. ಹೀಗಾಗಿ ಹಲಗಲಿ ದಂಗೆ ಹಾಗೂ ಸಿಂಧೂರ ಲಕ್ಷ್ಮಣನ ಪ್ರತಿಭಟನೆಗಳು ಬರೀ ಆಂಶಿಕ ಅಗತ್ಯಗಳಾಗಿರದೆ ಆ ಕಾಲದ ಸಾಮಾಜಿಕ, ಆರ್ಥಿಕ, ರಾಜಕೀಯ ಅಸ್ತಿತ್ವದ ಅಗತ್ಯ ಹಾಗೂ ಅನಿವಾರ್ಯತೆಗಳಾಗಿ ಮೂಡಿಬಂದಂಥವು. ಈ ಆರ್ಥಿಕ ಸ್ವಾವಲಂಬನೆ ಹಾಗೂ ಅಸ್ತಿತ್ವ ನಾಶದ ಪ್ರವೃತ್ತಿಗಳ ವಿರುದ್ಧ ಶ್ರಮ ಹಾಗೂ ಸ್ವಾವಲಂಬಿ ಮನಸ್ಸುಗಳು ತೋರಿದ ಚುರುಕುತನವದು. ಬೇಡರದು ನಿಸರ್ಗಮುಖಿ ಹಾಗೂ ನಿಸ್ವಾರ್ಥ ಬದುಕು. ಪ್ರಭುತ್ವದ್ದು ಸ್ವಾರ್ಥಮುಖಿ ಬದುಕು. ವಸಾಹತು ಪ್ರಭುತ್ವ ಯಾವಾಗಲೂ ಸ್ಥಳೀಯ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಸಂಬಂಧಗಳ ವಿಘಟನೆಯಾಗಿ ಕೆಲಸ ಮಾಡುತ್ತ ಬಂದಿದೆ. ಇದಕ್ಕೆ ಸ್ಥಳೀಯ ಕೆಲವು ಪ್ರತಿಷ್ಠಿತ ಹಿತಾಸಕ್ತಿಗಳ ಸ್ವಾಥಪರ್ರ ಸಹಾಯವೂ ಕಾರಣವಾಗಿದೆ. ಸ್ಥಳೀಯ ಉತ್ಪಾದನೆಯ ಮುಖ್ಯಗುಣವೇ ಮಾನವಮುಖಿ ಹಾಗೂ ಸಮಾಜಮುಖಿ ಸಂಬಂಧಗಳನ್ನು ಗಟ್ಟಿಗೊಳಿಸುವುದು. ಆ ಮೂಲಕ ವ್ಯಕ್ತಿಯ ಸಾಂಸ್ಕೃತಿಕ ಲೋಕದ ವಿಸ್ತಾರಕ್ಕೆ ಹಾಗೂ ಆರ್ದಿಕ ಭದ್ರತೆಗೆ ಹಂಬಲಿಸುವುದು. ಹೀಗಾಗಿ ಬದುಕನ್ನು ಅಭದ್ರಗೊಳಿಸುವ, ಅವಮಾನಿಸುವ, ನಾಶಗೊಳಿಸುವ ಶಕ್ತಿಗಳ ವಿರುದ್ಧ ಸಿಡಿದೇಳುವ ಮೂಲಕ ಹಲಗಲಿ ಬೇಡರು ಹಾಗೂ ಸಿಂಧೂರ ಲಕ್ಷ್ಮಣನಂತಹ ಸ್ಥಳೀಯ ಪ್ರತಿಭಟನಾಕಾರರು ಪ್ರಭುತ್ವ ಹಾಗೂ ಅದರ ಪರಿವಾರವನ್ನು ತಮ್ಮ ಹೋರಾಟಗಳ ಮೂಲಕ ಕಂಗೆಡಿಸಿದರು.

 

ನಿಶ್ಯಸ್ತ್ರೀಕರಣ ಕಾಯಿದೆಯಡಿಯಲ್ಲಿ ನಿಷೇಧಕ್ಕೊಳಗಾದ ಕುಡುಗೋಲು, ಕೊಡ್ಲಿ, ಭರ್ಚಿಯಂಥ ಆಯುಧಗಳನ್ನು ಮತ್ತೆ ಮಾಡಿಕೊಳ್ಳುವಂಥ ಸಾಮರ್ಥ್ಯ ಹಲಗಲಿ ಬೇಡರಿಗೆ ಇರಲಿಲ್ಲವೆಂದಲ್ಲ ಇತ್ತು. ಈ ವರೆಗೆ ಚರ್ಚಿಸಿದಂತೆ ಆಯುಧವೆಂದರೆ ಅದೊಂದು ಪರಿಕರ ಮಾತ್ರವಾಗಿರಲಿಲ್ಲ. ಅದು ಅವರ ಜೀವನ ವಿಧಾನವಾಗಿತ್ತು. ಅಂಥ ಜೀವನವನ್ನು ಕಾಯಿದೆ ಸರ್ವನಾಶ ಮಾಡುತ್ತದೆ ಕಸಿದುಕೊಳ್ಳುತ್ತದೆ.

ಕುಬಸಾ ಸಿರಿ ಹಪ್ಪಳ ಶಾಂಡಿಗಿ ಕುರ್ಚಿಗಿ ಕುಡಗೋಲಾ
ಕೊಡಲಿ ಕೋತಿ ಕುಡ ಕಬ್ಬಿಣಾ ಮಸರು ಬೆಣ್ಣೆ ಹಾಲಾ
ಉಪ್ಪ ಎಣ್ಣಿ ಅರಿಶಿಣ ಜೀರಿಗಿ ಅಕ್ಕಿ ಸಕ್ಕರಿ ಬೆಲ್ಲಾ
ಗಂಗಾಳ ಚರಗಿ ಮಂಗಳ ಸೂತ್ರಾ ತಕ್ಕೊಂಡ ಹೋದರ ಬೀಸುಕಲ್ಲಾ
ಎಲ್ಲಾ ತಗೊಂಡ್ರೊ ಸಿಕಷ್ಟ | ಸರ್ದನಿಂತ ಊರಿಗೆ ಕೊಳ್ಳಿ ಕೊಟ್ಟು
ಬೂದಿ ಮಾಡ್ಯಾರ ಹಲಗಲಿ ಸುಟ್ಟು ಗುರ್ತ ಎಳ್ಳಷ್ಟು ಸಿಗದಷ್ಟು

ಲಾವಣಿಯ ಈ ಸಾಲುಗಳು ತುಂಬಾ ಅರ್ಥಗರ್ಭಿತವಾಗಿರುವುದನ್ನು ಇಲ್ಲಿ ಕಾಣಬಹುದು. ಹಲಗಲಿ ಬೇಡರ ಎಣ್ಣೆ, ಉಪ್ಪು, ಹಪ್ಪಳ, ಸೆಂಡಿಗೆ ಉತ್ಪಾದನೆಗೆ ಮುಖ್ಯವಾದ ವಸ್ತುಗಳೇ ಕೊಡಲಿ, ಕೋತಿ, ಕುಡುಗೋಲು. ಅವುಗಳು ಅಭಿನ್ನವಾಗಿ ಇಲ್ಲಿ ಬಳಕೆಯಾಗಿವೆ. ಅಂಥ ಅಭಿನ್ನ ಬದುಕಿನ ಸರ್ವನಾಶವನ್ನು ಕಂಪನಿ ಸರ್ಕಾರ ಇಲ್ಲಿ ಮಾಡುವುದನ್ನು ಲಾವಣಿ ಮಾರ್ಮಿಕವಾಗಿ ಧ್ವನಿಸುತ್ತದೆ.

“ಹಲಗಲಿ ಎಂಬುವ ಹಳ್ಳಿ ಮುಧೋಳ ರಾಜ್ಯದಾಗ ಇತ್ತೊ
ಪೂಜೆರಿ ಹಣಮಾ ಬಾಲ ಜಡಗ ರಾಮ ಮಾಡ್ಯಾರ ಮಸಲತ್ತ
ಕೈಯಾನ ಹತಾರಕೊಡಬಾರದು ನಾವು ನಾಲ್ಕು ಮಂದಿ ಜತ್ತೋ
ಹತಾರ ಹೋದಿಂದ ಬಾರದ ನಮ್ಮ ಜೀವ ಸತ್ತ ಹೋಗುದು ಗೊತ್ತು”

ಹಲಗಲಿ ಬಂಡಾಯದ ರೂವಾರಿಗಳಾದ ಹಣಮ, ಬಾಲ, ಜಡಗ ಹಾಗೂ ರಾಮ ಇವರು ಹೇಳುವ ಈ ಮಾತು, ಕೆಳವರ್ಗಗಳ ಅಂತಃಸ್ಥೈರ್ಯ ಹಾಗೂ ತಲ್ಲಣಗಳಿಗೆ ಸಾಕ್ಷಿ ಯಾಗಿವೆ. ಅಸ್ತಿತ್ವವನ್ನೇ ಅಡಗಿಸಲು ಪ್ರಯತ್ನಿಸುವ ಪ್ರಭುತ್ವದ ಹುನ್ನಾರದ ವಿರುದ್ಧ ನಡೆದ ಈ ದಂಗೆಗಳನ್ನು ಬರೀ ಬ್ರಿಟೀಷ್ ವಿರೋಧಿ ಅಥವಾ ಭಾರತ ರಾಜಕೀಯ ಸ್ವಾತಂತ್ರ್ಯದ ರಂಗತಾಲೀಮೆಂದು ಬೀಗುವುದು ಬರೋಬ್ಬರಿಯಲ್ಲ. ‘ಸ್ವಾತಂತ್ರ್ಯ’ದ ಪರಿಕಲ್ಪನೆಯೇ ಇಲ್ಲದೆ ಬದುಕು ಅರಸುತ್ತಿರುವ ಸಮುದಾಯಗಳೂ ಸ್ವಾತಂತ್ರ್ಯೋತ್ತರ ಕಾಲದಲ್ಲೂ ಇರುವಾಗ ಹಲಗಲಿ ಬಂಡಾಯ ಹಾಗೂ ಸಿಂಧೂರ ಲಕ್ಷ್ಮಣರ ಪ್ರತಿಭಟನೆ ಗಳನ್ನು ಈ ರೀತಿಯ ವ್ಯಾಖ್ಯಾನಗಳಿಗೆ ಹೊಂದಿಸುವುದು ವಿಚಿತ್ರವೆನಿಸುತ್ತದೆ. ಹೀಗೆ ಮಾಡುವುದರಿಂದ ಈ ಪ್ರತಿಭಟನೆಗಳಿಗಿದ್ದ ಆಂತರಿಕ ತಾಕತ್ತು ಹಾಗೂ ತುರ್ತುಗಳು, ಮತಿಗಳು, ಸೂಕ್ಷ್ಮತೆಗಳು ಸಪಾಟಾಗಿ ಹೋಗುತ್ತವೆ. ಅವುಗಳನ್ನು ನೇರ ಅರ್ಥ ಮಾಡಿ ಕೊಳ್ಳಲು ಆಗದ ಜಡತೆ ಆವರಿಸುತ್ತದೆ. ಅನಗತ್ಯವಾಗಿ ಅವುಗಳನ್ನು ರಾಷ್ಟ್ರೀಯವಾದಿ ಕಕ್ಷೆಯಲ್ಲಿಟ್ಟು ನೋಡದೆ ಅದರ ಸ್ಥಳೀಯ ಸಾಮಾಜಿಕ ತುರ್ತಿನಲ್ಲಿಟ್ಟು ವ್ಯಾಖ್ಯಾನಿಸಿದರೆ ಹೊಸ ರೀತಿಯ ಸೂಕ್ಷ್ಮ ಚಾರಿತ್ರಿಕ ಸಂಕಥನಗಳನ್ನು ನಮ್ಮವಾಗಿಸಿಕೊಳ್ಳಬಹುದಾಗಿದೆ.  ಹೀಗಾಗಿ ಇಂಥ ಪ್ರತಿಭಟನೆಗಳನ್ನು ಅರ್ಥಮಾಡಿಕೊಳ್ಳುವ ನೆಲೆಯೇ ಬದಲಾಗಬೇಕಿದೆ.

(ಲೇಖನಕ್ಕೆ ಬಳಸಿಕೊಂಡಿರುವ ಲಾವಣಿಯ ಸಾಲುಗಳನ್ನು ಫ್ಲೀಟರ್ ಸಂಗ್ರಹಿಸಿದ ಐದು ಐತಿಹಾಸಿಕ ಲಾವಣಿಗಳು ಪುಸ್ತಕದಿಂದ ಆಯ್ದುಕೊಂಡಿದ್ದೇನೆ).

* * *

ಹಲಗಲಿ ಬೇಡರು

ಬೇಡಿದಾ ಕ್ಷಣಕ ತಾವು ತಂದು
ಕೊಡತಾರ ಹಿಡಿಹಿಡಿರ್ ಎಂದು

ವತ್ನ ಕೊಡತೇವ್ ಅನ್ನರಿ ವೊಂದ್ ಒಂದು
ತಂದು ಕೊಡತಾರ ತಮ್ಮ ಕುಸಿಲಿಂದು

ಬಂದಿತು ಹುಕುಮ ಹೀಂಗ್ ಎಂದು
ಡಣ್ಗರ ಸಾರಿದರ ಮುಂದು

ಶೂರ ಶಿಪಾಯಿಜನರ ತಾವು ತಿಳಿದು
ಅಳತಾಯ ಕಣ್ಣಿಗೆ ನೀರ್ ತಂದು    ||ಯೇರ||

ಬಹಳ ಚಿಂತಿಯ್‌ಆಗಿ ದುಋೂಖದಿಂದ ಅವರು ಬಿದ್ದರ್-ಅಣ್ಣ ನೆಲಕ

 

ಚಿತ್ರದುರ್ಗ, ಸುರಪುರ, ಹಲಗಲಿಯ ಬೇಡರ ಶೌರ್ಯ, ಪರಾಕ್ರಮಗಳು ಯಾವ ಕಾಲಕ್ಕೂ ಚಿರಸ್ಮರಣೀಯ

ಹರ್ತಿಕೋಟೆ ವೀರೇಂದ್ರ ಸಿಂಹ