ಕರ್ನಾಟಕದ ಕ್ರಿಯಾತ್ಮಕ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವಿಶ್ವವಿದ್ಯಾಲಯವು ಪ್ರಮುಖವಾದದ್ದು. ಕನ್ನಡ ಸಂಸ್ಕೃತಿಯನ್ನು ವಿವಿಧ ನೆಲೆಗಳಲ್ಲಿ ಹುಡುಕುವ, ಗಟ್ಟಿಗೊಳಿ ಸುವ, ಹರಡುವ ಕಾರ್ಯದಲ್ಲಿ ನಿರತವಾಗಿದೆ. ಕನ್ನಡದ ನೆಲ, ಜಲ ಸಂಸ್ಕೃತಿಯ ಜೊತೆಗೆ ಸಮಾಜಮುಖಿ ಕಾರ್ಯಗಳಿಂದ, ಸಮುದಾಯಗಳನ್ನು ಸಮಾಜವನ್ನು ಕೇಂದ್ರವಾಗಿಟ್ಟು ಕೊಂಡು ಕಾರ್ಯೋನ್ಮುಖವಾಗಿದೆ. ಕನ್ನಡವನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸಿ ಮತ್ತೆ ಕಟ್ಟುವ ಕೆಲಸ, ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಅನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಕನ್ನಡ ವಿಶ್ವ ವಿದ್ಯಾಲಯ ಸದಾ ಬಯಸುತ್ತದೆ.

ಇಂತಹ ಸನ್ನಿವೇಶದಲ್ಲಿ “ಬೇಟೆಗಾರಿಕೆಯನ್ನು ಉಳಿಸಿಕೊಂಡು ಕಾಡಿನಲ್ಲಿ ನೆಲೆಯನ್ನು ಸ್ಥಾಪಿಸಿಕೊಂಡು ನಂತರ ನಾಡಿನೊಂದಿಗೆ ಸ್ಪಂದಿಸುತ್ತಾ ಕಾಡು ನಾಡುಗಳ ಸಾಮರಸ್ಯ, ಸಂಘರ್ಷಗಳೊಂದಿಗೆ ಸಂಸ್ಕೃತಿಯನ್ನು ರೂಪಿಸಿಕೊಂಡ ಸಮುದಾಯಗಳಲ್ಲಿ, ಪ್ರಾಚೀನಕಾಲ ದಿಂದಲೂ ಸಾಮಾಜಿಕ ಉತ್ಥಾನ ಹಾಗೂ ಸಾಂಸ್ಕೃತಿಕ ಬೆಸುಗೆಯನ್ನು ಚರಿತ್ರೆಯುದ್ದಕ್ಕೂ ಎತ್ತಿ ಹಿಡಿಯುವ ಬೇಡ ಸಮುದಾಯದ ಕುರಿತು ಚಿಂತನೆ, ಸಂಶೋಧನೆ ಮಾಡುವ, ವಿಚಾರ ಸಂಕಿರಣಗಳನ್ನು ನಡೆಸುವುದರ ಜೊತೆಗೆ ಹೊಸ ಬಗೆಯ ಚಿಂತನೆಗಳನ್ನು ನಡೆಸುತ್ತಿರುವ “ವಾಲ್ಮೀಕಿ ಅಧ್ಯಯನ ಪೀಠ” ಮತ್ತು ಸಂಚಾಲಕರಾದ ಡಾ.ಮಂಜುನಾಥ ಬೇವಿನಕಟ್ಟಿ ಯವರು ಅಭಿನಂದನೆಗೆ ಅರ್ಹರು ಎಂದು ಹೇಳಲು ಅತಿಶಯೋಕ್ತಿ ಎನಿಸದು.

ವಾಲ್ಮೀಕಿ ಅಧ್ಯಯನ ಪೀಠ ಸದಾ ಒಂದಲ್ಲ ಒಂದು ರೀತಿಯ ಕಾರ್ಯಗಳಲ್ಲಿ ತೊಡಗಿರುತ್ತದೆ. ದಿನಾಂಕ ೧೬, ೧೭, ೧೮ನೇ ಫೆಬ್ರವರಿ ತಿಂಗಳಲ್ಲಿ ಬಾಗಲಕೋಟೆ ಜಿಲ್ಲೆಯ ಬೀಳಗಿ (ನಾಗರಾಳ)ಯಲ್ಲಿ “ಸಾಂಸ್ಕೃತಿಕ ಅನನ್ಯತೆ ಮತ್ತು ಹಲಗಲಿ ಬಂಡಾಯ” ಎನ್ನುವ ವಿಷಯದ ಕುರಿತು ವಿಚಾರ ಸಂಕಿರಣವನ್ನು ಅಧ್ಯಯನ ಪೀಠದಿಂದ ಹಮ್ಮಿಕೊಳ್ಳಲಾಗಿತ್ತು.

ಒಂದು ಸಮುದಾಯದ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವಂತ ಕಾರ್ಯ ಇದಾಗಿದೆ. -‘ನಾಯಕ’ ಸಮುದಾಯದ ವೀರ ಸಂಸ್ಕೃತಿಯ ಮೇಲೆ ಪ್ರಾದೇಶಿಕವಾದ ಇಂತಹ ಸಮಾರಂಭ ಗಳು, ವಿಚಾರ ಸಂಕಿರಣಗಳು, ಚರ್ಚೆಗಳು ನಡೆಯುತ್ತಿರುವುದು ವಾಲ್ಮೀಕಿ ಅಧ್ಯಯನ ಪೀಠದ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. “ಒಂದು ಸಮುದಾಯದ ಸಂಸ್ಕೃತಿಯನ್ನು ಲಿಖಿತ ರೂಪದಲ್ಲಿ ಬರೆದಿಟ್ಟರೆ ಅದು ಅಕ್ಷರಸ್ಥ ಲೋಕಕ್ಕೆ ಮಾತ್ರ ಕಾಣಬಹುದು. ವಿಶಾಲವಾದ ಅನಕ್ಷರಸ್ಥ ಹಳ್ಳಿಗರನ್ನು, ದುಡಿಯುವ ಸಮುದಾಯವನ್ನು ತಲುಪುವುದು ಬಹಳ ಮುಖ್ಯ. ಆ ಕಾರಣಕ್ಕಾಗಿ ಇಂತಹ ಗಮನಾರ್ಹ ಕೆಲಸವನ್ನು ವಾಲ್ಮೀಕಿ ಅಧ್ಯಯನ ಪೀಠದ ಸಂಚಾಲ ಕರು ಮಾಡುತ್ತಿದ್ದಾರೆ. ಅದರ ಜೊತೆಗೆ ಸಮುದಾಯದ ನಾಯಕರು, ಸಂಘ ಸಂಸ್ಥೆಗಳು ಪಾಲ್ಗೊಳ್ಳುತ್ತಿರುವುದು ಸಂಚಾಲಕರ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಂತೆ. “ತಳ ಸಂಸ್ಕೃತಿಯನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಬೇಕು” ಎನ್ನುವ ಮಾತು ಕೇಳಿಬರುತ್ತದೆ. ಈ ಹಿನ್ನಲೆಯಲ್ಲಿ ಅಧ್ಯಯನ ಪೀಠ ನಿರತವಾಗಿದೆ.

ಸಮುದಾಯಗಳು ಸಾಂಸ್ಕೃತಿಕವಾಗಿ, ಬೌದ್ದಿಕವಾಗಿ ಮುಂದುವರಿಯಬೇಕಾದರೆ ಇಂತಹ ಕೆಲಸ ಕಾರ್ಯಗಳು ತುಂಬಾ ಅವಶ್ಯ ಮತ್ತು ಅನಿವಾರ್ಯವು ಕೂಡ. ಕರ್ನಾಟಕ ಇತಿಹಾಸ ದಲ್ಲಿ “ಹಲಗಲಿ ಬಂಡಾಯ” ಒಂದು ಚಾರಿತ್ರಿಕ ಘಟ್ಟ ಎಂದು ಹೇಳಿದರೆ ತಪ್ಪಾಗದು. ದೇಶವನ್ನು ಕಟ್ಟುವಲ್ಲಿ ತಮ್ಮ ಕೆಚ್ಚನ್ನು, ಜೀವದ ಹಂಗುತೊರೆದು ಹೋರಾಡಿದರು. “ತಾಯಿ ಮತ್ತು ತಾಯ್ನಡು ಸ್ವರ್ಗಕ್ಕಿಂತ ಮಿಗಿಲು” ಎನ್ನುವ ಭಾವನೆಯಿಂದ ಭಯ, ಭಕ್ತಿಯಿಂದ ಹೋರಾಡಿದ ಒಂದು ಸಮುದಾಯದ ಸಂಸ್ಕೃತಿಯ ಮೇಲೆ ಬೆಳಕನ್ನು ಚೆಲ್ಲುವಕಾರ್ಯ ಈ ವಿಚಾರ ಸಂಕಿರಣ ಮಾಡಿದೆ. ಒಂದು ಸಮುದಾಯದ ಉನ್ನತವಾದ ಸಂಸ್ಕೃತಿಯನ್ನು ಮತ್ತು ವಿವಿಧ ನೆಲೆಯಿಂದ ವಿಷಯವನ್ನು ಸಂಗ್ರಹಿಸಿಕೊಂಡು ಪ್ರಬಂಧವನ್ನು ವಿಚಾರ ಸಂಕಿರಣದಲ್ಲಿ ಪ್ರಸ್ತುತ ಪಡಿಸಲಾಯಿತು.

ಬಾಗಲಕೋಟೆ ಜಿಲ್ಲೆಯ ವಾಲ್ಮೀಕಿ ಸಮುದಾಯದ ಸ್ಥಿತಿಗತಿಗಳ ಕುರಿತು ನಡೆದ ಗೋಷ್ಠಿಯಲ್ಲಿ ಒಂದು ಸಮುದಾಯವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಮಹಿಳಾ ಸಂವೇದನೆ ನೆಲೆಯಿಂದ ಆ ಸಮುದಾಯದ ಸಾಮಾಜಿಕ ಕೊಡುಗೆಗಳು ಕುರಿತು ಅತ್ಯುತ್ತಮವಾದ ವಿಷಯಗಳನ್ನು ಪ್ರಬಂಧಕಾರರು ಪ್ರಸ್ತುತಪಡಿಸಿದರು. “ಬೇಡ ಸಮುದಾಯದ ಸಾಂಸ್ಕೃತಿಕ ವೀರರು ಕುರಿತು ಉತ್ತಮ ಉಪನ್ಯಾಸ ನಡೆಯಿತು ಮತ್ತು ಸಮುದಾಯದ ನಂಬಿಕೆಗಳು, ವಿಧಿ-ವಿಧಾನಗಳು, ದೈವಗಳು, ಜಾತ್ರೆಗಳು, ಉತ್ಸವಗಳ ಕುರಿತು ಗಮನಾರ್ಹವಾದ ವಿಷಯಗಳನ್ನು ಮಂಡಿಸಲಾಯಿತು.

“ಆಧುನಿಕ ಜಗತ್ತು ಮತ್ತು ತಳಸಮುದಾಯಗಳು” ಎನ್ನುವ ವಿಷಯದಡಿಯಲ್ಲಿ ಅನೇಕ ಪ್ರಬಂಧಕಾರರು ಇಂದಿನ ಜಾಗತೀಕರಣದ ಸಂದರ್ಭದಲ್ಲಿ ತಳಸಮುದಾಯದ ಸ್ಥಿತಿಗತಿ ಕುರಿತು ಬಹಳ ಗಂಭೀರವಾದ ಚರ್ಚೆಗಳು ನಡೆದವು. ಇಡೀ ವಿಚಾರ ಗೋಷ್ಠಿಗಳಲ್ಲಿಯೇ ಇದು ಅತ್ಯಂತ ಗಮನಾರ್ಹವಾದ ವಿಷಯಗಳ ಮೇಲಿನ ಚರ್ಚೆ ಸಭೆಯನ್ನು ರಂಗೇರಿಸು ವಂತಿತ್ತು. ಸಿಂಧೂರ ಲಕ್ಷ್ಮಣನ ಜೀವನ ಮತ್ತು ಹೋರಾಟದ ಕುರಿತು ಆತನ ವ್ಯಕ್ತಿತ್ವದ ವಿವಿಧ ನೆಲೆಗಳಿಂದ ವಿಷಯವನ್ನು ಮಂಡಿಸಲಾಯಿತು. ಎಲ್ಲಾಗೋಷ್ಠಿಗಳಲ್ಲಿ ಚರ್ಚೆಗೆ ಅವಕಾಶವಿರುತ್ತಿತ್ತು. ಸತತ ೩ ದಿನಗಳವರೆಗೂ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳ ತಂಡ ಪ್ರಬಂಧಮಂಡನೆ, ಚರ್ಚೆ, ಅಭಿಪ್ರಾಯ ಮಂಡನೆಯ ವಿಭಿನ್ನ ಕಾರ್ಯ ಗಳಲ್ಲಿ ತೊಡಗಿದ್ದರು. ವಿಚಾರ ಸಂಕಿರಣದುದ್ದಕ್ಕೂ ಜನಪದ ಕಲೆಗಾರರನ್ನು ವೇದಿಕೆಯ ಮೇಲೆ ಅವರ ಕಲೆಯೊಂದಿಗೆ ಪರಿಚಯಿಸಲಾಯಿತು.

ದಿಗಂಬರೇಶ್ವರ ಮಠದಲ್ಲಿ ಉತ್ತಮವಾದ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿತ್ತು. ದಿನನಿತ್ಯ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಪದ ಕಲಾ ತಂಡಗಳಿಂದ ಪ್ರದರ್ಶಿಸಲ್ಪಡುತ್ತಿದ್ದವು. ಜನರು ಉತ್ಸಾಹದಿಂದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ವಿಶ್ವವಿದ್ಯಾಲಯದ ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳನ್ನು ನಾಗರಾಳದ ದಕ್ಷಿಣಭಾಗದ ಗುಡ್ಡದಲ್ಲಿರುವ ‘ಕಪ್ಪರಪಡಿಯವ್ವ’ ದೇವಿಯ ಆವರಣದಲ್ಲಿನ ಸಿಂಧೂರ ಲಕ್ಷ್ಮಣನನ್ನು ಬ್ರಿಟೀಷರು ಮೋಸದಿಂದ ಕೊಂದು ಸ್ಥಳವನ್ನು ತೋರಿಸಿದರು.

ಇಂತಹ ವಿಚಾರ ಸಂಕಿರಣಗಳು ಕೇವಲ ಆ ಸಮುದಾಯವಿರುವ ಪ್ರದೇಶಗಳಲ್ಲಿ ನಡೆಯದೆ, ಸಮುದಾಯಗಳ ಬೌದ್ದಿಕ, ಸಾಂಸ್ಕೃತಿಕ ಸಂಘಟಿತರಾಗಲೂ ಎಲ್ಲಾ ಕಡೆಗಳಲ್ಲೂ ಕಾರ್ಯಕ್ರಮಗಳನ್ನು ನಡೆಸಲು ವಿಶ್ವವಿದ್ಯಾಲಯ ಶ್ರಮಿಸಬೇಕು. ಇಂತಹ ಕಾರ್ಯಕ್ರಮದ ಮೂಲಕ ವಾಲ್ಮೀಕಿ ಅಧ್ಯಯನ ಪೀಠ ಒಂದು ಸಮಾಜಮುಖಿ ಸಂಸ್ಕೃತಿಯನ್ನು ಚರಿತ್ರೆಯನ್ನು ಸಮುದಾಯದ ಅಂಗಳಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕಾಗಿದೆ.

* * *

ಹಲಗಲಿ ಬೇಡರು

ಹಾಳ್-ಆಗಿ ಹೋದಿತೊ ಇಷ್ಟು
ವರ್ಣಿಸಿ ಹೇಳಲು ಎಷ್ಟು

ಯೆಲ್ಲ ತಗೊಂಡರೊ ಶಿಕ್ಕ್-ಅಷ್ಟು
ಸರ್ದ ಮಾಡೆರ ಹಲಗಲಿ ಸುಟ್ಟು

ಬೂದಿ ಮಾಡೆರ ಹಲಗಲಿ ಸುಟ್ಟು
ಹಲಗಲಿ ಗುರ್ತ ಎಳ್ಳಷ್ಟು

ಕಾಣಸ್ತ ಹೋದಿತೊ ಕೆಟ್ಟು
ವರ್ಣಿಸಿ ಹೇಳಿದೆನು ಇಷ್ಟು ||ಯೇರ||

ಕುರ್ತಕೋಟಿ-ಕಲ್ಮೇಸನ ದಯದಿಂದ ಹೇಳುದ-ಕೇಳುದಕ