ಹದಿನೆಂಟನೇ ಶತಮಾನದ ಉತ್ತರಾರ್ಧ ಮತ್ತು ಹತ್ತೊಂಬತ್ತನೇ ಶತಮಾನದ ಆರಂಭದ ಕಾಲಘಟ್ಟದಲ್ಲಿ ಉಂಟಾದ ಬ್ರಿಟೀಷರ ವಸಾಹತುಶಾಹಿಯ ವಿರುದ್ಧದ ಪ್ರತಿಭಟನೆ ಗಳ ಹಿನ್ನೆಲೆಯಲ್ಲಿ ದೇಶಾದ್ಯಂತ ಬದಲಾವಣೆಯ ಗಾಳಿ ಬೀಸತೊಡಗಿತು. ಅವರು ಜಾರಿಗೆ ತಂದ ಅನೇಕ ನಿಷೇಧಗಳ ಮಧ್ಯ ಸಿಲುಕಿಕೊಂಡಿದ್ದು ಆಯುಧಗಳ ನಿಷೇಧವು ಒಂದು. ಇದರಿಂದ ಸ್ವಾತಂತ್ರ್ಯ ಕಿಚ್ಚು ದೇಶಾದ್ಯಂತ ಹಬ್ಬಲು ಕಾರಣವಾಯಿತು. ಹಾಗೆಯೇ ಒಂದು ಸಮುದಾಯಕ್ಕೆ ನಾಯಕತ್ವದ ಅಸ್ತಿತ್ವವು ದೊರಕಿತೆಂದೇ ಹೇಳಬಹುದು. ಈ ವಿಷಯದ ಹಿನ್ನಲೆಯಲ್ಲಿ ನಾವು ಒಂದು ನಾಡಿನ ಸಮುದಾಯದ ಅಧ್ಯಯನವನ್ನು ನೋಡುವಾಗ ಆ ಸಮುದಾಯದಲ್ಲಿನ ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ನೋಡುವುದು ಸೂಕ್ತ ಮತ್ತು ಸಮಂಜಸವಾದದ್ದು ಕೂಡ.

ಈ ದೃಷ್ಟಿಯಲ್ಲಿ ‘ಸಾಂಸ್ಕೃತಿಕ ಅನನ್ಯತೆ ಮತ್ತು ಹಲಗಲಿ ಬಂಡಾಯ’ ಕುರಿತಾದ ವಿಷಯವನ್ನು ಇಟ್ಟುಕೊಂಡು ಸಾಂದರ್ಭಿಕ ನೆಲೆಯಲ್ಲಿ ನಿಂತು ನೋಡುವುದಿದೆಯಲ್ಲ, ಅದು ಹಲಗಲಿಯ ಸುತ್ತಲಿನ ಪ್ರದೇಶ ಮತ್ತು ಆ ಬಂಡಾಯದಲ್ಲಿ ತೊಡಗಿದ ಹಲಗಲಿಯ ಬೇಡರ ವಾಸ್ತವ ಸ್ಥಿತಿ ಮತ್ತು ಅವರ ಸಾಂಸ್ಕೃತಿಕ ಮಹತ್ವವನ್ನು ತಿಳಿಯಲು ಸಾಧ್ಯವಾಗಿದೆ. ಇದರ ವಿಷಯವಾಗಿ ನಾಡಿನ ಹೆಮ್ಮೆಯಾಗಿರುವ ನಮ್ಮ ‘ಕನ್ನಡ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠ ಹಮ್ಮಿಕೊಂಡ ವಿಚಾರ ಸಂಕಿರಣ ಮಹತ್ವದ ಅಂಶವಾಗಿದೆ.

‘ನಾಗರಾಳ’ ಎಂಬುದು ‘ಬೇಡ’ಸಮುದಾಯವು ತಮ್ಮ ಕಾರ್ಯಸ್ಥಾನವನ್ನಾಗಿ ಸ್ವಾತಂತ್ರ್ಯ ಪೂರ್ವದಿಂದಲೇ ಹೊಂದಿಕೊಂಡಿದ್ದು ಇತಿಹಾಸ ಪ್ರಸಿದ್ಧ ಕಾರಣ ಆ ಗ್ರಾಮದ ದಕ್ಷಿಣದಲ್ಲಿನ ಕಾಡು ಅವರ ಕಾರ್ಯಸ್ಥಾನವಾಗಿತ್ತು. ಅಲ್ಲಿ ಸಿಂಧೂರ ಲಕ್ಷ್ಮಣ ಪ್ರಮುಖವಾಗಿ ಆ ಸಮು ದಾಯದ ಸಾಂಸ್ಕೃತಿಕ ನಾಯಕನಾಗಿ ಗೋಚರಿಸುತ್ತಾನೆ. ಬ್ರಿಟೀಷರು ಹೇರಿದ ನಿಷೇಧದಲ್ಲಿ ‘ನಿಶ್ಯಸ್ತ್ರೀಕರಣ’ವು ಪ್ರಮುಖವಾದದ್ದು. “ಬೇಡ ಸಮುದಾಯದವರಿಗೆ ಶಸ್ತ್ರಗಳೇ ಆಧಾರ ಅದರಿಂದಲೇ ಅವರ ಜೀವನ, ಹೀಗಾಗಿ ಆ ನಿಶ್ಯಸ್ತ್ರೀಕರಣವು ಬೇಡ ಜನಾಂಗದ ಚರಿತ್ರೆಯನ್ನೇ ಬದಲಾಯಿಸಿತು ಎಂದು ಹೇಳಬಹುದು. ಸಮುದಾಯದ ಚರಿತ್ರೆಯಲ್ಲಿ ‘ಸಿಂಧೂರ ಲಕ್ಷ್ಮಣ’ ಸಾಂಸ್ಕೃತಿಕ ನಾಯಕನಾಗಿ ಗೋಚರಿಸುತ್ತಾನೆ. ಬ್ರಿಟೀಷರು ಹೇರಿದ ನಿಷೇಧದಲ್ಲಿ ನಿಶ್ಯಸ್ತ್ರೀ ಕರಣ’ವು ಪ್ರಮುಖವಾದದ್ದು. “ಬೇಡ ಸಮುದಾಯದವರಿಗೆ ಶಸ್ತ್ರಗಳೇ ಆಧಾರ. ಅದರಿಂದಲೇ ಅವರ ಜೀವನ, ಹೀಗಾಗಿ ಆ ನಿಶ್ಯಸ್ತ್ರೀಕರಣವು ಬೇಡ ಸಮುದಾಯದ ಚರಿತ್ರೆಯನ್ನೇ ಬದಲಾಯಿಸಿತು ಎಂದು ಹೇಳಬಹುದು. ನಾಡಿನ ಚರಿತ್ರೆಯಲ್ಲಿ “ಸಿಂಧೂರು ಲಕ್ಷ್ಮಣ” ಸಾಂಸ್ಕೃತಿಕ ನಾಯಕನಾಗಿ ಒಂದು ಸಮುದಾಯವನ್ನು ಕಟ್ಟಲು ಸಾಧ್ಯವಾಯಿತು ಮತ್ತು ಅದು ಚರಿತ್ರೆಯ ಪುಟಗಳಲ್ಲಿ ಅಜರಾಮರವಾಯಿತು.

ಮೊದಲ ಗೋಷ್ಠಿಯಲ್ಲಿ “ಸಾಂಸ್ಕೃತಿಕ ಅನನ್ಯತೆ ಮತ್ತು ಹಲಗಲಿ ಬಂಡಾಯ” ಎಂಬ ಪ್ರಮುಖ ಅಂಶವನ್ನು ಎತ್ತಿಕೊಂಡು ಆ ಬಂಡಾಯಕ್ಕೆ ಕಾರಣವಾದ ಅಂಶಗಳು ನಂತರದ ದಿನಗಳಲ್ಲಿ ಜಾತಿ ಮತ್ತು ವರ್ಗದ ನೆಲೆಗಳನ್ನು ಗಮನದಲ್ಲಿರಿಸಿಕೊಂಡು ಗೋಷ್ಠಿಯಲ್ಲಿ “ನಿಶ್ಯಸ್ತ್ರೀಕರಣ ಕಾಯಿದೆ”ಯಿಂದ ವಾಲ್ಮೀಕಿ ಸಮುದಾಯದ ಮೇಲೆ ಉಂಟಾದ ಪರಿಣಾಮ ಗಳನ್ನು ಮತ್ತು ಸ್ಥಿತ್ಯಂತರಗಳನ್ನು ಗಮನಿಸುತ್ತಾ ಆ ಸಮುದಾಯದ ಮೇಲೆ ಸಾಮ್ರಾಜ್ಯಶಾಹಿ ಗಳು ಉಂಟು ಮಾಡಿದ ಪರಿಣಾಮಗಳನ್ನು ಹಾಗೂ ಅಂದಿನ ಸಂದರ್ಭದಲ್ಲಿ ಸ್ಥಳೀಯ ಯುದ್ಧಾಸ್ತ್ರಗಳ ಆಳ್ವಿಕೆಯೇನು ಎಂಬುದನ್ನು ತಿಳಿಯದೆ ಮಾಡಿದ ಕಾಯಿದೆಯಿಂದ ಹಲಗಲಿಯ ಬಂಡಾಯ ಉಂಟಾಯಿತು ಎಂಬ ಅಭಿಪ್ರಾಯ ವ್ಯಕ್ತಗೊಂಡವು.

ನಾವು ಗಮನಿಸುವ ಅಂಶವೇನೆಂದರೆ, ಒಬ್ಬ ಮನುಷ್ಯನನ್ನು ನಿಶ್ಯಕ್ತಗೊಳಿಸಿ ಅವನ ಮೇ ದಾಳಿ ಮಾಡುವುದರಿಂದ ಎಂಥ ಷಂಡನು ಬಡಿದಾಡುತ್ತಾನೆ. ಅಂತಹದರಲ್ಲಿ ಗಂಡು ಮೆಟ್ಟಿನ ನಾಡಾದ ಈ ಭಾಗದ ಜನ, ಮತ್ತು ಅದೆಷ್ಟೋ ಕ್ರೂರ ಪ್ರಾಣಿಗಳನ್ನು ಬೇಟೆಯಾಡು ವುದಕ್ಕೆ ತಮ್ಮ ಜೀವನದ ಕಾಯಕ ಮಾಡಿಕೊಂಡಂತವರನ್ನೇ ಹಿಡಿದು ಕಟ್ಟಿಹಾಕುವ ತಂತ್ರವಿದೆಯಲ್ಲ ಅದು ಸರಿಯಾದುದಲ್ಲ ಎಂಬುದಕ್ಕೆ ಈ ಹಲಗಲಿಯ ಬಂಡಾಯ ಸಾಕ್ಷಿ ಯಾಗಿ ನಿಲ್ಲುತ್ತದೆ.

ಎರಡನೇ ಗೋಷ್ಠಿಯಲ್ಲಿ “ಬಾಗಲಕೋಟೆ ಪರಿಸರದ “ವಾಲ್ಮೀಕಿ ಸಮುದಾಯದ ಸ್ಥಿತಿಗತಿಗಳು” ಪ್ರಬಂಧ ಮಂಡನೆಯಲ್ಲಿ ಪ್ರಮುಖ ಅಂಶಗಳ ವಿಚಾರ ಮಂಡನೆಗಳಾದವು. ನಾವು ವಾಸಿಸುವ ಸುತ್ತಲಿನ ಪ್ರದೇಶದ ಚಾರಿತ್ರಿಕ ನೆಲೆಯನ್ನು ತಿಳಿಯಲು ಹಾಗೂ ಆರ್ಥಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಆ ಪ್ರದೇಶದ ಒಂದು ಸಮುದಾಯ ಸಾಧಿಸಿದ ಅಭಿವೃದ್ದಿಯನ್ನರಿಯಲು ಸೂಕ್ತ ವೇದಿಕೆಯಾಗಿದ್ದು ಇದು ಅಂದು ಮಂಡನೆಯಾದ ಎಲ್ಲ ವಿಷಯಗಳು ಹಿಂದೆ ಕೇವಲ ಕಾಡೇ ತಮ್ಮ ಮನೆ ಮತ್ತು ಜೀವನದ ವಾಸ್ತವ ನೆಲೆ ಎಂದು ತಿಳಿದಿದ್ದ ಸಮುದಾಯ ಇವತ್ತು ಬೆಳೆದು ನಿಂತ ಪರಿಯನ್ನು ವಿವರಿಸ ಲಾಯಿತು.

“ಬೇಡ ಸಮುದಾಯದ ಆಚರಣಾತ್ಮಕ ನೆಲೆಗಳು” ಎಂಬ ೩ನೇ ಗೋಷ್ಠಿಯಲ್ಲಿ ವ್ಯಕ್ತ ವಾದ ಅವರ ನಂಬಿಕೆ, ವಿಧಿ-ವಿಧಾನಗಳನ್ನು ಪುರೋಹಿತಶಾಹಿ ವರ್ಗ ತನ್ನ ಅಡಿಯಲ್ಲಿಟ್ಟು ಕೊಳ್ಳುವ ಮೂಲಕ  ಕೆಳಸಮುದಾಯಗಳನ್ನು ಹತ್ತಿಕ್ಕುವ ಪ್ರಯತ್ನ ಯಾವಾಗಿನಿಂದಲೂ ನಡೆದುಬರುತ್ತಿದೆ ಎಂಬ ವಿಚಾರಗಳು ಸಂಕಿರಣದ ವೇದಿಕೆಯಲ್ಲಿ ವ್ಯಕ್ತವಾದವು.

“ಆಧುನಿಕ ಜಗತ್ತು ಹಾಗೂ ತಳಸಮುದಾಯಗಳು” ಎಂಬ ೪ನೇ ಗೋಷ್ಠಿಯಲ್ಲಿ ನಮ್ಮ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಮಂಡಿಸಿದ ಪ್ರಬಂಧಗಳು ವೇದಿಕೆಗೆ ಸೂಕ್ತವಾಗಿದ್ದವು. ಜಾಗತೀಕರಣವೆಂಬುದು ಪ್ರಾರಂಭದಿಂದಲೂ ತನ್ನ ಹಿಡಿತವನ್ನು ಸಾಧಿಸುತ್ತಾ ಬಂದದ್ದು. ಅದು ಯಾವುದೇ ಸಮುದಾಯವನ್ನು ಬಿಟ್ಟಿಲ್ಲವೆಂಬುದು ಈ ವಿಷಯವಾಗಿ ಮಂಡಿಸುವ ಪ್ರಬಂಧಗಳು ವಾಸ್ತವ ನೆಲೆಯಲ್ಲಿ ಅವರ ತಳಸಮುದಾಯವನ್ನು ಜಾಗತೀಕರಣ ಹಿಡಿದಿಟ್ಟುಕೊಂಡು, ಸಮುದಾಯದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು, ಅದರ ಭೀಕರ ಪರಿಣಾಮಗಳ ಬಗೆಗೆ ನಡೆದ ಚರ್ಚೆಯಿಂದ, ಬಹುಶಃ ಹಳ್ಳಿಗಾಡಿನ ಜನತೆಯು ಇವತ್ತಿನ ದಿನಗಳಲ್ಲಿ ಈ ಜಾಗತೀಕರಣವನ್ನು ಅರಿತು ಅದರಿಂದಾದ ಪರಿಣಾಮಗಳನ್ನು ತಿಳಿಯಲು ಉತ್ಸುಕರಾಗಿದ್ದಾರೆ ಎಂಬುದು, ಮತ್ತು ಇದು ಒಳ್ಳೆಯ ಬೆಳವಣಿಗೆಯು ಕೂಡ ಆಗಿದೆ ಎನ್ನುವಂತಹದ್ದು.

“ಸಿಂಧೂರ ಲಕ್ಷ್ಮಣ ಹಾಗೂ ಸಂಘರ್ಷದ ಸಂಕಥನ” ಎಂಬ ಐದನೆ ಮತ್ತು ಕೊನೆಯ ಗೋಷ್ಠಿಯಲ್ಲಿ ವ್ಯಕ್ತವಾದ ವಾಲ್ಮೀಕಿ ಸಮುದಾಯದ ಸಾಂಸ್ಕೃತಿಕ ನಾಯಕನಾದ ಸಿಂಧೂರ ಲಕ್ಷ್ಮಣನನ್ನು ಲಾವಣಿ, ಬಯಲಾಟ, ಸಾಮಾಜಿಕ ನಾಟಕಗಳಲ್ಲಿ ಮತ್ತು ಜಾನಪದ ಸಾಹಿತ್ಯ ಹಾಗೂ ಶಿಷ್ಟ ಸಾಹಿತ್ಯದಲ್ಲಿ ಕಟ್ಟಿಕೊಟ್ಟ ವಿಚಾರಗಳು, ಅಲ್ಲದೆ ಲಕ್ಷ್ಮಣನಿಗೆ ಉಂಟಾದ ಅವಮಾನ ಹಾಗೂ ಅಭಿಮಾನದ ನೆಲೆಯಲ್ಲಿ ಅಳಿಯಗಳ ಹಿನ್ನೆಲೆಯಲ್ಲಿ ಲಕ್ಷ್ಮಣ ಮಹಿಳಾ ಸಂವೇದನೆ, ಪರೋಪಕಾರಿ ಧೈರ್ಯಸಾಹಸಿಯಾಗಿ ಅಂದಿನ ಮತ್ತು ಇಂದಿನ ಪರಿಸ್ಥಿತಿಯ ಚಿತ್ರಣ ವೇದಿಕೆಯಲ್ಲಿ ಪ್ರಸ್ತುತಗೊಂಡವು. ನಾಗರಾಳದ ದಕ್ಷಿಣದ ಕಾಡಿನ ಕುರುಹು ಇರು ವಲ್ಲಿ ಸಾಲಾಗಿ ಬೆಳೆದು ನಿಂತ ಕಲ್ಲಿನ ಬೆಟ್ಟದಡಿಯಲ್ಲಿರುವ “ಕಪ್ಪರ ಪಡಿಯವ್ವ” ಎಂಬ ದೇವತೆ ಲಕ್ಷ್ಮಣನ ಆರಾಧ್ಯದೈವ ಮತ್ತು ಒಂದು ಸಮುದಾಯದ ಮೇಲೆ ಉಂಟುಮಾಡುವ ದೈವಿಕ ಪರಿಣಾಮಗಳ ಜೊತೆಗೆ ಸಿಂಧೂರ ಲಕ್ಷ್ಮಣ ಇಂದಿನ ಕಾಲಘಟ್ಟಕ್ಕೆ ಎಷ್ಟು ಪ್ರಸ್ತುತ ಎಂಬುದು ಗೊತ್ತಾಗುತ್ತದೆ.

ಈ ವಿಚಾರ ಸಂಕಿರಣವನ್ನು ಕನ್ನಡ ವಿಶ್ವವಿದ್ಯಾಲಯ ವಾಲ್ಮೀಕಿ ಅಧ್ಯಯನ ಪೀಠ ದೊಂದಿಗೆ ಕೈಜೋಡಿಸಿ ವೈಶಿಷ್ಟ್ಯಪೂರ್ಣವಾಗಿ ನಡೆಸಿಕೊಟ್ಟ ಕೀರ್ತಿ ನಾಗರಾಳದ ದಿಗಂಬರೇಶ್ವರ ಮಠಕ್ಕೆ ಮತ್ತು ಗ್ರಾಮದ ಯುವಕ ಮಂಡಳದ ಸದಸ್ಯರಿಗೆ ಹಾಗೂ ಗ್ರಾಮಸ್ಥ ರಿಗೆ ಸಲ್ಲಬೇಕು. ಗ್ರಾಮಕ್ಕೆ ಹೋದ ಎಲ್ಲರಿಗೂ ಉತ್ತರ ಕರ್ನಾಟಕದ ಊಟ ಬಡಿಸುವುದರ ಮೂಲಕ ಅತಿಥಿಗಳ ಮನಸ್ಸನ್ನು ಗೆದ್ದವರು ಅವರು. ಅಲ್ಲದೆ ಆ ಗ್ರಾಮದ ಜನತೆ ತಮ್ಮ ಮನೆಯ ಕಾರ್ಯಕ್ರಮದಂತೆ ಉತ್ಸಾಹದಿಂದ ಕೂಡಿಕೊಂಡು ಪಾಲ್ಗೊಳ್ಳುವ ರೀತಿ ಮೆಚ್ಚು ವಂತದ್ದು.

* * *