ಈ ನಮ್ಮ ಕನ್ನಡ ನಾಡು ರಾಜ ಮಹಾರಾಜರಿಂದಲೂ, ವೀರರು, ಶೂರರು, ಧೈರ್ಯ ಶಾಲಿಗಳು, ಸಾಹಸಿಗಳು, ಗಟ್ಟಿಗರನಾಡು ಎನಿಸಿಕೊಂಡಿದೆ. ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ, ಮೊದಲಾದ ರಾಜಮನೆತನಗಳು ಎತ್ತಿತೋರಿಸಿ ಕೊಂಡಿವೆ. ಎಷ್ಟೆಷ್ಟೋ ಜನ ನಮ್ಮ ನಾಡಿನ ವೀರಪುರುಷರು, ವೀರಸ್ತ್ರೀಯರು ನಮ್ಮ ನಾಡಿಗಾಗಿ ನಮ್ಮ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟಿರುವರು. ಕಲಿಗಳು, ಸಾಹಸಿಗರು, ಜಟ್ಟಿಗಳು ಮುಂತಾದವರು ಇನ್ನೂ ಅನೇಕ ಜನವೀರರು, ಧೀರರು ಆಳಿದ ಮತ್ತು ಮೆರೆಸಿಕೊಂಡಿರು ವಂತಹ ನಮ್ಮ ನಾಡಿನಲ್ಲಿ ಹಲವಾರು ಜನರು ಬ್ರಿಟೀಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ತೆತ್ತಿರುವರು. ಅಂಥವರಲ್ಲಿ ಸಿಂಧೂರ ಲಕ್ಷ್ಮಣ, ಹಲಗಲಿಬೇಡರು, ಮದಕರಿ ನಾಯಕ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ನರಗುಂದ ಬಾಬಾ ಸಾಹೇಬ, ಮುಂಡರಗಿ ಬೀಮರಾಯ, ಮೈಲಾರಮಹಾದೇವ, ಸಂಗೊಳ್ಳಿ ರಾಯಣ್ಣ, ರಾಜವೆಂಕಟಪ್ಪ ನಾಯಕ ಮುಂತಾದವರು ಬಹುಸಂಖ್ಯೆಯಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮದೇ ಆದ ವೀರತನವನ್ನು ತೋರಿ ಉದಾತ್ತನಾಯಕ ನಾಯಕಿಯರಾಗಿ ಮರಣ ಹೊಂದಿದ್ದಾರೆ.

ದುರಂತ ಅಂದರೇನು? ದುರಂತ ಏಕೆ ಸಂಭವಿಸುತ್ತದೆ? ಹೇಗೆ ಸಂಭವಿಸುತ್ತದೆ? ಹೇಗೆ ಇರುತ್ತದೆ? ಅನ್ನುವುದರ ಬಗ್ಗೆ ಎರಡು ಮಾತಿನಲ್ಲಿ ಚರ್ಚಿಸುವುದಾದರೆ, ದುರಂತ ನಾಯಕನು ಉದಾತ್ತವಾದ ಗುಣಸ್ವಭಾವಗಳನ್ನು ಹೊಂದಿದವನಾಗಿದ್ದು, ಸಮಾಜದಲ್ಲಿ ಉನ್ನತ ಪದವಿ ಯಲ್ಲಿದ್ದು, ಇತರರಿಂದ ಅತಿಶಯವಾದ ಪ್ರೀತಿ ಗೌರವಗಳನ್ನು ಪಡೆಯುತ್ತಿದ್ದರೂ ಅವನದೇ ಆದ ಯಾವುದೋ ಕರ್ಮದ ಫಲವಾಗಿ ಅವನಿಗೆ ವಿಪತ್ತು ಬರುತ್ತದೆ. ‘ಭಗವದ್ಗೀತೆಯಲ್ಲಿ ಕೃಷ್ಣ ಹೇಳುವುದು ಇದನ್ನೇ ‘ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಷು ಕದಾಚನಂ’ ಪೂರ್ವ ಜನ್ಮ ಹಾಗೂ ಪುನರ್ ಜನ್ಮದ ಕಲ್ಪನೆ ನಮ್ಮ ಸಂಸ್ಕೃತಿಯಲ್ಲಿರುವಂತೆ ಗ್ರೀಕ್‌ನಾಟಕಗಳಲ್ಲಿ ಮೂರು ತಲೆಮಾರುಗಳ  ಪಾಪಪುಣ್ಯ ಲೆಕ್ಕಾಚಾರಕ್ಕೆ ಬಂದು ನಾಯಕ ಅವನತಿಯನ್ನು ಕಾಣುತ್ತಾನೆ.

ದುರಂತವು ಅತಿಧಾರುಣವಾದ ವಿಪತ್ತು, ದುಃಖ, ಸಂತಾಪಗಳನ್ನು ವರ್ಣಿಸಿ ಮರಣದಲ್ಲಿ ಮುಕ್ತಾಯವಾಗುತ್ತದೆ. ಗ್ರೀಕ್ ನಾಟಕಗಳಲ್ಲಿ ನಾಯಕನ ಮರಣವೇ ಸಂಭವಿಸಬೇಕೆಂದೇನಿಲ್ಲ ನಾಯಕ ಅತ್ಯಂತ ಹೀನ ಸ್ಥಿತಿಯನ್ನು ತಲುಪಿದರೂ ಅದು ದುರಂತವೇ. ಅದು ಹದ್ದುಗಳು ಅವನೆದೆಯನ್ನು ಬಗೆಯುತ್ತಿದ್ದರೂ ಅವುಗಳನ್ನು ಓಡಿಸಲಾಗದಷ್ಟೂ ದುಸ್ಥಿತಿ ನಾಯಕನಿಗೆ ಬಂದಿರಬಹುದು.

ಸಿಂಧೂರ ಲಕ್ಷ್ಮಣನು ಪ್ರಾಮಾಣಿಕತೆಯಿಂದ ಸರಕಾರದ ಸೇವೆ ಸಲ್ಲಿಸುತ್ತಿರುವ ಓಲೇಕಾರ ನಾಗಿದ್ದನು. ಲಕ್ಷ್ಮಣನ ಅಳಿಯಂದಿರಾದ ನರಸ್ಯಾ, ಸಾಬ, ಗೋಪಾಲರವರು, ಬಡವರ ಬಂಡಾಟ, ಶ್ರೀಮಂತರ ಉಂಡಾಟ ಕಂಡು ರೊಚ್ಚಿಗೆದ್ದು, ಬಡಮಂದಿಯನ್ನೆಲ್ಲ ಒಟ್ಟು ಗೂಡಿಸಿಕೊಂಡು ಹೋಗಿ, ಖೇಡ, ಖಾನಾಪುರದಲ್ಲಿ ದರೋಡೆ ಮಾಡಿ, ಪೊಲೀಸರಿಂದ ತಪ್ಪಿಸಿಕೊಳ್ಳಲು ಸಿಂಧೂರಿಗೆ ಬಂದ ತರುವಾಯ ನಿಜಸ್ಥಿತಿಯನ್ನು ಅರಿತ ಲಕ್ಷ್ಮಣನು ಅಳಿಯಂದಿರಿಗೆ ಬುದ್ದಿವಾದವನ್ನು ಹೇಳುತ್ತಾನೆ. ಆದರೂ ಕ್ರಿಯೆ ಮುಗಿದಿರುವುದರಿಂದ ಪ್ರಯೋಜನವಾಗಲಿಲ್ಲ. ಸಮಯ ಸಂದರ್ಭಕ್ಕೆ ಸಿಲುಕಿ ತನ್ನ ಅಳಿಯಂದರಿಗೆ ಆಶ್ರಯ ನೀಡಿದ್ದು ಲಕ್ಷ್ಮಣನ ಬದುಕಿನ ಚಿತ್ರಣವನ್ನು ಸಂಪೂರ್ಣ ದುರಂತದ ಕಡೆಗೆ ಕೊಂಡೊಯ್ಯು ತ್ತದೆ.  ಎಲ್ಲಾ ಅಂಶಗಳಿಗೂ ಸಿಂಧೂರ ಲಕ್ಷ್ಮಣನೇ ಮೂಲ ಕಾರಣಕರ್ತನೆಂದು ಪೊಲೀಸರು ಅವನನ್ನು ಬಂಧಿಸಿದಾಗ ಅಳಿಯಂದಿರ ಜೊತೆ ಕೂಡಿಕೊಂಡು ಜತ್ತ ಸಂಸ್ಥಾನದ ಜೈಲು ಮುರಿದು ಪರಾರಿಯಾದರು. ಜೈಲು ಮುರಿದು ಪರಾರಿಯಾದ ಲಕ್ಷ್ಮಣ ಮತ್ತು ತಂಡದವರನ್ನು ಆಗಿನ ಬ್ರಿಟೀಷ್ ಸರಕಾರವು ಹುಡುಕುವ ಕಾರ್ಯ ಆರಂಭಿಸಿದರು. ಆಗ ನೇರವಾಗಿ ಹೋರಾಟ ಆರಂಭವಾದದ್ದು ಬ್ರಿಟೀಷ್ ಸರಕಾರದ ಪೊಲೀಸರು ಸಿಂಧೂರಲಕ್ಷ್ಮಣ ಮತ್ತು ತಂಡದವರಿಗೆ ಹಿಡಿಯುವ ಛಲತೊಟ್ಟರು. ಅವರು ಸಿಗಲೇಬಾರದು ಎಂದು ಸುತ್ತಾಡಿದ್ದು, ಅಲ್ಲಿನ ಪರಿಸರದಲ್ಲಿರುವ ಅಡವಿಯೆ ಸಮ್ತ ಸಾಮ್ರಾಜ್ಯವಾಗಿತ್ತು.

ಸಿಂಧೂರ ಲಕ್ಷ್ಮಣನು ತನ್ನನ್ನು ನಂಬಿದ ಜನತೆಗೆ ನ್ಯಾಯವನ್ನು ದೊರಕಿಸಿಕೊಡುವಲ್ಲಿ ಒಬ್ಬ ಪ್ರಾಮಾಣಿಕ ವೀರ ಶೂರನಾಗಿದ್ದನು. ಪ್ರಾಮಾಣಿಕ ಸೇವಕನಾಗಿ ಸಮಾಜಮುಖೀ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದನು. ಸೊಕ್ಕಿದ ಶ್ರೀಮಂತರು ಅನ್ಯಾಯದಿಂದ, ಮೋಸದಿಂದ ಗಳಿಸಿದ ಸಂಪತ್ತನ್ನು ಹಾಡುಹಗಲೇ ದೋಚಿಕೊಂಡು ಸಾಮಾನ್ಯಜನರಿಗೆ ದಾನಮಾಡು ತ್ತಿದ್ದನು. ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು ಮಾಡುವುದರಲ್ಲಿ ಶೂರನಾಗಿದ್ದನು. ಮಾನವಕ್ರಿಯೆಯ ಕರ್ಮಮಹತ್ವ, ಘನತೆ, ಪರಿಪೂರ್ಣತೆಯ ಜೊತೆಗೆ ಶುದ್ಧವಾದ ಭಾವನೆಗಳನ್ನು ಮೈಗೂಡಿಸಿಕೊಂಡಿದ್ದನು.

ಸಿಂಧೂರ ಲಕ್ಷ್ಮಣನ ಬಗ್ಗೆ ಕೇಳಿದಾಗ ರೋಮಾಂಚನವಾಗುತ್ತದೆ. ಆತನಿಟ್ಟ ಗುರಿ ಎಂದೂ ತಪ್ಪಿರಲಿಲ್ಲ. ಓಡುವ ಚಿಗರೆಯನ್ನು ಆಡುವ ಮೊಲವನ್ನು ಚಂಗೆಂದು ಹಿಡಿಯುವ ಕೌಶಲ್ಯ ಅವನಲ್ಲಿ ಕರಗತವಾಗಿತ್ತು. ತನ್ನ ಬೆನ್ನಟ್ಟುವವರಿಗೆ  ಆತನೆಂದೂ ಬೆನ್ನನ್ನು ತೋರಿಸುತ್ತಿರಲಿಲ್ಲ. ಅವನು ಶೂರರ ಬಂಧು. ಮಿತ್ರರ ತಂಡಕಟ್ಟಿಕೊಂಡು, ಅಮಾನವೀಯ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಯುದ್ಧಸಾರಿದ ಧೀಮಂತನಾಗಿದ್ದನು.

ಹೀಗೆ ತಳಸಮುದಾಯದಲ್ಲಿ ಪ್ರತಿಭಟನೆ ಹೇಗೆ ರೂಪಪಡೆದುಕೊಂಡಿರುತ್ತದೆ ಸ್ವಾಭಿ ಮಾನ ಸ್ಫೋಟಗೊಂಡಾಗ ಯಾವ ಹಂತವನ್ನು ಕೂಡ ತಲುಪಬಹುದು. ಒಬ್ಬ ಸಾಮಾನ್ಯ ವ್ಯಕ್ತಿಯು ಅಸಮಾನ್ಯ ವ್ಯಕ್ತಿಯಾಗಿ ರೂಪತಾಳುವುದು, ಆತನಲ್ಲಿರುವಂತಹ ಒಳ್ಳೆಯ ಗುಣ ಗಳಿಂದ ಆತನ ಶುದ್ಧನಡತೆಯಿಂದ ಎನ್ನುವುದು ಸತ್ಯವಾದ ಮಾತು. ಲಕ್ಷ್ಮಣನು ಸಾಮಾಜಿಕ ಸೇವೆಗಳಲ್ಲಿ ತನ್ನನ್ನು ಅರ್ಪಿಸಿಕೊಂಡಿದ್ದನು. ಮಹಿಳೆಯರಿಗೆ ಸಹಾಯಮಾಡುವುದು ಒಂದು ಸಮುದಾಯದ ಏಳಿಗೆಗೆ ಎಂದೂ ಅಂಟಿಕೊಂಡಿರಲಿಲ್ಲ. ಎಲ್ಲಾ ಸಮುದಾಯಗಳಲ್ಲಿ ಬರುವ ಬಡ ಜನರ ಏಳಿಗೆಗಾಗಿ ದುಡಿದ ಒಬ್ಬ ಮಹಾನ್ ಮಾನವತಾವಾದಿ ಎನಿಸಿಕೊಂಡಿದ್ದಾನೆ. ಅಧಿಕಾರ ಮತ್ತು ಅದರ ಸುತ್ತಲು ಬರುವ ಅಸಂಗತ ತತ್ವವನ್ನು ಅನುಸರಿಸುತ್ತಿರಲಿಲ್ಲ. ವರ್ಗ ಮತ್ತು ವರ್ಣ ತಾರತಮ್ಯ ಎಂದೂ ಅನುಸರಿಸದೆ ಲಕ್ಷ್ಮಣನು ಅವುಗಳ ಜೊತೆ ಅನ್ಯೋನ್ಯತೆಯ ಸಂಬಂಧ ಹೊಂದಿದ್ದನು.

ಯಾವ ವ್ಯವಸ್ಥೆ ತನ್ನ ಕುಟುಂಬದ ಸರ್ವನಾಶಕ್ಕೆ ಕಾರಣೀಭೂತವಾಯಿತೋ, ನೋವು ಕೊಟ್ಟಿತೋ ಆ ವ್ಯವಸ್ಥೆಯ ವಿರುದ್ಧ ಹೋರಾಟ ಆರಂಭಿಸಿದನು. ಮೊದಲು ವ್ಯಕ್ತಿಗತ ಹೋರಾಟ ನಂತರ ಬ್ರಿಟೀಷರ ಆಯಕಟ್ಟಿನ ಜಾಗಗಳ ಮೇಲೆ ದಾಳಿಯನ್ನು ಮಾಡಿದನು.

ನಮ್ಮಲ್ಲಿನ ಭಾವುಕತೆಯನ್ನು ಬಳಸಿಕೊಂಡು ನಮ್ಮನ್ನಾಳುವ ಶ್ರೀಮಂತವರ್ಗಗಳು ನಮ್ಮ ಇಚ್ಛಾಸಕ್ತಿಗಳು ಕುಂದಲಿಕ್ಕೆ ಕಾರಣವಾಗಿವೆ. ಪ್ರತಿಭಟನೆಯನ್ನು ಹತ್ತಿಕ್ಕಲು ಭಾವನಾ ತ್ಮಕ ಸಂಬಂಧಗಳ ಮೇಲೆ ಮೊದಲು ಕೈಹಾಕುತ್ತಾ ಹೋಗುತ್ತಾರೆ. ಒಂದು ಸಂಸ್ಕೃತಿಯ ಒಳಗಡೆ ಸಂದರ್ಭ ಬಂದಾಗ ಬಹುಪ್ರಮುಖ ಪಾತ್ರವಹಿಸಿರುವವರನ್ನು ಬಲಿಕೊಡಲು ಮುಂದಾಗುತ್ತವೆ. ಇಂಥ ಸಮಯದಲ್ಲಿ ಸಬಲೀಕರಣ ಎಂದು ಯಾವುದನ್ನು ಕರಿಯು ತ್ತೇವೆಯೋ ಅಲ್ಲಿಯೇ ವ್ಯಕ್ತಿಯು ದುರಂತನಾಗಲಿಕ್ಕೆ ಕಾರಣವಾಗುತ್ತದೆ.

ಮನುಷ್ಯ ದಿನನಿತ್ಯ ಮಾಡುವ ಕೆಲಸಕಾರ್ಯಗಳಲ್ಲಿ ಅಲ್ಪವಾದದ್ದು. ಇತರರಿಗೆ ತೋರಿಸ ಲಾಗದಂಥದ್ದು, ಯಾವುದೇ ವಿಶೇಷವಿಲ್ಲದ ಘಟನೆಗಳು, ಸಂದರ್ಭಗಳು ದುರಂತಕ್ಕೆ ವಸ್ತು ವಾಗುವುದಿಲ್ಲ. ಅನ್ಯರ ಅನುಭಾವಕ್ಕಿಂತಲೂ ಬೇರೆಯಾದ ಗಂಭೀರ, ಗಹನ, ಉದಾತ್ತ ಹಾಗೂ ಅಪೂರ್ವವಾದ ಸಂದರ್ಭ ವಿಶೇಷಗಳು ಮನುಷ್ಯನ ಬಾಳಿನಲ್ಲಿ ಸಂಭವಿಸುತ್ತವೆ. ಹೀಗೆ ಉತ್ಕೃಷ್ಟವಾದ ಉದ್ದೇಶ ಹಾಗೂ ಗಹನತೆಯನ್ನು ಮಾತ್ರನಾವು ಮಹಾಪುರುಷರಲ್ಲಿ ಕಾಣುತ್ತೇವೆ. ಇಂಥ ಬಹುಪಾಲು ಅಂಶಗಳನ್ನು  ಸಿಂಧೂರ ಲಕ್ಷ್ಮಣನಲ್ಲಿ ಕಾಣುತ್ತೇವೆ.

ಸಿಂಧೂರ ಲಕ್ಷ್ಮಣನು ಬ್ರಿಟೀಷರ ವಿರುದ್ಧ ಹೋರಾಡಿದ ಒಬ್ಬ ವೀರ ಉಳ್ಳವರಿಗೆ ಸಿಂಹಸ್ವಪ್ನವಾಗಿ ಇಲ್ಲದವರಿಗೆ ಆತ್ಮೀಯನಾಗಿದ್ದ. ಒಬ್ಬ ಹೃದಯವಂಥ ಪರಕೀಯ ಹಾಗೂ ದುಷ್ಟಶಕ್ತಿಗಳ ವಿರುದ್ಧ ಹೋರಾಡುತ್ತಲೇ ಸಮಾಜವಾದದ ಕನಸು ಕಂಡ ಮಾನವತಾವಾದಿ. ಆದರೆ ಬ್ರಿಟೀಷ್ ಸರಕಾರವು ಲಕ್ಷ್ಮಣನನ್ನು ದ್ರೋಹಿಯನ್ನಾಗಿ, ಕಳ್ಳನನ್ನಾಗಿ, ಕೊಲೆಗಡುಕ ನನ್ನಾಗಿ ಚಿತ್ರಿಸುತ್ತಾ ತನ್ನ ಎಂದಿನ ಕುತಂತ್ರದ ಬಲೆಯನ್ನು ಸಿಂಧೂರ ಲಕ್ಷ್ಮಣನ ಮೇಲೆ ಬೀಸಿತು. ಸಿಂಧೂರ ಲಕ್ಷ್ಮಣ ತನ್ನ ಅದ್ಭುತ ಸಾಹಸದ ಚಟುವಟಿಕೆಗಳನ್ನು ನಡೆಸುತ್ತ ದುರ್ಜನ ರನ್ನು ಕಾಡುತ್ತ, ಆಂಗ್ಲ ಅಧಿಕಾರಶಾಹಿಯ ಬಗ್ಗೆ ರೋಷಕಾರುತ್ತಾ ಅವರ ಹಲ್ಲಣಹಾರಿಸುತ್ತ ಬಾಳಿ ಕೊನೆಗೂ ನಿಶಸ್ತ್ರಧಾರಿಯಾಗಿ ಮೈಮರೆತು ಊಟಮಾಡುವ ಸಂದರ್ಭದಲ್ಲಿ ಸ್ವಜನರ ಗುಂಡಿಗೆ ಬಲಿಯಾಗುತ್ತಾನೆ.

ಸಿಂಧೂರ ಲಕ್ಷ್ಮಣನ ದುರಂತವನ್ನು ಅಧ್ಯಯನಿಸಿದಾಗ ನನಗೆ ನಾಗಚಂದ್ರನ ಪಂಪ ರಾಮಾಯಣದಲ್ಲಿಯ ಒಂದು ಸಂದರ್ಭ ನೆನಪಾಗುತ್ತದೆ. “ಅಬ್ದಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂದಾಂಟದೆ’ ಅಂದರೆ ಸಮುದ್ರಕ್ಕೂ ಒಂದು ಎಲ್ಲೆ ಇರುತ್ತದೆ. ಸಮಯ ಬಂದಾಗ ಅದು ಕೂಡ ತನ್ನ ಎಲ್ಲೆಯನ್ನು ಮೀರುತ್ತದೆ. ಉದಾಹರಣೆಗೆ ಸುನಾಮಿಯಂತ ಘಟನೆ. ಹಾಗೆ ರಾವಣನು ಪಂಪರಾಮಾಯಣದಲ್ಲಿ ತುಂಬಾ ಉತ್ತಮ ಚಾರಿತ್ರ್ಯ ಹೊಂದಿದ ವ್ಯಕ್ತಿಯಾಗಿದ್ದು ಸಮಯ ಸಂದರ್ಭಕ್ಕೆ ಸಿಲುಕಿ ಸೀತೆಯನ್ನು ಕದ್ದ್ಯೊಯ್ದು ದುರಂತ ವ್ಯಕ್ತಿ ಯಾಗುತ್ತಾನೆ. ಇಂಥ ಅನೇಕ ಘಟನೆಗಳು ನಮಗೆ ದೊರೆಯುತ್ತವೆ. ಇಲ್ಲಿ ಸಿಂಧೂರ ಲಕ್ಷ್ಮಣನು ಕೂಡ ಪರಿಸ್ಥಿತಿಗೆ ಸಿಲುಕಿ ದುರಂತ ವ್ಯಕ್ತಿಯಾಗುತ್ತಾನೆ. ಸಿಂಧೂರ ಲಕ್ಷ್ಮಣನನ್ನು ಕುರಿತು ಜಾನಪದ ತ್ರಿಪದಿಯೊಂದು ಸೊಗಸಾಗಿ ಮೂಡಿ ಬಂದಿದೆ.

“ಲಕ್ಷ್ಮಣನ ಹೋತವರು ಲಕ್ಷಕೊಬ್ಬರೂ ಇಲ್ಲ
ರಕ್ಷಣೆಗೆ ಯಾರೂ ಬರಲಿಲ್ಲ| ವಿಧಿಯಿಟ್ಟ
ಶಿಕ್ಷೆಗೆ ಅವನು ಮಣಿಯಲಿಲ್ಲ”
(ಸಿಂಧೂರ ಲಕ್ಷ್ಮಣ ಮಹಾಕಾವ್ಯ ಪು.೦೧)

ಅಂದರೆ ಸಿಂಧೂರ ಲಕ್ಷ್ಮಣನಂಥವರು ಇದುವರೆಗೂ ದೊರೆಯಲಿಲ್ಲ. ಆದರೆ ಎಂಥ ಸಂದರ್ಭದಲ್ಲೂ ಬಲಿಯಾದ ಅಂದರೆ ಕಪ್ಪರ ಪಡಿಯವ್ವ ಎಂಬ ದೈವೀಶಕ್ತಿಯ ಸಾನಿಧ್ಯ ದಲ್ಲೂ ಭೂದೇವತೆಯ ಮೇಲೆ ಕೂತು ಊಟಮಾಡುವ ಸಂದರ್ಭದಲ್ಲಿ ದುರಂತವ್ಯಕ್ತಿಯಾಗಿ ಸಾವಿಗೀಡಾಗುತ್ತಾನೆ. ತಾನು ನಂಬಿದ ಮೂವರ ತಾಯಂದಿರು ಅಂದರೆ ಕಪ್ಪರಪಡಿಯವ್ವ ದೇವಿ, ಭೂದೇವತೆ, ಅನ್ನದಾತೆ. ಇಲ್ಲಿ ಅನ್ನ ಅಂದ್ರೆನೇ ಸಮೃದ್ದಿಯ ಸಂಕೇತ. ಇಂಥ ಸನ್ನಿವೇಶದಲ್ಲಿ ರಕ್ಷಣೆಗೆ ಯಾರು ಬರಲಿಲ್ಲ. ಕಾರಣ ಸಿಂದೂರ ಲಕ್ಷ್ಮಣನನ್ನು ಮೂವರು ತಾಯಂದಿರು ನಮ್ಮ ನಾಡಿನ ಗಡಿಯಾಚೆ ಸಾಯುವುದಕ್ಕಿಂತ ನಮ್ಮ ಮಡಿಲಲ್ಲಿ ಸಾಯುವುದು ಸೂಕ್ತವೆಂದು ಬಾವಿಸಿರಬಹುದು. ನಿಶ್ಯಸ್ತ್ರದಾರಿಯಾದ ಲಕ್ಷ್ಮಣನನ್ನು ಮೂವರು ತಾಯಂ ದಿರು ತಾಯಿಯ ಆದರ್ಶ ಪರಿಕಲ್ಪನೆಯನ್ನು ಪ್ರತಿಬಿಂಬಿಸುವಂತ ಸಂದರ್ಭದಲ್ಲಿ ತಾಯಿಯ ಸಂಬಂಧಗಳು ಸಹ ನಿಶ್‌ಕ್ರಿಯತೆ ಪಡೆದುಕೊಂಡವು. ವೀರ, ಧೀರ, ಶೂರ ಹಾಗೂ ದಾನವಂತ ಲಕ್ಷ್ಮಣನು ದುರಂತನಾಯಕನಾಗಿ ಸಾವನ್ನಪ್ಪುತ್ತಾನೆ. ಹೀಗೆ ಲಕ್ಷ್ಮಣನು ದುರಂತ ಮರಣ ಹೊಂದುವ ಮೂಲಕ ದೇಶಪ್ರೇಮಿಗಳಿಗೊಂದು ಸ್ಫೂರ್ತಿಯಾದ, ಸಮಾನತೆಯ ಹಂಬಲ ಗಳಿಗೆ ಆದರ್ಶವಾದ. ಉತ್ತರ ಕರ್ನಾಟಕದಲ್ಲಿ ಇನ್ನೂ ಬದುಕಿರುವ ಹಲವು ಹಿರಿಯರ ಸ್ಮೃತಿಗಳಲ್ಲಿ ಒಂದು ವೀರಗಾಥೆಯಾಗಿ ಹಸಿಹಸಿಯಾಗಿದ್ದಾನೆ.

 

ಗ್ರಂಥಗಳು

೧. ಸೈದಾಪುರ ವಾಯ್.ಎಫ್. ಉತ್ತರಕರ್ನಾಟಕದ ಜನಪದ ವೀರಗೀತೆಗಳು, ಸೃಜನಶೀಲ ಪ್ರಕಾಶನ, ಹಾಸನ, ೨೦೦೩.

೨.  ನದಾಫ್ ಎಫ್.ಟಿ. ಶೂರ ಸಿಂಧೂರ ಲಕ್ಷ್ಮಣ, ಎ.ಎಮ್.ಕರಡಿ, ಅಂಡ್ ಸನ್ಸ್, ಹುಬ್ಬಳ್ಳಿ, ೧೯೮೮.

೩. ಮುದ್ದೇಬಿಹಾಳ ಆರ್.ಸಿ. ಸಿಂಧೂರಲಕ್ಷ್ಮಣ ಮಹಾಕಾವ್ಯ, ರಸಬಳ್ಳಿ ಪ್ರಕಾಶನ, ಶರಣನಗರ, ಬಿಜಾಪುರ, ೧೯೯೩.

೪. ಪ್ರೇಮ ಕುಮಾರ ಕೆ.ಷೇಕ್ಸ್‌ಪಿಯರ್‌ನ ದುರಂತ ನಾಟಕಗಳು ಕನ್ನಡಾನುವಾದಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ ಪಿಎಚ್.ಡಿ. ಮಹಾಪ್ರಬಂಧ ಅಪ್ರಕಟಿತ, ೨೦೦೩.

೫. ಕನ್ನಡ ನಾಟಕ ಪರಂಪರೆ ಮತ್ತು ಪ್ರಯೋಗ.

* * *

ಹಲಗಲಿ ಬೇಡರು

೯ನೇ ನುಡಿ

ಕತ್ತಿ ಕುದರಿ ಮುತ್ತು ಮಾಣಿಕಾ ಯಾವದು ಬಿಡಲಿಲ್ಲಾ
ಬೆಳ್ಳಿ ಬಂಗಾರಾ ಹರಳಿನ್-ಉಂಗರಾ ಹೊನ್ನ್-ಉಂಗರ ಗೋಲಾ

ಸರಗಿ ಸರ್ದಳಿ ಬುಗುಡಿ ಬಾವಲಿ ಬಿಡಲಿಲ್ಲಾ
ಕಡಗ ಕಂಕಣಾ ನಡುವಿನ-ಡಾಬಾ ನಡಕಟ್ಟು ರುಮಾಲಾ

ಕುಬಶಾ ಶೀರಿ ಹಪ್ಪೊ ಶಾಂಡಿಗಿ ಕುರ್ಚಿಗಿ ಕುಡಗೋಲಾ
ಕೊಡಲಿ ಕೋಟಿ ಕುಡ-ಕಬ್ಬಿಣಾ ಮಸರು ಬೆಣ್ಣೆ ಹಾಲಾ

ಉಪ್ಪ ಯೆಣ್ಣಿ ಅರಿಶಿಣ ಜೀರಿಗಿ ಅಕ್ಕಿ ಸಕ್ಕರಿ ಬೆಲ್ಲಾ
ಗಂಗಳ ಚರಗಿ ಮಂಗಳ-ಸೂತ್ರಾ ತಕೊಂಡ ಹೋದರ ಬಿಸು-ಕಲ್ಲಾ          ||ಇಳವರ||