ಎಂತು ಸಾದಿಪರಿ ಕಲಿಯುಗದ ಸಂತೆಯೊಳು
ಬರಿಯ ಮಾತಿನ ಬಣವೆಯೊ ಮಾತಿನ ಮಲ್ಲ
ಎಂಡ ಮಾದಕ ವಸ್ತುವೆಸರಿ ಹೆಂಡ ಹೆಂಡ
ಎಂದು ನೂರಾರು ಮಡಿ ಬರೆದು ಓದಿದರೆ
ಅದು ಸಿದ್ಧಿಯಲ್ಲಾ ಸಾಧನೆಯ ಗಯ್ಯಾಬೇಕಯ್ಯ
ಎಲವೊ ಮಾತಿನಮಲ್ಲ || ತತ್ತ್ವ ||

ಮಾಡಿಕೊಂಡೆನೆ ತಂಗಿ ಮಾಡಿಕೊಂಡೆನೆ ಗುರು
ರಾಜದಿ ಗಂಬರಸ ಕೂಡಿ ಕೊಂಡೆನೇ ||

ಮನವೆಂಬೋ ಮಂಚವ ಮಾಡಿಕೊಂಡೆನೆ
ತಂಗಿ ತನವೆಂಭೋ ಹಾಸಿಗೆ ಹಾಸಿಕೊಂಡೆನೆ ||

ಈರೇಳು ತಲೆ ದಿಂಬು ಹಾಕೊಂಡೆನೆ ತಂಗಿ
ಮುತ್ತಿನ ಮೂಗುತ್ತಿಯಿಟ್ಟು ಕೊಂಡೆನೆ || ಮಾಡ್ತಿ ||

ಆತನ ತಾಳಿಯ ಕಟ್ಟಿಕೊಂಡೆನೆ | ತಂಗಿ ಗುರು
ನಾತನ ಬಳಿಯಲ್ಲಿ ಮಲಗಿಕೊಂಡೆನೆ || ಮಾಡ್ತಿ ||

ಇಂದಿನ ಮೈಲಿಗೆ ಕಳೆದುಕೊಂಡೆನೆ ತಂಗಿ
ಮುಂದೆ ಪಿತಾಂಬರ ಉಟ್ಟುಕೊಂಡೆನೆ || ಮಾಡ್ತಿ ||

ನನ್ನೊಳಗೆ ನಾನೇ ತಿಳಿದುಕೊಂಡೆನೆ ತಂಗಿ
ಮೇಲು ಸೀಮೆಯ ಹಾದಿ ಹಿಡಿದುಕೊಂಡೆನೆ ||