ನಿಮ್ಮೂರಿಗೆ ನಾವು ಬರಬೇಕಾದ ನಿಮ್ಮನಸ್ಸು
ನಮ್ಮಂತೆ ಇರಬೇಕು || ತನುಮನ
ಧನವನು ಗುರುವಿಗೆ ಅರ್ಪಿಸಿ
ಗರ್ವ ಅಂಕಾರವ ಬಿಡಬೇಕು ||

ಗರ್ವಂಕಾರವ ಹಮ್ಮಿನ ಮೂಲವ ಸುಡಬೇಕಾದ
ಸಾಧು ಸಜ್ಜನರ ಸಂಘಬೇಕು
ಸಾಧು ಸಜ್ಜನರ ಸಂಘಬೇಕಾದರೆ
ಗುರುವಿನ ಉಪದೇಶ ಪಡೆಯಬೇಕು
ಗುರುವಿನ ಉಪದೇಶ ಪಡೆಯಬೇಕಾದರೆ
ಪೂರ್ವ ಜನ್ಮದ ಪುಣ್ಯಬೇಕು || ನಿಮ್ಮೂರಿಗೆ ||