1

ಏರ

ಕಣ್ಣ ಕಿಸದೇನಂತೆ ಸಣ್ಣ ಮಾರಿ ಮಾಡಿ
ತಣ್ಣಗಾತೇನ ಎದಿಯಾಗ ॥

ಚಾಲ

ಸೂಳೇರಂತ ತಿಳದ ನಿಮ್ಮನ್ನ
ಗೋಳ ನಾವು ಮಾಡುದಿಲ್ಲ
ಬಾಳೇದಾರ ಮಂದಿ ಶಾಣೇರಾ
ಶಿವ ಮಾಡಿ ಕಳಿಸ್ಯಾನ ನಮ್ಮ ಹಂತೇಲಿ ಏನಿಲ್ಲ ಕಸರಾ

ಸಾವಕಾಶ ಹಾಡಿರಿ ನೀವು ಚವಕಾಸಿ ನಡದೈತಿ ಇಲ್ಲಿ
ಅವಕಾಶ ಆದೀತ ಭಾಳ ಗೋರಾ
ಜಾಯಿರ ಇಂಚಲದ ಕೆಂಚನಾಯಕ ಹೇಳಿದ
ಜಗಳಲ್ಲ ತರಾ
ಬುದ್ದೀಲೆ ಹಾಡರಿ ನೀವು ಗುದ್ದ್ಯಾಡೂದು ಏನು ಚಲೋ
ಮದ್ದಾನಿ ನಾದ ತಗದಂಗ ಸ್ವರಾ
ಗದ್ಗಮಸ ಬೇಡ ಹೌದ ಹೌದ ಅನ್ನೂವಂಗ ಜನರೆಲ್ಲಾ

ಏರ

ತಣ್ಣಗಾತೇನ ಎದಿಯಾಗ ಹಾಡಿನ
ಬಣ್ಣ ತಿಳದೋತ ಇದರಾಗಾ ॥

2

 ಏರ

ಬಂಗಾರ ಬಳಿನಿಟ್ಟು ಅಂಗಡಿಗೆ ಹೋಗುವಳಾ
ಮುಂಗುರುಳ ತೀಡಿ ವನಪೀಲೆ                          ॥

ಚಾಲ

ಹಸರ ಕೆಂಪ ವಗರ ಬಣ್ಣ ಕಸರ ಇಲ್ಲದಂತ ಹೆಣ್ಣ
ಮೀಸಲಾದ ಖಣಿ ಹೆಣ್ಣಿನೊಳಗ ಚೊಕ್ಕ
ನಾರಿ ನೀನು ಇದ್ದಂಗ ಪ್ರತ್ಯಕ್ಷ ರಾಕ್ಷಸಾ
ಗುಹ್ಯ ಸ್ಥಾನದೊಳು ಕೂದಲ ಮಯವಾಗಿ ಬಾಯಿಬಡಿಕಿ
ನ್ಯಾಯ ಮಾಡುವಕಿ ಬಹಳ ಪಕ್ಕಾ
ಆಕಿ ಕಾಮ ಬೆಳಗಿಂದ ಹಿಡದ ಮೂರತಾಸಿನ ತನಕಾ
ತಂಗಾಳಿ ಬೆಳಗಿಂದ ಬಿಟ್ಟರ ಅಂಗಜಾನ ಬಾಣ ತಾಕಿ
ಸಂಗಾ ಮಾಡುವಲ್ಲಿ ಬಹಳ ಪಕ್ಕಾ
ಆಕಿ ಕಾಮ ನೆಲಕ ಹರಿಯುವದು ಭಾಳ

ಏರ

ಮುಂಗುರುಳು ತಿದ್ದಿ ವನಪೀಲೆ ಹೋಗುದ ಕಂಡ
ಹಂಬಲಾದವ ನಿನ ಮ್ಯಾಲ

3

ಏರ

ಕಿಚ್ಚ ಬೆಂಕಿಯ ಹಂತಾ ಹಚ್ಚಿಕೊಂಡಿನ ಬಾಲಿ
ಹೆಚ್ಚಿನ ಒಂಕಿ ಕೊಡತೇನ

ಚಾಲ

ಸುರಳಿಗೂದಲ ಸುಗಣಿ ನೀನು ಹೊರಳಿ ಬಂದೇ ಸ್ವಪ್ನದಲ್ಲೇ
ಹವಳ ರತ್ನ ಬಂಗಾರದ ಬಾಕಾ
ಹೆಂತಾ ಕರಳ ಹೊರಳಿ ನೋಡವಲ್ಲೇ ಹಿಂದಕ್ಕ
ಕಂಚಿಕಾಯಿಯಂತಾಮಲಿ ಮುಂಚು ತೋಳಿನಲ್ಲಿ ಇಟ್ಟ
ಅಂಚಿದಡಿ ಗಚ್ಚಿನ ಕುಬಸ ಜುಳಕಾ
ಅಂಜಿಕಿಲ್ಲದ ಮಂಚಾನೇರಿ ಮಾಡ ಕಾಮನಾಟಾ
ಮುಂಚೆ ಮನಸ ಇಲ್ಲಾ ನಾನು ಪಂಚಮಿಗೆ ವರುಷಾಗತೈತಿ
ಹಂಚಿ ಬಟ್ಟಿನ ಗಲ್ಲಾ ಕಚ್ಚುದಕ
ಪಂಚನಾಮಾ ಆದರೂ ಚಿಂತಿಲ್ಲ ಇನ್ಯಾಕ

ಏರ

ಹೆಚ್ಚಿನ ವಂಕಿ ಕೊಡತೇನ ಇಂಚಲದ
ಬಂಕನಾಥನ ಆಣಿ ಬಿಡುದುಲ್ಲ ॥

4

ಏರ   ಮದ ಬಂದ ತಿರಗುವ ಸುದತಿ ನಿನ್ನ
ಮದುವಿ ಗಂಡನ್ನ ಮರಸುವೆನ

ಚಾಲ

ಸುಂದರಿಯ ನಿನ್ನ ರೂಪ ಚಂದ್ರನ ಮುಖ ಸಾಕ
ಚಂದ್ರ ಬೈತಲಿ ಕಪ್ಪಾ
ಇಂದ್ರನಳಿಯನ ಚ್ಯಾಪ
ನಿನ್ನ ಮ್ಯಾಲ ಆಗೈತಿ ಮನಸಾ ಮ್ಯಾಗ ಬಾರಲೇ
ಶೃಂಗಾರಿ ಕೂಡಿ ಭೋಗ ಮಾಡೋನ ಬಂಗಾರಿ
ಪಂದ್ರಾ ದಿವಸಾತಿ ನಾರಿ ಬಂದ್ರ ನೋಡವಲ್ಲೆ ಮಾರಿ
ಇಂದ್ರ ಲೋಕದ ಸುಂದರಿ
ಚಂದ್ರಗಾವಿಯ ಸೀರಿ ಉಟ್ಟ ತೊಟ್ಟ ಕುಬ್ಬಸ ಜರ್ದ
ಹಿರ್ದ ಕಾಣೋದ ತರ್ದಾ
ಮೈ ನೆರದ ಆತ ತಿಂಗಳ
ಮುಖವು ಹಿರ್ದಾ ಶ್ರೀ ಬೆಳದಿಂಗಳಾ
ನಾಗವೇಣಿಯ ನಿನ್ನ ಮೂಗಸಂಪಿಗೆ ತೆನಿಯ
ರಾಗಕೋಗಿಲೆ ಧ್ವನಿಯೇ ಭೋಗ ಅಮೃತದ ಖನಿಯೆ
ಬ್ಯಾಗ ಬಾರೆಲೆ ಶೃಂಗಾರಿ
ಕೂಡಿ ಬೇಗ ಮಾಡೋಣ ಬಂಗಾರಿ

ಏರ

ಮದವಿ ಗಂಡನ್ನ ಮರಿಸುವೆ ನಾ ನಿನ್ನ
ಹದ ನೋಡಿ ಬೀಜ ಬಿತ್ತುವೆನು

5

ಏರ

ಕೆಂಬಲ್ಲ ನೋಡಿದರ ದಾಳಿಂಬರಿ ನಾಚಿತೋ
ತಾಂಬೂಲ ತಿಂದ ಬೀದಿಯಲಿ

ಚಾಲ

ತಿದ್ದಿಮಾಡಿದಾನ ಬ್ರಹ್ಮನ ಬುದ್ಧಿಗೇನು ಕಡಿಮಿ ಇಲ್ಲಾ
ಮದ್ದಾನಿ ನಡದಂಗ ಹೆಜ್ಜಿ ಚಲ್ಲಿ
ಸುರ್ತಿ ನಿನ್ನ ಮದವಿ ಗಂಡಗ ದೈವಕಿಲ್ಲ ನೆಲಿ
ಬಾಪೂರೇ ತೋಳಾಗ ಇಟ್ಟು ವ್ಯಾಪಾರ ಮಾಡುತ ಕುಂತಿ
ಭಪ್ಪರೆ ತೆಪ್ಪಿ ಹುಟ್ಟೀದಿ ಎಲ್ಲೆ
ನಿನ್ನಂತ ಬಾಲಿನ್ನ ಅಪ್ಪಿತಪ್ಪಿ ಕಂಡೇನ ಎಲ್ಲೆಲ್ಲೆ
ಉಬ್ಬೀದ ಮಲಿಗಳು ಎರಡಾ ಕೊಬ್ಬರಿ ಬಟ್ಟಲದಂಗಾ
ತೆಪ್ಪಿ ಹಾಕಿದ ಕುಪ್ಪಸ ರೇಶ್ಮೆಯಲ್ಲೆ
ಹುಬ್ಬ ನೋಡಿ ನಾಚುತ ಪದ್ಮನ ಶಿರಕಾಳಿ

ಏರ

ತಾಂಬೂಲ ತಿಂದ ಬೀದೀಲೆ ಹೋಗೂದ ಕಂಡ
ಹಂಬಲ ಆದೀತ ನಿನ್ನ ಮ್ಯಾಲೆ

6

ಏರ

ಪುಥಳಿ ಬಣ್ಣದ ಸೀರಿ ರತ್ನದ ಹರಳ ಕೊರಳಾಗ
ಮತಿವಂತಿ ಹೇಳ ನೀ ಯಾರಾ

ಚಾಲ

ಗಲ್ಲ ಕನ್ನಡಿ ತೇಜ ಹಲ್ಲ ದಾಳಿಂಬರಿ ಬೀಜ
ಎಲ್ಲಿ ಹೊಂಟಿ ಸಜ್ಜಾ
ನಿಲ್ಲ ಮಾತಾಡ ಮೋಬಾ ನಾವು ಕೂಡಿ ಮಾಡೋಣ ಬಾರ
ರೂಢಿಯೊಳು ನಿನ್ನಂಥ ಪ್ರೌಢನಾರಿ ಯಾರನ್ನೂ ಕಾಣೆ
ನನ್ನ ಜೋಡ ದೊರದೀಯ ಮಣೀ ನೀ
ಎಳಿಯ ಪ್ರಾಯಣ ಹೆಣ್ಣಾ ತೊಳದ ಮುತ್ತಿನ ಬಣ್ಣ
ಹದಿ ಕಮಲದ ವರ್ಣ
ನಳಿನಾಕ್ಷಿ ಬಾ ನಿನ್ನ ಅಂಗ ಜಾಯಕ್ಕೆ ಕಂಗೆಟ್ಟ ನಿಂತಿದೇನ
ಭೃಂಗ ಕುಂತಳಿ ಮಾತಾಡ ಕೂಡಿ ಸಂಗ ಮಾಡೋಣ
ಒಡಗೂಡ
ಅಕ್ಕರತೆ ಬರಬರುತ್ತಾ ನಕ್ರ ಸುರದಂಗ ಪೂರ ಮುತ್ತಾ
ಸಕ್ರಿಕಿಂತ ಸವಿಮಾತ
ಸಿಕ್ಕರೆ ಮಾಡುವೆ ಶಾಂತ ನಿನ್ನ ಬಟ್ಟ ಕುಚಕ
ಮಧ್ಯದಲಿ ನೆಟ್ಟಾವ ನನ್ನ ನೆದರಾ
ಪಟ್ಟಮಂಚಕ ಬಾ ಬಾರೆ ಬೆಟ್ಟ ಆದಿ ಬಾಲಿ ಮುಖ ದೋರಾ

ಏರ

ಮತಿವಂತ ಕೇಳ ನೀ ಯಾರ ನೀನ ಕಂಡ
ಜತನ ಮಾಡಿ ನಿನ್ನ ಕೇಳಿದೇನ

7

ಏರ

ಕಠಿಣ ಹೆಣ್ಣಿನ ಗುಣವು ನಳಿನಾಕ್ಷಿ ತಳದಾವಾ
ಖೊಟ್ಟಿ ನಿನ್ನ ಮನಸಾ ನಿಜವಲ್ಲ ॥

ಚಾಲ

ಧರಿಸಿ ನಮ್ಮ ಚಿತ್ರ ನಾಶ, ಸರಿಸಿ ನಮ್ಮ ಚಿತ್ರ ನಾಶ
ಮೈತುನ ಮಾಡಿದರ ರಕ್ತನಾಶ

ನೀ ಏನ ಹಾಡೀ ಜೋಡಿಯಲ್ಲ ಖೋಡಿ ಹೆಂಗಸಾ
ಭೆಟ್ಟಿ ಆಗುತತಿ ನಾರಿ ನಟ್ಟೀತ ಮನ್ಮಥನ ಬಾಣಾ
ದಿಟ್ಟ ಚಿತ್ರ ನಿನಮ್ಯಾಲ ದ್ಯಾಸ
ಮಾತಾಡಿದರ ಕೈಯಾಗಿನ ಹಣಾ ಕಸಗೊಳುವೆ ಸಾಹಸ
ಕ್ರೀಡಾ ಮಾಡಿದರ ರಕ್ತ ಜಾಡುಣ ಆಗಿ ಹೋಗತೈತಿ
ಒತ್ತಿ ಮಾಡಿ ಹಿಂಡತಿಯ ರಸಾ
ನಾರಿ ನೀನು ಇದ್ದಂಗ ಪ್ರತ್ಯಕ್ಷ ರಾಕ್ಷಸ

ಏರ

ಖೊಟ್ಟಿ ಮನಸ ನಿಜವಲ್ಲ ನೀ ಬಂದ
ಸೆಟದಾಡಬ್ಯಾಡ ನನಮುಂದಾ

8

ಏರ

ಹಸಿರ ಸಿಲ್ಕಿನ ಸೀರಿ ಕುಶಲದ ಒಡ್ಯಾಣ
ಕಸರಿಲ್ಲ ನಿನ್ನ ರೂಪದಲಿ

ಚಾಲ

ವಂಕಿ ಸರಗಿ ಬಾಜೂ ಬಂದ ಬಳಿ ಕಟ್ಟಿದಿ ಏಕಾವಳಿ
ನಿನ್ನ ಕೊರಳಲ್ಲಿ ಪಟುತರದ ಪುತ್ಥಳಿ ಎದಿ ಮ್ಯಾಲ
ಎಷ್ಟಂತ ನಿನ್ನ ವರ್ಣಿಸಲಿ ಸಂಗಮಾಡಿ ಶೃಂಗಾರದ ಕರಿಮಣಿ
ಕೊಡುವೆ ಪ್ರೀತಿಲಿ, ಕೊಡುವೆ ಪ್ರೀತಿಲಿ
ನಿನ್ನ ಮ್ಯಾಲೆ ಆಗೇತ ಮನಸಾ ಅದೇ ನಿನ್ನ ಅರಸಾ
ಐತಿನನ ಖಾಸ ನನಖಾಸಾ
ನಿನ್ನ ಸಲುವಾಗಿ ಆದೇನ ಸನ್ಯಾಸಿ
ಏನ ಅಂತಿ ವಚನ ಕೂಡ ಭಾಸಿ ಕೇಳ ಭಾಸಿ

ಏರ

ಕಸರಿಲ್ಲ ನಿನ್ನ ರೂಪದಲ್ಲಿ ಇದೊಮ್ಮೆ
ಹೆಸರ ಮಾಡ ನನ ಕರಕೊಂಡ

9

ಏರ

ವಾರಿಜಾಕ್ಷಿ ಬಹಳ ಮಾರಿ ಮಾಡಿದಿ ಸಣ್ಣ
ಹಾರತೈತಿ ಯಾಕ ನಿನ್ನ ಎದಿಯ

ಚಾಲ

ಸುಳ್ಳ ಬೆಳದೆ ಬೆಳವಲದಾಗ ಭಾಳ ಭಾಳ ಮಾತ ಹೇಳಿ
ಕಳ್ಳಗಿಂಡಿಲೆ ಹೋಗತಿದ್ದೆ ನೀನು
ತಿಳಿಯೆ ಇನ್ನ ನನ್ನ ಕೈಯಾಗ ಸಿಕ್ಕಿ ಆದಿ ಜೀರ್ಣ
ಜೀರ ಜೀರ ಆದಿ ಬಲೆಯಾಗ ಬಿದ್ದಿ
ಕುಣದ ದಣದಿ ಯಾಸಿ ಮಾಡಿ
ಹುಬ್ಬ ಹಾರಿಸಿ ತಿರುವ ಬ್ಯಾಡ ಕಣ್ಣ
ತೋಡಿಗೆ ತೋಡಿ ಡವಲಮಾಡಿ ಫಲವೇನು
ಡಾಮಡೋಲ ಆಗ ಬ್ಯಾಡ ನಮ್ಮದು ನಿಮ್ಮದು ತೀರಲಿ ಇಂದು
ಕಾಮ ಕಾಮ ಬಂದೀದೇನ ಇಷ್ಟ ಹಾಡಂತ ನೇಮಿಲ್ಲ
ನಮಗ ಕಡಿಮೇನ

ಏರ

ಹಾರತೈತಿ ಯಾಕ ನಿನ್ನ ಎದಿಯ ನಮ್ಮ ಹಾಡ
ಹಾರಿ ಜಡದಂಗ ಕಲ್ಲಾಗ

10

ಏರ

ಮೇಲ ಬಾಲೆರೊಳಗ ಶೀಲ ಗುಣ ಸಂಪನ್ನಿ
ಕಾಲ ಸರ್ಪಳಿ ಪೈಜಾಣಿ

ಚಾಲ

ನಿಗರಿದಂತ ಮಲಿಗಳು ಬಗರಿಕುಚ ಎದಿಮ್ಯಾಲ
ಸಾಗರಬಿದ್ದ ಕೊಡತೇನ ರುಚಿ
ನಿನ್ನಂದ ಚಂದ ಅದರಿಂದ ಕೇಳುವೆ ಮನ ಮೆಚ್ಚಿ
ಮೇದ ಆಕಳದಂತ ನಾರಿ ಸಾದ ಮಾಡಿ ಸಾಕಾತೇ ನನಗ
ಸೋದೆ ತಾನಾ ಹೇಳಿ ಹೊಡಿ ನುಣಚಿ
ಕೇಳತೇನ ಬೇದರಷ್ಟೂ ಹೋತ ಅಂತ ಮನದಾಗ ನಾಚೀ
ಸಣ್ಣನ್ನ ಕುಡಿಹುಬ್ಬ ನಿನ್ನ ನುಣ್ಣನ್ನ ಗಲ್ಲಕ ಕಡಿ ತಾನೇ
ನಾಚಿ ಹೋದಿತ ನಾಚಿ
ನಿನ್ನಂಗ ಚಂದ ಅದರಿಂದ ಕೇಳುವೆ ಮನಮೆಚ್ಚಿ

ಏರ

ಕಾಲ ಸರಪಳಿ ಪೈಜಾಣ ಇಟಕೊಂಡ
ಲೋಲ್ಯಾಡುತ ಬಂದೆ ದಾರಿಯಲಿ

11

ಏರ

ವಾರಿನೋಟದ ನಾರಿ ಬಾಬಾರೇ ಬಂಗಾರಿ
ಮೀರಿ ಹೋಗುವದು ತರವಲ್ಲಾ

ಚಾಲ

ಅಲ್ಲಿಕೇರಿ ಮಾಡಿಕೊಂಡ ನಿಲ್ಲದೇ ಬರತೇನಂತ
ಬಿಲ್ಲಿ ದುಡ್ಡಿನ ಬೆಲ್ಲಾ ಓದೆ ಪುಕ್ಕಟ್ಟ
ಬಂದಾಳಂತ ಭರವಸೆ ಮಾಡಿ ಕೊಟ್ಟೆನಲ್ಲ ಮುಕ್ಕಟ್ಟ
ಸುಳ್ಳ ಹೇಳಿ ಇಷ್ಟ ದಿನ ಸಳ್ಳವರದ ಹೋಗತಿದ್ಯ
ಕಳ್ಳ ಪೋರಿ ನಿಂದಾರ ಸೊಕ್ಕೆಷ್ಟ
ಮಾರಿ ನೋಡಿ ಮೂಗ ಮುರದ ಹೋಗತಿದ್ದೆ ಕೊಕ್ಕಾಲ
ಸಲ್ಲಾದಿಂದ ಬಾ ಅಂದರ ಒಲ್ಲಿನಂತ ಓಡತೀಯ
ಜುಲಮಿ ಮಾಡಿ ಜಗ್ಗತೇನ ಮುಕ್ಕಟ್ಟ
ಕೆಲಸ ಮಾಡಿಬಿಡತೇನ ಸೀರಿ ಕಳದ ಒಕ್ಕೊಟ್ಟ

ಏರ

ಮೀರಿ ಹೋಗುವದು ತರವಲ್ಲ
ಬಾಗೋಡಿ ಬಸವಣ್ಣನ ಆಣೆ ಬಿಡುದಿಲ್ಲ ॥

12

ಏರ

ಪಂಚಮಿ ಕುಬ್ಬಸ ಲೆಕ್ಕ ಮುಂಚ್ಯಾಗಿ ತಿರಸಿನ್ಯ
ಹಂಚಿನ್ಯ ಹತ್ತಿ ನಿನಗಾಗಿ                                     ॥

ಚಾಲ

ಹತ್ತ ಮಂದಿ ಕರಕೊಂಡ ಚೆಂತನಕ ಬಿಡಿಸಿದ್ದ ಹತ್ತಿ
ನಮ್ಮ ಹೊಲದ್ದ ಕಳದೆ ಉಪಕಾರ
ಬಿಸಲಹತ್ತಿ ಹೆಚ್ಚ ಚೆಲ್ಲೀನ ನಿನಗ ಪಾವಸೇರ
ಅಜ್ಜನಗದ ತಿಳಿಯಲಿಲ್ಲ
ಗಜ್ಜ ಹಾಕಿ ಬೀಡತೀನಲ್ಲ ಅಜವಾನ ಗಿಡ ಓದೆ ಎರಡ ಮೂರಾ
ರಾಜಿ ಆಗಿ ಬಿಟ್ಟೀನಲ್ಲಾ ಮಾಡಲಿಲ್ಲ ಖಬರ
ಬೇಕಾದಂಗ ಕಾಕಿ ಹಣ್ಣ ಕೋಕೊಂಡ ತಿಂದೆ ನಮ್ಮ ಹೊಲದಾಗ
ಯಾಕಂತ ಕೇಳಲಿಲ್ಲ ಒಂದ ಚೂರಾ
ನನ್ನಂಗ ಯಾವ ಹಡಸಿತಮ್ಮಾ ತಾಳ್ಯಾನ ನಿನ್ನ ಬಾರಾ

ಏರ

ಹಂಚಿದ ಹತ್ತಿ ನಿನಗಾಗಿ ಬಾಗೋಡಿ
ಬಸವಣ್ಣನಾಣೆ ಬಿಡುದಿಲ್ಲ ॥

 

13

ಏರ

ಪ್ಯಾಟಿ ಪಟ್ಟಣದೊಳಗ ನೀಲ ಬಟ್ಟಲ ಬಸವಿ
ವಿಟನೆ ಬಾ ಎಂದು ಕರೆಯೋಳು

ಚಾಲ

ಲೋಕದೊಳಗ ನಿನ್ನಕಿಂತ ಮಿಕ್ಕಿದ ಹೆಂಗಸೋರು ಇಲ್ಲ
ತೆಕ್ಕೆ ಮುಕ್ಕಿ ಹಾದಿದ್ದಿಲ್ಲ ಯಾರೂ
ಲೆಕ್ಕಮಾಡಿ ತರಬಿದರ ಅಬರು ಎಲ್ಲ ಚೂರಾ
ಛೀಮಾರಿ ಹೆಂಗಸೇನು ಆ ಮಾರಿ ಬ್ಯಾನಿಯೊಳಗ
ಹ್ವಾದಬಾರಿ ಒಯ್ಯಲಿಲ್ಲ ಪರಮೇಶ್ವರ
ಸುಮಾರ ರಂಡೆ ನಿನ್ನ ಹೇಳಿ ಬಿಟ್ಟೇನ ಸ್ವಾಮವಾರ

ಏರ

ವಿಟನೆ ಬಾ ಎಂದು ಕರೆಯುವಳು
ನಿನಕಿಂತ ನಾಚಿ ಬಿಟ್ಟೇನ ಆಗಿ ಶ್ರೇಷ್ಠ

14

ಏರ

ಕುಂತಿರೇ ದೈವೆಲ್ಲಾ ಮನಸಿಟ್ಟ ಕೇಳೀರಿ
ಹಾಡೀನ ಮೆಟ್ಟ ಬಾಗೋಡಿ                                ॥

ಚಾಲ

ಹೆಣ್ಣ ಕಂಡೆನಪ್ಪ ನಾನು ಕಣ್ಣ ಮಾತ್ರ ಒಂದ ಇತ್ತು
ಸಣ್ಣ ಕಡ್ಡಿಯಂಗ ಅದರ ಡವಲ
ಜಗಳಾಡಿದಂಗ ಬಾಯಿ ಮಾಡಿ ಮಾತಾಡತಾಳೋ ಕಲಲಾ
ದಿಗರಗುಂಡಿ ಚಿಗರದುಟಿ ಜಿಗದ ನಡಿಗಿ ನಡಿವಾಗ
ತಗತಗದ ಒಗಿತಾಳ ಗೊನ್ನಿ ಸುಂಬಳ
ಹಲ್ಲ ತುಂಬ ಬೂಸರಗಟ್ಟಿ ನಾರತೈತೇ ಬಾಯೆಲ್ಲಾ
ಹೇಸಿರಂಡಿ ಬೇಸ ಮಾಡಿ ನಾಶಿಪುಡಿ ಸೀನ ಸೀತರ
ಬೀಸಕಲ್ಲ ಒಗದಂಗ ದಢತ
ಹುರಕಿನ ಗುಳ್ಳಿ ಒಡದ ನೆತ್ತರ ಸೋರತೈತೊ ಜಲಲ
ಹಸಿ ಬಿಸಿ ತಂಗಳ ರೊಟ್ಟಿ ತಾಸಿಗೆ ಎಂಟ ತಿಂತಾಳಪ್ಪ
ಪುಂಡಿಪಲ್ಲೆ ಹೆಚ್ಚಿಗೇನ ಬೇಕಿಲ್ಲ
ಕಾಸ ಕುಂಬಳಕಾಯಿದಷ್ಟ ಮುದ್ದಿ ಸಾಕ ಸುಳ್ಳಲ್ಲ
ಹರಕ ಸೀರಿ ಉಟ್ಟ ಒಳ ಮುರಕ ಮಾಡಿ ನಡಿವಾಗ
ಪರಾ ಪರಾ ಕೆರಕೋತಾಳ ಮೈಯಲ್ಲಾ
ಹೇನ ಸೀರಾ ಕೂರಿಗಳ ಹರದಾಡತಾವೋ ಸೀರೆಲ್ಲಾ

ಏರ

ಹಾಡಿನ ಮೆಟ್ಟ ಬಾಗೋಡಿ ಊರಾಗ
ಸರಪಣಿ ಹಚ್ಚೆದೇವ ಸಭಾದಾಗಾ ॥

15

ಏರ

ದುಷ್ಟ ಹೆಣ್ಣಿನ ಗುಣವು ಸೃಷ್ಟಿಯೊಳು ಹಿಡಿಸಲಾರದು
ಎಷ್ಟು ಹೇಳಿದರು ಮುಗಿಯದು

ಚಾಲ

ಹುಟ್ಟಿದ ಒಂಬತ್ತು ವರ್ಷಕ ನೆಟ್ಟಗ ರಂಬಿಯ ಮಾನ
ಒಟ್ಟಿಗೆ ತುಂಬಿದರ ಹತ್ತ ವರ್ಷ ಪೂರ್ಣ
ಆಕಿ ಯೋನಿ ಇಂಬ ಆತರಿ ಹತ್ತೀತ ಕೆಟ್ಟ ವ್ಯಸನ
ಹನ್ನೊಂದ ವರ್ಷಕ ಹೆಣ್ಣಿನ ಜ್ಞಾನ ಪಲ್ಲಟ ಆಗತೈತಿ
ಅನ್ಯರ ಮನಿಗೆ ಹೋಗುವಂತ ದ್ಯಾಸ
ಕನ್ನಿ ದ್ಯಾಸಾ ಬ್ಯಾರೆ ನೆನಸತಾಳೊ ಗಂಡಸರನ
ಹನ್ನೆರಡ ವರ್ಷ ಆದಮ್ಯಾಲ ಮಾನಿನಿ ನೀನೇ ಜ್ಞಾನಿ ವಾನಿ
ಏರಿ ಬಿಡತಾಳೆಲ್ಲಾ ಅಭಿಮಾನಾ
ಕೈಕಾಲ ತಿಕ್ಕಿ ಸೀರಿ ಕುಬಸಾ ಮಾಡತಾಳೋ ಹಸನಾ

ಏರ

ಎಷ್ಟು ಹೇಳಿದರೆ ಮುಗಿಯದೋ ಹೆಂಗಸರನ
ಕಟ್ಟಿ ಚಲ್ಲುವೆನೋ ಬಲಿಯೊಳಗ

16

ಏರ

ಜಂಬ ಮಾಡುತ ನಾರಿ ಜಾಂಬ ಕೈಯಾಗ ಹಿಡದ
ತುಂಬಿಕೊಂಡ ಜೇನುತುಪ್ಪವನು                      ॥

ಚಾಲ

ಶೃಂಗಾರವಾದ ನಾರಿ ನಿನ್ನ ಉಂಗರ ಗೂದಲ ಏನ ಚಂದಾ
ಬಂಗಾರದ ವಸ್ತ ಅಂಗದಲಿ
ಜಡದ ಇಟ್ಟಿದಿಯಾ ಉಂಗುರ ಬೆರಳಿನಲಿ
ಹಿರ್ದ ಜರ್ದ ಸೀರಿ ಉಟ್ಟಿದಿಯಾ
ನೋಡಿ ಪೆಂಗಲಾದೇನ ಖಾಸ ರೇಶ್ಮೀ ಕುಬಸಾ ತೊಟ್ಟಿದಿ
ಮುತ್ತಿನಂತ ಬಾಲಿ ಮತ್ತು ಸತ್ಯಮಾತ ಒಂದ ಹೇಳ
ಅತ್ತಿ ಹೂವಿನ ಸೀರಿ ಒತ್ತಿ ಸಿಗಸಿ ಉಟ್ಟಿದಿಯಾ
ಏನ ಸಿಸ್ತ ಕಾಣಸ್ತಾವ ರತ್ನದಂತಾ ತುಟಿ
ನಿನ್ನ ಸುತ್ತ ಮುತ್ತ ಗೆಳತೇರು ಇಲ್ಲ ಸಟೆಯ
ತಂಗ ಮಾಡಿ ಹೋಗಬ್ಯಾಡ
ಹ್ಯಾಂಗರ ಮಾಡಿ ಕರಿತೇನು ಮುಂಗುರುಳ ತಿದ್ದಿತೀಡಿ
ತುರಬ ಕಟ್ಟಿದಿಯಾ

ಬೆಳದಿಂಗಳ ಮುಖಿಯೇ
ತೀರಿಸಿ ಹೋಗ ನನ್ನ ಚಟೆಯೇ ನಿನ್ನ ಕಂಡು ಕಾತುರಗೊಂಡು
ಎರಡು ಪುಟಿ ಚಂಡಿನಂತಾ ಮಲಿಗಳ ಹಿಂಡಿ ಹಿಚಕಿ
ಯಾವಾಗ ಹಿಡದೇನು
ಅಕ್ಕರತೀಲಿ ನಾರಿ ನಿಂತ ನಕ್ಕರ ಆತ ಉಮ್ಮೇದ
ತುಪ್ಪ ಸಕ್ಕರಿ ಉಂಡಂಗ ಆನಂದ
ಹಿಂತಾ ಮಕ ಹರೇದಾಗ ಚಂದಾ ನೀ ನಕ್ರ ಮಾಡುವೆ ನಾ ದುಂಧ
ತಿಂಗಳ ದಿನಾ ಆತ ನಮ್ಮ ಅಂಗಳದಾಗ ಹಾಯಿತಿಯೆ
ಕಂಗಳಾ ಎತ್ತಿ ನೋಡವಲ್ಲೆ ಹಂಗ ಹೋಗತೀಯ
ಬೆಳದಿಂಗಳ ಮುಖಿಯೇ ತೀರಿಸಿ ಹೋಗ ನನ್ನ ಚಟಿಯೆ

ಏರ

ತುಂಬಿಕೊಂಡ ಜೇನು ತುಪ್ಪವನು ಪ್ಯಾಟಿಲೆ
ಸಂಬ್ರಮದಿಂದ ಬರತಿದ್ದೆ

17

ಏರ

ಜುಮರ ಮಾಡುತ ನಾರಿ ಸ್ವಾಮಾರ ಸಂಜೀಲೆ
ತಾಮ್ರಕೊಡ ಹೊತ್ತ ತೆಲಿಮ್ಯಾಲಾ ॥

ಚಾಲ

ಕತ್ತಿಗೆ ಕಟ್ಟಾಣಿ ಸರಾ ಶ್ರೇಷ್ಠವಾದ ಏಕಾವಳಿ
ಅಷ್ಟುಕು ಮಿಗಿಲಾದ ಸೇರಿನ ಸರಿಗಿ
ಮ್ಯಾಲ ದಟ್ಟ ಗೋದಿ ಸರಾ ಮುತ್ತಿನ ಮುರಗಿ
ವಾಚಕೃಷ್ಣ ಚಂದರದಾರ ಹತ್ತೇತಿ ಮಲಿಗಿ
ಹಾರಾ ಏಕಾವಳಿ ಹಾಕಿ ಭಾರ ಕುಚ ತೋರತಾವು
ಚಾರು ಕುಂಕುಮ ಹಚ್ಚಿ ನಿನ್ನ ಹಣೆಯಲ್ಲಿ
ಮರಳಿ ವಾರಿ ನೋಟಾ ನೋಡತೀಯಾ ಎಳಿ ಹುಡಿಗಿ
ನನ್ನ ಸಂಗ ಮಾಡ ಏ ಬೃಂಗ ಕುಂತಾಳಿ ನಿನ್ನಂಗ
ಇಲ್ಲ ಯಾರ್ಯಾರಾ
ಅಂದಜೇನ ಸತಿಯ ಸೋಮಾರಾ
ಹೊಟ್ಟಿ ತಿಳಪ ಬಾಳಿ ಸುಳಿಯಾಂಗ ನಿನ್ನ ಹೊಳಪ ರಮಣ ಸತಿಯಂಗ
ಎಲ್ಲಿ ತಪ್ಪಿಹುಟ್ಟಿದೀಯ ಧರಿಮ್ಯಾಲ
ತುಟಿ ಚೀಪತೇನ ಕಡದೀಗ ॥

ಏರ

ತಾಮ್ರ ಕೊಡ ಹೊತ್ತ ತಲಿಮ್ಯಾಲ ನಿನ್ನ ಕಂಡ
ಅಮರುವಂಗಾತು ಮನದೊಳಗ ॥

18

ಏರ

ಸುಳಿಗಾಳಿ ತಂಪೀಗೆ ಎಳಿ ಬಾಳಿ ಸುಳಿಯಂಗ
ಬಳಬಳನೆ ಬಳಕಿ ಬೀಳುವಳು

ಚಾಲ

ಶಂಕಿನಿ ಜಾತಿಯ ಹೆಣ್ಣಿನ ಟೊಂಕಾ ಕದರ ಕುಂಡಿ ತಿಗಾ
ಡೊಂಕ ನಡಿಗಿ ನಡಿಯುವಳು
ಪರೀಕ್ಷೆ ಮಾಡಿ ತಿಳಿಯಲಿ ಆಕಿ ಶಂಕಿನಂಬುವಳೋ
ನಾಲ್ಕು ಬಟ್ಟು ಹಣಿಯವಳು ಮ್ಯಾಲ ನೋಟ ನೋಡತಾಳೋ
ಎಡಬಲಕ ಇಲ್ಲದಿದ್ದರ ನಗತಾಳೋ
ಹಸ್ತಿನಿ ಜಾತಿ ಗಂಡಸಗ ಮಾಯಮಾಡುವಳೋ
ಗುಹ್ಯ ಸ್ಥಾನದೊಳು ಕೂದಲುಮಯವಾಗಿ ಬಾಯಿ ಬಡಿಕಿ
ನ್ಯಾಯ ಮಾಡುವಲ್ಲಿ ಸಿಟ್ಟಿನವಳು
ಹಸ್ತಿನಿ ಜ್ಯಾತಿ ಗಂಡಸಗ ಮಾಯ ಮಾಡುವಳು

ಏರ

ಬಳಬಳನೆ ಬಳುಕಿ ಬೀಳುವಳೆ ಪದ್ಮಿನಿಯು
ಎರಡು ಬಟ್ಟ ಹಣಿಯ ಬಸವಣ್ಣ                          ॥

19

ಏರ

ಹೆಣ್ಣಿಗೆ ಹರೆಯ ಬಂದ ಕಣ್ಣ ತಿರುವದು ಕಲ್ತ
ಅಣ್ಣ ತಮ್ಮರದ ದರ್ಜಿಲ್ಲ                                     ॥

ಚಾಲ

ಹರೆಯ ಬಂದರ ನಾರಿ ನೆರಮನಿ ದೊರೆಮನಿ ಹೊಕ್ಕ
ಹೊರಹೊರಗ ಇರತೈತಿ ಆಕಿ ದ್ಯಾಸಾ
ಮೈ ನೆರೆದ ದಿವಸ ಮಾಡತಾಳೋ ಪುರುಷನ ನೆಪ್ಪಾ
ಕಂಡು ಕಾಣದಂಗ ಅವಳ ಗಂಡಸರ ವಾರಿಯ ನೋಟ
ದುಂಡ ಕುಚದ ಮ್ಯಾಲ ಅವಳ ದ್ಯಾಸಾ
ಸೀರಿ ನಿರಗಿ ಹೊಯ್ಯದಾಳೊ ಹೆಂತಾ ಖಾಸಾ
ಬಣ್ಣೀಸಿ ಬೈತಲಿ ತೆಗದ ನುಣ್ಣಾಗಿ ತುರುಬಾವು ಕಟ್ಟಿ
ಎಣ್ಣಿ ಬೆವರ ಮಾರಿಗೆ ತುಸಾ
ರಿಕ್ಕ ಮಾಡಿ ಗಳದ ಕಟ್ಟಿದಾಳೋ ಕುಬಸಾ ॥

ಏರ   ಅಣ್ಣತಮ್ಮರದು ದರ್ಜಿಲ್ಲ ಅವಳೀಗೆ

20

ಏರ   ಬಡಸುವನು ನಿನ್ನ ಗಂಡ ಕಡಸುವೆ ಬೇಗಿನ ಒಯ್ಯರಿ
ದುಡ ದುಡದ ಮುಪ್ಪನಾಗೇತಿ

ಚಾಲ

ಚೀಲ ಹರಕಿ ನಿನ್ನ ಗಂಡನ ಡವಲ ಮಾಡಿ ಹೇಳ ಬ್ಯಾಡ
ಕಾಲಡೊಂಕ ಮೆಲುಗೈಯ ಕೆಡಕ
ನನ್ನಂತ ಚೆಲುವ ಯಾಂವದಾನ ಹುಡಕ
ಎಲ್ಲಾ ಹೆಂಗಸರಕಿಂತ ನಿನ್ನ ಬಲ ಮಾಡಿ ಇಡತೇನ
ಪಲ್ಲಂಗದ ಮ್ಯಾಲ ಮಲಗಿಕೊಳ್ಳ
ಹೊಲಮನಿ ಎಲ್ಲಾ ನಿನ್ನ ಸ್ವಾದೀನ ಮಾಡಿಕೊಳ್ಳು
ತಾಯಿ ತಂದಿ ಅಣ್ಣನ ಪಾಲಿಗೆ ಮುಂದಾಗಿ ಕಳಿಸಿದೇನ
ಬಂದ ಹೇಣ್ತಿದೈತ ಭಾಳ ಘೋರಾ
ನೀ ಬರತೇನಂದ್ರ ಸೋಡಪತ್ರ ಕೊಡತೇನ ಹೋಗಲೆವಳ

ಏರ

ದುಡ ದುಡದ ಮುಪ್ಪನಾಗೇತಿ
ಗಂಡ ಪಡಿಕಾಳಾ ತರುವ ಪಡಿಸೆಂಟ ॥

21

ಏರ

ಗಂಗಾಳ ಮಾರಿಯ ಹುಡಗಿ ಮುಗಳ ನಗಿ ನಕ್ಕೊಂತ
ಅಂಗಳದಾಗ ಹಾದ ಬರತಿದ್ದೆ                            ॥

ಚಾಲ

ಯಾರ ಹೇಳ ನಾರಿ ನಿನ್ನ ನೀರ ಹಾದ್ಯಾಗ ನೋಡಿನಿ
ಹರಿಯಾನ ಸುಟ್ಟು ಉರಿಯತಿಯ ದುಮ್ಮ ದುಮ್ಮ
ಒಮ್ಮಿ ಕೇಳಿದರ ಕೇಳವಲ್ಲಿ ಗುಮ್ಮಿ ಗುಸಿಗ ಹಂಗಾ ಹೊಂಟಿ
ಅಮ್ಮಿ ಹಿಡದ ಗುಮ್ಮತೀನ ಸುಮ್ಮ ಸುಮ್ಮನೇ
ನಿನ್ನ ಧ್ಯಾನದೊಳು
ಬ್ರಹ್ಮಿ ಬಡದ ಕುಂತಿದೇನು ಕಾಮ ಏರಿ ಮೈ ಅಂತದ ಜುಮ್ಮ ಜುಮ್ಮ
ನಲ್ಲಿ ಒಲ್ಲಿ ನೀ ಅನ್ನಬ್ಯಾಡ ಇಲ್ಲೇನಿಂದ್ರ ಮಾತನಾಡ
ಮಲ್ಲಿಗೆ ಹೂವ ಮುಡದಂಗ ಗಮ್ಮ ಗಮ್ಮ ಗಟ್ಟಿ
ಮಾತ ಮಾತ ಹೇಳವಲ್ಲಿ
ಮಿಟ್ಟಿಮಸಗಿ ಮಾತಾಡವಲ್ಲೇ ಎಷ್ಟಾರ ಖಾಲಿ ನಿನ್ನ ದಮ್ಮ ದಮ್ಮ ॥
ನಾಗರ ಹಾವಿನ ಹಂಗ ಇಬ್ಬರೂ ಸಾಗರಬಿದ್ದು ಮಾಡೋಣು
ನಗಾರಿ ಹೊಡದಂಗ ಧುಮ್ಮ ಧುಮ್ಮ

ಏರ

ಅಂಗಳದಾಗ ಹಾದ ಬರತಿದ್ದೆ ಹೆಂತಾ ಲಗ್ಗ
ನಿಗಾ ಆದಿಯ ಮೈನೆರದೆ

22

ಏರ

ಹಿಂತಾ ಶಾಸ್ತ್ರದ ಮಾತ ಕುಂತ ಕೇಳತಿ ಚದುರಿ
ಪಂಥಾ ಮಾಡಿ ಸುಳ್ಳೆ ಕೆಡಬ್ಯಾಡಾ ॥

ಚಾಲ

ಎಂದೆಂದು ಹಾಡಿದರ ಹಳಿ ಪದಾ
ಒಂದ ಹೊಸದ ಹಾಡಲಿಲ್ಲ ಠೀಕಾ
ಗೀಳ ಪದ ಹಾಡಿ ಬೆಳಿತನಕಾ ಯಾಳೆಗಳದ ಹೊರಟಿ ಆತ ಬೆಳಕಾ
ಇನ್ನೇನೈತಿ ಕಣ್ಣೀಗೆ ಕೈಯ್ಯ ಹಾಕತೇನ ತಳತನಕ  ಕೇಳ ತಳತನಕಾ
ಅನುಮಾನ ಇಲ್ಲದ ಹಾಡಹಾಡಿ ಹಿಡದ ಎಳದಾಡಿ
ಹೊಡಿಯತೇನ ಜ್ಯೋಲಿ ಕೇಳ ಜ್ಯೋಲಿ
ಎಷ್ಟಂತ ಹೇಳತೀಯ ತಗಲಾ  ಮಟ್ಟೀಯ ತೊಗಲಾ
ಜೋತಾಡತಾವ ಮಲಿ ಕೇಳ ಮಲಿ
ತೀರಿ ಹೋತ ನಿನ್ನ ಹಂಗಾಮು
ನಾಯಿಗಂಜಿ ಹೋದಂಗ ಜಂಗಮಾ
ಇನ್ನಾರ ಹೋಗ ತಣ್ಣಗ
ನಿಮ್ಮ ಅಣ್ಣಗ ಹೇಳ ಈ ವಾರ್ತಿ
ಬಾಗೋಡಿಯವರು ಹಾಡುವಲ್ಲಿ ಕೀರ್ತಿ
ರಾಜ್ಯ ರಾಜ್ಯಕ ಎಲ್ಲ ಹೆಸರಾತಿ
ಬಸಲಿಂಗ ಬಸವಂತ ಹಾಡೋದು ವಾಸಂತ
ಕಾಲದ ರೀತಿ ಕಾಲದ ರೀತಿ ॥

ಏರ

ಪಂಥಮಾಡಿ ಸುಳ್ಳೆ ಕೆಡಬ್ಯಾಡ ಇಂಚಲದ
ಸ್ವಂತ ಕವಿಗಳು ಹೇಳಿದರು ॥

23

ಏರ

ಆತ ಇಲ್ಲದ ಹೆಣ್ಣ ತೂತ ಇಲ್ಲದ ಮುತ್ತ
ಹೋತಿನ ಕೊರಳಿನ ಮಲಿ ಹಂಗಾ

ಚಾಲ

ಮಲಿಯ ಕುಡಿಸೇನಂತ ಬಾಳ ಬಲದಿಂದ ಹೇಳತೀಯ
ಕಲನಾಲಿ ತಿಳದಲ್ಲಿ ಹಾಲಿನ ಗುರ್ತಾ
ನಾನ ಸಲವೇನಂತ ಹೇಳತೀಯ ಬಡಿವಾರಾ
ಕೇಳ ಎಲ್ಲಿಂದ ಬಂದವು ಹಾಲಿನ ದ್ವಾರಾ
ಮಾಡುವ ಗಂಡಸಿನಿಂದ ದೊರೆದಾವ ಹಾಲಿನ ಮಜಕೂರಾ
ಸುಗುಣೀಗೆ ಹಾಲ ಇಲ್ಲದ ಮೂಲಾ
ಉಗಡ ಒಡದ ಹೇಳತೇನ ಅಗಡ ತಿಗಡ ಹಚ್ಚಬ್ಯಾಡಾ
ಏನು ತಕರಾರಾ
ತಳಾಬುಡಾ ಒಡದ ಕೇಳೆನೇ ಒಳಗಿನ ಆಕಾರ
ಕಲ್ಲಾನ ಕಪ್ಪಿಗಿ ಎಲ್ಲಿ ಅನ್ನ ಇಟ್ಟಸಲುವ್ಯಾನ ಮಲ್ಲಿಕಾರ್ಜುನಾ
ಇದನ ಯಾವ ಬಲ್ಲ ಭಗವಾನಾ
ಅವರ ಹೊರತ ಗೊತ್ತಿಲ್ಲ ಯಾರಿಗಿ ಏನಾ

ಏರ

ಹೋತೀನ ಕೊರಳಾನ ಮಲಿ ಹಾಂಗ ನೀ ಇರು
ದಾತ ಗಂಡಸನು ಇಲದಿದ್ರ

24

ಏರ

ಕುಲ್ಲಪದ ಹಾಡುವ ಚಿಲ್ಲರ ನಾವಲ್ಲ
ಮಲ್ಲಿಗೆ ಹೂವಿನಂತ ಜಮದಗ್ನಿ                          ॥

ಚಾಲ

ಕೊಲ್ಲುವ ಜೀವ ಉಳಸತಾಳ ಉಳಸುವ ಜೀವ
ಕೊಲ್ಲತಾಳ ಬೇಕಾದಂಗ ಮಾಡತಾಳೋ ಹಂಚಿಕಿ
ಮನಸಿಗ ಬಾರದಿದ್ದರ ಮದ್ದ ಹಾಕಿ ಬಿಡತಾಳ ಹಿಚಿಕಿ
ಮಕ್ಕಳಂದರ ನೋಡೂದಿಲ್ಲ ದುಃಖ ಇಲ್ಲದ ಕೊಲ್ಲಸತಾಳೊ
ಚೆಕ್ಕಾಮಲಿಕಿ ಕೀಳ ಗಾಲಗಡಿಕಿ
ಸೊಕ್ಕ ಬಂದ್ರ ತಾಯಿ ತಂದಿನ ನೋಡೂದಿಲ್ಲ ಆಕಿ
ರೊಜ್ಜು ರಾಡಿ ಹೇಸಿ ಹೆಣ್ಣಿನ ಗೋಜ ಬೇಡಂತ
ಉಪಮನ್ನೇರು ಸಜ್ಜಬಂದ
ಹೊಕ್ಕಾರ ಮನ್ಯಾಗ ಜನಿಸಿ
ಇಂಚಲಪದಾ ಬೀಜದಂತಾವ ಕೇಳ ಪುರಮಾಸಿ ॥

ಏರ

ಮಲ್ಲಿಗಿ ಹೂವಿನಂತಾ ಜಮದಗ್ನಿ
ಎಲ್ಲಮ್ಮ ಕೊಲ್ಲಸ್ಯಾಳ ಗಂಡನ್ನ ॥

25

ಏರ

ಕಾಲ ಸರಪಳಿ ರುಳಿಯೇ ವಡ್ಡ್ಯಾಣ
ವಾಲಗಿ ಮೂರ ಕೊಳತುಂಬ ॥

ಚಾಲ

ಕುಟಿಲ ಕುಂತಳಿ ನಿನ್ನ ತುಟಿಯ ತೊಂಡಿ ಹಣ್ಣ
ಇಟ ಜ್ಞಾನ ದೊಳು ಸಣ್ಣ
ನಿನ್ನ ಬಣ್ಣ ವರ್ಣಿಸಲಾರೆ ಕಣ್ಣೆರಡು ಎರಳಿಯ ನೋಟಾ
ನೋಡಿ ಮನ್ಮಥನು ಬಾಣ ಬಿಟ್ಟ
ಕೊಂಕ ಮಾಡುತ ಹೊಂಟಿ ವಂಕಿಯೊಳು ಚಿಂತಾಪಟ್ಟಿ
ಟೊಂಕಕ ವಡ್ಡ್ಯಾಣ ಇಟ್ಟಿ ಪಂಕಜಾಕ್ಷಿಯ ಭೆಟ್ಟಿ
ನಿನ್ನ ಕಂಡ ಉಂಡಂಗ ಆತ
ಮಂಡಲದೊಳು ಚಲುವೆ ದುಂಡದೋಳಿನ ವಯ್ಯರಿ
ಮನಗಂಡಾದೇನ ಗಾಬರಿ

ಏರ

ವಾಲಗಿ ಮೂರ ಕೊಳತುಂಬ ಇಟಕೊಂಡ
ಲೋಲ್ಯಾಡುತ ಬಂದ್ಳ ದಾರಿಲಿ

* * *