ಆರಂಬ ಅಡವೀಲಿ ನೀರೆಲೆ ಶಿವನೆ ಏ ಗಿಣಿ ಏ ಗಿಣಿಯೇ
ನೀರಿಗೆ ಹೋಪುಕೆ ಮಾವಯ್ಯ ಬನ್ನಿ ಏ ಗಿಣಿ ಏ ಗಿಣಿಯೇ
ಮಾವಯ್ಯ ಅಂಬಾಕೆ ಹೆಣ್ಣೆ ನೀನು ಏ ಗಿಣಿ ಏ ಗಿಣಿಯೇ
ನಿನ ಗಂಡನ ಅಪ್ಪ ನಾನೇನಲ್ಲ ಏ ಗಿಣಿ ಏ ಗಿಣಿಯೇ
ಕಣ್ಣಲಿ ನೀರ ಸೆಡಿದಳಲೆ  ಏ ಗಿಣಿ ಏ ಗಿಣಿಯೇ
ಆರಂಭ ಅಡವೀಲೆ ನೀರಿಲೆ ಶಿವನೆ ಏ ಗಿಣಿ ಏ ಗಿಣಿಯೇ
ನೀರಿಗೆ ಹೋಪುಕೆ ಅತ್ತೆ ಬನ್ನಿ ಏ ಗಿಣಿ ಏ ಗಿಣಿಯೇ
ಅತ್ತಿ ಎಂಬಾಕೆ ಹೆಣ್ಣೆ ನೀನು ಏ ಗಿಣಿ ಏ ಗಿಣಿಯೇ
ನಿನ ಗಂಡನ ಅಮ್ಮ ನಾನೇನಲ್ಲ ಏ ಗಿಣಿ ಏ ಗಿಣಿಯೇ
ಆರಂಭ ಅಡವೀಲೆ ನೀರೆಲೆ  ಶಿವನೆ ಏ ಗಿಣಿ ಏ ಗಿಣಿಯೇ
ನೀರಿಗೆ ಹೋಪುಕೆ ಅತ್ತಿಗೆ ಬನ್ನಿ ಏ ಗಿಣಿ ಏ ಗಿಣಿಯೇ
ನಿನ ಗಂಡನ ತಂಗಿ ನಾನೇನಲ್ಲ ಏ ಗಿಣಿ ಏ ಗಿಣಿಯೇ
ಕಣ್ಣಲ್ಲಿ ನೀರ ಸೆಡಿದಾಳಲ್ಲೆ  ಏ ಗಿಣಿ ಏ ಗಿಣಿಯೇ
ಮಾರಗು ಕುಡಿ ನಡೆದಳಲೆ ಏ ಗಿಣಿ ಏ ಗಿಣಿಯೇ
ಆರಂಬ ಅಡವೀಗೆ ಹೋದಾಳಲೆ ಏ ಗಿಣಿ ಏ ಗಿಣಿಯೇ
ಕೊಡ ತುಂಬ ನೀರನ್ನ ತುಂಬಿ ಏ ಗಿಣಿ ಏ ಗಿಣಿಯೇ
ಅತ್ತೂ ಇತ್ತೂ ನೋಡಿದಳೆ  ಏ ಗಿಣಿ ಏ ಗಿಣಿಯೇ
ಕೊಡನ ನೆಗುಕೆ ಯಾರೂ ಇಲ್ಲ ಏ ಗಿಣಿ ಏ ಗಿಣಿಯೇ
ಗಂಡನ ತಮ್ಮ ಮೈದಿನಣ್ಣ ಏ ಗಿಣಿ ಏ ಗಿಣಿಯೇ
ಗೋಗಂಟಿ ಬಿಟ್ಟೆ ಕಾಯ್ತಾ ಇದ್ರು ಏ ಗಿಣಿ ಏ ಗಿಣಿಯೇ
ಗಂಡನ ತಮ್ಮ ಮೈದಿನಣ್ಣ ಏ ಗಿಣಿ ಏ ಗಿಣಿಯೇ
ತುಂಬಿದ ಕೊಡನ ನೆಗಿಯ ಬನ್ನಿ ಏ ಗಿಣಿ ಏ ಗಿಣಿಯೇ
ಕೊಡನ ನಾನೆಗಿದರೆ ಏ ಗಿಣಿ ಏ ಗಿಣಿಯೇ
ನನಗೇನು ಕೊಡುತೀಯೆ ಏ ಗಿಣಿ ಏ ಗಿಣಿಯೇ
ಅರ್ಧ ಆಸ್ತಿ ಬರೆದು ಕೊಡ್ತೆ ಏ ಗಿಣಿ ಏ ಗಿಣಿಯೇ
ಅರ್ಧ ಅಸ್ತಿ ಬೇಡ ನನಗೆ ಏ ಗಿಣಿ ಏ ಗಿಣಿಯೇ
ನಾನ್ಹೇಳಿದ ಮಾತಿಗೊಲಿಯಬೇಕು ಏ ಗಿಣಿ ಏ ಗಿಣಿಯೇ
ಹಿರಿಯ ಅಣ್ಣನ ಮಡದಿ ಕಾಣಿ ಏ ಗಿಣಿ ಏ ಗಿಣಿಯೇ
ಹೆತ್ತ ತಾಯಿಗೆ ಸರಿಯು ಕಾಣಿ ಏ ಗಿಣಿ ಏ ಗಿಣಿಯೇ
ಪತಿವ್ರತಿ ಸರವ ಕೆಡಸಲು ಬೇಡಿ
ನನ್ನ ತಂಗಿ ಪಾರ್ವತಿಯನ್ನು ಏ ಗಿಣಿ ಏ ಗಿಣಿಯೇ
ಧರ್ಮಕೆ ದಾರಿ ಎರೆದು ಕೊಡ್ತೆ ಏ ಗಿಣಿ ಏ ಗಿಣಿಯೇ
ಧರ್ಮಕೆ ಪಾರ್ವತಿ ಬ್ಯಾಡ ನನಗೆ ಏ ಗಿಣಿ ಏ ಗಿಣಿಯೇ
ನಾನ್ಹೇಳಿದ ಮಾತಿಗೆ ಒಲಿಯಬೇಕು ಏ ಗಿಣಿ ಏ ಗಿಣಿಯೇ
ನೂರೊಂದು ಗೋ ಗಂಟಿ ಏ ಗಿಣಿ ಏ ಗಿಣಿಯೇ
ಕೊಟ್ಟಿಗೆಲ್ಯಾರು ಕೂಡಿಕೆ ಏ ಗಿಣಿ ಏ ಗಿಣಿಯೇ
ಸಂಜಿಯ ಕಾಲದಲಿ ಏ ಗಿಣಿ ಏ ಗಿಣಿಯೇ
ಮೆತ್ತಿನ ಮೇಲೆ ಬನ್ನಿ ಎಂದ್ಲು  ಏ ಗಿಣಿ ಏ ಗಿಣಿಯೇ
ತುಂಬಿದ ಕೊಡವ ನಗೆ ಗಹಿ ಕೊಟ್ಟ ಏ ಗಿಣಿ ಏ ಗಿಣಿಯೇ
ಕಣ್ಣಲಿ ನೀರ ಸೆಡಿದಾಳಲ್ಲೆ ಏ ಗಿಣಿ ಏ ಗಿಣಿಯೇ
ನೀರಿನ ಕೊಡವ ಹೊತ್ತುಕೊಂಡು ಏ ಗಿಣಿ ಏ ಗಿಣಿಯೇ
ಕೇಳಿಗೆ ನೀರು ತುಂಬಿದಾಳೆ ಏ ಗಿಣಿ ಏ ಗಿಣಿಯೇ
ಮೆತ್ತಿನ ಮೇಲೆ ನಡೆದಾಳೆ ಏ ಗಿಣಿ ಏ ಗಿಣಿಯೇ
ಗಂಡನಪೋಟೋ ತೆಗೆದಾಳೆ ಏ ಗಿಣಿ ಏ ಗಿಣಿಯೇ
ಕಣ್ಣಲ್ಲಿ ನೀರು ಸೆದಾಳಲ್ಲೆ ಏ ಗಿಣಿ ಏ ಗಿಣಿಯೇ
ಮರಕ್ತೆ ನಿದ್ರೆ ಬಂದೀತಲೆ ಏ ಗಿಣಿ ಏ ಗಿಣಿಯೇ
ಮೈದುನಣ್ಣ ಅಂಬುವನು ಏ ಗಿಣಿ ಏ ಗಿಣಿಯೇ
ನೂರೊಂದ್ ಗೋ ಗಂಟಿ ಏ ಗಿಣಿ ಏ ಗಿಣಿಯೇ
ಕೊಟ್ಟಿಗೆಯಲ್ಲಾರೂ ಕೂಡಿ ಬಂದು ಏ ಗಿಣಿ ಏ ಗಿಣಿಯೇ
ಮೆತ್ತಿನ ಮೇಲೆ ಓಡಿ ಬಂದ ಏ ಗಿಣಿ ಏ ಗಿಣಿಯೇ
ಬಾಗಿಲ ಕದವ ತೆಗಿಯೇ ಅಂದ ಏ ಗಿಣಿ ಏ ಗಿಣಿಯೇ
ದಂಡಿಗೆ ಹೋದ ಗಂಡನೀಗೆ ಏ ಗಿಣಿ ಏ ಗಿಣಿಯೇ
ಕೆಟ್ಟ ಕೆಟ್ಟ ಸಪ್ನವು ಬಿದ್ದು ಏ ಗಿಣಿ ಏ ಗಿಣಿಯೇ
ಮೂರು ದಿನದ ದಾರಿ ಅಂಬ್ರು ಏ ಗಿಣಿ ಏ ಗಿಣಿಯೇ
ಅರ್ಧ ಗಳಿಗಿಗೆ ಙಡ ಬಂದು ಏ ಗಿಣಿ ಏ ಗಿಣಿಯೇ
ಮತ್ತಿನ ಮೇಲೆ ನಡೆದನಲೆ ಏ ಗಿಣಿ ಏ ಗಿಣಿಯೇ
ಬಾಗಿಲಾರು ತೆಗಿಯೇ ಹೆಣ್ಣೆ ಏ ಗಿಣಿ ಏ ಗಿಣಿಯೇ
ಹಿರಿಯ ಅಣ್ಣನ ಮಡದಿ ಕಾಣಿ ಏ ಗಿಣಿ ಏ ಗಿಣಿಯೇ
ಹೆತ್ತ ತಾಯಿಗೆ ಸೆರಿಯೇ ಕಾಣಿ ಏ ಗಿಣಿ ಏ ಗಿಣಿಯೇ
ಪತಿವ್ರತಿ ಸರ ಕೆಡಿಸಲು ಬೇಡಿ ಏ ಗಿಣಿ ಏ ಗಿಣಿಯೇ
ನನ್ನ ತಂಗಿ ಪಾರ್ವತಿ ಏ ಗಿಣಿ ಏ ಗಿಣಿಯೇ
ಧರ್ಮಕೆ ಧಾರೆ ರೆದು ಕೊಡ್ತೆ ಏ ಗಿಣಿ ಏ ಗಿಣಿಯೇ
ಮೈದಿನಣ್ಣ ಅಲ್ಲ ಹೆಣ್ಣೆದ ಏ ಗಿಣಿ ಏ ಗಿಣಿಯೇ
ಬಾಗಿಲಾರೂ ತೆಗಿಯೆ ಹೆಣ್ಣೆ
ಆರಂಭ ಅಡವೀಲಿ ನೀರೆಲೆ ಶಿವನೆ ಏ ಗಿಣಿ ಏ ಗಿಣಿಯೇ
ನೀರಿಗೆ ಹೋಪುಗೆ ಮಾವಯ್ಯ ಬನ್ನಿ ಏ ಗಿಣಿ ಏ ಗಿಣಿಯೇ
ನಿನ ಗಂಡನ ಅಪ್ಪ ನಾನೇನಲ್ಲ ಏ ಗಿಣಿ ಏ ಗಿಣಿಯೇ
ನೀರಿಗೆ ಹೋಪುಕೆ ಅತ್ತೆ ಬನ್ನಿ ಏ ಗಿಣಿ ಏ ಗಿಣಿಯೇ
ನಿನ ಗಂಡನ ಅಮ್ಮ ನಾನೇನಲ್ಲ ಏ ಗಿಣಿ ಏ ಗಿಣಿಯೇ
ನೀರಿಗೆ ಹೋಪುಕೆ ಅತ್ತಿಗೆ ಬನ್ನಿ ಏ ಗಿಣಿ ಏ ಗಿಣಿಯೇ
ನಿನ ಗಂಡನ ತಂಗಿ ನಾನೇನಲ್ಲ ಏ ಗಿಣಿ ಏ ಗಿಣಿಯೇ
ತುಂಬಿದ ಕೊಡಪಾನ ನೆಗೆಯೂಕೆ ಬಾರ ಏ ಗಿಣಿ ಏ ಗಿಣಿಯೇ
ನಿಮ್ಮ ತಮ್ಮ ಮೈದಿನಣ್ಣ ಏ ಗಿಣಿ ಏ ಗಿಣಿಯೇ
ಗೊ ಗಂಟಿ  ಬಿಟ್ಕಂಡ್ ಮೇಸ್ತಾ ಇದ್ರ ಏ ಗಿಣಿ ಏ ಗಿಣಿಯೇ
ತುಂಬಿದ ಕೊಎನೆ ನೆಗಿಯಾಕಿದ್ರೆ ಏ ಗಿಣಿ ಏ ಗಿಣಿಯೇ
ನನಗೇನು ಕೊಡುತೀಯೆ ಏ ಗಿಣಿ ಏ ಗಿಣಿಯೇ
ಧರ್ಮದ ಪಾರ್ವತಿ ಬೇಡ ನನಗೆ ಏ ಗಿಣಿ ಏ ಗಿಣಿಯೇ
ನಾನ್ಹೇಳಿದ ಮಾತಿಗೊಲಿಯ ಬೇಕು ಏ ಗಿಣಿ ಏ ಗಿಣಿಯೇ
ಕಣ್ಣಲ್ಲಿ ನೀರ ಸೆಡಿದಾಳಲೇ ಏ ಗಿಣಿ ಏ ಗಿಣಿಯೇ
ದಂಡಿನ ಕತ್ತಿ ತೆಗೆದನೆ ಏ ಗಿಣಿ ಏ ಗಿಣಿಯೇ
ಅಪ್ಪನ ಕ್ವಾಣಿಗೆ ನಡೆದನಲೆ ಏ ಗಿಣಿ ಏ ಗಿಣಿಯೇ
ದಂಡಿಗೆ ಹೋದ ಮಗನೇ ನೀನು ಏ ಗಿಣಿ ಏ ಗಿಣಿಯೇ
ಎಷ್ಟು ಹೊತ್ತಿಗೆ ಬಂದೀಯ ನೀನು ಏ ಗಿಣಿ ಏ ಗಿಣಿಯೇ
ಸಾಕಿರಿ ಸಲುಹಿರಿ ಅಪ್ಪ ನೀವು ಏ ಗಿಣಿ ಏ ಗಿಣಿಯೇ
ನನ್ನ ಅಪ್ಪ ನೀವು ಅಲ್ಲವೇನು ಏ ಗಿಣಿ ಏ ಗಿಣಿಯೇ
ಮೂರು ಗುಂಡ ಹೊಡದನಲೆ ಏ ಗಿಣಿ ಏ ಗಿಣಿಯೇ
ಅಬ್ಬಿಯ ಕ್ವಾಣೆಗೆ ನಡೆದನೆಲೆ ಏ ಗಿಣಿ ಏ ಗಿಣಿಯೇ
ದಂಡಿಗೆ ಹೊದ ಮಗನೆ ನೀನು ಏ ಗಿಣಿ ಏ ಗಿಣಿಯೇ
ನೀನು ಎಷ್ಟ್ಹೊತ್ತಿಗೆ ಬಂದೆಯ ಏ ಗಿಣಿ ಏ ಗಿಣಿಯೇ
ಹತ್ತು ತಿಂಗಳ ಹೊತ್ತಿದೆ ತಾಯೇ ಏ ಗಿಣಿ ಏ ಗಿಣಿಯೇ
ಹೊತ್ತು ಹೆತ್ತು ಸಾಕಿದ ತಾಯೆ ಏ ಗಿಣಿ ಏ ಗಿಣಿಯೇ
ನನ್ನ ಅಮ್ಮ ಅಲ್ಲವೇನು ಏ ಗಿಣಿ ಏ ಗಿಣಿಯೇ
ಮೂರು ಗುಂಡ ಹೊಡೆದನೆ ಏ ಗಿಣಿ ಏ ಗಿಣಿಯೇ
ಅತ್ತಿಗೆ ಕೋಣೆಗೆ ನಡೆದನಲೆ ಏ ಗಿಣಿ ಏ ಗಿಣಿಯೇ
ದಂಡಿಗೆ ಹೋದ ತಮ್ಮ ನೀನು ಏ ಗಿಣಿ ಏ ಗಿಣಿಯೇ
ಎಷ್ಟೊತ್ತಿಗಾರು ಬಂದೇ ನೀನು ಏ ಗಿಣಿ ಏ ಗಿಣಿಯೇ
ನನ್ನ ಅಕ್ಕ ನೀನು ಅಲ್ಲವೇನು ಏ ಗಿಣಿ ಏ ಗಿಣಿಯೇ
ಮೂರು ಗುಂಡು ಹೊಡೆದನಲ್ಲೆ  ಏ ಗಿಣಿ ಏ ಗಿಣಿಯೇ
ತಮ್ಮನ ಕ್ವಾಣೆಗೆ ನಡೆದನಲ್ಲೆ ಏ ಗಿಣಿ ಏ ಗಿಣಿಯೇ
ದಂಡಿಗ್ಹೋದಣ್ಣಯ್ಯ  ಏ ಗಿಣಿ ಏ ಗಿಣಿಯೇ
ನೀ ಎಷ್ಟೊತ್ತಿಗಾರು ಬಂದೀದೆ ಏ ಗಿಣಿ ಏ ಗಿಣಿಯೇ
ದಂಡೀನ ಕತ್ತಿ ನೆಗಿದಾನಲೆ ಏ ಗಿಣಿ ಏ ಗಿಣಿಯೇ
ನನ್ನ ಕಡುವದಿದ್ರೂ ಕಡಿಲಕ್ಕಣ್ಣ ಏ ಗಿಣಿ ಏ ಗಿಣಿಯೇ
ನನ್ನ ಮೂರು ಮಾತು ಆಡ್ತೇನೆಂದ ಏ ಗಿಣಿ ಏ ಗಿಣಿಯೇ
ನೀನು ದಂಡಿಗ್ ಹೋಯಿ ಆರೇಳು ತಿಂಗ್ಳ ಏ ಗಿಣಿ ಏ ಗಿಣಿಯೇ
ನಿನ್ ಮಡದಿ ಗುಟ್ಟ ತಿಳೀಕಂದ ಏ ಗಿಣಿ ಏ ಗಿಣಿಯೇ
ಅಷ್ಟೊಂದು ಮಾತ ಕೇಂಡನೆ ಅಣ್ಣ ಏ ಗಿಣಿ ಏ ಗಿಣಿಯೇ
ಕಿರಿಯ ತಂಗಿ ಪಾರ್ವತಿಯನ್ನು ಏ ಗಿಣಿ ಏ ಗಿಣಿಯೇ
ಧರ್ಮಕ್ಕೆ ದಾರಿ ಎರ್ದೇ ಕೊಟ್ಟ ಏ ಗಿಣಿ ಏ ಗಿಣಿಯೇ