ಕೊಲ್ಲೂರ ತಳದಿಂದ ಕೊಡಸೀಯ ಪುರದಿಂದ ತಾನು ತಂದನಿಯೆ
ಅತ್ತಿಗೆ ರೂಡಿಯಂಗೆ ಇರುಳೆದ್ದು ತಾನು ತಂದನಿಯೆ
ಅತ್ತಿಗಿ ಅರಮನಿಗೆ ಬರುವನು ತಾನು ತಂದನಿಯೆ
ಅತ್ತಿಗಿ ಮೂರ್ ಕರಿಯೆ ಕರೆವನು ತಾನು ತಂದನಿಯೆ
ಅತ್ತಿಗೆ ಮೂರ್ ಕರಿಯೆ ಏನೆಂದೆ ಕರೆವನೇ ತಾನು ತಂದನಿಯೆ
ಸಂಶಿಲ್ಲದೆ ಕದವ ತೆರಿ ಎಂದನು ತಾನು ತಾನು ತಂದನಿಯೆ    
ನಾ ಕದು ತೆರಿಕಿದ್ರೆ ನೀ ಒಳ ಬರಬೇಕಿದ್ರೆ ತಾನು ತಂದನಿಯೆ
ಈಗಿಗ ನೆಟ್ಟ ಹೊಸ ಹೂಗ ತಂದರೆ ತಾನು ತಂದನಿಯೆ
ಸಂಶಿಲ್ಲದೆ ಕದವ ತೆರೆವೆನು ತಾನು ತಂದನಿಯೆ
ಅಷ್ಟೊಂದ ಮಾತ ಕೇಂಡನೆ ಈಸೂರಯ್ಯ ತಾನು ತಂದನಿಯೆ
ಹತ್ತಲಾಗದ ಗುಡ್ಡ ಹತ್ತಿ ಹೋದ ತಾನು ತಂದನಿಯೆ
ಮೀಸಲಾಗದ ಗುಂಡಿ ಮೀಸಿ ಹೋದ ತಾನು ತಂದನಿಯೆ
ಶೀಂಗಿ ಮುಳ್ಳೋಳಗೆ ಬಗದು ಹೋದ ತಾನು ತಂದನಿಯೆ
ಹೋದ ಜೋಐಇಸರ ಅರಮನಿಗೆ ಈಸೂರಯ್ಯ ತಾನು ತಂದನಿಯೆ
ಜೋಯಿಸರ ಮೂರ್ ಕರಿಯ ಕರೆದನು ಈಸೂರಯ್ಯ ತಾನು ತಂದನಿಯೆ
ಎಂದೂ ಬಾರದಿದ್ದ  ಈಸೂರಯ್ಯ ಇಂದೇನು ಬಂದೀಯ ತಾನು ತಂದನಿಯೆ
ಬಂದ ಕಾರಣವೇ ಒಂದಗ್ಹೇಳು ಈಸೂರಯ್ಯ ತಾನು ತಂದನಿಯೆ
ಈಗೀಗ ನೆಟ್ಟ ಹೊಸ ಹೂಗು ಬೇಕು
ನಾ ಮೆಚ್ಚಿದ ಅತ್ಗೀಗೆ ಕೊಡಲು ಬೇಕು ತಾನು ತಂದನಿಯೆ
ಅಷ್ಟೊಂದ ಮಾತ ಕೇಂಡರು ಜೋಯ್ಸರು ತಾನು ತಂದನಿಯೆ
ಮೆತ್ ಹತ್ತಿ ಮ್ಯಾನೆ ನಡೆದರು ತಾನು ತಾನು ತಂದನಿಯೆ
ನಾಗ ಬೆತ್ತಗಳ ತೆಗೆದರು ತಾವು ತಾನು ತಂದನಿಯೆ
ಹೂಗಿನ ವನಕೆ ನಡೆದರು ತಾವು ತಾನು ತಂದನಿಯೆ
ಜಾಜಿಯ ವನಕೆ ನಡೆದರು ತಾವು ತಾನು ತಂದನಿಯೆ
ಜಾಜಿಯ ಎಗಲೊಂದೆ ಮುರಿದರು ಜೋಯಿಸರು ತಾನು ತಂದನಿಯೆ
ಕಟ್ಟಿ ಕಟ್ಟಿ ಅದನ ನೆಡುವರು ಜೋಯಿಸಲು  ತಾನು ತಂದನಿಯೆ

ಮಂತ್ರಗಿಂಡಗಿಲಿ ನೀರ ಬಿಡುವರು ಜೋಯಿಸರು ತಾನು ತಂದನಿಯೆ
ನಾಗ ಬೆತ್ತಗಳ ಎಳೆದರು ಜೋಯಿಸರು ತಾನು ತಂದನಿಯೆ
ಜಾಮಕೈದು ಮಿಟ್ಟಿ ಮಕಿಯಾದೋ ತಾನು ತಾನು ತಂದನಿಯೆ
ಈಸೂರಯ್ಯನ ಕರೆದು ಏನೆಂದು ನುಡಿದರು ತಾನು ತಂದನಿಯೆ
ಪಟ್ಟೆ ಸೆರಗ್ಹಾಸಿ ಹೂಗ್ ಕೋಯ್ ಎಂದರು ತಾನು ತಂದನಿಯೆ
ಅಷ್ಟೊಂದ್ ಮಾತ ಹೇಳ್ದರೆ ಜೋಯಿಸರು ತಾನು ತಂದನಿಯೆ
ಮಲ್ಲಿಗಿ ವನಕೆ ನಡೆದರು ತಾವು ತಾನು ತಂದನಿಯೆ
ಮಲ್ಲಿಗಿ ಎಗಲೊಂದ ಮುರಿದರು ಜೋಯಿಸರು ತಾನು ತಂದನಿಯೆ
ಕಟ್ಟಿ ಕಟ್ಟಿ ಅದನ ನೆಡುವರು ಜೋಯಿಸರು ತಾನು ತಂದನಿಯೆ
ಮಂತ್ರ ಗಿಂಡಗೀಲಿ ನೀರ ಬಿಡುವರು  ತಾನು ತಂದನಿಯೆ
ನಾಗ ಬೆತ್ತಗಳ ಎಳೆದರು ಜೋಯಿಸರು ತಾನು ತಂದನಿಯೆ
ಪಟ್ಟೆ ಸೆರಗ್ಹಾಸಿ ಹೂ ಕೊಯ್ಕೊ ಅಂದ್ರು ತಾನುತಾನು ತಂದನಿಯೆ
ಅಷ್ಟೊಂದ ಮಾತ ಹೇಳ್ದರೆ ಜೋಯಿಸರು ತಾನು ತಂದನಿಯೆ
ಸಂಪುಗಿ ವನಕೆ ನಡೆದರು ತಾವು ತಾನು ತಂದನಿಯೆ
ಸಂಪುಗಿ ಎಲಗೊಂದೆ ಮುರಿದರು ಜೋಯಿಸರು ತಾನು ತಂದನಿಯೆ
ಮಂತರ ಗಿಂಡಗಿಲ ನೀರ ಬಿಡುವರು ಜೋಯಿಸರು ತಾನು ತಂದನಿಯೆ
ನಾಗ ಬೆತ್ತಗಳ ಎಳೆದರು ಜೋಯಿಸರು ತಾನು ತಂದನಿಯೆ
ಜಾಮಕೈದು ಮಿಟ್ಟಿ ಮಕಿಯಾದೋ ತಾನು ತಾನು ತಂದನಿಯೆ
ಈಸೂರಯ್ಯನ ಕರೆದು ಏನೆಂದು ನುಡಿದರು ತಾನು ತಂದನಿಯೆ
ಪಟ್ಟೇ ಸೆರಗ್ಹಾಸಿ ಹೂಗ್ ಕೋಯ್ ಎಂದರು ತಾನು ತಂದನಿಯೆ
ಅಷ್ಟೊಂದು ಮಾತ ಹೇಳ್ದರೆ ಜೋಯಿಸರು ತಾನು ತಂದನಿಯೆ
ಸುರಗಿಯ ವನಕೆ ನಡೆದರೆ ಜೋಯಿಸರು ತಾನು ತಂದನಿಯೆ
ಸುರಗಿಯ ಎಗಲೊಂದು ಮುರಿದರು ಜೋಯಸರು ತಾನು ತಂದನಿಯೆ
ಕಟ್ಟಿ ಕಟ್ಟಿ ಅದನು ನೆಡುವರು ಜೋಯಿಸರು ತಾನು ತಂದನಿಯೆ
ಮಂತ್ರ ಗಿಂಡಗಿಲಿ ನೀರು ಬಿಡುವರು ಜೋಯಸರು ತಾನು ತಂದನೀಯೆ
ನಾಗ ಬೆತ್ತಗಳ ಎಳೆವರು ಜೋಯಿಸರು ತಾನು ತಂದನಿಯೆ
ಜಾಮಕೈದು ಮಿಟ್ಟಿ,ಮಕಿಯಾದೋ ತಾನು ತಾನು ತಂದನಿಯೆ
ಈಸೂರಯ್ಯನ ಕರೆದು ಏನೆಂದು ನುಡಿದರು ತಾನು ತಂದನಿಯೆ
ಪಟ್ಟೆ ಸೆರಗ್ಹಾಸಿ ಹೂ ಕೊಯ್ಕೊ ಎಂದರು ತಾನು ತಂದನಿಯೆ
ಅಷ್ಟೊಂದ ಮಾತ ಹೇಳ್ದರೆ ಜೋಯಿಸರು ತಾನು ತಂದನಿಯೆ
ಸಿಂಗಾರ ಎಗಲೊಂದು ಮುರಿದರು ಜೋಯಿಸರು ತಾನು ತಂದನಿಯೆ
ಕಟ್ಟಿ ಕಟ್ಟಿ ಅದನೆ ನೆಡುವರು ಜೋಯಿಸರು ತಾನು ತಂದನಿಯೆ
ಮಂತ್ರ ಗಿಂಡಗಿಲಿ ನೀರ ಬಿಡುವರು ತಾನು ತಂದನಿಯೆ
ನಾಗ ಬೆತ್ತಗಳ ಎಳೆದರು ಜೋಯಿಸರು ತಾನು ತಂದನಿಯೆ
ಜಾಮಕೈದು ಮಿಟ್ಟಿ ಮಿಕಿಯಾದೋ ತಾನು ತಾನು ತಂದನಿಯೆ
ಈಸೂರಯ್ಯನ ಕರೆದುಏನೆಂದೆ ನುಡಿದರು ತಾನು ತಂದನಿಯೆ
ಪಟ್ಟೆ ಸೆರಗ್ಹಾಸಿ ಹೂ ಕೊಯ್ಕೊ ಅಂದ್ರು ತಾನು ತಂದನಿಯೆ
ಅಷ್ಟೊಂದ ಮಾತ ಹೇಳ್ದರೆ ಜೋಯಸ್ರ ತಾನು ತಂದನಿಯೆ
ಒಳಗಿದ್ದ ಮಡದೀಯ ಕರೆದರು ತಾನು ತಂದನಿಯೆ
ಒಳಗಿದ್ದ ಮಡದಿಯ ಏನೆಂದೆ ಕರೆದರು ತಾನು ತಂದನಿಯೆ
ಈಸೂರಯ್ಯ ಗೈದ್ ಎಸಳ ಕೊಡಲಿಕ್ಕೆ ಹೇಳು ತಾನು ತಂದನಿಯೆ
ಆಕಾ  ಈಸೂರಯ್ಯ ಪೋಕಾ ಈ ಸೂರಯ್ಯ ತಾನು ತಂದನಿಯೆ
ಅವ್ನಿಗೈದೆಸಳು ಕೊಡಬ್ಯಾಡಿ ಅಂದ್ಲು ತಾನು ತಂದನಿಯೆ
ನನ್ನಂತಗೆ ಅವ್ಳೆಂಗ್ಸು ಅವ್ಳಂತೆ ನಾ ಹೆಂಗ್ಸು ತಾನು ತಂದನಿಯೆ
ಈಸೂರಯ್ಯಗೈದೆಸ್ಲ ಕೊಡಬ್ಯಾಡಿ ಅಂದ್ಲ ತಾನು ತಂದನಿಯೆ
ಕೊಯ್ದ್ ಕೊಯ್ದ್ ಹೂಗ ಹೊರಿಕಟ್ಟಿ ಜೋಯ್ಸರು ತಾನು ತಂದನಿಯೆ
ಈಸೂರಯ್ನ ತಲೆಮ್ಯಾನೆ ನೆಗದರು ತಾವು ತಾನು ತಂದನಿಯೆ
ಶೀಂಗಿ ಮುಳ್ಳೂಳಗೆ ಸಿಗಿದ್ಹೋದ ಈಸೂರಯ್ಯ ತಾನು ತಂದನಿಯೆ
ಬಾಂಗೀ ಮುಳ್ಳೋಳಗೆ ಬಗ್ದ ಹೋದ ಈಸೂರಯ್ಯ ತಾನು ತಂದನಿಯೆ
ಹತ್ತಲಾಗ್ದ ಗುಡ್ಡಿ ಹತ್ತಿ ಇಳ್ದ ಈಸೂರಯ್ಯ ತಾನು ತಂದನಿಯೆ
ಈಗೀಗ ನೆಟ್ಟ ಹೊಸ ಹೂಗ ತಂದಿದೆ ತಾನು ತಂದನಿಯೆ
ಸಂಶಿಲ್ಲದೆ ಕದವ ತೆಗಿಯೆಂದ ಈಸೂರಯ್ಯ ತಾನು ತಂದನಿಯೆ

(ಅತ್ತಿಗಿ ಉಪಾಯ ಇಲ್ದೆ ಬಾಗಿಲ ತೆಗಿತ್ಲ. ಅತ್ತೇ ತನ್ನ ಕಿರಿ ಮಗ ಆತ್ತಿಗೆ ಕ್ವಾಣಿ ಹೊಕ್ಕದ್ದ ಕಂಡ್ಲ, ಕಂಡ್ರೂ ಕಣ್ಣಿಲ್ದದ್ದವಳಂಗೆ ಮಾಡ್ಕಂಡ ಬಾಗಿಲ ಗಡಕ್ ಅಂದದ್ಯಾಕೆ ಎಂದ ಸೊಸೀನ್ ಕೇಂಡ್ಳ)

ಎಂತಾಯ್ತೆ ಸೊಸಿ ಮುದ್ದೆ ಏನಾಯ್ತೆ ಸೊಸಿಮುದ್ದೆ ತಾನು ತಂದನಿಯೆ
ಬಾಗಿಲ ಕದವೇಕೆ ಗಡಕೆಂದು ತಾನು ತಾನು ತಂದನಿಯೆ
ಉಂಡೀದೆ ಅತ್ಯಮ್ಮ ಉಟ್ಟೀದೆ ಅತ್ಯಮ್ಮ ತಾನು ತಂದನಿಯೆ
ಬಾಗೀಲು ಹಾಕ್ವಲ್ಲೇ ಮರೆತೀದೆ ತಾನು ತಾನು ತಂದನಿಯೆ
ಈಗಳ್ಹೋಯಿ ಬಾಕ್ಲ ಹಾಕಿ ಬಂದೆ ತಾನು ತಾನು ತಂದನಿಯೆ
ಆಯಿತು ಸೊಸಿ ಮುದ್ದೆ ಮೆಚ್ಚಿದೆ ನಿನ ಮಾತು ತಾನು ತಂದನಿಯೆ
ನೀರ್ಹಂಡಿಯಾಕೆ ಗಡಕಂತು ತಾನು ತಾನು ತಂದನಿಯೆ
ಉಂಡೀದೆ ಅತ್ಯಮ್ಮ ಉಟ್ಟೀದೆ ಅತ್ತೆಮ್ಮ ತಾನು ತಂದನಿಯೆ
ನೀರ‍್ಹಂಡಿ ಮುಚ್ಚುವಲ್ಲಿ ಮರೆತೀದೆ ತಾನು ತಾನು ತಂದನಿಯೆ
ಈಗಳ್ಹೋಯಿ ನೀರ್ಹಂಡಿ ಮುಚ್ಚಿ ಬಂದೆ ತಾನು ತಾನು ತಂದನಿಯೆ
ಆಯಿತು ಸೊಸಿ ಮುದ್ದೆ ಮೆಚ್ಚಿದೆ ನಿನ್ನ ಮಾತು ತಾನು ತಂದನಿಯೆ
ಬಟ್ಟಲರಿಯಾಕೆ ಗಡಕೆಂದು ತಾನು ತಾನು ತಂದನಿಯೆ
ಉಂಡೀದೆ ಅತ್ಯಮ್ಮ ಉಟ್ಟೀದೆ ಅತ್ಯಮ್ಮ ತಾನು ತಂದನಿಯೆ
ಬಟ್ಟಲರಿ ಬಚ್ಚುವಲ್ಲಿ ಮರೆತೀದೆ ಅತ್ಯಮ್ಮ ತಾನು ತಂದನಿಯೆ
ಈಗಳ್ಹೋಯಿ ಬಟ್ಟಲರಿ ಬಚ್ಚಿಬಂದೆ ತಾನು ತಾನು ತಂದನಿಯೆ
ಆಯಿತು ಸೊಸಿ ಮುದ್ದೆ ಮೆಚ್ಚಿದೆ ನಿನ ಮಾತು ತಾನು ತಂದನಿಯೆ
ಹಾಸಿಗಿ ಪಿಂಡಿಯಾಕೆ ಗಡಕಂತು ತಾನು ತಾನು ತಂದನಿಯೆ
ಉಂಡೀದೆ ಅತ್ಯಮ್ಮ ಉಟ್ಟೀದೆ ಅತ್ಯಮ್ಮ ತಾನು ತಂದನಿಯೆ
ಹಾಸುಗಿ ಹಾಸುವಲ್ಲಿ ಮರೆತೀದೆ ತಾನು ತಾನು ತಂದನಿಯೆ
ಈಗಲೇ ಹಾಸುಗಿ ಹಾಸಿ ಬಂದೆ ತಾನು ತಾನು ತಂದನಿಯೆ
ಆಯಿತು ಸೊಸಿ ಮುದ್ದೆ ಮೆಚ್ಚಿದೆ ನಿನ ಮಾತು ತಾನು ತಂದನಿಯೆ
ಜಾಜೀಯ ಹೂಗಿಂದೆ ಪರಿಮಳ ತಾನು ತಾನು ತಂದನಿಯೆ
ಹೊತ್ತಾರೆ ಮುಂಚೆ ಬಾಕ್ಲ ಕಸ ಗುಡಿಸುವಾಗೆ ತಾನು ತಂದನಿಯೆ
ಗಿಣಿರಾಮನೊಂದೆಸಲ ಕೆಡಹಿದ ತಾನು ತಾನು ತಂದನಿಯೆ
ಆಯಿತು ಸೊಸಿ ಮುದ್ದೆ ಮೆಚ್ಚಿದೆ ನಿನ ಮಾತು ತಾನು ತಂದನಿಯೆ
ಸಂಪೂಗಿ ಹೂಗಿಂದೆ ಪರಮಳ ತಾನು ತಾನು ತಂದನಿಯೆ
ಹೊತ್ತಾರೆ ಮುಂಚೆದ್ದು ಬಾಕ್ಲ ಕಸ ಗುಡಿಸುವಾಗೆ ತಾನು ತಂದನಿಯೆ
ಅದನ್ಹೆಕ್ಕಿ ತಲೆಯಲ್ಲಿ ಸೆಕ್ಕಿದೆ ತಾನು ತಾನು ತಂದನಿಯೆ
ಆಯಿತು ಸೊಸಿ ಮುದ್ದೆ ಮೆಚ್ಚಿದೆ ನಿನ ಮಾತ ತಾನು ತಂದನಿಯೆ
ಮಲ್ಲೂಗಿ ಹೂಗಿಂದೆ ಪರಿಮಳ ತಾನು ತಾನು ತಂದನಿಯೆ
ಹೊತ್ತರೆ ಮುಂಚೆದ್ದು ಬಾಕ್ಲ ಕಸ ಗುಡಿಸುವಾಗೆ ತಾನು ತಂದನಿಯೆ
ಗಿಣಿರಾಮನೊಂದೆಸಲ ಕೆಡಹಿದ ತಾನು ತಾನು ತಂದನಿಯೆ
ಅದನ್ಹೆಕ್ಕಿ ತಲೆಯಲ್ಲಿ ಸೆಕ್ಕೀದೆ ತಾನು ತಾನು ತಂದನಿಯೆ
ಆಯಿತು ಸೊಸಿ ಮುದ್ದೆ ಮೆಚ್ಚಿದೆ ನಿನಮಾತ ತಾನು ತಂದನಿಯೆ
ಸಿಂಗಾರ ಹೂಗಿಂದೆ ಪರಿಮಳ ತಾನು ತಾನು ತಂದನಿಯೆ
ಹೊತ್ತಾರೆ ಮುಂಚೆದ್ದ  ಬಾಕ್ಲ ಕಸ ಗುಡಿಸುವಾಗೆ ತಾನು ತಂದನಿಯೆ
ಗಿಣಿರಾಮನೊಂದೆಸಲ ಕೆಡಹಿದ ತಾನು ತಾನು ತಂದನಿಯೆ
ಅದನ್ಹೆಕ್ಕಿ ತಲೆಯಲ್ಲಿ ಸೆಕ್ಕಿದೆ ತಾನು ತಾನು ತಂದನಿಯೆ
ಕೇಳಿ ಕೇಳೀ ಅತ್ಯಮ್ಮ ಕೇಳಿ ನನ್ನ ಮಾತನ್ನ ತಾನು ತಂದನೀಯೆ
ನಿಮ್ಮ ಹೆರಿ ಮಗನಲ್ಲ ಕಿರಿಮಗ ತಾನು ತಂದನಿಯೆ
ನಿಮ್ಮಹೆರಿ ಮಗನಲ್ಲ ಕಿರಿಮಗ ತಾನು ತಾನು ತಂದನಿಯೆ