ಹೆಂಡಿರ ಗುಣವೆ ಗಂಡರೇನು ಬಲ್ಲರೆ
ಗುಂಡಿ ಒಳಗಿರುವ ಕರು ನೀನು ದೇವ್ರವ್ರೆ
ನಾ ಎಂತೆ ಕಂಡು ಬನ್ನಿ ದೇವ್ರವ್ರೆ ನಿಮ್ಮಡದೀ
ಹೂವ ತಂದನಿಗೂ ಒಲಿವಾಳೆ ಕುಸುಮಾಲಿ
ಬೇಡಕು ಬಂದನಿಗೂ ಒಲಿವಾಳೆ    
ಯಾರು ಏಳದ ಮುಂಚೆ ಕೋಳಿ ಕೂಗದ ಮುಂಚೆ
ದೇವರಾಯೆದ್ದು ಕದವ ತೆಗೆದಾರೆ ದೆವ್ರವ್ರು
ಬಾಮಿ ಅಂಗಳಕೆ ನಡೆದರು ದೇವ್ರವ್ರು
ಕಾಲು ಶ್ರೀಮುಖವ ತೊಳೆದಾರು ದೇವ್ರವ್ರು
ತುಳಸಿ ಮಂಟಪಕೆ ಬರುವಾರೆ ದೇವ್ರವ್ರು
ತುಳಸ್ಯಮ್ಮಗೆ ಕೈಯ್ಯ ಮುಗಿದಾರು ದೇವ್ರವ್ರು
ಮೆತ್ಹತ್ತಿ ಮ್ಯಾನೆ ನಡೆದಾರು
ಹೋದೆವೆ ಹೊಲ್ಲಿಗಳ ಹೆಗಲಲ್ಲಿ ಹ್ಯಾಕಂಡು
ಮೆತ್ತಿಂದ ಕೆಳಗೆ ಇಳಿದಾರು ದೇವ್ರವ್ರು
ಬಿದ್ದ ಮಾರ್ಗವ ಹಿಡಿದಾರು ಹಿಡಿವಂಥ ಸಮಯದಲ್ಲೆ
ಸೂಳಿ ಬಂದಡ್ಡ ನಿಲುವಾಳು
ಇಂದ್ಹೋದ ದೇವ್ರವ್ರೆ ನೀವೆಂದು ಬರುವಿರಿ
ನೀವ್ ಬರುವ ದಿವಸ ನನಗ್ಹೇಳಿ
ಹೋದವರ ಸುದ್ಧಿ ಇರುತವಳಿಗೇಕೆ
ನಾ ಬರುವ ದಿನವು ನಿನಗೇಕೆ
ಹೋದಂತೆ ದೇವ್ರಾಯ ಹೋದನು ಜೋಗಳವರ ಮನೆಗೆ
ಎಂದು ಬಾರದ ದೇವ್ರಾಯ ಇಂದೇಕೆ ಬಂದೀರಿ
ಬಂದ ಕಾರಣವ ಮೊದಲ್ಹೇಳಿ
ಎಂದೂ ನಾ ಬರಲಿಲ್ಲ ಎಂತೂ ನಾ ಬರಲಿಲ್ಲ
ಕಂತ ಜೋಳಿಗಿಯ ಹೊಲಿ ಕೊಡ
ನಾ ಜೋಳಿಗೆ ಕೊಟ್ಟೀರು ನೀವು ಜೋಳಿಗಿ ತೆಕ್ಕಂಡ್ರೆ
ದಂಡ ತಕ್ಕಂಬ ದೋರಿ ಇದ್ದ
ದಂಡ ಕೇಂಬವನ್ಯಾರು ದಂಡ ಕೊಡುವವನ್ಯಾರೆ
ನನ್ನಂಥ ದೊರಿ ಅವನ್ಯಾರು
ಅಷ್ಟೊಂದು ಹೇಳುತ್ತ ಇಷ್ಟೊಂದು ಕೇಳುತ್ತ
ಕಂತ ಜೋಳಿಗಿನ ಹೊಲಿಕೊಟ್ಟ
ಕೊಟ್ಟಂಥ ಜೋಳಿಗಿನ ತೆಕ್ಕಂಡು ದೇವ್ರವ್ರು
ಹೋದಾರು ಗುಡಿಗಾರ‍್ನ ಅರಮನಿಗೆ ದೇವ್ರವ್ರು
ಗುಡಿಗಾರ‍್ನ ಮೂರ‍್ ಕರಿಯ ಕರೆದಾನೊ
ಎಂದೂ ಬಾರದ ದೇವ್ರವ್ರೆ ಇಂದೇನು ಬಂದಿರಿ
ಬಂದ ಕಾರಣವ ಮೊದಲ್ಹೇಳಿ
ಎಂದೂ ನಾ ಬರಲಿಲ್ಲ ಎಂತೂ ನಾ ಬರಲಿಲ್ಲ
ಗೆಯ್ಟಿಗೆ ಬಣ್ಣ ಎರಡಕೊಡು
ಗೆಯ್ಟಿಗೆ ಬಣ್ಣ ಎರಕೊಟ್ಟರೆ ನೀವ್  ಅದಕತಕ್ಕೊಂಡ್ರೆ
ದಂಡ ತಕ್ಕೊಂಬ ದೊರಿ ಇದ್ದ
ದಂಡ ಕೇಂಬವನ್ಯಾರು ದಂಡ ಕೊಡುವವನಾರು
ನನ್ನಂಥ ದೊರಿ ಅವನ್ಯಾರು
ಅಷ್ಟೊಂದು ಹೇಳುತ್ತ ಅಷ್ಟೊಂದು ಕೇಳುತ್ತ
ಜಲ್ಲು ಬಡಗಿಯ ಮಾಡಿಕೊಟ್ಟ
ಜಲ್ಲುಬಡಗಿಯ ತಕ್ಕೊಂಡು ದೇವ್ರಾಯ
ಹೋದನು ಹೆರಿಯಕ್ಕನ ಅರಮನಿಗೆ
ಯಾರಮ್ಮ ಮನೆಯಲ್ಲಿ ಯಾರಮ್ಮ ಮಠದಲ್ಲಿ
ಜೋಗಿಗು ಬಿಗುಸವ ಇಡ ಬನ್ನಿ
ಕಾಲ್ಕಂಡ್ರು ನನ ತಮ್ಮ ಕೈಕಂಡ್ರೆ ನನ ತಮ್ಮ
ಮುಖ ಕಂಡ್ರೆ ಅವನಲ್ಲ
ಅಕ್ಕಹಾಕಿದ ಬಿಗುಸೆ ತಕ್ಕಂಡು ದೇವ್ರಾಯ
ಹೋದನು ತಂಗಿಯ ಅರಮನಿಗೆ
ಯಾರಮ್ಮ ಮನೆಯಲ್ಲಿ ಯಾರಮ್ಮ ಮಠದಲ್ಲಿ
ಜೋಗಿಗು ಬಿಗುಸವ ಇಡಬನ್ನಿ
ಕಾಲ್ಕಂಡ್ರೆ ನನ್ನಣ್ಣ
ಮುಖ ಕಂಡ್ರೆ ಅವನಲ್ಲ
ತಂಗಿ ಹಾಕಿದ ಬಿಗಸೆ ತಕ್ಕಂಡ ದೇವ್ರಾಯ
ನಡೆದಾನೆ ಕುಸುಮಾಲಿ ಅರಮನಿಗೆ
ಯಾರಮ್ಮ ಮನೆಯಲ್ಲಿ ಯಾರಮ್ಮ ಮಠದಲ್ಲಿ
ಬಂದ ಜೋಗಿಗೆ ಬಿಗಸ ಇಡಬನ್ನಿ
ತೊತ್ಯೇರ ಗೌಂಡೇರೆ ಎತ್ತೆಲ್ಲ ಹೊದಿರಿ
ಜೋಗಿಗೂ ಬಿಗುಸ ಇಡಬನ್ನಿ
ಗೌಂಡಾರು ತೊತ್ಯೇರು ಇಡುವಂಥ ಬಿಗುಸ್ಯೆಲ್ಲ
ಕುಸುಮಾಲಿ ಬಂದೇ ಇಡಬೇಕು
ಸಣ್ಣ ಹರಿವಾಣದಲ್ಲಿ ಸಣ್ಣಕ್ಕಿ ಹ್ಯಾಕಂಡು
ಹಿಡಿಬಾರ ಜೊಗಿ ಬಿಗುಸವ
ಬಾಗಿಲ ಕಂಠದಿ ಕೊಟ್ರೆ ಭಾಗ್ಯಕೆ ಕಡಿಮೆ ಅಂಬ್ರು
ಮತ್ತೊಂದು ಮೆಟ್ಲ ಇಳಿ ಹೆಣ್ಣೆ
ಗೌಂಡ್ಯಾರೆ ತೊತ್ಯಾರೆ ಎತ್ತೆಲ್ಲ ಹೋದಿರಿ
ಹಿಡಿಕಟ್ಟಲ್ಲವನ ಹೊಡೆದಟ್ಟಿ
ಅಷ್ಟೊಂದ ಮಾತ ಹೇಳ್ದಳೆ ಕುಸುಮಾಲಿ
ಹೋದಳತ್ತಿಗೆಯ ಅರಮನಿಗೆ
ಎಂದೂ ಬಾರದ ಕುಸುಮಾಲಿ ಇಂದೇನು ಬಂದೀಯ
ಬಂದ ಕಾರಣವ ಮೊದಲ್ಹೇಳು
ಹೊತ್ತಾರೆ ಮುಂಚೆ ಬಂದ ಜೋಗಿಹೊತ್ತರಗಿ ಬಯ್ಯಾರು
ಜೋಗಿ ನನ್ನುರಿಯ ಹೊಯ್ಸುವ
ತೋಟದಲ್ಲಿರುವಳು ತಾಟಗಿತ್ತಿ ಕುಸುಮಾಲಿ
ಅಷ್ಟೊಂದಿರಿಷ್ಟೆ ಅರಿಯಾಳೆ ಕುಸುಮಾಲಿ
ನಿನ ಗಂಡನ ಗುತುಋ ನಿನಗಿಲ್ಯ
ಅಡಗಿಮಾಡಿ ಊಟಕೆ ಅನುಮಾಡು
ಅಷ್ಟೊಂದ ಮಾತ ಕೇಂಡಳೆ ಕುಸುಮಾಲಿ
ಕಣ್ಣಲ್ಲು ನೀರ ಸೆಡಿದಾಳೆ ಕುಸುಮಾಲಿ
ತಾ ಬಮದಳು ತನ್ನ ಅರಮನಿಗೆ ಕುಸುಮಾಲಿ
ಅಡಿಗಿ ಭೋಜನಕೆ ಇಳಿದಾಳೆ ಕುಸುಮಾಲಿ
ಹಂಡೀಲಿ ನೀರ ಕಾಸೀಳೆ ಕುಸುಮಾಲಿ
ಜೋಗಿಗೆ ಸ್ನಾನಕೆ ಕರೆದಾಳು
ಜೋಗಿಗೆ ಊಟಕೆ ಅನುಮಾಡಿ ಕುಸುಮಾಲಿ
ಊಟಕ್ಕೆ ಲವಳು ಬಡಸೀಳು
ಎಲ್ಲಾ ಬಳಸಿದೆ ಕಾಣಿ ತುಪ್ಪವನು ತರಲಿಲ್ಲ
ತುಪ್ಪು ತಪ್ಪಲ್ಲೆ ಮರತೀದೆ ಅನುತ್ಹೇಳಿ
ಮೆತ್ಹತ್ತಿ ಮೇಲೆ ನಡೆದಾಳೆ ಕುಸುಮಾಲಿ
ಬೆಳ್ಳಿಯ ನೇಣು ತೆಗೆದಾಳೆ ಕುಸುಮಾಲಿ
ಮಲ್ಲೂಗಿ ವನಕೆ ನಡೆದಾಳೆ
ಸಾಕಿದೆ ಸಲಗಿದೆ  ನೆಟ್ಟು ನೀರ ಹೊಯ್ದಿದೆ
ನನಗಂತೂ ಎಗುಲ ಕೊಡಬೇಕು
ನೀ ಸಾಕಿದೆ ಸಲಗೀದೆ ನೆಟ್ಟಿ ನೀರು ಹೊಯ್ದಿದೆ
ನಿನಗಂತೂ ಎಗಲ ಕೊಡಲಾರೆ
ಬೆಳ್ಳಿಯ ನೇಣು ಹಿಡಿದಾಳೆ ಕುಸುಮಾಲಿ
ಶಾವಂತಿಗಿ ವನಕೆ ನಡೆದಾಳೆ
ಸಾಕಿದೆ ಸಲಗಿದೆ ನೆಟ್ಟ ನೀರು ಹೊಯ್ದಿದೆ
ನಿನಗಂತೂ ಎಗಲ ಕೊಡಲಾರೆ
ಬೆಳ್ಳಿಯ ನೇಣು ಹಿಡಿದಳೆ ಕುಸುಮಾಲಿ
ಸುರಗಿಯ ಮರಕಾಗಿ ನಡೆದಾಳೆ
ಸಾಕಿದೆ ಸಲಗಿದೆ ನೆಟ್ಟ ನೀರು ಹೊಯ್ದಿದೆ
ನನಗೊಂದು ಎಗಲ ಕೊಡಬೇಕು
ನೀ ಸಾಕಿದ ಸಲಗಿದೆ ನೆಟ್ಟಿ ನೀರು ಹೊಯ್ದಿದೆ
ನಿನಗಂತೂ ಎಗಲ ಕೊಡಲಾರೆ
ಬೆಳ್ಳಿಯ ನೇಣ ಹಿಡಿದಳೆ ಕುಸುಮಾಲಿ
ಸುರಗಿಯ ಮರಕಾಗಿ ನಡೆದಾಳೆ
ಸಾಕಿದೆ ಸಲಗಿದೆ ನೆಟ್ಟ ನೀರು ಹೊಯ್ದಿದೆ
ನಿನಗೊಂದ ಎಗಲ ಕೊಡುತ್ತೇನೆ ಅಂದ್ಹೇಳಿ
ತಲಿಬಾಂಗಿ ಎಗುಲ ಬರುವುದೇ ಕುಸುಮಾಲಿ
ತಲೆಬಾಂಗಿ ನೇಣ ಬಿಗಿದಾಳೆ
ಹೊತ್ತೊತ್ತಿನ ಹೂವ ಹೊತ್ತೊತ್ತಿಗೆ ಕೊಯದಿದ್ರೆ
ಹೊತ್ತು ತಪ್ಪಿದರೆ ಕುಸುಬಾಪೆ ಸುರಗಿಯ ಹೂಗು
ಕಸ್ತೂರ‍್ ಮಲ್ಲಿಗಿಯ ಸರವಾಪೆ ದೆವ್ರವ್ರೆ
ವರುಸಕೊಂದು ಬಾರಿ ಬರುವೆನು ದೇವ್ರವ್ರೆ
ವಜ್ಜುರ ದುಂಬ್ಯಾಗಿ ಬರಬೇಕು
ಸೂಳೂ ರಂಡಿ ಮಾತ್ ಕೇಳಿ ಮಾನಭಂಗವ ಆದೆ
ಚಿನ್ನದಂಥ ಮಡದಿ ಕಳಕೊಟ್ಟೆ ಎನುತಲಿ
ವಜ್ರದುಂಬ್ಯಾಗಿ ಹಾರಿಹೋದ