ತಾಳ್ತಾಳಿ ಸೂರಪ್ಪ ಶೆಟ್ಟರಂಬ್ರ ಜಂಗಮದೇವಿ
ಊಟಕಾರು ಏಳಿನಿ ಸ್ವಾಮಿ ಜಂಗಮದೇವಿ
ಊಟವಾರು ಉಣಕಿದ್ರೆ ದೇವಿ ಜಂಗಮದೇವಿ
ನಾ ಹೇಳಿದ ಪಲ್ಲಿ ಆಗಲೇಬೇಕು ಜಂಗಮದೇವಿ
ಹರಗೀ ಗರಕೆ ನಡೆದಾಳೊ ದೇವಿ ಜಂಗಮದೇವಿ      
ಹರಗೀನಾರೂ ತಂದಳು ದೇವಿ ಜಂಗಮದೇವಿ
ಕೊಚ್ಚೀಳು ದೇವಿ ಕೊರೆದೀಳು ದೇವಿ ಜಂಗಮದೇವಿ
ತಾಳ್ತಾಳಿ ಸೂರಪ್ಪ ಶೆಟ್ರರಂಬ್ರ  ಜಂಗಮದೇವಿ
ನಾ ಊಟವಾರು ಉಣಕಿದ್ರೆ ಜಂಗಮದೇವಿ
ನಾ ಹೇಳಿದ ಪಲ್ಲಿ ಆಗಲೇಬೇಕು ಜಂಗಮದೇವಿ
ಬದನಿ ಕಾಯಿ ತಂದಳು ದೇವಿ ಜಂಗಮದೇವಿ
ಕೊಚ್ಚೀಳು ದೇವಿ ಕೊರೆದೀಳು ದೇವಿ ಜಂಗಮದೇವಿ
ತಾಳ್ತಾಳಿ ಸೂರಪ್ಪ ಶೆಟರಂಬ್ರ ಜಂಗಮದೇವಿ
ನಾ ಊಟವಾರು ಉಣಕಿದ್ರೆ ಜಂಗಮದೇವಿ
ನಾ ಹೇಳಿದ ಪಲ್ಲಿ ಆಗಲೇಬೇಕು ಜಂಗಮದೇವಿ
ಸೌತಿಕಾಯಿ ತಂದಳು ದೇವಿ ಜಂಗಮದೇವಿ
ಕೊಚ್ಚೀಳು ದೇವಿ ಕೊರೆದೀಳು ದೇವಿ ಜಂಗಮದೇವಿ
ತಾಳ್ತಾಳಿ ಸೂಈರಪ್ಪ ಶೆಟ್ರರಂಬ ಜಂಗಮದೇವಿ
ನೀವೇ ಊಟಕಾದ್ರು ಏಳಿನಿ ಸ್ವಾಮಿ ಜಂಗಮದೇವಿ
ನಾ ಊಟವಾದ್ರೂ ಉಣಕಿದ್ರೆ ಜಂಗಮದೇವಿ
ಮನಸರ ಪಲ್ಲಿ ಆಗಬೇಕು ಜಂಗಮದೇವಿ
ನಿನ್ನ ಅಡೂಕ್ಹೋದ ಮಗನ ಕೆರೆಯೆ ದೇವಿ  ಜಂಗಮದೇವಿ
ಅವ್ನ ಕಡದ ಪಲ್ಲೆ ಮಾಡೀರೆ ಜಂಗಮದೇವಿ
ಊಟವಾದ್ರೂ ಮಡ್ತೇನೆ ಅಂದ್ರ ಜಂಗಮದೇವಿ
ಕಣ್ಣಲ್ಲಿ ನೀರು ಹಾಕಲು ಬಾರ ಜಂಗಮದೇವಿ
ಅಷ್ಟೂಮಾತ ಕೇಂಡಳೆ ದೇವಿ ಜಂಗಮದೇವಿ
ಅಡುಕ್ಹೋದ ಮಗನ ಕರದ್ಲ ದೇವಿ ಜಂಗಮದೇವಿ
ಮೆಟ್ಟುಕತ್ತಿ ಇಟ್ಟೀಳು ದೇವಿ ಜಂಗಮದೇವಿ
ತಾಳ್ತಾಳಿ ಸೂರಪ್ಪ ಶೆಟ್ಟರಲ್ಲೇ ಜಂಗಮದೇವಿ
ಊಟಕಾರೂ ಬನ್ನಿ ಸ್ವಾಮಿ ಜಂಗಮದೇವಿ
ಅವ್ರು ಊಟಕಾರು ಬನ್ನಿ ಸ್ವಾಮಿ ಜಂಗಮದೇವಿ
ಅವ್ರು ಊಟಕಾರು ಕೂತಿರಲೇ ಜಂಗಮದೇವಿ
ತಾಳ್ತಾಳಿ ಸೂರಪ್ಪನ ಶೆಟ್ಟರಂಬ್ರ ಜಂಗಮದೇವಿ
ನೀ ಹೆರಗೆ ಹೋಯಿ ಒಳಗೆ ಬಾರೇ ಜಂಗಮದೇವಿ
ನಿನ್ನ ಅಡಕ್ಹೋದ ಮಗನೆ ಕರಿಯೆ ಜಂಗಮದೇವಿ
ಹೆರಗ್ಹೋಯಿ ನಿಂತೀಳ ದೇವಿ ಜಂಗಮದೇವಿ
ಮಗನ್ ಮೂರ್ ಕರಿಯ ಕರೆದಳು ದೇವಿ ಜಂಗಮದೇವಿ
ಅಡಕ್ಹೋದ ಮಗನೇ ಓಡಿ ಬಂದ ಜಂಗಮದೇವಿ
ಒಳಗರು ಮಗನೇ ಓಡಿ ಬಂದ ಜಂಗಮದೇವಿ
ಒಳಗಾರು ಹೋದಳು ದೇವಿ ಜಂಗಮದೇವಿ
ತಾಳಾಳಿ ಸೂರಪ್ಪ ಶೆಟ್ಟರಲ್ಲೇಜಂಗಮದೇವಿ
ನೀ ಹೆರಗೆ ಹೋಯಿ ಒಳಗೆ ಬಾರೇ ಜಂಗಮದೇವಿ
ನಿನ್ನ ಅಡುಕ್ಹೋದ ಮಗನೆ ಕರಿಯೇ ಜಂಗಮದೇವಿ
ಅಡೂಕ್ಹೋದ ಮಗನೇ ಓಡಿ ಬಂದ ಜಂಗಮದೇವಿ
ಒಳಗಾರು ಹೋದಳು ದೇವಿ ಜಂಗಮದೇವಿ
ತಾಳ್ತಾಳೆ ಸೂರಪ್ಪ ಶೆಟ್ಟರಲ್ಲೇ ಜಂಗಮದೇವಿ
ಊಟಕ್ಕೆ ಕೂತಲ್ಲಿಯೇ ಮಾಯವಾರು ಜಂಗಮದೇವಿಮ