ಇಬ್ಬನಿ ಮಳೆ ಬಂದು ಜಂಗುಮಾ
ಹುಬ್ಬಳ್ಳಿಕೆರೆ ತುಂಬಿ ಜಂಗುಮಾ
ಪ್ಯಾಟಿ ಮುಂದಿನ ಮನಿ ಜಂಗುಮಾ
ರಾಟಿ ಉಂಟು ಕದವಿಲ್ಲ ಜಂಗುಮಾ
ಒಂದ ರಾತ್ರಿ ಉಳ್ದ ಹೋಗೋ ಜಂಗುಮಾ   
ನಾ ಜಗ್ಗನ ಮೈನೆರೆದೆ ಜಂಗುಮಾ
ಒಂದ್ ರಾತ್ರಿ ಉಳ್ದ ಹೋಗೋ ಜಂಗುಮಶಾ
ನಿನ ಗಂಡ ಕೇಂಡಿರೇನ್ಹೇಳೂನೆ ಜಂಗುಮಾ
ಗಂಡ ದಂಡೀಗೆ ಹೋಯಿರ ಜಂಗುಮಾ
ನಿನ ಮಾವ ಕೇಂಡೀರನ್ಹೇಳೂನೆ ಜಂಗುಮಾ

ಮಾವ ಮಲ್ಲಾರಕೆ ಹೋಯೀರ ಜಂಗುಮಾ
ನಿನ ಅತ್ತಿ ಸಂತಿಗೆ ಹೋಯಿಳ ಜಂಗುಮಾ
ಕೊಂಡಾಟದ ಮೈದಿನ ಜಂಗುಮಾ
ಚಂಡಾಡುಕೆ ಹೋಯಿದ ಜಂಗುಮಾ
ಒಂದ್ ರಾತ್ರಿ ಉಳ್ದ ಹೋಗ ಜಂಗುಮಾ
ಪಂಚಾಮಿರತ ಅಡ್ಗಿ ಮಾಡ್ತೆ ಜಂಗುಮಾ
ಗಂಡ ಒರ‍್ಗೂ ಮಂಚ ಕೊಡ್ತೆ
ಮನೆಗೆದ್ದೆ ನಡೆದಾನು  ಜಂಗುಮಾ
ಜೋಗಿ ಹೋದ ದಾರಿಯಲ್ಲೆ ಜಂಗುಮಾ
ಹಾವೇ ಅಡ್ಡ ಕಟ್ಟಲೆ ಜಂಗುಮಾ