ನಿಂಬಿಯ ಹಣ್ಣು ಅಂಬರಕ್ಕಿಟ್ಟಾಡಿ
ರಂಬಿ ಜವ್ವನವು ಗಳದ್ಹೋದು ತಾನು
ರಂಬಿ ಜವ್ವನವು ಗಳದ್ದೋದು ಗಿಣಿರಾಮ
ಹೋಯ್ ಹೇಳ ನಿನ್ನ ಒಡಿಯಗು ತಾನು
ಅಷ್ಟೊಂದು ಮಾತ ಕೇಂಡನೆ ಗಿಣಿರಾಮ     
ಕೂತು ಹಾರಿದನೆ ಗಗನಕೆ ಗಿಣಿರಾಮ
ಹೋಯ್ ಕೂತ ಒಡಿಯನ ಜಂಗಿನ್ ಮ್ಯಾನ್ ತಾನು
ಏನ್ ಬಂದೆ ಗಿಣಿರಾಮ ಎಂತ್ ಬಂದೆ ಗಿಣಿರಾಮ
ಬಂದ ಕಾರಣವೆ ಒದಗ್ಹೇಳು ತಾನು
ನಿಂಬಿಯ ಹಣ್ಣು ಅಂಬರ ಕಿಟ್ಟಾಡಿ
ರಂಬಿ ಜವ್ವನವುಗಳದ್ಹೋದು ಪಾಂಡವರೆ
ನೀವು ಒಂದರಗಳಿಗೆ ಬರಕಂಬ್ರು ತಾನು
ರಂಬಿ ಜವ್ವನವು ಗಳದ್ಹೋರ ಹೋಗಲಿ
ನಾನೊಂದರಗಳಿಗಿ ಬರಲಾರೆ ತಾನು
ನಾನೊಂದರಗಳಿಗೆ ಬರಲಾರೆ ಗಿಣಿರಾಮ
ನಂಬಿದ ಸೂಳಿಯ ಬಿಡಲಾರೆ ತಾನು
ಅಷ್ಟೊಂದು ಮಾತ ಕೇಂಡನೆ ಗಿಣಿರಾಮ
ಕೂತು ಹಾರಿದನೆ ಗಗನಕೆ ತಾನು
ಕೂತು ಹಾರಿದನೆ ಗಗನಕೆ ಗಿಣಿರಾಮ
ಬಂದ್ ಕೂತ ತನ್ನೊಡತಿ ನೆರಿಮ್ಯಾಲೆ ತಾನು
ಏನಂದ್ರೂ ಗಿಣಿರಾಮ ಎಂತಂದ್ರು ಗಿಣಿರಾಮ
ಹಳಿದ ಕಾರಣವೇ ಒದಗ್ಹೇಳು ರಾಮ
ರಂಬಿ ಜವ್ವನವು ಗಳದ್ದೋದರೋಗಲಿ
ನಾನೊಂದರಗಳಿಗಿ ಬರಲಾರೆ ತಾನು
ನಾನೊಂದರಗಳಿಗೆ ಬರಲಾರೆ ಗಿಣಿರಾಮ
ನಂಬಿದ ಸೂಳಿಯ ಬಿಡಲಾರೆ ಗಿಣಿರಾಮ
ಹೋಯ್ ಹೇಳ ನಿನ್ನ ಒಡತಿಗೆ ತಾನು
ಏನ್ಹೇಳರೋ ಬತ್ತಿಲ್ಲ ಎಂತ್ಲೇಳಿರು ಬತ್ತಿಲ್ಲ
ಇನ್ನೊಂದು ನುಡಿಯ ನುಡಿದಾಳೆ ತಾನು
ಕೈಲಿಯು ಕರು ಹಾಕಿ ಇಂದಿಗೆ ಮೂರ‍್ ದಿವ್ಸ
ಕೈಲಿಗೆ ಮೂರು ಮಡ್ಡಿ ಮೆಲುವಿಲ್ಲ ತಾನು
ಕೈಲಿಗೆ ಮೂಝರು ಮಡ್ಡಿ ಮೆಲುವಿಲ್ಲ ಗಿಣಿರಾಮ
ಹೋಯ್ ಹೇಳ ನಿನ್ನ ಒಡಿಯತೆ ತಾನು
ಅಷ್ಟೊಂದು ಮಾತ ಕೇಮಡನೆ ಗಿಣಿರಾಮ
ಕೂತು ಹಾರಿದನೆ ಗಗನಕೆ ತಾನು
ಕೂತು ಹಾರಿದನೆ ಗಗನಕೆ ಗಿಣಿರಾಮ
ಹೋಯ್ ಕೂತ ತನ್ನ ಒಡಿಯನ ಜಂಗೀನ್ ಮ್ಯಾನ್ ತಾನು
ಏನ್ ಬಂದೆ ಗಿಣಿರಾಮ ಎಂತ್ ಬಂದೆ ಗಿಣಿರಾಮ
ಬಂದ ಕಾರಣವೆ ಒದಗ್ಹೇಳು ತಾನು
ಕೈಲಿಯುಕರು ರಾಕಿ ಇಂದಿಗೆ ಮೂರ‍್ ದಿವ್ಸ್
ಕೈಲಿಗೆ ಮೂರು ಮಡ್ಡಿ ಮೆಲವಿಲ್ಲ ತಾನು
ಕೈಲಿಗೆ ಮೂರು ಮಡ್ಡಿ ಮೆಲವಿಲ್ಲ ಪಾಂಡವರೆ
ನೀವೊಂದರಗಳಿಗೆ ಬರಬೇಕು ತಾನು
ಕೈಲಿ ಕರು ಹಾಕೀರು ತೌಡಿನ ಮುಡಿ ಉಂಟು
ಕೈಲಿಗೆ ಮೂರ‍್ ಮಡ್ಡಿ ಮೆಲಹೇಳು ತಾನು
ನಂಬಿದ ಸೂಳೀಯ ಬಿಡಲಾರೆ ಗಿಣಿರಾಮ
ಹೊಯ್ ಹೇಳ ನಿನ್ನ ಒಡತೀಗೆ ತಾನು
ಅಷ್ಟೊಂದ ಮಾತ ಕೇಂಡನೆ ಗಿಣಿರಾಮ
ಕೂತು ಹಾರಿದನೆ ಗಗನಕೆ ತಾನು
ಕೂತು ಹಾರಿದನೆ ಗಗನಕೆ ಗಿಣಿರಾಮ
ಬಂದ್ ಕೂತ ತನ್ನೊಡತಿ ನೆರಿಮ್ಯಾಲೆ ತಾನು
ಏನಂದ್ರು ಗಿಣಿರಾಮ ಎಂತಂದ್ರು ಗಿಣಿರಾಮ
ಹೇಳಿದ ಕಾರನವ ಒದಗ್ಹೇಳು ರಾಮ
ಕೈಲಿಕರು ಹಾಕೀರು ತೌಡಿನ ಮುಡಿ ಉಂಟು
ಕೈಲಿಗೆ ಮೂರ‍್ ಮಡ್ಡಿ ಮೆಲಹೇಳು ತಾನು
ಕೈಲಿಗೆ ಮುರ‍್ ಮಡ್ಡಿ ಮೆಲಹೇಲು ಗಿಳಿರಾಮ
ನಂಬಿದ ಸೂಳಿಯ ಬಿಡಲಾರೆ ತಾನು
ಏನ್ಹೇಳಿರೂ ಬತ್ತಿಲ್ಲ ಎಂತ್ಹೇಳೀರು ಬತ್ತಿಲ್ಲ
ಇನ್ನೊಂದು ನುಡಿಯ ನುಡಿದಾಳು ತಾನು
ಹುಂಡಿಯ ಕರುಹಾಕಿಇಂದಿಗೆ ಮೂರ‍್ ದಿವ್ಸ್
ಹುಂಡಿಗೂ ಮೂರ‍್ ಮಡ್ಡಿ ಮೆಲುವಿಲ್ಲ ಗಿಣಿರಾಮ
ಹೋಯ್ ಹೇಳ ನಿನ್ನ ಒಡಿಯಗೆ ತಾನು
ಅಷ್ಟೊಂದು ಮಾತ ಕೇಂಡನೆ ಗಿಣಿರಾಮ
ಕೂತು ಹಾರಿದನೆ ಗಗನಕೆ ತಾನು
ಕೂತು ಹಾರಿದನೆ ಗಗನಕೆ ಗಿಣಿರಾಮ
ಹೋಯ್ ಕೂತ ಒಡೆಯನ ಜಂಗಿನ್ ಮೇಲ್ ತಾನು
ಏನ್ ಬಂದೆ ಗಿಣಿರಾಮ ಎಂತ ಬಂದೆ ಗಿಣಿರಾಮ
ಬಂದ ಕಾರಣನೇ ಒದಗ್ಹೇಳು ತಾನು
ಹುಂಡಿಯ ಕರು ರಾಕಿ ಇಂದಿಗೆ ಮುರ‍್ ದಿವ್ಸ್
ಹುಂಡಿಗೆ ಮೂರ‍್ ಮಡ್ಡಿ ಮೆಲವಿಲ್ಲ ತಾನು
ಹುಂಡಿ ಕರು ಹಾಕಿರೇ ತೌಡಿನ ಮುಡಿ ಉಂಟು
ಹೋಯ್ ಹೇಳ ನಿನ್ನ ಒಡತಿಗೆ ತಾನು
ಹೋಯ್ ಹೇಳ ನಿನ್ ಒಡತಿಗೆ ಗಿಣಿರಾಮ
ನಂಬಿದ ಸೂಳಿಯ ಬಿಡಲಾರೆ ತಾನು
ಅಷ್ಟೊಂದು ಮಾತ ಕೇಂಡನೆ ಗಿಣಿರಾಮ
ಕೂತು ಹಾರಿದನೆ ಗಗನಕೆ ತಾನು
ಕೂತು ಹಾರಿದನೆ ಗಗನಕೆ ಗಿಣಿರಾಮ
ಹೋಯ್ ಕೂತು ಒಡತಿಯ ನೆರಿಮ್ಯಾನೆ ತಾನು
ಏನಂದ್ರೂ ಗಿಣಿರಾಮ ಎಂತಂದ್ರು ಗಿಣಿರಾಮ
ಹೇಳಿದ ಕಾರಣವ ಒದಗ್ಹೇಳು ರಾಮ
ಹುಂಡಿ ಕರು ಹಾಕಿರುತೌಡಿನ ಮುಡಿ ಉಂಟು
ಹುಂಡೀಗೆ ಮೂರ‍್ ಮಡ್ಡಿ ಮೆಲಹೇಳು ಗಿಣಿರಾಮ
ನಂಬಿದ ಸೂಳಿಯ ಬಿಡಲಾರೆ ತಾನು
ಏನ್ಹೇಳಿರೂ ಬತ್ತಿಲ್ಲ ಎಂತ್ಹೇಳಿರು ಬತ್ತಿಲ್ಲ
ಇನ್ನೊಂದು ನುಡಿಯ ನುಡಿದಾಳು ತಾನು
ನಿನ ಮಡದಿ ಸತ್ತು ಇಂದಿಗೆ ಮೂರ‍್ ದಿವ್ಸ
ಮಡದಿ ಸುಡುವುದಕೆ  ಸೌದಿಲ್ಲ ತಾನು
ಮಡದಿ ಸುಡುವುದಕೆ ಸೌದಿಲ್ಲ ಗಿಣಿರಾಮ
ಹೋಯ್ ಹೇಲ ನಿನ್ನ ಒಡಿಯಗೆ ತಾನು
ಅಷ್ಟೊಂದ ಮಾತು ಕೇಂಡನೆ ಗಿಣಿರಾಮ
ಕೂತು ಹಾರಿದನೆ ಗಗನಕೆ ತಾನು
ಕೂತು ಹಾರಿದನೆ ಗಗನಕೆ ಗಿಣಿರಾಮ
ಹೋಯ್ ಕೂತ ಒಡೆಯನ ಜಂಗ ಮೇಲೆ ತಾನು
ಎನ್ ಬಮದೆ ಗಿಣಿರಾಮ ಎಂತ ಬಂದೆ ಗಿಣಿರಾಮ
ಬಂದ ಕಾರಣನೆ ಒದಗ್ಹೇಳು ತಾನು
ನಿನ ಮಡದಿ ಸತ್ತು ಇಂದಿಗೆ ಮೂರ‍್ ದಿವ್ಸ
ಮಡದಿ ಸುಡುವುದಕ್ಕೆ ಸೌದಿಲ್ಲ ತಾನು
ಮಡದಿಯ ಸತ್ತರೆ ಗಂಧದ ಮರ ಉಂಟೆ
ಆಳು ಮಕ್ಕಳ ಕರೆಸಿ ಕಡಿಸಿನಿ ತಾನು
ಆಳುಮಕ್ಕಳ ಕರೆಸಿ ಕಡಿಸಿನಿ ಗಿಣಿರಾಮ
ಮನಿ ಹೊದ್ದಿಲ್ಲ ಮಲಗದ್ದೆಲ್ಲಿ ಸುಡಿಸಿನಿ ತಾನು
ಮನಿ ಹೊದ್ದಿನ ಮಲಗದ್ದೆಲ್ಲಿ ಸುಡಿಸಿನಿ ಗಿಣಿರಾಮ
ಒಂದ್ಹಾಡ ತುಪ್ಪಹೊಯ್ಸಿನಿ ತಾನು
ಒಂದ್ಹಾಡ ತುಪ್ಪ ಹೊಯ್ಸಿನಿ ಗಿಣಿರಾಮ
ಗಂಧದ ಮರ ಹತ್ತಿ ಹೊಗಿ ಕಾಂತೆ ನಾನು
ಗಂಧದ ಮರ ಹತ್ತಿ ಹೋಗಿ ಕಾಂತೆ ಗಿಣಿರಾಮ
ನಂಬಿದ ಸೂಳಿಯ ಬಿಡಲಾರೆ ತಾನು
ನಂಬಿದ ಸೂಳಿಯ ಬಿಡಲಾರೆ ಗಿಣಿರಾಮ
ನಾನೊಂದರಗಳಿಗಿ ಬರಲಾರೆ ತಾನು
ಹೋಯ್ ಹೇಳ ನಿನ್ನ ಒಡತಿಗೆ ತಾನು
ಅಷ್ಟೊಂದ ಮಾತ ಕೇಂಡನೆ ಗಿಣಿರಾಮ
ಕೂತು ಹಾರಿದನೆ ಗಗನಕೆ ತಾನು
ಕೂತು ಹಾರಿದನೆ ಗಗನಕೆ ಗಿಣಿರಾಮ
ಹೋಯ್ ಕೂತ ಒಡತಿಯ ನೆರಿಮ್ಯಾನೆ ತಾನು
ಏನಂದ್ರು ಗಿಣಿರಾಮ ಎಂತಂದ್ರು ಗಿಣಿರಾಮ
ಹೇಳಿದ ಕಾರಣವ ಒದಗ್ಹೇಳು ರಾಮ
ಮಡದಿಯು ಸತ್ತರೆ ಗಮಧದ ಮರ ಉಂಟು
ಆಳು ಮಕ್ಕಳ ಕರೆಸಿ ಕಡಿಸಿನಿ ತಾನು
ಆಳು ಮಕ್ಕಳ ಕರೆಸಿ ಕಡಿಸಿನಿ ಗಿಣಿರಾಮ
ಮನಿ ಹೊದ್ದಿನ ಮಲಗದ್ದೆಲಿ ಸುಡಿಸಿನಿ ತಾನು
ಮನಿ ಹೊದ್ದಿನ ಮಲಗದ್ದೆಲಿ ಸುಡಿಸಿನಿ ಗಿಣಿರಾಮ
ಒಂದ್ಹಾಡ ತುಪ್ಪ ಹೊಯ್ಸಿನಿ ತಾನು
ಒಂದ್ಹಾಡ ತುಪ್ಪ ಹೊಯ್ಸಿನಿ ಗಿಣಿರಾಮ
ಗಂಧದ ಮರ ಹತ್ತಿ ಹೊಗಿ ಕಾಂತೆ ನಾನು
ಗಂಧದ ಮರ ಹತ್ತಿ ಹೊಗಿ ಕಾಂತ ಗಿಣಿರಾಮ
ನಂಬಿದ ಸೂಳಿಯ ಬಿಡಲಾರೆ ತಾನು
ನಂಬಿದ ಸೂಳಿಯ ಬಿಡಲಾರೆ ಗಿಣಿರಾಮ
ನಾನೊಂದರಗಳಿಗೆ ಬರಲಾರೆ ತಾನು
ನಾನೊಂದರಗಳಿಗೆ ಬರಲಾರೆ ಗಿಣಿರಾಮ
ಹೋಯ್ ಹೇಳ ನಿನ್ನ ಒಡತಿಗೆ ತಾನು.

ಇನ್ನೇನು ಮಾಡೂಕು ಆಪ್ದಲ್ಲ ಅಂದ್ಕಂಡ ಆ ಹೆಂಡ್ತಿ ಅಂಬವ್ಳ ಅಪ್ಪ ಒಂದ್ ಕರಿ ನಾಯಿಯನ್ನು ಸಾಯ್ಸಿ ಗಂಧದ ಮರ ಕಡ್ದ ನಾಯಿಯನ್ನ್ ಸುಡಸ್ತ್ರ. ಗಂಡ ಹೋಗಿ ಕಂಡ್ ಒಡಿ ಬತ್ತ. ಸೂಳಿ ಅಡ್ಡ ಕಟ್ತ್ಲ. ಆಗಳ ಆ ಗಂಡ ಅವಳ ಒಂದ್ ಕಾಲ ಕಡಿತ. ಆಗಳಿಗೆ ಆವ್ಳ ಇನ್ನೊಂದ ಕಾಲ ಇತತ ಅಂದ್ಲ.  ಇನ್ನೊಂದ್ ಕಾಲೂ ಕಡ್ದ ಹಾಕ್ತ.  ಅಷ್ಟಾರೂ ಬಿಡುದಿಲ್ಲೆ ಅವ್ಳ.ಅವ್ಳನ್ನ್ ಕೊಂದ್ ಹಾಕಿಯೇ ಬತ್ತ.  ಇಲ್ಲಿಗೆ ಓಡಿ ಬಮದ. ಅಂವ ಬಂದ್ರ ಬಂದ್ ಕೊಂಡಕ್ ಹಾರಿ ಸಾಯ್ಲಿ ಅಂದ್ಕಂಡ್ ಅಪ್ಪ, ಮಗ್ಳೂ ಕೊಂಡಕ್ಕೆ ಹಾರೂಕೂಗ ಅಂದ್ಕಂಡ ಅವ್ಳನ್ನ ಎರೀನ್ ಸಾಲೀಗೆ ಸರಪಳಿ ಹಾಕಿ ಕಟ್ಟಿ ಹಾಕ್ರ. ಗಂಡ ಕೊಂಡಕ್ಕೆ ಹಾರಿ ಜೀವ ತೆಕ್ಕಂತ. ಅವ್ಳೂ ಕಾಲಿನ ಸರಪಳಿ ಬಿಚ್ಕಂಡ ಗಂಡ ಹಾರಿದ ಕೊಂಡಕ್ಕೆ ತಾನೂ ಹಾರ‍್ತೆ ಅಂತ್ಲ.  ಆಗ ಅವ್ಳ ಅಪ್ಪ ಬಂದ ನಾಗರ ಬೆತ್ತ ಎಳ್ದ ಅವ್ಳ ಗಂಡನ್ನ ಬದಕ್ಸಿ ಕೊಡ್ತ. ಕಡೀಗೆ ಗಂಡ ಹೆಣ್ತಿ ಸುಖವಾಯಿ ಇರತ್ರ.