ಒಬ್ಬಳೆ ತಾಯೀಗೇ ಏಗಿಣಿಲೇಗೀಣಿಯೇ
ಒಬ್ಬನೆ ಮಗ ಹುಟ್ಟಿ ಏಗಿಣಿಲೇಗೀಣಿಯೇ
ಅವ್ನಿಗೆ ಲಗ್ಗಣವೇ ಡೀಳ ಏಗಿಣಿಲೇಗೀಣಿಯೇ
ಲಗ್ಗಣದ ಮರುದಿವ್ಸ ಏಗಿಣಿಲೇಗೀಣಿಯೇ
ದಂಡಿನ ವಾಲಿ ಬಂದೀತಂಬ್ರ ಏಗಿಣಿಲೇಗೀಣಿಯೇ
ತಾಯಮ್ಮನ ಕರಿದಾನೆ ಏಗಿಣಿಲೇಗೀಣಿಯೇ
ನಾದಂಡಿಗಾರು ಹೋಗುವೆ ತಾಯೆ ಏಗಿಣಿಲೇಗೀಣಿಯೇ
ನಿನ ಸೊಸಿ ಅಂಬಳವು ಏಗಿಣಿಲೇಗೀಣಿಯೇ
ಬಾಮಿ ನೀರಿಕೆ ಕಳ್ಸಬ್ಯಾಡ ಏಗಿಣಿಲೇಗೀಣಿಯೇ
ಆರು ತಿಂಗ್ಳ ದಂಡು ತಾಯೆ ಏಗಿಣಿಲೇಗೀಣಿಯೇ
ಮೂರು ತಿಂಗ್ಳಿಗೆ ಸವ್ರಿ ಬತ್ತೆ ಏಗಿಣಿಲೇಗೀಣಿಯೇ
ಮಜೂರು ತಿಂಗ್ಳ ದಂಡು ತಾಯೆ ಏಗಿಣಿಲೇಗೀಣಿಯೇ
ಒಂದು ತಿಂಗ್ಳಿಗೆ ಸವ್ರಿ ಬತ್ತೆ ಏಗಿಣಿಲೇಗೀಣಿಯೇ
ಅವ್ಳು ಅಕ್ಕೆಂದೇ ಹೇಳಿದಳ ಏಗಿಣಿಲೇಗೀಣಿಯೇ
ಅವ ದಂಡೀಗೆ ನಡೆದಾನೆ ಏಗಿಣಿಲೇಗೀಣಿಯೇ
ನೆರಮನಿಗೆ ನಡಿದಾಳೆ ಏಗಿಣಿಲೇಗೀಣಿಯೇ
ನೆರಮನಿ ಒಳಗೆ ಮಲ್ಲಿಗಿರಾಯ ಏಗಿಣಿಲೇಗೀಣಿಯೇ
ನಮ್ಮನಗಾರೂ ಹ್ವಾಪೋ ಸ್ವಾಮಿ ಏಗಿಣಿಲೇಗೀಣಿಯೇ
ನನ ಗಂಡ ದಂಡೀಗೆ ಹೋಗಿರುವ ಏಗಿಣಿಲೇಗೀಣಿಯೇ
ನಿನ ಅತ್ತಿ ನೋಡಿರೇನ್ಹೇಳುವಳೆ ಏಗಿಣಿಲೇಗೀಣಿಯೇ
ನಾನಾರು ಬರುವುದಿಲ್ಲ ಏಗಿಣಿಲೇಗೀಣಿಯೇ
ನಮ್ಮನಿಗಾರು ಹ್ವಾಪೋ ಸ್ವಾಮೀ ಏಗಿಣಿಲೇಗೀಣಿಯೇ
ಅತ್ತಿ ಏನೂ ಹೇಳೋದಿಲ್ಲ ಏಗಿಣಿಲೇಗೀಣಿಯೇ
ಅತ್ತಿ ಏನು ಹೇಳೂದಿಲ್ಲ ಏಗಿಣಿಲೇಗೀಣಿಯೇ
ಅವ್ಳ ಮನಿಗೆ ಕರ‍್ಕಬಂದ್ಲು  ಏಗಿಣಿಲೇಗೀಣಿಯೇ
ಮೆತ್ತಿನ ಮ್ಯಾನೆ ನಡೆದೀಳಲೆ ಏಗಿಣಿಲೇಗೀಣಿಯೇ
ಗಂಡ ಒರಗೂ ಮಂಚವ ಕೊಟ್ಟು ಏಗಿಣಿಲೇಗೀಣಿಯೇ
ಮಂಚದ ಮೇಲೆ ಒರಗೀರಲೆ ಏಗಿಣಿಲೇಗೀಣಿಯೇ
ದಂಡೀಗ್ಹೋದ ಗಂಡನಿಗೆ ಏಗಿಣಿಲೇಗೀಣಿಯೇ
ಕೆಟ್ಟ ಕೆಟ್ಟ ಸಪನು ಬಿದ್ದೊ ಏಗಿಣಿಲೇಗೀಣಿಯೇ
ಗಂಡುಲಿ ಹೆಣ್ಣುಲಿ ಸಪ್ನ ಬಿದ್ದು ಏಗಿಣಿಲೇಗೀಣಿಯೇ
ಅವ್ನೀಗ್ ಆರೂ ತಿಂಗ್ಳ ದಂಡಲೆ ಏಗಿಣಿಲೇಗೀಣಿಯೇ
ಅರ್ಧಗಳಿಗಿ ಸವ್ರಿದ್ನಲೆ ಏಗಿಣಿಲೇಗೀಣಿಯೇ
ಮೂರು ತಿಂಗಳ ದಾರಿಯಲೇ ಏಗಿಣಿಲೇಗೀಣಿಯೇ
ಮೆತ್ತಿನ ಮ್ಯಾನೆ ನಡೆದನಲೆ ಏಗಿಣಿಲೇಗೀಣಿಯೇ
ಗಂಡುಲಿ ಹೆಣ್ಣುಲಿ ಒರಗಿದುವಲೆ ಏಗಿಣಿಲೇಗೀಣಿಯೇ
ಕೋವಿಗು ಮದ್ದು ತುಂಬಿದ ಏಗಿಣಿಲೇಗೀಣಿಯೇ
ಗಂಡುಲಿಹೆಣ್ಣುಲಿ ಹೊಡೆದನಲೆ ಏಗಿಣಿಲೇಗೀಣಿಯೇ