ಬಳ್ಳಳ್ಳಿ ದೇಸಕೆ ಬಂದೀತೆ ಹುಲಿಯೇ ತಾನ ತಂದಾನನೇ
ಬಳ್ಳಳ್ಳಿ ದೇಸವ ಕೆಡಿಸೀತೆ ಹುಲಿಯೇ ತಾನ ತಂದಾನನೇ
ಐದೂರ ಪೈರನೆ ನುಂಗೀತೆ ಹುಲಿಯೇ ತಾನ ತಂದಾನನೇ
ಐದ್ ಕೆರಿ ನೀರನೆ ಕುಡಿದೀತೆ ಹುಲಿಯೇ ತಾನ ತಂದಾನನೇ
ಆ ಊರ ಅರಸನೆ ಅಂಬವ್ನೆ ತಾನು ತಾನ ತಂದಾನನೇ
ಐದೂರಿಗೆ ವಾಲಿ ಬರದಾನೆ ತಾನು ತಾನ ತಂದಾನನೇ        
ಹುಲಿಯ ಹೊಡೆವವರುಯಾರಾರು ಇದ್ದೀರೆ ತಾನ ತಂದಾನನೇ
ಕೂಡಲೇ ಆರೂ ಬರಬೇಕೆಂದ ತಾನ ತಂದಾನನೇ
ನಾಲ್ಕೂರ ವಾಲಿ ವಾಪಸು ಬಂತು ತಾನ ತಂದಾನನೇ
ಕಕ್ಕಳ್ಳಿ ರಾಜ್ಯದ ಕಟ್ಟಾಣಿ ಕರಿಯ ತಾನ ತಂದಾನನೇ
ಅವನಿಗೆ ವಾಲಿ ಸಿಕ್ಕತಲೆ ತಾನ ತಂದಾನನೇ
ಮಡದೀನಾರೂ ಕರೆದನೆ ತಾನ ತಂದಾನನೇ
ಬಳ್ಳಳ್ಳಿ ದೇಸವ ಕೆಡಿಸೀತೆ ಹುಲಿಯೇ ತಾನ ತಂದಾನನೇ
ಐದೂರು ಪೈರನೆ ನುಂಗೀತೆ ಹುಲಿಯೇ ತಾನ ತಂದಾನನೇ
ಐದ್ ಕೆರಿ ನೀರನೆ ಕುಡಿದೀತೆ ಹುಲಿಯೇ ತಾನ ತಂದಾನನೇ
ಆ ಊರ ಅರಸ ಅಂಬವ್ನೆ ತಾನು ತಾನ ತಂದಾನನೇ
ಐದೂರಿಗ್ ವಾಲಿ ಬರದಾನೆ ತಾನು ತಾನ ತಂದಾನನೇ
ಹುಲಿಯ ಹೊಡೆವವರು ಯಾರಾರು ಇದ್ದೀರೆ ತಾನ ತಂದಾನನೇ
ಕೂಡಲೇ ಆರೂ ಬರಬೇಕೆಂದ ತಾನ ತಂದಾನನೇ
ನಾಲ್ಕೂರ ವಾಲಿ ವಾಪಸ ಬಂತು ತಾನ ತಂದಾನನೇ
ಕಕ್ಕಳ್ಳಿ ರಾಜ್ಯದ ಕಟ್ಟಾಣಿ ಕರಿಯ ತಾನ ತಂದಾನನೇ
ಹುಲಿನಾರು ಹೊಡೆಯೂಕೆ ಹೋಗ್ತೆನೆ ಎಂದ ತಾನ ತಂದಾನನೇ
ಹತ್ತು ತಿಂಗಳ ಗರ್ಭಿಣಿ ನಾನು ತಾನ ತಂದಾನನೇ
ಹುಲಿಯ ಹೊಡುಕೆ ಹೋಗೊದುಬ್ಯಾಡ ತಾನ ತಂದಾನನೇ
ಅಷ್ಟು ಮಾತ ಕೇಳಲಿಲ್ಲ ತಾನ ತಂದಾನನೇ
ಹುಲಿಯ ಹೊಡುಕೆ ಹೋಗ್ತೆನೆ ಸತಿಯೆ ತಾನ ತಂದಾನನೇ
ಬುತ್ತಿ ರೊಟ್ಟಿ ಮಾಡು ಅಂದ ತಾನ ತಂದಾನನೇ
ಬಾಮಿಯಂಗಳಕೆ ನಡೆದಾನ ತಾನ ತಂದಾನನೇ
ಕಾಲು ಶ್ರೀಮುಖವ ತೋಳೆದನಲೆ ತಾನ ತಂದಾನನೇ
ತೊಳಿಸಿ ಮಂಟಪಕೆ ನಡೆದಾನ ತಾನ ತಂದಾನನೇ
ತೊಳಿಸಿಗೆ ಕೈಮುಗಿದಾನೆ ತಾನ ತಂದಾನನೇ
ಕಟ್ಟೆಯ ಕಟ್ಟಿ ನೆಟ್ಟಿದನೇ ತಾನ ತಂದಾನನೇ
ಒಳಗಿದ್ದ ಮಡದಿಯ ಕರೆದನೆ ತಾನ ತಂದಾನನೇ     
ಈ ತೊಳಿಸಿಯ ಗಿಡವು ಬಾಡಿರೆ ಸತಿಯೆ ತಾನ ತಂದಾನನೇ
ನಾನಿಲ್ಲವೆಂದು ತಿಳಿಕೋ ಸತಿಯೆ ತಾನ ತಂದಾನನೇ
ತೊಳಿಸಿಯೆ ಗಿಡವೇ ಇದ್ದೀರಲೇ ತಾನ ತಂದಾನನೇ
ನಾನಿದ್ದೆನೆಂದು ತಿಳಿಕೋ ಸತಿಯೆ ತಾನ ತಂದಾನನೇ
ಒಳಗಿದ್ದ ಕೋವಿಯ ತೆಗೆದಲೇ ತಾನ ತಂದಾನನೇ
ಮಡದಿನಾದ್ರು ಕರಿದಾನಲೆ ತಾನ ತಂದಾನನೇ
ಕೋವಿಯನ್ನ ನೆಗೆದು  ಕೊಡೆ ತಾನ ತಂದಾನನೇ
ಕೋವಿಯನ್ನು ನೆಗೆದು ಕೊಟ್ಟು ತಾನ ತಂದಾನನೇ
ಬಳ್ಳಳ್ಳಿ ದೆಸಕೆ ನಡೆದನಲೆ ತಾನ ತಂದಾನನೇ
ಬಳ್ಳಳ್ಳಿ ದೇಸದ ಅರಸನ್ರ ತಾನ ತಂದಾನನೇ
ಹುಲಿಯು ಎಲ್ಲಿತ್ತು ಕೇಂಡನಲೇ ತಾನ ತಂದಾನನೇ
ಬಲ್ಲೆ ಬಲ್ಲೆಯ ಮೇಲೆ ತಾನ ತಂದಾನನೇ
ಹುಲಿಯ ತಾನು ಒರಗಿತ್ತಲೆ ತಾನ ತಂದಾನನೇ
ಅಟ್ಟನಾರೂ ಕಟ್ಟಿ ಕೊಟ್ರು ತಾನ ತಂದಾನನೇ
ಅಟ್ಟದ ಮ್ಯಾನೆ ಏರಿಕೂತ ತಾನ ತಂದಾನನೇ
ಅಬ್ರದ ಹುಲಿಯೇ ಅಬ್ರವ ತೋರಿ ತಾನ ತಂದಾನನೇ
ನಾಲ್ಕು ಕಾಲಲಿ ನಿಂತಿತೆ ಹುಲಿಯೆ ತಾನ ತಂದಾನನೇ
ಕಿಟ್ಟದೇ ಮುಟ್ಟದೆ ನುಂಗೀತಲೆ ತಾನ ತಂದಾನನೇ
ಇತ್ತ ಮಡದಿಯಾರು ಅಂಬವಳೇ ತಾನ ತಂದಾನನೇ
ತೊಳಸೀ ಕಟ್ಟೆಗೆ ನಡೆದೀಳೆ ತಾನ ತಂದಾನನೇ
ತೊಳಸಿ ಗಿಡವೇ ಬಾಡೀತೆ ತಾನ ತಂದಾನನೇ
ಬಿದ್ದೂ ಬಿದ್ದು ಹೊಡಕೀಳ ತಾನ ತಂದಾನನೇ
ಹತ್ತು ತಿಂಗಲ ಗರ್ಭಿಣಿ ತಾನ ತಂದಾನನೇ
ಗಂಡು ಮಗನ ಪಡೆದಳೆ ತಾನ ತಂದಾನನೇ
ಒಂದು ದಿವ್ಸದ ಮಗಿನ ಕಂಡಂಗೆ ತಾನ ತಂದಾನನೇ
ಹತ್ತು ವರ್ಷದ ಮಗಿನ ಕಂಡ್ರೆ ತಾನ ತಂದಾನನೇ
ಅಮ್ಮನನು ಕರೆದಾನೆ ತಾನ ತಂದಾನನೇ
ಚಂಡನಾರೂ ತಂದುಕೊಡು ತಾನ ತಂದಾನನೇ
ಪ್ಯಾಟಿ ಮಕ್ಕಳ ಸಂಗಡ ತಾ ತಾನ ತಂದಾನನೇ
ಆಟ ಆಡುಕೆ ಹೋಗಿದ್ದನಲೇ ತಾನ ತಂದಾನನೇ
ಚಂಡಿನಾಟ ಆಡೀನೆ ತಾನು ತಾನ ತಂದಾನನೇ
ಅಷ್ಟೂ ಅಟವ ಇವನೇ ಗೆದ್ದ ತಾನ ತಂದಾನನೇ
ಮಕ್ಕಳಿಗಾರು ಸಿಟ್ಟೇ ಬಂತು ತಾನ ತಂದಾನನೇ
ಅಪ್ಪನ ಕಾಣದೆ ಹುಟ್ಟಿದ ಮಗನೇ ತಾನ ತಂದಾನನೇ
ನಮ್ಮಾಟವೆಲ್ಲ ನೀನೆ ಗೆದ್ದೆ ತಾನ ತಂದಾನನೇ
ಮನಿಗಾರು ಓಡಿ ಬಂದ ತಾನ ತಂದಾನನೇ
ಅಮ್ಮನಾರೂ ಕರಿದಾನಲೇ ತಾನ ತಂದಾನನೇ      
ಅಪ್ಪಯ್ಯನೆಲ್ಲಿಗೆ ಹೋಗಿರಮ್ಮ ತಾನ ತಂದಾನನೇ
ಬಳ್ಳಳ್ಳಿ ದೇಸಕೆ ಬಂದೀತೆ ಹುಲಿಯೇ ತಾನ ತಂದಾನನೇ
ಬಳ್ಳಳ್ಳಿ ದೇಸವ ಕೆಡಿಸೀತೆ ಹುಲಿಯೇ ತಾನ ತಂದಾನನೇ
ಐದೂರು ಪೈರನೆ ನುಂಗೀತೆ ಹುಲಿಯೇ ತಾನ ತಂದಾನನೇ   
ಐದ್ ಕೆರಿ ನೀರನೆ ಕುಡಿದೀತೆ ಹುಲಿಯೇ ತಾನ ತಂದಾನನೇ
ಆ ಊರ ಅರಸನೆ ಅಂಬವ್ನೆ ತಾನು ತಾನ ತಂದಾನನೇ
ಐದೂರಿಗ್ ವಾಲಿ ಬರದಾನೆ ತಾನ ತಂದಾನನೇ
ಹುಲಿಯ ಹೊಡೆವವರು ಯಾರಾರು ಇದ್ರೆ ತಾನ ತಂದಾನನೇ
ಕೂಡಲೇ ಆರೂ ಬರಬೇಕೆಂದ ತಾನ ತಂದಾನನೇ
ನಾಲ್ಕೂರ ವಾಲಿ ವಾಪಸು ಬಂತು ತಾನ ತಂದಾನನೇ
ಕಕ್ಕಳ್ಳಿ ದೇಸದ ನಿನ್ನಪ್ಪ ಕರಿಯ ತಾನ ತಂದಾನನೇ
ಅವನಿಗೆ ವಾಲಿ ಸಿಕ್ಕ ತಲೆ ತಾನ ತಂದಾನನೇ
ಬಳ್ಳಳ್ಳಿ ದೇಸಕೆ ನಡೆದನಲೆ ತಾನ ತಂದಾನನೇ
ಹುಲಿ ಹೊಟ್ಟೆ ಸೇರೀನಲೆ ತಾನ ತಂದಾನನೇ
ನಾನಾರೂ ಹುಲಿ ಹೊಡುಕೆ ಹೋತೇ ತಾಯಿ ತಾನ ತಂದಾನನೇ
ಬುತ್ತಿ ರೊಟ್ಟಿ ಮಾಡಿ ಕೊಡೆ ತಾನ ತಂದಾನನೇ
ಬ್ಯಾಡ ಮಗನೆ ಅಂದಳಲೆ ತಾನ ತಂದಾನನೇ
ನೀನು ಹೋಗುದು ಬ್ಯಡ ಅಂದಳಲೆ ತಾನ ತಂದಾನನೇ
ಅಪ್ಪನ ನುಂಗಿದ ಹುಲಿಯೇ ಮಗನೆ ತಾನ ತಂದಾನನೇ
ನೀನು ಹೋಗುದು ಬ್ಯಡ ಅಂದಳಲೆ ತಾನ ತಂದಾನನೇ
ನಾನ್ಹೋಗಲೇ ಬೇಕು ಅಂದನಲೆ ತಾನ ತಂದಾನನೇ
ಬುತ್ತಿ ರೊಟ್ಟಿ ಕಟ್ಟಡೀಳಲೆ ತಾನ ತಂದಾನನೇ
ಬುತ್ತಿ ರೊಟ್ಟಿ ಹಿಡಿದಾನಲೇ ತಾನ ತಂದಾನನೇ
ಬಿದ್ದ ಮಾರಗ ಹಿಡಿದಾನಲೇ ತಾನ ತಂದಾನನೇ
ಬೆಳ್ಳಳ್ಳಿ ದೇಸಕೆ ನಡೆದಾನಲೆ ತಾನ ತಂದಾನನೇ
ಬಳ್ಳಳ್ಳಿ ದೇಸದ ಅರಸೇರಿದ್ರೆ ತಾನ ತಂದಾನನೇ
ಹುಲಿಯೇ ಎಲ್ಲಿ ಕೇಂಡನಲ್ಲೆ ತಾನ ತಂದಾನನೇ

ಹುಲಿಯನ್ನ ಕೊಂದು ಅಪ್ಪನನ್ನು ಕರ‍್ಕಬತ್ತ. ರಾಜ ಮಗನಿಗೆ ಮಾತಿನಂತೆ ಅಧೃ ಆಸಿತ ಕೊಟ್ಟ ಮಗ್ಳನ್ನ ಕೊಟ್ಟ ಮದಿ ಮಾಡಿ ಕೊಡ್ತ.