ಸಂಧಿ ೬

ವಿಂಧ್ಯಕನೆ ಇಭಕೇತು ವಾಗೊಲ | ವಿಂದೆ ಕಮಲಪ್ರಭೆ ಮಗಧವರ |
ಸೌಂದರಿಯರೊಳು ಕೂಡಿರುತ ಧೀವರಗೆ ಮೋಹಿಸಿದ || ಪ ||

ಪದೆದ ಪೂರ್ವ ವಿದೇಹ ಸೀತಾ | ನದಿಯ ಬಡಗಣ ಪುಷ್ಕಳಾವತಿ |
ವಿದಿತ ವಿಷಯದ ಪುಂಡರೀಕಿಣಿಯೆಂಬ ಪೊಳಲರಸ ||
ತ್ರಿದಶಪತಿಸಮ ನಾಗದತ್ತನು | ಮುದಿತ ಸತ್ಪ್ರಿಯಕಾರಿಣಿಯೆ ಪ |
ಟ್ಟದ ಮಡದಿವೆರಸರಸುಗೆಯ್ಯುತ್ತಿರ್ದನಳ್ತಿಯಲಿ || ೧ ||

ಅದಱೊಳಭಿಕುಲ ತಿಲಕನಾ ವಿ | ತ್ತದಗೆ ಕುಱು ಗಡನೀಧ ಧನಿಕನು |
ವಿದಿತ ವೈಶ್ಯೋತ್ತಮನು ರಾಜಶ್ರೇಷ್ಠಿ ಇಭದತ್ತ ||
ಮದವಳಿಕೆ ವಸುದತ್ತೆ ಭೂತಂ | ಗೊದವಿಹಳು ಮದನಂಗೆ ರತಿ ಬಲ |
ದೊದವಿದಂದದಿ ನಾಗದತ್ತ ನರೇಂದ್ರನನುಜಾತೆ || ೨ ||

ಅವರ್ಗೆಮೆ ಱೆವಿಭಕೇತುವೆಂಬೊ | ಪ್ಪುವ ಕುಮಾರಕನಾದ ವಿಂಧ್ಯಕ |
ನವನ ವಾಗುರೆ ಆ ಪೊಳಲ ಮಿಂಗುಲಿಗೆ ಮಗನಾಗಿ ||
ಹವಣಿಸುವ ಧೀವಳನೆನಿಸಿ ಯ | ತ್ತವನು ಬೆಳೆದಪನಿತ್ತಲಿಭಕೇ |
ತು ವನದಷ್ಕರಿಸುವನು ಚೆಲುವಿನಲಿ || ೩ || (?)

ಬಂಧು ಬಳಗದ ಚಿತ್ತಹರುಷವ | ನಂದು ಬೆಳಸುತ ತಂದೆ ತಾಯಾ |
ನಂದವನು ಬೆಳೆಯಿಸುತ ತನ್ನೊಡನಖಿಳ ವಿದ್ಯೆಗಳ ||
ಚಂದದಿಂ ಬೆಳಯಿಸುತೆ ಯುವತೀ | ವೃಂದವನು ರಾಗವನು ಬೆಳೆಸುತ |
ಲಂದು ಮೆಱೆವಿಭಕೇತು ಬೆಳೆದನೇಳ್ಗೆಯಲಿ || ೪ ||

ತುಂಗಕುಚಯುಗ ಪೊಳೆಪೊಳೆವ ಕ | ಣ್ಮಿಂಗಲನು ಪೊಸಗಾಡಿವಲೆಯೊಳು |
ಪಿಂಗದಿರೆ ಸಿಕ್ಕಿಪನು ಮೊಲೆವೆಣಿವಕ್ಕಿಗಳ ಪಿಡಿವ ||
ಅಂಗನೆಯರ ಮನೋಮೃಗವಗಂ | ಡಂಗದಲಿ ಕೋಳೊಂಬ ಚೆಲ್ವಿಕೆ |
ಯಂಗಜನುಮುಂ ಪೋದ ಭವದ ಪುಳಿಂದನೆನಲೆಸೆದ || ೫ ||

ಪೊಂಬುಗರಿ ಮೊಲೆ ಹೊಳೆವ ನಳಿ ತೋ | ಳ್ತುಂಬಿದಿಂಗಳ ಪಳಿವ ನಗೆಮೊಗ |
ಕೆಂಬಲರು ದುಟಿ ಸೋಗೆಗಣು ನುಣ್ದೊಡೆ ಲತಾ ಮಧ್ಯ ||
ತುಂಬಿ ತುಳ್ಕುವ ಜವ್ವನವು ಪೊಂ | ಬೊಂಬೆಗಾಯಿತೆನಿಪಾತ್ಮಜೆಯ ಚೆ |
ಲ್ವಂ ಬಿಡದೆ ಪಿತೃ ನಾಗದತ್ತನರೇಂದ್ರ ನೀಕ್ಷಿಸಿದ || ೬ ||

ಕರಸಿದನು ಧರೆಯರಸುಮಕ್ಕಳ | ನೆರವಿಯನು ನವರತ್ನಮಯದಿಂ |
ವಿರಚಿಸದನೋಳ್ಪಿಂ ಸ್ವಯಂವರಸಾಲೆಯನು ಕೂಡೆ ||
ಸಿರಿಯ ಸಿಂಗರಿಸಿದ ತೆಱದಿ ಸಿಂ | ಗರಿಸಿ ಕಮಲಪ್ರಭೆಕುಮಾರಿಯ |
ನಿರಿಸಿ ಪಲ್ಲಕ್ಕಿಯೊಳು ತೋ ಱಿಸುತಿರ್ದನೆಲ್ಲರನು || ೭ ||

ಬೇಡ ಬೇಡನೆ ಜನಕನೊಡನಾ | ಗಾಡಿವೆತ್ತಿಭಕೇತು ವೊಂದೆಡೆ |
ನೋಡುತಿರೆ ಪಲವೂಗಳಿರೆಯುಂ ಬಿರಿವ ಮಲ್ಲಿಗೆಗೆ ||
ಪಾಡುವಳಿ ಬಂದೆಱಗುವಂದದಿ | ನಾಡೆ ಕುವರಿಯ ಕಣ್ಣೆಱಗಿದುವು |
ರೂಢಿವಡೆದಿಭಕೇತುವಿನ ಮೇಲರಸ ಕೇಳೆಂದ || ೮ ||

ನಿಟ್ಟಿಸುವ ಬಹುರಾಜಪುತ್ರರ | ದಿಟ್ಟಿಮಾಲೆಯ ಸೂಡಿದಳು ತಾಂ |
ತೊಟ್ಟನಿದಿರೈತಂದು ರಾಗದಿ ವೈಶ್ಯಪುತ್ರಂಗೆ ||
ನೆಟ್ಟನಾ ಮಣಿಮಾಲೆಯಿಕ್ಕಿದ | ಳೊಟ್ಟಯಿಸುತಿರೆ ಮಂಗಳಾನಕ |
ವಿಟ್ಟ ಸುಮುಹೂರ್ತದಿ ಮದುವೆನಿಂದನು ಕುಮಾರಿತಿಯ || ೯ ||

ಅಳಿಯನಳಿಯನು ಧರ್ಮಮುಮನೆಂ | ದೆಳಸಿ ರಾಗದಿ ಕಂಠಮಾಲೆಯ |
ಗಳಕೆ ಕಟ್ಟಿದ ಕೊಟ್ಟನಾ ಯುವರಾಜ ಪದವಿಯನು ||
ಬಳುವಳಿಯ ಮಾತೇನೊ ಯಾಚಕ | ಕುಳಕೆ ಹಯ ಗಜ ರತ್ನರಾಶಿಯ |
ನೊಲಿದು ಕೊಟ್ಟನು ಪುಂಡರೀಕಿಣಿಯರಸ ಕೇಳೆಂದ || ೧೦ ||

ಕಿವಿ ಸವಿಯ ತನಿಲಲ್ಲೆ ನುಡಿ ಕಣು | ಸವಿಯ ಹೊಸ ಜವ್ವನದ ಸಿರಿ ಬಾಯ್ |
ಸವಿಯ ಚುಂಬನದಿಂಬು ನಾಸಿಕೆ ಸವಿಯ ತನಿಗಂಪು ||
ಲವಲವಿಪ ಮೈ ಸವಿಯ ತಕ್ಕೆಯು | ತವದ ಮನ ಸವಿ ಮಚ್ಚು ಬೆಚ್ಚವು |
ಸವಿಸುಸಿಲೊಳಿಭಕೇತು ಕಮಲಪ್ರಭೆಯ ಸಮರತದಿ || ೧೧ ||

ನೇತ್ರಸೌಖ್ಯಮನೊಂದು ದಿನವಾ | ಪಾತ್ರ ಚೂಡಾಮಣಿಯೆನಿಪ ನಿಜ |
ಪುತ್ರಿ ಮಗಧ ಸವುಂದರಿಯ ಸೊಬಗಾದ ನೃತ್ಯವನು ||
ಸೂತ್ರಿಸಿದವೊಲಡಱಿವಡೀ ತೂ | ರ್ಯತ್ರಯತ್ರಿಣಯನನೆ ಬಲ್ಲನು |
ಧಾತ್ರಿಯೊಳಗೆಂದಸ ತೊಱಿಸೆ ಕಂಡನಿಭಕೇತು || ೧೨ ||

ನೋಡಬಂದ ವಸಂತನಿಚ್ಚೆಯ | ನಾಡಿ ಮೆಚ್ಚಿಪ ಮಾಧವೀ ಲತೆ |
ನಾಡೆ ನಲಿನಲಿದಾಡಿದಂತಾಡಿದಳು ಸುಕುಮಾರಿ ||
ಆಡುವಾಗಳು ಹೂವಿನಂಬೆಡೆ | ಯಾಡುತಿರ್ದವು ಕುವರ ಕುವರಿಯ |
ಗಾಡಿವಿಡಿದಿಕ್ಕಡೆಗೆ ಹೇಳಿಕೆ ಕೇಳಿಕೆಯೊಳಂದು || ೧೩ ||

ನಚ್ಚಣಿಯೆ ನರ್ತನದಿ ಮೆಚ್ಚಿಪ | ಮೆಚ್ಚು ಕುವರನ ಮನವನೀತನ |
ಮೆಚ್ಚಿನಾಯದ ಜಾಣುನುಡಿಯಾ ಕುವರಿಯಳ್ಳೆರ್ದೆಯ ||
ಮೆಚ್ಚಿಸಿತು ಕೇಳಿಕೆ ಮುಗಿಯೆ ಮಿಗೆ | ಮೆಚ್ಚಿದನುರಾಗದಲಿ ಮಾವಗೆ |
ಚೊಚ್ಚನಿರೆ ಕೈಮುಗಿದು ಕಳುಹಿಸಿಕೊಂಡನರಮನೆಗೆ || ೧೪ |

ಅತ್ತಲಾಕೆಯ ಹೃದಯದೊಳಗ | ಚೊತ್ತಿತಾತನ ಜಾಣ್ಮೆ ಕಣ್ಣೊಳು |
ಮುಚ್ಚಿಸಿತು ಸವಿಗಾಡಿ ಹೊಸಮಸೆಯರಲ ಸರಳುಗಳ ||
ಹೊತ್ತು ಹೊಮ್ಮಿ ಱಿಯಲಿ ಬರುತೆ ತೊನೆ | ವುತ್ತೆ ಧೊಪ್ಪನೆ ಶಯ್ಯೆಯೊಳು ಘನ |
ವೃತ್ತಕುಚೆ ಬಿರ್ದಳು ಪೊರಳ್ದಳು ಕಾಮತಾಪದಲಿ || ೧೫ ||

ಕಳವಳಿಸಿದಳು ತುಂಬಿದಳು ತಳ | ಮಳಿಸಳುತ ತಳ್ಳಂಕಗೊಂಡು |
ಮ್ಮಳಿಸಿದಳು ಕಂದಿದಳು ಕುಂದಿದಳು ಸ್ಪನೂದಿದಳು ||
ತಳಮಳಗುಗೊಂಡಳು ಕುಸಿದು ಕು | ಪ್ಪಳಿಸಿದಳು ಬಿಡದಾತನನೆ ಪಂ |
ಬಲಿಸಿದಳು ಮೈಮರೆದಳುಳಿದಳು ಸಯ್ಯರಲನಾಕೆ || ೧೬ ||

ಸಡಿಲಿಸಿದರಾಭರಣ ಮೊಲೆಕ | ಟ್ಟುಡುಗೆಗಳನೊಳುದುಗುಲವನು ಮ |
ತ್ತುಡಿಸಿದರು ಕೆಲಬರು ಕೆಲಂಬರು ದಿಟ್ಟಿಯಿಳುಹಿದರು ||
ಮಡದಿಗಕ್ಕಟ ಗಾಳಿ ಸೋಂಕೆಂ | ದೊಡನೆ ಮಂತ್ರಿಸಿ ರಕ್ಕೆಯನು ತಂ |
ದೆಡದ ತೋಳಿಗೆ ಕಟ್ಟಿದಳು ತೂಪಿಱಿದಳೋರ್ವ ಸಖಿ || ೧೭ ||

ಏಕೆ ಬೇಳಾದಪಿರಿ ಮಕರ ಪ | ತಾಕ ಗ್ರಹ ಸೋಂಕಿದುದೆ ದಿಟ ನ |
ಮ್ನೀಕುಮಾರಿತಿಗೆಂದು ಕೋವಿದೆ ಪತ್ತೆಸಾರ್ತಂದು ||
ಆಕೆಯುನ್ನತ ಕುಚದ ಮೇಗೆ ಪ | ತಾಕ ಹಸ್ತವನಿಳುಪಿ ಕಂಡ ಱಿ |
ದಾಕೆಗಳಿನಾಗಿಸಿದಳಾ ಶಿಶಿರೋಪಚಾರವನು || ೧೮ ||

ಕಿಱಿದು ಪೊತ್ತಿನ ಮೇಲಬಳೆ ಕ | ಣ್ದೆಱಿಯೆ ಕೊಂಡೂಯ್ದಿದರು ಕುವರಿಯ |
ನುಱಿವನಂದನದಿಂದು ಶಿಲಾತಲದಿ ಮೆಱಿವ ||
ಕೆಱಿಯ ತಡಿಯ ಲತಾಗೃಹದ ಹೂ | ದುಱುಗಲೊಳುವಸೆಯಗ್ರದಲಿ ತಂ |
ದೊಱಗಿಸಿದರುಳ್ಳರಲ ಬಿಜ್ಜಣಿಗೆಯಲಿ ಬೀಸಿದರು || ೧೯ ||

ಪಚ್ಚೆಕರ್ಪುರವಚ್ಚೆಗಳನು ತೊ | ಡರ್ಚಿದಳು ತಂದೋರ್ವ ಸಖಿಯದು |
ಕಿಚ್ಚಿ ಪತ್ತಿದ ತೆಱದುರಿಯೆ ಮತ್ತೋರ್ವ ಸಖಿ ತಂದು ||
ಅಚ್ಚ ಮುತ್ತಿನ ತೊಡವನಿಡೆ ಬಗೆ | ಬೆಚ್ಚಿ ಪನ್ನೀರೆ ಱಿಯಲೋರ್ವಳು |
ಬೆಚ್ಚನೆಯ ಮಣಿ ಚುಯಿಗರೆದುದುಳಿದುದು ಬಳಿಕ ನೂಲು || ೨೦ ||

ಉದಿದವಲರ್ಗಳ ಹಾಸುಗಳು ಸೀ | ಕರಿವಡೆದು ವೆಲೆದಳಿರ ಪೊದಕೆಗ |
ಳೆರಡುಗಱಿಸೀಳಿದವು ಪರಿಮಳಕೆಱಪ ಪಱಮೆಗಳ ||
ಸುರಿದ ಚಂದನ ದಣ್ಮೆಯದಿ ಕ | ತ್ತುರಿಯೆನಲು ಕರಿಕಾಯಿತು ಸುಯ್ಯೆಲ |
ರುರಿಗೆ ನಳಿನಟಿಲೆಂದು ಮುಱಿದವು ತಳಿರ ಬಿಜ್ಜಣಿಗೆ || ೨೧ ||

ನಾಡೆ ನಲಿದಿಪ್ಪತ್ತು ಗಳಿಗೆಯ | ನಾಡಿದಳು ಮಿಕ್ಕುರುಳನಂಗಜ |
ನಾಡಿಸಿದವೊಲು ಬನದೊಳಾಡಿದಳತನು ನಾಟಕವ ||
ನೋಡಿ ಬಾಳುವಳಿಂದುವನುತೇಂ | ಕಾಡುವಳು ತಂಗಾಳಿಗಳ… |
ಪಾಡಿಗಲಸುವಳಂಜುವಳು ಶುಕಪಿಕದ ಮೆಲು ಸರಕೆ || ೨೨ ||

ಮನಸಿಜಗ್ರಹ ವಿಶ್ವ ಮಾಂತ್ರಿಕ | ನೆನೆಸಿದಿಭಕೇತುವ ತೆರನನೊ |
ಯ್ಯನೆ ತಿಳಿದು ನಾನೀಗ ಬಹೆನೆಂಬಾಳಿಯಿನಿಮಾತು ||
ಮನದ ಗಂಧೆಯ ತು ಱಿಸಿದಂತಾ | ವನಿತೆಗಾದುದನಿಂಗಿತದಿನಱಿ |
ದನುವಡೆದು ಪೋತಂದರೀರ್ವರು ಸಖಿಯರವನಾಗ || ೨೩ ||

ಆಕುಮಾರಿಯ ಕಣುಸವಿಯ ಚೆಲು | ವಾಕೃತಿಯನಾ ನರ್ತನೋಚಿತ |
ರೇಖೆಗಳನಳವಡಿಸಿ ಪಟದಲಿ ಬರೆದು ಕಣ್ತೆಱದು ||
ಆ ಕುವರನೇಕಾಂತದಲಿ ಕಾ | ಮಾಕುಳಿತ ಮನವದನೆ ತಾನವ |
ಳೋಕಿಸುತ ಕಲೆದಿರುಳನಾ ಬೆಳಗಪ್ಪ ಜಾವದೊಳು || ೨೪ ||

ನೋಡು ನೋಡುತಲಿನಿತು ಕಣ್ಣೆವೆ | ಗೂಡೆ ಕನಸಿನೊಳವಳ ವಿರಹವ |
ನೋಡಿತಾನವಳಾಗಿ ಬೆಚ್ಚನೆಸುಯಿದುಯೆವೆದೆಱಿದು ||
ಗಾಡಿಯೆಱೆಯಳಯೆಂದು ಪಟವನು | ನೋಡಿಮಿಗೆ ತೆಗೆದಪ್ಪಿ ಸವಿವಾಯ್ |
ಗೂಡಿದನು ಮನಸಿಜನ ಮಾಯೆಯನಾರೊ ಮಿಗುವವರು || ೨೫ ||

ಆ ಸಮಯದೊಳ್ಬಂದು ನಿಂದು ವಿ | ಳಾಸಿನಿಯರವನಿರವನೀಕ್ಷಿಸಿ |
ಲೇಸು ಲೇಸೆಂಗಜಗೆ ಪರಪಂಚಿಲ್ಲವಿವರೊಡನೆ ||
ಆ ಸುದತಿಗೀ ಕುವರಗಳೆದವೊ | ಲೀ ಸೊಬಗು ಜಾಣವನಗಳೊಡ |
ನೀ ಸಮಪ್ರವಿಣೆಯವ ಪಡೆದಸಹುರಾಸ್ಯನಹುದೆಂದು || ೨೬ ||

ಮೆಚ್ಚುತವೆಯಿಂಗಿತದಿ ನೆಱೆಯ ಱಿ | ದಿಚ್ಚೆ ಕಾತಿಯರವನ ಮೈಗೆ ತೊ |
ಡರ್ಚಿದರುಕುವರಿಗೆ ಸವೆದಕೋಮಳ ಮೃಣಾಳಗಳ ||
ಹಚ್ಚವನು ಹೂವಿನ ಹೊದಕೆಯನು | ಹಚ್ಚಿದರು ಕುವರನ ಕಿವಿಯೊಳವ |
ಗಚ್ಚುಗವನವ ನೆದೆಯ ಮಾತನು ಕದ್ದು ಮರಳಿದರು || ೨೭

ಸಂತಯಿಸಿದರು ಬಂದು ಕುವರಿಯ | ನಿಂತಿವೆಲ್ಲವನಱಿಪಿ ಕಮಲದ |
ಕಾಂತನುದಯಂಗೈಯೆ ಚಂದಿನಿ ಚದುರಿಕೆಯರೆನಿಪ ||
ಮಂತಣದ ಕೆಳದಿಯರ ತದ್ವೃ | ತ್ತಾಂತವನು ಮನವರಿದು ವಸುಧಾ |
ಕಾಂತಗತಿಸವಿವಡಿಸಿ ನುಡಿದೆಂದುದನೆಯೆನಿಸಿದರು || ೨೮ ||

ಕರೆದುಮೌಹೂರ್ತಿಕರನುತ್ಸವ | ಬೆರಸಿ ಸುಮೂರ್ತದಲಿ ಮಗಧಸುಂ |
ದರಿಯನಿಭಕೇತುಗೆ ವಿವಾಹ ವಿಧಾನದಿಂ ಕೊಟ್ಟು ||
ಧರಣಿಪತಿ ಬಳಿಕವರನೀಕ್ಷಿಸಿ | ಹರುಷವೆಯಿದಿದನಿತ್ತಲವರೀ |
ರ್ವರು ಮನೋಭವರಾಗರಸದೊಳು ಮೂಡಿ ಮುಳುಗಿದರು || ೨೯ ||

ಬೇಟದಲಿ ಮಿಗೆ ಹಸಿದವರ್ಗೆ ಬಾ | ಯ್ಗೂಟವಾದುದು ನಾಟಿದುದು |
……………………………….. ||
ಚಾಟುತನವೆದೆಗೊಳಿಸೆ ಮನಸಿಜ | ನಾಟಕಿಯ ಪ್ರಿಯಸೂತ್ರಧಾರಕ |
ನಾಟಿಪನು ರತಿ ಚಿತ್ರ ಬಂಧದ ಕರಣ ಲೀಲೆಯಲಿ || ೩೦ ||

ಅತ್ತಲಾಕೆಯೊಳೀ ಕುವರನಿರ | ಲಿತ್ತಲೀ ಕಮಲ ಪ್ರಭೆಯನೇ |
ತ್ರತ್ರಿಭಾಗದೊಳೊಂದಿದುದು ಹೊಸ ಸಂಜೆಯೆಂಬುದನು ||
ಚಿತ್ತ ಜನ ಸಮರೂಪನಾಳಿಯ | ರಿತ್ತ ನುಡಿಯಿಂದಱಿದು ತನ್ನಯ |
ಚಿತ್ತದನ್ನಳ ಬಳಿಗೆ ಬಂದನು ಗಾಡಿ ಕೈಗೇಳಿ || ೩೧ ||

ಅಱಿದು ನಳಿನ ಪ್ರಭೆಯ ಚಿತ್ತವ | ನೆಱಕದಿಂ ಮೈ ಸೋಂಕೆ ಪತಿಮಡ |
ಲಿಱಿದು ಹಬ್ಬಿದ ಮುಳಿಸು ಹುಬ್ಬಿನಗೆಂಟು ಗಣ್ಗೆಂಪು ||
ತೆಱಪಱಿದ ಸಖಿಯಂತೆ ಪೋದವು | ಯೆಱೆಯಗೊತ್ತಿನೊಳಿರದೆ ಪುರುಡಿಂ |
ನೆಱೆದ ಸೀಯನ ರಾಗರಸ ಪೊಂಪುಳಿವಡೆದುದವರ || ೩೨ ||

ತೊರೆದ ತವಕವು ತವದ ಪುಳಕಾಂ | ಕುರಗಳೊಱದದ ಬೆಮರಬೀಯದ |
ಪಿರಿದುರಾಗರಸಾಂಬು ನಿಧಿಯೊಳು ಮುಳುಗಿದಾ ಮನವು ||
ಮರಳಿ ಮೂಡದನಸುಮುಗಿದ ಕಂ | ಣರಳದು ಸುರೆಲರೋಟ ನಿಲ್ಲದ |
ಪರಿಯಲೊಂದಿರುತಿರ್ದರಾ ದಂಪತಿಗಳೊಲವಿಂದ || ೩೩ ||

ಒಂದು ದಿನವಾ ನಾಗದತ್ತ ನ | ರೇಂದ್ರನಾತ್ಮಜನಿಲ್ಲದೊಡೆವೇಂ |
ಕಂದನೆನಗೀಯಳಿಯನೆಂದಿಭಕೇತುಗವನಿಯನು ||
ಅಂದುಕೊಟ್ಟಿಭಕೇತು ಭೂಪನ | ತಂದೆಬೆರಸು ಸುದೀಕ್ಷೆಗೊಂಡನು |
ಸಂದ ಸುವ್ರತ ಮುನಿಗಳಲ್ಲಿ ವಿರಕ್ತಿ ಭರದಿಂದ || ೩೫ ||

ನೂತನಾಂಗಜ ರೂಪನಿತ್ತಿಭ | ಕೇತುನೃಪನಾ ಲಕ್ಷ್ಮಿಗಾಗರ |
ಭೂತಲದ ಸೌಭಾಗ್ಯ ಜನ್ಮಕ್ಷೇತ್ರಮೆಂದೆಂಬ ||
ಖ್ಯಾತಪುರವರ ಪುಂಡರೀಕಿಣಿ | ಗೋತುತಾನಧಿರಾಜ ಪದವಿಯ |
ನಾಂತು ತನ್ನಿಂ ಧರ್ಮಪರರಿಲ್ಲೆನಿಸಿ ಸುಖವಿರ್ದ || ೩೬ ||

ಯೆರಗುವೆನು ಜಿನ ಪದಕೆ ತನ್ನಡಿ | ಗೆಱಗಿಪನು ನಾಡೆರೆಯರನು ಜಿನ |
ರು ಱಿವ ಗಂಧೋದಕಕೆ ಕೈಯೊಡ್ಡುವನು ಸಬ್ಬರನು ||
ಸೆಱಗನೊಡ್ಡಿಪ ತನ್ನ ಚಾಗದ | ನೆಱವಣಿಗೆಗೆಡರಂ ನಯವು ಖಳ |
ರಱಗುಲಿಗಳಿಲ್ಲಾ ನೃಪಾಲಕನಾಳ್ವ ರಾಜ್ಯದಲಿ || ೩೭ ||

ಅರಸನಿಂತು ಪೊಗಳ್ತೆ ಗಿಂಬಾ | ಗಿರುತಮಿರೆ ಮತ್ತೊಂದುದಿನ ಸೌಂ |
ದರದಿದೊಡ್ಡೋಲಗದೊಳೊಪ್ಪಿರೆ ಸಿಂಹ ಶಾಬಕವ ||
ಕರಿಯ ನೆತ್ತಿಯ ಮುತ್ತನಾ ಕ | ತ್ತುರಿಮಿಗವನು ಱೆಕಾಣಿಕೆಯ ನಿ |
ತ್ತರದೆಱಗಿ ಕೈಮುಗಿದು ದೂರದಿ ನಿಂದ ಧೀವಳನು || ೩೭ ||

ನಿಂದ ಧೀವಳನಾನನವ ನೃಪ | ಚಂದ್ರನೀಕ್ಷಿಸಿ ಯಾರೊಳಂತಾ |
ನೆಂದುವೀಪರಿ ಮೂಡದಾ ಮೋಹವನು ನೆಱೆಮಾಡಿ ||
ಅಂದು ಸೇನಾಪತಿಪದವಿ ಗೋ | ಟೆಂದು ಹರಣವು ತನಗವಂಗೆಂ |
ಬಂದದಲಿ ಪಲಕಾಲರಾಜ್ಯಂಗೈದನೆಲೆ ಭೂಪ || ೩೮ ||

|| ಅಂತು ಸಂಧಿ ೬ಕ್ಕಂ ಮಂಗಲ ಮಹಾ ||

 

ಸಂಧಿ ೭

ಚಂಡಭುಜನಿಭಕೇತು ದೀಕ್ಷೆಯ | ಕೊಂಡು ನಡೆದಾ ಸ್ವರ್ಗ ಸೌಖ್ಯವ |
ನುಂಡು ಚಿಂತಾಗತಿ ವಿಯಚ್ಚರ ರಾಯನಾಗಿರ್ದ || ಪ ||

ಕೇಳು ಮಗದಾಧೀಶ ತದ್ಭೂ | ಪಾಲಶೇಖರನೊಂದುದಿನನೊ |
ಡ್ಡೋಲಗದೊಳಿರೆ ದೇವ ಬಿನ್ನಹ ಮಂದರಸ್ಥ ಗುರು ||
ಬಾಳುವೆಮ್ಮಯ ಬನಕೆ ಬರೆ ಸ | ಮ್ಮೇಳಿಸಿತು ಷಡುರುತುವೆನುತ ಕುಸು |
ಮಾಳಿ ಕಿಸಲಯ ಫಲಗಳನು ವನಪಾಲ ತಂದಿತ್ತ || ೧ ||

ಇಳಿದು ನೃಪನೇಳಡಿಯನಾ ದೆಸೆ | ಗೆಳಸಿ ನಡೆದು ನಮಸ್ಕರಿಸಿ ಮನ |
ಚಳಿಸದಿತ್ತನು ಋಷಿ ನಿವೇದಕಗಂಗಚಿತ್ತವನು ||
ತಳುವದಾ ಕಮಲಪ್ರಭೆಯುವೆರ | ಸಳವಿಗಳಿದಾ ಭಕ್ತಿಯಲಿ ಬಲ |
ಗೊಳುತೆ ಬಂದಾ ಮುನಿಪದವ ಪೂಜಿಸಿ ತುಳಿಲ್ಗೈದು || ೨ ||

ಪರಕೆಗೊಂಡನು ಕಿವಿಗುಡಿತೆಯಲಿ | ಗುರುನಿರೂಪಿತ ಧರ್ಮಸುಧೆಯನು |
ಹರುಷದೀಂಟಿ ಬಳಿಕ್ಕರಸ ಮುಕುಳಿತ ಕರನುಮಾಗಿ ||
ಗುರುವೆ ಪೇಳತಿ ಸುತರೊಳಿಲ್ಲದ | ಪಿರಿದೊಲುಮೆಯಿದಿವಳನ ಮೇ |
ಲಿರುತು ಮಿಗೆಯೇ ಕೊಂದಡವಧಿಜ್ಞಾನಿಯಿಂತೆಂದ || ೩ ||

ಅರಸ ಕೇಳೈ ಚಿತ್ರವಲೆ ಸಂ | ಸರಣವಿದು ಹಿಂಭವದೊಳಗೆ ಜೀವಂ |
ಡರಕುಲಗ್ರಣಿ ವಿಂಧ್ಯಕನೆನೀಂ ನಿನ್ನ ಕುಲವನಿತೆ ||
ತರಳೆವಾಗುರೆಯೆಂಬಳಿದಿವರ | ಕುಲಜನಾದಳು ಗುರುಗಳಿಗೆ…. |
ಸರಳ ನೀಂ ತೊಟ್ಟರನ ಕೇಳಿದೆಯೆಂದರೆಲ್ಲವನು || ೪ ||

ಎಲೆಮಗಧ ನೃಪಕೇಳ್ ಕಲಿಧೀ | ವಳನ ಮೇಲಿಭಕೇತು ನೃಪನಿಂ |
ನೊಲುಮೆಯಿಂದಱಿಂದಾದುದೆಂದರು ಮಂದರಸ್ಥ ಮುನಿ ||
ತಿಳಿದು ಕೇಳಪರಾಜಿತೋರ್ವೀ | ಲಲನೆಯಾಣ್ಮನೆಯೆಂದು ಚಾರಣ |
ರೊಲಿದು ಪೇಳ್ದಪರೆಂದರವರಿತ್ತರಸ ನಿಂತೆಂದ || ೫ ||

ಆರಯಲುವಾರಾರ ಮೂತ್ರ | ದ್ವಾರ ಜನ್ಮ ಕ್ಷೇತ್ರದೊಳಗಾ |
ರಾರ ಶುಕ್ಲ ಶೋಣಿತವೆ ಬಿತ್ತಾಗಿಯಱಿಯಮೆಯಿಂ ||
ಆರಳೋಳೆಯ ನುಂಡು ಬೆಳೆದಾ | ರಾರ ಕೊಳೆವಸುರಿಂದೆ ಬಂದಾ |
ರಾರ ಸುತಸತಿಯೆನಿಸಿ ಕೊಂಡೆನೊ ಜಿನ ಜಿನಾಯೆಂದ || ೬ ||

ಆವಜೀವವನಾದ ರೂಪಿನೊ | ಳಾವತೆಱದಿಂ ಕೊಂದೆನೋ ಮೇ |
ಣಾವ ತೆಱದಿಂದಾವ ರೂಪಿನೊಳಾರಕೈಯಿಂದ ||
ಸಾವುಗಂಡೆನು ಅಕ್ಕಾಟಾ ಜಿನ | ದೇವನಿನ್ನಯಮತವನಱಿಯದ |
ಜೀವಗಳು ಸಂಸಾರಸುಖದಿಂ ನೋವುದಚ್ಚರಿಯೆ || ೭ ||

ಕಷ್ಟವಲ ಸಂಸಾರವಿದು ತಾ | ನಿಷ್ಟವಾಗಿದೆಯರಿಮೆಯೇಪರಿ |
ವೇಷ್ಟಸಿರ್ದುದರಿಂದೆ ಸಂಸೃತಿ ಜೀವಗಳಿಗಕಟ ||
ಕಷ್ಟ ಕುಲಜಂಗೆನಗೆ ಪೇಳ್ದಾ | ಶಿಷ್ಟ ಮುನಿವಾಕ್ಯವನೆ ನಂಬಿದೊ |
ಡಿಷ್ಟ ಕಾದೆನು ಧರ್ಮವನು ನಂಬಿದಗೆ ಕೇಡುಂಟೆ || ೮ ||

ಎಂದುಮಿಗೆ ನಿರ್ವೇಗ ಪರಭರ | ದಿಂದೆ ರನುಜ ಸುಕೇತುವಿಂಗೆ ವ |
ಸುಂಧರೆಯ ನಿರದಿತ್ತು ದೀಕ್ಷೆಯನಾಂತನಿಭಕೇತು ||
ಅಂದು ತನ್ಮುನಿವರ ಸಮಕ್ಷದೊ | ಳಿಂದುಮುಖಿಕಮಲಪ್ರಭೆಯು ತಪ |
ದೊಂದಿಗಳು ಪುರುಷಪ್ರಣದಿಂದರಸ ಕೇಳೆಂದ || ೯ ||

ಬಳಿಯನಾ ಧೀವಳನಣುವ್ರತ | ಗಳ ಸುಗುಣ ಶಿಕ್ಷಾವ್ರತಂಗಳ |
ತಳೆದು ಸದ್ಭಾವದೊಳವನೆ ನಡುಪುತ್ತಲಿರಲಿತ್ತ ||
ಇಳೆಪೊಗಳುವುಗ್ರೋಗ್ರ ತಪದಿಂ | ಬೆಳೆದು ಘೋರ ಪರೀಷಹಂಗಳ |
ಕಳಿದು ತನ್ನನೆ ಪಿಡಿದನಾ ಯಿಭಕೇತು ಯತಿನಾಥ || ೧೦ ||

ಮಳೆಯದಿನ ಮರ ಮೊದಲಮಾಗಿಯ | ಚಳಿಯದಿನದಲಿ ಬೆಳ್ಳವಾಸವ |
ಕಲುನೆಲೆಯ ಬೇಸಗೆಯೊಳಿರ್ದು ಸಮಾಧಿಯುಮ ಮುಡುಪಿ ||
ಘಳಿಲನಾ ಸೌಧರ್ಮ ಕಲ್ಪೋ | ಜ್ವಲ ವಿಮಾನಶ್ರೀ ನಿಳಯದೊಳು |
ತೊಳಪ ಲಳಿತಶ್ರೀ ದಿವಿಜನಾದಪನೆಲೆ ನೃಪತಿ || ೧೧ ||

ಸುಪ್ರಭ ವಿಮಾನದೊಳು ನೆಱೆಕಮ | ಲಪ್ರಭೆಯುಮಾ ಕಲ್ಪದೊಳು ವಿಮ |
ಲಪ್ರಭಾಮರನಾದಳಾ ಧೀವಳನು ತದ್ವ್ರತದ ||
ಸುಪ್ರಭಾವದೆ ತನುವುಳಿದು ವಿ | ದ್ಯುತ್ಪ್ರಭಾ ಸುವಿಮಾನದಲ್ಲಿ ಸು |
ರಪ್ರಭಾಮರನಾದನೆಂದನು ಭೂಪತಿಗೆ ಮುನಿಪ || ೧೨ ||

ತಲೆದಮಳು ವಾಸಿನೊಳು ನಿದ್ರೆಯ | ತಿಳಿದನಂದದಿ ತುಂಬು ಜವ್ವನ |
ವಿಳಸಿತನು ಸಹಜಾತಮಾಲ್ಯಾಭರಣ ವಸ್ತ್ರಯುತ ||
ತೊಳ ತೊಳಪ ತನುಕಾಂತಿಯೆತ್ತಲು | ಬೆಳಗೆ ಮಣಿಮಯ ಬಿತ್ತಿಗಳನು |
ಜ್ಜಳಿಸುತುದಯಿಸಲೊಡನೆ ತೆಱದವು ರನ್ನ ಗಡವುಗಳು || ೧೩ ||

ತರದಿ ಚಿನ್ನದ ಗುಡಿಗಳಿರದು | ಪ್ಪರಿಸಿದವುಗಳಗಳನೆ ಸುರಿದವು |
ಸುರತರುವಿನರಳುಗಳ ಮಳೆ ಸುರಿದುದು ಸುರಭಿ ವ್ರಾತ ||
ಸುರರ ದುಂದುಭಿ ಮೊಳಗಿದವು ಬಿ | ತ್ತರದಿ ಜಯಜಯ ನಂದವರ್ದ್ಧ |
ಸ್ವರವ ವಾದವು ಬಳಸಿತಮರನ ದೇವ ಪರಿವಾರ || ೧೪ ||

ಮಂಗಲೋಪಮಕರಣದಿಂ ದೇ | ವಾಂಗನೆಯರಿರೆ ಮುಸುಕೆ ದಿವಿಜನು |
ಕಂಗೊಳುತವಿಳೋಕವಾವಧಿದಾವದು ವಿಮಾನ ||
ಅಂಗ ಸೌರಂಭವೇನೆನಗೆ ದಿ | ವ್ಯಾಂಗ ವೆತ್ತಣದಿಂದೆ ಮನದೊಳು |
ಪಿಂಗದಿಹ ಸಂತಸವಿದೇನೆಂದೈದೆ ಬೆರಷಗಾದ || ೧೫ ||

ದೆಸೆದೆಸೆಗೆ ಮಣಿಕಾಂತಿಯಂ ಪಸ | ರಿಸುವ ಸೌಧಾದಿಗಳನೊಲ್ದೀ |
ಕ್ಷಿಸುತ ಚೋದ್ಯಂಬುಡುತೆ ವಪದದೊಳಗವಯುದಯಿಸಲು ||
ಒಸದು ತನ್ನಿಮ್ಮೈಯ ತೆರನನು | ಸಸಿನೆ ತಿಳಿದಿದು ಜೈನಧರ್ಮೊದೊ |
ಳೆಸಗಿದವರಿಗಿದರಿದೆಯೆಂದನು ತನ್ನ ಮನದೊಳಗೆ || ೧೬ ||

ಮಿಱುಪರತ್ನ ವಿಮಾನದೊಳಗರ | ಗೆಱಿಯ ಜಿನವಸತಿಗಳ ಸುರತರು |
ತುಱುಗಿದುದ್ಯಾನದ ಮಿಸುಪ ಮಣಿ ಕೃತಕ ಪರ್ವತದ |
ಮೆ ಱಿವ ಸಿರಿಯನು ದಿವ್ಯಕಾಂತಿಯ | ರುಱುವ ಸೊಬಗನು ಚಾತುರಂಗದೆ |
ನೆ ಱಿದ ಬಲವನು ಕಂಡು ಧರ್ಮದ ಫಲವಿದೆಂದಱಿತ || ೧೭ ||

ಭಾವಕಿಯರಾಗಳು ಮಹತ್ತರ | ದೇವಿಯರುಮಿಗೆ ಹರಸಿನೊಸಲೊಳು |
ತೀವಿಮುತ್ತಿನ ಸೇಸೆಯಿಕ್ಕಿದರೀ ವಿಮಾನಕ್ಕೆ |
ದೇವನಾದೈ ಕುಸುಮಲಲಿತಕ | ಳೇವರನು ಮಾದರ ಱಿನಾಗಿರ |
ಲೋವೊ ಲಲಿತಶ್ರೀವೆಸರು ನಿನಗೆಂದರೆನಲೊಡನೆ || ೧೮ ||

ಪಾಡೆಸುರಗಾಯಕಿಯರು ಱೆಕೊಂ | ಡಾಡೆ ಮಂಗಳ ಪಾಠಕರು ನಲಿ |
ದಾಡೆ ಮೇಳದೊಳೊಂದಿನಚ್ಚಣಿಯರು ಮುದದಿ ದಿವಿಜ ||
ಕೂಡಿರುತಮಿರೆ ದೇವಚಿತ್ತೈ | ಸಾಡಲೇಂ ವರಜಿನ ತಪವನೀ |
ಮಾಡಿದಿಂದಿನ ಫಲವಿದೆಂದಮರಾಳಿ ಯೊಪ್ಪಿದುದು || ೧೯ ||

ವರಮಹತ್ತರ ದೇವಿಯರು ಸುರ | ತರುಜ ಸದ್ದ್ರವ್ಯಂಗಳಿಂ ಬಂ |
ಧುರದ ಕೃತ್ರಿಮವಸತಿಯೊಳು ಜಿನಪೂಜೆಮಾಡೆನಲು ||
ಪರಮ ಭಕ್ತಿಯೊಳದನೆ ಮಾಡುತ | ಸುರಪನತಿ ಸಂತುಷ್ಟ ಮನನಾ |
ಗಿರುತ ಮಿರ್ದನು ತತ್ತ ಕಾಂಚನವರ್ಣ ಲಲಿತಾಂಗ || ೨೦ ||

ರೋಗ ನಿದ್ರಾಲಸ್ಯ ಶೋಕವ | ನೀಗಿ ಮುಪ್ಪು ವಿಶಾದವಿಲ್ಲದೆ |
ಸೋಗೆಗಣ್ಣೆವೆ ಮಿಸುಕದಣಿಮಾದ್ಯಷ್ಟಗುಣವಾಂತು ||
ಸಾಗರ ದ್ವಿತಯೋಪಮಾಯುಸ | ರಾಗದಿಚ್ಛಾಸಿರ ವರುಷಕೊ |
ರ್ಮಾಗ ಸಂಕಲ್ಪಾಮೃತಾಹಾರವನುಮೆಸೆದನವರ || ೨೧ ||

ಮಾಸವೊಂದಕ್ಕೊಮ್ಮೆ ಸುರಭಿ | ಶ್ವಾಸವೀವನು ಮೈಯತನಿಗಂ |
ಪೊಸರಿಸದಮರಿಯರ ರಸವೀ ಮೈಗೂಟಲಂಪಟನು ||
ಆ ಸುರದ್ರುಮ ಕುಸುಮಶೇಖರ | ಭಾಷಿ ಲಲಿತ ಶ್ರೀ ಸುರನು ಸಂ |
ತೋಷದಲಿ ಸುರಲೋಕ ಸುಖಗಳನುಣುತೆ ಸುಖಮಿರ್ದು || ೨೨ ||

ಒರ್ಮೆ ನಂದನ ವನದೊಳಗೆ ಓ | ರೊರ್ಮೆ ಸರಸಿಯೊಳೊರ್ಮೆಪುಳಿರೊಳ |
ಗೊರ್ಮೆ ಕೃತಕಾಚಳದೊಳೊರ್ಮೆ ಸುರತ್ನ ಹರ್ಮ್ಯದೊಳು ||
ಒರ್ಮೆ ಗೀತದೊಳೊರ್ಮೆ ವಾದ್ಯದೊ | ಳೊರ್ಮೆ ನೃತ್ಯದೊಳೊರ್ಮೆ ಸಭೆಯೊಳ |
ಗೊರ್ಮೆ ಮನಮೊಸೆದಮರವಧುಗಳೊಳೊಲಿದು ಕ್ರೀಡಿಸಿದ || ೨೩ ||

ಕಡೆದು ಕೆತ್ತಿಸಿದಂತೆಸೆವ ಹೊಂ | ಗೊಡಮೊಲೆಯ ಹೊಂಜಳೆನಡುವ ನು |
ಣ್ದೊಡೆಯ ತಿದ್ದದೆ ಕೊಂಕಿನೀಳ್ದಸಿದಾದ ಪುರ್ಬುಗಳ |
ತೊಡೆಯದಲತಗೆ ರಸವೊಗುವಕೇ | ಸಡಿಗಳೆಚ್ಚದೆ ಕರ್ಗಿದೆವೆಗಂ |
ಗುಡಿಯಮರಿಯರು ಸುರನ ಮೆಚ್ಚಿಪರತನುಕೇಳಿಯಲಿ || ೨೪ ||

ವಿಭವದಿಂ ಕಮಲಪ್ರಭ ಸುರ | ಪ್ರಭನಿಳಿಂಪರೊಳೊಂದಿತಾಂಪೂ |
ರ್ವಭವ ಜಾತ ಸ್ನೇಹದಿಂದಾ ಲಲಿತ ಸಿರಿದೇವ ||
ಶುಭದೊಳೊಂದಿರುತಿಪ್ಪಿನಿಂಪಿ | ರ್ದುಭಯ ಸಾಗರದಾಯುವೊಳುಕೇ |
ಳ್ವಿಭವೆ ಯಿನ್ನಱುದಿಂಗಳಾಯುವೆ ಮಿಕ್ಕುದೆಂಬುಂದು || ೨೫ ||

ಬಾಡಿದುದು ಮುಡಿದಮರಕುಜದರ | ಳೋಡಿದುದು ಭೂಷಣದ ಕಾಂತಿಯ |
ಕೂಡೆ ಮೈವೆಳಗಾದುದಾಗಳಿ ಪೋಯಿತು ತನುಗಂಪು ||
ನಾಡೆದಿವಿಜನಿವಾಗೆ ತನುವಿನ | ಕೇಡನಱಿದಲ್ಲಿಯ ದಿನಾರ್ಚನೆ |
ಮಾಡುತಿರೆಯಿರೆ ನುಂಗಿದುದುಯಮರಾಸುರವಿದುವ || ೨೬ ||

ವಿನುತ ಲಲಿತಶ್ರೀಸುರನ ತನು | ಘನದ ಸಿರಿವೊಲುಕೊರಗೆ ಕಡುಪೆಂ |
ಪಿನವಿಭವದಾ ಪುಷ್ಕಳಾರ್ಧದ ಪಡುವ ಮಂದರದ ||
ಘನವಿದೇಹದ ಸೀತೆತೊರೆ ಬಡ | ಗಣತಡಿಯ ಗಂಧಿಳವಿಷಯವೊ |
ಪ್ಪೆನಿಪ ಸಗ್ಗದ ಸಿರಿಗೆ ನಾಲ್ವೆರಲಧಿಕವೆನಿಸಿಹುದು || ೨೭ ||

ಆ ವಿಷಯದ ಮಧ್ಯದೊಳಗೆಸೆವ ಸ | ರೋವರದ ನಡುವುಳ್ಳಳರ್ದ ಬಿಳು |
ದಾವರೆಯವೊಲು ಬಾನನಡುವಣ ಚಂದ್ರಬಿಂಬವೆನೆ ||
ಓ ಓ ಪುಣ್ಯದ ಪುಂಜದಂದದಿ | ತೀವಿ ಬೆಳ್ಳಂಗೆಡೆದು ಸೊಗಯಿಪು |
ವಿಮಲ ವಿಜಯಾರ್ಧ ಪರ್ವತವದಱ ಸಿರಿಪಿರಿದು || ೨೮ ||

ತಳರ್ವ ಬೀಜಾದರಿಯರಾನನ | ಪೊಳೆಯೆ ತನ್ನೊಳು ಬೆಟ್ಟದಾವತಿ |
ಗಳ ಬೆಡಂಗನು ಚರಣದಲಿತಗೆರಸದಿ ಚೆಂದಳಿರ ||
ವಿಳಸನವ ನವರಕ್ಷಿಗಳ ಬೆಳ್ | ವೆಳಗಿನಿಂ ಸರಭ್ರದಲಿ ಮಾ |
ರ್ಪೊಳೆವ ಮಿಂಚಿನ ಭಂಗಿಯನು ತಳೆದೆಸೆದುದಾ ಶೈಲ || ೨೯ ||

ಗಿರಿಯ ಸಿರಿಯನು ನೋಳ್ಪಬಿಜ್ಜಾ | ಧರರ ರನ್ನ ವಿಮಾನ ಬಾನೊಳು |
ನೆರೆದು ಮಾರ್ಪೊಳೆದಲ್ಲಿ ರನ್ನದ ಹಾಸಱೆಯ ಪೋಲೆ ||
ಚರಿಸಿ ಕಲು ತೇಲಿದುದೆನುತ ಬೆಂ | ಬರಿವ ಮುಗುಧೆಯರರೆಬರಲ್ಲಿಯೆ |
ಚರಿಪ ಚೆಲುವಿನ ಸಗ್ಗಿಗರ ನೆಱವಿಯನು ನಗಿಸಿದರು || ೩೦ ||

ಜನಪನಂಗಜ ವೀರರನು ಗೆಲ | ದನುಪಮಿತ ಬಿರುದಾವಳಿಯನಿಂ |
ಪಿನಲಿ ಪಾಡುವ ನಾಟ್ಯವಾಡುವ ವೀಣೆಯಲಿನುಡಿಪ ||
ದನಿಯನಾಗಿರಿ ವರದೊಳಾಡುವ | ಘನಕುಚದ ಖಚರಿಯರ ಹೃಸ್ತಿಕ |
ಮನಸಿಜನು ತಲೆಯೆತ್ತಲಮ್ಮನು ಕೇಳಿ ಕಡುನಾಚಿ || ೩೧ ||

ಪಾಱುವವೊ ತಾರಾಚಳಾಗ್ರದ | ಚಾ ಱಿ ಶಿಖರಗಳೆಂಬವೊಲುಮಿಗೆ |
ಪಾಱುತಿಹರು ವಿಯಚ್ಚರರು ತದುಭಯತದಿದನದ ||
ಸಾಱಕುಸುಮ ಪರಾಗವೆಲರಿಂ | ಪಾಱಿ ಸಗ್ಗದ ಪೊಕ್ಕ ಕತದಿಂ |
ಪಾಱಿಜಾತಾದಿಗಳರಳು ಕೆಂಪಾದುದೇ ವೊಗಳ್ವೆ || ೩೨ ||

ಪಾಡುವಂತಳಿಗೀತದಿಂ ಮಾ | ತಾಡುವಂತರಗಳಿರವದಿ ನಡೆ |
ದಾಡುವಂತರಸಂಚಿಗತಿಯಿಂ ಸುಯಿದವೊಲೆಲರಿಂ ||
ನೋಡುವಂತರಳಿದ ಕುಸುಮದಿಂ | ದಾಡುವಂತಿರೆ ನವಿಲ ನೃತ್ಯದಿ |
ನಾಡೆ ತದ್ವನಲಕ್ಷ್ಮಿಯೆಸೆದಳು ಖಚರ ನಿಚಯದಲಿ || ೩೩ ||

ಎರಡು ಪಕ್ಕದ ಬನಗಳಾಸಿರಿ | ಗೆರಡು ಪಕ್ಕಗಳೆರಡು ವಿಜ್ಜಾ |
ಧರರ ಶ್ರೇಢಿಯ ಸೌಧಗಳು ಗಿರಿಗಿಟ್ಟ ತತ್ತಿಗಳು ||
ಭರದೆ ಪಾಱದೆ ತತ್ತಿಗಳ ಕಾ | ದಿರುತಿಹುದೊಯೆನೆ ಮೆ ಱೆವುದದ ಱಿ |
ತ್ತರವರ ಶ್ರೇಢಿಯೊಳು ಸೊಬಗನು ಪೆತ್ತಮನೆಯೆನಿಸಿ || ೩೪ ||

ಪೊಳೆವ ಜಳಕಾತಿಕೆಯ ಬಳಸಿಂ | ದೊಳಗೆ ಬಳಸಿದ ಪೊನ್ನಕೋಟೆಗ |
ಳೊಳಗೆಸೆವ ಮಣಿಖಚಿತ ಗೋಪುರ ಹರ್ಮ್ಯದೀಧಿತಿಯಿಂ ||
ತೊಳಗಿ ಬೆಳಗುವ ಸೂರ್ಯಮಂಡಲ | ವಿಲಸಿತದಿನಾ ಸೂರ್ಯಪುರಮು |
ಜ್ವಳಿಪ ದಂತದನಾಳ್ವ ಸೂರ್ಯಪ್ರಭ ಖಗಾಧೀಶಾ || ೩೫ ||

ಇರದೆ ಸೂರ್ಯಪ್ರಭನ ತೇಜದ | ಹರವರಿಗೆ ಬಿ ಱಿತೊಡೆ ಗಿರಿ ಗ |
ಹ್ವರದೊಳಗೆ ಕಾನನದೊಳಗೆ ಕತ್ತಲೆಯೊಳಡಗಿಹರು |
ತರುಣ ಸೂರ್ಯಪ್ರಭೆಗಗಿದು ಮೈ | ಗರೆದು ಗೂಗೆಳಂತೆ ಕಂಗೆ |
ಟ್ಟಿರುತಿಹರು ರಿಪುಖಚರರಾಯರು ಸಂದಿಗೊಂದಿಯಲಿ || ೩೬ ||

ಆ ಗಗನಚರಪತಿಯ ಕೀಱಿತಿ | ಜೋಗಿನಿಯಗೆಯಿಂಗಡಲೆ ಬಳಸಿದ |
ಜೋಗವಟ್ಟಿಗೆ ಜೊನ್ನ ಪೂಸಿದ ಬೂದಿ ಪೊಂಬೆಟ್ಟ ||
ಜೋಗದಂಡರವಿಂದು ವೋಲೆಗೆ | ಳಾಗೆ ತಾರಗೆ ಸಂಕಮಣಿದೊಡ |
ವಾಗೆ ತನ್ನಿಚ್ಛೆಯಲಿ ಮೂಜಗದೊಳಗೆ ತೊಳಲುವಳು || ೭ ||

ಏಣಲೋಚನೆಯಾ ಖಗೇಂದ್ರನ | ರಾಣಿ ಸೊಬಗಿನ ಸೌಂದರದ ಕ |
ಟ್ಟಾಣಿ ಸುಗುಣ ಶ್ರೇಣಿದಾನತ್ರಾಣಿ ಜಾಗ್ಗೊಲೆಗೆ ||
ವಾಣಿ ಮೋಹನ ಮೂರ್ತಿ ಜಿತಗೀ | ರ್ವಾಣಿವಿಭವದ ಚೂಣಿ ಕಿಸಲಯ |
ಪಾಣಿಧಾರಿಣಿಯೊಳಗೆ ಧಾರಿಣಿಯೆಂಬಳೆಸೆದಿಹಳು || ೩೮ ||

ಅವಳ ಗರ್ಭಸುದಾಂಬುಧಿಯೊಳೊ | ಪ್ಪುವ ಸುಧಾಕರನಾಗಿ ತಾಂ ಸಂ |
ಭವಿಸಿ ಲಲಿತಶ್ರೀ ಸುರನು ಚಿಂತಾಗತಿಯುಮಾದ ||
ದಿವದಿ ಬರುತಲ್ಲಿಯ ದಿವಿಜರೆ | ಲ್ಲವರ ಚೆಲುವನು ತನ್ನ ತನುವಿನೊ |
ಳವಿಚಳಂ ತಳೆದಂತೆ ತೊಳತೊಳಗಿ ಬೆಳಗುವನು || ೩೯ ||

ಶಿಶುತನವನುದ್ಧರಿಸಿ ವಿದ್ಯಾ | ಪ್ರಸರವನು ನೆಱೆಕಲಿತುವೊಪ್ಪುವ |
ಮಿಸುನಿಯನು ಪುಟವಿಟ್ಟವೊಲು ಮೈವಣ್ಣ ತಳತಳಿಸೆ ||
ಒಸೆದುನೋಡುವ ಖಚರಕುವರಿಯ | ರೆಸಳುಗಂಗಳು ಮಾರ್ಪೊಳೆಯ ಕ |
ಣ್ಗೆಸೆದನಿಂದ್ರನೆತಾನೆನಿಸಿ ಚಿಂತಾಗತಿ ಕುಮಾರಕನು || ೪೦ ||

ತಾರಭೂಧರವನು ಖಗೇಂದ್ರಕು | ಮಾರ ತನ್ನಯ ತೇಜದಿಂ ವಿ |
ಸ್ತಾರ ರೋಹಣ ಗಿರಿಯಮಾಡುವ ರೋಹಣಾಚಲವ ||
ಕೀರುತಿಯ ಬೆಳುವೆಲಗಪಸರಿಸ | ಲೌರಸೈಳವ ರಚಿಸುವನದೇಂ |
ಚಾರು ವಿದ್ಯಾಧರನು ಚಿಂತಾಗತಿ ಕುಮಾರಕನು || ೪೧ ||

ಮನಸಿಜನ ಪಡೆಮಸಗಿ ಹರುಬದಿ | ಜಿನನ ಸಭೆಯನು ಮುಸುಗಿದುದೊ ಯೆಂ |
ದೆನಿಸಿ ವಿದ್ಯಾಧರ ಕುಮಾರೀ ವೃಂದದೊಡವೆರಸಿ ||
ಜಿನರವಸದಿಯನೊಲಿದು ಬಲಗೊಂ | ಬನು ಪೊದಳ್ದಷ್ಟಾಹ್ನಿಕದೊಳಿಂ |
ದ್ರನೆ ವಲಂ ತಾನಾಗಿ ಪೂಜಿಸುವನು ಮಹೋತ್ಸವದಿ || ೪೨ ||

ಎಱುಗುವವರಲ್ಲದೆ ವಿಚಯಚ್ಚರ | ರೆಱೆಯರೆಲ್ಲರುವವಗೆ ಕೂರಸಿ |
ಯೊಱೆಯನುಚ್ಚುವರುಂಟೆ ಮನದಲಿ ಮುಳಿಸ ಮುಕ್ಕುಳಿಸಿ ||
ಬೆಱೆವ ಸಱಿಮಿಂಡಿಯರದಾರೆನೆ | ನೆ ಱೆದುನಿಚ್ಚಲು ಗಗನ ಚರಿಯರ |
ನಱಿದು ಹಾಡಿಸುವಾಡಿಸುವನೋದಿಸುವ ನಲವಿಂದ || ೪೩ ||

ಬಳಿಯನಾ ಕಮಲಪ್ರಭಾಚರ | ಸುಲಲಿತಾಮರದಿವಳ ಚರೋ |
ಜ್ವಳನಿಳಿಂಪನುಕ್ರಮದಿ ಬಂದಾತಂಗನುಜರಾಗಿ ||
ಕಲಿಮನೋಗತಿ ಚಪಲಗತಿಯೆಂ | ಬಲಘುಭುಜರಮಳಿನರು ತೋರುವ |
ಸುಲಲಿತಾಕ್ಷಿಗಳಂತೆ ತೋಳುಗಳಂತೆ ಶೋಭಿಪರು || ೪೪ ||

|| ಅಂತು ಸಂಧಿ ೭ಕ್ಕಂ ಮಂಗಲ ಮಹಾ ||