ಸಂಧಿ ೨೪

ದೇವಕೀ ನಂದನನು ಬ್ರಹ್ಮಪುತ್ರನನುದಿಗೆ |
ಕಾವನೈದಂಬಲೆಯೆ ದಂಡೆತ್ತಿ ನಡೆದುತಾ |
ನಾವನಿತೆರುಗುಮಿಣಿಯನುರ್ಕಿನಿಂ ತಳೆದು ತತ್ಪುರದನದೊಳಂದಿರ್ದನೈಯ್ಯ || ಪ ||

ಶ್ರೀ ರಮಣನಿಂತು ಸುಖದಿಂದೆ ವಿದ್ಯಾಧರ ಕು |
ಮಾರಿಯಂ ಸತ್ಯಭಾಮೆಯನೊಲಿದುಮದುವೆನಿಂ |
ದೋರಂತೆ ಸುಖದಿರ್ಪನೆಂದರಿದು ಪರಸಿ ಪೋಪುಜ್ಜುಗದಿನೊಂದು ದಿವಸ ||
ನಾರದಂ ನಭದಿನಿಳಿತಂದು ಹರಿಯಂ ಪರಸಿ |
ವಾರಿಜಾನನೆ ಸತ್ಯಭಾವೆಗಾಶೀರ್ವಚನ |
ಸಾರಮಂ ಕಂಡ ಪೋದನಾ ಸತಿಯ ಸದನಕ್ಕೆ ನಾಡೆ ಕಲಹಪ್ರಿಯನು || ೧ ||

ಆ ವನಿತೆಯಾಗಳಾ ಶೃಂಗಾರಸಾಲೆಯೊಳು |
ತೀವಿರ್ದ ಮೇಳದೆಳೆವೆಣ್ಬಳಗದೊಡನೆ ನಾ |
ನಾವಿಧದ ಮಣಿಭೂಷಣಾವಳಿಗಳಿಂ ಪರಿಮಳಾನುಲೇಪನ ವಸನದಿಂ ||
ಭಾವೆ ನೆರೆಸಿಂಗರಿಸಿಕೊಳ್ವನಾ ಕನ್ನಡಿಗಾಣ್ಬ |
ನೀವಿಯಂತದರಿಂ ಕಬರಿಬಂಧಮಂ ಕರೆದ |
ನೀವುವುಜ್ಜುಗದೆ ಯೌವನರೂಪ ಮದಗರ್ವದಿಂ ಮುನಿಯ ಮರದಿರ್ದಳೈ || ೨ ||

ಇದಿರೆದ್ದು ಬಂದರ್ಘ್ಯಪಾದ್ಯಮಂ ಕುಡದೆ ಸ |
ನ್ಮದದಿನಭಿವಂದಿಸದೆ ತಕ್ಕಾಸನವನಿಡದೆ |
ಮದವತ್ಸುರೂಪ ಯೌವನ ವಿಭ್ರಮೋದಯದಿನುರದಿರ್ದಳೆಂದು ಮುನಿಪ ||
ಪದುಳದಿಂ ಕ್ಷಮಿಸಲರಿಯದೆ ತನ್ನ ಚಿತ್ತದೊಳು |
ಮದಗಜಕೆ ದಂತ ಭಂಗಂ ರಾಜಪುತ್ರರ್ಗೆ |
ಕದನ ಭಂಗಂ ಮುನಿಗವಜ್ಞೆಯಾದುದೆ ಭಂಗವೆಂದು ಮುನಿದೆದ್ದನಿರದೆ || ೩ ||

ಮುನಿಮುನಿದುಪೋಗುವದೊಂದುಪಯಮಂ
ನೆನೆದನಾಕೆಯಗರ್ವಮಂ ನುರ್ಗಿಯಾಳ್ವ ಚೆಲು |
ವಿನ ಸವತಿಯೋರ್ವಳಂ ತರಿಪೆನೆಂದೆಲ್ಲ ದೇಶದೊಳುರುವ ಪೆಣ್ಣರಸುತ |
ವಿನುತ ಕೊಂಡಿಮಪುರವನೈದರಾಯಾಲಯಮ |
ನನುನಯದಿ ಪೊಕ್ಕನಾ ಸಮಯದೊಳು ಮುನಿಗೆ ಭೋ |
ರನೆ ಭೀಷ್ಮರೆದ್ದೆರಗಿ ತಕ್ಕಾಸನದೊಳಿರಿಸಿ ಕೈಮುಗಿದು ಕುಳ್ಳಿರ್ದನು || ೪ ||

ಆ ನಾರದಂಗೆ ಭೂಪನರಾಣಿ ಸಿರಿದೇವಿ |
ತಾನೆರಗಿ ಪರಕೆಗೊಂಡಂತರಂ ತತ್ಪುತ್ರಿ |
ಮೀನಾಕ್ಷಿ ರುಗುಮಿಣೀದೇವಿ ವಿನಯದಿ ಪೊಡವಡಲ್ಕೆ ನೋಡುತ ಮುನಿಪತ ||
ದಾನವಾರಿಯ ಪಟ್ಟದರಸಿಯಾಗೆಂದು ಸ |
ಮ್ಮಾನದಿಂ ಪರಸೆ ಕೇಳ್ದತಿ ಬೆಕ್ಕಸಂಬಟ್ಟಿ |
ದೇನೆಂದಿರಾ ದಾನವಾರಿಯೆಂದಾರೆಂದವರ್ಕೇಳೆ ಮುನಿ ಪೇಳ್ದನೈ || ೫ ||

ಸುರಪ ವಿರಚಿತಮದುಂ ದ್ವಾರಾವತಿಯೆನಿಪ್ಪ |
ಪುರವರನು ವಸುದೇವನಾತ್ಮಜನು ಸಿರಧರ |
ವರನನುಜನೆನಿಪ ನಾರಾಯಣನು ನೋಡೆ ಕಾರಣ ಪುರುಷನಸುರಾಂತಕಂ ||
ಭರದಿ ಕಾಳಿಂಗ ನಾಗನ ಮಡುಗಲಂಕಿದವ |
ನುರುಕಂಸನುಂ ಕಂಸ ಚಾಣೂರಮಲ್ಲ ಸಂ |
ಹರಣ ನೇಳ್ಪಗಲಿಳಾಧರವನೊಂದೆ ಬೆರಳ್ಗೊಳಾಂತ ವಿಖ್ಯಾತನವನೈ || ೬ ||

ವಸುಮತಿಯೊಳಾಂತ ತ್ರಿಖಂಡ ಚಕ್ರೇಶ್ವರನು |
ಶಿಶುತನದೊಳಖಿಳ ದೈತ್ಯರ ನೊಕ್ಕಲಿಕ್ಕದವ |
ನುಸುರಲೇನಾತನಾಗ್ನೆಯೆನಿಸಿತು ಮೀರಿ ಬಾಳ್ವರ ಕಾಣೆನೀ ಮಹಿಯೊಳು ||
ಜಸವೆತ್ತು ಮೆರೆವಾ ಸಮುದ್ರವಿಜಯಕ್ಷ್ಮಾ ಪ |
ನೆಸೆವ ತೀರ್ಥಂಕರರ ಜನಕನಾ ಹರಿಗೆ ರಾ |
ಜಿಸುವ ಹಿರಯಯ್ಯನೆಂದೊಡೆ ಮತ್ತಮವನ ಸಿರಿಯೇಂ ಪಿಡಿದು ನೋಡೆಂದನೈ || ೭ ||

ಆತನೈಶ್ವರ್ಯಮಂ ಶೌರ್ಯಧೈಯಂಗಳಂ |
ಚಾತುರ್ಯಮಂ ಪೊಗಳನೆನ್ನಳವೆ ನೀನೀರ್ವ |
ರೋತಿ ನಿಮ್ಮ ಕುಮಾರಿ ರುಕುಮಿಣಿಯನಾತಂಗೇ ಕುಡುವುದೆಂದಾ ನಾರದಂ |
ಭೂತಳೇಶಂಗೆ ತತ್ಸತಿಗೆ ನಣ್ಪಿಂ ಪೇಳೆ |
ಮಾತೇನೋ ಶಿಶುಪಾಲಕಂಗಿತ್ತೆವೀಮಗಳ |
ನಾತನುಂ ನಿರ್ಬಣಂ ಬಂದಪನಿವಳಾ ಮದುವೆ ನಾಡದಿನೊಳೆಂದರವರೈ || ೮ ||

ಬೇಡ ಗಡ ಮರುಳಾಟಮೀ ಮಗಳ ಮದುವೆಯನು |
ಮಾಡುವುದೆ ಪುಸಿ ನಿಮ್ಮ ಶಿಶುಪಾಲಕಂಗೆ ಕೇ |
ಳಾಡಿದಂ ಮುನಿಪನಿಂತೆಂದು ನೋಯಲು ಬೇಡ ಮಾಧವಂಗೀ ಕನ್ನೆಯ ||
ನಾಡೆ ಕೊಡಿಮೆಂದಾಡೆ ಕೊಡುವುದನುಚಿತಮೆಂತು |
ಬೇಡುವುದೆ ಪೆರರ್ಗಿತ್ತ ಪೆಣ್ಣನೆಂದವರುಸುರೆ |
ಕೂಡೆ ಮುನಿದೆದ್ದನತ್ತಲಾ ಪೆಣ್ಣರೂಪಂ ಪಟದೊಳಾಂತು ಕೊಂಡೈದಿ || ೯ ||

ಆ ಸುಗುಮನೈದಿ ಬಾಂಬಟ್ಟೆಯಿಂ ಶಿಖಿಮುಂಜಿ |
ಭಾಸುರ ಕಮಂಡಲಂ ಯಜ್ಞೋಪವೀತವೆಸೆ |
ಆ ಸಭೆಯನೇಳ್ದಿದಿರುಗೊಂಡೆರಗಿ ವಿಷ್ಣತ |
ಕ್ಕಾಸನದೊಳಿರಿಸಿ ಬಿಜಯಂಗೈದರೇಂ ಮುನಿಪ |
ರೀಸು ಬರದೆನೆ ದೇವಋಷಿ ತೋರಿದಂ ಚಿತ್ರಪಟವನತಿ ಚತುರನಿಂದೈ || ೧೦ ||

ಮಂಡನಂಬಡದೆಸೆವ ಪಟದರಸ ಚಿತ್ರವನು |
ತಂಡದೆಳೆ ತಿಂಗಳುರಱುವರಸಿಯೆನಿಸುವ ಚೆಲ್ವು |
ಗೊಂಡು ಮೋಹನವಾಂತು ಲಕ್ಷಣಂಬೆತ್ತು ಪಸದನಗೈದು ಕಡುಸೊಬಗಿನಿಂ ||
ಮಂಡಿಸುವ ಲಲಿತಾಂಗ ಮಗನಂತೆ ನುಡಿಯ ಬಗೆ |
ಗೊಂಡುನುಡಿಯದೆನಾಣ್ಪಿನಿಂದವೊಲ್ ತೋರ್ಪುದಂ |
ಕಂಡುಕಂಡೈದೆ ಮನದಣಿಯದದರಂತೆ ತಾನುಂ ಚಿತ್ರವಾಗಿರ್ದನೈ || ೧೧ ||

ಇರೆನೋಳ್ಪನೆಂಬವನ ಬಗೆನೆಱೆಯದದರ ಸಿರಿ |
ಪಿರಿದೆಂದು ಚಿತ್ತದಲಿ ಬೆರಗಾಗಿರೆ ವಾಮ್ಮನು |
ಬ್ಬರಿಪ ಪುಳಕವನಾಂತು ನಿಜ ಶಿರಸ್ಕಂಪನ ನೆರೆನೋಡಿ ನಳಿನನಯನ ||
ಸ್ಮರಸತಿಯೊ ನಾಗವನಿತೆಯೊ ವನಶ್ರೀಯೊ ಪೇ |
ಳಿರದಿದಾವಳ ರೂಪಿದೆಂದು ಬೆಸಗೊಂಡನಾ ತಾವರೆಯ ಮೊಮ್ಮಗನನೈ || ೧೨ ||

ಅರಸನಿಂ ಕುಂದನಾಡಲು ಬಹುದೆ ಮೈಗೆಟ್ಟ |
ನರಸಿಯಂ ಮೊರೆಗೊಟ್ಟ ಹೆಣ್ಣನಾವಗ ಮಿರದೆ |
ತಿರಿತಿಂಬ ವನಮಡದಿಯಂ ಪಲರಸೂಗೆಯನು ಕಿವಿಯಿಲ್ಲದಂಗನೆಯನು ||
ಮರಗಿಡುಗಲೆಡೆಯೊಳುದಯಿಸಿದವರನೇಂ ಪೋಲಿ |
ಪರೆನೋಡಲಿನಿತೂಣಯಂದಳೆಯದಿರ್ದ ಸೌಂ |
ದರಿಗೆ ಸರಿಯಾರೊ ದೊರೆಯಾರೊ ಎನೆ ಮತ್ತಮವಳಾರೊ ಮುನಿ ಪೈಳೆಂದನೈ || ೧೩ ||

ಕೇಳಂಬುಜಾಂಬಕ ವಿದರ್ಭ ದೇಶದೊಳೆ ಪೆಂ |
ಪಾಲನೊಪ್ಪುವುದು ಕೊಂಡಿಮಪುರಮದಂ ಸೌಖ್ಯ |
ಜಾಳನತುಳಂ ಭೀಷ್ಮ ಭೂಪಾಲನಾಳ್ವನಾತನ ಪಟ್ಟದರಸಿ ಸುರಸೆ ||
ಬಾಲೆಮೀಂಗಣ್ಣವಳು ಶ್ರೀದೇವಿ ತತ್ಪುತ್ರ |
ನಾಲೋಕಿಪರ್ಗೆಮನಸಿಜನೆನಿಪ ರುಗ್ಮಣಂ |
ಬಾಲೆ ರುಗುಮಿಣೆಯವಂಗನುಜೆಯಾಗಿರುತಿರ್ಪಳವಳನೇವಣ್ಣಿಸುವೆನೈ || ೧೪ ||

ಏನೆಂಬೆ ನೀಕ್ಷಿಪರ ಕಣ್ಣಪುಣ್ಯದ ಸಿರಿಯ |
ನೇನೆಂಬೆನಲರಂಬನಧಿದೇವತೆಯ ಸೊಬಗ |
ನೇನೆಂಬೆನಂಗಜನ ಪಂಚಬಾಣಂಗಳೊಂದೊಡಲಿಟ್ಟು ನಿಂದುದೆನಿಪ ||
ಮಾನಿನಿಧಾನವನು ಭಾವಜನ ಮಚ್ಚು ಮ |
ದ್ದೇನಂಗವಾಂತುದೆನಿಸುವ ಹೆಂಗಳರಸಿಯನ |
ದೇನೆಂಬೆನೇನೆಂಬೆನಮನು ಮದನನ ಮಂತ್ರದೆಯಂ ರುಗುಮಿಣಿಯಾನೈ || ೧೫ ||

ಅವಳ ಮೊಗದೊಳು ಸಸಿಯ ಕಡೆಗಂಗಳೋಳುನವ ಕು |
ಸುಮ ಶರತತಿಯನವಳ ಪುರುವಿನೊಳೆ ಸಬ್ಬವಡಿ |
ಕ್ಷವನುವನವಳಳಕದೊಳು ಭ್ರಮರಸಂಕುಳವನವಳೊಳ್ನುಡಿಯೊಳು ||
ಸವಿವೀರಿ ಗಳಪುವರಗಿಳಿಯನಾ ಚದುರಿನಿಂ |
ದವಳಿಂಚರದೊಳುಲಿವ ಕೋಗಿಲೆಯ ನಿರಿಸಿತಾ |
ನವಳಂಗದಲ್ಲಿ ನೆಲೆಮನೆಗಟ್ಟಿ ಬಾಳುತಿಹನನುದಿನಂ ಕಂದರ್ಪನೈ || ೧೬ ||

ಮುಗಿದ ಭುಜಮಂ ಪಲಂಬಿಡೆದಳಿವ ಕದಳಿಯಂ |
ಮೃಗಪತಿಯ ಮಧ್ಯಮಂಗಿನಿಸಗಲ್ವಾ ಚಕ್ರ |
ಯುಗಲಮಂ ಮಾತಂಗಹಸ್ತಮಂ ಪಗಲಿನೊಳು ಕಂದುವಿಂದುವನಾಗಳೆ ||
ವಿಗೆ ಕೊರಗುವಳರ್ಗಣೆಯ ನಾರಡಿಯನಾ ಪೆಣ್ಣ |
ಸೊಗಸುವಡಿ ತೊಡೆನಡುಪೊದಳ್ವ ಮೊಲೆ ತೋಳ್ಗಳ್ಗೆ |
ನಗೆ ಮೊಗಕೆ ನೋಟಕಳಕಕ್ಕೆ ಸರಿಯೆಂದೊಡುವ ಮಾಹೀನವಾಗದಿರದೈ || ೧೭ ||

ಅಡಿಯೊದೆಳೆದಳಿರೂರೊಳೆಸೆ ರಂಭಾಸ್ತಂಭ |
ದೊಡನೆ ನಡುವಿನೊಳು ಹರಿ ಮಧ್ಯಮೆದೆ ವದಕೆಯೊಳು |
ಬಿಡದಪೊಣವಕ್ಕಿನಲಿ ತೋಳೊಳಾ ಪಲ್ಲಮರಿವಲೆವ ಬರಿಕೈಮೊಗದೊಳು |
ಪೊಡರ್ವ ಪುಣ್ಣಮೆಯ ಬಿಡುವೀಕ್ಷಣದೊಳಲರಂಬು |
ಮಡದಿಯಿಂದುಟಿಯೊಳೆಲಪವಳಲತೆ ಕುರುಳೊಲಾ |
ರಡಿ ಕಬರಿಯೊಳು ಸೋಗೆ ತಾವುಪಮೆವೆತ್ತು ತೋರುತ್ತಿಪ್ಪುದೇವೇಳ್ವೆನೈ || ೧೮ ||

ಅಳಿತುಳಿಯದಂಬೋಜವೆಲರಲೆಯದೆಳೆವಳ್ಳಿ |
ಕಳೆ ನೆರೆವ ಸಸಿಲೇಖೆಗಳಿಯದಿ ನಿವಂಣಿನಿಸು |
ಬಳಸೆಕೈಗುತ್ತದಿನಿದಾನವಾಸ್ವಾದಿಸದ ಸೊದೆಯ ತೀವಿದ ಪೊಂಗೊಡ ||
ಪೊಳೆವ ಕೀಣಣೆಗೊಳಿಸದುರುಮಾಣಿಕಂ ವಿಂದ |
ಗಳೆಯದೊಳು ಮುತ್ತು ಮದನನಮೀಸಲಳಿಯದಾ |
ಬೆಸಸೆನಿಸಿ ಸೊಗಯಿಪಳು ನವಯೌವನದಸೊಂಪು ಪೆಂಪಿನಿಂದಾಸುದತಿಯೈ || ೧೯ ||

ಸರಿಗಾಣೆನೊರೆಗಾಣೆನವಳ ಚೆಲುವಿಕೆಗೆ ಭೂ |
ಚರ ಖೇಚರಾಮರೋಗವನಿತೆಯರೊಳರರೆ |
ಸಿರಿಸೊಬಗು ಚೆಲುವು ಜಿನಭಕ್ತಿಯೊಳು ಸೀತೆಯಂ ಪೊಗಳರಂದಿನಕಾಲಕೆ ||
ಧರಯೊಳಿವಳಾಕೆಗೈವಡಿ ಪೆಂಪನಾಂತಿಪ್ಪ |
ವರನಪ್ಪುದಕ್ಕೆ ನೀನೇ ಪಾಟಿಯಿಂತಲ್ಲದಿಲ್ಲ ಪೆರತೇನೆಂದನೈ || ೨೦ ||

ಇರುಳೆರೆಯನಂ ಪಾಲ್ಗಡಲು ಪಗಲೆಣೆವಕ್ಕಿ |
ತರುಣಿಯನು ಸರಸಿರುಹ ನೆನೆವಂತೆ ನೆನೆವಳಾ |
ತರಳೆ ನಿನ್ನನೆ ನಮ್ಮನುಡಿಗೇಳಿದಂದದಿ ನಿಂದಾದೂಸರಿಂ ಬಂದೆವೊ |
ಮುರವೈರಿ ತಳುವದೀಗಳೆ ಪೋಪುದತ್ತಲಾ |
ತರುಣಿಯನು ಯಮನಸುತ ಶಿಶುಪಾಲನೆಂಬ ಭೂ |
ವರನೊಳಿತ್ತರು ನಿಬ್ಬಣಂ ಬಂದುದಾ ಮದುವೆನಾಡಿದಿನೊಳೆಂದರವರೈ || ೨೧ ||

ಹರಿಯೆಂದು ಬೆದರುವನೊ ಹರನೆಂದು ಬೆಚ್ಚಿಪನೊ |
ಸರಸತಿಯ ಪತಿಯೆಂದು ಸೈರಿಪನೊ ಬಗೆಗೊಟ್ಟು |
ತರುಣಿಯರ ವಾರ್ತೆಯಲಿ ಕೇಳ್ಪರೆಲ್ಲರಮರ್ಮಮಂ ಮದನನಿರಿಯದಿಹನೆ ||
ಹರಿಯೆರ್ದೆಯೊಳಾಮುನಿಯ ನುಡಿಯುಮಂಗಜನ ಪೊಳ |
ಪಲರ ಹೊಸಮಸೆಯ ಪೊಗರಂಬುಗಳುಮೊಡಮೊಡನೆ |
ಭರದಿ ನೆಲೆಗೊಂಡುವಲ್ಲಿಂಬಳಿಕೆ ಮುನಿ ಪರಸಿ ಗಗನಕವತರಿಸಿದಪನೈ || ೨೨ ||

ಯುವತಿಯರದೆಸೆಯಿಂದ ಬಂದ ಸವಿನುಡಿಗಳಂ |
ಕಿವಿಗೊಟ್ಟು ಕೇಳದವನಾರೊ ನಾರದನೆ ಬಂ |
ದವಳಂಕಮಾಲೆಗಳನೊಲಿದು ಬಣ್ಣಿಸೆ ಮನಂಗೊಟ್ಟು ಪಂಬಲಿಪುದರಿದೆ ||
ತವಕಿಸುವಬಿತ್ತು ಮುರ್ಬುವ ಪುಳಕವಾಹರಿಗೆ |
ಕಿವಿವೇಟದಿಂದಾಯ್ತು ಕಂಬೇಟದಿನ್ನೆಂತೋ |
ಪವಣಿಸುವನಾರೊರಗುಮಿಣಿಯ ಸೋಂಕಿಂದಾದ ಸುಖದಸುಗ್ಗಿಯ ಬೆಳೆಸನೈ || ೨೩ ||

ಪರೆಯಿಸದವನೋಲಗವ ಬಲನ ಮಂತ್ರಿಯಮತದೊ |
ಳೊರೆದ ಕಾರ್ಯಾಂತರವನರ್ಜನನನೊಡಗೊಂಡು |
ನಿರದೆ ದಂಡೆತ್ತಿ ಬರವೇಳೆಂದು ದಂಡನಾಥನೊಳರುಪಿ ಮಧುಸೂಧನ ||
ತುರಿತದಿಂ ಬಲಭದ್ರ ಪಾರ್ಥಸಾತ್ವಕಿಗಳಂ |
ಬೆರಸಿ ಪರಿದಾಶೇಮಂ ಪೊಕ್ಕುಗೊಂಡಿಮಾ |
ಪರಭಾಗ ಶುಷ್ಕನದಿಯೆಡೆಯನಂದನದಲ್ಲಿ ನಿಲಿಸಿದಂ ಮಣಿರಥವನು || ೨೪ ||

ಅಲ್ಲಿ ನರನುಂ ಸಾತ್ವಕಿಯುಮೆಂದರಾ ಹರಿಗೆ |
ನಿಲ್ಲದಾ ಪಟ್ಟಣಮನೊರ್ಮೆನೋಡಿಯು ಬರ್ಪೆ |
ವಿಲ್ಲಿರೆಂದಿಳಿದು ರಥದಿಂ ಮುಂದೆ ನಡೆಗೊಂಡು ಕಂಡರಾ ಬಿಟ್ಟಬೀಡ ||
ಎಲ್ಲಿ ನೋಡಿದಡಿಳೆಯೆ ಬೇಸಲೇಯೆಂಬವೋ |
ಲೆಲ್ಲಿಯುಂ ಪಸರಿಸಿದ ಸೈನ್ಯಮಂ ನೋಡುತ್ತೆ |
ಬಲ್ಲಿದರು ಪೋಗುತೆಡೆಯೊಳದೋರ್ವನಂ ಕಂಡಿದಾರದೈ ಪಡೆಯೆಂದರೈ || ೨೫ ||

ಎಂದೊಡೆಂದಮ್ಮಂಡಲಾಧಿಪತಿ ಯಮರಾಜ |
ನೆಂದೇಳ್ಗೆವೆತ್ತವನ ಬೀಡು ಮತ್ತಾ ನೃಪನ |
ನಂದನನು ಶಿಶುಪಾಲನವನ ಭುಜವಿಕ್ರಮವನಾರು ಬಣ್ಣಿಪರಾಂತೊಡೆ ||
ಒಂದು ನಿಮಿಷದೊಳೆ ತಿಸುಳಿಯನಾದೊಡಂತಿರವ |
ನಿಂದಲ್ಲದೆರಡು ದಿನವಾತನ ವಿವಾಹವೆಸೆ |
ವಿಂದುಮುಖಿ ರುಗುಮಿಣಿಯನಿತ್ತನಾಕೆಯ ತಂದೆ ಭೀಷ್ಮರದರಿಂ ಬಂದರೈ || ೨೬ ||

ಅವನ ನುಡಿಗೇಳ್ದು ನಸುನಗುತ ಪಟ್ಟಣವಪೊ |
ಕ್ಕವನಿಪರು ಜಿನಗೇಹದೊಳೀಗಳುಂ ಮಂದೂರ |
ದವಳೋಕಿಸುತ್ತೆ ಪೊರಮಡುತೆ ಸಾರ್ದಾಜಿನರ್ಗೆರಗೆ ಪೋಪವಸರದೊಳು ||
ತವಕದಿಂದರಸುವ ನಿಧಾನವಿಧಿರೇಳ್ದು ಬ |
ಪ್ಪವೊಲಿದಿರ ಬರುತಿರ್ದಳಾ ಜಿನಾರ್ಚನೆಗದಾ |
ಯುವತಿಯರ ಸೀಮಂತ ಮಣಿಯೆನಿಪ ರುಗುಮಿಣೀ ಮಹಾದೇವಿ ವೈಭವದೊಳೈ || ೨೭ ||

ತೊಲಗೆಲವೊ ಮನಸಿಜಮದದಾನೆ ಬರುತಲದೆ |
ತೊಲಗಿರೆಲೆ ಮನ್ಮಥನ ಮಸದಲಗು ಬರುತಲದೆ |
ತೊಲಗಿರೆಲೆ ಮಕರಕೇತನ ಜಯಶ್ರೀ ಬರುತಲದೆ ವಿದರ್ಭಾಪತಿಯ ||
ಕುಲತಿಲಕ ಬರುತಲದೆ ತೊಲತೊಲಗಿಮೆಂಬ ಬ |
ಲ್ಲುಲಿಪೊಣ್ಮೆ ಪಡಿಯರತಿಯರೆ ಜಡಿವ ಕಳಕಳದಿ |
ಲಲನೆಯರ ಕಲಕಾಂಚಿಯಿಂಚರದಿನೇವುರದ ಝಣತ್ಕೃತದಿವೆಸೆಯೆ ಬಂದಳೈ || ೨೮ ||

ತುಂಬಿರ್ದ ತಾರಕಾ ಮಧ್ಯದೊಳು ಚಂದ್ರಕಲೆ |
ತಾಂಬಾನೊಳೈದುವವೊಳೆಲೆವರೆಯದಾಳಿ ಕ |
ದಂಬಕವ ನಡುವೆ ಪೊಸಮುತ್ತಡಸಿ ಮೆರೆವ ಪಲ್ಲಕ್ಕಿಯಲಿ ಮಂಡಿಸಿರ್ದು ||
ಬೆಂಬಿಡದೆ ಛತ್ರ ಚಾಮರನಿಚಯವೊಪ್ಪುತಿರೆ |
ತಂಬಿಸಿಲನುಗುಳ್ವನಗೆ ಮೊದಲಲಿತಾಂಗಿ ಚೆ |
ಲ್ವಿಂಬಂದು ಪೊರಗಿಳಿದು ಕಾಲ್ದೊಳೆದು ಜಿನಗೇಹಮಂ ಪೊಕ್ಕಳುತ್ಸವದೊಳು || ೨೯ ||

ತನುಮನೋವಚನ ಶುದ್ಧಿಯೊಳಿಂತು ಪೊಕ್ಕು ತ |
ಜ್ಜಿನಪತಿಗೆ ನುತಿಸಿ ಪೂಜಿಸಿ ಭಕ್ತಿಯಿಂ ಮಣಿದು |
ಮುನಿಗಳಿಗೆರಗಿ ನಿತ್ಯಂ ವ್ರತಂಗೊಡೆಂದಿನಂತೆ ಮತ್ತಾ ರುಗುಮಿಣೆ ||
ಜಿನ ಭವನದಿಂ ಮನೆಗೆ ಪೋಪ ಸಮಯದಲಿ ದೊ |
ಕ್ಕನೆ ನೋಡುತಿರ್ದ ಮಧ್ಯಮ ಪಾಂಡವಂ ಧೈರ್ಯ |
ಮನನೆತ್ತಿ ಪೆಗಲನೇರಿಸಿಯೆ ಕೊಂಡನೆಲ್ಲರುಂ ಕಂಗೆಡಲು ರುಗಮಿಣಿಯನು || ೩೦ ||

ಘೋಳೆಂದುದಾಸತಿಯ ಮೇಳದಬಲೆಯರು ಕೆಲ
ದಾಳುಗಳು ಕೇಳಿರದೆ ಪತ್ತಿಮುತ್ತಿದೊಡಿವರು |
ಬಾಳಲಿವರೇ ಪಾರ್ಥ ಸಾತ್ವಕಿಗಳವರ ನಿತ್ತೈತರುತೆ ಸತಿ ಬೆದರದ ||
ಬಾಳಮ್ಮ ಕೃಷ್ಣನೆಡೆಗೈವೆ ವೆಂದೊಯ್ಯುತಿರೆ |
ಕೋಳಾಹಳಂ ಮಸಗಿತೆಲ್ಲಿಯು ನಮ್ಮ ಭೂ
ಪಾಲವಂದನೆಯ ನೀರ್ವೊರೆಯಮಾನಸರು ಬಂದು ಕೊಂಡೊಯ್ದರೆಂದವರು || ೩೧ ||

ವನಜನಾಭಂಗೆ ರುಗುಮಿಣಿಯೊಯ್ಯೆವಾನರ್ಜು |
ನನು ಕದ್ದು ಕೊಂಡೊಯ್ದರೆನ ಬೇಡ ನಿಮ್ಮೊಳಾಂ |
ತನುವರಂಗೈದಲ್ಲದೇಂ ಪೋಗೆವೆಂದು ಸಿಂಹಾರವದಿ ಗರ್ಜಿಸುತ್ತ ||
ವನಿತೆಯಂ ತೋರಿಮತ್ತತ್ತ ಶಿಶುಪಾಲ ಭೂ |
ಪನ ಪಡೆಗೆ ಬಂದಂತೆ ಪೇಳ್ದರಿದಿರಾಂತರುಂ |
ಮುನಿದಿಕ್ಕಿ ವನಜಾಕ್ಷನಿರ್ದಬನಮಂ ಪೊಕ್ಕರೇಂ ಸಾಹಸಿಗರೋ ಧರೆಯೊಳು || ೩೨ ||

ಅಂತರುಗಮಿಣಿಯನುರ್ಕಿಂ ತಂದುಮಾ ಸಿರಿಯ |
ಕಾಂತನ ರವಕ್ಕಿಳುಪಿದಂ ನಾಡೆ ಶಿಶುಪಾಲಾ |
ನಾಂತಿರ್ದಗೆಲವೆಣ್ಣುಮಂ ವಿದರ್ಭೇಶ್ವರನೊಳಿರ್ದ ವಿಜಯಾಂಗನೆಯನು ||
ಸಂತಸದಿನರ್ಜುನನ ಸೆಳೆತಂದಿರಿಸುವಂತೆ |
ಕಾಂತೆಯಂ ನೋಡಿ ಪೂಗೋಲ ಬತ್ತಳಿಕೆಯಂ |
ಬಂತೆ ಸೊಗಯಿಪ ಚಿತ್ತವಾಂತು ಪುಳಕಿತಗಾತ್ರನಾದನಾ ಕಂಸಾರಿಯೈ || ೩೩ ||

ಅವಳ ರೂಪೆಂದು ಪಟದಲಿ ಭರ್ಚಿಸರ್ದ ಚಿ |
ತ್ರವನಂದು ನೋಡಿ ಮುನಿ ಪೇಳ್ದ ಮಾತಂ ಕೇಳಿ |
ಲವಲವಿಕೆವೆತ್ತಂಗಜಾಸ್ತ್ರಗೆಡೆ ಗೊಟ್ಟವನೆ ದಿಟದಿಂದಲಾ ಪೆಣ್ಣನೆ ||
ಅವಲೋಕಿಸುತ್ತೆ ಸಾರಿರ್ಪಾಗಳಾ ತನಿಂ |
ನವಪು ಮೈಸರಕೆಗುರಿಯಪ್ಪು ದರಿದೇಬಗೆವೊ |
ಡವನೀಧರಧರನ ಕಣ್ಮೀಂಗಳವಳಂಗ ಲಾವಣ್ಯ ನದಿಯೊಳೆ ನಲಿದವೈ || ೩೪ ||

ಎಳೆಯಳಂಗಜ ಪಿತನ ನೀಳಚ್ಛವಿಯ ತನುವ |
ನೆಳಸಿನನೆಗಣೆಗರೆವದಿಟ್ಟಿಗುಡಿಯಿಂ ನೋಡು |
ವಳದೊರ್ಮೆ ನಾಣ್ಚಿತಲೆ ವಾಗುವಳದೊರ್ಮ ತನಿಮೋಹರಸದಿಂ ಪುಳಕವ ||
ತಳೆದ ತನ್ನಂಗಮನು ನೋಡುವಳದೊರ್ಮೆ ಸುಖ |
ದೊಳ ಭಾಗದೇಯರಿರುತಿರಲತ್ತ ಭೀಷ್ಮರಾ |
ಗಳಿದೆಲ್ಲಮಂ ಕೇಳಿ ನಾಡೆ ಕೋಪಾಟೋಪದಿಂದೆ ಕಿಡಿಕಿಡಿವೋದನೈ || ೩೫ ||

ಕೂಡಿದಂ ತನ್ನ ಪೆಂಗಿನ ತುರಂಗವನು ಮಿಗೆ |
ನೋಡಿದಂ ರುಗುಮಿಣೆಯ ತಂದೆನೆಸಿತಾಸಿಯುಮ |
ನಾಡಿದಂ ನಡೆಯ ಹೇಳೆನೆ ಮಂತ್ರಿಸೈರಿಸಿಂದಿನದಿನಮನೆಂದು ನೃಪನ ||
ಬೇಡಿದಂ ತದ್ವಾರ್ತೆಯನು ಕೇಳಿ ರೌದ್ರದೊಳು |
ಮೂಡಿದಂ ಶಿಶುಪಾಲನತ್ತಲಿಂ ತೆಲ್ಲಮಂ |
ಮಾಡಿದಂ ಮಾಧವನು ನಾರದನಗೊಡ್ಟಾಟ ವೆಂದೆಂದು ಕೆಲರೆಂದರೈ || ೩೬ ||

ದೇವ ದಾನವರೆನ್ನೊಳಾಂತು ಬದುಕುವರಿಲ್ಲ |
ದಾವನೋ ತನಗಿತ್ತ ತನ್ನಿಕೆಯಳೆಳದೊಯ್ದು |
ಜೀವಿಸುವೆನೆಂದೊಡೆನ್ನಂಬುಳಿಯಗೊಡುವುದೆಯೆಂದು ಶಿಶುಪಾಲಭೂಪ ||
ಆ ವೇಳೆಯೊಳೆದಂಡ ನಡೆಯೆನಲು ಮಂತ್ರಿಗಳ |
ದೇವನೀಗಳು ಪೊತ್ತು ವೋಯ್ತು ನಾಳಿನ ದಿನವೆ |
ಗೋವಳಗೆ ಬದುಕುಂಟೆ ಸೈರಿಸೆಂದಂದು ನಿಲಿಸಿದನು ಪಯಣದ ಭರವನೈ || ೩೭ ||

ಶಿಶುಪಾಲಕನ ಬೀಡಿನೊಳು ಭೀಷ್ಮಪುರದೊಳ |
ರ್ವಿಸುವ ಪಡೆಯೊಳಗಲಭೆ ಪೆರ್ಚಿಕಡಲೆರಡುಘೂ |
ರ್ನಿಸಿ ದಂತಿರಾಗದಲಿ ನಾಲ್ವರಿದನೆಂತು ಗೆಲಿದೆನ್ನನೆಂತೊಯ್ವರೆಂದು ||
ಹಸುಳೆ ನೆರೆ ಬೆದರಿ ಕಣ್ಬನಿಗರೆಯೆ ಕಂಡರಿದು |
ನಸುನಗುತಲಿತ್ತ ನೋಡೆಂದೊಂದು ವಜ್ರಮಂ |
ಪೊಸೆದು ತುದಿಬೆರಳಿಂದ ಪುಡಿಮಾಡಿ ತೋರಲಾಕಾಂತೆ ಮತ್ತಿಂತೆಂದಳು || ೩೮ ||

ಫಲುಗುಣನ ಮೊಗನೋಡುತೆಮ್ಮಣ್ಣ ರುಗುಮಣ |
ಕಲಹದಲಿ ಚೂಣಗೈದದೆ ಮಾಣನಾತನಂ |
ಕೊಲಲೆ ಬೇಡೆನೆ ಕೊಲ್ಲೆವಂಜಬೇಡೆಂದು ಮಾಧವನಭಯಮಂ ಮಾಡಲು ||
ಲಲನೆ ಸಂತಸದಿನಿರೆ ಬಂದುದಾ ಯಾದವರ |
ಬಲವಿಳೆಯೆ ಬೆಸಲೆಯಾದಂತೆ ವಾದ್ಯಧ್ವನಿಗೆ |
ನೆಲನದಿರೆ ವಸುದೇವ ನೃಪಸಹಿತ ಕೃಷ್ಣನಂ ಬಳಸಿ ಬೀಡಂ ಬಿಟ್ಟುದೈ || ೩೯ ||

ಹರಿಯಮನದನುರಾಗಮಂ ರುಗುಮಿಣಿಯ ಮನದ |
ಹರುಷಮಂ ಶಿಶುಪಾಲಕನ ಚಿತ್ತದಳಲುಮಂ |
ಪರಿವರ್ಣಿಸುವೆ ನೆಂದೊಡೆನ್ನಳವೆಯಾಗಳೋ ತಾವರೆಯನಂಟನಿರದೆ ||
ವರುಣದ್ವಿಗುವಾರ್ಧಿಯೊಳು ನೆರೆದನಾ ಶಿಶುಪಾಲ |
ನುರು ತೇಜವೈದೆ ನೀರೊಳು ನೆರೆವೊಲು ನಾಳೆ |
ಹರಿಯರಿಯ ರಕುತದಿಂತಹುದು ನೆಲನೆಂಬಂತೆ ಪಡುಗೆಂಪು ಪಸಿರಿಸಿದುದೈ || ೪೦ ||

ಅಂದಿನಿರುಳಿನಗುರ್ವ ನೇನೆಂಬೆನತ್ತ ಯಮ |
ನಂದನನ ಬೀಡಿನೊಳು ಭೀಷ್ಮರಾ ಪುರದೊಳರ |
ವಿಂದ ನಾಭನ ಪಾಳೆಯದೊಳೀಕ್ಷಿಸುವ ಕಂಗಳ ಹಬ್ಬ ವೆಂದದಿ ||
ಸಂದಣಿಸಿ ಮನ್ನಣೆಯ ವಾವಂತರಾನೆಗಳ |
ನೊಂದಾಗಿ ಘೋಳಾಯಿತರವಾಜೀಗಳನೇಳೆ |
ಯಿಂದೆ ಪಲತೆರನಾದ ಕೈದುಕಾರರು ಕೈದುಗಳನೈದೆ ಪೂಜಿಸಿದರೈ || ೪೧ ||

|| ಸಂಧಿ ೨೫ ಕ್ಕಂ ಮಂಗಳ ಮಹಾ ||