ಸಂಧಿ ೨೫

ಅಸಮಾಯುಧನ ತಂದೆ ಸಂಗ್ರಾಮರಂಗದೊಳು |
ಶಿಶುಪಾಲನಂ ಕೊಂದು ರುಗುಮಿಣಿಗೆ ತಂದೆಯಾ |
ವಸುಧೆಯನೆ ಕೊಟ್ಟು ರುಗುಮಿಣಿದೇವಿಯನು ಮದುವೆ ನಿಂದಾ ಪೊಳಲೊಳಿರ್ದನೈ || ಪಲ್ಲ ||

ಕೇಳು ಮಗಧಾಧೀಶ ಪೂರ್ವಾದ್ರಿಯೆಂಬ ಹರ |
ಭಾಳಾಂಬಕವೆ ತೆರೆದುದೋ ಮೇಣು ರಾತ್ರಿಯನು |
ಕಾಲನೆಂದೆಂಬ ಹೋತೃವೇ ಹೋಮಿರಿದೊಡುಸಿವಕಿಚ್ಚೊ ಪಡುಗಡಲಬಿರ್ದು ||
ನಾಳೋಚಿಸದೆ ಉಪರಿಮಾಂಸುರಜ್ಜುಗಳಿಂದೆ |
ಮೇಲೆಸೆದಳೋ ಮೇಣು ಗನನ ಪಿಡಿಯನೆ ಮೂಡಿದುದು ರವಿ ಬಿಂಬವೈ || ೧ ||

ನೇಸರುದಯಿಸದ ಮುನ್ನವೆ ಚಾತುರಂಗ ಬಲ |
ವಾಸುರದೆ ಕೈದುಗೊಂಡುದು ರನ್ನ ದೇರ್ಗಳನಿ |
ಳೇಸರಾರೋಹಿಸಿದಳೆತ್ತಲುಂ ಸಮರಲಂಪಟರಿರಲು ಭೀಷ್ಮ ತನುಜ ||
ಭ್ಯಾಸವನು ತೋರುತ್ತ ವೀರರಸವನು ತಳೆದು |
ರೋಷಮಿಗೆ ಮಣಿರಥದಿ ಬಂದು ರುಗುಮಿಣದೇವ ತಂದೆಗಂಮಿಂತೆಂದನೈ || ೨ ||

ಕಡಲೇಳನೊಡಗಲಿಸಲೋ ಚಂದ್ರ ಸೂರ್ಯರನು |
ಪೊಡವಿಗಿಳುಪಲೊ ಕುಗೋರ್ವೀದರಂಗಳ ನೆತ್ತಿ |
ಪೊಡೆ ಚೆಂಡನಾಡಲೋ ದಿಗ್ಗಜಂಗಳನಿಗ್ಗವಂಗಿತ್ತು ತಂದಿರಿಸಲೊ ||
ಕೊಡುಬೆಸನನೀ ರಿಪುಗಳಂ ಗೆಲುವುದರಿದೆ ಕೇ |
ಳ್ಮಧ್ವ ನಡ್ದ ಬಿದ್ದೊಡಂ ಕೈಕೊಳ್ಳದಾರ್ದಟ್ಟಿ |
ಕಡಿಖಂಡಮಂ ಮಾಡದಿರ್ದೊಡಿದು ಭುಜವೆ ನೋಡೆಂದು ಘೂರ್ಣಿಸಿದನೈ || ೩ ||

ಅತ್ತಲಾ ಶಿಶುಪಾಲ ಸಮಕಟ್ಟಿ ಬರೆಮಾಡಿ |
ತೆತ್ತಲುಂ ಸುರಚಾಪಗಪಗಲುಳುಕು ಬೀಳ್ದು ವಿಳೆ |
ನೆತ್ತರೋಸರಿದವು ಗಜತುರಗಗಳ ಕಂಗಳಲಿ ನೆಲನಡುಗಿದುದುವಹಿಲದಿ ||
ಎತ್ತಿ ಝಳಪಿಸಿಮಂಡಲಾಗ್ರ ತುಂಡಾಯ್ತು ತನ |
ಗೆತ್ತಿದಾ ಸತ್ತಿಗೆಯೆ ಬೀಳ್ದು ಕಳಸವು ಮುರಿದು |
ದೊತ್ತರಿಪ ಶಕುನ ಹಲವಾಗೆ ನಿಜರೋಷವಿಮ್ಮಡಿಸಿ ಯಿಂತೆಂದನೈ || ೪ ||

ಎನ್ನಭುಜಬಲವೆನ್ನ ಧೈರ್ಯವೆನ್ನಯ ವಿದ್ಯೆ |
ಯೆನ್ನ ಚತುರಂಗಬಲವೇಂ ಕುಂದೆ ನೋಡಲಿಂ |
ದೆನ್ನ ಮುಂದಪಶಕುವಾದಡಿವು ಕಡೆಗುಮೇ ಬಾಳ್ವರಾರೆನ್ನೊಳಾಂತ ||
ಮುನ್ನಮೆನಗಿತ್ತ ಪೆಣ್ಣೊಯ್ದವನ ಗೋಣನರಿ |
ದೆನ್ನ ಮನದಳಲಾರುವನ್ನವಿಕ್ಕದೆ ಸುಮ್ಮ |
ನಿನ್ನೆಡೆಯೊಳಾಂಬಡೆನೆನುತ್ತೆ ನಡೆಯಲ್ಕೆ ಕಲಿ ಯಮ ಭೂಪನಿಂತೆಂದನೈ || ೫ ||

ಬಿಡುಬಿಡಪಶಕುನವಿಂಗಳ ಗೈವುವೈದೆ ಪೇ |
ರಡವಿಯನು ಕಾಳ್ಗಿಚ್ಚು ಕವಿದು ಸುಡುವಾಗಳಾ |
ಎಡೆಯಲ್ಲಿ ವಾಯಸಂ ಕಟ್ಟಿದೊಡೆ ಸುಡದೆ ಮಾಣ್ಪದೆ ಕರುತ್ತಾನಿರಿದೊಡೆ ||
ಮಡಿಯದಿರಿ ಮಹಿತರೆಂದಾಣೆಯಿಡ ಬಲ್ಲುದೇ |
ಪಡಿಮಾತದೇನೊ ತರುವರಿ ವಿಷ್ಣುವೆನಗಿದರೆ |
ತೊಡಬೆ ವಸುದೇವನಡಗನು ಚೆಲ್ಲಿ ಪರ್ದಿಂಗೆ ಬಿರ್ದನಿಕ್ಕುವನೆಂದನೈ || ೬ ||

ನೆರೆದುನಿತ್ತಲು ನಿಖಿಲ ಸಾಮಂತ ಮಡಲೇ |
ಶ್ವರ ಮಕುಟಬದ್ಧ ನಾಯಕ ತಿಂಥಿಣೀ ಪೆಂಪಿ |
ನರದಂಗಳೊಳು ಪಾರ್ಥ ವಸುದೇವ ಸಾತ್ವಕಿಯು ತೊಳಬಾಳುತೋನೇವುತ ||
ಗಿರಿಧರನ ಬಳಸಿದರು ಮುನ್ನಮೇ ಬೀರಸಿಂ |
ಗರವನಚ್ಚುತನಾಂತು ತರುಣಿ ರುಗುಮಿಣಿವೆರಸಿ |
ವರವಜ್ರಮಯ ರಥವನಾರೋಹಿಸಿದ್ದನಾ ಸಮಯದೊಳಗೇನೆಂಬೆನೈ || ೭ ||

ಶಿಶುಪಾಲನಾಗಳಾಹವ ಭೇರಿಯಂ ಪೊಯಿಸೆ |
ದೆಸೆದೆಸೆಗೆ ಶರನಿಧಿಯ ತಾಯ್ಮಳಲು ಸೂಸಿತ |
ರ್ವಿಸಿ ಭೀಷ್ಮ ತೆರೆಪಿಲ್ಲೆನಿಸಿ ಧೂಳಿಯಾ |
ಗಸಕೆ ಗವಸಣಿಗೆಯಾದುದು ಸುರಾಸುರರು ಪಸ |
ರಿಸಲು ಸಂಗರ ಅಂಗಣಕೆ ಬಂದೊಡ್ಡಿ ನಿಲೆ ಯಾದವರು ಮೊದಲೆನೆಲೆಗೊಂಡರೈ || ೮ ||

ಬಿಸಸನದೊಳಾರ್ವಲಂ ಕದನಮಂ ಮಸೆಯೆ ಮಿಗೆ |
ಮಸೆದುವಾ ಭೂತಕೋಟಿಗಳೈದೆ ದಾಡೆಗಳ |
ನಸಮ ಭುಜಬಲರ ಯುದ್ಧವನೀಕ್ಷಿಸುವರೆ ಬಗೆದಂದು ಮೇಲಾಗಸದೊಳು ||
ಬಿಸಜ ಸಂಭವ ಪುತ್ರನಮರನಿಚಯದ ಕೂಡೆ |
ನಸು ನಗುತ ನಿಂದನಾ ಚಾತುರಂಗ ಬಳಕ್ಕೆ |
ವಿಷಯ ಗಾಳಿಯ ತೆರದಿ ಶಿಶುಪಾಲ ಗೋಪಾಲರೈದೆ ಕೈವೀಸಲೊಡನೆ || ೯ ||

ಭರದಿಂದಿದಿರ್ಚಿದಿರ್ಚೋಡೋಡೆನುತ್ತೆ ಭೀ |
ಕರಿಸಿ ಪೊಡೆಕಡಿಕುತ್ತು ತರೆಯೆಂಬ ಬೊಬ್ಬೆಯಂ |
ದಿರದೆ ಬೀಲ್ವಡೆಯೊಳಡನಾಯಿತಬ್ಬರ ದಡ್ಡನಾಯಿತರೊಡನೆ ||
ತುರಗಗಳವಶ್ವ ಸಂಕುಳದೊಡನೆ ಗಜಘಟೆಯ |
ಕರಿಘಟೆಯೊಳುರು ರಥಾವಳಿ ರಥಸಮೂಹದೊಳು |
ಭರದಿಂದೆ ತತ್ತು ಕೈಮಾಡಿದುದು ಕೊಂಬು ಚಂಬಕತಾಳೆ ಚೀರುತಿರಲೈ || ೧೦ ||

ಆಗಳೀರ್ವಳದೊಳೆಡೆ ವಿಡದೆ ಸುವಕಣೆಮುಗಿಲು |
ಮೇಗೊಡ್ಡಿ ಗರಿಗಾಳಿ ಮಳೆಗಾಳಿ ಸರಬೇಳಗು |
ಬೇಗದಿಂ ಸಂಚಳಿಪ ಕುಡಿಮಿಂಚು ಮಾರ್ಗಣದ ಮೊರಹುವಬ್ಬರದ ಮೊಳಗು ||
ತಾಗಿಸರ ಸರವುದುರ್ವ ಕಿಡಿಮಿಂಚುಬುಳು ಬೆಳ್ಳ |
ನಾಗಿ ಸುರಿವೆಲುವಾಲಿ ಕಲುಗಳಿಂತತಿ ಭಯದ |
ಮಾಗೆ ಝೋರೆನೆ ಕರೆದ ರಕ್ತಧಾರಾವೃಷ್ಟಿಯಾಯ್ತು ಸಂಗರ ಮಹಿಯೊಳು || ೧೧ ||

ಧರಣಿಗಿಳಿದರ್ಕ ಬಿಂಬಂಗಳಗಣಿತವಾಗಿ |
ತರತರದಿ ತಂತಮ್ಮೊಳುರ್ಕಿನಿಂ ಪೊಣರ್ವುವೆನ |
ಲುರಿಯುಗಳ್ವ ಬಣ್ಣವರಿಗೆಗಳುಮಂ ಪೊಳೆವ ಕಕ್ಕಡೆ ಖಡುಗಕತ್ತಿಗಳನು ||
ಭರದಿನನು ಕೈದು ಪೊಯ್ದಾಡಿದರು ತೊಡೆಯುವಿದು |
ಕರವರಿದು ಗೋಣ್ಬರಿದು ತೋಳ್ಕಡಿದು ಬಸುರೊಡೆದು |
ಕರುಳುರ್ಚಿ ಶಿರಪಾರಿ ಕೆಡದರರೆ ಗಳಿಗೆಯೊಳು ಪರಿವರುಣ ಜಲಧಿಯೊಳಗೆ || ೧೨ ||

ಪಿರಿದೆಸೆವ ಲೋಹವಕ್ಕರೆಯ ಹಯತತಿಯನಂ |
ದಿರದೈದು ಧಾರೆಯಿಂದೀರೈದು ಗತಿಯೊಳ |
ಚ್ಚರಿಪೆಚ್ಚೆ ಕೆಂದೂಳಿ ಬಾನಡರೆ ಖುರಪುಟಂ ಫಣಿಲೋಕಮಂ ಬೆದರಿಸೆ ||
ಭರದೆಸೆವ ಹೊಗರಂಬಿನಿಂದಿಡುವ ಸೆಲ್ಲೆಯದಿ |
ಶಿರವುಡಿಯೆ ಪೊಡೆವಲಾಡಿಯನಿರಿವ ಭಲ್ಲೆಯದಿ |
ಕರವೆತ್ತಿ ಕಡಿವ ಖಂಡೆಯದಿಂದೆ ಕಾದಿದರು ಗೋಳಾಯ್ತರೆಡೆಯೊಳೈಸೆ || ೧೩ ||

ಕರಮುಕ್ತವಾಯಂತ್ರ ಮುಕ್ತಮುಕ್ತಾಮುಕ್ತ |

ೞರುತೆರದ ಮೂಡೆರದ ಕೈದುಕಾರರು ಸಿಂಗ |
ವರಿಗಳೆನೆ ಕಡುಕೆಯಿದು ಹೊಣಿಸುಪಚಾರಿಸುತೆ ಮಾಗತಿ[ನಿ] ಚಿತ್ರಗತಿಯಿಂ ||
ತರದಿ ದಂಡಾದಂಡಿ ಕೂಡೆ ಖಡ್ಗಾಖಡ್ಗಿ |
ಭರದ ಮುಷ್ಟಾಮುಷ್ಟಿ ಕೂಡೆ ಕೇಶಾಕೇಶಿ |
ಪರಿದು ಹಾಣಾಹಾಣಿಯಂತೆ ಹೆಲ್ಲಾಹೆಲ್ಲಿ ಯುದ್ಧಮಾದುದು ಕೆಡೆದುದೈ || ೧೪ ||

ಇದುವೆಸುವ ಕಣೆನೋಡಲಿದು ತಿವಿವಸುರಗಿ ಮ |
ತ್ತಿದು ಕಡಿವ ಖಡುಗಮಿದು ಬಿಸುವುಬ್ಬಣ ನನಿಕರ |
ವಿದುಪಾಯ್ವ ಸಬಳವಿದು ತಿರ್ರತಿರ್ರನೆ ತಿರುಗಿ ಭರದಿಡುವ ಪಾರು … ||
…………………………….ಲೋಳಿ |
ಇದುವೆತ್ತಿ ಪೊಡೆವಗದೆ ಇದುಹಣಿವ ಲವುಡಿತಾ |
ನಿದುವಿರಿವ ಭಲ್ಲೆಯವದೆಂದು ಬಗೆಯದೆ ಕಾದಿರಾವುತರು ಪಡವಿಟ್ಟುದೈ || ೧೫ ||

ನೀಲಾದ್ರಿ ಕೋಟಿಗಳು ಕೈಕಾಲ್ಗಳಂ ಪಡೆದು |
ಕಾಳಗವನೈದೆ ಮಾಡುವವೊ ಎನೆ ಕರಿಘಟಾ |
ಜಾಲಗಳು ಜೋಡಿಸುವ ಜೋದರಿಂದಿದಿರಾಗಿ ಕೈಯಿಕ್ಕಿ ಕೋಡುಗಟ್ಟಿ ||
ಭೀಳಾಸಿ ಮುಸುಲದೇರಿಂ ಜೋದರಸುಗೆಯಿಂ |
ಸೂಳ ಕಕ್ಕಡೆಗಳಿಡಿಲಾ ನೆತ್ತರಂ ಕಾರಿ |
ಕಾಲುಡಿದು ಕೈ ಹರಿದು ಕೋಡಳಿದು ಕೆಡದನಾ ಸಂಗ್ರಾಮ ಭೂಮಿಯೊಳಗೈ || ೧೬ ||

ಮಿಳಿರ್ವ ಪಳಯಿಗೆ ಸಿಂಧ ಧವಲಾತಪತ್ರ ಸಂ |
ಚಳಿಪ ಚಾಮರನಿಚಯದಿಂದೆ ಸಿಂಗರಿಸಿರ್ದ |
ಥಳಥಳಿಪ ಮಣಿರಥಾವಳಿಗಳು ಪಳಂಚಿದವು ಜೋಡಿಸುವ ಸಾರಥಿಗಳಿಂ ||
ತಳಿರ್ವಹಯಚಯದಿಂದೆ ರಾಜಪುತ್ರರು ತಮ್ಮೊ |
ಳಳವು ಮಿಗೆ ಕೈಮಾಡಿದರು ಬಿಲ್ಲ ಬಿಲ್ಮೆಯಿಂ |
ತೊಳಪಖಡುಗದಕೊಂತ ಸಬಳ ಗದೆ ಶಕ್ತಿಗಳ ಮಸಕದಲಿ ಬರೆಗೈದರೈ || ೧೭ ||

ಸರಳಮಳೆಗಳ ಕರೆದು ಕೊಡೆಗುಡಿಗಳನು ಕಡಿದು |
ತುರಗಚಯವನು ಕೆಡಪಿ ಸಾರಥಿಯನಿಕ್ಕಿ ಬಿ |
ತ್ತರದ ತೇರಂನುಗ್ಗುಮಾಡಿನವರತುನಮಯ ಮಕುಟವನು ನುಚ್ಚುಗುಟ್ಟಿ ||
ಕರವಾಳನನುಗೈದು ಧರೆಗಿಳಿದು ಖಳ್ಕೃತಾ |
ದೊರೆವಡೆಯ ತಳ್ತು ಹಾಣಾಹಾಣಿಯಿಂಕಾದಿ |
ಹರಿಯ ರಥಿಕರು ಮುರಿಯಲಿಕ್ಕಿದರು ರಿಪುವರೂಥಂಗಳನು ಸಂಗರದೊಳೈ || ೧೮ ||

ಅತ್ತಲಾ ಬಲವಂಕದೊಳು ವೇಣಾಧಾರಿನೃಪ |
ನೊತ್ತಿಕಾದುವ ಕೂರ್ಪನಿಕ್ಷಿಸುವ ಕೊಲೆಲೆ ಬಾ |
ಯೆತ್ತಿ ಗಜರುವ ಕಾಲನೆನೆ ಗರ್ಜಿಸುತ್ತೆ ಕಾಲಾಳನಾಳಿಂದಲಿಟ್ಟು |
ಬಿತ್ತರದ ಕುದುರೆಗಳಶ್ವಂಗಳಿಂ ಬಡಿದು |
ಮತ್ತಗಜ ಘಟೆಗಳಿಂದೊರಸಿ ಮತ್ತೇಭಮಂ |
ಮತ್ತೆ ಬಹುತೇರ್ಗಳಿಂ ಪೊಯ್ದೇಕ ಕಂಡಳಂ ನೆರೆಕೊಂದನೈ || ೧೯ ||

ಸಿಡಿಲುಗ್ರವೈದೆ ಸಿಡಿಲಿಂದೆ ವಡಬಾಗ್ನಿ ತಾಂ |
ಕಡುತೀವ್ರವಾ ಸಿಡಿಲಿನಿಂದೆ ವಡಬಾಗ್ನಿಯಿಂ |
ಮೃಡನ ಕಣ್ಗಿಚ್ಚು ತೀಕ್ಷ್ಣಂ ಸಿಡಿಲಿನಿಂದೆವಡಬಾಗ್ನಿಯಿಂ ಪರಿಭಾವಿಸೆ ||
ಮೃಡನ ಕಣ್ಗಿಚ್ಚೆಂದೆ ಕಡೆಯೆ ಸಿರಿ ನಿಷ್ಠುರಂ |
ಸಿಡಿಲಿಂದೆ ವಡಬಾಗ್ನಿಯಿಂ ಮೃಡನ ಕಣ್ಗಿಚ್ಚಿ |
ನೆಡೆವಿಡದ ಕಡೆಯಶಿಖಿಯಂದಧಿಕವಾಯ್ತು ಶೀರಾಯುಧನ ಕಾಯ್ವಿನುರಿಯೈ || ೨೦ ||

ಅದೆ ಬಂದನಾ ಬಂದನಿದೆಬಂದನಿದೆಬಂದ |
ನದದೆಬಂದಂ ಬಂದನಿರಿದನುರಿತರಿದನಿ |
ತ್ತಿದಿವೆ ಬಂದಂ ಹೋಗನದೆಬಂದನೊತ್ತಿಪೊಡೆದಂ ಬಡಿದ ನಿಟ್ಟೊರಸಿದಂ |
ಕದನದೊಳು ವೀರಭದ್ರನೊಕಾಲ ಭೈರವನೊ |
ಅದಯೆ ಬಲಭದ್ರನೋ ಲಯಕಾಲ ರುದ್ರನೋ |
ಅದಯನೆಂದೋಡಿ ಕಾಡಂ ಕೂಡಿ ಹೇಡಿ ಪಡೆ ನಾಡೆ ನಗಿಸಿತು ಸುರರನೈ || ೨೧ ||

ಪರ ಬಲಾಂತಕ ಪಾರ್ಥನಿಟ್ಟಲೆಡವಂಕದಲಿ |
ನೆರೆದು ಬಂದೋಡಿದಾ ಭೀಷ್ಮಭೂಪನ ಬಲವ |
ನರವರಿಸದಿಸುವಲ್ಲಿ ಕರ್ಣಾಂತಪೂರಿಸಿದ ತಿರುವ ತೊಲಗದ ಕೈಗಳು ||
ಸರಳ ಮೂಡಿಗೆಯವಿದೆ ತೊಡುವ ಬೀಡಿಂ ತಂದು |
ಪರಿಭಾವಿಸಲು ಬಾರದಾಗಸಕೆ ಚೆಂಡೆನಿಸಿ |
ಯರಿ ಶಿರಗಳಾಡುತಿವೆಯೆಂದು ನೋಡುವ ಸುರರೆ ಬೆರಗಾಗಿ ಪೂಣ್ದೆಚ್ಚನೈ || ೨೨ ||

ಒಸೆದು ಜವನಿಟ್ಟ ಬಿಸುನೆತ್ತರರವಟ್ಟಿಗೈ |
ದುಸುರಲೇನಡಗಿ ನಾವಾರಿತಾನೆಂದು ಸಂ |
ತಸದೇರ ಬಾಯೆ ಬಾಯೊಡ್ಡಿ ರಕ್ತವನೀಂಟಿ ತನಿಯಡಗನಡಸಿತಿಂದು ||
ಬಸುರುನೆರೆ ಬೀಗೆ ಡರ್ರ‍ನೆ ತೇಗಿ ಬಾಳು ಬಾ |
ಳಸುರಾರಿ ಜಯಸು ಬಲ ಗೆಲು ಪಾರ್ಥಯೆಂದು ಸಂ |
ತಸದಿ ರಣಭೂಮಿಯೊಳು ಕುಣಿದಾಡುತಿರ್ದನಾ ಮರುಳು ಪಡೆತಂತಂದಲೈ || ೨೩ ||

ಬಲವಿಂತು ನುಗ್ಗಾಗೆ ಕಂಡು ಕಡುಗಾಯ್ಪಿನಿಂ |
ಬಲನೊಳಾಂತಂ ವೇಣುಧಾರಿ ಭೀಷ್ಮಂ ಕಿನಿಸಿ |
ಕಲಿಧನಂಜಯನೊಡನೆ ಸೆಣಸಿದನು ಗರಿಸನ್ನೆಗೆಯ್ದು ರುಗುಮಿಣ ಭೂವರ ||
ಮಲೆದು ಸಾತ್ವಕಿಯೊಳಿದಿರಾದ ನತಿರೌದ್ರದಿಂ |
ಕೊಲಲಿಳಿದ ಜವನಂತೆ ವಸುದೇವ ಭೂಪನೊಳು
ಕಲಿಜವಂ ತತ್ತನಾ ಶಿಶುಪಾಲನಚ್ಚುತನ ಹೊರಗೆ ನೂಂಕಿದರಥವನೈ || ೨೪ ||

ಕೆರಳಿ ಮದಗಜವೈದೆ ಸೆಣಸಲ್ಕೆ ಸಿಂಗಮಂ |
ಕರೆವಂತೆ ಕಿಸುಗಣ್ಚಿ ಮೇಲರಿಯದರೆವಾವು |
ಗರುಡನಂ ಯುದ್ಧಕ್ಕೆ ಕರೆವಂತೆ ಹಸಿದು ಮಸಗಿದಮಾರಿಯನು ಕೊಬ್ಬಿನಿಂ ||
ಮರುಳನುರೆ ಕೈ ಬೀಸಿ ಕರೆವಂತೆ ಶಿಶುಪಾಲ |
ನುರವಣಿಸಿ ಕೈವೀಸಿ ಕರದನೇವೇಳ್ವೆ ನಗ |
ಧರನನಾಹವ ತೂರ್ಯವುಲಿಯೆ ಕೊಲ್ಪರಿವಳತೆಯಲಿ ನಿಂದನೈ || ೨೫ ||

ಕೇಳೆಲವೊ ಖೂಳ ಗೊಲ್ಲರ ಪಿರಿಯ ಹೇಳಿ ಕ |
ಟ್ಟಾಳಹುದು ಭಳರೆ ಗೋವೃಂದವನು ಕಾವಲ್ಲಿ |
ಹೇಳಲೇನವರ ಬಾಲವನೊತ್ತಿ ಮುರಿದು ಜಡಿದಂಜಿಸುವ ಕಡುಗಲಿಯಲೆ ||
ಆಳಿಯಲ್ಲವರ ಹಿಂದುಂ ಹಿಂದನೇ ಹರಿದು |
ಹಾಳೂರ ಹೊಲದ ಕಾಲಾಟದಗ್ಗಳನಹುದು |
ಕಾಳಗವೆ ನಿನಗೆಮ್ಮೊಳೆಂದು ರೋಡಾಡಿ ಮತ್ತಿಂತೆಂದನಾ ಭೂಪನೈ || ೨೬ ||

ಪಿಡಿಬಿಲ್ಲನೆಲೆ ಗೋವ ತೊಡುನಿನ್ನ ಶರವ ನೀಂ |
ಗಿಡುಮರದ ಹೊದರೊಳೆಡೆಯಾಡುತಿಹ ಹಕ್ಕಿಗಳ |
ಗಡಣವನು ತಟ್ಟುರ್ಚಲೆಸುವ ಬಲು ಬಿಲುಗಾರನಹುದಹುದು ನಿನ್ನಧಟನು |
ಬಿಡದೆ ಕೊಂಡಾಡುವರು ಕರುಗಾಹಿ ನಿನ್ನ ಸಂ |
ಗಡಿಗರೆಲ್ಲರು ನಿನ್ನ ಮಸಿವಣ್ಣದೀ ಚೆಲುವಿ |
ನೆಡೆಗೆ ಸೋಲ್ವರು ಗೊಲ್ಲತಿಯರು ಮೂಕೊರತಿ ಮೋಟಗೆ ಮೋಹಿಸುವ ತೆರದೊಳೈ || ೨೭ ||

ಎನೆ ನಗುತ ಶಾಂರ್ಙ್ಞಮಂ ಶಾಂಙಿತಳುವದೆ ಪಿಡಿಯೆ |
ಕಿನಿಸುದಳೆಯದೆ ತಿರುವನೆತ್ತಿ ಕೆಲಗೂರಿ ಸು
ಮ್ಮನೆ ನಿಂದು ಕೂರ್ಗಣೆಯನೋರೆ ಗಣ್ಣಿಂತಿರ್ದಿ ನೇವರಿಸಿ ತಿರುಹುತಿರಲು ||
ಘನ ನಾದದಂತೆ ಘರ್ಜಿಸಿ ಕಂಡು ಶಿಶುಪಾಲ |
ನನುವರದೊಳೊಡ್ಡಿ ನಿಂದೆಲಸರಿಯದಿಂತು ಕೆ |
ಮ್ಮನೆ ನಿಂದು ನೋಳ್ವಪರಿ ಲೇಸು ಲೇಸೈ ನಿನ್ನ ವೀರವೇನಾಯ್ತೆಂದನೈ || ೨೮ ||

ಶಿಶುವೆಂದು ಮೊಲೆಯೂಡಬಂದ ಪೂತನಿಯೊಡಲ |
ಬಿಸಿ ನೆತ್ತರಂ ಪಾತಕನೆ ಬಂದವಾ |
ಯಸದ ಕೊರಳೊತ್ತಿದೊಡೆ ಕತ್ತೆಯಂ ಪೊಯ್ದೊಡೈತಹ ಬಂಡಿಯನು ಮುರಿದಡೆ ||
ಹೊಸಹಯವನೊಂದು ಪೆಟ್ಟಿಂ ತಿವಿದು ಮೆಲ್ಲನೆ |
ಬ್ಬಸಗೊಳಿಸಿದಡೆ ಕಾಡಕೋಣನಂದದಲಿ ಸೊ |
ಕ್ಕಸಿಯ ಮುಳುಮತ್ತಿಗಳನೊರಸಿದೊಡೆ ಸಂಗರಕೆ ವೀರನೇ ನೀನೆಂದನೈ || ೨೯ ||

ಹಳ್ಳದೊಳಗೊಳ್ಳೆಯನು ತುಳಿದು ಮತ್ತೊಂದು ಪೇ |
ರೊಳ್ಳೆಯಂ ನೆಮ್ಮೆಗುಳ್ಳೆಯನೂದಿ ಸಂಗಡದಿ |
ಜಳ್ಳೆ ಬಿಲ್ಲಿಲಿತೆಗೆದೊಡಾವೊ ಹುಲುಮೊರಡಿಯಂ ಕಿತ್ತು ಕೊಡೆವಿಡಿದು ನಿನ್ನ ||
ಹಳ್ಳಿ ಗೊಲ್ಲರು ಮೆಚ್ಚಿ ಕರುವಕಾದೊಡೆಕೂರ |
ಉಳ್ಳವೀರನೆ ದಿಟದಿ ಕೊಳಗುಳಕೆ ನೀನು ನಿ |
ನ್ನಳ್ಳೆಗಳನುರೆ ತರಿದು ಕುಣಿವ ಭೂತಾವಳಿಗೆ ನೆತ್ತರಂಕುಡಿಯಿಸುವನೈ || ೩೦ ||

ತಾಳಜಂಘಿನಿಯೆಂಬ ಖೂಳೆಯೋಡಿದ ಬರಿಯ |
ತಾಳಮರನಂ ಮುರಿದೊಡತ್ತ ಮತ್ತೊರ್ಮೆ ಹಳಿ |
ಗೂಳಿಯ ಪೆಳರು ಗೊಳಿಸಿದಡೆ ಕೆಸರಂಕಕಾರರನಿಕ್ಕಿದೊಡೆ ಕಂಸನ ||
ಜಾಳಾನೆಯಂ ಕೆಡಹಿದೊಡೆ ಮಹಾದ್ಭುತವಾಯ್ತೆ |
ಹೇಳಲರಿದಮ್ಮಮ್ಮ ನೀಂ ಮಹಾವೀರನೈ |
ಆಳಿಯಲ್ಲಲ್ಲ ಕೋಲಂ ತೋಟ್ಟೊಡರಿಯ ಬಹುದೆಂದು ಘರ್ಜಿಸಿದನವನೈ || ೩೧ ||

ಹಲವು ಮಾತೇನೊಂದೆ ಸಾಲದೇ ಪಾತಕದ |
ನೆಲೆನಿನಗೆ ತೋಳ್ತೋರವಾಯ್ತೆಂದು ತಾಯನ |
ಪ್ಪಲುಮನಂದರಬಹುದೆ ನಿನ್ನಧಟು ನಿನ್ನಮಾವನಮೇಲೆ ಸಲೆಸಂದುವೆ ||
ಕುಲಕೆ ಕೇಡಾಯಿತುಕೊಡಲಿಯ ಕಾವೆನಿಪಂತೆ |
ಚಲಿಸದಾ ತಾಯಕೂಡಣ ತಾಯ ಕೊಂದೆಯೀ |
ಕೊಲೆಯ ಹೊಲೆನೆಲನಿಪ್ಪನಂ ಹೋಹುದೆ ದುರಾತ್ಮಕನೆ ಹೊರಸಾರೆಂದನೈ || ೩೨ ||

ಭೂತು ಮಸಗಿದ ತೆರದಿ ನಿಂತು ಕಾಳ್ಗೆಡವುತಿ |
ರ್ಪಾತನೊಳು ಕೈ ಮಾಡದಿರ್ದನಾ ನಗಧರನು |
ನೀತಿಯನು ಭಾವಿಸುತ ಖಳನ ಕೆಡುನುಡಿಗಳಂ ಗಣಿಸುತ್ತೆ ಮುಮ್ಮಮವನ ||
ಮಾತೆಗಿತ್ತಾ ಭಾಷೆಗುತ್ತರಾಯಿಗಳೆಂದು |
ನಾ ತೆರನೆ ಪೇಳ್ವೆನಾ ಶಿಶುಪಾಲ ಭೂವರನು |
ಜಾತಕಾಲದೊಳೆ ನಿಟಿಲಾಕ್ಷಿಯನು ಪಡೆದುದೈಸಿರ್ದನದುಭುತವಾಗಲು || ೩೩ ||

ನೊಸಲಕಣ್ಣೀಶ್ವರನೆ ಕಪಟದಿಂದಿಳೆಗಿಳಿದು |
ಶಿಶುರೂಪಿನಿಂದಿರ್ದನೆಂಬಂತಿರರ್ವಿಸುವ |
ಹಸುಳೆಯಂ ಕಂಡು ಪಿರಿದಚ್ಚರಿಯನಾಂತುತಾಯದ್ರಿಯಂ ಯಮರಾಜನು ||
ಸಸಿನರಿವ ನೈಮಿತ್ತಿಕನಿದೇನರುಪಿಮೆನ |
ಲುಸುರಿದರು ತದೃಷ್ಟಿಯಾವನೋರ್ವನನು ನಿ |
ಟ್ಟಿಸುತದೃಶ್ಯಮದಪ್ಪುದಾತನಿಂದೀತಂಗೆ ಪಂಚತ್ವವಹುದೆಂದರೈ || ೩೪ ||

ಅವರ ನುಡಿಗೇಳ್ದೊಂದು ದಿನವದ್ರಿಯಂಕೂಡೆ |
ಜವನುಮಾಸುತನು ಸಹ ವಸುದೇವ ಭೂಪನೊ |
ಪ್ಪುವ ಮನೆಗೆ ಪೋಗಿಕೌಸ್ತುಭಧರನನಾಲೋಕಿಪುದು ಮಾತನಧಿಕನಯನ ||
ತವೆಮಾಯವಾದುದದುಗಂಡದ್ರಿಯರಿದು ದಾ |
ನವರಿಪುವಿನಡಿಗೆರಗಿ ಮತ್ಪುತ್ರನಪರಾಧ |
ನಿವಹಮಂ ಮಾಡಿದೊಡೆ ಬಗೆಯದಾತನ ಹರಣಮಂ ಕಾವುದೆಂದೆರೆದಳೈ || ೩೫ ||

ಎಂದಾದೊಡಂ ನಿಮ್ಮಕಂದನೆಮ್ಮೊಳು ತಪ್ಪಿ |
ದಂದಾಂ ಶತಾಪರಾಧವನು ಸೈರಿಸುವೆನೆಂ |
ದಂದಮನೆ ಪಿಡಿದುನೂರಮ್ಮೀರಿ ಕೆಡೆನುಡಿಗಳಧಿಕವಪ್ಪನ್ನವಿರ್ದ ||
ನಂದಗೋಪಿಯ ಕಂದನಿದು ಕಾರಣಂ ಕೂಡೆ |
ಕುಂದದದ್ರಿಯ ಪುತ್ರನಳಲೆ ಬಳ್ಗಿಸಿಕೋಪ |
ದಿಂದವಧಿಯಂ ಮೀರಿ ಬೈದಂತುಮಲ್ಲದೆಯುಮಾರ್ದೆಚ್ಚನಚ್ಚುತನನು || ೩೬ ||

ಎಸಲದಂ ಕಂಡು ಶಾರ್ಙ್ಗವಶಾರ್ಙಿಜೇವೊಡೆಯೆ |
ದೆಸೆ ಕಂಪಿಸಿದುದು ಗಿರಿಗಳು ಚೆಂಡ ಬಡಿದಂತೆ |
ವಸುಧೆಕಾಕಾಶದೆಡೆಯಾಡುತಿರ್ದವು ಬರ್ವ ಸರಳನಂಬಿಂದೆ ಕಡಿದು ||
ಹೊಸಮನೆಯ ಕೂರಂಬನೆಚ್ಚೊಡೇವೇಳ್ವೆನಾ |
ಗಸವೈದದೆನೆ ಬರಲು ಸರಳ ಪೇರ್ವಳೆಯನಾ |
ಶಿಶುಪಾಲನೆಚ್ಚು ಬರಿಕೆಯಿದು ಬೊಬ್ಬಿರಿದನಾಯೆನೆ ನೋಡುವಮರಪಡೆಯೈ || ೩೭ ||

ಶಿಶುಪಾಲ ನೆಚ್ಚಗ್ನಿ ಬಾಣಮಂ ಜಳ್ಳ ಸರ |
ವಿಸರದಿಂ ಸರ್ಪಾಸ್ತ್ರಮಂ ಗರುಡ ಬಾಣದಿಂ |
ಪಸಿರಿಸುವ ಗಿರಿವಿಷಕಮಂ ವಜ್ರನಾರಾಚದಿಂದೆಚ್ಚು ವೈಕುಂಠನು ||
ಮಸದ ಕಣೆಯಿಂಬೈದ ಬಾಯಂಪರಿಯಲೆಚ್ಚು |
ವಸುಧೆಗಿಳುಪಿದನವನ ಮಣಿಮಕುಟವೆರಸಿ ರಂ |
ಜಿಸುವ ಶಿರಮಂ ಪರಿಸಬೋಳೈಯಿಂದೆಸೆಯನಳ್ಳಿರಿದು ಜಯಪಟಹವು || ೩೮ ||

ನಲಿದುದು ನಾರದನೈದೆ ವೀಣೆಯನು ಬಾಜಿಸಿದ |
ನೊಲಿದು ಪೂಮಳೆ ಗರೆದರಮರರಚ್ಚುತಗೆ ಕಡು |
ಮುಳಿದಯಮನಂತೆ ಯಮನಿರಿದಾಡಿ ಯಮಪುರಿಗೆ ಪೋದವಸುದೇವನಿಂದ ||
ಬಲದೇವನೊಳು ವೇಣುಧಾರಿಯೆಚ್ಚಾಡಿ ಸುರ |
ಲಲನೆಯರಪ್ಪಿದನು ಭೀಷ್ಮರಾ ಪಾರ್ಥನೊಳು |
ಕಲಹವನು ನೆರೆಮಾಡಿ ನಾಕನಿಳಯವ ಪೊಕ್ಕನವನೀಶ ಕೇಳೆಂದನೈ || ೩೯ ||

ಕಲಿ ರುಗುಮಣನು ಸಾತ್ವಕಿಯಳೊತ್ತಿ ಕಾದಿದೋ |
ರ್ವಲದಿನಾತನ ಠಕ್ಕಯವ ಸತ್ತಿಗೆಯನೆಚ್ಚು |
ಕಳೆದು ಮಣಿಮಕುಟದಲಿ ತೆತ್ತಿಸಿದ ನೋದುಕೆಲಗರಿಯ ಹೊಸ ಮಸೆಯಕಣೆಯ ||
ಕೊಲಬಾರದೀ ಹಗೆಯ ಗೆಲುವುದೆಂತೆಂದ ಕಡು |
ಮುಳಿದು ಫಣಿಪಾಶದಿಂ ರುಗುಮಿಣನ ಕಟ್ಟಿದನು |
ನಳಿನಾಕ್ಷನಭಯ ಘೋಷಣೆ ಮಾಡಿಸಿದನರ್ಜುನಾದಿಗಳು ನಡೆನಡೆತಂದರೈ || ೪೦ ||

ಬಿಟ್ಟಬಾಯೊರೆವ ಕಂಬನಿಬಿಗಿದ ಕೊರಳಸೆರೆ |
ಕಟ್ಟಿವಣ್ಣಾಮೊರೆಯಾ ಹಾಹಾಯೆನಿಪ್ಪರವ |
ಮುಟ್ಟದಿಂದುಡುಗೆ ಪುಡಿಯೊಳು ನೆಲೆವ ನಿಡುಗೇಶ ಹೊಟ್ಟೆಯುರ ಬಾಯ್ಮಂಡೆಯ ||
ಕಟ್ಟಿಕೋ ಬಾಯ್ಕೆಗಳಳ್ಳೆ ವೈಲೆಡೆಗೆಡದ |
ನಿಟ್ಟಿಸಿರು ಕರುಣವನು ಬೀರೆ ಶಿಶುಪಾಲನೊಡೆ |
ಹುಟ್ಟಿದಬಲೆಯರು ನಿಬ್ಬಣದ ಪೆಣ್ಬಳಗವೈತಂದು ಸೋಂಕಿಸಿದರಿರದೈ || ೪೧ ||

ಇಂತು ಶೋಕಿಸುವವರನುಚಿತ ವಚನಾಮೃತದಿ |
ಸಂತೈಸಿ ಭೂಮಿಸಲುವೇಳ್ದ ನೀರ್ವರು ಮಹೀ |
ಕಾಂತರ ಕಳೇವರಮಳಿತ್ತಳಾ ರುಗುಮಿಣನಹಿಪಾಶಾದಿಂ ತೊಲಗಿಸಿ ||
ಕಾಂತೆ ರುಗುಮಿಣಿಯ ಸನ್ನಿಧಿಗೆ ಕರೆಕೊಂಡವರಿ |
ಗೆಂತು ಪೋಪುದು ದುಃಖವಂತು ಕರುಣದಿ ನುಡಿದು |
ಕಂತುಪಿತನಾ ಭೀಷ್ಮರಂ ದಹಿಸದಂತರದಿ ಪೊಕ್ಕನಾ ಪಟ್ಟಣವನು || ೪೨ ||

ಬಂದು ಮೌಹೀರ್ತಿಕರು ಪೇಳ್ದಾ ಮುಹೂರ್ತದೊಳು |
ದುಂದುಭಿಯು ಮೊಳಗೆ ಕೊಂಡಿಮನಗರದೊಳು ವಿಭವ |
ದಿಂದ ರುಗುಮಿಣಗೆ ಪಟ್ಟಂಗಟ್ಟಿ ಪಲವುದಿನಮಲ್ಲಿರ್ದು ವಾಸುದೇವ ||
ಒಂದು ಶುಭದಿನದಿ ರುಗುಮಿಣನೆ ಕೈ ನೀರೆರೆಯೆ |
ಸೌಂದರ್ಯನಾ ರುಗುಮಿಣಿಯ ಮದುವೆ ನಿಂದು ಗೋ |
ವಿಂದನೊರವಿಂದ ರುಗುಮಿಣಿಯೊಳನುರಾಗದಿಂ ಕಾಮಸುಖವಾಂತಿರ್ದನೈ || ೪೩ ||

|| ಅಂತು ಸಂಧಿ ೨೫ ಕ್ಕಂ ಮಂಗಲ ಮಹಾ ||