ಸಂಧಿ ೨೮

ಪಂಚಬಾಣನು ಪೂರ್ವಕೃತ ಪು | ಣ್ಯಾಂಚಿತದಿ ಪರದೈದಿ ವಿದ್ಯಾ |
ಸಂಚಯಂಗಳನಾಂತನಾ ಕಬ್ಬಿಗರ ಕಲ್ಪತರು || ಪಲ್ಲ ||

ಕೇಳೆಲೇ ಶ್ರೇಣಿಕ ಧರಿತ್ರೀ | ಪಾಲಯವ್ವನವಾಂತ ಪೊಸವೂ |
ಗೋಲರಾಯಗೆ ತಂದೆಯುವರಾಜತ್ವವನೂ ಕೊಡಲು |
ಕಾಳ ಶಂಬರನಾತ್ಮ ಬವರದ | ತಾಳಲಾರದೆ ಕೊಲಲೆಳಸಿ ಸಂ |
ಮೇಳಗೊಂಡೈದಿದರು ಕಪಟದಲಿಕ್ಷು ಚಾಪವನು || ೧ ||

ಎಲೆ ಮನೋಭವ ಕೇಳರಸು ಮ | ಕ್ಕಳು ಪರಾಕ್ರಮ ಧೈರ್ಯದೆಸಕದಿ |
ಪಲವು ಚೋದ್ಯವನಖಿಲವಿದ್ಯೆಯ ಸಾಧಿಸದ ಮತ್ತೆ ||
ನೆಲಕೆ ಹೊರೆಯಾಗಿಲ್ಲಿಯಿರ್ದೇಂ | ಫಲವು ನಾವೆಲ್ಲರು ಸಮೇಳದಿ |
ಘಳಿಲನೊಂದೆಡೆಗೈದಿ ನೋಡುವವೊಂದಪೂರ್ವವನು || ೨ ||

ಎಂದೊಡವರಕುತಂತ್ರದೊಡನೆ | ಎಂದರಿಯದಣ್ಣಂದಿರಾವದ |
ನೆಂದುದೇ ಮತವೆಂದವರ ಬಳಿಯಲೈತಂದು ||
ಸಂದ ಪೆರ್ಮೆಯ ಸಿದ್ಧಕೂಟವ | ನೊಂದಿ ಜಿನಬಿಂಬಂಗಳನು ಜಯ |
ವೆಂದು ವಂದಿಸಿ ಕಂತುರಾಜನು ಸಂತಸವನಾಂತ || ೩ ||

ಇದರ ಮೇಲ್ನೆನೆಯಲ್ಲಿ ಫಣಿಕಾ | ದದೆ ಪಲವು ವಿದ್ಯೆಯನು ಸರ್ಪನ |
ಬೆದರಿಸಿಯೆ ತದ್ವಿದ್ಯೆಯಾಂಪವರುಂಟೆಯೆನೆ ಕೆಲರು |
ಅದನು ತಹೆನೆನೆ ವಜ್ರದಾದನು | ಮದನನೆಲ್ಲರನಿರಿಸಿ ತಾನೇ |
ರಿದನು ಶಿಖರವನೇನನೆಂಬೆನು ಕಂಡುದಹಿಪತಿಯು || ೪ ||

ವಿಷದ ಹೊಗೆದಿಸೆಗವಿಯೆ ಬುಸ್ಸೆನೆ | ರಸನೆಗಳ ಕುಣಿಯಿಸುತ ಪೆಡೆಗಳ |
ಪಸರದಲಿ ಘೂತ್ಕರಿಸಿ ಬಂದೆರಗಿದ ವಿಷಾಹಿಯನು ||
ಕುಸುಮಶರ ಪೊಡೆಯಲ್ಕೆ ಸಿಡಿಲ | ರ್ವಿಸಿಪೊಡೆದವೊಲು ಪೆಡೆಯುಡುಗಿ ತೋ |
ರಿಸಿತು ತನ್ನಯ ದೇವ ತನುವನು ಭೂಪ ಕೇಳೆಂದ || ೫ ||

ಚಿತ್ತವಿಸಿ ಕೇಳರಸ ಮುನ್ನೆ ಖ | ಗೊತ್ತಮನು ವಿಕ್ರಮನು ದೀಕ್ಷೆಗೆ |
ಚಿತ್ತವಿತ್ತೈದುವ ಸಮಯದಲಿ ತನ್ನ ವಿದ್ಯೆಗಳ ||
ಮೊತ್ತವನು ಕಾದಿರಲು ಪೇಳ್ದನು | ಬಿತ್ತರದ ಭುಜ ಬಲದಿ ನಿನ್ನೊಡ |
ನೊತ್ತಿದಧಂಟಿಂಗೀವುದೆನೆ ಕಾದಿರ್ದೆನಿನ್ನೆವರ || ೬ ||

ಏರಿ ಬಂದಿಲ್ಲಿಂದ ನೆತ್ತರ | ಕಾರಿ ಕೆಡೆದರು ಖಳರು ಖಚರರು |
ವೀರನೈನೀಂ ತೆಗೆದುಕೊಳು ಸಮವಿದ್ಯೆಯತಿವಿದ್ಯೆ ||
ಚಾರುಮಣಿವಿಷ್ಟರಮಕುಟ ಧವ | ಳೋರುಛತ್ರಿಕೆ ಚವರ ಪಾವುಗೆ |
ತೋರಿ ಪೇಳುವ ಕಾಮಚಾಂಡಳಿನಿಯೆನಿಪ್ಪವನು || ೭ ||

ಎನಲವಂ ಪಡೆದೆಲೆ ಸುರನೆ ನಾ | ನೆನೆದ ವೇಳೆಗೆ ಕೊಂಡು ಬಾ ನೀ |
ನನುವಿನಿಂದನ್ನೆವರಮಿಲ್ಲಿಯೆ ಕಾದಿಹುದೆಮೆಂದ ||
ಅನಿತರೊಳಗೈನೂರ್ವರಾ ಖಗ | ತನುಜರಂಗಜನಳಿದನಾ ಸ |
ರ್ಪನ ದಸೆಯಿನೆಂದುಬ್ಬಿತಿರಲೈತಂದನಾ ಮದನ || ೮ ||

ಬರಲುಬಿಗಿಯಪ್ಪಿದರು ಮಝ ವೀ | ರರ ಶಿರೋಮಣಿಯೆಂದು ಬರು ಬೋ |
ಸರಿಗರೆಲ್ಲಂ ಸ್ಮರನ [ಬಳಸಿನಿಂದುರುಖಡ್ಗವ] ||
ಇರದೆ ತೋರಲು ಬಗೆಯದದನೈ | ಸರನು ಪುಗೆಮೇಲ್ವಾಯ್ದು ಸೋತಾ |
ಸ್ಮರಗೆ ಪೀತಾಂಬರವ ಶಕ್ತಿಯನಿತ್ತನಾ ಶಿಖಿಯು || ೯ ||

ಕೊಲಲೆ ಬಗೆದಾ ಕಾಲಗುಹೆಯನು | ಕಾದ ಬಹುದೀ ರಾಕ್ಷಸನ ಕೂ |
ನಲಸದದ ಪೊಗೆ ಕಾಳ ರಕ್ಕಸ ಮಲ್ಲ ಯುದ್ಧಕ್ಕೆ ||
ಕಲಿತನದಿ ಬರೆ ದರ್ಪಕನು ಕೈ | ಚಳಕದಲಿ ತಿವಿಯಲ್ಕೆ ತಾವರೆ |
ಯೆಲೆಯ ನೀರನೆ ನಡುಗುತಿಳೆತದ್ವನಿಯ ಮಸಕದಲಿ || ೧೦ ||

ಮಾಧವನು ಚಾಣೂರನೊಡನೆಯೆ | ಕಾದ
ಡಾದರಿಸದೀ ಬಾಲಕನು ಕಾದುವುದೇ ಅರಿದೆಂದು ||
ಆ ದಿವಿಜರಾಡುತಿರೆ ಬಿಂಕದೀ | ರೌದ್ರಿರಕ್ಕಸಮಲ್ಲ ಸೋತು ಶು |
ಭೋದಯಗೆ ಗದೆವಿವಿಧ ವಿದ್ಯಾಭರಣಗಳನಿತ್ತ || ೧೧ ||

ತಗರವೊಲು ನೆರೆ ಮೇಘ ಪಾಷಾ | ಣಗಳೆರಡು ಹಣಿದಾಡುತಿಹವವ |
ನಿಗೆಯವರು ಕೊಲಬಗೆದು ತೋರಲುಮಧ್ಯದಲಿ ಹೋಗುತ ||
ಎರಡು ಹಸ್ತದಿ ಜಡಿಯೆ ಮೇಘಾ | ಸುರ ಬೆದರಿ ಮಣಿಕುಂಡಲವನಾ |
ಸ್ಮರಗೆ ಕೊಟ್ಟನು ವಿಷವಮೃತವಾಗದೆ ಶುಭೋದಯದಿ || ೧೨ ||

ತೋರ ಶೂಕರಗಿರಿಯನಂಗಜ | ನೇರಿ ಶೂಕರ ರೂಪಿನಸುರನು |
ಕೀರಿ ತಾಗಿದೊಡೆದೆಯೆ ನೆತ್ತರ ಕಾರಿ ನಿಜರೂಪ ||
ತೋರಿ ವರಜಯಘೋಷ ಶಂಖವ | ನೇರಿಸಿದ ಪೂವಿಲ್ಲನಿತ್ತೆಲೆ |
ಧೀರ ನಿನಗೆಣೆ ವೀರರೊಳೆಂದು ಪೊಗಳಿದನು || ೧೩ ||

ಶರಭಗಿರಿಯಲ್ಲಿ ಶರಭ ದೈತ್ಯನ | ಪರ ಶರಭ ಭೇರುಂಡ ಬೆದರಿಸಿ |
ವರಮಕುಟಕೇಯೂರ ಹಾರಾದ್ಯಖಿಲ ಭೂಷಣವೆ ||
ಧರಿಸಿ ಮರ್ಕಟಗಿರಿಯ ಮರ್ಕಟ | ನುರು ಪೆಸರ ರಕ್ಕಸನು ಮೆಚ್ಚಿಂ |
ಸ್ಮರಗೆ ಕೊಟ್ಟನು ಪಾದಸರ ಕಟಿಸೂತ್ರ ಕಂಟಿಕೆಯ || ೧೪ ||

ಉರಗ ಗಿರಿಯುರಗಾಸುರನು ಭಾ | ಸುರಕುಲಿಶ ಮುದ್ರೆಯನು ಕವಚವ |
ಸುರಗಿಯನು ಕುಡೆ ಪಡೆಯೆ ಮಾಲ್ಯಾಚಲವನೇರಿಸಲು ||
ಭರಧಿ ಮಾಲ್ಯಾಸುರನು ಮೆಚ್ಚಿಂ | ದರಲ ಪಸೆ ಪೂವಿನ ಮಕುಟ ಭಾ |
ಸುರತರೋದ್ಗಮಮಾಲೆ ಪಲವಾಭರಣಗಳನಿತ್ತ || ೧೫ ||

ಕಾಳ ಶಂಬರ ಪುತ್ರನಾ ಕರ | ವಾಳನರ್ಜುರ ಗಿರಿಯಸುರನಿಂ |
ವ್ಯಾಳಮಾತಂಗಾಚಲದ ಮಾತಂಗ ರಕ್ಕಸನಿಂ |
ಸ್ಥೂಲಗಜವನು ಖಚರ ಪಾದುಕ | ಲೀಲೆಯನು ಸಲೆ ಪಡೆದುದೋರ್ವಳ |
ಪಾಳಿ ಬರಲವರೆಂದ ಸರ್ಪಾವಾಸವನು ಪೊಕ್ಕ || ೧೬ ||

ಉರಗ ಶಯ್ಯೆಯ ಸೈನ್ಯರಕ್ಷತ್ರ | ಕರಮನಾಗೃಹ ಕಾರಿಣಿಯ ಕೇ |
ಸರಿಸುಪೀಠವ ಕಾಮನಾಮ ವಿಮಾನ ವೀಣಿಯನು ||
ಉರಗನಿಂ ಪಡೆದಂಗಭವನಾ | ತುರಗ ಗಿರಿಯೊಳು ತುರಗ ಮುಖವೀ |
ಕರ ನಿಶಾಚರನಿಂದೆ ಪಡೆದನು ತುಂಗ ತುರಗವನು || ೧೭ ||

ಮುಗುಳುಗಣೆಯಗೆ ವಜ್ರದಾಡಾ | ದಿಗಳು ಭೀಳ ಜಲಾಸುರನ ಪೆ |
ಚ್ಚುಗೆಯ ಕೊಳನನು ತೋರಲಾರುಂ ಪೊಗದ ಸುರಗೆರೆಯ ||
ಪುಗಲು ತದ್ದಾನವನಳುಕಿ ಕಾ | ಮಗೆ ಮಕರಕೇತನ ಮದನ ಚ |
ಕ್ರಗಳನಿತ್ತನು ಪೊಕ್ಕನಾ ಸ್ಫಟಿಕಾಸುರ ಶಿಲೆಯ || ೧೮ ||

ಪೊಳೆವ ಮನ್ಮಥ ಶಾಪವನು ಕಡೆ | ತಳಿದು ಮತ್ತಮನುಕ್ಷರಕ್ಷಕ |
ನಿಳಯದಲಿ ಕಂದರ್ಪ ಚಾಪವಮದರ ದಾವರ್ತ ||
ಸಿಳೆಯಸುರನಿಂ ಮಿಂಗುಡಿಯನ | ಗ್ಗಳಿಪ ಮೋಹನ ರಥವ ಪಡೆದಾ |
ಗಳೆ ಬಳಾಕಾಸುರನ ಗುಹೆಯನು ಪೊಕ್ಕನಲರಂಬ || ೧೯ ||

ಪುಲಿಯವೋಲರ್ವಿಸುವ ಕರ್ವ್ವಿನ | ಬಲು ಧನುವನವನಿಂ ಪಡೆದು ಮೈ |
ಗಲಿಯು ಗೋಳಾಂಗೂಲ ಪರ್ವತದಸುರನಿಂ ಮತ್ತೆ ||
ತೊಳಪ ಮುತ್ತಿನ ಛತ್ರ ಚಾಮರ | ಪೊಳೆವ ಮಕುಟವನಾಂತು ಬಂದಾ |
ಗಳೆ ಮನೋಜನನೇರಿಸಿದರವನರ್ಜುನಾದ್ರಿಯನು || ೨೦ ||

ಸಾಹಸದಿ ಮದ ತಾಪ ಶೋಷಣ | ಮೋಹನೋದ್ಘ ವಶೀಕರಣವೆಂ |
ಬೀಹೆಸರ ಕುಸುಮಾಸ್ತ್ರ ವೈದ್ಯನು ಪಡೆದನಲವಿಂದ ||
ಬಾಹು ವಿಜಯ ಕದಂಬ ಮುಖಿಯೆಂ | ಬೀ ಹಿರಿಯ ಕೂಪವನು ತೋರಿಸ |
ಲಾ ಹದದಿನೊಳಪೊಕ್ಕು ಪಡೆದನು ನಾಗಪಾಶವನು || ೨೧ ||

ಸ್ಮರ ಬರುತದ್ವದನದೊಳಗೆ ಖೇ | ಚರ ವಸಂತನ ಕೀಳಿಸಿಯೆ ಶಂ |
ಬರ ವಿಯಚ್ಚರ ಕಾದುಕೊಂಡಿರೆ ಕಂಡು ಕಟ್ಟುಬಿಡೆ ||
ಉರೆಯನುಗುಳುತ ತಾಗಿದಾ ಶಂ | ಬರನನಂಗಜನಿಕ್ಕೆ ನಿನ್ನಿಂ |
ಹರಣವುಳಿದುದು ನಾಂ ವಸಂತನನು ನಿನ್ನ ಸಖನೆಂದ || ೨೨ ||

ಎಂದು ತನ್ನೆಸೆವಿಂದ್ರ ಜಾಲ ಮ | ಹೇಂದ್ರ ಜಾಲವನೀಯೆ ಪಡೆದಧ |
ಟಿಂದೆ ಶಂಬರವೈರಿ ಬಂದು ಭುಜಂಗಗುಹೆ ವೊಕ್ಕು ||
ನಂದಕಾಯದ ರತ್ನವನು ಸಾ | ನಂದ ಕುಸುಮಚ್ಛತ್ರ ಚಾಮರ |
ವೃಂದವನು ಪರಕಾಮ ಮುದ್ರಿಕೆವಡೆದನಾ ಮದನ || ೨೩ ||

ಸಲೆ ಜಯಂತಾ ಚಲದಲತಿ ಶೀ | ತಲ ನದಿಯ ನಡುವಿರ್ದ ಪಳುಕಿನ | ಸ
ಶಿಲೆಯೊಳಗೆ ಕುಳ್ಳಿರ್ದು ಪಳುಕಿನ ಜಪಸರವ ಪಿಡಿದು ||
ಮಲರಹಿತ ಮುನಿಯೆಂದವೊಲು ಸಂ | ಚಳಿಸದಾ ದೇಶಾನುಕೂಲದಿ |
ತೊಳ ತೊಳಗೆ ಜಪಗೈವ ನೀತಿಯ ನೀಕ್ಷಿಸಿದನತನು || ೨೪ ||

ಅರರೆ ಚತುರಾಸ್ಯನೆ ಜಗದ ಸೌಂ | ದರಿಯರೆಲ್ಲರ ಮೋಹನದ ಸೌಂ |
ದರದ ಸೊಬಗಿನ ಸಾರಗಳ ನಾಯ್ದರಿಸಿ ಸಂಗ್ರಹಿಸಿ ||
ಒರೆಗಳೆದ ಪೊಂಬಣ್ಣವನು ತನಿ | ಪರಿಮಳವನೊಡಗೂಡಿ ತಾನೀ |
ತರುಣಿಯನು ನಿರ್ಮಿಸಿದನೋ ಎಂದೀಕ್ಷಿಸಿದನೊಲಿದು || ೨೫ ||

ಹೊಂಗಲಶ ಮೊಲೆ ಹೊಗರೊಗುವ ನೆರೆ | ದಿಂಗಳೊಲು ಮೊಗಹೊನ್ನ ಸೆಳೆನಡು |
ತುಂಗಕಟಿ ಪೊಂಬಾಳೆದೊಡೆ ಕೇಸಡಿ ಮುಕುರನಖ ||
ಅಂಗನೆಯ ನಳಿ ತೋಳುಗಳು ನಗೆ | ಗಂಗಳಲರ್ಗಣೆರೊಗುವ ನೋಟ ಲ |
ತಾಂಗ ರುಚಿ ಕಣ್ಮನವ ಸೋಲಿಸಿದವು ಮನೋಭವನ || ೨೬ ||

ಇವನೊ ಚೆಲುವಿನ ಕಾಮನೆಂಬವ | ನಿವನೊ ನಾನಾ ದೇಶ ವಲ್ಲಭ |
ನಿವನೋ ನನ್ನ ಜಯಂತ ಜನಕಂಗಳಿಯನೆಂದೆನುತ ||
ಯುವತಿ ನೋಡುವ ದಿಟ್ಟಿದರ್ಪಕ | ನವಯವದೊಳುರು ಮಲ್ಲಿಗೆಯ ಪ |
ಚ್ಚವ ತೊಡಿಸಿದುದು ಬೀಳ್ದುದಾಕೆಯ ಕೈಯ ಜಪರಸವು || ೨೭ ||

ಅವನ ಕಣ್ಣೊಳು ಮುಳುಗಿದಳೊ ಇವ | ಳವಳ ನಯನದೊಳಿದ್ದನೋ ಮೇ |
ಣಿವನೆನಿಸಿ ನಡೆನೋಡೆ ಮನವಮನ ಬೆಚ್ಚು ದಚ್ಚರಿದು ||
ಬೆವರ ಪನಿಗಳ ಕೊಂಡು ಮೈಯಲಿ | ನವಿರು ತಲೆಯೆತ್ತಿದವು ತಂತ |
ಮ್ಮವಯವವನೀಕ್ಷಿಸಿದರೀರ್ವರು ಮನದೆಡೆಗೆ ನೆಗೆದು || ೨೮ ||

ನನೆಗಳಿಗೆ ಸ್ವಾಮಿ ದ್ರೋಹಿಕೆ | ಜನಿಸಿತಂದಾ ಕೋಮಲಾಂಗಿಯ |
ಮನವನಿರಿದವುಂಕುವವು ಕಂದರ್ಪನೆದೆಯೊಳಗೆ ||
ಮನಸುವವುಟಚ್ಚು ಚ್ಚುವವು ಬೆ | ಚ್ಚನೆಯ ಮೈಯನು ಮಾಡಿಕಾಂತಾ |
ನವ ಶಶಿಯ ಹೊಂದಾವರೆಯ ಮುಗುಳಗಳನೀಕ್ಷಿಸಿತು || ೨೯ ||

ಬರೆಬಸಂತನು ತತ್ಸಮಯದೊಳ | ಗಿರದಲೇ ಸಖ ಸುರ ಸತಿಯ ಧಿ |
ಕ್ಕರಿಪ ಚೆಲುವಿಕೆದಳೆದ ಪೆಣ್ಣಾರಾರಮಗನೆನಲು ||
ಸ್ಮರನ ಕೇಳು ಜಯಂತ ವಿದ್ಯಾ | ಧರನ ಸುತೆ ರತಿ ದೇವಿ ನಿನ್ನ… |
……………………. ಯಸುನೀನೆಂದಾನಾ ಚೈತ್ರ || ೩೦ ||

ಪುರುಷದೊಳು ನಿನಗೆನಿಪ ಚೆಲು | ವರನು ಕಾಣೆನು ಪೆಂಡಿರೊಳಗೀ |
ದೊರೆಯ ನೀರೆಯರೆಲ್ಲಿಯುಂ ಪುಟ್ಟರು ವಿಧುಪ್ರಿಯನೆ ||
ಪುರುಷನಾಕೆಗೆ ನೀನೆ ನಿನಗಾ | ತರುಣಿಯೇ ಸಾದೃಶ್ಯವೆಂದವ |

ನೊರೆವ ಸಮಯದೊಳೈದಿ ಬಂದು ಜಯಂತ ನೊಂದಿದನು || ೩೧ ||

ಎಲೆ ಜಯಂತನೆ ಕೇಳು ಗಡ ನಿ | ನ್ನಳಿಯನೀತನೆ ಕಾಮನೆನೆ ಮನ |
ವೊಲಿದು ಖಚರಜಯಂತನುಕ್ತಿಯಿನರಿದು ಮನಸಿಜಗೆ ||
ಪಲ ತೆರೆ ಸದ್ವಸ್ತು ವಿದ್ಯಾ | ಬೆದರಿಸಿಯೆ ರತಿದೇವಿ ಮೊದಲಾ |
ದುದಿತವಿದ್ಯೆಯನಾಂತು ಬರೆ ಕಂಡರು ಖಗಾತ್ಮಜರು || ೩೩ ||

ಒಸೆದು ಚಿತ್ತೋದ್ಭವನನಾಲಿಂ | ಗಿಸಿದರುಳಿದರು ಮಾಳ್ಪ ವೈರವ |
ನಸಮ ಭುಜಬಲನಧಿಕ ಪುಣ್ಯನೆ ಮತ್ತೆ ಕೊಂಡಾಡಿ ||
ಮಿಸುಪ ಮಣಿದೀಪವನೆಲರು ನಂ | ದಿಸಲು ಬಲ್ಲುದೆಯೆಂದು ಮಿಗೆಸಂ |
ತಸದವೆಲ್ಲರು ವೆರಸಿ ನಿಜ ಪಟ್ಟಣವನೈದಿದರು || ೩೪ ||

ಸ್ಮರನು ವಿದ್ಯಾಮಯ ಕಿರೀಟ | ಸ್ಫುರಿತ ರತ್ನಾಭರಣವನು ತೊ |
ಟ್ಟರಳ ಸರಳನು ಪುಷ್ಪಛಾಪವನಾಂತು ರತಿವೆರಸಿ ||
ಬರುತಿರಲು ನರನಾರಿಯರು ಮಿಗೆ | ಹರುಷದಿಂದೀಕ್ಷಿಸುತ ರತಿಗಾ |
ಯ್ತರುಣಿಯರು ಪುರುಷರು ಮನೋಜಂಗೆ ಸೋಲ್ತದೇನೆಂಬೆ || ೩೫ ||

ಅರಮನೆಯನೈತಂದು ಮನ್ಮಥ | ನಿರದೆ ಜನನೀ ಜನಕರಡಿ ದಾ |
ವರೆಗೆರಗಿ ತೆಗೆದಪ್ಪಿ ಪುತ್ರನ ಭಾಗ್ಯದುನ್ನತಿಯ ||
ಪಿರಿದು ಮೆಟ್ಟಿದರಗ್ರಜರೊಳಾ | ದರಿದಿನಿರ್ದನು ಜಿನಪದಾಂಬುಜ |
ಸರಸಿರುಹಪಟ್ಟರಣ ಸತ್ಕವಿತಾ ಗುಣೋದಯನು || ೩೬ ||

|| ಅಂತು ಸಂಧಿ ೨೮ಕ್ಕಂ ಮಂಗಲ ಮಹಾ ||