ಸಂಧಿ ೪೦

ದ್ರುಪದ ತನುಜಾ ಹರಣವಾಗಲು | ವಿಪುಳ ಭೀಮಾರ್ಜುನ ಬಲಾಚ್ಚುತ |
ರಪರಿಮಿತ ದೋರ್ವಳರು ತಂದರು ದ್ರೌಪದಿಯನಂದು || ಪದ ||

ಕನಕ ಕಮಲವ ನೋಳ್ಪ ಬಯಕೆಯು | ಮನದಲುದಯಿಸೆ ಜಿನಪತಿಗೆ ಕಾ |
ಮಿನಿ ಯರಿಪೆ ರಾಗದಿ ವಿಮಾನದೊಳಾಕೆ ಸಹ ನರನು ||
ವಿನುತ ಕಾಂಚನ ದೀಪವನು ಪೊ | ಕ್ಕನುಪಮಿತನಂದನದ ಮಿಗೆ ಚೆಲು |
ವನು ಸತಿಗೆ ತೋರಿಸಿ ಲತಾಮಂಟಪದೊಳಿರಿಸಿ || ೧ ||

ಇರಿಸಿ ಕನಕಾಂಭೋಜಷಂಡವ | ನರಸ ಹೊಗಲಿಕೆ ಇತ್ತಲೂ ಆ |
ಎರಡನೆಯ ದೀಪದಲಿ ಮೂಡಣಮೇರು ಭರತದಲಿ ||
ಮೆರೆವ ವಿಜಯಾರ್ಧಾಚಲದ ಬಂ | ಧುರದ ದಕ್ಷಿಣ ಶೇಢಿಯೊಳು ಬಿ |
ತ್ತರದ ರತನೂಪುರ ಪುರೇಶನು ಶಂಖಚರೇಂದ್ರ || ೨ ||

ಆತನಲ್ಲಿಯ ವಾಸುದೇವ ವಿ | ನೂತನಾತನ ಮೈದುನನು ವಿ |
ಖ್ಯಾತ ಪದ್ಮನೆನಿಪ್ಪ ವಿದ್ಯಾಧರ ವಿಹಾರಿಸುತ ||
ಆ ತಳೋದರಿಯಿರ್ದ್ದಸರಿಸದ | ಲಾತಲೆರ್ದ ವಿಮಾನ ಕೀಲಿಸ |
ಲಾತನಾಗಸದಿಳಿದು ಬಂದೀಕ್ಷಿಸಿದನಾಕೆಯನು || ೩ ||

ವನದ ಲಕ್ಷ್ಮಿಯೊ ರತಿಯೊ ಮೇಣು ಶ | ಕ್ರನ ಸತಿಯೆಂದಾತ ನೀಕ್ಷಿಸಿ |
ನನೆಗಣೆಗೆ ಮನಕಾತಳಿಸೆ ಅವಲೋಕಿನಿಯ ಕರೆದು ||
ವನಿತೆಯಿವಳಾರೆಂಬುದನು ತಿಳು | ಹೆನಲು ವಿದ್ಯಾದೇವಿಯೆಂದಲು |
ವಿನುತರೈ ಕುರುವಂಶಮಂಡನ ಪಾಂಡುನೃಪಸುತರು || ೪ ||

ವರಯುಧಿಷ್ಠಿರ ಮುಖ್ಯರವರೈ | ವರು ಸಹೋದರರವರೊಳತಿಬಲ |
ನರಸ ಕೇಳೈ ಮೂರು ಲೋಕದ ಗಂಡನರ್ಜುನನು ||
ಅರರೆಯಲ್ಲಿಯ ವಾಸುದೇವನ | ಕರುಣದಾ ಮೈದುನನು ತತ್ ಸೌಂ |
ದರಿ ಮಹಾಸತಿ ವಿನುತೆಯಾತನ ಕಾಂತೆ ಗುಣವಂತೆ || ೫ ||

ಎನಲು ಬೆದರದೆ ಪದ್ಮನಾಭನು | ನನಗಣೆಗೆ ಗುರಿ ಮಾಡಿದರು ತ |
ನ್ನನು ತಳೋದರಿಯೆಂದಿವಳ ನೊಯ್ವುದದೆಂತೆನಲು ||
ಮನದೊಳಗೆ ಬೆದರಿದಳು ದೇವತೆ | ನಿನಗೆ ದುರ್ಜಗವೆಲ್ಲ ಬೇಡೆಂ |
ದೆನೆ ಮುಳಿದು ಹೇಳೆಂದು ಬೆಸಗೊಂಡನು ವಿಯಚ್ಚರನು || ೬ ||

ವರ ಧನಂಜಯನತ್ತ ಕನಕಾಂ | ಬರುಹವನು ತರ ಹೋದನಾತನ |
ಪರಿಜಿನಲಿ ಒಯಿ ಒಯಿದೊಡೇಂ ನಿನಗಾಗಳೀ ಸತಿಯು ||
ನರನು ಸೈರಿಸನೆನಲು ಕೇಳಲು | ತರುಣಿಯನು ಬಂದೊಯಿದ ವಿಷಯಾ |
ತುರರು ಮೇಲೆಣಿಕೆಗಳನರಿವರೆ ಭೂಪ ಕೇಳೆಂದ || ೭ ||

ಅವನ ಕಾತರದೊಂದು ಮಾತಿನ | ಹವಣರಿದು ಮನದೊಳಗೆ ಶಂಕಿಸಿ |
ಯುವತಿ ವರವಿದ್ಯಾ ಪ್ರಭಂಜಿನಿಯೆಂಬ ಮುದ್ರಿಕೆಯ ||
ತವಕದಿಂ ಮುಟ್ಟಿಸಲಳಿದು ಪೋ | ಯ್ತವನ ವೈಕುರ್ವಣವು ಮಾಯದ |
ಜವನೆನುತ ಕಂಗೆಟ್ಟು ಗೋಳಿಟ್ಟಳು ವಿಮಾನದಲಿ || ೮ ||

ಖಳ ದುರಾತ್ಮಕ ಪಾತಕನೆ ಕೆ | ಟ್ಟೆಳಸಬಹುದೇ ಪರವಧುಗೆ ಕುರು |
ಕುಲತಿಲಕರಹ ಪಾಂಡವರೊಳರ್ಜುನನ ಸತಿ ನಾತು ||
ಕಳವಿನಿಂದೆನ್ನೊಯ್ದೆ ಗಡ ನರ | ಹುಳುವೆ ನೀನಲಗಣಸೆ ತ್ರಿಭುವನ |
ದೊಳಗೆ ಮಲೆವವರಸುವನೆಳೆಯದೆ ಮಾಣನೆನ್ನರಸ || ೯ ||

ಎಂದು ದ್ರೌಪದಿ ಜರಿದು ಹಾಹಾ | ಕ್ರಂದನಂ ಗೈದೆಲೆ ದಿಗೀಶರು |
ಬಂದು ಖಳನನು ಕೊಲಿ ನಭಶ್ಚರ ದಿಕ್ಕಪಾತಕನ ||
ಕೊಂದು ಕೂಗಿದ ದಿವಿಜರೀತನ | ತಿಂದು ತೇಗೆಲೆ ರಾಖ್ಷಸರಿರಾ |
ಎಂದು ಬಾಳೀದತ್ತು ಬಸುರನು ಮೋದಿದಳು ಕಾಂತೆ || ೧೦ ||

ಶಶಿಮುಖಿಯ ರೋದನವ ಕೇಳ್ದರ | ಬಸುರೊಳಗೆ ಮಸದಲಗು ಕೊಂಡವೊ |
ಲಸು ಕುದಿದು ಕೆಲರತಿ ಕರುಣದಿಂ ಖಚರರವಗಾಂತು ||
ಅಸಿಯ ಹೊಯಿಲಿಂ ಭಂಗವಡೆದರು | ಕುಸುಮ ಕೋಮಲೆ ನಭದಿ ಬೀಳುವೆ |
ವಸುಧೆಗೆಂಬವಸರದೊಳಾತನೆ ಪಿಡಿದು ನಿಲಿಸಿದನು || ೧೧ ||

ಮುಟ್ಟಿದಿರು ಪಾತಕನೆ ನನ್ನನು | ಮುಟ್ಟಿದಡೆ ನಾಲಗೆಯ ಸುಗಿ ಕೊಂ |
ದಿಟ್ಟಿಳದಿ ನಾ ಮಡಿವೆನೆನೆ ಕಂಗೆಟ್ಟು ಕಾಮಾಂಧ ||
ಮುಟ್ಟೆ ನಿನ್ನನು ನಿಟ್ಟಿಯಿದೊಡಂ | ಬಟ್ಟ ಬಳಿಕಲ್ಲದೆ ತಳೋದರಿ |
ನೆಟ್ಟನಿದನಂ ಬೆಂದು ರಥನೂಪುರ ಪುರಕ್ಕೈದ || ೧೨ ||

ಒಂದು ತಾಣದಲಿರಿಸಿ ದ್ರುಪದನ | ನಂದನೆಯ ವಿದ್ಯಾ ಪ್ರಭಾವದ |
ಲೊಂದು ವಜ್ರದ ಮುಚ್ಚಳನು ತದ್ಭೂಮಿಗಳವಡಿಸಿ ||
ಸಂದ ಶಂಖನೆನಿಪ್ಪ ಚಕ್ರಿಯೊ | ಳೊಂದಿಯಲ್ಲಿಯ ವರ್ಧಮಾನ ಜಿ |
ನೇಂದ್ರ ಸಮವಶೃತಿಯ ಪೊಕ್ಕನು ಪದುಮನಾಭ ಖಗ || ೧೩ ||

ಇತ್ತಲಾ ಪಾಂಚಾಲೆ ತನ್ನಯ | ಚಿತ್ತವಲ್ಲಭನನು ಮನೋಮುದ |
ವೆತ್ತು ಕಾಬನ್ನೆವರಮನಸನವೆಂದು ಕೈಕೊಳಲು ||
ಅತ್ತಲಾಗಳೆ ಪದ್ಮನಾಭನ | ಪೆತ್ತ ತಾಯ್ತಂದೆಗಳನು ಕಡು ಬೆದ |
ರುತ್ತ ಪರಿತಂದರು ಪತಿವ್ರತೆಯೆಂದು ನುತಿಯಿಸುತ || ೧೪ ||

ಕರಗಳನು ಮುಗಿದಮ್ಮ ನೀವೀ | ಪರಿಯಲನಶನ ವಿಧಿಯನಾಂಪುದು |
ಮರುಳುತನ ಸಂಸಾರಿಗಳಿಗಾಗದ ವಿಪತ್ತುಂಟೆ ||
ದುರುಳ ಪದ್ಮನು ತಂದೊಡೇಂ ಪರಿ | ಹರಿಸಿವಾ ಖಚರೇಶ ಶಂಖನು |
ಬರೆ ಮಹಾಸತಿ ನಿಮ್ಮ ದುಃಖವನೆಂದರವರೊಲಿದು || ೧೫ ||

ಇರೆನುಡಿದು ನಿಜಗೃಹಕವರುಗಳು | ಮರಳಿದರು ತಾವತ್ತಲಿತ್ತಲು |
ಸುರಪಸುತ ಕನಕಾಂಬುಜಂಗಳ ತಂದು ದ್ರೌಪದಿಯ ||
ಅರಸಿಕಾಣದೆ ಲತೆವನೆಯಲೆದೆ | ಜರಿದು ಧೈರ್ಯವನೊಡೆದು ಮೂರ್ಛಾ |
ಶರಧಿಯಲಿ ಮುಳುಗಿದನು ಮೋಹವದಾರ ನೋಯಿಸದೊ || ೧೬ ||

ನರನು ಮೆಲ್ಲನೆ ಕಣ್ದೆರೆದು ಚೇ | ತರಿಸಿಕೊಂಡನು ತನ್ನ ಕಾಂತೆಯ |
ನಿರದೊಯಿದ ಹಗೆ ಬಾಳ್ವೊಡಂಬುಧಿ ನಾಲ್ಕು ದೆಸೆ ಪತ್ತು ||
ಗಿರಿಗಲೇನಿಳೆಯೊಂದು ತಾ ಮೈ | ಗರೆದದಾವೆಡೆಯಿರ್ಪನಾತನ |
ಕೊರಳ ಮುರಿವೆನು ತಹೆನು ಕಾಂತೆಯನೆಂದು ತರಿಸಂದ || ೧೭ ||

ಬಳಿಕಲಾಗಸವಟ್ಟೆ ಯೀಕ್ಷಿಸೆ | ಘಳಿಲನಾ ಸಮಯದಲಿ ಪದ್ಮನೊ |
ಳಳವಿ ಗೊಡುತವೆ ಭಗ್ನರಾದಾ ಖಚರರೈತಂದು ||
ತಿಳಿಪಿದಪರೆರಡನೆಯ ದೀಪದ | ಪೊಳಲು ಶ್ರೀನೂಪುರದ ಪದ್ಮನು |
ನಳಿನ ವದನೆಯನೊಯಿದನೆಂದಾ ತೆರನನೆಲ್ಲವನು || ೧೮ ||

ತಿಳಿದು ಬದರೀವನಕೆ ಬಂದಾ | ಗಳೆಯುಧಿಷ್ಠಿರಗರುಪಿ ಭೀಮನ |
ಘಳಿಲನೊಡಗೊಂಡರು ವಿಮಾನವನೇರಿ ಶೀಘ್ರದಲಿ ||
ತಳರ್ದನಾ ದ್ವಾರಾವತಿಗದಂ | ತಿಳುಪಿ ಹರಿಬಲ ದೇವ ಸಹವರಿ |
ಘಳಿಗೆ ತಳುವುದೇ ಧಾತಕೀ ಷಂಡಕ್ಷಿತಿಗೆ ಪೋದ || ೧೯ ||

ಅಧಟರಾ ಪಟ್ಟಣದ ಹೊರವಲ | ಯದಲಿ ನಿಂದರು ಭೀಮಸೇನನ |
ನೊದಗನಲು ಪರಿತಂದು ರುಧಿರೋದ್ಗಾರಿಗದೆಯಿಂದ ||
ಸದೆಯೆ ವಿದ್ಯಾ ವಜ್ರ ಪರಿಧಿಯ | ನದು ವಡೆಯಲೊಳಪೊಕ್ಕ ಭೀಮನ |
ಮುದದಿ ದ್ರೌಪದಿ ಕಂಡು ಮಾಯಾ ವಿಧಿಯೊಯಿದನೆಂದು || ೨೦ ||

ಮಿಸುಪ ಪರ ವಿದ್ಯಾ ಪ್ರಭಂಜಿನಿ | ವೆಸರ ತನ್ನುಂಗರವ ಮುಟ್ಟಿಸಿ |
ಸಸಿನೆ ಭೀಮನನರಿದು ಪೊರಮಡೆನಡಸಿ ತರುತಿರಲು ||
ಅಸಮ ಭುಜಬಲನೆನ್ನನುಜನೀ | ಯಸುವೆನಿಪಳನು ಕದ್ದುತಂದವ |
ನಸುವನೆಳೆವೆನು ಕರೆವುದಾತನನೆಂದು ಘರ್ಜಿಸಿದ || ೨೧ ||

ಎನಲು ತಾಗಿದ ಸುಭಟರರೆಬರ | ನನಿಲಜನು ಯಮಪುರಕೆ ಕಳುಹಿದ |
ವನಜನೇತ್ರ ಬಲಾರ್ಜುನಕ್ಕಳನೊಂದಿ ನೆರೆಕಂಡು ||
ವನಿತೆಯನು ನಾವೊಯಿದುದ ನುತ | ಜ್ಜನಪನಿಲ್ಲಿಯ ವಾಸುದೇವನ |
ಮನವರಿಯಲೆಂದೊತ್ತಿದನು ಶಂಕವನು ಮುರವೈರಿ || ೨೨ ||

ಮುಳಿದರಾದೊಡೆ ಮೂಜಗವ ತಲೆ | ಕೆಳಗು ಮಾಣ್ಪೊಡೆ ಶಾರ್ಙ್ಗಪಾಣಿಯು |
ಬಲನು ಭೀಮಾರ್ಜುನರದೋರೋರ್ವರೆ ಸಮರ್ಥರಲೆ ||
ತಿಳಿವುದೆಂದಾ ಶಾರ್ಙ್ಗಗರಿಪುವ | ವೊಲು ಮಹಾ ಭೈರವರವವು ಕಡು |
ಬೆಳೆದು ತೀವಿತು ಮೂಜಗವನಾ ಪಾಂಚಜನ್ಯಜವು || ೨೩ ||

ಆರು ನನ್ನಾ ಶಂಖವನು ಬಾ | ಯಾರೆ ಪೂರಿಸಿದಧಟನೆಂದು ವಿ
ಚಾರ ಪರನಾ ಶಂಖಬೆಸಗೊಳೆ ತದವನೀಶ್ವರರು ||
ವಾರಿಜಾಕ್ಷನೆ ಕೇಳು ನೀನು ವಿ | ಚಾರಿಪೊಡೆ ಶಂಖವದು ನಿನ್ನಯ |
ಸೇರುವೆಯದಲ್ಲೆಂದನಾ ಭೂಪತಿಗೆ ಮುನಿಹಂಸ || ೨೪ ||

ಎಂದೊಡಾದರು ಚಿತ್ತೈಸಿಮೆನೆ | ಸಂದ ಜಂಬೂದ್ವೀಪದಾರ್ಯೆಯೊ |
ಳೊಂದಿದಾ ಪುರುಷೋತ್ತಮನನುತ ಶಂಖನಿಸ್ವನವು ||
ಎಂದೊಡಾಧ್ವನಿಯಿತ್ತ ಪಸರಿಸ | ದಂದಮೆಂತೆನೆ ನಿನ್ನ ಮೈದುನ |
ನಿಂದ ಪಸರಿಸಿತಿತ್ತಲೆಂದನು ಭೂಪತಿಗೆ ಮುನಿಪ || ೨೫ ||

ಬೆಸಸಿಮಾತೆರನೆಲ್ಲವನು ಎನ | ನೊಸೆದು ಶಂಖನೆ ನೀ ತಿಳಿದು ಕೇ |
ಳುಸಿರ್ವಡಿಂದಿನ ಪದ್ಮನಾಭಂಗೆಂಟನೆಯ ಭವದ ||
ಪೆಸರು ಕಪಿಲನೆನಿಪ್ಪ ಬ್ರಾಹ್ಮಣ | ನೆಸೆವ ಸತಿಯಂಜನೆಯೆನಿಪ್ಪಳು |
ಬಿಸಜ ಗಂಧಿನಿಯೆಂದು ಬಂದಲ್ಲಿಯ ಚತುರ್ಭುಜನ || ೨೬ ||

ತರ್ಕಮೈದುನನರ್ಜುನನು ರಣ | ರಕ್ಕಸನು ಮೂಜಗದ ಗಂಡರ |
ನೊಕ್ಕಿಲಿಕ್ಕುವ ಬಾಹುಬಲನಾ ಭೂಪನರ್ಧಾಂಗಿ ||
ಚೊಕ್ಕ ಮನದವರಾಗಿ ದ್ರೌಪದಿ | ಮಿಕ್ಕ ರಾಗದಲಿರುತಿರಲು ಕಂ |
ಡುಕ್ಕಿವಳಿತಂದನು ಭವಪ್ರಣಯದಲವಳನೀತ || ೨೭ ||

ಅದರಿನವರಾ ತಮ್ಮ ಸೊಮ್ಮನು | ಕದನ ಕರ್ಕಶರರಸಿ ಬಡೆದರು |
ಸುದತಿಯನು ಕದ್ದೊಯ್ಯಲೇಕೆಲ್ಲರು ಪರಿಯರೆಂದು ||
ಒದರಿಸಿದನಾ ಶಾರ್ಙ್ಗ ಶಂಖಮ | ನಿದು ಕಣಾ ಭೂಪಾಲ ಕೇಳೆಂ |
ದದರ ತೆರನೆಲ್ಲವ ನಿರೂಪಿಸಿದನು ಮಹಾ ಮುನಿಪ || ೨೮ ||

ಎನಲು ಕೇಳ್ದಾ ಶಂಖಚಕ್ರಿಯು | ಮುನಿಗಳನು ಬೀಳ್ಕೊಂಡು ಮತ್ತಾ |
ಜಿನರ ವಂದಿಸೆ ಸಮವಸರಣನಾಗ ಪೊರಮಟ್ಟು ||
ಘನ ನಿನದ ವೆನಲೊದರೆ ತೂರ್ಯ | ಸ್ವನವು ಪೊಳಲನು ಪೊಕ್ಕು ಮಿಗೆ ಕಂ |
ಡನುವೊಡೆದ ಮುಚ್ಚಳನು ಕೆಡದತಿವೀರರಟ್ಟೆಗಳ || ೨೯ ||

ತಳೆದನತಿ ರೌದ್ರವನು ಶಂಕರ | ನೊಳರಿಸಿದನಾ ಶಂಖನಾಧ್ವನಿ |
ಬಳೆಯೆ ತನ್ಮಂತ್ರಿಗಳು ಸಮರೋದ್ಯೋಗಮಿದುಯೆಂದು ||
ತಿಳಿದು ಬಂದೆರಗಿದರು ದೇವರು | ಮುಳಿವುದನುಚಿತ ದೇವದಾನವ |
ರಳವಿಗೊಡಲೇನಾಪರೇ ನಿನಗೆಂದರವರಂದು || ೩೦ ||

ದೇವ ಬಿನ್ನಪ ಜಂಬುದ್ವೀಪದಿ | ನೀವಿಷಧಿಯನು ದಾಂಟಿಯಧಟಿಂ |
ದೀ ವಿಷಮ ಪುರದುದರದೊಳ ಪೊಕ್ಕೆಯಿದರಾ ವಧುವ ||
ಆ ವಿಭುಗಳಳವೀಹದನು ನಮ | ಗೇವುದವರೊಳು ಮುಳಿವು ತಿಳಿವೆಂ |
ಬೀವಿಧವು ತಮ್ಮೊಡವೆಯನು ತಾವೊಯಿದರೆಮಗೇನು || ೩೧ ||

ಎಂದು ಶಂಖವ ತಿಳುಹಿದರು ತಾ | ವೊಂದಿ ಪುರಜನವೆರಸಿ ಭೋರೆನೆ |
ಬಂದರಾ ಮುರವೈರಿ ಬಲ ಭೀಮಾರ್ಜುನರ ಪೊರೆಗೆ ||
ಅಂದು ಶಾರ್ಙ್ಗವ ನೇಗಿಲನು ಗದೆ | ಯಿಂದನಾ ಗಾಂಡಿವವ ಪಿಡಿವಧ |
ಟಿಂದ ಮೈವೆರ್ಚಿರ್ದ ನಾಲ್ವರ ಕಂಡರವರಂದು || ೩೨ ||

ಮುಗಿದು ಕೈಗಳ ನೀವಧಿಕ ಬಲ | ರಗಜೆಗೆಣೆಯಹ ಸರಿಯನಾ ಖಳ |
ನೆಗಪಿ ತಂದೊಡೆ ತಮ್ಮೊಡೆಯ ಶಂಖೋರ್ವಿಪತಿ ಪಳಿಗೆ ||
ಮೊಗಸುವನೆ ಪುಸಿ ನಿಮ್ಮೊಡವೆಯನು | ತೆಗೆದುಕೊಂಡಿರೆಯಿನ್ನು ತಡೆಯದೆ |
ಮುಗುಳಿಯೆಂದರು ಮಂತ್ರಿಮುಖ್ಯರು ತನ್ನೃಪಾಲರಿಗೆ || ೩೩ ||

ತಿಳಿದು ನೋಡೊವೊಡೆಮ್ಮ ನಿಮ್ಮ | ಗ್ಗಳಿಸುವಾ ದ್ವೀಪಗಳು ಬೇರೆಲೆ |
ನಳಿನ ಲೋಚನ ನಿಮಗಮೆಮ್ಮೆರೆಯಂಗೆ ಮಿತ್ರತೆಯು ||
ಕಲಹವೆಂಬೆರಡುಂ ನಿಷೇಧವು | ತಳೆದ ಚಿಹ್ನವವೀರ್ವರಿಗೆ ಸರಿ |
ತಳುವದೀಗಳೆ ಬಿಜಯಮಾಡುವುದೆಂದರೆನಲೊಡನೆ || ೩೪ ||

ನರನು ದ್ರುಪದಾತ್ಮಜೆಯು ಮಣಿ ಭಾ | ಸುರ ವಿಮಾನವನೇರಿ ಬಳಿಕಾ |
ಮುರಮಥನ ಹಲಧರ ವೃಕೋದರವೆರಸಿ ಬೇರೊಂದು ||
ವರ ವಿಮಾನವನೇರಿ ಭೋರೆಂ | ದಿರದೆ ಮಗುಳಿದರೈದಿದರು ಭಾ |
ಸುರದ ಬದರೀವನವನೆಲೆ ಭೂಪಾಲ ಕೇಳೆಂದ || ೩೫ ||

ಬಲಮುಕುಂದರನನುಜರನು ಕಂ | ಡಲು ತರದ ರಾಗದಲಿ ಸಂತಸ |
ದಳೆದು ಪರಸಿದನೆರಗಿದಾನಾದುನಿಗೆ ವಿನಯದಲಿ ||
ನಳಿನನಾಭಾದಿಗಳ ಮಿಎ ದೋ | ರ್ವಲಕೆ ಮೆಚ್ಚಿದನಮಲ ಜಿನಪದ |
ನಳಿನರೋಲಂಬಾಯಮಾನ ವಿನೇಯ ಕುಲತಿಲಕ || ೩೬ ||

|| ಅಂತು ಸಂಧಿ ೪೦ ಕ್ಕಂ ಮಂಗಲ ಮಹಾ ||