ಸಂಧಿ ೧

ಶ್ರೀಮದಮರಾಧೀಶ ವಂಧಿತ | ನೇಮಿನಾಥ ಚರಿತ್ರವನು ಪು |
ಣ್ಯಾಮೃತವನಾಲಿಪರ ಕರ್ಣರಸಾಯನವನುಸುರುವೆ || ಪಲ್ಲ ||

ಶ್ರೀದಿವಿಜ ನರ ನಾಗಪತಿನುತ | ಪಾದಯುಗನಪಘಾತ… |
…………………
…ಯಾಂಬುಧಿ ಸಮವಶ್ತುತಿವಿ | ಭೋದಯಂ ಕಲ್ಯಾಣಪಂಚಕ |
ನಾದ ನೇಮಿಜಿನೇಂದ್ರನೀಗೆಮಗಮೃತ ಸಂಪದವ            || ೧ ||

ಅಷ್ಟ ಕರ್ಮವನುಱೆ ಕೆಡಿಸಿ ಸುಗು | ಣಾಷ್ಟಕಮನಾಂತೇಕ ಸಮಯದೊ |
ಳಷ್ಟಮಾವನಿಯಗ್ರ ತನುವಾತದೊಳೆ ಸಲೆ ನೆಲಸಿ ||
ತುಷ್ಟರಾ ಛಾಯಾಪ್ರತುಮೆವೊಲು | ಶಿಷ್ಟರೂಪಾ [ರೂಪರೀ] ಗೆಮ |
ಗಿಷ್ಟಸಿದ್ಧಗುಣಾಷ್ಟಕಮನಾ ಸಿದ್ಧರನುಪಮರು || ೨ ||

ತರದಿನೆಂಟೆಂಟಾವ ಬೋಧ ಸು | ದರುಷನಂ ಪನ್ನೆರಡು ಪದಿಮೂ |
ರುರು ತಪಂ ಚಾರಿತ್ರಮೈದುಂ ಸತ್ವವೆಂದೆಂಬ ||
ಪರಮ ಪಂಚಾಚಾರದೊಳೆ ಭ | ವ್ಯರನುಮೊಡನೆಯಿದಿಪ ಸದಾಚಾ |
ರ್ಯರೆ ವಲಂ ಶಿಕ್ಷಿಸುಗೆ ದಯೆಯಿಂದೆಮ್ಮ ನಾತೆಱದಿ || ೩ ||

ನಿನಗೆ ಕೇಳ್ನಿರ್ದೋಷಿ ಸಕಲ | ಜ್ಞನೆ ಸದಾಪ್ತನುಭಯಪರಿಗ್ರಹ |
ವನೆ ತೊಱೆದು ರತ್ನತ್ರಯೋತ್ತಮ ವೃತ್ತನೆಸಗುರು |
ಸುನಯಯುತಮಪಹಿಂಸಮವಿರು | ದ್ಧನುತ ಶಾಸ್ತ್ರಮೆ ಶಾಸ್ತ್ರಮೆಂದು ಱಿ |
ವಿನೆಗಮೋದಿಸಿದಮಳದೇಶಕವೋದಿಸುಗೆ ನಮ್ಮ || ೪ ||

ಸರ್ವ ಜೀವ ದಯಾಂಬುಧಿಗಳ | ಸರ್ವ ಸಂಗರು ಮೌನ ನಿರತರು |
ಸರ್ವಸುವ್ರತಶೀಲ ಗುಣಮಣಿ ಹಾರ ಭೂಷಣರು |
ಸರ್ವಸಂಧ್ಯಾಕಾಲಯೋಗರು | ಸರ್ವ ಚಾರಿತ್ರಮನೆ ಸಾಧಿಪ |
ಸರ್ವ ಸಾಧುಗಳೀಗೆಮಗೆ ನಿಮ್ಮಲ ಚರಿತ್ರವನು || ೫ ||

ಸಕಲತತ್ತ್ವ ಸುವಸ್ತು ಭಾಷಾ | ತ್ಮಕ ವಿವೃತ ಕಾಲತ್ರಯಮಹಿಂ |
ಸಕ ಮತಾಲೋಷ್ಠಪುಟಕರ್ಮಸುಸಪ್ತ ಭಂಗಿಯುತ |
ಸಕಲ ಬೋಧನ ದಿವ್ಯವಾಗ್ವಧಿ | ನಿಕರ ಶರನಿಧಿ ಚರಮತನು ಬೋ |
ಧಕರೆನಿಪ ವರದತ್ತ ಗಣಧರರೀಗೆಮಗೆ ಮತಿಯ || ೬ ||

ಕರ್ಮ ವಿಪಿನ ದವಾಗ್ನಿ ಸಜ್ಜನ | ಕರ್ಮಮಪಹಿಂಸಂ ಸಮಸ್ತ ಬು |
ಧರ್ಮುದದಿ ಧರಿಯಿಸುವ ರತ್ನತ್ರಯ ಸುರತ್ನ ಗಿರಿ ||
ಪೆರ್ಮೆವಡೆದುದನಾದ್ಯನಂತಮ | ದೊರ್ಮೆಯಿಂ ಧಾರ್ಮಿಕರನಾ ಜಿನ |
ಧರ್ಮಮದೆ ತಾಂ ದಾಟಿಸುಗೆ ಕುಂದದೆ ಭವಸಮುದ್ರವನು || ೭ ||

ಮರಕತ ಚ್ಛವಿ ದೇಹರುಚಿಸಿ | ತ್ಕರ ವಿಧೃತ ಚೂತ ಸ್ತಬತೆ ಱಿ (?)
ಕರಣದಿಂ ತನುಜಾತಮಸ್ತಕ ನಿಹಿತವಾಮಕರೆ ||
ಪರಮಜಿನಪದ ಭಕ್ತೆ ವರ ಕೇ | ಸರಿಸುವಾಹಿನಿ ಮಾಡುಗೀ ಬಂ |
ಧುರಕೃತಿಗೆ ಕೂಷ್ಮಾಂಡಿಯಕ್ಷಿ ನಿರಂತರಾಯವನು || ೮ ||

ತನುರುಚಿಯೆ ವೈಢೂರ್ಯಕಾಂತಿಯ | ನನುಕರಿಸಿ ಬಲಗೈಯೊಳೊಪ್ಪಿರೆ |
ವನಜವೇಡಯ ಮೆಱದಿರೆ ಮಾತುಳುಂಗ ಫಲ ||
ಜಿನರಥಮನಿರೆನೆಡಿಯಿಪೊಡೆ | ಮುಖ್ಯವೆಗಡೆನ್ನ ಮನೋ ರಥ (?)
ಮನೋಳ್ಪೆಮಂ ಸರ್ವಾಹ್ಣಯಕ್ಷನೆ ನಡೆಯಿಸುಗು ಮುದದಿ || ೯ ||

ವಿತತ ಗುಣಗಣನಿಳಯ ವರಜಿನ | ಪತಿ ಮುಖಾಂಬುಜಜನ್ಮೆ ಚಿನ್ಮಯೆ |
ಸತತ ಸಕಲಕಲಾ ಪ್ರವೀಣೆ ಜಗತ್ರಿತಯ ವಂದ್ಯೇ ||
ಗತದುರಿತೆ ಸುಗತಪ್ರದಾಯಿನಿ | ನುತ ಧವಲತರವರ್ಣೆ ವರ ಭಾ ||
ರತಿ
ಮದೀಯಾನನಸುರಂಗದೊಳೊಲಿದು ನರ್ತಿಸುವೆ || ೧೦ ||

ವಾಣಿ ಪರಮಬ್ರಹ್ಮನೊಪ್ಪುವ | ರಾಣಿ ಚರಣದ್ವಿತಯ ನತಿಗೀ |
ರ್ವಾಣಿ ‘ಕರ್ಮಲತಾ’ ಕೃಪಾಣಿ ವಿನೀಲ ಘನವೇಣಿ ||
ತ್ರಾಣಿ ರಕ್ಷಿಸು…….ಗುಣ | ಶ್ರೇಣಿ ಸದ್ವರಪಾಣಿ ನುತ ಕ |
ಲ್ಯಾಣಿ ಮನ್ಮುಖ ಕಮಲದೊಳು ನೆಲೆಗೊಳ್ಗೆಸಂತಸಿ || ೧೧ ||

ಇಳೆಪೊಗಳ್ವ ಗುಣದತಿಶಯದ ಕೇ | ವಳಿಗಳೆಸೆವನುಬದ್ಧ ಕೇ |
ವಳಿಗಳ ವಿಮಲಶ್ರುತಕೇವಳಿಗಳೀರೈದು ಪೂರ್ವರನು ||
ತಳೆದು ಪನ್ನೊಂದಂಗವಾಂತು | ಜ್ವಳಿಪ ಪ್ರಥಮಾಂಗಮನೆ ಧರಿಯಿಸಿದ |
ಮಳರಹಿತರಡಿದಾವರೆಗಳನು ವಂದಿಸುವೆನೊಲಿದು || ೧೨ ||

ಆರ್ಯನುತ……..ಸುರಗಿರಿ | ಧೈರ್ಯರೆನಿಸಿದ ಗೃದ್ಧಪಿಂಚ್ಛಾ |
ಚಾರ್ಯರಮಳಮಯಾದ ಪಿಂಚ್ಛಾಚಾರ್ಯರಡಿಗೆಱಗಿ ||
ಧೈರ್ಯಮನಗಿನ್ನೆಲ್ಲೆನಿಪ ತಾ | ತ್ಪರ್ಯದಿಂ ಶ್ರುತ ಪಂಚಮಿಯೊಳಾ |
ಶ್ಚರ್ಯಪುಸ್ತಕಗೈದರರುಹದ್ಬಲಿಗಳಿಗೆಱಗುವೆ || ೧೩ ||

ಮೀನ ಕೇತನ ಮದವಳಿದವರ | ……..ನರ ಶ್ರೀ ಪುಷ್ಟದಂತರ |
ನೂನ ಗುಣಯುತ ಭೂತಬಲಿ ಜಿನಚಂದ್ರಮುನಿವರರ ||
ಭೂನುತರ ಪದಕಮಲ ವನವೀ | ದೀನಯದೆ ನಮಿಯಿಸುವ ನನ್ನಯ |
ಮಾನಸಾಬ್ಜಾಕರದೊಳುಳ್ವಲದಿರ್ಕೆ ಸಂತಸದಿ || ೧೪ ||

ಕ್ಷಮೆಗೆ ನಾಲ್ವೆರಲಧಿಕ ತಮ್ಮಾ | ಕ್ಷಮೆಯೆನಿಪವೊಲಿಳೆಯನಂಘ್ರಿಗ |
ಳಮರ ದಿಸೆಪಾ ಕುಂಡಕುಂದಾಚಾರ್ಯರಂಘ್ರಿಗಳ ||
ಕ್ರಮದುಮಾಸ್ವಾತಿ ತ್ರಿವಿದ್ಯಾ | ರಮಣರಾ ತತ್ವಾರ್ಥಸೂತ್ರವ |
ಸಮೆದರಾ ಪಜ್ಜಳಿಸುವಡಿಗಡಿಗಡಿಗೆ ವಂದಿಸುವೆ || ೧೫ ||

ಶ್ರೀಮದಮಳ ಸಮಂತ ಭದ್ರ | ಸ್ವಾಮಿ ಕವಿಪರಮೇಷ್ಠಿ ವಿದ್ಯಾ |
ಸ್ವಾಮಿ
ಪಂಚತ್ಪೂಜ್ಯಪಾದಸ್ವಾಮಿ ಚರಣಗಳ ||
ಆ ಮಹಾಪತ್ತಡರೆ ಭವ್ಯ | ಸ್ತೋಮಮುವನುದ್ಧರಿಸಿದುರುಗುಣ |
ಧಾಮರೆಲ್ಲಾಚಾರ್ಯರಡಿಗಳನೊಲಿದು ವಂದಿಸುವೆ || ೧೬ ||

ವೀರಸೇನಾಚಾರ್ಯರೊಪ್ಪುವ | ಸೂರಿ ಜಿನಸೇನರ ಜಿನಾಗಮ |
ಸಾರ ಸಿದ್ಧಾಂತಿಗಳೆನಿಪ ವರನೇಮಿಚಂದ್ರಮರ ||
ಮಾರಮದಹರ ರಾಮಸೇನರು | ದಾರಗಣದಕಳಂಕ ದೇವರ |
ಚಾರುಸುಗುಣಾನಂತವೀರ್ಯರ ಪದಕೆ ನಮೋಯೆಂಬೆ || ೧೭ ||

ಸಂದ ವಿದ್ಯಾನಂದ ಮಾಣಿಕ | ನಂದಿ ಭಟ್ಟಾರಕರ ಮೆಱಿವ ಪ್ರ |
ಭೇಂದು
ಗಳ ವರರಾಮಚಂದ್ರರ ವಾಸವೇಂದುಗಳ |
ಕುಂದದಾ ಗುಣಭದ್ರದೇವರ | ವಂದಿಸುರತರು ಮಾಘನಂದಿಗ |
ಳಂದದಡಿಯುಗ ವೆಳಗುಗೆ ತೊಳಗಿ ಮನ್ಮನವ || ೧೮ ||

ಮಂಡಲದ ವರರಾಜಗುರುಗಣ | ಸೌಂದರೆನಿಸುವ ಚಾರುಕೀರುತಿ |
ಪಂಡಿತಾಚಾರ್ಯರ
ಪದಂಗಳನಳ್ತಿಯಿಂ ನಮಿಸಿ |
ಮಂಡಲೇಶ್ವರ ವಂದಿತರ ನೆಱಿ | ಹಿಂಡುವಾದಿ ಪ್ರಥಮ ವಚನವ |
ಖಂಡ ಪರಶು ವಿಶಾಲ ಕೀರ್ತಿಗಳಂಘ್ರಿಗೆಱುಗುವೆನು || ೧೯ ||

ನೆಗಳದೇಶೀಗಣ ವಿಜಯಕೀ | ರ್ತಿಗಳ ತನುಜರ ಜಾತರೂಪರ |
ವಿಗತ ಬಾಹ್ಯಾಭ್ಯಂತರ ಗ್ರಂಥರ ದಯಾಪರರ ||
ಮಿಗೆ ಮೆಱಿವ ಕಲಿಕಾಲ ಜಿನರೆನೆ | ಸೊಗಯಿಪೆನ್ನಯ ಗುರುಗಳಾ ಪದ |
ಯುಗಕೆ ಭಕ್ತಿಯೊಳೆಱಪೆನಾಶ್ರುತಕೀರ್ತಿ ದೇವರನು || ೨೦ ||

ಪ್ರಣುತಗುಣಿಗಳ ಜಾತರೂಪಾ | ಗ್ರಣಿಗಳತ್ಯುತ್ತಮರ ಮಹಿಭೂ |
ಷಣಮುನಿಯ ಪಾಲಾದಿದೇವರ ಮೇರುನಂದಿ
ಗಳ ||
ಪಣೆದಣುವ್ರತರಾಗಿಯುಂ ವರ | ಗುಣಧರಪ್ರಾಯರೆ ದಲೆನಿಸುವ |
ಗುಣಸಮುದ್ರ ಸಮಂತಭದ್ರರ ಚರಣಕೆರಗುವೆನು || ೨೧ ||

ನಟ್ಟಡವಿಯೊಳು ಹಾವುಹುಲಿಕಲಿ | ಜೆಟ್ಟಿಗಂಗಳ ನೆರವಿಯೊಳು ಕಡು |
ಬೆಟ್ಟ ಬೇಸಗೆ ಮಾಗಿಮಳೆಗಾಲದೊಳು ಪರ್ವದಲಿ ||
ನೆಟ್ಟನೋರ್ವನೆ ಬೈಗಿನಿಂ ರವಿ | ಪುಟ್ಟುವಂನಿಗ ಜಾನ ಜಪವಳ |
ವಟ್ಟು ನಿಲುವಾ ಪಾಲಕೀರ್ತಿ ನಮೋಸ್ತು [ಗೆ] ಱಗುವೆನು || ೨೨ ||

ವರ್ತಮಾನ ಸಮಸ್ತ ಜಿನಮುನಿ | ಪೋತ್ತಮರ್ಗೆ ನಮೋಸ್ತು ಜಿನಮತ |
ವರ್ತಿಗಳ ನೂತನ ಪುರಾತನ ಕವಿತತಿಗೆ ನಮಿಪೆ |
ಪೆತ್ತ ಮದ್ಗುರು ಧರ್ಮಚಂದ್ರ ಬು | ಧೋತ್ತಮರ ಪದಕೆಱಗಿ ಸೂರಿಸು |
ವೃತ್ತರೆಲ್ಲರನಳ್ತಿಯಿಂ ಬಲಬಂದು ವಂದಿಸುವೆ || ೨೩ ||

ಮಿಸುಪ ಜಂಬೂದ್ವೀಪಮೇರುವಿ | ನೆಸೆವ ತೆಂಕಣ ಭರತದಾರ್ಯೆಯೊ |
ಳೆಸೆವ ತೌಳವ ಹೈವ ಕೊಂಕಣ ದೇಶದಧಿನಾಥ |
ವಸುಧೆ ಕೀರ್ತಿಪ ನಗಿರ ನಗರವ | ನೊಸೆದು ರಾಜ್ಯಂ ಗೆಯ್ದರೆಲ್ಲರೊ |
ಳಸದೃಶಂ ಸಮ್ಯಕ್ತ್ಜ ಚೂಡಾಮಣಿಯದಾರೆನಲು || ೨೪ ||

ವನಜಮುಖಿಯಾ ಲಕ್ಷ್ಮಿಯುದರದಿ | ಜನಿಸಿದುನ್ನತನಮಲ ಜಿನಮತ |
ವನಧಿವರ್ಧನಚಂದ್ರನಭಿನವನಿಂಬನಿನತೇಜ ||
ಜನನುತ ಮಹಾಮಂಡಲೇಶ್ವರ | ನನುಪಮಿತ ಗುಣಧಾಮನೀಭೂ |
ವನಿತೆಯನು ಪಡೆದಾಳು ಭೈರವರಾಯನಂದೆಸದ || ೨೫ ||

ಖ್ಯಾತೆ ಪಟ್ಟದರಾಣಿಯಭಿನವ | ಸೀತೆಯೆನಿಸಿದ ನಾಗಲಾಂಬಿಕೆ |
ಯಾತನೂಭವ ನವಮನೋಭವ ಸಂಗನೃಪವೆರಸಿ ||
ಪ್ರೀತಿಯಿಂ ಪಲಕಾಲವಾ ರಘು | ಜಾತನೆನೆ ಧರ್ಮಾರ್ಥಕಾಮವ |
ನೋತು ಸಾಧಿಸಿ ಭೈರವೇಶ್ವರನರಸುಗೆಯಿದನದ || ೨೬ ||

ಆ ನರಾಧಿಪನನುಜನಿಳೆ ಪೊಗ | ಳ್ವಾ ನಗಿರನಗರವನು ಕೂರ್ತುಮ |
ನೋನುರಾಗದಿ ಚಿಕ್ಕಭೈರವನೃಪತಿ ಪಾಲಿಸಿದ ||
ಆ ನೃಪನ ಚಿಕ್ಕಂಮ ಪಡೆದಳು | ಮಾನನಿಧಿ ಮಲಿದೇವಿಯನು ವಸು |
ದಾನಮೇರುವೆನಿಪ್ಪ ಪುತ್ರನನಾತನಾರೆನಲು || ೨೭ ||

ಕುವಲಯಪ್ರಿಯ ವಂಶಬಯ್ಯ ನೃ | ಪವರನಂಗನೆ ಶಂಕರಾಂಬಿಕೆ |
ಅವರಗರ್ಭಸುಧಾಂಬುನಿಧಿ ಸಂಭವಸುಧಾಕಿರಣ ||
ಕವಿಸರೋವರ ರಾಜಹಂಸ | ಪ್ರವರ ಜಿನಧರ್ಮಧ್ವಜಂ ಪ್ರಾ |
ಭವದ ದಕ್ಷಿಣ ಸಿದ್ಧಸಿಂಹಾಸನ | ನರಾಧೀಶ || ೨೮ ||

ಪ್ರಣುತನಾ ತ್ರಿಭುವನ ಕಠಾರಿ | ತ್ತ್ರಿಣಯನಂ ಸಮ್ಯಕ್ತ್ವ ಚೂಡಾ |
ಮಣಿ ವಿಮಲ ಜಿನದೇನರಥಯಾತ್ರಾಪ್ರಭಾವಕನು ||
ಗುಣವಿಧಾನಂ ತ್ಯಾಗವಿದ್ಯೆಯೊ | ಳೆಣೆಯದಾರೈ ಜಗದ ಗುರುವೆನೆ |
ಫಣಿಪಭೋಗದ ಸಾಳ್ವಮಲ್ಲ ನರೇಂದ್ರನದನಾಳ್ವಾ || ೨೯ ||

ಪ್ರಕಟಹರಧರಣಿ ಪ್ರಸುತಾ | ಧಿಕಬಿರುದ ಮುಕ್ಕಣ್ಣ ಕಾದಂ |
ಬಕನೆನಿಸುವಾ ಶಾಂತದಂಡಾಧೀಶನರ್ಧಾಂ [ಗಿ] ||
ವಿಕಚ ಸರಸಿಜವದನೆ ಲೋಲಾಂ | ಬಿಕೆಯೆನಿಪ ಮಲಿದೇವಿಯಾತ್ಮಜ |
ನಕೃತಕ ಶ್ರೀಸಾಳ್ವದೇವ ನೃಪಾಲನೊಪ್ಪಿದನು || ೩೦ ||

ಅಳಿಯನೆಂದೊಡೆ ಅಳಿಯನೇ ಚಲ | ವಳಿಯ ಚಾಗವನಳಿಯ ಪಾಳಿಯ |
ನಳಿಯ ಪಂಥವನಳಿಯ ಪೆರ್ಮೆಯನಳಿಯ ಧರ್ಮವನು |
ಅಳಿಯ ಮಾನ್ಯರನಲಿಯನೆನೆಸುವ | ಸುಲಭ ಸಾಳುವ ಮಲ್ಲಭೂವರ |
ನಳಿಯ ದೇವೇಂದ್ರನೆ ಸುರಾಜ್ಯವನಾಳ್ವ ಕಾಲದಲಿ || ೩೧ ||

ಜಿನಸಮಯವಾರಾಶಿಚಂದ್ರರು | ಜಿನರ ಪೂಜೆಗೆ ಶಕ್ರರೆಲ್ಲರು |
ವಿನುತ ದಾನಕ್ಕೆಲ್ಲರುಂ ಶ್ರೇಯಾಂಸರೆನಿಸುವರು ||
ಅನಘವೃತ್ತರು ಸಾಳ್ವರಾಜೇಂ | ದ್ರನ ನಗಿರ ನಗರದೊಳಗಾ ಧನ |
ದನನಿಳಿಪ ಧನಪಾಲರಗಣಿತ ಭವ್ಯರೊಪ್ಪಿದರು || ೩೨ ||

ಸೃಷ್ಟಿಗಾತನೆ ವಿವಿಧ ವಿದ್ಯೆಗೆ | ನೆಟ್ಟನೋರ್ವನೆ ಸಾರ್ವಭೌಮನು |
ದಿಟ್ಟನೆನಿಸಿದ ಸಾಳ್ವಮಲ್ಲ ನರೇಂದ್ರನಾನವನಾ ||
ಪಟ್ಟದಾ ಕವಿಯೆಂದೊಡೆಣ್ದೆ ಸೆ | ಮುಟ್ಟೆ ಪಸರಿಪುದರಿದೆ ಗುಣವಳ |
ವಟ್ಟ ನಿರ್ಮಲ ಕೀರ್ತಿಯಾತನ ಸುಕವಿಸಾಳುವನ || ೩೩ ||

ರಾಜಸಭೆಯೊಳು ಮಾನ್ಯ ಸತ್ಕವಿ | ರಾಜಿಯೊಳು ಮಿಗೆ ಪೂಜ್ಯನುರುಜಿನ |
ರಾಜ ಪದನಿಧಿ ದೀಪವರ್ತಿವಿನೇಯ ವಾತ್ಸಲ್ಯ ||
ಸಾಜ ಕವಿ ಕರ್ಣಾಟ ಲಕ್ಷಣ | ದೋಜೆಗನುಕವಿ ಸಾಳ್ವನಿಂ ಜಿನ |
ರಾಜ ಚರಿತೆಯ ಭಾಮಿನೀ ಷಟ್ಪದಿಯಲುಸುರೆಂದು || ೩೪ ||

ಸುರಸ ಸಾಳುವ ದೇವಭೂಪತಿ | ನಿರವಿಸಿದನೇಕೆನಲು ಮುನ್ನವೆ |
ವಿರಚಿಸಲು ಬೆಸಸಿದನು ಸಾಳುವ ಮಲ್ಲನದಱಿಂದ ||
ಹರುಷದಿಂ ಜೀವೆಂದು ವಿದ್ವಾಂ | ಸರುಗಳನುಮತದಿಂದ ಪೇಳ್ವೆನು |
ಪರಮ ನೇಮೀಶ್ವರ ಚರಿತ್ರವನಿಂತು ಭಕುತಿಯಲಿ || ೩೫ ||

ಶರಧಿಯನು ತೋಳ್ವಲದೋಳಿಸುವೊ | ಡುರವಣಿಪ ಮರುಳಂತೆ ದುರ್ಬಲ |
ನಿರದೆ ನಾಂ ಹರಿವಂಶ ಕುರುವಂಶಾರ್ಣವವನೆನ್ನ |
ದುರುಳಮತಿಯ ಸಹಾಯದಿಂದು | ತ್ತರಿಸ ಬಗೆದನು ಸಂಸರಣ ಸಂ |
ಹರಣ ಕಾರಣವಿದೆ ದಲೆಂದಱಿದೆಸಗದವನಾರೊ || ೩೬ ||

ನೀರಜನ ಚಿನ್ಮಯನ ಜಿನಪನ | ಚಾರುಕಥೆ ಸತ್ಕಥೆಯದಂ ಮನ |
ವಾರೆ ಬೀ……………… ||
ಜಾರ ಚೋರವಿಟಾದಿ ಕಥೆಗಳು | ಸಾರಕಥೆಗಳೆ ಪೇಳ್ದ ಕವಿಯಘ |
ಬೀರುವೆಯನದನರ್ತಿ ಬಡುವರ ಬಗೆಗೆ ಬೆಱಗಾದೆ || ೩೭ ||

ಒಂದು ವೇಳೆಯೊಳೊಮ್ಮೆ ಜಿನಜಿನ | ಎಂದವನೆ ಕೃತಪುಣ್ಯನೆಂದೊಡೆ |
ಕುಂದದಾವಗಮಾ ಜಿನೇಂದ್ರಕಥಾ ಪ್ರಸಂಗವನೆ |
ಚಂದದಿಂ ಭಾವಿಸುವ ಚಂದದೊ | ಳೊಂದಿಸುವ ಬಾಜಿಸುವ ಪರಮಾ |
ನಂದವೆಯಿದುವ ಕಬ್ಬಿಗನವೊಲು ಧನ್ಯನವನಾರೋ || ೩೮ ||

ಪಡೆದು ಸಮ್ಯಗ್ದೃಷ್ಟಿಯೊಳು ಪು | ಟ್ಟಿದಕವಿತ್ವವು ಚಂದ್ರನೊಳು ಪು |
ಟ್ಟಿದ ಸುಧಾ ಕಿರಣಂಗಳಂತತಿ ಸೇವ್ಯ ಸುಖದಮಡು ||
ಪುದಿದ ಮಿಥ್ಯಾ ದೃಷ್ಟಿಯೊಳು ಪು | ಟ್ಟಿದ ಕವಿತೆ ಕಿಂಪಾಕದೊಳು ಪು |
ಟ್ಟಿದ ಫಲದವೊಲು ಸೇವಿಪರ್ಗೆ ಪಾಕದೊಳು ಹಿತಕರವೆ || ೩೯ ||

ಪಣದ ಲಾಭದಿ ಕೀರ್ತಿಪೂಜಾ | ಪ್ರಣಯದಿಂ ಹಿತವಱಿಯದೊಪ್ಪುವ |
ಗುಣವನೊಕ್ಕರೆ ಕಾಸುವೀಸವನೀವ ಮಾನವನ ||
ಗುಣದ ಕಣಿ ದೇವೇಂದ್ರ ಚಿಂತಾ | ಮಣಿಯೆನುತ ಕಾಲ್ಗೆಡದು ಬೇಳಾ |
ದೆಣಿಕೆ ಸಾಕೆಂದನಘ ಚರಿತೆಯನುಸುರಲೊಡರಿಸಿದೆ || ೪೦ ||

ನೇಮಿನಾಥ ಚರಿತ್ರವೀ ಕೃತಿ | ನಾಮಮದಱಧಿನಾಥನೊಪ್ಪುವ |
ನೇಮಿಜಿನನೀ ಪುಣ್ಯಕತೆಯ ಸುಧಾರಸವನೀಂಟಿ ||
ಪ್ರೇಮವಾದರಿಸುವರೆ ಭವ್ಯ | ಸ್ತೋಮಮಿದು ಜಿನಭಕ್ತ ಸುಕವಿ |
ಪ್ರೇಮ ಶತವೀ ಸಾಳ್ವಕೃತವೆನೆ ಮೆಚ್ಚದವರಾರೊ || ೪೧ ||

ಪಳಿವನಲ್ಲದೆ ಮೆಚ್ಚನೆಂದುಂ | ಮಳಿನ ದುರ್ಜನನಾ ಮಹಾಕವಿ |
ಗಳ ಕವಿತ್ವಮನೊಳ್ಳಿದರೆ ಕೇಳಾಯೆನಿಪ್ಪುದನು ||
ಇಳಿಯೊಳವಗದು ಸಹಜವೆಂತೆನೆ | ತಿಳಿದ ಜೊನ್ನಕೆ ಜೊನ್ನವಕ್ಕಿಗ |
ಳೆಳಸುವಂತೆಳಸುವುದೆ ಕೆರಳದೆ ರಾತ್ರಿಜಾಗರನು || ೪೨ ||

ಧಾರಣೀ ಸುತರಭಯಸೂರಿಕು | ಮಾರರುತ್ತಮರಾಗಮತ್ರಯ |
ಸಾರ ಸರ್ವಜ್ಞರು ವಿನೇಯ ನೃಪಾಲವಂದಿತರು ||
ಆರಯಲ್ ಪ್ರತಿವಾದಿಗಜಕಂ | ಠೀರವರು ವರಗುಮ್ಮಟಾರ್ಯರು |
ದಾರರವಧಾರಿಸಿದರೆನಲೀ ಕೃತಿಯೆ ಸುಕೃತಿಯಲೆ || ೪೩ ||

ನವರಸದ ನೆಲೆಮಧುರಭಾವದ | ತವದಲಂಕಾರಂಗಳಿಂದೊ |
ಪ್ಪುವ ವಿಮಲಲಿತಾಂಗ ಮೃದುಪದರಚನೆ ನೆಱಿಮೆಱಿವ ||
ವಿವಿಧ ಗುಣಗಣನಿಳಯೆ ಸೊಬಗಿನ | ಸವಿಯ ಸೈವಳೆಗಱೆವ ಮತ್ಕೃತಿ |
ಚದುರರ ಮನವನಿರ್ಕುಳಿ ಗೊಳುವುದಚ್ಚರಿಯೆ || ೪೪ ||

ಱೞಕುಳಕ್ಷತಲತ್ವರೇಫೋ | ಜ್ವಳರಾಕಱ ಪ್ರಾಸ ಭೇದಂ |
ಗಳ ಸ್ವರವ್ಯಂಜನ ವಿಭಕ್ತಿ ಸಮಾಸ ಶಿಥಿಲಗಳ ||
ಪಱಿಯನೇನುಂ ಪಾಡುಗವಿತೆಗ | ಳೊಳು ವಿಚಾರಸ ಸಲ್ಲವೆಂಬ |
ಗ್ಗಳದ ಪೞಗಬ್ಬಿಗರ [ಪೇಱ್ಕಿಯ] ತೆಱದಿ ವಿರಚಿಸದೆ || ೪೫ ||

ಕೊಲಿಸಿದಾತನೆ ದೇವ ಕೊಂದ | ಗ್ಗಳಿಕೆಯಿಂದವೆ ಪುಣ್ಯಪುರುಷರು |
ಪಲವು ಮಾತೇನೈವರೊಡವುಟ್ಟಿದರು ಸನ್ನತರು ||
ಲಲನೆಯೋರ್ವಳನಾಳ್ದರೆಂಬೀ | ಪೊಲೆನುಡಿಗೆ ಕಿವಿಗುಡದೆ ಸಜ್ಜನ |
ರೊಲಿದು ಚಿತ್ತೈಸೂದು ಜಿನಪಾವನ ಚರಿತ್ರವನು || ೪೬ ||

ಆದಿಪರ್ವಸದನ್ವಯವು ಪೆಂ | ಪಾದ ವಸುದೇವಪ್ರಯುತ ಕೃ |
ಷ್ಣೋದಯಾಖ್ಯೆಯು ಕಂಸಮರ್ದನವಭ್ಯುದಯ ಪರ್ವ ||
ಓದುವಾ ಪ್ರದ್ಯುಮ್ನವೀಂದ್ರಕೃ | ತಾದರದ ಕಲ್ಯಾಣ ಪಾಮಡವ |
ಜೂದಿನಾರಣ್ಯವು ಜಗಳದುದ್ಯೋಗ ಪರ್ವವಿದು || ೪೭ ||

ನೆರೆದಯುದ್ಧವು ಚಕ್ರಪರ್ವವು | ವರಸುದೀಕ್ಷಾ ಪರ್ವ ಭಾಭಾ |
ಸುರತ್ರಿಲೋಕ ಸಭಾಹ್ವಯವು ನಿರ್ವಾಣ ಪರ್ವವಿವು ||
ಪರಮ ನೇಮಿ ಸುಧಾಕರನ ವಿ | ಸ್ಫುರಿತ ಷೋಡಷ ಕಳೆಗಳೆನೆ ತ |
ಚ್ಚರಿತೆಯಲಿ ತತ್ಕ್ರಮದಿ ಷೋಡಷ ಪರ್ವವೊಪ್ಪುವವು || ೪೮ ||

ವಿಪುಳ ಗಿರಿಯೊಳು……………. | …………………….. |
…………..ದಾಶ್ರೇಣಿಕನು ಮೈಯಿಕ್ಕಿ ಕೈಮುಗಿದು ||
ಅಪದುರಿತನಿಂ ನೇಮಿನಾಥ [ನ] | [ನುಪಮ] ಚರಿತವನರಿವವೊಲು ನಿರ |
ವಿಪುದೆನಲು ಗೌತಮ ಗಣಾಧಿಪರಿಂತು ಪೇಳ್ದಪರು || ೪೯ ||

ಎಲೆಮಗಧನೃಪ ಕೇಳು ಕಡೆಮೊದ | ಲಳಿದ ಗಗನದ ನಡುವೆ ಪಿರಿದುಂ |
ಬಳಸಿದಾ ವಾಯುತ್ರಿತಯದೊಳರ್ದ್ಧಮದ್ದಳೆಯ ||
ತಲೆಯ ಮೇಗಡೆ ನಿಲಿಸಿದಿಡಿಮ | ದ್ದಳೆಯೆನಲದಸ್ತಿರ್ಯಗೂರ್ಧ್ವೋ |
ಜ್ವಳ ವಿಭೇದದಿ ಮೂಜಗಂ ಷಡ್ಡ್ರವ್ಯಭರಿತವದು || ೫೦ ||

ಬಗೆದಱಿವೊಡೀರೇಳು ರಜ್ಜುವ | ನೊಗೆದ ಮೂರುಂ ಲೋಕದೊಳು ಪೆ |
ರ್ಮೆಗೆ ತವರ್ಮನೆಯಾದ ಮಧ್ಯಮಲೋಕಮಧ್ಯದಲಿ ||
ಸೊಗಯಿಪುದು ತಾಂ ಲಕ್ಷ ಯೋಜನ | ದಗಲವದು ಲವಣಾಬ್ಧಿ ಚಕ್ರದೊ |
ಳಗೆ ಮೆರೆವುದಾ ಜಂಬೂದ್ವೀಪವಿಳೇಶ ಕೇಳೆಂದ || ೫೧ ||

ಬಳಸಿ ತದ್ವಿಗುಣ ದ್ವಿಗುಣದು | ಜ್ಜಳಿಸಿ ಶರನಿಧಿ ದ್ವೀಪವವು ಕೈ |
ಗಳಿಯಸಂಖ್ಯಾತಂ ಸ್ವಯಂಭೂರಮಣ ಪರ್ಯಂತ ||
ಚಳಿಸದಿಪ್ಪವು ನಾಡು ನಗರದಿ | ಕುಳದಿ ಮೆಱಿದಾ ಜಂಬುದೀಪಕ |
ಮಳದ ಕರ್ಣಿಕೆಯಂತೆ ಮೇರುಮಹೀಂದ್ರವೊಪ್ಪುವುವು || ೫೨ ||

ಜನಪ ಕೇಳಲೆ ಸಾಸಿರದ ಯೋ | ಜನವನಿಳೆಯೊಳನಟ್ಟು ವೃತ್ತದಿ |
ಕನಕಗಿರಿಯಾ ತೊಂಬತೊಂಬತು ಸಾವಿರವನೇಳು ||
ವನಚತುಷ್ಕ ಚತುಷ್ಕ ಮೇಖಲೆ | ಜಿನಭವನ ಪದಿನಾರು ಸುರತರು |
ವನಮಿಷರ ತಿಂತಿಣಿ ನಿರಂತರದಲ್ಲಿ ಶೋಭಿಸುವುದು || ೫೩ ||

ಜಿನರ ಜನ್ಮಸ್ಥಾನ ಭವ ಪಾ | ವನ ಜಲವೆ ನಿರ್ಜರಜಲಂ ಶಿಲೆ |
ಕನಕಮಣಿ ಪಕ್ಕಾಡುವವರಿಂದ್ರಾದಿ ಸುರನಿಕರ ||
ವನದ ತರು ಸುರತರು ರವಿಂದುಗ | ಳನುದಿನಂ ಬಲಬಪ್ಪರೆನೆ ತಳೆ |
ದನುಪಮಾದ್ರಿಯನುಪಮಿಸುವ ಕವೀಂದ್ರನವರಾರೊ || ೫೪ ||

ಅದರ ಪೂರ್ವಾಪರದೊಳೆಸೆದಿ | ಪ್ಪುದು ವಿದೇಹಮಿದೆರಡುಮವ ಱೊಲ |
ಗುದಯಿಸಿರ್ಪುದು ನೋಡೆ ಮೂವತ್ತೆರಡು ನಾಡುಗಳು ||
ಪದೆದಿಹುದು ಜಿನಸಮವಶ್ರುತಿತಾ | ನೊದವಿಹುದು ಜಿನ ಧರ್ಮಮೊಂದ |
ಲ್ಲದೆ ಕುಧರ್ಮದ ವಾರ್ತೆಯಲ್ಲಿಲ್ಲೆಂದನಾ ಮುನಿಪ || ೫೫ ||

ಅದರೊಳಪರ ವಿದೇಹದೊಳು ಪೆಂ | ಪೊದವಿಹುದು ಶೀತೋದೆಯೆಂಬಾ |
ನದಿಯದಱ ಬಡಗಣತಡಿಯ ನಾಡೆಂಟಱೊಳು ಮೆಱಿವ ||
ನದಿ ಸರೋಜ ಸುಗಂಧಿಬನ ಮೃಗ | ಮದ ಸುಗಂಧಿ ಮಹಾವಿಪಿನ ಗಜ |
ಮದ ಸುಗಂಧಿಯೆನಿಪ್ಪ ಗಂಧಿಳ ವಿಷಯವೆಸೆದಿಹುದು || ೫೬ ||

ಅಲರ್ದ ತಾವರೆಗೆರೆಗಳಿಂ ಕಂ | ಮಲರ್ದವೂದೋಂಟಂಗಳಿಂ ಕ |
ತ್ತಲಿಸಿ ಬೆಲದೆಳೆ ನಂದನಂಗಳಿನೂರು ಕೇರಿಗಳಿಂ ||
ಬೆಳೆದ ಕಮ್ಮಂಗಳವೆಪೊಲದಿಂ | ಪಿಳಿದರೊಮ್ಮನೆ ರಸವೊಗುವ ಕಡು |
ಬೆಳೆದ ಕಬ್ಬಿನ ಕೆಯಿಗಳಿಂ ಸೊಗಯಿಸುವುದಾ ವಿಷಯ || ೫೭ ||

ಕರಿಗಳಿಲ್ಲದ ಕಾಡು ಮಾಣಿಕ | ದುರುಳಿಯಿಲ್ಲದ ಬೆಟ್ಟ ಚಂದನ |
ತರುಗಳಿಲ್ಲದರಣ್ಯವಂಚೆಗಳಿಲ್ಲದ ಬೆಂಚೆ ||
ಪರುಷವಿಲ್ಲದ ಭೂಮಿ ಮುತ್ತಿನ | ನೆರವಿಯಿಲ್ಲದ ಮಣಲು ಹೊಂದಾ |
ವರೆಗಳಿಲ್ಲದ ತಿಳಿಗೊಳಂಗಳವಿಲ್ಲ ಮತ್ತಲ್ಲಿ || ೫೮ ||

ಯೆಡೆಗಿಡಿದು ಚೆಂದೆಂಗಿನೆಳಗಾ | ಯೊಡೆದು ಝೋರೆನೆ ಪೊಸರ್ವ ಪೊನಲಿಂ |
ಕಡುವೆಳೆದ ರಸದಾಳಿಗಬ್ಬುಗಳೆಲೆಯ ಬಾಯಿಧಾರೆ ||
ಅಡಸಿ…..ನಾಂತು ಕಾಳ್ಪುರ | ವಿಡುವ ತನಿರಸದಿಂದ ಬೆಳೆವುವು |
ಬಿಡದೆ ತದ್ವಿಷಯದೊಳು ಸೊಂಪಿನ ಗಂಧಸಾಲಿಗಳು || ೫೯ ||

ಬಡತನವು ಕರ್ಕಶತೆಯಲ್ಲಿಯ | ಮಡದಿಯರ ನಡುವಿನೊಳು ಮೊಲೆಯೊಳು |
ಮಡಿವೆಸರು ಮರುಗದೊಳು ಪಳಿವೆಸರೊಂದು ವಸನದೊಳು ||
ಪಿಡಿಯೆನಿಪ್ಪುದು ಕರಿಣಿಯೊಳು ಮು | ಕ್ಕೊಡೆಯೆನಿಪ್ಪುದು ಜಿನಪತಿಯ ಮು |
ಕ್ಕೊಡೆಯೊಳಲ್ಲದೆ ನೋಳ್ಪೊಡಿಲ್ಲಾ ಮೆಱಿವ ನಾಡೊಳಗೆ || ೬೦ ||

ದೇವಪಶುವಾ ವಿಷಯದೊಳಗೊಂ | ಡಾವಿನೊಂದೇ ಮೊಲೆಯ ತಿಕ್ಕನೆ |
ತೀವಿ ಕುಡಿದಾ ಕಾಮಧೇನುವದೆನಿಸಿಕೊಂಡುದೆನೆ ||
ಗಾವರಿಸಿ ಪಾಮರಿಯರರಗಿಳಿ | ಸೋವುತಿರೆ ಚೆಲ್ವಿಕೆಯನೀಕ್ಷಿಸಿ |
ದೇವಕಾಂತೆಯರೆವೆ ಮಿಸುಕರೆನೆ ಪೊಗಳ್ವರಾರದನು || ೬೧ ||

ತುಂಬುದಿಂಗಳು ಮೊಗದ ನಸುನಗೆ | ಯೆಂಬ ಬಾಂದೊಱೆದೆರೆವೊಯಿದು ನಿಡು |
ಗಂ ಬೆಳಗು ಜೊನ್ನದೊಳು ಮುಳುಗಿಸಿ ತಮ್ಮ ಲಾವಣ್ಯ ||
ಯೆಂಬ ಪನಿನೀರೆಱೆದು ಚಿನ್ನದ | ಕುಂಭದಲಿ ಕಂಪಿಂಪು ತಂಪೆಸೆ |
ವಂಬುವೆ ಱಿವರು ಪಥಿಕರಿಗೆ ಅಱವಟಿಗೆ ರತಿಯಾರು || ೬೨ ||

|| ಅಂತು ಸಂಧಿ ೧ ಕ್ಕಂ ಮಂಗಳಮಹಾ ||