ಸಂಧಿ ೬೪

ಶ್ರೀಮದಮರಾಧೀಶವಂದಿತ | ನೇಮಿನಾಥನ ಘಾತಿಕರ್ಮಾ |
ರಾಮದಿಂ ಪೊರಮಟ್ಟು ಮೋಕ್ಷಾಂಗನೆಯನಪ್ಪಿದರು || ಪಲ್ಲ ||

ಕೇಳೆಲೇ ಶ್ರೇಣಿಕ ಧರಿತ್ರೀ – | ಪಾಲ…………… |
………………….ನಡುವಿರ್ದ ದ್ವಾರಾವತಿ ||
ಖೀಳವನ್ನಿಯನುರಿದುದೆನೆ ಭೂ | ಪಾಳವಂದ್ಯನ ತರ್ಕ ಚಕ್ರಿಯು |
ಹಾಳು ಸರಳಿಂಮಡಿದನೆನೆ ಚಿರವಾವುದಿನ್ನೆಂದು || ೧ ||

ಭರವಸದಲೈತಂದು ನೀಲಾಂ | ಬರದಿಗಂಬರರಡಿಗೆರಗಿಯಘು |
ಹರನ ನೇಮಿಸ್ವಾಮಿಯಂಘ್ರಿಗೆ ಪೂಜೆಯನು ಮಾಡಿ ||
ಅರುಹನಾ ದಿವ್ಯಧ್ವನಿಯನಾ | ಹರಿಗೆ ಬಂದಾ ಮರಣವನು ವಿ |
ಸ್ತರದಲರಿದರು ದ್ವಾರಾವತಿಯುರಿದೊಂದು ಸಂಗತಿಯ || ೨ ||

ಅರಿದು ವೈರಾಗ್ಯಾಂತರಂಗರು | ಮರಳಿದರು ನಿಜ ಪುರಕೆ ತಾ ಹಲ |
ಧರಯತೀಶ್ವರರುತ್ತರೋತ್ತರ ತಪವನ್ನುತ್ತರಿಸಿ ||
ವರಸಮಾಧಿಯಿಂ ಮುಡುಪಿ ಜನಿಯಿಸಿ | ದರುವಿಮಲರಾ ಬ್ರಹ್ಮಕಲ್ಪದೊ |
ಳಿರದೆ ಋಜಪರಿಣಾಮಿಗಳಿಗಿದು ಭೂಪ ಕೇಳೆಂದ || ೩ ||

ಇತ್ತಲಾ ಅಭಿಮನ್ಯುವಿಗೆ ಸೇ – | ವುತ್ತರಗೆ ಹುಟ್ಟಿದ ಪರೋಕ್ಷ ನೃ – |
ಪೋತ್ತಮನನಾ ರಾಜ್ಯ ರಕ್ಷಣ್ಯಕ್ಕೆ ಸೈತಿರಿಸಿ ||
ಮತ್ತಮಾ ಪಾಂಡವರು ಬರೆ ಬೆಂ | ಬತ್ತಿ ಕುಂತಿಯು ಬರಲು ದ್ರುಪದನ |
ಪುತ್ರಿ ಮೊದಲಾದವರ ವಧುಗಳು ಬಂದುವಂದಿರದೆ || ೪ ||

ಬಂದು ಬಂಧುರವಾದಪಲಋತು | ಮಂದಿರದ ನಂದನದ ಚೆಲುವಿಕೆ |
ಯಿಂದೆಸೆವ ಹಿಮವನ್ನಗೇಂದ್ರಾಗ್ರದಲಿ ಸಮವಶ್ರುತಿ ||
ಅಂದಿರಲು ನೇಮೀಶ್ವರನ ಸಭೆ | ಯೊಂದಿದಿರು ಪಾಂಡವರು ಜಡಜನ |
ವಿಂದುವೆಂಬುದು ಹಿಮವ ಪೊಕ್ಕವರ್ಗಗಳು ಮಡಿದರೆಂದು || ೫ ||

ಪರಮ ನೇಮೀಶ್ವರನ ಅಷ್ಟೋ | ತ್ತರ ಸಹಸ್ರ ಸುನಾಮಯೋಗ್ಯರ |
ನಿರದೆ ವಿವಿಧಾರ್ಚನೆಗಳಿಂದರ್ಚಿಸಿ ನುತಿಸಿ ನತಿಸಿ ||
ದೊರೆವಡೆದ ವರದತ್ತ ಗಣಧರ | ಚರಣ ಕಮಲಕ್ಕೆರಗಿ ಕುಳ್ಳಿ |
ರ್ದೆರಡು ಕೈಗಳ ಮುಗಿದು ನೊಸಲೊಳಗಿರಿಸಿ ಯಮಸುತನು || ೬ ||

ಬೆಸಸಿಯೆನ್ನಯ ಭವವನೆನೆಗುರು | ಉಸುರಿದಪರೀ ಗಂಧದೇಶದೊ |
ಲೆಸೆವ ಚಂಪಾಪುರದ ಕುರುಕುಲತಿಲಕ ಮೇಘರಥ ||
ರಸಿಕನಾತನ ಮಂತ್ರಿ ಸೋಮಂ | ಗಸುವೆನಿಪ ಸೋಮೆಗೆ ಸುತರು ಭಾ |
ವಿಸಲು ಮೂವರು ಸೋಮದತ್ತನು ಸೋವಿಲನುವೆಸರಿಂ || ೭ ||

ಕಿರಿಯನೆನಿಸುವ ಸೋಮಭೂತಿಯ | ನೆರೆದರುರುಗುಣ ವಿದ್ಯೆಸಂಗಡ |
ನೆರೆಯೆ ಕಂಡಾ ತಂದೆ ತನ್ನಯ ತಂಗಿಯಗ್ಗಿಲಿಗೆ ||
ಪುರುಷನೆನಿಸಿರ್ದಗ್ನಿ ಭೂತಿಗೆ | ವರಧನ ಶ್ರೀ ಮಿತ್ರ ಸಿರಿ ಆ |
ಕಿರುಕುಳೆಯ ನಾಗಶ್ರೀಯೆನಿಪ ತನುಜೆಯರು ಜನಿಸಿರಲು || ೮ ||

ತರದಿ ಮೂವರು ಸೊಸೆಯರನು ತನು | ಜರಿಗೆ ಮದುವೆಯಮಾಡಿ ಶುಭದಿಂ |
ದಿರುತಿರಲು ತತ್ಪುರಬಹಿರ್ವನದೊಳಗೆ ಯೋಗದಲಿ ||
ಇರಲು ಮುನಿಪತಿ ಭೂತಹಿತರದ | ನರಿದು ಸುರಪತಿ ಮೇಘರಥ ಭೂತ |
ವರನು ತನ್ನಯ ಮಂತ್ರಿ ಸೋಮ ಸಮೇತವೈತಂದ || ೯ ||

ಪರಮಭಕ್ತಿಯನಾಗುರುಶ್ರೀ | ಚರಣಗಳನರ್ಚಿಸಿಯೆರಗಿ ತ |
ನ್ನುರು ಭವಾವಳಿಯನು ನಿರೂಪಿಸುಪುದೆಂದು ಬಿನ್ನವಿಸಿ ||
ಗುರುನಿರೂಪದಿನಾ ತೆರನ ವಿ | ಸ್ತರದಲರಿದನು ತೊರೆದನಘ ಸಂ |
ಹರಣ ಕಾರಣವಾದ ವೈರಾಗ್ಯವನು ಧರಿಸಿದನು || ೧೦ ||

ಹೊಳಲ ಹೊಕ್ಕನು ಮೇಘರಥನಾ | ಯಿಳೆಯನಾತ್ಮಜ ವಿಮಲವಾಹನ |
ನೊಳೆನಿಲಿಸಿ ನಿಜಮಂತ್ರಿ ಸೋಮನು ಪಲನೃಪರುವೆರಸಿ ||
ಸಲೆವಿಮಲಮತಿಯೆಂಬ ಜಿನಮುನಿ | ಗಳ ಸಮಕ್ಷದಿ ಜಾತರೂಪನು |
ತಳೆದನಾ ಸಮ್ಯಕ್ತ್ವ ಚೂಡಾಮಣಿ ವಿರಕ್ತಿಯಲಿ || ೧೧ ||

ಅರಸುಮಗನಾ ವಿಮಲವಾಹನ | ಧರೆಯನಾಳುತ ಸೋಮಮಂತ್ರಿಯ |
ವರತನೂಜರು ಸೋಮದತ್ತಾದ್ಯರು ಹಿತವರೆಂದು ||
ಇರುತಿರಲು ಬಂದುದು ಬಸಂತವು | ಹರುಷದಿಂ ವನಕೇಳಿಗಾ ಭೂ |
ವರನು ಹೋಗಲು ಸೋಮದತ್ತನದೊಂದು ಕಾರಣದಿ || ೧೨ ||

ಉಳಿದು ತಮ್ಮಂದಿರನು ಸಂಗಡೆ | ಕಳುಹಿದನು ಮತ್ತಾ……….. |
……….ತ್ರಶ್ರೀಯ ರಾವನಕೇಳಿಗವರೊಡನೆ ||
ತಳರೆ ನಾಗಶ್ರೀಯು ಪಸದನ | ಗೊಳುತಿನಿತು ತಡವಾಗೆ ಬಳಿಕಾ |
ನಿಳಯಕಮಲನ ಧರ್ಮರುಚಿ ಭಟ್ಟಾರಕರುಮೈದೆ || ೧೩ ||

ಬಂದರಾ ಮಾಸೋಪವಾಸಿಗ | ಳಿಂದು ಗತಿಯಿಂ ಪಾರಣೆಗೆ ಬರೆ |
ಬಂದೆರಗಿ ನೆರೆ ಸೋಮದತ್ತನು ಸತ್ಕ್ರಮದಿನಿಲಿಸಿ ||
ಬಂದುದರಸಿನ ತರಹುಮಂತ್ರಿಗೆ | ನಿಂದು ಚರಿಗೆಯ ಮಾಡಿಸಲು ತಳು |
ವೆಂದು ನಾಗಶ್ರೀಗೆ ಹೇಳಿದನರಸ ಕೇಳೆಂದ || ೧೪ ||

ಗುರುಗಳತಿ ಬಳಲಿದರು ಮಿಗೆ ಸಾ | ದರದಿ ನೀವೆ ನಿರಂತರಾಯವ |
ಕರವಸೆದು ಮಾಡಿಸುವುದೆಂದಾ ಬನಕೆ ತೆರಳಿದನು ||
ಮರುಳೆ ನಾಗಶ್ರೀ ಮಸಗಿದಳು | ಗುರುಗಳಿಂಬನಕೇಳಿಇ ವಿಘ್ನವು |
ದೊರಕಿತೀ ಹಾಳಾದ ಬೆಸನೆನೆ ಭಾವ ಹೇಳಿದನು || ೧೫ ||

ಎಂದು ನೋಡೆಯು ಪಾಪಿ ಗುರುಗಳ | ಬೆಂದ ಚರಿಗೆಯ ಬೆಸನೆ ತನಗಹು |
ದೊಂದು ಗೋಷ್ಠಿಗೆ ತೆರಪುಗುಡರಿವರೆಂದು ಕೋಪದಲಿ ||
ಕಂದೆದೆಯ ಪಾತಕಿಯು ವಿಷದೊಳ | ಗೊಂದಿಸಿದ ಮೋದಕವನವರಿಗೆ |
ತಂದು ಕೈಯಲಿ ಕೊಡುವ ಕೊಂಡರು ಕೊಂಡುದಾವಿಷವು || ೧೬ ||

ವಿಷವಡಕಿ ಬೆದರಿದಡೆ ಕೋಪದ | ದೆಸೆಯ ಕಂಡರೆ ದೇಹದಾತ್ಮನ |
ಬೆಸುಗೆ ಬೇರೆಂದರಿದು ಸದ್ಭಾವನೆಯ ಭಾವಿಸುತ ||
ಅಸುವುಳಿದು ಸರ್ವಾರ್ಥಸಿದ್ಧಿಯೊ | ಳುಸುರಲೇನಹುಮಿಂದ್ರರಾದರು |
ಪ್ರಶಮಿತಾತ್ಮರದೇಕೆ ಕೆಡುವರು ಭೂಪ ಕೇಳೆಂದ || ೧೭ ||

ಅನುಜರೊಡನಾ ಸೋಮದತ್ತನು | ಮನೆಗೆ ಬಂದಾ ಪಾತಕಿಯು ಜಿನ |
ಮುನಿಯ ವಧೆಮಾಡಿದ ಮಹಾಪಾತಕಕೆ ಕೊಕ್ಕರಿಸಿ ||
ವಿನುತರಾ ಮೂವರು ತೊರೆದು ಪೆಂ | ಪೆನಿಸಿದರುಣಾಚಲದೊಳಿರೆ ಭೋ |
ರೆನೆ ಬರಲು ಚಾರಣಯಗಲವವರಂಘ್ರಿಗವರೆರಗಿ || ೧೮ ||

ಮೋಕ್ಷ ಸಂಪದದಾಯಿಯನು ಜಿನ | ದೀಕ್ಷೆಯನು ತಲೆದರು ತಳೆಯಲೊಡ |
ನಾಕ್ಷಣವೆ ತೊರೆದಾ ಧನಶ್ರೀಮಿತ್ರ ಸಿರಿಯುಗಳ ||
ದೀಕ್ಷೆಗೊಂಡರು ಗುಣವತಿಯರ ಸ | ಮಕ್ಷಮದಲಿ ಸದ್ಧರ್ಮಮುನಿವಧೆ |
ಯೀಕ್ಷಿಪರೆ ಪರಿಹರಿಸದೊಡಲನು ತೊರೆಯದುತ್ತಮರು || ೧೯ ||

ಬಳಿಕಲವರೈವರು ಸಮಾಧಿಯ | ನುಳಿದೊಡಲನಚ್ಚುತ ಸುಕಲ್ಪ |
ಸ್ಥಳದೊಳನಿಮಿಷರಾದರಿಪ್ಪತ್ತೆರಡೆ ಕಡಲಾಯು ||
ನೆಲಸಿತಿತ್ತಲು ವಿಮಲವಾಹನ | ಪೊಳಲರಸನದನರಿದು ತಾನಾ |
ಗಳೆ ತಳಾರರ ಪೇಳ್ದನವಳನನ್ನಯಕೆ ಶಿಕ್ಷಿಪೊಡೆ || ೨೦ ||

ಇರದೆ ನಾಗಶ್ರೀಯನಾ ತಳ | ವರರು ಲೋಕಕೆ ಹೊಸತೆನಿಪ ದು |
ರ್ಧರವಿಬಂಧನ ಪೀಡೆಯಿಂ ಶಿಕ್ಷಿಸಿ ಬಳಿಕ್ಕವಳ ||
ಪುರದ ಹೊರಗೆಳಯಿಸಿ ಬಿಸುಡಿಸಲು | ಪಿರಿದು ದುಃಖದಿ ಮಿಡುಕಿ ಮಡಿದಳು |
ಧರಿಯಿಸಿದ ಕೆಡು ಕೃಷ್ಣಲೇಸ್ಯದಿನುಚ್ಚಗತಿಯಹುದೆ || ೨೧ ||

ಐದನೆಯ ನರಕವನು ತಾನಿರ | ದೈದಿ ನಾಗಶ್ರೀಯುಕಾಸಿದ |
ಕೈದು ಮೊದಲಾದೆಲ್ಲ ಬಾಧೆಗಳಿಂದ ನರಳುತಲಿ ||
ಯೈದೆ ಹದಿನೇಳಬುಧಿಯಾಯುವ | ಮೈದು ದುಃಖದಿನುಂಡಳೆಲ್ಲಿಂ |
ಪೈದು ಬಂದಿತ್ತಾ ಸ್ವಯಂಪ್ರಭವೆಂಬದೀಪದೊಳು || ೨೨ ||

ದಿಷ್ಟಿ ವಿಷಫಣಿಯಾಗಿ ದುರಿತದಿ | ಬೆಟ್ಟು ದೊರೆಯಿಂ ಕುಸಿದು ದುರಿತದ |
ಕಟ್ಟಕಡೆಯೆನಲೆರಡೆನಯನರಕಕ್ಕೆ……. ….. ||
… … … … … … | … … … … … … |
… … … … … … … … || ೨೩ ||

… … … … … | … … … … … |
… … … … … … ||
… ನೆಂಬಾ ಮಾದೆಗಗೆ ತಾಠ – | ನಿರದೆ ಮಗಳಾಗಿರಲೊಡನೆ ಕುಂ |
ಮರಿ ಗಡಿದವೋಲು ತಂದೆ ತಾಯ್ಗಳು ಬಂಧುಗಳು ಮಡಿಯೆ || ೨೪ ||

ದೇಸಿಗತಿ ತಾನಾಗಿ ಬಳೆದಾ | ಕೂಸು ನಿರ್ನಾಮಿಕೆಯೆನಿಸಿ ಕಡು |
ಘಾಸಿಯಾಗುದರಾಗ್ನಿ ಪೆರ್ಚಿರಲಡವಿಯನು ಹೊಕ್ಕು ||
… … … … … | … … …ಂದಿರಲುಗಣ- |
ರಾಸಿಗಳು ಸಂದವದಿ ಬೋಧಮುನೀಂದ್ರರೈತರಲು || ೨೫ ||

ಬಂದನಾ ಪುರದರಸು ಯತಿಪನ | ನಂದದಿಂ ಪೂಜಿಸಿಯೆರಗಿಗುರು |
ವೆಂದ ವಾಕ್ಸುಧೆವೀಂಟಿ ಪುರಜನವೆರಸಿ ನೃಪತನ್ನ ||
ಮಂದಿರಕೆ ಪೋತಂದನೀಕೆಗೆ | ಹಿಂದಣಾ ಪಾತಕವು ತವುತರ |
ಲೊಂದು ಪರಿಣಾಮದಲಿ ನುತಿಸುತಲೆರಗಿದಳುಯತಿಗೆ || ೨೬ ||

ಎರಗಿ ನೀವೇನಿತ್ತಿರೀ ಪೊಳ | ಲೆರೆಯಗೆನಗದನಿನಿಸಕೊಡಿಮೆನೆ |
ತೊರೆದು ಕಲೆದುದು ಮಾಂಸಗಳನೆನೆ ಜೀಯೆನುತ ಪಡೆದು ||
ನೆರನಡೆದು ಮಡಿದಾಪುರದಕೆ | ಟ್ಟುರವ ತಂದುವೆನಿಷ್ಟ ವಣಿಜಗೆ |
ಮಿರುಪ ಧನದೇವಿಗೆ ತನೂಭವವೆಯಾದಳಾ ನೀಚೆ || ೨೭ ||

ಪೆಸರನಿಂ ಸುಕುಮಾರಿ ಮನಕೆ | ಯೆಸೆವದುರ್ಗಂಧಾಂಗಿಯಾಗಿರ |
ಲೊಸೆದು ಬಂಧುವ ಸೋದರಳಿಯ ಯಶೋಧೆಯಾತ್ಮಜನು ||
ರಸಿಕ ಧನದೇವನ ಸುತನು ರಾ | ಜಿಸುವ ಜಿನದೇವಾಂಕನಿರೆ ಪೊ |
ರ್ದಿತುವರಾಕೆಯ ತನ್ನೊಳೆಂದರಿದೆಯಿದೆ ಹೇಸಿದನು || ೨೮ ||

ಕೊಳಕಿಗತಿ ಕೊಕ್ಕರಿಸಿ ತಾನಾ | ಗಲೆ ತಪೋಲಕ್ಷ್ಮಿಯೊಳು ನೆರೆದಿರೆ |
ತಳುವದಾ ಜಿನದೇವನಾತನ ತಮ್ಮ ಜಿನದತ್ತ ||
ತಳೆದನವರುಪರೋಧ ಕವಳನು | ಬಳಿಕವಳ ಸೋಂಕದೆಯಿರಲ್ಕಾ |
ಲಲನೆ ಖೇದವನಾಂತಿರಲು ಭೂಪಾಲ ಕೇಳೆಂದ || ೨೯ ||

ದೊರೆವಡೆದ ಸುವ್ರತೆಯರಲ್ಲಿಗೆ | ಬರಲೆರಗಿಯಜ್ಜಿಕೆಯರಂಘ್ರಿಗೆ |
ಕರಣದಿಂದವರಮಲ ಜೈನವ್ರತಂಗಳನು ಕೊಡಲು |
ಧರಿಸಿ ಪಾವನವಾದ ಗತಿ ಸೌಂ | ದರಿಯಳಲವೆಯರುಪಸಮಾಂತಃ |
ಕರಣೆಯರು ಸುವ್ರತಿಯರೊಡಬರೆ ಕಂಡು ಸುಕುಮಾರಿ || ೩೦ ||

ಇವಳಿಗೀ ಯೌವ್ವನದೊಳಗೆ ಏಂ | ಭವಿಸಿತೇತಕೆ ದೀಕ್ಷೆಯದರಂ |
ದವನು ಬೆಸಸುವುದೆಂದು ಸುವ್ರತಿಯರಿಗೆ ಬಿನ್ನವಿಸೆ ||
ಅವರು ಪೇಳ್ದಪರಿವರುಮೀರ್ವರು | ಸವಣಿಸಿದ ಹಿಂದಣದಭವದಳೊ |
ಪ್ಪುವ ಸುರೇಂದ್ರಂಗರಸಿಯರು ಸುಪ್ರಭೆಯು ವಿಮಲಮತಿ || ೩೧ ||

ಎನಿಸಿರುತೆ ನಂದೀಶ್ವರ ಮಹಾ | ವಿನುತ ಪರ್ವಕೆ ಸುರಪನೊಡನೆಯೆ |
ಮನಮೊಸೆದು ಪೋತಂದು ನೆರೆ ಧರ್ಮಾನುರಾಗದಲಿ ||
ಅನಿಮಿಷೆಯರಾ ತತ್ತ್ವನಿಚಯಮ | ನೆನಿಸು ಮರೆಯಲೆವೇಳ್ಕುಮೀರ್ವರು |
ಮನುಜತೆಗೆ ಬಂದಂದುನಾವೇಕನುತ್ತ್ವವನು ತಳೆವ || ೩೨ ||

ಎಂದು ಪೂಣ್ದೀರ್ವರು ನಿಜಾಯುವ | ಸಿಂಧುಬತ್ತಲು ಬಂದಯೋಧ್ಯೆಯ |
ಸೌಂದರ ಶ್ರೀಷೇಣರಾಯಂಗೈದೆ ಹರಿಸೇನೆ ||
ಎಂದುತಾಂ ಶ್ರೀಷೇಣೆಯೆಂದತಿ | ಚಂದವುಳ್ಳಾತ್ಮಜೆಯರಾದರು |
ತಂದೆಯಾ ಮಕ್ಕಳಿಗೆ ಮಾಡಿಸಿದನು ಸ್ವಯಂವರವ || ೩೩ ||

ಸುರಕುಮಾರರ ನೆರವಿಯೆನೆ ಚೆಲು | ವರಸು ಮಕ್ಕಳ ನೆರವಿಯಿರಲೀ |
ತರುಣಿಯರು ತಾವವರ ನೀಕ್ಷಿಸುತಾ ಭವಸ್ಮರಣೆ ||
ದೊರೆಕೊಳಲು ತಾವಂದು ಮಾಡಿದ | ಪಿರಿಯ ಪೂಂಕೆಯ ನೆನೆದು ವಿರತಿಯ |
ಭರದಿ ದೀಕ್ಷೆಯನಾಂತು ಬಂದರು ತೀರ್ಥವಂದನೆಗೆ || ೩೪ ||

ಎನಲೊಡನೆ ಸುಕುಮಾರಿಗಾಗಳು | ಜನಿಯಿಸಿತು ವೈರಾಗ್ಯವೀನೆ |
ನ್ನನೆ ಕೃತಾರ್ಥನೆ ಮಾಳ್ಫುದೆಂದು ತದಾರ್ಯಿಕೆಯರಿಂದೆ ||
ವಿನುತ ದೀಕ್ಷೆಯನಾಂತು ನೋಂಪಿಗ | ಳನು ಪಲವನೆಸಗಲ್ಕೆ ಪೋದುದು |
ತನುವಿನಾ ದುರ್ಗಂಧವೆಲೆ ಭೂಪಾಲ ಕೇಳಂದ || ೩೫ ||

. . .ನವಾ ವಿಮಲಬೋಧ ಮು | ನೀಂದುಗಳ ಚರಣಕ್ಕೆರಗಿಯವ |
ರಿಂದೆ ನಾಗಶ್ರೀಯು ತಾನಾದದುವೆ ಮೊದಲಾದ ||
ಸಂದ ಭವವನು ಕೇಳ್ದರಿದು ತ | ನ್ನಂದಿನೋಪನು ಸೋಮಭೂತಿ ಜಿ |
ನೇಂದ್ರ ತಪಸಿನ ಫಲದಿನಚ್ಚುತ ಕಲ್ಪದೊಳು ಸಂದ || ೩೬ ||

ತೆರನನರಿದಾ ದೇವನೊಳುದುನ | ವೆರಗಿ ಸುಕುಮಾರಾರ್ಯಿಕೆಯರಂ |
ತಿರುತ ಕಡೆಯೊಳು ಮುಡುಪಿ ಪೇಳ್ದಾ ಸೋಮಭೂತಿವಪ ||
ಸುರಗೆ ಕಮಲಪ್ರಭೆವೆಸರಮನ | ದೆರೆಯಳಾದಳು |
ನುರುವ ಮಹಾದಾಶ್ರಯವು ಕೆಟ್ಟುದು ಭೂಪ ಕೇಳೆಂದ || ೩೭ ||

ತರದಿನೆಸೆವಾ ಸೋಮದತ್ತಾ | ಮರರ ಸೋವಿಲಸೋಮಭೂತಿ |
ಚರರು ಧನಶ್ರೀವಿತತ ಮಿತ್ರಶ್ರೀಚರಸ ಸುರರು ||
ಶರಧಿಯುಪಮಾಯುಷ್ಯವಿಪ್ಪ | ತ್ತೆರಡನತಿ ಸೌಖ್ಯದಿ ಸವಿದರೈ |
ವರುಕಳಿದು ಬಂದಿಲ್ಲಿ ಪಾಂಡವರಾದಿರೆಲೆ ಭೂಪ || ೩೮ ||

ಬಳಿಕ ಐವತ್ತೈದು ಪಲ್ಯವ | ಕಳಿದು ಕಮಲಪ್ರಭೆಯ ಬಂದ |
ಗ್ಗಳದ ಗುಣಿಯಾ ದ್ರುಪದ ನಂದನೆಯಾದಳಿಂತೆಂದು ||
ಮಲರಹಿತ ವರದತ್ತಗಣಧರ | ರೊಳರೆ ಕೇಳ್ದುವಿರಕ್ತಿ ಮನದೊಳು |
ನೆಲಸಿ ತದ್ಗಣಧರರ ಕೈಯಲಿ ಪಾಂಡನಂದನರು || ೩೯ ||

ಪಲಬರವನೀಶ್ವರರು ಪುರಜನ | ವೆರಸಿದೀಕ್ಷೆಯ ಕೊಳಲು ಕೊಂತಿಯು |
ಪಲಬರವನೀಶ್ವರರ ಸತಿಯರು ಪುರದನಾರಿಯರು ||
ತಿಳಿದು ದ್ರೌಪದಿ ಆ ಸುಭದ್ರಾ | ಲಲನೆ ವೆರಸು ತಪಸ್ಥೆಯಾದಳು |
ಬಳಿಕಲಾ ಪಾಂಡವರು ಹನ್ನೆರಡು ತಪವ || ೪೦ ||

ಅವಧಿ ಬೋಧೋದಯವು ವರ ಪಾಂ | ಡವ ಯತೀಶ್ವರ್ಗಾದುದಾಯುವ |
ಹವಣನರಿದು ನಿರರ್ಗಳರು ಕೃಪೆಯಿಂದೆ ಹಾರಿಸುತ ||
ವಿವಿಧ ದೇಶವ ಪೊಕ್ಕು ಬಂದೂಂ | ದವನಿಧರ ಶತ್ರುಂಜಯಾಖ್ಯವು |
ದಿವಿಜನಗವನು ನಗುವುದದು ಮಣೆಶಿಖರಸಾನುಗಳಿಂ || ೪೧ ||

ಆ ಶಿಖರಿ ಶಿಖರಾಗ್ರದೊಳು ನೆರೆ | ಹಾಸಿದೆಳೆವಳುಕಿನ ಶಿಲೆಯ ಮೇ |
ಲಾಸು ಸಂಯವಿಗಳು ಸಯೋಗಿಗಳೈವರಲ್ಲಿರಲು ||
ಆ ಸುಯೋಧನನಾತ್ಮಜನ ಮಗ | ನೇಸು ಪಾಪಿಯೊಯಿವರಿಹುದನರಿ |
ದಾಸುರದಿ ಕುಯವರನು ಬಂದನು ಹಗೆಗೊಲೆವೆನೆಂದು || ೪೨ ||

ಬಂದರೇ ನೀವಿತ್ತ ಬಂಧುವ | ಕೊಂಡು ಪಡೆದೈಶ್ವರ್ಯದೊಪ್ಪುವು |
ಹಿಂದೆ ಮುಂದೆಡಬಲದೊಳಿಲ್ಲ ನಿಜಾನುಜರ ಕೈಯ ||
ಅಂದಿನಾಗದೆಗಾಂಡಿವಾದಿಯ | ನಿಂದದಾರ್ಸೆಳಕೊಂಡ….. |
…ರಿವನಿಂ ಮುತ್ತು ನಂದಿತೊ ಹೇಳು ಹೇಳೆಂದ || ೪೩ ||

ಎಂದು ಕಡುಕೋಪದಲಿ ಬಾಯಿಗೆ | ಬಂದ ತೆರದಲಿಗೆಡೆದು ಮಿಗೆ ಸಾ |
ರ್ತಂದನಂತರ್ಮುಖರು ತಾವವನೆನಲು ಮುಳಿಸುವರೆ ||
ಒಂದು ತುಪ್ಪದ ಕೊಡನ ಮೇಗಿಲಿ | ನಿಂದೊಡ………….. |
………ರೆಕೆಡುವುದಾವುದು ಭೂಪ ಕೇಳೆಂದ || ೪೪ ||

ನೆಟ್ಟನಾ ತ್ರಿಭುವನದ ರಾಜ್ಯಕೆ | ಪಟ್ಟಗಟ್ಟುವ ತೆರದಿ ನೊಸಲಿಗೆ |
ಕಟ್ಟೆದನು ಕಡುಗಾಸಿ ಕೆಂಡವನೊಗುವ ಕರ್ಬೊನ್ನ ||
ಪಟ್ಟವನು ಕೌಂತೇಯಮುನಿಗಡಿ | ಗಿಟ್ಟನಾತೆರದಿಂದ…….. |
…………………………………….ಗಳನು || ೪೫ ||

ಪರಮ ಶಾಂತರಸಾಂಬುಧಿಯೊಳಗೆ | ಪಿರಿದು ವಸ್ತ್ರವನೆಣ್ಣೆಯಿಂತೊ |
ಯ್ದಿರದೆ…………………… ||
………….. | ………………. |
………………………………. || ೪೬ ||

… … ಗ್ನಿಯ | ಬಳುಸುದಿವ್ಯ ಮುನೀಂದ್ರರಿಗೆನಿ |
ರ್ಮಲಿನ ಶಾಂತರನಾಂಬುನಿಧಿಯೊಳಗಾತ್ಮ ಮುಳುಗಿರಲು ||
ಒಳಗೆ ಶುಕ್ಲಧ್ಯಾನ ಪಾವಕ | ವಿಳೆಯಲುರಿದುದು ಘಾತಿವನವದು |
ತೊಲಗೆಕೆಟ್ಟವು ಚಕಚಕಿಪ ಹೇಮದವೊಲಿಪ್ಪಿದರು || ೪೭ ||

… … ನುತ | … … …. |
ಚತುರಿನಿಂದುದಯಿಸಲು ಕೇವಲ ಪೂಜೆಗೈತಂದ ||
ಶತ ಮುಖನ ಸುರದುಂದುಭಿಧ್ವನಿ | ಗತಿ ಬೆದರಿ ಕುಯವರನು ಸಿಂಗದ |
ರುತಕೆ ಕರಿಬೆದರೋಡುವಂತೋಡಿದನು ಕಂಗೆಟ್ಟು || ೪೮ ||

ಸುರಪನಾ ಮೂವರು ಜಿನೇಂದ್ರರ | ಚರಣಗಳನರ್ಚಿಸಿ … … |
… … ನಪಹರಿಸಿ ಮೋಕ್ಷದಲಿ ||
ಸ್ಥಿರತೆವಡೆದರು ನಕುಲ ಸಹದೇ | ವರು ಶುಭಧ್ಯಾನದಿ ತನುವನುಳಿ
ದರು ಸುಖದ ಸರ್ವಾರ್ಥಸಿದ್ಧಿಗೆ ಸಂದರೆಂದ || ೪೯ ||

ಇತ್ತಲಾ ಪ್ರದ್ಯುಮ್ನ ಜಿನಮುನು | ಪೋತ್ತಮರು ವರಶಂಬುಕುವರ ದ |
ಯಾತ್ತ ಯತಿಗಳ ಒಡನೆನೆರೆದುಜ್ಜಂತಗಿರಿಯಲ್ಲಿ ||
ಪೆತ್ತರಾಮೋಕ್ಷ …. …. | …. ತೆರನೆನುತವರ … |
ದತ್ತ ಗಣಧರರೆಂದರಾ ಶ್ರೇಣಿಕ ನೃಪಾಲಂಗೆ || ೫೦ ||

 

ಗದ್ಯ

ಮತ್ತಮಿತ್ತ ಅನಂತ ಚತುಷ್ಟಯ ಚತುಷ್ಟಯ ಲಕ್ಷ್ಮೀಸಮಾಶ್ಲಿಷ್ಟನುಮಷ್ಟಮಹಾ ಪ್ರಾತಿಹಾರ್ಯಾ ಪ್ರಕೃಷ್ಟನು ಮಷ್ಟೋತ್ತರ ಸಹಸ್ರ ನಾಮಾರ್ಹನುಮಷ್ಟಾದಶ ದೋಷದೂರನುಂ ಸಪ್ತರ್ಧಿ ಸಮದಯ (ವಿನು) ತೋಪಾಸ್ಯನುಂ ಚತುಸ್ತ್ರಿಂಶದತಿಶಯ ಸಮೇತನುಂ ಪಂಚ ಮಹಾ ಕಲ್ಯಾಣ ವಿಭೂತಿನಾಥನುಂ ಶತೇಂದ್ರ ಮುನೀಂದ್ರ ವಂದ್ಯನುಂ ಕಾಯಾಕಾರಪರಿಣತ ತ್ರಿಲೋಕಾಗ್ರ ಪುಣ್ಯಪುದ್ಗಲ ಪುಂಜಾಯ ಮಾನ ಪರಮೌದಾರಿಕ ಕಾಯನುಂ ಸಿದ್ಧಾಶೇಷಸಾಧ್ಯನುಂ ಬುದ್ಧಸಮಸ್ತ ಬೋಧ್ಯನುಂ ಆಗಿರ್ದ ಜಗನ್ನಾಥನಾ ಸ್ಥಾನದೊಳು ವರದತ್ತ ಗಣಧರ ಪ್ರಮುಖೈಕಾದಶ ಗುಣೌಗ್ರಣಿಗಳುಂ ನಾಲ್ಸಾಸಿರ್ವರ್ದಶಪೂರ್ವಧರರುಂ, ತತ್ಪ್ರಮಾಣ ಕೇವಲ ಜ್ಞಾನಿಗಳುಂ ಸಾಸಿರದ ನೂರ್ವರ್ವೈ ಕ್ರಿಯಾರುದ್ಧಿ ಸಮೃದ್ಧರು ಮೊಂಬೈನೂರ್ವರ್ ಮನಃಪರ್ಯಯ ಜ್ಞಾನಿಗಳುಂ ರಾಜೀಮತ್ಯಾರ್ಯಿಕಾ ಪ್ರಭೃತಿ ನಾಲ್ವತುಸಾಸಿರ ನಿರತಿಯರುಂ ಲಕ್ಷೈಕ ಶ್ರಾವಕರುಂ ಮೂರುಲಕ್ಷ್ಮ ಶ್ರಾವಿಕೆಯರುಂ ಅಸಂಖ್ಯಾತ ದೇವದೇವಿಯರುಮಸಂಖ್ಯಾತ ತಿರ್ಯಕ್ಸಮಾಜಮುಂ, ಬೆರಸಿಮ ಮೋಘವಾಗಮೃತ ಪೀಯೂಷವರ್ಷಮೇಘಂ, ಸೌರಾಷ್ಟ್ರ ಮಹಾರಾಷ್ಟ್ರ ಕುಂತಳಾವಂತೀ ವಿದರ್ಭ ಪಾಂಚಲ ಕರುಜಾಂಗಳಾದಿ ವಿಷಯಂಗಳುಂ ಧರ್ಮತೀರ್ಥ ಪ್ರವರ್ತನಾರ್ಥಂ ವಿಹಾರಿಸುತ್ತ – ಶಿಷ್ಯ ಭವ್ಯ ವನಂಗಳೊಳಗಣ್ಯ ಪುಣ್ಯ ಪೀಯಾಷವರ್ಷಮಂಭೋರ್ಗರೆದು ನಿಜಾಯುಷ್ಯದೊಳೇಕ ಮಾಸಮುಳಿದುದೆನೆ ಬಂದೂರ್ಜಯಂತ ಗಿರಿವರಾದಿತ್ಯಕದೊಳೊಂದತ್ಯಂತ ಪಾವನ ಸ್ಫಟಿಕ ಶಿಲಾತಳ ಪ್ರದೇಶದೊಳು ವಿಸರ್ಜಿತ ವಿಹರಣ ವಿಧಾನನುಮಾಗಿಯೈನೂರ ಮೂವತ್ತಮೂವರ್ಪಂಚಮಗತಿ ಪ್ರಾಪ್ತರ್ಬೆರಸು ಪೂರ್ವಾಭಿಮುಖದೊಳ್ ಪಲ್ಯಂಕಾಸನದಿಂ ಯೋಗ ನಿರೋಧವಾಗಿ ಲೋಕತ್ರಯಾರಾಧ್ಯಂ ನೇಮಿತೀರ್ಥಂಕರ ಸೂಕ್ಷ್ಮಕ್ರಿಯಾ ಪ್ರತಿಪಾದಿಯೆಂಬ ತ್ರಿತೀಯ ಶುಕ್ಲಧ್ಯಾನಮನೊಳಕೆಯಿದಂತರ್ಮುಹೂರ್ತದಿಂ ಚರಮಾಂಗ ತ್ರಿಗುಣ ಬಾಹುಲ್ಯದಿನೇಕ ಸಮಯದೊಳ್ ಮುಂಪೇಳ್ದ ಬಾಹುಲ್ಯಾಯಾಮದಿಂ ಜವಳಿಗದವಿನ ಪರಿಜಿನಿಂ ಜೀವಪ್ರದೇಶ ಪ್ರಸರ್ಪಣಮಷ್ಟಕನಾಟ ಸಮುದ್ಘಾತಮುಮಂ – ಮೂರನೆಯ ಶಮಯ ದೊಳ್ವಾಯುತ್ರ……-ವಶೇಷ ಲೋಕತ್ರಯ, ಲೋಕಾಕಾಶ, ಜೀವಪ್ರದೇಶ ಪ್ರವರ್ತನಮಪ್ಪ ಪ್ರಸರ ಸಮುದ್ಘಾತಮುಮಂ, ನಾಲ್ಕನೆಯ ಸಮಯದೊಳಂ ಸಕಲ ಲೋಕವ್ಯಾಪ್ತಿ ಜೀವಪ್ರದೇಶ ಪ್ರವರ್ತಮಪ್ಪ ಲೋಕಪೂರಣ ಸಮುದ್ಘಾತಮುಮಂ ನೆರಪಿ ಮತ್ತಂಯುತ್ಕಮ ಪ್ರವರ್ತಿಕ ತತ್ತುದುಪಸಂ… ತಿಕ್ರಿಯಂ ಘಾತಿಕಾ ಘಾತಿ ಸ್ಥಿತಿ ಅನುಭಾಗಂ ಸಂಪ್ರಾಪ್ತ ಪೂರ್ವತಾಯ ಪ್ರಮಾಣೋಕ್ತ ಪ್ರದೇಶನಾಯಸ್ಥಿತಿಯೊಳುಳಿದ ಘಾತಿಸ್ಥಿತಿಯಂ ಸಮಾನಂಗೈದು ಬಳಿಯನಂತ ಮುಹೂರ್ತದಿಂಬಾದರ ಮನೋವಚನೋಚ್ವಾಸಾದಿಗಳಂ ನಿರೋಧಿಸಿ ಬಳಿಯುಂ ಸೂಕ್ಷ್ಮ ಕಾಯನಾಗಿ ಪಂಚಘ್ವಕ್ಷರೋಚ್ಛರಣ ಸಮಯದೊಳು ಅಯೋಗಿಕೇವಲ ಗುಣಸ್ಥಾನ ಸ್ಥಿತವಿವರತ ಕ್ರಿಯಾನಿವೃತ್ತಿಯೆಂಬ ನಾಲ್ಕನೆಯ ಪರಮಶುಕ್ಲಧ್ಯಾನದಿಂ ಶೇಷಘಾತಿಗಳಂ ನಿಮೂಲನಂ ಗೈದು ತ್ರಿಲೋಕ ಸ್ವಾಮಿ ನೇಮಿತೀರ್ಥೇಶ್ವರಂ, ಆಷಾಡ ಶುದ್ಧ ಸಪ್ತಮಿಯ ದಿನ ಪೂರ್ವಾಹ್ಣದೊಳ್ ನಾಲ್ವತೈದು ಲಕ್ಷ ಯೋಜನ ವಿಸ್ತಾರಮಾದ ಮನುಷ್ಯ ಕ್ಷೇತ್ರ ಪ್ರಮಾಣ ವಪ್ಪೀಷತ್ ಪ್ರಾಗ್ಭಾರ ಮೆಂಬಷ್ಟಮ ಪೃಥ್ವಿಯೊಳಷ್ಟ ಯೋಜನೋತ್ಸೇದಮಾಗಿ ಧವಲ ಛತ್ರಕಾರವಾಗಿ ತೊಳತೊಳಪ ಸಿದ್ಧಶಿಲಾಗ್ರದೊಳ್ ಲ್ಲೋಕಾಗ್ರವಾಗಿರ್ದ ತನುವಾತದೊಳೇಕ ಸಮಯದೊಳ್ಪೋಗಿ ನಿಜಪರ ಮೌದಾರಿಕ ದಿವ್ಯಶರೀರದಿನಿತುಗುಂದಿದಾಕಾರದಿಂ ನೆಲಸಿ ಆ ಶರೀರ ಜೀವಘನಾಕಾರದಿಂ ಛಾಯಾ ಪ್ರತಿಮೋಪನು ಸಾಕಾರ ನಿರಾಕಾರರುಮತೀಂದ್ರನು ಗೋಚರರುಂ ಕ್ಷಾಯಿಕ ಸಮ್ಯಕ್ತ್ವ ಕೇವಲಜ್ಞಾನ ಕೇವಲದರ್ಶನ, ಅನಂತವೀರ್ಯ, ಪರಮ ಸೂಕ್ಷ್ಮತ್ವ ಅವಗಾಹನತ್ವಾಗುರು ಲಘುತ್ವಾವ್ಯಾಭಾಧಂಗಳೆಂಬಷ್ಟ ಗುಣ ವಿಶಿಷ್ಟರುಂ ನಿತ್ಯರುಂ ಕೃತಕೃತ್ಯರುಂ ಪುನರ್ಬಂಧರಹಿತರುಂ ಸುಖದ ಕಣಿಗಳುಮಷ್ಟ ಸಿದ್ಧಪರಮೇಷ್ಠಿಗಳಾದರನ್ನೆಗಮಿತ್ತಲು.

ಭಾಮಿನೀ ಷಟ್ಪದಿ

ಸುರಪನಾಸನ ಕಂಪದಿಂದರಿ |
ದಿರದೆ ನೇಮಿ ಜಿನೇಶ್ವರನು ದು |
ರ್ದರದಘಾತಿಯ ಕೆಡಿಸಿ ಮುಕ್ತಿಶ್ರಿಗೆ ಪತಿಯಾದ ||
ತೆರನನಾಗಳೆ ಶಚಿಸಹಿತ ಸುರ |
ಕರಿಯಡರಿಯೆ ಚತುರ್ನಿಕಾಯಾ |
ಮರರು ಸಹಿತುಜ್ಜಂತಗಿರಿಗೈದಿದನು ಭಕುತಿಯಲಿ ||

……….. …… |
……….. …… |
……….. …… ….. ||
……….. …… |
……….. ……. …… ||

|| ಗ್ರಂಥಂ ಮಂಗಲಂ ಸಮಾಸ್ತಂ ||