ಸಂಧಿ ೬೨

ಶ್ರೀ ನೇಮಿ ತೀರ್ಥೇಶ್ವರನ ಸಮವಸರಣದೊಳು |
ಮೀನಾಂಕ ಮೊದಲಾದ ನೃಪರು ರುಗುಮಿಣಿ ಮುಖ್ಯ |
ಮಾನಿನಿಯರೊಸೆದು ತಂತಮ್ಮ ಭವಮಂ ಕೇಳ್ದು ತೊರೆದು ದೀಕ್ಷೆಯನಾಂತರೈ || ಪ ||

ಕೇಳು ಮಗಧಾಧೀಶ ನೇಮಿಜಿನಪನ ದಯಾ |
ಪಾಲಕನ ಸಮವಶೃತಿ ವಿಹರಿಸುತ ಬಂದು ಸುವಿ |
ಶಾಲದ ದ್ವಾರಕೆಯ ದೈವದುದ್ಯಾನದುಪರಿಮಗಗನ ತಳದೊಳಿರಲು ||
ಸೂಳುಯಿಪ ದೇವದುಂದುಭಿಯ ಜಯ ಜಯರವವ |
ಕೇಳಿ ನಗಧರ ಹಲಧರಾದಿ ಯದು ವಂಶಜರು |
ಮೇಳಿಸಿದ ಭಕ್ತಿಯಿಂದೈದಿ ದೀಕ್ಷೆಯನಾಂತು ಸಮವಸರಣದ ಸಭೆಯಲಿ || ೧ ||

ಇರಲು ವರದತ್ತಗಣಧರರ್ಗೆ ಕೈ ಮುಗಿದೆಲೇ |
ಗುರುವೆ ಓರನ್ನರಹರೀರ್ವ ರೀರ್ವರು ತಪೋ |
ಧರರೆನ್ನ ಮನೆಗೊಲಿದು ಮೂಮೆ ಚರಿಗೆಗೆ ಬರಲು ನನಗವರೊಳೇಕೆ ಮೋಹ ||
ದೊರೆಕೊಂಡುದೆಂದು ದೇವಕಿಬಿನ್ನಯಿಸಲೊಡನೆ |
ಪರಿಕಿಪೊಡಮರು ನಿನ್ನ ನಂದನರು ನೈಗಮಾ |
ಮರನೊಯಿದಮಳುಗಳರು ವರ ಚರಮದೇಹಿಗಳು ತಳೆದರಾಶಾಂಬರತೆಯ || ೨ ||

ಎಂದು ನಿರವಿಸೆ ಸಂತಸದಲಿರ್ದಳಿದಲೊಡನೆ |
ಚಂದ್ರಮುಖಿ ಸತ್ಯಭಾಮೆಯು ತನ್ನ ಭವವನೊಲ |
ವಿಂದ ಕೇಳಲು ಪೇಳ್ದವರು ಮಗಳೆ ಕೇಳು ಶೀತಲ ತೀರ್ಥಕರು ವರ್ತಿಸಿ ||
ಸಂದ ಧರ್ಮವು ಕೆಟ್ಟ ಕಾಲದಲಿ ಮೇಘರಥ |
ನೆಂದೆಬರಸು ಭದ್ರಿಳವೆನಿಪ್ಪ ಪರವರಂ |
ನಂದಿನಿಯೆನಿಪ್ಪ ರಾಣಿ ಸುಖದಿನವರಿರಲಲ್ಲಿ ಓರ್ವನತಿದುಷ್ಟಮನನೈ || ೩ ||

ಭೂತಿಶರ್ಮನು ವಿಪ್ರ ಕಮಲೆವಧು ಮಂದನೆಂ |
ಬಾ ತನುಜನಾತಂಗೆ ಪುಟ್ಟಿ ಬಳೆದು ದು |
ರ್ನೀತಿಯ ಕುಶಾಸ್ತ್ರಮಂ ಕಲಿತು ಸಪ್ತವ್ಯಸನಲಂಪಟನು ಪಾಪದೋದ ||
ನೂತನವ ಮಾಡಿ ಭೂಪತಿಗೆ ಜನಪದಕೆ |
ಮಾತನೋನಂಬಲೋದಿಸಿ ಕಡೆಯೊಳಳಿದು ದುಃ |
ಖಾತಿಶಯದೇಳನೆಯ ನರಕದುಃಖವನುಂಡು ತಿರ್ಯಂಚದೊಳು ತಿರಿದನೈ || ೪ ||

ತಿರಿಕದೊಳು ತಿರಿತಂದುಮೆತ್ತಾನುಮುಪಶಮದಿ |
ವರಗಂಧಮಾದನ ನಗೇಂದ್ರ ತಟ ಗಂಧವತಿ |
ಯುರು ನದಿಯ ಹೊರೆಯ ಬಲ್ಲೂಕನೆಂಬಾ ಶಬರ ಶಿಬಿರದೊಳು ಕಾಲನೆಂಬ ||
ಪಿರಿಯ ಲುಬ್ಧಕನಾಗಿ ಇರುತೊಂದು ದಿನಲಬ್ಧಿ |
ದೊರೆಕೊಂಡು ಧರ್ಮರೆಂಬಾಶಾಂಬರರ ಕಂಡು |
ಚರಣ ಕಮಲಕ್ಕೆರಗಲವರು ಕುಡೆ ಧರ್ಮಮಂ ಪಿಡಿದುನಡೆದೊಡಲನುಳಿದು || ೫ ||

ಮೆರೆಯ ವಿಜಯಾರ್ಧವಳಕಾಭಿದಾನವು ಪುರವ |
ದರಪತಿಯು ಪೆಸರಿನಿಂದುರು ಬಲವಿಯಚ್ಚರನು |
ತರುಣಿ ಜ್ಯೋತಿರ್ಮಾಲೆಯವರ್ಗೆ ಹರಿಬಲನೆಂಬ ಮಗನಾಗಿ ರಾಜ್ಯವಾಳಿ ||
ತರಿ ಸಂದನಂತ ವೀರ್ಯಾಚಾರ್ಯರಿಂ ತಪ ಮ |
ನುರೆ ತಲೆದು ಮುಡುಪಿ ಸೌಧರ್ಮದೊಳು ಪುಟ್ಟಿಯವ |
ಚರದ ಸುಖವುಂಡು ಬಂದಿಲ್ಲಿ ನಾನಾದೆಯೆನೆ ಹರುಷದಿರ್ದಳು ಸತ್ಯೆಯು || ೬ ||

ಬಳಿಕ ಕೈಮುಗಿದು ರುಗುಮಿಣಿಕೇಳೆ ಪೇಳ್ದಪರು |
ತಿಳಿವುದೀ ಭರತದೊಳು ಮಗಧ ವಿಷಯದೊಳಿಹುದು |
ಹೊಳಲು ತಾಂ ಶ್ರೀಪುರವು ಸೋಮಶರ್ಮನ ಧರ್ಮ ವಿಪ್ರನಾತನ ಬ್ರಾಹ್ಮಣಿ ||
ಚೆಲುವೆ ಕೈಗೈದು ಕನ್ನಡಿ ನೆಳಲು ಕಂಡುವಾ |
ಗಳು ಚರಿಗೆಗೆಂದು ಮಾಸೋಪವಾಸಿಗಳು ನಿ |
ರ್ಮಲರಹ ಸಮಾಧಿಗುಪ್ತರು ಬರಲು ಮುಕರದೊಳು ಕಂಡು ಕಡುಹೆದರಿದವಳು || ೭ ||

ಕೆಡೆ ನುಡಿದು ಜಿನಮುನಿಯ ನೂಂಕಿಸಿದಳಾಕೆ ತಾಂ |
ಕಡೆಯೊಳಾ ಮೈ ಕೆಟ್ಟು ಕೊಳೆದಿಡುತತದ್ಗೃಹದಿ |
…ದಿಲಿ ಕೊಳೆವಾವು ಬೆಳುಗತ್ತಹೀಹಂದಿ ಸಾರಮೇಯಂಗಳಾಗಿ ||
ಕಡುದುಃಖವುಂಡುಂಡು ಮಡಿದು ಕಾಳಿಂದಿ ನದಿ |
ಯೆಡೆಯ ಮಂದಿರಪುರದ ಮತ್ಸ್ಯಮೀಂಬುಲಿಗಂಗೆ |
ಮಡದಿ ಮಾಂದೂತಿಗಂಪೂತಿಗಂ ಪೂತಿನಿಯೆಂಬ ಮಗಳಾಗಲೇ ವೇಳ್ವೆನೈ || ೮ ||

ಅಳಿದರಾಕೆಯ ತಂದೆ ತಾಯ್ಗಳನ್ಯರ ಕೀಳಿ |
ಳೊಳಗಾಕೆಯಿರಲವಳ ದುರ್ಗಂಧಕತಿ ಹೇಸಿ |
ತಳುವದಲ್ಲಿಯ ಜನಂ ಪೊರಮಡಿಸಿ ಕಳೆಯೆ ಕಾಳಿಂದಿಯಂಬಿಗರ ಪೊರ್ದಿ ||
ಪೊಳೆಯೊಳಿರಲಂದಿನ ಸಮಾಧಿಗುಪ್ತರೆ ಬಂದು |
ನಳಿನಬಾಂಧವನಸ್ತಮಿಸಲಾ ನದಿಯ ತೀರ |
ದಲಿಯೋಗದಿರೆ ಕಂಡು ಕಡುಬಡವನೆಂದು ಪರುಗಲಬಲೆಯ ಮರೆಗೈದಳು || ೯ ||

ಮಶಕ ದಂಶಾದಿ ಬಾಧೆಯು ಪೊರ್ದಂದಂತೆ ಸಂ |
ತಸದಿ ಹಗ್ಗಿಯನುರುಹಿ ಭಕುತಿಯಿಂದಿರಲೊಡನೆ |
ಬಿಸುಗದಿರನುದಯಿಸಲು ಕೈಯೆತ್ತಿ ಕೊಂಡವಧಿಯಿಂದರಿದು ಲಕ್ಷ್ಮೀಮತಿ |
ಗಸಣಿಗೊಳಗಾದೆ ಗಡ ಯೆಂದಾಮುನೀಂದ್ರರದ |
ನುಸುರೆ ದುರ್ಗಂಧಿಯು ಭವಸ್ಮರಣೆ ಪುಟ್ಟಿ ವಂ |
ದಿಸಿ ಮಗಳೆ ನೀನಂದು ನಮ್ಮ ಪಡೆದಿಂತಾದೆಯೆಂದೆಲ್ಲವಂ ಪೇಳ್ದರು || ೧೦ ||

ಮುನಿವರರು ಪಂಚಾಣು ವ್ರತವನಾ ಪೂತಿಗಂ |
ಧಿನಿಗಿತ್ತು ಪರಸಿ ಬಿಜಯಂಗೈದರಾಕೆ ಜಿನ |
ಮುನಿಪತಿಯ ನಗನಾಗಮೃಗಪತಿಯ ನಾನಂದು ಪಳಿದಿಂತು ನೊಂದೆನಕಟ ||
ಎನುತ ಪಶ್ಚಾತ್ತಾಪದಿಂ ಧರ್ಮಮಂ ಪಿಡಿದು |
ಜಿನರೆ ಸರಣೆನುತಿಪ್ಪಿನಂ ರಾಜಗೃಹಕೊಲಿದು |
ಜಿನಪೂಜೆಯಂ ನೋಳ್ಪೊಡಜ್ಜಿಕೆಯರೈದುತಿರೆ ಬೆಂಬಳಿಯೆ ತಾಂ ಪೋದಳು || ೧೧ ||

ಪೋಗಿಯಾ ಪೊಳಲ ಪೊರವಲಯದೊಳಗತಿವಿದಿತ |
ವಾಗಿರ್ದ ಶಿಲೆಯೆಂಬ ಗಿರಿಯಾ ಮಧ್ಯದ ಗುಹೆಯ |
ಬಾಗಿಲಲಿ ಆ ವಸುಂಧರೆಯರೆಂಬಜ್ಜಿಕೆಯರೆಂದಂತೆನೋನುತಾಕೆ ||
ಆಗಳಿರುತಿರಲಾ ಸಮಾಧಿಗುಪ್ತರುವಲ್ಲಿ |
ಗಾಗಿಬರೆ ತತ್ಪುರದ ನೃಪನ ಸುತೆ ಶ್ರೀಮತಿಯು |
ಬೇಗದಿಂ ಬಂದವರ ಪದಪದ್ಮಗಳನು ಪೂಜಿಸಿ ನಮಸ್ಕರಿಸಿದವಳು || ೧೨ ||

ಪರಸಿ ಆ ಶ್ರೀಮತಿಗೆ ಪೂತಿಗಂಧಿಯ ಭವವ |
ನೊರೆದರಾ ಮುನಿಪರದ ಕೇಳ್ದುಲಕ್ಷ್ಮಿ ಮತಿಯು |
ದೊರೆಯಪ್ಪ ತನ್ನ ಸಖಿ ಮುನ್ನೆಂಬುದಂ ತಿಳಿದು ಪೂತಿಗಂಧಿಯನುಕಂಡು ||
ಪಿರಿದು ಸಂಭಾಷಿಸಿತದಾರ್ಯಿರಿಕೆಯರಿಂ ಕರ್ಮ |
ಹರಿವಿನೂತಾಷ್ಟಮಿಯ ನೋಂಪಿ ಮೊದಲಾದವಂ |
ತರದಿ ಕೈಗೊಳಿಸಲಾಕೆಯು ನೆಡಪುತಿರಲೆಂದಿನಂತೆ ಪಾರಣೆಯದಿನವು || ೧೩ ||

ಸುರಸಾನ್ನವನು ವಿರತೆಯನು ನೀಡಲುಳಿದನಿತ |
ನರಿಯ ಮೈನಿರೆಬಿಸುಡಲೊಗೆದಿರುಪೆಗಳು ಮಡಿದ |
ದುರಿತವಿರೆ ಪತ್ತಿದುದು ಪೂತಿಗಂಧಿಗೆ ಜೀವಿತಾಂತ್ಯದೊಳಗಾಗುರುಗಳ ||
ವರಸುಂಧರೆ ಕಂತಿಯರು ಸನ್ಯಸನನವಿದ್ಯೆ |
ನುರು ಸಮಾಧಿಯನು ಕೈಗೊಳಿಸಿ ತನುವನು ಬಿಸುಟು |
ಮೆರೆವಚ್ಚುತೇಂದ್ರಂಗೆ ಗಗನವಲ್ಲಭೆಯೆಂಬ ವಧುವಾಗಿ ಸುಖವಿರ್ದಳು || ೧೪ ||

ಪಳಿತೋಪಮಾಯುವಂ ರಾಗದಿಂದುಂಡು ಬಂ |
ದೆಲೆ ಮಗಳೆ ರುಗುಮಿಣಿಯೆ ನೀನಾದೆ ಅಂದಿನಾ |
ಕೊಳೆದ ಕೂಳಿಡಲೊಗೆದು ಮಡಿದಜೀವಗಳಿಂದ ಬಂದಪಾಪವೆಯಿಂದುತಾಂ ||
ಘಳಿಯಿಸಿತು ನಿಜಬಂಧುಬಾಂಧವರ ದೆಸೆಯಿಂದೆ |
ಬಳೆದಶೋಕವು ನಿನಗೆ ನಾಲ್ಕಾಕೆ ಕೇಳ್ದುತಂ |
ನೊಳೆ ತಿಳಿದು ಸಂಸಾರವತಿ ಚತ್ರವೆಂದುಗಣಧರರ್ಗೆರರ್ಗಿ ಸುಖವಿರ್ದಳೈ || ೧೫ ||

ಇರಲು ಜಂಬಾವತಿಯು ತನ್ನಭವಂ ಕೇಳೆ |
ಗುರು ನಿರೂಪಿಪರೆಸೆವ ಪುಷ್ಕಳಾವತಿಯ ಬಂ |
ಧುರನಗರವತಿ ಶೋಕೆ ಪೆಸರಿನಿಂದದರೊಳಿಹ ನಂದನವನಕವನಿಜನು ||
ತರುಣಿಯೊಪ್ಪುವ ದೇವಮತಿಯವರಿಗಾತ್ಮಭವೆ |
ವರ ವಿಮಲೆಯೆಂಬಳವಳನು ಸುಮಿತ್ರನೆನಿಪ್ಪ |
ವರಗೆ ಕುಡಪಡೆದ ಪಲದಿನದ ಮೇಲಳಿದನಾತನು ಕಾಲನೇಗಯ್ಯನು || ೧೬ ||

ಬಳಿಯನಾಂ ವಿಮಲೆ ಜಿನದೇವಗುರುಗಳು ಪೇಳೆ |
ತಳೆದು ಶೀಲವಿಶಾಲೆಯಾಗಿ ಕಳಿದನಿಮಿಷಾ |
ಚಲದ ನಂದನವನದ ವನದೇವಿಯಾಗಿ ನಾಲ್ಕಧಿಕಸಾಸಿರದೆಂಬಂತು ||
ತಳೆದಬ್ದದಾಯುರವಸಾನದಲಿ ತದ್ವಿಷಯ |
ದೊಳೆ ವಿಜಯಪುರದ ವಿಜಯಾಖ್ಯ ಪರದನವನಿತೆ |
ಚೆಲುವೆ ನೆರೆ ಬಂಧುಮತಿಯಂತವರ್ಗೆ ವಿಜಯಸೇನೆಯೆನಿಪ್ಪ ಮಗಳಾದಳು || ೧೭ ||

ಜಿನದೇವ ವಣಿಜಸುತ ಜಿನದತ್ತೆಯೆಂಬವಳೊ |
ಳನುಬಂಧೆಯಾಗಿ ಶ್ರೀಪಂಚಮಿಯ ನೋಂಪಿಯನು |
ಮನವಾರೆ ನೋಂತು ಕಡೆಯೊಳು ಕಲಿದು ಸೌಧರ್ಮಕಲ್ಪದೊಳು ದೇವಿಯಾಗಿ ||
ಅನಿಮಿಷೆಯ ಪುಂಡರೀಕಿಣಿಪುರದ ವಜ್ರಸೇ |
ನನ ಸತಿ ಸುಭದ್ರೆಗೊಪ್ಪುವ ಸುಮತಿಯೆಂಬ ವಣಿಜಾತ್ಮಜೆಯುತಾನಾದಳು || ೧೮ ||

ಪರದಸುತೆ ಸುವ್ರತೆಯರೆಂಬಜ್ಜಿಕೆಯರಿಗುರೆ |
ಚರಿಗೆ ಮಾಡಿಸಿ ಅವರ ಪಕ್ಕದೊಳಗಿರ್ದು ಬಂ |
ಧುರ ಸುರತ್ನಾವಳಿಯೆನಿಪ್ಪ ನೋಂಪಿಯ ನೋಂತು ಕಳಿದೈದನೆಯ ಕಲ್ಪದ ||
ಸುರಪತಿಗೆ ವಧುವಾಗಿ ಹದಿಮೂರು ಪಲ್ಯದೊಂ |
ದಿರವಾದ ದಿವ್ಯಸುಖವುಂಡು ಬಂದೀ ಜಂಬು |
ಧರಣೀಶಗಾತ್ಮಜೆಯು ಹರಿಗರಸಿ ನೀನಾದೆ ಯೆನೆಸಂತಸಂಬಟ್ಟಳು || ೧೯ ||

ಎಸೆವಾ ಸುಶೀಮೆ ಲಕ್ಷ್ಮಣಿ ಗೌರಿ ಗಾಂಧಾರಿ |
ಯೆಸೆವ ಪದ್ಮಾವತಿಯುಮೆಂಬವರು ಮುರವೈರಿ |
ಯಸುವೆನಿಪ ಪಟ್ಟಮಾ ದೇವಿಯರು ಮೊದಲಾದವರು ತಮ್ಮ ತಮ್ಮ ಭವವ ||
ಸಸಿನೆ ಕೇಳ್ದರಿದು ವರದತ್ತಗಣಧರರ್ಗೆ ವಂ |
ದಿಸಿ ಸಂತಸಲಿರ್ದಲಿರಲೊಡನೆ ಬಲಭದ್ರ |
ನೊಸೆದು ನೆರೆ ನಿಟಿಲತಟ ಘಟ್ಟಿತಮುಕುಳಿತಕರಯುಗಜಿನೇಂದ್ರಂಗೆಂದನು || ೨೦ ||

ಶತಮನ್ಯು ಕೃತಜಲಧಿವೃತವೆಂದು ಪೊಳಲು ಸಂ |
ನುತ ನೇಮಿನಾಥ ಜಿನ ನಿಮಗ್ರಜಾತನು |
ದ್ಧತದಾನವಾರಿಯೆನಿಸಿಹ ಚಕ್ರಪಾಣಿಯದರಿಂದಾ ಪುರಕ್ಕೆ ಹರಿಗೆ ||
ಸ್ಥಿತಿ ನಿತ್ಯವೋ ಮೆಣನಿತ್ಯವೋ ಎಂದುವಿ |
ಶ್ರುತಬಂ ಬೆರಸುಗೊಳಲು ಗಣಧರರು ಪೇಳ್ದಪರು |
ಹಿತಮೃದುಮಧುರಗಭಿರೋಕ್ತಿಯಿಂ ಯಾದವ ಪ್ರಮುಖ ಸಭೆ ಕೇಳುತಿರಲು || ೨೧ ||

ಸುರೆಯತ್ತಣಿಂದೆ ದೀಪಾಯನನ ದೆಸೆಯಿಂದೆ |
ಗಿರಿಧರನು ಸೀನು ಪೊರಗಾಗಿಯಿನಿತಿರದಳಿಗು |
ಪುರವೆಲ್ಲವುಂ ನೆರೆ ಜರತ್ಕುಮಾರಕನಿವನ ಹೊನ್ನಂಬಿಸಿಂ ಮಡಿವನು ||
ಮುರರಿಪುವಮೋಘವೆಲೆ ಬಲಭದ್ರ ಕೇಳೆನಲು |
ಪರಮೇಶ್ವರನ ವಚನ ತಪ್ಪುವುದೆ ಸುಡು ಸುಡೀ |
ನರರ ರಾಜ್ಯವ ಯವ್ವನವಚಿರಾಯುವನೆಂದು ಬೆಕ್ಕಸಂಬಟ್ಟರವರು || ೨೨ ||

ಹಲಧರನು ಮತ್ತೆ ಕೈಮುಗಿದೆಲೆ ಸ್ವಾಮಿಯದು |
ಕುಲತಿಲಕ ಕೃಷ್ಣಂಗೆ ನನಗೆ ಮುಂದಣ ಭವದ |
ನೆಲೆಯೇನದಂ ಬೆಸಸಿಮೆನೆ ಮೂರನೆಯ ನರಕದೊಳುಪುಟ್ಟುವನು ಕೃಷ್ಣನು ||
ಸಲೆ ಜಘನ್ಯಾಯು ಸಾಗರ ಮೂರನುಂಡು ತಾಂ |
ಬಳಿಕಮುತ್ಸರ್ಪಣದ ಕಾಲದೊಳು ಬಂದಿಲ್ಲಿ |
ಮಲರಹಿತ ಚರಿತದಿಂ ತೀರ್ಥೇಶನಾಗಿಮುಕ್ತಿ ಶ್ರೀಯನಿರೆ ನೆರೆವನು || ೨೩ ||

ಅನುಜನವಿಯೋಗದಿಂ ನೀನಿರ್ದುವುಪಶಮದಿ |
ತನುವನುಳಿದೈದನೆಯ ಕಲ್ಪದೊಳು ಸುರನಾಗಿ |
ಅನಿಮಿಷ ಶ್ರೀಯುಂಡು ಬಂದಿಲ್ಲಿ ಕೃಷ್ಣನಾ ಸಮಶ್ರುತಿಯೊಂದಿ ಬಳಿಕ ||
ವಿನುತನೈ ನೀನೆ ವೊಡನೆಯೆ ಸಲುವೆ ಮೋಕ್ಷಕೆ |
ಎನಲು ಹರಿಯುಂ ಬಲನುಮಾಸನ್ನವಾದುದೆಮ |
ಗನವಧಿಯೆನಿಪ್ಪ ಸಂಸಾರವೆಂದಾ ಜಿನನಮೋಘವಾಕ್ಯವಪಿಡಿದರು || ೨೪ ||

ಗುರುನಿರೂಪವಮೋಘವಾರಾರು ದೀಕ್ಷೆಗೊ |
ಳ್ವರನಿನಿತು ಬೇಡೆನ್ನನೆಂದು ಚಕ್ರಾಯುಧಂ |
ಕರಮೊಸೆದು ಭಾವಿ ತೀರ್ಥೇಶನಪ್ಪುದರಿಂದೆ ಸಮ್ಯಕ್ತ್ವವನು ತಾಳ್ದಿದಂ ||
ಪರಮೇಶ್ವರರಿಗೆರಗಿ ಬೀಳ್ಕೊಡಲು ಯಾದವರು |
ಹರಿಯ ಮುಂದಿಟ್ಟುಕೊಂಡಾ ದ್ವಾರಿಕಾಪುರವ |
ನಿರೆ ಪೊಕ್ಕು ತಂತಮ್ಮ ರಾಜಾಲಯದೊಳಿರ್ದರವನೀಶ ! ಕೇಳೆಂದನು || ೨೫ ||

ಕೆಡುವುದು ಗಡೆನ್ನಿಂದ ಮೀದ್ವಾರಕಿಯು ನಾನು |
ಬಿಡದೆನೀ ಪೊಳಲನೆಂದಲ್ಲಿಂದ ಪೋಗಿತ |
ನ್ನೊಡಲನಾ ದೀಪಾಯನನು ದೀಕ್ಷೆಗೊಡ್ಡಿದನು ಮೆರೆವಾ ಜರತ್ಕುಮಾರ ||
ಕಡಲೊಳಾ ಹೊನ್ನ ಕುಪ್ಪಿಗೆಯೆಚ್ಚು ಕೌಶಂಭ |
ವಡವಿಯದನೈದಿ ಬೇಡರನೆರವಿಯೊಳಗಿರ್ದ |
ಪೊಡೆಯಲರನಾ ಪಟ್ಟಣದೊಳುಳ್ಳ ಕಳ್ಳೆಲ್ಲವಂತರಿಸಿಯೂರ ಹೊರಗೆ || ೨೬ ||

ಸುರಿಸಿದನು ಕಲ್ಲಡೊಣೆಗಳಲಿ ಬಾಡವನ ಭಯ |
ಕಿರಲಂಜಿ ಕಡಲಗಿದುದೊ ಎನಲು ಬಹಳವಾ |
ಗಿರಲದರ ಬಾಗಿಲಿಗೆ ಕಲ್ಲ ಬಾಸಣಿಸಿ ಮತ್ತಾಮದ್ಯವನು ಮಾಡದ ||
ಪರಿಯಲಾಜ್ಞಾಪಿಸಿದನಿನ್ನು ಬಾಧಾಹೇತು |
ಪರಿಹರಿಸಿತೆಂದು ಮೋಹಾಂಧನತಿ ರಾಗದಿಂ |
ಹರಿಯಿರ್ದನಾವನಂ ಮರುಳು ಮಾಡದೊ ಮೋಹನೀಯವೀ ದೇಹಿಗಳನು || ೨೭ ||

ಜಗದ ಗುರು ವಚನವನು ಹುಸಿಗೈವೆನೆಂಬೆ ಕೇ |
ಳ್ಪಗೆಯನೆಮ್ಮಯ್ಯನೇಕೆಯೊ ಬಗೆದನಕಟಕಟ |
ಬಗೆವೊಡದು ತಪ್ಪುಗುಮೆ ಮೋಹಾಂಧರೆನಿತುಮೇನರಿವರೇ ಮೇಲೆಣಿಕೆಯ ||
ಮಿಗೆ ಮೆರೆವ ಜನಪದಂ ಪುತ್ರರುಂ ಮಿತ್ರರುಂ |
ಸೊಗಸೆನಿಪ ತನುವೆಲ್ಲವಸ್ಥಿರವೆನಿಪ್ಪರಿವ |
ನೊಗುವುದದು ಮರುಳುತನವೆಂದು ತನ್ನನೆ ತಾನು ತಿಳಿದು ಮತ್ತಿಂತೆಂದನು || ೨೮ ||

ಮುನ್ನಮರಿಯಮೆಯಿಂದ ಸಂಸಾರವಾರಾಸಿ |
ಯನ್ನೆರೆಯ ಪೊಕ್ಕುದುಃಖದ ಸುಳಿಗಳೊಳು ಸಿಲುಕಿ |
ಬನ್ನಬಡೆದುರೆ ತೊಳಲಿ ಬಳಲಿ ಬಂದೆತ್ತಾನುಮೀ ನೇಮಿ ಜಿನಪರಿಂದೆ ||
ಮುನ್ನಾದ ಹಲವು ಭವವರಿತೆ ನಿನ್ನಪ್ಪುದನು |
ಚೆನ್ನಾಗಿ ತಿಳಿದೆನೀ ಕಿಡುವೊಡಲ ನೀಂ ಪೊರೆವು |
ದನ್ನಯವು ತಾನೆಂದು ಪ್ರದ್ಯುಮ್ನ ರಾಜವೈರಾಗ್ಯಪರನಾದನಿರದೆ || ೨೯ ||

ಸುಗುಣ ಮಣಿಭೂಷಣಂ ಮಣಿಭೂಷಣಂಗಳಂ |
ತೆಗೆದು ಕಾಲ್ವಟ್ಟೆಯಿಂದೇಕಾಕಿಯಾಗಿ ಬರೆ |
ನಗಧರನ ರಾಣಿಯರ ಮನೆಗೆ ರುಗುಮಿಣಿದೇವಿ ನಿಜಪುತ್ರನನು ಕಾಣುತ ||
ಮಿಗೆ ಬೆಕ್ಕಸಂಬಟ್ಟಳಕಟಕಟ ನೋಳ್ಪಡೆಲೆ |
ಮಗನೆ ನಿನ್ನೀ ಬರವು ಹೊಸತಯ್ಯ ಮೈಯಾಂತು |
ಸೊಗಯಿಪಾಭರಣಂಗಳಿಲ್ಲೇಕೆ ನಿನ್ನೊಡನದಾರುವೇಕಿಲ್ಲೆಂದಳು || ೩೦ ||

ಎಲೆ ತಾಯೆ ಚಿತ್ತೈಸು ಗುಣಮಣಿಯೆ ಭೂಷಣವು |
ಪಲವು ಭವದುಃಖವನು ಸವಿದಂದು ಸಂಗಡೇಂ |
ಪಲರಾರುಮುಂಟೆ ನೀವದನರಿಯಬೇಕೆಂದು ಬಂದೆನೆನೆ ಕೇಳ್ದು ದೇವಿ ||
ಸಲೆ ಚಿತ್ತದೊಳು ನೆನೆದಳೀ ಮಗಂ ಚರಮಾಂಗ |
ನಲಸಿದನೊ ಸಂಶ್ರುತಿಗೆ ದಿಟದಿಂ ವಿರಾಗದಿಂ |
ತಳೆವೆನೆಂದಾ ನೇಮಿ ತೀರ್ಥೇಶರೆಂದಂತೆ ತರಿಸಂದನೋ ಎನುತಲಿ || ೩೧ ||

ಎಂದಿನಂದದಲೊತ್ತಿನಲ್ಲಿ ಕುಳ್ಳಿರಿಸಿ ಕೊಂ |
ಡಿಂದುಮುಖಿಮೋಹದಿಂ ಕಂದನನು ನೋಡಿತಿರೆ |
ಕಂದರ್ಪರಾಜನಾಗಳು ಭೋಂಕನೆದ್ದುನಿಂದಮ್ಮ ಕೇಳ್ ಬಿನ್ನಹವನು ||
ಪಿಂದೆ ನನ್ನರಿವಳಿದನಂತ ಭವದಲಿ ಸಿಲುಕಿ |
ನೊಂದೆನೆತ್ತಾಣು ಪುಣ್ಯದಲಿ ನಿಮ್ಮುದರದೊಳು |
ಬಂದ ಬಳಿಕಿನ್ನು ನಾಂಬೆಳಹೆನೇ ಪಾವನ ಜಿನೇಂದ್ರರೂಪಂ ತಳೆವೆನು || ೩೨ ||

ಎನೆ ಮನೋಜನ ಮಾತೆ ಹೆಂಚಿತಾ ರುಗುಮಿಣಿಗೆ |
ಘನತರದ ಮೂರ್ಛೆಮುಂಚಿತು ಬಳಿಕಮೊಯ್ಯನೊ |
ಯ್ಯನೆ ತಿಳಿದು ಕಂದ ನೀನಿಂತು ಬಗೆದೈ ನಿನ್ನ ಪಡೆದೈದನೆಯದಿನದಲಿ ||
ಮುನಿವಂತಿರಗಲಿ ಪದಿನಾರಬ್ದವತಿ ದುಃಖ |
ವನೆಮಾಡಿದೈ ನಿನ್ನ ಕಂಡುದ ದುಃಖಂಗಳಂ |
ನೆನೆಯದಾನಿರೆಪೂಳ್ದ ಕಿಚ್ಚ ಕೆದರಿದ ತೆರನ ಮಾಡಿದೈ ನೀನೆಂದಳು || ೩೩ ||

ಕಂದ ನೀಂ ಬಂಧುವಿಂ ಬಳದಿಂ ಪರಿಗ್ರಹದ |
ದಂದುಗದಿ ದುಃಖವೆಂಬುದನರಿಯಿರೇ ಜನನಿ |
ಎಂದೊಡೇನಣ್ಣ ನೀಂ ಕಂದನೆಂಬಾ ಕಂದನೇ ನಿನ್ನ ಪೋಲ್ವರುಂಟೆ ||
ಎಂದಿನಾ ಜನ್ಮದೊಳು ದೊರೆಕೊಳ್ವರೆನಗೆ ನೀ |
ನಿಂದಿಂತು ಬೋಧಿಸಿದಾನೊಡಂಬಡುವೆನೆಂ |
ಬಂದವನು ಕಾಣೆನೆಂದತಿ ಧೃತಿಗೆಡುತ್ತಿರ್ದಳಾಗಳಂಗಜರಾಜನು || ೩೪ ||

ಪಡಿಮಾತದೇನಮ್ಮ ನಿಮ್ಮ ಭವವನ್ನೆನೆಯಿ |
ಮಿಡಿದ ದುಃಖವನಂತರೆಂತುಂಡಿರೆನ… |
ಲೊಡನೆತನ್ನಂ ತಾನೆ ತಿಳಿದು ಪುರುಷಂ ಸೋಂಕಿದುರ್ಕಿನಂತಾ ಭೀಷ್ಮಜೆ ||
ದೃಢದೆ ಶುದ್ಧಾಂತರಂಗವನಾಂತು ನಿನ್ನನಾಂ |
ಪಡೆದು ಮಿಗೆ ಧನ್ಯಳಾದೆನು ನಿನ್ನ ಕಾರ್ಯಮಂ |
ಬಿಡದದೆಸೆಗೆನೆ ಜನನಿಯಡಿಗೆರಗಿ ನಿಂದನೆಲೆ ಭೂಪಾಲ ಕೇಳೆಂದನು || ೩೫ ||

ಬಂದುದುದನರಿದು ಮದನನ ಪೆಂಡವಾಸವಿರ |
ದಿಂದುಮುಖಿ ರತಿದೇವಿ ಸಿಂಗರಿಸಿಕೊಂಡಿದಿರೆ |
ನಿಂದಿದೇ ಕುಸುಮಕೋದಂಡ ಪೆಂಡಿರಕಣ್ಣಸೆಯಿಪೆವೀರತಿಯನಾಂಪೆ ||
ಕುಂದು ನಿನಗೇನಾಯ್ತೊ ಮುಪ್ಪೊ ಬಡತನವೊ ಸುಖ |
ವಿಂದೇನುವಿಲ್ಲವೋ ನಿನ್ನಿಚ್ಛೆಗೂಟಕ್ಕೆ |
ಸಂದಳ್ತಿದೋರ್ವ ನೀರೆಯರಿಲ್ಲವೋ ನಿನಗಿದೇಕೆಂಬುದುದು ವಿರತಿಯು || ೩೬ ||

ಮರುಳಲಾ ರತಿದೇವಿಯಿಂದ್ರಿಯ ಸುಖಂ ಸುಖವೆ |
ಪರಿಕಿಪೊಡೆಯಿಂದ್ರಿಯವೆ ರೋಗ ವಿಷಯವೆ ಮದ್ದು |
ಸುರವಧುವು ಸಂಗಪೀಯೂಷಾದಿ ಸೇವೆಯಿಂ ಮಾಣ್ದುವಿಲ್ಲದುವೆಂದೊಡೆ ||
ನರರನೀಂ ಬಾಳಲೀವುದೆಯೆಂದು ತೊರೆದು ಸಂ |
ಸರಣಕ್ಕೆ ಬೆದರಿ ಭರತಾದಿಗಳು ನಿಜರೂಪ |
ವೆರಸಿನಿಬ್ಬಣವೆಣ್ಣ ಸವಿಸುಸಿಲನುಂಡರೆನೆ ಮತ್ತಾಕೆಯಿಂತೆಂದಳು || ೩೭ ||

(ಟಿಪ್ಪಣಿ :- ಪದ್ಯ ೩೮, ೩೯ ಸರಿಯಾಗಿಲ್ಲ. ಅವನ್ನು ಬಿಡಲಾಗಿದೆ.)

ಕೊಣೆನಾರ್ವ ಕೀವು ನೆಣ ನೆತ್ತರಡಗೆಲುವಿನಿಂ |
ಬಳೆದ ಮಲ ಮೂತ್ರ ಶುಕ್ಲಂಗಳಿಂ ಲಿವಿಲಿವಿಪ |
ಪುಳುಗಳಿಂದುರುದುರಿಪ ಮಿದುಳಿನಿಂ ಕರುಳಿನಿಂ ಬಿಗಿದರನರ ಸೆರೆಗಳಿಂದ ||
ಪೊಳೆವ ತೆಳುದೊಗಲ ಹೊದಕೆಯಿನೊಪ್ಪುವೀಮೈಯ |
ನುಳುಹಿ ಕೊಂಡಿದರೊಳಗೆ ಸಿಕ್ಕಿ ಸಿಡಿಮಿಡಿಗೊಳುತ |
ಬಳಲುವೆನೆ ಜಿನದೀಕ್ಷೆನಿದ ನೋಡಿ ಪಡೆವೆನಾನಮೃತ ಸೌಖ್ಯಮನೆಂದನು || ೪೦ ||

ಸ್ಮರರಾಜ ನೀನೆ ಮಜ್ಜೀವಿತಾಧೀಶನಾ |
ಗಿರಬೇಹುದೆಂಬ ಬಗೆಯಿಂತರಗಿಣಿಯನು ಬಂ |
ಧುರವಾದ ಪಳುಕಿನಾಸರಿನಲ್ಲಿ ನಾಡೆ ತಪಮಂ ಮಾಡಿ ಪಡೆದೆನಂದು ||
ಇರೆ ನಿನ್ನನಿಂದೆನ್ನ ಬಿಟ್ಟು ಪೋಪೈ ದಯಾ |
ಪರನೆ ನೀನೆಂಟು ಸಾಸಿರಹೆಂಡಿರಸುಗೊಳ್ವ |
ಪರಿಲೇಸು ನೋಯಿಸಿಯೆ ಮುಂದೆ ಪಡೆವಾ ಸೌಖ್ಯವೇನೆಂದಳಾ ಕಾಂತೆಯು || ೪೧ ||

ಮುಂದೆ ಪಡೆವಾ ಸೌಖ್ಯದಿರವನೆನ್ನಂತೆ ಬಗೆ |
ದಂದವರ್ಗಲ್ಲದರಿವುದು ಸಖ್ಯವಬಲೆ ನೀ |
ನೆಂದು ಮೋಹದಿ ನೊಂದೆ ಮುಂದೇನನಂತಕನುಕೊಂಡ ಕೊಂಡೊಯ್ವಾಗಳೊ ||
ಇಂದುಮುಖಿ ನೀನೋಯದೇಗೆಯಿದೆ ನೋಳ್ಪಡದ |
ರಿಂದೆ ನಾಂ ಶಾಶ್ವತ ಸುಖಂಬಡೆವೆನೆಂಬುದುಂ |
ಮುಂದೆ ನಿಂದಾ ವಿದರ್ಭಾದೇವಿ ಕಣುನೀರ ಪೊನಲನೊಗುತಿಂತೆಂದಳು || ೪೨ ||

ಕುಸುಮ ಶರ ಕೇಳಂದು ನಿನ್ನ ಚೆಲುವನು ಕಾಣು |
ತೊಸೆದು ಕುಲವಂಚಲವನೆಮ್ಮವರಿಗಹ ಕುಂದ |
ನುಸುರಲೇನಣಮೆನಿಸದೈದೆ ಬೆಂಬತ್ತಿ ಬಂದವಳಾನದೇನಲ್ಲವೆ ||
ಹಸುಳೆಯಾದೆನ್ನ ಕೊಲುವುದೆತೊಲಗಿ ನೀಂ ನಾನು |
ನಸು ಮುನಿಸೆ ಬಂದೆನ್ನನಾವ ಬಗೆಯಿಂ ತಿಳುಪಿ |
ಕುಶಲರದದಿಂದೊಲಿ ಓಪ ನೀಂ ತೊಲಗೆ ಜೀವಿಪೆನೆಂತು ಪೇಳೆಂದಳು || ೪೩ ||

ಸರಳೆ ನಿನ್ನಳ್ತಿಯಂ ಸಲಿಸುವುಜ್ಜುಗದಿನಿಂ |
ತಿರುತಿರ್ದೆನಲ್ಲದಾನಿನ್ನೆವರಮಿಹೆನೆ ಕಾ |
ತರಿಸದಿಹುದೆಂದು ಕರುಣದಿ ನುಡಿಯೆ ಬಂದುದದಿ ಬಾಷ್ಪಾಂಬುವಂ ಕರೆವುತ ||
ಸ್ಮರರಾಜ ನಿನಗೆಂದ ಹರಸಿ ಪಡೆದೆನ್ನನಂ |
ತಿರದೆಮ್ಮವರು ನಿನಗೆ ಕುಡೆಬಂದ ಬಾಲಕಿಯ |
ಕರುಣವಳಿದಿಂತು ನೀಂ ಬಿಟ್ಟಾಗಳೆನ್ನೊಡಲ ಬಿಟ್ಟುಪೋಗದೆ ಹರಣವು || ೪೪ ||

ಎಂದು ಪಲತೆರದ ದೈನ್ಯದ ನುಡಿಯ ಕೇಳುತಾ |
ಮಂದರಾಚಲ ಧೈರ್ಯನಾಕೆಯಂ ಸಂತೈಸೆ |
ಬಂದನಾಗಳೆ ಕೇಳ್ದು ಚಕ್ರೇಶನೈ ಮಗನೆ ನೀನೆಂತು ಬಗೆದೆಯಕಟ ||
ಕಂದನಂ ಪರಸಿ ಪೆರ ತಂದೆತಾಯ್ಗಳ ಕಂಗ |
ಳಂದೆ ಪೋದಪವೆಂಬ ಗಾದೆನಿಮಗಿಂದಿನಿಂ |
ನಿಂದಾಯ್ತು ನೀನಿಲ್ಲದೇನಿರ್ದು ಫಲವೇನೊಯೆಂದುಮತ್ತಿಂತೆಂದನು || ೪೫ ||

ಎಲೆ ಮಹಾಪುರುಷ ಹದಿನಾರು ವರುಷಂಬರಂ |
ಬಲದ ತೋಳಿಲ್ಲದಂತಿರ್ದೆನಾಂ ನೀನಿಲ್ಲ |
ದಲಗುಭುಜ ಬಲಿಕ ನಿನ್ನನು ಚಕ್ರರತ್ನವನು ಪಲವುವಸ್ತುವ ಪಡೆದನು ||
ಸಲೆಸುಖದೊಳಿಹೆನು ಚಿಂತಿಸದೆಂಬ ಕಾಲದಲಿ |
ತೊಲಗುವೊಯ್ಯೆನೆ ಮಹಾರಾಜನೀಂ ಚಿತ್ತೈಸು |
ತೊಲಗುವೊಯ್ಯೆನೆ ಮಹಾರಾಜನೀಂ ಚಿತ್ತೈಸು |
ತೊಲಗದಿಂತಾವವುಂನಿತ್ಯವೇ ಮುಕ್ತಿ ಸುಖವೊಂದೆ ಶಾಶ್ವತವೆಂದನೈ || ೪೬ ||

ಎನ್ನೆವರ ಮರುನೊಲುಮೆಯುಂಟನ್ನೆವರವೊಲಿದು |
ಸನ್ನಯದಿ ಲಕುಮಿಮೊದಲಾದವಿರುತಿರ್ಪವಿದು |
ಭಿನ್ನವಾದೊಡನವುಂ ಕೆಡುವವದರಿಂದಿನ್ನೆವರಮಿರ್ದುದೇ ಬೆಳ್ತನ ||
ಬನ್ನವಡೆಯದ ಸಿರಿಯನೊಲಿಸುವೊಂದುಜ್ಜುಗವ |
ನಾನ್ನೆಗಳ್ವನಂತಲ್ಲದೀ ಸ್ವಲ್ಪ ಸುಖಕಾಗಿ |
ಬನ್ನವಾಂತಳಿಗಾಡಿಬಳ್ಳವನು ಹೋಗಾಡಿದಂತೆ ಬಗೆಗೆಡೆನೆಂದನು || ೪೭ ||

ಸುರರಾಜನಿಂತೆಂದು ಪೇಳೆ ಶಂಬುಕುಮಾರ |
ನರಲಂಬನೆನ್ನ ಪಲ ಜನ್ಮವೊಡವುಟ್ಟಿದನು |
ವಿರತನಾದಂ ಗಡಾ ನೇರಿಪಿಂಗುವೆನೆಯೆಂದು ತರಿಸಂದು ತಳುವದೊಡನೆ ||
ವಿರತನಾದನು ತಡಯದೀರ್ವರುಂತಂದೆ ತಾ |
ಯ್ವಿರ ಬಲ ಸಮುದ್ರ ವಿಜಯಾದ್ಯರಡಿಗೆರಗಿ ಸ |
ಬ್ಬರನುಚಿತವಚನದಿಂ ತಳುಪಿಪೊರಮಟ್ಟರಘ ಬೀರುಗಳದೇತಕಿಹರು || ೪೮ ||

…………………………… |
…………………………… |
ಶ್ರುತಕಾಮದೇವನಸಮಾನ ವಿಕ್ರಮನಖಿಲ ಸೌಭಾಗ್ಯಸಾರೋದಯ ||
ನುತನವ ವಯಸ್ಕನತಿ ನೀರನೆಂದೊಮ್ಮೋಹ |
ಯುತನಾದನೇ ನೋಡ ಪುಣ್ಯಮೂರ್ತೀಯೆನುತ |
ನುತಿಸುತೈತಂದುದಾ ಪುರದ ಪೆಣ್ಣುಂ ಗಂಡುಮಂಗಜನ ನೆರೆನೋಡುತ || ೪೯ ||

ಅಂಗಜನು ತಪವನಾಂತಂಗದಿಂ ನಮಗೇತ |
ಕಂಗಜಕಲಾಕೇಳಿಯೆಂದುದರೆಬರುಪೆಣುಗ |
ಳಂಗಡಿಯೊಳೆಡೆಯಾಡುತಿಪ್ಪಾಗಳಿಮ್ಮ ಕಂಗಳ ಹಾಹೆದುಂಬಿಗಳಿಗೆ ||
ಜಂಗಮಂತಾಂತಮಂ ಜರಿಯಾದವಂ ಪೋದ |
ನಿಂಗೋಲಬಿಲ್ಲನಿಲ್ಲದ ರಾಜ್ಯದಿಂದಡವಿ |
ಸಿಂಗಾರವೆಂದು ಕೆಲಬಲರುಕಾಮಿನಿಯ ತೊರೆದರು ಭೂಪಕೇಳೆಂದನು || ೫೦ ||

ಮನಸಿಜನು ಶಂಬುಕುವರನು ವಿರಕ್ತಿಯನಾಂತು |
ಜಿನಸಭೆಗೆ ನಡೆಗೊಳಲು ತರಿಸಂದು ತಾವು ಬೆ |
ನ್ನನೆ ಸತ್ಯಭಾವೆರುಗುಮಿಣಿಯ ಮೊದಲಾದ ಪಲಬರು ಮುರಾರಿಯಸತಿಯರು ||
ನನೆಗಣೆಯನೆಂಟು ಸಾಸಿರಕಾಂತೆಯರು ಪುರದ |
ವನಿತೆಯರು ಕೆಲರು ಕೆಲರುಳಿದ ಭೂವರರ ಭಾ |
ಮಿನಿಯರಾ ಸಂಸಾರ ತನುಭೋಗ ನಿರ್ವೇಗಪರರಾದರೇವೇವೇಳ್ವೆನು || ೫೧ ||

ಜನನುತ ಸಮುದ್ರವಿಜಯಾದಿ ವಸುದೇವ ಕಡೆ |
ಎನಿಪವರು ವಸುದೇವ ವಸುತರುಬಲಾತ್ಮಜರು |
ವನಮಾಲಿಯುಳಿದ ಕುವರರು ಪರಮವೈರಾಗ್ಯಪರರಾಗಿ ಕಾಮನೊಡನೆ ||
ಜಿನಸಮವಶ್ರುತಿಯೈದಿ ನೇಮಿಜಿನರಡಿಗಳಿಗೆ |
ಮನವೊಸೆದು ಮನಸಿಜಿನನಂಗಸೌಖ್ಯವನಮೃತ |
ಘನಲಕುಮಿಯೊಳು ಪಡೆದನವರವರು ತಮ್ಮಾಳ್ವ ಮನದಪರಿಣಾಮದಿಂದ || ೫೨ ||

[ಸರುವ] ಮೋಕ್ಷಂಗಳನು ಪಡೆದರಿತ್ತಲು ರಾಜ್ಯ |
ಭಾರದಲ್ಲಚ್ಚುತನ ಮೇಲಣತಿ ಮೋಹದಿಂ |
ಕ್ಷೀರಪಾಣಿಯಿರುತಿರ್ದನೆಂದನು ಮುನಿಪನೈಯಯ್ಯ || ೫೩ ||

(ಈ ಪದ್ಯ ಸರಿಯಿಲ್ಲ )