ಸಂಧಿ ೯

ದಿವದಿನಪರಾಜಿತ ಚರಾಮರ | ನವನಿಯೊಳು ಶ್ರೀಚಂದ್ರ ವಿಭುಗೊ |
ಪ್ಪುವ ತನೂಭವನಾಗಿಯಧಿರಾಜ್ಯದೊಳು ಸುಖಮಿರ್ದ || ಪ ||

ದಾನಗಂಧದಿ ಭದ್ರದಿಂ ಕರ | ಮಾನದಿಂಗಜ ಪರವು… ತೆಱ |
ದಾನೆ ಘುಟಿಗಳು ತೀವಿದದಱಿಂ ಗಜಪುರವು… ||
ಮಾನನಿಧಿ ಭವ್ಯನಿಧಿ ಸುಖನಿಧಿ | ದಾನನಿಧಿ ನೀತಿನಿಧಿ ಸಕಲ ಕ |
ಲಾನಿಧಿ ಶ್ರೀಚಂದ್ರವೆಸರ ನರೇಂದ್ರನದನಾಳ್ವ || ೧ ||

ಕರಿಮುಗಿಲರಿಪು ಮಿತ್ರ ಮುಖದೊಳ | ಗರಿಯ ಸಿರಿಯೊಳು ಮಿಂಚಿನವರ್ಗಳ |
ತರುಣಿಯರ ರಾಗದೊಳಗುರದೊಳಗಕ್ಷಿಯುಗಲದೊಳು ||
ಸುರಧನುವ ಬಲುಮೊಳಗಮಳೆಗಳ | ನಿರದೆ ಪರದೆ ಪಸರಿಸಿ ಕೀರ್ತಿಲತೆಯನು |
ಭರದಿ ಪರ್ವಿಪುದಾ ನರೇಂದ್ರನ ಖಳ್ಗ ಜೀಮೂತ || ೨ ||

ಆ ನರಾಧಿಪನಗ್ರ ಮಹಿಷೆಯೆ | ತಾನಲಾ ಸ್ತ್ರೀರತ್ನ ಪಜ್ಜೆಗ |
ಳಾನೆವದೊಳಾ ಪದ್ಮರಾಗವು ಉಗುರನೆವದಿ ಮುತ್ತು ||
ಮಾನಿನಿಯ ಪಲ್ಲಧರ ದಳಕೆಗ | ಳಾ ನೆವದಿ ವಜ್ರ ಪ್ರವಾಳಾ |
ನೂನ ನೀಳಸುರತ್ನವಿಹವೆನೆ ಪೊಗಳ್ವಡಸದಳವು || ೩ ||

ಪೆಸರಿನಿಂ ಶ್ರೀಮತಿ ಮಹಾಸತಿ | ಕುಸುಮ ಗಂಧಿನಿಯಂತವರ್ಗೊ |
ಳ್ಪೆಸೆವ ಮುಂಪೇಳ್ದಚ್ಚುತೇಂದ್ರನೆ ಸುದಿನಲಗ್ನದೊಳು ||
ಒಸಗೆ ಮಸಗೆ ಸಮಸ್ತರಿಗೆ ಸಂ | ತಸವು ಜನಿಯಿಸಿ ಬಂದು ಜನಿಸಿದ |
ನಸದೃಷಂ ಶ್ರೀ ಸುಪ್ರತಿಷ್ಠ ವಿಶಿಷ್ಟ ನಾಮದಲಿ || ೪ ||

ಹಸುಳೆ ರೂಪಿನ ಕಲ್ಪವೃಕ್ಷವೋ | ಶಿಶುತೆವಡೆದ ವಸಂತನೋ[ಲು]ದ |
ಯಿಸಿದ ಸೂರ್ಯನೊ ಬಾಳಚಿಂತಾರತ್ನವೋ ಧರೆಗೆ ||
ಹೊಸಪರಿಜ… ನಾ ಲತಾಂಗಜ | ಮಿಸುನಿ ಬಿದಿಗೆಯ ಚಂದ್ರನಂದದ |
ಲೆಸೆದು ದಿನದಿನಕೇಳ್ಗೆವಡೆದನು ರಾಜ ಸುಕುಮಾರ || ೫ ||

ಕೆಸರ ಮೊಮ್ಮಗ ಅರಿದಲೆಗಮಿಗೆ | ಪೆಸರೊಳಜನೆಂದಾ ವಿಧಿಯ ದೂ |
ರಿಸಿಸದನ್ವಯ ನೆಯಿದೆ ಸುಮುಖ ಸುನಾಮನೆಂದೊಲಿದು ||
ಕುಸುಮ ಕೋಮಲ ಸುಪ್ರತಿಷ್ಠನ | ಮಿಸುಪ ಸಿರಿಮೊಗ ದಾವರೆಯೊಳು |
ಲ್ಲಸಿತ ಸೌರಭದಂತೆ ನಿಂದಾ ವಾಣಿ ಜಾಣೆಯಲೆ || ೬ ||

ಸರಸತಿಗೆ ಪುರುಡಿಸಿದ ತೆಱದಿಂ | ಸಿರಿಯುರವನಪ್ಪಿದೊಡೆ ಕೂರಸಿ |
ಗರಸಿಯಾದಳು ವೀರಸಿರಿಕುವರನಹೃದಯದೊಳಗೆ ||
ನೆರೆದಳಾ ಧೃತಿಲಕ್ಷ್ಮಿ ತೋಳೊಳು | ಬೆರಸಿದಳು ಜಯಲಕ್ಷ್ಮಿ ಕೂಡಿದ |
ಳುರು ವಿತರಣ ಶ್ರೀಮನೋಹರ ಕರಸರೋಜದೊಳು || ೭ ||

ಇಂಗಡಲ ನೆಱಿಮಿಂದು ನಿಱಿದು | ಟ್ಟಂಗದಿರ ತಾರೆಗಳ ಹಾರವ |
ಸಂಗೊಳಿಸಿ ತಿಂಗಳ ಮುಡಿದು ಬಾಂದೊಱಿಯ ನೀರ್ವೂವಿಂ ||
ತುಂಗ ಸುರತರು ಕುಸುಮ ವಿಸರದಿ | ಪಿಂಗದಾ ಸಿದ್ಧರಸ ವಿಮಲ ಪ |
ದಂಗಳನು ಪೂಜಿಪಳು ಜಸವೆಣು ಸುಪ್ರತಿಷ್ಠಕನ || ೮ ||

ಅರಿಗಳನು ಬಿಡು ನನ್ನವನ ತೋ | ಳ್ಗಿರುಜಯಾಂಗನೆಯಾಜಿಯೊಳಗ |
ಚ್ಚರಿಸಿಯರಿಗಾ ಮಾಲೆಗೊಳ್ಳಿಯೆನುತ್ತ ಕಡುವೀರ ||
ಸಿರಿಬರದಿ ಕಣುಸನ್ನೆ ಮಾಡಿದೊ | ಡಿರದೆ ಸೂಸುವ ಕಣ್ಣ ಬೆಳಗೆನೆ |
ಪಿರಿದು ಪೊಳೆದುದು ರಾಜಪುತ್ರನ ತೋಳು ನಿಡುವಾಳು || ೯ ||

ಒಸೆದವನ ಸವಿಗಾಡಿಯನು ನಿ | ಟ್ಟಸಿದ ಕಾಮಿನಿಯರು ಶಶಿಯತಂ |
ಬಿಸಿಲಿಗೆಳೆದಳಿರ್ವಂದರಕೆ ನಂದನ ವನಕೆ ಚಂದನಕೆ ||
ಎಸಳ ಪಸೆಗೋರಂತೆ ಪನ್ನೀ | ರೊಸರ್ಗೆ ಹೂವಿನ ಬಿಜ್ಜಣಿಗೆಗೊ |
ಪ್ಪಿಸದೆ ಪೋಪರ ತಮ್ಮ ತನುವನು ವಿರಹತಾಪದಲಿ || ೧೦ ||

ಹೊಚ್ಚ ಹೊಸಜವ್ವನದ [ಗಾಡಿಯ] | ನಿಚ್ಚಿಸಿ ಶ್ರೀಚಂದ್ರರಾಯನು |
ಮೆಚ್ಚಿ ಪರಿಣಯನವನು ಮಾಡಲು ಬಗೆದು ಹರಿವಂಶ ||
ನಿಚ್ಚಟ ಶ್ರೀಶೇಣನಾತ್ಮಜೆ | ಯೆಚ್ಚ ಚಂಪಕದಾಮ ಕೋಮಳೆ |
ಚೊಚಳೆಸುನಂದೆಯನು ಕುವರೆಗೆ ಮದುವೆ ನಿಲಿಸಿದನು || ೧೧ ||

ಒಂದೆ ಪಸೆಯೊಳು ಪಂಚಶತನೃಪ | ನಂದನೆಯರನು ಮದುವೆ ನಿಂದೊಲ |
ವಿಂದ ತಂದೆನೆಗೋತ ಮೋಹದ ಪಟ್ಟಮಾದೇವಿ ||
ನಂದೆ ನಯನಾನಂದೆ ಮಿಗೆ ತಾ | ನಂದೆ ಮಾನವ ಮದನನಿಂಪಿಗೆ |
ಸಂದು ಸೊಗಸಿನ ಸೊಕ್ಕನೂಡಿ ಸುನಂದೆಯೆನಿಸಿದಳು || ೧೨ ||

ವನಿತೆಯರ ಸೀಮಂತ ಮಣಿಯಾ | ನನಮಕಕ್ಕನೆ ನೋಡಿದಂದಿಂ |
ವನಜರಿಪು ಕಳೆಗುಂದಿ ಕಂದೆದೆಯಾಗಿ ಕಡಲಿಳಿವ ||
ಎನುತ ಹೊಂದಾವರೆಯವಳ ಚೆಲು | ವಿನ ಮೊಗವ ಹೋಲುವೊಡೆ ನೀರ್ವೊ |
ಕ್ಕನುದಿನಂ ತಪವಟ್ಟು ಜನವನು ಮಾಳ್ಪುದಳಿ ರವದಿ || ೧೩ ||

ನುಡಿದ ತಾವರೆ ಕಮ್ಮಲರುಗಳ | ಮುಡಿವ ತುಂಬಿಗಳುಂಬ ಹವಳದ |
ಕುಡಿಸು ಪರಿಮಳವಱಿವ ಸಂಪಗೆ ಕಂದರಿವ ಕುಮುದ ||
ನಡೆವ ಬಾಳೆಗಳುಡುವ ಪುಳಿಲೋ | ಗೊಡೆಯದೆಣೆವಕ್ಕಿಗಳು ರಾಯನ |
ಮಡದಿಯೊಳು ಚೆಲುವಾಗಿ ನಿಂದವದೊಂದು ಲೀಲೆಯಲಿ || ೧೪ ||

ಮೀಸಲಧರಾಮೃತದ ಸವಿಪೊಱ | ಸೂಸದೆಳೆ ಜವ್ವನದ ತನು ಸವಿ |
ಯಾಸುನಂದೆಯ ಮುನ್ನಱಿಯದೊಳು ಲಲ್ಲೆನುಸಿಯ ಸವಿ ||
ಆ ಸಮಯದೊಳು ನಿಮಿರ್ದಮೂಱುಸ | ವಾಸನೆಯ ಸವಿ ಚೆಲುವಿಕೆಯಸವಿ |
ಲೇಸೆನಿಸೆ ಪಂಚೇಂದ್ರಿಯವನೊಲಿಸಿದವು ನಿಜಪತಿಯ || ೧೫ |

ಕಂತು ಸನ್ನಿಭ ಸುಪ್ರತಿಷ್ಠಕ | ನಿಂತು ಸುಖದಿರಲೊಂದು ದಿನವಾ |
ಕಂತುಜಿತನುತ ಮಂದರಸ್ಥ ಜಿನೇಂದ್ರಸಮವಶೃತಿ ||
ಸಂತಸವನಿಳೆಗೀವು ತೈತರೆ | ಶಾಂತದಿಂ ಶ್ರೀ ಚಂದ್ರವಸುಧಾ |
ಕಾಂತನಲ್ಲಿಗೆ ಪೋಗಿ ಪೂಜಿಸಿ ಜಿನರ್ಗೆ ವಂದಿಸಿದ || ೧೬ ||

ಮುನಿ ನಿಕರವನು ತುಳಿಲು ಗೈದಾ | ಮನುಜಕೋಷ್ಠದೊಳಿರ್ದು ಧರ್ಮಮ |
ನನುಪಮಿತನಿರೆ ಕೇಳ್ದು ಸಂಸಾರಾದಿಗಿರದಗಿದು ||
ತನುಜಗೊಪ್ಪುವಸುಪ್ರತಿಷ್ಠೆಗೆ | ವಿನುತ ರಾಜ್ಯದ ಪಟ್ಟವನು ಕ |
ಟ್ಟೆನುತ ನೇಮಿಸಿದನು ನಿಜಾಪ್ತಪ್ರಧಾನರಿಗೆ ನೃಪತಿ || ೧೭ ||

ಅತ್ತಲವರು ಮಹೋತ್ಸವದಿ ಸುಮು | ಹೂರ್ತದಲಿಯಧಿರಾಜ ಪಟ್ಟವ |
ಬಿತ್ತರಿಸಿದರು ಸುಪ್ರತಿಷ್ಠ ಧರಾಧಿನಾಥಂಗೆ ||
ಇತ್ತಲಾ ಶ್ರೀಚಂದ್ರರಾಯನು | ಪೆತ್ತನಾ ಜಿನದೀಕ್ಷೆಯನು ಸ |
ದ್ವೃತ್ತನೈನೂರ್ವರು ನೃಪಾಲರ್ವರೆಸಿ ಗಣಧರರಿಂ || ೧೮ ||

ಪಱಿದು ಪೊಱಗೊಳಗಿಹತೊಡಪ್ಪನು | ನೆಱಿದು ಮೂಲೋತ್ತರಗುಣಗಳಲಿ |
ಮಿಱುಗುವಾ ಶ್ರೀಚಂದ್ರ ಜಿನಯೋಗಿಗಳನು ಕ್ರಮದಿ ||
ಪಱಿಗಡಿದು ಕೂರ್ಮಾಷ್ಟಕಾವನೆಸೆ | ವಱಿವೆ ಮೈಯಾಗಮೃತ ಲಕ್ಷ್ಮಿಗೆ |
ಎ ಱಿಯರಾಗಿರುತ್ತಿರ್ದರಿತ್ತಲು ಸುಪ್ರತಿಷ್ಠ ನೃಪ || ೧೯ ||

ಶಿರದೊಳಿರೆ ತನ್ನಾಣೆಯನು ಪೊರ | ದರಿನೃಪರ ಕಾಂತಾ ಕದಂಬದ |
ಶಿರವೊರದು ಸೀಮಂತವನು ಹಾರವನು ತಳ್ತಿರದೆ |
ಕೊರಳಿನೊಳು ಹಾರವವು ಳ್ತುವು | ಸಿರಿಯುದಾರದ ಮಹಿಮೆಯನು ಬಿ |
ತ್ತರಿಸಲರಿಯೆ ಗಜಾಂತ ಲಕ್ಷ್ಮಿಯನಾಳ್ದರೆನ್ನವರು || ೨೦ ||

ಮೇರುವಿನ ತಪ್ಪಲೊಳು ಮೆರೆವನ | ಮೇರುವುದಯಿಸಿದಂತೆ ನೃಪಕುಲ |
ಮೇರುವೆನಿಸಿದ ಸುಪ್ರತಿಷ್ಠನರೇಂದ್ರಗಾತ್ಮಜನು ||
ಚಾರುಗುಣಿವುದಯಿಸಿದಜನತಾ | ಧಾರ ವೀರನು ನೃಪನು ಲಕ್ಷ್ಮೀ |
ರಮಣಿಗೆ……ಸುವೃಷ್ಟಿಯೆಂಬವನು || ೨೧ ||

ಜಿನಪದಾಂಬುಜ ಭೃಂಗನವನೀ | ವಿನುತನಂಗಜ ರೂಪನಾಗಿರೆ |
ಜನವರಿಯೆ ಮೆಱೆವಾಸುದೃಕುಮಾರಕಂಗರಸ ||
ಮನವೊಲಿದು ಯುವರಾಜ್ಯ ಪದವಿಯ | ನನುನಯದಿ ಕೊಟ್ಟತಿಸುಖದಿ ನಿರು |
ತನುಪಮಿತಗುಣಿ ಸುಪ್ರತಿಷ್ಠ ನರೇಂದ್ರನೊಂದು ದಿನ || ೨೨ ||

ಮಿಸುನಿ ವೆಸದಿಂದೆಸೆವ ಸರ್ವಾ | ವಸರ ಮಂಡಪ ಮಧ್ಯದೊಳು ಚೆಲು |
ವೆಸೆವ ರನ್ನದ ಸಿಂಗವಣೆಯನಲಂಕರಿಸಿಯಿರಲು ||
ಸಸಿಮುಖಿಯಗಿಕ್ಕೆಲದೊಳಗೆ ನೃಪ | ನೆಸೆವ ಲಕ್ಷ್ಮಿಯ ದರ ಹಸಿತವೆನೆ |
ಮಿಸುಪ ಚವಲವಢಾಳಿಪರು ಕಂಕಣಝಣತ್ಕೃತಿಯಿಂ || ೨೩ ||

ಹಿಂದೆ ಬಳಸಿರ್ದಂಗೆ ರಕ್ಷಕ | ರಿಂದೆ ಮುಂದೆಸೆವಡಪವಳನಿಂ |
ಪಿಂದೆ ಗಿಂಡಿಯಡವಕೆಯೊಡರಿಸುವಾಳವಟ್ಟಗಳ ||
ಚಂದದೂಳಿಗದವರೆಸೆಯೆ ಬಲ | ದೊಂದು ಗದ್ದುಗೆಯೊಳು ಕುವರನಿರೆ |
ಸಂದಮಾತ್ಯಕನೆಡದಲಿರೆ ಚೆಲುವಾದುದಾಸ್ಥಾನ || ೨೪ ||

ವರಕುಮಾರಕ ಬಂಧುವರ್ಗದ | ದೊರೆಗೊಳೊಪ್ಪುವ ಮಂತ್ರಿಗಳ ಬಲು |
ಕರಣಿಕರ ಮಂಡಳಿಕ ಮಾಸಾವಂತ ಮನ್ನೆಯರ ||
ವರಬುಧರ ಕವಿಗಮಕಿವಾದಿ | ಸ್ವರರ ವಾಗ್ಮಿಗಳೆಸೆವ ಬೈಕಾ |
ರರಸಿಕಾರರ ಭಟ್ಟ ನಟ್ಟವಿಗರ ವಿಡಾಯದಲಿ || ೨೫ ||

ಪರದ ಪಡೆಯಿಲ ಜೋಯಿಸಿಗ ತಳ | ವಱರ ವಾಮನ ಕುಬ್ಜ ಮೂಕ ಬ |
ಧಿರ ನಾಗರಿಕಾದಿಗಳ ಪರಿಹಾಸಕರ ಚರರ ||
ಪರಿಪರಿಯ ವಾದಕರ ಗಾಯಕ | ರುರುಸುಭಟ ಕೋಡಿಗಳ ಹೊರಗಿಹ |
ಕರಿತುರಗಗಳ ನೆರವಿ ನೃಪನೋಲಗದೊಳಿಪ್ಪಿದವು || ೨೬ ||

ತಳತಳಿಪ ನಗೆಮೊಗದ ಹೊಸಹೊಂ | ಚೆಳೆನಡುವ ನಳಿತೋಳ ಹೊಂಗೊಡ |
ಮೊಲೆಯ ಸಿಂಗರಗೆಯಿದ ವಾರಾಂಗನೆಯರೋರಣದಿ ||
ತೊಳತೊಳಗುತಿತ್ತರದಿ ಕಂಗುಡಿ | ಗಳಲಿ ಹೂಗಣೆಗೆದಱಿ ತಿರೆ ಪ |
ಜ್ಜಳಿಸುತಿರ್ದುದು ಸುಪ್ರತಿಷ್ಠ ನರೇಂದ್ರನೋಲಗವು || ೨೭ ||

ತೊಲಗುವೊತ್ತದಿರೊಗ್ಗಿನಿಲು ಹೊ | ಗ್ಗಲಭೆ ಬೇಡೆಲೆ ಪಾಠಕರು ನೀ |
ವೊಲಿದು ಸೂಳಱಿದೋದಿಯೆಂದೋದಿಸಿಯವರನಿಲಿಸಿ ||
ಉಲಿವ ವೀಣಾವಾದ್ಯಗಳ ಜಾಣ್ | ಗಲೆಯ ಗಾಯಕಿ ಗಾಯಕರ ನೃಪ |
ತಿಲಕನಿರೆ ಕೇಳಿಸುವ ಕಟ್ಟಿಗೆಕಾಱರೊಪ್ಪಿದರು || ೨೮ ||

ಚರಣ ಕಮಲಕ್ಕೆರಗುವವನೀ | ಶ್ವರರನೊಪ್ಪುವ ಕೊರಳೊಲವಿನಿಂ |
ವರ ವಿಭುಧ ಸುಕವಿಗಳನೊಳು ನುಡಿಯಿಂದ ಬಂಧುಗಳ ||
ದರಹಸಿತದಿಂ ಪ್ರಜೆಗಳನು ಬಂ | ಧುರ ವಿಲೋಕನದಿಂದ ಮನ್ನಿಸು |
ತರಸಲೋಲಗದಿರವು ಚರಿಗೆಗೆ ಬರಲು ಚಾರಣರು || ೨೯ ||

ಇದಿರುಗೊಂಡುಚಿತಾಸನದೊಳಿರಿ | ಸಿದನಡಿಗಳಂ ತೊಳೆದು ಪೂಜಿಸಿ |
ಮುದದಿ ವಂದಿಸಿ ತನು ಹೃದಯವಾಗನ್ನ ಶುದ್ಧಿಗಳಿಂ ||
ಪುದಿದ ನವವಿಧ ಪುಣ್ಯದಿಂ ಕ್ಷಮೆ | ಸುದಯೆ ಭಕ್ತಿ ಜ್ಞಾನ ನಂಬುಗೆ |
ಪದೆದ ಶಕ್ತಿಯುದಾರಮೆಂಬೀ ಸಪ್ತಗುಣ ಸಹಿತ || ೩೦ ||

ಪೆತ್ತ ಹರುಷದಿ ನೃಪತಿಸಕಲನಿ | ವೃತ್ತಗುಚಿತಾಹಾರವನು ಕುಡೆ |
ಬಿತ್ತರಿಸಿ ಮಣಿಕನಕ ಕುಸುಮಾ ಸಾರಗಳು ಕರೆಯೆ ||
ಪಾತ್ರದಾತೃ ಸ್ತೋತ್ರರವದೊಡ | ನತ್ತ ಸುರದುಂದುಭಿ ನಿನಾದಗ |
ಳೊತ್ತರಿಸಿತಾಶ್ಚರ್ಯವೇ ಪಂಚಾಶ್ಚರ್ಯವವರ್ಗೆ || ೩೧ ||

ಪಡೆಯಬಹುದಾ ಕಲ್ಪವೃಕ್ಷವ | ಪಡೆಯಬಹುದಾ ಪರುಷವೇದಿಯ |
ಪಡೆಯಬಹುದು ನರೇಂದ್ರತೆಯನಮರೇಂದ್ರಪದವಿಯನು ||
ಪಡೆಯಬಹುದು ಸುಪಾತ್ರಮೊಂದನೆ | ಪಡೆಯಬಾರದು ಯೋಗ್ಯಕಾಲಕೆ |
ಪಡೆದವಗೆ ಕೈಸಾರದೊಡವೆಯದುಂಟೆ ಲೋಕದಲಿ || ೩೨ ||

ಪಡೆದಡೇನೋ ಹಣಮಪಾತ್ರವ | ಪಡೆಯದಿರ್ದೊಡೆ ಪಡೆದ ಹಣವನು |
ಸುಡಲಿ ಹಣವನು ಸೂಳೆ ಹಡೆಯಳೆ ಅಱುವೆ ಕಟ್ಟಿರದೆ ||
ಹಡೆದ ಹಣವಿಗೆ ಪಾತ್ರವೊಂದನೆ | ಹಡೆಯದುದೆ ಫಲವಱಿತು ಪಾತ್ರಕೆ |
ಕೊಡುವವನ ಪುಣ್ಯವನು ಪೊಗಳ್ವಡೆ ಶೇಷಗಸದಳವು || ೩೩ ||

ಕೊಟ್ಟು ಕೆಡಿಸಿದಿರಾ ಕುಪಾತ್ರಕೆ | ಕೊಟ್ಟೊಡವೆ ಹಾವಿಂಗೆ ಹಾಲೆಱ |
ಕೊಟ್ಟವೊಲು ಕಿಂಪಾಕಕುದಕವನೆಱದ ತೆಱನಹುದು ||
ನೆಟ್ಟನಱಿದು ಸುಪಾತ್ರಕೊಲವಿಂ | ಕೊಟ್ಟೊಡವೆ ಕಱಿಮೆಮ್ಮೆಗುಱುಮುಱ |
ವಿಟ್ಟವೊಲು ಬೆಳವೊಲಕೆ ಗೊಬ್ಬರವಿಟ್ಟವೊಲು ಸಫಲಾ || ೩೪ ||

ಎಂದು ವಿಬಧರು ಕೀರ್ತಿಸುತ್ತಿರೆ | ವಂದಿಗಳು ಕೈವಾರಿಸುತ್ತಿರೆ |
ಅಂದು ಮುನಿಪತಿ ಪರಸಿ ಬಿಜಯಂಗೈದ ನಂತರದಿ ||
ಬಂದು ಸತ್ಪಾತ್ರಕ್ಕೆ ಪುರಜನ | ಬಂಧು ಜನ ವಂದಿಜನಕಮರರು |
ತಂದು ಸುರಿದಾ ರತ್ನ ರಾಶಿಯನಿತ್ತನವನೀಶ || ೩೫ ||

ಅರಸನಿರುತೊಂದಿರುಳುನಯನಾ | ಭರಣ ನಾಟಕ ಸಾಲೆಯನು ಸಿಂ |
ಗರಿಸಿ ಕವಿಬುಧ ಭಾರತಿಕ ವಾಗ್ಗೇಯಕಾದಿಗಳ ||
ಕರಸಿಯಾಪ್ತ ಕುಮಾರ ಬಂಧೂ | ತ್ಕರವೆರಸಿಯುಚಿತಾಸನದಿ ಸೈ |
ತಿರುತೆ ಕೇಳಿಕೆಗಂಡನೊಪ್ಪುವ ನಯನ ಸೌಂದರ್ಯ || ೩೬ ||

ಬೆಳಗಿದವು ಮಾಣಿಕದ ಪಂಜುಗ | ಳಳವಿ ನಿಂದಾವುಜ ಕಹಳೆ ಮ |
ದ್ದಳೆಯು ಪಾಂಗಸುವಾಸು ಕಿನ್ನರಿಯುಱುಮೆ ಜಂತ್ರಗಳು ||
ಕಲೆಯಱಿದ ಪೆಣ್ಮೇಳಗಾಣಿಯ | ರೊಲಿದು ಸಿಂಗರಗೆಯಿದು ನರ್ತಕಿ |
ತಿಳಕೆ ನೃಪಸುತೆ ನಯನ ಸುಂದರಿಯೊಡನೆ ಬಳಸಿದರು || ೩೭ ||

ರತಿಯೊ ಮೇಣ್ ಸುರಸತಿಯೋ ಮೇಣ್ ಪಾ | ರ್ವತಿಯೊ ಮೇಣ್ ಭಾರತಿಯೊ ಮೇಣ್ ಗುಣ |
ವತಿಶಯದರಸ ಚಿತ್ರವಾಯುವ ಪಡೆದುದೋ ಮೇಣಾ ||
ಚತುರ ಮುಖ ಪುಡಿ ಚಿನ್ನದಿಂ ನವ | ರತುನದಿಂ ನಿರ್ಮಿಸಿದನೋ ಯೆನ |
ಲತಿ ಚೆಲುವೆ ಸಿಂಗರಿಸಿ ರಂಗಂಬೊಕ್ಕಳೊಲವಿಂದ || ೩೮ ||

ಪಿಡಿವ ಜವನಿಕೆ ತೊಲಗಿದುದು ಮಣಿ | ದೊಡಿಗೆವೆಳಗಿನ ಜವನಿಕೆಯು ಮಿಗೆ |
ಸಡಗರಿಸಿತೆಣ್ದೆಸೆಗೆ ಜೊನ್ನದ ಜವನಿಕೆಯನೊರ್ಮೆ ||
ಪಿಡಿದವೊಲು ಕಣ್ಬೆಳಗು ಬೆಳಗಲು | ಪೊಡೆಯರಳ ಮಗನರಳ ಸರಳನೆ |
ಪಿಡಿದು ಸೂಸುವ ತೆರದಿ ಕುಸುಮಾಂಜಲಿಯ ಸೂಸಿದರು || ೩೯ ||

[ಆ]ಡುವರ ಬಲನಿಟ್ಟು ಎಡೆಕೈ | ಜೋಡಿಸಿರೆ ವಹಣಿಯಲಿ ನೊಸಲೊಳು |
ಕೂಡೆಮುಕುಳಿತ ಹಸ್ತ ಬಳಿಯಲಿ ಡೋಳಹಸ್ತವನು ||
ಮಾಡಿ ಅರುಹನ ನಿಲವಿನಿಂ ಕಡು | ಗಾಡಿ ನಚ್ಚಣಿ ನಿಂದು ಮೇಳದ |
ಜೋಡೊಡೆಯದಾಡಿಗಳು ಪುಷ್ಪಾಂಜಲಿಯ ಸಭೆ ಪೊಗಳೆ || ೪೦ ||

ಕರಣ ಮಂಡಲ ತಿರುಪು ರೌದ್ರ | ದ್ಯುರು ನಯನಗಳನುಳಿದು ಸೊಬಗೆ |
ಲ್ಲರಮುಖವ ಚಾಳೈಸುತಿರೆ ಮುಖಚಾಳಿಯನು ಕೊಂಡು ||
ಪರಿಪರಿಯ ನೇರುರುಪು ತಿರುಪುಗ | ಳರಿದೆನಿಸುವುದು ವಾದಗಳ ನೈ |
ಸರನ ಪೊಸಮನೆಯಂಬು ಹೊಳೆದಾಡಿದವೊಲಾಡಿದವು || ೪೧ ||

ಭೃಂಗ ಕುಂತಳೆ ತನ್ನ ನೊಸಲಲಿ | ಸಂಗೊಳಿಸಿದಾ ತಿಲಕ ಸರಿದರೆ |
ವುಂಗುಟದ ನಖದರ್ಪಣದೊಳಿರೆ ಕಂಡು ಮತ್ತೊಂದು ||
ಉಂಗುಟದಿ ತಿರ್ದಿದಳು ಕರಣವೆ | ಡಂಗಿ ಹೊಂಜಳೆ ಮೈಯಲವಣಿಮ |
ನಂಗೊಳಿಸಿದುದು ಚದುರ ಚದುರಾನನನ ರಂಗದೊಳು || ೪೨ ||

ನುತ ಚಮತ್ಕಾರವೆ ಚಮತ್ಕಾ | ರತೆವಡೆಯೆ ಕಡೆಕಟ್ಟು ಶೋಭಾ |
ಕೃತಿಗೆ ಕಡೆಕಟ್ಟಾಗಿ ಶಬ್ದದ ಮೈಯ ಮೈಯಾಗೆ ||
ಚತುರನರ್ತಕಿ ಶುದ್ಧಸಾಳಗ | ವಿತತ ಸೂಡಗಳಾಡೆ ಬಲಬಾ |
ಲತುಳೆ ಲೇಸಮ್ಮಮ್ಮ ಮಝ ಬಾಪೆಂದುದಾಸ್ಥಾನ || ೪೩ ||

ಅಂಗದೊಲಗಳವಡಿಸಿ ನೀತವ | ಹಿಂಗದಡಿಲೀ ತಾಳವನು ಹ |
ಸ್ತಂಗಳಲಿ ಮೆಱೆವರ್ಥವನು ಕಂಗಳಲಿ ಭಾವವನು ||
ಪಿಂಗದಾ ಭಾವುಕರಿಗೆಱಿಪುತೆ | ಅಂಗಹಾರವೆ ಭಾರತಿಗೆ ಮೆಱೆ |
ವಂಗ ಹಾರವೆಯೆನಿಸೆ ಮೂವತ್ತೆರಡನಱಿಪಿದಳು || ೪೪ ||

ಕರಣಗಳನಾ ಭಾರತಿಗಳಂ | ಕರಣವೆನೆ ನೂರೆಂಟನಾ ಸೌಂ |
ದರಕೆ ನಿಲವೆನೆ ನಿಲವನು ಱಿ ನೂರೆಂಟುನನುವದಿಸಿ ||
ಭರದ ಸಂಯುತ ಸಂಯುತೋಭಯ | ಕರ ಚತುಃ ಷಷ್ಟಿಯನೆ ಬಗೆಗ |
ಚ್ಚರಿವಡಿಸಿ ನರ್ಚಿಸಿದಳೆ ಱಿಯನ ಮೆಚ್ಚಿಸಿದಳಾಕೆ || ೪೫ ||

ಮೂಱುತೆಱದಾಚಿಬುಕ ಪುರ್ವೀ | ರಾಱುಗತಿ ದಿಟ್ಟಿಗಳು ಮೂವ |
ತ್ತಾಱುಕಣ್ಣಿವೆಯಾಲಿ ತಾನಕಗ್ರೀವೆಯೊಂಬತ್ತೂ ||
ನೀ ಱಿಯೊಪ್ಪುವ ಶಿರದ ತೆಱಪದಿ | ಮೂಱು ತೂರ್ಯತ್ರಯಲಲಾಮಗೆ |
ತೋಱಿದವುತಾವಳೆದು ತೂಗಿದ ಲಚ್ಚಣಿಸಿದಂತೆ || ೪೬ ||

ಮನದಿನುದಯಿಸಿ ಭಾವವೆಸೆವಾ | ನನದಿ ಹಾವವೆ ಪೊಣ್ಮೆ ಸಿತಲೋ |
ಚನದಿ ಬೆಳೆದ ವಿಲಾಸ ಮಕರೆಗಣ್ಮೆಪುರ್ವಿನಲಿ ||
ಜನಿಸಿ ವಿಭ್ರಮಮೊತ್ತರಿಸೆ ಮೋ | ಹನವಡೆದ ರಸಪೂರದೊಲು ರ |
ಯ್ಯನೆ ಸಭೆಯನೋಲಾಡಿಸುತೆ ನಲಿದಾಡಿಗಳು ಸೊಬಗಿ || ೪೭ ||

ಭಾರತಿಯ ಸಾತ್ಯಕಿಯ ಕೈಸಿಕಿ | ಯಾರು ಭಟೆಯ ಪೊದಳ್ದವೃತ್ತಿ ವಿ |
ಚಾರವನು ಗುಂಡಲದ ಲಾಸ್ಯದ ಜಾತಿಕೋಪುಗಳ ||
ಸಾರವಿದ್ಯೆಯ ಮೆಚ್ಚಿ ಮಿಗೆ ವಿ | ಸ್ತಾರ ಭರ ಕರ್ಪೂರ ವೀಳೆಯ |
[ಸಾರ] ವುಡುಗೊಱೆಯನೊಸೆದಿತ್ತನಿಳೆಪೊಗಳೆ || ೪೮ ||

|| ಅಂತು ಸಂಧಿ ೯ಕ್ಕಂ ಮಂಗಲ ಮಹಾ ||