ಅಕ್ಕಯನ್ನಬಾನ – ಅಕ್ಕಿಯಿಂದ ಮಾಡಿದ ಅನ್ನ

ಅಗೆಯೋರಿಗೆ – ಹಗೆಗಳಿಗೆ

ಅಗ್ಗುಣಿ – ನೀರು, ತೀರ್ಥ

ಅಚ್ಚಡ – ವಸ್ತ್ರ, ಬಟ್ಟೆ

ಅಣ್ಯಾರೆ – ಸಿದ್ದಪಡಿಸಿದ್ದಾರೆ

ಅಣ್ಣೆಗಿಡ – ಬಿಳಿಗೊಂಡೆಯ ಕಳೆಯ ಗಿಡ

ಅಂದಲ – ಅಂದನ, ಪಲ್ಲಕ್ಕಿ

ಅಂದಾನಿ – ಅನ್ನದಾನಿ

ಅನಿಮನಸು – ಅನುಮಾನದ ಮನಸ್ಸು

ಅಪ್ಪನೂಳಿಗಕೆ – ದೇವರ ಕೆಲಸಕ್ಕೆ

ಅರಿದೇರು – ಹೆಣ್ಣುಮಕ್ಕಳು

ಅರುಗೀದವಲ – ಉತ್ತಭೂಮಿ

ಅಲವಳಿದೆ – ಅಲೆದಾಡಿದೆ

ಅಲ್ಲ – ಶುಂಠಿ

ಅಳದೀಯ – ಬಟ್ಟೆಯ

ಅಳಿಗಾಲ – ಇಳಿಗಾಲ

 

ಆಕೀಯ – ಆಕೆಯ

ಆಕಾಶ್ರೇಣಿ – ಆಕಾಶವಾಣಿ

ಆನೆಗಡತರ – ಆನೆಯ ಗಾತ್ರದ

ಆಯಕ – ಸರಿಯಾದ

ಆರೋರನ – ಬ್ರಾಹ್ಮಣರನ್ನ

ಆರೋರಕ್ಸರ – ಬ್ರಾಹ್ಮಣರ ಅಕ್ಷರ

ಆಲುವೋಗರ – ಹಾಲು ಅನ್ನ

ಆಲುಸ್ವಾರೆ – ಹಾಲುಮಡಕೆ

ಹಾವಾಳೇನು – ಹಾವಳಿ ಏನು

 

ಇಡ್ಡೋರ – ವಿಘ್ನ

ಇಂಡೇಳು – ಏಳು ಹಿಂಡು

ಇಜಿಯಾರನಗರ – ವಿಜಯನಗರ

ಇಂಬೇಬಿಡು – ದಾರಿಬಿಡು

ಇಸವಿಲ್ಲ – ವಿಷವಿಲ್ಲ

 

ಈದಾವಿಗೆ – ಕರು ಹಾಕಿದ ಹಸುವಿಗೆ

ಈಡಾಡು – ಎಸೆದಾಡು

ಈಬತ್ತಿ – ವಿಭೂತಿ

ಈಳ್ಯಾದಬಾಯಿ – ಎಲೆ ಅಡಿಕೆ ಹಾಕಿದ ಬಾಯಿ

 

ಉಡುಗ್ವಾರೆ – ಉಡುಗೊರೆ

ಉತ್ರಾಣಿ – ಔಷಧೀಯ ಸಸ್ಯ

ಉತ್ತುತ್ತಿ – ಖರ್ಜೂರ

ಉತ್ರೇಯ – ಉತ್ತರೆ ಮಳೆ

 

ಎಚ್ಚಳಗಾತಿ – ಹೆಮ್ಮೆ ಪಡುವವಳು

ಎಡಗೆ – ಬಿದಿರು ಪುಟ್ಟಿ

ಎಡ್ಡಾಟ – ದಡ್ಡತನ

 

ಐಕುಂಠಾದ – ವೈಕುಂಠದ

ಐಬೋಗ – ವೈಭೋಗ

 

ಕಂಕಳ – ಕಂಕಣ

ಕಡಸು – ಹೆಣ್ಣುಕರು

ಕಡಿಸೂಸ್ತ್ರ – ಕಟಿಸೂತ್ರ

ಕಡಿದುಗಾರ – ಕಟ್ಟುನಿಟ್ಟಿನವ

ಕಸ್ತುಗಾರ – ಸಮರ್ಥ

ಕದುನಾವು – ಕದನ, ಯುದ್ಧ

ಕಳ್ಳೆ – ಮುಳ್ಳಿನ ಬೇಲಿ

ಕದ್ರೀಯ – ಕದ್ರಿ ಎಂಬ ಊರು ಆಂಧ್ರದಲ್ಲಿದೆ

ಕನ್ನೇರಾರುತಿ – ಹೆಣ್ಣುಮಕ್ಕಳು ಹಿಡಿದ ಆರತಿ

ಕಬ್ಬು ಆಕಲೊಡೆದಾಂಗೆ – ಕಬ್ಬುಗರಿ ಬಿಟ್ಟಂತೆ

ಕಾಡುಕುಳ್ಳು – ಕಾಡುಕಟ್ಟಿಗೆ

ಕಾತೆ – ಹೆಂಗುಸು

ಕಾತಂತೆ – ಚಿಗುರಿದಂತೆ

ಕಾವಳ – ಕತ್ತಲೆ

ಕಾಲಪೆಂಡೆ – ಕಾಲಿನ ಬಳೆ

ಕಾಲ್ಯೇವು – ಕಾಲುವೆ

ಕಿತ್ತಾಳೆ – ಕಿತ್ತಳೆ

ಕಿರುದಂಗಿ – ಚಿಕ್ಕತಂಗಿ

ಕೀಲಾರ – ಎತ್ತು ಕಾಯುವವನು

ಕ್ರಿಸ್ಟ – ಕೃಷ್ಣ

ಕುತ್ತೂನಿ – ಕುತನಿವಸ್ತ್ರ

ಕುಸುಲಾದ – ಕುಸುರಿ ಕೆಲಸದ

ಕೂಟೆ – ಕೂಡೆ

ಕೆಂಚೇರು – ಕೆಂಪುವರ್ಣದ ಸುಂದರಿಯರು

ಕೆಂಡ – ಕೆಂಪು

ಕೆಂಪು ದ್ರೈತ – ಕೆಂಪು ರಕ್ತ

ಕೋವಿಗೋಗೊದು – ಹುತ್ತಕ್ಕೆ ಹೋಗುವುದು

ಕೋಳು – ತೊಂದರೆಗೀಡಾಗು

ಕೋಡಿ – ತುಮಬಿ ಹರಿವ ನೀರು

ಕ್ವಾಮಾರಾರು – ಕುಮಾರರು

 

ಗಂಜೀಯಚ್ಚಡ – ಗಂಜಿ ಹಾಕಿದ ಬಟ್ಟೆ

ಗೀರು ಗಂಧ – ಹಣೆಯ ಮೇಲೆ ಗಂಧದ ಗೆರೆ

ಗಿಣ್ಣೊಡೆದು – ಗಿಣ್ಣಿನಲ್ಲಿ ಚಿಗರುವುದು

ಗಿದ್ದುನ – ಧಾನ್ಯದ ಅಳತೆ

ಗಿನ್ನಲು – ಪಾತ್ರೆ ಪಡಗ

ಗೇಣಿಟ್ಟು – ಗೇಣು ಅಳತೆ

ಗ್ರೇನಿಸಿ – ಧ್ಯಾನಿಸಿ

ಗುಂಜಾಟ – ತಿಣುಕಾಟ

ಗೋವಿನ ವನದಾಗೆ – ಗೋವೆ ಮರದವನ

ಗ್ಯಾರೆ ಬಣ್ಣದ ಹುಲಿ – ಹಳದಿ ಪಟ್ಟೆಯ ಹುಲಿ

 

ಜಕ್ಕುಣಿಕೆ – ಬಾಚಣಿಕೆ

ಜಗವೂತ – ಜಗ್ಗುತ

ಜಂಬಾರ – ಕೆಲಸ

ಜಸವಂತ – ಯಶೋವಂತ

ಜೋತ್ರ – ಧೋತ್ರ

ಜೊತ್ತಾಲ ಜೋಡಿ – ಆಲದಮರ

ಜೊತ್ತುಮಿಣಿ – ಜೋಡಿಹಗ್ಗ

 

ಪಟ್ಟಾವಳಿ – ರೇಷ್ಮೆ ಬಟ್ಟೆ

ಪತವಿಲ್ಲ – ದಾರಿಯಿಲ್ಲ

ಪರದಾನಿ – ಪ್ರದಾನಿ

ಪರುಸೆ – ಜಾತ್ರೆಗೆ ಹೋಗುವ ಜನ

ಪರಿಯಾರ – ಪರಿಹಾರ

ಪಾರಿಬೇಲಿ – ಮುಳ್ಳುಬೇಲಿ

ಪಿಲ್ಲಿ – ಕಾಳಿನ ಪುಟ್ಟಗೆಜ್ಜೆ

ಪುತ್ರಮ್ಮ – ಹೆಣ್ಣು ಮಗಳು

ಪುತ್ರನಾಲಸ್ತ – ಮಗನ ಮದುವೆ

ಪುಸ್ಮ – ಹೂವು

ಪೌಳಿ – ಮನೆಯ ಸುತ್ತಿನ ಗೋಡೆ

 

ಬಣ್ಣಾವೆ – ಬಟ್ಟೆಗಳು

ಬಂದಾನ – ಕಷ್ಟ

ಬಟ್ಟಾಲು – ಪಾತ್ರೆ

ಬಂದೀಯ – ತೋಳಿನ ಆಭರಣ

ಬಿಟ್ಟಂಬೀನ – ಬಿಟ್ಟಬಾಣ

ಬಲ್ಲಾನೇರಿಕಂಡು – ಕುದುರೆ ಏರಿಕೊಂಡು

ಬವಣೀಯ – ಕಷ್ಟ

ಬಣ್ಣಾವೆ – ಬಟ್ಟೆಗಳು

ಬೆಂಚೆನೀರು – ಕೆರೆನೀರು

ಬೆಸಗಳ್ಳಿ – ಕೇಳಿರಿ

ಬೈಲಾಗೆ – ಬಯಲಾಗೆ

 

ಭತ್ಯೇವು – ನಿಗದಿತ ಹಣ, ಧಾನ್ಯ

 

ಮತ್ತಲ್ಲುಸುಲುದು – ಹಲ್ಲು ಉಜ್ಜಿ

ಮಡುಲಕ್ಕಿ – ವಧುವಿನ ಮಡಿಲಿಗೆ ಹಾಕುವ ಅಕ್ಕಿ

ಮಂಡ್ಲಿಕರು – ಮಾಂಡಲೀಕರು

ಮನಿಗಾರ – ಪರಾಕ್ರಮಿ

ಮಾಜೀದ – ಮಾಸಿದ

ಮಾರಗಾನಿ – ಗೊಲ್ಲರ ಒಂದು ಕುಲ

ಮಾರೆ – ಮುಖ

ಮಾನ್ಯಾರು – ಮಾನ್ಯರು, ಮಹನೀಯರು

ಮೆಲುವಾರೆ – ತಿನ್ನುತ್ತಾರೆ

ಮೋವಾದಿಂದ – ಮೋಹದಿಂದ

 

ತಗುತಾರೆ – ತೆಗೆದುಕೊಂಡು ಬಾರೆ

ತಪ್ಪೀದಪದನ – ಬರದೇ ಹೋದಹಾಡು

ತಣ್ಣೀರ ಸೆಳೆಯ – ನೀರು ಚಿಮುಕಿಸು

ತನಿಗೆಂಡ – ಕೆಂಪಾಗಿ ಉರಿಯುವ ಕೆಂಡ

ತಳಿಗೆ – ನೈವೇದ್ಯ

ತಳುಕೀನ – ತಳುಕುಗ್ರಾಮ

ತಾಲಿ – ತಟ್ಟೆ

ತಾವು – ಜಾಗ

ತುಪ್ಪದೊಡ್ಡ – ತುಪ್ಪದ ಬಣ್ಣ

ತೂರಾಯ – ತುರಾಯಿ

ತೊಡರು – ಸಮಸ್ಯೆ

ತೋತುರಿಸಿ – ಸ್ತೋತ್ರಮಾಡಿ

 

ದಗಮು – ಚರ್ಮವಾದ್ಯ

ದಟ್ಟಿ – ಪಂಚೆ, ವಸ್ತ್ರ

ದಡಿಯ – ಅಳತೆಯ ಸಾಧನ

ದಸಲೀಯ – ಬಟ್ಟೆ

ದಾಯ – ಪಗಡೆಯಾಟ

ದಾವುತಿ – ಸಂಕಷ್ಟ

ದಿಟ್ಟನಾಗವನೆ – ಎತ್ತರದಲ್ಲಿದ್ದಾನೆ

ದುಡುವ – ಧೃಡ

ದೂರಲ – ದೂರದ

ದೂಳುಮರಿ – ಬಲಿಯಕುರಿಮರಿ

ದೆಸೆವಂತ – ಪುಣ್ಯವಂತ

ದೈತೆ – ದೇವತೆ

ದ್ರುಸ್ಟ – ದುಷ್ಟ

 

ನಾಗಬೂಸುರ – ನಾಗಭೂಷಣ

ನಾಗಳಕ್ಕಿ – ನಾಲ್ಕು ಖಂಡ್ರುಗ ಅಕ್ಕಿ

ನಿಸ್ತ್ರೇ – ಸ್ತ್ರೀ

ನೆರಿಗ್ಯೋಳು – ಸೀರೆಯ ನೆರಿಗೆಯವಳು

ನೆವವಾಗಿ – ನೆಪವಾಗಿ

ನಾಣ್ಯೇದ – ಅಂದಚಂದದ

 

ರವರತ್ನ – ನವರತ್ನ

ರವುಸಾಕೆ – ರಭಸಕ್ಕೆ

ರಾಜುಣವೇ – ರಾಜಾನ್ನದಕ್ಕಿ

ರಾಡಬಾಗಲು – ಅಡ್ಡರಾಡು ಹಾಕಿ ಬಾಗಿಲು

ರುಂದವನ – ವೃಂದಾವನ

ರೂವಾರ – ಅಂದಚಂದದ

 

ಲೆತ್ತ – ಪಗಡೆ

 

ವಡಿಯ – ಒಡೆಯ

ವಡ್ಡುವಾಲಗ – ಒಡ್ಡೋಲಗ

ವಪ್ಪಕ – ಒಪ್ಫ, ಓರಣದಿಂದ

ವರತೆ – ನೀರಿನ ಮೂಲ

ವರನಂದಾವೆ – ಸರಿಜೋಡಿ ಎಂದು

ವಸ್ತುಲವ – ಹೊಸ್ತಿಲು

ವತ್ತಿಗೆ – ಹೊತ್ತಗೆ

ವಪ್ಪಾಕ – ಓರಣದಿಂದ

ವಾವುರಿಗೆ – ಮಹಡಿಮನೆ

ವುಣಿವೆ – ಹುಣ್ಣಿಮೆ

ವುಲಿಕುಂಟೆ – ಒಂದು ಗ್ರಾಮ

ವುದಿ – ಸ್ಥಳ

 

ಸಂದಗಾನಿ – ಗೊಲ್ಲರಲ್ಲಿ ಒಂದು ಕಾಲ

ಸಮರಂತ – ಸಾಹಸಿ, ಪರಾಕ್ರಮಿ

ಸರಪಾನ – ಸರ್ಪವನ್ನು

ಸರ್ಪಭೂಸುರ – ಸರ್ಪಭೂಷಣ

ಸಾಸಾನ – ಶಾಸನ

ಸಾಮಸಾಲೆ – ಒಳಮನೆ

ಸಿಕ್ಕೆಬಣ್ಣ – ಚಿಕ್ಕೆಯ ಬಣ್ಣ

ಸಿಪ್ಪಿಗ – ಬಟ್ಟೆ ಹೊಲೆಯುವವ

ಸಿಲುಮೇಲಗ್ಗಣಿಯ – ಚಿಲುಮೆಯ ನೀರು

ಸೀತಾರು – ಸೀನಿದರು

ಸೆಂಕದಣಿ – ಶಂಖು ದನಿ

ಸೆಂಕಿಲ್ಲದೆ – ಶಂಕೆಯಿಲ್ಲದೆ

ಸೇಜಿ – ತೇಜಿ, ಕುದುರೆ

ಸೇಸವ – ಅಕ್ಷತೆ

ಸೂರಿದ – ಸೂರ್ಯ

ಸೂಸುಕ – ಸೂತಕ

ಸೂರೇಯ ಬಿಡುತಾರೆ – ಚೆಲ್ಲಿಕೊಂಡು ಬರುವುದು

ಸ್ರೊಬಗೀನ – ಸೊಬಗಿನ

ಸ್ವಾರೆ – ಮಡಕೆ