ಕಡಲಿನ ಕತ್ತಲ ಗವಿಯಲ್ಲಿ
ಅಡಗಿಹವೆಷ್ಟೋ ರತ್ನಗಳು
ಘೋರಾರಣ್ಯದ ತರುಗಳಲಿ
ಅರಳಿಹವೆಷ್ಟೋ ಕುಸುಮಗಳು

ಹೊಳೆಯುವ ರನ್ನವ ಧರಿಸುವರಾರು
ಕಡಲಿನ ಗವಿಯಿಂ ಹೊರತೆಗೆದು
ಕುಸುಮದ ಕಂಪನು ಸೇವಿಪರಾರು
ತುಂಬಿದ ಕಾನನ ಮಧ್ಯದಲಿ

ಕನ್ನಡ ಸಾಹಿತ್ಯಾಬ್ಧಿಯಲಿ
ಮುಳುಗಿಹವೆಷ್ಟೋ ಕಾವ್ಯಗಳು
ಕನ್ನಡ ಭಾಷೆಯ ಕಾನನದಿ
ತುಂಬಿವೆ ಕಬ್ಬಿಗ ಕುಸುಮಗಳು
– (೧೯೪೪)