೧೯೯೦ರಲ್ಲಿ ಮೊದಲ ಬಾರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ ನನ್ನ ‘ಸಾಹಿತ್ಯ ವಿಮರ್ಶೆ’ ಕೃತಿಯು ಇಂದಿನವರೆಗೆ ಐದು ಮರುಮುದ್ರಣಗಳನ್ನು ಕಂಡಿದೆ. “ವಿಶ್ವ ಕನ್ನಡ ಸಮ್ಮೇಳನ’ದ ಅಂಗವಾಗಿ ಈ ಕೃತಿ ಕರ್ನಾಟಕ ಸರ್ಕಾರದ ‘ಕನ್ನಡ ಸಂಸ್ಕೃತಿ ಇಲಾಖೆ’ಯಿಂದ ಮರು ಮುದ್ರಿತವಾಗುತ್ತಿರುವುದು ನನಗೆ ತುಂಬಾ ಸಂತೋಷದ ಸಂಗತಿ. ಇದಕ್ಕಾಗಿ ಆಯ್ಕೆ ಸಮಿತಿಯ ಸದಸ್ಯರಿಗೆ, ಕರ್ನಾಟಕ ಸರಕಾರಕ್ಕೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗೆ ನಾನು ಕೃತಜ್ಞನಾಗಿದ್ದೇನೆ.

ಈ ಅವೃತ್ತಿಗಾಗಿ, ಓದುಗರಿಗೆ ನೆರವಾಗಲೆಂದು, ‘ತೌಲನಿಕ ಅಧ್ಯಯನ’ ಎಂಬ ಹೊಸ ಅಧ್ಯಾಯವನ್ನು ಸೇರಿಸಿದ್ದೇನೆ. ಓದುಗರ ಪ್ರತಿಕ್ರಿಯೆಗಳನ್ನು ಸದಾ ಸ್ವಾಗತಿಸುತ್ತೇನೆ.

ಸಿ.ಎನ್.ರಾಮಚಂದ್ರನ್
ಬೆಂಗಳೂರು
೨೩-೦೨-೨೦೧೧