ಕನ್ನಡ ವಿಶ್ವವಿದ್ಯಾಲಯದ ಸುವರ್ಣ ಕರ್ನಾಟಕ ಗ್ರಂಥಮಾಲೆಯಲ್ಲಿ ನನ್ನ ಈ ‘ಸಾಹಿತ್ಯ ಶೀಲನ’ ಪ್ರಕಟವಾಗುತ್ತಿರುವುದು ನನಗೆ ಹೆಮ್ಮೆಯ ಮತ್ತು ಸಂತೋಷದ ವಿಷಯವಾಗಿದೆ.

ಈ ಗ್ರಂಥ ಒಂದರ್ಥದಲ್ಲಿ ಹೊಸದು, ಇನ್ನೊಂದರ್ಥದಲ್ಲಿ ಅಲ್ಲ. ಈಗ ಅನುಪಲಬ್ಧ ವಾದ ನನ್ನ ಬೇರೆಬೇರೆ ವಿಮರ್ಶಪುಸ್ತಕಗಳಲ್ಲಿ ಚದುರಿಹೋಗಿದ್ದ, ಪ್ರಾಚೀನ ಸಾಹಿತ್ಯ ಸಂಬಂಧವಾದ ಇಪ್ಪತ್ತೈದು ಪ್ರಾತಿನಿಧಿಕ ಲೇಖನಗಳನ್ನು ಆಯ್ದು, ಒಗ್ಗೂಡಿಸಿ ಈ ಪುಸ್ತಕವನ್ನು ರೂಪಿಸಲಾಗಿದೆ. ಇದು ಯಾವುದೇ ಒಂದು ಗ್ರಂಥದ ಪುನರ್ಮುದ್ರಣವಂತೂ ಅಲ್ಲ. ಪ್ರಾಚೀನ ಕನ್ನಡ ಸಾಹಿತ್ಯದ ಅಧ್ಯಯನದಲ್ಲಿ ಆಸಕ್ತರಾದವರಿಗೆ ಈ ವಿಮರ್ಶಾತ್ಮಕ ಲೇಖನಗಳಿಂದ ಪ್ರಯೋಜನವಾಗುವುದೆಂದು ನನ್ನ ನಂಬಿಕೆ.

ಈ ಹೊತ್ತಗೆಯನ್ನು ಕನ್ನಡ ವಿಶ್ವವಿದ್ಯಾಲಯದ ನೂತನ ಹೊನ್ನಾರುಮಾಲೆಯಲ್ಲಿ ವಿಶ್ವಾಸಪೂರ್ವಕವಾಗಿ ಸೇರಿಸಿಕೊಂಡಿರುವ ಮಾನ್ಯ ಕುಲಪತಿಗಳಾದ ಡಾ.ಬಿ.ಎ.ವಿವೇಕ ರೈ ಅವರಿಗೂ ಉತ್ಸಾಹದಿಂದ ಪ್ರಕಟಿಸುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರಿಗೂ ನನ್ನ ಹೃತ್ಪೂರ್ವಕ ವಂದನೆಗಳು ಸಲ್ಲುತ್ತವೆ.

ಈ ಪುಸ್ತಕದ ಅಕ್ಷರ ಸಂಯೋಜನೆ ಮಾಡಿರುವ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್ ಅವರಿಗೂ ಮುದ್ರಿಸಿರುವ ಪ್ರಿಂಟ್‌ಪಾರ್ಕ್, ಬೆಂಗಳೂರು ಅವರಿಗೂ ನಾನು ಆಭಾರಿ

ಸಿ.ಪಿ. ಕೃಷ್ಣಕುಮಾರ್