ಮುಕ್ಕುಂದಾ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೯೩ ಕಿ.ಮೀ
ತಾಲೂಕ ಕೇಂದ್ರದಿಂದ: ೨೫ ಕಿ.ಮೀ

 

ಮುಕ್ಕುಂದಿಯಂಥ ಊರಿಲ್ಲ ಮುರಾರಿಯಂತ ದೇವರಿಲ್ಲ ಎನ್ನುವ ನಾಣ್ನುಡಿಯಂತೆ ಪ್ರಸಿದ್ಧವಾಗಿರುವ ಇದೊಂದು ಐತಿಹಾಸಿಕ ಸ್ಥಳ. ಇಲ್ಲಿ ಸಿಂಧರ ಕಾಲದ ಮೂರು ಶಿಲಾಶಾಸನಗಳಿವೆ. ಮುರಾರಿ ರಂಗ, ಬಾಜೇಶ್ವರ ಎಂಬ ಎರಡು ದೇವಸ್ಥಾನಗಳಿವೆ ಊರಿನ ಪ್ರವೇಶ ಮಾರ್ಗದಲ್ಲಿ ಇರುವ ಕಲ್ಲಿನ ಕಟ್ಟಡದ ಹಳೆಯ ಮುರಾರಿ ದೇವಾಲಯ ನೋಡತಕ್ಕದಾಗಿದೆ. ಇಲ್ಲಿ ರಥದ ಪೂರ ಕಂಚಗಾರ ಬಜಾರ ಎಂಬ ಊರಿನ ಭಾಗಗಳನ್ನು ಇಲ್ಲಿನ ಜನ ತೋರಿಸುತ್ತಾರೆ. ಹೊಯ್ಸಳ ಮಾದರಿಯ ಈಶ್ವರ ದೇವಾಲಯ ಹಾಗೂ ಮುರಾರಿ ರಂಗನ ಮೂರ್ತಿಯು ನಿಂತ ನಿಲುವಿನ ಸದೃಢ ಮೈಕಟ್ಟಿನಂತೆ ಕಾಣುವ ಚೆಲುವಾದ ವಿಗ್ರಹವಾಗಿದೆ. ತುಂಗಭದ್ರಾ ನದಿಯು ಇಲ್ಲಿಯ ವಿಶೇಷವೆಂದರೆ ಅದು ಇಲ್ಲಿ ಪಶ್ಚಿಮವಾಹಿನಿಯಾಗಿ ಹರಿಯುತ್ತದೆ. ಕರಿ ವೀರಯ್ಯ ಹಾಗೂ ಖಾದರಲಿ ಎಂದು ಹಿಂದೂ- ಮುಸಲ್ಮಾನ ಸಂತರ ಭಾವೈಕ್ಯತೆಯ ದ್ಯೋತಕವಾಗಿರುವ ಈ ಸುಕ್ಷೇತ್ರವನ್ನು ಒಮ್ಮೆ ಸಂದರ್ಶಿಸತಕ್ಕದ್ದು.

 

ಅಂಬಾಮಠ

[ಸಿದ್ದ ಪರ್ವತ]

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೯೩ ಕಿ.ಮೀ
ತಾಲೂಕ ಕೇಂದ್ರದಿಂದ: ೨೫ ಕಿ.ಮೀ

ಸಿಂಧನೂರು ತಾಲೂಕಿನ ಆಗ್ನೇಯ ದಿಕ್ಕಿಗೆ ೧೫ ಕಿ.ಮಿ. ದೂರದಲ್ಲಿ ಶ್ರೀ ಅಂಬಾದೇವಿ ಸುಕ್ಷೇತ್ರವಿದೆ. ಸಿದ್ದ ಪರ್ವತ ಎಂದೇ ಪ್ರಸಿದ್ದವಾಗಿರುವ ಈ ಕ್ಷೇತ್ರದಲ್ಲಿ ಪ್ರತಿ ವರ್ಷ ಬನದ ಹುಣ್ಣಿಮೆಯಂದು ಮೂರು ದಿನಗಳ ಕಾಲ ರಥೋತ್ಸವ. ಪೂರ್ಣ ಕುಂಭ ಮುಂತಾದ ಧಾರ್ಮಿಕ ಕಾರ್ಯಗಳು ಜರುಗುತ್ತವೆ. ಬೇರೆ ಬೇರೆ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ ಈ ಕ್ಷೇತ್ರದ ಸುತ್ತಮುತ್ತಲೂ ಬೆಟ್ಟಗುಡ್ಡಗಳಿವೆ ಇದರಲ್ಲಿ ಬೊದಿಗುಡ್ಡ ೧೯೯೨ ಅಡಿಗಳಷ್ಟು ಎತ್ತರವಿದೆ ಚಿದಾನಂದ ಅವಧೂತರು ದೇವಿಯನ್ನು ಕುರಿತು ಘನಘೋರ ತಪಸ್ಸು ಮಾಡಿ ಶ್ರೀದೇವಿಯನ್ನು ಆಹ್ವಾನಗೊಳಿಸಿದರು. ಇವರು ತಪಸ್ಸಿನ ಪ್ರಭಾವಕ್ಕೆ ಪ್ರಸನ್ನಳಾದ ದೇವಿಯು ಬಳಗಮುಖಿ ಎಂಬ ಸೌಮ್ಯರೂಪದಿಂದ ರರ್ಶನಗೈದಳು ಎಂಬ ಇತಿಹಾಸವಿದೆ. ಚಿದಾನಂದ ಅವಧೂತರು ವಾಸಿಸಿದ ಸ್ಥಳವಾಗಿದ್ದರಿಂದ ಈ ಸ್ಥಳಕ್ಕೆ ಚಿದಾನಂದಮಠ ಎಂದು ಕರೆಯುತ್ತಾರೆ.

 

ರೌಡಕುಂದ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೯೫ ಕಿ.ಮೀ
ತಾಲೂಕ ಕೇಂದ್ರದಿಂದ: ೧೭ ಕಿ.ಮೀ

ಸಿಂಧನೂರಿನಿಂದ ೧೭ ಕಿ.ಮಿ. ಅಂತರದಲ್ಲಿರುವ ರೌಡಕುಂದ ಗೊರೇಬಾಳ ಗ್ರಾಮದಿಂದ ಪೂರ್ವಕ್ಕೆ ೯ ಕಿ.ಮಿ. ದೂರದಲ್ಲಿದೆ. ಬೆಟ್ಟಾದ ಮೇಲಿರುವ ರಂಗನಾಥ ದೇವಸ್ಥಾನದಿಂದಾಗಿ ಈ ಸ್ಥಳ ಮಹತ್ವ ಪಡೆದುಕೊಂಡಿದೆ. ಈ ದೇವಸ್ಥಾನವನು ಬಂಡೆರಂಗನಾಥ ದೇವಸ್ಥಾನ ಎಂದು ಕರೆಯುತ್ತಾರೆ. ಇದೊಂದು ಐತಿಹಾಸಿಕ ಸ್ಥಳವಾಗಿದೆ. ಈ ಗ್ರಾಮದ ಪಶ್ಚಿಮಕ್ಕೆ ೨ ಗುಡ್ಡಗಳಿದ್ದು ೧೬ ಹಾಗೂ ೧೭ನೇ ಶತಮಾನಕ್ಕೆ ಸೇರಿದ ಕೋಟೆಯೊಂದು ಬೆಟ್ಟದ ಮೇಲಿದೆ. ಈ ಎರಡು ಬೆಟ್ಟಗಳ ನಡುವೆ ಕಣಿವೆಯಲ್ಲಿ ಹಾಗೂ ಬೆಟ್ಟದ ೨೮ ಇಳಿ ಜಾರಿನಲ್ಲಿ ಅನೇಕ ಪುರಾತನ ಅವಶೇಷಗಳು ದೊರೆತಿವೆ. ಬೆಟ್ಟದ ಮೇಲಿರುವ ದೇವಸ್ಥಾನ ಇದನ್ನು ತಾಲೂಕಿನ “ಮರಿತಿರುಪತಿ” ಎಂಬ ಅನ್ವರ್ಥಕನಾಮದಿಂದ ಕರೆಯುತ್ತಾರೆ.

 

ಜವಳಗೇರ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೮೦ ಕಿ.ಮೀ
ತಾಲೂಕ ಕೇಂದ್ರದಿಂದ: ೧೩ ಕಿ.ಮೀ

ಸಿಂಧನೂರು-ರಾಯಚೂರು ಮುಖ್ಯರಸ್ತೆಯಲ್ಲಿರುವ ಜವಳಗೇರ ತಾಲೂಕು ಕೇಂದ್ರದಿಂದ ಉತ್ತರ ದಿಕ್ಕಿಗೆ ೧೩ ಕಿ.ಮಿ. ಅಂತರದಲ್ಲಿದೆ, ಜವಳಗೇರಾ ಗ್ರಾಮದಲ್ಲಿ ಶ್ರೀವೆಂಕಟರಮಣನ ಪ್ರಾಚೀನ ದೇವಸ್ಥಾನವಿದೆ ಹಾಗೂ ಒಂದು ಕ್ಯಾಥೊಲಿಕ ಚರ್ಚ್ ಕೂಡಿ ಇದೆ.

ಕ್ರಿ.ಶ. ಸುಮಾರು ೧೫ನೇ ಶತಮಾನದಲ್ಲಿ ಸಮಾಂತರ-ಮಾಂಡಲಿಕರ ಆಳ್ವಿಕೆ ಮುಗಿದು ನಾಳಗಾವುಂಡರ ಆಳ್ವಿಕೆಗೆ ಒಳಪಟ್ಟಿತ್ತೆಂದು ತಿಳಿದು ಬರುತ್ತದೆ. ಪ್ರತಿ ವರ್ಷ ಶ್ರೀ ವೆಂಕಟರಮಣ ಜಾತ್ರೆ ವಿಜೃಂಭಣೆಯಿಂದ ಜರುಗುತ್ತದೆ.

 

ಬಳಗಾನೂರು

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೯೯ ಕಿ.ಮೀ
ತಾಲೂಕ ಕೇಂದ್ರದಿಂದ: ೩೫ ಕಿ.ಮೀ

 

ಇದೊಂದು ಐತಿಹಾಸಿಕ ಸ್ಥಳವಾಗಿದೆ. ಇಲ್ಲಿ ಲಕ್ಷ್ಮಿ ನಾರಾಯಣ ಹಾಗೂ ನಗರೇಶ್ವರ ದೇವಸ್ಥಾನಗಳಿವೆ ಚಾಳುಕ್ಯರ ಕಾಲದ ೨ ಶಿಲಾಶಾಸನಗಳಿವೆ. ಬಳಗನೂರಿನಲ್ಲಿ ಪ್ರಸಿದ್ದವಾದ ಒಂದು ಹನುಮಂತನ ದೇವಸ್ಥಾನವಿದೆ, ಗರ್ಭಗುಡಿಯಲ್ಲಿ ಆರು ಅಡಿ ಎತ್ತರದ ಭೀಮಾಕೃತಿಯ ಭವ್ಯವಾದ ಮೂರ್ತಿ ಇದೆ. ವೈಶಾಖ-ಶುದ್ಧ ಪೂರ್ಣಿಮೆಯಂದು ರಥೋತ್ಸವ ನಡೆಯುತ್ತದೆ, ನಗರೇಶ್ವರ ದೇವಾಲಯದ ಶಾಸನವೊಂದರಲ್ಲಿ ನಗರೇಶ್ವರನನ್ನು ಕುರಿತ ಸಂಸ್ಕೃತ ಪದ್ಯವೊಂದು ಮತ್ತು ವೈಶ್ಯರನ್ನು ಕುರಿತು ವರ್ಣನೆಯೊಂದಿದೆ.

 

ಚಡೇಸೂಗೂರು ಆಲಂಬಾಷಾ ದರ್ಗಾ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೧೦೦ ಕಿ.ಮೀ
ತಾಲೂಕ ಕೇಂದ್ರದಿಂದ: ೧೫ ಕಿ.ಮೀ

ಸಿಂಧನೂರು ಬಳ್ಳಾರಿ ಮುಖ್ಯರಸ್ತೆಯಲ್ಲಿರುವ ಹಾಗೂ ಸಿಂಧನೂರು ತಾಲೂಕಿನ ಗಡಿಭಾಗದಲ್ಲಿ ತುಂಗಾ-ಭದ್ರ ನದಿಯ ತಟದಲ್ಲಿ ನೆಲೆಗೊಂಡಿರುವ ಕ್ಷೇತ್ರವು ತಾಲೂಕಿನಿಂದ ೨೦ ಕಿ.ಮಿ ದೂರದಲ್ಲಿದೆ ಇಲ್ಲಿರುವ ಆಲಂಬಾಷಾ ದರ್ಗಾವು ಅತ್ಯಂತ ಪ್ರಸಿದ್ಧವಾಗಿದ್ದು, ಹಿಂದೂ-ಮುಸ್ಲಿಂರ ಭಾವೈಕ್ಯದ ಪ್ರತೀಕವಾಗಿದೆ ಆಲಂಬಾಷ ಉರುಸು ಅತ್ಯಂತ ಖ್ಯಾತಿ ಪಡೆದಿದ್ದು ದೂರದ ಮುಂಬಯಿ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಖವ್ವಾಲಿ ಹಾಡಲು ಪ್ರತಿಭಾವಂತ ಕಲಾವಿದರು ಆಗಮಿಸುತ್ತಾರೆ. ಈ ಗ್ರಾಮದಲ್ಲಿ “ಕೃಷಿ ಅಭಿವೃದ್ಧಿ ಕೇಂದ್ರ” ವಿದೆ. ಇದು ರೈತ ಮಕ್ಕಳಿಗೆ ಗ್ರಾಮೀಣ ಕೃಷಿ ಕೈಗಾರಿಕ ಕೇಂದ್ರವಿದೆ ಈ ಕೇಂದ್ರ ೧೯೬೬ರಲ್ಲಿ ಸ್ಥಾಪಿತವಾಗಿದೆ.

 

ಗಾಂಧಿನಗರ ಶಿವಲಿಂಗ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೧೦೦ ಕಿ.ಮೀ
ತಾಲೂಕ ಕೇಂದ್ರದಿಂದ: ೧೫ ಕಿ.ಮೀ

ಸಿಂಧನೂರಿನಲ್ಲಿ ಇತ್ತೀಚಿಗಷ್ಟೆ ಉದ್ಘಾಟನೆಯಾದ ಶಿವಲಿಂಗ ದೇವಸ್ಥಾನವು ಅಪಾರ ವೆಚ್ಚದೊಂದಿಗೆ ನಿರ್ಮಾಣವಾಗಿದೆ. ಈ ಕ್ಷೇತ್ರವು ನೋಡುಗರ ಕಣ್ಮನ ಸೆಳೆಯುತ್ತದೆ. ಇದು ತಾಲೂಕಾ ಕೇಂದ್ರದಿಂದ ಗಂಗಾವತಿಗೆ ಹೋಗುವ ರಸ್ತೆಯಿಂದ ಪಶ್ಚಿಮಕ್ಕೆ ನೆಲೆಗೊಂಡಿರುವ ಈ ಕ್ಷೇತ್ರವು ರೈತ ಮುಖಂಡರು ಈ ದೇವಸ್ಥಾನದ ನಿರ್ಮಾಣದಲ್ಲಿ ತಮ್ಮ ತನು-ಮನ-ಧನದಿಂದ ಸಹಾಯ ಮಾಡಿ ಇದನ್ನೊಂದು ಪ್ರೇಕ್ಷಣೀಯ ಸ್ಥಳವನ್ನಾಗಿಸಿದ್ದಾರೆ.

 

ಗೊರೆಬಾಳ ಶ್ರೀ ಶರಣಬಸವೇಶ್ವರ ವಿಗ್ರಹ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೧೦೦ ಕಿ.ಮೀ
ತಾಲೂಕ ಕೇಂದ್ರದಿಂದ: ೮ ಕಿ.ಮೀ

ಸಿಂಧನೂರು-ಗಂಗಾವತಿ ಮುಖ್ಯರಸ್ತೆಯಲ್ಲಿರುವ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಪ್ರಸಿದ್ಧವಾಗಿದೆ. ತನ್ನದೇ ಕಲ್ಯಾಣ ಮಂಟಪ ಹೊಂದಿರುವ ಈ ದೇವಸ್ಥಾನ ಹಲವಾರು ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿ ಸಮಾಜಸೇವೆ ಮೆರೆದಿದೆ.