ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಸುಮಾರು ಎರಡು ದಶಕಗಳಿಂದ ಕನ್ನಡ ಡಿಂಡಿಮವನ್ನು ಮೊಳಗಿಸುತ್ತಿರುವ ಹೊರನಾಡ ಕನ್ನಡ ಸಂಘ ಸಿಡ್ನಿ ಕನ್ನಡ ಕೂಟ.
೧೯೮೨ ರಲ್ಲಿ ಪ್ರಾರಂಭವಾದ ಸಿಡ್ನಿ ಕನ್ನಡ ಕೂಟವು ಸಿಡ್ನಿಯಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಹೊರನಾಡಿನಲ್ಲಿ ಕನ್ನಡದ ಕಂಪನ್ನು ಪಸರಿಸಲು ಸಿಡ್ನಿ ಕನ್ನಡ ಕೂಟವು ‘ಸುಗಮ ಕನ್ನಡ ಶಾಲೆ’ಯನ್ನು ಪ್ರಾರಂಭಿಸಿರುವುದು ಒಂದು ಪ್ರಮುಖ ಮೈಲಿಗಲ್ಲು. ಪ್ರಾರಂಭದಲ್ಲಿ ಮನೆಗಳಲ್ಲಿ ಸೇರುತ್ತಿದ್ದ ಕನ್ನಡ ಕಲಾವಿದರು ಈಗ ಹೆಚ್ಚಿನ ಸಂಖ್ಯೆಯಲ್ಲಿ ವೇದಿಕೆಯಲ್ಲಿ ಒಗ್ಗೂಡಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಸಿಡ್ನಿಯಲ್ಲಿ ಬೆಳೆಯುತ್ತಿರುವ ಕನ್ನಡಿಗರ ಸಂಖ್ಯೆಯನ್ನು ಗಮನಿಸಿ, ಕನ್ನಡ ಕ್ರಿಕೆಟ್ ಕ್ಲಬ್, ಶೈಕ್ಷಣಿಕ, ಸಾಂಸ್ಕೃತಿಕ ಸಂಸ್ಥೆಗಳನ್ನು ಕಟ್ಟಿ ಬೆಳೆಸುತ್ತಿರುವ ಸಿಡ್ನಿ ಕನ್ನಡ ಕೂಟವು ಪರಭಾಷಾ ವಲಯಲ್ಲಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಇಂದು ಹೊರನಾಡಿನಲ್ಲಿ ಪರಿಚಯಿಸುತ್ತಿರುವ ಹೆಮ್ಮೆಯ ಸಂಸ್ಥೆಯಾಗಿದೆ.
೨೦೦೩ರ ಜೂನ್ ತಿಂಗಳಲ್ಲಿ ೨೦ನೇ ವಾರ್ಷಿಕೋತ್ಸವವನ್ನು ಆಚರಿಸಿ, ಈ ಸಂದರ್ಭದಲ್ಲಿ ದಸರಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಚರಿಸಿ ಕನ್ನಡದ ಕಹಳೆಯನ್ನು ಹೊರನಾಡಿನಲ್ಲಿ ಮೊಳಗಿಸುತ್ತಿರುವ ಅನನ್ಯ ಸಂಸ್ಥೆ ಸಿಡ್ನಿ ಕನ್ನಡ ಕೂಟ.
Categories
ಸಿಡ್ನಿ ಕನ್ನಡ ಕೂಟ
