ತನು ಮನ ಧನ ಮಹಾ ಬೆಲಿಯ ಕೊಟ್ಟು |

ಒಂದು ತಿಕೀಟು ತೊಗೊಂಡಾ |

ಗುರು ಪಾದವ ಪಿಡಕೊಂಡಾ ||ಪಲ್ಲವಿ||

ದೇಹದ ಥೇಟರದೊಳಗೆ ಹೊಕ್ಕಿ |

ನಿಜ ಧ್ಯಾಸ ಸ್ಥಲ ಪಿಡಿದಾ |

ದಯಾ ಮಾಯಾ ಸೂತ್ರಧಾರಿಗೆ |

ಕಂಡು ಕಣ್ಣು ತೆರದಾ |

ಮೊದಲೆ ಗಣಪತಿ ನೋಡದಕಾಗಿ |

ನಾಕ ಪರದಿ ಎಳಕೊಂಡಾ |

ತನ್ನ ಒಳಗೆ ತಿಳಕೊಂಡಾ ||1||

ತ್ರಿಮೂರ್ತಿ ಸಭಾದೊಳು ಕುದರಿ ಮೊರಿ |

ಒಬ್ಬಾಗ ನಾ ಮಾಡದು ಕೇಳಿ |

ನಾರಂದ ಕಿನ್ನರ ಗಂಧರ್ವರು |

ಬಿದ್ದರು ಭೂಮಿಗೆ ಬಾಳಿ |

ಮೋಹ ವಿವೇಕಂದು ಯುದ್ಧ ನಡೆಯಿತು |

ಆಗ ಲೆಕ್ಕಿಲ್ಲದ ದಂಡಾ |

ಹಾರಿ ಹೋಗುತೈತಿ ರುಂಡಾ ||2||

ಸತ್ವದಲಿ ಮಹಾ ಮಹತ್ವ ಇರುವದು |

ವಿವೇಕ ಗೆದ್ದು ಕೊಂಡಾ |

ಆದತ್ತೋ ಅಭೇದ್ಯ ಆಗಮ ನಿಗಮಗಳು |

ವಿವೇಕನ ಫಂಡಾ |

ಕರ್ಮಾ-ಧರ್ಮಾ ಕಾಟ ಹಚ್ಚಿ ಚಿತ್ರಗುಪ್ತ |

ವಜನ ಮಾಡಿ ಬರಕೊಂಡಾ |

ಹೋದ ದಪ್ತರ ಕಟಕೊಂಡಾ ||3||

ಆರಮಂದಿ ಬಡಿತಿರು ಹತ್ತೆ ಮಂದಿ |

ಬಾರತಂತಿ ಸಾರಂಗಾ |

ಸೋಳಮಂದಿ ಹಿಂದ ಇಬ್ಬರು ಮುಂದ |

ಹಾಡಕಿ ಭವರಂಗಾ |

ಸಾವಿರ ಸೂರ್ಯನ ಪ್ರಕಾಶದಂತೆ |

ಬೈಲ ಸೋಂಗ ಕಂಡಾ |

ದಂಡಿಲ್ಲದಂವ ಮಹಾಪುಂಡಾ ||4||

ಐದ ಅಂಕಿನ ಆಟ ನೋಡಿ |

ಎಡ ಖಿಡಕಿಲಿ ಬಂದಾ |

ಬಾಲರು ಈ ಆಟ ನೋಡುವರು |

ಆಗೀಗ ಆನಂದಾ |

ದಾಮಿಲ್ಲ ತಿಗೀಟ ಇಲ್ಲ ಸಿದ್ಧ ಭಜನಿಗಿ |

ಹೋಗಿ ಬರುವ ಪುಂಡಾ |

ದಂಡ ಇಲ್ಲದಂವ ಮಹಾಪುಂಡಾ ||5||

ತಂದಿ ತಾಯಿ ಒಂದು ಬಳ್ಳೊಳ್ಳಿ ಕೊಟ್ಟರ |

ಆಕಳ ನೀವು ನೋಡರಿ |

ಅತ್ತಿ ಮಾವ ನೀವು ಕೇಳರಿ ||ಪಲ್ಲವಿ||

ಭೂಮಿ ಮೇಲೆ ಬೆಳೆದಿದು ತಿಂಬೋದಿಲ್ಲ |

ಇಂಥ ಆಕಳ ಐತರಿ |

ಭೂಮಿ ಗುಣಗಳು ತಂದು ಹಾಕಿದರ |

ಹಸುರು ಹುಲ್ಲೆಂದು ತಿನ್ನತದರಿ |

ನೀರ ಕುಡಿವದಿಲ್ಲ ನೀರಿನ ಗುಣ ತರ್ರಿ |

ನಮೂನ ನೋಡತದರಿ |

ನೀರೆಂದು ಕುಡಿತದರಿ ||1||

ಬೆಂಕಿ ತಿಂಬೋದಿಲ್ಲ ಬೆಂಕಿ ಗುಣ |

ಲೆಂಕೆಂದು ತಿನ್ನುತದರಿ |

ಗಾಳಿ ತಿಂಬೋದಿಲ್ಲ ಗಾಳಿ ಗುಣ |

ಬ್ಯಾಳೆಂದು ತಿನ್ನುತದರಿ |

ಆಕಾಶ ತಿಂಬೋದಿಲ್ಲ ಆಕಾಶ ಗುಣ |

ಹತ್ತಿಕಾಳ ಅವ ಆ ಪರಿ |

ಬಲು ಹಿಗ್ಗಿಲಿ ತಿನ್ನುವದರಿ ||2||

ಇಂಥ ಆಕಳ ಸಂರಕ್ಷಣ ಮಾಡೆಂದು |

ತಾಯಿ-ತಂದಿ ಕೊಟ್ಟರ್ರಿ |

ಬಲ್ಲವರ ಮನಿದೊಳು ಈ ಆಕಳ |

ಬಾಳುವೆ ಆಗುತದರಿ |

ಅತ್ತಿ-ಮಾವ ನೆರಮನೆಯವರು ಕೇರೆವರು |

ಊರವರು ನೆರದರಿ |

ಆಕಳ ಮೇಯಿಸದಕ ಬಲು ಬಿರಿ ||3||

ಸಾಟಿ ಕರಗಳು ಸಂಗಟ ತಂದಿನಿ |

ಸರ್ವ ಎಲ್ಲಾ ಹೋರಿ |

ಓಸು ಕರಗಳು ಕುಡಿದ ಮೇಲೆ |

ಎಸೋ ರಂಜಣಗಿ ತುಂಬತಾವರಿ |

ಇದೇ ಪ್ರಕಾರ ಇದರ ಮೇವು ತಿನಿಸಬೇಕು |

ಬೇಕಾದರ ಇಟಕೊರಿ |

ಇಕೋ ಹಾಲು ಮೊದಲ ಕುಡಿರಿ ||4||

ಹಾಲಿನ ರಕಮ ನಿತ್ಯ ಬರುವುದು |

ವರವಿ ಪಂಢರ ಪುರಿ |

ಗುರು ಪುತ್ರರಿಗೆ ಇಂಥ ಆಕಳ |

ಸಲುವಾ ಖಾಯಸರಿ |

ಹಾಲ ಒಯ್ಯಲಿಕೆ ಸೋತಳೆಂದು |

ತಾನೇ ಬಂದು ನಮ್ಮ ಧೊರಿ |

ಸಿದ್ಧ ಪ್ಯಾಲ ಕುಡದ ಹೋದರಿ ||5||

ಜಾಣ ಗುಣದವನೆ ಅವನೆ ಭಕ್ತ |

ರಿಣ ತೀರಿಸಿದವನೆ ಮುಕ್ತ ||ಪಲ್ಲವಿ||

ಸಂಚಿತ ಕ್ರಿಯ ಮನದ ಬಾಕಿ |

ಕಿಂಚಿತ ಇಡಲಿಲ್ಲ ಒಂದು ಪಾಕಿ |

ಮುಂಚಿನ ಪ್ರಾರಬ್ಧದ ರೋಕಿ |

ಹಂಚಿಕೆ ಮಾಡಿದ ಹರದ ಹಾಕಿ ||1||

ಭವದೊಳು ಬಾಗಿ ನಡೆದ ಜ್ವಾಕಿ |

ದೇವಲೋಕ ಪಾಸಾಗಿದ ನೇಕಿ |

ಜೀವ ಸಂಜೀವದ ಸ್ಥಳ ಹುಡುಕಿ |

ಶಿವಸಿದ್ಧ ಭಜನಿದೊಳಗೆ ಸಿಲುಕಿ ||2||

ಕೇಳಬಾರದು ಕಿವಿ ಕೇಳಬಾರದು |

ಕೇಳಬೇಕು ತತ್ವಜ್ಞಾನ |

ಉನ್ಮನಿ ಕದವ ತೆರೆದು ||ಪಲ್ಲವಿ||

ಋಗ್ವೇದ ಬೋಧ ರುಚಿ |

ಕರುಣಾದಿ ಕೂಡಿದ |

ಸಚ್ಚಿದಾನಂದ ಧ್ಯಾನದೊಳು |

ಬಲನಯನ ತೆರೆದ |

ಯಜುರ್‍ವೇದಾರ್ಥ |

ಸಾಮವೇದ ಗೀತಾ |

ಒಳ್ಳೆಯ ಗುರು ಹಂತಿಲಿ ಕುಂತು |

ಛಿಡದ ಚಡ್ಡಿ ಬಿಗಿದ ||1||

ಅಥವರಣ ವೇದಾ |

ಅರ್ಥ ಮಾಡಿ ಸೋದಾ |

ವ್ಯರ್ಥ ಜಲ್ಮ ಹೋಗಬಾರದು |

ಉಪದೇಶ ಪಡಿದಾ |

ಒಂದಿನಾ ಹವಾಲಿ ಕೊಟ್ಟು |

ಬಂದ್ರು ಭೂಮ್ಯಾಗಾ ಇಟ್ಟು |

ಸತ್ತು ಇರಬೇಕು ನಿರ್ಗುಣ |

ಸಿದ್ಧನ ಸಾಲಿ ಬರೆದು ||2||

ಏನ ಬೇಕೋ ಯೋಗಿಗಿ ಏನ ಬ್ಯಾಡೋ |

ಏನು ಬೇಕು ಗುರು ಧ್ಯಾನದೊಳಗ ಮೌನ |

ಮಾನ ಅಪಮಾನ ಪಾನ ಆದವಗೆ ||ಪಲ್ಲವಿ||

ವೇದದ ಮೊದಲಿನ ಮೂಲ ತಿಳದಿದ |

ನಾದ ನಾದ ನಾಮ ಪರಬ್ರಹ್ಮ ತಿಳಿದವಗೆ ||ಅನುಪಲ್ಲವಿ||

ಪಂಚತತ್ವಗಳು, ಪಂಚಭೂತಗಳು |

ಪಂಚ ಪ್ರಣಾಮಗಳು ತ್ಯಾಗಿ ಆದವಗೆ |

ಪ್ರಪಂಚವನು ಬಿಟ್ಟು ಪಂಚಮುಖವ ಮೀರಿ |

ಕಂಚಿನ ಬಟ್ಟಲು ಬಿಟ್ಟು ಹಂಚಿನಾಗ ಉಂಬವಗೆ ||1||

ನವಖಂಡದೊಳು ಪೊಕ್ಕಿ ದಶಖಂಡವೆಲ್ಲ ತಿರುಗಿ |

ಅಖಂಡ ತಾನಾಗಿ ಭಂಡ ಬಿಟ್ಟವಗೆ |

ಗಂಡಿಸಾಗರ ದಾಟಿ ಪುಂಡ ಚಡ್ಡಿಯ ಬಿಗಿದು |

ಹಿಂಡು ದೈತ್ಯರ ಕಂಡು ಮುಂಡ್ಯಾ ಹೊಡದವಗೆ ||2||

ಕಾಮ ಕ್ರೋಧ ಮದ ಮಚ್ಚರ ಡಂಬಕ |

ಆಚಾರವನು ಬಿಟ್ಟು ಅದ್ವೈತ ಆದವಗೆ |

ಸಚ್ಚಿದಾನಂದ ಗುರು ನಿಚ್ಚ ಪ್ಯಾಲಾ ಕುಡಿದ |

ಇಚ್ಛಾಮರಣ ಪಡೆದು ಸಾಕ್ಷಿ ಆದವಗೆ ||3||

ಸ್ನಾನ ಸಂಧ್ಯಾ ಬಿಟ್ಟು ನಿಂದ್ಯಾ ವಂದನೆ ಬಿಟ್ಟು |

ಬಂಧನ ಬದಿಗಿಟ್ಟು ಬೈಲಿಗಾದವಗೆ |

ಅಂಧಕಾರದೊಳು ಜ್ಯೋತಿ ಸಂದು ಪೂರತದೊಳು |

ಅನಂತದೊಳು ಮೈಮರೆತು ಕೂತವಗೆ ||4||

ಮಾಯಾ ನಿದ್ರಿಯ ತ್ಯಾಗಿ ಯೋಗ ಮುದ್ರಿಯ ನೀಗಿ |

ಬದ್ರಿನಾಥ ಬೈಲು ತದ್ರೂಪ ಆದವಗೆ |

ಸಿದ್ಧ ಸಾಧಕರೆಲ್ಲ ಸುಧಾ ನಾಮಾಮೃತ |

ಮುದ್ದ ಮಾತನಾಡಿ ಸಿದ್ಧ ಗೆದ್ದವಗೆ ||5||

ಜಲ್ಮಕ ಬಾರದ ಕಾರ್ಯ ಮಾಡು |

ಇಲ್ಮ ಬಾವನ ಮಾತ್ರದಿ ಹರದಾಡು ||ಪಲ್ಲವಿ||

ಏಸು ವಿದ್ಯೆ ಕಲ್ತರ ವಿದ್ಯೆ ಮುಗಿತು |

ಮನಸಿನ ಭ್ರಮಿ ಮೂರ ತುಂಬಿ ಮುಂದ ಚಿಗಿತು |

ಕಲ್ಮ ಕಾಗದ ರಂಗವಿಲ್ಲದ ಬರಿ ನೋಡು ||1||

ನರಕವಿ ವರಕವಿ ಹ್ಯಾಂಗ ತಿಳಿತು |

ಮೂಲಸ್ತಂಭ ಪಂಚಕರಣ ದೇವರಿಗೆ ಗೊತ್ತು |

ತಾಲಿಂ ಕಲ್ತು ಚೌಸಟ್ಟಿ ರಾಗ ಮಾಡು ||2||

ಭಕ್ತಿಗಿ ನಿಂತಾತ ಬಸವಣ್ಣನ ನಾಮ ಸಲ್ತು |

ಶಕ್ತಿ ಯುಕ್ತಿ ಮುಕ್ತಿ ಜ್ಞಾನ ಬಲಿತು |

ಒಲ್ಮವಾದ ಬಳಿಕ ಹೈನ ಆಯಿತು ಬರಡು ||3||

ಕನ್ನಡಿ ಇಲ್ಲದೆ ತನ್ನ ಮುಖ ಎಲ್ಲಿ ಕಾಣ್ತು |

ಕಿವುಡರ ಕಿವಿಸನಿ ಎಷ್ಟು ಹಾಡಿ ಏನಾಯ್ತು |

ಜುಲ್ಮ ಇಲ್ಲಪ್ಪ ಉಪದೇಶಕ ನಮ್ಮ ಹಾಡು ||4||

ಹಿರಣ್ಯ ಕಶ್ಯಪಗೆ ಉಪದೇಶವಾಯಿತು |

ಧರ್ಮ ನೀತಿ ನಡಿ ಬಿಟ್ಟು ಗರ್ವ ಬಂತು

ಬ್ರಹ್ಮ ನಾನೆಂದು ಹಮ್ಮು ಬಂದಲ್ಲಿ ಬಂತು ಕೇಡು ||5||

ಬಲ್ಲೆನೆಂದು ಅಭಿಮಾನ ಹೆಚ್ಚಾಯಿತು |

ಅಭಿಮಾನಕ ಬಿದ್ದು ತಿರುಗಿ ಹುಚ್ಚುನಾಯಿತು |

ನಮ್ಮ ದೇವಿದಾಸ ಬರದಿಟ್ಟಿದ್ದ ಹಣಿಬಾರದ ಹಾಡು ||6||

ಬರ್ರಿ ಮಿತ್ರ ಹೋಗನು ಬಸವ ಕಲ್ಯಾಣಕ |

ಧರಿಯೆಂಬೋ ಸುವರ್ಣಗಿರಿ ಅನುಭವ ಮಂಟಪಕ ||ಪಲ್ಲವಿ||

ದೂರ ಇಲ್ಲ ತನ್ನ ಹಂತಿಲಿ ಕಲ್ಯಾಣ ಬಸವಣ್ಣ |

ಧೀರ ಗುರುಪುತ್ರರಿಗೆ ಮಾರ್ಗ ಸುಲಭಣ್ಣ |

ಗುರಿಯಿಟ್ಟು ನಾಸಿಕ ಮಾರ್ಗ ಥೇಟ ಬರ್ರಿ ಪಶ್ಚಿಮಕ ||1||

ಸಾವಿರ ಚಂದ್ರನ ಬೆಳಕ ಪಶ್ಚಿಮ ಸ್ಥಳದಲ್ಲಿ|

ದೇವರ ದೇವರುಂಟು ಅನಾಹತ ಸ್ಥಳದಲ್ಲಿ |

ಹರಿಹರ ನಿಂತಾರ ನೋಡು ನಿರ್ಬೈಲ ಸೇವಕ ||2||

ನಿರ್ಬೈಲ ಕಾಣುವುದಲ್ಲ ತಿಳಿಲಾಕ ಗುರು ಮಾಡಿಕೋ |

ಧರಿಯಲ್ಲಿ ಸಿದ್ಧ ಸಿಕ್ಕ ಭಜನ ಸಂಗ ಹೋಗದಕೋ |

ಧರಿಯೆಂಬೋ ಸುವರ್ಣ ಗಿರಿ ಅನುಭವ ಮಂಪಕ ||3||

ಚಲತಿ- ಪುಷ್ಪದ ಮಳಿ ಬಿದ್ದಾದಲ್ಲಿ |

ಬಸವ ಇದ್ದ ಕಲ್ಯಾಣದಲ್ಲಿ ||

ದಾಸಿಯಾಗದು ಸುಮ್ಮನಿಲ್ಲಾ |

ಆಸಿ ಹಿಡಿದು ಪಾಸ ಬಳದಿ ದಾಸಿ ಫಲವಿಲ್ಲಾ ||ಪಲ್ಲವಿ||

ಮೂರು ಹಿಡಿದವ ವಿರಕ್ತಲ್ಲಾ |

ಆರು ತಿಳಿಯದೆ ಸನ್ಯಾಸಿ ಆಶ್ರಮದ ಅಲ್ಲಾ |

ನೂರು ಮಾತನಾಡಿದ್ರೆ ಇಲ್ಲಾ |

ಘೋರ ತಪಸ್ಯಾ ಮಾಡಿದೆನೆಂದು ಹೇಳಿದಲ್ಲಿವಿಲ್ಲಾ ||1||

ಸಾಧುರ ಕುನ್ನಿಯ ಬಗಲಾ |

ಬೇಗ ಬೆಳಗ ಹೃದಯದೊಳು ನುಡಿವದು ಭುಗಿಲಾ

ಹಚ್ಚಿಕೊಳ್ಳುವದು ಯಾರ್ಯಾರ ತಗಲಾ |

ಸಚ್ಚಿತ್ತಾನಂದ ರುಚಿದೊಳು ರಾತ್ರಿ ಹಗಲಾ ||2||

ಮುದ್ರದೊಳು ತಿಳಿಹುವದಲ್ಲಾ |

ತದ್ರೂಪ ಕಾಣೆನೆಂದರೆ ಅದು ಸ್ಥಿರ ಉಳಿವದಿಲ್ಲಾ |

ಹೋದ್ರಪ್ಪ ನಿಲಕುವದಿಲ್ಲಾ |

ಭದ್ರಗಿರಿ ಹೋಗಿ ಬಂದರ ಕಾಣುವದಲ್ಲಾ ||3||

ಬಾಯಿ ಬೆಲ್ಲಾ ಗುರು ಸಿಗೋದಿಲ್ಲಾ |

ನಾಯಿ ತನ್ನ ಜೀವನಕೆ ನಾರಾಯಣ ಅಂದರೆ ಇಲ್ಲಾ |

ಪೂರ್ವಿ ಸುಕೃತ ಬೇಕೋ ಮೊದಲಾ |

ಹುಲಿ ಬಣ್ಣ ನರಿಸೋಂಗ ಹಾಕಿದ್ರೆ ಇಲ್ಲಾ ||4||

ದಾಸಿ ಎಂಕಮ್ಮ ದುಡಿದಾಳಲ್ಲಾ |

ಧ್ಯಾಸ ಕೈಲಾಸತನ ಖರೆ ಆಸಿ ಇಡಲಿಲ್ಲಾ |

ದಾಸತ್ವ ತಾ ಬಿಡಲಿಲ್ಲಾ |

ದಾಸ ದೇವಿದಾಸ ನೋಡಿ ತಾನು ಖಾಲಿ ಕೊಡಲಿಲ್ಲಾ ||5||

ಪಂತ ಯಾತಕ ಪಂಡಿತ ನಾನೆಂಬೊ |

ಅಂತಾ ಕೊಟ್ಟಿಲ್ಲಾ ದಾರಿಗಿ ಶಾಂತ ಶಂಭೋ ||ಪಲ್ಲವಿ||

ಬಲವಂತ ಹಿಮಾಚಲ ಪರ್ವತ ಗಿರಿ |

ದೋರ ಏಕಾಂತ ತಿಳಿದವನೆ ಸಂತ ಧೀರ |

ಶಮರಂತ ಮಾನೋ ಮನುಜಾನ ಬಲ್ಲಿ ಇದ್ದಾರ |

ಗುಣವಂತ ಬೇರೆ ಉಂಟೋ ನಿರಾಲಂಬೊ ||1||

ಗುರು ಉಪದೇಶ ಪಡಿಬೇಕೋ ಮಹೇಂದ್ರ ಘಟಕ |

ಪೂರ್ವ ಪುಣ್ಯದ ಸುತ್ರೂಪ ಬೇಕೋ ಹಟಕ |

ಗುರು ದತ್ತಕ ಕೊಡಬೇಕೊ ಪರಶಿವನ ಮಠಕ |

ಹುಚ್ಚ ಗುರು ಇಂದ್ರ ಮನಮೆಚ್ಚಿ ಸ್ವರೂಪನೆಂಬೊ ||2||

ಲಕ್ಷಾ ಚೌರ್ಯಾಐಂಸಿ ಜೀವರಾಶಿ ದೇವರಗೆಲ್ಲಾ|

ಅಪರೋಕ್ಷ ದನಿ ಕೇಳೋ ಗಗನದ ಗುಲ್ಲಾ |

ಮೋಕ್ಷ ಮಾರ್ಗಸೇ ದೇಖೆತೋ ತರಕಾರಿ ಮಲ್ಲಾ |

ಸಂತಸ ಸೇವೆಯೊಳು ಬಿದ್ದು ಹೋಗಲಿ ಈ ಬಿಂಬೊ ||3||

ಏಕಾಂತ ನಿಂತವನೇ ಎರಡು ಬಿಟ್ಟ |

ಸಂತ ಸಾಧು ಸಾಧನ ಸಂತಾನ ಕೊಟ್ಟಾ ಮಹಾಂತ |

ಜಾನೇ ಸೋ ಮುರಷಿದ ಕಾ ಮುರಿದ ಛೋಟಾ |

ಅಮೃತ ಯಾಳ್ಯಾ ನಿರ್ಬೈಲದ ಉಚ್ಯಾದ ತುಂಬೊ ||4||

ಕೀರ್ತಿಪಡಿದಾ ಮಡಿವಾಳ ಕಂದಗೊಳದಾತಾ |

ವರ್ತಿ ಪಿಡಿದಾ ಸಿದ್ಧಪ್ರಭು ಗುಂಡಾ ಜ್ಯೋತಾ |

ಮೂರ್ತಿಮಂತ ಮರೆಗಯೆತೋ ರಹೇ ಜೀತಾ |

ಹಿಂಥಾ ದೇವಿದಾಸನ ಕವಿ ನಿರ್ಗುಣ ನೀರ ಗುಂಭೋ ||5||

ಆತ್ಮದ ಅನುಭಾವ ಅರ್ಥವ ಹೇಳಲಿಕ್ಕೆ |

ಸತ್ವದ ಗುಣ ತನ್ನಲ್ಲಿರಬೇಕೋ |

ಅಪ್ಪ ಉತ್ತಮ ಜನ್ನತ ಜಾಗ ದೊರಿಬೇಕೋ ||ಪಲ್ಲವಿ||

ಮನ ಒಂದು ಸಾಪ ಇರಲಿ |

ಜನರ ಮ್ಯಾಲ ದಯಾ ಇರಲಿ |

ತನ್ನ ಅಗಲಿಗಿ ಬಂದಿದು ಉಣಬೇಕೊ ||1||

ಪರತತ್ಪದ ಸುದ್ದಿ |

ನಿಮಗ ಹ್ಯಾಂಗ ತಿಳದತ ಬುದ್ಧಿ |

ವiದಿಗಡ್ಡಿ ಮೊದಲಿನ ಗದ್ದಿ ಹೊಡಿಬೇಕೊ|

ಹಂಗೆ ಏಕಾಂತ ಪ್ರಭುವಿನ ಗಾದಿಗಿ ದುಡಿಬೇಕೊ ||2||

ಅಂತಃಕರುಣ ದಯಾ ಇಲ್ಲ |

ಪಂತ ಪುರಾಣ ಹೇಳಿದರೇನು |

ಕಾಂತಾರ ಮಡಗಿಗಿ ಬಿದ್ದು ಮುಣಗಬೇಕೊ ||3||

ಸೇವಾನೆಂದರೆ ಸೇವಾ ಬ್ಯಾರೆ |

ಸಾಯೋತನಕ ನರನೇ |

ಸಂತ ಕಮಲದಾಸ ಸೇವಾ ಮಾಡಿಮಾಡಿ |

ಪರ ಉಪಕಾರ ತನ್ನಲ್ಲಿ ಇಲ್ಲ |

ನ್ಯಾಯ ಎಂಬುದು ಮೊದಲಿಗಿ ಇಲ್ಲ |

ಮೇಲ ಛಾಯದ ಪುರಾಣ ಓದಿ ಗಾಡಿಗಾಡಿ ||4||

ಸಾಕು ಮಾಡೋ ಇನ್ ಮಾತ್ರ |

ಕಾಕು ಗುಣ ಬಿಡು ಹತ್ರ |

ನೇಕಿಲಿಂದ ಈಚೀ ಹಾದಿ ಹಿಡಿಹಿಡಿ |

ಇಟ್ಟಿದಲ್ಲೆ ಹೋಗುವದಿನ್ನ ಬಾಡಿಬಾಡಿ |

ಆನಂದ ನಾರಂಜಿ ಥಡಿ |

ಮಹಾಗಂಗಾ ಸ್ನಾನ ಮಾಡಿ

ಗೆದಿ ಸಿದ್ಧ ಬುದ್ಧಿಪದ ಹಾಡಿಹಾಡಿ ||5||

ಕುಸ್ತಿ ಆಡವನೆ ಜಾಮರ್ದಾ |

ಜೀವದಾಸಿಯ ತನ್ನ ಆಸಿಯ ತೊರೆದ ||ಪಲ್ಲವಿ||

ಬೀಳುಬಾರದೆಂದು ಬಿರುದವ ತೊಟ್ಟು |

ಬೆಂಕಿಲಿ ಜಿಗದಾಡಿ ಚಡ್ಡಿಯನುಟ್ಟು |

ಹಣಿ ಮೇಲ ಸಂಚಿತ ಹಣಚಿಯ ಬೊಟ್ಟು |

ಶ್ರೀಗುರುಸಿದ್ಧನ ಇದು ನೋಡೋ ಕಟ್ಟು ||1||

ಆರು ಮಂದಿಗಿ ಅಡ್ಡಗಾಲು ಕಟ್ಟಿ |

ಎಂಟು ಮಂದಿಗಿ ಹಿಡದಾನು ರೆಟ್ಟಿ |

ಒಂಬತ ಮಂದಿಗಿ ಒಗದಾನೊ ಜಟ್ಟಿ |

ಖರೇ ತಿಳಿರಿ ನಿಮ್ಮ ಮನ ಮುಟ್ಟಿ ||2||

ಮಾಯಾಕಾರನೆಂಬ ಮುಸಕವ ತೆರೆದು |

ಭಾವ ಭೇದ ಮೆಲ್ಲನೆ ಬಿಗಿದು |

ಆರು ಅಳಿದು ಮೂರು ತಿಳಿದು |

ಭವಗೇಡಿ ಒಲ್ಲಂದವನ ಎದಿ ಒಡಿದು ||3||

ಆರು ಮೂರು ಮಂದಿ ಪಂಚರು ಕೂಡಿ |

ಮೀರಿದ ಗಡಿಗಿ ಮೀಯ್ಯುವ ಮಾಡಿ |

ಸತ್ಯ ಬಸವನ ಚರಣವ ನೋಡಿ |

ಶ್ರೀಗುರುಸಿದ್ಧನ ನುಡಿಗಳು ಪಾಡಿ ||4||

ಸರ್ವರಿಗಿ ವಿನಂತಿ ನೀತಿ ನಡಿರಿ ಸ್ವಧರ್ಮ |

ನೀತಿಯ ನಡದವರ ದಾಸ ತಾನೆ ಪರಬ್ರಹ್ಮ ||1||

ಸಂಚಿತ ಕ್ರಿಯಾಮನ ತಿಳಕೋರಿ ಎರಡರ ವರ್ಮ |

ಪ್ರಾರಬ್ಧ ಅಧೋಗತ ತಪ್ಪದು ಸ್ಪಾಯದ ಕರ್ಮಾ ||2||

ಈ ಶರಣರ ವಚನ ಸತ್ಯ ತಿಳಿರಿ ಬರಿಕಲ್ಮ |

ಶಿವಮಂತ್ರ ನುಡಿರಿ ಸಾರ್ಥಕ ಮಾನವ ಜಲ್ಮ ||3||

ಸಿದ್ಧ ಭಜನ ಮಾಲಾ ಸದಾ ಇರಲಿ ಬಹು ಪ್ರೇಮ |

ನರ ನಾರೆರೆಲ್ಲಾ ಎಚ್ಚರ ಆಗದು ಉತ್ತಮ ||4||

ಈ ಗುರುವಿನ ವಾಕ್ಯ ಸಾಧಿಸುವುದೆ ಧರ್ಮ |

ಬ್ರಹ್ಮ ವಿಷ್ಣು ಮಹೇಶ ತಾನಾದ ಪರಬ್ರಹ್ಮ ||5||

ಪೂರ್ವ ಜಲ್ಮದ ಸುಕೃತ ಭಕ್ತಿ ವರ್ಮಾ |

ಮಹಾರುದ್ರಪ್ಪ ಖೇಣಿ ಮಾಡಿರು ಸತ್ಯಧರ್ಮ ||6||

ಶಿವರಾತ್ರಿಯ ಬಂದು ಹುಡಗಿ ಸ್ಥಳಕ ನೇಮ |

ಅರ್ಪಿಸಿ ತನು ಮನ ಧನ ಪರಿಹಾರ ನಿಮ್ಮ ಕರ್ಮ ||7||

ಗುರುಜ್ಞಾನದ ಅನುಭವ ಸಾಲಿ ಬರಿರಿ ಉತ್ತಮ |

ನಮೋ ನಮೋ ಗುರಿವೆ ಕರಬಸಪ್ಪ ನಿಜಧಾಮ ||8||

ಮಿತ್ರ ನೋಡೊ ಇದು ಯಾತರ ಗಿಡವು |

ಖೂನ ಹಿಡಿದವರು |

ಪುನಃ ಜಲ್ಮ ಬಾರದವರು ||ಪಲ್ಲವಿ||

ಗಿಡದ ನೆರಳಿಗೆ ಕುಂತರೊ ನಿಂತರೊ |

ಓಡಾಡುತ ಜನರು |

ಗಿಡದ ಅಂತರವಿಲ್ಲ ಫಂಟಿ ಮುಟ್ಟಿದವು |

ಮುಗುಲಿಗಿ ಮೂರಾರು |

ಒಂಬತ್ತು ಬಣ್ಣದ ಹೂವು ಹತ್ತೆವ |

ಎಲಿಯಿಲ್ಲ ಒಂದು ಹಸರು |

ಹೂವಿಂದು ಎಷ್ಟು ಕುಸುರು ||1||

ಜುಲ್ಮಿಲಿಂದು ಪೈರು ಕಾರಗ ಅಂಜಿಸಿ |

ಒಂದು ಕಾಯಿ ಕೆಡವಿದರು |

ಕಲ್ಮಿಲಿಂದ ಸಿಕ್ಕಿಬಿದ್ದ ರಾಜರು |

ಗಾದಿ ಇಳಿದಿದ್ದರೂ |

ಕಣ್ಣಿಲಿಂದ ಒಂದು ಹಣ್ಣು ತಿನ್ನಬೇಕು |

ಮಿತ್ರ ರುಚಿ ಅಮೃತಸಾರು |

ನಮ್ಮ ಭಜನಿಯ ಭಾವಿಕರು ||2||

ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದ ಎಡಿ |

ರೇವಪ್ಪಯ್ಯನವರು |

ಸದಾಕಾಲ ನಿಮ್ಮ ನಾಮದ ಆಯುಷ್ಯ |

ಸೇವನ ಭಕ್ತರು |

ತ್ರಾಯಃ ತ್ರಾಯಃ ಪುನಃ ಜಲ ಬಾರದೆಂದು|

ನುಡಿದರು ಶರಣರು |

ಸಿದ್ಧ ವೃಕ್ಷ ಕಂಡಿದವರು ||3||

ನಿದ್ರಿಯೊಳು ಭದ್ರಿನಾಥ ತಿಳಕೊ |

ಸೂದ್ರ ಮುಟ್ಟಿದ್ರೆ ನೀರಿಲ್ಲದೆ ತೊಳಕೊ ||ಪಲ್ಲವಿ||

ನೋವು ಹತ್ತಿದ ಮನುಜಾಗ ನೌಲ ಫಂಕಾ |

ಕಟ್ಟಿದ ಹಾಂಗ ಭೀತಿ ಬೈಲಾ ಪಾಕ ಅನುಗ್ರಹವ ಪಡಕೊ |

ಸೂತಕದೊಳು ಬಿದ್ದು ಸುತ್ತಿ ಸುತ್ತಿ ಬರುವಾಗ |

ಸತ್ಯದೇವರ ಸೇವ ನಿತ್ಯ ಮಾಡಿದರೇನೊ |

ಹೊಳಿಯೊಳು ಹುಣಚಿ ಹಣ್ಣು ತೊಳೆದಂತೆ ನೋಡಕೊ ||1||

ತತ್ವಜ್ಞಾನಿಗಳಿಗೆಉತ್ತಮ ಸುಖಯೆಲ್ಲಿ |

ಮುತ್ತಿನ ಬೆಲಿ ತಿಳದಂವ ಲಾಖೌಂಮೆ ಏಕೋ |

ಮೀಸಲೆತ್ತೋ ಕತ್ತೆ ಕೋತಿ ಗುಣಗಳು ಬಿಟ್ಟು |

ನಿರ್ಗುಣತ್ತೆ ರಾಜಾನ ಹಂತಿಲಿ ನಿನ್ನ ನ್ಯಾಯಾ ಹರಕೋ ||2||

ಸಾಂಬನ ಅರಮನಿ ಜಂಬೋದ್ವೀಪಾದ ಕೊನಿ |

ನೆಂಬಿ ನಡಿ ತುಂಬಿದ ದುರ್ಗುಣ ನೂಕೋ |

ನಿರಾಶಿ ಆಗಿ ತಾನು ನೀರಿಲ್ಲದ ಹೊಳಿಯೊಳು |

ನಿರ್ಮಳ ಮಾನಸದಿ ರಜ ಹಮ್ಮಾ ಮುರಕೋ ||3||

ವಾಯದಾ ವ್ಯಾಪಾರ ಮಾಡಿ, ಕಾಯದಾ ಪ್ರಕಾರ ನಡಿ |

ಸವುದಾ ಅಪರಂಪಾರ ನಗವೀಡೊ ಸಿಲ್ಕೋ |

ಬೆಲಿಯನಿಲ್ಲದ ಮಹಾಬೆಲಿಯ ಕೊಟ್ಟು ಪರಶಿವಗ |

ಬ್ರಹ್ಮ ವಿಷ್ಣು ರುದ್ರಾಗ ಕರದೊಳು ಮಾಡಕೋ ||4||

ನಿದ್ರಿಯಂಬೋ ಮಹಾ ಸಂಸಾರ ಮಬ್ಬವು |

ಹೋಳಿಹುಣ್ಣಿ ಹಬ್ಬದಂತೆ ಬೊಬ್ಬಿ ನೀ ಹೊಡಕೋ |

ಕುರುಡನ ಮುಂದೆ ಕನ್ನಡಿ ಹಿಡಿದಿದ್ರ ಫಲವೇನೋ |

ಕತ್ತೆ ಸವಾರಿ ಮಾಡಿ ಕಡ್ಲಿ ಕೊಟ್ಟಿದ್ರೇನು |

ಮುತ್ತೈದಿ ಆದ ಮೇಲೆ ಪರರ ಹಂಗ ಯಾಕೋ ||5||

ಒಳ್ಳೆ ನಾಗರ ತನ್ನ ತೆಲಿಯಲ್ಲಿ ಮಹಾರತ್ನಾ |

ಬೈಲೊಳು ಇಟ್ಟು ಧಿನ್ನಾ ಬೆಳಗಿನೊಳು ಮೈತಾದ | ಅನುಭವ ಮಾಡಕೋ |

ಸೂರ್ಯಪಾನಾದ ಹೂವು ಸೂರ್ಯನ ಕಡಿ ನೋಡುವುದು |

ಲೆಂಕಿ ಹೂವು ಲಂಕಾದ ಕಡಿ ಮಾರಿ ಮಾಡುವುದು |

ಪೂರ್ವಿ ಸುಕೃತ ಪುಣ್ಯ ಸ್ವಭಾವ ಬೇಕೋ ||6||

ತತ್ವದ ಪದಾ ನಿಮಗ ಹಾಡವದಕ ಬಂದರೆ

ನೋಡಲಕೆ ಹೋಗಬೇಕು ದಾರ ಕೈಯಾರ ಹಿಡಕೋ |

ಬಾಯಿ ಬೆಲ್ಲ ಅಲ್ಲ ನೋಡು ಕಲ್ಲದೇವರ ಅಲ್ಲಿದು

ಬಿಲ್ಲ ಬಾಯಿದೊಳು ಇರುವುದು ಗುಲ್ ಕೂಡುವುದು ನೋಡಕೋ ||7||

ಪತಿವ್ರತ ನಾರಿಗೆ ಪ್ರಪಂಚದ ಸಂಗೇನು

ಲಿಂಗದ ಅನುಭವಿಗೆ ಈ ಜನರ ಹಂಗೇನು

ಅಂಗದ ಗುಣ ಅಳಿದವನ ನರಿ ರಂಗ ಯಾಕೋ |

ಏಳು ಕೊಳ್ಳವ ದಾಟಿ ನೀರ ಹಳ್ಳದಾಚೀಗಿ

ಒಳ್ಳೆ ಒಳ್ಳಿ ಒಬ್ಬರ ದನಿ ಮಾಡಿ ಕರಕೋ ||8||

ಬೈಲ ಭಾವಿಗಿ ಹೋಗಿ ಸವಿನೀರ ತಂದಾರ

ಸಕ್ಕರಿ ಪತ್ಯಾಮಾಡಿ ಸವಿ ಪಾವಿಸ ಉಂಬವರಾ |

ಸದಾಶಿವನ ನಾಮದೊಳು ಸಹಜ ಇದ್ದರ ಸಾಕೋ

ಹಾಡಿ ಹಾಡಿ ಬೀಸರಿಬಾರೆ ನಡಿನುಡಿ ಒಂದ ಮಾಡಿ

ಸವಿಸುದ್ದಿ ನಾಲಿಗಿ ಮ್ಯಾಲುಂಟು ಓದಕೋ ||9||

ಹೆಂಡರ ಮಕ್ಕಳಿಗಾಗಿ ಭಂಡಿ ಜ್ಞಾನ ಓದಿ

ಪಾಕಿ ಪಂಡಿತರಿಗಿ ಪಾಖಂಡ ಅನುಬೇಕೋ

ಅಖಂಡ ಮೂರತಿ ಕಂಡಾ ದಂಡವತ ಸರ್ವರಿಗಿಯೆಲ್ಲಾ

ಮಂಡಲದೊಳಗುಂಡಾ ನಾಮ ಇದ್ದರ ಸಾಕೋ ||10||

ಸಿದ್ಧ ಆತ್ಮಜ್ಞಾನ ಶುದ್ಧ ಶೋಧನ ಪಾದ

ಹದ್ದಿಗಿ ಸಾಲಾದು ಬುದ್ಧಿಗಳಿಗೆ ಬೇಕೋ |

ಬುದ್ಧಿ ಅಂದರೆ ಸಿದ್ಧಿ ಸಿದ್ಧಿಸಾಧಕರಿಗೆ

ದ್ವೈತ ಬಿಟ್ಟು ಅದ್ವೈತ ಆರೂಢರಿಗೆ

ಈ ಪದ ಎಡಿ ಗುರುವೆ ಅವರ ಪಾದಕೋ ||11||

ನಾಮರೂಪ ರಹಿತನಾದ ತೋರಿದ ಗುರು

ನಾವದಗಿ ಸ್ವಾಮಿನ ನಾಮಸ್ಮರಣೆ ಬೇಕೋ |

ದೇಶದೊಳಗೆ ದೋಷ ಪರಿಹಾರ ದೇವಿದಾಸ

ಪದ ಮಾಡಿದ ಪದ ಹಾಡಿ ರೋಮ ರೋಮ ತಿಳಕೋ ||12||

ಕೇಳೆನ್ನ ಮನಸಾ ಹಗಲಿನಾ ಕನಸಾ ನಿಶ್ಚಯ ಅನುಬ್ಯಾಡ |

ಸುಳ್ಳ ದಿನಸ ಇದು ಕಳ್ಳ ವೈದಾರ ಖರೆ ಘಚ್ಚಿಂದು ಹಿಡಿಬ್ಯಾಡ ||ಪಲ್ಲವಿ||

ಕಣ್ಣಿಗಿ ಕಾಣೋದೆಲ್ಲ ಕಮಾಲ ಬ್ಯಾರೆ ಬ್ಯಾರೆ ಒಂದಿನ ಆಗದು ಗುಪ್ತ |

ಮಣ್ಣೀನ ಕಾಯಾ ಮಣ್ಣಿಗಿ ಹೋಗುವುದು ಆಶಾ ಆಗಿಲ್ಲ ತೃಪ್ತ ||1||

ಹಾಳ ಬೀಳುವ ದೇಗುಲ ಕಟ್ಟಿ ಸಾಕ್ಷಿಗಿ ಬರುಬ್ಯಾಡ |

ಸುಳ್ಳ ದಿನಸ ಇದು ಕಳ್ಳ ವೈದಾರ ಖರೆ ಘಚ್ಚಿಂದು ಹಿಡಿಬ್ಯಾಡ ||2||

ಎಲ್ಲಾ ಬಿಟ್ಟು ಒಂದು ನಾಮ ವೈಯಲಿಕೆ ಹಿಂದಕ ಸರಿಬ್ಯಾಡ |

ಗುಲ್ಲ ಆಗದು ಕೀರ್ತಿ ದೇಶದ ಮ್ಯಾಲ ಭಕ್ತಿಯ ಬಿಡುಬ್ಯಾಡ ||3||

ತಾಳಬೇಕಪ್ಪ ಹಿಂದ ಮುಂದ ಅಂದರೆ ಕಿಂವಿ ಕಚ್ಚಾ ಬ್ಯಾಡ |

ಧಾರಣ ಮರಣ ಅಂತ ತಿಳಿದು ಸಂತ ಸೇರಿ ಸುಡುಗಾಡ ||4||

ಶರಣರ ವರ್ಣ ಮಾಡುಸದು ಸಜ್ಜನ ಸಂಗ ಬಿಡುಬ್ಯಾಡ |

ತೇಳ ಮುಟ್ಟದು ಯಾರಿಗಿ ಬಿಟ್ಟಿಲ ಸಿದ್ಧ ಭಜನಿಗಿ ಬಾ ದೌಡ ||5||

ಗುರುತರ ಭಜನಿಯ ತಾಸು |

ಈ ಸ್ಪಾಸು ಹರಪುರಾತನರ ವಚನವು ಲೇಸು ||ಪಲ್ಲವಿ||

ಈ ನರ ದೇಹ ನೀರ ಗುರುಳಿ ಪರಿಯ |

ಸ್ಥಿರವಿಲ್ಲ ತನಯ ಸಾರ ತಿಳಿ ಎನ್ನಯ್ಯ |

ವೀರ ಸೂರ ಮುನಿಗಳು ಶೋಧಿಸಿ ವೇದಗಳು |

ಸೂರ್ಯ ಚಂದ್ರಗಳು ಏನುಂಟು ದಿನಸು ||1||

ತ್ರಿಲೋಕ ಉದಯ ತ್ರಿಮೂರ್ತಿಧನಯ |

ತ್ರಿಕಾಲ ಪೂಜಿಯಾ ತ್ರಿವೇಣಿ ಪತಿಯ |

ತ್ರಿಗುಣಸಾರ ಸಾರ ವಿಚಾರಾ |

ಆಯುಷ್ಯ ಪ್ರಕಾರ ಹೋಗುವ ಕನಸು ||2||

ಲಕ್ಷ ಚೌರ್ಯಾ ಐಂಸಿಯ ಸ್ಥಿತಿ ಉತ್ಪತ್ತಿಯ |

ಮೋಕ್ಷದ ಯೋನಿಯಾ ಅಕ್ಷಯ ನರಪ್ರಾಣಯ |

ಸಾಕ್ಷ ಕಲ್ಪವೃಕ್ಷ ಇಚ್ಛಿತ ಅಪರೋಕ್ಷ |

ಅಪರೋಕ್ಷ ಸಿದ್ಧನ ಭಜನಿಯ ಮಾನಸು ||3||

ಚಲತಿ- ನಮ್ಮ ನಿಮ್ಮದು ಇಲ್ಲಿ ಭೆಟ್ಟಿಯಾಯಿತು |

ಸುಮ್ಮನ ಬುಕಮನ ತುಟಿ ಆಯಿತು ||

ನೋಡಿ ನೋಡಿ ಲೀಲಾ |

ಮಾಡಿ ಏರು ನಿಲುಕುವದಲ್ಲಾ |

ಹಾಡಿ ಹಾಡಿ ಮೋಕ್ಷ ಆಗೋದಲ್ಲಾ ||ಪಲ್ಲವಿ||

ಖೋಡಿ ಗುಣಗಳು |

ತುಂಬಿಕೊಂಡು ಒಡಲೊಳು |

ಮಡಿಯ ಗುಡಿಯ ಹೊಕ್ಕಿದರಿಲ್ಲಾ ||1||

ನೋಡಿಲ್ಲಾ ಮಾಡಿಲ್ಲಾ |

ಬೇಡಿಲ್ಲಾ ಹಾಡಿಲ್ಲಾ |

ಜಾಗೃತಿ ಇದ್ದಂವ ಬಲ್ಲಾ ||2||

ಸ್ವಪ್ನ ಸುಷುಪ್ತಿ ಎರಡು |

ಅಪಾನ ಕುಂಭ ಎರಡು |

ಸಿದ್ಧ ಕಂಡು ಆದ ಬೈಲಾ ||3||

ಚಲತಿ- ಮಾಡಿ ಮಾಡಿ ಹ್ಯಾಂಗ ಪಾರಾದರು |

ನೀಡಿ ನೀಡಿ ಹ್ಯಾಂಗ ಉಳದರು ||

ಏಕತಾರಿ ಪಿಡಿಬೇಕು ಕೈಯಾ |

ಏಕ ಅವತಾರಿಗಿ ಬರಬೇಕಯ್ಯಾ |

ಏಕ ಮಾತಾರಿ ತಾರಿಸಳಯ್ಯಾ |

ಏಕ ಹತ್ಯಾರಿ ಇರಬೇಕಯ್ಯಾ ||ಪಲ್ಲವಿ||

ಎಕ್ಕಲ್ ಖಾಜಾ ಆಟ ಆಡೋನು ಬಾ |

ದುಡ್ಡಿಗಿ ರಾಜಾ ದ್ವೈತ ಬಿಟ್ಟು ಬಾ |

ತ್ರಿಣಯ ಭೋಜೆದ ಗೋಲಿ |

ತೀಗುಣದೊಳು ಇದರ ನೆಲಿ |

ತ್ರಿಗುಣದ ತ್ರಿಜಗಜ್ಯಾಲಿ |

ತೀಗುಣದೊಳು ತ್ರಿಲೋಕ ಝೋಲಿ ||1||

ಚಾರಿಗಿ ಚೆಂಡು ನಾಕ ದೇಹ ನೋಡನು ಬಾ |

ಚಾರ ಚತುರಂಗ ಚೌಕ ನಿಲ್ಲು ಬಾ |

ಪಾಚಿಗಿ ಪಂಡು ಕೂಡಿತ್ತು |

ಸೀಮಾಝೆಂಡು ಲಿಂದ ಬೆಳೆದಿತ್ತು |

ಸಪ್ಪಟ್ಟೆ ಟೋಲಿಯ ಸನ್ ಕೆಡೆಸಿತ್ತು |

ಅಟಪೈಲಿಂದ ಗೋಲಿ ಮೆರದಿತ್ತು ||2||

ನಮ್ಮಂಟಿಲ್ಲಿ ಗೋದಾನವಧ ಖಾಜಾ |

ಕಂಟೆದ ಮ್ಯಾಲ ನಿಂತು ಆಡಿದ ಜೋಜಾ |

ದಹಾವಿ ಚೋಟ ನಿಶಾನಿ ಇಟ್ಟಾ |

ಭಾವಿಕನು ಗೆದ್ದ ಈ ಆಟಾ |

ನಾ ಅಂದರೆ ಆಗುವನು ತೋಟಾ |

ನೀ ಅಂದಲ್ಲಿ ಸಿದ್ಧ ಸಂಗಟ ||3||

ಚಲತಿ- ಏಕತಾರಿ ಹಿಡಿದು ಪದಾ ಅನುಬೇಕು |

ಎಕ್ಕಲ ಬಾಜಾನ ಆಟ ಗೆದಿಬೇಕು ||

ಯೋಗಿ ಈತ ನೋಡ ನಿಜಲಿಂಗ |

ತ್ಯಾಗಿ ಗುಣದವನು ಗಂಗಾ ||ಪಲ್ಲವಿ||

ಓಂ ಜ್ಞಾನ ಜಟ್ಟಿ ಕೈಯಾ |

ಕಾಯ ಕೋಣಿಗಿ ಕಟ್ಟಿದರಯ್ಯಾ |

ಬಿರದ ಬುದ್ಧಿ ವಿವೇಕವಯ್ಯಾ |

ಕ್ರೋಧ ಹುಲಿ ಕಟ್ಟಿದರಯ್ಯಾ |

ನೀಗಿ ನಿರ್ಬೈಲದ ಜೋಗಿ |

ಬೇಗಿ ದರ್ಶನ ಮಾಡಮಿ ಸಂಗಾ ||1||

ಅದ್ವೈತ ಆರೂಢ ಕೈಯಾ |

ದ್ವೈತ ಗಜವು ಕೊಟ್ಟಿದರಯ್ಯಾ |

ವಿಚಾರ ಚಂದ್ರೋದಯನ ಕೈಯಾ |

ಮತ್ಸರ ಚುಚಲಿ ಗುಣ ಕೊಟ್ಟಿದರಯ್ಯಾ |

ವಿಚಾರಸಾಗರನ ಕರದೊಳು ಕೊಟ್ಟಾರ |

ಅವಿಚಾರ ನ್ಯಾಲಗಿ ನುಡಿಬಾರದಂಗಾ ||2||

ನುಡಿದಂತೆ ನಡೆದಂವ ಯೋಗಿ |

ಹಿಡಿದಂತೆ ಬಿಡದಂವ ಯೋಗಿ |

ಕೆಂಡದಂತೆ ಇರುವನು ಕಡಿಗಿ |

ನೋಡದಂತೆ ಸುಟಕೊಂಡ ಗಡಗಿ |

ಕೇವಲ ಶೂನ್ಯ ನಿರಾಕಾರ ಬೈಲಿನೊಳು

ನಿಜ ಆ ಸಿದ್ಧಲಿಂಗ ||3||

ಚಲತಿ- ಬ್ರಹ್ಮನಿಷ್ಠ ವೈರಾಗಿ ಕಂಡ |

ಕರ್ಮ ಹೋಯಿತು ತಾನೇ ಬಿಟಕೊಂಡಾ ||

ಹ್ಯಾಂಗ ಸಿಗುವುದು ಗುರು ಮಾರ್ಗ |

ಮುಕ್ತಿ ಮಾರ್ಗ ಮನುಜಾ | ತನ್ನ ಬಿಟ್ಟು ಇಲ್ಲ ಹೊರಗ ||ಪಲ್ಲವಿ||

ಈ ಮನಸ್ಸು ಮಾಡಿ ಸ್ವಾತಂತ್ರ್ಯ |

ಕನಸಿನ ಸಂಸಾರ ಅತಂತ್ರ |

ಮನ್ನಿಸಿ ಸಣ್ಣ ನಡಿ ದೀರ್ಘ |

ನುಡಿ ನಡಿ ದೀರ್ಘ ||1||

ಗುರುಭಕ್ತ ಶ್ರವಣ ಮನನ |

ನಿಜ ಧ್ಯಾಸಿನೊಳು ಮೋಹನ |

ತಾಸಿನೊಳು ಯಾರು ಯಾರಿಗ |

ಬಿಟ್ಟೆ ದಾರಿಗಾ ||2||

ಯಾಕ ಸಖುಬಾಯಿ ಮನಿ ದುಡಿದರೊ |

ಗೋರ ಕುಂಬಾರನೀಗಿ ಕುಣಸೀರೊ |

ಸಾರ ತಿಳಕೋ ಗುರುವಿನ ಗುರವಿಗಾ |

ಪರಮ ಗುರವಿಗಾ ||3||

ಮತಿಗೆಟ್ಟು ತಿರುಗುವ ಪ್ರಾಣಿಯೇ |

ಎತ್ತಿಗೇನು ಬಂತು ಸಕ್ರಿ ಗೋಣಿಯೇ |

ಇರೋಸ್ಥನಕ ಕಾಣಬೇಕೋ ಸ್ವರ್ಗ |

ಏಕವೀಸ ಸ್ವರ್ಗಾ ||4||

ಪರ ಉಪಕಾರಕ್ಕೆ ನಿಂತಿರೋ |

ಸಂಸಾರದೊಳು ಮುಕ್ತರೋ |

ಸಿದ್ಧನ ಮಾರ್ಗದಲ್ಲಿ ಬೆರಗಾ |

ಆದೇನೋ ಬೆರಗಾ ||5||

ಪರಬ್ರಹ್ಮ ತಿಳೀದು ಗುರುವಿನ |

ತಾ ವರವು ಪಡಿದನು ನರ ದೇವರಾದನು ||ಪಲ್ಲವಿ||

ಮೊದಲೆ ನಿರ್ವಿಕಾರ ನಿಜಬೈಲ ಒಬ್ಬನು |

ಬೈಲ ಬ್ರಹ್ಮನ ಖ್ಯಾಲದೊಳು ಶಕ್ತಿದೇವನು |

ಶಕ್ತಿಲಿಂದ ಸರ್ವ ಚರಾಚರ ತಿಳಿದನು ಸಗುಣ ರೂಪನು ||1||

ತಿವ್ರ್ಯಾಐಂಸಿ ಲಕ್ಷನವ್ಯಾನೌ ಹಜಾರ ನೌಸೇನವ್ಯಾನೌ |

ತ್ರಿಗುಣ ಚತುರ ದೇಹ ಚೈತನ್ಯ ಪ್ರಾಣವು |

ಈ ಮನುಷ್ಯ ಜಲ್ಮ ದೇವನಲ್ಲದೆ ದೇವ ಯಾವನು |

ಜೀವ ಶಿವದಾವನು ||2||

ಸಗುಣರೂಪರಾಮಕೃಷ್ಣ ದೇವ ಅಲ್ಲೇನು |

ಪ್ರಾಣ ಪ್ರತಿಷ್ಠೆ ಮಾಡಿದ ಪರಮಾತ್ಮ ಅಲ್ಲೇನು |

ಬ್ರಹ್ಮ ವಿಷ್ಣು ರುದ್ರ ಚಿನ್ಮಯ ಮನುಷ್ಯನ ಅಲ್ಲೇನು |

ನೀವಿದು ಬಲ್ಲೇನು ||3||

ಕೃತಾ ತ್ರೇತಾ ಯುಗ ನೇಮ ಅಗ್ನಿ ಪೂಜೇವು |

ದ್ವಾಪರ ಯುಗ ಶೀಲ ತತ್ವ ಪೂಜೇವು |

ಈ ಕಲಿಯುಗ ಪಾರ ನಾಮಸ್ಮರಣೆ ಮುಕ್ತನು |

ದೇವಿದಾಸ ಭಕ್ತನು ||4||

ಚಲತಿ- ಜಲ್ಮಕ ಬಾರದಂತೆ ಕಾರ್ಯ ಮಾಡೋ |

ದೇವಿದಾಸ ಬರೆದಂತೆ ಭಜನಿ ಮಾಡೋ ||

ಅಕೋ ಹಾಂಗಾಗದು ತಾನೆ |

ಇಕೋ ಹಿಂಗಾಗದು ತಾನೆ |

ಲಿಂಗ ಆಗದು ತಾನೆ |

ಗುರು ಜಂಗಮ ಆಗದು ತಾನೆ ||ಪಲ್ಲವಿ||

ಸೋಂಗ ಆಗುವ ನೀನೇ |

ನೋಡಿ ದಂಗಾಗುವ ನೀನೇ |

ಸಂಗ ಇರುವ ನೀನೇ |

ಭವರಂಗ ತರುವ ನೀನೇ ||1||

ಗುಪ್ತ ಇರುವ ನೀನೇ |

ಸಪ್ತ ವೈಸನ ತೀರುವ ನೀನೇ |

ತೃಪ್ತ ಮಾಡುವ ನೀನೇ |

ಭವ ಆಪತ್ತು ಹೊದಿವ ನೀನೆ ||2||

ಮತ್ತ ದೇವಾ ಅನ್ನುವ ನೀನೇ |

ಮತ್ತ ಭೇದ ಮಾಡುವ ನೀನೇ |

ಹಸು ಕದ್ದಂವ ನೀನೇ |

ನಾ ಇದ್ದಿಲ್ಲ ಎಂಬುವ ನೀನೇ ||3||

ವರಮಾ ಮಾಡಂವ ನೀನೇ |

ಮತ್ತ ಶ್ರಮ ತೊಟ್ಟವ ನೀನೇ |

ಐಕ್ಯ ಆಗುವ ನೀನೇ |

ಸಿದ್ಧ ಭಜನಿ ಬರದಿ ನೀನೇ ||4||

ನಿಜಬ್ರಹ್ಮಾ ಬೈಲಾ ನಿಜ ನಿಮ್ಮ ಲೀಲಾ |

ಎಲ್ಲಿ ನೋಡಿದರಲ್ಲಿ ಬೈಲೆ ಬೈಲಾ ||ಪಲ್ಲವಿ||

ವೇದ ದಣಿತು ನಿಮ್ಮ ವರ್ಣನ ಮಾಡಿ ಮಾಡಿ |

ಬೋಧ ದಣಿತು ಉಪದೇಶ ಹಾಡಿ ಹಾಡಿ |

ನೆಲಿಯ ನಿಲುಕಲಿಲ್ಲಾ ನಿಮ್ಮ ಸ್ಥಲ

ಗುರುವೇ ನಿಮ್ಮ ಸ್ಥಲ ||1||

ಧನ್ಯನಾದೆನು ಗುರುವೆ ನಿಮ್ಮ ಮಹಿಮಾ ನೋಡಿ |

ಅನ್ಯರು ಕಾಣೇನು ನಿನ್ನ ಹೊರತ ಜೋಡಿ |

ಕಲ್ಲಿನೋಳು ಪ್ರಕಟ ನೀನೇ ಜಗಪಾಲಾ

ಜಗಪಾಲಾ ||2||

ಎಂಬತ್ತು ನಾಲ್ಕು ಲಕ್ಷ ಜೀವರಾಶಿ ಪಡಿ |

ಏನಂತ ವರ್ಣನ ಮಾಡಲಿ ಸೂರ್ಯ ಚಂದರ ನೋಡಿ |

ಕಲಿಕಾಲಕ ಜ್ಞಾನ ರಂಗಲಾಲಾ

ಜ್ಞಾನ ರಂಗಲಾಲಾ ||3||

ನೆಂಬಿದ ಗುರುವೆ ನಿಮ್ಮ ಹಂಬಲ ಮರೆಯನು ಬಾ |

ತುಂಬಿದ ಹೊಳಿಯಿದು ಅಂಬಿಗಾರಾಗಿ ಬಾ |

ಹೊಳಿಯ ಪಾರ ಮಾಡೋ ಬಾಲಗೋಪಾಲ

ಬಾಲಗೋಪಾಲ ||4||

ದೇವಿದಾಸನ ವಿನಂತಿ ಇದೇ ಗುರು |

ಅನಂತ ಮತದ ಜ್ಞಾನ ಒಂದೇ ಬರಲಿ ಅರು |

ಸಾಲಿ ಬರೆಸು ಒಂದೇ ಮಾತ್ರವು ಲೀಲಾ

ಮಾತ್ರವು ಲೀಲಾ ||5||

ಸುದ್ದಿ ಕೇಳೇನಪ್ಪ ಸಿದ್ಧ ಶೂರ ವೀರ | ಸಿದ್ಧ ಸೇದಿರು ಬಿರಿಯ |

ಸಿದ್ಧ ಸೇದಬೇಕು ಈ ಪರಿಯ ||ಪಲ್ಲವಿ||

ಪಾರ್ಬತಿ ಮೈಮೇಲಿನ ಮೈಲಾ ತೆಗೆದು |

ಗಣಪತಿ ಮಾಡಿದಂತೆ |

ಶರತಿಲಿಂದ ಮಮ್ಮಾಯಿ ಇಸಾ |

ರೇವಣಸಿದ್ಧ ಏಳದಂತೆ |

ತನುವು ಶುದ್ಧ ಮಾಡಿ ಮಿಧಿ ಚಿಲುಮಿ ಮಾಡಿ |

ಜ್ಞಾನದ ಹಚ್ಚಿ ಉರಿಯಾ |

ಝೋಕಿ ಇಟ್ಟಿದಾನೋ ಮರಿಯಾ ||1||

ಚಿಗರಿಗಿ ಗುರಿಯಿಟ್ಟು ಶಿವರಾತ್ರಿ ದಿನ |

ಬೇಡ ಪತ್ರಿಗಿಡ ಏರಿದಂತೆ |

ಬಾಣ ಬಡಿದು ಪತ್ರಿ ಮಹಾದೇವನ |

ಮೇಲ ಬಿದ್ದು ಬೇಡ ಉದ್ಧಾರಾದಂತೆ |

ಮನಸ್ಸೆಂಬೋ ಸಿದ್ಧಪತ್ರಿ ಅಂಗೈದೊಳಿಟ್ಟು |

ದೃಷ್ಟಿ ಹಚ್ಚು ಗುರಿಯಾ |

ಸುಗಂಧ ಬಂದಿದ್ರೆ ಏರಿ ತುರಿಯಾ ||2||

ಚಿಲಮಿ ತುಂಬ ಬೇಕು ಶ್ರವಣ ಮನನ |

ನಿಜ ಧ್ಯಾಸದ ಸ್ಥಲದಂತೆ |

ಒಲಮಿ ಆಗಬೇಕು ದೇವ ನಿರಂಜನ |

ಬೆಂಕಿ ಹೇರು ಅದರಂತೆ |

ಸರರರರರ ಹೊಗಿ ನುಂಗಿ ಮುದ್ರ ಹಚ್ಚಿದಂವನಿಗಿ |

ಕಾಣೀತು ಗುರಿಯಾ |

ಗಿರಿದೊಳು ಕಂಡ ಧೊರಿಯಾ ||3||

ಕಣ್ಣಾರ ಕಂಡಿನಿ ಸೇದಿರು ಖರೆ |

ನನ್ನ ಸಿದ್ಧಾರೂಢ ಧೊರಿಯಾ |

ಅಣ್ಣಾಗಳಿರೆ ಬ್ಯಾಡಂಬೋದಿಲ್ಲನಾ|

ಸೇದಿ ನೋಡರಿ ಐಶ್ವರಿಯಾ |

ಸಿದ್ಧಪತ್ರ ಸಾಧನ ಮುಂದ ಆಗುವದು |

ತಿಳಿವದು ನೋಡ ಬಿರಿಯಾ |

ಸಿದ್ಧ ಸೇದಿ ಆಡ ಬಿರಿಯಾ ||4||

ಚಲತಿ- ಬಿಗದಿಟ್ಟ ಚಿಲಮಿ ಸೇದಿದಳು |

ಬೆಂಕಿ ಹತ್ತಿದರೆ ಆರಸಿದಳು ||

ಏ ಏ ಏ ಏ ವಸ್ತಾ ವಡವಿ ಕೊಳ್ಳತಿರೇನ್ರಿ |

ಈ ಈ ಈಈ ಶಿಸ್ತ ಬಂಗಾರ ಮುತ್ತು ಮಾಣಿಕರಿ ||ಪಲ್ಲವಿ||

ಕರ್ಣ ವಸ್ತಾರೀ ಆರು ಮುತ್ತು ಹಚ್ಚಿನರೀ |

ಶ್ರವಣ ಮನನ ನಿಜಧ್ಯಾಸ ಇದರ ಬೆಲಿರೀ ||1||

ಮೂಗಿನ ನತ್ತರಿ ಚೌದ ರತ್ನ ಇದಕರೀ |

ವಾಸನಾ ದುರ್ವೇಸನಾ ಬಿಟ್ಟು ತೊಗೋರೀ ||2||

ಕೊರಳ ವಸ್ತಾರಿ ಎವ್ವಾ ಬಹಳ ಶೃಂಗಾರ್ರಿ |

ಎಕ್ಕವೀಸ ಹಜಾರ ಛಸೇಮಣಿ ಮಾಳಾ ತಿರವರೀ ||3||

ಕಾಲಿನ ವಸ್ತಾರಿ ಬೆಲಿ ಮಹಾಬೆಲಿರೀ |

ಎತ್ತ ಎತ್ತ ತಿರಗದೆ ಸಿದ್ಧ ಭಜನರೀ ||4||

ಚಲತಿ- ದಯಾ ಧರ್ಮದಲ್ಲಿ ಕೊರತಿಲ್ಲ |

ಕಾಯಾ ಬಿದ್ದರೇನು ಸತ್ತಿಲ್ಲ ||

ಮನದಣಿಯೆ ಗುಣಮಣಿಯೆ |

ಏ ಗಿಣಿಯೆ ಕೇಳು ಮಾತು |

ಕವಣಿ ಕಲ್ಲಿಗಿ ಭಾಳ ಜ್ವಾಕಿಲಿಟ್ಟು ||ಪಲ್ಲವಿ||

ವರ್ಷಕ್ಕೊಮ್ಮೆ ಒಕ್ಕಲಿಗೇನ ರಾಸಿ |

ನೀನು ಫುರಮಾಸಿ ತಿಂದಿ ನೋಡ ತೆನಿ ಆರಸಿ |

ಮಾಯಾ ಮಾಯಿನ ಹಣ್ಣು ಮನ ಮೆಚ್ಚಿ |

ಮೈಮರೆತು ಕೂಡಬ್ಯಾಡ |

ಬಿಲ್ಲಬಾಣ ಗುಲಾಲ ಗುರಿ ಏಟು ||1||

ಹಣ್ಣ ತಿಂಬಲ್ಲಿ ಕಾವಲು ಇರಬಾರದೋ |

ಕಣ್ಣ ದೃಷ್ಟಿಗಿ ಆ ಹಣ್ಣ ಕಾಣಬಾರದೋ |

ಜಾಣ ಫಾಸಿಫರದೆನ ಬಲಿಯೊಳು ಸಿಲ್ಕ್ಯಾದ |

ಪಿಂಜರಿಯೊಳು ಬೆಕ್ಕಿಗಿ ಸಿಕ್ಕಂಗೆ ಕೈ ಮುಟ್ಟೋ ||2||

ಕಾಯದ ಪಿಂಜರಿ ಬಲು ಸಣ್ಣದೋ |

ನ್ಯಾಯ ನವಖಂಡ ಬ್ರಹ್ಮಾಂಡ ಒಳಗ ಹಿಡದದೋ |

ಆಧಾರ ಸ್ವಾದಿಷ್ಟ ಮಣಿಪುರ ಅಗ್ನಿಚಕ್ರ |

ದಾಟಿ ಹೋಗದು ಬಲು ಕಷ್ಟೋ ||3||

ಸಿದ್ಧನ ಜ್ಞಾನ ಬಾಗದೊಳು ಭಲೆ ಹಣ್ಣೋ |

ಖುದ್ಧ ಗಿಳಿ ಸಲುವಾಗಿ ನೀರ ಹೋಯ್ದು ಆಗಿ ಹೈರಾಣು |

ಮಡಿವಾಳ ಗಿಳಿ ಮೈದು ಮತ್ರ್ಯೆದೊಳು ಮಾಯ ಆಯ್ತು |

ಅರ್ಥ ಹೇಳಿ ಹೋಗ ಗಿಣಿ ಕೀರ್ತಿವಿಟ್ಟು ||4||

ಅಕ್ಕ ನೀನು ಮುಕ್ಕ ಹಾಕು |

ಲೋಕ ನಗತಿರಬಾರದು ||ಪಲ್ಲವಿ||

ಉಪದೇಶ ಪಡಿದವರು |

ಉಲ್ಹಾಸ ಎದರಲ್ಲಿ ಹಾರ |

ಕನಸಿನ ಪರಿ ಸಂಸಾರ |

ಮನಸಿನಲ್ಲಿ ಯಾರ ನಿಲ್ಲಸ್ಯಾರ |

ಕಾಸಿಗಿ ಹೋಗಿ ಬಂದು |

ಫಾಸಿ ದಾರ ತಂದು |

ಆಸಿ ಬಿಟ್ಟಿಲ ಒಂದು ಆಕಣ್ಣ ತೆರೆದು ||1||

ಕರ್ಣದೊಳು ಊದಿದರೇನು |

ಚರಣ ನಿತ್ಯ ಪಿಡದಿದರೇನು |

ವರ್ಣ ಆಶ್ರಮ ದುಡಿದಿದರೇನು |

ಪುರಾಣ ಶ್ರವಣ ಮಾಡಿದರೇನು |

ಅಂದು ಇಂದಿನಿಂದ ಸಾಲಿಗೆ ಹೋಗಿ |

ಸಿದ್ಧ ಹುಲಿ ಬಣ್ಣ ಕಂಡು ನರಿ ಆಗಬಾರದು ||2||

ಕಾಗಿಯ ಮನೆಯೊಳು ಕೋಗಿಲ ಬೆಳೆದು ಹೋಗಿ |

ಕೂಗಿ ಕರೆವುದು ತನ್ನ ತಾಯಿ ತಂದೀಗಿ ||ಪಲ್ಲವಿ||

ಕಾನನ ತಿರುಗುತ | ಬನ ಬನ ಒದರುತ |

ವನವಾಸಗಳೆವುದು | ಅಂದು ಇಂದೀಗಿ ||1||

ಭೋಗಿಯ ಮನೆಯೊಳು | ಯೋಗಿಯು ಬೆಳೆದು ಹೋಗಿ |

ನೀಗಿ ಸಂಸಾರ ತ್ಯಾಗಿ | ತಿರುಗಿ ಊರ ಊರಿಗಿ ||2||

ಕೆಸರಿನ ಮನೆ ಕಟ್ಟಿ | ಹಸುರ ಹುಳ ಒಯ್ದಿಟ್ಟಿ |

ಬಸುರೆಲ್ಲಿ ಆಯಿತು | ಕಸುರಿಲ್ಲ ತನ್ನಂತೆ ಆಗಿ ||3||

ಕೋಗಿಲ ಸ್ವರ ಕೇಳು | ಯೋಗಿಯ ಜ್ಞಾನ ಕೇಳು |

ಬಾಗಿ ನಡೆವುದು ಕೇಳು | ಸಿದ್ಧ ಭಜನೀಗೀ ||4||

ಒಬ್ಬ ಸುಖಿ ಒಬ್ಬ ದುಃಖಿಯಾ |

ಇದು ಬ್ರಹ್ಮ ಲಿಖಿಯಾ ||ಪಲ್ಲವಿ||

ಹೇಗೆ ತನ್ನ ಭಾವಾ |

ಹಾಗೆ ಇರುವ ದೇವಾ |

ರಾಜಾ ಆಳುವ ಒಬ್ಬನ ಜೀವಾ|

ಒಬ್ಬ ಭಿಕ್ಕಿ ಬೇಡುವಾ ||1||

ಒಬ್ಬ ರಿದ್ಧಿ ಸಿದ್ಧಿ ಸಾಧನ |

ಒಬ್ಬ ಜಪ ತಪ ಮೌನ |

ಒಬ್ಬ ಪಂಡಿತ ಬುದ್ಧಿವಾನ |

ಒಬ್ಬ ಮೂರ್ಖ ಅಜ್ಞಾನ ||2||

ವಿಧಿ ನಮ್ಮ ಹಣೆಬರ ಬರೆವ |

ವಿಧಿ ಹಣಿಬರ ಇನ್ಯಾರ ಬರೆವ |

ಸೋಧ ಮಾಡೋ ತನ್ನೊಳ ಮನವ |

ನಾಲ್ಕು ದೇಹ ಇಟ್ಟು ಸಾಕ್ಷಿಯ ||3||

ಮನ ಬುದ್ಧಿ ಚಿತ್ತ ವೃತ್ತಿ |

ಜ್ಞಾನ ಇಲ್ಲದೆ ಶಿವನಿಗೆ ಬೈತಿ |

ಕತಲಾಗ ಹಗ್ಗ ಸರ್ಪಿನ ಭೀತಿ |

ಅಂಜಬಾರದು ಸಿದ್ಧಿ ಸಾರಥಿ ||4||

ಪಂಚರಾದವರು ಕೂಡಿ ಪಂಚೆತಿ ಕಡಿರಿ |

ಪಂಚನಾದವರೆನ್ನ ಅರ್ಜಿ ಹಿಡಿಯರಿ ||ಪಲ್ಲವಿ||

ಗರ್ಭಗೀತಾ ಹೇಳುವ ಇಲ್ಲ ಪುನರ್ಜಲ್ಮಾ |

ಸರ್ವಾಗಾತಾ ಬರಿವ ಉಂಟು ಪುನರ್ಜಲ್ಮಾ |

ಮತ್ತೊಬ್ಬ ಹೇಳುವ ಸತ್ತಾವ ಬಲ್ಲಾರಿ ||1||

ಆಗಮ ಕೂಗುವದು ಪ್ರಾರಬ್ಧ ದೊಡ್ಡದು |

ನಿಗಮ ಕೂಗುವದು ಪ್ರಯತ್ನ ದೊಡ್ಡದು |

ಯಾವುದು ನೆಂಬಗಿ ಇಡಬೇಕರಿ ||2||

ಒಬ್ಬ ಬುದ್ಧಿ ಹೇಳುವ ನಾಮಸ್ಮರಣ |

ಬುದ್ಧಿ ಹೇಳುವ ಹೆಚ್ಚ ಅನುಷ್ಠಾನ|

ಬುದ್ಧಿ ಸಭಾದೊಳು ಸಿದ್ಧಾ ಧ್ಯಾನ ಮಾಡರಿ ||3||

ಸುಳ್ಳೆ ಬಿಟ್ಟ ಹೈರಾಣ |

ಬಿಟ್ಟರೆ ಸಿಗವಲ್ಲದು ಈ ಕೋಣ ||ಪಲ್ಲವಿ||

ಬಿಡಬ್ಯಾಡ ಅಂದರೆ ಬಿಟ್ಟಿ ಪಟ್ಟದ ಕೋಣ |

ಸಿಟ್ಟಿಗಿ ಬರತರ ಅಣ್ಣ ಬಸವಣ್ಣ |

ಎಷ್ಟು ಸಾರಿ ಸೃಷ್ಟಿ ಸುತ್ತ ಹಾಕುವುದು |

ಅನ್ನ ನೀರು ನಿದ್ರಿ ಇಲ್ಲದ ಕೋಣ ||1||

ಒಮ್ಮೆಗೆ ಓಡುವದು ಒಂಬತ್ತು ಗಾವುದ |

ಹವೈ ಜಹಾಜ ಗಾಡಿ ಬೆನ್ನಿಗಿ ಹಚ್ಚಿದ |

ಗಾಡಿ ಹೊಡೆವ ಬಲು ದೌಡ ಮಾಡಿದರೆ |

ಮಾಡ ಮರಿ ಯಾಡಿ ಮುಂದೈತಣ್ಣ ||2||

ಬಲ್ಲವರು ಹಿಡಿರಪ್ಪ ಬಡವನ ಕೋಣ |

ಖೂನ ಹೇಳುವೆನು ಪಂಚರಂಗಿ ಬಣ್ಣ |

ಬೇತಾಳಿಸ ಪದರಿನ ಮೂಗರಾಣಿ ಹಾಕಿದ |

ಚೌರ್ಯಾಐಂಸಿ ಪದರಿನ ಸೋಲದ ಕಣ್ಣ ||3||

ಕಲಂಕಿ ಕುದರಿಗೆ ಮೀರಿದ ಕೋಣ |

ಯಮನರ ಕೋಣಿಗೆ ಹೊಡದಿದ ಕೋಣ |

ಮೆಲ್ಲನೆ ಬಂದು ಮೇಲ್ ಗಡಿಯ ಜತ್ತಿಗೆ |

ಎತ್ತಿ ಬಡಿವ ಹಟ ಮಾರಿ ಕೋಣ ||4||

ಕಂಠ ನಿರಾಕಾರ ಘಂಟಿ ಕಟ್ಟಿದ |

ಆಕಾರ ಮೂರ ಬಣ್ಣದ ಮುಟ್ಟ ಬಿಗದಿದ |

ಪಂಚತತ್ವ ಜ್ಞಾನ ಜಮಖಾನಿ ಹಾಕಿದ |

ರೇವಪಯ್ಯ ಸ್ವಾಮಿನೆಂಬ ಹೊತ್ತಿದ ಕೋಣ ||5||

ಕಾಯ್ದಿದ ಬೀಳ ಮೈದು ಕಳದ ಹೋಯ್ತು ಬಿಳಿ ಎತ್ತು,

ಹೊಳಕ ಏನ ಕರಿಯ ಕಡಿಯಲಿ |

ತ್ವರಿಯಲ್ಲಿ ತೊಳಿಲಕ ಹೋದಲ್ಲಿ |

ಮುಣಗಿತು ಸಂಗಮ ಸುಳಿಯಲ್ಲಿ ||ಪಲ್ಲವಿ||

ಸಾಲ ತೆಗೆದು ಸೊಲ್ಲಪುರಕ ಹೋಗಿ |

ಶಾಲದ ಬಣ್ಣದ ಝೂಲ ತಂದಿದ |

ಹೊಳದ ದಿನ ಪೋಳಿ ಹ್ಯಾಂಗ ಉಣಬೇಕ|

ಆಳು ತಗೊಂಡು ಇನ್ ಎಲ್ಲಿ ಹುಡಕಲಿ|

ತೇಲಲಿಲ್ಲ ಕಡಿಯಲ್ಲಿ |

ಹೋಗಿ ಬಂದ ದೊಡ್ಡ ಹೊಳಿ ಕಲೆತಲ್ಲಿ ||1||

ಜ್ಯೋತಿಷ ನೋಡುವ ಸ್ವಾಮಿಗಳ ಬಲ್ಲಿ |

ಜಾತಿಲಿ ಹೇಳುವರು ಮೈ ತುಂಬಿದಲ್ಲಿ |

ಕೇಳಸಿ ನೋಡಿದ ಕಂಡ ಕಂಡಲ್ಲಿ |

ಸುಳ್ಳೇ ಹೇಳಿ ಎನಗ ಹಾಕೇರ ಜೋಲಿ |

ಪತಹತಲಿಲ್ಲ ಎಲ್ಲಿ |

ಹೊಳಾ ಮುಗಿದು ಹೋಯಿತು ಚಿಂತೆಯಲ್ಲಿ |

ಖ್ಯಾಲ ಇಟ್ಟು ಮುಳುಗಿದ ಸ್ಥಳದಲ್ಲಿ ||2||

ಹೊಳಾಕ ಕಳದ ಎತ್ತು ಸಿಗಲಿಲ್ಲ ಭೇಗಿ |

ಕೆರಿ ನೀರ ಒಣಗಿತ್ತು ವೈಶಾಕ ಬಿಸಲಿಗಿ |

ಅಗಸರ ಮುದಕಿ ಒಗಿಲಾಕ ಹೋದಲ್ಲಿ |

ಹಿಡಕೊಂಡು ತಂದು ಕೈಲಿ|

ಎತ್ತಿಗಿ ನೋಡಿ ಇನಾಮ ಕೊಟ್ಟರ ಚಾಲಿ |

ಸದಾ ಕುಂತ ಸಿದ್ಧ ಭಜನಿಯಲ್ಲಿ ||3||

ಚಿನ್ನ ಬಣ್ಣ ಅಂಗಕ ಭೂಷಣ |

ಜ್ಞಾನ ಭೂಷಣ ಯೋಗಿಗೆ ||ಪಲ್ಲವಿ||

ಷಡಗುಣದ ವೈರಿಗಳಿಗೆ |

ಸದಾಶಿವನ ದರ್ಬಾರಕೊಯ್ದು |

ಸದಾ ನಾಮ ಜೇಲಖಾನಿದೊಳು |

ಸದಾ ಜನ್ಮ ಟಿಪ್ಪಣಿ ಮಾಡಿ |

ಸದಮಲ ಜ್ಞಾನದ ಬೆಳಗಿನೊಳು ಕೂಡಿ ||1||

ಕತ್ತಲೊಳು ಗಾಬರಿಯಾಗಿ |

ಅತ್ತ ಇತ್ತ ತಿರುಗುವರಿಗೆ |

ಜೋತಿರ್ಮಯ ಪ್ರಕಾಶದೊಳು |

ಕಳೆದಿದಲ್ಲಿ ಕಂಡು ಹುಡಕ್ಯಾಡಿ |

ಭಕ್ತಿಫಲ ಕರದೊಳು ಕೊಟ್ಟು |

ಮುಕ್ತನಾದರೂ ಮಂದಿರ ನೋಡಿ ||2||

ನಿರಾಕಾರ ನಿರಾಲಂಬ |

ನಿರ್ಗುಣದ ಮರ್ಮವ ತಿಳಿದು |

ನಿಜಾನಂದ ಸಿದ್ರಾಮೇಶಾ |

ಕರ್ಮಿಗೆಲ್ಲಾ ಉದ್ಧಾರ ಮಾಡಿ |

ಒಬ್ಬರ ಚರಣ ಒಬ್ಬರು ಪಿಡಿದು |

ಸ್ವರ್ಗ ಮುಟ್ಟಿ ಸಿದ್ಧಪದ ಹಾಡಿ ||3||

ಪಂಚಕರಣ ಎಂಬ ಜ್ಞಾನದ ಊರೊಳು |

ಕಟ್ಟಿದರು ಒಂದು ಗುಡಿಯ |

ಕಟ್ಟಿದವರು ಎನ್ನ ಒಡೆಯ ||ಪಲ್ಲವಿ||

ಸಿದ್ಧೇಶ್ವರನ ಗುಡಿಯ ಗುಮ್ಮಟದೊಳಗೆ |

ಇತ್ತು ಸವ್ವ ಕೋಟಿ ರೂಪಯ |

ಬದ್ಧ ನಡತಿಲಿಂದ ಬಡತನ ಬಂದರ |

ಮುಂದಾದತು ಉಪಾಯ |

ಶುದ್ಧ ಚೈತ್ರದೊಳು ಮಧ್ಯಾನ್ಹ ಎರಡಕ |

ಅಗಳಿ ತೆಕ್ಕೊ ತನಯ |

ಬುದ್ಧಿವಂತನಾಗು ಸದಯ ||1||

ಒಂದಾನು ಒಂದು ದಿವಸ |

ಖಾತ್ಯಾ ನೋಡದರಲ್ಲಿ ಕಾಣಿತು ಆ ಬಗೆಯ |

ಮಂದ ಮತಿ ಮಿತ್ರರು ಕೆಡಸಿ ಬಿಟ್ಟಿದರೊ |

ಗುಡಿಯ ಗುಮ್ಮಟನಯ್ಯಾ |

ತಂದಿ ಸುಳ್ಳೇ ಹ್ಯಾಂಗ ಬರೆಹುವರೆಂದು |

ತನ್ನೊಳ ಆಗಿ ಅಪಾಯ |

ಹೊನ್ನ ಸಿಗಲಿಲ್ಲ ಎನ್ನ ಕೈಯ ||2||

ಸುದ್ದಿ ಕೇಳಿ ಬುದ್ಧಿವಂತ ಬಂದು |

ಚೌಕಾಸಿ ಮಾಡಿದನಯ್ಯಾ |

ಸದ್ಯ ಖರ್ಚು ತೊಕೊ ಇದ್ದಿದ ಪ್ರಕಾರ |

ಗುಮ್ಮಟ ಕಟ್ಟು ತನಯ |

ಶುದ್ಧ ಚೈತ್ರದೊಳು ಮಧ್ಯಾನ್ಹ ಎರಡಕ |

ಗುಮ್ಮಟಿನ ನೆರಳಯ್ಯಾ |

ಅಲ್ಲಿ ಅಗಳಿಸಿ ಕೊಟ್ಟ ರೂಪಯ ||3||

ಸತ್ಯ ಸಂಗದಲ್ಲಿ ಕಾಲ ಕಳೆದರೆ |

ಆಗದು ಈ ಪರಿಯ |

ನಿತ್ಯ ಸಂಘಟನ ಮಿಥ್ಯ ಮಾಡಿದರೆ |

ಆಗದು ಆ ಪರಿಯ |

ಸಿದ್ಧ ಭಜನದೊಳು ಜ್ಞಾನದ ಬದುಕಿರಿ |

ಬಂಗಾರಾಗದಯ್ಯ |

ಮಹಾದೇವ ಮಾಡುವ ಉದಯ ||4||

ಧ್ಯಾನ ಮುಕ್ತಿ ಜ್ಞಾನ ಗಣಪದವೇ |

ಕೇಳೆನ್ನ ಮನವೆ ||ಪಲ್ಲವಿ||

ಧ್ಯಾನ ಮುಕ್ತಿ ಜ್ಞಾನ ಭಕ್ತಿ |

ಕೂಡಿದಲ್ಲಿ ಇಚ್ಛಾ ಶಕ್ತಿ |

ಬೇಡಿದ ಫಲಕೊಟ್ಟು ಸೂರತಿ |

ಸಾರುವಂಥ ಸತ್ಯ ವರತಿ |

ಊರ ಊರಿಗೆ ಕುಂತು ನೋಡಪ್ಪ |

ಮೇಲಕೇರಿ ಶರಣರ ಅಂಗಳದೊಳು ನಿಂತು ಹಾಡಪ್ಪ |

ನೌಭೇರಿ ನಾದ ಕೇಳಿ ಕೊಟ್ಟಿದ್ದು ನೀ ಉಂಡು ನಡಿಯಪ್ಪ |

ನಿನಗಿಲ್ಲ ಮುಪ್ಪ |

ಆವ ಕಾಲದಿ ಸತ್ಯ ಶರಣರು |

ಈವ ಕಾಲಕೆ ಉಂಟು ನೋಡು |

ದಾವ ಕುಲದವ ಜೀವ ಶಿವದ |

ನೆಲಿಯ ತಿಳಿಸಿದವನೇ ಗುರುವೇ ||1||

ಇಚ್ಛಾಶಕ್ತಿ ಕ್ರಿಯಾಶಕ್ತಿ |

ಕಲ್ತಲ್ಲಿ ಬಯಲಾಟ ಭರ್ತಿ |

ಆಧಾರಸ್ವಾದಿಷ್ಟ ಮಣಿಪುರ |

ಅನಾಹತ ಈ ಸುದ್ದಿ ಅಗ್ನಿ ಚಕ್ರ |

ಸಾವಿರ ಹತೈದಪ್ಪ |

ಅವ ಕಾಣಬೇಕಾದರ ಈಡಾ ಪಿಂಗಳ ಅಂಗಳ ಉಡಗಪ್ಪ |

ಕಂಗಳ ತ್ರಿಕೂಟ ಗಂಗಾ ಯಮುನರ ಸಂಗ ಸೇರಪ್ಪ |

ನಿಜರಂಗ ಧೀಪ |

ಫಣಿಯ ಬರಹವನೊಲಿದು |

ಅಂತಃಕರುಣ ಆಶೀರ್ವಾದ ಕೊಟ್ಟರೆ |

ಚರಣ ಧೂಳೆಂದು ಸಣ್ಣ ಇರು ಮನವೆ |

ಜಗವೆಲ್ಲ ಜಯವೇ ||2||

ಕ್ರಿಯಾಶಕ್ತಿ ಭಾವಶಕ್ತಿ |

ಸಗುಣ ನಿರ್ಗುಣ ಜೋಡ ಮುಕ್ತಿ |

ಮೂಲಸ್ತಂಭದ ಮೂಲ ತಿಳಿದು |

ಪಂಚಕರಣದ ಹಂಚಿಕೆ ಹಾಕಿ |

ಮುಂಚಿನ ಮಾರಿ ಮಿಂಚ ನೋಡಪ್ಪ |

ಪಂಚತತ್ವ ಕಂಚಿನ ಬಟ್ಟಲದೊಳು ಮಿಂಚೆಣ್ಣೆ ಉಂಟಪ್ಪ |

ತನ ಮನ ಧನ ಲಂಚ ಕೊಟ್ಟು ಮಂಚ ನೋಡಪ್ಪ |

ಆ ಜೆಂಬೂ ದ್ವೀಪ |

ಶಾಂತ ಸದ್ಗುಣ ಕರ್ಪೂರ ಧೂಪ |

ದೀಪ ನೈವೇದ್ಯ ಅರ್ಪಣ ಮಾಡು |

ಸರ್ಪಭೂಷಣ ಸ್ವಾಮಿ ರೇವಯ್ಯಪ್ಪ |

ಸಾಕ್ಷಿಯಾಗಿ ಕೊಡುವ ವರವೆ ||3||

ಮಾಯಾ ಬಿಟ್ಟಿಲ್ಲ ಅನುಬ್ಯಾಡ ತಂದಿ |

ಮಾಯಾ ಬಿಟ್ಟವರು ಹರನಾಲ್ಕು ಮಂದಿ |

ಮಾಯಾ ರಹಿತನು ಗುರುವಿನ ಪಾದಕ ಹೊಂದಿ |

ಮಾಯಾ ಮೋಹಕ ಇಟ್ಟಾರೋ ಬಂದಿ ||ಪಲ್ಲವಿ||

ಒಂದು ದಿನ ಮಾಯಾ ಮದನ ಸುಂದರ |

ವಿಶ್ವಾಮಿತ್ರಗ ಭೆಟ್ಟಿಯಾಗ್ಯಾರ |

ಮುನಿ ಕೇಳುತಾರೋ ಮದನಗ |

ನಾಲ್ಕು ಲಗಾಮ ಹಿಡದಿದಿ ಕೈಯಾಗ |

ಲಗಾಮ ಹಾಕುತಿ ಯಾವ ಕುದರೀಗ |

ಕುದರಿ ಕಾಣುವಲ್ಲದೋ ಎನ್ನಗ ||1||

ಮದನ ಹೇಳುತಾನ ವಿಶ್ವಾಮಿತ್ರ ಮುನಿಗ |

ನಾಲ್ಕು ಮಂದಿ ಸಿಗಲಿಲ್ಲ ಎನ್ನ ಕೈಯಾಗ |

ಸುಖಮುನಿ ಭೀಷ್ಮಾಚಾರಿ ಋಷಿಯ |

ಕಾರ್ತಿಕಸ್ವಾಮಿ ಮಾರುತಿಯ|

ಇವರು ಸಿಗುವಲ್ಲರೊ ಮಾಯಾದ ಮುಸಕಿಯ |

ಸರ್ವ ಮುನಿ ಸಿಕ್ಕರೋ ಎನ್ನ ಬಲಿಯ ||2||

ಸಿಟ್ಟಿಲೀ ಹೇಳುತರ ಮದನಗ ಮುನಿಯ |

ಸಾಟಿ ಹಜಾರ ವರ್ಷ ತಪಸ್ಸು ನಾನಯ್ಯಾ |

ಮಾಯಾ ಬಿಟ್ಟಿದವ ಇದ್ದ ನಾನು |

ಎನಗ ಬಿಟ್ಟೀ ಎಣಸಿದಿ ನೀನು |

ಸೃಷ್ಟಿಯಾಳುವ ಎನಗ ಅಂಜಿದಾನೋ |

ಇಷ್ಟು ಕೇಳಿ ಮದನ ನಕ್ಕಿದಾನು ||3||

ನಿಮ್ಮ ದಸಿಂದು ನನಗ ಇಲ್ರಿ ಹಳಾಳಿ |

ಲಗಾಮ ಯಾತಕ ನಿಮ್ಮ ಬಾಯಿ ವಟಾಳಿ |

ನಿಮ್ಮಂಥವರು ಎಷ್ಟೋ ಕೋಟಿ ಋಷಿ |

ಬೇಕಂತ ಮುಣಗ್ಯಾರೊ ಘುಲ್ಲಾಸಿ |

ವಿಶ್ವಾಮಿತ್ರ ಎದ್ದ ಗಡಬಡಸಿ |

ಹೋಗಿ ಏಕಾಂತ ಕುಂತ ತಪಸ್ಸಿ ||4||

ಮದನ ಮಾಯಾದಾಟ ಹೂಡಿದಾರಂಭ |

ಒಂದಾನೊಂದು ದಿವಸ ಊರ್ವಸಿ ರಂಭ |

ನಡಿದಿದಾಳೊ ಮುನಿ ಮುಂದ ಹಾಯ್ದ |

ಹೆಜ್ಜಿ ಕೇಳಿ ಮುನಿ ಕಣ್ಣ ತೆರೆದ |

ಬಲು ಪ್ರೀತಿಲಿ ಬಳಿಯಕ ಕರೆದ |

ಒಲ್ಲಂದಾರ ಕೊರಳಿಗಿ ಬಿದ್ದ ||5||

ರಂಭಾ ಹೇಳುತಾಳ ವಿಶ್ವಾಮಿತ್ರ ಮುನಿಗಿ |

ಪಂಥ ನಡೆಸರಿ ಬಂದಿನಿ ಅದಕಾಗಿ |

ಬಾಯಿ ವಟಾಳಿ ಹಾಕುವೆ ನಿಮಗ |

ನಾನು ಕುಂಡ್ರುವೇನು ನಿಮ್ಮ ಮ್ಯಾಗ |

ಜರಾ ತಿರಗರಿ ಅಂಗಳದೊಳಗೆ |

ಕಬೂಲಾಗಿ ಕುಂಡ್ರಸಿಕೊಂಡ ಮ್ಯಾಗ ||6||

ಅದೇ ಕ್ಷಣಕ ಮದನ ಮುಂದ ಬಂದು ನಿಂತ |

ಸರದಾಗಿ ಮುನಿ ನಿಶ ಇಳಿದೋಗಿ ಕುಂತ |

ಮಾಯಾ ಹ್ಯಾಂಗೆ ಬಿಟ್ಟಾರು ನಿಮ್ಮವರು |

ಮಾತಾಡಲಿಕ್ಕೆ ಹರ ಸರ್ವರೂ |

ಸೋತ ಕುಂತವರು ಸಿದ್ಧ ಭಜನೆವರು ||7||

ತತ್ವ ಜ್ಞಾನಾಮೃತ ಹಿತವು ತಾನಾಗಲಿಕ್ಕೆ |

ಮಹಾತ್ಮರ ಸಂಗ ಬೇಕು |

ಸತ್ವಗುಣ ಸಂಗವ ನಡಿಬೇಕು |

ಜೀವತ್ವದ ಆತ್ಮವು ತಿಳಿಬೇಕು ||ಪಲ್ಲವಿ||

ಕನಸಿನ ಸಂಸಾರ ತಿಳಿಯದೆ ಹೋಗಿದ |

ಮನಸಿಗಿ ಬಂದಂತೆ ಹಚ್ಚಿಕೊಂಡಿ ತಗಲಿ |

ಚಂದ್ರ ಸೂರ್ಯರು ಕಣ್ಣಿಗಿ ಹ್ಯಾಂಗ ಕಾಣುವರು |

ಕೈಯಾಗ ಹ್ಯಾಂಗ ಸಿಗಬೇಕೊ |

ಮಹೇಂದ್ರದೊಳು ಉಪದೇಶವಪಡಿಬೇಕು ||1||

ಕಲ್ಲಿನೊಳು ಪ್ರಕಟ ಶ್ರೀಶೈಲ |

ಮಲ್ಲಿಕಾರ್ಜುನ ಕುರಿ ಹಿಕ್ಯಾಗ ಮೊದಲ |

ಭಕ್ತಿಸಾರದೊಳು ಮುಕ್ತಿ ಮಾರ್ಗವೆಂದು |

ತನ್ನೊಳು ತಿಳಿಬೇಕು |

ಶಕ್ತಿಯ ಶೃತಿದೊಳು ಇರಬೇಕು |

ಯುಕ್ತಿಲಿಂದ ಭವಸಾಗರ ಈಸಬೇಕು ||2||

ಆರು ಶಾಸ್ತ್ರಗಳು ಓದಿದ್ರ ಇಲ್ಲ |

ಗುರು ತಿಳಿಸುತನ ತಿಳಿಹುದಿಲ್ಲ |

ಮರವಿನಲ್ಲಿ ಮನೆ ಮಾಡಿತ್ತೊ ಮನ ಇದು |

ಮರತ್ಯಾಂಗ ಇರಬೇಕು |

ಅರವಿನಲ್ಲಿ ಗುರುವಿನ ಪಡಿಬೇಕು |

ಗುರುವಿನ ಗುರು ಪರಮ ಗುರು ತಿಳಿಬೇಕು ||3||

ಶುದ್ಧ ಪ್ರಸಾದ ಸರ್ವಕೆ ಮೂಲ |

ಸಿದ್ಧ ಪ್ರಸಾದ ಪಡಿದವ ಬಲ್ಲ|

ಪ್ರಸಿದ್ಧ ಪ್ರಸಾದ ಶ್ರೀಗುರು ಮೂರ್ತಿ |

ಸ್ವಾಮಿಗಿ ನೆನಿಬೇಕೊ |

ನಾವದಗಿ ಸ್ಥಳಕ್ಕೆ ನಡಿಬೇಕೊ |

ರೇವಯ್ಯ ಸ್ವಾಮಿ ಗುರುನಾಮ ಸ್ಮರಣೆ ಬೇಕು ||4||

ಸುದ್ರಾಸಿ ಕೂಡ್ರೆಪ್ಪ |

ಮುದ್ರಾದ ಕುದರಿ ಮ್ಯಾಲೆ |

ಹಾರಿದ್ರೆ ಝೋಕ ಹೋದತ್ತೊ|

ಭದ್ರಗಿರಿ ಬಿಟ್ಟು ಅಡವಿ ಪಾಲ ಆದತೊ |

ನಿದ್ರಿದೊಳು ಕುಂತಿದ್ರೆ ನೆನಪು ಹೋದತ್ತೊ ||ಪಲ್ಲವಿ||

ತ್ರಿವೇಣಿ ಸಂಗಮದೊಳು ಹರದ ಹೋದತ್ತೊ |

ಪಶ್ಚಿಮ ಪ್ರಕಾಶದೊಳು ಬೆದರಿ ನಿಂತತ್ತೊ|

ಸಾವಿರ ಕುದರಿ ರಥ ಬರುವದು ಕಂಡು |

ಮೆಲ್ಲನೆ ನೆಲ ಹಿಡಿದಿತ್ತೊ |

ಚಕ್ರವರ್ತಿ ಅಗ್ನಿಪೂರಕ ಹೊತ್ತ ಮುಣಗಿತ್ತೊ |

ಭೀಕರ ಇರುವ ಎರಡು ಸಿಂಹ ನೋಡಿ ಅಂಜಿತ್ತೊ ||1||

ಸೋಳ ಸೀಮಿ ದಾಟಿ ಘೋಳ ತಂದಿತ್ತೊ |

ಹಾಳ ಘಟವ ಸೇರಿ ಕಾಳ ಒದಗಿತ್ತೊ |

ಸನ್ಮತ ಇಲ್ಲದಂಗ ಅನುಹಾತ ಗುಡಿ ಹೊಕ್ಕಿ |

ಬಾರಲಿಂಗಕ್ಕೆ ಧಕ್ಕಿ ಹೋಡದಿತ್ತೊ|

ದೇವರ ಮುಂದಿನ ಹತ್ತ ಸೇರ ಕಡ್ಲಿ ಬುಕ್ಕೆತ್ತೊ|

ಎದುರಿನ ಗುಡ್ಡ ಏರಲಿಕ್ಕೆ ಬೆನ್ನ ಬೀಗಿತೊ ||2||

ಸ್ವಾದಿಷ್ಟ ಷಡ್ರದಳ ಸಿಟ್ಟಿಲೇರೆತ್ತೊ |

ನಿಷ್ವಿಲೀ ಲಗಾಮ ಹಿಡಿ ಮುಷ್ಠಿ ಬಿಟ್ಟತ್ತೊ |

ಶ್ರೇಷ್ಠ ಆಧಾರಪುರ ಚೌರಾಂಗ ಬಾಜಾರದೊಳು |

ಗಣಪತಿ ನೋಡು ಕುಂತೊ |

ದೃಷ್ಟಿಲಿ ನೋಡ ರಿದ್ಧಿ ಸಿದ್ಧಿ ಎದರ ನಿಂತೊ |

ಇಷ್ಟೊತ್ತು ಕುದರಿ ಖಾಯಾ ಪೂರಾ ತಿರಗಿ ಬಂತೊ ||3||

ಇಂಥಾ ಕುದುರಿ ಅಂಥಾ ಸಮುದ್ರ ಹಾರಿತ್ತೊ |

ಪಂಥಾ ಇಟ್ಟು ಲಂಕಾ ಗೆದ್ದು ಬಂದಿತ್ತೊ |

ಹಣಮಂತನಂಥ ಶಿಷ್ಯ ಕುದುರಿ ಮ್ಯಾಲೆ |

ಮೆರಿಯುವನೊ ಕುಂತೊ |

ಸಿದ್ಧಾಂತ ಸಿದ್ಧ ಭಜನಿಯ ಮಾತೋ |

ವೇದಾಂತ ಸಂತ ಸಂಗವು ಕಲೆತೊ ||4||

ಚಲತಿ – ಸ್ವಯೊ ಕಲಿತು ಕುದರಿಯ ಚಾಲಾ |

ಸ್ವಯಂ ತೀರ್ಥ ತಡ ಇಲ್ಲ ಚೀಲಾ ||

ಮಂದಿರ ಕಂಡು ಬಂದೀನಿ |

ಮನೋಹರ ಪ್ರಿಯನೆ ||ಪಲ್ಲವಿ||

ಮಂದಿರ ಕಂಡು ಬಂದೆ

ಇಂದೂಧರ ಮುಖ ಬೆಳಗಿದಂತೆ |

ದೇವಿಂದ್ರನ ಪದವಿಯ ನಾಚಿತ್ತು |

ಹಿಂದೂಸ್ತಾನದೊಳಗ ಆಗ್ರಾದ ತಾಜಮಹಲ ನಾಚಿತ್ತು |

ಸುಂದರ ದೇಹ ಕಲ್ಲು ಗೊಂಬಿಯ ನೋಡಿ ನಾಚಿತ್ತು |

ಚಂದ್ರ ಲಗ್ನದೊಳು ಹಂದ್ರ ಹಾಕಿದ್ಹಂಗ |

ಮಹೇಂದ್ರ ಘಟಕದೊಳು ಉಪದೇಶ ಆದ್ಹಂಗ |

ಕಂದ ಮೂಲ ಫಲ ಆನಂದ ತಿಂದು |

ಮಂದರ ಗಿರಿ ನೀರು ಬೈಲ ಉನ್ಮನಿ ||1||

ಮಂದಿರ ಮೊದಲನೆ ಬಾಕಿಲ |

ಉಂದಿರ ವಾಹನ ಗಣಪತಿ ಕಂಡ |

ಒಂದನೆ ಮಾಡಿಕೊಂಡ ಹೋದ ಒಳಕ |

ಅಂದಧುಂದಿನ ದರ್ಬಾರ ತುಂಬಿತ್ತು ನಾಜೂಕ |

ಇನ್ನೊಂದು ಮಾತು ಏನೊಂದು ಕಮ್ಮಿಲ್ಲ ನೋಡದಕ |

ಬ್ರಹ್ಮ ವಿಷ್ಣು ರುದ್ರ ಅಡಗಿ ಮಾಡುವರು |

ಚಂದ್ರಸೂರ್ಯರು ಎಡಿ ಬಡಿಸುವರು |

ನೆಲಗನ್ನೆರು ಏಳು ಮಂದಿ ನೀರ ತರುಹುವರು |

ಐದ ಮಂದಿ ಮುತ್ತೈದೆರು ಬ್ಯಾರೆ |

ಪ್ಯಾಲ ಕುಡುಸ್ತಿರು ತುಂಬಾ ಸಂಜೀವನಿ ||2||

ಆಧಾರಪುರದೊಳು ಚತುರ್ಲಿಂಗ ಬ್ರಹ್ಮನ ಕಂಡ |

ಗಣಪತಿ ನಿಂತಿದ ಪೈರ್ಯಾಕ |

ಮೇಲ ಮಂಟಪದೊಳು ಪದ್ಮಾಸನ ಕುಂತಿರುಸನ್ಮುಖ

ಚಿತ್ರಾಂಗ ನದಿಗಳು ಹತ್ತು ತುಂಬಿ ನಡದಿವು ಗಗನಕ |

ಸಿದ್ಧ ಶಿಖರಗಳು ಬಾರ ಕಂಡಿದ |

ಬಿದನೂರು ತೀರ್ಥದ ಪ್ಯಾಲ ಕುಡದಿದ |

ಹದಿನಾರು ಬ್ರಹ್ಮರ ಪಂಕ್ತಿ ಉಂಡಿದ |

ಅಂಡ ಪಿಂಡ ಉದ್ಬೀಜದ ಉತ್ಪತ್ತಿ|

ಚೌರ್ಯಾ ಐಂಸಿ ಲಕ್ಷದ ಯೌನಿಯ ಕಂಪನಿ ||3||

ಜೀವ ಶವಯೆಂಬ ರಾಜಾ ಪ್ರಧಾನಿ ಜೋಡಿ |

ಸಾವಿರ ದಿಕ್ಕಿಗೆ ಅಧಿಪತಿ |

ಮಂದಿರ ತುಂಬಿ ಕಿರಣ ಹೆಚ್ಚಾಗಿತ್ತೊ ಮಹಾಜ್ಯೋತಿ |

ಗಂಧರ್ವ ಭಜನ ದೀಪರಾಗಕ ನಿಂತಿಳೊ ಸರಸ್ವತಿ |

ಓಂ ಸೋಂ ನಾಮ ಮೂರು ಅಕ್ಷರ |

ಅಕಾರ ಉಕಾರ ಮಕಾರ ಅಕ್ಷರ |

ಸಾಕಾರ ರಿದ್ಧಿ ಸಿದ್ಧಿ ಗಮನೇರ |

ಯಾತಾಳ ಬೇತಾಳ ವಿಕ್ರಾಳ ರೂಪವ |

ನೋಡಿದವರಿಗೆ ವಿಳೆ ಕೊಡುತಿವು ಮದನಿ ||4||

ಮಂದಿರ ಸುದ್ದಿ ಛಂದ ಚಿತ್ತವಿಟ್ಟು ಕೇಳು ತಂಗಿ |

ದೇವಿದಾಸ ಬರದಿದ ಪ್ರತ್ಯಕ್ಷ |

ಸಂತ ಪುರೋಹಿತ ಶರಣ ಕಂದಗೊಳ |

ಮಡಿವಾಳ ಮನಸಾಕ್ಷ |

ನೋಡಿದವರ ಪ್ರಭುದೇವರ |

ಕೇಳಿದವರು ಕರ್ಮ ಪರಿಹಾರ |

ನಿರ್ಗುಣ ತಿಳಿದವ ಕಂಡ ದರ್ಬಾರ |

ಬಡವ ತೀರ್ಥದ ಮುಂದ ಕುಶಲದಪುರ |

ಇದು ಹಸುಮಗ ಮಾಣಿಕ ಶಿಸು ಮಗ ಜ್ಞಾನಿ ||5||

ಜಾಣನು ಜಾಣ ತಾನಾದೆ |

ಕಾಣೆನು ಅನುಭವ ಆತ್ಮದಿ ||ಪಲ್ಲವಿ||

ಧರಿಯ ಭೋಗ ಸುಖ ಬಿಟ್ಟು |

ಗುರಿಯ ಪರಬ್ರಹ್ಮನಲ್ಲಿಟ್ಟು |

ಬರಿಯ ಕರ್ಮ ಕೆಡಸಿಟ್ಟು |

ಉರಿಯ ದೃಷ್ಟಿಯಲ್ಲಿ ಮದವ ಸುಟ್ಟು ||1||

ಅಳದ ಮೇಲೆ ಉಳಿವದೇನು ಸಿಟ್ಟು |

ಕಳದ ಮೇಲ ಇನ್ಯಾತರ ಕಟ್ಟು |

ತಿಳಿದವರಿಗೆ ಮೂರು ಪ್ರಕಾರದ ಪೆಟ್ಟು |

ಹೊಳಿಯ ಪರ ಹಠಯೋಗಿಗೆ ಮುಟ್ಟು ||2||

ತ್ರಿಂಗ ವೇಶ ಆತ್ಮದೊಳು ತೊಟ್ಟು |

ಬಹಿರಂಗ ಧ್ಯಾನ ಗುರುಪಾದಕ ನೇಟು |

ಮೃದಂಗ ತಾಳ ತಂಬೂರಿ ಸ್ವತ ಇಟ್ಟು |

ನೌರಂಗ ಪದ ಹಾಡಿ ಮುಪ್ಪಾಟು ||3||

ತನು ಮನ ಧನ ಗುರು ಅರ್ಪಣ ಕೊಟ್ಟು |

ಶ್ರವಣ ಮನನ ನಿಜಧ್ಯಾಸವ ಇಟ್ಟು |

ಸುಜ್ಞಾನಿ ತಿಳಿವ ಮುಂದಿನ ರಾಟು |

ಅಜ್ಞಾನಿ ಏನು ಅರಿವನು ಗುಟ್ಟು ||4||

ಈ ದೇಹಗೆ ಭವಸಾಗರ ಲೋಟು |

ಹೃದಯದೊಳು ಅಂಜಿಕಿಲ್ಲ ಎಷ್ಟು |

ಅಂಜುರಿ ಹಣ್ಣು ಸಿದ್ಧ ಭಜನಿಯ ಥಾಟು |

ಪಿಂಜರಿ ಸ್ವರ್ಗಕ್ಯೊಯಿದ ಥೇಟು ||5||

ಸುಳ್ಳ ಸುಳ್ಳ ಅನ್ನುವದಿದು ಸಂಸಾರ ಸಂಗ |

ಅದ್ವೈತ ಸಂಗ ಸಾಧುರ ಸಂಗ |

ನೀ ತಿಳಿದು ನೋಡ ತಮ್ಮ ಇದು ಬಣ್ಣವಿಲ್ಲದ ರಂಗ ||ಪಲ್ಲವಿ ||

ಪಂಚ ಕೃತನ ನೆರಲಿ ತಿಳದಿಲ್ಲ |

ಕಂಚ ಕಲ್ಲಿನ ದೇವರು ನೋಡು ಉಳದಿಲ್ಲ |

ಮಂಚದ ಮ್ಯಾಲ ಮನಗಿ ನೀವು ಆಳೂದಿಲ್ಲ |

ಪ್ರಪಂಚ ತಿಳಿದ ಮಾಡು ಆತ್ಮ ಸಂಗ ||1||

ಪರ ಉಪಕಾರ ಪುಣ್ಯ ಪಡೀಲಿಲ್ಲಾ |

ಸುಳ್ಳ ಘಳಸಿ ಬರೆ ಉಣಲಿಲ್ಲಾ |

ತನ್ನ ಮನಸು ತನಗ ಮಣಿಲಿಲ್ಲಾ |

ನಿಜ ಹ್ಯಾಂಗ ಕಾಣಿ ತಮ್ಮ ನೀನು ಮಾಡುದೆಲ್ಲ ಢಂಗ ||2||

ತ್ರಿಗುಣರಹಿತವಾಗಲಿಲ್ಲಾ |

ಗುರುವಿನ ಗುರುವಿಗಿ ಶರಣು ಹೋಗಲಿಲ್ಲಾ |

ಪರ ಆತ್ಮಕ ನೀ ಬಾಗಲಿಲ್ಲಾ |

ಮೋಕ್ಷ ಹ್ಯಾಂಗ ಕಾಣಿ ಮಡಿವಾಳ ಸಿದ್ಧ ಪ್ರಭುಲಿಂಗ ||3||

ಮಾಯಾ ಬಿಟ್ಟೆನೆಂದು |

ವಾಯಾ ಬೊಗಳಬೇಡ |

ನ್ಯಾಯಾ ತನ್ನಲಿ ಇರಲಿ ಹೇ ಮರುಳೆ ||ಪಲ್ಲವಿ||

ಕಾಯಾ ಜೀವ ಎರಡು ಕೂಡಿ ಇರುವಸ್ಥನ |

ಅಡವಿ ಬಿದ್ದರ ಮಾಯಾ ಬಿಟ್ಟಿತ್ತೇನು |

ಹೂವು ಕಾಯಿ ತಿಂದು ದೇಹ ಬೆಳಸಿಕೊಂಡು |

ನ್ಯಾಯ ಜನಕ ಹೇಳು ಹುಚ್ಚ ಮರುಳೆ ||1||

ಸತಿಸಂಗ ಬಿಟ್ಟು ರಂಗಮಂಟಪದೊಳು |

ನಕ್ಕಂಗ ಆಡಿದ್ರ ಮಾಯಾ ಬಿಟ್ಟಿತ್ತೇನು |

ಗಾಳಿ ಆಹಾರ ಮಾಡಿ ಬಾಳಿದ್ರೆ ಏನ ಬಂತು |

ಕಾಳಿನ ಪಾಲಕ ತುತ್ತಾಗಿ ಮರುಳೆ ||2||

ಮೋಕ್ಷವು ಆಗಲಿಕ್ಕೆ ಸಾಕ್ಷಿಯ ಹೇಳುವೆನು |

ಮುಮುಕ್ಷು ಗುರುವಿನಲ್ಲಿ ಅಕ್ಷರ ಪಡಿ |

ಆರು ಅಕ್ಷರ ಕುರುಹು ಸಾರ ತಿಳಿದ ಮೇಲೆ

ಮಾಯಾ ನಿನಗ ಏನ ಸಂಗ ಹೇಳು ಮರುಳೆ ||3||

ನೀರಿನೊಳಗೆ ತಂಪ ಹಾಲಿನೊಳಗೆ ತುಪ್ಪ |

ಬಿಸಲಿನೊಳಗೆ ದೀಪ ಅಡಗಿಲ್ಲೇನೊ|

ಬ್ಯಾರೆ ಆಗಿ ಬರಿ ಉಪಾಯವಾಯಿತು |

ಮಾಯಾ ಕಲಿತು ಕೊನಿ ಸಿದ್ಧ ಮರುಳೆ ||4||

ಇಲ್ಲಿ ಮಂದಿರ ನೋಡ |

ಅಲ್ಲಿ ದೇವರ ನೋಡ |

ದರ್ಶನಕ ಹೋಗುವ ದಾರಿಯ ನೋಡ ||ಪಲ್ಲವಿ||

ಬಲ ನಾಸಿಕ ದಾರಿ ಮೆಲ್ಲನೆ ಬಾ |

ನೀಲವರ್ಣ ಮೇಲ ನೋಡಿ ತ್ರಿವೇಣಿ ಬಾ |

ಆಧಾರ ಪಟ್ಟಣದ ವಿಸ್ತಾರ ನೋಡ |

ಸೂತ್ರ ನೋಡ ||1||

ಇಕೋ ನೋಡ ಆರಲಿಂಗ ಸ್ವಾದಿಷ್ಟ ಠಾಂವ |

ಮಣಿಪುರ ಅನಾಹತ ದಹಾ ಬಾರಗಾಂವ |

ಈ ಸುದ್ದಿ ಅಗ್ನಿ ಚಕ್ರ ಇಟ್ಯಾಕ ನೋಡ

ಇಟ್ಯಾಕ ನೋಡ ||2||

ಚಕ್ರದಲ್ಲಿ ಸಹಸ್ರದಳ ಪ್ರಕಾಶ ನೋಡ |

ಪ್ರಕಾಶದೊಳು ಪಶ್ಚಿಮ ಆಕಾಶ ನೋಡ |

ಸೋಹಂ ಶಂಕರ ರೂಪ ಸುಗುಣ ನೋಡ

ಸುಗುಣ ನೋಡ ||3||

ಕೋಟಿ ತೇಜನ ಪ್ರಕಾಶ ಪ್ರಭುವೆ |

ಸಟಿಯವಿಲ್ಲಾ ನಿಟಿಲಾಕ್ಷದ ವಿಭುವೆ |

ದೇವಿದಾಸನ ಇದೇ ಭಜನಿ ನೋಡ |

ಭಜನಿ ನೋಡ ||4||

ಗುಪ್ತ ಮಾತ ಇರುವದು ತಂಗಿ ಹೇಳಲಾರೆನು |

ನಾನು ಹೇಳಲಾರೆನು ||ಪಲ್ಲವಿ||

ಗುಪ್ತ ಗುರು ಇರುವನು ನಿಂಬಾ |

ಇಪ್ಪತ್ತೊಂದು ಸ್ವರ್ಗದ ತುಂಬಾ |

ಸಪ್ತ ಭೂಮಿಕ ಇಂವಾ ನೋಡ ಅಂಬಾ |

ತೃಪ್ತನಾದೆ ನೋಡಿ ಜಗದಂಬಾ ||1||

ಹೇಳಿದರ ತಿಳಿವದಲ್ಲ |

ತಿಳಿಬೇಕು ತನ್ನಲ್ಲೆ ಮೊದಲ |

ಹೊಳಿಪಾರ ಸುಮ್ಮನೆ ಆಗೋದಿಲ್ಲ |

ಸುಳಿದೊಳಗೆ ಸಿಲ್ಕ್ಯಾರ ಎಲ್ಲ ||2||

ಸಂತರ ಸಂಗ ಕುಂತಿದ ಮ್ಯಾಗ |

ಅಂತರ್ ಭೇದ ಆಗಬೇಕೋ ಬೆಲ್ಲ |

ನಿಂತರ ಕಾಣುವದೋ ಬಗಲಾ |

ಸ್ವಾತಂತ್ರ್ಯ ಯಾರಿಗೂ ಇಲ್ಲಾ ||3||

ಇನ್ನೂರ ಹದಿನಾರು ಸಕೀಲ |

ಓದಿ ತಿಳಿದ ಮಹಾತ್ಮ ಅಖಿಲ |

ಅವರೆ ನೋಡೊ ಪೃಥ್ವಿಯ ವಕೀಲ |

ಹಂಚಿದರೊ ಸ್ವರ್ಗದ ಕೀಲಾ ||4||

ಗುಪ್ತ ಗುರುವಿನ ಹಿಂಬಲಾ |

ಆಪತ್ತು ಯಾರು ನೆಂಬೋದಿಲ್ಲ |

ಸುಪ್ತವಾಗಿ ಕೂಡಬೇಕೋ ಬಗಲಾ|

ಭಕ್ತಿ ಸಿದ್ಧ ಭಜನ ಮಾಲಾ ||5||

ನಾ ಏನು ಬಲ್ಲೆನಪ್ಪ ನಿಮ್ಮ ಕೂಸ | ಗುರುವೆ ನಿಮ್ಮ ಕೂಸ

ನಾನು ಅಂದಿಗಿಂದಿಗಿ ನಿಮ್ಮ ದಾಸ ||ಪಲ್ಲವಿ||

ಬಾಲ್ಯ ಯೌವನ ಮುಪ್ಪು ಮೂರು ಕಂಡೆನು |

ಜಾಲಗಾರನ ಜಾಲ ದಾಟಿ ನಿಮಗ ಕಂಡೆನು |

ಎಂದಿಗೂ ಬೀಳಬಾರದು ಹಿಂಥಾ ಕನಸಾ

ಹಿಂಥಾ ಕನಸಾ ||1||

ಜಾತಿ ಪಂಗಡ ನೋಡಿ ದಂಗನಾದೇನು |

ಭೀತಿ ಬೈಲ ತ್ರೀರಂಗ ಕಂಡೇನು |

ಭಾರತ ಮಾತಾ ಜ್ಯೋತಿ ಪ್ರಕಾಶ

ಜ್ಯೋತಿ ಪ್ರಕಾಶ ||2||

ಕಲಂಕಿ ಕೌತುಕ ಏನು ಅರಿಯೆನು |

ಪಂಡಿತ್ರ ಲೆಕ್ಕ ಕೇಳಿ ಘಾಬ್ರಾದೇನು |

ಮಹಾಪ್ರಭುನ ಮೇಲೆ ಒಂದೇ ಧ್ಯಾಸ

ಒಂದೇ ಧ್ಯಾಸ ||3||

ಜ್ಞಾನಿಗಳಿಗೆ ಇದಿ ಕಾಡುವದು ನಿಜವು |

ಅಜ್ಞಾನಿ ಬಾಲಕರಿಗಿ ಪ್ರಭೂನ ಬಲವು |

ಬಾಲತ್ವ ಮುಪ್ಪತ್ವ ಒಂದೇ ದಿನಸ

ಒಂದೇ ದಿನಸ ||4||

ಅನಾಹತ ಘಂಟಿ ನಾದ ಚಿತ್ತ ಇಟ್ಟೇನು |

ಶ್ರೀಮಂತ ಬಲವಂತ ಧುನಿ ಸುಟ್ಟೇನು |

ಭಾರತ ಸೇವಾದೊಳು ದೇವಿದಾಸ

ದೇವಿದಾಸ ||5||

ಹಿಂಗಾದ ನೋಡೊ ಮುಕ್ತ |

ಆ ಸಂಗನ ಶರಣ ಪರಮ ವಿರಕ್ತ ||ಪಲ್ಲವಿ||

ಹಿಂಗಾದ ನೋಡೊ ಮುಕ್ತ |

ಪರಜಂಗಮ ಸೇವಕ ಭಕ್ತಾ |

ಅಂಗಲಿಂಗ ಮಹಾಸಮರಸ ಗೈದು |

ಮಂಗಳ ಮೂರ್ತಿ ಮಹಾಲಿಂಗ ತೃಪ್ತ ||1||

ಜಾಗ್ರ ಸ್ವಪ್ನ ಸುಷುಪ್ತಿ ತ್ರಿಭೂತ |

ಪಂಚಾಂಗದ ಗುಣಗಳು ಪಂಚಕೃತ ನಿಶ್ಚಿಂತ ಅರ್ಪಿತ |

ಸಂಚಿತ ಕ್ರಿಯ ಮನ ಹಂಚಿಕಿ ಹಾಕಿದರೆ |

ಮುಂಚಿನ ಬರಿ ಪ್ರಾರಬ್ಧ ತಪ್ಪದೋ |

ಪಂಚಾಂಗದವರಿಗಿ ಪ್ರಪಂಚ ತಿಳಿಯದು |

ಪಾರಮಾರ್ಥ ಬಲ್ಲವ ಅದ್ವೈತ ||2||

ಪ್ರಪಂಚಕ್ಕೆ ಸುವರ್ಣ ಸೇವಿತ |

ಪಾರಮಾರ್ಥಕೆ ಪಂಚಿಕರಣದ ಜ್ಞಾನಸೇವಿತ |

ಜ್ಞಾನಿಗಳಿಗೆ ಇದಿ ಕಾಡುವದು ನಿಜವು |

ಅಜ್ಞಾನಿಗೆ ಶಿವನ ಬಲವು |

ಹೊರಗ ಹಿರಿಯನಾಗಿ ತಿರುಗೇನಂದ್ರ ಇಲ್ಲ |

ಅಂತರ ಜ್ಞಾನ ಗುರು ಭಜನಿಯ ಸುಪ್ತ ||3||

ಸಾವಿರ ಮೇಲೆ ಅಕ್ಷರ ಐವತ್ತ |

ಗುರು ತಿಳಸಿದ ಮೇಲೆ ಪರಬ್ರಹ್ಮ ನಿಜ ಬೈಲ ಶಾಶ್ವತ |

ಸತ್ಯದ ಗುರು ಒಲಿಯುವತನಕ |

ಮಿಥ್ಯಾ ದಾವುದು ತಿಳಿವಲ್ದು ನಿಲುಕ |

ಸತ್ತು ಇದ್ದು ಬಾಯಿ ಬಿಡುವ |

ಸಿದ್ಧಗ ಸಾಯಾ ಆಗಿ ಅನುಸೂಯ ದತ್ತ ||4||

ಜ್ಞಾನ ಮೌನ ಧಾನ್ಯವಿಲ್ಲದೆ |

ಚಿನ್ನ ಆಗುವದೇ ಹೇಮ ಆಗುವದೇ ||ಪಲ್ಲವಿ||

ಮೂರು ಮಾತಿನಲ್ಲಿ ಸಿಲುಕಿ ಭೂಮಿ ಅಗಳುವ |

ಆರು ಅಕ್ಷರ ಜತಿಯವಿಲ್ಲದೆ ಬಲ್ಲಂಗೆ ಬೊಗಳುವ |

ಉರಿಯ ಹಸ್ತ ವರವು ಪಡಿಲಾರದೆ ಭಸ್ಮ ಆಗುವದೆ |

ಹೇಮ ಆಗುವದೇ ||1||

ಪ್ರೇಮಭಕ್ತನ ನೇಮ ನೋಡಿ ಬ್ರಹ್ಮ ಬರುವನು |

ಹೇಮ ಹೀರಾ ಕಾಣುವಂತೆ ಕಣ್ಣ ತೆರೆದನು |

ಕಣ್ಣಿನ ಪರಿ ಎತ್ತಲಾರದೆ ಜ್ಯೋತಿ ಕಾಣುವದೇ |

ಮುತ್ತು ಕಾಣುವದೇ ||2||

ನೀನೇ ಎಂಬ ಭಾವವಿಲ್ಲದೆ ಸೇವೆ ಸಲ್ಲದೆ |

ನಾನೇ ಎಂಬ ಜಪತಪ ಯೋಗ ನಿಶ್ಚಲ ಆಗದೆ |

ಮೂರು ಕುಟ್ಟಿ ಭಟಿ ತೆಗಿ ಸಿದ್ಧ ಕಾಣುವದೇ |

ಸಿದ್ಧ ಸಾರು ಅದೇ ||3||

ಈ ದೈವ ದೇವ ಭವ ಜೀವ |

ಭಾವ ಕೊಡಿಸು, ಉಪದೇಶ ಪಡಿಸು ||ಪಲ್ಲವಿ||

ಏಕ ತಿಳಿದ ಲೋಕದೊಳು ಮೂಕನಾದೇನು |

ದೋನ ಅಳಿದು ದೀನ ದುನಿಯಾ ಪಾರನಾದೇನು |

ತೀನ ಎಂಬ ರಜ ತಮ ಸತ್ವ ಧರಿಸು |

ಈ ಮಾಯಾ ಮರಿಸು ||1||

ಸ್ಥೂಲ ಸೂಕ್ಷ್ಮ ಕಾರಣ ಮಹಾಕಾರಣ ನಾಲ್ಕು |

ಪಂಚಪ್ರಣಮ ತಿಳಿವದು ಗುರು ಪಾದ ನಿಲುಕು |

ಷಡಕ್ಷರ ಮಂತ್ರ ಗುರುಮುಖ ಕಿವಿಯೋಳು ಸೇರಿಸು |

ಸವಿನಾಮ ಭಜಿಸು ||2||

ಸಪ್ತ ವ್ಯಸನ ಕಟ್ಟಿದವನೇ ಮುಕ್ತನಾದನು |

ಅಷ್ಟಮಸಿದ್ಧಿ ದುಡಿದು ಗಗನ ನಾದ ಕೇಳಿದನು |

ನವಲಿಂಗ ಪೂಜಿಯೊಳು ಪರಬ್ರಹ್ಮ ಶÉೂೀಧಿಸು |

ಗುರು ತೀರ್ಥ ಸೇವಿಸು ||3||

ದಶವಿಂದ್ರಿ ಜಾಲ ಬಿಜಲಿ ಬತ್ತಿ ಸುಟ್ಟು ಇರುವದು |

ಜಪ್ಪಿಸಿ ನಡಿ ಮುಟ್ಟಿದರೆ ಸತ್ತು ಹಾರುವದು |

ನಿರ್ಬೈಲ ತಿಳಿದು ದೇವಿದಾಸನ ಭಜನಿ ನೆನಸು |

ನೋಡು ನಿನ್ನ ಮನಸು ||4||

ಏನ ಸೋಜಿಗ ತಂಗಿ ಏನ ಸೋಜಿಗ |

ಈ ರಾಜಸಭಾ ಗವಾಯಿ ನಡದದ ಏನ ಸೋಜಿಗ ||ಪಲ್ಲವಿ||

ಎನಗ ಕಣ್ಣಿಗಿ ಕಾಣವಲ್ಲರು ಗಾಯನ ಮಾಡುವವರು |

ನಿನಗ ಕಾಣೇ ಬರುವದೇನು ಸಾರಂಗ ಬಡಿಯುವರು |

ಈ ದೇವಿಮಂದಿರ ಬಂದು ಕಂಡೆವು ರಾಜಯೋಗ

ಇಂಥ ರಾಜಯೋಗ ||1||

ಇಕೋ ಹುಲಿಗಿ ಕುರಿ ಬೆನ್ನ ಹತ್ತೇದ ಏನ ಕಾರಣ |

ಅಕೋ ಬೇಲಿ ತೋಟ ಮೈಕೋತ ನಡದದ ಹೆಂಥ ದಿನಮಾನ |

ನೋಡ ಕಟಗಿಗಿ ಅಂಜಿ ಕಬ್ಬಿಣ ನಡದದ ಭೂಮಿಯೊಳಗ

ಭೂಮಿಯೊಳಗ ||2||

ದಿನಮಾನ ಛಂದಿಲ್ಲ ಅನುಬ್ಯಾಡ ಅಕ್ಕ ಚೌದ ಭರ್ತಿಗ |

ಬಾವನ್ನ ರಾಜರು ಬರುವರಿನ್ನ ಬೀದರ ಕ್ವಾಟಿಗ |

ಖಿಲೆದ ಕಲ್ಲು ಬಿಚ್ಚಿ ಒಯ್ಯತರ ಕೆರಿ ಪಾಳಿಗಾ

ಕೆರಿಪಾಳಿಗಾ ||3||

ಕರಿ ಮಲ್ಲಿಗಿ ಗಿಡ ಚಿಗಿತು ವಿದ್ಯಾ ಬೆಳಿತಮ್ಮ |

ಕಲ್ಲು ಕೋಳಿ ಕೂಗದು ನಿತ್ಯ ದನಿ ಕೇಳಮ್ಮ |

ವಿದ್ಯಾ ಹೆಚ್ಚು ಬುದ್ಧಿ ಕಡಿಮೆ ಅನುಭವದಾರಿಗಾ

ಹೇಳಲಿ ಯಾರಿಗ ||4||

ಹೋಳಿಗಿ ಮಾಡದು ಬಿಟ್ಟು ಹೋದೆವು ನೆನಪ ಇಡಬೇಕ |

ನಾಳಿಗಿ ಅನಬ್ಯಾಡ ಧರ್ಮಾ ನೀಡು ಭಾರತ ಸೇವಕ |

ಗಾಳಿಗಿ ಮಾತನಾಡಿ ದೇವಿದಾಸನ ಭಜನಿಗಾ

ದೇವಿದಾಸನ ||5||

ಎಂಥಾ ಕವತೂಕ ಗೆಳೆದೆಮ್ಮ |

ಸದ್ಗುರುವಿನ ಭಜನಿ ನಾಮ ಸ್ಮರಣಿದಾಗ ಉಳಿದೆಮ್ಮ ||ಪಲ್ಲವಿ||

ಮಾಡಿಕೊಂಡವನಿಗಿ ಕೊರಳು ಕೊಟ್ಟಿ |

ಈ ಮಂದಿಗಿ ತೆಲಿ ಕೊಟ್ಟಿ |

ಗುರುವಿನ ಶಬ್ದಕ ಕಿವಿಯ ಕೊಟ್ಟಿ |

ಪಂಚರಂಗದ ಸೀರಿ ಕಳಿದ ಇಟ್ಟಿ ||1||

ಮೂರು ಗುಣ ತಿಳದಿ ಸತ್ಯಮ್ಮ |

ನೀ ಎಂಬೊ ಪಿಡಿದು ನಾ ಎಂಬೋ ಹೆಮ್ಮೆ ಸೋತೆಮ್ಮ |

ತಾಯಿ ತಂದಿ ಮನಿ ಮನಸಿಗಿ ತೊರದಿ |

ಅತ್ತಿ ಮಾವನ ಮನಿ ತಟ್ಟಿ ತೆರದಿ |

ಬುಟ್ಟಿ ವಸ್ತಾ ಉಚ್ಚಿ ಬೂದ್ಯಾಗ ತುಳದಿ |

ಭೀಟಿ ನತ್ತ ಮೂಗು ಜ್ವಾಕಿ ಮಾಡದಿ ||2||

ಬೈಲು ತವರೂರಿಗಿ ಹೋದೆಮ್ಮ |

ಆ ಪಂಚಮಿ ದಿನ ಆ ನಾಗಣ್ಣಗ ಹಾಲೆರೆದಮ್ಮ |

ದತ್ತಧೂತ ಅವಧೂತನ ಪತ್ನಿ |

ಎತ್ತ ನೋಡಿದತ್ತ ತಾಯಿ ತಂದಿ ಮನಿ |

ಚಿತ್ತು ಇಟ್ಟು ಸದಾ ದತ್ತ ನೆಂಬಿದರೆ |

ದತ್ತಕ ಬಂತು ಸಿದ್ಧ ಶಿವನ ಧೂಳಿ ||3||

ಬೈಲಾಟ ನೋಡಾನು ಬರ್ರಿ ಭೇದಗಳಿರ್ಯಾ |

ಸೈಲಾಟದ ತಿಕೀಟ ಮಾಫಿ ಇಟ್ಟಾರ ಸೋಧಗಳೀರ್ಯಾ |

ನಾಲ್ಕು ಕಂಬ ಅಡ್ಡ ಕಟ್ಯಾರ ನಾದಗಳಿರ್ಯಾ |

ಮೇಲ ಆರ ಹಲಗಿ ಹಾಸಿ ಇಟ್ಟಾರ ಜ್ಞಾನಿಗಳಿರ್ಯಾ ||ಪಲ್ಲವಿ||

ಹತ್ತ ಮಂದಿ ನಾದ ಒಂದೇ ರಾಗ ಥಾಟಾ |

ತಮ್ಮ ಅತ್ತ ನೋಡು ಬಾರತಂತಿ ಪಿಟೇಲಿ ಬಿಗಟಾ |

ಗೊತ್ತು ಮಾಡು ಸೋಳ ಮಂದಿ ಸೋಂಗಿನ ಮುಗಟಾ |

ಮತ್ತ ಇತ್ತ ನೋಡು ಡಪ ತಾಳಾಕ ಇಬ್ಬರ ಏಕಟಾ ||1||

ಹಜಾರ ಮಂದಿ ಕುಂತಾರ ನೋಡು ಆಟ ನೋಡದಕ |

ಬಾಜಾರ ಬಂದ ಆಗ್ಯಾದ ಇವತ ಆಟದ ಸಲ್ಯಾಕ |

ಸಾರಥಿ ಬಂದು ಪರದಾ ಎತ್ಯಾರ ಗಲಿಪ್ಯಾ ಬರುವದಕ |

ಅತ್ತ ಗಲಿಪ್ಯಾ ಬಂದ ನೋಡು ತಮ್ಮ ತ್ರಿಲೋಕ ಪಾಲಕ ||2||

ಕುಂತ ನೋಡು ರಂಗರೂಪಾ ನೆರಳಿಲ್ಲ ಆತನ |

ಹಂತಾ ಗವಳಗಿತ್ತಿ ಹಾಲಮೊಸರ ಬೆಣ್ಣಿ ತಿಂತಾನ |

ಹೆಂಥಾ ಆಟ ನೋಡ ತ್ರಿಲೋಕ ಆತನ ಸ್ವಾಧೀನ |

ನಿಂತ ನೋಡಿ ದೇವಿದಾಸ ಹುಚ್ಚ ಆಗಿ ಕುಂತಾನ ||3||

ಕಟ್ಟಿದಲ್ಲೆ ಕದ್ದೊಯ್ದನವ್ವ ಹೋರಿ |

ಅದರ ಗುಣ ಇತ್ತ ಭಾರಿ ||ಪಲ್ಲವಿ||

ಹೆಂಥ ಕಳ್ಳ ಕದ್ದೊಯ್ದನ ಹೋರಿ |

ಅಟಂತ ಇಲ್ಲ ತಿರಗಿ ಬಂದ ಏಳಹರಿ |

ಸಂತಪುರ ಗೌಡಗ ನಿಂತ ಹೇಳಿದ್ರೆ |

ನಾಕ ಮಂದಿಗಿ ಕೊಟ್ಟ ಅಂವ ಮಜಕೂರಿ ||1||

ಸ್ವಾದಿಷ್ಟ ಪಟ್ಟಣ ಕಚೇರಿಗಿ ಹೋಗಿದ |

ಆರು ಮಂದಿಯ ಅಮೀನ್ರು ನೆರೆಸಿದ |

ಹತ್ತು ಮಂದಿ ಕುಪೆದವರು ತಪಾಸೇಕ |

ಬಾರ ಮಂದಿ ಕಾರುಕೋನ್ರು ಗಾಬರಿ ||2||

ಕಟ್ಟಿ ಮೈದು ಬೆಳಿ ಮುಟ್ಟಲ್ದು ಹೋರಿ |

ಸೀರಿ ನೋಡಿ ತೆಳಗ ಮಾಡಿತೋ ಮೋರಿ |

ದರಕಾಸ್ತ ಕೊಟ್ಟ ಈ ಸುದ್ದಿ ಕಚೇರಿ |

ಸೋಳಾ ಮಂದಿ ನವಾಬ್ರು ಸವಾರಿ ||3||

ಎಷ್ಟು ಹುಡುಕಿದರೆ ಸಿಗುವಲ್ದು ಹೋರಿ |

ಮುಟ್ಟಿಸಿನ ಸುದ್ದಿ ರಾಜನ ದರ್ಬಾರಿ |

ರಾಜ ಪ್ರಾಧಾನಿ ಕೂಡಿ ಶೋಧ ಮಾಡೋಸ್ಥನ |

ಚುಕ್ತ ಕಚೇರಿದು ಪಗಾರ ಬಂದ್ರಿ ||4||

ಚಕ್ರ ಪಟ್ಟಣದಿಂದ ಹಜಾರೋ ಮಿಲಿಟ್ರಿ |

ಪತಾ ಇಲ್ಲ ತ್ರಿಭುವನ ಎಷ್ಟುರ್ರಿ |

ರಾಜಾ ಪ್ರಧಾನಿ ಕೂಡಿ ವರ್ಣ ಕೇಳಿದಾರೋ |

ಕೆಂಪು ಹಸುರು ಬಿಳಿ ಬಣ್ಣದ ಹೋರಿ ||5||

ನಿರಾಶ ಆಗಿ ಸೋತ ಕುಂತರಿ |

ದೇವಿದಾಸನ ಭಜನಿಗಿ ಹೋಗ್ರಿ |

ಒಮ್ಮಿದೊಮ್ಮೆಲೇನಾದ ಬ್ರಹ್ಮದೊಳು |

ಎದುರು ಬಂದು ನಿಂತು ಮನಮೋಹದ ಹೋರಿ ||6||

ಎಂಥಾ ಆಕಳ ಕೊಟ್ಟರ ನಮ್ಮ ತವರವರು |

ಇದರ ಅಂತ ಹತ್ತಲಿಲ್ಲ ಮಲಿ ಅವ ಆರು |

ಚೊಚ್ಚಿಲ ಒಂದೇ ಇರುವದಲ್ಲಾ ಹೋರಿಗರು |

ಅದು ಭಂಡಿ ಮೊಟ್ಟಿಆರ ನಡಿತದ ಬೆಲ್ಲದ ಹೇರು ||ಪಲ್ಲವಿ||

ಆರ ನಡಿದು ಬಂದ ಮಲಿ ಕುಡಿತಾದ್ರಿ |

ಒಂದು ಮಲಿ ನೋಡಿಕೊಂಡ್ರ ಹರಿ ತುಂಬ್ಯಾದ್ರಿ |

ಮತ್ತೊಂದು ಮಲಿ ಬಾರಾಮಹಿನೆ ಸೋರತಾದ್ರಿ |

ಈ ಹಾಲಿನೊಳು ಮೂರು ಲೋಕ ಮುಣಗ್ಯಾದ್ರಿ ||1||

ಮೂರನೇ ಮಲಿ ಹಾಲ ಶಿವನಲ್ಲಿ ಸೇರ್ಯಾದ್ರಿ |

ಹಾಲ ಹೆಚ್ಚಿಗಾಗಿ ಗಂಗಿ ಮುಖ ಕಾರ್ಯಾದ್ರಿ |

ನಾಲ್ಕನೆ ಮಲಿ ಭೂಮಿಯೊಳು ಊರ್ಯಾದ್ರಿ |

ಆದಿಶೇಷನ ಬಾಯದೊಳಗಿಂದ ಹಾಯ್ದಾದ್ರಿ ||2||

ಐದನೆ ಮಲಿ ಹಾಲ ರುಚಿ ಅಮೃತ ಅದರಿ |

ಅಕ್ಕ ನಾಗಮ್ಮ ಕೊಂಡು ಆದಳು ಗಂಡನಿಲ್ಲದೆ ಬಸುರಿ |

ಬಸವಣಪ್ಪ ಒಳ್ಳಿ ಇಟ್ಟಿದಾರೋ ಹೆಸರು |

ಚೆನ್ನಬಸವ ಹುಟ್ಟಿಬರುವ ಕಲ್ಲಿನ ತೇರು ||3||

ಆಕಳ ಹಣೆ ಮಂದಿರದೊಳು ಬ್ರಹ್ಮದೇವರು |

ಅದರ ಹೊಕ್ಕಳದೊಳಗೆ ಕುಂತರ ವಿಷ್ಣುರುದ್ರರು |

ಹಾಲಿಗಾಗಿ ಕುಂತರ ದೇವ ದೇವತರು |

ನಮ್ಮ ಸಿದ್ಧನ ಪ್ಯಾಲ್ಯಾಗಿರುವ ಹಾಲಿನ ಸಾರು ||4||

ಹಾಲು ಕೊಂಡಿದ ಹೋರಿ ಶಾಸ್ತ್ರ ಬರದದರಿ |

ಕಾಸಿಖಾಂಡ ಪುರಾಣದೊಳು ಸೇರ್ಯಾದ್ರಿ |

ಕೂಸಿನಂತೆ ಇದ್ದವಗ ಹಾಲ ದೊರತ್ಯಾದ್ರಿ |

ನಮ್ಮ ದೇವಿದಾಸನ ಪದ ಹಾಲಿನ ಧ್ಯಾಸರಿ ||5||

ಕೈಲಾಸ ಈಶ್ವರ ದೇವತ್ರ ಸಭಾದೊಳು ಮಾನ ಆಗಿಲ್ಲ ಎನಗಾ |

ವ್ಯಾಸ ಮುನಿ ಬಂದ್ರು ಸಿಟ್ಟಿಲಿ ಹೊರಗಾ ||ಪಲ್ಲವಿ||

ಯಜ್ಞಾ ಪವಿತ್ರಕ್ಕಾಗಿ ಮೂರ್ತಿ ತೀರ್ಥ ಕೊಡಲಿಲ್ಲಾ ನೀವು ಎನಗಾ |

ಸುಜ್ಞಾನದಿಂದ ತ್ರಿಮೂರ್ತಿ ರೂಪ ಹುಟ್ಟಿಸುವೆ ಭವದೊಳಗಾ |

ಕಣ್ಣ ಸಿಳ್ಳು ತೆಗೆದು ಮಣ್ಣ ಕುಳ್ಯಾಗ ಇಟ್ಟು ಜಪ ಮಾಡಿದ ಆಗ |

ರೂಪಾ ಚಿಗದು ಬಂತು ಮ್ಯಾಗ ||1||

ಅಂಗಲಿಂಗ ಏಕ ಆಗಿದ ಜ್ಞಾನವು ಎಷ್ಟು ವರ್ಣಿಸಲಿ ಈಗ |

ಸಂಗ ಸಂಭ್ರಮದಿಂದ ಮೊಳಕಿ ದೊಡ್ಡದು ಆಗಿ ಟೆಂಗ ಆಗಿತು ಮ್ಯಾಗ |

ಸಂಗನ ಶರಣರು ಟೆಂಗಿನ ತೀರ್ಥ ಖರೆ ಕಬೂಲ ಬಿಟ್ಟಿದರು ಆಗ |

ವ್ಯಾಸ ಮುನಿ ಸಿದ್ಧ ಭಜನ್ಯಾಗ ||2||

ಎಂಥಾ ಸೋಜಿಗ ಕಂಡಾ |

ಕೇಳಿದವರಿಗಿ ಭಂಡಾ ||ಪಲ್ಲವಿ||

ಮಾತಾಪಿತಾ ಸತ್ತಿರು ಖಾಸಾ |

ಸತ್ತು ಆಯಿತು ಬಾರಾವರ್ಷಾ |

ಹುಟ್ಟಿತಪ್ಪ ಅವರಿಗಿ ಕೂಸಾ |

ಕೋಟಿ ವರ್ಷ ಪಡೆದಿತು ಆಯುಷ್ಯಾ ||1||

ನ್ಯಾಯ ಮಾಡರಿ ಅನುಭಾವಿಕರು |

ನ್ಯಾಯದೊಳು ವಯ ಹೋದವರು |

ನ್ಯಾಯ ತಿಳಿದು ಹೌದು ಅನುಹುವರು |

ನ್ಯಾಯದ ಪದ ಸಿದ್ಧ ಬರದಿದರು ||2||

ಶ್ರೀಯುತ ಸಭಾ ಸಜ್ಜನರಿಗಿ ಶರಣು |

ಇರಲಿ ದಯಾ ಕರುಣ |

ಈ ಪದದ ಅರ್ಥ ತಿಳಿದವರಿಗೆ |

ಇಲ್ಲಪ್ಪ ಮರಣ ||ಪಲ್ಲವಿ||

ಬಲ್ಲಂತ ಜ್ಞಾನಿಗಳು ಚಿತ್ತ ಇಡರಿ |

ಶಾಣೇರ ಓದಿ ಬರದವರಾ |

ಶಾಣೇರಂಥ ಕೇಳತಿನಿ ಮೂಲ ಜ್ಞಾನದ ವಿಚಾರ |

ನಾನೇನು ಹೇಳಲಿ ಒಂದು ದಿವಸ |

ಚಮತ್ಕಾರ ಕೇಳರಿ ಪಂಡಿತರಾ |

ಸುಳ್ಳಲ್ಲ ಅರ್ಥ ಇದು ಕುಬಂಡ ಶಾಸ್ತ್ರದ ಆಧಾರ |

ಶಿವಪುರ ಗ್ರಾಮದೊಳಗ |

ಶ್ರೀಪಂತ ಭಟನ ಮನಿದೊಳಗ |

ಶುಭಕಾರ್ಯ ನಡದಿತು ಜೇಷ್ಠದೊಳಗ |

ಹಾಲ ಮೊಸರ ತಾ ಎಂದು |

ಕಳುವ್ಯಾನ ಒಬ್ಬ ಮನುಷ್ಯಾಗ |

ಆ ಮನುಷ್ಯ ನಡೆದ ಲಗಬೇಗ |

ಊರ ಬಿಟ್ಟು ಹರದಾರಿ ಮ್ಯಾಗ |

ಒಂದು ವಿಚಿತ್ರ ಕಂಡ ದಾರ್ಯಾಗ |

ಹಾಂವ ಹದ್ದಿನ ಝಗಡ ಬಿದ್ದಿತಪ್ಪ ಹಾದ್ಯಾಗ |

ಆ ಮನುಷ್ಯ ಅಂತನ ಆವಾಗ |

ಹಾಂವ ಹದ್ದಿನ ಝಗಡ ಅಡವ್ಯಾಗ |

ಬಿಡಿಸುವವರು ಯಾರು ಇವರೀಗಾ |

ಈ ಝಗಡ ಬಿಡಿಸಿದರೆ ಪುಣ್ಯ ಬರುವುದು ಎನಗ |

ಅವು ಎರಡರ ಝಗಡ ಬಿಡಸಿದ |

ಅಂತಃಕರುಣ ಉಳಸಿದ ಪ್ರಾಣ ||1||

ಆ ಸರ್ಪ ಹೋಗಿ ಕುಂತಿತು ಹುತ್ತಿನ ಒಳಗ |

ಮಾರಿ ಮಾಡಿ ಮ್ಯಾಗ |

ಬಾಯಿ ಬಂದಿದ ಅನ್ನ ಬಿಡಸ್ಯಾನ ಘಾತಕ ಎನ್ನಗ |

ಖೂನ ಇಟಕೊಂಡು ಜಪ್ಪಸಿ ಕುಂತಿತು |

ಹುತ್ತಿನ ಒಳಗ ರಂಜ ಮನದೊಳಗ |

ತಿರುಗಿಸಿ ಬರುವಾಗ ಮುಟ್ಟಬೇಕು ಅವನಿಗಾ |

ಆ ಹದ್ದ ಕುಂತಿತು ಸಮೀಪ ಗಿಡದ ಮ್ಯಾಗ |

ಯೋಚಿಸಿ ಮನದೊಳಗ |

ಯಾವಾಗ ಸರ್ಪ ಇದು ಬರುವದೆಂದು ಬೈಲೀಗಾ |

ಆ ಮನುಷ್ಯ ಹೋದ ಕಲ್ಲೂರಿಗಾ |

ಹಾಲ ಮೊಸರ ಹೇಳಿದ ಗೌಳಗೇರಿಗಾ|

ತಿರಗಿಸಿ ಹೊಂಟ ಲಗಬೇಗಾ |

ಮನುಷ್ಯ ಕಂಡು ಸರ್ಪ ಬಂದಿತರಿ ಬೈಲೀಗಾ |

ಸರ್ಪ ಹಿಂಬಳಿ ಹತ್ತಿತು ಮನುಷ್ಯಾಗಾ |

ಹದ್ದು ನೋಡಿತಪ್ಪ ಹಾಂವಿಗಾ |

ಎತ್ತಕೊಂಡು ಒಯ್ಯತಪ್ಪ ಮ್ಯಾಗ |

ಹಿಂದ ಆಗಿದ ಸುದ್ದಿ ಗೊತ್ತಿಲ್ಲ ಮುಂದ ಹೋಗವಗ |

ಹಿಂದ ಹೊಂಟಿರು ಗೌಳಗೇರು ಬೇಗ |

ಹಾಲ ಮೊಸರು ಕೊಂಡು ತೆಲಿ ಮ್ಯಾಗ |

ಹದ್ದು ತೊಕೊಂಡು ನಡದಿತು ಹಾಂವಿಗ |

ಅದರ ಬಾಯಾಗಿ ವಿಷ ಬಂದು ಬಿತ್ತು |

ಹಾಲ ಮೊಸರಿನ ಒಳಗ |

ಆ ವಿಷ ಬಿದ್ದಿದು ತುಸು ತಿಳಿಯಲಿಲ್ಲ ಖೂನಾ |

ಇಲ್ಲರಿ ಅನುಮಾನ ||2||

ಎಂಟು ಬಡಿವದರೊಳಗ |

ಗೌಳಗೇರು ಬಂದರು ಊರೀಗ |

ಬ್ರಾಹ್ಮಣನ ಮನಿಗಾ |

ಹಾಲ ಮೊಸರ ಕೊಟ್ಟು ತಿರುಗ್ಯಾರ ತಮ್ಮ ಮನಿಗಾ |

ಬ್ರಾಹ್ಮಣ ಮನಿದೊಳಗ |

ವನ ಭೋಜನ ಇತ್ತರಿ ಆವಾಗ |

ಕೇಳರಿ ಈಗ ನೀವು ಬೇಗಾ |

ಅಷ್ಟು ದಿಕ್ಕಿನವರು ಬಂದು ಇಳದಾರ ಆ ಪಂತಿಗಾ |

ನೂರಾರು ಮಂದಿ ಬೀಗ ಬೀಗರಾ ಕುಂತಾರಪ್ಪ ಪಂತಿಗಾ |

ಬ್ರಾಹ್ಮಣನ ಮನಿದೊಳಗಾ |

ಹಾಲ ಮೊಸರ ಸುರದಾರೊ ಅಳ್ಳಿಟ್ಟು ಅವಲಕ್ಯಾಗ |

ಉಂಡಕ್ಷಣಕ ಅವರು ಉರಳ್ಯಾಡ್ಯಾರೊ |

ಅಂಗಳದೊಳಗ ಸೋಜಿಗ ಎಲ್ಲರಿಗಾ |

ಒಂದ ಘಳಗಿದಾಗ ಪ್ರಾಣ ಬಿಟ್ಟರ ಎಲ್ಲರು ಆವಾಗ |

ಇದು ಅಗಾಧ ಮಾತು |

ನ್ಯಾಯ ಬಂತು ಬಯಲಿಗಾ |

ರಾಜ ರೈತರೀಗಾ |

ಬ್ರಹ್ಮ ವಿಷ್ಣು ಮಹೇಶ್ವರ ನ್ಯಾಯ ಕುಂತಾರ ಆವಾಗ |

ನಾ ಕೇಳುವೇನು ಗುರುಪುತ್ರರಿಗಾ |

ಖರೆ ತಿಳಿದರ ಹೇಳರಪ್ಪ ನನಗಾ |

ಜುಲುಮ ಜಾಸ್ತಿ ಇಲ್ಲರೆಪ್ಪ ನಿಮಗಾ |

ಯಾರು ಅರಿಯದ ಮಾತು ದೋಷ ಯಾರ ಪದರಾಗ |

ಈ ದೋಷ ಯಾರ ಪದರಾಗ |

ಆಯಿತೇನಪ್ಪ ಆ ಮನುಷ್ಯಾಗ ಗೌಳಿಗ್ಯಾಗ |

ಹದ್ದು ಹುತ್ತು ಹಾಂವು ಎರೆಡು ಪ್ರಾಣೀದೊಳಗ |

ಈ ದೋಷ ಯಾರ ತೆಲಿಮ್ಯಾಗ |

ಆಯಿತೇನಪ್ಪ ಆ ಮನುಷ್ಯಾಗ |

ಕರಲಿಪಿ ಕವಿಗಳು ಕಟ್ಟಿ ಹಾಡಿದರಣ್ಣ |

ದೇವಿದಾಸನ ಪದ ತಿಳಿ ಅಣ್ಣ ||3||

ಸ್ವತಂತ್ರಕ ಯಾವದು ಚಿನ್ಹವುಂಟು |

ಪರತಂತ್ರಕ ಯಾವದು ಬಣ್ಣವುಂಟು |

ನಾನೆಂಬುದು ಅಳಿದರೆ ಎಂಟು |

ಸಾಂಬನೊಲಿದು ಕೂಡುವನು ತನಗಂಟು ||1||

ಕಣ್ಣಿಗಿ ಕಾಣದು ರೂಪವೆಲ್ಲಾ |

ಸಣ್ಣಾಗಿ ತಾನೆ ಆಗದು ಬೈಲಾ |

ನಿಂದ್ಯಾ ಮಾಡವರೇನು ಗೆದ್ದಿಲ್ಲಾ |

ಒಂದನಿದವರು ಬಿದ್ದಿಲ್ಲಾ ||2||

ಸ್ವತಂತ್ರ ಇದ್ದವರು ನೀಡಲಿಲ್ಲಾ |

ಪರತಂತ್ರದ ವರ ನೀಡಗುಡಲಿಲ್ಲಾ |

ಬದ್ಧ ಗುಣದ ಭವಿ ಹಂಬಲ |

ಸಿದ್ಧ ಉಪದೇಶ ಕೊಡು ಹಿಂಬಾಲ ||3||

ಚಲತಿ- ಹರಿವಾ ನೀರಿನ ಕಾಲ ಎಣಸಯ್ಯಾ |

ಉರಿ ಘಾಳಿಗೆ ಕೈ ಕಾಲ ಏಸಯ್ಯಾ ||

ನಡಿ ನುಡಿ ಇಲ್ಲದ ಹುಡುಗ ನೀನು |

ಬಡ ಬಡ ಬಲ್ಲಂಗ ಬಡಿವಾರ ಆಡಿ |

ಗಡಗಿ ಬಿಟ್ಟು ಅಡಗಿ ಎಲ್ಲಿ ಉಂಡಾ |

ಸುಡಗಾಡು ಸೇರಲಿ ಸಗುಣ ನಿರ್ಗುಣ |

ಎಲ್ಲಿ ತಿಳಕೊಂಡಾ |

ಸುಡಲಿಲ್ಲ ಮಡಕಿ ಬಾಜಾರದೊಳು |

ಕುಂತನ ಇಟಕೊಂಡಾ ||ಪಲ್ಲವಿ||

ಒಳ್ಳೆ ಪದ ಹಾಡಿದರೇನು |

ಸುಳ್ಳೆ ಸಿನಗಾರ ಮಾಡಿದರೇನು |

ಮಳ್ಳೆ ಅನುವರು ಮಡಕಿಗೆ ಕಂಡಾ |

ಕಳ್ಳೆ ಅನುವರು ಹುಡುಗನ ಕಂಡು |

ಹುಡಗಿ ತಿಳಕೊಂಡಾ |

ಹಳ್ಳಿಯವರು ಶಾಣ್ಯಾ ಅಗ್ಗದ ಗಡಗಿ |

ಹಿಗ್ಗಿಲ ಎನಗಂಡಾ ||1||

ಸಿಟ್ಟಿಗಿ ಬರಬ್ಯಾಡ ಸುಟಕೋ ಗಡಗಿ |

ಮಟಕರ ಧಾವತಿ ಈ ಸಂಸಾರ |

ಬಿಟ್ಟಿಗಿ ಬಂದಿಲ್ಲ ತತ್ವದ ಪದಗುಂಡಾ |

ಸೋಳ ಸಾವಿರ ಹೆಚ್ಚಾಗಲಿ

ಹಚ್ಚರಿ ಒಂದು ಝಂಡಾ |

ಬಹುಳ ಶಂಕರ ಮೇಳದಲ್ಲಿ |

ಕೂಡಿ ಕಲಕೊಂಡಾ ||2||

ಹುಡಗಿ ಎಂಕಮ್ಮ ಹುಡುಗಗ ಬೈದು |

ಗಡಗಿ ಇಲ್ಲದ ಅಡಗಿಯ ಉಂಡು |

ಧೋತರ ಕಳದು ನೆತ್ತಿಗಿ ಸುತಕೊಂಡ |

ಸೆಳವಿಗಿ ಬಿದ್ದರೆ ಕಾಯುವ ತಾನೇ |

ಹನ ಯಮನರ ಗಂಡ |

ಸಿದ್ಧನ ಮದ್ದು ತಿಂದವ ತಾನೇ |

ಬಯಲಿಗಿ ನಿಂತಕೊಂಡ ||3||

ಅಣ್ಣ ಬುದ್ಧಿ ಹೇಳೊ |

ನಿನ್ನ ಮಡದಿ ಸಣ್ಣ ಗುಣದವಳೊ ||ಪಲ್ಲವಿ||

ಲಿಂಗ ಧರಿಸಲಿಲ್ಲಾ |

ಜಂಗಮ ಪ್ರಸಾದ ಇಲ್ಲಾ |

ಹಂಗ ಹರಿದು ಮಾತ ಆಡುವಳೊ ||1||

ಗುರುವಿನ ಸೇವಾ ಇಲ್ಲಾ |

ಪಂಚಾಕ್ಷರ ಮಂತ್ರ ಇಲ್ಲಾ |

ಮುಂಚಿನ ಪರಿ ಒಣಕಿ ಎತ್ತವಲ್ಲಳೊ ||2||

ಅಕ್ಕ ಕೇಳು ಗುಣಮಣಿ |

ಚಿಕ್ಕಂದಿನಿಂದ ಸಾಕಿದ ಗಿಣಿ |

ಪಿಂಜರಿ ಕದವು ತೆರೆದು ಆಡುಸುವಳೊ ||3||

ದೋದಿ ಕುಪ್ಪಸ ತೆಗಿ ಅಂದ |

ಬೀದ್ಯಾಗ ಬಂದ ನಿಂತಳ ಛೆಂದ |

ಹಾದ್ಯಾಗ ತನ ಕುಪ್ಪಸ ಕಳದು ಒಗದಾಳೊ ||4||

ಅಹಂಕಾರ ಹೋಗಲಿಲ್ಲಾ |

ಕಿಂಕರ ಆಗಲಿಲ್ಲಾ |

ಶಂಕರ ಧ್ಯಾನಕೆ ಒಲ್ಲ ಅನುವಳೊ ||5||

ಚಾರ್‌ ಛೆ ದಸ್ ಬಾರ |

ಸೋಳ, ದೊ, ಏಕ, ಹಜಾರ |

ಮನಿಗಿ ದೀಪ ಹಚ್ಚಿ ಕತಲಗ ಕುಣಿವಳೊ ||6||

ಖರ್ಚು ಮಾಡಿದ ನೂರು |

ಮೂರೊರ ಮಳದ ಥೇರು |

ನೋಡಿ ನೋಡಿ ಥೇರಿನ ಧೋಬಿ ಮೂಗ ಮುರದಾಳೊ ||7||

ನಾರಂಜಿ ತೊರಿ ಮುಂದ |

ಪ್ರಭು ಗಾದಿ ಛೆಂದ |

ದೇವಿದಾಸನ ಪದ ಬೆಡಗಿಂದು ಹೇಳೋ ||8||

ಇಲ್ಲೆ ದೊರಿತವ್ವ ನತ್ತು |

ಕಳೆದು ದೊರಿತು |

ಮರವಿನಲ್ಲಿ ಮಾಯನಾಗಿ |

ಗುರುಮುಖ ವಚನಾದಿ ಬೆರಿತು ||ಪಲ್ಲವಿ||

ಭಕ್ತಿ ಜ್ಞಾನ ಸಂಗ |

ಮುಕ್ತಿ ಮಾರ್ಗ ಗಂಗಾ |

ಶಕ್ತಿ ಬೆಳಕಾಗಿ ಅವಗುಣ |

ಮುತ್ತ ಕಳಿತು ರಂಗಾ |

ಆರ ಅಕ್ಷರ ಮಂತ್ರ |

ಪಾರ ಸಾಧು ಸಂತ್ರ |

ಯೋಗಿ ಆದ ಬಳಿಕ |

ಭೋಗಿ ಮಾನ ಹೋದರ ಹೋಯಿತು ||1||

ಯೋಗಿ ಜ್ಞಾನ ಬಂತು |

ಭೋಗಿ ಗುಣ ಸತ್ತು |

ಅತ್ತಿ ಮಗಳು ನಗೆಯುತ |

ಹೋದರು ಸಾಧು ಆಯಿತು |

ಸಾಧು ಜಂಗಮ ಬಲ್ಲಾ |

ಬೋಧು ಲಿಂಗವಂತ ಅಲ್ಲಾ |

ತಿಳಿದು ನಿಜ ಬೈಲಿನೊಳು |

ನಿಜ ಬೈಲಾ ಸಿದ್ಧನ ಗುರುತು ||2||

ಚಲತಿ- ನತ್ತಿನ ಬೆಲಿ ತಿಳದಂವ ಭಕ್ತ |

ಮುಕ್ತ ಸೌದೆಗಾರ ಮುಕ್ತ ||

ನಾನೇ ಭಕ್ತ ಎಂತೆಂಬೋ ಹೃದಯ |

ಅದು ಇಲ್ಲಾ ಅದು ಇಲ್ಲಾ ||ಪಲ್ಲವಿ||

ಈ ದೇಹ ದಾರದು ತಿಳಿಲಿಲ್ಲಾ |

ವಯ ಹಮ್ಮಿನೊಳು ನಡಿತಲ್ಲಾ |

ಭಯವಿಲ್ಲಾ ತಿರುಗುವನ ಹಂತಿಲಿ ||1||

ಲಿಂಗವಂತರ ನಡಿ ನಡಿಲಿಲ್ಲಾ |

ಸಂಗನ ಸಂಗ ಕೂಡಲಿಲ್ಲಾ |

ಮಂಗ ಭಜನಿ ನಿಂದ್ಯಾ ಮಾಡುವ ||2||

ಬಾಯಿಲಿ ಹೊಲಸ ಬಿಡಲಿಲ್ಲಾ |

ನಾಯಿ ಹಂಗ ಬೊಗಳುವ ಖ್ಯಾಲಾ |

ಅಲ್ಲೇನು ಇಲ್ಲೇನು ಎಂಬೋ ಹೊಲಬಿನಲ್ಲಿ ||3||

ಧರ್ಮಾ ನೀಡವರಿಗಿನೀಡಗೊಡಲಿಲ್ಲಾ |

ಕರ್ಮಾದ ನ್ಯಾಯಾಕ ತಾನೇ ಮೊದಲಾ |

ವರ್ಮಾ ಸಿದ್ಧಗ ಆಡುವನ ಬದಿಲಿ ||4||

ಅಪಾರ ಪರಬ್ರಹ್ಮನ ವ್ಯಾಪಾರ ಮಾಡಿದ |

ಅಪರಂಪಾರ ಖರೀದಿ |

ಬಲು ವ್ಯಾಪಾರ ನಡದಿತು ಗರದಿ ||ಪಲ್ಲವಿ||

ನಾಲ್ಕು ಊರಿಗಿ ನಾಲ್ಕು ದುಕಾನ ಇಟ್ಟಿದ |

ದೊಡ್ಡ ಲೈನ ಬಾಜಾರದೊಳಗೆ |

ಎಕ ದೊರಿ ಬದಿಲಿ ರಕಮ ತಂದಿದಾ |

ಬೇಕಾದುದೆಲ್ಲ ನನಗಾ |

ಮೂವರು ಬಲ್ಲಿ ಮೂರು ದಿನಸ ತಂದಿದ |

ಕೊಟ್ಟುಪಹಿಲೆ ನಗದಿ |

ಮೂರು ಲೋಕಕೆ ಆಯಿತು ವರದಿ ||1||

ಪಂಚಿಸ ಹುಡುಗರ ನೌಕರಿ ಇಟ್ಟಿದ |

ತೂಗಿ ತೂಗಿ ಕೊಡುವದಕ |

ಹಜಾರ ಮಂದಿ ಮೇಲ ವೈತಿರು ಕೂಡತಿರು |

ವ್ಯಾಪಾರ ನಡಿತು ಠೀಕ |

ಮೂರು ದಿನಸಿನೊಳು ಎರಡು ದಿನಸಿಗೆ |

ಏರಿತು ಭಾಳ ಸರದಿ |

ಆಮ್ಯಾಲ ಆಯಿತು ಮಂದಿ ||2||

ಎರಡು ದಿನಸಿಗೆ ಯಾರು ಕೇಳುವಲ್ಲರು |

ಬಿತ್ತೋ ದುಕಾನದೊಳಗ |

ಇದು ಒಂದ ದಿನಸಿಗಿ ನಮ್ಮ ಮುನಿಮರು |

ಇದ್ದರು ನೌಕರಿ ಮುಜರದೊಳಗ |

ದೊರಿಯ ಕಳುವಿದಾ ರಕಮ ವಸೂಲಿಗೆ |

ಕೋಟ್ಟು ಸತ್ಯ ಕೀರ್ದಿ |

ನಮ್ಮ ರಕಮ ಕೊಡರಿ ಜಲ್ದಿ ||3||

ರಕಮ ವಸೂಲಿಗೆ ಬಂದ ಯಜಮಾನ |

ಬದಲಿ ಯಾರು ಉಳದಿಲ್ಲಾ |

ಸಿದ್ಧ ನಾಮವು ದಿವಾಳಿ ಆಯಿತು |

ತ್ರಿಲೋಕ ಗಲಬಲಾ |

ಸಂಸಾರ ವ್ಯಾಪಾರದೊಳಗೆ ಗಿರವಿ |

ಅವರಲ್ಲಿ ಉಳದಿ |

ಬರಕೊಟ್ಟ ರೂಖಡಿ ವರದಿ ||4||

ಶಿವನಾಮ ದಿಲ್ಲಿ ವ್ಯಾಪಾರ ತಂದಿನಿ |

ಒಯಿರೆಪ್ಪ ಒಂದು ಪುಡಿಯಾ |

ಆ ಕಡಿ ಸಕ್ಕರಿ ರುಚಿ ನುಡಿಯಾ ||ಪಲ್ಲವಿ||

ನಿಶಕ್ತಿ ಮನುಷ್ಯಗ ಶಕ್ತಿ ಬರುವುದು |

ಇದು ಒಂದು ಪುಡಿ ಕೊಡಿರಿ |

ಭಕ್ತಿ ಮನುಷ್ಯಗ ಮುಕ್ತಿಯ ಉಂಟು |

ಕಿವಿ ತಿನ್ನುವ ಪುಡಿ ಹಿಡಿರಿ |

ಕಿರಾಣಿ ಚೀಜ ತಂದು ಚೂರ್ಣ ಮಾಡಿನಿ |

ನಾಮಸ್ಮರಣ ಪುಡಿಯಾ |

ಆ ಫಕ್ಕಿ ಹಾಕಿ ನೋಡೊ ಬಡಿಯಾ ||1||

ಶ್ರವಣ ಮನನ ನಿಜ ಧ್ಯಾಸದ ಪುಡಿಗಳು |

ಮೂರು ತೊಕೊತಿರೇನ್ರಿ |

ಆರು ಏಳು ಎಂಟು ಬ್ಯಾನಿ ಒಮ್ಮೆ ಕಡಿದು |

ಭವಸಾಗರ ಪಾರಾದ್ರಿ |

ಎಣ್ಣಿಯಿಲ್ಲ ಪಣತಿಯಿಲ್ಲ ಬತ್ತಿಯಿಲ್ಲಾ ಜ್ಯೋತಿರ್ಮಯ |

ಕಣ್ಣಿಗಿ ತಿನಿಸು ಪುಡಿಯಾ |

ಆ ಸಿಗೊದಿಲ್ಲಾ ಹಿಂಥ ಘಡಿಯಾ ||2||

ಹಿಂದಿನ ಊರಾಗ ಬೇಪಾರ ಆಗ್ಯಾದ |

ಬೇಕಾದರ ಕೇಳಕೊಳ್ಳರಿ |

ದುಡ್ಡಿನ ಹಿಡಿದು ಲಕ್ಷ್ಯ ತನಕ ಮಾರಾಟ |

ಬೆಲೆವಿಲ್ಲ ಕಿಮ್ಮತರಿ |

ಈ ಊರಾಗ ಭಕ್ತಿ ಪುಡಿ ವ್ಯಾಪಾರ ಮಾಡಿದ |

ಭಕ್ತ ವಿಠಲರ ಅಡಿಯಾ |

ಆ ಷಡಾಕ್ಷರ ಸಿದ್ಧ ಪುಡಿಯಾ ||3||

ಗುಂಪ ಕಂಡಿದ್ಯಾ ಮಿತ್ರ |

ಗುಂಪ ಕಂಡಿದ್ಯಾ |

ಕೆಂಪ ಇಂಪ ತಂಪ ಝಂಪ |

ಚಿಂಪ ಲೆಂಪ ಆರು ಬಣ್ಣದ ||ಪಲ್ಲವಿ||

ಸ್ಥೂಲ ಸೂಕ್ಷ್ಮದ ಕಲ್ಲು |

ಕಾರಣ ಮಹಾಕಾರಣ ಕಲ್ಲು |

ಕಟ್ಟಿದವರು ದೃಷ್ಟಿಗೆ ಬಿದ್ದಿಲ್ಲ |

ಯಾರಂತ ಹೇಳಲಿ |

ಬಾಗಿ ನೋಡಿದ ಹಣಕಿ |

ಹಿಗ್ಗಿಲಿ ಮಾಡ್ಯಾರ ಕಟ್ಟಣಕಿ |

ಸುಗ್ಗಿಗಿ ಬಂದವರಿಗಿ ಕಾಣಬಹುದು |

ಬೈಲ ಹೊಚ್ಚಣಕಿ ||1||

ಎಷ್ಟೋ ಕಾಲದ ಗುಂಪಾ |

ಇಷ್ಟು ಉಚ್ಚಿಲ್ಲ ಚಿಂಪಾ |

ಗುಂಪಾದ ಬಲಭಾಗ ನಿರಾಧಾರ |

ಒಂದೇ ಹಚ್ಯಾರ ಲೆಂಪ |

ಚೌರ್ಯಾ ಪಿಂಸಿ ಲಕ್ಷ್ಯಾ |

ಸಂರಕ್ಷಣ ಅಕ್ಷಾ |

ದಕ್ಷ ಬ್ರಹ್ಮನ ಅಳಿಯನ

ಕಾರಭಾರ ಸಧ್ಯಾ ||2||

ಆನಂದ ಗುಂಪದ ಖಳಿಯ |

ಹನ್ನೊಂದು ಎದುರು ಭಾರಿ ಹೊಳಿಯ |

ನಿಂದ್ಯಾ ಆಡವರಿಗೆ ಒಂದೇ ಇಟ್ಟಾರ |

ಎದುರು ಏರುವ ಸುಳಿಯ |

ಶಾಂತಾಗಿ ಪಾರ್ಥನ ಗೇಳಿಯ |

ನಿಂತ ಚಂದ್ರ ಭಾಗದ ಹೊಳಿಯ |

ಗುಂಪದ ಒಳ ಹೊರಗೆ ತಿರುಗ್ಯಾಡಿ |

ಸಿದ್ಧ ಮಾಡಿದ ನೈವೇದ್ಯಾ ||3||

ತಾ ತಂಗಿ ಪಂಚಪಾತ್ರೆ |

ತೀರ್ಥ ತರುವೆನು ಹೋಗಿ ತಾರೇ ಪಾತ್ರಿಯ |

ತ್ರಿವೇಣಿ ಸಂಗಮ ದಾಟಿ |

ಗಂಗಾಸಾಗರ ಕಪಿಲ ಮುನಿಯ ದೊಡ್ಡ ಜಾತ್ರೆಯ ||ಪಲ್ಲವಿ||

ನಿರ್ಮಳ ಮನಸಿನ ಬೂದಿ |

ಒಳ ಹೊರಗ ಬೆಳಗುವೆ ತಾ ಪಂಚಪಾತ್ರಿಯ |

ತೇರ ಎಳೆಯುವ ತನಕ ತೀರ್ಥ |

ಮಲತು ಇರಬಾರದು ತಂಗಿ ತಾ ಪಂಚಪಾತ್ರಿಯ ||1||

ಪಂಚಾಳ ಅಗಸಾಲ ತಾನು |

ಪಂಚಧಾಮ ಕೂಡಿ ಮಾಡಿದ ಪಂಚಪಾತ್ರಿಯ |

ಚೌರ್ಯಾಐಂಸಿ ಇಂಚಿನ ಪಾತ್ರಿ |

ಕಂಚಿನ ಚಮಚಾವು ಸಂಗ ತಾರೇ ಪಾತ್ರಿಯ ||2||

ನಿರ್ಗುಣ ಮಠದೊಳು ಇಡುವ |

ನಿರ್ವಿಕಾರ ನಿರ್ಮಲದೇವಿ ತಾರೇ ಪಾತ್ರಿಯ |

ಸಭಿ ತೀರ್ಥ ಬಾರ ಬಾರ |

ಗಂಗಾಸಾಗರ ಏಕಬಾರ ಸಿದ್ಧ ಪಾತ್ರಿಯ ||3||

ಜ್ಞಾನ ತಿಳಿವಳಿಕಿಲಿಂದ ತಿಳಿಬಾರದೇನು ||ಪಲ್ಲವಿ||

ಜ್ಞಾನವಿಲ್ಲದ ಹೀನ ಮನುಜರ |

ಸಂಗ ಸಮರಸ ಭಂಗ ಪಡಿದು |

ಅಂಗದ ಅನುಭವ ಭೃಂಗನಿಲ್ಲದೆ |

ಗಂಗಾ ಯಮುನಾ ಸ್ನಾನ ಗೈದು |

ಮಂಗ ಅಂಗದ ನೆಲಿ ತಿಳಿಬಾರದೇನು ||1||

ತತ್ವದ ಅನುಭವ ಮಹತ್ವ ತಿಳಿಲಿಕೆ |

ಸತ್ವ ಮನುಜರ ಸಂಗ ಸವಿದು |

ಚಿತಾ ಭಸ್ಮದ ಹಿತವು ನೋಡಲಿಕೆ |

ಉತ್ತಮರ ಉಪದೇಶ ಪಡಿದು |

ಜ್ಞಾನ ನಯನ ದೃಷ್ಟಿಲಿ ನೋಡಬಾರದೇನು ||2||

ಬ್ರಹ್ಮೀ ತಿಳಿಯದೆ ಭ್ರಮೆಗೊಂಡರು |

ಜಪಕ ಕುಂತರು ಮಂಡಲ ಬರೆದು |

ಹಮ್ಮ ಚಂಚಲ ಚಿತ್ತ ತುಂಬಿ |

ಗುಮ್ಮ ಜಲದೊಳು ಕುಂತು ದಣಿದು |

ಸತ್ಯಸಂಗಲಿಂದ ಬದುಕಿ ಇರಬಾರದೇನು ||3||

ಯೋಗಿ ಮನುಜರು ತ್ಯಾಗಿ ಇರಬೇಕು |

ಬಾಗಿ ನಡಿಬೇಕು ಭೋಗಿ ಜನರೊಳು |

ಕಾಗಿ ಗೂಗಿ ಕಲಿವದೇನು |

ನೀಗಿ ಇರಬೇಕು ನಿಜ ಬೈಲೊಳು |

ತೀನರಂಗ ನೋಡಿ ಮುಜುರ ಹೊಡಿಯಬಾರದೇನು ||4||

ನಿಷ್ಠಲಿಂದ ನಿಜದೇವರಾದರು |

ಸೃಷ್ಟಿಯೊಳು ರೇವಯ್ಯ ಸ್ವಾಮಿ |

ಕಷ್ಟ ಪರಿಹಾರ ಮಾಡೋ ಭಕ್ತರ |

ಇಷ್ಟದಂತೆ ಅಂತರ್‍ಯಾಮಿ |

ದೀನ ದೇವಿದಾಸನ ಭಜನಿ ನುಡಿಬಾರದೇನೊ ||5||

ನಿನ್ನಂತ ಕಿಡಗೇಡಿ ಶಿವನು |

ನನ್ನಂತ ಪಾಪಿಷ್ಟ ನರನು ||ಪಲ್ಲವಿ||

ಅನಂತ ಜಗರೂಪ ಕಾಣೇನು |

ಹಿಂತ ಫಣಿ ಭೋಗ |

ಏನಂತ ಪೇಳಲಿ ದಾರಿಗಿ |

ಎನ್ನಗತಿ ಹ್ಯಾಂಗ |

ಅಂತವಿಲ್ಲಾ ಶೋಧಿಸುವೆನಂದರು |

ತಾವು ಇರೋ ಜಾಗ ||1||

ಲಕ್ಷಯಿಟ್ಟು ಪ್ರತ್ಯಕ್ಷ, ಕಂಡರೆ |

ವೃಕ್ಷವುಂಟು ಛಾಯಾಯಿಲ್ಲಾ |

ಅಪೇಕ್ಷಾ ನೀಡಸಿ ನದಿಗಿ ಹೋದ |

ಗುಪ್ತ ಜಲ ಗಂಗಾ |

ಕಾಂಗವಾಗಿ ಭಿಕ್ಷಕ ಹೋದರೆ |

ಕಾಳ ಇಲ್ಲದಂಗಾ |

ಯಾಚಕರ ರಕ್ಷಣ ಕೃತ |

ಸಾಕ್ಷಾ ಎನಗ ಹ್ಯಾಂಗ ||2||

ಯಾಕ ಈ ಭವಲೋಕ ಬಿಟ್ಟಿ |

ಲೋಕಪಾಲನನಾಥನೆಂಬಿದೆ |

ಲೆಕ್ಕ ಪಂಚಾಂಗ ಪುರಾಣ ಶಾಸ್ತ್ರವು |

ವರಕವಿಗಳಿಗಾ |

ಬರೆಬಿಟ್ಟ ಬೈಲನಿದ್ದರೆ ವರ ಕೊಟ್ಟಿ ಹ್ಯಾಂಗ |

ಧ್ರುವ ಮಾರ್ಖಂಡ ಸಾಕ್ಷಿ |

ಪಂಚೇತಿ ಇಟ್ಟಿ ಜಗದೊಳಗ ||3||

ಆಡಿದರೆ ಕಿಚ್ಚಾಯಿತು ಜನರಿಗೆ |

ಬೇಡಿದರೆ ಹುಚ್ಚ ಅನಸಿ ಅವರಿಗೆ |

ನೀಡಿದರೆ ನಿಲಕಿಲ್ಲ ಯಾರಿಗೆ |

ಗೋಡಿ ನಡಿತು ಹ್ಯಾಂಗ |

ಎಡಿಯ ಉಂಡಿದ ನಾಮದೇವನ |

ಪಾಂಡುರಂಗ ಹ್ಯಾಂಗ |

ಹಾಡಿದರೆ ಮೋಕ್ಷ ಆಯಿತೇನು ಅವರಿಗಿ |

ತಿಳಿಬೇಕು ಸಿದ್ಧ ಹ್ಯಾಂಗ ||4||

ಭವ ದಾಟದು ನರ ನಾರಿ ನದಿಯಾ

ಬಲು ಬಿರಿಯೋ ||ಪಲ್ಲವಿ||

ಭವ ಅಂದರ ಬೆಂಕಿ ತಿಳಿ |

ನದಿ ಅಂದರ ನೀರಿನ ಹೊಳಿ |

ಹೆಣ್ಣ ಗಂಡಿನ ಬಾಯಿ |

ಬಣ್ಣ ಇಲ್ಲದ ನೀರಿನ ಭಾಂಯಿ |

ತ್ರಿನಗರ ಮುಣಗ್ಯಾದ ಮಾತಿನೊಳಗೆ |

ತ್ರಿಲೋಕ ತೀರ್ಥಸ್ವರೂಪ ಇದರೊಳಗೆ |

ತ್ರಿನೇತ್ರ ತೆರೆದು ಸಾಂಬ ನೋಡುವ ಈಗೆ |

ಜ್ಞಾನ ಭಜನಾ ದೀನಾ ರಮಣಾ |

ಶರಣಾಗತ ಶ್ರೀಗುರು ಮಲ್ಲಿಕಾರ್ಜುನಯ್ಯೋ ||1||

ಏನಾರ ನುಡಿ ಬರಬಹುದು |

ಅನ್ಯರಂತೆ ತಾನಾಡಬಾರದು |

ಕಾಲನ ಕಾಲ ಗತಿ |

ಕಾಲ ಮರಣ ಬೆನ್ನ ಹತ್ತಿ |

ಜ್ಞಾನಿಗಳಿಗೆ ಅಜ್ಞಾನಿ ಈ ಕರಕಿ |

ಸುಜ್ಞಾನಿ ದೇವಾ ಗಜಾನನಗ ಏರಸಿ ಕರಕಿ |

ಮಹಾಜ್ಞಾನಿಗಳೆ ಸಂಸಾರ ಸದ್ಗತಿ ಎರಡು ಬೆರಕಿ |

ಗುರುವೆ ಬರಿವೆ ಅರುವೆ ತರವೆ

ದಂಡವತ ಶ್ರೀಗುರು ರೇವಪ್ಪಯ್ಯೋ ||2||

ಕಳಸಬಾರದಿತ್ತು ಗುರುವೆ |

ಉಳಿಸದಿತ್ತು ನಿಮ್ಮ ಸ್ಥಲವೆ |

ಇನ್ನ ಯಾತಕ ಇವರ ಹಂಗಾ |

ಖೂನ ಯಾತಕ ಪಾಂಡರಂಗಾ |

ಹೆಣ್ಣ ಗಂಡಿನ ಬಾಯಿ ಮುಚ್ಚುವರು ಯಾರು |

ಕಣ್ಣು ಮುಚ್ಚಿ ಬೆಕ್ಕು ಹೆಪ್ಪತಿಂದಂತೆ ಆಡುವ ನರರು |

ಸಣ್ಣ ಬಾಯಿದೊಳಗೆ ದೊಡ್ಡ ತುತ್ತು ಕೈಯಾಗ ಮಾಡಿಕೊಂಬವರು |

ಅಲ್ಲಾ ಹೌದು ಎರಡು ಇಲ್ಲಾ |

ನಮ್ಮ ನಮಸ್ಕಾರ ನವನಾಥಯ್ಯೋ ||3||

ನಮ್ಮ ಬರಿಯ ನಿಮಗ ಇಲ್ಲಾ |

ನಿಮ್ಮ ಭೋಗ ಅವರಿಗಿ ಇಲ್ಲಾ |

ಮನಸ ಮುರಿಯಲಿ ಬ್ಯಾಡಾ |

ನೆನಸಿ ಬೈದು ನಗತಿರಬ್ಯಾಡಾ |

ಎಣಸಬ್ಯಾಡಾ ಯೋಗಿ ಜನರ ಹಾದಿ |

ಕನಸಿನೊಳಗೆ ಸೊಳ್ಳದಾಣಿ ಪದರಾಗ ಕಟಕೊಂಡು ಹೋದಿ |

ಮನಸಿನ ಮನಿಯ ಕತ್ತಲ ಬಿದ್ದತ್ತು ನಾಕು ಬೀದಿ |

ಕಳಿದು ತಿಳದು ಉಳಿದು ಸಾಧು |

ರೇವಣಸಿದ್ಧ ನಿನ್ನ ಗುಂಡ ನಾನಯ್ಯೋ ||4||

ನಿಷ್ಠಿ ಜನಕ ನಿಂದನ ಬಂದಿ |

ಸೃಷ್ಟಿಯೊಳು ಇನ್ನಾಗು ಹಂದಿ |

ಪಂಚಕೃತ ಕೊಟ್ಟರೆ ಕಂಚು |

ಮುಚಕೊಂಡು ಉಣು ನೀನೆ ಮುಂಚು |

ತೆರದಲ್ಲಿ ಮುಚ್ಚವನೆ ಶಿವಶರಣ |

ಕರದಲ್ಲಿ ಉಂಡು ಮೆರದಲ್ಲಿ ಮೆರದವನೆ ಹೋದಿ ಶರಣ |

ಬರದಲ್ಲಿ ಉಂಡು ಬರದಿನ ನಿಶಾನಿ ಹಿಡಿದಂವ ಕರ್ಣ |

ತನ್ನ ಮನ ಧನಮಾನ ಆಶಮಾನ ಅರ್ಪಣ |

ದೇವಿದಾಸ ಬರದಿದ ಏಮಯ್ಯೋ ||5||

ತಪೇಸಿ ಉಪದೇಶಿ ಆದ ಬಳಿಕ |

ಜಪ್ಪಸಿ ಇಡು ಹೆಜ್ಜಿ ನಿಗಾ ನೆಲಕ |

ಪುರಮಾಸಿ ಮನ ನೋಯಿಸಿ ಹೋದಿ ಕಾಸಿ ವನವಾಸಿ |

ಅಪ್ಪೇಸಿ ಯಾತಕ ಮೂರದಿನ ಮುರಕ ||ಪಲ್ಲವಿ||

ಸತ್ತವನ ಸುಖ ದುಃಖ ಏನ ಬಲ್ಲಿ |

ಚಿತ್ತ ಇಡುತಂಗಿ ನರಿ ಆದತೇನು ಹುಲಿ |

ಯುಕ್ತಿಲಿ ಶಕ್ತಿಲಿ ಭಕ್ತಿಲಿ ಮುಕ್ತಿಲಿ |

ಒಪ್ಪಿಸಿ ಇಡು ಕಾಯಾ ಗುರುವಿನ ಪಾದಕ ||1||

ಗುರು ಗೋರಖ ಮಚ್ಛೀಂದ್ರ ಚೇಲನಾದ |

ಗುರು ತಾರಸಿ ಕೌರವನ ನಾಶ ಮಾಡದ |

ಜಿತೀಂದ್ರ ಕುಪೀಂದ್ರ ದೇವಿಂದ್ರ ಸೂರ್ಯಚಂದ್ರ |

ಘುಲ್ಲಸಿ ಖುಸಿಯೆಲ್ಲಿ ಇರೋಸ್ಥನಕ ||2||

ಡಂಭ ಬುದ್ಧಾಜಿ ಕಾಮಾಜಿ ಕಾರಭಾರ |

ಸಂಬಾ ಹ್ಯಾಂಗೆ ನಿಂತಾನ ನಿರಾಧಾರ |

ಇವು ಮೂರ ನವದ್ವಾರ ಐದಾರ ಅರವತ್ತು ಮೂರ |

ಸಾಧಸಿ ಗುರುಪಾದಕ ಬಿದ್ದಿದ ಮೂರ್ಖ ||3||

ಆನಂದ ಭಜನಿ ದಾಸಗೆ ಇನ್ನೊಂದು ಯಾಕ |

ಮಹಾನಂದ ಕಾಣಿದ ಬಳಿಕ ಆಗೋ ಮೂಕ |

ದೇವಿದಾಸ ಇಡುಧ್ಯಾಸ ಆಗಿ ಕೂಸಾ ನಾಗಿದೋಷ |

ಸೋದಸಿ ಮುಟ್ಟಪ್ಪ ಸ್ವರ್ಗಕ ||4||

ಬರದವರ ಕೂಡಿ | ಬರದ ಪದ ಹಾಡಿ |

ಬ್ರಹ್ಮ ದೇವರ ಗುಡಿ | ನೋಡಾಮಿ ನಡಿ ||ಪಲ್ಲವಿ||

ಭಾಳ ಬಿಟ್ಟರ ಬಾಕೀಲಾ | ಕೀಲಿ ಒಂದಕ ಹಾಕಿಲಾ |

ತಲಪ ಮುಂದ ನೂಕಿಲ್ಲಾ | ಖುಲ್ಲಾನೇ ಖುಲ್ಲಾ ||1||

ದೋನಸೆ ಸೋಳಾ ಸಕೀಲ | ಓದಿ ತೆರಿ ಬಾಕೀಲಾ |

ಗುರುವಿನ ವಿನಃ ಹಕ್ಕಿಲ್ಲಾ | ನಾಸಿಕ ಬಾಗಿಲಾ ||2||

ಅತ್ತ ಇತ್ತ ಘಾಟಿ | ದಾಟಿ ನಡಿ ತ್ರಿಕೂಟ |

ಮೆಲ್ಲನೆ ಬಾ ಮುಕಟ | ಮಾರ್ಗ ಅರವಟ ||3||

ಏಳ ಚಕ್ರ ದಾಟಿ | ಪಶ್ಚಿಮ ತುದಿ ಮುಟ್ಟಿ |

ಕೇಳು ಬೈಲ ಸೀಟಿ | ಸಿದ್ಧಾ ಸಿದ್ಧಾ ||4||

ಚಲತಿ- ಸ್ವಯಮ ಬೇಕು ಕುದರಿ ಚಾಲ |

ಪೋಪಟ ವಿದ್ಯಾ ಅಲ್ಲ ಗುರುಚೇಲ ||

ಬರಬಾರದು ಅಬಬಬಾ |

ತ್ರಾಯ ತ್ರಾಯ ತೋಬ ತೋಬ ||ಪಲ್ಲವಿ||

ಬಂದರ ಬಂದ ಭವಕ |

ಅಂದಾ ದುಂಧ ಅಂದಾರ ಮೂಲಕ |

ಬಂಧನ ಮಾಯದ ಮಲಕ |

ಹಾಯ್ ಹಾಯ ಅಬಬಬಾ ||1||

ಒಂದ ಆಡಿ ಕಡಮಿ ಬಿತ್ತು |

ಮತ್ತೊಂದು ಆಡಿ ಹೆಚ್ಚಾಯ್ತು |

ಜಮಾ ವಜಾ ಗುಣ ಭಾಗ ಉಳಿತು |

ಪಂತೋಜಿ ಛಡಿ ಅಬಬಬಾ ||2||

ತಾಳಲೆಷ್ಟು ಈ ಲೋಕದೊಳಗ |

ಹೇಳಲೆಷ್ಟು ಕೇಳಲಂದವಗ |

ನಾಳ ನಾಡದ ಖರೇ ದಾರೀಗಾ |

ಸುಳ್ಳ ಮೊದಲ ಅಬಬಬಾ ||3||

ಮುಂದ ಹೌದು ಎಂಬುವರ ತೊಟ್ಯಾ |

ಹಿಂದ ಮುಂದ ಮತಿಗಳ ಧಟ್ಯಾ |

ನೊಂದ ನಾನು ನಡವಿನ ಅಟ್ಯಾ |

ಸಾಯವಿಲ್ಲಾ ಅಬಬಬಾ ||4||

ಬೈಲಿಗಿ ಬೈಲ ನಿರ್ಬೈಲ ಆಟಾ |

ಕಾಯಿಲ ಆದಂವ ಗುರುವಿನ ಬೇಟಾ |

ಬಿಸಲ ತಿಂದವ ಅಳದಾ ಸಿಟ್ಟಾ |

ಜಯ ಸಿದ್ಧ ಅಬಬಬಾ ||5||

ಸಣ್ಣಾಗಿ ಇದ್ದಂವ ಶರಣ |

ಕಣ್ಣ ದಾನ ಕೊಟ್ಟಂವ ಕರ್ಣ |

ಪ್ರಾಣ ಕೀರ್ತಿ ಪಡದಂವ ಜಾಣ |

ಸಾಕು ಸಿದ್ಧ ಅಬಬಬಾ ||6||

ಭಾವ ಶುದ್ಧ ಇದ್ದರೆ ದೇವ ಬಲ್ಲೆ ಉಂಟು |

ಬಿಡು ದಫ್ತರ ಗಂಟು |

ಭಾವ ಭಕ್ತಿಲಿಂದೆ ಕಿತ್ತಿ ಒಗೆದ ಎಂಟು |

ನೋಡಿ ನಿಂತು ಒಂಟು ||ಪಲ್ಲವಿ||

ಶಿಕ್ಷ ಗುರುವಿನಲ್ಲಿ ಮೊದಲೆ ಝಡತಿ ಕೊಟ್ಟ |

ಕಿತ್ತಿ ಗರ್ವಿನ ಘೂಟ |

ದೀಕ್ಷದ ವಸ್ತಾದ ಮಸ್ತಕ ಹಸ್ತ ಇಟ್ಟ |

ದಾರಿ ತೋರಿ ನೇಟ ||1||

ಮೋಕ್ಷದ ಮಹಾರಾಯನಲ್ಲಿ ಕಿಂವಿಕೊಟ್ಟ |

ಗುರು ಕಿಂವಿ ಊದಿ ಬಿಟ್ಟ |

ಝಾಮ್ಮಸಿ ಕಾಲನಪುರಕ ದಾಳಿಯಿಟ್ಟ |

ಕ್ಷಣದೊಳು ಸುಟ್ಟ ||2||

ಪಂಚತತ್ವ ನಿರ್ಬೈಲ ಆಯಿತು ಘಟಾ |

ಉಳಿವಲ್ಲದಂಗ ದೇಟಾ |

ತಿಳಕೊಂಡೆ ನಿರ್ಗುಣಸ್ವಾಮಿ ಬಲಿಕಾಟಾ |

ಸತ್ತ ಉಳಿತು ಸಾಟಾ ||3||

ಏನು ಅರಿಯಲದಂವ ಹೋದನಪ್ಪ ಹೊಂಟು |

ತಿಂದು ಪಾಳಿಯ ಧಂಟು |

ಬಲ್ಲವನಾದರೆ ಇದೇ ಹಾದಿ ಹಿಡದು ಹೊಂಟು |

ತಿನ್ನು ಸಿದ್ಧನ ಅಂಟು ||4||

ಮನ ಮಾಡು ಸಾಧನ ಭಜನಿ ಹಾಡು |

ಅಪರೋಕ್ಷ ಕಲ್ಪವೃಕ್ಷ ನೀ ಸಾಕ್ಷ ಇವು ಮೂರಕ ನೋಡು ||ಪಲ್ಲವಿ||

ಮರತ ಕುಂತು ಮಾಡಿಕೊಂಡಿರಿ ಹಿಂತ ದಶಾ |

ಶನಿಮಹಾತ್ಮನಂತವನ ನೋಡಿ ಹಶ್ಯಾ |

ಬಾತ ಮಹಾನ್ಯರ ಮಾತು ಕೇಳು |

ಇಂದಿನ ತನಕ ಬೆನ್ನ ಹತ್ತೇದ ನಿಮಗ ಕಾಳು |

ಕನಸಿನೊಳಗೆ ಪದ ಕೇಳಿ ಗಡಬಡಿಸಿ ಏಳು |

ಅಧಿಕಾರಿ ಲಕ್ಷಣ ಕಿಂವಿಲಿ ಕೇಳು ||1||

ನೀತಿ ಪಹಿಲೆ ಪರನಿಂದ್ಯಾ ಸ್ಪಾಸ ಬ್ಯಾಡೋ |

ಮನ ಚುಟಕಿ ನಾಟಕಿ ಧಾಟ ಬ್ಯಾಡೋ |

ಪರನಾರಿಗಿ ನೊಡುವನ ಜರಕಟು |

ಪರಧನ ಪರಭೂಮಿ ಆಸಿ ಬಿಟ್ಟು |

ನಾಯೆಂಬೊ ಮಬ್ಬಿನ ಮೊಳಕಿ ಸುಟ್ಟು |

ಸ್ಥಿರ ಮುಕ್ತಿಗಿ ಹೊಂದುವೆನೆಂಬೋ ಸಾಕ್ಷ್ಯ ||2||

ಗುರು ಉಪದೇಶ ಬೇಕೆಂಬ ಅಪೇಕ್ಷಾ |

ನಜರಿಟ್ಟು ಒಬ್ಬವನಿಗಿ ಇಡು ಲಕ್ಷಾ |

ಗುರುಪಾದ ಪಿಡಿಯಪ್ಪ ಮನಸಾಕ್ಷ |

ಉಡಿ ಚಾಚಿ ಬೇಡಪ್ಪ ಮಂತ್ರ ಮೋಕ್ಷ |

ಸೇವಾ ಸಾಧಕರಿಗೆ ಮೇವಾ ಭೀಕ್ಷ |

ಮಹಾ ದುರ್ಲಭ ಮಹಾಗುರು ಕಟಾಕ್ಷ ||3||

ಸಂಸಾರ ಸದ್ಗತಿ ಗುರು ಶಬ್ದ |

ಹೆಚ್ಚ ಲಕ್ಷ ಮಾಯಾಕ ಬ್ಯಾಡಲು ಬದ್ಧ |

ಪ್ರಪಂಚದ ಹಂತಿಲಿ ಪಾರಮಾರ್ಥ |

ಮೆಚ್ಚಿ ಜ್ಞಾನ ದೃಷ್ಟೀಲಿ ಪಿಡಿ ಗುರು ಹಸ್ತ |

ನೋಡ ಅಳಗ್ಯಾಡೊ ಘೂಟ ಅಲ್ಲ ಬಂದೋಬಸ್ತ |

ಕೇಳ ಅಯ್ಯಗೋಳು ಮಾತ ಅಲ್ಲ ಮಂತ್ರ ವಾಚತಾ |

ಮಂತ್ರ ಪಿಂಡಾ ನಿನ್ನ ವಾಣಿ ಪ್ರತ್ಯಕ್ಷ ||4||

ನಿರ್ವಿಕಾರ ನಿರ್ಬೈಲ ಪರಮಾತ್ಮ |

ಅರವಿಕಾರ ನಿನ್ನ ಹಂತಿಲಿ ಪರ ಆತ್ಮ |

ಗುರುಕೃಪಾ ದೃಷ್ಟಿಲಿ ಐಶ್ವರಿಯೆ |

ತನ್ನ ರೂಪಾ ತಾ ತಿರುಗಿ ನೋಡೋ ಪರಿಯೆ |

ಏಕೋ ಚಿತ್ತ ಆದವನೆ ಮುಮುಕ್ಷ ||5||

ತಮ್ಮಾ ಮಾರಿ ಮೇಲ ಮೂಗಿನ ಲಕ್ಷಣ |

ಮೂಗಿನ ನಿರತ ನಾಸಿಕ ತ್ರಿಂಬಕ ಸ್ಥಾನ |

ತ್ರಿಂಬಕಲಿಂದೆ ಆಧಾರಕ ಹೋಗೊ ಮಾರ್ಗ |

ನಾಲ್ಕು ಧಾಮ ನೋಡಿ ಆಗು ನೀನು ಬೆರಗ |

ಮೇಲ ಸರದೀಪ ಕಟ್ಯಾರ ಸ್ವರ್ಗ |

ಕೇಳಿ ಬರುವ ದಶನಾದಕ ಇಡು ಲಕ್ಷಾ ||6||

ಹನ್ನೆರಡು ಹದಿನಾರು ಇಪ್ಪತ್ತೆಂಟು |

ಮುಂದ ಎರಡು ಹಿಂದಿನ ಇಪ್ಪತುಗಂಟು |

ಪಶ್ಚಿಮ ಪ್ರಕಾಶಕ ಸಾವಿರ ಜ್ಯೋತಿವುಂಟು |

ಇಷ್ಟಕ್ಕೆಲ್ಲಾ ಆಧಾರ ಬೇರಿಲ್ಲದ ಧಂಟು |

ಜ್ಞಾನ ದೃಷ್ಟಿಲಿ ನೋಡಪ್ಪ ನಿಂತು ಒಂಟು |

ಚಂದನಕೇರಿ ಮಲಕಪ್ಪಾ ನೀಡಿದ ಭಿಕ್ಷಾ ||7||

ಚಲತಿ- ದೇವಿದಾಸ ದೇವಿದಾಸ |

ಪೀಯಾ ನಾಮತೋ ಮಿಟಾ ಪ್ಯಾಸ ||

ಗುರುವಿನ ಅನುಗ್ರಹ ಪಡಿದು |

ವರಪುತ್ರ ಮಾನವಗೆ ನರ ಅನ್ನದಿರು |

ಆತ ಪರಮಾತ್ಮನೋ |

ಮೂವತ್ತಾರು ಅಕ್ಷರ ನೆಲಿಯಾ |

ಐವತ್ತೆರಡು ಅಕ್ಷರ ಕೊನಿಯಾ |

ಸಾಧಸಿ ಇಟ್ಟಾ ಸ್ವತಂತ್ರ ಜೀವಾತ್ಮನೊ ||ಪಲ್ಲವಿ||

ಸಾಧು ವೇಶವು ನೋಡಿ ವಾದ ಮಾಡಬ್ಯಾಡ ಮಗುವೆ |

ಹಾದಿ ತಪ್ಪಿಹೋದಂತೆ ವನವಾಸನೋ |

ಆರು ಚಕ್ರದ ಅರ್ಥ ತಿಳಿದಾ |

ಮೂರು ಚಕ್ರದ ಮೂಲ ತಿಳಿದಾ |

ಶೂನ್ಯ ಅಂಬ್ರುತ ಮಹೀಂದ್ರ |

ಇಂದ್ರ ಸಭಾಕೆಲ್ಲಾ ಬೆಳಕ ತಾನೊ ||1||

ಶ್ರೇಷ್ಠವಾದುದು ಅಷ್ಟದಳ ಮಧ್ಯಾದಲ್ಲಿ

ದ್ರಿಷ್ಟಿ ಒಲಸಿ ಬಿಟ್ಟ ಬೈಲ ಆದವಗೆ ಕಷ್ಟ ಅಲ್ಲೇನೊ |

ಮೇಲಾಗಿರುವದು ಸದ್ಗುರು ಕೀಲಾ |

ಮೂಲ ಬೈಲ ತಿಳದಾತ ಮೇಲಾ |

ಮಾಲಿನೊಳು ಇರುವ ಮಹಾತ್ಮ ಆತ್ಮನೊ ||2||

ಚಿದ್ರೂಪ ಚಿನ್ಮಯ ಚಿತ್ಕಳೆ ಚಿರಂಜೀವಗೆ |

ಚಿನ್ನ ಇರುವದು ಚಂದ್ರದಂತೆ ಚೈತ್ರ ಮಾಸನೊ |

ದೇವತ್ರ ದೇವ ದೇಣಗಿ ದೇವಿದಾಸ |

ದಂಡವತ ದೈವಾದಯಾವಿರಲೆಂದು ಶರಣಾದನೋ ||3||

ಅಕ್ಷರ ಅಕ್ಷರ ಲಕ್ಷ ಪ್ರತ್ಯಕ್ಷ ಷಡಾಕ್ಷ ಮುಮುಕ್ಷರಿಗೆ

ಸಾಕ್ಷಿ ಅಕ್ಷರ ನೀನೆ |

ಸಾಕ್ಷಿ ಕಲ್ಪವೃಕ್ಷ ಭಿಕ್ಷಾ ಬಕ್ಷಿಸ ಕೊಟ್ಟು |

ಕ್ಷಿತಿ ಸಂರಕ್ಷಣ ಕೃತ ಅಕ್ಷಯತಾನೆ ||ಪಲ್ಲವಿ||

ಕಾಯಪುರ, ಮಠಕಾ ಒಂದ ಘಟಕಾ ಖಳವಿ |

ಹಟಕಾ ಲಟಿಕಾ ಸಂಸಾರ ತಟಕ ಸ್ಥಿರವೇನೊ |

ಚಟಗಿದೊಳು ಒಂದು ಗುಟಕನೀರ ಆರಮಠಕ ತೃಪ್ತಿಗಿ |

ಆರ ಅಲೆದು ಘಟಕಿ ತಿನುವದು ನಿಟ್ಟಕ |

ಮಾರ್ಗವು ತೋರೊ ಅಟಕೇಶ್ವರ ನೀನೆ ||1||

ಇತಲಾಗ ಕುಂತಿದ ಫಲ ಕತಲಾಗ ಕೈ ಸವರಿದಂತೆ |

ಅತಲಾಗ ಬಿಂದುವ ಬತಲೆ ಭಸ್ಮ ಅಲ್ಲೇನೊ |

ಭಸ್ಮಧಾರಣ ಇಸ್ಮ ಇಲ್ಲದೆ ಚಸ್ಮ ದರ್ಪಣ |

ಅಸ್ಮಕಾಣದೆ ಕುಸುಮ ರಸಮ ಲಗ್ನ ಇಲ್ಲ ಗುರು

ಹಸುಮಗನಾಗಿ ಮುಚ್ಚಿನೋ ||2||

ಕರುಣಯಿಲ್ಲದೆ ಅಷ್ಟವರ್ಣ ಚರಣತೀರ್ಥ |

ಮರಣ ಕಾಲಕೆ ಶರಣ ಸಂಗೇನೊ |

ಗುರುಲಿಂಗ ಜಂಗಮ ಅಂಗಲಿಂಗ ಅನುಭವ |

ಸಂಗ ಸೇರದೆ ರಂಗ ಮಂಟಪದೊಳು |

ಮಂಗ ಸೋಗಿನ ರಂಗಲ್ಲೇನೋ ||3||

ಭವಭಾದಿ ಬಾಯಿ ಮಾತಿಗಿ ಗೆದಿವದು |

ನಗಿಯನು ಲಗ್ಗಿಮುಳ್ಳಿನಂತೆ ಸುಗ್ಗಿ ಜನ ನಿಂದೇನೋ |

ಹಗ್ಗಕ ಹಾಂವಂದು ಹಾರಿ ಕತಲಾಗೆ |

ದೆವ್ವಂತ ಚೀರಿ ರಸ್ತೆಯಲ್ಲಿ ನಡದಂವನ |

ಹಸ್ತ ಮಸ್ತಕ ಕಾಣದೆ ಪರನೊಂದೇನೊ ||4||

ಚಲನ ವಲನ ಧಾವನ ಪ್ರಸಾರಣ ಆಕುಂಚನ |

ಪಂಚಕರಣ ಜ್ಞಾನೇಂದ್ರಿಯ ದೇವ ನೀನೋ |

ಸೃಷ್ಟಿಯೊಳು ಶ್ರೇಷ್ಠಾದ ನಾವದಗಿ ಇಷ್ಟಲಿಂಗ ರೇವಯ್ಯ |

ನಾಮವು ನಿಷ್ಠೆಲಿಂದ ಇಷ್ಟಾರ್ಥ ಸಾಧಕರು |

ಅಷ್ಟಮಿಗಿ ಕರದೊಯ್ದಿ ನೀನೋ ||5||

ಜ್ಞಾನಿಯ ಗುಣಗಳು ಬೇರೆ |

ಅಜ್ಞಾನಿಯ ಗುಣಗಳು ಬೇರೆ ||ಪಲ್ಲವಿ||

ಜ್ಞಾನಿಯ ಗುಣಗಳು |

ದಾನಧರ್ಮ ಪರ ಉಪಕಾರದೊಳು |

ಮನ ಬೆರಿಯದು ಖರೆ ||1||

ಅಜ್ಞಾನಿ ಗುಣಗಳು |

ಮದ ಮತ್ಸರ ಉನ್ಮನಿ ಗರಜಿನ ಮಾತನಾಡಿ |

ಮರಜಿಗಿ ಬಂದಂಗ ಖರೆ ||2||

ಅಜ್ಞಾನಿ ಮನಸಿದ್ದು |

ಕನಸಿನ ಪರಿಯಂತೆ ನೆನಸಿದ್ರೆ ಏನು ಬಂತು |

ನಾಯಿ ನಾರಾಯಣ ಖರೆ ||3||

ಅಣ್ಣಾ ನೀ ಕೇಳಪ್ಪ |

ಬಣ್ಣದ ಮಾತಲ್ಲಾ ಎಣ್ಣಿನಿಲ್ಲದೆ ಜ್ಯೋತ |

ಜ್ಞಾನಿ ಕಾಣದು ಖರೆ ||4||

ಬೈಲಿನೊಳಗ ಬೈಲ |

ನಿರ್ಬೈಲ ನಿಜನಾಮ ನಾವದಗಿ ಸ್ವಾಮಿಗೆ |

ಜ್ಞಾನಿ ಕಾಣೇನು ಖರೆ ||5||

ನಾ ಮಾಡಿದ ಕರ್ಮವು ಬಲವಂತವಾದರೆ |

ನೀನ್ಯಾಂಗೆ ಒಲತಿ ಪರಬ್ರಹ್ಮಾ |

ಏನು ಅರಿಯದೆ ಹೀನ ಮನುಜರು ಜ್ಞಾನವಿಲ್ಲದೆ |

ಶ್ವಾನನಂತೆ ಜೇನ ತುಪ್ಪಕ್ಕೆ ಆಸಿ ಬಿದ್ದು |

ನೊಣದ ಬಾದಿಯ ರೋಮ ರೋಮಾ ||ಪಲ್ಲವಿ||

ಅನ್ನದಾನವ ಮಾಡಿ ಪುಣ್ಯ ಪಡಿಯಾದೆ |

ಪರನಿಂದ್ಯಾ ಪರ ಸುತ್ತಿಯಲ್ಲಿ ದಿನಗಳಿದೇನೋ ಸುಮ್ಮಾ |

ಗರ್ವಲಿಂದೆ ಮೆರಿದು ಊರೊಳು |

ಅರವು ತಪ್ಪಿ ಆಚಿ ಮನಿಯೊಳು |

ರುಚಿಯ ಮೆಚ್ಚಿ ಮರತೆ ನನ್ನೊಳು |

ಸಚ್ಚಿದಾನಂದ ನಿಜ ಧಾಮಾ ||1||

ಮನಯೆಂಬೋ ಮರ್ಕಟ ಚಂಚಲ ಚಿತ್ತ |

ಕ್ಷಣನಿಲ್ಲದೆ ಮರವೇರಿ ದಣದೇನೊ ಬಿಟ್ಟನೇಮಾ |

ತತ್ವ ನಿರ್ಮಾಣ ಮಾಡಿದ ಯೋಗಿಯ |

ಮಹತ್ವ ಇನ್ಯಾಂಗೆ ಕಾಣೇನು |

ಸತ್ವಮಾನವ ಸೇವಾ ಅರಿಯದೆ |

ಸೂತಕ ಪಿಡಕೊಂಡೋ ನೇಮಾ ||2||

ಕಾಳಿನ ಪಾಳಿಗೆ ಕಳುಬ್ಯಾಡೆಂಬುವ |

ಜ್ಞಾನ ಬರಲಿಲ್ಲಾ ಮನ ಬಲ್ಲಂಗ ಬಲು ಹೇಮಾ |

ದಾರ ಪದರಿಗಿ ಬೀಳಲಿ ಘೋರ ವನದ ಮಾರ್ಗ |

ಎನಗಿದು ಪರಬ್ರಹ್ಮನ ಮಂದಿರಕ್ಕೆ |

ಇನ್ನ ಎತ್ತಬೇಕೋ ಏಸು ಜಲ್ಮಾ ||3||

ಪಡಿದು ಗುರು ಉಪದೇಶ ಹರಿದು ಹಿಂದಿನ ಕರ್ಮಾ |

ಬರಿದು ರೋಕೆವು ತೆಗಸಿದ ನಿಜ ಧಾಮಾ |

ನಾನಾ ಶಾಸ್ತ್ರದಿ ನಾನಾ ಪರಿಪರಿ ನಾನಾ ನಾದದಿ |

ನಾವದಗೀಶನ ನಾಮ ರೂಪ ರಹಿತ ತ್ರಿಗುಣ |

ಆದಿ ನಿರ್ಗುಣ ತಿಳಸಿ ನಾಮಾ ||4||

ಹಿಂತಾ ಚಿಂತಿಯ ತೀರಸಿ ಸಂತಿ ಭ್ರಾಂತಿಯ ಮುಗಸಿ |

ಶಾಂತಿ ಸಮುದ್ರದಂತೆ ಸಿದ್ಧರಾಮಾ |

ಸರ್ವರೆಲ್ಲರು ಭಜನ ಮಾಡ ಪರಿ |

ಮಾಡದಿದ್ದರೆ ಕಿಂವಿಲಿ ಕೇಳರಿ |

ವಾದ ಭೇದವು ನೀಗಿ ಜಲ್ಮ ರೋಗ ಔಷಧ ಸಿದ್ಧನಾಮಾ ||5||

ಮೂರೊರ ಬಿಗ್ಯಾಹೊಲ ಕವಲ ಕೊಟ್ಟಾನ ಬ್ರಹ್ಮ |

ಸಾರ್ಥಕ ಮಾಡಿಕೊಳ್ಳೊ ನರ ಜಲ್ಮಾ |

ನೂರ ರೂಪಾಯಿ ಕೋಣ ಮೂರ್ಖ ತರಬ್ಯಾಡಣ್ಣ |

ಬ್ಯಾಸಕಿ ಮಧ್ಯಾಹ್ನ ಸೊಧ್ಯಾಣ ಇರೋದಿಲ್ಲ ಬಲು ಜುಲ್ಮಾ ||ಪಲ್ಲವಿ||

ಅಷ್ಟಮದ ವೃಕ್ಷಾ ಕಡಿದು ವಿಶ್ವಕರ್ಮ ಖಸಬಿ ಬಡಿಗೇರ |

ಆರಿನ ಸಾಮಾನ ಓಸು ಮಾಡಿಸುಲು ಅರಿವಿಲಿ ತಮ್ಮಾ |

ಮಾಯಾಪುರ ಪಟ್ಟಣಕ ಹೋಗಿ ದಶಮುಖನ ಬಾಜಾರದೊಳು |

ದಯಾ ಮಾಯಾ ಹೊರಿ ತಂದು ನಿಜ ಧಾಮಾ ||1||

ಸಪ್ತ ವ್ಯಸನ ಎಂಬ ಮಹಾ ದುಷಕೃತಿ ನಟ್ಟಿನ ಹೊಲದಾಗ |

ಏಳಸಾಲ ನೇಗಿಲ ಪಾಳಿ ಮಾಡು ತಾಲೀಮ |

ಎಂಟ ಸೋಲ ಕಡಿದರ ಕಡಿಲಿ ಹೆಂಟಿ ಮಾತ್ರ ಪುಡಿ ಆಗಿಹೊಗಲಿ |

ಧಂಟಿಗೆ ಸೇರ ರಾಸಿ ಮಾಡೋ ಗುರು ಇಲ್ಮಾ ||2||

ಅತ್ತಿತ್ತ ಅದ್ವೈತವ ಕಂಡು ಅವರ ಪಂಕ್ತಿ ಪ್ರಸಾದ ಉಂಡು |

ಸದಾಮುಖ ಸಕ್ಕರಿ ಭೇಂಡು ಸವಿ ಕಲ್ಮಾ |

ಸಾಂಬನ ಪುತ್ರರೆಂದು ನೆಂಬಿ ಮಡಿವಾಳಪ್ಪಾ |

ತಂಬಾಕ ಕೊಟ್ಟು ಉಳದಾ ಬಲು ಪ್ರೇಮಾ ||3||

ಗೂಗಿ ಕೂಗತಾದ ಕೇಳು |

ಒಂಟಿ ಗೂಗಿ ಕೂಗತಾದ ಕೇಳು |

ಗೂಗಿ ಕೂಗತಾದ ಮೂಗಿ ಜನರ ಕಂಡು |

ತ್ಯಾಗಿ ಅಂದವನಿಗೆ ಯೋಗಿ ಪದವಿ ಎಂದು ||ಪಲ್ಲವಿ||

ರಾಗಭೋಗವು ನೀಗಿದಂವಗೆ |

ಯೋಗಮುದ್ರ ಬಲಿಸಿ ನಿಜಬೈಲ ತಿಳದಂವಗೆ |

ಹುಟ್ಟದು ಸಾಯದು ಸುಭ-ಅವಸುಭ |

ಸಾಹೇಬ ನೋಡಿದಂವಗ ಸಾವಿಲ್ಲ ಗೂಕಂದು ||1||

ಕಾಯಾಪುರ ಪಟ್ಟಣದೊಳಗೆ |

ಅದು ಇರುವದು ಕಾಮನ ಹುಣಚಿ ಮರದಾಗೆ |

ಹೋಳಗಿ ಮನಿ ಮುಂದ ಮಾಳಗಿ ಮ್ಯಾಲ ಕುಂತು |

ಗುಣಕಲಿವಲ್ದು ಹುಲಿ ಕುರಿ ಲಗ್ನ ಎಂದು ||2||

ಗೂಗಿಯ ಗುಣ ತಿಳದಂವಗೆ |

ಕಾಗಿಯ ಮನಿಯೊಳು ಕೋಗಿಲ ಬೆಳದು ಹೋದಂಗೆ |

ಗೂಗಿ ಹೇಳವದು ಖರೆ ಭೋಗಿ ಯೋಗಿ ಇಬ್ಬರನ್ನು |

ಸತ್ವದಲ್ಲಿ ಸೇರಿ ಸಾವಿರ ಬಾಳೆಂದು ||3||

ಮೂರು ಲೋಕ ಗೂಗಿ ಕಣ್ಣಾಗೆ |

ಗೂಗಿ ಕಾಣುವದು ವರ ಗುರುಪುತ್ರ ಅಣ್ಣಾಗೆ |

ನೋಡಲಿಕೆ ಬಂದವರ ಏರಲಿಕ್ಕೆ ಜಡ ಎಂದು |

ಮುಗಲ ಉದ್ದ ಗುಡ್ಡಗಳು ಮೂರ ಅವ ಬಿರಿ ಎಂದು ||4||

ಗೂಗಿ ಕಾಣಿ ರೇವಯ್ಯ ಸ್ವಾಮಿಗಳಿಗೆ |

ಯೋಗಿ ತನ್ನಂತೆ ತಾನಾದ ಈ ಜಗದೊಳಗೆ |

ಈ ಗೂಗಿ ಖೋಡಿ ಎಂದು ಹೊಡಿ ಭೈಯಾ ಜನರೆಲ್ಲಾ |

ಯಮರಾಜಾಗ ಯಮಕುಂಡಾ ಭರತಿಗಿ ಒಯ್ಯೆಂದು ||5||

ಬಲ್ಹಂಗ ಬರದಿಟ್ಟಾರ ಎಲ್ಲಾ |

ನನ್ನ ಬಲದ ಪಂಚಾಂಗ ಇಲ್ಲಾ |

ಬಲ್ಲವರು ಎಲ್ಲಾ ಹುಡಕಿ ಬಂದರು |

ಇಂದಿನತನರ ವರ ಸಿಗಲಿಲ್ಲಾ ||ಪಲ್ಲವಿ ||

ಸ್ವರ್ಗ ಮತ್ರ್ಯ ಪಾತಾಳ ಪೂರಾ |

ತಿರುಗಿ ಬಂದರು ಅನಂತ ಊರಾ |

ಸಿಗವಲ್ಲರು ಎನಗ ವರ |

ಏನಂತ ಎನ್ನ ಹಣಿಬಾರ ||1||

ತ್ರಿಲೋಕ ಆಳುವ ದೇವತರ |

ಬ್ರಹ್ಮ ವಿಷ್ಣು ಮಹೇಶ್ವರ |

ನನ್ನ ಹಂತಿಲಿ ದುಡಿವರು ಅವರ |

ಇನ್ನೆಲ್ಲಿ ಉಳಿತು ಯಾರ ಬಡಿವಾರ ||2||

ಅನೇಕ ಋಷಿ ಮುನೇಶ್ವರ |

ಸರ್ವ ಎಲ್ಲಾ ಬಲು ಸಣ್ಣವರ |

ಪಂಚಭೂತಕ ನನ್ನ ಆಧಾರ |

ಬಲ್ಲ ಜ್ಞಾನಿ ಹುಡುಕೀರಿವರ ||3||

ಸಿದ್ಧ ಭಜನಿ ಬರಿವದು ಸತ್ಯ |

ಕೇಳಿ ಹಿಗ್ಗಿ ರೇವಯ್ಯಾ ಮುತ್ಯಾ |

ಗುರುಲಿಂಗ ಜಂಗಮ ಬಲ್ಲಾ |

ಅಂಗದ ಅನುಭಾವದ ಕೀಲಾ ||4||

ಚಲತಿ- ಲಗ್ನ ಆಗಿಲ್ಲ ಯಾರಿಗಿ |

ತಿಳಿದದು ಖರೆ ಬಲ್ಲವರಿಗಿ ||

ಕೂಲಿ ಮಾಡವರೆಲ್ಲ ಕುಬೇರನಾಗಬೇಕು |

ಕಾಲಜ್ಞಾನ ಬರಿಯಾ ||ಪಲ್ಲವಿ||

ಸಾಲಿ ಬರಿಯದೆ ನೀಲಿ ಹೊತ್ತಗಿ ಸುದ್ದಿ |

ಹೇಳದು ಇದು ಬಿರಿಯಾ ||1||

ರುಚಿ ಪದಾರ್ಥದೊಳು ಮೆಚ್ಚಿ ಬಹಳ ತಿಂದು |

ಟಿಣುಕುತಾದ ನರಿಯಾ ||2||

ಹುಲಿಪಟ್ಟಿ ಎಳಕೊಂಡು ನರಿ ಹೋದಂತೆ |

ಜಲ್ಮಕ ಸಿದ್ಧ ಬರಿಯಾ ||3||

ಗುಂಪ ನೋಡರಿ ಅಣ್ಣಾ ಗುಂಪ ನೋಡರಿ |

ಕೆಂಪ ಬಿಳಿದು ಇಂಪ ಮೂರ ಬಣ್ಣದ ಗುಂಪ ನೋಡರಿ |

ತಂಪ ಅದ ತಣ್ಣಗ ಬೆಚ್ಚಗ ಬೇಕಾದರಿ |

ಕಣ್ಣಿಗಿ ಜಂಪ ಬಂದತ್ತು ಸಾವಿರ ಬಣ್ಣದ ನಿಶಾನಿ ಅವರಿ ||ಪಲ್ಲವಿ||

ಗುಂಪಕ ಹೋಗಲಕ ಹಾರಗಿ ಜೋಡ ಬಾಕಿಲ ನೋಡರಿ |

ಚಿಂಪ ಕಲ್ಲಿಗಿ ಕಟ್ಟಾರ ಒಂದೇ ಕಲ್ಲ ಕಾಣತದರಿ |

ಹಂಪಿದವರು ಸೋಳ ಮಂದಿ ಸಪ್ತಕ ನಿಂತಾರಿ |

ಗುಂಪದ ದಾರೆಗ ಬಾರ ಜ್ಯೋತಿರ್ಲಿಂಗ ಕುಂತಾವರಿ ||1||

ಗುಂಪದೊಳಗೆ ದಂಪತಿ ಪೂಜಾ ನಿತ್ಯಾ ಕಾಲರಿ |

ಸೋಮಪುರ ಹಸರ ಕುದರಿ ವೀಣಾ ಹಿಡದ ಪದ ಕೇಳರಿ |

ಡೊಂಪರ ಬಾಗರಿ ಹತ್ತ ಖಿಡಕಿ ಈಚಕ ಬರ್ರಿ |

ಮಮಪಾಹಿ ದೇವಿದಾಸ ಕಲಸಿದ ಹಾಡ ಹಾಡರಿ ||2||

ಲ್ಯಾಂಪ್ ಹಚ್ಯಾರ ಆರು ಅಂಡ ಜ್ಯೋತ ನೋಡರಿ |

ಟೆಂಪರವಾರಿ ಗುಂಡಾದೊಳು ಜಳಕ ಮಾಡರಿ |

ಮಹಾಪುರ ಯೋಗಿ ತ್ರಿಪುರ ಮಹಾಂತನ ಮುಖ ಕಾಣರಿ |

ಸಫಲ ದೊರಕುತಾದ ಪರ ಬ್ರಹ್ಮಾಮೃತ ಹನಿರಿ ||3||

ಪಂಪಾಕ್ಷೇತ್ರ ಇದಕೆ ಅನಬೇಕು ನಾಲ್ಕು ದಿಕ್ಕರಿ |

ಈ ಗುಂಪದೊಳಗ ಒಬ್ಬನೆ ಈಶಾ ದೇಶ ಆಳುವರಿ |

ಭಾವನ ಬೋಲಿ ಛಪ್ಪನ ತೊಲಿ ಜಗದಾ ಕೀಲಿರಿ |

ಸಿದ್ಧಗುಂಪ ಕಂಡು ಬಂದೇವು ಸರ್ವರಿಗಿ ಶರಣುರಿ ||4||

ಇಂಥವನಿಗಿ ಆದಿ ತಂಗಿ ಮರುಳ

ಶಾಂತ ಸರಾಫಿ ವ್ಯಾಪಾರದವರಿಗಿ |

ತಿಳಿತಾದ ಹವಳ ||ಪಲ್ಲವಿ||

ಮುತ್ತಿನ ಬೆಲಿ ಬೇಕು ಮತಿ |

ಜ್ಯೋತಿ ಕಾಣತಾದ ಎಣ್ಣಿಯಿಲ್ಲದ ಬತ್ತಿಯಿಲ್ಲದ ಪಣತಿ |

ಭಕ್ತಿಲಿಂದ ಬಂದು ಶಕ್ತಿ |

ಮುಕ್ತೇಶ್ವರನ ತೋರುವಳು

ಕೇಳಮ್ಮ ಗರತಿ ||1||

ನಿರ್ಗುಣ ನಿರಂಜನ ಮೂರ್ತಿ |

ಸಗುಣ ವೇಶ ತೊಟ್ಟು ನಿನಗ ಭೇಟಿ ಆಗತೈತಿ |

ನಿಜಗುಣ ಗುರುವಿನ ಸಂಗತಿ |

ತ್ರಿಗುಣ ರಹಿತ ಕಿಮ್ಮತ ಭಾರಿ

ಮೂಗಿನಾಗ ಮೂಗುತಿ ||2||

ಕೃತಾಯುಗ ಮೊದಲ ಬೈಲ ಮೂರ್ತಿ |

ಮತ್ರ್ಯ ಮಾಡಿದ ಇಚ್ಛಾ ಶಕ್ತಿಲಿಂದೆ ಉತ್ಪತ್ತಿ |

ಸದಾ ಸರ್ವ ದೇಹದ ಸೋಬತಿ |

ಸವದ ಜೀತಾ ಆಗಿದವರಿಗಿ

ಆಗ್ಯಾರ ಸಾರಥಿ ||3||

ತಿಳಕೊಂಡು ಕೊಟ್ಟಿ ನೀ ಕೊರಳ |

ಒಳ್ಳೆ ತಿಳಕೊಂಡು ನೋಡಿದರೆ ಅವನಿಗಿಲ್ಲಾ ನೆರಳ |

ಗೋಳ ಯಾಕ ಎಣಿಸುತ ಮಾಳ |

ನಾಳ ಬೇಕೆಂದು ಕುಂತಾರ

ಸಿದ್ಧನ ಭಜನಿ ಮೇಳ ||4||

ಆರೂಢನೆಂದರೆ ಅದ್ವೈತ ಮಾರ್ಗವನು

ಈರೂಢನಿಗೆ ಇಲ್ಮಾ ಗೊತ್ತೇನೂ |

ಭಾರೂಢ ಹಾಡಿ ಹಾಡಿ | ತಮ್ಮಾ ಜಗದೊಳು ಸೋತೆನೊ |

ಇಡಾ ಪಿಂಗಳಾ ಕುದುರಿ ಮ್ಯಾಲೆ ಕುಂತೇನೊ |

ಕಂಡ ಕಂಡಲ್ಲೆ ನೀವು | ಉಂಡುಂಡು ಬರತೀರೇನೋ |

ಮಂಡಲದೊಳು ನಿಮ್ಮ ಮತ ಏನೋ ||ಪಲ್ಲವಿ||

ಹೇಳಿದರೆ ಕೇಳೊದಿಲ್ಲಾ ಕೇಳಿದರೆ ನಗತಿರೆಲ್ಲಾ

ಫಾಳಿ ಮ್ಯಾಲೆ ಮಾಳಗಿ ಕಟ್ಟಾರ ಕಂಡಿರೇನೊ |

ಭೂಮಿ ಮ್ಯಾಲೆ ಬೆಳದಿದ | ಬಿಟ್ಯಾರ ಉಂಡಾರೇನೊ |

ಅಪ್ಪಾ ಉಪದೇಶ ಪಡದ ಮೇಲೆ ಭಂಡಾರೇನೊ |

ಭಂಡ ಸತಿ ಮಾತ ಕೇಳಿ | ಅಂಡ ಪತಿನಾಗಿ ಭಗಳಿತೇನೊ

ಬ್ರಹ್ಮಾಂಡದೊಳು ಹುಟ್ಟಿ ಪುಂಡರೇನೊ ||1||

ಅಷ್ಟ ವರ್ಣಾ ಕ್ರಿಯಾದ ಮೂಲ ಕಷ್ಟ ಬಿಟ್ಟಿದವನೇ ಬಲ್ಲಾ

ಸೃಷ್ಟಿಯೊಳು ರೇವಯ್ಯ ಸ್ವಾಮಿಗಿ ತಿಳದಿರೇನೊ |

ಎಷ್ಟ ಸರತಿ ಮೈತೊಳದರ | ಶೀಲವಾದತೇನೊ |

ಅಪ್ಪ ನಿಷ್ಠೆಲಿ ಲಿಂಗಪೂಜವಾದತೇನೊ |

ಮುಷ್ಟಿದಾಗ ಮುಚ್ಚಿಟ್ಟ ಮಾತು | ಚಾಷ್ಟಿಲಿಂದ ತಿಳಿತೇನೊ |

ಅಷ್ಟಮಿ ಶನಿ ಸಂಕಟದೊಳು ವೆಂಕಟನೊ ||2||

ನೀರಿನ ಮೇಲಿ ಬರಿಯ ಬರೆದರ ಬರಿ ಕಾಣಿತ್ತೇನೊ ಮನುಜಾ

ತೇರ ಮೇಲೆ ಕುಂತು ಮೆರೆದರೆ ಸುಖವೇನೊ |

ದಾರಿ ಪಿಡದ ನಡದ ಮೇಲೆ | ಅವರಿಗಿ ದುಃಖ ಏನೊ |

ಅಪ್ಪಾ ಗುರಿಯಿಲ್ಲದೆ ಗುಣಾಕಾರ ಭಾಗಾಕಾರ ಲೆಕ್ಕಯೇನೊ |

ಚಿಕ್ಕಂದ ಮುಕ್ಕ ಹಾಕಲಿಕ ಕಲ್ತು ಅಕ್ಕ ನಾಗಮ್ಮನ ಗವಿಯೊಳು

ಕಕ್ಕಲಾತಿಗಿ ಜಪ ಮಾಡಿದರ ಸಿಕ್ಕತ್ತೇನೊ ||3||

ತನ್ನ ತನ್ನ ಧರ್ಮಾದ ಖೂನಾ ತನುವಿನಲ್ಲಿ ತಿಳಿದು ಮೌನ

ತಾ ಸತ್ತ ಮೇಲೆ ಪುನಃ ಉಳಿವದೇನೊ

ಮೂಕಗ ಸಕ್ಕರಿ ರುಚಿ | ಹ್ಯಾಂಗ ಏನ ಅಂದರ ಹೇಳ್ಯಾನೊ |

ಅಷ್ಟಾ ಸಾಕ ಯಾವುದು ಬೇಕ ಯಾವುದು ತಿಳದಾತನೊ |

ಈ ಸುದ್ದಿ ಒಯ್ಯದ ಸ್ವರ್ಗಕ | ಅಸುದ್ಧಿ ಆದ ಸಾಧು

ಸಂತ ತುಕಾರಾಮನ ಗಾತಾ ನಿಲಕೇನೊ ||4||

ಅಗ್ನಿಚಕ್ರ ದಳ ಸಹಸ್ರ ಶಿವ ನಾಮಾವಳಿ,

ಕಸರಯಿಟ್ಟು ಒದಿ ಹೆಸರ ಆದತೇನೊ |

ಹೆಪ್ಪವಿಲ್ಲದೆ ಮೊಸರಿನ | ಹದನವಾದಿತೇನೊ |

ಅಪ್ಪ ಮುಪ್ಪ ಆದ ಮೇಲೆ ತಾಲೀಮ ಕಲ್ತರೇನೊ |

ಆರೂಢ ಆಚಾರ | ಶಂಭೂಲಿಂಗನೆ ಬಲ್ಲ

ಚಾಮರೆಡ್ಡಿ ಮಲ್ಲಪ್ಪ ಮಲ್ಲಿಕಾರ್ಜುನ ಆದನೊ ||5||

ನಿತ್ಯರೊಜ ನಡಿವಾ ಕ್ರಿಯಾ ಸತ್ಯ ಹೇಳಿ ಸ್ವಾಮಿ

ಮುತ್ಯಗ ಮರತವರ ಮುಂದ ಗತಿಯೇನೊ |

ಮೂರು ಉಂಡು ಉಂಡು | ಪತ್ಯ ಹೇಳಿದ ಮಲಕಪ್ಪನೊ |

ಅಪ್ಪ ಕೇಳಿ ಅರು ಮರು ಹುಚ್ಚಾ ಜತಿ ಪಾಲನೊ |

ಯಾರ ಯಾರಿಗೆ ಸಿಕ್ಕಿದಲ್ಲಾ | ಸಿಕ್ಕಾದ ಖರೇ ಅನುಮತಿರಿಕಲ್ಲಾ |

ಈಗಿಂದ ಈಗ ನೋಡಲಕ ಹಾಂವುಗಾರ ಆಟಯೇನೊ ||6||

ಜ್ಞಾನ ಉಪದೇಶ ಕಾಯಾ ಪುನಃ ಜಲ್ಮಾಆಗೋದಯ್ಯ

ಜ್ಞಾನವಿಲ್ಲದೆ ಮೌನ ಮುದ್ರ ಫಲವೇನೊ |

ಶ್ವಾನಗ ಭಂಗಾರ ಸರಗಿ | ಕೊರಳಗ ಮಾಳಯೇನೊ |

ಅಪ್ಪಾ ಮಾನ ಅಪಮಾನ ಎರಡು ತಿಳದ ತಾನೂ

ತಾಸು ತಾಸಿಗೆ ಗುರು ಮಡಿವಾಳ | ಅವತಾರ ತೊಟ್ಟು

ಆಶಿ ಮಾಡಿ ಬೇಡಿಕೊಂಬರ ದೋಷಿವಾಗದೇನೊ ||7||

ದೇವಿದಾಸ ಸಣ್ಣ ಪ್ರಾಣಿ ಚಕ್ರದಳ ಸಾವಿರ ಖಣಿ

ನೀರಂಕಾರ ಬ್ರಹ್ಮನ ರಾಣಿ ಸೇವಾ ಪಿಡಿದಾನೊ |

ಎರಡು ಸೂರ್ಯ ಚಂದ್ರ | ದಳ ನೋಡಿ ಹುಚ್ಚನಾದನೊ |

ಅಪ್ಪ ಎರಡು ಎಂಟು ಝೋಲಿ ಫುಟದ ಬಿರಿ ಅಂದನೊ |

ಎರಡು ಆರು ಎರಡು ಐದು ಎರಡು ಮೂರು ಎರಡು ಎರಡು

ಬೆಡಗ ಬರಿದು ಸರ್ವರಿಗೆ ಶರಣಂದನೊ ||8||

ಓದಿ ನೋಡಿ ನಿಂದ್ಯಾ ಬ್ಯಾಡ ಪರದಿ ಬಿಟ್ಟು ಸಂಧ್ಯಾ ಬ್ಯಾಡ

ಮೆಂದಿಗಿಡಾ ಮದಿ ರಜಗಿಲ್ ಮವ್ವ ಇಲ್ಲೇನೊ |

ಗೋಧಿ ಬಿತ್ತಿದರೆ | ತೆಳ್ಳ ಮೇಲ ಆದತ್ತೇನೊ |

ಅಪ್ಪಾ ತುದಿಗಾಲಿನ ಮೇಲೆ ನೀ ಮುಟ್ಟಿಯೇನೊ |

ಸೃಷ್ಟಿದೋಳು ಇರೋಸ್ಥನ | ಚಾಷ್ಠಯೊಳು ಇರುಬ್ಯಾಡ

ಪುನಃ ನಿಷ್ಟಿಯಿಟ್ಟು ಕಷ್ಟ ಸಿದ್ಧಾರೂಢನೊ ||9||

ಗುರು ಉಪದೇಶ ನರ ಪಡಿದು ಈ ಲೋಕದೊಳು |

ಮೂಕಾಗಿ ಇರುವದು ಬಲು ಬಹುಮಾನವೆ ||ಪಲ್ಲವಿ||

ಕಾಲಮಾನ ಪರಸ್ಥಿತಿಯ ತಿಳಿಯದೆ |

ಮೂಲ ಮಂತ್ರ ಒಲ್ಮಿ ವಾಗಲಾರದೆ |

ತೈಲವಿಲ್ಲದ ಜ್ಯೋತಿ ಕಾಣಲಾರದೆ |

ಬೊಗಳುವದು ಶುದ್ಧ ಅಜ್ಞಾನವೇ ||1||

ಮೂರು ಮಲಗಳು ತೊಳೆದು ಮೇಲ ಮಾಡಿ |

ಬೈಲೊಳು ಭೇರಿ ನಾದ ಕೇಳದು ಬಲು ಲೇಸುವೆ |

ಕೇಳಿ ಹೇಳುವದಲ್ಲಾ ಚಾಷ್ಠಿಯ ನುಡಿಯ |

ನಡಿ ನಡದವನಿಗಿ ಕಷ್ಟವು ತಿಳದ ಮೇಲೆ |

ತಿರುಗಾಡ ಭ್ರಷ್ಟನು ದುಷ್ಟ ಪರ್ವತ ದೋಷವೆ ||2||

ಜಪ್ಪಸಿ ನಡಿವದೆ ಜಪಾ ತಪ್ಪಲಾರದೆ ಇರುವದೆ |

ನಾಮ ಸ್ಮರಣಿಯೊಳು ಇರುವದು ಹಿರಿತನವೆ |

ರಜ ತಮ ಸತ್ವ ತ್ರಿನೇತ್ರ ಬ್ರಹ್ಮ ವಿಷ್ಣು ರುದ್ರರು |

ಆರು ನಾನೆಂಬಾ ಅರ್ಥ ಅರಿಯದೆ ನವವಿಧ ತಪ ವ್ಯರ್ಥವೆ ||3||

ಪರಬ್ರಹ್ಮ ನಿಜಬೈಲ ತಿಳಿದು ತಿಳಿಯದೆ |

ತ್ರಿಲೋಕ ತ್ರಿಗುಣ ರಹಿತನಾದವ ಭವಪಾರವೆ |

ಪರ ಬೈಲವು ತಿಳಿಯದೆ ನರ ಘೋರ ಜಪವನು ಮಾಡಿ |

ನೀ ಮೂರ ಮೂಲಗಳು ನಟ್ಟಿದಾ ಬೇರ ಕಿತ್ತಿ ಸುಟ್ಟ ಮಡಿವಾಳ ಗುರುವೆ ||4||

ಬುದ್ಧಿವಂತರಿಗಿ ಬೆನ್ನು ಹತ್ತುವದು |

ಬೆಡಗಿನ ಪದ ಒಂದೇ |

ಸಿದ್ಧಿ ಸಾಧಕರಿಗಿ ಸಾಧನ ಆಗುವುದು |

ಹೊಳಿ ದಾಟದು ತಂದೇ ||ಪಲ್ಲವಿ||

ನೀರ ಮೈನೆರದಿದು ಸುದ್ದಿ ಬಂದದೆಂದು |

ಅನುಭಾವಿಕರಿಗೆ |

ಯಾತರಲಿಂದೆ ಮೈ ತೊಳಿಬೇಕು ನೀರಿಗೆ |

ಹೊಗಬೇಕು ಯಾರ ಅಲ್ಲಿಗೆ ||1||

ಭೂಮಿ ಸತ್ತರೆ ಹೊಳಬೇಕು ಎಲ್ಲಿ |

ಹೊದಿಬೇಕು ಯಾರ ಭೂಮಿಗೆ |

ಸ್ವಾಮಿ ಬಲ್ಲ ಈ ಪದದ ಅರ್ಥ |

ತಿಳಿವುದು ಸತ್ತವಗೆ ||2||

ಬೆಂಕಿಗೆ ಚಳಿ ಬಂದರೆ ಕಾಸಬೇಕು |

ನಾವು ನೀವು ಹ್ಯಾಂಗೆ |

ವಂಕಿ ಬೇಡಿ ಘಾಳಿ ಆಡುವುದು |

ಇಡಬೇಕು ಅದಕ ಹ್ಯಾಂಗೆ ||3||

ಶುದ್ದ ಸಿದ್ದ ಪ್ರಸಿದ್ಧ ಪ್ರಸಾದ |

ಯಾರ ಪಡದಾರ ಹಿಂದೆ |

ಸಿದ್ಧನ ಪದಗಳು ಅರ್ಥ ಮಾಡಿದರೆ |

ಈ ಭವದೊಳು ಮುಂದೆ ||4||

ನೌಕರಿ ಇರತಿರೇನೊ ನಿರ್ಮಳ ಗುರುವಿನ ಸ್ಥಲ |

ಅಕರಿ ಆಡಲದಂಗ ಝಳ ಝಳ ||ಪಲ್ಲವಿ||

ಮುಂಜಾನೆ ಏಳಬೇಕು ಮೂರ ಮನಿ ಉಡಗಬೇಕು |

ಹಿರಿಮನಿ ಪಡಸಾಲಿ ಅಂಗಳ |

ಗುಂಜಲಿಂದ ಒರಸಿ ಅಡಗಿ ಸಾಮಾನ ಸ್ವಚ್ಛ ಗಂಗಾಳ |

ಮುಂಚೆ ವೈರಿ ತನಕ ದುಡಿಬೇಕು ಬಾರಾಸೇ ತಿಂಗಳ |

ಭಾರಿ ಮನಸು ಇರಬೇಕು ದಯಾಳ ಸರಿ ಇರತನ ಸಂಬಳ ||1||

ಊರ ಮುಂದಿನ ಹೊಲಕ ಹೊಗಬೇಕು | ಆರು ಎತ್ತು ಬಿಟಕೋಬೇಕು

ಮೂರಾರು ಬೀಗ್ಯಾಕ ನೇಗಿಲ ಪಾಳಿ ಸೋಳಾ |

ಆರೆತ್ತು ವೈದು ಮೈಸಬೇಕು ಬ್ಯಾರೆ ಬ್ಯಾರೆ ಅವಬೀಳಾ |

ಸಾಕರಿ ಕಿರಾಣಿ ದುಕಾನದೊಳು ಗೋಳಾ | ಸೀರಿ ಯ್ಯಾಪಾರ ಜೋಳ ||2||

ಗರ್ಜಿನ ಮಾತ ಬಿಡಬೇಕು | ಅರ್ಜುನಂತೆ ಮಾತ ಕೇಳಬೇಕು |

ವಿರಾಟ ರಾಪ ನೋಡಬೇಕು ಥಳ ಥಳ |

ಅನ್ಯರಿಗಿ ಕಾಣಿಲ್ಲ ವಿರಾಟರೂಪ ಕಾಣಬೇಕು ಥಳಥಳ |

ಮತ್ತ ಒಂದು ಮಾತು ನಿತ್ಯ ಘಳಗಿ ಗುರು ಭಜನಿಯ ಸ್ಯಾಳಾ |

ಗುಣದಕ್ಕಿಂತ ಬೆಲಿವಿಲ್ಲ ಹೀರಾಹವಳ ಬರ್ರಿ ನೌಕರಿಗಿ ನಾಳ ||3||

ಸತಿಪುತ್ರ ಸರ್ವಾಬೇಕು | ಸನ್ಯಾಸಿ ಆಶ್ರಮ ತೊಕೋಬೇಕು

ಐಂಸಿ ವರ್ಷಾ ಆದ ಮ್ಯಾಲ ಆಗಭವಳ |

ಚಾಳಿಸ ವರ್ಷಾದೋಳು ನೌಕರಿ ಕೂಡಬೇಕು ಇತಲಾ |

ವಂಶಾ ಪರಂಪರಾ ಪಿಂಚಣ ಕುಡುವರೋ ನೀರಾಳ |

ಆಕರಿ ನೌಕರಿ ಕೇಳಂದರ ಗುರುಗಳ | ಬರ್ರಿ ಸಿದ್ಧಾನ ಮೇಳ ||4||

ನನ್ನ ಗಂಡ ಇಂಥವ ನೋಡ ಗುಂಡ |

ಈ ಬ್ರಹ್ಮಾಂಡ ಗುರುಸ್ವರೂಪ ಭಕ್ತಿಮಾರ್ಗ ಹಿಡಕೊಂಡ ||ಪಲ್ಲವಿ||

ಎನ್ನ ಪಂಚ ತತ್ವದ ಸೀರಿ ತಾನೇ ಕಳಕೊಂಡ |

ನಿರ್ಬೈಲ ನದಿಗಿ ಹೋಗಿ ಬಂದರೊ ಒಕ್ಕೊಂಡೂ |

ತ್ರಿಕಾಲ ಪೂಜೇಕ ಕುಂತು ತಾನೇ ದುಡಕೊಂಡ ||1||

ಹಸಿದಿಲ್ಲಾ ಒಣಗಿದಿಲ್ಲಾ ಕಟಗಿ ತಂದ ಪುಂಡ |

ಕೆರಿ ಬಾವಿ ತೊರಿಗಿಲ್ಲ ನೀರ ತಂದ ಅಖಂಡ |

ಬೆಂಕಿಯಿಲ್ಲದೆ ಜ್ಞಾನ ಜ್ಯೋತಿಲಿ ಪುಟು ಮಾಡಿಕೊಂಡು ||2||

ನಿರ್ಬೈಲದ ಅಕ್ಕಿ ತಂದ ಪುಂಡ |

ಒಮ್ಮೆ ಅನ್ನ ಮಾಡಿ ಇಟ್ಟ ಗೋಲಿ ಮಾಡಿ ಚೆಂಡ |

ಇವತ್ತಿಗಿ ಸರಿವಲ್ಲದು ಪರುಷ ಆಯಿತು ನವಖಂಡ ||3||

ಈಗೆ ಹೋದಳಮ್ಮ ಎಂಕಮ್ಮ ಉಂಡ |

ಹಾಂಗ ಹಿಂಗ ಆಡಿದವರ ಜಲ್ಮ ಆದ ದಂಡ |

ಗಂಡನ ಸೇವಾದೊಳಗೆ ಇದ್ದರ ಮನ್ಯಾಗಯಿಲ್ಲ ಭಂಡ ||4||

ಸತಿ ಪತಿ ನನ್ನ ಕಣ್ಣ ಎದುರು ಕಂಡಾ |

ಗುರುತಾಯಿ ರೇವಮ್ಮ ರೇವಯ್ಯ ಸ್ವಾಮಿ ಪಿಂಡ |

ಸಿದ್ಧನ ಪದಗಳು ತಿಳಿದಂವ ತಾನೆ ತಿಳಿಕೊಂಡ ||5||

ಚಲತಿ- ಗಂಡ ಹಿಂತವ ಇರಬೇಕ |

ಬ್ರಹ್ಮಾಂಡದೊಳಗ ಕಾಣಬೇಕ ||

ಜೀವ ಇರುವ ಪರಿ-ಪರಿಯ |

ಕಾಯಾ ಬೀಳುವದು ಅರಿಯ | ಸಲ್ಲ

ಜೀವ ಹೋಗಬಾರದಂದು |

ಮಾಡ್ಯಾರ ಶೋಧ ಒಂದು ||ಪಲ್ಲವಿ||

ಕಾಲಮರಣ ಘಡಿ | ಪ್ರಾಣಾಯಾಮ ಮಾಡಿ |

ಜೀವ ವತ್ತಿ ಹಿಡಿ | ಪಶ್ಚಿಮದ ಥಡಿ ||1||

ಋಷಿ ಮುನಿಗಳವು | ಮಾಡಿ ಹಿಂಥ ಕಳವು |

ಉಳಸಿದಾರೋ ಜೀವು | ತಪ್ಪಿತ ಆಗ ಸಾವು ||2||

ಸ್ವಯಂ ಆದ ಭಕ್ತಾ | ಆದವನೇ ಜೀವನ ಮುಕ್ತ |

ಮರಣದ ಆಗ ಚಿಂತಾ | ಪತಾ ಇಲ್ಲದಂಗ ಆಯಿತ ||3||

ಮಾಡಿ ಮಾಡಿ ಮುದ್ರಾ | ಏಸೋ ದಿವಸ ಇದ್ರ |

ಒಂದಿನ ಬರುವ ಭದ್ರಾ | ಆಗವದು ಚಿದ್ರ ಚಿದ್ರ ||4||

ಮರಣದ ಬಾಯಿ ಒಳಗ | ಪಾತಾಳ ಮತ್ರ್ಯ ಸ್ವರ್ಗ |

ಉಳಿವದು ಎಲ್ಲಿ ಜಾಗ | ದೇವ ಸಿದ್ಧರೀಗಾ ||5||

ಚಲತಿ- ಅಬ್ಬ ಮರನಾ ಜಬ್ಬ ಮರನಾ |

ಮರನೆ ಕೆ ವಾಸ್ತೆ ಕ್ಯಾಂವ ಡರನಾ ||

ಚಿಂತಿಯೊಳು ಎಂಥಾ ಚತುರಾಯಿ,

ಅಂತರಂಗ ಆಯಿತು ಪ್ರೀತಿ ||ಪಲ್ಲವಿ||

ಹಂಚಿಕಿ ಹ್ಯಾಂಗ ಆಯಿತು ಮೊದಲಾ |

ಮುಂಚ ಪಂಚತತ್ವ ಇಲ್ಲಾ |

ಮಿಂಚಿಲಿಕೆ ಸಗುಣೆ ಇಲ್ಲಾ |

ಉಚ್ಚ ಪದವಿ ಬೈಲೆ ಬೈಲಾ |

ದೃಷ್ಟಿ ಹಚ್ಚಿದರೆ ಇಚ್ಛಾ ಶಕ್ತಿಲಿಂದ

ಸೃಷ್ಟಿ ನಿರ್ಮಾಣ ಬಲ್ಲವರಿಗಿ ಗುರುತು ||1||

ಪ್ರಶ್ನ ಹ್ಯಾಂಗ ಆ ಪರಬ್ರಹ್ಮ |

ಉತ್ಪನ್ನ ಹ್ಯಾಂಗ ಮಾನವ ಜಲ್ಮ |

ಅಪ್ಪನ ಮಗ ಆದವ ತಮ್ಮಾ |

ನೆಪ್ಪ ಬಂದರ ಮೈಯೆಲ್ಲ ಜುಮ್ಮಾ |

ಸಂತರ ಸಂತ್ಯಾಗ ನಿಂತ ಕೇಳದಾ |

ತಾಳ ಮೃದಂಗ ವೀಣಾ ಸಿದ್ಶಪದ ಗತ್ತು ||2||

ನಾಶ ನೀನು ಆಗುವನಲ್ಲ |

ದೋಷ ನಿನಗ ಯಾವುದು ಇಲ್ಲ |

ದೇಶದೊಳು ಸುಳಿಹುವನಲ್ಲ |

ಕೂಸಿನಂತೆ ಬೆಳಿಹುವೆನಲ್ಲ ||ಪಲ್ಲವಿ||

ಮಾತಾ ಪಿತಾ ನಿನಗ್ಯಾರ ಇಲ್ಲ |

ಸತ್ತು ಹುಟ್ಟುವ ವಸ್ತುವೆ ಅಲ್ಲ |

ನಿನ್ನ ತೃಪ್ತಿ ಯಾವುದು ಇಲ್ಲ |

ಬೋಧಕರಿಗೆ ತಿಳಿಹುವದಲ್ಲ ||1||

ಶೋಧ ಮಾಡಿದ ತಾ ಚೇಲ |

ಭೇದ ರಹಿತ ಗುರುನೆ ಬಲ್ಲ |

ತಿದ್ದಿ ಮಧ್ಯ ಊಧ್ರ್ವ ನಿರಾಳ |

ಸಿದ್ಧ ಸಗುಣ ಆ ಬೈಲವೆ ಬೈಲ ||2||

ಚಲತಿ -ಕತ್ತಲ ಹೋಗಿ ಬೆಳಗ ಆಯಿತು ಕಂಡೆ |

ಹೊತ್ತೇರಿ ದಾರಿ ತಪ್ಪಿತು ಕಂಡೆ ||

ಎಷ್ಟು ವರ್ಣಿಸಲಿ ಎಷ್ಟು ಶೋಧಿಸಲಿ

ದೃಷ್ಟಿ ಎದುರು ಗುರು ನಿಲ್ಲುವಲ್ಲಿ ||ಪಲ್ಲವಿ||

ನಿಮ್ಮ ವಾಸ ಇರುವುದು ಎಲ್ಲಿ ಹೋಗಿ ಹುಡಕಲಿ |

ಕೈಲಾಸ ಇದೆ ಎಂದು ಹ್ಯಾಂಗ ತಿಳಕೋಲಿ |

ಸೃಷ್ಟಿ ಪಾಲ ಪ್ರಭು ಕಾಣುವಲ್ಲಿ ಕಾಣುವಲ್ಲಿ ||1||

ನಿಮ್ಮ ಖೂನಾ ಕೇಳಿದವರಿಗಿ ಏನ ಹೇಳಲಿ |

ಬ್ರಹ್ಮದೇವರಿಗಿ ದೊರಿಯಲಿಲ್ಲ ನಿಮ್ಮ ನೆಲಿ |

ಸೃಷ್ಟಿ ಜನಕ ಸನಮತ ಎಲ್ಲಿ ಎಲ್ಲಿ ||2||

ಮುಂಚ ನಿರ್ಗುಣ ಪ್ರಭು ನೀನೇ ಸತ್ಯ |

ಪಂಚ ತತ್ವಗಳು ಕಾಣೋದೆಲ್ಲಮಿಥ್ಯಾ |

ನಿಷ್ಠಿ ಭಕ್ತ ಸಗುಣ ರೂಪ ತಾಳಿ ರೂಪ ತಾಳಿ ||3||

ಮನುಷ್ಯ ಜಲ್ಮಾ ಬಂದು ಉಪದೇಶವಿಲ್ಲಾ |

ನಿರ್ಗುಣ ಪ್ರಭುನ ಮಹಿಮಾ ತಿಳಿವೋದಿಲ್ಲಾ |

ಎಷ್ಟು ಶಾಸ್ತ್ರ ಓದಿ ಖಾಲಿ ಖಾಲಿ ||4||

ಜ್ಞಾನಿಗಳಿಗೆ ಅಭಮಾನ ಉಂಟೇನೋ |

ಪರತತ್ವ ತಿಳಿದ ಮೇಲೂ ಹುಡಕದು ಗಂಟೇನೋ |

ಚಾಷ್ಠಿಲಿಂದೆ ಸಿಕ್ಕತೇನು ಸಿದ್ಧನ ನೆಲಿ ಸಿದ್ಧನ ನೆಲಿ ||5||

ಸಾಧು ಏರಿದ ಶ್ರೀಶೈಲಗುಡ್ಡ |

ಬೋಧು ಅಂದಿದರೆ ನೀ ಆದಿ ದಡ್ಡ |

ಶೋಧ ಮಾಡಿ ಕಲ್ಲ ಒಡದಿ ವಡ್ಡ |

ಸಾಧಿಸಿ ಬೆಳೆಸಿದ ಪಂಚಸ್ತಾನ ಗಡ್ಡ ||ಪಲ್ಲವಿ||

ಅಂಗದ ಗುಣಗಳು ಅಳದಿದ ತಂಗಿ |

ಭೃಂಗನಾಗಿ ತಾ ಬಿಗದಿದ ಭಂಗಿ |

ಲಿಂಗಮಯನಾಗಿ ಸುತ್ತಿದ ಲುಂಗಿ |

ಸಂಗ ತ್ಯಜಿಸಿದರು ಗುಣ ಢಂಗಿ |

ರಂಗ ಕಾಣದೆ ತೊಟ್ಟು ನೀಲಂಗಿ |

ಮಂಗ ತಿಳಿಬ್ಯಾಡ ನೀ ಭೈರಂಗಿ ||1||

ಬೋಧಾಮೃತ ನಿತ್ಯ ಹೋಗಿ ತಾ ನುಂಗಿ |

ಭೇದರಹಿತ ನಿತ್ಯ ಉಂಡಿದ ಚೊಂಗಿ |

ಖಮ್ಮಗ ಉಂಡು ಹ್ಯಾಂಗ ಏರಿ ಹೊಡ್ಡ |

ಜಲ್ಮಕ ಬಂದ ಮೇಲೆ ತೊಳಿದಂವ ಜಿಡ್ಡ |

ಕಲಮ ಎಡ ನಾಸಿಕ ಇಳದ ಬಂದಾ ಆರೂಢ ||2||

ನೀರಾಗ ಎಮ್ಮಿ ಕುಂತಾದ ತಂಗಿ |

ಧಾರಣಿ ಹ್ಯಾಂಗ ಮಾಡಬೇಕು ಕೊಂಬ ನೋಡಿ ಮಂಗಿ |

ಅಂಗಳ ಉಡುಗು ತೊಗೊ ಜ್ಞಾನದ ಸೊಡ್ಡ |

ಹಿಂಗ ಕೂಡಬಾರದು ಕೈ ಊರಿ ಲಡ್ಡ |

ತಿಂಗಳಿಗಿ ಒಮ್ಮಾರ ಸಿಗುವದು ದುಡ್ಡ |

ರಂಗ ಕಂಡಿದಂಗೆ ಕಡಿ ಮೂರು ಝಡ್ಡ ||3||

ಮಾತ ಆಡಬಾರದು ಬಾಯಿಲಿ ಜಂಗಿ |

ಸೋತ ಕುಂತಿದಾರೆ ಬಡತಾನ ಹಿಂಗಿ |

ಸಿದ್ಧ ಕಂಡಾ ಕತಲಾಗ ಒಂದು ಕೊಂಡ |

ಸುದ್ಧ ಮುಗಲೂಚ ಇತ್ತಪ್ಪ ಬುಡಾ |

ಬದ್ಧ ಸುಟ್ಟ ಹೋಯಿತು ಬೆಳೆದಿದ ಕಂಡಾ |

ಸಾಧುರ ಮನಿಗಿ ಬಂದು ಹೈನಾಯಿತು ಗೊಡ್ಡ ||4||

ಚಲತಿ- ಸಗುಣ ನಿರ್ಗುಣ ತಿಳದಂವ ಸಾಧು |

ಶಿವಗುಣ ಅವಗುಣ ಮಾಡಿದ ಸೋಧು ||

ಬಾಬಾ ತಾಳ ಏಕತಾರಿ ಹಿಡಿ |

ತಾಳ ಗತ್ತಿಲಿ ಒಂದು ಪದ ನುಡಿ ||ಪಲ್ಲವಿ||

ಸದಮಲ ಜ್ಞಾನದ ಕುದಿ ಉಕ್ಕಿ ಬರುವ |

ಮದ ಮಚ್ಚರ ಉರಿ ಪುಟು ಮಾಡುವ |

ನಾದ ಬ್ರಹ್ಮ ಗುರು ಪ್ಯಾಲಾ ಕುಡಿ ಪ್ಯಾಲಾಕುಡಿ ||1||

ಕತ್ತಲ ಹರಿದು ಜ್ಯೋತಿ ಪ್ರಕಾಶ ಪದವ |

ತತ್ವಜ್ಞಾನ ಗುರು ಉಪದೇಶ ಪದವ |

ಮಾಯಾ ರಹಿತ ಕರ ಟಾಳಿ ಬಡಿ; ಟಾಳಿ ಬಡಿ ||2||

ಪರರ ನಿಂದ್ಯ ಬಿಟ್ಟು ಒಂದ ನೀ ಪದವ |

ಪ್ರಾಸ ಪ್ರಾಸಕ ನಡಿ ನುಡಿ ಪದವ |

ಪರ ಉಪಕಾರದೊಳು ಮನಹಿಡಿ ಮನಹಿಡಿ ||3||

ಏಕವೀಸ ಹಜಾರ ಛೆಸ್ಯ ಜಪವ |

ಸಾವಿರ ಐವತ್ತ ದಳದ ತಪವ |

ಅನುಭವದಿಂದ ಗುರುಮಂತ್ರ ಹಿಡಿ ಮಂತ್ರ ಹಿಡಿ ||4||

ದೇವಿದಾಸ ಬರದ ಇಟ್ಟಿದ ಪದವ |

ವಿಶ್ವಾಸದಿಂದ ಮಾಡೋ ಏಕಾಂತ ಸೋಧವ

ತಿಳಿದ ಹಾಡು ನಿರ್ಬೈಲ ಗುಡಿ ನಿರ್ಬೈಲ ಗುಡಿ ||5||

ಸಿದ್ಧನ ಮದ್ದ ತಿನರಿ |

ಇಕೋ ಇಕೋ ಸಿದ್ಧನ ಮದ್ದ ತಿನರಿ |

ಸಿದ್ಧ ಮದ್ದ ಇದು ಬದ್ಧ ಮನದ ಬಯಲ ಆಗಿ |

ಶುದ್ಧ ಆಗುವ ಔಷಧ ತೊಗೋನು ಬರ್ರಿ ||ಪಲ್ಲವಿ||

ಜ್ಞಾನವೆಂಬ ವನಸ್ಪತಿ |

ನಾನಾ ಅಕ್ಷರ ಧ್ಯಾನವೆಂಬ ವೃಕ್ಷಾ ಜಾತಿ |

ಷಡಕ್ಷರ ವೃಕ್ಷ ಕೊಡಿ |

ಲಕ್ಷ ಕೊಟ್ಟು ನಿಖಿಲಾಕ್ಷ ಕಲಬತ್ತಿನೊಳು |

ಅರದು ಅಮೃತ ಗುರಿ ||1||

ಕಾಮ ಹಮ್ಮು ತೆಲಿಗೇರಿ |

ಕಮ್ಮ ಜ್ಞಾನ ಜಾಮ ಎಲ್ಲಾ ಕಳದು ಆಯಿತ್ರಿ |

ರೋಮ ಋಷಿಗಿ ಕೃಷ್ಣ ಪಾರ್ಥಗ ತೋರಿದ |

ದಿಮ್ಮ ಹತ್ತಿ ಅರ್ಜುನ ಆಗ |

ಸುಮ್ಮ ಬಿದ್ದ ಕೈಯ ಸವರಿ ||2||

ಭವ ರೋಗಿಗಳು ಬನ್ನಿರಿ |

ಭವ ನೀಗಿ ಸೋಮ ಮರ್ದನ ಮದ್ದ ತಿನ್ನರಿ |

ಭಾವ ಭಕ್ತಿಗಿ ಬರ್ರಿ ಕಾವ ಮೀರಿ ಹೋಗುತಾದ |

ಸಾವ ಸನಿ ಬಂದ ಮೇಲೆ |

ದೇವಲೋಕ ಹೊಯಿತು ಮೀರಿ ||3||

ಕಣ್ಣ ಮುಚ್ಚಿ ಮದ್ದ ಕುಡಿರಿ |

ಹೆಣ್ಣ ಮಕ್ಕಳು ಮೂಗು ಮುಚ್ಚಿ ಕಿವಿ ಕೊಡಿರಿ |

ಬಣ್ಣದ ಮಾತು ಅಲ್ಲಾ ಸಣದೊಂದುಮಾತು ಕೇಳು |

ಹಣ್ಣ ಮಾರುವರ ಕೇರಿಗಿ ಹೋದರ |

ಕಣ್ಣ ತೆಗೆದು ಹಿಂದಕ ಸರಿ ||4||

ಪತ್ಯಾ ಮೂರು ದಿನಸ ಬಿಡರಿ |

ಸತ್ಯದ ಮಾತು ಭವರೋಗಿಗಿ ಈಡ ಇಲ್ಲರಿ |

ಮುತ್ಯಾ ಮಡಿವಾಳ ಯೋಗಿಗಿ |

ನಿತ್ಯ ಭಜಿಸಿದರೆ ಮಿಥ್ಯದ ರೋಗ ಹೋಗಿ |

ಸತ್ಯ ಸ್ವರ್ಗವು ಸೇರಿ ||5||

ಪಂಡಿತರಿಗಿ ಸೇರಿಕಿಲ್ಲರಿ |

ಅಖಂಡಿತ ಕೈ ಸೇರಿದವ ಬಲ್ಲರಿ |

ದಂಡ ದಂಡವತ ಪಿಂಡ ಬ್ರಹ್ಮಾಂಡ ನವಖಂಡ |

ಕಂದಗೂಳ ಗುಂಡ ಅರಿದ |

ಔಷಧ ತಿನು ಬರ್ರಿ ||6||

ಶಂಭೋನಗರದೊಳು |

ಕುಂಬಾರ ಇರುವನು |

ನೇಂಬಿಗಿ ಜಗದಂಬಿ ತಂಗಿ |

ನಿತ್ಯ ಸ್ನಾನ ಮಾಡಿ ಮಂಗಲಾಂಗಿ |

ಬೈಲಾಪುರಕ ಹೋಗಿ |

ಮಣ್ಣು ತಂದು ಕೊಡಗಳು |

ಕುಸುರದ ಮಾಡ್ಯಾರ ತಂಗಿ |

ಕಸರವಿಲ್ಲಾ ನೋಡ ನೀಲಗಂಗಿ ||ಪಲ್ಲವಿ||

ಅನಂತ ಜನ ಹೋಗಿ |

ಅನಂತ ಕೊಡ ತಂದರ |

ಏನಂತ ಪೇಳಲಿ ತಂಗಿ |

ಎನಗೆ ಕೊಡ ಕೊಟ್ಟ ಬೇರೆ ದಸರಂಗಿ |

ಕೈಯಿಲ್ಲದ ಕುಂಬಾರ |

ಟಿಗರಿಲ್ಲದೆ ಮಾಡ್ಯಾರ |

ಬೆಲೆಯಿಲ್ಲದೆ ಕೊಟ್ಟೇನಮ್ಮ |

ಬಾಲಿ ನೀ ನೋಡ ಈ ಕೊಡ ಗೆಳೆದೆಮ್ಮ |

ಖಾಲಿ ಹೋಗಬ್ಯಾಡ ನೆರಮನಿ ಹಡೆದಮ್ಮ |

ತೊಲಿ ಮಣ್ಣಿನ ಕೊಡ ನಾನು ಪಡೆದಮ್ಮ |

ಕೊಡದ ಬುಡದಾಗ ಬಾಯಿ |

ನಾಲಕ ಮಾಡ್ಯಾರ ತಾಯಿ |

ಹೇಳಲಿಕ ಇಲ್ಲ ಸೋಯಿ |

ಬಾ ಗೆಳದಿ ಕೊಡಾ ತಿಳದಿ ತಿಳಿದರೆ ಉಳದಿ |

ನೆರಮನಿ ಗೆಳತೇರೆ |

ದನಿ ಕೊಟ್ಟು ಹಾಡನು ಬಾರೆ |

ಸನಿ ನೀರಿಗಿ ನಡಿಯಮ್ಮ ತಂಗಿ |

ನಿತ್ಯ ಸ್ನಾನ ಮಾಡಿ ಮಂಗಲಾಂಗಿ ||1||

ಆರಗಬದ ಮೇಲ |

ಭಾರಭಾಂವಿಯ ನೋಡ |

ಐದೈದು ಝರಪಿಯೆ ತಂಗಿ |

ಅಲ್ಲಿ ಸಾಕ್ಷತ್ ಜಡಿ ಶಿವನ ಗಂಗಿ |

ಹನ್ನೆರಡು ಗಿರಕಿಯ |

ಭಾವಿಯ ಸುತ್ತಲಿ |

ಹದಿನಾರು ಸಖಿಯರು ಇರುವರಮ್ಮ |

ಗಿರಕಿ ಖಾಲಿಯಿಲ್ಲ ಡುಮಕಿ ಹೊಡಿಯಮ್ಮ |

ಬೆರಕಿ ಜೀವಶಿವ ನೀರ ಎರಡು ತುಂಬಮ್ಮ |

ಹರಕಿ ಸಾವಿರ ದೇವರ ಬ್ಯಾಡಮ್ಮ |

ಏಕ ನಾಮದ ಕೊಡ |

ಒಳಗ ಇರಲಿ ಧಿಡ |

ಇದಕ ಇಲ್ಲಾ ಬುಡ |

ಜ್ಞಾನ ಸಿಂಬಿ; ಮಾಡನೆಂಬಿ; ಕೊಡ ತುಂಬಿ |

ಮೂಗಿನ ನಿರತಿಟ್ಟು |

ನೆಟ್ಟಕ ನಡಿಯಮ್ಮ |

ಇರುಬಂದಿಲ್ಲ ಈ ಖಾಯಾ ತಂಗಿ |

ಇರುವಿಗಿ ಬದುಕಿಸಿ ನಡಿಯ ರಂಗಿ |

ನಿತ್ಯ ಸ್ನಾನ ಮಾಡಿ ಮಂಗಲಾಂಗಿ ||2||

ನೆತ್ತಿ ಹೆಗಲ ಮ್ಯಾಗ |

ಟೊಂಕಿನ ಮೇಲ ಕೊಡ |

ಮೊಳಕಾಲಿಲಿ ಎತಕೊಳ್ಳೆ ತಂಗಿ |

ಎರಡು ಕೈ ಜಪ್ಪಿಸಿ ಹಿಡಿ ಮಂಗಿ |

ಕೆಸರಾಗ ನಡಿಬೇಕು |

ಹೆಸರಿಗಿ ಈ ಕೊಡ |

ಉಸರ ಒತ್ತಿ ಹಿಡಿದು ನಡಿಯಮ್ಮ |

ಕೊಡ ನೀರಿನಗ ಉರಳೆತ್ತು ಸೂಕ್ಷಮ |

ಇದಕೆ ಜ್ವಾಕಿ ಮಾಡದು ಜ್ಞಾನ ಚಕ್ಷುಮ |

ಕೊಡದ ಕೊನಿಯಲ್ಲಿ ಕಾಣದು ಪಶ್ಚಿಮ |

ಕೊಡಕ ಪಾವಡ ಮುಚ್ಚಿ |

ಮರತು ಕೊಡು ರುಚಿ |

ನವಗ್ರಹದೊಳು ಬಚ್ಚಿ |

ಹಿಂತಮಡಿ ನೀರ ತಾರೆ ಸುಂದರಗುರುಮಂದಿರ |

ಅಷ್ಟಮ ಸಿದ್ಧಿ ನೀರ |

ಹಟಯೋಗಿ ರೇವಯ್ಯನ |

ವರನಿಷ್ಠಿಲಿ ಸಲಿಸಮ್ಮ ತಂಗಿ |

ಕಷ್ಟಂತ ಫಲ ನೀಲಗಂಗಿ |

ಇಷ್ಟೇ ದೇವಿದಾಸ ಬರೆದ ತಂಗಿ |

ನಿತ್ಯ ಸ್ನಾನ ಮಾಡೆ ಮಂಗಲಾಂಗಿ ||3||

ವ್ಯಾಪಾರ ತೆರದ ನಿಮ್ಮ ನೋಡಿ |

ನತ್ತ ಭುಗಡಿ ||ಪಲ್ಲವಿ||

ಕಿಂವಿಗ ಇರುವ ಆರು ದಿನಸ |

ಮೂಗಿನಗ ಇರುವ ಮೂರು ದಿನಸ |

ಪರಬ್ರಹ್ಮ ಮಾಡಿದ ಈ ವಡವಿ |

ನತ್ತ ಭುಗಡಿ ||1||

ಶಂಕಾ ಬರಬಾರದು ಮನಸಾ |

ಟೆಂಕ ಇಲ್ಲದ ಮಾಡ್ಯಾರ ದಿನಸ |

ಯಾವಾಗ ಮಾರು ನಿಮ್ಮ ರಕಮ ಖಡಿ |

ನತ್ತ ಭುಗಡಿ ||2||

ನಗದು ಆಂದ್ರ ಹಜಾರ ಕೊಡ್ರಿ |

ಉದರಿ ಅಂದ್ರ ಶಂಬೋರಕ ಒಯ್ರಿ |

ಉದರಿ ನಗದಿ ವ್ಯಾಪಾರ ತರ್ಕ ಹಿಡಿ |

ನತ್ತ ಭುಗಡಿ ||3||

ನಗದಿ ಅಂದ್ರ ಈ ಬೈಠಕ |

ಉದ್ರಿ ಅಂದ್ರ ಮುಂದ ಜಲ್ಮಕ |

ವ್ಯಾಪಾರ ಹೇಳದು ನಾವು ಖಡಾಖಡಿ |

ನತ್ತ ಭುಗಡಿ ||4||

ಕಚ್ಚಾ ಕಿವಿಗಿ ಭುಗಡಿ ಯಾಕ |

ಸ್ವಚ್ಛ ಮೂಗಿಗಿ ಮೂಗತಿ ಬೇಕ |

ಜ್ವಾಕಿಲಿಂದ ಆಡಿರಿ ನೀವು ಫುಗಡಿ |

ನತ್ತ ಭುಗಡಿ ||5||

ಜನರು ಸಾರಲಾ ಮಾಡತಾರ ಪಾಕಿ |

ಹಿಂದಿನ ಜಲ್ಮದ ಬಾಕಿ |

ಸಿದ್ಧಲಾಭ ಪಂಚೀಸ ಗಂಡ್ಯಾ ಕವಡಿ |

ನತ್ತ ಭುಗಡಿ ||6||

ನೋಡಿರೇನಪ್ಪ ಹಿಮಾಚಲ ಗಿರಿಯ |

ಹಾಡಿರೇನಪ್ಪ ನಿಜಗುಣ ಕವಿ ಬಿರಿಯ |

ಕೂಡಿರೇನಪ್ಪ ಬಿಚ್ಚದಕ ಹುರಿಯ |

ಮಾಡಿರೇನಪ್ಪ ಮರವಿಗಿ ಮರಿಯ ||ಪಲ್ಲವಿ||

ವಾಯದ್ಯಾ ಪ್ರಕಾರ ಇಲ್ಲಿಗಿ ಲಗಬಿಗಿ ಹೊಂಟ |

ಚೌದ ಕಾಲಿನ ಒಬ್ಬ ಮನುಜಾ ಬಿದ್ದ ಗಂಟ |

ತಾರೀಪ ಕಣ್ಣಾರೆ ಕಂಡ |

ಏನ ತಾರೀಪ ಮಾಡ್ಯಾರಪ್ಪ ಪುಂಡ |

ಮೀರಿದ ಪ್ರಾಣಿ ಮಾಡಿಟ್ಟ ಮಾರ್ತಂಡ |

ಸಾರಿ ಬ್ರಹ್ಮಾಂಡಕ್ಕೆ ಮೇಲಗಂಡ ||1||

ಶಿಸ್ತ ಕಂಡ ಕಣ್ಣನೊಳು ಕಣ್ಣ ತೆರಿದು |

ಹತ್ತ ಕೈ ಮನಷ್ಯಂದು ನಾಕ ಕಾಲ ಒಂಟಿದು |

ಐದ ಮಾರಿ ಹತ್ತ ಕೈ ಛಂದ |

ಧಂಡ ರುಂಡೆಲ್ಲ ಇತ್ತು ಮನುಷ್ಯಂದ |

ಗುಂಡ ರುಮಾಲು ಇತ್ತು ತಲೆಗೊಂದ |

ಗಾಂಧಿ ಟೋಪಿ ನಾಕ ತೆಲಿಗಿ ಪಸಂದ ||2||

ಎಂಟ ಕೈ ಮಾಡಿ ಹಾಡತ್ತಿದ್ದ ಗಾನಾ |

ಎರಡು ಕೈಗಳು ಇರುತ್ತಿದ್ದವು ಸುಮನಾ|

ಗುರು ಪುತ್ರರು ಮಾಡುವರು ಅರ್ಥ |

ಅರ್ಥ ಆಗಲದಿದ್ದರ ಇದು ವ್ಯರ್ಥ |

ಅರ್ಥ ಆಗಿದ್ದವರ ನರಜಲ್ಮ ಸಾರ್ಥ |

ತುರ್ತ ಸಿದ್ಧ ಭಜನಿಗಿ ಹಿಡಿ ಗುರುತ ||3||

ಚಲತಿ- ಹುಡುಕಿ ನೋಡುದರಿಲ್ಲ ಹರಕಿ ಮಾಡಿದರಿಲ್ಲ |

ಗುರುಕಿ ನೆಗಲ ಕಟ್ಟಿ ಹೊಡೆದರ ಕರ್ಕಿ ಹೋಗುದಿಲ್ಲ ||

ಸ್ವಲ್ಪ ನಿಲ್ಲಾರಿ ಎಷ್ಟು ನಿಮ್ಮ ಕೆಲಸ |

ಅಲ್ಪ ಮಾತಿಗಿ ಎಷ್ಟು ಉಲ್ಲಾಸ |

ಕಲ್ಪವೃಕ್ಷಕ ಇಲ್ಲಿ ನಿಮ್ಮ ಮನಸ |

ಹಲ್ಪನಾಮ ಮಾಡಿಕೊಟ್ಟರಿ ದಿನಸ ||ಪಲ್ಲವಿ||

ತನು ಮನ ಧನ ಮೂರು ಕೊಟ್ಟಿದ ಮ್ಯಾಲ |

ಭಾನು ನಿಲ್ಲದೆ ಕಂಡಿರಿ ಬಿಸಲ |

ಆಗಿರಿ ಬೈಲಿಗಿ ಬೈಲ |

ತ್ಯಾಗಿ ಇಂತ್ಯಾನ ಆಗಿತು ಭಾಲ |

ನೀಗಿ ಆರಗುಣ ತೊಳದಿದ್ದ ಚೀಲ |

ತಿರುಗಿ ಸುತ್ತಕೊಂಡಿ ಯಾಕಪ್ಪ ಜಾಲ ||1||

ನಾನಾ ತರದ ನಿಮ್ಮಗ ಯಾತಕ ರಂಗ |

ಜ್ಞಾನ ಬಂದ ಮ್ಯಾಲ ಯಾತಕ ಢೊಂಗ |

ಸಂತರ ಮಾರ್ಗವುಂಟು ಹಿಂಗಾ |

ಏಸು ಮಂತರ ಯಾತಕ ಸೋಂಗಾ|

ನಿಂತು ನೋಡಪ್ಪ ನೀ ಅಂತರಂಗ |

ಸುತ್ತ ಕುಂತವರು ಕಾಣಿ ನಿಜಲಿಂಗ ||2||

ಸಜ್ಜನರ ಸಂಗವು ನೀ ಏನು ಬಲ್ಲಿ |

ದುರ್ಜನರ ಸಂಗವು ದುರ್ಗುಣ ಸಾಲಿ |

ಕಳಕೊಂಡಿ ಒಂದ ಬಾರ ಪರುಸ |

ಮುಂದ ತಿಳಕೊಡು ಬಾ ಸರಾಸ |

ಛಂದ ಬಿಟಕೊಂಡು ಎರಡು ದಿನಸ |

ಒಂದು ಕಟುಕೊಂಡು ಕೂಟಸಿದ್ಧ ಧ್ಯಾಸ ||3||

ಚಲತಿ – ದೇವರೆಂದು ದೆವ್ವ ಅನಬ್ಯಾಡ |

ಅವರಗೂಡಿ ಹಿಡಿದು ತಿರಗಬ್ಯಾಡ ||

ಇಲ್ಲೆ ಕಳತವ್ವ ನತ್ತು ಇಲ್ಲೆ ಕಳಿತು |

ಬೈಲ ನುಂಗ್ಯಾದಮ್ಮ ಬೆಲಿಯಿಲ್ಲದ ಮುತ್ತು ||ಪಲ್ಲವಿ||

ಬಲ್ಲವರ ಸಂಗಾ ಕೂಡಿ ಬಾವಿಗೆ ಬಂದ |

ಮಾಯಿ ಕಾಡಾದು ಎನಗೇನು ಗೊತ್ತು ಮುಂದ |

ಇನ್ಯಾರ ಕೊಡುವರು ತಂದ |

ನಿನ್ನೆ ನನ್ನ ಗಂಡ ಬೈದಾ ಮೂಗು ಜ್ವಾಕೆಂದು |

ಹೇಳಿದ ಮಾವ ಮಾನ ಎಲ್ಲಿ ಉಳಿತು ||1||

ಭವುಳತನದಿಂದ ಬೆಲಿ ಕೊಟ್ಟು ತಂದ |

ಹವುಳ ವಜ್ರ ಮಾಣಿಕ ರತ್ನ ಹೊಳಪೆನಂದು |

ಅತ್ತಿಗಿ ಮಾತು ತಿಳಿತು ತೊತ್ತಿಗಿ ನಗು ಆಯ್ತು |

ಸಾತಿ ಮಳಿ ಮುತ್ತು ಮಹಾಯೋಗಿಗಳಿಗೆ ಗೊತ್ತು ||2||

ದಾರ ಹಂತಲೀ ಉಂಟು ಖೂನಾ ತಿಳಿಸಿರಿ ಇಷ್ಟು |

ಆಡದಕ ಕೇಳದಕ ನೋಡದಕ ಗಂಟು |

ಜಂಗಮ ಯಾವ ಲಕ್ಷಣ ಲಿಂಗವಂತ ಹೇಳಿರಣ್ಣಾ |

ಮುಣಗಿ ಮುತ್ತ ತೆಗೆದ ಬಹು ಬಿರಿ ಸಿದ್ಧನ ಮಾತು ||3||

ಗರಜಿಗೆ ಬಿದ್ದು ತಿಗಣಿ ಮಾತು ಕೊಟ್ಟಿ |

ದುಗಣಿ ಬರಕೊಟ್ಟಿ |

ಅರಜಿ ತಂದು ಈ ಪಂಚರೊಳಗ ಇಟ್ಟಿ |

ನ್ಯಾಯ ಮಾಡೆಂದ ಶೆಟ್ಟಿ |

ಮರಜಿಗೀ.. ವರಜಿಗೀ…ತರಜಿಗೀ… |

ತೆರಿಯಂದಿ ತಟ್ಟಿ ||ಪಲ್ಲವಿ||

ಝಳದ ನೀರು ಕಂಡು ನಿಂತಿ ಮಟ್ಟಿ ಕಟ್ಟಿ |

ಹೊಳಿ ಏಳೆಂಟು ಕಟ್ಟಿ |

ಆಳಿಗಿ ಹೇಳದಿ ಝಳದಕಟ್ಟು ಕಟ್ಟಿ |

ಏನ ಬೆಳಿ ಬೆಳಿಸಿಟ್ಟಿ |

ಮೂರು ಕೊಟ್ಟು ನೂರು ತೆಗೆದು ಭಾವ ಮುರಿದು |

ತೊಗೊ ಅಂದಿ ಸಾಟಿ ||1||

ಅಂಬಲಿ ಹೆಚ್ಚುಕೊಂಡು ಮಾರಿ ಉಬ್ಬಸಕೊಂಡಿ |

ಕಂಬಳಿ ಕಳಕೊಂಡಿ |

ಹಿಂಬಳಿ ಹತ್ತಿದಿ ತೆಲಿಮ್ಯಾಲ ಹೊತ್ತು ಬಿಟ್ಟಿ |

ಕುಂಬಳ್ಯಾಗೇನು ರಾಟಿ |

ನೋಡು ತಿಳಿದು ಕೊಡು ಅಳುದು ಸತ್ತ ಉಳಿದು |

ಹೊಡಿ ನಿಶಾನಿ ಕಟ್ಟಿ ||2||

ವಾಯದ್ಯಾ ಪ್ರಕಾರ ಸೌದ ಮುರೆದು ಘಟ್ಟಿ |

ಕಾಯಿದ್ಯಾ ಕೈಕಟ್ಟಿ |

ಭವದಬಾದಿಗಿ ಖಳುವಿದಿ ಉಪರಾಟಿ |

ಎದರಗ ಮನಸಿಟ್ಟಿ |

ನುಡಿಬೇಕು ನಡಿಬೇಕು ಪಡಿಬೇಕು|

ಆ ಸಿದ್ಧನ ಭೇಟಿ ||3||

ಅರೆರೆರೇ ಕಡಿದ್ಹೋಯ್ತು ಕರಿತೇಳ್ |

ಬೀರ್ಯಾ ಬಿಡಿಸೊ ಬೆನ್ನ ಬಿದ್ದದ ಬಿಳಿತೋಳ ||ಪಲ್ಲವಿ||

ತಾಳಲಾರೆ ತೇಳಿನ ಬ್ಯಾನಿ ಜುಮ್ಮ |

ಹಾಳಮನಿಗಿ ದೀಪ ಹಚ್ಯಾರೇನ ತಮ್ಮ |

ಮಾಳ ಭಜನಿ ಮಾರಗ ನೀರು ಗುಮ್ಮ |

ಕಳ್ಳರು ಬಂದು ಕದ್ದಂತೆ ಖರಸಿ ಜೋಳ |

ಸುಳ್ಳರ ಮಂತ್ರ ಹೊಟ್ಟಿಗಿಲ್ದಂಗ ಕೂಳ ||1||

ಬಾರ ಫಳಗಿ ಬ್ಯಾನಿ ಸಂಸಾರದೇ |

ಪೂರಾ ತಾಳಲಿಲ್ಲ ಬ್ಯಾನಿಗಿ ಮಕ್ಕಳ ಮಾರದೆ |

ಗೈರ ಗುಮಾನ ಇದ್ದವಗ ಊಟಕ ಕರೆದೆ |

ಎಷ್ಟಂತ ತಿರಗಲಿ ಬ್ಯಾನಿಯ ಹೊಯ್ದಂಗ ಸೀಳ |

ಕಷ್ಟದಂತೆ ಫಲವುಂಟು ಸಂಸಾರ ಕೋಳ ||2||

ಗಾಂಜಿ ಬಿಗಿರಿ ಬಂಜಿಯ ಬ್ಯಾನಿ ತೆಗಿರಿ |

ಹಂಜಿ ನೂಲರಿ ಗುಂಜಿಯ ಕಸರ ಬ್ಯಾಡರಿ |

ಇಂಜೆಕ್ಷೆನ್ ಕೊಟ್ಟಂತೆ ರೋಮ ರೋಮರಿ |

ಮುಂಜಾನ ಎದ್ದು ಬೆಲ್ಲದ ಕೊಡದಗ ಕಾಳ |

ಅಲಲಲಾ ಮುಟ್ಟಿ ಮಾಯಾ ಕರಿ ತೇಳ ||3||

ಏಕಾದೇಶಿಯಿದ್ದವರ ದುವಾದೇಶಿ |

ಸಕ್ಕರಿ ಊಟ ಬೇಕಂತ ಫುರಮಾಸಿ |

ಅಕ್ಕ ಮುಕ್ಕ ಹಾಕಲ್ದೆ ಗೋಧಿ ಬೀಸಿ |

ಕಕಾ ಕಲ್ತವರು ಇಳಸರಿ ಎನ್ನ ಗೋಳ |

ಸಿಕ್ಕಿದವರಿಗಿ ಸಿಕ್ಕದ ಇದರ ಕಳಾ ||4||

ಚಂದನ ಕೇರಿ ಮಲಕಪ್ಪ ಮಹಾಸಂತ |

ಕುಂದನಹಳ್ಳ ಕಾಣಿದಂತೆ ಹಾಕಿದ ಮಂತ್ರ |

ಮಂದುಮತಿ ಇಸ ಇಳಿತು ಅವರ ತಂತ್ರ |

ಆನಂದ ಕುರುಬನ ಕುರಿಯೆಂದು ಹೋಯ್ತು ತೋಳ |

ಮುಂದ ಯಮನರ ಚಿಟ್ಟಿ ಆಯಿತು ಗಾಳ ||5||

ಬರಬಾರದಿತ್ತು ಇಂಥ ಮಠಕ |

ತಿಳಿಲಾರದೆ ನಮ್ಮ ತಂದೆ ಕೊಟ್ಟನ ಹಠಕ ||ಪಲ್ಲವಿ||

ಆರ ಮಂದಿ ಬಣಜಗೇರ ಕಾಟ |

ಈ ಮಠದಾಗ ಸೇರ್ಯಾವು ಮರಿ ಎರುಡ ಥೊಂಟ |

ಬರಿದೆ ಮಾತಾಡತಾವ ಎನಗೂಡ ತಂಟ |

ಎನಗ ಇರಗೊಡಬಾರದೆಂದು ಎಲ್ಲರದು ಗುಟ್ಟ ||1||

ಐದ ಮಂದಿ ಪಂಚರ ಬೈಠಕ |

ಕಾಯ್ದ ಬಿಟ್ಟು ನಡಿತಾರ ಅವರಿಗ ಬ್ಯಾರುಂಟು ಚಟಕ |

ಸೌಧ ಅಪರಂಪಾರ ಲಟಕ |

ವಾಯ್ದ ಮಾಡತಾರ ಕೆಸರಿಲ್ಲ ನೀರಿಲ್ಲ ಗುಟಕ ||2||

ಸಾದಲವಾರಿ ಜವಾನ ಬಂದ ಮಠಕ |

ಮೊದಲೆ ಕರ ಜೋಡಿಸಿ ಹೇಳತಾರ ಅವರೆ ಮಾಲಿಕ |

ಕರದೊಯ್ಯತಾರ ಮೂರಾರು ಬೀಗ್ಯಾ ಹೊಲಕ |

ಸಿದ್ಧ ಕರ್ಜ ಕೊಡದಿದ್ದರ ಧಾಡಿ ಬಂತು ನೆಲಕ ||3||

ಒಗಿಲಿಕ್ಕೆ ಹೋಗಾಮಿ ನಡಿರೆ |

ಮೂರು ನದಿ ದಾಟಿ ಗುರುಜ್ಞಾನ |

ಸಮುದ್ರದ ಸುಳಿರೇ ||ಪಲ್ಲವಿ||

ಅಪ್ಪ ಮೊದಲುಟ್ಟ ಧೋತರ ಕಳಿದು |

ಈ ಮನಸಿನ ಲಂಗೋಟಿ ಮನ ಮೆಚ್ಚಿ ಬಿಗಿದು |

ನೆತ್ತಿ ಮೇಲಿನ ಸೆರಗ ತೆಗಿದು |

ಸುತ್ತಿಕೊಂಡಿದ ಮೂರ ಮೊಳ ಮುಂಡಾಸಿ |

ಜ್ಞಾನದ ತುದಿಯ ಪಿಡಿದು |

ಸಹಸ್ರ ಠಿಗಳಿನ ಅಂಗಿ ಕಳಿದು |

ಸೀರಿ ಕುಬ್ಬಸ ಕಟ್ಟಿಕೊಳ್ಳಿರೇ ||1||

ನಾಲ್ಕಾರು ಮಂದಿ ಗೆಳದೇರೆ |

ಹಿಂದಿನ ಹಿತ್ತಲ ದಾಟಿ ಹತ್ತರ ಹಾದಿಗಿ ಬರ್ರೆÉ |

ಕುಬಸ ಕಳದತ್ತು ಜ್ವಾಕಿ ನೋಡ್ರೆ |

ಬಾರ ಜ್ಯೋತಿರ್ಲಿಂಗ ಗುಡಿ ಮೇಲ |

ಸೋಳ ಕಳಸದ ಸುತ್ತ ಕೊನೆಯಲ್ಲಿ |

ಕೃತರಿಬ್ಬರು ಪೂಜಿಕಾರರೇ |

ಮುಜೂರ ಮಾಡಿ ಮುಂದಕ ಹಾಯ್ರೆ ||2||

ಗಂಗಾ ಸಾಗರ ದಾರಿ ಹಿಡಿರೆ |

ಸಾವಿರ ಮಾರ್ಗವು ಬ್ಯಾರೆ ಬ್ಯಾರೆ ನೀವು ಬರ್ರಿ ಕಡಿರೆ |

ಒಗಿಲಿಕ್ಕೆ ಕಲ್ಲೊಂದು ಹಿಡಿರೆ |

ಒಳಗಿನ ಅರಬಿ ಹೊರಗ ಎಳೆದು |

ನಿರ್ವಿಕಲ್ಪದ ನೀರ ಸೆಳಿದು |

ಕಲ್ಪವೃಕ್ಷದ ಕಲ್ಲಿನ ಮೇಲೆ ಬಡಿದು |

ಒಗಿದು ತಿಳಿಯ ಮಾಡ್ರೆ ||3||

ಭಾನುವಿಲ್ಲದ ಬಿಸಲಾಗ ಹಾಕ್ರೆ |

ಏನು ಅನುಮಾನವಿಲ್ಲೆಂಬ ಸ್ನಾನವ ಮಾಡ್ರೆ |

ಮಡಿ ಉಟ್ಟು ಗುಡಿಯೊಳು ನಡಿರೆ |

ಲಾಕ ಮಂತ್ರವು ಸಾಕು ಮಾಡಿರೆ |

ಲೋಕ ಪರ ಉಪಕಾರ ನಾಥನು |

ಏಕ ನಾಮದ ಮುಕ್ತಿ ಸಾಧನ |

ಪಾಕ ಮನಸಿನ ಅವಧಿ ಹಿಡಿರೆ ||4||

ಮಹಾಸಂತ್ರ ಸನ್ನಿಧಿ ದುಡಿರೆ |

ಅನಂತ ದೇವರನೆಂದು ನಾವದಗ್ಯಾಗ ತಡಿರೆ |

ಅಂತ್ರ ಸಾಕ್ಷ ಮುಕ್ತಿ ಪಡಿರೆ |

ಸತ್ಯ ಶರಣರ ಮನಿಯ ಅಗಸನು |

ಜಲ್ಮ ಮರಣ ಎರಡು ಒಗೆದನು |

ಸಿದ್ಧ ನಾಮಾಮೃತ ಸುದ್ಧ ಸುರಿದನು |

ಲಿಂಗ ಅಂಗೈ ಗದ್ಗಿ ಬಡಿರೆ ||5||

ಬೀಸೊನು ಬಾರೆ ಗೆಳದಿ |

ಬೀಸೋನು ಬಾ ಗೋಧಿ |

ಬಿಸು ಬೀಸುತೆ ಹಾಡೋಣ ಆ ಗಂಗಾಧರನಾ |

ಸೋಸಿ ನರಜಲ್ಮ ತಿಳಿಯೋಣ |

ತೆರೆದಾತ್ಮದ ಕಣ್ಣಾ ||ಪಲ್ಲವಿ||

ಓಂ ಅಕ್ಷರ ಬರಸಿದರೊ |

ಏಕ ನಾಮವು ತಿಳಿಸಿದರೊ |

ದುಸರಾ ಭಾಗಕ ಜನಸಿದರೊ |

ಇದು ಹೆಂಥ ಸಾರೋ |

ತೀನೆಂಬ ಸತಿಗಿ ಮಾಡಿದರೊ |

ಗುರು ಹಿರಿಯರೂ ||1||

ಚಾರೆಂಬೋ ಮಗನ ಕಂಡ |

ಪಾಚ ಪಂಚ ತತ್ವದ ಪಿಂಡ |

ಸಾ ಎಂಬ ಷಡಕ್ಷರ ಸಾಧನ |

ದನಿ ಕೊಡು ಬಾ ಸುಗುಣ |

ಸಾತೆಂಬ ಸಪ್ತ ಭೂಮಿಕನ |

ನಿತ್ಯ ನೆನಿ ಅವನ ||2||

ಅಷ್ಟಮದ ಗೋಲಿ ಹುಡುಗರು |

ನೌದ್ವಾರದ ಹಿರಿ ಬಾಜಾರು |

ದಹಾವಿ ಖಿಡಕಿ ಕಂಚಕ ನಿಲ್ಲೋಣ |

ಗೋಲಿ ನೇಮ ಹೊಡಿಯೋಣ |

ಗೆದ್ದವನ ಜ್ಞಾನ ಗೆದಿಯೋಣ |

ಭವ ದಾಟಿ ಇರೋಣ ||3||

ಗೋಧಿ ಬೀಸಿ ಮಾಡಮಿ ನೌದಿ |

ಆದಿ ಅನಾದಿ ಪ್ರಭುವಿನ ಗಾದಿ |

ಮೇದಿ ಗಿಡ ಹಚ್ಯಾರ ಬಸವಣ್ಣ |

ಬಗಿಚ್ಯಾಕ ಹೋಗೋಣ |

ದೇವಿದಾಸನ ಭಜನಿ ಕೇಳೋಣ |

ನಡಿ ಕೇಳಿ ಬರೋಣ ||4||

ತನು ಸಾಕ್ಷಿ ಗುರು ಸೇವಾ ದುಡಿಕೊಂಡೆ |

ಮನಕಾಂಕ್ಷಾ ಫಲ ಬೈಕಿ ಬೇಡಿಕೊಂಡೆ ||ಪಲ್ಲವಿ||

ಎಲ್ಲಿತನ ನಿರ್ಬಯಲ ತಿಳಕೊಂಡೆ |

ಅಲ್ಲಿತನ ಕಲ್ಲದೇವರ ನೋಡಕೊಂಡೆ |

ಶಿವನೇ.. ನಾನೇ.. ಇವನೇ.. ತಾನೇ.. |

ಧನ ಸಂತಾನ ಸಂಪತ್ತಿ ಕನಸ ಕಂಡೆ ||1||

ಮುಂದ ನೋಡಿ ಗುರು ಭಜನಿ ಹಾಡಿಕೊಂಡೆ |

ಒಂದು ಮಾರ್ಗ ಸಹಸ್ರದ ದಳ ಕಂಡೆ |

ಬ್ರಹ್ಮಾ.. ಧರ್ಮಾ… ವರ್ಮಾ.. ಖರ್ಮಾ.. |

ಜೇನ ಭಕ್ಷಿಸಿ ನೊಣ ಬೆನ್ನ ಹಚಿಕೊಂಡೆ ||2||

ಪ್ರಾರಬ್ಧ ಬರಿ ಗೆದ್ದ ಮಾರ್ಖಂಡೆ |

ಗುರು ಶಬ್ದಕ ಎಂಕಮ್ಮ ಸುಟುಕೊಂಡೆ |

ದುನೀ.. ಪಾನೀ.. ಜ್ಞಾನೀ.. ಜಾನೀ.. |

ದೀನ ರಕ್ಷಣ ರೇವಮ್ಮನ ಪಡಕೊಂಡೆ ||3||

ಒಂದೆರಡು ಐದಾರು ಓದಿಕೊಂಡೆ |

ಚಾಳೀಸ ಬೇಚಾಳೀಸ ಕಣ್ಣಿಯ ಕಡಕೊಂಡೆ |

ಓಂನಾಮ.. ಶಿವಾಯ.. ಸ್ವಯಂ.. ಬ್ರಹ್ಮಾ.. |

ಮೌನ ಮೋಕ್ಷಾ ಪ್ರತ್ಯಕ್ಷ ನೋಡಿಕೊಂಡೆ ||4||

ಬ್ರಹ್ಮ ವಿಷ್ಣು ರುದ್ರ ಯಾರು ತಿಳಕೊಂಡೆ |

ಬ್ರಹ್ಮಜ್ಞಾನಿ ಶಬ್ದ ವಾಣಿ ಕೇಳಕೊಂಡೆ |

ಯೋಗೀ.. ಜೋಗೀ.. ತ್ಯಾಗೀ.. ನೀಗೀ.. |

ನಿನ್ನ ಹೊರತು ಗತಿದಾರು ನೀನೆ ಕಂಡೆ ||5||

ಸಿದ್ಧನ ಭಜನಿ ತೂರಿ ತಂದು ಬಿಟ್ಟಂಗ ಬಂಡೆ |

ಬದ್ಧರೀಗಿ ಕಾಣಲಾರದು ಕಳಸದ ಅಂಡೆ |

ತೊರದಾ.. ತೆರದಾ.. ಬರದಾ.. ಕರದಾ… |

ಕಲಿಯುಗದೊಳು ಮಹಾಪ್ರಭು ಮಹಿಮಾ ಕಂಡೆ ||6||

ಮಾವಯ್ಯ ಬಂದು ಎನಗೆ |

ಮುಯ್ಯ ಮಾಡಿದ ಪಾಟಿಯ ಪೂಜಿಗ |

ಗುರುನಾಥನ ಸಾಲ್ಯಾಗ ||ಪಲ್ಲವಿ||

ಲೋಕದವರು ಕೂಡಿ ಲೆಕ್ಕ ಹಾಕಿದರು |

ನುಡಿ ನಾಲ್ಕು ಅಂಗಿಗಾ |

ತೂಕದಿಂದ ಬಲು ಠೀಕ ಹೊಲಸಿದರು |

ಮೈತುಂಬ ಅಳತಿಗಾ |

ಮಹಾಕಾರಣದ ಹಬ್ಬದ ಅಂಗಿ |

ಬಿಳಿಯ ಬಣ್ಣದೊಳಗ |

ಹಸುರೆಳಿ ಹಾಕಿ ಗೆರಿ ಗೆರಿಗಾ ||1||

ಕಾರಣಯೆಂಬ ಕಮೀಸ ಹೊಲಸೆರ |

ಗುಲಾಬಿ ಬಣ್ಣದೊಳಗ |

ಸೂಕ್ಷ್ಮಯೆಂಬ ಜಾಕಿಟು ಹೊಲಸೆರ |

ಕೆಂಪ ಬಣ್ಣದೊಳಗ |

ಸ್ಥೂಲಯೆಂಬ ಹಟಸಂಖ್ಯದ ಬಣ್ಣದ |

ಕೋಟ ಹೊಲಸೆರ ಹ್ಯಾಂಗ |

ಕಿಸೆ ಒಂಬತು ಒಳ ಹೊರಗ ||2||

ಕಿಸೆದ ಒಳಗೆ ಬೇರೆ ದಿನಸಗಳು |

ತುಂಬಿಟ್ಟರ ಒಳಗ |

ಮುಂಚ ಕಿಸೆದಾಗಿಂದ ಹಂಚಿ ಹಾಕಿದರೂ |

ಸಾಲಿಯ ಹುಡಗರಿಗಾ |

ಹಿಂಥ ಅಂಗಿ ತಂದು ಧೋತರ ತರಲಿಲ್ಲ |

ಲಂಗೋಟಿ ತಂದೆ ಎನಗ |

ಬಣ್ಣವಿಲ್ಲದ ಟೋಪಿಗ ||3||

ಶಿಕ್ಷದ ಗುರುಗಳು ಓಂ ನಮಃ ಶಿವಾಯ |

ಕಲಿಸಿ ಪಾಠೀ ಮ್ಯಾಗ |

ದೀಕ್ಷದ ಗುರುಗಳು ಓಂ ನಮಃ ಶಿವಾಯ |

ಕ್ರೀಯ ಹೇಳಿದರೆನಗ |

ಮೋಕ್ಷದ ಗುರುಗಳು ಓಂ ನಮಃ ಶಿವಾಯ |

ಓದಿ ಕರ್ಣದೊಳಗ |

ಕಳಿ ಅಂದಿರು ಅಂಗಿಗಾ ||4||

ಅಂಗಿ ಕಳೆದು ಮ್ಯಾಗ ನಿಸ್ಸಂಗ ಆದೇನು |

ಸತ್ತುಳದಂಗ ಈಗ |

ಅಂಗಳದೊಳು ನಿಜಲಿಂಗ ತೋರಿದರೊ |

ರೇವಯ್ಯ ಸ್ವಾಮಿ ನಮಗಾ |

ಮಾವನ ಉಪಕಾರ ಹ್ಯಾಂಗ ಮರೆಯಲಿ |

ಬೆಲೆಯಿಲ್ಲದಂಗಿಗಾ |

ನೆಲಿ ಇಲ್ಲ ಸಿದ್ಧ ಭಜನಿಗಾ ||5||

ದೇವಿದಾಸ ಈತನೇ ನೋಡು |

ಚರಣ ಧೂಳಿ ಗುರುವಿಂದೋ |

ವೇಶ ತೊಟ್ಟುಕೊಂಡು ಬಂದ ಮತ್ರ್ಯಕೆ |

ಅನಾದಿ ಸಿದ್ಧಂದೊ ||ಪಲ್ಲವಿ||

ಸೃಷ್ಟಿಯೊಳು ಶ್ರೇಷ್ಠಾ |

ನಾವದಗಿ ದಾರಿ ಪಿಡಿದ ನೇಟಾ |

ರೇವಯ್ಯ ಸ್ವಾಮಿ ಘಳಸಿದ ಗಂಟ |

ಮಾಡುತ ಹೊಂಟ ಲೂಟಾ |

ಕೊಡಲಿಕೆ ನಿಂತಾರ |

ತೊಗೊಲಿಕೆ ದಾರಿಲ್ಲ |

ಶಿವನ ಪಾಲ ಥೇಟಾ |

ಸಾಯಲಕೆ ಕೇಳವರು ದಾರು ಇಲ್ಲ |

ಸಂಸಾರ ಬೊಂಬಾಟಾ ||1||

ಗುರುಪುತ್ರ ಆದವರ ಲಕ್ಷಣ |

ಅಳಿಯಬೇಕು ಸಿಟ್ಟಾ |

ಅಷ್ಟಮದಗಳು ಬಿಜಲಿ ಬತ್ತಿಹಂಗ |

ಜ್ಯೋತಿರಬೇಕು ಸುಟ್ಟಾ |

ಕಲ್ಯಾಣ ಅಣ್ಣನ ಪುರಾಣದೊಳಗ |

ಬರದಪ್ಪ ಸಂಧೋ |

ವೇಶ ತೊಟ್ಟುಕೊಂಡು ಬಂದ ಮತ್ರ್ಯಕೆ |

ಅನಾದಿ ಸಿದ್ಧಂದೋ ||2||

ಸಹಜ ಮಾತಿದು ಮನುಷ್ಯನ ಜಲ್ಮ |

ನೋಡ್ರೆಪ್ಪ ಹೆಚ್ಚಿಂದು |

ರೇವಯ್ಯ ಸ್ವಾಮಿ ಹಚ್ಚಿದ ಫಲ |

ರುಚಿ ನೋಡರಿ ತಿಂದು |

ತುಪ್ಪ ನೀಡಿದಂಗ ಸ್ವಲ್ಪ ಲಕ್ಷ ಕೊಡು |

ಬಿಡು ಸೌಕರ ದುಂಧು |

ದೇಹವು ಬಾರದು ದುಡ್ಡವು ಬಾರದು |

ಸಾರ್ಥೇನೊ ಹುಟ್ಟಿ ಬಂದು ||3||

ಲಕ್ಷ ತೊಂಬತ್ತಾರು ಸಾವಿರ ಪ್ರಮಥ ಗಣಂಗಳು |

ನಾವದಗಿಗೆ ಬಂದು |

ಐದು ಸಂವತ್ಸರದಲ್ಲಿ ಐದು ಸಿಂಹಾಸನಗಳು |

ಆಗುತಾವ ಒಂದು |

ಹಿಂದ ಮುಂದ ಎಡ ಬಲಕ ದಯ ಬೇಕು |

ಎಚ್ಚರ ಗುರುವಿಂದು |

ಸಪ್ತ ಆಸನ ನೋಡಿ ಮನಗಬೇಕು |

ಹುಚ್ಚಾಗಿ ಅರವಿಂದು |

ಆಧಾರ ಸ್ವಾದಿಷ್ಟ ಮಣಿಪುರ ಅನಾಹುತ |

ತಿಳಿಬೇಕು ಮುಂದಿಂದು ||4||

ಮಂತ್ರಯೋಗ ಲಯಯೋಗ ಹಠಯೋಗ |

ರಾಜಯೋಗ ನಾಲ್ಕು |

ಸಾಮುದ್ರಿ ಸನ್ಮುಖಿ ಶಾಂಭವಿ ಖೇಚರಿ |

ಮುದ್ರಿ ಅವ ನಾಲ್ಕು |

ಹದಿನಾಲ್ಕು ಯುಗ ಮುಗಿದು ಕೃತಾ, ತ್ರೇತಾ |

ದ್ವಾಪರ ಕಲಿ ನಾಲ್ಕು |

ಕಲಿಯುಗದೊಳು ನಾಮಸ್ಮರಣಿ ಸತ್ಯವು |

ಇದಕನಬೇಕು |

ರಜ ತಮ ಎಂಬ ಚೋರರ ಕೈಯೊಳು |

ತಾಳು ವೀಣಾ ಕೊಡಬೇಕು ||5||

ಅಂತರಂಗ ಸೋಮವಾರ ಸಂತೆ ಜನ |

ಶಾಂತವಾಗಿ ನಗಬೇಕು |

ನಾಲ್ಕು ಆರು ಹತ್ತುಹನ್ನೆರಡು ಹದಿನಾರು |

ಎರಡು ತೆರಿಬೇಕು |

ಸಾವಿರ ಸೂರ್ಯನ ಪ್ರಕಾಶದೊಳಗೆ |

ಪಶ್ಚಿಮ ಕಾಣಬೇಕೋ |

ಕಂದಗೂಳ ಶರಣ ಸಿದ್ಧ ಪ್ರಭುವಿನ |

ಅನುಭವ ಹುಚ್ಚಂದೋ ||6||

ನಿರಂಜನ ಧುನಿ |

ಪ್ರಸಾದ ಸಂತರ ಬಾನಿ |

ಹಚ್ಚಿಕೊಳ್ಳೋ ಅಜ್ಞಾನಿ |

ಹಚ್ಚಿಕೊಂಡವ ಸುಜ್ಞಾನಿ ||ಪಲ್ಲವಿ||

ಅಷ್ಟಮದ ವೃಕ್ಷಾ |

ಜ್ಞಾನದ ಖಡಗ ಸಾಕ್ಷಾ |

ಕಡಿದು ಮಾಡಿ ಶಿಕ್ಷಾ |

ದಿವ್ಯ ಯಜ್ಞ ಮೋಕ್ಷಾ ||1||

ಹುಡುಕಿದರೆ ಇಲ್ಲಾ |

ಹರಕಿ ಮಾಡಿದರೆ ಇಲ್ಲಾ |

ತರ್ಕಿನ ತಾಲೀಂ ಇಲ್ಲಾ |

ಇಂತ್ಯಾನ ಆಗುವುದು ಫೇಲಾ ||2||

ಸಾಧು ಸೋಧನ ಸ್ಥಲ |

ಸಾಧು ಸಾಧನ ಜಲ |

ಸಾಧು ಘಟ ಸ್ಥಲ |

ಹಿಂತಾ ಪ್ರಸಾದ ಮೂಲ ||3||

ಕಣ್ಣೀಗಿ ಬೇಕೋ ಚಸ್ಮಾ |

ಕಾಣಿಧುನಿ ಭಸ್ಮಾ |

ಅಭಿಮಾನ ಇಸ್ಮಾ |

ಇದರೊಳು ಇಲ್ಲ ತಸ್ಮಾ ||4||

ಸಿದ್ಧ ಧುನಿ ಪಾನಿ |

ಬೈಠಾ ಮಾಲಿಕ ಧ್ಯಾನಿ |

ಜಾನೋ ಜಾನೋ ಜ್ಞಾನಿ |

ಮೈತೋ ನೌಕರ ಧುನಿ ||5||

ಖಲಲಲಾ ಗುಲ್ಲ್ಯಾಕ ಎಲ್ಲಿ ಬರದಿ |

ಅಲಲಲಾ ಅನಬೇಕೊ ಆತ್ಮ ತಿಳದಿ ||ಪಲ್ಲವಿ||

ಬಾಕಿ ಕೊಟ್ಟು ರೋಕ್ಯಾ ಎಲ್ಲಿ ಹರದಿ |

ಜೇಕಿನಂತೆ ಇರಬೇಕೊ ಆರು ಅಳದಿ |

ನೂಕಿ ಮುಂದಕ ಎಲ್ಲಿತನ ನೀನು ಮೆರದಿ |

ಗಲಲಲಾ ಗುಲ್ಲಾಸಿ ಎಲ್ಲಿ ತೊರದಿ ||1||

ಕಲ್ಲ ಕರಗಿ ಕಬ್ಬಿಣ ಆದವನೆ |

ಅಂಗಾರದೊಳಗಿದ್ದು ಬಂಗಾರ ಆದವನೆ |

ಶೃಂಗಾರ ಮಠದ ಲಿಂಗ ನೆಲಿ ತಿಳಿದವನೆ |

ಬಲಲಲಾ ಯಮಧರ್ಮಗ ಎತ್ತಿ ಬಡದಿ ||2||

ಪಕ್ಕಾ ಗುರು ದೊರಕಲ್ದೆ ಮನಿ ತೊರದಿ |

ಕೋಕ ಶಾಸ್ತ್ರದ ನುಡಿ ನುಡಿಗೆ ಪದ ತೆರದಿ |

ಲೆಕ್ಕ ನೋಡೊ ನೀರ ಗುರುಳಿ ಪ್ರಕಾರ ಗರದಿ |

ಎಲ್ಲಾ ತೀರ್ಥಕ ಬಲ್ಲಂಗೆ ನೀನು ಹಾಯ್ದಿ ||3||

ಸಂತ ಮಹಿಮಾ ಸದ್ಗರು ತಾ ಬಲ್ಲ |

ನಿಂತ ತನುಮನ ಧನ ಮಾಡೋ ಗುರುವಿನ ಪಾಲ |

ಕುಂತ ಸೋತ ಸಿದ್ಧ ಬರದ ಬೈಲಿಗಿ ಬೈಲ |

ಕಾಲನ ಕಾಲಾ ನಡಿಲಪ್ಪ ಭಜನ ಗರದಿ ||4||

ಕೆಟ್ಟ ಕೃತ್ಯ ಕಲ್ಪಕನ ಕವಿ ಕಚ್ಚಾ |

ಸುಟ್ಟ ಇದ್ದವನೇ ಗುರುವಿನ ಮಗ ಸಾಚಾ|

ಥೇಟ ಜನ್ನತ ಮೇ ಖೇಲೆಸೋ ಗುರು ಬಚ್ಯಾ

ದಾಸನ ಮದ್ದ ತಿಂದವನ ಕಡಿತು ಸರದಿ ||5||

ಚಲತಿ- ಬಲ್ಲಂಗ ನಡಿವುದು ಭೂಜೇನೋ |

ಬಾಗಿ ಇದ್ದವನಿಗೀ ರಾಜೇನೋ ||

ಮಂದಿರ ನೋಡೋಣ ಬಾ |

ಇಂದಿರ ಮುಖ ಮನೋಹರ ಶೋಭಾ ||ಪಲ್ಲವಿ||

ಮಹಾದ್ವಾರ ಉನ್ಮನಿ ಬಾಕಿಲ |

ಇನ್ನೂರ ಹದಿನಾರು ಸಕೀಲ|

ಸ್ವರ್ಗ ಮತ್ರ್ಯ ಪಾತಾಳ ಅಖಿಲ ||1||

ಬ್ರಹ್ಮ ವಿಷ್ಣು ರುದ್ರರೆಲ್ಲ |

ಇಂದ್ರ, ಚಂದ್ರ ದೇವೀಂದ್ರ ಮೊದಲ |

ಬಂದ್ರು ತಮ್ಮ ಪೈರ್ಯಾದ ಮ್ಯಾಲ ||2||

ನಿರ್ಬೈಲ ಮಂದಿರದೊಳು |

ನಿಜ ಪರ ವಸ್ತು ಅದರೊಳು |

ನೀನೇ ನಾನು ತಾನು ನಿನ್ನೊಳು ||3||

ಮಂದಿರಕ ಬಣ್ಣವಿಲ್ಲ |

ಅಂಧಕನಿಗೆ ಕಾಣುವದಿಲ್ಲ |

ಆನಂದ ಘನ ಸಿದ್ಧ ಪ್ರಭು ||4||

ಪ್ರಪಂಚ ತಿಳಿದ ಮೇಲೆ ನಂದೇನು ಹಂಗಾ |

ನಿಶ್ಚಿಂತಿಯಾದ ಮೇಲೆ ನಿಂದೇ ಸಂಗಾ ||ಪಲ್ಲವಿ||

ಬುದ್ಧಿಗಿ ಸುದ್ದಿ ಹೇಳು ಮದ್ದಿಗಿ ಪತ್ಯಾ ತಾಳು |

ಸಿದ್ಧ ಸಾಧಕನ ಹುಚ್ಚ ಜಗದೊಳ ಮಂಗಾ |

ಗುದ್ದಿ ಹಣ್ಣು ಮಾಡಿ ಸುಳ್ಳ ಮುದ್ದಿ ನೋಡಿ ಮುಂದಕ ತೆರಳು |

ನಿದ್ರಿಯೊಳು ಎಚ್ಚರಾಗಿದವನೇ ಲಿಂಗಾ |

ಪಂಚತತ್ವ ಹಂಚಿದ ಮ್ಯಾಲೆ ಇನ್ಯಾವ ರಂಗಾ ||1||

ನಾಲ್ಕು ಆರು ಹತ್ತು ಬಾರ ಸೋಳ ಎರಡು ಸಾವಿರ |

ಸಾವಿರ ಐವತ್ತು ತಿಳದು ಆದೋ ಗುಂಗಾ |

ಇನ್ನೂರಕ ಹದಿನಾರ ಕೊರತಿ ಇನ್ನೂರ ಮೇಲೆ ಹದಿನಾರ ಭರತಿ |

ಮದನೂರ ನಮ ಗುರುವಿನ ಗುರು ಸಿದ್ಧಲಿಂಗಾ |

ಮಿಂಚಿನ ಪರಿಸಿದ್ಧನ ಸಂಗ ಬಿಟ್ಟೇವು ಗಂಗಾ ||2||

ಬರುವೆ ತಂದಿ ಕರದೊಯ್ಯರಿ ನಿಮ್ಮ ಸಂಗಟ ||ಪಲ್ಲವಿ||

ಹ್ಯಾಂಗ ಇರಲಿ ಹಂಗ ಹರದವರ ಮನಿಯಾ |

ಸಂಗ ಬರುವಲ್ಲರವರು ಕೊನಿಯಾ |

ಅಂಗದ ಅನುಭವ ಯಾರಿಗಿ ಇಲ್ಲಾ |

ಈ ಮಂಗರ ಸಂಗ ಬಲು ಸಂಕಷ್ಟ ||1||

ತಗಣಿ ಕಾಟಿನ ನೇಗೆಣಿ ಒಬ್ಬಕಿ |

ಗಂಧಗಾಣಿ ನಾದಣಿ ಬೋಗೋಣ್ಯಾಗ ಉಂಬಕಿ |

ಸುಗಣಿ ಗುಣಗಳು ಯಾರಲ್ಲಿ ಉಳದಿಲ್ಲಾ |

ಹಗರಾಣಿ ಭಾವ ಮೈದುನರು ಥೊಂಟಾ ||2||

ಅತ್ತಿ ಬಲ್ಲಿ ಬರೆ ಕೋತಿಯ ಗುಣಗಳು |

ಮತಿಗೇಡಿ ಅತಗಿ ಹೊತ್ತಿದು ನೀಡುವಳು |

ಜಾತಿ ನೀತಿ ಜರಾ ಸುರ್ತ ಇಲ್ಲದೆ

ಮಾತಿನ ಅರ್ಥ ತಿಳಿಯದ ಭಂಟಾ ||3||

ಅಣ್ಣ ತಮ್ಮ ಉರಿಗಣ್ಣಿನ ಪರಿಯ |

ಎಣಸಿ ಹೇಳಿದ ಮಾತ ಬೆಡಗಿನ ಬಿರಿಯ |

ಎರಡು ಮನ್ಯಾಗ ಬರಡ ಎಮ್ಮಿ ಸಂಗ ಬಿಟ್ಟು |

ಸಿದ್ಧ ಭಜನ್ಯಾಗ ಬಿಟ್ಟು ನೀಲಕಂಠ ||4||

ಚಲತಿ- ಬುದ್ಧಿವಂತರ ಸಂಗ ಆಯಿತು |

ಪ್ರಸಿದ್ಧ ಪ್ರಸಾದ ಲಾಭ ಆಯಿತು ||

ಹುಂಜಿನ ಬಣ್ಣ ಎಷ್ಟು ಅಪರೂಪ |

ಗುಂಜಿ ಜ್ಞಾನವಿಲ್ಲ ಗಂಗಾ ||ಪಲ್ಲವಿ||

ಮುಂಜಾನೆದ್ದು ಹೆಂಡಿ ತಂದು |

ಕುಳ್ಳ ಬಡಿದ ಆ ಹಿತ್ತಿಲೊಳು |

ಅಂಜಿಕಿ ಎಷ್ಟು ಇಲ್ಲದಂತೆ |

ಕೆದರತಾವ ಎಲ್ಲಾ ಕುಳ್ಳು |

ನೂತಿದ್ದೆಲ್ಲ ಹಂಜಿ ಮಾಡಿ |

ರಂಜಿಣಗಿ ಮ್ಯಾಲ ಕುಂತಾದ ಗಂಗಾ ||1||

ಜಪ ತಪ ಯೋಗ ಮುದ್ರ |

ಅನುಷ್ಠಾನ ಸಹಸ್ರ ರುದ್ರಾಕ್ಷಿ |

ಕಷ್ಟ ತಷ್ಟ ಹೃದಯದೊಳು |

ಹ್ಯಾಂಗೆ ಒಲ್ಮಿ ಪರಶಿವ ಸಾಕ್ಷಿ |

ಹಂಜಿ ತೆಲಿ ಹಿಕ್ಕ ಎಣ್ಣಿ ಹಚ್ಚಿ |

ಸಿದ್ಧ ಭಜನಿ ಸಂಗೀತ ಸಂಗ ||2||

ಬಲ್ಲ ಜ್ಞಾನಿ ಪತಾ ಬರಕೋರೆಣ್ಣ |

ಪ್ರೇಮ ಕ್ಷೇತ್ರ ನಮ್ಮ ಠಿಕಾಣ ||ಪಲ್ಲವಿ||

ಸತಿ ಪತಿ ಒಂದೇ ಮನ |

ಸತ್ಯವಂತರ ಒಂದೇ ಧ್ಯಾನ |

ಹಂತವರ ಮನಿ ಮುಂದ ಅಣ್ಣ |

ಶಾಂತವಾಗಿ ನಮ್ಮ ಠಕಾಣ |

ಲಕ್ಷಾ ಚೌರ್ಯಾಐಂಸಿ ನಂಬರ ಇದೆ ನಮ್ಮ ಖೂನಾ ||1||

ಶಂಬರ ಕಂಬ ಪಡಸಾಲಿವುಂಟು |

ಶಂಬರ ಮ್ಯಾಗ ಮಾಲಗಂಬ ಎಂಟು |

ಶಂಬರ ಸೇಕಡಾ ದಾಸೋಗವುಂಟು |

ಅಂಬಾ ನಾಮ ರಸಾಯಿವುಂಟು |

ಅಮೀರ ಗರೀಬ ಒಂದು ಪಂಕ್ತಿ ಒಂದೇ ದಿನಸ ನೀಡೋಣ ||2||

ನಿರ್ಗುಣ ನಮ್ಮ ಗುರುಗಳುಂಟು |

ನಿಜವಂತರು ತಿಳಿವದುಂಟು |

ನೀನು ಮಾತ್ರ ಬಾ ಬಾ ಒಂಟು |

ತಾ ಮಾತ್ರ ಭಜನಿ ಗಂಟು |

ಗಂಧÀರ್ವ ಅಂತನ ರಾಗ ನೀರಿನಂತೆ ಸಿದ್ಧ ಭಜನ ||3||

ಚಲತಿ – ನೀರಿನಂತೆ ನಿರ್ಮಳನಾಗು |

ನಿಜ ರೂಪ ಕಂಡರೆ ಸಿರ ಬಾಗು ||

ಚೌಫೇರಿ ಸ್ಥಾನ ಪ್ಯಾಟಿಯೊಳು |

ಅದ ನಮ್ಮ ದುಕಾನ ||ಪಲ್ಲವಿ||

ನಾವು ಬಣಜಿಗೇರು |

ಹೊಡಿವುದು ಹೇರು |

ಪಂಚಿಸು ಎತ್ತು ನಡಿತವು ದಿನ್ನ ||1||

ತರುವದು ಒಂದೇ ದಿನಸ |

ಕೊಡುವದು ಒಂದೇ ದಿನಸ |

ಒಂದೇ ಭಾವ ಒಂದೇ ತೂಗಣ್ಣ ||2||

ಒಮ್ಮೆ ಕೊಡಿರಿ ಮೋಲ |

ಒಮ್ಮೆ ಒಯ್ಯರಿ ಮಾಲ |

ಸರಿವದಿಲ್ಲ ಕಾಲಾನುಕಾಲ ಅಣ್ಣ ||3||

ಮಾಲ ಒಯ್ದಳ ಎಂಕಮ್ಮ |

ಮಾಲ ಒಯ್ದಳ ಚಿಲಕಮ್ಮ |

ಸಿದ್ಧ ಕೈಯ ಪುರಸತಿಗಿ ಇಲ್ಲಣ್ಣ ||4||

ವೇದ ಓದಿ ಭ್ರಾಂತಿಯ ಬ್ಯಾಡ |

ಪರತತ್ವ ನೋಡ ||ಪಲ್ಲವಿ||

ಶಾಸ್ತ್ರದೊಳು ಸಂತಿಯ ಸುದ್ದಿ |

ಪುರಾಣದೊಳು ಪುಂಡರ ಸುದ್ದಿ |

ವಾದ ತರ್ಕ ಕೂಡಿ ಕುಸ್ತ್ಯಾಡ ||1||

ಭಕ್ತಿ ಹೇಳಿ ಉಂಬದು ಬ್ಯಾಡ |

ಯುಕ್ತಿ ಹೇಳಿ ಘಳಿಸದು ಬ್ಯಾಡ |

ಮುಕ್ತಿ ಆಸಿ ಸಿದ್ಧಿ ಸಂಗ ಬ್ಯಾಡ ||2||

ಧನ್ಯ ಧನ್ಯ ನಿರ್ಬಯಲ ಸ್ವಾಮಿ |

ಸರ್ವಾಂತರಯಾಮಿ ||ಪಲ್ಲವಿ||

ನಿಮ್ಮ ಇಚ್ಛಾ ಉತ್ಪತ್ತಿ |

ಐದು ಕೂಡಿ ತ್ರಿಮೂರ್ತಿ |

ತ್ರಿಗುಣ ಪರನಾರಿ ಪ್ರೇಮಿ ||1||

ಬ್ರಹ್ಮ ಹುಡಕಿ ಬಿದ್ದ ಗುಂಭ |

ತಿಳವಳಕಿ ಈ ಜಗ ತುಂಬ |

ನಾಮ ರೂಪ ರಹಿತ ಸಿದ್ಧ ನೇಮಿ ||2||

ಗೆಳದಿ ಗಂಡನ ಮಾಡಿಕೊಂಡ |

ಈ ಗಂಡನ ಘಳಕಿ ಎರಡು ಕೈಲಿ ಉಂಡ ||ಪಲ್ಲವಿ||

ಕಾಲಿಲ್ಲ ಕೈಯಿಲ್ಲ ಪೈಲೆಯಿತ್ತು ಮಂಡಾ |

ನಾಮಿಲ್ಲಾ ರೂಪಿಲ್ಲಾ ತದ್ರೂಪ ಗುಂಡಾ |

ಕಣ್ಣು ಕಿಂವಿ ಮೂಗು ಇಲ್ಲೆ ತಾಯಿ |

ಶಿವ ಶಿವ ಅಖಂಡ ||1||

ಆಡವಲ್ಲಾ ಆಡಸಂವಲ್ಲಾ ಆಗಿರುವನೋ ಶಂಡ |

ಕುಲಯಿಲ್ಲ ಛಲಯಿಲ್ಲ ಕುಡಿತಾನೋ ಹೆಂಡ |

ಮಾದರ ಚೆನ್ನನ ಮನಿಯಲ್ಲಿ ಉಂಡ |

ಎಬ್ಬಸ್ಯಾನ ಹೊಲಭಂಡ ||2||

ತಾಯಿ ತಂದಿ ಎಲ್ಲಿಂದ ತಂದರ ಇವನಿಗಿ ಹುಡುಕೊಂಡ |

ನದರ ಇಟ್ಟು ನೋಡಿದರ ಕೊರಳಗ ಅವ ರುಂಡ |

ಚೌರ್ಯಾ ಐಂಸಿ ಲಕ್ಷವ ತಿರುಗಿದರ ದೊರಿಲಿಲ್ಲ |

ಹಿಂಥವ ಪುಂಡ ||3||

ಛೆತ್ತಿಸ ಕೋಟಿ ದೇವತರ ಅವರ ಬದಿಲಿ ಫಂಡ |

ಅಟ್ಯಾ ಐಂಸಿ ಕೋಟಿ ಋಷಿ ಇವರ ಹಂತಿಲಿ ಝಂಡ |

ಅನ್ನ ನೀರ ಇಲ್ಲದೆ ನಾನು ಇವರಿಗಿ ತಿಳಕೊಂಡ |

ಗಂಡನ ಮಾಡಿಕೊಂಡ ||4||

ಒಂದೇ ಭಾವದಲ್ಲಿ ಕುಂತು ಉನ್ಮನಿಯಾಗ ಉಂಡ |

ಪ್ರೀತಿಯ ಗೆಳತಿರನ್ನು ಹಂತಿಲಿ ಕರಕೊಂಡ |

ಲಾಕೋ ಝಂಡ ಒಳಗೆ ಹಿಡಕೊಂಡ |

ಹಿಡದ ಸಿದ್ಧ ಝಂಡಾ ||5||

ಹಿಡಿಯೋ ಕೊಡುವೆನು ನಿನಗ ವರವ |

ನಿನಗಿಲ್ಲ ಅರವು |

ತಾನೇ ಮುರಸಿತು ತನ್ನ ಗರವು |

ಏನ ಮಾಡುವ ಗುರುವು ||ಪಲ್ಲವಿ||

ನುಡಿಯೋ ಮಹಾಮಂತ್ರವು ನೀ ನುಡಿಯೋ |

ಛಿಡಿಯೇರಿ ನೋಡು ಗಡಿಯೋ |

ಗಾಡಿಪುರ ಉನ್ಮನಿಯಲ್ಲಿ ಹೋಗಿ ತಡಿಯೋ |

ನವನಾಥನ ಗುಡಿಯೋ ||1||

ಬೈಲು ನಿರ್ಬೈಲೊಳು ನಿಜದೈವೋ |

ಏಕೋ ದೇವ ಜೀವೋ |

ಕಷ್ಟಂತೆ ಕಾಣುವ ಮಹಾದೇವೋ |

ಇಡು ಒಂದೇ ಭಾವೋ ||2||

ತನ್ನ ವಸ್ತು ತನಗ ತಿಳಿತವೋ |

ತಿಳದ ಉಳಿತಾವೋ |

ತನ್ನ ರೂಪ ತನಗಾಗಿತು ರಾವೋ |

ತಾ ಕಂಡರೆ ಮವು ||3||

ಆನಂದ ಕಂದಗೂಳ ಸ್ಥಳವೋ |

ನಾರಂದನ ದಿವ್ಯೋ |

ಎನೊಂದು ತಿಳಿದರ ತಿಳಿತಾವೋ |

ತಿಳೀತಂದರ ಉಳಿತಾವೋ ||4||

ಮಂಡಲದೊಳು ಮಡಿವಾಳಪ್ಪ ಸೇರಿವೋ |

ಗುಂಡ ಆದರ ಅವರ ಸರಿವೋ |

ಬ್ರಹ್ಮಾಂಡದೊಳು ಬಿಚ್ಚಿದ ಹುರಿಯೋ |

ರುಂಡ ಮಾಲನ ಗುಡಿವೋ ||5||

ಮೊದಲೆ ಹುಟ್ಟುವದು ಖರೆ ಗುನಿವೋ |

ಬೀಜ ಕಾಯಿತರ ತೆನಿವೋ |

ಗರಜಿಗಿ ಸಿಕ್ಕಿತ್ತು ಹ್ಯಾಂಗ ನೆಲವೋ |

ಪಾರಾಗದು ಕಲಿವೋ ||6||

ಒಂದೆ ಹಳ್ಳದ ಬಿದಿ ಸೆಳಿವೋ |

ಮುಂದ ಏಳೆಂಟ ಹೊಳವೋ |

ಧಾಟಿ ಬರಬೇಕು ಉನ್ಮನಿವೋ |

ಹಿಡಿ ಸಿದ್ಧಪ್ರಭುನ ದನಿಯೋ ||7||

ಮುತ್ತ ಹೋಯಿತು ನಂದು |

ಗೊತ್ತಿದ್ದ ಜಾಣರು ಹುಡಕಿ ಕೊಡರಿ ತಂದು ||ಪಲ್ಲವಿ||

ಮುಂಜಾನೆದ್ದು ಯಾರ ಮುಖವು ಕಾಣಿದ |

ಸಂಜಿ ಆಯಿತು ಸಮಾಧಾನ ಇರಲಾರದು |

ಅರ್ಧ ಗುಂಜಿಕ್ಕಿಂತ ಕಿರ್ದು ಇತ್ತು ತಂಗಿ |

ಯಾರ ಒಯ್ದರ ಬಂದು ||1||

ಒಂಟ ಕುಬಸ ಒಗಿಲಾಕ ಹೋಗಿದ |

ಎಂಟ ಮಂದಿಗುಡ ತಂಟ ಮಾಡಿದ |

ಒಂಬತ ಅಡಕಿಲದೊಳಗ ಇಟ್ಟಿದ |

ಯಾರ ಒಯ್ದರ ಬಂದು ||2||

ಮುದ್ರದ ಕುದರಿಯ ಮ್ಯಾಲ ಕುಂತಿದ |

ಸ್ವರ್ಗ ಮತ್ರ್ಯ ಪಾತಾಳ ತಿರುಗಿದ |

ಬ್ರಹ್ಮ ವಿಷ್ಟು ರುದ್ರರಿಗಿ ಬಿಟ್ಟದ |

ಯಾರ ಒಯ್ದರ ಬಂದು ||3||

ಒಂಬತ ಕದವು ತೆರೆದು ನೋಡಿದ |

ಸೋತು ಕುಂತು ಸಿದ್ಧ ಭಜನಿ ಕೇಳಿದ |

ನಿರ್ಬೈಲದೊಳು ಕಲತಿದಾ ಮುತ್ತು |

ಪದರೊಳು ಬಂದು ಬಿತ್ತು ||4||

ಹೊತ್ತಗಳೇನು ಬಾಬಾ ಬಡ ಬಡ |

ಬಸವನ ಗೂಡ ||ಪಲ್ಲವಿ||

ಪಂಚ ಅಕ್ಷರ ಬಸವಣ್ಣಪ್ಪ |

ತ್ರಿ ಅಕ್ಷರ ಬಸವ ಸ್ವರೂಪ |

ಏಕ ಅಕ್ಷರ ಅವತಾರ ನೀ ನೋಡ ||1||

ಆದಿ ಅಂತಿ ಒಬ್ಬನೇ ಬಸವಾ |

ಹಾದಿ ತಳದ ಮುಚ್ಚಿತು ಹಸುವಾ |

ಸುದ್ದಿ ಕೇಳಿ ಸಿದ್ಧ ಸಂಗ ಕೂಡಾ ||2||

ಚಲತಿ – ನಿರಾಕಾರ ತಿಳಿವದು ಬಿರಿಯ |

ಆಕಾರ ಒಂದ ಕಡಿ ಆಯಿತು ಮರಿಯ ||

ಮರಿಲಿಲ್ಲಾ ರೇವಯ್ಯಾ ಸ್ವಾಮಿ ಹಚ್ಚಿದ ರೂಪಾ |

ಹರಿಹರ ಭಕ್ತರಿಗೆ ಕೊಡುವೆ ನೆನಪ ||ಪಲ್ಲವಿ ||

ನಿಮ್ಮ ವಾಣಿಗಿಲ್ಲಾ ಮುಪ್ಪ |

ಪ್ರೇಮ ಚಿರಂಜೀವ ರೂಪಾ |

ಆಮ ದುನಿಯಾದೊಳು ಕೀರ್ತಿ ಅಮರ ದೀಪಾ |

ಪಂಚಾಮೃತ ಪದದ ತುಪ್ಪ |

ಪಂಚ ಸಿಂಹಾಸನ ಕೂಡುದು ಕಲ್ಪ |

ಕಲ್ಪವೃಕ್ಷ ನಿರ್ವಿಕಾರ ಸಗುಣ ಸ್ವರೂಪ |

ಧರಿಯೆಂಬ ಸುವರ್ಣ ಗಿರಿಯೊಳು ಬಸವಣ್ಣ ||1||

ಬಲ್ಲವರು ಹಾಕರಿ ಝಾಪ |

ಮೇಲ ಅನುಭವ ಮಂಟಪ |

ಮೂಲ ಮಂತ್ರ ಪಂಚರ ಮನಸಿನ ಮೇಲ ಆಯಿತಪ್ಪ |

ಭಾಲ ಮಾಡಿ ಈ ಅರ್ಜಿಗಿ |

ಖ್ಯಾಲ ಮಾಡಿ ನಿಮ್ಮ ಮರ್ಜಿಗಿ |

ಪಂಚ ಪಾದ ದರ್ಶನ ಪುಣ್ಯ ಸರ್ವರಿಗಿ |

ಬರ್ರಿ ಒಜ್ಜಿ ಇಳಸರಿ ಸ್ವಾಮಿ ಹಾಕ್ಯಾರ ಛಾಪಾ ||2||

ಕಾಣಬಾರದಂಥ ವಸ್ತು ಕಣ್ಣಿಗಿ ಹ್ಯಾಂಗ ಕಾಣಿತ್ತು |

ಕಾಣೆನೆಂದು ಹೇಳವರ ಕಂಡು ಎನಗ ಸೋಜಿಗಾಯಿತು ||ಪಲ್ಲವಿ||

ಹೌದು ಎಂದು ಅನ್ನಲಾರೆ ಅಲ್ಲಾ ಎಂದು ಹೇಳಲಾರೆ |

ನಿರಾಕಾರ ಬೈಲೆಂದು ಗುಪ್ತಜ್ಞಾನ ತಿಳಿತು ||1||

ದರ್ಪಣದೊಳು ತನ್ನ ಮುಖ ಕಾಣದಯ್ಯಾ |

ಕನ್ನಡಿ ಇಲ್ಲದೆ ಬೈಲು ಸಿದ್ಧ ಹ್ಯಾಂಗ ತಿಳದತ್ತು ||2||

ಚಲತಿ- ಕಣ್ಣಿಗೆ ಕಾಣದೆ ಸರ್ವ ಉಂಟು |

ಕಾಣಲಾರದು ತಿಳಿ ಬೇರುಂಟು ||

ಅಂದಿಗಿಂದಿಗಿ ಬಿಂದಿಗಿ ನೀರ ಬೇಕು |

ನಂದಿ ಝಳಕಕ ||ಪಲ್ಲವಿ||

ಜಳಕ ಮಾಡಿದ ಬಳಿಕ |

ಝಳಕ ಕಾಣುವದು ಬೆಳಕ |

ತಿಳಕೋಲಿಕ ಮನಸ ಬೇಕ |

ಕಲಕ ನೀರು ಕುಡಿಯದು ಸಾಕ |

ಆ ಊರಾಗ | ಆ ಕೇರ್ಯಾಗ |

ಆ ಭಾಂಯಿಗ ನೀ ಹೋಗದು ಸಾಕ ||1||

ಬಿಂದಗಿ ತಂದ ಪಂಢರಪುರದ |

ಎಂದಿಗಿ ಇದು ಒಡಿಲಾರದ |

ಮಂದಿಗಿ ಇದು ಕಾಣಲಾರದ |

ಚಿಂದಿ ಬಸವಣ್ಣನ ಬಿರುದ |

ನಿರ್ಗುಣ | ನಿರಂಜನ |

ನಿಜಗುಣ ತಿಳದ ಅನುಭಾವಿಕ ||2||

ಬಿಂದಿಗಿ ತುಂಬಿಲ್ಲಾ ಪುರಾ |

ಒಂಬತ್ತ ಸಮುದ್ರದ ಹಿಡದದ ನೀರ |

ಗುಂಬ ಅರ್ಥ ಮಾಡಿದ್ರ ಧೂರ |

ಸಾಂಬ ಉಂಟು ಭಕ್ತನ ಎದುರ |

ಘಡಾ ಖರೀದ | ಪಡೋದರುದ |

ಬನೋ ಮುರಿದ | ಲೀಖಾಸಿದ್ಧ ಲೇಖಾ ||3||

ನೋಡನು ಬಾ ರಂಗಾ |

ನೋಡಮಿ ನಡಿ ಗಂಗಾ |

ನೋಡಮ್ಮ ನೋಡ ಶಿವಲಿಂಗ |

ಶಿವ ಆತ್ಮದ ಲಿಂಗ |

ಕೂಡಮ್ಮ ಕೂಡುವ ಗುರುಲಿಂಗ |

ಜಂಗಮನ ಸಂಗ ||1||

ಸಾವಿರ ಧ್ಯಾನದ ರಂಗ |

ಬ್ಯಾರೆ ಬ್ಯಾರೆ ದಿನಸ ಗಂಗಾ |

ಪದ್ಮಾಸನ ಕುಂತ ಬೀಸ ಹಿಂಗಾ |

ಆ ದ್ರೋಪದಿ ಹಾಂಗ |

ನಮ ಚೆಂಗಳೆವ್ವನ ಭಕ್ತಿಗಿ ಒಲತಂಗ |

ಮಗ ಜೀವ ಪಡದಂಗ ||2||

ಎರಡು ಬಣ್ಣ ತಿಳಕೋ ರಂಗಾ |

ಹದನಾರು ದಳ ಹಿಡಕೋ ಗಂಗಾ |

ತನ್ನಲ್ಲಿ ಹನ್ನೆರಡು ಜ್ಯೋತಿರ್ಲಿಂಗ |

ಹತ್ತು ಪಾತಾಳ ಗಂಗಾ |

ಬೀಸಮ್ಮ ತಂಬೂರಿ ಸ್ವರದಂಗ |

ನದಿ ಪಾರ ಆದಂಗ ||3||

ಆರು ಶಾಸ್ತ್ರ ರಂಗೆ ರಂಗ |

ನಾಲ್ಕು ವೇದ ಗುಂಗೆ ಗುಂಗ |

ಸಾವಿರ ಐವತ್ತ ದಳದಂಗ |

ಮೇಲ ಪ್ರಭುಲಿಂಗ |

ಬೀಸುತ ನೋಡಾಮಿ ಮಹಾಲಿಂಗ |

ಬಾ ನೆರಮನಿ ಲಿಂಗ ||4||

ಉದಯ ಅಸ್ತಮಾನ ರಂಗ |

ಅತ್ತಿ ಮಾಂವ ಪತಿ ಸಾಷ್ಟಾಂಗ |

ಬಾರ ಬಾರ ಜಲ್ಮ ಬರದಂಗ |

ಸದಾ ಇರಬೇಕು ಗಂಗಾ |

ಹೇಮರೆಡ್ಡಿ ಮಲ್ಲಮ್ಮ ದುಡದಂಗ |

ಗುರು ಬೀಸಿ ಹೋದಂಗ ||5||

ಸ್ವರ್ಗ ಮತ್ರ್ಯ ಪಾತಾಳ ರಂಗ |

ಏಕೋ ದೇವ ಸಲಹುವ ಗಂಗಾ |

ನಾಮ ಕಲ್ಯಾಣ ಬಸವಾ ಶಿವಲಿಂಗ |

ಬರದ ಇಟ್ಟಾರ ಹಿಂಗ |

ಅಷ್ಟ ವರ್ಣ ಸಂಪೂರ್ಣ ನಡಿ ಹಿಂಗ |

ನಮ್ಮ ಮೀನಾಕ್ಷಿ ಹಾಂಗ ||6||

ಲಿಂಗವಂತರು ನಾವು ನೀವು ರಂಗ |

ಸಂಗನ ಶಿವಶರಣರ ಗಂಗಾ |

ಮಂಗರಿಗೆ ನೆಲಿ ಇಲ್ಲ ಈ ಲಿಂಗ |

ಸಿದ್ಧಲಿಂಗನೇ ಲಿಂಗ |

ಬಾವನ ಮಾತ್ರ ಬೆಲಿ ಹಾಂಗ |

ಸ್ವರ್ಗದವರು ಧಂಗ ||7||

ಪರಬ್ರಹ್ಮ ತಿಳಿಬೇಕು ರಂಗ |

ತಿಳಿದವರು ಉಳದರ ಗಂಗಾ |

ಉಳದವರು ಮಮತಾ ಸ್ವಾಮಿಲಿಂಗ |

ನಾಮ ಶಂಕರ ಲಿಂಗ |

ನಮ್ಮ ನಾಡಿಗಿ ನಾವದಗಿ ಸ್ವಾಮಿಲಿಂಗ |

ನಮ್ಮ ಎಂಕಮ್ಮ ಲಿಂಗ ||8||

ರಾಜ ಯೋಗದಿ ನೋಡ ರಂಗ |

ಸಹಜ ಮಾತ ಬಿರಿ ನೋಡ ಗಂಗ |

ರಾಜ ರಾಜೆರು ಗಾದಿ ಇಳದಂಗ |

ಸೀರಿ ಕಳಿ ಪಂಚರಂಗ |

ಮಾರ್ಕಂಡಗ ಶಿವನು ಕಾಣಿದಂಗ |

ಮುಕ್ಕ ಹಾಕಮ್ಮ ಹಿಂಗ ||9||

ಮರದಂಗ ಮರ ಹುಟ್ಯಾದ ರಂಗ |

ಮರಚಕ್ರ ಕಾಯಿ ಆಯಿತ ಗಂಗ |

ತಿಂಬಲದೆ ಹಣ್ಣ ರುಚಿ ಹ್ಯಾಂಗ |

ತಿಂದಾಂಗೆ ಗುಂಗ |

ಜ್ಞಾನಸಿಂಧು ಟೀಕ ಬರದಂಗ |

ಹಟಯೋಗ ದಂಗ ||10||

ಏಸೋ ಜಲ್ಮ ಬೀಸಿ ರಂಗ |

ನರಜಲ್ಮ ಬಂದೆವು ಗಂಗಾ |

ಈ ಜಲ್ಮ ಬಂದು ತಿಳಿ ಲಿಂಗ |

ನಮ್ಮ ಮೈಲಾರ ಲಿಂಗ |

ಹಸುರ ತೇಜಿ ಮ್ಯಾಗ ಬರುವ ಚೆನ್ನಿಂಗ |

ಚೆನ್ನಬಸವ ಲಿಂಗ ||11||

ಅವಧೂತ ಆಗಬೇಕು ರಂಗ |

ಯಮಧೂತ ಅಂಜಬೇಕು ಗಂಗ |

ಶಿವದೂತ ನಮಗ ನೋಡಿ ಮರತಂಗ |

ಬೀಸುತ ಹಾಡೆ ಹಿಂಗ |

ಪರ ಉಪಕಾರಕ ಪ್ರಭು ನಿಂತಂಗ |

ನಿರ್ವಿಕಾರ ಲಿಂಗ ||12||

ಕಲಂಕಿ ಕವತೂಕ ನೋಡ ರಂಗ |

ನೋಡಲಾರದೆ ನೋಡಿ ಗಂಗಾ |

ಕೂಡಮ್ಮ ಕೇಳಿ ಕಿವುಡಂಗ |

ನಮ್ಮ ಬಾಯಮ್ಮನಂಗ |

ಪರತತ್ವ ರಂಗ ರಂಗಿನ ಹಂಗ |

ಹೊತ್ತಗಳಿಯಮಿ ಹಿಂಗ ||13||

ಬೀದರ ಜಿಲ್ಲಕ ಏಳಕೋಟೆ ಲಿಂಗ |

ಸದರಿಗಿ ನಮ್ಮ ರಾಚಮ್ಮ ಲಿಂಗ |

ದರ್ಬಾರಕ ಒಪ್ಪಿ ಗುರುಪಾದ ಲಿಂಗ |

ನಮ್ಮ ಮೋನಯ್ಯ ಲಿಂಗ |

ಕೂಡಿ ಬೀಸೊನು ಸಂಗಲಿಂಗ ರಂಗ |

ಗಂಗಾ ದೇವಿದಾಸ ಸಂಗ ||14||

ಸ್ವಾಮಿ ಸರ್ವಾಂತರ್ಯಾಮಿ |

ನಾಮಿ ಪ್ರೇಮಿ ಉದ್ಧಾರ ಖರ್ಮಿ ||1||

ಇಲ್ಲಾ ನೀ ಎಲ್ಲಿ ಇಲ್ಲಾ |

ಇಲ್ಲದ ಜಾಗವು ಎಲ್ಲಿ ಇಲ್ಲಾ ||2||

ಬಲ್ಲ ಬಲವಂತನೆ ಬಲ್ಲಾ |

ಬಲ್ಲವನಿಗೆ ಔಷಧ ಹುಲ್ಲಾ ||3||

ಸಿದ್ಧ ಶುದ್ಧ ಆದವ ಸಿದ್ಧಾ |

ಬದ್ಧ ಗುಣಕ ಕಾಯಿಲಕ ಹಚ್ಚಿ ಗದ್ಧಾ ||4||

ಶ್ರೀಗುರು ಮುಖ ಉಪದೇಶದಿಂದೆ |

ಶ್ರೀ ಷಣ್ಮುಖ ಸೋಧನ ಪಡೆವೆ |

ಅಲಕ ಪಕ್ಷಿಯ ತೋರಿದ ಗುರುನಾಥ |

ಓಂ ಸುಜ್ಞಾನಿಗಳಿರ್ಯಾ |

ಇದರ ಮರ್ಮವು ಬಲ್ಲವನೆ ಬಲ್ಲಾತಾ ||1||

ಪಂಚವರ್ಣದ ಪಕ್ಷಿಯ ಕಂಡ |

ಮಿಂಚಿದಂತೆ ಹೊಳೆಯದು ಕಂಡ |

ಸಂಚಿತ ಆಗಮ ಎರಡು ಇಲ್ಲದಂತ |

ಓಂ ಸುಜ್ಞಾನಿಗಳಿರ್ಯಾ

ಇದರ ಹಂಚಿಕಿ ಬಲ್ಲವನೆ ಬಲ್ಲಾತಾ ||2||

ಕಾಲು ಕೈ ಧಂಡಾನೆ ಇಲ್ಲಾ |

ಬ್ರಹ್ಮಾಂಡ ಮಂಚದ ಮೇಲಾ |

ಗಂಡದನಿ ಮೂಲ ಮಂತ್ರ ನುಡಿಯುತ |

ಓಂ ಸುಜ್ಞಾನಿಗಳಿರ್ಯಾ |

ಮೂಲಧಾರನೆ ಬಲ್ಲವನೆ ಬಲ್ಲಾತಾ ||3||

ಫಕ್ಕಾ ರೆಕ್ಕಿಗಳು ಕಾಣದು ಎನಗೆ |

ಸಿಕ್ಕದು ಅದು ಯಾರ ಕೈಗೆ |

ದಿಕ್ಕು ನಾಲ್ಕು ಲೆಕ್ಕವು ಮಾಡುತಾ |

ಓಂ ಸುಜ್ಞಾನಿಗಳಿರ್ಯಾ |

ಚುಕ್ಕಿ ಪರಿಯೆ ಬಲ್ಲವನೆ ಬಲ್ಲಾತಾ ||4||

ಮೇರು ಪರ್ವತ ಮೇಲ ದನಿಯಿತ್ತು |

ಸೂರ್ಯ ಚಂದ್ರಮನ ಸ್ಥಲದಲ್ಲಿತ್ತು |

ಊರ ಪಶ್ಚಿಮ ಗಿರಿಯಲ್ಲಿ ತಾ ತಿರುಗುತ |

ಓಂ ಸುಜ್ಞಾನಿಗಳಿರ್ಯಾ |

ಸರ್ವಸಾಕ್ಷಿಗೆ ಬಲ್ಲವನೆ ಬಲ್ಲಾತಾ ||5||

ಪೊಡವಿ ಒಳಗ ಒಂದ ಗಿಡ ಇತ್ತು |

ಬುಡ ಬೇರಯಿಲ್ಲದೆ ಬೆಳದಿತ್ತು |

ನೋಡಿಲ್ಲ ಆ ಹಣ್ಣು ಹೆಂತ ಪರಿಯಿತ್ತು |

ಓಂ ಸುಜ್ಞಾನಿಗಳಿರ್ಯಾ |

ಪಕ್ಷಿ ಆಹಾರವು ಬಲ್ಲವನೆ ಬಲ್ಲಾತಾ ||6||

ಸ್ವರ್ಗ ಮತ್ರ್ಯ ಪಾತಾಳ ಲೋಕ |

ದೀರ್ಗ ದಂಡವತ ಮಾಡುವರ ಅದಕ |

ವರ್ಗ ದೇವರಿಗೆ ಕಾಯದು ಸುತ್ತಮುತ್ತ |

ಓಂ ಸುಜ್ಞಾನಿಗಳಿರ್ಯಾ |

ಬೈಲ ಪಕ್ಷಿಯ ಸಿದ್ಧನೆ ಬಲ್ಲಾತಾ ||7||

ಸಿದ್ಧ ಮಡಿವಾಳ ಪ್ರಭುಯೇನಮ್ಮ |

ಓಂ ಎಂಬುದು ಪಕ್ಷಿಯ ತೋರಿದನಮ್ಮ |

ಬದ್ಧ ಭವಿಗಳಿಗೆ ಇಲ್ಲಾ ಗುರು ಪ್ರಕ್ಷಾತಾ |

ಓಂ ಸುಜ್ಞಾನಿಗಳಿರ್ಯಾ | ಬುದ್ಧ ಅವತಾರ ಬಲ್ಲವನೆ ಬಲ್ಲಾತಾ ||8||

ಮಂಗಸ್ವಾಮಿ ಎಂದು ಜಂಗಮ |

ದೂಷಣ ಪದ ಹಾಡರಿ ಒಂದು |

ಕಲ್ತ ಪದ ಕಡಿಗಾಗದು ಎಂದು |

ಕಲ್ಪನಾ ಶಕ್ತಿಯಲಿಂದು ||ಪಲ್ಲವಿ||

ಜಗಭರಿತ ಜಂಗಮ ಯೋಗಿ |

ನಿಗಮ ಆಗಮಗಳು ಸಾರ್ಥಕ ಕೂಗಿ |

‘ಜ’ ಕಾರ ‘ಗ’ ಕಾರ ‘ಮ’ ಕಾರ ಮುದವಿ

ಮಾತಕೇಳು ತಮ್ಮ ತ್ರಿಜಂಗಮವಾಗಿ ||1||

‘ಜ’ ಕಾರದೊಳಗೆ ಜಗದ ಉತ್ಪತ್ತಿ |

‘ಗ’ ಕಾರೂಢದ ಜಗವಾ ಭೈರಿ |

‘ಮ’ ಕಾರ ಆದರ ಮರಣ ರಹಿತನು |

ಮಹಾರುದ್ರ ಮಹಾಜಂಗಮ ಯೋಗಿ ||2||

ಕಚ್ಯಾಗ ಲಿಂಗ ಇಟ್ಟರೆ ಹ್ಯಾಂಗ |

ಸ್ವಚ್ಛ ಇರಬೇಕು ಮಲಮದಂಗ |

ನಿಮ್ಮ ಲುಚ್ಯಾ ಗುಣಕಾಗಿ ಮೆಚ್ಚಿತೋ ಲಿಂಗ |

ನಿಮ್ಮ ಅರಕಸ ಜಾತಿಗಿ ಗೊತ್ತೇನು ಲಿಂಗ ||3||

ಹುಚ್ಚತನದ ಮಾತಾಡಬ್ಯಾಡೊ ಮಂಗ |

ಬಚ್ಚಲದೊಳಗ ಹ್ಯಾಂಗ ಇಟ್ಟಿರು ಲಿಂಗ |

ಅಂಗ ಲಿಂಗ ಆದ ಮನುಜಗ |

ಯಾತಕ ಬೇಕೋ ಅಂಗದ ಲಿಂಗ ||4||

ದಶಮುಖ ರಾವಣ ಲಿಂಗಕ ಮೆಚ್ಚಿ |

ಸೀತಾಗ ಕಟ್ಟಿ ಒಯ್ದಿದ ಗಚ್ಛಿ |

ಕೈದಾಗಿನ ಲಿಂಗ ಬಿದ್ದಿತು ಉಚ್ಚಿ |

ವಧಾ ಮಾಡೋ ಶ್ರೀರಾಮಗ ಹಚ್ಚಿ ||5||

ಕವಿ ಕಟ್ಟಿ ಹಿಂಗ ಹಾಡಬ್ಯಾಡೊ ಮಂಗ |

ಕವಿತದ ಮದ ತೆಲಿಗಿ ಏರೆದ ಗುಂಗ |

ನಿತ್ಯ ಮಾಡೋ ಶಿವಶರಣರ ಸಂಗ |

ತತ್ವ ಹಾಡು ನೀನು ಜಗ ಒಪ್ಪಂಗ ||6||

ಕರಬಸಪ್ಪ ಹುಡಗಿಯ ಊರಾ |

ಪೂಜಿ ಮಾಡಿದನೋ ಭೀಮಶಂಕರ |

ಲಿಂಗ ಕಟ್ಟಿದರೋ ರೇವಯ್ಯನವರ |

ಕೈಲಾಸಕ ಒಯ್ದಾರೋ ಹೂವಿನ ತೇರಾ ||7||

ಹುಚ್ಚು ಇಂವಾ ಎಂತಾ ಹುಚ್ಚ|

ಗಚ್ಚಿನ ಮನಿಗಿ ಉರಿ ಹಚಕೊಂಡಿದ ವಚ್ಚಾ ||1||

ಸೀತಾ ಆಕಿ ಹೆಂತಾ ಸೀತಾ |

ಬೆಂಕಿದೊಳು ನಿಜ ಉಳದಳು ಮಾತಾ ||2||

ರಂಭಾ ಈಕಿ ಹೆಂಥಾ ರಂಭಾ |

ವೇಷ ನೋಡಿ ಸೋತಿದಾನೋ ಸಂಭಾ ||3||

ಮುದ್ದ ಶಿವನಾಮವು ಮುದ್ದ |

ಸದಾ ಕಾಲ ಎಚ್ಚರ ಉಳದಾ ಸಿದ್ಧಾ ||4||

ಸತಿ ಪತಿ ತನ್ನಲ್ಲಿ ತಿಳಕೊಂಡಾ |

ತಾನೆ ದುಡಕೊಂಡಾ ||ಪಲ್ಲವಿ||

ಜೀವವೇ ಪತಿಯಾ |

ಖಾಯವೇ ಸತಿಯಾ |

ಮನ ಎಂಬೋ ಹಿರಿ ಮಗನು ಪುಂಡಾ ||1||

ಜ್ಞಾನ ಎಂಬೋ ಸೊಸಿಗಿ |

ಸುಜ್ಞಾನ ಎಂಬೋ ಮಗನಿಗಿ |

ಸಂಗನ ಶರಣ ಸಿದ್ಧ ಗೆದ್ದ ಕೊಂಡಾ ||2||

ಹೌದಪ್ಪ ಮಾತ ಒಂದೇ |

ಎರಡ ಮಾತಿನ ಧುಂದೇ ||ಪಲ್ಲವಿ||

ಒಂದ ಮಾನವ ಜಲ್ಮಾ |

ಅಂದೆ ಮಾಡಿ ಇಟ್ಟಾರ ಬ್ರಹ್ಮಾ |

ನಂದು ಹೆಚ್ಚೆಂದು ಧರ್ಮಾ |

ಮುಂದೆ ಬಗಲಾಯಿತಮ್ಮಾ |

ಹೆಣ್ಣ ಗಂಡ ರೂಪ ಕಂಡ ಕುಲ ಬೇರೆ ನಿಂದೆ ||1||

ಗುರು ಶಿಷ್ಯ ಮನಸ ಒಂದೇ |

ಸತಿ ಪತಿ ಸುತರು ಒಂದೇ |

ರಾಜಾ ರೈತ ಒಂದೇ |

ಇದು ಹೆಂಥ ಆನಂದ |

ಹಿಂಥವರು ಲಾಕಕ ಒಂದೆ ನಿಲಕಿಲ್ಲಾ ತಂದೇ ||2||

ತತ್ವಜ್ಞಾನ ಬಂದಂವ ಬೇರೆ |

ಸತ್ವ ಪರೀಕ್ಷಾ ಆಗದು ಖರೆ |

ಮಹತ್ವದ ಯೋಗಿ ಅವರೆ |

ನಾ ಎಂಬುದು ಮರತಿದವರೆ |

ಹಾಡವರು ಕೇಳವರು ಬರದ ಸಿದ್ಧ ಒಂದೇ ||3||

ಚಲತಿ – ಸಗುಣ ನಿರ್ಗುಣ ಬೇರುಂಟು |

ಗುಣ ತಿಳದವನಿಗೆ ಒಂದುಂಟು ||

ಬೆಲ್ಲದ ಗೊಂಬಿಯು ತನ್ನ |

ಕೈಯಲ್ಲಿ ಪಿಡಿದು ತನ್ನ |

ಅಲ್ಲಿ ಇಲ್ಲಿ ರುಚಿ ಎಲ್ಲೆಂದು ಹುಡುಕಿ |

ಹೈರಾಣ ಯಾಕೆ ಸುಮನಾ ||ಪಲ್ಲವಿ||

ಹಾಲಿಗಿ ಹ್ಯಾಂಗ ಅನುವರು ತುಪ್ಪ |

ಹಾಲಿನೊಳು ಇರುವದು ತುಪ್ಪ |

ಫಂಕದ ಹುಳ ಹಸರ ಹುಳವಿಗಿ ತಂದು |

ಫಂಕದ ಹುಳ ಹ್ಯಾಂಗ ಆಗಿತು ಸುಮನಾ ||1||

ಪರುಷಕೆ ಬೆಲಿಯ ಇಲ್ಲಾ |

ಪ್ರಾಣಕೇನು ಮೋಲ ಇಲ್ಲಾ |

ಸತ್ತು ದೇವಲೋಕ ಹೋದರೇನು |

ಬಾಲ ಭಾಷಾ ಸಿದ್ಧ ಸುಮನಾ ||2||

ಚಲತಿ – ನಾಮ ಸ್ಮರಣೆದೊಳು ರುಚಿವುಂಟು |

ಪ್ರೇಮ ಶಿಷ್ಯಗೆ ದೊರಿಹುವ ಗಂಟು ||

ಮಿತ್ರ ತತ್ವದಾ ಒಂದು ಪದ ಹಾಡ ಕೇಳೋಣ ||ಪಲ್ಲವಿ||

ಬೇರ ಇಲ್ಲದ ಮರದ ಮ್ಯಾಗೆ |

ಮೂರು ಕಾಲಿನ ಪಕ್ಷಿಯ ಕುಂತು |

ಆರು ಕೈ ನೂರು ಮೋರೆ ಪಕ್ಷಿಯ |

ಘಾಬರಾದೇನು ಎದುರ ನಿಂತು |

ಒಂದೇ ಕಣ್ಣು ಇತ್ತು ಬೆಡಗಿನ ಹಾಡ ಕೇಳೋಣ ||1||

ಕಣ್ಣಿನಿಂದ ಕಾಯಿ ಕಡಿದು |

ಕಿವಿಲಿಂದ ತುತ್ತ ತಿನುವದು ಕಂಡ |

ಪಕ್ಷಿ ಕಡಿ ಲಕ್ಷಯಿಟ್ಟು ಕುಂತೆನು |

ಲಕ್ಷ್ಮೀ ಕುಣಿವದು ಕಂಡ |

ಪಕ್ಷಿ ಧ್ವನಿಯೊಳು ನಿರಂಜನ ಜ್ಯೋತ ಮಂಡಣ ||2||

ಜ್ಯೋತಿಲಿಂದ ತ್ರಿಭುವನಕಾಧಾರ |

ಪಕ್ಷಿ ಕಾಣದೆ ಮೋಕ್ಷವಿಲ್ಲ |

ಮುತ್ತಿನ ಪರೀಕ್ಷೆವಿಲ್ಲದೆ |

ಉಪದೇಶ ಆದವ ಪಕ್ಷಿ ಬಲ್ಲಾ |

ಪಕ್ಷಿ ನಿರ್ಬೈಲ ಮಠದೊಳು ನಿಂತು ನೋಡೋಣ ||3||

ಪಕ್ಷಿ ಲಕ್ಷಿಟ್ಟು ಭಜನಿ ಬರದಿದ |

ಅಕ್ಷಯ ದೇವಿದಾಸ ಸಿದ್ಧ |

ಸಾಕ್ಷಿ ಚಂದನಕೇರಿ ಮಲಕಪ್ಪ |

ರಕ್ಷಿಸು ನಿನ್ನ ಸೇವಕಿದ್ದ |

ಪಶ್ಚಿಮ ಪ್ರಕಾಶದೊಳು ನಿತ್ಯ ನಾದ ಕೇಳೋಣ ||4||

ಪ್ರೇಮದಿಂದ ಬ್ರಹ್ಮಪುರಿಗಿ ಹೋಗಿದ |

ಗಾಯತ್ರಿ ನೋಡದಕ |

ಕರದೊಯ್ದಳ ನಮ್ಮಕ್ಕ ||ಪಲ್ಲವಿ||

ಸಂತ ವಚನ ಶ್ರೀಮಂತರ ಧನವು |

ಸಮಾನಿಲ್ಲ ನೋಡದಕ |

ಅನಂತ ಯುಗ ಹಿಡಿದು ನಿಂತಾದ ಆಕಳು |

ಕುಂತಿಲ್ಲ ಇಲ್ಲಿತನಕ |

ಅಂತವಿಲ್ಲ ಅನ್ನ ನೀರ ಆಹಾರವು |

ದೃಷ್ಟಾಂತ ಕಂಡ ಬಳಿಕ |

ಎಷ್ಟಂತ ಹೇಳಲಿ ಕಾಕಾ ||1||

ಮೂರು ಮಲಿದು ಆಕಳ ಕಂಡು |

ಸೋಜಿಗ ಆಯಿತು ಜೀವಕ |

ಘೋರ ಮಾಡಿ ಗುರುಪುತ್ರರು ತಿಳಿವರು |

ಗುರು ಜ್ಞಾನದ ನಿಲಕ |

ಒಂದ ಮಲಿ ಹಾಲಿನ ಕಾಲಿ ನಡದದಾ |

ಪಾತಾಳ ಲೋಕಕ |

ಅದು ‘ರಜ’ ಗುಣ ಪಾಲಕ ||2||

ಎರಡನೆ ಮಲಿದು ಹಾಲು ಮತ್ರ್ಯದೊಳು |

‘ತಮ’ ಗುಣ ಕುಡಿಲಿಕ |

ಮೂರನೆ ಮಲಿದು ಹಾಲು ಸ್ವರ್ಗದೊಳು |

‘ಸತ್ವ’ ಗುಣ ಸೇವಿಸದಕ |

ತ್ರಿಗುಣಗಳು ಆಕಳು ಮಕ್ಕಳು |

ಉಚ್ಚ ನೀಚ ತಿಳಿವದಕ |

ನರಜಲ್ಮ ಬಂತು ಇದಕ ||3||

ಕೇವಲ ಶೂನ್ಯ ನಿರಾಕಾರ |

ನಿರ್ಬೈಲ ಅವೆ ಮಾಲಿಕ |

ತಿಳಿದು ನೋಡಲಿಕ ಹಿಂಥ ಆಕಳು |

ಗುರು ಬೇಕು ತೋರದಕ |

ವಾಮ ಪ್ರೇಮ ನಿತ್ಯ ಸಿದ್ಧ ಭಜನದೊಳು |

ಆಕಳ ತಿಳವದಕ |

ನರಜಲ್ಮ ಬಂತು ಇದಕ ||4||

ಶಂಬೋರ ಭೀಗ್ಯಾ ನಿನಗ ನಂಬರ ಇರಲಿಕಾಗಿ |

ಭೂಗಸ್ತಿ ಬಡತಾನ | ಅಲ್ಲಿ ಇಲ್ಲಿ ಕುಂತು ಸುಮನ ||ಪಲ್ಲವಿ||

ಆಳ ಮಕ್ಕಳೆಲ್ಲ ಬೀಳ ಹಾಕ್ಯಾರ |

ನಟ್ಟ ಬೆಳಸಿ ತುಂಬಾ |

ಸೋಳ ಎತಗಳು ಸುಮನೆ ಕಟಿಕೊಂಡು |

ಕುಂತಿ ಕೊಟಗಿ ತುಂಬಾ |

ಏಳು ಎತಗಳು ಎಬ್ಬಸಿ ನಡಿ |

ತೊಕೋ ಆರಿನ ಸಾಮಾನಾ |

ಸ್ವತಃ ಮೈನತಿ ಮಾಡಿನ್ನಾ ||1||

ಏಳ ಹಿಂದೆ ಕಟ್ಟು ಒಂಬತ್ತು ಮುಂದೆ ಕಟ್ಟು |

ಜ್ಞಾನದ ನೇಗಿಲಿಗಿ |

ದಾಳಿ ಇಡಬೇಕು ಪಂಚ ಭೂತ ದೇಹಿ |

ನಟ್ಟು ಕಿತ್ತು ಜಾಳಿಗಿ |

ಮುಂಜಾನ ಹಿಡಿದು ಮಂದಿ ನಿಂದ್ಯಾ |

ಆಡುವಂಥ ಕರಕಿ ಬೇರಿಗಿ |

ಕಿತ್ತು ಒಗೆದು ಭೀಟು ಕಡಿಗಿ ||2||

ಆರೆಂಟು ಪದರಿನ ಸೋಲ ಕಡಿದರೆ |

ಕಡದ ಹೋಗಲಿ ಕಡಿಗಿ |

ಎಂಟ ಎತಗಳು ಕುಂಟನಾಗಿ ಅವು |

ಬೀಳಲಿ ಒಂದು ತಡಿಗಿ |

ಹಸ್ತ ಚಿತ್ತ ನಡು ಮಧ್ಯ ಭಾಗದಲ್ಲಿ |

ಹಚ್ಚು ಹೋಗು ಕೂರಿಗಿ |

ಬಿತ್ತು ಅಮೃತ ಘಳಗಿಗಿ ||3||

ಶರಣಬಸವ ಇಂಥಾ ಹೊಲ ಮಾಡಿ |

ತಾ ಬೇಕಾದ ಬೆಳಕೊಂಡ |

ಆಮ ದುನಿಯಾದೊಳು ಅಮರ ಕೀರ್ತಿ ಮಾಡಿ |

ಹೊಲದಗ ದುಡಿಕೊಂಡ |

ಬುದ್ಧಿ ಶಬ್ದ ಈ ಸಿದ್ಧ ಭಜನ ಹೊಲ |

ಮೈನತ ಮಾಡಿಕೊಂಡ |

ನಿತ್ಯ ನಾಮಾಮೃತ ಉಂಡ ||4||

ಚಲತಿ – ಪರಸ ಜ್ಞಾನದ ಜೋಳದರಾಸಿ |

ರಾಸಿ ಕೊಟ್ಟರ ಕರಕರಸಿ ||

ಹೊಲವ ಮಾಡೋ ಬೆಳಿಯ ಬೆಳೆಸೋ |

ಒಕ್ಕಲಿಗ ಗುರು ಬಸವನೇ ||ಪಲ್ಲವಿ||

ದೇಹನೆಂಬ ಎರಿಯ ಭೂಮಿ |

ಅಕ್ಕಲ ಎಂಬ ನೇಗಲ ಹೊಡೆದು |

ಹಸನ ಮಾಡಿ ಬೆಳಿಯ ಬೆಳಸೋ ||1||

ವಾಕ್ಯನೆಂಬೊ ಬೀಜ ಬಿತ್ತಿ |

ಆಧಾರನೆಂಬೊ ಬೇಲಿ ಹಚ್ಚಿ |

ಕರುಣಯೆಂಬೊ ಮಳಿಯ ಸುರಸಿ ||2||

ಧರ್ಮನೆಂಬೊ ಖುರಪಿ ಹಿಡಿದು |

ಕರ್ಮನೆಂಬೊ ಸೆದಿಯ ಕಳೆದು |

ಮೆಹನತಿ ಮಾಡಿ ಬೆಳಿಯ ಬೆಳಸೋ ||3||

ಲೋಕವೆಂಬೊ ಖಳವು ಮಾಡಿ |

ಜ್ಞಾನನೆಂಬೊ ಮೇಟಿ ನಡಸಿ |

ಗುಣಗಳೆಂಬೂ ತೆನಿಗಳ ತುಳಸಿ ||4||

ತಂದಿ ಮಗನು ಪ್ರಸಿದ್ಧ ಆತ್ಮನು |

ಮೆಟನಾಲಗಿ ಮ್ಯಾಗೆ ನಿಂತು |

ಜೀವ ಮನದ ಮದನ ತೂರೊ ||5||

ಗಟ್ಟಿಗೂಡಿ ಕಣಜದಲ್ಲಿ |

ಬಟ್ಟ ಬಂದರ ಬಿಟ್ಟು ಬಿಡು ನಿ |

ಮುತ್ತು ಹವಳದ ರಾಸಿ ತೂರೋ ||6||

ಸ್ಥೂಲ ಸೂಕ್ಷ್ಮ ಚೀಲ ಹೊಲಿದು |

ಮುತ್ತು ಹವಳದ ರಾಸಿ ತುಂಬಿ |

ದೇವಿದಾಸನ ಭಜನ ಮಾಡೋ ||7||

ಅಂಗಿ ನೋಡ ತಂಗಿ |

ತಮ್ಮನ ಸಲುವಾಗಿ |

ಅತ್ತಿನೋರ ಹೊಲದಾರ ಅಂಗಿ | ಕೇಳ ತಂಗಿ |

ನೀರಿನ ಸೂಜಿಯ ಮಾಡಿ |

ಗಾಳಿ ದಾರವ ಮಾಡಿ |

ಏನಪ್ರಕಾರ ಅಂಗಿ | ರಂಗಾರಂಗಿ ||1||

ಪಂಕರಣದ ಪುಸ್ತಕ |

ಹಿಡಿವದಸಿಂದಾಗಿ |

ಕಿಸೆ ಒಂದು ಮಾಡ್ಯಾರ ಸಣ್ಣ |

ಅಣುರೇಣ |

ಅಷ್ಟ ದಿಕ್ ಪಾಲಕರು |

ಕಸಿ ಎಂಟು ಕಟ್ಯಾರ |

ಹೆಂತ ಪುಣ್ಯವಾನ ಗುಣ | ನಿಜಗುಣ ||2||

ನಾನು ನೀನು ಎರಡು |

ತೋಳುಗಳ ಮಾಡ್ಯಾರ |

ರಣದಾಗ ಹೋಗಲಕ ಕೇಳೊ | ಕೇಳಿ ಏಳೊ |

ಕೆಲಸ ತೀರಿದ ಮೇಲೆ |

ಮನಸ ನಿಲ್ಲಿಸಲಿಕ್ಕೆ |

ತಾಳ ತಂಬೂರಿ ತಾಳೋ | ತಂಗಿ ಕೇಳೊ ||3||

ರಜ ತಮ ಸತ್ಯ |

ಮೂರ ಠಿಗಳಿನ ಅಂಗಿ |

ನೂರಕ ಸಿಗಲಾರದು ತಂಗಿ | ಹಿಂತಾ ಅಂಗಿ |

ಸಾವಿರ ಕುಳ್ಳಿಗಿ !

ಶರಣ ಬಸಪ್ಪ ಕೊಟ್ಟ |

ಎನಗೆ ಸುಮ್ಮನ ಕೊಟ್ಟನ ಅಂಗಿ | ನೋಡ ತಂಗಿ ||4||

ಒಂಟಿಲಿ ಒಬ್ಬಂವ ತಮ್ಮಗ |

ಅಂಗಿ ಹ್ಯಾಂಗ ತೊಡಸಲಿ |

ಇದಕ ಬೇಕು ಐನೋರು | ರೇವಪ್ಪನವರು |

ಸಿದ್ಧಾರೂಢ ಮಲಕಪ್ಪ ಸ್ವಾಮಿ |

ಶುಭುಲಿಂಗ ನಿಜಗುಣಿ |

ಹಿಂತಾ ಅಂಗಿ ತೊಡಸಿ ಹೋದ್ರು | ಮಹಾನ್ಯರು ||5||

ಜ್ಞಾನದ ಅಂಗಿ ಇದು |

ಸುಜ್ಞಾನಿ ತಿಳಿಬಹುದು |

ಅಜ್ಞಾನಿಗಿ ತಿಳಿಲಾರದು ತಂಗಿ | ಈ ಅಂಗಿ |

ತಿಳಿದಂತ ಜಾಣನು |

ಇಹ ಪರದೊಳು |

ನಿರ್ಬೈಲದೊಳು ಹೊಕ್ಕು ತಂಗಿ | ತೊಟ್ಟು ಅಂಗಿ ||6||

ಕಲ್ಯಾಣ ಬಸವಣ್ಣನ ಯಾತ್ರಾ |

ಅಣ್ಣಾ ಕಂಡವರ ಜಲ್ಮಾ ಪವಿತ್ರ ||ಪಲ್ಲವಿ|

ಮುದ್ರಾದ ಕುದುರಿ ಏರು |

ಸುದ್ರಾಸಿ ಮೇಲೆ ಕೂಡು |

ಓಂ ಎಂದು ಬಲ ನಾಸಿಕ |

ದಾರಿಗೆ ಬಾ ಮಿತ್ರಾ ||1||

ಗಂಗಾ ಯಮುನಾ ಸರಸ್ವತಿ |

ತುಂಗಭದ್ರಾ ಕೃಷ್ಣ ಭಾಗೀರತಿ |

ಸಪ್ತಗಂಗಾ ಮುಣಗಿ ಗುಪ್ತ ಕದಳಿ ಬನ ದಾಟಿ |

ಪಶ್ಚಿಮ ಕಾಣು ಸಹಸ್ರದಳ ಮಿತ್ರಾ ||2||

ಮುಂದ ನೋಡಿ ನಡಿ ಜಾಗ್ರತಿ |

ಅಂದಾ ದುಂಧ ರಂಗೆರಂಗ ಎರಡು ಜ್ಯೋತಿ |

ಅಗ್ನಿಚಕ್ರ ಧಾಟಿ ನುಗ್ಗಿ ಮಂಟಪ ಇಳದು |

ಈ ಸುದ್ಧಿ ಸ್ಥಲದೊಳು ಹದನಾರದಳ ಮಿತ್ರಾ ||3||

ಅನಾಹತ ದಳ ಇಚ್ಛಾ ಶಕ್ತಿ |

ಅಲ್ಲಿ ಅವಧೂತದಳ ಭಾರಾಭರ್ತಿ |

ಮಣಿಪುರದೊಳು ಬಂದು ಹತ್ತದಳ ಕಂಡು |

ಅಕ್ಕ ನಾಗಮ್ಮನ ಅರಮನಿ ನೋಡ ಮಿತ್ರಾ ||4||

ಇಷ್ಟೊತ್ತ ನೋಡಿದೆಲ್ಲಾ ಕೊರತಿ |

ಸ್ವಾದಿಷ್ಟ ಸ್ಥಳದಲ್ಲಿ ಆರ ದಳದ ಭೀತಿ |

ಭೀತಿ ಬೂತ ಬೈಲ ಆಧಾರ ಪುರದೊಳು |

ಚತುರ ದಳಕಂಡು ಚಾತುರ ಆದ ಮಿತ್ರಾ ||5||

ಸರ್ವ ಅಂತರಯಾಮಿ ಬಸವ ಮೂರುತಿ |

ಕಂಡು ಆನಂದ ಆಗಿತು ಮನ ಪೂರತಿ |

ಕಲ್ಯಾಣ ಪುರ ಪೊಕ್ಕಿ ಬಸವ ರೂಪ ತಿಳಿದು

ಸೋ ಎಂದು ಬೈಲಿಗೆ ಬಂದ ಸಿದ್ಧ ಮಿತ್ರಾ ||6||

ಸಿದ್ಧ ನಿರಾಕಾರ ನಿರ್ಗುಣ ನಿಜ ಮಾಲಿಕ |

ಸುದ್ದ ಜ್ಯೋತಿ ತ್ರಿಗುಣ ರಹಿತ ತ್ರಿಲೋಕ ಪಾಲಿಕ |

ಮುದ್ದ ವಾಣಿ ಅನಂತ ಅವತಾರ ಧರಿಯ ಭೋಗಕ |

ಸಿದ್ಧಪ್ರಭು ಸಿದ್ಧಪ್ರಭು ಸಿದ್ಧಪ್ರಭು ವ್ಯಾಪಾಕ ||1||

ಬೈಲ ಬ್ರಹ್ಮ ಕುಂಬಾರಾದಿ ಮಹಾಪ್ರಭು ನಿಷ್ಕಲಂಕ |

ಬ್ರಹ್ಮಕ್ಷೇತ್ರಿ ವೈಶ್ಯ ಸೂದ್ರವಿಲ್ಲ ಜಾತಿ ಕಂಟಕ |

ಅಲ್ಲಮಪ್ರಭು ಬಕ್ಕಪ್ರಭು ಮಾಣಿಕಪ್ರಭು ನಾಯಕ |

ಸಿದ್ಧಪ್ರಭು ಸಿದ್ಧಪ್ರಭು ಸಿದ್ಧಪ್ರಭು ವ್ಯಾಪಾಕ ||2||

ಆರ ಅಳಿದ ಮೂರು ತೊಳೆದ ಧೀರ ಮನುಜಾ ಸಾತ್ವಿಕ |

ವಾರ ನೇಮ ನಿತ್ಯವಿಲ್ಲ ಉಪವಾಸ ಮಾಸಿಕ |

ದೂರ ಕಾಸಿ ಕ್ಷೇತ್ರ ತನ್ನಲ್ಲಿ ಶ್ರೀ ಶೈಲ ವಾಸಿಕ |

ಸಿದ್ಧಪ್ರಭು ಸಿದ್ಧಪ್ರಭು ಸಿದ್ಧಪ್ರಭು ವ್ಯಾಪಾಕ ||3||

ಯಾತ್ರಿಯೊಳು ಗುರು ಸಾರ್ವಭೌಮ ಅನುಭವ ಆತ್ಮಿಕ |

ಅತ್ರಿಮುನಿ ಸುತ ದತ್ತ ತಾನೇ ರವಿ ಬೆಳಕ |

ಏಕೋತ್ರಿ ಅನಂತಯುಗ ಪ್ರಥಮ ಕಲಿ ಕಡಿಯಾಕ |

ಸಿದ್ಧಪ್ರಭು ಸಿದ್ಧಪ್ರಭು ಸಿದ್ಧಪ್ರಭು ವ್ಯಾಪಾಕ ||4||

ದೇಹ ನಾನೇ ಕವಿಯು ನಾನೇ ನಾನೆಂಬೋ ಕ್ರೋಧಿಕ |

ನಾನೇ ಅವತಾರ ಎಂಬೋ ವಿರಕ್ತ ಅಲ್ಲ ಪತಿಕ |

ನೀನೆ ಎಂದು ಕಾಂಕ್ಷಾವಿಲ್ಲದೆ ಸಾಕ್ಷನಾದ ನಾಮಕ |

ಸಿದ್ಧಪ್ರಭು ಸಿದ್ಧಪ್ರಭು ಸಿದ್ಧಪ್ರಭುವ್ಯಾಪಾಕ ||5||

ಗುರು ವಚನ ನಾದ ಶ್ರವಣ ಮನ ನಿಜ ಧ್ಯಾಸಿಕ |

ವೇದಶಾಸ್ತ್ರ ಪುರಾಣ ತಿಳಿದು ಓದಿ ತಾನೆ ಜ್ಞಾನಿಕ |

ಹೌದು ಅಲ್ಲಾ ಎರಡು ಒಲ್ಲೇ ತಾನೇ ತಾನಾದ ಭಾವಿಕ |

ಸಿದ್ಧಪ್ರಭು ಸಿದ್ಧಪ್ರಭು ಸಿದ್ಧಪ್ರಭು ವ್ಯಾಪಾಕ ||6||

ಆಸಿ ಮುನಿಗಳ ಮನವ ಕೆಡಸಿತ್ತು ಆಸಿ ಬಲು ಡಂಬಕ |

ಆಶಾ ಗುರು ಶಿಷ್ಯರಿಗಿ ವೈರ ತಂತು ಡಾಂಭಿಕ |

ಆಶೆವನು ಬಿಟ್ಟವನೆ ಧನ್ಯನು ತಾನೆವಾದನು ಮಾಣಿಕ |

ಸಿದ್ಧಪ್ರಭು ಸಿದ್ಧಪ್ರಭು ಸಿದ್ಧಪ್ರಭು ವ್ಯಾಪಾಕ ||7||

ಕಂದಗೂಳ ಗ್ರಾಮದೊಳು ಮಡಿವಾಳಪ್ಪ ಭಾವಿಕ |

ಸಿದ್ಧಪ್ರಭುನ ಸೇವಾ ಮಾಡಿಗೆದ್ದ ಭವಾ ಆತ್ಮಕ |

ಶುದ್ಧವಾಣಿ ದೇವಿದಾಸ ಶರಣ ಜ್ಞಾನ ಲೇಖಕ |

ಸಿದ್ಧಪ್ರಭು ಸಿದ್ಧಪ್ರಭು ಸಿದ್ಧಪ್ರಭು ವ್ಯಾಪಾಕ ||8||

ಮನುಜಾ ತನುಮನ ಧನ ಮಾಡ ನೆವುದಿ |

ಹಿಂಗ ಇರುವದು ಮೋಕ್ಷದ ಹಾದಿ |

ತೊಕೋ ಗುರು ಬೋಧಿ ||ಪಲ್ಲವಿ||

ಬಿಡು ಅಂಬೋದಿಲ್ಲಾ ಸಂಸಾರ |

ಮಾಡು ಅಂಬೋದಿಲ್ಲಾ ಆಚಾರ |

ರೀತಿ ಮಾರ್ಗಕ ಅವ ಮೂರ ಹಾದಿ |

ತಪ್ಪಿ ಗುರು ಬೋಧಿ ||1||

ಸೃಷ್ಟಿಗಿ ಆಧಾರ ಓಂಕಾರ |

ನಿಷ್ಠಿದೊಳಗೆ ಆಧಾರ ನಿರ್ವಿಕಾರ |

ನಾ ಎಂಬೋದು ರಾವಣನ ಪದಿ |

ಮಾಡಿಕೊಂಡ ಕುದಿ ||2||

ಯೋಗಿಗಿ ಯೋಕೋ ಅಹಂಕಾರ |

ಬಾಗಿ ನಡಿಬೇಕೊ ಬಹುಳ ಶಂಕರ |

ಚೇಷ್ಟಿ ಮಾಡಿದರೆ ಹಿಂದೆ ಬಿತ್ತೋಸೆದಿ |

ತೊಕೋ ಗುರು ಬೋಧಿ ||3||

ಕಲ್ಲಿನ ಮೇಲೆ ಬರದಾರ |

ರಾಮನಾಮವೆಂಬ ಅಕ್ಷರ |

ಕಲ್ಲ ತೋರಸ್ಯಾದ ಲಂಕಾದ ಹಾದಿ |

ಸಿದ್ಧ ಪದಾ ಗೆದಿ ||4||

ಧನ್ಯವಂತರ ಕಂಡವರು ಪುಣ್ಯವಂತರು |

ಮ್ಯಾಣೆದೊಳು ಮಲ್ಲಯ್ಯನ ನೋಡಿ |

ತಾನೇ ತಿಳಿದವರೆ ಸಂತರು ||ಪಲ್ಲವಿ||

ಮಲ್ಲಿಕಾರ್ಜುನ ಲಿಂಗ |

ಸರ್ವ ಜೀವನ ಸಂಗ |

ಗರ್ವ ಬಿಟ್ಟು ಸುರಮುನಿದೇವ ಮಾಡ್ಯಾರ ಸಾಷ್ಟಾಂಗ |

ಸತ್ಯನಾಮ ಭೃಂಗ |

ನಿತ್ಯ ಕಂಡಿದಂಗ ಹಾಂಗ |

ಹನ್ನೊಂದು ಮಹಾನಂದ ಸ್ನಾನದವಗ ಎದುರ ನಿಂತರು ||1||

ಬೇಡಲಿ ಹ್ಯಾಂಗ ನಿನಗ |

ಬೇಡಿದು ಕುಡುತ್ಯಾಂಗ ನನಗ |

ನೋಡಿದ್ರ ಮುದ್ರ ಮಾರ್ಗ ದಿಟ್ಟಿಸಿ ಬಯಲಿಗ |

ದಂಡ ರೂಪ ಇಲ್ಲ ರಂಗ |

ಬ್ರಹ್ಮಾಂಡ ಅಳತಿ ಹ್ಯಾಂಗ |

ಬುದ್ಧಿಯೋಗಿಗಳು ಹಿಂದ ಮುಂದ ಧ್ಯಾನವಂತರು ||2||

ಹ್ಯಾಂಗೆ ಮಾಡಿರು ಭಕ್ತಿ |

ಹ್ಯಾಂಗೆ ನೀರು ಹೊತ್ತಿ |

ಹ್ಯಾಂಗೆ ಬಂದವರಿಗೆ ಉದ್ಧಾರ ಮಾಡಿದಿ ಹ್ಯಾಂಗೆ ನನಗೆ ಒಲ್ತಿ |

ಧನ ಜ್ಞಾನ ಇಲ್ಲ |

ಮೌ ಧ್ಯಾನ ಇಲ್ಲ |

ಸಿದ್ಧ ಮಲ್ಲಯ್ಯಗ ಬಿಡಬ್ಯಾಡ ಪಂಚ ಪದ ಬರೆದರು ||3||

ಬರತಾರಂತ ಬರತಾರಂತ |

ಚೆನ್ನಬಸವಣ್ಣ ಬರತಾರಂತ ||ಪಲ್ಲವಿ||

ಅಂದು ಇಂದು ಅನುಬ್ಯಾಡರಂತ |

ಸಂದು ನೋಡಿ ಬರತಾರಂತ |

ಜಗದ ಝಡತಿ ಕೇಳತಾರಂತ |

ಕರ್ಮಿಗಳಿಗೆ ಒಯ್ಯುತಾರಂತ ||1||

ಹಣಿ ಕೆತ್ತಿ ನೋಡುತಾರಂತ |

ವಿಭೂತಿ ಇದ್ದರ ಬಿಡುತಾರಂತ |

ವಿಭೂತಿ ಇಲ್ದರ ಒಯ್ಯುತಾರಂತ |

ಯಮ ಸಜಾ ಕೊಡುತಾರಂತ ||2||

ಜಾರ ಕರ್ಮ ಮಾಡಬ್ಯಾಡರಂತ |

ಮೊದಲವರಿಗಿ ಒಯ್ಯುತಾರಂತ |

ತಾಯಿ ತಂದಿ ಮಾತ ಮೀರಬಾರದಂತ |

ಮಹಾರೋಗ ಆಗತಾದಂತ ||3||

ಆಚಾರ ವಿಚಾರ ಇರಬೇಕಂತ |

ಮೊದಲವರಿಗಿ ಸಲುತಾರಂತ |

ಕುಟಿಲ ಗುಣ ಇರಬಾರದಂತ |

ಕುರಡರಾಗಿ ಹುಟ್ಟುತಾರಂತ ||4||

ಊರ ಊರಿಗೆ ಹೋಟಲ ಶಿಸ್ತ |

ಚಹಾ ಕುಡೆ ಮಂದಿ ಅತಿಶಯಾಯ್ತು |

ಹೆಂಡರು ಮಕ್ಕಳು ಅಳುತಾರ ಕುಂತ |

ಮನ್ಯಾಗ ಜೋಳ ಇಲ್ಲ ಅಂತ ||5||

ಜುವಾಬಾಜಿ ಆಡತಾರಂತ |

ಸಿಂದಿ ಶೆರಿ ಕುಡಿತಾರಂತ |

ಹೊಲ ಮನಿ ಮಾರತಾರಂತ |

ದೇಶದ ಮ್ಯಾಲ ಹೊಯ್ತಾರಂತ ||6||

ಖೊಟ್ಟಿ ಮಾಪ ಇಡಬಾರದಂತ |

ಕೊಟ್ಟಿದ ಗಂಟು ಬರೋದಿಲ್ಲಂತ |

ಹಣವು ಇದ್ದರ ಹಿಗ್ಗಬಾರದಂತ |

ಬಡತನ ಬಂದರ ಅಳುಬಾರದಂತ ||7||

ಅನಾಜ ಧಾರಣಿ ಅನಿವಾರ್ಯ ಆಯ್ತ |

ಹೊನ್ನಿಗಿ ಒಮ್ಮನ ಧ್ಯಾನ ಮಾರೆತ್ತ |

ಕಾಲಜ್ಞದ ಸೂಚನ ಮಾತಾ |

ಕಡಿಗಿ ಬಂದು ನಿಂತಾದಂತ ||8||

ನಾವದಗಿ ಊರಾದಂತ |

ರೇವಯ್ಯಸ್ವಾಮಿ ಜ್ಞಾನಿವಂತ |

ನಿತ್ಯ ಭಜನ ಮಾಡಬೇಕಂತ |

ಸ್ವರ್ಗ ಅವರಿಗಿ ಸಿಗತಾದಂತ ||9||

ಧುಮ್ಮನಸೂರ ಊರಾದಂತ |

ಹೊಸ ಕವಿ ಆಯ್ತಾವಂತ |

ಬೇಕಾದವರು ಬರಕೋರಂತ |

ಸತ್ಪುರುಷರು ತನ್ನ ಊರಿಗೆ ಬಂದರೆ |

ಶರಣಾಗತ ಹೋಗು |

ಸ್ವತ ಮುದುಕನಂತೆ ಬಾಗು |

ಹೆಂಥವರಿಗೆ ಮಾತ ತಿಳಿಲಿಲ್ಲಾ |

ಬೆಡಗಿನ ಅನುಭಾವಿಕನಾಗು ||ಪಲ್ಲವಿ||

ಆನಂದದಿಂದ ಒಂದಿನ ಬಂದ್ರು |

ವಿಶ್ವಾಮಿತ್ರ ಸ್ವಾಮಿ |

ಚೆಂದ ಪಟ್ಟಣ ನೋಡಿ ವಾಸ ಮಾಡಿದ್ರು |

ಹಸ್ತಿನಾವತಿ ಸೀಮಿ |

ಸಂತ ಬಂದಾರೆಂದು ಸುದ್ದಿ ಮುಟ್ಟತ್ತು |

ಧರ್ಮರಾಜರಿಗೂ |

ಅನಂತ ಪ್ರಕಾರ ವಾದ್ಯಮಂಡಳಿ |

ಬಂದಿರಪ್ಪ ಬೇಗು ||1||

ಧರ್ಮರಾಜಾ ವಂದನೆ ಮಾಡಿ ಮುನಿಗಿ |

ನಡಿ ಅಂದ್ರು ಮನಿಗಿ |

ಪ್ರೇಮದಿಂದ ವಿಶ್ವಾಮಿತ್ರ ಹೇಳುತಾರ |

ಧರ್ಮರಾಜರಿಗಿ |

ಶಂಬೋರ ಯಜ್ಞದ ಪುಣ್ಯ ಕೊಟ್ಟರೆ |

ಬರುವೆ ನಿಮ್ಮ ಮನೆಗೂ |

ನಂಬರ ಬೇರೆ ಬೇರೆ ತೋರಿಸು |

ಇಲ್ಲದರೆ ಬಂದಂಗ ನೀ ಸಾಗೂ ||2||

ಧರ್ಮರಾಜ ಅಂತಾರ ಆವಾಗ |

ಇದು ಹೆಂಥಾ ದಿಗುಡೂ |

ಅಶ್ವಮೇಧ ರಾಜಸೂಯ ಯಜ್ಞಗಳು |

ಮಾಡಿನಿ ಇವೆರಡೂ

ಅಠ್ಯಾಣೌ ಯಜ್ಞಕ್ಕೆ ಪುಣ್ಯ ಕಮ್ಮ ಬಿತ್ತು |

ಏನು ಕೊಡಲೆಪ್ಪ ನಿನಗೂ |

ಶ್ಯಾಣೌಕೊಡ ನೀರ ಮೈಯಲ್ಲಾ ತಣ್ಣಗ |

ಮಂತ್ರಿ ವಾಪಸು ತಿರಗೂ ||3||

ವಾಪಸ ಹೋದ ಮೇಲ ದ್ರೋಪದಿ ಕೇಳತಾಳ |

ಧರ್ಮರಾಜೆರಿಗಾ |

ವಿಶ್ವಾಮಿತ್ರ ಮುನಿ ಯಾಕೆ ಬರಲಿಲ್ಲಾ |

ಫರಕ ಯಾ ಮಾತಿಗಾ |

ಸಂತನ ವೃತವು ಧರ್ಮರಾಜೆರು |

ತಿಳಿಸಿರು ದ್ರೋಪದಿಗೂ |

ಹೆಂಥವರಿಗಿ ಮಾತ ತಿಳಿಲಿಲ್ಲ ಬೆಡಗಿನ |

ಅನುಭಾವಿಕನಾಗೂ ||4||

ದ್ರೋಪದಿ ತಾ ಸ್ವತಃ ಬಂದಾಳ |

ಮುನಿಹಂತಿಲ ನಡೆದು |

ಜಗದ ಪತಿ ಸಿಟ್ಟು ಆಗಬೇಡರಿ |

ಮಾತು ಯಾರ ಮನಿದು |

ನಿಮ್ಮಂತವರ ದರ್ಶನಕ ಬಂದರ |

ನಮ್ಮಂತವರು ನಡಿದು |

ಒಂದು ಒಂದು ಹೆಜ್ಜಿಗಿ ಶಂಬೋರ ಯಜ್ಞದ |

ಪುಣ್ಯ ದೊರಿತು ನಿಮಗೂ ||5||

ಇಷ್ಟು ಮಾತ ಕೇಳಿ ಸಂತೋಷ ಆಯಿತು |

ವಿಶ್ವಾಮಿತ್ರ ಮುನಿಗಾ |

ಸೃಷ್ಟಿಯೊಳು ಶ್ರೇಷ್ಠ ದ್ರೋಪದಿ ನೀನು |

ಕಬೂಲ ನಿನ್ನ ಮಾತಿಗೂ |

ಜಯ ಶಂಕರ ಎಂದು ನಡೆದು ಬಂದರ |

ಪಾಂಡವರ ಮನಿಗಾ |

ಭವದೊಳು ಕಿಂಕರ ಆಗಿನಡೆದರೆ |

ಕಮ್ಮ ಏನು ಅವನಿಗಾ ||6||

ಮನಸ ನೋಡಿ ಮಲ್ಲಯ್ಯ ದುಡಿದಿದ |

ಮಲ್ಲಮ್ಮನ ಮನಿದೊಳಗಾ |

ದಿನಸ ನೋಡಿ ಗುರು ವರಕವಿ ಅನಸಿದ |

ನಿಜಗುಣ ಸೊಪ್ಪಣ್ಣಗಾ |

ಬೆಡಗಿನ ಮಾತಿಗಿ ಅನುಭವ ಮಾಡಲಿಕ್ಕೆ |

ಬಂತಪ್ಪಾ ದ್ರೋಪದಿಗಾ |

ಬಡವನ ಮಾತಿಗಿ ಮಾನ್ಯ ಎಲ್ಲಿವುಂಟು |

ಮಂದ ಮತಿ ಸಿದ್ಧಗಾ ||7||

ಚಲತಿ- ಪಾಂಡವರು ಯಜ್ಞ ಮಾಡಿದರು |

ನವಖಾಂಡ ಜೀವಕೆಲ್ಲಾ ಉಣಸಿದರು |

ಲಕ್ಷ ಇಟ್ಟು ಅವರು ಬೇಡಿದರು |

ಅಕ್ಷಯ ಪಾತ್ರಿ ಗುರು ಕೊಟ್ಟಿದರು |

ಹ್ಯಾಂಗೆ ಮರೆಯಲಿ ಗುರುವೆ |

ಜಂಗಮ ರೂಪ ಅಂಗಲಿಂಗ ರೇವಯ್ಯ ಸ್ವಾಮಿ ||ಪಲ್ಲವಿ||

ಇಪ್ಪತ್ತೊಂದು ಜಂಗಮರು |

ಐದು ಮಂದಿ ಮುತ್ತೈದರು |

ಕೂಡಿದಲ್ಲಿ ಕೈಲಾಸನಂದು ಭಿನ್ನ ಮುಗಿವರು |

ಇಂಥ ಮೂರ್ತಿಗಳ |

ಹುಡುಕಲಿ ಯಾವ ಸ್ಥಳ |

ಅಂತರಂಗ ಬ್ರಹ್ಮಾಂಡ ತಿರುಗಿ ಸೋತ ಮಾವಲಿ ||1||

ಪಂಚ ಸಿಂಹಾಸನ |

ಸ್ವಾಮಿ ಕೊಟ್ಟರು ಬಿನ್ನ |

ಪಂಚ ಸಿಂಹಾಸನ ಕೂಡಬೇಕು ಒಮ್ಮೆ ನವಕಲ್ಯಾಣ |

ಹೀಗೆ ಭಕ್ತ ಅಪೇಕ್ಷ |

ಸೃಷ್ಟಿ ಕಲ್ಪ ವೃಕ್ಷ |

ಸಂಗಮ ಸ್ಥಳ ಬಿಟ್ಟು ಬರ್ರಿ ಬಸವ ಬಿನ್ನ ಮುಗಿಯರಿ ||2||

ವಯ ಮೀರಿ ಬಂತು |

ಸಾಯ ಎಳದು ಕುಂತು |

ದಯಾ ಧರ್ಮ ಇಲ್ಲದಲ್ಲಿ ಎಷ್ಟೋ ಇದ್ದರೇನು ಬಂತು |

ಹಸಿದು ಸಿದ್ಧ ನೇತ್ರ |

ಬಾಯಿ ಬಿಡುವ ಸ್ತೋತ್ರ |

ಸ್ವಾಮಿ ಹುಂಡಿ ಕಡಿ ನಿಂತು ಮಹನ್ಯರು ಸಾರಲಾ ಮಾಡ್ರಿ ||3||

ಬೇಕಾದ್ರು ಹಿಡಿ ಬೆರಳ ವಿಮಳ ಗುಣಮಣಿ |

ಇಪ್ಪತ್ತೊಂದು ಸಾವಿರದ ಆರನೂರು ಮಣಿ ||ಪಲ್ಲವಿ||

ವಾಯ ಮಾತನಾಡಿದರೆ ಡಂಭಿಕ |

ಸಾಯವಾಗುವದೇನೊ ಕುಂಭಕ |

ನ್ಯಾಯ ತನ್ನಲ್ಲಿ ನೋಡೊ ತ್ರ್ಯಿಂಬಕ |

ಕಂಬದೊಳು ನರಸಿಂಹ ಯೋನಿ ||1||

ಎಂಟು ಸಿದ್ಧಿಗಳು ಗಂಟು ಬೀಳಲು ನಿತ್ಯಾ |

ಮೂಕತ್ವ ಪಡೆದಿರು ನಿಜಗುಣಿಯೆ |

ಪೂರ್ವಜಲ್ಮದ ಭೇದ ತಿಳಿಯದೆ |

ನಾದಬ್ರಹ್ಮ ಸಾಧಿಸುವದಲ್ಲಾ |

ಶಿವನಾಮವು ಶೋಧ ಮಾಡಿನೋಡು ಚಿಂತಾಮಣಿ ||2||

ಕುರುಡ ಕುಂಟನ ಕೂಡ ಹೊಳಿ ದಂಡಿಗೆ ನಿಂತರೆ |

ಹೊಳಿ ಪಾರ ಆಗುವರೇನು ದೀನ ಭರಣಿ |

ಬಲ್ಲ ಜ್ಞಾನಿ ಸಾಲಿ ಬರೆದರೆ ಕುಲ್ಲ ಹೊಳಿ ದಾಟಿಸುವನು |

ಅಲ್ಲಮಪ್ರಭು ಚೆನ್ನಬಸವನ |

ಕಲ್ಲ ತೇರ ಎಳಿವುದು ಕಾಣಿ ||3||

ಸಾಯೋತನಕ ನರನೆ ಸ್ವರ್ಗವು ಕಾಣಬೇಕು |

ಈ ಮಾಳ ಎಣಿಸುತ ಆಗೋ ಬಣ್ಣವಿಲ್ಲದ ಚಿಣಿ |

ಸಿದ್ಧ ಆಸನ ಸುದ್ಧ ಕುಳಿತಿರು |

ಬುದ್ಧಿವಂತರ ಬಾಯಿಯೊಳಗೆ |

ಸಿದ್ಧಪ್ರಭುವಿನ ಪಿಂಜರಿದೊಳು |

ಸಿಲ್ಕಿತ್ತೋ ಮಡಿವಾಳ ಗಿಣಿ ||4||

ಯೋಗಿ ಜ್ಞಾನವ ನೀಗಿ ಭವದೊಳು |

ಕೂಗಿ ಹೇಳುವುದು ಬಾಗಿ ನಡೆವುದು |

ಮಾಗಿ ಹೊತ್ತಿಗೆ ಬೇಗ ಸಾಗರಿ ಊರಿಗೆ ಹೋಗುವವರೆ |

ಲಗ್ಗಿ ಮುಳ್ಳಿನ ಬಗೆಯ ತಿಳಿಯದೆ ತ್ಯಾಗಿನಾಗಿ ಫಲವಿಲ್ಲ |

ಹಗ್ಗಕಂಜಿ ಹಾರಿ ಬೀಳುವ ಕಾಗಿ ಸ್ವರದವರೇ |

ಹಿಗ್ಗಿಲಿಂದ ನಾಮ ರಸವ ಸುರಿಯರಿ ಜೋಗಿ ಆಗುವರೇ ||1||

ಅಪ್ಪನ ಉನ್ಮನಿ ದಾರಿ ಮುಪ್ಪನಾದರೆ ಸಿಲ್ಕುದಲ್ಲ |

ಜಪತಪ ಭವ ಮಣಿಯ ಎಣಸಿ ಗಪ್ಪ ಕುಂತವರೇ |

ನೆಪ್ಪ ಮರೆದಿರಿ ಗುಪ್ತ ಕವಿ ಸ್ವಲ್ಪ ಎಚ್ಚರ ಇರಬೇಕರೇ |

ಕೋಪ ಬಿಟ್ಟು ಝಾಪ ಹಾಕರಿ |

ಕಪಿಲ ಮುನಿ ಉಪದೇಶ ಆಗಿದಂತೆ |

ಉಪ್ಪಿನ ಸಾಗರ ತುಪ್ಪ ಮಾಡಿದ ಸಾಧನ ಸಾಧಕರೇ ||2||

ಬಸವ ಪ್ರಮಥರು ಸೇರಿದವರೆಂದು |

ಕುಶಲ ಮಹಾಪ್ರಭು ದೇವರು ಬಂದು |

ರಸಿಕ ಭಕ್ತಿ ದಾರಲಿ ಉಂಟು ಆಶಿ ರಹಿತರೇ |

ಧನುಷ ಎಬ್ಬಿಸಿ ಕುಣಿಸಿ ದಂತ ರಾಮನಂತವರೇ |

ಆಶಾ ಯಾರು ನಿರಾಶ ಯಾರು ಮನಸ ನಿಲ್ಲಿಸಿ ಏಳರೆಂಬುವ |

ಕಾಸಿದ ಉಕ್ಕಿನ ಕಡಾಯಿದೊಳಗೆ ಈಸಲಾಡುವರೇ ||3||

ವಾಕ್ಯ ಕೇಳಿದ ಕ್ಷಣಕೆ ಸರ್ವರು |

ಕೆಳಕೆ ಮೋರಿ ಹಾಕಿ ಕೂಡದು |

ಲೋಕಪಾವನ ಬಸವ ಏಳಲು ಕಬೂಲ ಪ್ರಭುದೇವರೇ |

ಏಕ ಬಸವನ ಬಿಟ್ಟು ಅನ್ಯರು ಭಕ್ತಿಗಿ ನಿಲ್ಲುವರೇ |

ಬಸವ ವಾಕ್ಯವು ಕೇಳಿ ಸರ್ವರು |

ಕೋಪನಾದರು ತಮ್ಮ ಮನದೊಳು |

ಕಾಲಜ್ಞ ಮೊದಲಾದ ಋಷಿಗಳು |

ಶಿಸುವ ಬಸವ ಅಧಿಕ ಹ್ಯಾಂಗೆ ಗಲಬಲವಾಯಿತರೇ ||4||

ಸರ್ವರ ಅಂತರಂಗ ತಿಳಿದು |

ಶಾಂತ ಬಸವಗ ಕರೆದು ಸ್ವಾಮಿ |

ಕುಂತ ಜನರು ಯಾರಂತ ಕೇಳಿದ ಪ್ರಭುದೇವರೆ |

ಬಸವ ಪೇಳಿದ ಕುಂತ ಸಭೆಯನು ಗುರು ಸಮಾನರೇ |

ಇಂಥ ವಾಕ್ಯವ ಕೇಳಿ ಕುಂತರು |

ಶಾಂತವಾದರು ತಮ್ಮ ಮನದೊಳು |

ಶಿಸು ಬಸವನ ವಚನ ಸತ್ಯವು ಹಿಗ್ಗಿ ನುಡಿದಾರೇ ||5||

ಪ್ರಾಣಿ ಮಾತ್ರರು ಬಲ್ಲತನದ |

ಅಭಿಮಾನದಿಂದಲಿ ಹಲರು ಕೆಟ್ಟರು |

ಜ್ಞಾನಿಗಳು ನಾ ಎಂಬ ಹಮ್ಮಿಲಿ ಹಲವಾರು ಕೆಡುತಾರೇ |

ಏನು ಅರಿಯದ ಹೀನ ಮನುಜರು ಅಧಿಕ ಅನುಭವರೇ |

ಪ್ರಾಣವನು ಸತಿಸುತರಿಗರ್ಪಿಸಿ |

ಜ್ಞಾನವಿಲ್ಲದೆ ಕಟ್ಟು ನರಕಕೆ |

ಮೌನದಿಂ ಹೋಗುವರು ಎಲ್ಲರು ದಾರು ಹೇಳುವರೇ ||6||

ಸತ್ಯ ಗುರುವಿನ ಚರಣ ಪಿಡಿದು |

ನಿತ್ಯ ನಾಮ ಸ್ಮರಣಿ ದುಡಿದು |

ನಿತ್ಯ ವೃಕ್ಷದ ತುದಿಯ ಕಡಿದು ಬಾಳಬಲ್ಲವರೇ |

ಮುತ್ಯಾನ ಉನ್ಮನಿ ಚಿತ್ತ ನಿಲ್ಲಿಸಿ ಗೊತ್ತ ಆದವರೇ |

ಸತ್ತ ಉಳದವನ ಸಂಗ ಬಿಟ್ಟು |

ಭೂತ ಮನುಜನ ಬೆನ್ನಹತ್ತಿ |

ಕತ್ತಿಯಂತೆ ಹೊತ್ತು ಕರ್ಮವು ಸತ್ತು ಹೋಗುವರೇ ||7||

ಜ್ಞಾನ ಮತಿಯನ್ನಾರು ಕೊಳ್ಳರು |

ಸುಜ್ಞಾನಿಗೆ ಸೇರಲದವರು |

ಅಜ್ಞಾನ ಗುಣ ಪ್ರಳಯ ಮಾಡಲಿಕೆ ತೊಡು ಅವತಾರೇ |

ಜ್ಞಾನದೇವ ಕೋಣ ಮುಖದಿ ವೇದ ಉಚ್ಛಾರೇ |

ಅಗ್ನಿ ಹಂದರದೊಳು ಕುಂತು |

ಲಗ್ನ ಮಾಡಿಕೊಂಬ ನರರೇ |

ಭಜನ ಕೇಳಿ ಬರ್ರೆಂತ ಕರೆದಿದ ದೇವಿದಾಸರೇ ||8||

ಬುದ್ಧಿವಂತರ ಸುದ್ದಿ ಸಿದ್ಧಾಗಿ ಕೇಳರೆಪ್ಪ |

ಶುದ್ಧವಾಣಿ ಪೇಳುವೆನು ನಿಮಗೆ ಕೂಗಿ ಕೂಗಿ

ಬಿದ್ದವರು ಎದ್ದು ನಡಿವದು ಬಾಗಿ ಬಾಗಿ |

ಕಿವುಡರ ಮುಂದೆ ಕಿನ್ನುರಿ ಊದಿದರೆ ಏನು ಫಲವು |

ಗೌಡರ ಕಣ್ಣಾಗ ಇದ್ದಂಗ ಹೋಗಿ ಹೋಗಿ ||ಪಲ್ಲವಿ||

ಪಂಚ ತತ್ವದ ಕಿನ್ನ |

ಮುಂಚಿನ ದೇವರು ತಿಳಿ ತಮ್ಮ |

ಗುರುವಿನ ಸೇವಕ ಹೋಗಿ ಹೋಗಿ |

ಪಂಚಪರಸ ಸ್ವಯಂ ಬ್ರಹ್ಮ ಆಗಿ ಆಗಿ |

ಮಂಚದ ಮೇಲ ಮನಗಿದರಿಲ್ಲ |

ರೊಂಚ ಕಲ್ಲಿನ ಮೇಲ ಮನಗಿ |

ಸಿದ್ಧಾರೂಢ ಸ್ವಾಮಿನಾದ್ರು ಜೋಗಿ ಜೋಗಿ ||1||

ಗುಪ್ತ ದಾನವ ಕೊಟ್ಟು |

ಗುರುವಾದ ಮಾಣಿಪ್ರಭು |

ಸಪ್ತ ವ್ಯಸನ ಸುಟ್ಟ ಮಲಕಪ್ಪ ತ್ಯಾಗಿ ತ್ಯಾಗಿ |

ತೃಪ್ತಿ ಪ್ರಾಣಿ ಜಂಗಮ ಸೇವಕ ತಿರುತಿರುಗಿ |

ಅಷ್ಟಾವರಣ ನಿಷ್ಠಿಲಿ ಪಿಡಿದು |

ಸೃಷ್ಟಿಯೊಳು ದೇವರಾದ್ರು |

ಹಠಯೋಗಿ ರೇವಯ್ಯಸ್ವಾಮಿ ಯೋಗಿ ಯೋಗಿ ||2||

ಬಾಯಿ ಮಾತು ಆರೂಢವೇನೋ |

ಶಿಸುವಾದ ಶಂಭೋಲಿಂಗ |

ಅಳ್ಳಲಿ ಕಟ್ಟಿ ಮೆರೆದಾ ನೀಗಿನೀಗಿ |

ಕೈ ಬಾಯಿ ಕಚ್ಚಿ ಘಚ್ಚಿ ಬಿಗಿ ಬಿಗಿ |

ಮನಸಿನ ಲಂಗೋಟಿ ಹಾಕಿ |

ಮತ್ರ್ಯಾವೆಲ್ಲಾ ತಿರುಗಿದ ಗುರು |

ಕರಬಸಪ್ಪ, ಎಂಕಮ್ಮ ಮಡಿವಾಳ ನೀಗಿ ನೀಗಿ ||3||

ಕಣ್ಣು ತೆರೆದು ಕಿತಾಬ ನೋಡೋ |

ಕರ್ಣನೆಂಥ ದಾಶನೂರ |

ಮರಣದ ಬಾಯಾಗ ನಿಂತ್ರು ಹೋಗಿ ಹೋಗಿ |

ಮಾತಿಗಿ ಹರಿಶ್ಚಂದ್ರ ನಿಂತ ಆಳನಾಗಿ ನಾಗಿ |

ಸತ್ಯದ ಕಾಲ ಬಂತು |

ಸತ್ತಂಗ ಸುಮ್ಮನ ಬೀಳ್ರಿ |

ನಿತ್ಯ ಓಂ ನಾಮ ಸ್ಮರಣಿಗಿ ಬಾಗಿ ಬಾಗಿ ||4||

ಮಂದ್ಯಾಗ ಮುಚ್ಚಬ್ಯಾಡ |

ಸಂದ್ಯಾಗ ತೆರಿಬ್ಯಾಡ |

ಬಂದಿದ ಜಲ್ಮವಾದತು ದಗಿದಗಿ |

ಹಸರ ಹುಲ್ಲ ಬಿಸಲಗ ಮೈದರ ಧಗಿ ಧಗಿ |

ನಂಬರಿ ಸೇರ ತಾಳಿ ಮಾಡಸಿ |

ಲಗ್ನ ಮಾಡಿ ಕುಂತಾರಪ್ಪ |

ರಂಜೇರಿ ಮಹಾರುದ್ರಪ್ಪ ಬಾಗಿಬಾಗಿ ||5||

ಸಿದ್ಧಪ್ರಭುನ ಧ್ಯಾನ ಕಂಡು |

ನೀವು ಉಂಡು ಹೋಗರೆಪ್ಪ |

ಕಂಡಿದ ಗುಂಡಾ ಮಡಿವಾಳ ಹಗಿಹಗಿ |

ಬೆಂಡು ಬತಾಶ ಟೆಂಗಿನ ಸುಗ್ಗಿಗಿ ಹೋಗಿ ಹೋಗಿ |

ಕಂಡು ಬಂದ ಚತುರದೇಶಿಗಿ |

ಕಂದಗೊಳ ಸೇರ್ಯಾನ ಮೊಳದಗ |

ವೀರಸಂಗಯ್ಯನ ಸಂಗತಿ ಪ್ರಸಾದ ಮುಗಿ ಮುಗಿ ||6||

ಚಲತಿ- ಬಸವನಾಮ ನುಡಿ ಹೇಮನಸ |

ನಾಮ ನುಡಿದರೆ ಮುಕ್ತನಾದಿ ಪಂಚಪರುಸ ||

ಮಂದಿರ ನೋಡೋಣ ಬಾ |

ರಂಗಾ ನೀಲಗಂಗಾ ||ಪಲ್ಲವಿ||

ಮನೋಹರ ಸುಂದರ ಪ್ರಿಯ |

ಸಾವಿರ ಚಂದ್ರನ ಖಳಿಯ |

ನಾಚಿ ನಿಂತ ದಕ್ಷನ ಅಳಿಯ |

ನಾಚಿ ಕುಂತ ಪಾರ್ಥನ ಗೆಳೆಯ ||1||

ದಾರಿದೊಳು ಮೂರವ ನದಿಯ |

ನದಿಯೊಳು ಅದ ಒಂದು ಸುಳಿಯ |

ಅಂಜಿದರೆ ಬರುವದು ಛಳಿಯ |

ಅಂಜಬಾರದೋ ಸಿದ್ಧನ ಗೆಳೆಯ ||2||

ದೊಡ್ಡ ಮನುಜನ ಬಲ್ಲಿ ಒಬ್ಬ ಧಡ್ಡ |

ಧಡ್ಡನ ಮಾತು ಕೇಳಿದ ಒಬ್ಬ ಯಡ್ಡ |

ಯಡ್ಡ ಮಾತ ಕೇಳಿ ಕಳಕೊಂಡ ಗುಡ್ಡ |

ಗುಡ್ಡ ಹೋದ ಮೇಲೆ ಬಿತ್ತಪ್ಪ ಕೊಡ್ಡ ||ಪಲ್ಲವಿ||

ಕೊಂಡೆ ಮಂಚಣ್ಣ ಮಸಲತ್ತು ಮಾಡಿ |

ಬಿಜಳಂಕಗ ಹೇಳಿದರೂ ಇಲ್ಲದೊಂದು ಚಾಡಿ |

ಬಸವಣ್ಣಗ ಕೊಟ್ಟೀರಿ ಕೆಲಸ |

ಕೆಲಸ ಮಾಡಿಟ್ಟರವರು ಹೊಲಸ |

ಹೊಲಸು ಆದಲ್ಲಿ ಉಳಿಯುವದಿಲ್ಲ ದಿನಸ |

ದಿನಸ ಕಳಕೋಬೇಡ ರಾಜಸಂಹ ||1||

ಸರ್ವ ಜಾತಿ ಹಿಡಿದು ಕಟ್ಟುವರೊ ಲಿಂಗ |

ಸಾರ್ವಭೌಮ ರಾಜ ತಾನೇ ಇದ್ದಂಗ |

ಏಕಲಾಖ ಶಾಣೌ ಹಜಾರ |

ಬೇಕ್ರಿ ಅವರ ಪಂತಿಗಿ ಜಂಗಮರ |

ಲೆಕ್ಕನಿಲ್ಲದೆ ಖರ್ಚು ನಿವಾರ |

ಸಿಲ್ಕ ತೆಕ್ಕೊಂಡು ಹಾಕರಿ ಹೊರ ದ್ವಾರ ||2||

ಬಿಜಳಂಕ ಸಿಟ್ಟೀಲಿ ಬಸವಣ್ಣಗ ಕರೆದ |

ಲೆಕ್ಕ ಕೊಟ್ಟು ಹೋಗೋ ಬಿಟ್ಟು ನಮ್ಮ ಸರದ |

ನೋಡುತಾರೋ ಖಾತೆಗಳ ತೆರೆದ |

ನೋಡು ಬಸವಣ್ಣ ಇಟ್ಟರ ಹ್ಯಾಂಗ ಬರೆದ |

ಕೊಟ್ಟಿದ್ದು ಓಂ ನಮಃ ಶಿವಾಯ ಬರೆದ |

ಮುಟ್ಟಿದ್ದು ಓಂ ನಮಃ ಶಿವಾಯ ಬರೆದ ||3||

ದುಷ್ಟರ ಮಾತ ಕೇಳಿ ಬಸವಣ್ಣಗ ಬೈಯ್ದ |

ಅಷ್ಟು ಐಶ್ವರ್ಯ ಮನಿ ಹೊಯಿತಪ್ಪ ಉರದ |

ಬಿಟ್ಟು ಹೋದರು ಕಲ್ಯಾಣ ಬಸವಣ್ಣ|

ಸುಟ್ಟು ಹೋದರು ಕೊಂಡೆಯ ಮಂಚಣ್ಣ |

ಥಟ್ಟೇ ಒಳ್ಳೆದಲ್ಲ ಚುಚಲಿಯ ಗುಣ |

ಥಟ್ಟೇ ಬಿಟ್ಟವರೀಗೆ ಹರ ಸಿದ್ಧಶರಣ ||4||

ಬಸವ ಭೂಮಿದೊಳು ಶಿಸುವ ಬರಿದ ಪದ |

ಹಸುವಾಗಿದವರೆಲ್ಲಾ ಓದಿ |

ಸುಶೀಲ ಭೂತ ಪಂಚಾಪುರದ ಹಾದಿ |

ಸುಜನರೆಲ್ಲಾ ಸಾಪ ಮಾಡಿದ ಬೀದಿ |

ಸುರ ಮುನಿ ಗಣರೆಲ್ಲಾ ಶೋಧಿಸಿ ಈ ಮಾರ್ಗ |

ಸ್ವರ್ಗಕ್ಕೆ ಒಯ್ದಾರ ನವುದಿ |

ಮುತ್ತು ಮಾಣಿಕ ನಿಮ ಕಾಣಿ ತೌದಿ ||ಪಲ್ಲವಿ||

ದೇವ ದೈತ್ಯರು ಕೂಡಿ ಸಮುದ್ರ ಮಥನ ಮಾಡಿ |

ಸದಾ ಶಿವ ಕೆಲಸ ಹೆಂತದು ತೆಗೆದ |

ಸ್ವರ್ಗ ಮತ್ರ್ಯ ಪಾತಾಳ ಮೂರು ಬಿಗಿದ |

ಚಿತ್ರಗಾರ ವೇಷ ತೊಟ್ಟು ಬರೆದ |

ಶರಣ ಶರಣೆರೆಲ್ಲಾ ಧ್ಯಾನವಾಗಿ ನೋಡಿರಿ |

ಜ್ಞಾನಕ್ಕೆ ಸರಿ ಬಂದರ ಬರಲಿ |

ಮ್ಯಾಣ್ಯಾ ಪಲ್ಲಕ್ಕಿ ನಮಜೊತಿ ಮೆರಿಲಿ |

ಅಣ್ಣ ಎಲ್ಲರಿಗಿ ಯಮಧರ್ಮನ ಕಾವಲಿ |

ಟೊಣ್ಣೆ ಮನುಜಾಗ ಕುಂದನ ಹಳ್ಳ ಏನ ಬೆಲಿ |

ಚೌರ್ಯಾಐಂಸಿ ಲಕ್ಷಾ ಸೌರಕ್ಷಣ ಅಕ್ಷಾ |

ಸ್ವಾಮಿ ನಿಂತು ಸಾಕ್ಷ |

ಸ್ವಲ್ಪ ತಿಳಿರಿ ಕಲ್ಪ ಬಿಡರಿ ನೆನಪ ಇಡರಿ |

ತೆಲಿ ತೆಳಕ ಮಾಡಿ ಸೂಲಿಗಿ ಬಿದ್ದರ |

ಶಿವನ ನೆಲಿ ಸಿಕ್ಕದೇನಪ್ಪ ಜಲ್ದಿ |

ಬೇಕಾರ ಬೈಯಪ್ಪ ಎರಡು ಮೂರ ಬೈಯ್ದಿ |

ಬಯಲಿಂದ ನಿರ್ಮಾಣ ಮಾಡಿದ ಗುರುವಿನ |

ಹೊಯಿಲ ತಿಳಕೋವಲ್ಲಿ ನಗದಿ |

ಉದ್ರಿ ಬೇಡಿದ್ರ ಮುತ್ತಾಯ್ತು ತೌದಿ ||1||

ಅನಂತ ಭಕ್ತಿಯ ಅನಂತರ ಸಂತ |

ಸಖಬಾಯಿ ಮನಿ ನೀರ ಹಾಕಿ |

ಜನಾಬಾಯಿಯವರ ಕುಟ್ಟಾಲಕ್ಕಿ |

ಮುಕ್ತಾಬಾಯಿ ಮನಿಯಾಗ ಬೀಸಲಾಕಿ |

ಬ್ರಹ್ಮ, ವಿಷ್ಣು, ರುದ್ರ ಕೂಸ ಮಾಡಿದ ಗುರುವೆ |

ಅತ್ರಿ ಮುನಿ ಅನಸೂಯ ಆಗಿ |

ಮಾತ ಬಲ್ಲವರು ನಡೆದರೋ ಬಾಗಿ |

ಸೋತ ಇದ್ದವ ಶರಣ ವೈರಾಗಿ |

ಜ್ಯೋತ ತಿಳಿದವ ಸರ್ವರ ಜೋಗಿ |

ಷಡಕ್ಷರಿ ಮಂತ್ರ, ಸಾಧನಾಗೊ ತಂತ್ರ |

ಗುರು ಮುಖ ಯಂತ್ರ |

ಅಟ್ರ ಸಂಖ್ಯಾ ಮಾಡಿ ಐಕ್ಯಾ ಗುರುವಾಕ್ಯ |

ಕೈಬೀಸಿದ ಕಡಿ ಕೈಲಾಸ ಅದನೋಡು |

ಕೈಕೇಯಿ ರಾಣಿಯಂತೆ ಅಲ್ಲ |

ಸೈಸೈ ತಾಳಿದವ ವನವಾಸ ಬಲ್ಲ |

ಬ್ರಹ್ಮ ವೇಷವ ತಾಳಿ ಮಾಣಿಕ ನಗರದೊಳು |

ಖಂಡೆರಾಯ ಸ್ವಾಮಿ ಆದಿ |

ಸೌದ ಜೀತಾಗಿ ಸಿಲ್ಕ ಉಳಿತು ನಗದಿ ||2||

ನಾಯಿ ತನ್ನ ಜೀವಕೆ ನಾರಾಯಣ ಅಂದಂತೆ |

ಎಲ್ಲರಿಗೆ ಬರತದೇನೊ ಹುಚ್ಚಾ |

ಎಲ್ಲರಲ್ಲಿ ಜೀವಾ ಒಂದೇ ಉಚ್ಚ |

ಗುಣ ಬ್ಯಾರೆ ಬ್ಯಾರೆ ಸ್ವಭಾವ ನೀಚಾ |

ಅನಾಹತ ದಳದಲ್ಲಿ ಬಾರಾ ಜ್ಯೋತಿರ್ಲಿಂಗ |

ತಿರುಗಾಡಿ ತಿಳದವನೇ ಬಲ್ಲ |

ನಂಬಿಗಿಟ್ಟಿದರ ಒಲಿತದ ಕಲ್ಲ |

ಗುಂಭಿಗಿ ಬಿದ್ದವರ ಮಾತು ಉಳಿವದಲ್ಲಾ |

ಗೊಂಬಿಗಿ ಸಿನಗಾರ ಮಾಡಿದ್ರೆ ಇಲ್ಲ |

ಘಟಕ ಇರೋಸ್ಥನ ಮಠಕ ಹೋಗೋ ದಿನ್ನಾ |

ಗುಟಕ ಸಿಕ್ಕತ್ತು ಮೌನ |

ಸಮುದ್ರ ಮಥನ ಗುರುವಿನ ಕಥನ ಫಳಿಸಿ ವತನ |

ವಶಿಷ್ಟ ವಿಶ್ವಾಮಿತ್ರ ಮುನಿ ಶನಿದೇವರು ಶಿವನಲ್ಲಿ ಕೂಡಿ |

ದಶಕಂಠನ ವಧ ನೆನಪ ಹಿಡಿ |

ಆರು ಚ್ರಗಳು ಅಷ್ಟಮದಗಳು |

ಆವರಿಸಿಕೊಂಡು ಹಾದಿ ಹಿಡದಿ |

ಭವ ವೈಕುಂಠ ಸೌಧಕ್ಕೆ ಜಿಗದಿ ||3||

ದೇವಿದಾಸ ಪದ ನಿರ್ಬಯಲ ಲಿಪಿ ಕೇಳೊ |

ಏಳು ಜಲ್ಮದ ಉದ್ಧಾರ ಆದಿ |

ಸಹಜ ದೊರಕಿತ್ತೊ ಗುರು ಪ್ರಸಾದಿ |

ಗರ್ಜವಿಲ್ಲಪ್ಪ ಮರುದಿನ ನೌದಿ |

ಅಜ ಹರಿ ರುದ್ರಗೆ ಮೀರಿದ ಮಹಾಮಾಯಿ |

ಪರಶಿವನ ಅರ್ಧಾಂಗಿ ದೇವಿ |

ನಿಮ್ಮ ಕೃಪಾಗಿ ತ್ರಿಭುವನ ಜೀವಿ |

ನಿಮ್ಮಗ ಸಾಷ್ಟಾಂಗ ಭವದೊಳು ಭವಿ |

ನಮ್ಮ ಅಷ್ಟಾಂಗ ಇಲ್ಲಪ್ಪ ಕವಿ |

ಓಂ ನಮಃಶಿವಾಯ ತರುಣ ಉಪಾಯ |

ಸುಲಭೋಪಾಯ |

ತಾರಕ ಮಂತ್ರ ನರಜಂತ್ರ ಪರಸಂತ್ರ |

ಮಡಿವಾಳ ಮಹಾಗುರುವೆ ನಿಮ್ಮ ಬೆಳಕಿನೊಳು |

ಮಾಣಿಕ ದೊರಕಿತ್ತೋ ಕೈಯ |

‘ಆಣಿಕಾ ಮಾಘೋ ಹೇ ಪ್ರಭುರಾಯ |’

ಗುರುವಿನ ಮಗನಾಗಿ ಗುರುತಿಟ್ಟು ನಡಿಬೇಕು |

ನಾವದಗಿ ನಸಿಯಾನ ಹಿಡದ |

ತ್ರಿಪಾಲನ ತ್ರಿನಯನ ತೆರದ ||4||

ಚಲತಿ- ಅಲ್ಲಿ ಇಲ್ಲಿ ಹುಡುಕುವದು ಸಾಕೋ |

ನಿನ್ನಲ್ಲಿ ನಿರ್ವಿಕಾರ ಅದ ನೋಡಿಕೋ ||

ಚಾಕರಿ ಮಾಡಿ ಬಂದಿದ ನಿಮ್ಮಲ್ಲಿಗಿ |

ಗುರು ಭಜನಿಗಿ ಫಳಗಿ ||ಪಲ್ಲವಿ||

ಚಾಕರಿ ಮಾಡಿ ಕಂಡಪರೂಪ |

ಚೌಕಸಿ ಮಾಡಿ ಕೇಳರಿ ಸ್ವಲ್ಪ |

ಚಂದನಕೇರಿ ಮುತ್ಯ ಮಲಕಪ್ಪ |

ಚಾಕರಿ ನಮಗಿಟ್ಟಿದರಪ್ಪ |

ಚಂದ್ರಾಮನ ಬೆಳಕಿಗಿ ಬೆಳಗಚ್ಚು |

ಸುಂದರ ಕಣ್ಣ ಮುಚ್ಚು |

ಮಂದಿರ ಪ್ರಿಯನ ಮನ ಮೆಚ್ಚು|

ಬೆಳಕಿಲ್ಲದ ಕಿಚ್ಚು |

ಸಿಲ್ಕಿಲ್ಲದ ಬಂದಿದ ಮೂಘಳಗಿ |

ಸಿಲ್ಕಿಲ್ಲದ ಸುಳಿಗಿ ||1||

ಸ್ವತ ಚಾಕರಿ ಮಾಡಬೇಕು ನಗುತ |

ಆಧಾರಪೂರ ದಳ ಎಣಿಸುತ್ತ |

ನೋಡಲದಂವ ಹ್ಯಾಂಗಾದ ಮುಕ್ತ |

ನೀಡಲದಂವ ಹ್ಯಾಂಗಾದ ಭಕ್ತ |

ಬಾಯಿಲಿ ಬ್ರಹ್ಮನೆಂದು ಬೊಗಳಿ |

ಏನ ಕೆಲಸಕ ಇಗಳಿ |

ಕೈ ಬಾಯಿ ಕಚ್ಚಿ ಗಚ್ಚಿ ತಾಳಿ |

ತಾ ಇರಬೇಕು ತಾಳಿ |

ದುಡೆದು ಕಂಡು ಮಾಲಿಕ ತಾ ಹಿಗ್ಗಿ |

ಹಿಂಗ ಮಾಡಿ ಬಂದ ಸುಗ್ಗಿ ||2||

ತನು ಮನ ಧನ ಗುರು ಅರ್ಪಣ |

ಶ್ರವಣ ಮನನ ನಿಜಧ್ಯಾಸಣ್ಣ |

ಚಾಕರಿ ಮಾತು ಅದ ಬಲು ಬಿರಿಯೋ |

ಏರಿ ನೋಡು ನೌಬಾದಿ ಧರಿಯೋ |

ಒಂಬತ್ತು ಭಾಂಯಿದೊಳಗಿಂದ ಒಂದು ಕಾಲಿ |

ಹ್ಯಾಂಗ ನಡದಾವ ಅಲ್ಲಿ |

ಮಂಗರಿಗಿ ಹ್ಯಾಂಗ ತಿಳಿದತ ಇದರ ನೆಲಿ |

ಹ್ಯಾಂಗ ಅವರ ತೆಲಿ |

ಅಲೇಬಾದಿ ಸಿದ್ಧೇಶ್ವರ ತೆಳಗಾಗಿ |

ಸಿದ್ಧ ನಿಜ ಬೈಲಿಗಿ ||3||

ಬ್ರಹ್ಮನ ಬರಿಯ ಬರುವದು ಭರೋಸ ಏನ್ರೀ |

ಧರ್ಮದ ಮನುಜಾ ವರ್ಮ ಆಡದು ಖರ್ಮಾ ಏನ್ರೀ ||ಪಲ್ಲವಿ||

ಬರಿಯ ಹೇಳಿ ಬೋಳೆಗೈ ಬಸಯ್ಯ ಸ್ವಾಮಿ |

ಮಹಾತ್ಮ ತೋರಿರು ಮದನೂರು ಸಿದ್ಧಲಿಂಗಸ್ವಾಮಿ |

ಹಕ್ಕಿಗೆ ಉಣಸಿರೋ ಶರಣು ಬಸವೇಶ್ವರರ್ರೀ ||1||

ಹಂತ ಬ್ರಹ್ಮ ಜ್ಞಾನಿ ನಾನು ಅಲ್ಲರೀ |

ಸಂತ ಶರಣರ ಪಾದದ ದಾಸರೀ |

ನಿಂತೇನು ಕರ ಮುಗಿದು ಕೆಲಸಕ್ರೀ ||2||

ಸಕಲ ಮತ ದೈವತ ಗುರು ಸಮಾನ |

ಅಖಲ ಇದ್ದಷ್ಟೆ ನಂದಪ್ಪ ಮಾತ ಸಮಾನ |

ದಖಲ ಕೇಳಿ ಅಖಲ ಚಟ್ಟಿ ಕೊಡಿರಿ ||3||

ಬೈದವರಿಗಿ ಬೆಲ್ಲದ ರುಚಿ ಸಿಗಲಿ |

ಸವುದವರಿಗಿ ಗಂಧದ ಸುಗಂಧ ಸಿಗಲಿ |

ಮೂಗು ಮುರದವರು ಮುಗಿಲಿಗಿ ಮುಟ್ಯಾರೇನ್ರಿ ||4||

ಬರದ ಇಟ್ಟಾರ ಪಂಚಾಕ್ಷರ ಷಡಾಕ್ಷರ |

ಹರದ ಕೊಟ್ಟರ ಜೋಳಿಗಿ ಪ್ರಭು ಭಿಕ್ಷಾ |

ಸೆರಗ ತೆಗೆದ ಮೇಲೆ ಶರ್ಮೇನು ದೇವಿದಾಸರ್ರಿ ||5||

ಶ್ರೀಗುರು ಮಂತ್ರವು |

ತ್ರಿಭುವನ ತಂತ್ರವು |

ಹರಿಹರ ಸಂತ್ರವು ನೀಗಿ ಮುಕ್ತ |

ಶ್ರೀ ರೇವಯ್ಯಾ ಸ್ವಾಮಿ |

ಪರಶಿವನ ತಿಳಿದಂವ ಗುರುಭಕ್ತ ||1||

ಬ್ರಹ್ಮಾಂಡಕ ಹಿರಿಯರು |

ಪಂಢರಪುರದವರು |

ಪುಂಡಲೀಕನ ಅಂಗಳದೊಳು |

ನಿಂತವರು ಶ್ರೀಕೃಷ್ಣಸ್ವಾಮಿ |

ನಾಮದೇವನ ಲಗ್ನ ಮಾಡಿದವರು ||2||

ಎತ್ತ ಕಾಣಲ್ದ ಸವತಿ |

ಅಣ್ಣನ ಮೇಲ ಬಲು ಪ್ರೀತಿ |

ದ್ರೋಪದಿ ಹಾಡಿ ಹರಸಿದಳು |

ಕೇಳು ಗೆಳದೆಮ್ಮಾ |

ಅರ್ಥ ಮಾಡು ಸಾರ್ಥ ಜಗದೊಳು ||3||

ಸಂಸಾರ ಸಾಗರ ಈಸದು ಬಿರಿಯ|

ಖಜ್ಜಿಯ ತುರಿಸುವ ಪರಿಯ ||ಪಲ್ಲವಿ||

ದಾಟುವದಕ ಕರ ಪಿಡಿದಾ ಆವಾರಗ್ಪಾಡಿ |

ಎಷ್ಟು ದೂರ ಇರುವುದು ಹತ್ತಲಿಲ್ಲ ಧಡಿ |

ಕಷ್ಟ ನಿವಾರ ಹಣಿಬಾರ ಖೋಡಿ |

ಇಷ್ಟಕ್ಕೆ ಗುರು ಬಂದು ಹಚ್ಚಿದ ಕಡಿಯ |

ಬಾಯಿ ಬಿಡುವೆನು ಒಡಿಯ ||1||

ಅಗಸಿ ಬದಿಲಿ ತಿಂಡಿ ಆಯಿತೊ ಬಾರಿ |

ತುರುಸುವುದಕ ಕೈಬಿಟ್ಟು ಮುಂದ ಹೋದ ಸಾರಿ |

ಚೌರ್ಯಾಐಂಸಿ ಲಕ್ಷಾ ತಿರುಗುತ ಫೇರಿ |

ಆಲಸ್ಯ ಕಂಡು ಬಂದಾ ಎನ್ನ ಧಣಿಯ |

ಸಿದ್ಧ ಮಾಡಿ ಬರಿಯ ||2||

ದೇವರು ತಿಳಿದರೆ ಹೇಳಯ್ಯ |

ಸುಳ್ಳೆ ಗೋಳು ಯಾಕಯ್ಯ ||ಪಲ್ಲವಿ||

ಜೀವದ ಹೆಣ್ಣ ದೇವರ ಅಲ್ಲಾ |

ಜೀವದ ಗಂಡ ದೇವರ ಅಲ್ಲಾ |

ನಿರ್ಜೀವದ ಗೊಂಬಿ ಅಲ್ಲಯ್ಯ ||1||

ಗಂಗಾ ಅಗ್ನಿ ದೇವರೇನಯ್ಯ |

ನಿಂಗಾ ಜಾನು ದೇವರೇನಯ್ಯ |

ಸಂಗನ ಶರಣ ಸಿದ್ಧ ಬಲ್ಲಯ್ಯ ||2||

ಧ್ಯಾನಿಸೊ ತತ್ವದ ಪದಗಳು |

ಮನ್ನಿಸು ಮಹಾತ್ಮರು ನುಡಿಗಳು ||ಪಲ್ಲವಿ||

ಜನಕ ನೋಡಿ ಎಣಿಸು ಬ್ಯಾಡ ಬೆರಳು |

ಮನಕ ಮೆಚ್ಚಿ ತಿರು ಒಳಗಿನ ಮಾಳ |

ಭಾವಿಕಗೆ ಗುರು ಆಗುವ ಮರುಳ |

ಸ್ವರ್ಗಕೆ ದಾರಿ ತೋರುವ ಸರಳ ||1||

ಕುಂತು ನೋಡು ಸಹಸ್ರ ದಿವಗಿಗಳು |

ನಿಂತು ನೋಡು ಪಶ್ಚಿಮ ಪ್ರಕಾಶದೊಳು |

ಶಾಂತ ಇಡು ಸದಾ ಹೃದಯದೊಳು |

ಮಹಾಂತಸ್ವಾಮಿ ದರ್ಶನ ತನ್ನೊಳು ||2||

ಭಕ್ತಿಪದ ಹೊಯ್ತು ಕಮಲಕೊರಳು |

ಮುಕ್ತಿಪದ ಕಬೀರನ ಮ್ಯಾಲ ನೆರಳು |

ಯುಕ್ತಿಲಿಂದೆ ಈಚೀ ಮಾರ್ಗ ತೆರಳು |

ಶಕ್ತಿಪದ ಸಿದ್ಧ ನಾಮ ಹೊರಳು ||3||

ಇರೋ ಬಂದಿದಲ್ಲಾ ಈ ಕಾಯಾ |

ಗುರು ಧ್ಯಾನ ಮಾಡುವದೆ ಉಪಾಯ ||ಪಲ್ಲವಿ||

ಪರ ತಿಳಿದು ಸೇದೋ ನೀಸಿದ್ಧ |

ನಡಿ ನುಡಿ ಅಳದಿರು ನಡಿ ಶುದ್ಧ |

ಮಹಾತ್ಮರಿಗಿ ಆಗುಬ್ಯಾಡ ಬದ್ಧ |

ಸಿದ್ಧ ಸಾಧಕರಾಗುವರು ಸಾಯ ||1||

ಪರಬ್ರಹ್ಮನ ಆಯುಷ್ಯಲಿಂದ ಬಂದಿ |

ಮಾತೆ ಗರ್ಭದೊಳು ಏನಂದಿ |

ಬಾಲ ಯೌವನ ಮುಪ್ಪಾಗಿ ನೊಂದಿ |

ಸಾಯಕಾಲಕಂದಿ ಶಿವರಾಯ |

ಶಿವ ತಾನೇ ಆಗುವನೋ ಯಮರಾಯ ||2||

ಚೌದ ಭವನ ಏಕವೀಸದ ಸ್ವರ್ಗ |

ನಡು ಮಧ್ಯದಲ್ಲಿ ಗುರುವರ್ಗ |

ಎರಡು ಅಕ್ಷರ ತಿಳಿದಿರು ದೀರ್ಘ |

ತಿಳದುಳಿಬೇಕು ಸೂಜಿಯ ಕೊನಿಯ |

ದೂರಿಲ್ಲ ವೈಕುಂಠದ ಮನಿಯ ||3||

ದೇಶದೊಳು ಕಂದಗೂಳ ವಾಶ |

ಮಡಿವಾಳಗ ತೋರಿ ಮಹಾವೇಶ |

ಸುಳ್ಳಂದವರ ತೆಲಿಮ್ಯಲ ದೋಷ|

ಗುಣದ ಸವಿ ನೋಡ ಪ್ಯಾಲಾ |

ಲೇಪಾಗೋ ಬ್ರಹ್ಮನ ಧ್ವನಿಯಾ ||4||

ನಿರಾಕಾರ ನಿರ್ಗುಣ ನಿರಂಜನ | ನಿರ್ಬಯಲ ನಿಜ ರೂಪಾ |

ನೀವು ಕಂಡಿರೇನು ಕೂಡಿ ಉಂಡಿರೇನು | ಹಾಡಿ ಹೇಳರಿ ಏನಪ್ಪ ||ಪಲ್ಲವಿ||

ಮಹಾ ಮಹಾ ಋಷಿಮುನಿಗಳ ಜೀವವು | ಇರೋಸ್ತನಕ ಕೇಳಿ |

ಮಹಾ ಮಹಾ ಪಂಡಿತರ ಸಭಾದೊಳು | ಬರಿಯುತ ಬಂದ ಸಾಳಿ |

ಚಾರಧಾಮ ಚೌದ ತಬಕ ತ್ರಿಲೋಕದೊಳು | ದೊರಿಲಿಲ್ಲಾ ಮಹಾಭೂಪ ||1||

ಅವರಿಗಾಗಿ ಅನ್ನಾ ನೀರ ಬಿಟ್ಟಾರಂತ ಆಹಾರ ಮಾಡಿ ಘಾಳಿ |

ಅವರು ಇವರು ಇಲ್ಲೆ ಕುಂತೀರಿ | ಬಂದಾ ನಿಮ್ಮ ಧೂಳಿ |

ತತ್ವಕ ಬಿಟ್ಟು ಬೇರೆವುಂಟು ನಿರಂಜನ ಸುದ್ದಿ ಕೇಳಿನಪ್ಪಾ ||2||

ನಿರಾಕಾರ ನಿಮ್ಮ ನಾಮ ತಿಳಿಯಾದೆ | ಹ್ಯಾಂಗ ಇರಲಿ ಬಾಳಿ |

ಆಕಾರದವರು ನಿರ್ಬೈಲ ನಾಮಕ | ಪೂಜಿ ನೇವುದ್ಯಾ ಹೇಳಿ |

ಶಿಲಾ ಮೂರತಿ ನಾಮದೇವರ ನೇವುದ್ಯಾ ಹೇಳಿ |

ಹ್ಯಾಂಗ ಉಂಡರಪ್ಪಾ ದೇವಿದಾಸಗ ತಾರೀಪ ||2||

ಚಲತಿ- ಸ್ವರ್ಗ ಮತ್ರ್ಯ ಪಾತಾಳ ನೋಡಾ |

ಮಾಡಿದ್ರ ಸಿಗಲಿಲ್ಲಾ ನಿಮ್ಮ ಭೇದಾ ||

ಧರ್ಮ ನೀತಿ ಬಿಚ್ಚರಿ ಗುಂಡಾಳಿ |

ಬ್ರಹ್ಮ ಜ್ಞಾನ ಭಜನ ಪ್ರೇಮ ಭಕ್ತಮಂಡಳಿ ||ಪಲ್ಲವಿ||

ನಾನೇ ಗುರು ಎಂಬ ಹಿಗ್ಗಾ |

ನಾನೇ ಶಿಷ್ಯ ಆಗಿದ ಅಂದು ಮುಗಲ ಮೇಲೆ ಢಗ್ಗಾ |

ನಾ ಎಂಬೋ ಖ್ಯಾಲವು ಮುಗ್ಗ |

ನೀನೇ ಅಂದವ ಜಗದೊಳು ಇರುವಾನು ಅಗ್ಗಾ ||1||

ನವಣ್ಯಾಗ ಹುಳಯಿಲ್ಲ ಉಂಡಾಳಿ |

ಆರಣ್ಯ ಆಲಾಯಿದೊಳು ಬಂದಿ ದಿಂಡ ಉಳ್ಳಿ |

ಕವಣೆ ಕಲ್ಲಿಗಿ ನೋಡು ಚಾಂಡಾಳಿ |

ಕರುಣ ಸೋಧುನ ಪಹಿಲೆ ನಾಂಹಿ ಉರಲೆ ಧುಂಡಾಳಿ ||2||

ಮುಗದಾದ ಪಂಚತತ್ವ ಪೂಜಿ |

ಮುಂದ ಉಳದದ ಹಂಚಿಕಿ ಹಾಕೊ ನಾಮ ಪ್ರೇಮ ರೋಜಿ |

ಮುಂಚಿನ ಚೆನ್ನಬಸವ ರಾಜಿ |

ಕಿಂಚಿತ ಕಂಡರೆ ನಿಮ್ಮ ಪುಣ್ಯ ನೋಡ ಹಸರ ತೇಜಿ ||3||

ಘಟಾಯೇರಿ ನೋಡು ಖಂಡಾಳಿ |

ಥೇಟ ಜಗದೊಳಿ ಮಾಡಿಕೊಂಡಿ ಸಂಸಾರ ಭಂಡಾಳಿ |

ಗಂಡ ಇರಲಿಕ ಆಗಿ ರಂಡಾಳಿ |

ದಂಡ ಮಾಡಬಾರದು ಕಟಕೊಂಡ ಗುರುಗುಂಡ ತಾಳಿ ||4||

ವಚನಾವು ಕಿಂವಿಲಿ ಉಂಡಯೆಲ್ಲ |

ಗುರು ಕಟಾಕ್ಷನಾದವರು ಬಿಟ್ಟಾರ ದಂಡೇಲಿ |

ಮೂರ ಪಟ್ಟಾ ಬೆನ್ನ ಮೇಲಿ ಅಂಡೋಲಿ |

ಮೋಕ್ಷ ಸಿದ್ಧ ಪದಕ ನಿಂದ್ಯಾ ಮಾಡಬೇಡ ಕಂಡಲ್ಲಿ ||5||

ನೀ ಯಾತಕ ಬಂದಿದಿ ಭವರೋಗಿ |

ನೀ ಬರಬಾದಿತ್ತು ಈ ಊರಿಗಿ |

ನೀ ಮೆಚ್ಚಿ ಕುಂತಿದಿ ಪರ ನಾರಿಗಿ |

ನಾಳೆ ಹೋಗುವುದು ತಿಳಿ ಯಮಪೂರಿಗಿ ||ಪಲ್ಲವಿ||

ನೀನು ಬಂದಿದಿ ಒಂದು ಆಸಿಗಿ |

ಮಾಯಾ ಮೋಹದ ಬಲಿಯಾ ಫಾಸಿಗಿ |

ಜಗದೊಳು ಹಾಸೇನಪ್ಪ ಹಾಸಗಿ |

ಇವನಿಗಿಲ್ಲಪ್ಪ ಎಳ್ಳಷ್ಟು ಹೇಸಗಿ |

ಹೋಗಿ ಬಂದರ ಏನ ಬಂತು ಕಾಸಿಗಿ |

ಸ್ಥಿರಯಿಲ್ಲಪ್ಪ ಇರುವುದು ತಾಸಿಗಿ ||1||

ಕಳ್ಳ ಸುಳ್ಳರ ಸಂಗ ನೀ ಹಿಡದಿ |

ಒಳ್ಳೆ ಒಳ್ಳೆವರ ಆಶಾ ನೀ ಕಡದಿ |

ತಳ್ಳಿಖೋರರ ಬೆನ್ನವ ಹಿಡದಿ |

ಕರ್ಮಾದ ಹೊಳಿಯೊಳು ಮುಳುಗಿ ನೀ ನಡದಿ ||2||

 

ಸುಳ್ಳೆ ಸಂಸಾರ ಝೋಲಿಯೋ |

ನಿನ್ನಾ ಬಾಯಿಗಿ ಬಿದ್ದದ ಕೀಲಿಯೋ |

ಗುರುಸಿದ್ಧ ಹಚ್ಚೆನಪ್ಪ ಬೇಲಿಯೊ |

ಈ ಬೇಲಿ ಒಳಗಿಂದು ನೀ ಗೆಲಿಯೋ ||3||

ಕಾಮನ ಸುಡುತಲಿ ಏನಾದೆ |

ಹೇಮ ತ್ರಿಪುರ ಸಂಹಾರ ಸಕೀಲ ಅರಿಯದೆ ||ಪಲ್ಲವಿ||

ಯೋಗಿ ಆದರೇನು ಭೋಗಿ ಆದರೇನು |

ತ್ಯಾಗಿ ವಿಷಯ ಗುಣ ನೀಗಿದರೇನು |

ಶಿಷ್ಯಾ ಆಗಿನೆಂದು ಸನ್ಯಾಸಿ ನಾನೆಂದು |

ವಿಷಯದ ವಾಸನೆ ಹೋಗಲರಿಯದೆ ||1||

ಅಗ್ನಿಯ ಗುಣದೊಳು ತಂಪಯಿಲ್ಲಾ |

ಅದರೊಳು ವಿಷಯದ ಮಾತಿಗೆ ರುಚಿಯೆಲ್ಲಿ |

ಘಾಳಿಕಾರನಿಗೆ ಧರ್ಮದ ಗುಣ ಎಲ್ಲಿ |

ಕಣ್ಣು ಇದ್ದು ಪರ ಆತ್ಮ ಕಾಣದೆ ||2||

ಅಹಂಕಾರ ಹೋಗದೆ ಕಿಂಕೃತ್ಯನಾಗದೆ |

ಶಂಕರ ಧ್ಯಾನದಿ ನಾ ಇರುವೆನೆಂದು |

ಸೂರ್ಯ ಐಕ್ಯವಾದಂತ ಜ್ಯೋತಿ ಪ್ರಕಾಶದೊಳು |

ಲೆಕ್ಕ ಸೇವಾ ಸಿದ್ದ ನಿರ್ಬೈಲ ತಿಳಿಯಾದೆ ||3||

ಚಲತಿ- ಉರಿಯ ಒಳಗಿನ ಕರ್ಪೂರದಂತೆ |

ಹರಿಯ ಮನಸು ನೋಡು ಅದರಂತೆ ||

ಕೇಳಿ ಬಂದಾ ಶ್ಯಾಣೇರ ಮಾತು |

ಹೇಳುವೆ ಕೇಳಿರಿ ಕುಂತು ||ಪಲ್ಲವಿ||

ಒಬ್ಬ ಹೇಳಿದ ತೀರ್ಥ ದೊಡ್ಡದು |

ಒಬ್ಬ ಹೇಳಿದ ಜಪ ದೊಡ್ಡದು |

ಒಬ್ಬ ಹೇಳಿದ ತಪ ದೊಡ್ಡದು |

ತಿರುಗಿ ಬಂದಾ ಇಲ್ಲಿಗೆ ಸೋತು ||1||

ಒಬ್ಬ ಹೇಳುವಾ ಅನ್ನಾ ದೊಡ್ಡದು |

ಒಬ್ಬ ಹೇಳುವಾ ದಾನ ದೊಡ್ಡದು |

ಒಬ್ಬ ಹೇಳುವಾ ತಾಯಿ ದೊಡ್ಡದು |

ಯಾವ ಮಾತಿಗಿ ಇಡಲಿ ಚಿತ್ತು ||2||

ಒಬ್ಬ ಹೇಳಿ ಭಜನಿ ದೊಡ್ಡದು |

ಒಬ್ಬ ಹೇಳಿ ಭಕ್ತಿ ದೊಡ್ಡದು |

ಒಬ್ಬ ನೀನೇ ಹೇಳು ತಿಳಿದು |

ಸಿದ್ಧ ಎನಗ ತಿಳಿವಲ್ಲದು ||

ಚಲತಿ – ಒಬ್ಬ ಗುರುವಿನಲ್ಲಿ ದುಡಕೊಂಡಿ |

ಇನ್ನೊಬ್ಬರ ಹಂಗವು ಹರಕೊಂಡಿ ||

ಶಿವ ನಾಮ ಸ್ಮರಣೆ ಮರಿತು ವ್ಯರ್ಥ ಜಲ್ಮಾ ಹೋಯಿತಲ್ಲಾ |

ಭವದೊಳು ಬಂದು ಭವಸಾಗರ ಮುಣಗೋದ ಆಯಿತಲ್ಲಾ ||ಪಲ್ಲವಿ||

ತಿರುತಿರುಗಿ ಮನುಷ್ಯ ಜಲ್ಮಾ ಬರದು ನೆಂಬಗಿ ಏನಯ್ಯಾ |

ಹರಹರಿಗಿ ಭೇದ ಮಾಡಿ ಹಾಡಿ ಫಲವೇನಯ್ಯ |

ಜೀವ ಇರುವಸ್ತನ ಪಡಿಯಲ್ಲಿ ಜನನ ನಿಶ್ಚಲಾ ||1||

ಕುಡತ್ಯಾಗಿನ ನೀರ ಸೋರಿದ ಪರಿಯ ಉಮರ ಹೋಗುವದು |

ಅಡತ್ಯಾಗಿನ ಮಾಲ ಸ್ಥಿರವಲ್ಲಾ ಒಂದಿನ ಹೋಗುವದು |

ಬಡತಾನ ಇದ್ದರ ಚಿಂತಿಯಿಲ್ಲಾ ನಡಿ ನುಡಿ ಸೇಲಾ ||2||

ಹೊಳಿದೊಳು ಹುಣಚಿಹಣ್ಣು ತೊಳದಿ ಕೆಲಸಕ ಬಾರದು |

ಬಿಳಿಜೋಳ ಖರಬಿನ ಅಡಿಗಿ ಬಿತ್ತಿ ಕಿಳ್ಳಬಾರದು |

ತಾ ತಿಳಿಯ ಆದರೆ ತಿಳಿವದು ಸಿದ್ಧ ಬೈಲಗಿ ಆಗಿದು ||3||

ಚಲತಿ – ಚಂದನಕೇರಿ ಸಪ್ತ ಭೂಮಿಕ |

ವಂದನಕ ಹೋಗನು ಬಾ ಭಾವಿಕಾ ||

ನಿಲಿಕಿಸಿಕೊಳ್ಳೋ ಮೇಲಿನ ಕಾಯಿ |

ತಮ್ಮ ಹಲ್ಲ ಕಿಸಿಬ್ಯಾಡ ಬೆಲೆಯಿಲ್ಲದ ಬಾಯಿ ||ಪಲ್ಲವಿ||

ಖನ್ನಿ ಅಮವಾಸಿ ಮರುದಿನ |

ಹುಣ್ಣಿ ಚಂದ್ರನ ಕಾಣಿದರೆ |

ಎಣ್ಣಿಯಿಲ್ಲದ ಜ್ಯೋತಿ ಕಂಡರೆ |

ಮುಚ್ಚಿಕೊಳ್ಳೋ ಜ್ಞಾನದ ಬಾಯಿ ||1||

ಪ್ರಪಂಚ ಗೆದಿವದು ಬಲು ಸೋಯಿ |

ಮುರಿದು ಪಿಚಂಡಿ ಕಟ್ಟುವದು ಹಿರಿಮಾಯಿ |

ತನು ಮನ ಧನ ಗುರುವಿಗರ್ಪಣ |

ಜ್ಞಾನವಿಲ್ಲದೆ ಫಲವೇನು |

ಆತ್ಮದ ಅನುಭವ ಅರ್ಥ ತಿಳಿಯದೆ |

ತೀರ್ಥಕೊಂಡಂಗ ಆಯಿತು ನಾಯಿ ||2||

ಯಮದೂತಗ ಅಂಜಿಸಿತು ಈ ಬಾಯಿ

ಅವಧೂತನ ನುಡಿ ನಡಿ ಸಿಲ್ಕ್ಯಾದ ಕಾಯಿ |

ಏಳು ಚಕ್ರದ ಅರ್ಥ ತಿಳಿದವ |

ಚಕ್ರವರ್ತಿ ಯೋಗಿ ಆದಾನು |

ಫಿಕರ ಬಿಟ್ಟು ಅಫಿಕರವಾದರೆ |

ಆಖಿರ ದೊರಿವದು ಸಿದ್ಧ ಬಾಯಿ ||3||

ಆಚಾರ ಇಲ್ಲದವನಿಗೆ |

ಆಚಾರ ಹೇಳಇಡ ಮನವೆ ||ಪಲ್ಲವಿ||

ಮುತ್ತಿನ ಪರೀಕ್ಷೆ ತಿಳಿದವಗೆ |

ಜ್ಯೋತಿಯ ಪ್ರಕಾಶ ಅವನೊಳಗೆ |

ಮಾತಿನ ಶ್ರವಣ ಮನುಜಾಗೆ |

ಗತಿಯಿರುವನು ಗುರು ಅವನಿಗೆ |

ಅವಿಚಾರ ನಡೆದ ಮಹಾಹೀನಗೆ ||1||

ತತ್ವದ ಪದ ನುಡಿಬೇಕು |

ಉತ್ತಮ ನೀತಿ ನಡಿಬೇಕು |

ಅತ್ತಿತ್ತ ನೋಡದಿರಬೇಕು |

ಸೋತೊಮ್ಮೆ ಪಾದ ಪಿಡಿಬೇಕು |

ರುಚಿಕರವಿಲ್ಲದ ಸಭವೆ ||2||

ನೀರಿನಲ್ಲಿ ಹುಟ್ಟುವುದು ಗಾರು |

ಇರುವದು ಕಲ್ಲಿನ ಪುಕಾರು |

ಕರಗಿ ಆಗುವದು ನೀರು |

ಅದರಂತೆ ಮನುಜನ ಸಾರು |

ಸಾಚಾರ ಗುಣಹೀನ ಸ್ಪಾನವೆ ||3||

ಮುಕ್ತಿವುಂಟೆ ಭಕ್ತಿಯಿಲ್ಲದವಗೆ |

ಯುಕ್ತಿ ಬೇಕು ಶಕ್ತಿ ಸಾಧಕನಿಗೆ |

ಕಣ್ಣಿನೊಳು ಕಣ್ಣು ತೆರೆದವಗೆ |

ತಾರಕ ಬ್ರಹ್ಮ ಅವನೊಳಗೆ |

ಉಪಚಾರವಿಲ್ಲದ ಆತ್ಮನವೆ ||4||

ಚೌಸಟ್ಟು ವಿದ್ಯೆ ಸಂಪೂರ್ಣ |

ಮುಖ ಪಾಠ ಓದಿ ಪುರಾಣ |

ಗುರು ಕಟಾಕ್ಷ ಆಗಿಲ್ಲ ಅವನ |

ಸೃಷ್ಟಿ ಕರ್ತ ಆಗೋದಿಲ್ಲ ಖೂನ |

ದೇವಿದಾಸಗ ಹಿಂದ ಹಳಿಯವಗೆ ||5||

ವೃದ್ಧ ಆದೆಲ್ಲ ಸಿದ್ಧ ಇದರೊಳು |

ಸಿದ್ಧ ಸೇದದು ಕಲಕೊಂಡಿ |

ಬದ್ಧ ಗುಣಯೆಲ್ಲಾ ಸುಟಕೊಂಡಿ |

ಒಳ್ಳೆ ಬುದ್ಧಿಯೆಲ್ಲಾ ಕಳಕೊಂಡಿ ||ಪಲ್ಲವಿ||

ಜನರು ಆಡದು ಕೇಳಿ |

ಕಿಂವಿಗಿ ಕೈ ಹಚಕೊಂಡಿ |

ಕಣ್ಣಾರೆ ಕಂಡಿದರೆ |

ಐಕ್ಯ ಸ್ಥಲದೊಳು ಉಂಡಿ |

ಕೈಯ ಸಿದ್ಧಾಂತ ಬಾಯಿ ಚಿಲಮಿದೊಳು |

ಮಾಯಿ ಬೆಂಕಿ ಹೇರಿಕೊಂಡಿ |

ಸೈ ಎಂಬೋ ಹೊಗಿ ಎಳಕೊಂಡಿ |

ಮೈಪನದ ಕಣ್ಣಿ ಬಿಟಕೊಂಡಿ ||1||

ಬ್ಯಾಡ ಬ್ಯಾಡ ಅಂದರೆ |

ರೇವಯ್ಯ ಸ್ವಾಮಿಗಿ ಇಟಕೊಂಡಿ |

ಆರೋಢ ಆಚಾರ |

ಎರಡು ನೀನು ಕಳಕೊಂಡಿ |

ಲಿಂಗಮಯನಾಗಿ ಸಂಗನ ಶರಣರ |

ಸೇವಾದೊಳು ದುಡಕೊಂಡಿ |

ಭವದೊಳು ಚಲ್ಲಿದಿ ಬಂಡಿ |

ಸಿಕ್ಕಿ ಬಿದ್ದಿ ಶಿವಪುರ ಗಂಡಿ ||2||

ಸೇದಿದರೆ ನೀನೆ ಸೇದು

ಮತ್ತೊಬ್ಬರ ಕೂಡಿ ಕೊಂಡಿ |

ಹಾದಿ ಬೀದಿಯ ಮುಳ್ಳು |

ಆಯಿದು ಕೂಲಿಯ ತೊಕೊಂಡಿ |

ಖಮ್ಮಾಗ ಹೊಗಿ ನುಂಗಿ ಖೆಮ್ಮೆ ಹಚ್ಚಿಕೊಂಡಿ |

ಬ್ರಹ್ಮಗ ನೀ ಬೈಕೊಂಡಿ |

ಸುಮ್ಮನೆ ತಗಲ ನೀ ಹಚ್ಚಿಕೊಂಡಿ |

ತಮ್ಮ ಆಡ ಮಾಡ ಆಡಕೊಂಡಿ ||3||

ಚಿಲಮಿ ಸೇದಿ ಎಂಕಮ್ಮನವರು |

ಕಟಿಕೊಂಡರು ನಿರ್ಗುಣ ದಂಡಿ |

ಒಲಮಿ ಆಗಿ ಕಲಮಿಲಿ ಬರಿದು |

ಏಳೆಂಟು ಪದ ನೀ ಓದಕೊಂಡಿ |

ಇನ್ನೊಮ್ಮೆ ಸಿದ್ಧಾಂತ ಸೇದದಕ |

ಭವದೊಳು ಬರಗೊಡ ಬ್ಯಾಡ ಚಾಮುಂಡಿ |

ಸಾಕಾಯಿತು ಮಠಾ ಹೆಂಡಿ |

ಬೇಕಾಗಿಲ್ಲ ಸಿದ್ಧಹಂಡಿ |

ಚಲತಿ – ಬಿಗದ ಇಟ್ಟ ಚಿಲುಮಿ ಸೇದಿದಳೋ |

ಬೆಂಕಿ ಹತ್ತಿದರೆ ಆರಸಿದಳೊ ||

ಅಣ್ಣಾ ನೀನು ಹಿಟ್ಟ ಬೂದಿ ಒಂದ ಅನಬ್ಯಾಡಯ್ಯ |

ಕಣ್ಣು ಇದ್ದೂ ಕುರುಡನಂತೆ ಸವರಬ್ಯಾಡ ಕೈಯಾ ||ಪಲ್ಲವಿ||

ಕತಲಾಗ ಕುರುಡ ಹೊಂಟ ಕಂದಿಲ ಹಚಕೊಂಡ |

ಮತಲಪ ಕೇಳಿದ ಒಬ್ಬ ಅವನ ಸಾಜ ಕಂಡ |

ಬಣ್ಣ ರೂಪ ಕಾಣಲದು ನಿನಗ ಬೆಳಗ ಏನು ಉಪಾಯಾ ||1||

ಕಣ್ಣು ಇದ್ದು ಫಲವೇನಯ್ಯಾ ನೋಡದೆ ಆಡುವನು |

ಹೆಣ್ಣ ಹೊನ್ನು ಮಣ್ಣಿನ ಮದವು ಸೊಕ್ಕಿ ಝುಲ್ಲಸುವನು |

ಕರುಣ ಇಲ್ಲ ಆತ್ಮದೊಳು ಮೇಲೆ ಬೀಳುವರಯ್ಯಾ ||2||

ಹಂತವರಿಗಿ ಕಾಣಲೆಂದು ಕಂದಿಲ ಬೇಕಯ್ಯಾ |

ಶಾಂತ ಕೇಳು ಕಿಂವಿಲಿ ಕೇಳಿ ಮುಚಕೊಂಡ ಬಾಯ |

ಹಿಂಥಾ ಸುಜ್ಞಾನಿಗೆ ನಮ್ಮ ಸಿದ್ಧ ಶರಣಯ್ಯಾ ||3||

ಚಲತಿ – ಕೇಳಿ ಕೇಳಿ ಕಿವಡ ದೂರ ಆದನು |

ಹೇಳಿದ ಕೇಳಿ ಉಬ್ಬಿದಂವ ಕುರುಡಾದನು ||

ನಡತಿ ಬಿಟ್ಟು ಬೇನಡತಿ ನಡೆದರೆ |

ಝಡತಿ ಕೇಳಂವ ಯಮ ಬೇರುಂಟು |

ಅಡತಿ ದುಕಾನದೊಳು ದುಡತಿ ಸಾವಿರ |

ಇಟ್ಟು ಲಕ್ಷ ಬಳಸದು ಜ್ಞಾನವುಂಟು ||ಪಲ್ಲವಿ ||

ಹೊರಗ ಹಿರಿಯರಂತೆ ನುಡಿಯಾ |

ಒಳಗೆ ಕಿರಿಯರಂತೆ ನಡಿಯಾ |

ಸ್ವರ್ಗ ಒಂದು ಏರಿಲ್ಲ ಛಿಡಿಯಾ |

ಕಾಣೆನಂತಿ ಮೇಲಿನ ಒಡೆಯಾ |

ಅತ್ತಾ ಇತ್ತಾ ಸಂಸಾರ ಮಾಡಿ |

ಕಟ್ಟೇನಂತಿ ಮದಗಳು ಎಂಟು |

ಖರೇ ಮಾತಿಗಿ ಯಾತಕ ಸಿಟ್ಟು ||1||

ಇಪ್ಪತ್ತೊಂದು ಸಾವಿರ ಆರನೂರ |

ಜಪಾ ತನ್ನೊಳು ತಾ ಆಗತೈತಿ |

ಮತ್ತೊಂದು ಯಾವುದು ಎಣಿಸುತ ಕುಂತಿ |

ಯಾವುದು ಬಿಡತಿ ಯಾವುದು ಹಿಡಿತಿ |

ತತ್ವಜ್ಞಾನ ಬಂದವರಿಗೆ ಸಿಗುವದಯ್ಯಾ |

ಶಿವನ ನಂಟು ಸುಳ್ಳೇ ತಿರುಗಿ ಹೈರಾಣ ಒಟ್ಟು ||2||

ಮೂರದಿಂದ ಧೋರಿ ಯಾತಕೆ |

ಆರು ತಿಳಿಯದೆ ಸಾಧು ಯಾಕೆ |

ಗರ್ವಿನಲ್ಲಿ ಮೆರಿವುದ್ಯಾಕೆ |

ನರಜಲ್ಮಾ ಬಾ ತಿಳಿಲಿಕ್ಕೆ |

ಸಾತಿ ಮಳಿ ಸಮುದ್ರ ಮ್ಯಾಗೆ |

ಬಿದ್ದರೆ ಮುತ್ತಾದುದು ಉಂಟು |

ಬೇಕಾದರೆ ಓದ ಏಳ ಎಂಟು ||3||

ನಮದು ನಿಮದು ಯಾತಕ ನಡತಿ |

ಖಮ್ಮಗ ಉಂಡು ಬೊಗಳದು ಜಾಸ್ತಿ |

ಒಮ್ಮನ ಹಾಲ ಕೊಂಡು ಮನಪೂರ್ತಿ |

ಇಮ್ಮನ ಕೀರ್ತನ ಹೇಳುತ ಕುಂತಿ |

ಸೂಪ್ಪಿ ತುಂಬಿ ಅಡತ್ಯಾಗ ಇಟ್ಟಿ |

ಇಬ್ಬರು ಹೋದರು ಕತಲಾಗ ಹೊಂಟು |

ಹೊಯ್ತು ಬಂತು ಸಿದ್ಧನ ಗಂಟು ||4||

ಚಲತಿ – ನಿಂದ್ಯಾ ಆಡುವನು ಹಂದಿ ಖರೆ |

ಸಂಧ್ಯಾ ಮಾಡುವನು ಸಾಧು ಖರೆ||

ಸತ್ಯಸಂಗ ಪಿಡಿರಿ ಭವ ಗೆದ್ದು |

ತಾ ಸತ್ತಂಗ ಇದ್ದು ||ಪಲ್ಲವಿ||

ಕರ್ಣ ಕೇಳಿ ಕಿವುಡನಂತೆ |

ಕಣ್ಣ ಕಾಣಿ ಕುರುಡನಂತೆ |

ಸಣ್ಣ ಬಾಯಿಲಿ ದೊಡ್ಡ ತುತ್ತು ಬಿದ್ದು ||1||

ರಾಮ ರಹೀಮ ಭೇದ ಇಲ್ಲದಂತೆ |

ನೇಮ ನಿಷ್ಠಿ ಸಿಗುವದಂತೆ |

ಸಂಗಮ ಗುಂಡಾ ಸಿದ್ಧಾ ಮುಣಗಿ ಗೆದ್ದು ||2||

ಕೈ ಚಾಗಿದವರು ಬಾಯಿ ಬಲ್ಲಂಗ |

ಮನಬಲ್ಲಂಗ ಮಾತಾಡುವರು ಹಂಗ ಹರದಂಗ ||ಪಲ್ಲವಿ ||

ಎಷ್ಟೋ ಯೋನಿ ತಿರುಗಿ ಬಂದೇವು ಇಲ್ಲಿತನಕ |

ಮನುಷ್ಯ ಜಲ್ಮಕ ಬಂದೇವು ಈಗ ಈ ಭವಕ |

ಅರುಹು ತಪ್ಪೆತು ಮಾಯಾ ಕನಸು ಬಿದ್ದಂಗ ||1||

ಯಾರು ಕೆದರಿ ಇಟ್ಟಾರು ಭೂಮಿದೊಳು ಗಂಟ |

ಯಾರು ತೊಗೊಂಡು ನಡೆದರೆ ತನ್ನ ಸಂಗಟ |

ಪರ ಉಪಕಾರಕ ಮನವಿಲ್ಲ ಭವರಂಗ ||2||

ಈ ಮಾಯಾ ಮೆಚ್ಚಿ ಹಿರಿಹಿಗ್ಗಿ ನಗುವೋದಲ್ಲ |

ಈ ಮನುಷ್ಯ ಜಲ್ಮ ಬಾರಬಾರ ಬರುವೋದಲ್ಲ |

ತತ್ವ ತಿಳಿವಲ್ಲದೇ ಇರುವದೇನು ಸತ್ತಂಗ ||3||

ಸುಂದರ ಜ್ಯೋತ ನೋಡಿ ದೀಪಕ ಹುಳ ಮುದ್ದು ಕೊಟ್ಟಂಗ |

ಉಂದಿರ ಚುಂವ್ ಚುಂವ್ ಎಂದು ಮಾಯಕ ಬಿದ್ದು ಬೆಕ್ಕಿಗಿ ಕರದಂಗ |

ಬಡವಗ ಹಳಿದಾಡಿ ನುಡಿ ಯಮನ ಕೈಯಾಗ ಸಿಕ್ಕಂಗ ||4||

ಸಾಷ್ಟಾಂಗ ನಮಸ್ಕಾರ ದೇವಿದಾಸಂದ |

ಅಷ್ಟಾಂಗ ಕವಿಯಲ್ಲಾ ದೇವಿ ದಯದಿಂದ |

ನಾದ ಬ್ರಹ್ಮವಿಲ್ಲದವ ನಕ್ಕ ಮನ ಬಲ್ಲಂಗ ||5||

ಚಲತಿ – ಜನರ ಹಂಗ ಬಿಟ್ಟವ ಸಾಧು |

ಸಜ್ಜನರ ನಿಂದಕ ಮಹಾ ಬೋಧು ||

ಮೋಂ ಪಾಹಿಯೋ ಮೋಂ ಪಾಹಿಯೋ ಮೋಂ ಪಾಹಿಯೋ ||ಪಲ್ಲವಿ||

ಮತ್ತ ಮಾಡೋ ನೀನು ಉತ್ತಮರ ನಿಂದ್ಯವು |

ಸೋತೊಮ್ಮೆ ಕುಂತೇನು ಸಿದ್ಧ |

ಸದ್ಗುರು ರೇವಯ್ಯ ಸ್ವಾಮಿ ಚರಣಕೆ ಬಿದ್ದ |

ಸಕಲಮತ ದೇವರ ಸೇವಕ ಇದ್ದ|

ಸ್ವಧರ್ಮ ಧಂದೆಕ್ಕೆ ನಿಂದ್ಯಾ ಆಡುವರೆಲ್ಲಾ |

ತಿಂದಂತೆ ಹಾದಿ ಹಣಾದಿ ಮದ್ದ ||1||

ಸಾಧನವಿಲ್ಲಿಲ್ಲ ಸಾಧುರ ಆಗ್ಯಾರ |

ಮಾದಿಗರ ಗುಣ ನಡೆದು ಬದ್ಧ |

ಇನ್ಯಾರ ಅನಬೇಕು ಇವರಿಗಿ ಗೆದ್ದ |

ನಾನೇ ಎಂದು ತಿರುಗ್ಯಾಡಿ ತಿಂಬ ಹದ್ದ |

ಕರ್ಮ ಕೈಯಾಗ ಹಿಡಿದು ಬ್ರಹ್ಮ ಅನುವರು ಥೇಟ |

ಪೋತರಾಜ ಕುರಿಗಿ ಕೊಟ್ಟಂಗ ಮುದ್ದ ||2||

ನಿಂದ್ಯಾ ಆಡುವ ನೀನು ಹಂದಿ ಮನುಜ ಕೇಳೋ |

ನಾಯಿ ನ್ಯಾಲಗಿ ಮಾಡಿದಂಗ ಜಿದ್ದ|

ನಿಂದ್ಯಾ ಆಡಲಿಕ್ಕೆ ಬಿಗಿತಾರೇನು ಸಿದ್ಧ |

ಸಿದ್ಧ ಸೇದಿದ ಬಾಯಿ ಇರು ಸುದ್ದ|

ಮಾದಾರ ಚೆನ್ನಯ್ಯನ ತಿಪ್ಪ್ಯಾಗಿನ ಹಳಿ ಮೆಟ್ಟಲಿ |

ಹೊಡಿಬೇಕು ನಿಮಗ್ಯಾರು ಬದ್ಧ ||3||

ಉಪಕಾರಿ ಭಕ್ತಗೆ ಅಪಕಾರ ಮಾಡುವ ನಿಂದ್ಯಾ |

ನಿಂದ್ಯಾ ನೀಚನ ಮೈಯೆಲ್ಲಾ ಖೋಚಿ |

ಅವನಿಗಿ ಬೇಕಪ್ಪ ಯಮನರ ಬಾಚಿ |

ಕತ್ತಿಗಿ ಲತ್ತಿಪೆಟ್ಟುಬೇಕಪ್ಪ ಗಚ್ಚಿ |

ತಿರುಕ ಮನುಜ ನೀನು ಮುರಕ ಮಾಡಿ ಹಾಡಿದರೇನು |

ಹರಕನಿಗಿ ಹಾಕರಿ ಕಟಗಿಲಿ ಹಚ್ಚಿ ||4||

ಇನ್ನೊಮ್ಮೆ ನಿಂದ್ಯಾ ಮಾಡು | ಕೊಡುವೆನು ಸಹಸ್ರಾಣಿ |

ಕೂಲಿ ಭರತಿ ಆಳ ತೊಕೋ ಚೌದ |

ಮೊದಲಿನ ಪಂಕ್ತಿಗಿ ಉಂಡ ಹೋಗೊ ಮುಗದ |

ನಿಂದ್ಯಾ ಆಡಲಿಕ್ಕೆ ಉಸರ ಬೇಕೊ ಬೈದ |

ಸ್ವಧರ್ಮ ಧಂದೆಕ್ಕೆ ನಿಂದ್ಯಾ ಮಾಡುವರೆಲ್ಲಾ |

ತಿಂದಂತೆ ಹಾದಿ ಹಣಾದಿ ಮದ್ದ ||5||

ನೀ ಒಬ್ಬ ನಿಂದ್ಯಾ ಮಾಡಿ ಎಷ್ಟ ಹಾದಿಗಿ ಮುಳ್ಳ ಹಚ್ಚಿ |

ಲೆಕ್ಕಿಲ್ಲದ ಹಾದಿ ಬಿದ್ದವ ಮೂರ್ಖ |

ವಿನಾಶ ಕಾಲಕ್ಕೆ ವಿಪರೀತ ಬುದ್ಧಿ ಕೊಳಕ |

ನಿನ್ನಂತವರು ಎಷ್ಟು ಮಂದಿ ಹೋಗಿದರು ಹಳಕ |

ನಿಮ್ಮಂತ ಅಜ್ಞಾನಿಗಿ ವೈರಾಗ್ಯ ಎಲ್ಲಿ ಉಂಟು |

ವೈರಾಗ್ಯ ಬಲ್ಲವಾದ ಮೂಕ ||6||

ಜಾತಿ ಧರ್ಮ ಬಿಟ್ಟು ಅಜಾತ ಅಂತ್ಯ ತಿರುಗಿ |

ತಿನ್ನಬಾರೋ ಬಾಯಿ ಬಲ್ಲಂಗ ರುಚಿ |

ಮಾರಿ ಮೈಯೆಲ್ಲಾ ಪುಕಸಟೆ ಬೂದಿ ಹಚ್ಚಿ |

ಸೈರ ದನ ತಿಂದಂಗ ಮಂದಿ ಭಣವಿ ಹಚ್ಚಿ |

ಉಂಡ ಗಂಗಾಳದೊಳಗ ಉಗಳ ಹೇಜಿತರಿಗೆಲ್ಲಾ |

ಶಿವನ ಆಣಿ ನಾಯಿ ಹೊಯ್ತದ ಉಚ್ಚಿ ||7||

ಆಡ ಮುಟ್ಟದ ಬೆಳ್ಳಿ ಆಡಿನ ಮುಂದ ಹಾಕಿದಂತೆ |

ನಿನ್ನ ಮಾತು ಅವರಿಗೆಲ್ಲಾ ರುಚಿ |

ಲಂಗೋಟ ಹಾಕಿದಿ ಎಲ್ಲಿ ಮನ ಮೆಚ್ಚಿ |

ಗಂಜಾಟ ಆಗಿದಿ ಕಂಡಲ್ಲಿ ಕೈ ಚಾಚಿ |

ಉಂಡಮನಿ ಗಳ ಎಣಿಸಿ ಉಂಡ ಮನಗ್ಯಾ ಸಾಧುಗ |

ಹೊಡಿಬೇಕು ಎಣ್ಣಿ ತೊಯ್ಸಿ ಉಚ್ಚಿ ||8||

ಸತ್ವ ತನ್ನಲಿ ಇಲ್ಲ ತತ್ವದ ನೆಲಿವಿಲ್ಲ |

ಬಲ್ಲೆನೆಂದರು ವೇದ ಶಾಸ್ತ್ರ |

ಮೂಲ ಗುರುತೆಯಿಲ್ಲ ಗುರುವಿನ ಸ್ತೋತ್ರ |

ಗುಲ್ಲ ಮಾಡಿ ಮಾಡಿ ಬೋಗುಳ ಹೇಜಿತರು |

ತಾಯಿ ತಂದಿಗಿ ತಿಳಿದಿಲ್ಲ ಅಕ್ಕ ತಂಗಿಯರ ಗುರುತಿಲ್ಲ |

ನೀಚ ಗುಣ ಲುಚ್ಯರು ಅಜಾತ್ರೋ ||9||

ಒಳ್ಳೆಯವರ ಮಾತು ರವಿ ಪ್ರಕಾಶ ತೇಜವು |

ಕಳ್ಳಗೆ ಬೆಳದಿಂಗಳ ಯಾತಕ |

ಒಳ್ಳೆ ಜ್ಞಾನಿಯ ಉಪದೇಶ ಯಾತಕ |

ನಿಂದ್ಯಾಡ ಮುಕಡ್ಯಾಗ ನಿಲಗನ್ನಡಿ ಯಾತಕ |

ಕೋಣಿನ ಮ್ಯಾಲ ಉಪ್ಪಹೇರಿ ನೀರಿನ ನೆಲಿಯಿಲ್ಲದೆ |

ತೊರಿಯಾಗಿಂದು ಬರುತ್ಯಾಂಗ ಹೊರಕ ||10||

ಸೇತು ಸಮುದ್ರ ಮ್ಯಾಲೆ ಸಾತಿಯ ಮಳೆ ಬಿದ್ದರ |

ಮುತ್ತು ಹುಟ್ಟುವದು ಸಿಂಪಿ ಭರತಿ |

ಹಳ್ಳ ತೊರಿ ಮ್ಯಾಲ ಮಳಿ ಬಿದ್ದರ ಸಾತಿ |

ಮುತ್ತು ಹುಟ್ಟುದಿಲ್ಲ ಕಪ್ಪಿ ಹುಟ್ಟುವುದು ಕೋತಿ |

ಗರತಿ ಸ್ತ್ರೀಯಳಿಗೆ ಪತಿ ಬಿಟ್ಟು ಗತಿಯಿಲ್ಲ |

ನಿಂದಕನಿಗೆ ಯಾಕ ಬೇಕೋ ಸೋಬತಿ ||11||

ಬೆಂಕಿ ಮನುಜರು ಕೂಡಿ ಕರಕಿ ಹೊಲದಗ ಬೆಳಸಿ |

ತಸೀಲ ಯಾಳ್ಯಾಕ ಕದ್ದ ಕುಳಿತಂತೆ |

ಕುಂಟ ಕುರುಡರಿಗೆ ಹಳ್ಳವಿದ್ದಂತೆ |

ನಿಂದ್ಯಾ ಆಡುವರು ಖಮ್ಮಗುಂಡು ಖೈಯಂತೆ |

ಮಳ್ಳ ಸಾಧುನ ಬಲ್ಲಿ ಕಳ್ಳ ಸುಳ್ಳ ಕುಡಕರು |

ಹೋಗುವರು ಯಮಪುರ ಬಾಧಿ ಹೋದಂತೆ ||12||

ಎಲ್ಲರಲ್ಲಿ ಇರುವದು ಈ ಲಿಂಗ |

ಏ ಹುಚ್ಚಮಂಗ |

ಹೊಲಸು ಜನರು ಬಹಳ ಲಿಂಗವ ಕಟ್ಟಿ |

ಹೊಲಿಯರಿಗಿ ಅಂತಿರಿ ದೂರಿಂದ ಮುಟ್ಟಿ ||ಪಲ್ಲವಿ||

ನೀವು ಹುಟ್ಟಿರಿ ಹೆಂತಾ ಊಚಿ |

ಬರುವ ದಾರಿಗಿ ಹೊಯ್ದಾರೊ ಉಚ್ಚಿ |

ಸರಕಾರ ಕೇಳತಾರ ಕಿಟಕಿಟಿ ಹಚ್ಚಿ |

ಶಿವ ಶಿವ ಅಂತಿರಿ ಕಣ್ಣ ಮುಚ್ಚಿ ||1||

ಅಟ್ರ ಜಾತಿ ನೀವು ಬ್ಯಾರೆ ಹುಟ್ಟಿ |

ಕುಲ ಯಾವುದು ತೋರಿಸು ಮುಟ್ಟಿ |

ಕೇಳಿ ಬಾ ನಿನ್ನ ಗುರುವಿನ ಗಟ್ಟಿ |

ಸಂತರ ಭಜನೆಗೆ ಹೊಡಿತಾರ ಕಟ್ಟಿ ||2||

ಸುಳ್ಳೆ ಮಾಡುತಿರಿ ಮ್ಯಾಲಿನ ಢೊಂಗ |

ಗುರು ಕೊಟ್ಟಿಲ ಅಂತಿರಿ ಲಿಂಗ |

ರಾಮನ ಎದಿಯೊಳು ಆತ್ಮದ ಲಿಂಗ |

ಮಾರುತಿ ತೊಕೊಂಡು ಹೋಗಿರು ಹ್ಯಾಂಗ ||3||

ಕರಬಸಪ್ಪ ಹುಡುಗಿಯ ಊರಾ |

ಪೂಜಿ ಮಾಡಿದನು ಭೀಮಶಂಕರಾ |

ಲಿಂಗ ಕಟ್ಟಿರೋ ರೇವಪ್ಪನವರಾ |

ಕೈಲಾಸಕ ಒಯ್ದಾರ ಸಿದ್ಧನ ತೇರಾ ||4||

ಸತ್ಯ ಶರಣರ ಸತ್ವದ ಮಾತು |

ಕೇಳಿದವನೇ ಭಕ್ತ ||

ನಿತ್ಯ ಶ್ರವಣ ಮನನ ಮಾಡಲಿಕ |

ಆಗಬೇಕು ಮುಕ್ತ ||ಪಲ್ಲವಿ||

ಮಾನವ ಜಲ್ಮಕ ಬಂದ ಬಳಿಕ |

ಗುರು ಉಪದೇಶ ಪಡಿಬೇಕು ||

ಪಡದ ಬಳಿಕ ಸಂಸಾರದೊಳು |

ನುಡದಂಗ ನಡಿಬೇಕು ||1||

ಪ್ರಥಮ ವಂದನ ಮಾಡಿ ಹೇಳುತಿನಿ |

ಪರ ನಿಂದ್ಯ ಬಿಡಬೇಕು |

ಭಕ್ತ ಉತ್ತಮ ತಾನಾದ ಮೇಲೆ |

ಬಾಗಿ ನಡಿಬೇಕು ||2||

ತತ್ವಜ್ಞಾನ ತನ್ನಲ್ಲಿ ಇದ್ದರೆ |

ಡಾಂಭಿಕ ಹೇಳದು ಸಾಕು |

ಮಹಾತ್ಮರ ವರ್ಣ ಮಾಡಿಕೊಂಡು |

ನಿಜ ಧ್ಯಾಸದೊಳಗ ಇರಬೇಕು ||3||

ಅಗ್ನಿ ಚಕ್ರದೊಳು ಪುನರ ಪುನಃ |

ಜಲ್ಮಾ ಜಲ್ಮಾ ಸುಟ್ಟು |

ಐವತ್ತು ಹನ್ನೆರಡು ದಳ ಏರಲಕ |

ಮುಂದ ಏಸೋ ಫಾಟು ||4||

ನಿರ್ವಿಕಾರ ನಿರ್ಗುಣ ಬ್ರಹ್ಮನು |

ಸಗುಣ ರೂಪ ತೊಟ್ಟು |

ತ್ರಿಕೂಟ ಸಂಗಮ ನೋಡಿಕೊಂಡು |

ಮುಂದ ಆಗ್ಯಾರೋ ಸ್ವಾದಿಷ್ಠ ||5||

ಮುದ್ರದ ಕುದರಿ ಮೇಲೆ ಕುಂಡ್ರಲಕ |

ಸಂಗಬೇಕು ಶ್ರೇಷ್ಠ |

ಭದ್ರಗಿರಿಯು ಹೋಗಿ ಬಂದ ಶಂಕರಲಿಂಗ |

ಕಟಗಿ ಕುದರಿ ಆಗೋ ||6||

ಬೇರೆ ಬೇರೆ ರಂಗ ನೋಡುತ ಹೊಂಟರ |

ಮಣಿಪುರ ಬಿಟ್ಟು |

ಎರಡು ನಾಸಿಕದಿಂದ ಸ್ವಯಂ ಬ್ರಹ್ಮನು |

ಗಾಯಿಸಿದ್ಧ ಹೊಂಟ ||7||

ಶಕ್ತಿ ಪೂಜಿ ಮಾಡಬೇಕಣ್ಣ |

ಭಕ್ತಿ ಎಂಬ ರಥದ |

ಶಕ್ತಿ ಪೂಜಿ ಮಾಡು ಬೇಕಣ್ಣ |

ಯುಕ್ತಿಲಿಂದೆ ಸಿದ್ಧಿ ಮಾಡಿ |

ಸತ್ಯಲಿಂದೆ ಚಿತ್ತವಿಟ್ಟು |

ಕ್ರಿಯಾಶಕ್ತಿ ಪೂಜೆ ಮಾಡಣ್ಣ ||ಪಲ್ಲವಿ||

ಅರು ಕುರಿಗಳು ಹೊಡಿಯಬೇಕಣ್ಣ |

ಆ ಮಹಾದೇವಿಗಿ |

ಎಂಟು ಕೋಣ ಕಡಿಯಬೇಕಣ್ಣ |

ಭಂಟನಾಗಿ ಕಾಟ ಮನಸಿನ |

ಟೊಂಕ ಮುರಿದು |

ಗಂಟ ತೊಕೊಂಡು ಗಂಡಿ ದಾಟಣ್ಣ ||1||

ಏಳು ಕೋಳಿ ಸೀಳಿ ಹಾಕಣ್ಣ |

ಅವು ಮೂರು ಮಂದಿನ ಬಾಳಿ ಹಾಕಣ್ಣ |

ಧೈರ್ಯಲಿಂದೆ ಶೌರ್ಯ ಮಾಡಿ |

ತಿರುಗಿ ಜಲ್ಮಕ ಬಾರದಂತೆ |

ಆರು ಅಳಿದು ಮೂರು ತಿಳಿದು |

ಕ್ರಿಯಾಶಕ್ತಿ ಪೂಜಿ ಮಾಡಣ್ಣ ||2||

ಆರು ಮಂದಿಯ ಕಾವಲಿಡೋಣ |

ಅವರು ಐದು ಮಂದಿ |

ಪಂಚದವರ ಖೂನ ಹಿಡಿಯಣ್ಣ |

ಹತ್ತು ಮಂದಿಯ ಗೊತ್ತು ಮಾಡಿ |

ಕತ್ತಲೆಂಬ ಕಾಡಿಗೆ ಹಾಕಿ |

ಸತ್ವದಲ್ಲಿ ಕೂಡಿಕೊಂಡು |

ಕ್ರಿಯಾಶಕ್ತಿ ಪೂಜಿ ಮಾಡಣ್ಣ ||3||

ಸಿದ್ದೇಶ್ವರ ಒಳಗೆ ಹಾರಣ್ಣ |

ಶಿವ ಸಿದ್ದಲಿಂಗ |

ಪೂಜಿ ಮಾಡಿ ವರವು ಬೇಡಣ್ಣ |

ದಾಸ ಶಾಂತನು ಸೋಸಿ ಹೇಳಿದ |

ಈಶ ಬಸವನು ಕೂಸನಾಗಿ |

ಖಾಸ ಸಾಂಬನ ಧ್ಯಾಸವಿಟ್ಟು |

ಶಕ್ತಿ ಪೂಜೆ ಮಾಡಬೇಕಣ್ಣ ||4||

ಹೋಗೀರೇನಪ್ಪ ಶ್ರೀಶೈಲ ಜಾತ್ರಿ |

ಕಾಣಿರೇನಪ್ಪ ಕಣ್ಣಿಲಿ ಖಾತ್ರಿ |

ಕಳಸಕ ಮುಂಡಾಸಿ ಸುತ್ತುವನು ಶಾಸ್ತ್ರಿ |

ಆಶಕನ ನಿಗಾಕ ಬಿತ್ತುರಿ ||ಪಲ್ಲವಿ||

ಬಲಕಿನ ಮಾರ್ಗ ಹಿಡಿದು ಹೋಗಿದ ಒಮ್ಮ |

ಜಳಕ ಮಾಡಿಕೊಂಡ ತ್ರಿವೇಣಿ ಸಂಗಮ |

ಏಳಕೊಳ್ಳ ಏರಿ ಏರಿ ಇಳದಾ |

ಪಾತಾಳ ಗಂಗಿಗೆ ಹೋದನಪ್ಪ ಹಾಯ್ದಾ |

ಲಿಂಗದ ಹೊಳಿಕಂಡು ಭಾಳ ಬೆರಗಾದ |

ನಾಕ ದಳದ ಪತ್ರಿ ಅಲ್ಲಿ ಕಡಿದಾ ||1||

ಆರು ಬೆಟ್ಟ ಏರಿ ಕಮರಿ ಮಠಕ |

ಅಮೃತಗುಂಡ ನೋಡಿ ಬಂದ ಮಣಿಪುರಕ |

ನಿಜಗುಣ ಆರಾಧ್ಯರ ಸ್ಥಳಕ |

ಸಹಜ ಕಂಡ ಬಾರಾ ಜ್ಯೋತಿರ್ಲಿಂಗ ಬೆಳಕ |

ಸೋಳ ಸಿಂಹಾಸನದ ಮಾಲೀಕ |

ಅಳುವರು ಇಬ್ಬರೆ ತ್ರಿಲೋಕ ||2||

ಸಾವಿರ ಪ್ರದಕ್ಷಿಣ ಮಲ್ಲಯ್ಯನ ಸುತ್ತ |

ಹಾಕಿದವರಿಗೆ ಮಾತ್ಮವು ತಿಳತ |

ಮುಂಡಾಸೆ ಸುತ್ತದು ಕಾಣೆ |

ಎರಡ ಖಿಡಕಿಲಿ ಬಂದ ಈ ಓಣಿ |

ಕಾಯಾಪುರದೊಳು ಶಿವಪುರ ವಾಣಿ |

ಸಿದ್ಧ ಕಾಣಿದ್ರೆ ಹೇಳ ನಿರ್ಗುಣಿ ||3||

ಚಲತಿ – ಕಾಯಾಪುರದೊಳು ಮಲ್ಲಯ್ಯ ಕಂಡ |

ಮಾಯಾಪುರದೊಳು ಮೆರೆಸಿದ ಝಂಡಾ ||

ಬಸವಣ್ಣ ಇರೋಸ್ಥಳ ಕಲ್ಯಾಣ |

ದರ್ಶನಕ ನಡಿ ಮಿತ್ರ ಹೋಗೋಣ ||ಪಲ್ಲವಿ||

ಇಕೋ ಜ್ಞಾನದ ಪಾಗದ ಕುದರಿ ಬಿಡೋಣ |

ಅಕೋ ರಾಮ ಬಂದ ಮೂಗರು ಕಲ್ತು ಹೋಗೋಣ |

ಸಾಕೋ ಮುದ್ರದ ಕುದರಿ ದೌಡ ಹೊಡಿಯೋಣ |

ಏಕೋ ಭಾವದಿ ತ್ರಿಪುರಾಂತ ಸ್ನಾನ ಮಾಡೋಣ ||1||

ಅಕ್ಕ ನಾಗಮ್ಮನ ಗವಿ ಇದೇ ಆಧಾರ ಪಟ್ಟಣ |

ಚಿಕ್ಕಚೆನ್ನ ಬಸವ ಇರೋ ಸ್ಥಲ ಸ್ವಾದಿಷ್ಟ ಪಟ್ಟಣ |

ನಿಕ್ಕ ನೀಲಮ್ಮನ ಪೂಜಿಯ ಮಣಿಪುರ ಸ್ಥಾನ |

ಲೆಕ್ಕ ಕುಂತಾರ ಬಾರ ಋಷಿ ಅನಾಹತ ಸ್ಥಾನ ||2||

ಸೋಳ ಬ್ರಹ್ಮನಿಷ್ಟ ಮುನಿ ಕುಂತಾರ ರುದ್ರ ಓದದಕ |

ಎರಡ ಮೋರಿ ಬ್ರಹ್ಮಗ ಹಾಲ ಎರಿವದಕ |

ಸಾವಿರ ಚಂದ್ರಗಳು ಬಸವನ ಮುಂದ ಬೆಳಕ |

ಮೂಗರು ಕೂಡಿ ಹೋಗಿ ಬಂದೇವು ಕಲ್ಯಾಣಕ ||3||

ಕಲ್ಯಾಣ ಮಹಿಮ ಕೈಲಾಸನಾಥ ಬಲ್ಲ |

ಸ್ವರ್ಗ ಮತ್ರ್ಯ ಪಾತಾಳ ಬಸವಲೀಲಾ |

ನಿಮ್ಮ ನಾಮ ಮರಿಲಾರೆ ಜಗಪಾಲಾ |

ಚತುರ ಧ್ಯಾನ ದೇವಿದಾಸ ನಿಮ್ಮ ಖ್ಯಾಲಾ ||4||

ಚಲತಿ -ಬಸವ ಸ್ಥಲ ಇದು ಕೈಲಾಸ |

ಭಜನ ಮಾಡುವರಿಗೆ ಉಲ್ಲಾಸ ||

ಶ್ರೀಗುರುವಿನ ಆಶ್ರಮಕ ನಡಿರಿ |

ಗುರು ಷಣ್ಮುಖ ಸ್ವಾಮಿ ಪಾದ ಹಿಡಿರಿ |

ವರ ಬೇಡಲಕ ಸ್ವಲ್ಪ ನೀವು ತಡಿರಿ |

ನರ ಜಲ್ಮಕ ಬಂದು ಖರೇ ದುಡಿರಿ ||ಪಲ್ಲವಿ||

ಬಾರ ಬಾರ ಬರುದಿಲ್ಲಾ ಈ ನರಜಲ್ಮಾ |

ಬಲ್ಲ ಗುರುವಿನಿಂದ ಕಾಣು ಪರಬ್ರಹ್ಮ |

ಲಕ್ಷ ಚೌರ್ಯಾ ಐಂಸಿ ಇಟ್ಟಾರ ಖಾನಿ |

ಲಕ್ಷ ಇಟ್ಟಿದ್ರು ಹೆಚ್ಚ ನರ ಯೋನಿ |

ಮೋಕ್ಷ ಪಡಿಲೇಬೇಕು ಗುರುಮನಿ |

ಸಾಕ್ಷ ಷಣ್ಮುಖ ದೇವರ ಅರಮನಿ ||1||

ಶಾಂತ ಬುದ್ಧಿ ಸದ್ಗುಣವಂತ ತಂದಿ |

ಏನಂತ ವರ್ಣಿಸಲಿ ಕೈಲಾಸ ನಂದಿ |

ಪರಮಾತ್ಮನ ವರಪುತ್ರ ಗುರುವೆ |

ಪರಾತ್ಮ ತಿಳದಂತ ಮನವೆ |

ಪಶ್ಚಿಮ ಪ್ರಕಾಶ ಜ್ಯೋತಿಯುಳ್ಳ ಧನವೆ |

ನಿಮ್ಮ ನಾಮಸ್ಮರಣಿ ಉದ್ಧಾರವೆ ||2||

ತನು ಮನ ಧನ ಗುರು ನಿಮಗರ್ಪಣ |

ಶ್ರವಣ ಮನನ ನಿಜಧ್ಯಾಸದ ಪರ್ಣ |

ಜಪ ತಪ ಅನುಷ್ಠಾನಕ್ಕಿಂತ |

ಕಲ್ಪವೃಕ್ಷ ನೀನೆ ಶ್ರೀಮಂತ |

ಅಲ್ಪಬುದ್ಧಿಗೆ ಕಾಯಿ ಗುಣವಂತ |

ಸಿದ್ಧ ಭಜನಿಗೆ ಮಾಣಿಕ ಕುಂತ ||3||

ಚಲತಿ – ಪಾರ್ವತಿ ದೇವಿ ಕಂದ ಖರೆ |

ಬೇಡಿದ ಕೊಟ್ಟಿದಂವ ನೀನೆ ಖರೆ ||

ಎನ್ನ ಹಣಿಬಾರ ಎಂಥ ಖೇರ |

ಗುರು ತನ್ನಂತೆ ಮಾಡಿಕೊಂಡ ಎನಗ ಫಕೀರ ||ಪಲ್ಲವಿ||

ನಿರ್ಬೈಲ ಮಠಕ ಎನ್ನ ಕರಸಿ |

ಐದಾರು ಅಕ್ಷರ ಮಂತ್ರ ಕರ್ಣದೊಳು ಜಪಿಸಿ |

ಬಣ್ಣವಿಲ್ಲದ ಕಪನಿಯ ತೊಡಸಿ |

ಎನ್ನ ಕಾಣಲದ ಜೋಳಗಿ ಕೈದೊಳು ಪಿಡಿಸಿ |

ಹೋದನವ್ವ ಮನಿಮಾರು ಬಿಡಿಸಿ |

ಎತ್ತ ನೋಡಿದತ್ತ ರತ್ನದ ಹಾಸಗಿ |

ಕಾಣುವದು ಕೈದೊಳು ಸಿಲ್ಕದ ಖರೆ |

ಜೋಳಗಿದೊಳಗ ನಿಂದ್ರಲದ ಜರಾ ||1||

ಬ್ಯಾಸೊತ್ತು ಊರೊಳು ಬಂದಾ |

ಮನಿ ಕೇರಿ ತಿರುಗಾಡಿ ಜನ ಕಾಣೆನಂದಾ |

ನೀಡಿದರು ತರ ತರ ತಂದಾ |

ಎನ್ನ ಜೋಳಗಿಯ ತುಂಬಿತ್ತು ಆತ್ಮ ಪಸಂದಾ |

ಸ್ನಾನಕ್ಕೆ ಸಂಗಮಕೆ ಬಂದಾ |

ಜೋಳಗಿ ಇಟ್ಟು ಗಂಗಾಕ ಹೋದ |

ತಿರುಗಿ ಬರತನ ಕಾಗಿ ಒಯ್ದದ |

ಜೋಳಗಿ ಬದಲಿ ಗೂಗಿ ಕುಂತಾದ |

ಮಾಗಿ ಹೊತ್ತು ಊರ ಆದ ದೂರಾ ||2||

ನೀವಾರ ಕೇಳರಿ ಎನ್ನ ಹಾಡು |

ನೀವು ಅಕ್ಕಿ ಉಣ್ಣರೆ ಖರೆ ನೀಡರೆಪ್ಪ ತವಡು |

ತುಪ್ಪವಲ್ಲ ಮಜ್ಜಗಿಯ ನೀಡು |

ನೀನು ನೀಡಿದ ಮೇಲ ನೀಡಿನಂತ ಅನುಬ್ಯಾಡ ನೋಡು |

ನಿಮದಲ್ಲಿ ಮಜ್ಜಗಿ ತವಡು |

ಹರದ ಹಳ್ಳ ನಿಂತ ತೀರಕುಂತ ಕುಡಿರಿ ಸಾವಧಾನ |

ಸಂತ್ರವಾಣಿಯ ರೇವಯ್ಯಸ್ವಾಮಿ |

ಭಜನಿದಾಸ ದೋಷಿ ದೂರ ||3||

ಉಪದೇಶ ಪಡದಂವ |

ಉದಯ ಸಾಯಂಕಾಲ |

ಉಲ್ಲಾಸದೊಳು ಇರುವದು ಬೇರುಂಟು ||ಪಲ್ಲವಿ||

ಸರ್ವರಲ್ಲಿ ಸಣ್ಣಾಗಿ ಇದ್ದು |

ಸಕಲ ದೇವರ ಪಾದಕ ಬಿದ್ದು |

ನಕಲ ಮಾತು ಕೇಳದೆ ಇದ್ದು |

ಅಖಿಲ ಜ್ಞಾನ ಮಾಡುವ ಸೋದು |

ದಾಖಲಾ ದಫ್ತರ ತೆರಿದು |

ಸಿಕಲ ಮಾಡಿದವನೆ ಸಾಧು ||1||

ಆರ ಗುಣಕ ಝಾಡಿಸಿ ಒದ್ದು |

ಆರ ಅಕ್ಷರಗಳು ಗೆದ್ದು |

ನೂರ ವರ್ಷದ ಕವಲ ತೆಗೆದು |

ಮೂರರೊಳು ನೂರ ವಜಾ ಬರಿದು |

ಸಾವಿರ ಐವತ್ತು ದಳದು |

ಸೋಧದೊಳು ಇದ್ದಂವ ಸಾಧು ||2||

ಇನ್ನೊಂದು ಮನ ನೋಯಿಸಬಾರದು |

ಹನ್ನೊಂದು ಅಧ್ಯಾ ಬಿಡಬಾರದು |

ಮುಂದ ಹವಣಿಕಿ ಮಾಡಿ ಹೋಗಬಾರದು |

ಮಂದಿ ಹಿಂಬಾಲ ಹತ್ತಬಾರದು |

ಆನಂದ ಗುರು ಪಾದಕ ಬಿದ್ದು |

ವಂದನಿದೊಳು ಇದ್ದಂವ ಸಿದ್ಧು ||3||

ಚಲತಿ – ಉಪದೇಶ ಪಡಿದಂವ ಈ ಪರಿಯ |

ಉಲ್ಲಾಸದೊಳು ಎದರ ಬಂದ ನಿಂತ ಹರಿಯ ||

ಒಲ್ಲ ಅನುಬ್ಯಾಡ ಬಾ ದಿಲ್ಲಿ ನೋಡಲಿಕೆ |

ಬಲ್ಲವ ಗುರುಬೋಧಿ |

ಮೂಲ ಜಗದ ಕೀಲಿ ಮುಂಬಯಿಕಿನ್ನ |

ದರಜಾ ದೊಡ್ಡಗಾದಿ ||ಪಲ್ಲವಿ||

ಅನಂತ ರಾಜೇರು ಆಳಿದರು ಖರೆ |

ಕೊಡಲಿಲ್ಲಾ ಮ್ಯಾಗ |

ಶಾಂತ ಗುಣಕ ಅಂತರಂಗ ಕಾಣಿ |

ಗಾಡಿ ಲಾಲ ಬಣ್ಣದೊಳಗ |

ಬೈಲ ಬ್ರಹ್ಮಚಾರಿ ಗಾದಿಯ ಅಧಿಕಾರಿ

ಪತಾ ತೆಗಿರಿ ಸುದ್ದಿ ||1||

ಹವಾಯಿ ಗಾಡಿದು ತಿಕಿಟ ತೆಗೆಮಿ ನಡಿ |

ಹೈದ್ರಾಬಾದಿದೊಳಗ |

ಗವಾಯಿ ಸಂಗ ಬಲನಾಸಿಕ ಮಾರ್ಗ |

ಸಹಸ್ರ ಊರ ದಾರಿದೊಳಗ |

ಖ್ಯಾಲ ಇಟ್ಟರೆ ನಾದ ಕೇಳಿ ಬರುವದು |

ಪಂಢರಪುರ ಗರದಿ ||2||

ಕಾಳಿಕಾದೇವಿ ಕಾಲಿಕಂಬಲವಾಲಾ |

ಜೋಡಿ ಕಲಕತ್ತಾದೊಳಗ |

ಸೋಳ ಬಣ್ಣದಂವ ಸಾವಳಾ ನಿಂತಾನ |

ನೋಡ ದ್ವಾರಕಾ ನಗರ ಹೊರಗ |

ಜುಮಲಾ ಪೃಥ್ವಿಗೆ ಬಾರಾ ಜ್ಯೋತಿರ್ಲಿಂಗ

ಎತ್ತಿ ನೋಡು ಪರದಿ ||3||

ಹತ್ತ ಅವತಾರ ನೀಲಿ ಬಣ್ಣ ಗೋಕುಲ |

ಮಣಿಪುರ ಸ್ಥಾನದೊಳಗ |

ಗೊತ್ತ ಮಾಡಿಕೊ ಮದ್ರಾಸ ಸ್ವಾದಿಷ್ಟ |

ಗಿರಿ ಬಾಲಾಜಿ ಒಳಗ |

ಎಲ್ಲಿ ನೋಡಿದಲ್ಲಿ ಕಲ್ಲಿನ ದೇವರುಂಟು |

ಮನ ಹಿಂದಕ ಸರದಿ ||4||

ಚಾರಧಾಮ ನೋಡು ಚತುರ ದಳದಲ್ಲಿ |

ಚವಕಸಿ ಮಾಡೀಗಾ |

ಸಾರ್ವಭೌಮ ಆಳುವ ಶ್ರೀಮಂತ |

ಇದೇ ದಿಲ್ಲಿದೊಳಗಾ |

ಬಲ್ಲಜ್ಞಾನಿ ಎಡ ಖಿಡಕಿಲಿ ಬಂದು |

ಸಿದ್ಧ ಹೇಳಿದಾ ಬುದ್ಧಿ ||5||

ಚಲತಿ – ಮುದ್ರದ ಕುದುರಿ ಕುಂತಂವಾ |

ಭದ್ರಗಿರಿ ಏರಿ ಬಂದು ಗೆದ್ದಂವಾ ||

ಆತ್ಮ ತಿಳಿದು ಪರ ಆತ್ಮ ತಿಳಿಯಣ್ಣ |

ಉತ್ತಮ ನರ ಪ್ರಾಣ ||ಪಲ್ಲವಿ||

ಓಂ ದಾರಿ ಬಲ ನಾಸಿಕ ತೇಜಿ |

ಕುಂತ ಹೋಗಿ ಮಾಡೋ ಅದರ ಪೂಜಿ |

ಆರು ಅಕ್ಷರದ ಅರ್ಥ ತಿಳದ ಮೇಲೆ |

ಹತ್ತವತಾರದೊಳು ಹೋಗಿ ನಿಲ್ಲಣ್ಣ ಸುಖ ಜಾಣ ||1||

ಏಕಕ ಮುಂದವ ಹದಿನೇಳು ಪೂಜಿ |

ಹದಿನೆಂಟು ದೇವರಿಗಿ ಏಕಕ ರಾಜಿ |

ಶೂನ್ಯಸಿಂಹಾಸನ ಪೀಠದ ಮ್ಯಾಲ ಕುಂತು |

ಅನುಭವ ಮಂಟಪ ನೀ ನೋಡಣ್ಣ ಸುಖ ಜಾಣ ||2||

ಮೆಲ್ಲನೆ ಬಾ ಎಡ ನಾಸಿಕ ಮಾರ್ಗ |

ಒಳ ಹೊರಗ ಒಂದು ಆಗಪ್ಪ ಸ್ವರ್ಗ |

ಹೊರಕ ಬಂದ ಮೇಲೆ ತರ್ಕ ಮಾಡಿನೋಡು |

ತಿರಕರ ಅಂಗಡ್ಯಾಗ ಬಿಚ್ಚಬ್ಯಾಡ ಭರಣ ಭಾಷಣ ||3||

ಗುರುವಿನ ಗುರು ನೋಡಿ ಆದೆಪ್ಪ ಬೆರಗ |

ಪೀರಾನೆ ಪೀರ ದಸ್ತಗೀರ ದರ್ಗಾ |

ರೇವಯ್ಯ ಸ್ವಾಮಿಗಳು ಜನ್ನತ ತೋರಿದರು |

ಜನ್ನತ ಒಳ ಹೊರಗೆ ಆ ಬಸವಣ್ಣ ನೋಡಣ್ಣ ||4||

ಆ ಊರವರಿಗಿ ಅದು ದೇವರಾದ |

ಈ ಊರವರಿಗಿ ಇದು ದೇವರಾದ |

ಕಾ ಊರ ಅಗಸ್ಯಾಗ ಕಲ್ಲಾದ |

ಕೀಊರ ಕೇರ್ಯಾಗ ಬೆಲ್ಲಾದ ||ಪಲ್ಲವಿ||

ಗರ್ವಿನ ಮನುಜ್ಯಾಗ ಗುರಿಯಾದ |

ಅರಿವಿನಲ್ಲಿ ಬಲುಹುರಿಯಾದ |

ಹುರಿಯ ಬಿಚ್ಚುವದು ಬಿರಿಯಾದ |

ನರಿ ಠಕ್ಕನೆಂದರೆ ನೇಗಿಲ ಕರಿಯಾದ ||1||

ಮೋಕ್ಷ ಮಾನವಗ ಸಾಕ್ಷಾದ |

ಮುಮುಕ್ಷಗಳಿಗಿ ಅಪರೋಕ್ಷಾದ |

ರಾಕ್ಷಸ ಜ್ಞಾನಕ ಶಿಕ್ಷಾದ |

ಅಕ್ಷಯ ಭಕ್ಷಿಸಗೆ ನಿಂತಾದ ||2||

ಚಿತ್ತಿನಲ್ಲಿ ದತ್ತಕ ಬಂತು |

ಸೀತಿದಲ್ಲಿ ಬೆನ್ನಿಗಿ ನಿಂತು |

ಮತಿಹೀನರಿಗೆ ಜ್ಞಾನಕೆ ತಂತು |

ಅತಿ ಆಡಬಾರದು ಕತಲಾಗೆ ಕುಂತು ||3||

ತತ್ವಜ್ಞಾನಿಯಲ್ಲಿ ಸೇರಿತ್ತು |

ಮಹಾತತ್ವದ ಮಹಿಮಾವು ತೋರಿತ್ತು |

ಸತ್ವದ ಪರೀಕ್ಷದ ಎದುರ ಆಯ್ತು |

ಹಿತ ಕಾಣಿದವರಿಗೆ ಹಾಡ ಕಲಸಿತ್ತು ||4||

ಮನಸ ಬಂಗಾರ ಒಂದ ಅದಾ |

ದಿವಸ ಮಾಡಿದರೆ ಬ್ಯಾರೆ ಅದಾ |

ಕನಸ ಬಿದ್ದಂತೆ ಮಾಡೋಣಾದಾ |

ನೆನಸಿದ್ರೆ ಸಿದ್ಧಪಾಠ ಎದುರಾದಾ ||5||

ಸತ್ತು ಸೋಂಗ ಇದು ಹಾಕ್ಯಾದ |

ಮಾತು ಕೇಳಿದ್ರ ಸ್ವರ್ಗಕ ನುಕ್ಯಾದ |

ತೊತ್ತಿನ ಮಗನಿಗೆ ನೇಕಾದ |

ನೇಕಿ ನಡೆದವರ ಮನಿಯಾಗ ಬುಕ್ಕಾದ ||6||

ಆವುಶ್ಯಾ ಪ್ರಮಾಣ ಹೋಗುವರೆಲ್ಲಾ |

ವಾಶ ಮಾಡವರು ಯಾರ ಯಾರ ಇಲ್ಲಾ |

ಪಂಚ ಮಂಡಣ ಉಳಿಯೋದಿಲ್ಲಾ |

ಹಂಚ ಹಾಕರಿ ಭಜನ್ಯಾಗ ನಾಮವೆಲ್ಲಾ ||7||

ರೇವಪ್ಪ ಸ್ವಾಮಿಯ ಸ್ಥಾನ ಸೇರತು |

ಮಡಿವಾಳಪ್ಪನ ನಾಮ ಇದು ಮೆರಸ್ತು |

ದೆವಿದಾಸಗ ಪದಾ ಬರಸಿತ್ತು |

ಕವಿ ಕಲಿಯೆಂದು ರಾಜಗ ಕಲಸಿತ್ತು ||8||

ನಿತ್ಯ ಹಾಡಿದರೆ ಇಲ್ಲಿಲ್ಲಾ |

ಭಕ್ತಿ ಇಲ್ಲದಿದ್ದರೆ ಅಲ್ಲಲ್ಲಾ |

ಶಕ್ತಿಸಾರ ಅಮೃತ ಸುರರೆಲ್ಲಾ |

ಮುಕ್ತಿ ಭಜನಿ ಮಾಡಿ ಆಗರಿ ಬೈಲಾ ||9||

ನರ ಜಲ್ಮ ಯಾಕೆ ಬಂತಯ್ಯೋ ಸ್ಥಿರವಿಲ್ಲ ಕೊಂಪಿಗಿ |

ಗಾಳಿಗಿ ಹೋಗುವ ಮಾಳಿಗಿ ನಂದ ಅನ್ನುವ ಹಿಂಗಾ ||ಪಲ್ಲವಿ||

ನೀರಗುರುಳಿ ಸುಂದರ ಛಾಯಾ |

ನಿರ್ಬಯಿಲ ಫಲವಿಲ್ಲ ಮಾಯಾ |

ವರಾ ಪಡಿದರೇನು ಕಾಯಾ |

ಭಾರ ಇಳ್ಯಾ ಇಟ್ಟಾರ ನ್ಯಾಯಾ |

ಪಂಚಬ್ರಹ್ಮ ಪಂಚತತ್ವ

ಪಂಚಬ್ರಹ್ಮ ಹೋಗುವರು ಅಡಗಿ ||1||

ಒಂಬತ್ತು ಮನಿ ನಮ್ಮವೆ ಖಾಸ |

ನೆಂಬಗಿಲ್ಲ ಇಸ್ವಾಸ |

ತುಂಬ ಸಿಮೆಂಟ ಮಾಡೇರ ಹೊಸ |

ಕಂಬ ಕಡೆದು ನಿಲ್ಲದು ತಾಸ |

ಮತ್ತ ಒಮ್ಮ ನರಜಲ್ಮಾ |

ಬ್ಯಾಡಮ್ಮಾ ಸಿದ್ಧರೂಪ ತಿರುಗಿ ||2||

ಚಲತಿ – ಖಾಯಕ ಒಂದ ಬೀಜ ಘಟ್ಟಿಲ್ಲಾ |

ನ್ಯಾಯ ಮಾಡವರಿಗೆ ಬಿಟ್ಟಿಲ್ಲಾ ||

ನಿರ್ವಿಕಲ್ಪ ಆತ್ಮ ಅದ್ವೈತ ನೀ ನೋಡಕೋ |

ಬೆಳಗಿನೊಳು ಬೆಳಗ ಅಡಗಿತ್ತು ತಿಳಕೋ |

ಸೂರ್ಯ ಚಂದ್ರ ಭೂಲೋಕದೊಳ ಕಂಡಂತೆ |

ಜೋತಿಯಿಲ್ಲದೆ ಮಹಾ ಜ್ಯೋತಿ ಯಾವುದು ತಿಳಕೋ ||ಪಲ್ಲವಿ||

ಮರದೊಳಗಿನ ಕಿಚ್ಚು ಮರವು ಸುಟ್ಟಂತೆ |

ಬೈಲ ಫಾಳಿಗಿ ಅತ್ತಿ ಹೂವು ಗುಪ್ತ ಹೊಂಟಂತೆ |

ಅರಗಿನ ಮಹಲವು ಉರಿಕೊಂಡು ಹೋದಂತೆ |

ಸಂಸಾರ ಕರಪುರ ಬೂದಿಯಲ್ಲಿ ಹುಡಕೋ ||1||

ಗುರು ಮಾಡಿಕೊಂಡು ವಿಚಿತ್ರ ಆಯಿತಯ್ಯಾ |

ಕಮಲ ಹೂವಿನೊಳು ಹುಳ ಸಿಕ್ಕ ಬಿದ್ದಿದಂತೆ |

ಅವರಿಲ್ಲ ಇವರಿಲ್ಲ ಗುರು ಇಲ್ಲ ಶಿಷ್ಯ ಇಲ್ಲಾ |

ಬೈಲದೊಳು ಸಿದ್ಧ ನಿರ್ಬೈಲ ತಿಳಕೋ ||2||

ಚಲತಿ – ತನುವು ಸತ್ತು ಭ್ರಾಂತಿ ಹೋಯಿತು |

ಅರವು ಪತಿ ಆರೂಢ ಆಯಿತು ||

ರಾಮನ ಪ್ರಧಾನಿ ನೋಡಿರಿ |

ಅನುಭಾವ ಮಾಡರಿ ||ಪಲ್ಲವಿ||

ಮುಂದಿನ ಕಾಲಮಾನ |

ಬರಿವದಕೆ ದಿನ ದಿನ |

ಬರಿದಿದ ತತ್ವ ಹಾಡರಿ ||1||

ಅವನಿಗಿದ್ದವು ಎರಡು ಮಾರಿ |

ಎರಡು ಕಾಲು ಆರು ಕೈಯರಿ |

ಬೆನ್ನ ಮ್ಯಾಲ ಚೆಂಡಕಿ ಸೂಡರಿ ||2||

ರಾಮನಂತೆ ಪುರಸಿದ ಅವನ |

ಪ್ರೇಮದಿಂದ ಕೊಡತಿದ್ದ ಅನ್ನ |

ಕಮ್ಮ ಬಿದ್ದರ ಕಲ್ಲು ತಿನುವಾ ಪಹಾಡರಿ ||3||

ಕಲ್ಲ ತಿನ್ನುವ ಮಾರಿ ಬೇರೆ |

ಅನ್ನ ತಿನ್ನುವ ಮಾರಿ ಬೇರೆ |

ಸಿದ್ಧ ಕಂಡಾ ಮುಂದ ಹೋದ ದೌಡರಿ ||4||

ಬಡಿವಾರ ಬ್ಯಾಡ ಪ್ರಾಣಿ |

ಬ್ಯಾಡ ಬಿಡು ಪ್ರಾಣಿ |

ಡಂಬಕ ಡಂಬಕ ವಾಣಿ ||ಪಲ್ಲವಿ||

ಹಗಲ ಇರುಳ ಕರದೊಳ ಜಪಮಣಿ |

ಬದಿಲ ನಿಂತಿಲ್ಲ ನೀ ಹ್ಯಾಂಗ ಕಾಣಿ |

ಕಲತಷ್ಟು ನುಡಿವದು ಗಿಣಿ | ಕೇಳು ಅರಗಿಣಿ ||1||

ನಾಯೆಂಬೋ ಬಲು ಹಮ್ಮಿನ ಭರಣಿ |

ತುಂಬಿ ಬಿತ್ತುವದು ಇದೇ ಲಾವಣಿ |

ಇನ್ಯಾರು ಎಮ್ಮ ನಿಮ್ಮ ಧಣಿ | ಹಾಕು ಮುಗರಾಣಿ ||2||

ಹಿರಿಯ ಕಿರಿಯ ಎಂಬೋ ತಿಳಿಯದೆ ಧರಣಿ |

ತಿಳಿವಲ್ಲದೆ ಮಾಡುವರು ಮುತ್ತಿನ ಧಾರಣಿ |

ಪ್ರೇಮವಿಲ್ಲದೆ ತೀರ್ಥ ಹೈರಾಣಿ ಕಂಡು ರುಕ್ಮಿಣಿ ||3||

ಶುದ್ಧ ಸ್ನಾನ ಮಾಡು ಚಂದ್ರ ಭಾಗಿಣಿ |

ಸಿದ್ಧ ಭಜನಿ ಮಾಡು ಸದಾ ನಿರ್ಗುಣಿ |

ಮನ ಬಲ್ಲಂಗ ಎಣಿಸಬ್ಯಾಡ ಮಣಿ | ಬಿಡು ಆ ಗುಣಿ ||4||

ಮನಸ ಕೇಳು ಕನಸಿನ ಸಂಸಾರ |

ದಿನಸ ಕಳಿತು ಕತ್ತಲೊಳು |

ನೆನಸಿ ಧ್ಯಾಸಿನೊಳು ಕುಂತ ಸಂಸಾರ ಬಿಡುಬ್ಯಾಡ |

ದೇಶದೊಳಗೆ ಹಾಡಿಬೇಡಿ ಹರುಷ ಆಗುಬ್ಯಾಡ |

ಆಸಿ ಬ್ರಹ್ಮನ ಅಧಿಕಾರ ನುಂಗಿತು |

ಆಸಿ ಋಷಿಗಳ ಯೋಗ ಕೆಡಸಿತು |

ಆಸಿ ಸನ್ಯಾಸಿ ಜಪವ ತಪ್ಪಿಸಿತು ಆಸಿಗಿ ಬೀಳುಬ್ಯಾಡ ||1||

ಮನಸು ಕೇಳು ಈ ಮನುಷ್ಯ ಜಲ್ಮವು |

ಆಸಿದೊಳು ಮುಣಗಿಸಿ ಶಿರವು |

ಹುಸಿಯ ಭಾಷೆ ಕೊಟ್ಟು ಪರನಿಗೆ ಫಾಸಿ ಮಾಡಬೇಡ |

ಏಸೋ ಕಾಲ ಬದುಕೇನೆಂದು ಹರುಷ ಆಗಿ ನಗುಬ್ಯಾಡ |

ತಾಸ ಮುಂದಿನ ಸುದ್ದಿ ಅರಿಯದೆ |

ಹೇಸಿ ಸಂಸಾರ ಮೆಚ್ಚಿ ಮನವೆ |

ದಾಸ ಗುಣಗಳು ಬಿಟ್ಟು ಹಮ್ಮಿಲಿ ದೋಷ ಹೊದಿಬ್ಯಾಡ ||2||

ಮನಸ ಕೇಳು ಋಗ್ವೇದ ಜ್ಞಾನವು |

ಬೀದಿ ದಾರಿಗೆ ಬೀಳುವದೇನು |

ಓದಿನೆಂದು ಯಜುರ್ವೇದವು ಬ್ರಹ್ಮ ಆಗುಬ್ಯಾಡ |

ಸಾಮವೇದ ಅಥರ್ವಣ ವೇದ ಓದಿ ನಿಂದ್ಯಾ ಆಡಬ್ಯಾಡ |

ನಾಲ್ಕ ವೇದಿನ ಸುದ್ದಿ ತಿಳಿದು |

ನಿಲಕು ಮುಂದಿನ ವೇದ ಐದು |

ಅಜಪ ವೇದ ಗಾಯತ್ರಿ ವೇದ ಮರತ ನಡಿಬ್ಯಾಡ ||3||

ಮನಸ ಕೇಳು ಶ್ರವಣ ಮನನ |

ನಿಲ್ಲಿಸು ನಿಜಧ್ಯಾನ ಹೃದಯ |

ಧನುರ್ವೇದ ಗಂಧರ್ವವೇದ ಸಣ್ಣುವ ಅನುಬ್ಯಾಡ |

ಸಿದ್ಧ ಸೂರ ವೀರ ವಂದಿಪರು ಶಬ್ದ ವೇದ ಮರಿಬ್ಯಾಡ |

ಬೋಧ ಮಂಟಪ ನ್ಯಾಯದೊಳು ಕುಂತು |

ವೇದ ಒಂಬತ ಸೋಧ ಪರಿ ಪರಿ |

ಒಂದೊಂದ ವೇದಕೆ ಇಪ್ಪತ್ನಾಲ್ಕವು ಸಖಿಲ ಸಾರ ನೋಡಾ ||4||

ಮನಸ ಕೇಳ ಈ ಪಂಚ ತತ್ವಕ |

ಹಂಚಿಕೆ ಪಂಚಬ್ರಹ್ಮರು ಐವರು |

ವಂಚನಿಲ್ಲದ ಇನ್ನೂರ ಹದಿನಾರು ಸಖಿಲ ಬಿರಿಹಾಕಿ |

ಇದು ಅಲ್ಲದೆ ಏಳು ಚಕ್ರಕ ದಳವು ಸಾರ ಇಕ್ಕಿ |

ಮೇಲೆ ಮೂರು ಪ್ರಣಮ ಬರಿದು |

ನೀಲವರ್ಣವು ಸಾರ ತತ್ವಕ ಕುಲ |

ಸಖಿಲ ಶ್ರವಣ ಮಾಡು ಇನ್ನಾ ಸಿದ್ಧ ಬರಿ ಹೊಕ್ಕಿ ||5||

ಜ್ವಾಕಿ ನೋಡ ಕೂಡ ತಂಗಿ ಜ್ವಾಕಿ ನೋಡ |

ಧಕ್ಕಿಯೊಳು ಮುಕ್ಕಾದತು ಲೋಕದೊಳು ಗಡಬಡ ಬಾಳ ||ಪಲ್ಲವಿ||

ಕಾಜಿನ ಸಾಮಾನ ತಂದು |

ಗುಂಜ್ಯಾಸ ಬಾಳಾಯಿತೆಂದು |

ಝಾಡಿಸಿ ಬುಟ್ಟಿಗಿ ಒದ್ದ ಸತಿಯಳೆಂದು |

ದಿನಸ ಉಳಿದಿಲ್ಲ ಘಟ್ಟಿ |

ಮನಸ ಮಾಡುವದು ಚಾಷ್ಠಿ |

ಹಿಂಥ ಅಟಿದೊಳು ಸಂಸಾರ ಸಂಗ ಕೂನಿಗೆ ಕೇಡು ||1||

ಕತ್ತಲಾಗೆ ಕುರುಡ ಹೊಂಟ |

ಕಂದೀಲ ಹಚಕೊಂಡು ಹೊಂಟ |

ಕಣ್ಣಿದ್ದವ ಕೇಳತಾನ ಬೆಳಕ್ಯಾತಕ |

ಕುರುಡ ಅನುವನು ಆಗ |

ಅಜ್ಞಾನಿ ಬೀಳುವನು ಮ್ಯಾಗ |

ಬೆಳಕು ಕಂಡು ದೂರ ಆಗರಿ ಎಂದು ಸಿದ್ಧನ ಹಾಡು ||2||

ಎಚ್ಚರಾಗಿ ಹುಚ್ಚಿನ ಪದ ಬರಕೊ |

ವಿಚಾರ ಆದ ಮ್ಯಾಲೆ ರುಚಿ ಗಂಟ ತೆರಕೊ ||ಪಲ್ಲವಿ||

ವಿಷದ ಅಕ್ಷರಿಲ್ಲಾ ಹೊಸದ ಹಾಕಲಿಲ್ಲ |

ಮಸುದಾ ಇದು ಅಲ್ಲಾ ತಿಳಿದೋದಿ ನೋಡಕೊ |

ಥಟ್ಟೆದ ಮಾತಲ್ಲಾ ಕ್ವಾಟ್ಯಾಗ ಸಿಗೋದಿಲ್ಲಾ |

ಪ್ಯಾಟ್ಯಾಗ ಉಳದಿಲ್ಲ ರಾಟಿ ನೀ ಹೈಕೋ ||1||

ಕಸವಿಸಿ ಮನುಷ್ಯ ಕಿಸಮಿಸಿ ತಿನುತಿನು |

ಸಾಯಾ ವೇಳ್ಯಾಕ ಅವನು ಶಿವಶಿವ ಅನು ಅನು |

ಹಿತಾರ್ಥ ಕಾಣೋದಿಲ್ಲ ಆ ಪ್ರಾಣಕೋ |

ಪದಹಾಡಿ ಸಭೆಯೋಗ ಅರ್ಥವು ಹೇಳಿದ್ರೆ |

ಅನರ್ಥ ಆಗುವುದಿಲ್ಲ ಒಬ್ಬನ ಗುಣಕೋ ||2||

ಬುದ್ಧಿ ಶಿವನ ಹಾಲು ಕುದಿ ಉಕ್ ಬಂದರ ತೋಲು |

ತುಂಬಿದ ತೊರಿ ನೀರು ತಿರುವ ಹಾಕೋ ಒಳಕೋ |

ಪದದ ಅರ್ಥಗಳು ಅನುಭವ ಆತ್ಮದೊಳು |

ಹಂತ ಸುಜ್ಞಾನಿ ಭವದೊಳು ಮಾರಾಟ ನೊರಕೊ ||3||

ಹದ ಮಾಡಿ ತನು ಮನ ಪದ ಹಾಡಬೇಕೊ ಭಜನ |

ಸದಮಲ ಶಿವಧ್ಯಾನ ಒಂದಿದ್ರ ಸಾಕೋ |

ಶಿವ ಶಿವನಂತೆಷ್ಟು ಕಾಲ ಬಾಯಿ ಬಿಟ್ಟರೆ |

ಶಿವನಾಮ ತಿಳಿಲಿಕ್ಕೆ ಒಬ್ಬವನಿಗಿ ಪಡಕೋ ||4||

ನಾನು ನೀನು ಎಂಬ ವಾದ ಮಾಡಿ ಡಂಭ |

ಸಾಧಿಸಿ ಹೊಯಿತೆಂಬ ಯಮ ಘಾಣಕ್ಕೋ |

ಆಶಾಹೀನರೆಲ್ಲಾ ದೇಶಕಟ್ಟಿದರೇನು |

ಕಾಶೀ ವಿಶ್ವನಾಥ ಒಲದಿಲ್ಲ ನೋಡಕೋ ||5||

ಸಂಸಾದೊಳಗಿದ್ದು ಸಾಧುರ ಮಾತ ಹೇಳಿ |

ಸಾಧನ ಆಗೋದಿಲ್ಲ ಸುಳ್ಳೆ ಬಾಳೆ ನೋಡಕೋ |

ವೇದ ಮೂಲ ತತ್ವ ಹಾದಿಗಿ ಬಿದ್ದಿಲ್ಲ |

ಓದ ಬೇಕಾದರೆ ಪುಣ್ಯದ ಅಳತಿಲ್ಲ |

ಬೋಧ ಇಲ್ಲದ ಮಂತ್ರ ಯಾತಕ್ಕೆ ಲಾಕೋ ||6||

ಹಿರಿಯ ಕೋಣನೆಂಬ ಕಾಮಗೆ ಕಟ್ಟಲಿಕ್ಕೆ |

ಗುರುವಿನ ಮಹಾಮಂತ್ರ ಮುಗರಾಣಿ ಬೇಕೋ |

ಮುಗರಾಣಿ ಹಾಕಿದ ಮೇಲೆ ಹಗರಾಣಿ ಮಾಡಿದರೆ |

ತತ್ಕಾಳ ಬರತಾದಿ ಯಮನ ದರ್ಬಾರಕೋ ||7||

ಬಾಯಲಿ ಬ್ರಹ್ಮವು ಬೊಗಳಿದ್ರ ಏನ ಬಂತೊ |

ಮೂರು ಮಾತಿನೊಳಗ ಸಿಲ್ಕಿದ್ರ ಮೂಗ ಹೋಯ್ತೊ |

ತನ್ನ ಹೊಟ್ಟಿ ತನ್ನ ಬಾಯಿ ಉಣತಾದ ತಿಳಕೋ |

ದೇವರು ಮಾಡ್ಯಾನೆಂದು ಭಾವರ್ಥಗೆ ಹೋಗಬೇಡ

ತಾ ಮಾಡಿದ ದೋಷಕ್ಕೆ ತನಗುಂಟು ನರಕೋ ||8||

ಭಾತ್ರಿಗುಣ ಒಳಗ ಪತ್ರಿಲಿಂಗದ ಮ್ಯಾಗ |

ಖಾತ್ರಿ ಶಿವನ ಮಾತ್ರಿಲ್ಲ ನೋಡಕೋ |

ಆತ್ಮದ ಅನುಭವ ಅರ್ಥ ಅರಿಯದವ |

ನೂರವರ್ಷ ಇದ್ರೇನು ನಿಷ್ಫಲ ತಿಳಕೋ ||9||

ಸುಮ್ಮನೆ ಬಾಯಿಲಿ ಬ್ರಹ್ಮವು ಯಾತಕ್ಕೆ |

ಹಮ್ಮಿನ ಮಾತವು ಮುಟ್ಟೋದಿಲ್ಲ ಫಾಜಕ್ಕೋ |

ದಮ್ಮ ಬೇಕೋ ಮುಣಗಿ ಮುತ್ತ ತರುವದಕೋ |

ಬಂಧನ ಬಲಿ ಕಡಿದು ಬಾ ಇನ್ನ ಹೊರಕೋ ||10||

ಹೊರಕೆ ಎಂದರೆ ಸತಿಸುತ ಬಿಡೋದಿಲ್ಲ |

ತ್ರಿವೇಣಿ ತಿರುಗಿ ಭ್ರಮೆಯು ಆಗೋದಿಲ್ಲ |

ಎರಡರ ಮೇಲ ತಾನು ತೇಲಿರಬೇಕೋ |

ಮನಸಿನ ಮೈಲಿಗಿ ಕನಸಿನ ಮಾತಿಗಿ |

ನೆನಸಿ ಅತ್ತೇರನು ಬರುವದೊ ಮೂರ್ಖೋ ||11||

ವಿದ್ಯೆ ಕಲಿಯೋ ತಮ್ಮ ಸುದ್ದಿ ಇರುವದು ನಾಮ |

ಬುದ್ಧಿವಂತರ ಬಾಯಾಗ ಇದ್ದಿರಬೇಕೋ |

ನಿದ್ರಿಯೊಳಗ ನೀವು ಮುದ್ರ ಮಾಡಿದರೇನು |

ಚಿದ್ರೂಪ ಚಿನ್ಮಯನ ಕಾಣೋದಿಲ್ಲಾ ಬೇಳಕೋ ||12||

ಬರಕೊ ಅಲ್ಲಿಕ ನಿಮಗ ಅಧಿಕಾರ ನಮಗಿಲ್ಲಾ |

ಕವಿ ಬರದಾತ ಪಂಡಿತ ಶಾಸ್ತ್ರೆಲ್ಲಾ |

ಪರಬ್ರಹ್ಮ ತಿಳಿಲಿಕ್ಕೆ ಈ ಹಾದಿ ಹಿಡಕೋ |

ಒಳ್ಳೆ ಗುರುವಿನ ಹಂತೀಲಿ ಉಪದೇಶ ಆಗಿನಿ |

ನಿರ್ಗುಣ ಬೈಲಸ್ವಾಮಿ ಸೇವಾದಲ್ಲಿ ದುಡಕೋ ||13||

ದೇವಿದಾಸನ ಪದ ಸಿದ್ಧ ಪ್ರಭುನಾದ |

ಬದ್ಧರಿಗೆ ಏನ್ ಗೊತ್ತು ಉನ್ಮನಿ ಬೆಳಕೋ |

ಗುರುವಿನ ಸೇವಕ ಗುರುತಿಟ್ಟು ನಡಿಬೇಕು |

ಗುರಿ ಹಚ್ಚಿ ಗುರುಪಾದ ನೀನಾದ್ರ ಬರಕೋ ||14||

ಶಾಂತ ಸದ್ಗುಣವಂತ |

ಶ್ರೀಬಲವಂತ ಭಕ್ತರ ಪಂಥ ಗೆಲಿಸಾನಂತ |

ತರದಂಡವತ ಪಾಲಿಸು ಕಲ್ಮ ಪಿಡಿಲಿಕ್ಕೆ |

ಅಂತರಂಗ ಕಾಂತಕುಂತ |

ಅನುಭವ ನಾಮಾಮೃತ ಸೇವಿಸಿ ಮಹಂತ |

ಲಕ್ಷ್ಮೀಕಾಂತ ಪಾಲಿಸು ಕವಿ ಬರಿಲಿಕ್ಕೆ ||ಪಲ್ಲವಿ||

ಸಂತ ಶರಣರ ವಾಕ್ಯ ಉಪದೇಶ |

ಐಕ್ಯ ಮಾಡುವ ಸೌಖ್ಯ ಭಕ್ತಗೆ |

ಮುಖ್ಯ ಸಕಲ ಸಿದ್ಧಿ ದುಡಿಯುವ ನಾಲ್ಕು ಭಾಗಕ್ಕೆ |

ನಿಂತ ಷಣ್ಮುಖನಂತೆ ಕೇಳಿದ |

ಭ್ರಾಂತ ಮೈಲಿಗೆ ಪಂಜಿ ಬಿಡಿಸಿ |

ಅಂತಃಕರಣ ನಮ್ಮನ್ನು ಪಾಲಿಸು ನರನ ಜಲ್ಮಕ್ಕೆ ||1||

ಭಕ್ತಿ ಜನರಿಗೆ ಮುಕ್ತಿನಾಗುವ |

ಯುಕ್ತಿ ಕೇಳರಿ ಶಕ್ತಿ ಸಾಧ್ಯ |

ವಿರಕ್ತಿ ಎಳೆಯುವ ಎತ್ತರಿ ಪತಿವ್ರತ ಇರಲಿಕ್ಕೆ |

ಅತ್ತ ಇತ್ತ ಚಿತ್ತನಿಲ್ಲದೆ |

ಮರ್ತಿರಿ ತ್ರಿಭುವನ ಕರ್ತಗೆ |

ಅರ್ಥ ಅರಿಯದೆ ಪಡೆದು ಉಪದೇಶ ವ್ಯರ್ಥ ನರನ ಜಲ್ಮಕ್ಕೆ ||2||

ಹೇಸ್ಯಾರೆಲ್ಲರು ಕಾಸಿಗಿ ಹೋದರೆ |

ತಾಸೀಲ ಬಿಡದೇನು ಇವರಿಗೆ |

ಮಾಸಿದರಬಿಯ ಉಟ್ಟು ಹೋದರು ಪಂಚಕೋಶಕ್ಕೆ |

ದೂರ ದೇಶದಿ ಬಂದಿರೆಂದು |

ಕಾಸೀ ಈಶ ಕೇಳೆಯಿಲ್ಲಾ |

ಕಾಸೀ ನೀರ ತಂದರೇನು ಫಲ ರಾಮನ ಎರಿಲಕ್ಕೆ ||3||

ಯೋಗಿ ಜನರು ಬಾಗಿ ಇರಬೇಕು |

ಭೋಗಿ ಸಂಸಾರ ರೋಗಿ ಜನರೊಳು |

ತ್ಯಾಗಿ ಭವ ನೀಗಿ ನಿರ್ಬೈಲ ನಿಜ ತಿಳಿಲಿಕ್ಕೆ |

ಬಗ್ಗಿ ನಡೆಯಿರಿ ತೆಗ್ಗಿಗಿ ಬಿದ್ದಿರಿ |

ಸುಗ್ಗಿ ದಿನದೊಳು ಹುಗ್ಗಿ ಸುರದಂಗೆ |

ಹಿಗ್ಗಿ ಕೇಳರಿ ಪದದ ಅನುಭವ ಮಗ್ಗಿ ನೋಡಲಿಕ್ಕೆ ||4||

ಧರ್ಮ ಮನುಜಗೆ ಕರ್ಮ ಸುತ್ತರೆ |

ಬ್ರಹ್ಮ ವಿಷ್ಣುಗೆ ಶರ್ಮ ಬರುವುದು |

ವರ್ಮ ತಿಳಿದು ಧರ್ಮ ಗುಣ ಇಡು ಕರ್ಮ ಸುಡಲಿಕ್ಕೆ |

ಕಾಮರಹಿತ ಆದ ಮಾನವ |

ರೋಮ ಋಷಿಯ ಆಶ್ರಮ ಕಾಣಿ |

ಪ್ರೇಮದಿಂದಲಿ ಗ್ರಾಮ ಗ್ರಾಮ ಬಂದ ದುಡಿಲಿಕ್ಕೆ ||5||

ಮುಟ್ಟಲಾರದೆ ಗುರು ಚರಣಕ |

ಕಟ್ಟಲಾರದೆ ದುಷ್ಟ ಗುಣಕ |

ಉಟ್ಟು ನಡೆದರೆ ಧಟ್ಟಿ ಪೀತಾಂಬರ ದೇವರ ಒಲಿಸದಕೆ |

ಸಿಟ್ಟಿಲಿಂದೆ ವೇಶ ತೊಟ್ಟರು |

ಕೆಟ್ಟು ಹೋದರು ಹಿಟ್ಟು ಬೇಡುತ |

ಹೊಟ್ಟಿಗಾಗಿ ಥಾಟಲಿ ಹೊಂಟರ ಭಿಕ್ಕಿ ಬೇಡದಕ್ಕೆ ||6||

ತುಪ್ಪ ಹಾಲೊಳು ಇದ್ದಿದಂಗೆ |

ಅಪ್ಪನ ಮಗನಾದವ ಆದರೆ |

ಅಪ್ಪಿದರೆ ಸಂಸಾರದೊಳು ಅಂವ ಇದ್ದಿದಂಗ ಹೊರಕೆ |

ಅಲ್ಪ ಮಾತಲ್ಲ ಸ್ವಲ್ಪ ಕೇಳಿರಿ |

ಕಲ್ಪವೃಕ್ಷ ಆದ ಮಾನವ |

ತೇಲಿರುವನು ತುಪ್ಪದಂತೆ ಹಾಲಿನ ಮೇಲಿಕ್ಕೆ ||7||

ಶಿವನಾಮ ನುಡಿವುದಕೆ ನಿಮಗ |

ಅವಮಾನ ಕಾಣುವದಪ್ಪ ನರರೇ |

ಮನನ ಆಗುವದು ಸುಮ್ಮನವಿಲ್ಲ ತ್ರಿಭುವನ ಗೆದಿವದಕ್ಕೆ |

ಖೂನ ಅರಿಯದೆ ಹೀನ ಮನುಜರು |

ಭಜನ ಮಾಳ್ಪಗೆ ಬೊಗುಳುತ್ತಿರುವರು |

ಸ್ಪಾನಗೆ ತುತ್ತ ಖಜ್ಜ ಹಾಕದೆ ಹೋಗು ನರಕಕ್ಕೆ ||8||

ದಾವ ಕುಲದವ ಜೀವ ಶಿವದ |

ವರ್ಮ ತಿಳಿದವ ಬ್ರಾಹ್ಮಣನಾದನು |

ಒಮ್ಮಿಗಾದರು ಶರಣು ಹೋಗರಿ ಕರ್ಮ ತೊಳಲಿಕ್ಕೆ |

ಭಾವಯಿಲ್ಲದೆ ಭಜನ ಮಾಡಿ |

ದೇವಯಿಲ್ಲದೆ ಪೂಜಿ ಮಾಡಿ |

ಸೇವಾಯಿಲ್ಲದೆ ಗುರುಭಕ್ತ ಉಪದೇಶ ಯಾತಕ್ಕೆ ||9||

ಹಂಪಿ ಸ್ಥಲದಿಂದ ಕಲ್ಲ ತೇರವು |

ಅಂತರ ಮಾರ್ಗೆದಿ ಬೀದರ ಕೋಟಿಯ |

ಬಂದು ನಿಲ್ಲುವದು ಬೊಮ್ಮಗೊಂಡನ ಕೆರೆಯ ಭಾಗಕ್ಕೆ |

ಬಾವನ ರಾಜರು ಜಗಳವಾಡಿ |

ಬಜಾಬಾಯಿ ಲಗ್ನ ಮಾಡಿ |

ಆವಾಗ ರಣಗಾಡಿ ಹೋದಾವು ತಮ್ಮ ಸ್ಥಾನಕ್ಕೆ ||10||

ಶರಣು ಬಂದೇನು ಕರುಣವಿರಲಿ |

ಚರಣ ಧೂಳಿ ದೇವಿದಾಸ |

ಮರಣದ ಭಯ ಹಾರಿ ಬಿದ್ದೇನು ನಿನ್ನ ಪಾದಕ್ಕೆ |

ಸಕಲ ಮತ ಸುಜ್ಞಾನಿಗಳಿರೆ |

ನಕಲ ಅಲ್ಲಿದು ಅಖಲ ಹಿಡಿರಿ |

ದಖಲ ಹತ್ತಿತು ಅಖಿಲ ರಾಜ ದಖ್ಖನ್ ದೇಶಕ್ಕೆ ||11||

ಎಚ್ಚರಾಗೋ ತಮ್ಮ ಎಚ್ಚರಾಗೋ |

ಚಾರ ಬಡಿದು ಹೋಯಿತು ಇನ್ನು ಎಚ್ಚರಾಗೋ ||ಪಲ್ಲವಿ||

ಧರ್ಮ ಸರಾಯಿದೊಳು ಒಬ್ಬನೆ ಮನಗಿದಿ |

ಶರ್ಮ ಬರುವಲ್ಲದೇನೊ ಖುಲ್ಲಾ ಆಗಿದಿ |

ಕರ್ಮ ಸುತ್ತ ಮುತ್ತ ಕುಂತವ ಎಚ್ಚರಾಗೋ ಎಚ್ಚರಾಗೋ ||1||

ಕೆಂಪು ಹರಿದು ಸೂರ್ಯ ಬರುವ ಸಮಯ |

ಝಂಪ ಯಾತಕ ಇನ್ನು ಏಳೋ ತನಯ |

ಕಾಲಜ್ಞಾನ ಆಟ ಬಂದದ ಎಚ್ಚರಾಗೋ ಎಚ್ಚರಾಗೋ ||2||

ಸ್ವರ್ಗ ಮತ್ರ್ಯ ಪಾತಾಳ ಗಲಬಲಾ |

ದೀರ್ಘ ದಂಡವತ ಮನ ಎಲ್ಲ ಉಳದಿಲ್ಲ |

ಗರ್ವಿನ ನಿದ್ರಿಯೊಳು ಎಚ್ಚರಾಗೋ ಎಚ್ಚರಾಗೋ ||3||

ಚಂದ್ರಗುಪ್ತ ರಾಜ ಏಳುವ ಸಮಯ |

ಇಂದ್ರಾ ಪದವಿಯು ಹಾಳ ಆಗೋ ಸಮಯ |

ಹಿಂದುಸ್ಥಾನ ಹಿಂದು ಒಂದೇ ಎಚ್ಚರಾಗೋ | ಎಚ್ಚರಾಗೋ ||4||

ಜೋಡ ಶೂರರ ಬೈಲಾಟ ಹಚ್ಯಾರ ನೋಡ |

ಕಟಗಿ ಕಬ್ಬಣ ಗೋಬಿ ಕಲ್ಲ ಮಣ್ಣಗೊಂಬಿ ಕುಸ್ತಿ ಹಚ್ಯಾರ ನೋಡ |

ಕಾಜಿನ ಗೊಂಬಿ ಕುಣಿತ ನೋಡಿ ಎಚ್ಚರಾಗೋ ಎಚ್ಚರಾಗೋ ||5||

ರಾತ್ರಿ ಹಗಲ ನಿದ್ದಿ ಕಟ್ಟಿ |

ಅತ್ರಿ ಮುನಿ ಸುತ ಪಾದ ಮುಟ್ಟಿ ಮುಟ್ಟಿ |

ಸಿದ್ಧ ಭಜನಿ ಕೇಳಿ ಎಚ್ಚರಾಗೋ ಎಚ್ಚರಾಗೋ ||6||

ಯುಗದೊಳು ಕಲಿಯುಗದ ಮಾತು |

ಅಗಾಧ ಗುರುವಿನ ಜೋತು |

ಈಗಾದ ಗಳಿಯದು ಹೊತ್ತು |

ಸುಜ್ಞಾನಿಗಳಿರ್ಯಾ ಈಗಾದ ಗಳಿಯದು ಹೊತ್ತು ||ಪಲ್ಲವಿ||

ಶ್ರೀಗುರು ಕಾಯಾ ಏನಿದು ಮಾಯಾ |

ತಿಳಿಯದು ನ್ಯಾಯಾ ಕಾಣುವದು ಭಯಾ |

ಸುರಮುನಿ ಗಣರೆಲ್ಲ ನೆಲಹಿಡಿಯ ಹೊತ್ತು |

ಇನ್ನೆಲ್ಲಿ ಹುಡಕಲಿ ಮುತ್ತು |

ಆ ಆ ಆ ಬಲ್ಲವರ ಬಡಿದಾರ ಇಳಿತು ||1||

ಬಗೀಜಾ ಆನಂದ ನೀಡಸಿ ಬಂದಾ |

ಕೊಡ ಕಾಣಿ ಛಂದ ಪಾವಡ ಮುಚ್ಚಿಂದಾ |

ತೆರದ ನೋಡಿದರ ನೀರ ಹನಿ ಇಲ್ಲದಂಗಾಯಿತು |

ಸುಳ್ಳೆ ಶೃಂಗಾರ ಜಾಗ ಕಾಣಿತ್ತು |

ಆ ಆ ಆ ನೀರ ಬತ್ತುವ ಹೊತ್ತು ಆಯಿತು ||2||

ಗಿಣಿಯಂತೆ ಓದಿ ಹಿಡಿತು ನರಕದ ಹಾದಿ |

ನಡಿ ತಪ್ಪಿ ಮೆರದಿ ನೋಡಿಲ್ಲ ನುಡದಿ |

ಅಡಿಗಿ ಹಣ್ಣ ಬರಲಾರದೆ ಬಾಜಾರಕ ಬರೋಣ ಆಯ್ತು |

ಕಡಿ ಹಳ್ಳಿ ಜನ ಜುಲ್ಮಿ ಮಾಡ್ತು |

ಆ ಆ ಆ ಭೂಮಿ ಎತ್ತಿ ಬಡಿವ ಹೊತ್ತು ||3||

ಬಾಳುವಂಥ ಶರಣರಿಗೆಲ್ಲಾ ಆಳಾಗಿ ದುಡಿದೆ ಇಲ್ಲ |

ಕೊಳ್ಳಗ ಕೈಯಾಗ ಕಟ್ಟಿದರೆ ಇಲ್ಲ |

ಜಟಾ ಬಹಳ ಬಿಟ್ಟದರೆ ಇಲ್ಲ |

ಚಾಷ್ಠಿಯೊಳು ಭ್ರಷ್ಟರ ಸಂಗ ಕುಂತ ನಗೋಣ ಆಯ್ತು |

ಆಆ ಆ ಕಟಗಿ ತಾಳಿ ಕಟ್ಟ ಸಮಯ ಹೊತ್ತು ||4||

ಪಂಚಕಾರ್ಯ ಏನು ಬಲ್ಲ |

ಪಂಚಾಕ್ಷರ ಮಂತ್ರದ ಮೂಲ |

ಪಂಚರಾಶಿ ವಿದ್ಯಾ ಬಗಲಾ |

ಪಂಚಕೋಶ ತಿರುಗಿದರಿಲ್ಲಾ |

ಮುಂಚಿನ ಬರಿ ಬೆನ್ನ ಹತ್ತಿ |

ಕಂಚಿನ ಕರ್ಬನ್ ಕೆಡವಿತ್ತೋ |

ಹೆಚ್ಚಿನ ತಾರೀಫ ನೋಡೋಣ ಆಯ್ತು |

ಆ ಆ ಆ ಬೆಚ್ಚನ ಮಂದಿಗಿ ಹುಚ್ಚ ಹಿಡದಿತ್ತು ||5||

ನರ ನಾರಾಯಣ ನಂದಾ |

ವರ ಬೇಕು ಗುರವಿಂದಾ |

ಇನ್ನಾದರ ಬಿಡ ಪರನಿಂದಾ |

ಇಳಿಸ್ಥಾರ ಏರಿದ ಧುಂದಾ |

ಸಿದ್ಧವಾಗಿ ನುಡಿರಿನ್ನಾ ನಾಮಸ್ಮರಣಿ ಚಿತ್ತೋ |

ಚಿತ್ತಿನಲ್ಲಿ ಆಗುವದು ಗೊತ್ತೋ |

ಆ ಆ ಆ ದೇವಿದಾಸ ಬರದಿದ ವಿಳೆ ಎತ್ತು ||6||

ಒಂದೇ ಪದ ಬರಕೊ ತತ್ವದ ನೆಲಿ ತಿಳಕೋ |

ಉಪದೇಶ ನೀ ಪಡಕೋ ಮಾತಾಡಲಿಕ್ಕೆ ||ಪಲ್ಲವಿ||

ಅದ್ವೈತ ಗುರು ಉಪದೇಶ ಪಡಿ |

ಹಾರಿ ಹೋಗುವದು ಸುಳ್ಳ ದ್ವೈತದ ಕೂಡಿ |

ಆದಿ ಅನಾದಿ ದೇವ ನಿರ್ಗುಣ ನಿರ್ಬೈಲ |

ನಿಜಲಿಂಗ ಪರಮಾತ್ಮ ತಿಳಿಲಿಕ್ಕೆ ||1||

ನರಜಲ್ಮ ಇನ್ನೊಮ್ಮೆ ಬಾರದೇನು |

ಹಿಟ್ಟ ಬಿತ್ತಿದ್ರೆ ಮುಂದೇ ಜ್ವಾಳ ಹುಟ್ಟಿತೇನು |

ಜಾಗ್ರತ ಸ್ವಪ್ನ ಸುಷುಪ್ತಿ ಮೂರು |

ಏಕಾಂತದೊಳು ಅರ್ಥ ಮಾಡಲಿಕ್ಕೆ ||2||

ಬಲ್ಲಂಗ ಆಡಿ ಮನ ನೋಯಿಸಿದ್ಯಾಕ |

ಹಿಂದ ಹಳಿದು ಮುಂದೆ ನಗಿಸೋದು ಯಾಕ |

ಒಳ ಹೊರಗ ಒಂದಾಗಿ ಸರ್ವರ ಕೂಸಾಗಿ |

ದಾರ್ಯಾಗ ಬಿದ್ದ ಮುಳ್ಳಕಲ್ಲ ಆಯ್ಲಿಕ್ಕೆ ||3||

ಜಪ ತಪ ಅನುಷ್ಠಾನ ಬಲು ಗುಪ್ತವು |

ರಿದ್ಧಿ ಸಿದ್ಧಿ ಸಾಧನ ಮನ ಜ್ಞಾನ ತೃಪ್ತವು |

ವೀರ ಶೂರರೆಲ್ಲ ಪ್ರಾರಬ್ಧ ಪಡಿ ಮೀರಿ |

ನಡಿದಿದ್ರ ಫಲವೇನು ಇಲ್ಲ ಸಾರ್ಥಕ್ಕೆ ||4||

ಮಾಯಾ ಬ್ರಹ್ಮಾಂಡದ ಹೊಳಿಯೊಳು ಕುಂತು |

ನ್ಯಾಯ ಹೇಳಬಾರದು ಸಂತರ ಮಾತು |

ಭಕ್ತಿಯಿದ್ದಲ್ಲಿ ಮುಕ್ತೇಶ್ವರನು ಬರುವನು |

ಸಂಸಾರ ಸದ್ಗತಿ ಸಿದ್ಧ ಪಾಠಕ್ಕೆ ||5||

ಹದಿನೆಂಟು ಯುಗವಿದು ಕಡಿ ಕಲಿ ಅಧ್ಯ |

ಕಳ್ಳರ ಮಹಿಮಾ ಅಸಾಧ್ಯ |

ಆ ಆ ಆ ಸುಳ್ಳರು ಗೆದಿವರು ಸದ್ಯ ||ಪಲ್ಲವಿ||

ಹೇ ಪರಮಾತ್ಮ |

ಕಂಡು ಕಲಿಕರ್ಮ |

ಮುಣದೇನು ಬ್ರಹ್ಮ |

ಕಾಣತೇನು ಶರ್ಮ |

ಕ್ವಾಟಿ ಪ್ಯಾಟಿ ಪಟ್ಟಣವೆಲ್ಲಾ |

ಹಾಳ ಬೀಳ ಸಮಯ |

ಬೇಗ ಬಾ ಪಾರ್ಥನ ಗೆಳೆಯ |

ನಿಂತೆನು ಹೊಳಿ ಸೆಳಿ ಸುಳಿಯ ||1||

ದೈವತರೆಲ್ಲಾ

ದೈತ್ಯರ ಪಾಲಾ |

ಬಾಗ ಬನೆ ಕೋಲಾ |

ಸಭಿ ಬನೆ ಚೇಲಾ |

ಸತ್ವ ಮಹತ್ವ ತತ್ವ ಶರಣರ |

ಸಂಗ್ರಾಮ ಇನ್ನು ಕಳಿಸು |

ಕಲ್ಲ ಚಂದ್ರಗುಪ್ತರಾಜಾಗ ಎಬ್ಬಿಸು |

ಕೋಟಾ ತೆರೆದು ಮುತ್ತಿನ ಜೋಳ ತೋರಿಸು ||2||

ಕಾಲಜ್ಞಗ ದೊರಕಿತು ಸಿದ್ಧಿ |

ಬರದಿಟ್ಟರ ಮುಂದಿನ ಸುದ್ದಿ |

ತಿಳಿರೆಂದು ಇದ್ದವರು ಬುದ್ಧಿ |

ಎಚ್ಚರಾಗಿ ಮಧ್ಯಾಹ್ನ ನಿದ್ದಿ |

ದಮಡಿಗಿ ಅಗ್ಗ ಆಗಿತ್ತೋ |

ಮುಂದ ನಾ ಎಂಬುದ ಬಿಡರಿ |

ಚಿತ್ರಗುಪ್ತ ರಾಜನ ಅರ್ಜಿ ಹೋಯಿತರಿ |

ಪರಶಿವಗ ಆಯಿತು ಇನ್ನು ಖಾತ್ರಿ ||3||

ಲಾಖೌ ಮೇ ಏಕ್ |

ದೇಖಾ ಚಿರಾಕ |

ದೇಶಯಲ್ಲಾ ಬುರಾಕ |

ಚೆನ್ನಬಸವ ಬರುವ ಕಾಲಕ |

ಕರಿ ಮಲ್ಲಿಗಿ ಗಿಡ ಚಿಗಿದು |

ಕಲ್ಲಕೋಳಿ ಕಾಗಿತ್ತು |

ಒಲಿಗುಂಡಿಗಿ ಕಿಲ್ಲೆದ ಕಲ್ಲು ಕಿತ್ತಿ ಹೋಯ್ತು |

ಜೀಡ ಸೂರ್ಯ ಬರುವ ಹೊತ್ತು ಏರತು ||4||

ಹೆಸರಿಟ್ಟರ ಭಜನಿದವಗ |

ಬ್ಯಾಸರಾದೆ ಪರಶಿವಗ |

ಬತ್ತೀಸ ಹಜಾರ ಬಾರಾ ಲಾಖದೊಳಗ |

ಭೂತ ಸೇರಿತು ಎಲ್ಲರ ಒಳಗ |

ಬ್ರಹ್ಮದೇವರು ಘಟ್ಟಿ ಬರಿವ |

ಅಟ್ರ ಕಲಿ ಅಧ್ಯ |

ದೇವಿದಾಸ ಪದ ಹಾಡಿ ಸಧ್ಯ |

ಭವನದಿ ಮೀರಿ ಬಂತು ಅಸಾಧ್ಯ ||5||

ಓಓಓಓ ಮಾಡಿ ಮಾಡಿ ಮ್ಯಾಣ್ಯಾ ಮೆರೆದರು |

ಆಆಆಆ ನೀಡಿ ನೀಡಿ ಪುಣ್ಯ ಪಡೆದರು ||ಪಲ್ಲವಿ||

ಮಾಡಲಾರದೇ ಕೇಳು ನೀಡಲಾರದೆ |

ಮತ್ರ್ಯಕೆ ಕೀರ್ತೀ ಹ್ಯಾಂಗ ಪಡಿದರು ||1||

ಮಾಡಲಾರದು ತಾನು ನೀಡಲಾರದು |

ನೋಡಲದೆ ಕೇಳಲದೆ ಆಡಿ ಮಡಿದರು ||2||

ಸ್ವರಾಜ್ಯ ಬೇಡಿದರು ನ್ಯಾಯ ಮಾಡಿ ಗೆದ್ದರು |

ಮಾಡಲದೆ ನೀಡಲದೆ ಸಿದ್ಧ ಹ್ಯಾಂಗ ಆದರು ||3||

ಚಲತಿ – ಧಡ್ಡ್‍ನಿಗೆ ಹ್ವಾರ್ಯಾ ಬಂತು |

ಕಡ್ಡಿಗೆ ಗುಡ್ಡ ಕೊರದಿತ್ತು ||

ಪದಾ ಕೇಳಿ ವಾವ್ಹಾ ಅಂದರೆ |

ಪೇಠ ನಹಿ ಭರಿ ||ಪಲ್ಲವಿ||

ಶುಭ ಮೋಹರತದೊಳು ತಾವು |

ಕಬ್ಬು ಸುಲದ ಇಟ್ಟಾರ ಪದವು |

ಲಾಭ ಆಗಲಿ ಕೇಳಿದ ಜನವು |

ಸಬ್ ಮೇರೆ ಬಹೀಣ ಭಾವು |

ಬಕ್ಷಿಸು ಸಿಕ್ಕರೆ ಈ ಮನಸು ಉಲ್ಹಾಸರಿ ||1||

ಕೋಯಿ ಸಾಧು ಮಂಗಾಕರ ಖಾಯೆ |

ಕೋಯಿ ಸಾಧು ಮಾಂಗಕರ ಖಾಯೆ |

ಕೋಯಿ ಭಕ್ತ ದಿಯಾ ಲೀಯಾ |

ಕೋಯಿ ಬಿರಲಾ ಜನ್ನತ ಪಾಯಾ |

ಕಿಂವಿಲಿ ಕೇಳಿ ಕಿವುಡಂತೆ ಗಯಾ ಸಿದ್ಧ ಚೋರಿ ||2||

ಸುದಾಮ ಹೋಗಿ ಕೃಷ್ಣನ ಹಂತ್ಯಾಕ |

ದಾಮ ಪೈಕಿ ಬೇಡಲೀಕಾ |

ಬೇಡಲಿಲ್ಲ ನಾಚಿದಾ ಮನಕಾ |

ನೀಡಿದ ಖರೇ ಮುತ್ತು ಮಾಣಿಕ |

ಸುದಾಮ ನಗರ ಕಟ್ಟಿಸಿದ ಸುದಾಮಕಾ ಪೇಠಭರಿ ||3||

ಅತ್ತಿ ನೀನು ಸೌತಿ ಮಾತ ಕೇಳಿ |

ತೂತಿನ ಕೊಡ ತಂದೆವ್ವಾ ||ಪಲ್ಲವಿ||

ಒಂಬತ್ತು ತೂತ ಕಾಣುವ ಸದರ |

ನೆಂಬಿಸಿ ಕೊಟ್ಟ ಯಾಂವ ಕುಂಬಾರ |

ತುಂಬಿ ಬರುವಲ್ಲದವ್ವಾ ನೀರ |

ಗುಂಬ ನೀರು ಹರದಾರಿಯ ಫೇರಾ |

ಸತಿಲಿಂದಾ | ಪತಿಬೈದಿದಾ | ಕತ್ತಿ ಅಂದರೆ |

ಹ್ಯಾಂಗ ಮಾಡಲೆವ್ವಾ ||1||

ಸಿಂತರಸ್ಯಾನ ಕೊಡವು ಠಕ್ಕಾ |

ಮಂತರಸಿ ತೊಕೊಂಡನ ರೊಕ್ಕಾ |

ಶಾಂತ ಬಾರೇ ನೆರೆಯ ಮನಿ ಅಕ್ಕಾ |

ಸಂತರ ಬಲ್ಲಿ ನಮಗ ಹ್ಯಾಂಗ ಸಿಕ್ಕಾ |

ದುಡಕಿದರ | ಸಿಗಲಾರ | ಕುಂಬಾರ |

ಕಾಣಿರೇನವ್ವಾ ||2||

ಎಲ್ಲಿ ಇಲ್ಲಾ ಬೈಲೆ ಬೈಲಾ |

ಕಲ್ಲ ಮಣ್ಣು ಹೊರತೇನು ಇಲ್ಲಾ |

ಕುಲಾಲನ ಅಂತ ಹತ್ತೋದಿಲ್ಲಾ |

ಗುಲಾಲ ಊದ ಏರಸಿದರ ಇಲ್ಲಾ |

ಯಾತಕ | ಮತ್ರ್ಯೇಕ | ಬ್ಯಾಡ ಪುನಃ |

ಸಿದ್ಧ ಶಿವ ಶಿವಾ ||3||

ಚಲತಿ – ಪ್ರೇಮದ ಕೊಡ ಉಳದಿಲ್ಲ ಒಂದ |

ನಾಮದ ಕೊಡ ಉಳಿವದು ಒಂದ |

ನೋಡೊ ಗುರು ಮನಿಯೋ |

ರೂಢಿ ಒಳಗೆ ಕುಂತು |

ಈಡಾ ಪಿಂಗಳ ಮಾರ್ಗದಿಂದ ||ಪಲ್ಲವಿ||

ಅನುಭವದ ಯೋಗದಿಂದ |

ತನು ಭಾವದ ಜ್ಞಾನ ಆನಂದ |

ಕಾಯಾ ರಹಿತವಾಗೋ ಮನವೆ |

ವಯಾ ಮೀರಿ ಹೋಗುವದಯ್ಯೊ ||1||

ಅಂಗದ ಗುಣಗಳು ಅಳಸಿ |

ಲಿಂಗ ದೇಹದಲ್ಲಿ ನಿಲ್ಲಿಸಿ |

ಗಂಗಾ ಯಮುನಾ ಸ್ನಾನಗೈಸಿ |

ಲಿಂಗಾ ಪಂಚಾಕ್ಷರ ಪಠಿಸಿ ||2||

ಶ್ರೀಂಗಾರ ವಾದಂತ |

ರಂಗ ಮಂಟಪದೊಳು |

ತ್ರಿಲಿಂಗ ಮೂರತಿ ಕಂಡು

ಧನ್ಯ ಧ್ಯನವಾಗಯ್ಯೊ ||3||

ಸೂಕ್ಷ್ಮ ಮಾರ್ಗದಿಂದ |

ಲಕ್ಷ್ಮಿಣಿ ನೋಡು ಛಂದ |

ಪಶ್ಚಿಮ ಆಕಾಶ ಆನಂದ |

ಸಾಕ್ಷಾತ್ ಕಾಣುವನಯ್ಯೊ ||4||

ಆಧಾರ ಸ್ವಾದಷ್ಟ |

ಮಣಿಪುರ ಮಾರ್ಗ ಥೇಟ್ |

ಅನಾಹತ ಕಲಂಕಿ ಫಾಟ |

ನೋಡಿಕೊಳ್ಳೋ ಮುಕುಟ ||5||

ಈ ಸುದ್ದಿ ಅಗ್ನಿಚಕ್ರ |

ನೋಡಿಕೊಳ್ಳೊ ಏಳು ಸಿಕ್ರ |

ಆಧಾರದೊಳು ಇರುವನು ವಕ್ರ |

ಗುಂಡ ಗಣಪತಿನಯ್ಯೊ ||6||

ಸತ್ಯಯುಗದ ಕಾಲ ಬಂತು |

ಮಿಥ್ಯಾ ಹೋಗುವ ಕದವು ತೆರಿತು |

ನಿತ್ಯನುಡಿ ಸತ್ವದ ಮಾತು |

ಮುತ್ಯಾನ ಕಿಂವಿ ಕೇಳುವದಯ್ಯೊ ||7||

ಎಲ್ಲಾ ದೇವರ ದೇವಾ ನೀನೆ |

ಕುಲ ಯೋನಿ ಜೀವಾ ನೀನೆ |

ಮೂಲ ಮಂತ್ರ ಒಲ್ಮಿನೀನೆ |

ಕಾಲಕರ್ಮ ಧರ್ಮ ನೀನೆ ||8||

ನೀಲ ಚರಣ ಶಂಬೋ ತಾನೆ |

ಭಾರತ ಮಾತಾ ಜವರ ನೀನೆ |

ಓಂ ಸೋಂ ಪ್ರಕಾಶದೊಳು |

ಸಿದ್ಧ ಬಿದ್ದು ಹೊರಳಿದನಯ್ಯೋ ||9||

ಏಕತಾರಿ ಕಾಯಿ ಕೈಯಾಗ ಪಿಡದಾ ನುಡಿದಾ |

ಆತ ನುಡಿದಂಗ ನಡಿದಾ |

ಏಕ್ಕಲ್ ಖಾಜಾನ ಡಾಂವ ಗೆದ್ದು ಛಿಡದಾ ||ಪಲ್ಲವಿ||

ಏಕ ಗುರುವಿನ ಪ್ಯಾಲಾ ಕುಡಿದಾ |

ಅನೇಕ ದೇವರ ಸೇವಾ ಮಾಡಿದಾ |

ದುಡ್ಡಿಗಿ ರಾಜಾ ದ್ವೈತ ಎರಡು ಕಡಿದಾ |

ಆತ ವರವು ಬೇಡಿದಾ |

ತ್ರಿಣಂಭೋಜಾ ತ್ರಿಗುಣಗಳು ತಡಿದಾ ||1||

ಚಾರಿಗಿ ಚೆಂಡು ಚತುರಂಗ ತಿಳಿದಾ |

ಚತುರ ಜ್ಞಾನದಿಂದ ಗೋಲಿ ಆಡಿದಾ |

ಪಾಚಿಗಿ ಪಂಡು ಪಂಚರಲಿ ಬೆರದಾ |

ಪಂಚ ತತ್ವಕ ತೆರದಾ |

ಸೀಮಾಝಂಡು ಷಡಾಕ್ಷರ ಪಡಿದಾ ||2||

ಸಟಾಪ ಟೋಲಿ ಸಪ್ತ ಸಿಂಧುದಾ |

ಸಪ್ತ ವ್ಯಸನದ ಬೋಧ ಬಿಟ್ಟು ನಡಿದಾ |

ಆಟಾಪನಲ್ಲಿ ಆಶ್ರಮದಂವ ಮುರಿದಾ |

ಮೂಗು ಮುಚ್ಚಿ ಕಣ್ಣು ತೆರದಾ |

ನಮ್ಮಿಂಟಿಲ್ಲಿದಾಗ ಗೋಲಿ ನೇಮ ಹಿಡದಾ ||3||

ಭಾವಿಕ ಮನುಜನು ಹಿಡದಿದಾ ಬಿರುದಾ |

ಧಾವಿ ಚೋಟ ದಶ ಇಂದ್ರಿಯ ಜಿಗಿದಾ |

ಆಟಗೆದ್ದು ಪೈ ಆಟವು ಹೂಡಿದಾ |

ನಿರ್ಬೈಲೊಳಗ ಆದಾ |

ರೇವಯ್ಯ ಸ್ವಾಮಿ ನಾಮಸಿದ್ದನೆಂಬಿ ನಡದಾ ||4||

ಬೆಳಗಿನೊಳು ಬೆಳಗ ತಿಳಿ ಯಾವುದು ಹೆಚ್ಚ |

ಸಾಲಿದೊಳು ಸಾಲಿ ಬರಿವದು ಯಾವದು ಹೆಚ್ಚ ||ಪಲ್ಲವಿ||

ದೇಹದೊಳು ಯಾರ ಹರ ಜಟ್ಟಿ |

ಯಾವದು ತತ್ವ ಬಿಟ್ಟಿ |

ನ್ಯಾಯ ಮಾಡಿರಿ ಪಂಡಿತರೆಲ್ಲಾ ಅನುಭಾವ ಮುಟ್ಟಿ |

ಸತ್ತಂವ ಒಯ್ದ ಎಲ್ಲಿಗಿ ಚಿಟ್ಟಿ |

ಸತ್ತು ಬಂದ ಹ್ಯಾಂಗ ಉಪರಾಟಿ |

ಸಾವಧಾನಲಿಂದ ಮತ್ತೊಮ್ಮೆ ಮಾಡರಿ ನಿರ್ಗುಣ ಬುಟ್ಟಿ |

ಘಾಳಿಸಂಗ ಜೀವ ಹ್ಯಾಂಗ ಹೋಯಿತು ಮಾಡರಿ ಸೋಚ ||1||

ಮಾನವ ಜಲ್ಮದ ಖೂನ |

ಮಾನವ ಮರ್ಮದ ಖೂನ |

ಮಾನವನಾದರೆ ಒಂದು ತಿಳಿರಿ ಖೂನ |

ಪುರಾನಿ ಬಾತ ಅಬ್ಬ ಕಂಹಾ ಧೂಂಡನಾ |

ಗಿರಾನಿತೋ ಐಸೆ ಹೈನಾ |

ಗಿರನೆಕೋ ಭಟಕ ರಹೆತಾ ಅಬ್ಬ ಕಂಹಾ ಬಚನಾ |

ಜ್ವಾಕಿಲಿ ಪ್ರಸಾದ ಮುಟ್ಟಿ ಸಿದ್ಧಾದ ಹುಚ್ಚಾ ||2||

ಆದಿ ಗಣಪತಿ ಪೂಜಾ ಮಾಡರಿ |

ಆದಿ ಚಕ್ರದಲ್ಲಿ |

ವಾದ ಭೇದ ಅಳಿದು ಸಾಧನ ಮಾಡರಿ |

ಆಚಾರ ಲಿಂಗದಲ್ಲಿ ||ಪಲ್ಲವಿ||

ಗುರು ಅಳಿದು ನೀವು ಗುರು ತಿಳಿರಿ |

ಗುರುಲಿಂಗದಲ್ಲಿ |

ಆರು ದಳದ ನೀವು ಅರ್ಥ ಮಾಡರಿ |

ಗುರು ತೀರ್ಥದಲ್ಲಿ ||1||

ಸಿದ್ಧಾಂತ ಸೇದಿ ನೀವು ವೇದಾಂತ ಓದಿರಿ |

ನಿಮ್ಮ ಅಂತರಂಗದಲ್ಲಿ |

ಇಚ್ಛಾಶಕ್ತಿದು ಸತ್ಯ ನೋಡರಿ |

ಮಣಿಪುರ ಚಕ್ರದಲ್ಲಿ ||2||

ಆದಿಶಕ್ತಿಯ ಅಗಾಧ ಮಹಿಮಾ |

ಅನಾಹುತಪುರದಲ್ಲಿ |

ಅಷ್ಟಕಮಲ ಹನ್ನೆರಡು ದಳಗಳು

ಜಂಗಮ ಸ್ಥಳದಲ್ಲಿ ||3||

ಪರಾಶಕ್ತಿ ನಮಗೆ ವರು ಆದಳು |

ಗುರು ಜ್ಞಾನದಲ್ಲಿ |

ಮೇಘನಾದ ನುಡಿ ಆದ ಪ್ರಣಮ |

ಶರಣ ಸ್ಥಳದಲ್ಲಿ ||4||

ಚಿತ್ತ ಶಕ್ತಿ ನಮಗೆ ಗೊತ್ತು ಆದಳು |

ಅಗ್ನಿಚಕ್ರದಲ್ಲಿ |

ಮಹಾಲಿಂಗನಲ್ಲಿ ಮಾಯವಾಯಿತು |

ಐಕ್ಯ ಸ್ಥಳದಲ್ಲಿ ||5||

ಸದರ ಸಿದ್ಧೇಶ್ವರ ಒದರಿ ಹೇಳಿತಿನಿ |

ಸಿದ್ಧನ ಕರುಣದಲ್ಲಿ |

ಶರಣು ಶಾಂತಲಿಂಗ ವರ್ಣ ಮಾಡುತರ |

ಗುರು ಚರಣದಲ್ಲಿ ||6||

ಬರ್ರಿ ಬರ್ರಿ ಬಸವಕಲ್ಯಾಣ

ಅನುಭವ ಮಂಟಪಕ ||ಪಲ್ಲವಿ||

ಬಯಲು ದೇಶದವರು ಬರ್ರಿ |

ಬಲು ನಾಸಿಕ ದಾರಿ |

ಬಲ್ಲವರ ಬೆನ್ನಹತ್ತಿ ಬರ್ರಿ |

ಮೆಲ್ಲನೆ ಮೇಲ್ ಸುವರ್ಣಗಿರಿ |

ತ್ರಿವೇಣಿ ಸಂಗಮ ದಾಟಿ |

ಪಶ್ಚಿಮ ಸ್ಥಳಕ ಬರ್ರಿ ಬರ್ರಿ ||1||

ಪಹಲೆ ಸ್ಥಾನ ಸಾವಿರ ಲಿಂಗ |

ದುಸರೆ ಸ್ಥಾನ ಎರಡು ಲಿಂಗ |

ತಿಸರೆ ಸ್ಥಾನ ಸೋಳಾ ಲಿಂಗ |

ಚೌಥಾಸ್ಥಾನ ಬಾರಾ ಲಿಂಗ |

ಹತ್ತು ಆರು ನಾಲ್ಕು ಒಂದ |

ತಿರುಗಿ ಬಾ ಬಾ ಸಿದ್ಧ ಭಜನಿಗಿ ||2||

ಚಲತಿ – ಇಲ್ಲಿ ಇಲ್ಲಿ ಹುಡುಕುವುದು ಸಾಕೋ |

ತನ್ನಲ್ಲಿ ದೇವರು ಹರ ತಿಳಕೋ ||

ಬಾ ತಂಗಿ ಭಜನಿ ಮಾಡಾಮಿ |

ಗುರು ಭಜನಿ ಮಾಡಿ ಗುರು ಚರಣ ನೋಡಾಮಿ ||ಪಲ್ಲವಿ||

ಅಕೋ ನೋಡು ಮುಂದಾದಳ ಎಂಕಾ |

ಅಕ್ಕ ಹ್ಯಾಂಗ ಧಾಟಿ ಹೋದಳು ತ್ರಿಪುರ ಲಂಕಾ |

ನಿಕ್ಕ ಭಂಗಾರಕ ಇಲ್ಲ ಟಂಕಾ |

ಸ್ವರ್ಗ ಮತ್ರ್ಯ ಪಾತಾಳದೊಳು ಹೊಡಿತಾವೋ ಡಂಕಾ ||1||

ಭವದೊಳು ಮುಚಿಕೊಂಡದ ಸುಂಖಾ |

ಶಿವನು ನಮಗೆಲ್ಲ ಹಚ್ಯಾಕೋ ಹಾರುವದಕ ಪಂಖಾ |

ಭವ ಬಾಧಿ ಬಲು ಬಿರಿ ವಂಕಾ |

ದೇವಾ ತನ್ನಲ್ಲೆ ಇಟುಕೊಂಡ ಜಮಾಖರ್ಚಿನ ಬ್ಯಾಂಕ ||2||

ಇನ್ನ ಮಾತ್ರ ಮಧ್ಹ್ಯಾಣಯಾಳ್ಯಾ ಮಂಗಿ |

ತಮ್ಮ ಬೆನ್ನ ಮಾತ್ರ ಬಿಡುಬಾರದೊ ಕಟ್ಟೋಪಚಂಗಿ |

ಖೂನ ಮಾತ್ರ ಕೊಡುಬಾರದೋ ಗಂಗಿ |

ಅಕ್ಕ ಜೇನ ಮಾತ್ರ ತಿನಬೇಕ ಒಳಗ ಬ್ಯಾಡ ಢೋಂಗಿ ||3||

ಸಂಭಾನ ಮರಜಿ ಬ್ಯಾರಮ್ಮ |

ಜಂಬೊ ಗಡ್ಡಿ ದೀಪದ ಬೆಳಗ ಎಲ್ಲರ ಮ್ಯಾಲಮ್ಮ |

ನಂಬಿದಲ್ಲಿ ಇಲ್ಲ ಹೆಚ್ಚ ಕಮ್ಮಾ |

ಅಂಬಲಿ ಉಣಸಿ ಕುಂತಾಳ ಚಕ್ರಕೋಟಿ ಬಾಯಮ್ಮ ||4||

ಸುಳ್ಳಾಡಿ ಸುದ್ರಾಸಿದ್ರ ಇಲ್ಲ |

ನೆಳ್ಳ ಬಂದಿದ್ರ ಏನ ಬಂತೋ ಮೋಡ ಸ್ಥಿರವಿಲ್ಲ |

ಮುಳ್ಳ ಕೊನಿ ಮ್ಯಾಲ ಪರಬ್ರಹ್ಮ ಮೂಲ |

ತಾಳಬೇಕಮ್ಮ ದೇವಿದಾಸ ಇಡು ಒಂದೇ ಖ್ಯಾಲ ||5||

ತಂಗಿ ಕಲೆತು ಹೋಗಾನು ಬಾರೆ ಭಜನಿ ಕೇಳದಕ |

ಭಜನಿ ಕೇಳದಕ ಸಂತರ ಸೇವಾ ಮಾಡದಕ ||ಪಲ್ಲವಿ||

ನೀತಿ ಪದ ಕೇಳಿ | ದಾಟಿ ಮಾಯಾದ ಹೊಳಿ |

ನಂದೇ ಎಂಬೋ ಮನಸಿನ | ಮನಿ ತ್ಯಾಗ ಮಾಡದಕ ||1||

ಕ್ಷಣ ಭಂಗೂರ ಗೊಂಬಿ | ಸ್ಥಿರವಿಲ್ಲೇನು ರಂಭಿ |

ಆಟ ಹಚ್ಯಾನು ಡೊಂಬಿ | ನೋಡಬಾರದು ನೆಂಬಿ ||2||

ವಯ ಮೀರಿ ಬಂತು | ಖಾಯ ಏಳವಲ್ಲದು ಕುಂತು |

ಖಾಲಿ ಹೊಯ್ತೊ ಬಂತೋ | ಜಲ್ಮ ಆಗುವದು ವ್ಯರ್ಥ ||3||

ಒಮ್ಮೆ ನೋಡಿದ ಮನಸ | ಇನ್ನೊಮ್ಮೆ ಅವರೀಗಿ ಕರೆಸ |

ಚೈನವಿಲ್ಲಾ ಹೋಗಾಮಿ ನಡಿ | ಭಾಳ ಉಲ್ಲಾಸ ||4||

ದೇವಿದಾಸನ ಭಜನ | ನರಯೋನಿ ಪಾವನ |

ತತ್ವಜ್ಞಾನ ಸಂಪೂರ್ಣ | ಅನುಭವ ಮಂಟಪಕಾ ||5||

ಗುರುಕೃಪಾ ಆಗಲಾರದೆ ಅರ್ಥ ಏನಪ್ಪ ||ಪಲ್ಲವಿ||

ಗುರು ಮನಿಗಿ ಬರುವತನಕ |

ಮಸ್ತಕ ಮೇಲ ಹಸ್ತ ಇಡೋತನಕ |

ತೀರ್ಥ ಪ್ರಸಾದ ಮುಗಿವೊತನಕ |

ಇನ್ನೂರ ಹದಿನಾರು ಸಕೀಲದ |

ಉನ್ಮನಿ ನಿರ್ಬೈಲ ದೇವರ ನೋಡಲಾರದೆ ಬೀಳಪ್ಪ ||1||

ವರ ಗುರು ಉಪದೇಶ ಆಗೋತನಕ |

ಆದರ ಆದಿ ಖರೇ ನಡಿವೋತನಕ |

ವಾದದ ಮನಿ ಬಿಟ್ಟು ನಿಗೋತನಕ |

ಸೃಷ್ಟಿಕರ್ತ ನಿನ್ನ ಸನ್ನಿಧಿ ಇರುವನು |

ಚಾಷ್ಠಿ ಮಾತನಾಡಿ ಆದೇನು ಮುಪ್ಪ ||2||

ಪಗಡಿ ಮನಿಗಿ ಪಾವ ಹಚ್ಚೋತನಕ |

ಪನ್ನಾಸ ದಳಗಳು ಮುಟ್ಟೋತನಕ |

ಸನಮುಖಿ ಮುದ್ರಿಯ ಬೈಲಾಗೋತನಕ |

ಪಶ್ಚಿಮ ಬೈಲೊಳು ಪತಂಗ ಏರಿಸಿ |

ಆ ಪರಬ್ರಹ್ಮನೆ ಆಗಲಾರದೆ ಲೇಪಾ ||3||

ಕಣ ಮುಚ್ಚಿ ಆಡಿ ಫಾಜಕ ಮುಟ್ಟೋತನಕ |

ಉಪ್ಪಿನ ಮನಿ ಆಡಿ ಗೆದಿವೋತನಕ |

ತುಪ್ಪದೊಳಗ ಮೋರಿ ನೋಡೋತನಕ |

ಭೂಮಿ ಇರೋತನ ನಾಮ ಇಟ್ಟಿದಾರೊ |

ನೇಮ ಇಟ್ಟ ನಡದವರೆ ರೇವಯ್ಯಪ್ಪ ||4||

ನಾನು ಮಾಡಿದ ಫಲ ಉಂಟೆ ಗುರುನಾಥ |

ನೀನು ಕಾಡಿದ ಫಲ ಉಂಟು ದೀನಾನಾಥ ||ಪಲ್ಲವಿ||

ಭಾರಿ ಓದಿ ಜಪತಪ ಮುದ್ರಾ ಮಾಡಿ |

ಗುರುನಾದೇನು ಹಮ್ಮಿನ ಮಾತನಾಡಿ |

ನರಿ ಕಕ್ಕಿಕಾಯಿ ತಿಂದಂತೆ ಪದ ಹಾಡಿ |

ನಿರ್ಗುಣ ರಾಜಾ ನಿಮ್ಮ ತಿಳದಂವ ಗುರುಭಕ್ತ |

ಪ್ರಥಮ ಅನಂತ ಯೋಗ ಹಿಡಕೊಂಡವನೆ ಮುಕ್ತ ||1||

ಕ್ಷಮಾ ಮಾಡೋ ಪಾಪಿಗೆ ಪಾಪನಾಶ |

ಧರ್ಮದ ಹೊಳಿ ನೀರಿನೊಳು ದಯಾಸಾಗರ ನಿರ್ದೋಷ |

ಪರಬ್ರಹ್ಮ ಜಗಪಾಲಾ ಜಗದೀಶ |

ಕಲ್ಲಿನ ತೂಕ ಬರುವಲ್ಲದು ಜ್ಞಾನಮಾತ್ರ |

ಗತಿ ಇಲ್ಲದಾಗ ಬರದಿಟ್ಟದಿ ಗುರುವೇತಾ ||2||

ಹಣ ಇದ್ದವರು ತಿರುಗುವರು ಮಹಾತೀರ್ಥ |

ಗುಣ ಇದ್ದವರು ಮಾಡುವರು ಋಗ್ವೇದ ಅರ್ಥ |

ಸಣ್ಣ ಪ್ರಾಣಿಗಿ ಭವಸಾಗರ ಬಿಟ್ಟಿ ವ್ಯರ್ಥ |

ನೀರಿಲ್ಲದ ಹೊಳಿಯೊಳು ಮುಣಮುಣಗಿ ತೇಲುತ |

ಸದ್ಗುರುನಾಥ ಹಿಡಿಹಿಡಿ ಎನ್ನ ಹಸ್ತಾ ||3||

ತನ್ನ ತನುವಿನಲ್ಲಿ ಇರುವನುಪರಬ್ರಹ್ಮ |

ಖೂನ ತೋರುವರು ಗುರು ಹಿರಿಯರು ಬರೆದು ಇಲ್ಮಾ |

ಏನ ಕಾರಣ ಎನಗಿಟ್ಟಿ ಮರವಿನಾ ಜಲ್ಮಾ |

ಇಪ್ಪತ್ತೊಂದು ಸಾವಿರದ ಆರುನೂರು ಜಪದ ಗಿಣತ |

ತಿಳಿಲಾರದು ಮಹಾರಾಯ ನಿಮ್ಮ ಗಣಿತ ||4||

ಎನ್ನ ಶಬ್ದ ಕೇಳಿ ಮಲಕಪ್ಪಸ್ವಾಮಿ ಹೊಟರೂ |

ಪೂರ್ವ ಜಲ್ಮ ಇದ್ದರೇನೊ ನಮ್ಮ ನೆಂಟರೊ |

ಕಂಡಕ್ಷಣ ಅವರ ಕೊರಳಿಗಿ ಬಿದ್ದಿದಿ ಅಂಟರೂ |

ಎತ್ತುಕೊಂಡು ನಡದ ಬಲಕಿನ ಮಾರ್ಗ ಧೂತ |

ತ್ರಿಕೂಟದಲ್ಲಿ ತೋರುವರು ಮೂರು ತೀರ್ಥ ||5||

ಏಕದಂ ಕರೆದೊಯ್ದ ಆಧಾರಪುರಿ |

ಚತುರ್ಮುಖ ಬ್ರಹ್ಮದೇವರ ಜಾತರಿ |

ಬ್ಯಾರೆ ರಂಗನೋಡಿ ತಿರುಗ್ಯಾಡಿ ಸ್ವಲ್ಪ ಸೋತರಿ |

ಜಾತರಿಗೆ ಬಂದ ಜನಕ ಸರಬರಿ ಗಣಾನಾಥ |

ಸರ್ವರ ಸೇವಾದೊಳು ಆಗುವದು ಅಮೃತ ||6||

ಆರುಸಥಲ ನೋಡಿ ಬಂದ ದಹಾವಿಖಂಡ ಧಾಟಿ |

ಅನುಹಾತದೊಳು ಬಡಿತಪ್ಪ ಬಾರಾ ಘಂಟಿ |

ಸೋಳಾ ಬ್ರಹ್ಮ ಜೆತಿ ಕೊಳ್ಳಗೆ ಕಟ್ಟಿ ಕಂಟಿ |

ಅಗ್ನಿ ಸಿದ್ಧಾಸನ ಮೇಲೆ ಕುಂತಾರೊ ಸಾಕ್ಷಾತ್ |

ಚಕ್ರವರ್ತಿ ಜೋಡಿಲಿ ಶಿವಸಾರ ಬಿತಾ ||7||

ತ್ರಾಯ ತ್ರಾಯ ದೇವಿದಾಸ ಘಾಬರಿ ಆದ |

ಅಗ್ನಿದೊಳಗಿಂದು ಹೋಗುವರು ಹ್ಯಾಂಗ ಹಾಯ್ದ |

ಮಲಕಪ್ಪ ಮುತ್ಯ ಕೈಹಿಡಿದು ಝೋಲಿ ಹೊಡದ |

ಸಹಸ್ರ ರವಿ ಜ್ಯೋತಿ ಪ್ರಕಾಶ ಪ್ರಭುನಾಥ |

ತೋರಿ ಹೊರಕ ತಂದಿದ ಸದ್ಗುರು ನಾಥ ||8||

ಬಲ್ಲ ಜ್ಞಾನಿಗಿ ಅಂದೊಬ್ಬ ಮಹಾ ಕೋಪಿ |

ಕುಲಕುಟಿಲ ನೀಹೆಂಥ ಆಡುವ ಹಿರಿಪಾಪಿ |

ಮೂಲ ಭಜನಿ ಗುರುಹಿರಿಯರ ಮಾತು ಕಾಫಿ |

ಗುರುವಿನ ಸೇವಾದೊಳು ತಿಳದವನೆ ಮಹಾಜೋತ |

ಕಾಲನ ಕಾಲ ಫಲವುಂಟು ಗುರುಸಿದ್ಧನಾಥ ||9||

ಶಿವ ಲಿಖಿತ ಘಟಕವ ನೋಡಿ |

ಭವ ಗೆದಿ ಪ್ರಯಾಣ ಮಾಡಿ |

ಅತ್ತ ಇತ್ತ ಅಗಲದ ಮನ |

ಗುರುನಾಮ ಕೊಂಡಾಡಿ ||ಪಲ್ಲವಿ||

ಶೂನ್ಯ ಘಟಕದೊಳು ಹೊಂಟ |

ಸೀತಾಗೊಯ್ದ ಆ ದಶಕಂಠ |

ಒಲತಿದ ಖರೆ ಆ ನೀಲಕಂಠ |

ಸತ್ತ ಸುಳ್ಳೆ ಮಾಡಿಕೊಂಡ ತಂಟ ||1||

ಚಕ್ರ ಘಟಕ ಹೆಂತದೈತಿ |

ಹ್ಯಾಂಗ ವಶ ಆ ದ್ರೋಪತಿ |

ಕೀಚಕ ಹಿಡಿದ ಭೀಮನ ಕುಸ್ತಿ |

ಇಳದ್ಹೊಯ್ತು ಕ್ಷಣದಲಿ ಮಸ್ತಿ ||2||

ಅಮೃತ ಘಟಕ ಆ ಮಾರ್ಖಂಡ |

ಒತ್ತಿ ಹಿಡಿದ ಮಹಾದೇವನ ಪಿಂಡ |

ಯಮ ಫಾಸಿ ಬಿಡಿಸಿದ ಗಂಡ |

ಚೌದ ಕಲ್ಪ ಆಯುಷ್ಯ ಪಡಕೊಂಡ ||3||

ಮಹೇಂದ್ರ ಘಟಕ ನೋಡಿಯ ನೇಟ |

ತುಕಾರಾಮ ಹೋದ ವೈಕುಂಠ |

ರೇವಯ್ಯ ಸ್ವಾಮಿ ನಾಮದ ಗಂಟ |

ಸಿದ್ಧ ಭಜನಿದೊಳು ಲುಟಾಸಿ ಹೊಂಟ ||4||

ಚಲತಿ – ಶೂನ್ಯ ಘಟಕದೊಳು ಬರಬ್ಯಾಡ |

ಮಹೇಂದ್ರ ಘಟಕದೊಳು ಕೂಡಬ್ಯಾಡ ||

ಸದ್ಗುರುನಾಥ ಎಂಥಾ ಉಪಕಾರ ಮಾಡಿದ ||ಪಲ್ಲವಿ||

ಸಂಸಾರ ಹೊಳಿ ಈಸಿದ |

ಸಂಶಯೆಂಬುದು ಎಲ್ಲಾ ತೆಗೆಸಿದ |

ಸಂಸ್ಥಾನ ಮಠಕ ಒಯ್ದ |

ಸ್ವಯಂ ನಿರ್ಗುಣ ಉನ್ಮನಿ ತೆರದ |

ಶಾಂತ ಗುಣದ ಭಂಗಾ ಕುಡಸಿದಾ… ||1||

ಬಯಲ ಮುದ್ರ ಒಂದು ತಿಳಸಿದ |

ಬಯಲ ಗುಪ್ತ ಅಂದುತೋರಿದ |

ಆನಂದ ರಸ ಒಮ್ಮೆ ಕುಡಿಸಿದ |

ಬಯಲೆ ಬಯಲ ಹಣ್ಣ ತಿನಸಿದ |

ಕುಂತಲ್ಲಿ ಕೈಲಾಸ ಕಾಣಸಿದಾ… ||2||

ತೂಗೊ ಅಂದರ ಒಲ್ಲ ಅನ್ನುವರು |

ಸುಮ್ಮನ ಕುಂತಾರ ದಾರ ಕೇಳುವರು |

ಮಾರುಬೇಕು ಹ್ಯಾಂಗ ಮಾರುವರು |

ಮೂಹೂರ್ತ ಹೇಳ್ರಿ ನೀವ್ ಬಲ್ಲವರು |

ನಿಂತಲ್ಲೆ ವಿಠಲ್ ನಿಂತಿದಾ… ||3||

ಕಲ್ಲಿನೊಳು ರೂಪ ತೋರಿದ |

ಕಂಬದಳು ರೂಪ ತೋರಿದ |

ಸೂರ್ಯಗ ಹೋಗಿ ಹ್ಯಾಂಗ ನುಂಗಿದ |

ಬ್ಯಾರೆ ಬ್ಯಾರೆ ಇಟ್ಟರ ಬರೆದ |

ಬ್ಯಾರೆ ಸಿದ್ಧಾನಂದ ಬೇಡಿದಾ… ||4||

ಚಲತಿ – ಪಿಂಡದೊಳು ಪ್ರಕಟವಾದಿ |

ಮಾರ್ಖಂಡನ ಫಾಸಿ ತೆಗದಿ ||

ಶ್ರೀಗುರು ದರ್ಶನಕಾ ಹೋದೆನು ಗಂಗಾ |

ಹರದಹೋಯಿತು ಒಮ್ಮೆ ಈ ಜನರ ಹಂಗಾ |

ಬಂಧು ಬಳಗ ರಂಗಾ ||ಪಲ್ಲವಿ||

ಅನಂತ ಕೊರಳಾಗಿಂದು ತೆಗೆಸಿದ ಮಾಲೆ |

ಏಕಾಂತ ಕರೆದೊಯ್ದಿದ ಯಾರು ಇಲ್ಲದಲ್ಲೆ |

ಕರ್ಣದೊಳು ಊದಿದನಮ್ಮ ಆರಕ್ಷರ ರಂಗ ||1||

ಪಂಚರಂಗಿ ಸೀರಿ ಪಿಡಿದು ಹೊಡಿದನಮ್ಮ ಝೋಲಿ |

ಅಷ್ಟಾಂಗ ಮುಚ್ಚುವಂಥ ಸೀರಿ ಕೊಟ್ಟು ಕೈಲಿ |

ಹರಿಹರ ಕೂಡಿದ ಪ್ಯಾಲಾ ರಾಮರಹಿಮ ಕೂಡಿದ ಪ್ಯಾಲಾ ||2||

ನಿರಂಕಾರ ನಿರ್ಗುಣದ ತಿಳಿಸಿದ ನೆಲಿ |

ಬರೆ ಬಾಯಿ ಮಾತಲ್ಲಾ ತೆರಿವುದು ಕೀಲಿ |

ಸರಿಯಾಗಿ ದುಡಿದರ ಸಿದ್ಧ ಕೂಲಿ ಕೊಡುವ ಲಿಂಗ ||3||

ಶ್ರೀಗುರು ಉಪದೇಶ ಪಡಿದು ಎನಗಾಯ್ತು ಧುಂದಾ |

ಏನೇನು ಅರಿಯಲೆಮ್ಮಾ ಮನಿಮಾರು ಧಂಧಾ ||ಪಲ್ಲವಿ||

ಪಂಚತತ್ವ ಧ್ಯೇಯದ ಬಾನು ಇಲ್ಲದಂಗ |

ಹಂಚು ಇಲ್ಲ ಹಿಟ್ಟು ಇಲ್ಲ ರೊಟ್ಟಿ ಹಾಕಿದಂಗ |

ಕಿಂಚಿತ್ತ ನೆನಪಿಲ್ಲಾ ಆದೇನು ಮಂಗ |

ಸಂಚಿತ ಕ್ರೀಯ ಮನ ಬೈಲವಾಯಿತು ರಂಗ ||1||

ತಾಯಿ ತಂದಿ ಅತ್ತಿ ಮಾಂವ ಸುರತ ತಪ್ಪಿದಂಗ |

ಪತಿ ಎದುರು ನೆತ್ತಿ ಮ್ಯಾಲಿಂದ ಸೆರಗ ತೆಗೆದಂಗ |

ಕೋತಿಗಿ ನೋಡಿ ಕೋಡಗಗಳು ಓಡಿ ಹೋದಂಗ |

ಸದಾ ಅಂಗದೊಳು ಕಂಡಿದಂಗ ಲಿಂಗ ||2||

ಒಮ್ಮಿಂದೊಮ್ಮೆ ಹರದ ಹೋಯಿತು ಈ ಜನರ ಹಂಗ |

ಪ್ರೇಮವಾಗಿ ಇರುವುದು ನೇಮಾ ನಿತ್ಯ ನಿಜ ಸಂಗ |

ಅವ ದುನಿಯದೊಳು ಆಯಿತು ಎನ್ನ ಮಾನಭಂಗ |

ಸದಾ ಸಿದ್ಧ ಭಜನಿ ಕೇಳಿ ಆದೇನು ಗುಂಗಾ ||3||

ಶ್ರೀ ಗುರುವಿನ ವಿನಾ ಗತಿಯವಿಲ್ಲಾ |

ಮಾನೋ ಜಲ್ಮಕ್ಕೆ ||ಪಲ್ಲವಿ||

ಜ್ಞಾನ ಮೌನ ಪಾನ ಸ್ನಾನ | ಧ್ಯಾನಲೀನ ಆಗೋಸ್ಥನ |

ಸ್ಪಾನುಭವದ ಸುಖದೀ ನಾಮಾಮೃತ | ಸೇವನ ಮಾಡಲಿಕ್ಕೆ ||1||

ಯಂತ್ರ ತಂತ್ರ ಜಂತ್ರಸಂತ್ರ | ಮುಖದಿ ಮಂತ್ರ ಭವನದೊಳು |

ಅಂತ್ರಜೀತ ಮೂರ್ತಿ ನೇತ್ರ | ಸಿದ್ಧಿವಾಗದಕ್ಕೆ ||2||

ಬ್ರಹ್ಮ ಬರಿದ ಧರ್ಮವರ್ಮ | ನೇಮ ನಿಷ್ಠ ಸೃಷ್ಠಿ ಚಲನ |

ವರ್ಮ ಜ್ಯೋತ ಕಲ್ಮಪಿಡಿದು | ಭಜನಿ ಬರಿಲಿಕ್ಕೆ ||3||

ನಾಲ್ಕು ಮುಂದ ನಿಲ್ಕಿ ಆರು | ಕಲ್ಕ ಹತ್ತು ಬಲ್ಕ ಬಾರ |

ಸೋಳ ಎರಡು ಸಹಸ್ರ ಗುಪ್ತ | ಗುಹ್ಯ ಹೋಗಲಿಕ್ಕೆ ||4||

ಜಾತಿ ಭೀತಿ ಭೂತ ಬೈಲ | ಸತ್ಯ ವಿರಕ್ತಿ ಮುಕ್ತಿ ಮೂಲ |

ಸ್ಥಿತಿಗತಿ ನಿರ್ಗುಣ ಸಿದ್ಧ | ಪ್ರಭು ತಿಳಿಲಿಕ್ಕೆ ||5||

ಆನಂದ ಗುರು ಎಲ್ಲೆಂದು ಹುಡುಕಲಿ ಸಜ್ಜನಾ ||ಪಲ್ಲವಿ||

ನಾನೇ ಎಂಬಾ ಹವಣಿಕಿ ಮುರಿದು |

ನೀನೆ ಎಂದು ತೊಟ್ಟ ಅಂವ ಬಿರುದು |

ತಾನೇ ನಾಲ್ಕು ದೇಹಾ ಹರಿದು |

ಎನ್ನನು ತನ್ನ ಹಂತಿಲಿ ಕರೆದು |

ಒಂದೇ ತೂಕ ಇಬ್ಬರ ವಜನಾ ಆನಂದ ಗುರು ||1||

ಕಂಡ ಜಾಗ ಪದ ಹಾಡುವರೊ |

ಕಂಡವರಿಗಿ ಬೇಡುವರೊ |

ಖಾಂಡ ನಮ್ಮಲ್ಲಿ ಅದ ಅನುಹುವರೊ |

ಭಂಡ ಆಟ ಬಿಡುವಲ್ಲದವರೊ |

ಅಂದಾ ಧುಂದಾ ಅಂಧೇರಾ ಭೋಜನ ||2||

ಬಲ್ಲೆನೆಂದು ಕವಿ ಮಾಡುವರೊ |

ಹುಲ್ಲಾ ಹುಚ್ಚ ನರಕವಿ ಅವರೊ |

ಬೈಲಖೂನ ಹಿಡಿಯಲದವರೋ |

ಮೇಲ ವರಕವಿ ಹ್ಯಾಂಗ ಆದರೊ |

ಬಂದೇಕು ಜನ್ನತ ಭೇಜನಾ ||3||

ಎಂಟ ಇಸದ ಅಕ್ಷರ ಖೂನಾ |

ಬಂಟ ಗವಿ ನೋಡೊಸ್ತನಾ |

ಗಂಟ ಹಂತವ ಬೀಳೋಸ್ಥಾನ |

ನೆಂಟ ಗಂಟ ಕೂಡೋಸ್ಥನ |

ಇನ್ನೊಂದಯಿಲ್ಲ ರಾಜಯೋಗ ಭಜನಾ ||4||

ಆರು ಮೂರು ಸ್ಥಲ ಬಿಟ್ಟವರೊ |

ಇನ್ನೂರ ಸೋಳಾ ಸಾವಿರದವರೂ |

ಗುರು ರೇವಯ್ಯ ಶಿಷ್ಯ ಅನುಹೂವರೂ |

ಧೂರ ಸಾವಸೆ ಹರದಾರಿದವರೊ |

ಬಸವ ಧುಂದ ಕಾಯಕ ರೋಜನಾ ||5||

ಏನು ಕಂಡು ಮರುಳಾದೇನು ಅಕ್ಕಾ |

ನೀಲಕಂಠಸ್ವಾಮಿ ನಿಮಗ ನೋಡಿ ನಕ್ಕಾ ||ಪಲ್ಲವಿ||

ಹರಕ ದ್ವಾಸಿಗೆ ಆಸಿ ಬಡಕಾ |

ತುರಕರ ಬಿಸ್ಮಿಲ್ಲಾನ ಮನಿ |

ಲಕ್ಷ್ಮಿ ನಿಂತಾಳ ಕಾಯಿಲಾಕ ||1||

ತರ್ಕ ಮಾಡಿ ನೋಡಮ್ಮಾ ಜೀವಕ |

ದ್ವಾಸಿ ನೀಡತೇನೆಂದು ಹಚ್ಯಾಳ |

ದೇಶ ಕಾಯಲಕ ||2||

ನಾಮದೇವನ ಮನಿಯಾಗೆ ಬರದಾರ ಲೆಕ್ಕ |

ನಮ್ಮ ಮಾಲಗಾರನ ಮನಿಯಾಗ |

ನಿಂತಾರ ಮೊಟ್ಟಿ ಹೊಡಿಲಾಕ ||3||

ಮರತದ ದನ ಕಾಯಿ ಲೆಕ್ಕ |

ಆಮ ದುನಿಯಾದ ಗವಳಿÀಗೇರು |

ಅನುವರು ಠಕ್ಕಾ ||4||

ಸುಟ್ಟಾನ ಲಂಕ ಪಡಲಂಕಾ |

ಸಿಟ್ಟ ಇಲ್ಲದಲ್ಲಿ ಹಚ್ಯಾನೋ |

ಮೂರ ಥಾವಲಿ ಟಂಕಾ ||5||

ಕುಟ್ಟದಕೆ ಸಖುಬಾಯಿಗೆ ಸಿಕ್ಕಾ |

ಮುಟ್ಟಿ ಅಳ್ಳು ತಿಂದು |

ಸುದಾಮನ ದೋಸ್ತಿ ಪಕ್ಕಾ ||6||

ಎಷ್ಟು ಮಂದಿ ಕುಂತಾರೊ ಉಣುಸದುಕ |

ಶ್ರೇಷ್ಠ ಪದವಿ ಪರಶಿವನ |

ಹತ್ತುವಲ್ಲದು ನಿಲುಕ ||7||

ಕಷ್ಟದಂತೆ ಫಲ ಬಸಮಕ್ಕ |

ನಿರಂತರ ಸಿದ್ಧನ ಹಂತಿಲಿ |

ನೀಲಕಂಠ ಬೆಳಕ ||8||

ಚಲತಿ – ಹ್ಯಾಂಗ ಹಾನೋ ಶಿವ ಹ್ಯಾಂಗ ಹಾನೋ |

ಹ್ಯಾಂಗ ನೋಡಿದವರ ಹಾಂಗ ಹಾನೋ ||

ಸತ್ಪುರುಷರ ಪದ ಸಾತ್ವಿಕ |

ವ್ರತಲಿಂದೆ ಕಲ್ತ ಹಾಡಬಾರದೇನು |

ಈ ಮಾಯಾ ಮರತಿರಬಾರದೇನು ||ಪಲ್ಲವಿ||

ಆದಿಗಣ ಪ್ರಾಸಕ ಸಿಲ್ಕಿದ ಪದವು |

ಗಡಿಪುರದೊಳು ಪೊಕ್ಕಿ ಹುಡುಕಿದ ಪದವು |

ನಡಿನುಡಿ ಇಲ್ಲದವರ ಮಿಡಕಿದ ಪದವು |

ಷಡಕ್ಷರಿ ಮಂತ್ರದ ರಾಗದ ಪದವು |

ರುಚಿ ನೋಡಬಾರದೇನು ತತ್ವವು ಮುಚ್ಚಿಡಬಾರದೇನೂ ||1||

ತನುಮನ ಧನ ಗುರು ಅರ್ಪಿತ ಪದವು |

ಶ್ರವಣ ಮನನ ನಿಜಧ್ಯಾಸದ ಪದವು |

ರಜ ತಮ ಸತ್ವ ಅನುಭಾವದ ಪದವು |

ಧ್ಯಾನ ಬಿಟ್ಟು ಅಜ್ಞಾನಿ ದುರುಳರಿಗಿ |

ಮುಕ್ತಿ ದೊರಿತೇನೊ ಅಜ್ಞಾನರಿಗೀ ಭಕ್ತಿ ಹಿತವೇನೊ ||2||

ಪರುಪಕಾರದೊಳು ಉಲ್ಲಾಸ ಪದವು |

ದೀಪಚಂದ ಧೂಮಾಳಿ ಗತ್ತಿನ ಪದವು |

ಸ್ಥಿರವಿಲ್ಲ ಕೊಂಪಿಗಿ ಝಂಪದ ಪದವು |

ರಾಗದೊಳು ಶಿವಯೋಗಿ ಆಗೋಸ್ಥನ |

ಸಾಧನ ಅಲ್ಲೇನೊ ಭಜನದೊಳು ನಾಮ ಸವಿ ಬಲ್ಲೇನೊ ||3||

ಜ್ಞಾನ ಸಂಗಮದ ಸ್ನಾನದ ಪದವು |

ತುಂಗ ಭದ್ರಿನಾಥ ಲಿಂಗದ ಪದವು |

ರಂಗ ಧಾಟಿ ಆತ್ಮಲಿಂಗ ಪದವು |

ಅರ್ಥ ತಿಳಿದು ಸಾರ್ಥಕ ಆಗುವಂಥ |

ಕೀರ್ತಿ ಅಲ್ಲೇನೊ ಕೃಷ್ಣಸಾರಥಿ ಆಗಿಲ್ಲವೇನೋ ||4||

ನಿತ್ಯ ಸತ್ಯ ಸಿದ್ಧ ಭಜನಿಯ ಮಾಡೋ |

ಸತ್ತಂಗ ಇರುವಂಥ ಸಾಧನ ಮಾಡೋ |

ಮರ್ತಂಗ ಇರುಬ್ಯಾಡ ಈ ಪದ ಹಾಡೋ |

ಕೃತಗುರು ಅವುಶಾ ಗುಂಡು ಮಹಾರಾಜರ |

ಸೇವವ ನೆನೆದೇನೊ ಚರಣ ತೀರ್ಥಾಮೃತ ಸವಿದೇನೋ ||5||

ಬಾ ಮಿತ್ರಾ ಶಿವಮಂದಿರ ನೋಡನು ಬಾ |

ಪವಿತ್ರ ಗುರು ಸುಂದರ ನಾದ ಕೇಳನು ಬಾ ||ಪಲ್ಲವಿ||

ಅಂತ್ಯ ಮಾರ್ಗ ಬಲನಾಸಿಕ ದಾರಿ ಹಿಡಿಯನು ಬಾ |

ಮಂತ್ರ ನುಡಿಯುತ ಸಂಗಮ ಸ್ನಾನ ಮಾಡನು ಬಾ |

ಗುರುಪುತ್ರ ಇಂದೂರ ತೇಜ ಆಧಾರಕ ಬಾ ||1||

ಶಾಸ್ತ್ರ ಪುರಾಣ ಕೀರ್ತನ ಭಜನ ಕೇಳನು ಬಾ |

ನಾಲ್ಕು ರಂಗ ಸ್ವಾದಿಷ್ಟ ಷಣ್ಮುಖ ನೋಡನು ಬಾ |

ಗುರು ಗೋತ್ರ ಹಂದರ ಹೊಕ್ಕಿ ಮಣಿಪುರಕ ಬಾ ||2||

ಅನಾಹುತ ಗಿರಿ ಬಾರಾ ಲಿಂಗ ಕಾಣನು ಬಾ |

ಹದನಾರು ದಳ ಪತ್ರಿ ಪೂಜೆ ಮಾಡನು ಬಾ |

ದೇವರ ಹತ್ರ ಸೂರ್ಯ ಚಂದ್ರ ಪ್ರಕಾಶ ಬಾ ||3||

ಸಹಸ್ರ ಜ್ಯೋತಿ ಪ್ರಕಾಶ ಪಶ್ಚಿಮ ತಿರಗನು ಬಾ |

ಸೋಹಂ ಶಂಕರ ಪದವಿ ಬೈಲ ಸಾರನು ಬಾ |

ಗುರುಸ್ತೋತ್ರ ದೇವಿದಾಸನ ಭಜನಿ ಹಾಡನು ಬಾ ||4||

ಎಲಾ ಮನಸಾ ನೀ ಎಂಥ |

ಪುಣ್ಯವಾನ ಗುಣವಾನ |

ನಿನ್ನ ಲಿಂದೆ ಎನಗೆ ಮಾನ ||ಪಲ್ಲವಿ||

ಸತ್ಯ ಧರ್ಮ ಕಮಾಯಿ ಮಾಡಿ |

ನಿತ್ಯ ಬಡು ಪ್ರಾಣಿಗಿ ನೀಡಿ |

ಗೊತ್ತಾಗಿ ಶಾಸ್ತ್ರ ಪುರಾಣ |

ಭಕ್ತಾಗಿ ಶ್ರವಣ ಮನನ |

ತೊತ್ತಾಗಿ ನಿಜ ಧ್ಯಾಸ |

ಹಂತವರ ತಳ ಕೈಲಾಸ |

ಶ್ರೀಮಂತರಿಗಿ ಎಲ್ಲಿ ಉಲ್ಹಾಸ |

ಮಹಾಸಂತ ಜ್ಞಾನದ ಅವಸಿ |

ಪ್ರಪಂಚ ಬೇಗಾನ |

ಪರಮಾತ್ಮನ ಜ್ಞಾನ ||1||

ಎಲಾ ಮನಸ ನಿರ್ಬೈಲ ತಿಳಿದವನೆ ಪುರುಷ |

ಅವನ ಬದಿಲಿ ಪಡದಿ ಪರೀಕ್ಷಾ |

ಮಹಾಮಂತ್ರ ಕಟಾಕ್ಷ |

ಜಪ ಹಿಡದಿ ಒಂಬತ್ತು ಲಕ್ಷಾ |

ಈ ಕಾಯಕ ಮಾಡಿ ಮಹಾ ಮೋಕ್ಷ |

ಈ ಜೀವದ ತಿರಗಿಸೊ ಕಾಂಕ್ಷೆ |

ಜಗದೊಖು ಆದಿ ಕಲ್ಪವೃಕ್ಷ |

ಇನ್ನೆಲ್ಲಿ ಉಳಿತು ಆಪೇಕ್ಷಾ |

ನಿನ್ನ ಸಂಗ ಕುಂತವನ |

ಅಂಗ ಆದ ಪಾವನ ||2||

ಎಲಾ ಮನಸಾ ನೀ ಎಂಥಾ ಬುದ್ಧಿವಾನ |

ಧನವಾನ ನಿನ್ನಲ್ಲಿ ಎನಗ ಮನ |

ನಿತ್ಯ ಪಂಚಿಗಿ ಭೋಜನ ಹಠಯೋಗಿ |

ರೇವಯ್ಯ ಸ್ವಾಮಿ ರಾಜಯೋಗಿ |

ಅಖಂಡಿತ ರಾಜ್ಯ ಆಳುವರು |

ಪಂಡಿತ ಜವಹರಲಾಲ ನೆಹರು |

ದಂಡಗುಂಡದ ಬಸವಣ್ಣನವರು |

ಪುಂಡ ಭಾರತ ಸೇವಕದವರು |

ಮಾನ ಮಾಡಿ ಸಾಧನ |

ದೇವಿದಾಸನ ಭಜನಾಶ ||3||

ಎಲಾ ಮನಸ ವೇದ ಒಂಬತ್ತು ಓದಿಕೊಂಡಿ |

ಪರಬ್ರಹ್ಮ ನೀ ತಿಳಕೊಂಡಿ |

ಯಾತ್ರ ಕಾಶಿ ಸ್ನಾನ ಮಾಡಿಕೊಂಡಿ |

ಹಿಮಾಲಯ ಪರ್ವತ ನೋಡಿ |

ಗೋಕುಲ ಮಹಾಬಳೇಶ್ವರ ಲಿಂಗ |

ಪರಮಾತ್ಮನ ಆತ್ಮದ ಲಿಂಗ |

ಕಣ್ಣಿಗಿ ಕಾಣಿ ಗಂಗಾ |

ಶೋಧ ಮಾಡಿ ಅಂತರಂಗ |

ಏಕಾಂತ ಧ್ಯಾನ | ಲೋಕಾಂತ ಮನ ||4||

ಗುರುತರ ಭಜನಿಯ ತಾಸು |

ಈ ನರ ದೇಹ ನೀರ ಗುರುಳಿ ಪರಿಯ |

ಸ್ಥಿರವಿಲ್ಲ ತನಯ ಸಾರ ತಿಳಿ ಎನ್ನಯ್ಯ |

ವೀರ ಸೂರ ಮುನಿಗಳು ಶೋಧಿಸಿ ವೇದಗಳು |

ಸೂರ್ಯ ಚಂದ್ರಗಳು ಏನುಂಟು ದಿನಸು ||1||

ತ್ರಿಲೋಕ ಉದಯ ತ್ರಿಮೂರ್ತಿಧನಯ |

ತ್ರಿಕಾಲ ಪೂಜಿಯಾ ತ್ರಿವೇಣಿ ಪತಿಯ |

ತ್ರಿಗುಣಸಾರ ಸಾರವಿಜಾರಾ |

ಆಯುಷ್ಯ ಪ್ರಕಾರ ಹೋಗುವ ಕನಸು ||2||

ಲಕ್ಷ ಚೌರ್ಯಾ ಐರಿಸಿಯ ಸ್ಥಿತಿ ಉತ್ಪತ್ತಿಯ |

ಮೋಕ್ಷದ ಯೋನಿಯಾ ಅಕ್ಷಯ ನರಪ್ರಾಣಿಯ |

ಸಾಕ್ಷ ಕಲ್ಪವೃಕ್ಷ ಇಚ್ಛಿತ ಅಪುರೋಕ್ಷ |

ಅಪರೋಕ್ಷ ಸಿದ್ಧನ ಭಜನಿಯ ಮಾನಸು ||3||

ಚಲತಿ – ನಮ್ಮ ನಿಮ್ಮದು ಇಲ್ಲಿ ಭೆಟ್ಟಿಯಾಯಿತು |

ಸುಮ್ಮನ ಬುಕಮನ ತುಟಿ ಆಯಿತು ||

ದೇಹದ ರಥದ ಮೇಲೆ ಕುಂತು |

ದೇವರ ದರ್ಶನಕ ಹೋಗೋಣ |

ಶಮೆ ದಮೆ ಕುದರಿ ಕಟ್ಟೋಣ |

ಒಮ್ಮೆ ಬೈಲ ಸಡಕಿಗಿ ಬರೋಣ ||ಪಲ್ಲವಿ||

ಕುದರಿ ಕರ್ಣದೊಳು ಫಾಳಿ ಸೇರಿ |

ಬೆದರಿ ಆರಣ್ಯದೊಳು ತಪ್ಪಿತು ದಾರಿ |

ಒದರಿ ಕರಿತಿನಿ ಯಾರು ಇಲ್ಲಾ ಅಲ್ಲಿ |

ಅಡಿಪಾಲ ಆಯಿತು ಅಣ್ಣ |

ಸದರಿಗಿ ಒಂದು ಪಕ್ಷಿ ಕಾಣಿತಣ್ಣಾ |

ಹೆದರಿ ಮುಚ್ಚಿ ನನ್ನ ಕಣ್ಣಾ ||1||

ಪಕ್ಷಿ ಕೇಳಿದ ಪರಬ್ರಹ್ಮನ ಗುಡಿಯಾ |

ರಕ್ಷಿ ಅಣ್ಣಾ ದಾರಿ ತಂಪಾದ ಒಡಿಯಾ |

ಭಕ್ಷಿಸ ಬೇಡಿದ ಒಂಬತ್ತ ನುಡಿಯಾ |

ಕೊಟ್ಟಿದ ಆ ಕ್ಷಣ ತತ್ಕಾಲ ದೇವರ ದರ್ಶನ |

ಸಿದ್ಧ ದೇವರಿಗೆ ತಿಳಿ ಅಣ್ಣ ||2||

ನೋಡಿ ನೋಡಿ ಮಾಡಿದ್ರ ಫಲವೇನು |

ಕಾಡಿ ಕಾಡಿ ಬೇಡಿದ್ರ ಫಲವೇನು |

ಕೂಡಿ ಕೂಡಿ ಆಡಿಕೊಂಡಿದ್ರ ಫಲವೇನು |

ನಡಿ ನುಡಿ ಒಂದ ಇದ್ದಲ್ಲಿ ಬಸವನು ||ಪಲ್ಲವಿ||

ಕೇಳಿ ಬಂದು ಸಭಾದೊಳು ಹೇಳುವಾ |

ಮಳಿ ಇಲ್ಲದ ಹೊಳಿ ಹ್ಯಾಂಗ ತುಂಬುವಾ |

ಗಾಳಿ ಮಾತಿಗೆ ಗುರು ಹ್ಯಾಂಗ ನೆಂಬುವಾ |

ತಾಳಿ ನೋಡಿ ಖುಶಿ ನಾದ ಶಂಭೂವಾ ||1||

ಭಕ್ತಿ ಜ್ಞಾನ ಖರೇ ಭಕ್ತ ಕಬೀರನು |

ಸತ್ಯ ನಿಷ್ಠ ಸೌದ ತಂದು ಉಣಸಿದನು |

ಕುತಗಿ ಕೂಟ್ಟ ಭಕ್ತಿಗಾಗಿ ಕಮಾಲನು |

ಮುಕ್ತಿ ಪದವಿ ಕೊಟ್ಟ ಶ್ರೀರಂಗ ಸಿದ್ಧನು ||2||

ಎಂದು ಕಂಡೆ ಚೆನ್ನಬಸವ ಎಂದು ಕಂಡೆ |

ಕಾಲಜ್ಞಾನ ಬರದಿದ ಲೇಖಾ ಭೂಮಿ ನಡುಗಾದು ಕಂಡೆ ||ಪಲ್ಲವಿ||

ಹಸರ ತೇಜ ಮ್ಯಾಲಾ |

ಕುಸುರದ ನಾಮ ಸೇಲಾ |

ಹೆಸರ ಚೆನ್ನಬಸವಣ್ಣನೆಂಬ ದೇಶ ಗಲಬಲಾ |

ಬಸವ ಕಲ್ಯಾಣಕ ಖಾಸ |

ಅನುಭವ ಮಂಟಪಕ |

ದೇಶ ಆಳುವರ ದರ್ಶನ ಜಗದ್ಗುರು ಕಂಡೆ ||1||

ಶಿವಪೂಜಿ ಮಾತಾ |

ಭವ ನೀರೊಳು ಗೊತ್ತಾ |

ತೇಲುತ್ತ ಮುಣಗುತ್ತ ಬದುಕುವದೇನು ಗಮ್ಮತ |

ಹಿಂದೂಸ್ಥಾನದ ಹಿಂದೂ |

ಅಂದಾ ಧುಂದಿ ದುಂಧು |

ರೀತಿ ಬಿಟ್ಟಾರೆಂದು ಹೇಳಿದ್ರೆ ಮೈಮ್ಯಾಲ ಬರುವದು ಭಂಡೆ ||2||

ಬಸವ ನಾಮಾಮೃತ |

ರಸವು ಜಗಭರಿತ |

ಹಸವು ಮುಚ್ಚಿತು ಮಾಹತ್ಮರ ವಚನ ಸವಿತ |

ಅಕ್ಕನ ಬಳಗ ಭಜನ |

ತ್ರಿಲೋಕ ಒಂದೇ ಮನ |

ಜಯಹಿಂದ ತಿರಂಗಿ ಝಂಡಾ ಸಿದ್ಧ ಕಂಡೆ ||3||

ಘಟ್ಟಿ ಮಾತು ಏನು ಚಿಟ್ಟಿಗಿ ಆಸಿ ಬಿದ್ದು |

ಉಪದೇಶ ಕೊಡುಹುವರೊ |

ಯಮ ಬಿಟ್ಟಿಯ ಹೊದೆಯುವರೊ |

ಚಾಷ್ಠಿ ಮಾತು ಅಲ್ಲ ಎಂಕಮ್ಮ ಮಡಿವಾಳ |

ಯಾ ಪರಿ ದುಡದಿದರೊ ||ಪಲ್ಲವಿ||

ಉಪದೇಶ ಕೊಡು ಎಂದು ಮಡಿವಾಳಪ್ಪ |

ಕರಬಸಪ್ಪಗ ಹಿಡದಿದರೊ |

ಶಿಷ್ಠ ಆಗಲಿಕ್ಕೆ ಬಾಯ ಮಾತೇನು |

ಶಾಸ್ತ್ರ ಹೇಳಿ ಬಾನ ಉಂಬವರೊ |

ಸೃಷ್ಟಿಯೊಳು ಶ್ರೇಷ್ಠ ಕೊಟ್ರಯ್ಯ ಚಿಂಚೋಳಿ |

ಕಡಗಂಚಿ ಮನೆಯವರೊ |

ಅಷ್ಟೈಶ್ವರ್ಯ ಬಿಟ್ಟು ಅಷ್ಟ ದರಿದ್ರನಾದ |

ಬಿಟ್ಟೇ ಬಿಡು ಅಂದ್ರೊ ||1||

ಎಷ್ಟು ಹೇಳಿದರ ಘಟ್ಟಿ ಮಡಿವಾಳ |

ಪಾದ ಬಿಡುವಲ್ಲರೊ |

ಕಷ್ಟ ಆಗಲೆಂದು ಬಟ್ಟಿಯ ಸುಟ್ಟು |

ಥೇಟ ಬತ್ತಲೇ ಮಾಡಿದರೊ |

ರೊಟ್ಟಿ ಭಿಕ್ಕಿ ಬೇಡಿ ಅಂಗೈದೊಳು ಉಂಡು |

ಈ ಪರಿ ನಡಿ ಅಂದ್ರೊ |

ಹಟಯೋಗ ನೋಡಿ 12 ವರ್ಷ ಆದ ಮೇಲೆ |

ಉಪದೇಶ ಕೊಡುತೆಂದರೊ ||1||

ಮೈ ತೊಳಕೊಂಡು ಬಾ ಹುಮ್ನಾಬಾದಿಗೆ |

ಹೋಗಿ ಪೂಜಾರಿ ಢೋಣಿ ಎಂದರೊ |

ಖೈಂಯಿ ಕುಂಬಳಕಾಯಿ ಕೈಯಾಗ ಕೊಟ್ಟರ |

ಸೈ ಎಂದು ತಿನುಹುವರೊ |

ಬಾಯಿ ಮಾತು ಅಲ್ಲ ಬಚ್ಚಲ ನೀರು |

ಬಾಯಿ ಹಚ್ಚಿ ಕುಡಿದಿದರೊ |

ಚಾಷ್ಠಿ ಮಾತು ಅಲ್ಲ ಎಂಕಮ್ಮ ಮಡಿವಳ |

ಯಾ ಪರಿ ದುಡದಿದರೊ ||3||

ಭಾಂಯಿದೊಳು ನೂಕಿ ಭಾಂಯಿ ಮ್ಯಾಲಿನ |

ಒಗೆಕಲ್ಲು ಒಳಗ ನೂಕಿದರೊ |

ಸೋಯಿಯಿಲ್ಲ ಮಡಿವಾಳಗ ಅಳಲಿಕ್ಕೆ |

ಕಲ್ಲ ಪೆಟ್ಟ ತಾಕಿದರೊ |

ನಾಯಿ ಸತ್ತಿದರೆ ತೆಲಿಮ್ಯಾಲ ಹೊತ್ತಕೊಂಡು |

ಊರಗ ತಿರಗ ಎಂದರೊ |

ನಟ್ಟಿ ಸತ್ತು ಒಂದು ಪಟಾ ಆಯಿತು ನಾಳಿಗೆ |

ಉಪದೇಶ ಕೊಡು ಅಂದರೊ ||4||

ಒಂದ ಹಂದಿ ಕಬ್ಬು ಬಾಯಾಗ ಹಿಡಿದು |

ಹೊಂಟಿದ್ದು ಕರಬಸಪ್ಪ ಕಂಡಿದರೊ |

ಛಂದ ವ್ಯಾಳ್ಯಾ ಬಂತು ಹಂದಿ ಬಾಯಾನ ಕಬ್ಬು |

ಕಸಕೊಂಡು ತಿನು ಅಂದರೊ |

ಇಲ್ಲದೊಂದು ಹೆಚ್ಚಿಂದು ಹೇಳತಾರೆಂದು |

ಮಡಿವಾಳ ತುಸು ನಕ್ಕರೊ |

ಬಿಟ್ಟಿಗಿ ಹೋಯ್ತು ಇಸದಿನ ದುಡದಿದು ಪುನಃ |

ಹನ್ನೆರಡು ವರ್ಷ ದುಡಿ ಅಂದರೊ ||5||

ಒಂದು ದಿವಸ ಮಡಿವಾಳಗ ಎಂಕಮ್ಮ |

ಏಕಾಂತ ಭೇಟಿ ಆದರೊ |

ಆನಂದದಿಂದ ಮಡಿವಾಳಪ್ಪ ಅಂತಾರ |

ಎಲ್ಲಿ ನಡದಿ ಯಂಕಮ್ಮನವರು |

ಬಂದ ನಾನು ಮೈ ತೊಳಕೊಂಡು |

ಕರಬಸಪ್ಪ ಎಲ್ಲಿ ಕುಂತರವರೂ |

ಭೇಟಿಯಾಗಿ ಉಪದೇಶ ತಗೋತಿನಿ |

ಬಿಟ್ಟು ಹೊಂಟಿನೀ ಮೂರು ||6||

ಈ ಪರಿ 24 ವರ್ಷ ದುಡದೆ ಖರೇ |

ಸಿಗಲಿಲ್ಲ ಗುರುನಾರು |

ಬಹು ಬಿರಿ ಉಪದೇಶ ಸಿಗಲಿಕೆ ನಿನಗೆ |

ಇಲ್ಲವ್ವ ಬಾಜಾರು |

ಬಿರಿ ಬಿರಿ ಎಂಕಮ್ಮ ಹೋಗಿ ಕುಂತಳ |

ಕರಬಸಪ್ಪನ ಎದುರು |

ಮುರ ಮುರದು ಕುಳ್ಳ ಥಾಳಿ ಕಟ್ಟಿಕೊಂಡಾಳ |

ತೆಲಿಮ್ಯಾಲ ನೂರಾರು ||7||

ಬೆಂಕಿ ಚಿದಿ ಹೊಡೆದು ಗಡಗಿ ಇಟ್ಟಳ |

ಅಕ್ಕಿ ಹಾಕಿ ನೀರು |

ವಂಕ ಆಗಿಲ್ಲ ಗೋಣ ಟೊಂಕ ಪದ್ಮಾಸನ |

ಹೆಂಥ ಭಕ್ತಿವಾನರೊ |

ಲಂಕ ಉರದಂಗೆ ಬೆಂಕಿ ಕೂಡಿ ಬಿತ್ತು |

ಬಾನಾ ತೈಯಾರು |

ಸೃಷ್ಟಿಪತಿ ಕರಬಸಪ್ಪಗ ಎಡಿ ಮಾಡಿ |

ಉಪದೇಶ ಬೇಡಿದರು ||8||

ಶಬ್ಬಾಸ್ರೇ ಯಂಕಮ್ಮ ಬಾ ಎಂದು ತೆಲಿ ಮ್ಯಾಲ |

ಹಸ್ತ ಇಟ್ಟಿದರೊ |

ಜೋಡಿಲಿ ಇಬ್ಬರು ಘಟ್ಟಿ ಶಿಷ್ಯರೆಂದು |

ಉಪದೇಶ ಕೊಟ್ಟಿದರೊ |

ಈ ನಾಡು ಆಳುವಂಥ ರಾಜಾ ಬಂದು |

ನಿಮ್ಮ ಸೇವಕ ನಿಲ್ಲುವರೊ |

24 ವರ್ಷ ದುಡದಿದಿ ಖರೇ ಒಂದು ಘಡಿ |

ನಿನ ಸರಿ ಎಂದರೊ ||9||

ಇಂತಹ ಆಶೀರ್ವಾದ ದೊರಕಿತು ಅವರಿಗ |

ಈ ಕಾಲಕ ದೇವರಾದ್ರೂ |

ಇಂತಹ ಮೈನತಿ ಮಾಡಿದವರಿಗೆ |

ಶಿವನು ವರವಾದರು |

ಸಂತ ತ್ರಿಮೂರ್ತಿ ಸ್ಥಾನ ಹುಡುಗಿ |

ಸದಾ ನಮಸ್ಕಾರು |

ಅಂತರಂಗ ಭಕ್ತರ ಬಯಕಿ |

ತೀರಿಸುವ ಮಹಾತ್ಮರೂ ||10||

ಕುಂಬಾರ ಗಡಗಿ ಪೆಟ್ಟ ತಿಂದಂಗ |

ಪೆಟ್ಟು ತಿನಹುವರ್ಯಾರು |

ಕುಂಬಾರ ಆಂವುಗಿದೊಳು ಗಡಗಿ ಸುಟ್ಟಂಗ |

ಸುಟಕೊಂಬುವರ್ಯಾರು |

ಭೇಟಿಯಾಗಿರಿ ಸಿದ್ಧನ ಪದ ಕೇಳಿ |

ಶ್ರೀಗುರು ಪುತ್ರರೂ |

ಚಾಷ್ಠಿ ಮಾತು ಅಲ್ಲ ಎಂಕಮ್ಮ ಮಡಿವಾಳ |

ಯಾ ಪರಿ ದುಡಿಕೊಂಡರೂ ||11||

ಚಲತಿ- ಮಡಿವಾಳ ಎಂಕಮ್ಮ ಕರಿಬಸವ |

ಅಡಿಗಳ ಅರ್ಪಮ ನಿಮ ಶಿಸುವ ||

ಓದಿ ಅರ್ಥ ಮಾಡೋ ಬಸವನ ವಚನ |

ಸಾರ್ಥಕ ಆಗೋದಿಲ್ಲ ಮಾಡಿ ನೋಡೊ ಯೋಚನ |

ಮಾದಿಗರ ಚೆನ್ನಯ್ಯಾ ರೀತಿಲಿ |

ಮುಕ್ತಿ ಪಡೆದಿಲ್ಲೇನೋ |

ಹೊರಗಿನವ ಬಳಿಯಕ ಬಂದಿಲ್ಲೇನೋ ||1||

ಮಂದಮತಿ ಪ್ರಭು ನಾ ನಿನ್ನ ಕೂಸಾ |

ಅಂದಿಗಿಂದಿಗಿ ಬಸವನ ದಾಸಾ |

ಸಂದ ಪುರಾತನ ವಚನದ ಧ್ಯಾಸಾ |

ಬಂಧನ ಬಲಿ ಕಡಿದು ನಾವದಗಿ ಈಶನ |

ಬರದವ ಪಿಡದೇನೋ |

ಬಸವಣ್ಣನ ಪಾದವ ಹಿಡದೇನೋ ||2||

ಮುಟ್ಟೆತಪ್ಪಇದು ಕೊಟ್ಟಿದ ಸಾಲ |

ಕಟ್ಟೆತಪ್ಪ ಇದು ತಂದಿದ ಸೂಲ |

ಕೊಟ್ಟ ಪಡಿಯೋ ನೀ ಇಮತ್ಯಾನ ಬಾಲ |

ಇಟೇ ಮಹಾರನಾಗಿ ಕೊಟ್ಟಿದ ಸಾಲವು |

ಚಾಷ್ಟಿಯ ಮಾತೇನೋ |

ದೇವಿದಾಸ ದಾಸರ ದಾಸಾದನೋ ||3||

ಮಾಸಿ ಅದು ತಂದು ಮಾಸಿ ಇದು ತಂದು |

ಮಾಸಿ ಕಲಿಸು ಒಳಗಾ |

ಆ ಒಂದ ಮಾಸಿ ಸಿಗುವದು ನಿನ್ನಗಾ ||ಪಲ್ಲವಿ||

ಧಡ್ಡ ಮನುಷ್ಯ ಒಂದು ದುಡ್ಡಿಂದು ತಂದು |

ಗುಡ್ಡ ಮಾಡಿ ಕುಂತಾ |

ಜಿಡ್ಡ ಎಡ್ಡಾಯೆಲ್ಲಾ ಒಳಗಿಂದು ತೆಗೆದು |

ಹೊಡ್ಡ ಏರಿ ನಿಂತಾ |

ಅಡ್ಡ ಬಿದ್ದ ಎತ್ತು ಇವರಲ್ಲಿ ಬಂದು |

ಆರ ನಡದಿತ್ತು ಹ್ಯಾಂಗ |

ಆ ಭವಪಾರ ಆಯಿತು ಮಂಗಾ ||1||

ದಂಬಡಿ ಗತ್ತ ಕೇಳಿ ಧುಮಡಿನಾಡಿತು ಜನ |

ಸೇಮಡಿಗೇನ ತಿಳಿತ |

ಘೊಂಗಡಿ ಪದರೊಳು ಕಟಕೊಂಡು ಹೋಗಿದ |

ದಾಮಾಜಿ ರಿಣ ತೀರಿತ |

ಚಮಡಾ ಜಾನೇ ವ ಕುತ್ತಾ ಜಾನೇ ಕಬೀರ |

ಅನುವನೋ ತನ್ನ ಶಿಷ್ಯಗಾ |

ಬಲು ಬಿರಿಯಪ್ಪ ಸಾಧು ಮಾರ್ಗ ||2||

ಗೋರಖನಾಥನು ಏಕಿ ಮಾಡಿದ ಕಲ್ಲು |

ಬಂಗಾರ ಆಯಿತು ಹ್ಯಾಂಗ |

ಷಣ್ಮುಖನಾಥನು ಹೆಣ್ಣಿನ ದಿನಸವು |

ಕೊಟ್ಟಿದ ಪಾರ್ವತಿಗ |

ದಕ್ಷನ ಯಜ್ಞದೊಳು ಪಾರ್ವತಿ ಬಿದ್ದು |

ಹೇಮಗಿರಿಯೊಳು ಬೆಳದಂಗ |

ಆ ಸಿದ್ಧ ಭಜನಿಗಿ ಬಾ ||3||

ಕುಂತಿರೇನಪ್ಪ ಪದ ಕೇಳದಕ |

ನಿಂತಿರೇನಪ್ಪ ಪರ ಉಪಕಾರಕ |

ಸಂತಿಗಿ ಬರ್ರೆಪ್ಪ ಸಂತರ ಸ್ಥಳಕ |

ಚಿಂತಿ ಬಿಡರೆಪ್ಪ ‘ಚೋದಿ’ ಸನೇಕ ||ಪಲ್ಲವಿ||

ಕಾಲಜ್ಞ ಸೂಚನಾ ಹಿಂದ ಯಾವುದು ಮುಗಿತು |

ಕಾಲಜ್ಞ ವಚನ ಮುಂದ ಯಾವದು ಉಳಿತು |

ಕುಲ ಇಲ್ಲ ಬಲ ಇಲ್ಲ ಮದವಿ |

ಬರದಿಲ್ಲ ಓದಿಲ್ಲ ಪದವಿ |

ಲಿಂಗಯಿಲ್ಲ ಜ್ಞಾನಿಲ್ಲ ಭವಿ |

ಮಂಗನಂತೆ ಮಾಡುವರೊ ಜೀವಿ ||1||

ಧಡ್ಡ ಜಾತಿಯವರು ಆದರು ಮುಂದಕ |

ದೊಡ್ಡ ಸ್ಥಲದವರು ಉಳದರಪ್ಪ ಹಿಂದಕ |

ಗುಡ್ಡ ಕರಗಿ ಬಂತು ಗುಂಜಿ ತೂಕಕ |

ಸೊಡ್ಡ ಹಿಡದವರ ಕೈಯಾಗ ಬಂತು ಮಾಣಿಕ |

ಕಲ್ಲಕೋಳಿ ಕೂಗಾದ ಕೇಳಿ ಎಚ್ಚರವಾಯಿತು |

ಮುಲ್ಲ ಹೊಂಟಿದ ಕಂಡು ಮೂಲ್ಯಾಗ ಕುಂತು |

ಕರಿಮಲ್ಲಿಗಿ ಹೂವು ಬಂತು ಹಸ್ತಾ |

ಮರವಿನ ಜಲ್ಮಕ ನಿದ್ರಿ ಬಂತು ಮಸ್ತ |

ಕುರಿ ಕಾಯವಗ ಬಂದಿತು ಸುಸ್ತಾ |

ನರಿಗುಣಗಳು ಜಗದೊಳು ಜಾಸ್ತ ||2||

ಭಕ್ತಿ ಇಲ್ಲಂದು ನುಡಿಬಾರದು ಭಾವಿಕ |

ಶಕ್ತಿ ಕಲಮಾ ಕಾಲಜ್ಞ ಬರಿವದಕ |

ಯುಕ್ತಿ ಜ್ಞಾನದಿಂದೆ ಭವದಾಟುವದಕ |

ಮುಕ್ತಿ ನಾಯಕನು ಗುಪ್ತ ಇರಲಾಕ |

ಬಸವಣ್ಣ ಮಾಡಿದ ಭವಿಷ್ಯ ಹಿಂಗೆ ಉಂಟು |

ಹಸನಾಗಿ ಕೇಳರೆಪ್ಪ ಬಿಚ್ಚಿದ ಗಂಟು |

ಲಕ್ಷದ ಮೇಲೆ ತೊಂಬತ್ತು ಆರ ಸಾವಿರ |

ಸಾಕ್ಷಾಗಿ ಉಣುಸುವರೋ ಜಂಗಮಕ |

ಲಕ್ಷಯಿಡರೆಪ್ಪ ಮಾತೀಗಿ ಜರಾ |

ಮೋಕ್ಷದ ಅನುಭಾವಿಗಳಿಗಿ ಆಧಾರ ||3||

ಏಕ ಅಬ್ದ ಶಹಾಣೌ ಕೋಟಿ |

ಲೆಕ್ಕಕ ಬರಬೇಕು ಭರತಿಯ ಪೇಟಿ|

ತ್ರಿಲೋಕಕ ಕಳುಬೇಕು ಜಟ್ಟಿ |

ಲೆಕ್ಕ ಆಗುವದು ಆವಾಗ ಲವಾಲೂಟಿ |

ಇಚ್ಛಾಶಕ್ತಿಲಿಂದ ಬರಿದ ಪರಬ್ರಹ್ಮ |

ಸಾಕ್ಷಿಯಿಟ್ಟು ಕಾಲಜ್ಞಾನ ಸಾರಿದ ನೇಮ |

ಹವಾಯಿ ಜಹಾಜ ಹಂದರ ಹಾಸೆತ್ತು |

ತ್ರಿಭವಕೆಲ್ಲಾ ಒಮ್ಮೆ ಮುಚ್ಚೆತ್ತು |

ಚೆನ್ನಬಸವಣ್ಣ ಬರುವದು ಹೊತ್ತು |

ಚಿನ್ನ ಅನುಭಾವಿಗಳಿಗಿದು ಗೊತ್ತು ||4||

ಎಲ್ಲಾ ದೇಶಕ ಇಲ್ಲಪ್ಪ ತಾಳಿ |

ಬಸವಾ ದೇಶಕ ಭಂಗಾರ ತಾಳಿ |

ಬರದಿದ ಉಳದವ ಕಾಲಜ್ಞ ಹೇಳಿ |

ಹ್ಯಾಂಗ ಕಟಬೇಕು ಕಟಗಿಯ ತಾಳಿ |

ಧರ್ಮಾರ್ಥ ಅಕ್ಷರ ಬರದಾರ ಯಾಕೆ |

ಪ್ರೇಮಾದಿಂದ ಮುಷ್ಠಿ ಮೊಟ್ಟಿ ನಿಡಲಕೆ |

ಶಕ್ತಿ ಅನುಸಾರ ನೀಡು ಧರ್ಮಾ |

ಭಕ್ತಗ ನೋಡಿ ನೀಡಪ್ಪ ಧರ್ಮಾ |

ಮುಕ್ತಿ ಬೇಡವನಿಗೆ ಯಾತಕೆ ಶರ್ಮಾ |

ರಕ್ತ ನೀಡಿದಂತೆ ಮನಸಿಲ್ಲ ಧರ್ಮಾ ||5||

ಹಸರ ಕುದರಿಗಳು ಬರುವವು ಮುಂದ |

ಹೆಸರ ಚೆನ್ನಬಸವಣ್ಣ ಹಿಂದ |

ಕಸರಿಲ್ಲ ಪೃಥ್ವಿ ಮೇಲೆ ಬಂದ |

ಒಂದೇ ಮಂತ್ರವು ಒಂದೇ ರಾಜಂದ |

ಕಾಲಜ್ಞ ಬರದಿದ ಬರಿ ಕೇಳಬೇಕು |

ಸರ್ವಜ್ಞ ಬರದಿದ ಸರಿ ನಡಿಬೇಕು |

ಅತಿ ಆಶಾಯಿದ್ದು ಛಂದ ಅಲ್ಲಾ |

ಮಿತಿ ಮೀರಿ ನೋಡದು ಛಂದ ಅಲ್ಲಾ |

ಮತಿಗೇಡಿ ಸಂಗ ಛಂದ ಅಲ್ಲಾ |

ಗತಿ ರೇವಯ್ಯನ ಬಿಟ್ಟು ಛಂದ ಅಲ್ಲಾ ||6||

ಪತಿವ್ರತಿ ನಾ ಪತಿವ್ರತಿ |

ಬಹಳ ಗರತಿಯರೊಳಗ ನಾ ಪತಿವ್ರತಿ |

ಬಲ್ಲೆ ಕುಂತ ಕೇಳ ನನ್ನ ಗೆಳತಿ |

ಲಗ್ನ ಆಗಲ್ದರ ಆಗ ಬಾ ನನ್ನ ಸವತಿ ||ಪಲ್ಲವಿ||

ಲಗ್ನ ಆಗ್ಯಾದ ನಮದು ಈ ಪರಿಯೆ |

ಕಿಂವಿದೊಳಗ ಹಂದ್ರ ಹಾಕಿರು ಮರಿಯೆ |

ಬಾಯಾಗ ಹಾಕಿರು ಅಕ್ಕಿ ಕಾಳವೆ |

ಹಿಂಗ ಚೌರ್ಯಾ ಐಂಸಿ ಕಟ್ಟಿಕೊಂಡಾ ತಾಳಿಯೆ ||1||

ಅಕ್ಕಿ ಕಾಳ ಬಿದ್ದ ಸಮಯಕ್ಕೆ |

ಅಕ್ಕ ಅಂವಾ ಅಂದುಬಂದ ಕುಂತ ಎಡಕೆ |

ಇಕೋ ಹಿಂಗೆ ಮಾಡ್ಯಾರ ಕಡಿತನಕೆ |

ಎಕ್ಕಾ ಇದರಾಗ ನಾ ಹ್ಯಾಂಗ ಆದ ಹಾದರದಕೆ ||2||

ಮಂದಿ ಹಿಂದ ಆಡಿದರೆ ನಂದೇನು ಹೋಯಿತು |

ನಿಂದೆ ಆಡಿದರೆ ಮಾತ ಮಾತಿಗಿ ತಂತು |

ಪತಿವ್ರತಿ ರೇವಮ್ಮನ ಆಗೆ ತೊತ್ತು |

ತಂಗಿ ನಿನಗ ಬೇಕಾದರ ಈ ಬಿರದು ಎತ್ತು ||3||

ಸತಿಪತಿ ಒಂದೇ ಮನ ಸ್ವರ್ಗ ಕೀರ್ತಿ |

ಅನುಸೂಯನ ಹೊಟ್ಟಿಲಿ ಹುಟ್ಟಿ ತ್ರಿಮೂರ್ತಿ |

ದೇವಿದಾಸನ ಭಕ್ತಿ ಭಜನಿ ಪ್ರೀತಿ |

ಲಗ್ನ ಆಗಲ್ದರ ಆಗ ಬಾ ನನ್ನ ಸವತಿ ||4||

ಅದ್ವೈತ ಮೂರು ಅಕ್ಷರ ಎಂಟ |

ತಿಳಿದ ಶಿಷ್ಯ ರೂಪ ವೈಕುಂಠ ||1||

ನೆಂಬಿ ಸ್ಮಶಾಣ ದರ್ಶನ |

ಸಂಭಾಷಣ ತೃಪ್ತ ಮನ ||2||

ಮನ ಬ್ರಹ್ಮಾ ತೊಳದಾ ಕರ್ಮಿ |

ಜ್ಞಾನ ನೀರ ಕಾಸಿ ಸ್ವಧರ್ಮಿ ||3||

ಮಾಯಿ ದೇವಿ ರೂಪ ಮಹಾದೇವಿ |

ಪ್ರಸಾದ ನೀಡಿ ರೇವಮ್ಮ ತಾಯಿ ||4||

ದಂಡವತ ಮಹಾಗುಣವಂತಾ |

ಬ್ರಹ್ಮ ಸ್ವರೂಪ ಎದುರು ನಿಂತಾ ||5||

ದೇವಿದಾಸ ಸರ್ವರ ಕೂಸಾ |

ಬೇಕಾದರ ಕೊಡರಿ ಇಸಾ ||6||

ಚಲತಿ :ಸಿಟ್ಟು ತಾಳಿದಂವ ಶಿವನಣ್ಣಾ |

ಪಟ್ಟು ತಾಳಿದಂವ ಬಸವಣ್ಣಾ ||

ಪ್ರಭುರಾಯ ನೀನೆ ಸತ್ಯ |

ಪಂಚ ತತ್ವಗಳು ಮಿಥ್ಯಾ |

ಹುಟ್ಟಿ ಸಾಯುವದು ನಿತ್ಯಾ ||1||

ಮುದ್ರದ ಕುದುರಿ ಕೊಟ್ಟಿ ಗುರು ದೌಡ |

ನಾಲ್ಕ ಆರು ಹತ್ತು ಹನ್ನೆರಡಾ |

ಹದಿನಾರು ಮತ್ತ ಎರಡ ||2||

ಸಾವಿರ ದಿಕ್ ತಿರುಗಿ ಒಡ್ಯಾಡಿ |

ಪಾಗದ ಮೇಲೆ ನಿಂತು ಖಡಾಖಡಿ |

ಅಗಾಧ ಮಹಿಮೆ ನೋಡಿ ||3||

ಗುಜ ಗೋಷ್ಠ ನಕಳಕಳ ವಿಲೆಧಿ |

ಸಹಜ ಬ್ರಹ್ಮಾನಂದ ವಿಚಾರಾ |

ತೇಜ ನಾಮಾಮೃತ ಸಾರ ||4||

ನಿತ್ಯ ಭಜಿಸು ಐದು ಅಭಂಗ |

ಸತ್ಯ ನಾದ ಶರಣರ ಸಂಗ |

ದೇವಿದಾಸ ಹುಚ್ಚ ಮಂಗ ||5||

ಚಲತಿ: ಸದೋಧಿತ ಭಜನಿಯ ಮಂದಿ |

ಉಧೋ ಉಧೋ ತಾಯಿ ಸದಾನಂದಿ ||

ತಾಳ ತಾಳ ಅಂತೀರಿ ದೈವ |

ತಾಳಿದರೆ ಉಳಿಯೋದಿಲ್ಲ |

ನಾಯಿ ಬಾಲ ನೆಟ್ಟಕ ಆಗುವದೆ |

ಬಾಯಿ ಮಾತಿಲಿ ಸಾಧು ಆದರೆ ಭವ ನೀಗುವದೆ |

ತಾಯಿ ತಂದಿ ಸತೀಗ ಬಿಟ್ಟು ಮುಕ್ತಿ ದೊರಿವುದೆ ||ಪಲ್ಲವಿ||

ಒಂದೆ ಭಕ್ತಿ ಸತಿಪತಿ |

ಒಂದೆ ಗುರುವಿನ ಶಿಷ್ಯ ಆದವರು |

ನಿಂದೆದ ಗುಣ ತನ್ನಲ್ಲಿ ಬರುವುದೆ |

ಸಂದಿ ಹಿಡಿದು ಓಡಿ ಓಡಿ ಮಂದೇಗ ಬರುವದೆ |

ಜಿಂದಗಾಣಿ ಬಿಟ್ಟು ಹಗರಾಣಿ ತನಕ ಛಂದ ಕಾಣುವದೆ ||1||

ಒಬ್ಬರ ಬುದ್ಧಿ ಒಬ್ಬರಿಗಿಲ್ಲ |

ಗೊಬ್ಬರ ಇಲ್ಲದೆ ಹೊಲ ಬೆಳಿವದಿಲ್ಲ |

ಮಬ್ಬಿಲಿ ತಿರಗಿ ಈ ಭವ ಗೆದಿವದೆ |

ಜಿದ್ದಿಲಿ ಮಾತಾಡಿ ಸಂಸಾರ ಸದ್ಗತಿ ದೊರಿವದೆ |

ರಿದ್ದಿ ಸಿದ್ಧಿ ಸಾಧನ ಹ್ಯಾಂಗೆ ಸಿಟ್ಟ ಅಳಿದಲದೆ ||2||

ಘಾಣಗ್ಯಾರ ಮ್ಯಾಲ ಮುಣದು ನೀವು |

ಎಣ್ಣೆಯಿಲ್ಲದೆ ಉಣಬ್ಯಾಡರೆಪ್ಪ |

ಸಕ್ಕರಿ ಗೋಣಿ ಎತ್ತಿಗಿ ತಿಳಿಬಹುದೆ |

ಅಕರಿ ಆಡಿ ಶಕೂನಿ ಗೆದ್ದ ಕೌರವರು ಕೊನಿಗಾಣುವದೆ |

ಸಕ್ಕರೆ ರುಚಿ ಸಂಸಾರದೊಳು ಸಿದ್ಧ ಪ್ಯಾಲಾ ಕುಡದೆ ||3||

ಎಲಾ ಮನಸಾ ನೀ ಎಂಥಾ ಕಿಡಿಗೇಡಿ |

ಖೋಡಿ ಖಾಯಾಪುರಕ ತಂದಿ ಧಾಡಿ ||ಪಲ್ಲವಿ||

ಪರಬ್ರಹ್ಮ ತಿಳಿ ಜಗಭರಿತ |

ನರಜಲ್ಮ ಉತ್ಪತ್ತಿಕರ್ತಾ |

ಮೊದಲಿದ್ದ ಒಬ್ಬ ಬೈಲ |

ಬೈಲಿಚ್ಛಾಶಕ್ತಿಯ ಖ್ಯಾತ |

ಖ್ಯಾಲಿನೊಳು ಆಗಿ ಲೀಲಾ |

ಪಂಚತತ್ವದೊಳಗ ಬ್ರಹ್ಮಾಂಡ |

ಬ್ರಹ್ಮಾಂಡದೊಳಗ ಪಿಂಡಾಂಡ |

ಪಿಂಡಾಂಡದೊಳಗ ಹೆಣ್ಣಗಂಡ |

ಇವನೆಂಥ ಗಾರುಡಿ ನೋಡು ತರ್ಕ ಮಾಡಿ ||1||

ಹೆಂಥ ಪರಿ ಮಾಡಿದಿ ಗೊಂಬಿ |

ಗೊಂಬಿದೊಳು ಸಂಜೀವ ತುಂಬಿ |

ಕರಸಿದ ತನ್ನ ಬದಿಲಿ |

ಬರಸಿದ ಬ್ರಹ್ಮ ಸಾಲಿ |

ತೋರಸಿದ ಗುರು ಕೀಲಿ |

ನಿನ್ನ ಮನಸಿಗಿ ಕೊಟ್ಟ ಹಿರಿತನ |

ನಿನ್ನ ಕೈಯಾಗ ಖಾಯಾ ಜೀವನ |

ನಿತ್ಯ ನುಡಿ ಗುರು ಭಜನ |

ಪಟ್ಟಣದ ಹಿರಿ ಗಡಿ ಒಪ್ಪಿಸಿದ ದೇವಡಿ ||2||

ಖಾಯಾಪುರ ಪಟ್ಟಣದ ಕಾರಭಾರಿ |

ಅಂತೆ ದೂರಿ ಫಂದಿಲ್ಲದೆ ನಡೆದಿ ಹಾರಿ |

ಬೃಹಸ್ಪತಿ ಗೌತಮ ಮುನಿ |

ಅಹಿಲ್ಯಾ ತಾರಾ ವರ ಪತ್ನಿ |

ಇಂದ್ರ-ಚಂದ್ರರಿಗೆ ತುಳಸಿದಿ |

ತೇಜ ಬ್ರಹ್ಮಸಾಲಿ ಬರಸಿದಿ |

ಗುರು ಪತ್ನಿ ಮೇಲೆ ಮೋಹಿಸಿದಿ |

ಋಷಿಗಳು ಕೊಟ್ಟದ್ರು ಶಾಪ |

ಚಂದ್ರಮನು ಆಗಿದನು ಕಪ್ಪ |

ದೇವೇಂದ್ರ ಭಗಿಂದ್ರ ದರ್ಪ |

ವಿದ್ಯೆ ಕಲ್ತಿ ಗಾಡಿ ನೀ ಹೆಂಥ ಬುದ್ಧಿಗೇಡಿ ||3||

ಶಿವ ಒಲ್ತ ಕಾಲಕ ಬಿಟ್ಟಿ ಚಂಗ |

ತಂದಿ ಸೊಂಗ ಬಡವರಿಗೆ ಹಳದಾಡಿ ಮಂಗ |

ಭಸ್ಮಾಸೂರಗ ವರಪಡಿಸಿದಿ |

ನಾಚ ಮಾಡಿ ನೀ ಸುಡ್ಸಿದಿ |

ಲಂಕ ಪಟ್ಟಣದ ದಶಕಂಠ |

ಒಂಬತ್ತು ಶಿರ ಕೊಯ್ದಿಟ್ಟ |

ಬಂದು ನೋಡಲಕ ಇಟ್ಟಿನ ಮುಕಟ |

ಅವನ ಭಾವಕ ಮೆಚ್ಚಿ ಶಿವಯೋಗಿ |

ಬೇಕಾದ ಕೊಟ್ಟ ಅವನಿಗಿ |

ಅಖಿಲ ಇಲ್ಲ ಮನಸಿನ ಕಾಗಿ |

ಮನ ಬಲ್ಲಂಗ ಮಾಡಿ ನೀ ಮಾಡದೆ ಲೇವಡಿ ||4||

ಹೆಂಥ ಹೆಂಥೋರದು ಆಗ ಗಮ್ಮತ |

ನಮ್ಮ ನಿಮ್ಮದು ಏನ ಕಿಮ್ಮತ |

ಭಜನಿಗಿ ಹರದಾಡಿ ನಕ್ಕಿ |

ಈಗಿನಿಂದ ಈಗೆ ಅದ ನೋಡು ಧೋಕಿ |

ಜ್ಞಾನ ಬಲ್ಲವ ಅನುಭವ ಮಾಡು |

ಬೈಲಿಗಿ ತಿರುಗಿ ತಿರುಗ್ಯಾಡು |

ದೇವಿದಾಸ ಹಾಡಿ ಮನಸಿಗಿ ಹಿಡಿ ||5||

ಲಿಂಗಮಯ ಬಸವ ನಿನ್ನ |

ನಾನು ಮರೆಯೆನು ||ಪಲ್ಲವಿ||

ಜ್ಞಾನವಿಲ್ಲದ ಹೀನ ಮನವ |

ನಿನ್ನ ಮರೆತು ಕಷ್ಟಪಡೆವ |

ಧನ್ಯ ನಿಮ್ಮ ಶಾಂತ ಗುಣವ | ಮುಕ್ತಿದೇವನು ||1||

ತ್ರಿಯಕ್ಷರ ಬಸವ ನೀನೇ |

ಬ್ರಹ್ಮ ವಿಷ್ಣು ರುದ್ರ ನೀನೇ |

ಕರ್ಮ ದೋಷ ಪರಿಹರನೇ | ದ್ವಿತೀಯ ಶಂಭನು ||2||

ಲಕ್ಷೆಯಿಟ್ಟ ಭಕ್ತನ ಕೈಯ |

ಅಕ್ಷಯಪಾತ್ರೆ ಕೊಟ್ಟಿ ನಿಲಯ |

ಮೋಕ್ಷದ ಜ್ಯೋತಿ ಪೃಥ್ವಿ ಉದಯ | ಅಂತಃಕರುಣನು ||3||

ಸರ್ವಜನರ ಅಪೇಕ್ಷಾ |

ತೀರಿಸುವ ನೀ ಕಲ್ಪವೃಕ್ಷ |

ಷಡಕ್ಷರ ಮಂತ್ರ ಸಾಕ್ಷ | ಬಿತ್ತಿ ಬೆಳೆದನು ||4||

ಪಾಪಿ ಜನರ ಪಾಪ ಹರಿದು |

ಸಿಂಹಾಸನ ಬಲ್ಲಿ ಕರೆದು |

ಮನ ಉನ್ಮನಿ ಕದವು ತೆರೆದು | ಕಂಡ ಸಿದ್ಧನು ||5||

ಸಿದ್ಧಲಿಂಗ ಕರುಣದಿ ನೋಡೋ |

ಉದ್ಧಾರ ಬೇಗನೆ ಮಾಡೋ ||ಪಲ್ಲವಿ||

ಮಾಯಾ ಮೀಹ ಭ್ರಮೆ ಹೊಳಿಯೊಳು |

ವಯಾ ಹರಿದು ನಡಿತು ಇದರೊಳು |

ಮುಗ್ಧ ಮಗನೆಂದು ಬಂದು ಒಡಗೂಡೋ ||1||

ಎಷ್ಟು ಧನವಂತನಾಗಿದರೆ ಮನದಣೆದು |

ಅಷ್ಟು ನಂದೆಂಬೋ ಹವಣಿಕಿ ಚಾಚದು |

ಶುದ್ಧ ಗುಣ ಬಿಟ್ಟು ಸೇರೆದ ಸುಡಗಾಡೋ ||2||

ಪರ ಆತ್ಮ ಮರಿತು ಹಿಂಗಾಯಿತು |

ಧೀರ ಶ್ರೀಗುರು ಉಪದೇಶ ದೂರಾಯ್ತು |

ಬಂದ ಅಪರಾಧಿ ನೀ ಎಂದು ಮರಿಬ್ಯಾಡೋ ||3||

ಒಂದಕ ಐದೈದು ಪಂಚವೀಸ |

ಮುಂದ ಹನ್ನೊಂದಾಗಿ ಭರತಿ ಛತ್ತೀಸ |

ಬಿಡಲಿಲ್ಲಾ ಚಿನ್ನಮ್ಮಾ ನಿನ್ನ ಪಾದ ನೋಡೊ ||4||

ಚಲತಿ : ತ್ರಿಲೋಕ ಪಾಲನ ಒಬ್ಬವನೇ |

ಚೌರ್ಯಾಐಂಸಿ ಲಕ್ಷಾ ಜೀವ ನೀನೇ ||

ಹ್ಯಾಂಗೆ ಮರಿಯಲಿ ದೇವಿ ಅಕ್ಕಮಹಾದೇವಿ |

ಸಂಗನ ಶರಣರೊಳು ಉದ್ಧಾರಾದೇನು ಭವಿ ||ಪಲ್ಲವಿ||

ಸಾವಿರ ಐವತ್ತ ಪೂಜಿ |

ಏಕವಿಸ್ ಹಜಾರ ಛಸೇ ಬಾಜಿ |

ಲಾಕ ಶಹಾಣೌ ಹಜಾರ ರೋಜಿ |

ಕೈಲಾಸ ಮುಕ್ಕಣ್ಣ ರಾಜಿ ||1||

ಶರಣ ಸಕಲ ದೇವತರಿಗಿ |

ಶರಣ ಸರ್ವ ದೈವರಿಗಿ |

ಶರಣ ಮಂಗಳ ಮುತ್ತೈದೆರಿಗಿ |

ಶರಣ ಸಿದ್ಧಸಿದ್ಧರೀಗಿ ||2||

ನರ ಜಲ್ಮ ಫಲವಿಲ್ಲ ನೀ ಒಲ್ಮಿ ಆಗಲಾರದೆ |

ಬಲು ಜುಲ್ಮ ಭವಸಾಗರ ಪಾರಾಗದೊ ಗುರುವೆ ||ಪಲ್ಲವಿ||

ನಾಲ್ಕು ಐದು ತೂತಿನ ಟೋಕ್ರಿ ಇದು |

ನಾನು ಬೇಕಂತ ಬಂದು ಕುಂತ ಭ್ರಮೆ ಹಿಡಿದು |

ಸಾಕಾಯ್ತು ಹುಟ್ಟು ಹೊಡೆದು ರೆಟ್ಟಿನೋವು ಆದವು |

ಮುಟ್ಟದು ಭರೋಸಿ ಏನು ಕಾಣದು ಗುರುವೆ ||1||

ಹರಕ ಟೋಕ್ರಿ ಇದು ಬಹಳ ಹಳಿದು |

ಇನ್ನ ತರ್ಕ ಮಾಡಿ ನೋಡಿದ್ರ ಮುಳಗಿ ಹೋಗದು |

ತೆಳಕ ನಡಿತು ಗುರುವೆ ಉಳಕೊ ಈ ಮೂಢನ |

ಕಳಕೊಂಡು ಆಶಿ ಬಿದ್ದು ನೀ ಕೊಟ್ಟಲ್ಲೊ ಗುರುವೆ ||2||

ಕಮಲದಾಸ ಉಳಿದ ನೀರಿನ ಮ್ಯಾಲ ನಡಿದು |

ನಾನು ಅಮಲ ಮಾಡಲಿಲ್ಲ ನಿನ್ನ ಬಿರುದು |

ತಾಮಿಲ ಆಗಲಿಲ್ಲ ನರಜನ್ಮದೊಳು ಪುಟ್ಟಿ |

ಹೆಮ್ಮೆ ಕೆಡಸಿತು ಕಲ್ಮದಾಡವಿದು ಗುರುವೆ ||3||

ಯೋಗಾನುಯೋಗ ಪೂರಾ ಆದ ಕ್ಷಮಾ ವಾರಿ |

ವಾಲ್ಮಿಕ ಋಷಿ ಅನಸಿ ನೀನೇ ಬ್ರಹ್ಮ |

ಮಾಯದ ಹೊಳಿಯೊಳು ಸುಳಿಸುತ್ತ ತಿರುಗುವ |

ಅಪರಾಧಿಗೆ ಕುಂಬಾರನ ಮಗನಂತೆ ಹುಗಿ ತುಳಿದು ||4||

ಭಾವ ಇಟ್ಟಿದ ನಿರ್ಗುಣ ನೀ ಒಬ್ಬವನು |

ನಾವ ದಾಟಿಸು ನಾ ನಿಮ್ಮ ಮಗನಲ್ಲೇನು |

ದೇವ ದೇವಿದಾಸ ಸರ್ವರ ದಾಸ ದಾಸನಾಗಿ |

ಈಶ್ವರ ಬಲ್ಲ ತಾನು ಹೊಳಿ ಈಸಿದೊ ||5||

ದಯಾ ಸಾಗರವಯ್ಯ |

ಶ್ರೀಗಿರಿವಾಸ ಮಲ್ಲಯ್ಯ ||ಪಲ್ಲವಿ||

ನಮ್ಮ ಕರ್ಮದ ಖಾಯಾ |

ನಿಮ್ಮ ಬಲನಯನದ ಛಾಯಾ |

ಬ್ರಹ್ಮ ಬರಿ ತಪ್ಪುವದಯ್ಯಾ |

ಧರ್ಮಗುಣ ಬರುವದು ಸುದಯಾ ||1||

ಸಪ್ತನದಿ ಸಂಗಮ ಭಾರಿ |

ಗುಪ್ತ ಆದರೊ ಪಾತಾಳ ಸೇರಿ |

ಇಪ್ಪತ್ತೊಂದು ಸ್ವರ್ಗದ ದಾರಿ |

ತೃಪ್ತನಾದಿ ನೋಡಿ ಐಶ್ವರ್ಯ ||2||

ಆಸೆರಹಿತ ಶಿಷ್ಯನಾದ |

ನಾಸಿಕ ಮಾರ್ಗದ ಹಿಡಿದ |

ಸಹಸ್ರ ದಳ ಪತ್ರಿ ಕಡಿದ |

ಮಾಸಿ ಗುಂಜಿಕಿಂತಲು ಕಿರಿದ ||3||

ದೃಷ್ಟಿ ಬಲಿಸು ಕಳಸದ ತುದಿಯ |

ಸೃಷ್ಟಿ ಪಾಲಕ ಕಾಣಿ ಮಹಾರಾಯ |

ಕಷ್ಟ ದೂರು ಮಾಡೋ ಗುರುರಾಯ |

ಇಷ್ಟ ಬರಿ ಜೇಜಿಯ ಹೃದಯ ||4||

ನಿಲಕಿಲ್ಲಾ ಪರಬ್ರಹ್ಮನ ಪಾದ |

ನಾನು ನಿಲಕೇನೆಂದು |

ಸಾಕ್ಷಿ ಗಾಯತ್ರಿ ತಂದು |

ಬ್ರಹ್ಮ ಅಪರಾಧ ಆದಾ ||ಪಲ್ಲವಿ||

ಇದಕಾಗಿ ಬೇಕು ಗುರು ಬೋಧ |

ಅಪ್ಪಾ ಅದಕಾಗಿ ಬಂದವರ ಕರ್ಣದೊಳುನಾದ |

ದೊರಕದು ಗುರುಮನಿ ಬೋಧ |

ಬದುಕು ಭೋಗ ದಾರದೆಂದು ಮಾಡುವರು ಶೋಧ ||1||

ಬ್ಯಾಸಕಿ ಬಿಸಲೊಳು ನಡೆದಾ |

ಆ ಬಿಸಲಿನ ಝಳ ಕಾಣದು ನೀರಿನಂತೆ ಹರಿದಾ |

ನೀಡಸಿ ಹೋದ ಬಾಯಿ ತೆರೆದಾ |

ಅಲ್ಲಿ ನೀರಿಲ್ಲಾ ಜ್ಞಾನವಿಲ್ಲಾ ಹೋಗೋದಲ್ಲಾ ಹಾಯ್ದಾ ||2||

ಉತ್ತಮರ ಸಂಗ ಮಾಡು ಸೌದಾ |

ಭತ್ತಾ ತೇಜ ಆದರೆ ಸುದ್ದ ಅಳಿದವರು ಕರೆದಾ |

ಮತಲಪಿ ರುಮಾಲ ನೋಡಿ ಜರದಾ |

ಸೌದಾ ಜೀತ ಆಯಿತು ಕೂಡಲಿಲ್ಲ ಹೊಂಟಹೋಯಿತು ವಾಯ್ದಾ ||3||

ಗುರು ಶಿಷ್ಯಾಗ ಬರಬೇಕು ಕಾಯ್ದಾ |

ಕಾಯ್ದಾ ಓದಿದ ಪ್ರಕಾರ ನಡದವರ ಫಾಯ್ದಾ |

ರಜತಮ ಸೌದಾವು ಮುರಿದಾ |

ಸತ್ವಗುಣ ಎಂಬೋ ಗುರುನಾಮ ಸಿದ್ಧಪ್ಯಾಲಾ ಕುಡಿದಾ ||4||

ಚಲತಿ:- ಪರ ತಿಳಿದಂವ ಬೇರುಂಟು |

ದೂರ ನಿಲ್ಲಿಸಿ ಇರುವನು ಪಂಟು ||

ಗುರುವಿನ ಸಂಗ ಕೂಡಾಮಿ ನಡಿ |

ಅವರಿಂದ ಹಂಗ ಹರಿದು ನಡಿ ||ಪಲ್ಲವಿ||

ಮರವಿನ ಮಾಯಾ ಮರೆತು |

ಗರ್ವ ಹಮ್ಮು ತಾನೇ ಮುರಿತು |

ನಂದಲ್ಲಾ ದೇಹ ತಿಳಿತು ನಡಿ |

ಇದ್ದು ಇಲ್ಲದಂಗೆ ಉಳಿತು |

ಬೈಲ ಪ್ರೇಮವಾಯಿತು |

ಹಿಂದ ಮುಂದ ನೆನಪ ಹೋಯಿತು |

ಜಪ ತಪ ಎಲ್ಲಾ ಮುಗಿತು ನಡಿ ||1||

ಸರ್ವರೂಪ ಗುರುವೆ ಹೊಳಿತು |

ಬ್ರಹ್ಮ ಬರೇ ಹೋಯ್ತು |

ಬೈಲನೊಳು ಬೈಲು ಕಲಿತು ನಡಿ |

ರೇಚಕ ಮುದ್ರ ಬೆಳಿತು |

ರೇವಯ್ಯ ಸ್ವಾಮಿ ನಾಮ ಮೆರಿತು |

ರಜ ತಮ ಗುಣ ಸೋತು ನಡಿ |

ಅಂತೆ ರಾಮ ಸಿದ್ಧ ಆಯಿತು ನಡಿ ||2||

ಗುರು ನಾಮವ ಭಜಿಸು | ಈ ಮನಸು ||ಪಲ್ಲವಿ||

ನಾಲ್ಕು ಯೋನಿ ಜೀವರಾಸಿಗೆ |

ಪರಿ ಪರಿ ಸಲಹುವ ಸ್ವಾಮಿ ||ಅನುಪಲ್ಲವಿ||

ನೈನ ಜ್ಯೋತಿ ದೃಷ್ಟಿ ಬಲಿಸಿ | ಮಹಾಪ್ರಭುನೊಳು |

ಸಪ್ತ ಸ್ವರದಿ ಗುರುವಿನ | ಗುಪ್ತನಾಮ ನುಡಿತಾಸು ||1||

ಬಲನಾಸಿಕ ದಾರಿ | ಆಧಾರ ಮಾರ್ಗ |

ಸ್ವಾದಿಷ್ಟ ಮಣಿಪೂರ | ಅನಾಹುತ ದಳಾ ಎಣಿಸು ||2||

ದ್ವಾದಶ ತೀರ್ಥ ಮುಂದ | ಈ ಸುದ್ದಿ ಅಗ್ನಿ ಚಕ್ರ |

ಪರಂಪರ ಬ್ರಹ್ಮನ ನಾಮ | ಸೇವನ ಮಾಡಿ ಸವಿ ಪಾಲಿಸು ||3||

ಜ್ಞಾನ ಮೂರ್ತಿ ಗುರುಧ್ಯಾನ | ರೇವಯ್ಯ ಸ್ವಾಮಿ |

ನಾಮಸ್ಮರಣಿ ಭವಸಾಗರ | ಪಾರಲೇಸು ||4||

ಮಿತ್ರರೆಲ್ಲರೂ ಕೂಡಿ |

ಜಾತ್ರಿ ಕಣ್ಣಿಲಿ ನೋಡಿ |

ಜಾಗ್ರತಿ ಆಗೋನು ಬಾ |

ಕಾಶಿ ಯಾತ್ರವು ಮಾಡೋನು ಬಾ |

ಸಂಬಾನ ಸ್ತೋತ್ರ ಮಾಡೋನು ಬಾ ||ಪಲ್ಲವಿ||

ಲಕ್ಷ ಚೌರ್ಯಾ ಐಂಸಿ ಯೋನಿಯ ತಿರುಗಿ |

ಮೋಕ್ಷದ ಜನ್ಮಕ ಬಂದು ಸೊರಗಿ |

ಲಕ್ಷ ಪ್ರಭುನ ಧ್ಯಾನ ಚೆಂದ |

ಆಪೇಕ್ಷ ಮಾಡೋನು ಬಾ ||1||

ಮಾತೆ ಗರ್ಭದೊಳು ಭಾಷೆ ಕೊಟ್ಟಿ |

ಸತಿ ಸುತ ಜಾಲದೊಳು ಮರೆತೆಬಿಟ್ಟಿ |

ಸತೀಕ ಬಂದರ ಮುಚ್ಚಂದಿ ತಟ್ಟಿ |

ಮುಪ್ಪ ಆದ ಮೇಲೆ ಗಪ್ಪನೆ ಎಮನರು |

ದಬ್ಬಿದಾಗ ನೀ ಬಾ ||2||

ಒಳಗಿನ ಗುಣ ಒಂದು ತೋರುದೆ ಇಲ್ಲಾ |

ಹೊರಗೆ ಹಿರಿಯರಾಗಿ ತಿರುಗಿದರಿಲ್ಲಾ |

ಎರಗಿದರ ಏನ ಬಂತೋ ಸಾವಿರ ಕಲ್ಲಾ |

ಸಿದ್ಧಪ್ರಭುವ ನಾಮ ಸಂಗಡಿ ಸಂಗವು |

ಮಾಡೋನು ಬಾ ||3||

ಅಳಬೇಕ ನೋಡಿ ನಗಬೇಕ |

ಪ್ರಾಣ ಎಂದಿಗಾದರು ಹೋಗದು ಖರೆ ಇದ್ದ ಬಳಿಕ ||ಪಲ್ಲವಿ||

ಮನಿ ಮಾರ ಕಟ್ಟಿದ್ರವೇನು |

ನೀನು ಸತಿಸುತ ಬಿಟ್ಟಿದ್ರವೇನು |

ಕುಂಬಾರ ಹುಳಿನಂಗ ಬೇರೆ ಇದ್ರ ನೀನು |

ಪೃಥ್ವಿ ಒಂದೀನ ಘಾತ ಇದ್ದ ಬಳಿಕ ||1||

ವನದಾಗೆ ವನಸ್ಪತಿ ಉಂಡೇನು |

ಮಾಯಿ ರಣದಾಗೆ ಸೋತಂವ ಪುಂಡೇನು |

ಘಾಳಿ ಆಹಾರ ಮಾಡಿ ನಾ ಅಂದರೆ |

ಕಾಳಿನ ಪಾಲಾ ಒಂದಿನ ಹೋಳಾದ ಬಳಿಕ ||2||

ಸೂರ್ಯನಾಡಿ ಸೊದ್ದ್ಯಾಣ ಆದರೇನು |

ಚೌರ್ಯಾಐಂಸಿ ಆಸನ ಕುಂತು ಹೋದರೇನು |

ನಾಮ ತಿಳಿಯದೆ ನಾಮಸ್ಮರಣೆ ಮಾಡಿದರೇನು |

ರಜ ತಮ ಸತ್ವವು ಬೆನ್ನ ಹತ್ತಿದ ಬಳಿಕ ||3||

ವರ ಕವಿ ನಾನೆಂದು ಕವಿತಾ ಮಾಡಿದ್ರೇನು |

ಈತನ ಶಿವ ಎಂದು ಸೇವಾ ಮಾಡಿದ್ರೇನು |

ನಿರ್ಬೈಲ ನಿಜರೂಪಾ ಸಾಕ್ಷ್ಯವಾಗಿ ತಿಳಿದರೆ |

ಕಲ್ಪವೃಕ್ಷ ಸಿದ್ಧ ಕಡಿ ಮೊದಲ ಇದ್ದ ಬಳಿಕ ||4||

ಬೇಕಾದರ ಮಾಡು ಇವನ ನಿಂದ್ಯಾ |

ಅಕೋ ಸಾಕಾದರ ಬಿಡು ತಿಪ್ಪಿಮೇಲ ತಿರಗ ಧಂದ್ಯಾ ||ಪಲ್ಲವಿ||

ನಿಂದ್ಯಾ ಜನರಿಗೆ ವಂದನಿ ಹಗಲ ಇರುಳ |

ಬಂಧನ ನಿಮಗಿಲ್ಲಾ ಇದೇ ಸ್ನಾನ ಸಂಧ್ಯಾ |

ಬಂದು ನರ ಜಲ್ಮಾಕ್ಕೆ ಸುಗಂಧ ವಲ್ಲೆಂದು |

ಅಂಧಕಗ ತೊಗೊ ಹೆಚ್ಚಿನ ದುರ್ಗಂಧ್ಯಾ ||1||

ಪರಮ ನಿರಾಲಂಬೊ ನಿಜಗುಣದ ಯೋಗಿಗೆ |

ದುರ್ಜನರೆಲ್ಲಾ ಎಷ್ಟು ಮಾಡಿರಿ ಫಂದ್ಯಾ |

ಎಣಕಿನಿಲ್ಲದೆ ಕೆಣಕಬ್ಯಾಡ ಪರರಿಗೆ |

ಕೋರೆರ ಕರವಣಕಿ ಅದಾ ನೋಡು ಮುಂದ್ಯಾ ||2||

ಅತ್ತ ಇತ್ತ ನೋಡಬ್ಯಾಡ ನೆತ್ತಿ ಮ್ಯಾಲ ನೀg Àಕೊಡ |

ಬಿತ್ತ ಅಂದ್ರ ಭೂಮಿಗೆ ಆಯಿತಾದ ಚಿಂದ್ಯಾ |

ಚಿಕಂದ ಚಕೋರಪಕ್ಷಿ ಚಿನ್ಮಯನ ಧ್ಯಾನ ಮಾಡಿ |

ಚಂದ್ರಗ ಮುಟ್ಟುವದು ಸ್ವಧರ್ಮಾ ದಂಧ್ಯಾ ||3||

ಗುರುಪಾದ ಪ್ರಸಾದ ಹರ್ಷದಿ ಮುಗದಂವಗ |

ಎಣಸದು ಉಂಟೇನು ಮನಸಾಕ್ಷಿ ನೊಂದ್ಯಾ |

ಲಾಕೋ ಖರ್ಮಾದ ಜನ ಕಾಕು ಆಡಿದ್ರೇನು |

ಸುಡತೈತು ಏಕ ಪರಬ್ರಹ್ಮ ರತಿಲಿಂದ್ಯಾ ||4||

ನೀರಯಿಲ್ಲದ ವೃಕ್ಷ ಅದಾ ಹೂವು ಇಲ್ಲದೆ ಕಾಯಿ ಆಗ್ಯಾದ |

ಸಾಕ್ಷಾಗಿ ಬಾಯಿಲಿ ರುಚಿ ನೋಡೊ ತಿಂದ್ಯಾ |

ಕಲ್ಯಾಣದೊಳು ಪ್ರಭುಗ ತಿಳದಂವಗೆನೆ ಚಂದಯ್ಯ |

ರೇವಯ್ಯ ಸ್ವಾಮಿ ತಿಳದಂವನ ಜಲ್ಮ ಹೆಸರು ಚಂದ್ಯಾ ||5||

ಬರತೀರೇನಪ್ಪ ಸಿದ್ಧನ ಸಾಲಿಗಿ |

ಬರಿವದಕ ಕೇಳವದಕ ಘಳಗಿ |

ಸ್ಥಿರವಿಲ್ಲಪ್ಪ ಇರುವದು ನಾಳಿಗಿ |

ನಾಮ ಪ್ರೇಮದ ಸಾರದ ಹೋಳಿಗಿ ||ಪಲ್ಲವಿ||

ಅಂಜುಬಾರದು ಹಾಂವು ತೇಳಿಗಿ |

ಅಂಜು ಬೇಕು ತಮ್ಮ ಹುಂಜ ಕೋಳಿಗಿ |

ಕುರುಬನ ಖ್ಯಾಲ ಇರುವದು ತೋಳಿಗಿ |

ನೊಲ ನೂತಾ ಇರುತಾ ಜಾಳಿಗಿ |

ಭೀತ ಅವನ ಖ್ಯಾಲ ಇರುವದು ತಾಳಿಗಿ |

ಬೀಳಬ್ಯಾಡರಿ ನೀವು ಸೆಳಿಗಿ ||1||

ಶುಭ ಕಾರ್ಯಕ ನಡದಿದಾ ಫಳಗಿ |

ಎದರ ಬಂದರ ಬೈತಿರಿ ಬೋಳಿಗಿ |

ಬಾಯಿ ತರದರಾ ಎನ ಬಂತು ಗಾಳಿಗಿ |

ನೋಡಿ ಇನೊಬ್ಬರ ಮಾಳಿಗಿ |

ದುಡಿರಿ ಖರೆ ದೊರೆಗಳ ಮಿಳಿಗಿ |

ಮೇಯಿಸದಕ ಎತ್ತು ಬೀಳಗಿ ||2||

ಬೈತಿರಪ್ಪ ಆಖಾಡ ಮಳಿಗಿ |

ಬೈವದಲ್ಲ ತಮ್ಮ ದತ್ತನ ಜೋಳಿಗಿ |

ಚಿತ್ತ ಇಡರಿ ಸೀಮೀಯ ಕಾಳಿಗಿ |

ಕರದ ಎಣ್ಣಿ ಖೋಡ ಬ್ಯಾಳಿಗಿ |

ಪತ್ಯ ಬೇಕು ಕಾಂಚನ ಕಾಮಿಣಿಗಿ |

ಸಂತ ಸಂಗ ಕಲತಿರುವ ಮೇಳಗಿ ||3||

ಆಗಿ ಸಾಧು ಮೂರು ಕೊಳಿಗಿ |

ಭೇಗಿ ಕುಂತಿ ತಮ್ಮ ಪಂತಿ ಪಾಳಿಗಿ |

ತಪ್ಪು ಇಲ್ಲಾದೆ ಬೈದಾರೆ ಆಳಿಗಿ |

ಕಪ್ಪು ಬರುವದು ಸಹಜ ಬೆಳಗಿ |

ಸಿಲ್ಕುಬಾರದು ತೊರಿ ನೀರ ಸುಳಿಗಿ |

ಸಿದ್ಧ ಪ್ರಭುನ ಪ್ರಸಾದ ಜೋಳಿಗಿ ||4||

ಯಾಕೆ ಗುರುಬೋಧ ಪಡಿವಲ್ಲಿ |

ನರಜಲ್ಮ ಆತ್ಮ ಸಾಕೇನು ಅನುವರು ಯಾರಿಲ್ಲ |

ಐಕ್ಯಸ್ಥಾನವು ತಿಳಿದು ಸೌಖ್ಯ ಆಗೋನು ಬಾ |

ಪೈಕಿ ಗಳಿಸಿಟ್ಟಿ ನಿನಗ ದಿಕ್ಕು ಯಾರುಂಟು ಅಲ್ಲಿ ||ಪಲ್ಲವಿ||

ಬಾಳ ಭೂಮಿ ಇದ್ದಲ್ಲಿ ನೀ ಹುಟ್ಟಿ |

ಚಾರ ಪೈಸೆ ಧರ್ಮಾ ಕೊಡಲಿಲ್ಲಾ ಕೈ ಮುಟ್ಟಿ |

ಅದ್ದ ರೊಟ್ಟಿ ದಾನ ನೀಡಲಿಲ್ಲ ಮನ ಮುಟ್ಟಿ |

ಎಷ್ಟು ಬಾಯಿಬಿಟ್ಟಿ ನೀನು ನಷ್ಟ ಆಗಿದ ಮ್ಯಾಗೆ |

ಇಷ್ಟ್ಯಾಕ ತಿಳಿವಲ್ಲಿ ಕಮ್ಮಿ ನಿಷ್ಟ ಯಾಳ್ಯಾದಲ್ಲಿ ||1||

ಅಲ್ಲೇನು ಇಲ್ಲೇನು ಅನಬ್ಯಾಡ |

ಕಲ್ಲಿನ ದೇವರ ಕಲಿಯಾಟ ತಡ ತಿಳಿಬ್ಯಾಡ |

ಬಲ್ಲವರು ಆರುನಾಮ ಎಲ್ಲಾ ಮಾತ ಹೇಳುವರು |

ಬೈಲೆ ಬೇಲು ಸಿದ್ಧನ ಭಜನಿ ಸಂಗದಲ್ಲಿ ||2||

ಚಲತಿ : ಹಿತಲಾಗಿನ ಮದ್ದ ನೆನಪ ಹೋಯಿತು |

ಕತಲಾಗ ಹುಡುಕ್ಯಾಡಿ ಜಲ್ಮ ಹೋಯಿತು ||

ತಾನು ಮಾಡಿದ ಫಲ ತನ್ನ ಸಂಗಟ |

ನೀನು ನೋಡಿದ ಮೇಲೆ ಕಾಣಿ ವೈಕುಂಠ ||ಪಲ್ಲವಿ||

ಗುರು ಕಟಾಕ್ಷ ಆದ ಮೇಲೆ ಆನಂದ |

ಅರು ತಪ್ಪಿ ಮಾರ್ಗ ಪಿಡಿದು ಇನ್ನೊಂದು |

ಜ್ಞಾನವಿಲ್ಲದೆ ಪುರಾಣ ಓದಿ ಹದಿನೆಂಟ ||1||

ಖ್ಯಾಲ ಮಾಡಿ ನೋಡು ಏನ ತಾರಿಫ ನಿನ್ನ ಮುಂದ |

ಮೂಲ ತತ್ವ ರಚಿಸಿ ಪ್ರಭು ಪಸಂದ |

ಬಿನಾ ಹತ್ಯಾರವಿಲ್ಲದೆ ಮಾಡಿಕುಂತ ಒಂಟಿ ||2||

ತ್ರಿಭುವನದೊಳು ಜೀವ ಅಂದಾದುಂಧ |

ತ್ರಿನಯನ ಇಚ್ಛಶಕ್ತಿ ಜ್ಞಾನದಿಂದ |

ಸ್ವರ್ಗ ಮತ್ಸ್ರ್ಯ ಪಾತಾಳ ಮೂರು ತುಂಬಿಟ್ಟ ||3||

ಸಕಲ ಸಂಸಾರ ಮಾಲಿಕ ಒಬ್ಬ ಸುಗಂಧ |

ಅಖಿಲ ನಿಲಕವಲ್ಲದು ಗುರು ಭವಬಂಧ |

ಮಣ ಸಿದ್ಧನ ಧ್ಯಾನ ಇರುವದೊಂದು ಗಂಟ ||4||

ಕೂಕ ಜಲ್ಮಕ ಬಿದ್ದು ನರಕ ಹೋಗುವ ಛೀ |

ಲೋಕ ಪಾವನ ಮರೆತು ಸುಮಕೆ ಬೊಗಳುವ ಛೀ |

ಧಿಕ್ ಮನುಜ ನಿನ್ನ ಕಾಕು ಗುಣ ಸುಡು |

ಬಾವಿಕಗೆ ಕಂಡು ಬದನೇಕ ಮಾಡುವ ಛೀ ||ಪಲ್ಲವಿ||

ಎಣಿಸದಿರು ಯೋಗಿ ಜೋಗಿಯ ಗುಣಬೈದು |

ಎಣಿಸಿದರ ಮಮ್ಮಾಯಿ ಗುಣಸಿ ಬೇಡುವಳು |

ಕ್ಷಣಮಾತ್ರ ಸ್ಥಿರವಿಲ್ಲ ನೀರಗುರುಳಿ ಪರಿ |

ಸಣ್ಣ ಕುಲ ಹೊಲಿಯನಲ್ಲಾ ನಿಂದಕ ಹೊಲಿಯ ಛೀ ||1||

ಬೇಕಾದಷ್ಟು ಓದಿ ಬೇಕಾದಷ್ಟು ಹಾಡಿ |

ಸೊಕ್ಕಿದ ಅಹಂಕಾರ ಗುಣ ನೀ ಸಲುವಿದಿ |

ಬಡವರಿಗೆ ಮನ ನೋಯಿಸಿ ಬೇಕಾದ್ದು ನೀ ಉಂಡಿ |

ತುಡಗರಿಗಿ ಎಲ್ಲಿ ಉಂಟು ಮೋಕ್ಷದ ಪದವಿ ಛೀ ||2||

ಹೇಸಿ ಮನುಜರು ಕೂಡಿ ಕಾಸಿಗೆ ಹೋದರೆ |

ಖುಸಿ ಉಂಟೇನು ಕಾಸಿ ಈಶನಿಗೆ |

ನಿರ್ಗುಣ ನಿರ್ವಿಕಾರ ನಿರ್ಬೈಲ ತಿಳಿವುದಕ್ಕೆ |

ಸತ್ತ ಉಳದವರ ಸಂಗ ಸಮರಸ ಇಲ್ಲದ ಛೀ ||3||

ನಾಡಿನೊಳಗೆ ನಮ್ಮ ನಾಮದಗಿ ಸ್ಥಲದೊಳು |

ನಾಗಭೂಷಣ ತಾತ ರೇವಯ್ಯ ಸ್ವಾಮಿಗೆ |

ಮರೆತು ನೀ ಏಸ ವರ್ಷ ಬಾಳಿದ್ರೆ ಏನ ಬಂತು |

ಶರಣರ ನಿಂದೆ ಆಡುವ ಹಂದಿ ಮನುಜ ಛೀ ||4||

ಚಲತಿ ; ಅಂದಿಗಿಂದಿಗಿ ನಿಂದಕರುಂಟೋ |

ಹಂದಿ ಜಲ್ಮಕ ಹೋದರು ಹೊಂಟೊ ||

ಬಸವನ ಸಭಾ ಆನಂದ |

ಪ್ರಭು ನೋಡಿ ಬಂದ ||ಪಲ್ಲವಿ||

ಕಡಾಯಿ ಎಣ್ಣಿ ಕಡಕಡ ಕಾಸಿ |

ಬಡಾಯಿ ಬೊಗಳ ಪಂಡಿತರ ಕರೆಸಿ |

ನಡಿ ತಿಳಿವದು ಆಸಿ ನಿರಾಸಿ |

ಛಿಡಿದು ಬರ್ರಿ ಇದರೊಳು ಈಸಿ ||1||

ಮಹಾಜ್ಞಾನ ಮಹಾ ವಚನಿಕರು |

ಮಾರಿ ತೆಳಗ ಮ್ಯಾಲ ಎತ್ತಿಲ್ಲರು |

ಬಸವ ಅಂದ್ರು ಇವನ ಬಿಟ್ಯಾರು |

ಈಸಲ ಆಡಿ ಹೊರಿಯಾಕ ಬಂದರು ||2||

ಸಭಾದ ಜನ ಸಿಟ್ಟ ಆಗಿದರು |

ನನ್ನ ಬಿಟ್ಟು ಇಲ್ಲ ಹ್ಯಾಂಗ ಅಂದರು |

ಬಸವಣ್ಣನ ಪ್ರಭು ಕೇಳಿದರು |

ಸಭಾದ ಜನ ಹರ ಇವರ್ಯಾರು ||3||

ನಿಂತು ಬಸವ ನುಡಿದರು ಮೌನ |

ಕುಂತ ಸಭಾ ನನ್ನ ಗುರು ಸಮಾನ |

ಸಂತೋಷಿ ಆಯಿತು ಸರ್ವಜನಾ |

ಶಾಂತ ತಾಳು ಸಿದ್ಧ ಭಜನಾ ||4||

ಚಲತಿ – ದೊಡ್ಡವ ನಿನಗ ಅಂದರೆ ಎಣ್ಣ |

ಧಡ್ಡನಂಗೆ ಇರಬೇಕು ಸಣ್ಣ ||

ನಿರ್ಗುಣ ತಿಳಿದ ಜ್ಞಾನಿ ಪುಂಡ |

ಸುಗುಣ ಸುಮ್ಮನೆ ಹ್ಯಾಗ ಮುಟ್ಟೆದ |

ಮಾಣಿಕಪ್ರಭುನ ಝಂಡಾ ||ಪಲ್ಲವಿ||

ನಿರ್ಬೈಲ ಎದಕ ಅನಬೇಕು |

ತಿಳಿವದು ನಿಮಗ ಹ್ಯಾಂಗ |

ಸ್ಥಿರ ಮೂಲ ಜ್ಞಾನದ ಫೇಲ ಮೈಫನ ಬಲ್ಲಂಗ |

ಶರಣರ ಸಂಗ ಕುಂತು ಸೋತೆಯಿಲ್ಲ |

ಗುಂಡಾ ಪಾರ್ಟಿ ಫಂಡ ||1||

ನಾಮದೇವ ಉಣಸಿದ ನೈವೇದ್ಯಾ ಏಕಾಂತ |

ಅದು ಹ್ಯಾಂಗ ನಾಮದೇವ ಉಣು ಅಂದಾ |

ನೈವೇದ್ಯಾ ಲೋಕಾಂತ ಪಾಡುರಂಗ |

ಅರ್ಥ ಆಗುವಲ್ಲದು ಹಿರಿ ಅಣ್ಣಗ |

ಹೇಳಲೆಷ್ಟು ಹೊಯಿಕೊಂಡಾ ||2||

ಡಂಬಕ ಗುಣ ಬಿಡಿಸುವದಕ |

ಕಂಬದೊಳು ಹುಟ್ಟಿ ಬಂದ ಹ್ಯಾಂಗ |

ಸುಂಬ ನಿಸುಂಬ ಮರ್ದನಕಾಗಿ |

ಶಕ್ತಿ ಆದ ವಿಷ್ಟು ಹ್ಯಾಂಗ |

ಶರಣಸಿದ್ಧ ಪದ ಕೇಳಿ ದೀಡಿ ಆಡಿ ಜಲ್ಮಾದಂದಾ ||3||

ಚಲತಿ : ನಾನೇ ಎಂಬೋ ಹೀನ ಮರಕಟಗೆ |

ಮಾನೇ ಎಲ್ಲಿ ಗುಣ ಪಾಪಿಷ್ಟಗೆ ||

ಆಗಿನ ಸಾಧುರ ಹಾಂಗ ಈಗಿನ ಸಾಧುರ ಹೀಂಗಾ |

ನೋಡ ಮಿತ್ರ ನೋಡ ಇವರ ನಡಿ ನುಡಿ ರಂಗಾ ||ಪಲ್ಲವಿ||

ಸಂತ ರಾಮದಾಸ ಸ್ವಾಮಿ ನಡದಿದ್ದರು ರತ್ನಪುರಿಗಾ |

ಆಮ ದುನಿಯದೊಳು ನಾಮ ಜಾಹೀರ ಶಿಷ್ಯ ಶಿವಾಜಿ ಮನಿಗಾ |

ಪ್ರೇಮದಿಂದ ಊರ ಹಂತಿಲಿ ಇಳದರ ಕಬ್ಬಿನ ಮೊಳದಾಗ |

ಭೀಮಶಂಕರ ಮೊಳದ ಮಾಲಿಕ ಕುಂತಿದ ಭಾಂಯಿ ಮ್ಯಾಗ ||1||

ಕೇಳಲಾರದೆ ಒಂದು ಕಬ್ಬು ತಂದ ಶಿಷ್ಯ ಅಡಭಂಗಾ |

ತಿಳಿಯಲಾರದೆ ಬೊಗಳುತ ಬಂದ ಮಾಲಿಕ ಮಾನಭಂಗ |

ಸುಳಗೇಡಿ ಅಜ್ಞಾನಿ ಸ್ವಾಮಿಗಿ ಹೊಡೆದ ಶಿಷ್ಯ ಆದ ಧಂಗಾ |

ತಾಳಿದರು ಸ್ವಾಮಿ ಏನು ಅಂದಿಲ್ಲ ಮೈ ಆಯಿತು ಲಾಲರಂಗ ||2||

ಶಿವಾಜಿ ಮನ್ಯಾಗ ಝಳಕ ನಡಿತು ಹೆಣ್ಣುಮಕ್ಕಳು ಅಂತರ ಆಗ |

ಚೌಕಸಿದೊಳು ಶಿವಾಜಿ ಹುಕುಂ ಹಿಡಕೊಂಡು ತರ್ರಿ ಅವನೀಗ |

ಧಾವಸಿ ನೂರಾರು ಸವಾರು ಹೋಗಿದಾರು ಮುಸಕಿ ಆವನೀಗ |

ಆಯುಷ್ಯ ಸರಿತು ಭೀಮನ ಎದಿಯ ತಣ್ಣಗ ಬಿದ್ದನ ಭೂಮಿ ಮ್ಯಾಗ ||3||

ಎಳಕೊಂಡು ಎತಕೊಂಡು ತಂದು ಕೂಡಸೆರ ಶಿವಾಜಿ ಎದುರಿಗ |

ಎಂಥ ಶಿಕ್ಷನಾಗುವದೆಂದು ಜನ ನೆರದಿತು ಆವಾಗ |

ಶಿವಾಜಿ ಉಗ್ರಗಣ್ಣ ಭೀಮ ನೋಡಿ ನಡುಗಿ ಅಂದ ಆಗ |

ಮಾಝಿ ಅಪರಾಧಿಲ ಕ್ಷಮಾನಾಂಹಿ ಮಹಾರಾಜ ಘ್ಯಾವೋಖಡ್ಗ ||4||

ಸಂತರಾಮದಾಸ ಸ್ವಾಮಿ ಹೇಳುತಾರ ಶಿವಾಜಿ ಕೇಳೆಂದು |

ಶಾಂತವಾಗಿ ಮಾತಿನ ಚೌಕಸಿ ಮಾಡಬೇಕು ಒಂದು |

ಹೆಂಥವರಾಗಲಿ ಬೀನಾ ಇಜಾಜತ ಕಬ್ಜ ತಂದರೊಂದು |

ಕುಂತವರೆಲ್ಲ ನ್ಯಾಯ ಮಾಡರಿ ತಪ್ಪಿಲ್ಲ ಒಕ್ಕಲಿಗೆಂದು ||5||

ಗುರು ವಚನಕ ಸರಿಯಾಗಿ ನಿಂತವ ನರ ಮನುಜ ಅಲ್ಲಾ |

ಎನ್ನ ವಚನ ಪ್ರಕಾರ ನಡಿಯಬೇಕು ಆಗೋ ಈಗ ಕಬುಲಾ |

ಇಗೋತಿನ ಸನ್ನ ಹಿಡಿದು ಭೀಮನ ಹೊಲಕ ಮಾಫಿ ಮಾಡೂ ತಸೀಲ |

ಗುರುವಿನ ಮಾತಿಗಿ ಕಬೂಲ ಆಗಿದನೊ ಹೆಂಥ ಮಾತ ಮಸಲಾ ||6||

ಸರ್ವರೆಲ್ಲ ತಾರೀಫ ಮಾಡುವರು ಹೆಂಥ ರಾಮದಾಸ |

ಪೂರ್ವಲಿಂದೆ ಪಡಕೊಂಡು ಬಂದರ ಶ್ರೀರಾಮನ ಅಂಶ |

ಅರವಿಲಿಂದ ಪಾರಾಗಬೇಕು ಪದ ಬರದ ದೇವಿದಾಸ |

ಗರ್ವಲಿಂದ ಮೆರಿಬಾರದು ದಾರು ಕಡಿಗಾಣದು ಮನಸಾ ||7||

ರಜೋಗುಣ ರಾಜ ರಾಜೇರಿಗಿ ಶುದ್ಧ ಬಿಡಲಾರದು ||ಪಲ್ಲವಿ||

ಲೆಕ್ಕಾ ಹಾಕಲಿಲ್ಲ ಬುದ್ಧಿ |

ಅಕ್ಕ ಮಹಾದೇವಿಗಿ ಕಳುವಿದ ಸುದ್ದಿ |

ನೇಕ ತಾಯಿ ತಂದಿಗಿ ಕುದಿ |

ಧೋಕ ಬಂತು ಧರ್ಮಾದ ಹಾದಿ |

ಸ್ವತ ನುಡಿದಳು ರಾಜ ಅಪಮಾನ ಆದಿ ಬಂದು ||1||

ಬೇಕಾದಷ್ಟು ರಾಜಾ ಕುಣದ |

ಬಸವಣ್ಣನ ವಚನ ನುಡದ |

ಕಣ್ಣ ತೆರದು ಕರವು ಪಿಡದ |

ಉರಿಗಣ್ಣ ಅಕ್ಕಮಹಾದೇವಿ ತೆರದ |

ನೋಡು ಬಸವಣ್ಣ ಇವನ ಕಾಯಾ ಬೀಳತ್ರಿ ಉರದು ||2||

ಮುಣಗಿದಂಗ ಬೆಂಕಿದೊಳಗ |

ಕಣ್ಣ ಮುಚ್ಚಿ ಬಿದ್ದ ಪಾದದ ಮ್ಯಾಗ |

ಅಜ್ಞಾನಿಗಿ ಕ್ಷಮಾ ಮಾಡು ಈಗ |

ಕರುಣ ಬಂತು ಆಗ ತಾಯಿಗ |

ಸಣ್ಣಾಗಿ ನಡಿರಿ ಸಿದ್ಧ ಬೈಲೊಳು ಬೆರೆದು ||3||

ದೇವರೆಲ್ಲಾ ಪರೋಪಕಾರ ಮಾಡಿದ್ದು |

ಬರಿವೇನು ಏಕಾಂತ |

ತಾವು ಹಾಡಿರಿ ಲೋಕಾಂತ ||ಪಲ್ಲವಿ||

ವಿಠಲ ರುಕ್ಮಿಣಿ ಸಕುಬಾಯಿ ಮನಿದೊಳು |

ನೀರು ಹೊತ್ತಾರ ಯಾಕ |

ಮಲ್ಲಿಕಾರ್ಜುನ ಮಲ್ಲಮ್ಮನ ಮನಿಯೊಳು |

ರಂಜಣಗಿ ತುಂಬ್ಯಾರ ಯಾಕ |

ತ್ರಿಲೋಕ ಆಳುವ ಕೃಷ್ಣ ಅರ್ಜುನನ |

ರಥ ಹೊಡೀಲಕೆ ನಿಂತಾ |

ಸಾರಥಿ ಆಗಿ ಭಗವಂತಾ ||1||

ಅನಂತ ಸಂತರು ಪಂಢರಿಗಿ ಉಳದಾರ |

ವಿಠಲ್‍ನಾಮ ಮೆಚ್ಚಿ |

ಅನ್ನಾ ಅರವಿಗಿ ಬಹಳೆ ಬಳಲುವರು |

ಧ್ಯಾನ ಒಂದೇ ರುಚಿ |

ಲಕ್ಷ್ಮೀ ಅನ್ನುವಳೊ ಹಿಂಥ ಸಂತರಿಗಿ |

ಹುಚ್ಚ ಹ್ಯಾಂಗ ಹಿಡದಿತ್ತಾ |

ಧನವಿಲ್ಲಾ ವಿಠಲನ ಹಸ್ತಾ ||2||

ಒಂದ ದಿವಸ ಸಂತ ಸಭಾದೊಳು |

ಹೋಗಿ ಲಕ್ಷ್ಮಿ ಅನ್ನುವಳು |

ಆನಂದವಾಗಿ ಬೇಕಾದ ಊಟಕ |

ಕೊಡುವೆನು ದ್ರಿವ್ಯಾಗಳು |

ಭಕ್ತಿ ನೋಡಿ ನಿಮಗಾಗಿ ಬಂದಿನಿ |

ವಿಠಲ ಇಲ್ಲಾ ಧನವಂತಾ |

ಸುಳ್ಳೆ ಉಪವಾಸ ಯಾಕ ಚಿಂತಾ ||3||

ಸಂತ ತುಕಾರಾಮ ನಿಂತ ಹೇಳುತಾರ |

ರಾಮನಾಮ ನೆಂಬಿ |

ಎತ್ತ ನೋಡಿದರತ್ತ ದ್ರಿವ್ಯಾದ ಖೊಲ್ಲಿ |

ರಾಮನಾಮ ತುಂಬಿ |

ಇನ್ನೊಮ್ಮೆ ನೀವು ಭೇಟಿ ಬ್ಯಾಡರಮ್ಮ |

ದ್ರ್ರಿವ್ಯಾ ಕೊಡುವೆನಂತಾ |

ಪರ ಉಪಕಾರ ಇದು ಹೆಂಥಾ ||4||

ಪೃಥ್ವಿ ಅಪ್ ತೇಜ ವಾಯು ಆಕಾಶ |

ಯಾರು ಕೊಡುವರೊ ಕೊಲಿ |

ಅನಂತಯುಗ ಸೂರ್ಯ ಚಂದ್ರ ನಿಂತರ |

ಎಷ್ಟು ಕೊಡುವೆ ಬೆಲಿ |

ಪರ ಉಪಕಾರದೊಳು ಪರವಾ ಇಲ್ಲದಂಗ |

ದುಡದಾರ ಭಗವಂತ |

ಸಿದ್ಧ ಫಾಬ್ರಾಗಿ ನಿಂತಾ ||5||

ಮೈಸೂರು ರಾಜದೊರೆ ಬಂದೇವು ನೋಡಿದಕ |

ಐಶ್ವರ್ಯ ಬಸ್ತಿ ಮುಂಬಯಿ ಸರಿಯೆನು ಕಲ್ಯಾಣಕ ||ಪಲ್ಲವಿ||

ಪಂಚ ಪರುಷದ ಕಟ್ಟಿ ಯಾವ ಗ್ರಾಮ ಉಂಟಯ್ಯ |

ಹಂಚಿಕಿ ಹಾಕಿ ನೋಡಿದರೆ ಇಲ್ಲ ನೀಲಕಂಠಯ್ಯ |

ಸರ್ವೇಶ್ವರ ಪ್ರಭುದೇವರು ಕೀರ್ತಿ ತ್ರಿಲೋಕ ||1||

ಮುಂದಾಗುವ ಸುದ್ದಿ ಬರೆದ ಕುಂತ ಇದೆ ಠಾವಾ |

ಆನಂದಾಗಿ ಕೇಳರಿ ಕುಂತು ಬಂದತಪ್ಪ ಝಾವಾ |

ಮುನೇಶ್ವರ ವೈಶಂಪಾಯಿ ಕಾಲಜ್ಞಾನ ಬೆಳಕ ||2||

ಎಷ್ಟು ಗವಿ ತಿರುಗಿ ಬಂದ ಹತ್ತಲಿಲ್ಲ ನಿಲಕ |

ಕಷ್ಟ ದೂರ ಆಗಿತು ಗುರುವೆ ಮಡಿವಾಳ ಕೆರಿ ಝಳಕ |

ಈಶ್ವರ ಅಪ್ಪಣೆ ಸಿದ್ಧಪದ ಬರಿವದಕ ||3||

ತ್ರಿಭುವನಂದಾ ಮಾರ್ತಂಡ ರೂಪ |

ತ್ರಿಕಾಲ ಆನಂದನಿಗೆ ನಿಜರೂಪ |

ತೋರಿತು ಜಂಬೂ ದ್ವೀಪ ||1||

ಗಾಳಿಗಿ ಮಾತನಾಡಿ ಬಲ್ಲಂಗ |

ಜೋಳಿಗಿ ಪ್ರಸಾದ ಸಂತರ ಸಂಗ |

ಸುಮ್ಮನ ಹ್ಯಾಂಗ ದೊರಿವದು ಮಂಗ ||2||

ದೀಪದ ರಾಗ ಮಾಡಿದ ವಿಕ್ರಮ |

ಸೋಳ ಸಾವಿರ ಗೋಪೆರ ಸಾಕಿ ಪರಮಾತ್ಮ |

ಕೃಷ್ಣನಾದ ಪರಬ್ರಹ್ಮ ||3||

ಸಾಧು ಮಾರ್ಗ ಭಾಳ ಅವಘಡ |

ಜನರ ಬಾಯಾಗ ಮುಳ್ಳಿನ ಗಿಡ |

ಏರಿ ಇಳೆದು ಅವಘಡ ||4||

ತಮ್ಮ ಮುಳ್ಳು ತಮ್ಮ ಕಣ್ಣಾಗೆ |

ತಿವಕೊಂಡು ಬೆಂದು ಹೋಗುವರು ಸಣ್ಣಗೆ |

ತಾ ಹೊಂಟಿದಾನೋ ಹಿಂಗೆ ||5||

ಚಲತಿ: ನಿಂದಿಕನಿಗೆ ನರಸಿಂಹ ಆಯಿತಿ |

ವಂದಕನಿಗೆ ಸಾರತಿ ಆಯಿತಿ ||

ಚೌತಾ ಖಂಡ ಬರೆಸಿ ಪ್ರಾರಂಭ |

ಷಡಾಕ್ಷ ಮಂತ್ರಲಿಂದೆ ಶಿವಸಾಂಬ |

ಜಗ ನಿರ್ಮಾಣ ಆರಂಭ ||1||

ಲಕ್ಷಾ ಚೌರ್ಯಾಐಂಸಿ ವರದಾತಾ |

ಆಪೇಕ್ಷ ಇಲ್ಲ ಗುರುವೆ ನಿಮ್ಮ ಹೊರತ |

ತ್ರಾಯಃ ತ್ರಾಯಃ ಅವಧೂತಾ ||2||

ಶರಣರ ಮನಿ ಅಷ್ಟಮ ಸಿದ್ಧಿ |

ವರ್ಣ ಆಗಲಾರದು ನಿಮ್ಮ ಬುದ್ಧಿ |

ಸಖನ ಮನಿಗೆ ನೀರ ಹೊಯ್ದಿ ||3||

ಅನಾದಿ ಖಂಡೆರಾಯ ನೀ ಒಬ್ಬ |

ನಾನಾ ತರಹ ವೇಷತಾಳಿದಿ ಶುಭ |

ಮಾನೋ ಜಲ್ಮ ಬಹು ಲಾಭ ||4||

ಸಿದ್ಧ ಪದ್ಯ ಮಾಲಾ ತಾ ನೋಡಿ |

ಬಿದ್ದ ನಿಮ್ಮ ಪಾದ ಕೊಂಡಾಡಿ |

ಉಳದ ಪರಂಪರಾ ಹಾಡಿ ||5||

ಚಲತಿ: ದೇವಿದಾಸ ದೇವಿದಾಸ |

ಪೀಯಾ ನಾಮ ತೊ ಮೀಟಾ ಪ್ಯಾಸ ||

ಈ ಕಲ್ಯಾಣ ಕಂಡವ ಮಹಾಂತ |

ಬುದ್ಧಿ ಹೇಳಿ ಬುದ್ಧಿವಂತ ||ಪಲ್ಲವಿ||

ಈ ಕಾಯಾಕ ಕಲ್ಯಾಣ ಪೊಕ್ಕ |

ಈ ಮನಯೆಂಬೋ ನೋಡ ಬಿಜಳಂಕ |

ಜೀವಯೆಂಬೋ ಬಸವಣ್ಣ ಶಾಂತ ||1||

ಆಸಿ ಫಾಸಿ ಕೊಂಡೆಯ ಮಂಚಣ್ಣರು |

ಮನಸಿಗಿ ಬಲ್ಲಂಗ ಮಾಡುಸುವರು |

ಈ ಮನಸಿನ ಮೇಲ ಏರಿ ಕುಂತಾ ||2||

ದಯಾ ಮಾಯಾ ಎಂಬೊ ಹೆಣ್ಣಮಕ್ಕಳು |

ಭವಗುಣ ಎಂಬೋ ಮಹಾ ಜಂಗಮರು |

ಗುಣಕ ಇಟ್ಟಂವ ತಂತಾನೆ ತಂತಾ ||3||

ಬಸವಣ್ಣ ಹೊರಗ ಬಂದಿದರು |

ಕೂಡಲದೊಳು ಐಕ್ಯ ಆದರು |

ಸಿದ್ಧನ ಝಗಡಾ ಮುಗಿತಂತಾ ||4||

ಚಲತಿ: ಸುಖದಿಂದ ಕಾಣಬೇಕು ಮಲ್ಲಣ್ಣ |

ದುಃಖದಿಂದ ನೋಡಬೇಕು ಕಲ್ಯಾಣ ||

ಜಂಗಮನೆಂಬೋ ಜಗಭರಿತ |

ನಿತ್ಯ ಪೂಜಿಸಿ ಆದರೋ ಮುಕ್ತ ||ಪಲ್ಲವಿ||

ನಿತ್ಯ ನಿರಂಜನ ಜಂಗಮ ನಾಮ |

ತ್ರಿಮೂರ್ತಿಗಳು ಇಟ್ಟರೊ ನೇಮ |

ಉತ್ಪತ್ತಿ ಸ್ಥಿತಿ ಲಯ ನಡಸೆರೋ ಕರ್ಮ |

ಮೂರು ಲೋಕ ನಡದಿತ್ತೊ ಸ್ವಧರ್ಮ ||1||

ಗರ್ವ ಬಂದ ಬ್ರಹ್ಮನ ಸಿರ ಹರಿಸಿ |

ಬ್ರಹ್ಮ ಕಪಾಲವ ಕರದೊಳು ಧರಿಸಿ |

ಭಿಕ್ಷೆ ಬೇಡಿ ನಾರಾಯಣ ಗಳಿಸಿ |

ಮೋಕ್ಷ ಕೊಟ್ಟು ಮುಂದ ಅವನಿಗೆ ಉಳಸಿ ||2||

ಲಕ್ಷ್ಯದ ಮೇಲ ತೊಂಬತ್ತಾರು ಸಾವಿರ |

ಜಂಗಮ ಪ್ರಾಣಿ ಬಸವೇಶ್ವರ |

ಕಲ್ಯಾಣ ಅನಸಿತೋ ಕೈಲಾಸ ಪುರ |

ಮೆಚ್ಚಿ ಬಂದಿದರೊ ಪ್ರಭುದೇವರ ||3||

ನಿತ್ಯವಿಟ್ಟಿದಳೊ ಜಂಗಮ ನೇಮ |

ಸತ್ಯ ಶರಣಿ ಹೇಮರೆಡ್ಡಿ ಮಲ್ಲಮ್ಮ |

ಮುಕ್ತಿ ಪಡಿದಳೊ ಮುಂದೇಳು ಜಲ್ಮಾ |

ಮರಿಯದೆ ಶ್ರೀ ಮಲ್ಲಿಕಾರ್ಜುನ ನಾಮಾ ||4||

ಸದ್ಯಕ್ಷೇತ್ರ ನಾವದಗಿಯ ಗ್ರಾಮ |

ಇಪ್ಪತ್ತೊಂದು ಜಂಗಮ ನೇಮ |

ಅಪ್ಪ ರೇವಪ್ಪಯ್ಯ ನಡಸೆರೊ ಪ್ರೇಮ |

ತಪ್ಪದೆ ಭಜಿಸರಿ ಸದ್ಗುರು ನಾಮಾ ||5||

ಓಂ ನಮಃ ಶಿವಾಯ ಶಿವನೆ ಬಸವ |

ನಮಿಸುವೆ ನಿಮ್ಮ ಚರಣ ನಾಮಾಮೃತ ರಸವ ||ಪಲ್ಲವಿ||

ನಿಮ್ಮ ಲೀಲಾ ವರ್ಣಿಸಲಿಕ್ಕೆ ಬುದ್ಧಿ ಸಾಲದಯ್ಯ |

ಕಲಮ ಕಾಗದ ರಂಗ ಕಡಿಗಾಣದಯ್ಯ |

ಚೆನ್ನಮ್ಮಗ ಮೃತ್ಯುನರನ ಲಗ್ನ ಮಾಡಿ ದೇವಾ |

ಪಡಿಸಿದಿ ಜೀವಾ ||1||

ಮುಗ್ಧ ಸಂಗಯ್ಯ ಬಾಗ ಕಂಡು ಬೈಲಕಡಿ ಕುಂತ |

ಶುದ್ಧಭಾವ ಅಂಗೈದೊಳು ಲಿಂಗ ಇದ್ದು ಏಕಾಂತ |

ಅನಂತತಾ ರಂಗಿನ ಪುಷ್ಟ ಲಿಂಗದ ಮೇಲೆ ಏರಿಸುವಾ |

ನುಡಿಹುತ ಬಸವಾ ||2||

ಕಾಸಿ ರಾಜ ಮೋಳಿಗಿ ಮಾರಯ್ಯ ಕಟ್ಟಿಗಿ ಕಲ್ಯಾಣಕ ಒಯ್ಯುತ್ತಿದ್ದರು |

ನೆತ್ತಿ ಮೇಲೆ ಅದರಂಟೆ ಹೊರಿಯ ಬಸವ ಕಂಡು ಹೋಗಿದರು |

ಹಿಂಥ ಲಿಂಗ ಪೂಜಯ ಕಂಡು ನಕ್ಕ ತನ್ನ ಮನವ |

ಹಳದ ಆಡಿದ ದೇವಾ ||3||

ಒಮ್ಮಿದೊಮ್ಮೆ ನತ್ತಿ ಮೇಲೆ ಹೊರಿ ಕುಂತು ಗಚ್ಚೆಂದು |

ಕ್ಷಮಾ ಮಾಡೋ ಬಸವಾ ನೀನು ತಪ್ಪು ನಂದು ಹೆಚ್ಚೆಂದು |

ಸಿದ್ಧ ಭಜನಿ ಕೇಳಿಕಂಡು ನಗಬಾರದು ದೈವಾ |

ಬೈಲ ನಿಜಪದವಾ ||4||

ಹೆಂಥಾ ಮಹಿಮಾ ಮಾಡಿದಿ ಮಹಾರಾಯ |

ಅಂತ ಇಲ್ಲದೆ ಸಾಯಾ |

ಸಂತ ಕಬೀರ ಒತ್ತಿಟ್ಟು ತನ್ನ ಸತಿಯಾ |

ಸಾಧು ಸಂತರ ಉಪಾಯ ||ಪಲ್ಲವಿ||

ಕಬೀರ ಹೋದ ಸತಿಗಿ ಕಳುಹಿಸಿ |

ಸಬುರ ಇಲ್ಲದೆ ಆದಿ ಪೋಲೇಸಿ |

ಹುಚ್ಚನಾದ ತುಳಸಿದಾಸಯ್ಯಾ |

ಬಿಚ್ಚಿಟ್ಟಿದಿ ನ್ಯಾಯಾ |

ಹೆಚ್ಚ ಅಂದರ ನನಕಡಿ ಅನ್ಯಾಯ |

ನೀಚ ಊಚ ಆಯಿತಯ್ಯಾ ||1||

ತಗಲ ಇಲ್ಲದೆ ನ್ಯಾಯಾ ಹರಸಿ |

ಹೆಗಲ ಮೇಲ ತಾ ಎಂದು ಕೂಡಸಿ |

ಭಕ್ತರ ಮೇಲೆ ಎಷ್ಟಂತ ನಿನ್ನ ದಯಾ |

ಎಲಾ ಮುಕ್ತಿ ಉದಯಾ |

ಗುಪ್ತನಿಗೆ ಹುಡಕಲಿ ಎಲ್ಲಯ್ಯ |

ನೀ ನಿರಾಮಯಾ ||2||

ತುಳಸಿದಾಸ ಕಬೀರಗ ಮುಟ್ಟಸಿ |

ಕಬೀರದಾಸ ಮಾಡಿ ಚೌಕಾಸಿ |

ಶಿಷ್ಯನಾದ ತುಳಸಿದಾಸಯ್ಯಾ |

ಋಷಿ ಮುನಿ ಗೋತ್ರಯ್ಯಾ |

ದೇವಿದಾಸ ಸಿದ್ಧನ ಉನ್ಮನಿಯಾ |

ಸಾಧು ಮಾರ್ಗ ಈ ಪರಿಯಾ ||3||

ಅಕ್ಕ ನಾಗಮ್ಮನ ಕಥಾದ ಪದಗಳು |

ಅರ್ಥಕ ಹೊಂದವರಾ |

ಭವಸಾರ್ಥಕ ಬಂದವರಾ ||ಪಲ್ಲವಿ||

ಪತಿ ಜೀವನ ಸತಿ ಕಾಯವೆ |

ನ್ಯಾಯ ಮಾಡಿದವರಾ |

ಅತ್ತಿ ಮಾವರು ಜ್ಞಾನ ಸುಜ್ಞಾನದ |

ವಿಚಾರ ತಿಳಿದವರಾ |

ಭಕ್ತಿ ಮಾರ್ಗದೊಳು ತಾ ನಡೆದು |

ತಾನೇ ದುಡಿಯುವರಾ |

ಹಿಗ್ಗ ಎಂಬ ಭಾವದೇರಾ ||1||

ಶಕ್ತಿಭಕ್ತಿ ಎಂಬೋ ಅತಗಿನಾ ದಣಿದೆರು |

ತಿಳಿರೀ ಈ ಪ್ರಕಾರಾ |

ಮುಕ್ತಿ ಮಾರ್ಗ ಎಂಬೋ ಅಷ್ಟವೀಣವೆ |

ದೇಹಕ ಆಧಾರಾ |

ಲೋಕ ಪಾವನ ಗುರು ಕಲ್ಲಿನ ಲಿಂಗದೊಳು |

ಪ್ರಕಟ ಆಗ್ಯಾರಾ |

ಭಾವಿಕರಿಗೆ ಕಾಣ್ಯಾರಾ ||2||

ಅಂಗಣಿ ಕುಚ ಎಂಬೋ ಚೆಂಗಳೆವ್ವನ |

ಮಗನಿಗಿ ಪಂತಿಗಿ ಕರದಾರಾ |

ಲಿಂಗಮಯನಾಗಿ ಒಣಕಿ ಬಿಟ್ಟರು |

ಸಂಸಾರ ತ್ಯಾಗದವರಾ |

ಸಂಗನ ಶರಣರು ಅನುಭಾವ ಮಾಡರಿ |

ತತ್ವದ ವಿಚಾರಾ |

ಸಿದ್ಧ ಭಜನಿಯ ಸಾಕಾರ ||3||

ಕಂಡಿರೇನು ಪಂಡಿತ ಪ್ರಭಾವ |

ಅಖಂಡ ಗುರುವಿಗಿ |

ನಮ್ಮ ಷಣ್ಮುಖ ಸ್ವಾಮಿಗಿ ||ಪಲ್ಲವಿ||

ಸೃಷ್ಟಿದೊಳು ಎಷ್ಟಂತ ಶೋಧಿಸಲಿ |

ಗುರುವಿನ ಗುಣ ರೂಪಾ |

ನಿಷ್ಟಿವಂತ ದೇವ ಧರ್ಮರಾಜನಿಗೆ |

ಸದ್ಗುಣ ಅಪರೂಪಾ |

ದುಷ್ಟ ದುರ್ಯೋಧನ ತನ್ನಂತೆ ತಿಳಿತಿದ್ದ|

ಸಜ್ಜನ ಕಂಡು ಕೋಪ |

ಹಾಂಗ ತಿಳಿಬಾರದು ಏನಪ್ಪ ||1||

ಹತ್ತೆಂಟು ಯೋಗದೊಳು ರಾಜಯೋಗ |

ಹೆಚ್ಚ ಜ್ಞಾನ ಸಿಂಧು ಬೆಳಕ |

ಅವತಾರ ಶ್ರೀಕೃಷ್ಣ ಎತ್ತಿದಾ |

ಬಿಡು ಮನಸಿನ ಕಲಕ |

ಸತ್ಪುರುಷರ ನಿಂದಾ ಆಡಿದ್ರ ಹೋಗವರು |

ಇದು ಜ್ಞಾನ ಸಿಂಧು ಲೆಕ್ಕ ||2||

ಮೋಕ್ಷದ ನರಜಲ್ಮ ಬರುವದು ಭವದೊಳು |

ಭಜನಿ ಮಾಡುವದಕ |

ಲಕ್ಷಯಿಟ್ಟು ಕಲ್ಪವೃಕ್ಷ ತಿಳಿರಿ |

ಪ್ರತ್ಯಕ್ಷ ಮಾಣಿಕ |

ಲಕ್ಷ ತೊಂಬತ್ತಾರು ಸಾವಿರ ಜಂಗಮರ |

ತೃಪ್ತ ಆಗಿದಂತೆ ಮನಕೆ |

ನಾಮಾಮೃತ ಷಣ್ಮುಖ ||3||

ಚಲತಿ : ಹರಮಾಣಿಕ ಜಯಮಾಣಿಕ |

ಹರಷಣ್ಮುಖ ಜಯಷಣ್ಮುಖ ||

ಧರಣಿಯೊಳು ದಕ್ಷಿಣ ದಿಕ್ಕ ಹೊಚಕನಳ್ಳಿ ಮೂರ್ತಿ |

ಶರಣ ನಿಮ್ಮ ಚರಣ ಪೂಜೆ ಮರಿಯಲಾರೆ ವಿಭೂತಿ |

ಕರುಣ ಇರಲಿ ಶರಣರ ಮೇಲ ತ್ರಿನಯನ ತ್ರಿಪತಿ |

ಷಣ್ಮುಖಸ್ವಾಮಿ ಷಣ್ಮುಖಸ್ವಾಮಿ ಷಣ್ಮುಖಸ್ವಾಮಿ ಭೂಪತಿ ||1||

ಅನಂತನಾಮ ಅನಂತರೂಪ ಅನಂತವೇಷ ಶ್ರೀಪತಿ |

ಶ್ರೀಮಂತ ಸಕಲಗುಣ ಸಕಲಮತ ಸಾರಥಿ |

ಗುಣವಂತ ಗುಣನಿಧಿ ಸಗುಣ ಮೂರ್ತಿ |

ಜಯಷಣ್ಮುಖ ಜಯಷಣ್ಮುಖ ಜಯಷಣ್ಮುಖ ಭೂಪತಿ ||2||

ನಿಮ್ಮ ಸಮೀಪ ನಾಡಿನಲ್ಲಿ ನಿಡವಂಚಿ ಜಾಗೃತಿ |

ಬದ್ರಿನಾಥ ಬುದ್ಧಯ್ಯಸ್ವಾಮಿ ಭೀಮರಾವ ತ್ರಿಮೂರ್ತಿ |

ತದ್ರೂಪ ಮಹಾರುದ್ರಪ್ಪ ಖೇಣಿ ಭೂಪತಿ |

ಬಕ್ಕಪ್ರಭು ಬಕ್ಕಪ್ರಭು ಬಕ್ಕಪ್ರಭು ಮಹಾಜ್ಯೋತಿ ||3||

ಏಕೋ ವಚನ ರೇವಯ್ಯಸ್ವಾಮಿ ರೇವಮ್ಮ ತಾಯಿ ಸತಿಪತಿ |

ಲೋಕಪಾವನ ಹಾರಕೂಡ ಸ್ವಾಮಿ ಅಂಬಲಗುಂಡ ಭಾಗೀರಥಿ |

ಕರಬಸಪ್ಪಾ ಮಡಿವಾಳಪ್ಪ ಏಂಕಮ್ಮ ತಾಯಿ ಸದ್ಗತಿ |

ಷಣ್ಮುಖಸ್ವಾಮಿ ಷಣ್ಮುಖಸ್ವಾಮಿ ಷಣ್ಮುಖಸ್ವಾಮಿ ಭೂಪತಿ ||4||

ಕೃತಾತ್ರೇತಾ ದ್ವಾಪರ ಕಲಿಯುಗ ದೈವತಿ |

ತುಳಜಾಪುರ ಪಂಢರಪುರ ನಾಮಸ್ಮರಣ ಸದ್ಗತಿ |

ಸಿದ್ಧರಾಮ ಶರಣುಬಸವ ದತ್ತಾತ್ರಿ ಶಿವಜ್ಯೋತಿ |

ಜಯಷಣ್ಮುಖ ಜಯಷಣ್ಮುಖ ಜಯಷಣ್ಮುಖ ಭೂಪತಿ ||5||

ಬ್ರಹ್ಮಾಂಡದೊಳು ದೇವತರಿಗೆ ಭಕ್ತ ಮಾಡಿದ ಜಾಗೃತಿ |

ಮಾರ್ಕಂಡನಿಗಾಗಿ ಶಿವನು ಕಲ್ಲಿನೊಳು ಉತ್ಪತ್ತಿ |

ಸೊಂಡೂರ ಕಾರ್ತಿಕ ಸ್ವಾಮಿ ಮಾಯಿ ಬಿಟ್ಟಾ ಮೂರತಿ |

ಜಯಮಾರ್ತಂಡ ಜಯಮಾರ್ತಂಡ ಜಯಮಾರ್ತಂಡ ಭೂಪತಿ ||6||

ಮಲ್ಲಮ್ಮನ ಭಕ್ತಿಗಿ ಮೆಚ್ಚಿ ಬೀಸಲಕ ಹಿಡದ ಗುರು ಮೂರ್ತಿ |

ಗುಲಾಮ ಆಗಿ ಸೇವಾ ಮಾಡರಿ ಸಿಗುವ ಮಂಗಳ ಮೂರ್ತಿ |

ಸಲಾಮ ಬಂದೆನವಾಜ ಕರಿಮುಲ್ಲಾ ಶಂಭುಲಿಂಗ ಗತಿ |

ಷಣ್ಮುಖಸ್ವಾಮಿ ಷಣ್ಮುಖಸ್ವಾಮಿ ಷಣ್ಮುಖಸ್ವಾಮಿ ಭೂಪತಿ ||7||

ಮರಿಯಲಾರೆ ಮಾಣಿಕಪ್ರಭು ಎಂಕಮ್ಮ ತಾಯಿ ದೇವತಿ |

ಮರಿಯಲಾರೆ ಹಗಲ ಇರುಳ ಈರಮ್ಮ ತಾಯಿ ಸದ್ಗತಿ |

ಮಾಣಿಕದಾಸ ಹೃದಯವಾಸ ಕುಂತು ಮಾಡರಿ ಜಾಗೃತಿ |

ಜಯಷಣ್ಮುಖ ಜಯಷಣ್ಮುಖ ಜಯಷಣ್ಮುಖ ಭೂಪತಿ ||8||

ಶ್ರೀಗುರು ವಚನ ತತ್ವ ಮಹಾವಾಕ್ಯ |

ನಿಜ ಗುರು ಭಕ್ತಗ ಅನುಭವ ಸೌಖ್ಯ |

ತೀರ್ಥಪ್ರಸಾದ ಐಕ್ಯ ||1||

ಸೃಷ್ಟಿಕೃತ ನೀನೇ ಪರಬ್ರಹ್ಮ |

ನಿಷ್ಟಿಲಿ ಭಜಿಸುವೆ ನಿಮ್ಮ ನಾಮಾ |

ಇಷ್ಟದಂತೆ ಸ್ವಧರ್ಮಾ ||2||

ನಿನ್ನ ಬಿಟ್ಟು ಪರ ಉಪಕಾರ ದಾರು |

ಪಳದಾಗ ನಾಶ ಮಾಡುತಿ ಮೂರು |

ಉಳಿದರಪ್ಪಾ ಇನ್ಯಾರು ||3||

ನಾ ಎಂಬೋ ಸೊಕ್ಕಿದವನ ಹಲ್ಲು ಮುರದಿ |

ನೀ ಎಂಬೋ ನಿಜನಿಗೆ ಉನ್ಮನಿ ತೆರದಿ |

ಸಿಂಹಾಸನ ಬಲ್ಲಿ ಕರದಿ ||4||

ಸದ್ಗುರು ರೇವಯ್ಯ ಸ್ವಾಮಿ ನೀನೆ |

ಅರವಿನ ಮನುಜಾಗ ಮಸರಿನ ಬೇನೆ |

ಸಿದ್ಧಾ ಬೆನ್ನ ಹತ್ತಿ ತಾನೆ ||5||

ಚಲತಿ : ಕುಣಿದಾಡಿ ಭಜನಿ ಮಾಡನು ಬಾ |

ಛಿಡದಾಡಿ ಉಪ್ಪಿನ ಆಟ ಗೆದಿಯೋಣ ಬಾ ||

ಕಲ್ಲ ತಿಳಿ ದೇವರ ತಿಳಿ |

ನಿಮ್ಮ ಸಂಗಟ ನಿಮ್ಮ ಪಾಳಿ ||1||

ಎಲ್ಲಾ ಬಲ್ಲಂವ ಎಲ್ಲಿ ಇಲ್ಲಾ |

ಬಲ್ಲವನಿಗೆ ಔಷಧ ಹುಲ್ಲಾ ||2||

ಖೂನಾ ಮರಿತು ಎಷ್ಟೋ ಹೋಯಿತು |

ಶ್ವಾನಗ ತೀರ್ಥ ಹ್ಯಾಂಗ ಸಲ್ಲೆತು ||3||

ನಮ್ಮ ಕವಿತಾ ನಿಮಗ ದ್ವೈತಾ |

ಅದ್ವೈತನಿಗೆ ಅಮೃತಾ ||4||

ದಾಸ ಸಿದ್ಧ ಪಾದಕ ಬಿದ್ದಾ |

ರೇವಯ್ಯ ಸ್ವಾಮಿ ಮಾಡಿರು ಶುದ್ಧ ||5||

ಚಲತಿ: ಪುನಃ ಬರೋದಿಲ್ಲಾ ಈ ಜಲ್ಮಾ |

ಗುನ್ಯಾ ಕ್ಷಮಾ ಮಾಡೊ ಪರಬ್ರಹ್ಮ ||

ತ್ರಿಕಾಲ ಲಿಂಗ ರೂಪನೆ ಕಂಡಾ |

ಜಗದೊಳು ಶಿವಮನಿ ಭಂಡಾರ ಉಂಡ |

ಯಮ ಗಾಜಿನ ಗಂಡಾ ||1||

ತನು ಮನ ಧನ ಗುರು ಅರ್ಪಣ |

ಮಾಂಸ ಪಿಂಡಾ ಹೋಗಿ ಮಂತ್ರ ಪಿಂಡಣ |

ವಾಕ್ಯ ಸಿದ್ಧಿ ಶರಣ ||2||

ಮುಂದಿನ ಸುದ್ದಿ ತಿಳಿದ ಸಂಪೂರ್ಣ |

ಹಿಂದಿನ ಹುಚ್ಚನಂತೆ ಕೂಡೋಣ |

ಮೆಚ್ಚಿ ತಾನೇ ಮುಕ್ಕಣ್ಣ ||3||

ಸ್ವರ್ಗದ ನಿತ್ಯ ನಾದ ಕೇಳೋಣ |

ಕೇಳಿ ನಿಜ ಭಕ್ತಗ ಹೇಳೋಣ |

ಕೇಳಿದವನೆ ಪಾವನ ||4||

ಕಲಿಯುಗದೊಳು ಯೋಗಿ ಹಠಯೋಗಿ |

ಅಷ್ಟವರ್ಣ ಸಂಪೂರ್ಣವಾಗಿ |

ಸಿದ್ಧ ಕಂಡಾ ಹುಚ್ಚಾಗಿ ||5||

ಚಲತಿ : ಲಿಂಗ ಬಿದ್ದು ತಾನೆ ಬಂತು |

ಮಂಗರಿಗೆ ನೆಲಿ ಏನ ಗೊತ್ತು ||

ಅಕ್ಕ ನೀನು ಮುಕ್ಕ ಹಾಕು
ಅಕೋ ಹಾಂಗಾಗದು ತಾನೆ
ಅಣ್ಣ ಬುದ್ಧಿ ಹೇಳೊ
ಅತ್ತಿ ನೀನು ಸವತಿ ಮಾತ ಕೇಳಿ
ಅಪಾರ ಪರಬ್ರಹ್ಮನ ವ್ಯಾಪಾರ ಮಾಡಿದ
ಅಂಗಿ ನೋಡ ತಂಗಿ
ಅಂದಿಗಿಂದಿಗಿ ಬಿಂದಿಗಿ ನೀರ ಬೇಕು
ಅರೆರೆರೇ ಕಡಿದ್ಹೋಯ್ತು ಕರಿ ಚೇಳ
ಅಕ್ಷರ ಅಕ್ಷರ ಲಕ್ಷ್ಯ ಪ್ರತ್ಯಕ್ಷ
ಅಕ್ಕ ನಾಗಮ್ಮನ ಕಥಾದ ಪದಗಳು
ಅದ್ವೈತ ಮೂರು ಅಕ್ಷರ ಎಂಟು
ಅಣ್ಣಾ ನೀನು ಹಿಟ್ಟ ಬೂದಿ ಒಂದಿನಬೇಡಯ್ಯಾ
ಅಲ್ಲಿಇಲ್ಲಿ ಹುಡುಕಿದರಿಲ
ಅಳಬೇಕ ನೋಡಿ ನಗಬೇಕ

ಆದಿ ಗಣಪತಿ ಪೂಜಾ ಮಾಡಿರಿ
ಆತ್ಮದ ಅನುಭಾವ ಅರ್ಥವ ಹೇಳಲಿಕ್ಕೆ
ಆರೋಢನೆಂದರೆ ಅದ್ವೈತನಾಗುವನು
ಆಗಿನ ಸಾಧುರ ಹಾಂಗ ಈಗಿನ ಸಾಧುರ ಹೀಂಗ
ಆ ಊರವರಿಗಿ ಅದು ದೇವರಾದ
ಆಚಾರ ಇಲ್ಲದವನಿಗೆ
ಆತ್ಮ ತಿಳಿದು ಪರ ಆತ್ಮ ತಿಳಿಯಣ್ಣ
ಆನಂದ ಗುರು ಎಲ್ಲೆಂದು ಹುಡಕಲಿ

ಇಂಥವನಿಗಿ ಆದಿ ತಂಗಿ ಮರುಳ
ಇಲ್ಲೆ ಕಳಿತವ್ವ ನತ್ತು ಇಲ್ಲೆ ಕಳಿತು
ಇಲ್ಲೆ ದೊರಿತವ್ರ ನತ್ತು ಇಲ್ಲೆ ದೊರಿತು
ಇಲ್ಲಿ ಮಂದಿರ ನೋಡ ಅಲ್ಲಿ ದೇವರ ನೋಡ
ಇರೋ ಬಂದಿದಲ್ಲ ಈ ಕಾಯಾ

ಈ ದೈವ ದೇವ ಭವ ಜೀವ
ಈ ಕಲ್ಯಾಣ ಕಂಡವ ಮಹಾಂತ

ಉಪದೇಶ ಪಡದಂವ

ಎಂದು ಕಂಡೆ ಚೆನ್ನಬಸವ ಎಂದು ಕಂಡೆ
ಎಂಥಾ ಕೌತುಕ ಗೆಳೆದೆಮ್ಮ
ಎಂಥಾ ಆಕಳಕೊಟ್ಟಾರ ನಮ್ಮ ತವರವರು
ಎಂಥಾ ಸೋಜಿಗ ಕಂಡ
ಎಲಾ ಮನಸಾ ನೀ ಎಂಥ ಪುಣ್ಯವಾನ
ಎಷ್ಟು ವರ್ಣಿಸಲಿ ಎಷ್ಟು ಶೋಧಿಸಲಿ

ಎಚ್ಚರಾಗಿ ಹುಚ್ಚನ ಪದಬರಕೋ
ಎಚ್ಚರಾಗೋ ತಮ್ಮ ಎಚ್ಚರಾಗೋ
ಎನ್ನ ಹಣಿಬಾರ ಎಂಥಖೇರ
ಎಲ್ಲರಲ್ಲಿ ಇರುವುದು ಈ ಲಿಂಗ
ಎಲಾ ಮನಸಾನೀ ಎಂಥ ಕಡಿಗೇಡಿ
ಏಏಏಏ ವಸ್ತಾವಡವಿ
ಏಕತಾರಿ ಪಿಡಿಬೇಕೊ ಕೈಯ
ಏನ ಸೋಜಿಗ ತಂಗಿ ಏನ ಸೋಜಿಗ
ಏನ ಬೇಕೋ ಯೋಗಿಗಿ ಏನ ಬ್ಯಾಡೊ
ಏಕತಾರಿ ಕಾಯಿ ಕೈಯಾಗ ಪಿಡಿದಾ
ಏನು ಕಂಡು ಮರುಳಾದೆನು ಅಕ್ಕಾ

ಒಗಿಲಾಕ ಹೋಗಾಮಿ ನಡಿರೆ
ಒಬ್ಬ ಸುಖಿ ಒಬ್ಬ ದುಃಖಿಯಾ
ಒಂದೇ ಪದ ಬರಕೋ ತತ್ವದ ನೆಲಿ ತಿಳಕೋ
ಒಲ್ಲ ಅನಬ್ಯಾಡ ಬಾ ದಿಲ್ಲಿ ನೋಡದಕ

ಓದಿ ಅರ್ಥ ಮಾಡೋ ಬಸವನ ವಚನ
ಓದು ಬಾರದೇ ವಚನ ಓದು ಬಾರದೇ
ಓಂ ನಮಃ ಶಿವಾಯ ಶಿವನೆ ಬಸª
ಓಂಓಂಓಂಓಂ ಮಾಡಿ ಮಾಡಿ

ಕಟ್ಟಿದಲ್ಲೆ ಕದ್ದೊಯ್ದನವ್ವ ಹೋರಿ
ಕಂಡಿರೇನು ಪಂಡಿತ ಪ್ರಭಾವ
ಕುಂತಿರೇನಪ್ಪ ಪದ ಕೇಳದಕ
ಕಾಗಿಯ ಮನೆಯೋಳು ಕೋಗಿಲ ಬೆಳೆದು ಹೋಗಿ
ಕಾಣಬಾರದಂತಹ ವಸ್ತು ಕಣ್ಣಿಗಿ ಹ್ಯಾಂಗ ಕಾಣಿತು
ಕಾಯ್ದದ ಬೀಳಮೈದು ಕಳೆದ ಹೋಯ್ತು ಬಿಳಿ ಎತ್ತು
ಕಾಮನ ಸುಡುತಲಿ ಏನಾದೆ
ಕುಸ್ತಿ ಆಡವನೇ ಜಾಮರ್ದ
ಕೂಲಿ ಮಾಡುವರೆಲ್ಲ ಕುಬೇರನಾಗಬೇಕು
ಕೇಳಬಾರದು ಕಿವಿ ಕೇಳಬಾರದು
ಕೇಳೆನ್ನ ಮನಸಾ ಹಗಲಿನ ಕನಸಾ
ಕೇಳಿ ಬಂದ ಶಾಣೇರ ಮಾತು
ಕಲ್ಲ ತಿಳಿ ದೇವರ ತಿಳಿ
ಕಲ್ಯಾಣ ಬಸವಣ್ಣನ ಯಾತಾ
ಕೈಲಾಸ ಈಶ್ವರ ದೇವತ್ರ
ಕೈ ಚಾಗಿದವರು ಬಾಯಿ ಬಲ್ಲಂಗ
ಕೋಕ ಜಲ್ಮಕ ಬಿದ್ದು ನರಕ ಹೋಗುವ ಛೀ

ಖಲಲ ಗುಲ್ಲ್ಯಾಕ ಎಲ್ಲಿ ಬರದಿ

ಗರಜಿಗಿ ಬಿದ್ದು ತಿಗಣಿ ಮಾತು ಕೊಟ್ಟಿ
ಗುಂಪ ನೋಡಿರಿ ಅಣ್ಣ ಗುಂಪ ನೋಡಿರಿ
ಗುಂಪ ಕಂಡಿದ್ಯಾ ಮಿv
ಗುಪ್ತ ಮಾತ ಇರುವದು ತಂಗಿ ಹೇಳಲಾರೆನು
ಗುರುವಿನ ಅನುಗ್ರಹ ಪಡೆದು
ಗುರು ಉಪದೇಶ ನರ ಪಡೆದು
ಗುರುಕೃಪಾ ಆಗಲಾರದೆ ಅರ್ಥ ಏನಪ್ಪ
ಗುರು ನಾಮವ ಭಜಿಸು ಈ ಮನಸ್ಸು
ಗುರುತರ ಭಜನಿಯ ತಾಸು
ಗೂಗಿ ಕೂಗುತಾದ ಕೇಳು
ಗೆಳದಿ ಗಂಡನ ಮಾಡಿಕೊಂಡ
ಗುರುವಿನ ಸಂಗ ಕೂಡಾಮಿ ನಡಿ

ಘಟ್ಟಿ ಮಾತು ಏನು ಚಿಟ್ಟಗಿ ಆಶಿ ಬಿದ್ದು

ಚಾಕರಿ ಮಾಡಿ ಬಂದಿನಿ ನಿಮ್ಮಲ್ಲಿಗಿ
ಚಿಂತಿಯೊಳು ಎಂಥ ಚತುರಾಯಿ
ಚಿನ್ನ ಬಣ್ಣ ಅಂಗಕ ಭೂಷಣ
ಚೌಫೇರಿ ಸ್ಥಾನ ಪ್ಯಾಟಿಯೋಳು
ಚೌತ ಖಂಡ ಬರಸಿ ಪ್ರಾರಂಭ

ಜಲ್ಮಕ ಬಾರದ ಕಾರ್ಯ ಮಾಡು
ಜಾಣ ಗುಣದವನೆ ಅವನೆ ಭಕ್ತ
ಜಾಣನು ಜಾಣ ತಾನಾದೆ
ಜೀವ ಇರುವ ಪರಿಪರಿಯ
ಜಂಗಮನೆಂಬೋ ಜಗಭರಿತ
ಜ್ವಾಕಿ ನೋಡ ಕೂಡ ತಂಗಿ

ತಂಗಿ ಕಲೆತು ಹೋಗನು ಬಾರೆ
ತಂದಿ ತಾಯಿ ಒಂದು ಬಳ್ಳೋಳಿ ಕೊಟ್ಟಾರ
ತನು ಮನ ಧನ ಮಹಾ ಬೆಲೆಯ ಕೊಟ್ಟು
ತನು ಸಾಕ್ಷಿ ಗುರು ಸೇವಾ ದುಡಿಕೊಂಡೆ
ತತ್ವ ಜ್ಞಾನಾಮೃತ ಹಿತವು ತಾನಾಗಲಿಕ್ಕೆ
ತಪೇಸಿ ಉಪದೇಶ ಅದಬಳಿಕ
ತಾ ತಂಗಿ ಪಂಚಪಾತ್ರೆ
ತಾಳತಾಳ ಅಂತಿರಿ ದೈವ
ತ್ರಿಕಾಲ ಲಿಂಗರೂಪನೇ ಕಂಡ
ತ್ರಿಭುವನಾನಂದ ಮಾರ್ಥಂಡರೂಪ
ತಾನು ಮಾಡಿದ ಫಲ ತನ್ನ ಸಂಗಟ

ದಯಾ ಸಾಗರವಯ್ಯ
ದಾಸಿಯಾಗದು ಸುಮನಿಲ್ಲ
ದೇವಿದಾಸ ಈತನೇ ನೋಡು
ದೇಹದ ರಥದ ಮೇಲೆ ಕುಂತು
ಧನ್ಯವಚಿತರು ಕಂಡವರು ಪುಣ್ಯವಚಿತರು
ಧರಣಿಯೊಳು ದಕ್ಷಣ ದಿಕ್ಕು
ಧನ್ಯ ಧನ್ಯ ನಿರ್ಬಯಲ ಸ್ವಾಮಿ
ಧ್ಯಾನ ಮುಕ್ತಿ ಜ್ಞಾನ ಗಣಪದವೆ
ದೇವರೆಲ್ಲಾ ಪರೋಪಕಾರ ಮಾಡಿದ್ದು
ದೊಡ್ಡ ಮನುಜನ ಹತ್ತಿರ ಒಬ್ಬ ದಡ್ಡ
ದೇವರ ತಿಳಿದರೆ ಹೇಳಯ್ಯಾ
ಧರ್ಮ ನೀತಿ ಬಿಚ್ಚಿರಿ ಗುಂಡಾರಿ
ಧ್ಯಾನಿಸೋ ತತ್ವ ಪದಗಳು

ನನ್ನ ಗಂಡ ಹಿಂತವ ನೋಡ ಗುಂಡ
ನಡತಿ ಬಿಟ್ಟು ಬೇನಡತಿ ನಡೆದರೆ
ನರಜಲ್ಮ ಯಾಕೆ ಬಂತಯ್ಯೋ
ನಾ ಏನು ಬಲ್ಲೆನಪ್ಪ ನಿಮ್ಮ ಕೂಸ
ನಾ ಮಾಡಿದ ಕರ್ಮವು ಬಲವಂತವಾದರೆ
ನಾನೆ ಭಕ್ತ ಎಂತೆಂಬೋ ಹೃದಯ
ನಾಶ ನೀನು ಆಗುವನಲ್ಲ
ನಾನು ಮಾಡಿದ ಫಲ ಉಂಟೆ ಗುರುನಾಥ
ಜ ಬ್ರಹ್ಮ ಬೈಲಾ ನಿಜ ನಿಮ್ಮ ಲೀಲಾ
ನಿದ್ರಿಯೋಳು ಭದ್ರಿನಾಥನ ತಿಳಕೋ
ನಿರಂಜನ ಧುನಿ ಪ್ರಸಾದ ಸಂತರ ವಾಣಿ
ನಿನ್ನಂತ ಕಿಡಿಗೇಡಿ ಶಿವನು
ನಿರಾಕಾರ ನಿರ್ಗುಣ ನಿರಂಜನ
ನಿಲಿಕಿಸಿಕೊಳ್ಳೋ ಮೇಲಿನ ಕಾಯಿ
ನಿರ್ವಿಕಲ್ಪ ಆತ್ಮ ಅದ್ವೈತ ನೀ ನೋಡಿಕೋ
ನೀ ಯಾತಕ ಬಂದಿದಿ ಭವರೋಗಿ
ನಿರ್ಗುಣ ತಿಳಿದ ಜ್ಞಾನಿ ಪುಂಡ
ನುಡಿ ನಡಿ ಇಲ್ಲದ ಹುಡುಗ ನೀನು
ನೋಡನು ಬಾರಂಗ
ನೋಡಿರೇನಪ್ಪ ಹಿಮಾಚಲ ಗಿರಿಯ
ನೋಡಿ ನೋಡಿ ಮಾಡಿದ್ರ ಫಲವೇನು ?
ನೋಡಿ ನೋಡಿ ಲೀಲಾ
ನೋಡೋ ಗುರು ಮನಿಯೋ
ನೌಕರಿ ಇರುತಿರೇನೊ ನಿರ್ಮಳ ಗುರುವಿನ ಸ್ಥಳ
ನರಜಲ್ಮ ಫಲವಿಲ್ಲ ನೀ ಒಲ್ಮಿ ಆಗಲಾರದೆ
ನಿಲಕಿಲ್ಲ ಪರಬ್ರಹ್ಮನ ಪಾದ

ಪಂಚರಾದವರು ಕೂಡಿ ಪಂಚೇತಿ ಕಡಿರಿ
ಪಂಚಕರಣ ಎಂಬ ಜ್ಞಾನದ ಊರೊಳು
ಪಂತ ಯಾತಕ ಪಂಡಿತ ನಾನೆಂಬೊ
ಪತಿವೃತಿ ನಾ ಪತಿವೃತಿ
ಪದಾ ಕೇಳಿ ವ್ಹಾವಾ ಅಂದರೆ
ಪಹಿಲೆ ಭಕ್ತಿಪುರ
ಪ್ರಭುರಾಯ ನೀನೇ ಸತ್ಯ
ಪ್ರಪಂಚ ತಿಳಿದ ಮೇಲೆ ನಂದೇನು ಹಂಗ
ಪರಬ್ರಹ್ಮ ತಿಳಿದು ಗುರುವಿನ
ಪ್ರೇಮಲಿಂದ ಬ್ರಹ್ಮಪುರಿಗಿ ಹೋಗಿದ

ಬಡಿವಾರ ಬೇಡ ಪ್ರಾಣಿ
ಬರಬಾರದು ಅಬಬಬಾ
ಬರದವರ ಕೂಡಿ ಬರದ ಪದ ಹಾಡಿ
ಬರಬಾರದಿತ್ತು ಹಿಂಥ ಮಠಕ
ಬರತರಂತಾ ಬರತರಂತಾ ಚೆನ್ನಬಸವ
ಬಸವಣ್ಣ ಇರೋ ಸ್ಥಳ ಕಲ್ಯಾಣ
ಬಸವನ ಸಭಾ ಆನಂದ
ಬಸವ ಭೂಮಿದೊಳು ಶಿಸುವ ಬರೆದ ಪದ
ಬರುವೆ ತಂದಿ ಕರೆದೊಯ್ಯರಿ ನಿಮ್ಮ ಸಂಗಟ
ಬಲ್ಲ ಜ್ಞಾನಿ ಪತಾ ಬರಕೋರಣ್ಣಾ
ಬೆಲ್ಲದ ಗೊಂಬಿಯು ತನ್ನ ಕೈಯಲ್ಲಿ ಪಿಡಿದು
ಬಾಬಾ ತಾಳ ಹಿಡಿ ಏಕತಾರಿ ಹಿಡಿ
ಬೀಸೊನು ಬಾರೆ ಗೆಳದಿ
ಬುದ್ಧಿವಂತರಿಗಿ ಬೆನ್ನು ಹತ್ತುವದು
ಬುದ್ಧಿವಂತರ ಮಾತು ಸಿದ್ಧಾಗಿ ಕೇಳರೆಪ್ಪಾ
ಬೈಲಾಟ ನೋಡಾನು ಬರ್ರಿ
ಬಲ್ಲಂಗ ಬರದಿಟ್ಟಾರ ಎಲ್ಲಾ
ಬ್ರಹ್ಮನ ಬರಿಯ ಬರುವುದು ಭರೋಸೆನ್ರಿ
ಬರ್ರಿ ಮಿತ್ರ ಹೋಗನ ಕಡಿ ಬಸವ ಕಲ್ಯಾಣಕ
ಬೇಕಾದ್ರ ಹಿಡಿ ಬೆರಳ ವಿಮಳ ಗುಣಮಣಿ
ಬೆಳಗಿನೊಳು ಬೆಳಗ ತಿಳಿ ಯಾವದು ಹೆಚ್ಚ
ಭವ ದಾಟದು ನರನಾರಿ ನದಿಯೊ
ಭಾವ ಶುದ್ಧ ಇದ್ದರೆ ದೇವ ಬಲ್ಲೆ ಉಂಟು
ಬಾ ಮಿತ್ರಾ ಶಿವಮಂದಿರ ನೋಡನು ಬಾ
ಬಾ ತಂಗಿ ಭಜನಿ ಮಾಡಾಮಿ
ಬರ್ರಿ ಬರ್ರಿ ಬಸವ ಕಲ್ಯಾಣ ಅನುಭವ ಮಂಟಪಕ
ಭೂಮಿ ಮೇಲೆ ಬಸವಕಲ್ಯಾಣ
ಬೇಕಾದರ ಮಾಡು ಇವನ ನಿಂದ್ಯಾ
ಬರತೀರೇನಪ್ಪ ಸಿದ್ಧನ ಸಾಲಿಗಿ

ಮಂಗಸ್ವಾಮಿ ಎಂದು ಜಂಗಮ
ಮಂದಿರ ನೋಡೋಣ ಬಾ ರಂಗಾ
ಮಂದಿರ ಕಂಡು ಬಂದಿನಿ
ಮನ ಬಲ್ಲಂಗ ಬೇಡುವ ನೋಡೊ
ಮಂದಿರ ನೋಡೋಣ ಬಾ ಇಂದಿರ ಮುಖ
ಮನದಣಿಯೆ ಗುಣಮಣಿಯೆ
ಮನುಜಾ ತನುಮನಧನ ಮಾಡ ನೆವುದಿ
ಮನ ಮಾಡು ಸಾಧನ ಭಜನಿ ಮಾಡು
ಮರಿಲಿಲ್ಲಾ ರೇವಯ್ಯ ಸ್ವಾಮಿ ಹಚ್ಚಿದ ರೂಪ
ಮಾವಯ್ಯ ಬಂದು ಎನಗೆ
ಮನಸ ಕೇಳಿ ಕನಸಿನ ಸಂಸಾರ
ಮಾಸಿ ಅದು ತಂದು ಮಾಸಿ ಇದು ತಂದು
ಮಾಯಾ ಬಿಟ್ಟಿಲ್ಲ ಅನಬ್ಯಾಡ ತಂದಿ
ಮಾಯಾ ಬಿಟ್ಟೆನೆಂದು ವಾಯಾ ಬೊಗಳ ಬೇಡ
ಮೋಂ..ಪಾಹಿಯೋ ಮೋ..ಪಾಹಿಯೋ
ಮಿತ್ರ ನೋಡೊ ಇದು ಯಾತರ ಗಿಡವು
ಮಿತ್ರ ತತ್ವದ ಒಂದ ಪದ ಹಾಡ ಕೇಳೋಣ
ಮುತ್ತು ಹೋಯಿತು ನಂದು
ಮೂರೊರ ಬಿಗ್ಯಾ ಹೊಲ ಕೌಲು ಕೊಟ್ಟಾನ
ಮಿತ್ರರೆಲ್ಲರೂ ಕೂಡಿ ಜಾತ್ರಿ ಕಣ್ಣಿಲಿ ನೋಡಿ
ಮೈಸೂರು ರಾಜದೊರೆ ಬಂದೆವು ನೋಡದಕ

ಯುಗದೊಳು ಕಲಿಯುಗದ ಮಾತು
ಯೋಗಿ ಜ್ಞಾನವ ನೀಗಿ ಭವದೋಳು
ಯೋಗಿ ಈತ ನೋಡ ನಿಜಲಿಂಗ
ಯಾಕ ಗುರು ಬೋಧ ಪಡಿವಲ್ಲಿ

ರಾಮನ ಪ್ರಧಾನಿ ನೋಡಿರಿ
ರಜೋಗುಣ ರಾಜರಾಜರಿಗೆ ಸುದ್ದಿ ಬಿಡಲಾರದೋ

ಲಿಂಗಮಯ ಬಸವ ನಿನ್ನ ನಾನು ಮರೆಯನು

ವ್ಯಾಪಾರ ತೆರೆದ ನಿಮ ನೋಡಿ ನತ್ತ ಭುಗಡಿ
ವೇದ ಓದಿ ಭ್ರಾಂತಿ ಬೇಡ
ವೃದ್ಧ ಆದೆಲ್ಲಾ ಸಿದ್ಧ ಇದರೊಳು

ಶಕ್ತಿ ಪೂಜಿ ಮಾಡಬೇಕಣ್ಣ
ಶಂಭೋ ನಗರದೊಳು ಕುಂಬಾರ ಇರುವನು
ಶಂಬೋರ ಬಿಗ್ಯಾ ನಿನಗ ನಂಬರ ಇರಲಿಕಾಗಿ
ಶ್ರೀಗುರು ಮುಖ ಉಪದೇಶದಿಂದೆ
ಶ್ರೀಗುರು ಮಂತ್ರವು
ಶ್ರೀಗುರು ವಚನ ತತ್ವ ಮಹಾವಾಕ್ಯ
ಶ್ರೀಯುತ ಸಭಾ ಸಜ್ಜನರಿಗಿ ಶರಣು
ಶ್ರೀಗುರುವಿನ ಆಶ್ರಮಕ ನಡಿರಿ
ಶ್ರೀಗುರುವಿನ ವಿನಾ ಗತಿಯವಿಲ್ಲಾ
ಶ್ರೀಗುರು ಉಪದೇಶ ಪಡೆದು ಎನಗಾಯ್ತು ದುಂಧ
ಶ್ರೀಗುರು ದರ್ಶನಕಾ ಹೋದೆನು ಗಂಗಾ
ಶಾಂತ ಸದ್ಗುಣವಂತ
ಶಿವನಾಮ ದಿಲ್ಲಿ ವ್ಯಾಪಾರ ತಂದಿ
ಶಿವಲಿಖಿತ ಘಟಕವ ನೋಡಿ
ಶಿವನಾಮ ಸ್ಮರಣಿ ಮರೆತು ವ್ಯರ್ಥ

ಸತಿಪತಿ ತನ್ನಲ್ಲಿ ತಿಳಕೊಂಡ
ಸರ್ವರಿಗಿ ವಿನಂತಿ ನೀತಿನಡಿರಿ
ಸತ್ಪುರುಷರು ತನ್ನ ಊರಿಗೆ ಬಂದರೆ
ಸತ್ಪುರುಷರ ಪದ ಸಾತ್ವಿಕ ವೃತಲಿಂದೆ
ಸದ್ಗುರುನಾಥ ಎಂಥಾ ಉಪಕಾರ ಮಾಡಿದ
ಸತ್ಯಶರಣರ ಸತ್ವದ ಮಾತು
ಸತ್ಯಸಂಗ ಪಡಿರಿ ಭವ ಗೆದ್ದು
ಸಂಸಾರ ಸಾಗರ ಈಸದು ಬಿರಿಯ
ಸ್ವತಂತ್ರ ಯಾವುದು ಚಿನ್ಹವುಂಟು
ಸ್ವಲ್ಪ ನಿಲ್ಲಾರಿ ಎಷ್ಟು ನಿಮ ಕೆಲಸ
ಸಾಧು ಏರಿದ ಶ್ರೀಶೈಲಗುಡ್ಡ
ಸ್ವಾಮಿ ಸರ್ವಾಂತರ್ಯಾಮಿ
ಸಿದ್ಧ ನಿರಾಕಾರ ನಿರ್ಗುಣ ನಿಜಮಾಲಿಕ
ಸಿದ್ಧನ ಮದ್ದ ತಿನ್ನರಿ
ಸಿದ್ಧಲಿಂಗ ಕರುಣದಿ ನೋಡೋ
ಸುದ್ದಿ ಕೇಳೆನಪ್ಪ ಸಿದ್ಧಶೂರವೀರ
ಸುಳ್ಳೆ ಬಿಟ್ಟ ಹೈರಾಣ
ಸುಳ್ಳ ಸುಳ್ಳ ಅನ್ನುವದಿದು ಸಂಸಾರ ಸಂಗ
ಸುದ್ರಾಸಿ ಕೂಡ್ರೆಪ್ಪ ಮುದ್ರಾದ ಕುದರಿ ಮ್ಯೊಲೆ

ಹದಿನೆಂಟು ಯುಗವಿದು ಕಡಿ ಕಲಿ ಅಧ್ಯ
ಹ್ಯಾಂಗೆ ಮರೆಯಲಿ ಗುರುವೆ
ಹ್ಯಾಂಗ ಸಿಂಗುವದು ಗುರುಮಾರ್ಗ
ಹಿಂಗಾದೆ ನೋಡೊ ಮುಕ್ತ
ಹಿಡಿಯೋ ಕೊಡುವೆನು ನಿನಗ ವರವ
ಹುಂಜಿನ ಬಣ್ಣ ಎಷ್ಟು ಅಪರೂಪ
ಹುಚ್ಚಾ ಇವ ಎಂಥಾ ಹುಚ್ಚ
ಹೆಂಥಾ ಮಹಿಮಾ ಮಾಡಿದಿ ಮಹಾರಾಯ
ಹೊತ್ತುಗಳೇನು ಬಾಬಾ ಬಡಬಡ
ಹೊಲವ ಮಾಡೋ ಬೆಳಿಯ ಬೆಳಸೋ
ಹೋಗಿರೇನಪ್ಪ ಶ್ರೀಶೈಲ ಜಾತ್ರಿ
ಹೌದಪ್ಪ ಮಾತ ಒಂದೇ
ಹ್ಯಾಂಗೆ ಮರೆಯಲಿ ದೇವಿ

ಜ್ಞ

ಜ್ಞಾನ ತಿಳಿವಳಿಕಲಿಂದ ತಿಳಿಬಾರದೇನು
ಜ್ಞಾನ ಮೌನ ಧ್ಯಾನವಿಲ್ಲದೆ
ಜ್ಞಾನಿಯ ಗುಣಗಳು ಬೇರೆ