. ಕ್ಷೇತ್ರಕಾರ್ಯ ಕೈಗೊಂಡ ಗ್ರಾಮಗಳು

೧. ಗಿರಿಸಾಗರ ತಾ || ಬೀಳಗಿ ಜಿ || ಬಾಗಲಕೋಟೆ

೨. ಹೆರಕಲ್ ತಾ || ಬೀಳಗಿ ಜಿ || ಬಾಗಲಕೋಟೆ

೩. ಯಂಡಿಗೇರಿ ತಾ || ಬಾದಾಮಿ ಜಿ || ಬಾಗಲಕೋಟೆ

೪. ನವಲಗುಂದ ತಾ || ನವಲಗುಂದ ಜಿ || ಬಾಗಲಕೋಟೆ

೫. ಕೃಷ್ಣಾಪೂರ ತಾ || ರೋಣ ಜಿ || ಗದಗ

೬. ಹುನಗುಂಡಿ ತಾ || ರೋಣ ಜಿ || ಗದಗ

೭. ಯಾದವಾಡ ತಾ || ಗೋಕಾಕ ಜಿ || ಬೆಳಗಾಂವ

೮. ಬಟಕುರ್ಕಿ ತಾ || ರಾಮದುರ್ಗ ಜಿ || ಬೆಳಗಾಂವ

೯. ಬಿದರಿ ತಾ || ಜಮಖಂಡಿ ಜಿ || ಬಾಗಲಕೋಟೆ

೧೦. ಗಲಗಲಿ ತಾ || ಬೀಳಗಿ ಜಿ || ಬಾಗಲಕೋಟೆ

೧೧. ನೀರಲಕೇರಿ ತಾ || ಬಾದಾಮಿ ಜಿ || ಬಾಗಲಕೋಟೆ

೧೨. ಕಲಬಂತಕೇರಿ ತಾ || ಬಾದಾಮಿ ಜಿ || ಬಾಗಲಕೋಟೆ

೧೩. ಮಂಟೇರ ತಾ || ಮುಧೋಳ ಜಿ || ಬಾಗಲಕೋಟೆ

೧೪. ರಾಮದುರ್ಗ ತಾ || ರಾಮದುರ್ಗ ಜಿ || ಬೆಳಗಾಂವ

೧೫. ಬೊಳಚಿಕ್ಕಲುಕಿ ತಾ || ವಿಜಾಪೂರ ಜಿ || ವಿಜಾಪೂರ

೧೬. ಚಿಕ್ಕಗಲಗಲಿ ತಾ || ವಿಜಾಪೂರ ಜಿ || ವಿಜಾಪೂರ

೧೭. ಸುರೇಬಾನ ತಾ || ರಾಮದುರ್ಗ ಜಿ || ಬೆಳಗಾಂವ

೧೮. ಕೆರೂರ ತಾ || ಬಾದಾಮಿ ಜಿ || ಬಾಗಲಕೋಟೆ

೧೯. ನೀರಬೂದಿಹಾಳ ತಾ || ಬಾದಾಮಿ ಜಿ || ಬಾಗಲಕೋಟೆ

೨೦. ನಾವಲಗಿ ತಾ || ಜಮಖಂಡಿ ಜಿ || ಬಾಗಲಕೋಟೆ

೨೧. ವಿಜಾಪೂರ ತಾ || ವಿಜಾಪೂರ ಜಿ || ವಿಜಾಪೂರ

. ಮಾಹಿತಿ ನೀಡಿದವರು

೧. ಶ್ರೀಮತಿ ಯಲ್ಲವ್ವ ಭೀಮನಗೌಡ ಪಾಟೀಲ ಸಾ || ಯಾದವಾಡ ಕಾಮನ ಕಟ್ಟಿ ಓಣಿ ತಾ || ಗೋಕಾಕ ಜಿ || ಬೆಳಗಾಂವ, ವಯಸ್ಸು ೭೫ ವರ್ಷ

೨. ಶ್ರೀ ಎಚ್ಚರಪ್ಪ ಬಡಿಗೇರೆ ಸಾ || ಯಾದವಾಡ ತಾ || ಗೋಕಾಕ ಜಿ || ಬೆಳಗಾಂವ, ವಯಸ್ಸು – ೫೮ ವರ್ಷ

೩. ಶ್ರೀ ರುದ್ರಪ್ಪ ವನರೊಟ್ಟಿ ಸಾ || ಗಿರಿಸಾಗರ ತಾ || ಬೀಳಗಿ ಜಿ || ಬಾಗಲಕೋಟೆ ವಯಸ್ಸು – ೬೦ ವರ್ಷ

೪. ಶ್ರೀ ಮಲ್ಲಪ್ಪ ಗುನ್ನಿ ಸಾ || ಗಿರಿಸಾಗರ ತಾ || ಬೀಳಗಿ ಜಿ || ಬಾಗಲಕೋಟೆ ವಯಸ್ಸು – ೬೦ ವರ್ಷ

೫. ಶ್ರೀ ಬಾಲಪ್ಪ ದಾಸನ್ನವರ ಸಾ || ಗಿರಿಸಾಗರ ತಾ || ಬೀಳಗಿ ಜಿ || ಬಾಗಲಕೋಟೆ, ವಯಸ್ಸು – ೬೦ ವರ್ಷ

೬. ಶ್ರೀ ಶಂಕರಪ್ಪ ಕೊಣ್ಣುರ ಸಾ || ಗಿರಿಸಾಗರ ತಾ || ಬೀಳಗಿ ಜಿ || ಬಾಗಲಕೋಟೆ, ವಯಸ್ಸು – ೬೦ ವರ್ಷ

೭. ಶ್ರೀ ಜಿ. ಪಿ. ಲೂತಿ ಶಿಕ್ಷಕರು ಎಂ. ಪಿ. ಎಸ್. ಗಿರಿಸಾಗರ ತಾ || ಬೀಳಗಿ ಜಿ || ಬಾಗಲಕೋಟೆ, ವಯಸ್ಸು – ೩೨ ವರ್ಷ

೮. ಶ್ರೀ ಸೋಮಣ್ಣ ಕಲ್ಲಪ್ಪ ಹಳ್ಳದ ಸಾ || ನವಲಗುಂದ ತಾ || ನವಲಗುಂದ ಜಿ || ಧಾರವಾಡ, ವಯಸ್ಸು – ೮೦ ವರ್ಷ

೯. ಶ್ರೀಮತಿ ಶಂಕ್ರೆಮ್ಮ ಸೋಮಣ್ಣ ಹಳ್ಳದ ಸಾ || ನವಲಗುಂದ ತಾ || ನವಲಗುಂದ ಜಿ || ಧಾರವಾಡ, ವಯಸ್ಸು – ೬೫ ವರ್ಷ

೧೦. ಶ್ರೀ ವಿ. ವಿ. ಗುಡಿ ನಿವೃತ್ತಿ ಶಿಕ್ಷಕರು, ನವಲಗುಂದ, ವಯಸ್ಸು – ೬೫ ವರ್ಷ

೧೧. ಶ್ರೀ ಸಾಗಪ್ಪ ಬಸಪ್ಪ ಚಲವಾದಿ ಸಾ || ನವಲಗುಂದ, ವಯಸ್ಸು – ೬೫ ವರ್ಷ

೧೨. ಶ್ರೀಮತಿ ಮೈರುಣವಿ ಕುಂದಗೊಳ ಸಾ || ನವಲಗುಂದ, ವಯಸ್ಸು – ೫೫ ವರ್ಷ

೧೩. ಶ್ರೀ ಸಂಗನಗೌಡ ಬಸನಗೌಡ ದೊಡ್ಡಗೌಡರ ಸಾ || ಹುನಗುಂಡಿ ತಾ || ರೋಣ, ವಯಸ್ಸು – ೫೫ ವರ್ಷ

೧೪. ಶ್ರೀ ಮಲ್ಲಪ್ಪ ನೀರಲಕೇರಿ ಸಾ || ಹೆರಕಲ್ ತಾ || ಬೀಳಗಿ ಜಿ || ಬಾಗಲಕೋಟೆ, ವಯಸ್ಸು – ೭೦ ವರ್ಷ

೧೫. ಶ್ರೀ ಮಲ್ಲಪ್ಪ ಜಾಡಗೌಡರ ಸಾ || ಹೆರಕಲ್ ತಾ || ಬೀಳಗಿ ವಯಸ್ಸು – ೬೮ ವರ್ಷ

೧೬. ಶ್ರೀ ಮಲ್ಲಪ್ಪ ಬೇವೂರ ಸಾ || ಹೆರಕಲ್ ತಾ || ಬೀಳಗಿ, ವಯಸ್ಸು – ೬೮ ವರ್ಷ

೧೭. ಶ್ರೀ ಭೀಮಪ್ಪ ಬಡಿಗೇರ ಸಾ || ಯಂಡಿಗೇರ ತಾ || ಬಾದಾಮಿ ಜಿ || ಬಾಗಲಕೋಟೆ, ವಯಸ್ಸು – ೭೫ ವರ್ಷ

೧೮. ಶ್ರೀ ಬಿ. ಎಸ್. ವಸ್ತ್ರದ ಸಾ || ಹುನಗುಂಡಿ ತಾ || ರೋಣ, ವಯಸ್ಸು – ೪೦ ವರ್ಷ

. ಜನಪದ ಅರ್ಥಕೋಶ

ವರ್ಷತೊಡಕು ನಾಗರಪಂಚಮಿ ಮರುದಿವಸದ ದಿನ
ಹೊಳಿಗೆ ಕಳಿಸು ನದಿಯಲ್ಲಿ ಬಿಡುವದು.
ಅರಲು ಗಟ್ಟಿಯಾದ ಹಸಿ ಕೆಸರು
ಹೊಳಿಗೆ ಮಾಡು ನದಿ ಪೂಜೆ ಮಾಡಿ ನೈವೇದ್ಯ ಹಿಡಿಸುವುದು.
ಹೆಂಡಿ ದನದ ಸೆಗಣಿ
ಹೆಂಡಿ ಓಕಳಿ ಸೆಗಣಿಯನ್ನು ಒಬ್ಬರಿಗೊಬ್ಬರಿಗೆ ಎಸೆಯುವದು.
ಹೆಸರು ಇಡುವುದು ನಾಮಕರಣ ಮಾಡುವುದು
ಕರಿಕಟಂಬಲಿ ನಾಗರಪಂಚಮಿ ಮರುದಿವಸದ ದಿನ
ಪಂಚೇರ ೧೨೨೫ ಗ್ರಾಂ.
ಬೊರಮಾಳಾ ಕೊರಳಲ್ಲಿ ಸ್ತ್ರೀಯರು ಹಾಕುವ ಬಂಗಾರದ ಗುಂಡಿನ ಸರ
ತಳವಾರ ಕಾವಲುಗಾರ.
ಗುಣಗಡಿಗೆ ವೀರಶೈವರು ಕೊರಳಲ್ಲಿ ಹಾಕಿಕೊಳ್ಳುವ ಬೆಳ್ಳಿಯ ವಸ್ತು (ಆಭರಣ), ಕರಡಿಗೆ.