ನಮ್ಮ ಬದುಕಿಗೆ ತೀರ ಹತ್ತಿರವಾದೊಂದು ರಂಗಭೂಮಿ ನಮ್ಮಲ್ಲೇ ಇರುವಾಗ ಪಶ್ಚಿಮದ ರಂಗಭಾಷೆಯಲ್ಲಿ ನನ್ನ ಭಾವನೆ ದರ್ಶನಗಳನ್ನು ಹೇಳುತ್ತೇನೆನ್ನುವುದು ಹಾಸ್ಯಾಸ್ಪದ. ಎಲ್ಲಾ ರಂಗಭೂಮಿಗಳಿಗಿರುವಂತೆ ಯಕ್ಷಗಾನಕ್ಕೂ ಮಿತಿಗಳಿವೆ. ಸಾಧ್ಯತೆಗಳಿವೆ. ಯಕ್ಷಗಾನದ ರಂಗಸಾಧ್ಯತೆಗಳನ್ನ ಅಧ್ಯಯನ ಮಾಡುತ್ತ ಹೋದಾಗಿನ ಅನುಭವದ ಒಂದು ಪ್ರಕ್ರಿಯೆ ಪ್ರಸ್ತುತ ಸಿರಿಸಂಪಿಗೆ.

ಪಾರಂಪರಿಕ ಜನಪದ ರೂಪಕಗಳನ್ನು ಆಧುನಿಕ ರಂಗಭೂಮಿಗೆ ಅಳವಡಿಸುವ ಬಗೆಗಿನ ಫೆಲೋಶಿಪ್ ಅನ್ನು (೧೯೮೪-೮೬) ನನಗೆ ಕೊಟ್ಟ ಫೋರ್ಡ್ ಫೌಂಡೇಶನ್ ಅಧಿಕಾರಿಗಳಿಗೆ;

ಈ ನಾಟಕವನ್ನು ಪ್ರಥಮಬಾರಿಗೆ ನಿರ್ದೇಶಿಸಿದವರು ಕೆ.ವಿ. ಸುಬ್ಬಣ್ಣನವರು, ಅವರೊಂದಿಗೆ ಸಹಕರಿಸಿದವರು ಅತುಲ ತಿವಾರಿ ಅವರು, ನನ್ನೊಂದಿಗಿದ್ದು ಯಕ್ಷಗಾನದ ಧಾಟಿಗಳನ್ನು ಹಾಡಿ ಆ ಬಗೆಗಿನ ನನ್ನ ತಿಳಿವಿನ ಮೇರೆಗಳನ್ನು ವಿಸ್ತರಿಸಿದವರು ಭಾಗವತರಾದ ಪ್ರಭಾಕರ ಹೆಗಡೆ ಅವರು –

ಈ ಎಲ್ಲ ಮಹನೀಯರಿಗೂ; ಮತ್ತು

ಇದನ್ನು ಮೈಸೂರು ವಿಶ್ವವಿದ್ಯಾಲಯ ಬಿ.ಎ., ಬಿ.ಎಸ್ಸಿ. ಪದವಿಗೆ ಪಠ್ಯಪುಸ್ತಕವನ್ನಾಗಿ ಮಾಡಿದ್ದಕ್ಕೆ ಪಠ್ಯಪುಸ್ತಕ ಆಯ್ಕೆ ಸಮಿತಿಗೆ;

ವಿದ್ವತ್ಪೂರ್ಣ ಮುನ್ನುಡಿ ಬರೆದುಕೊಟ್ಟಿರುವ ಶ್ರೀ ಕುರ್ತಕೋಟಿ ಅವರಿಗೂ;

ಸುಂದರವಾಗಿ ಪ್ರಕಾಶಪಡಿಸಿದ ಮಿತ್ರ ಪ್ರಕಾಶ್ ಕಂಬತ್ತಳ್ಳಿ ಹಾಗೂ ಮುದ್ರಿಸಿದ ಸ್ವ್ಯಾನ್ ಪ್ರಿಂಟರ್ಸ್ಸ್‌ನವರಿಗೂ ನನ್ನ ವಂದನೆಗಳು ಸಲ್ಲುತ್ತವೆ.

ಚಂದ್ರಶೇಖರ ಕಂಬಾರ